ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 5, 2012

5

ಬೆಂಗಳೂರು ಕನ್ನಡಿಗರಿಗೊಂದು ಬಹಿರಂಗ ಪತ್ರ

‍ನಿಲುಮೆ ಮೂಲಕ

-ಭರತ್ ಬಿಕೆ

ಬೆಂಗಳೂರಲ್ಲೀ ಇದೀರಾ ? ಬೆಂಗಳೂರಿಗೆ ಬಂದ್ರಾ ?? ಸಂತೋಷ 🙂 ಬೆಂಗಳೂರಲ್ಲೇ ಹುಟ್ಟೀ, ಬೆಂಗಳೂರಲ್ಲೇ ಬೆಳೆದ್ರಾ ?? ತುಂಬಾ ಸಂತೋಷ 🙂

ಬೆಂಗಳೂರಲ್ಲೇ ಬದುಕಬೇಕು ಅಂತಾ ಇದೀರಾ ?? ಇನ್ನೂ ಸಂತೋಷ:)

ಆದರೇ ಇಲ್ಲಿನ ಭಾಷೆ, ನೆಲ, ಜಲ, ವ್ಯವಸ್ಥೆ, ಅವಸ್ಥೆ,ಸಮಸ್ಯೆಗಳ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ದೀರಾ?  ಅದಕ್ಕಾಗಿ, ಅದಕ್ಕೆ ಸಂಬಂಧಿಸಿದ ವಿಚಾರಗಳಲ್ಲೀ ಭಾಗವಹಿಸಿದ್ದೀರಾ ??

ಸಾರ್ವಜನಿಕವಾಗಿ ?? ವಯಕ್ತಿಕವಾಗಿ ??

ಅಷ್ಟೆಲ್ಲಾ ಯಾಕೇ ಬಿಡಿ.. ಫೇಸ್ ಬುಕ್ ಪ್ರೋಫೈಲಲ್ಲೀ ಪೋಸ್ಟ್ ಮಾಡಿದಿರಾ ? ಸಂಬಂಧಿಸಿದ ಪೋಸ್ಟ್ ಗಳಿಗೇ ಲೈಕ್ ಮಾಡಿಡ್ಡೀರಾ ?? ಕಮೇಂಟ್ ಕೊಟ್ಟಿದ್ದೀರಾ ??

ಸದ್ಯಕ್ಕೇ ಕಾವೇರಿ ಸಮಸ್ಯೆಯನ್ನೇ ಗಮನಿಸೋಣಾ . ಎಷ್ಟು ಜನ ಬೆಂಗಳೂರು ಕನ್ನಡಿಗರು ಅಂತಾ ಅನಿಸಿಕೊಡವರು ಇದಕ್ಕೇ ಬೆಂಬಲ ಕೊಡ್ತಾ ಇದ್ದೀರಾ ??  ಸ್ವಲ್ಪ ದಿನಗಳ ಹಿಂದೆ ಅಣ್ಣಾ ಹಜಾರೆಯವರು ನಡೆಸಿದ ಭ್ರಷ್ಟಾಚಾರ ವಿರೋಧಿ ಚಳುವಳಿಗೂ, ಪ್ರಸ್ತುತ ಕಾವೇರಿ ಚಳುವಳಿಗೂ  ಬೆಂಗಳೂರು ಕನ್ನಡಿಗರು ಅಂತಾ ಅನಿಸಿಕೊಂಡವರು ಕೊಟ್ಟ ಬೆಂಬಲದ ಮಟ್ಟ ಎಷ್ಟು ??

ಸರಿ,ಭ್ರಷ್ಟಾಚಾರ ನಮ್ಮ ವ್ಯವಸ್ಥೆಯ ಅತಿ ದೊಡ್ಡ ಪಿಡುಗು, ಅದನ್ನ ನಿರ್ಮೂಲನೆ ಮಾಡುವುದಕ್ಕೆ ಅಣ್ಣಾ ಹಜಾರೆಯವರು ನಿಂತುಕೊಂಡ್ರು.ನಮ್ಮ ದೇಶದ ಜನ ಬೆಂಬಲ ಕೊಟ್ಟರು.

ನೀವು ನಮ್ಮ ಬೆಂಗಳೂರಿನ ಬೀದಿ ಬೀದಿಗಳಲ್ಲಿ ನಿಂತುಕೊಂಡು ಐಯಾಮ್ ಅಣ್ಣಾ..ಐಯಾಮ್ ಅಣ್ಣಾ..ಅಂತಾ ಬೊಂಬಡಾ ಬಜಾಯ್ಸಿದ್ಡು ಆಯಿತು..ತಲೆ ಮೇಲೆ ಕ್ಯಾಪ್ ಹಾಕಿಕೊಂಡು ಫ್ರೀಡಂ ಪಾರ್ಕ್ ಅಲ್ಲಿ ದಿನ ಇಡೀ ಕಳೆದದ್ದು ಆಯಿತು. ಗಾಡಿಗಳ ಮೇಲೆ ಸ್ಟಿಕ್ಕರ್ ಹಾಕಿಸಿಕೊಂಡು ದಾರಿಯಲ್ಲಿ ಹೋಗುವವರ ಗಮನ ಕೂಡಾ ಸೆಳೆದದ್ದು ಆಯಿತು.ಫೇಸ್ ಬುಕ್ಕಲ್ಲಿ ಪೊಸ್ಟ್ ಗಳನ್ನ ಮಾಡಿ ಲೈಕ್ಸ್, ಕಮೇಂಟ್ಸ್ ಗಳನ್ನ ಪಡೆದಿದ್ದು ಆಯಿತು. ನಿಮ್ಮ ಬೆಂಬಲ ಮೆಚ್ಚುವಂತದ್ದು ಬಿಡಿ. ಸಮಯವಿಲ್ಲದಿದ್ದರೂ , ಪ್ರತ್ಯಕ್ಷವಾಗಿಲ್ಲದಿದ್ದರೂ, ಪರೋಕ್ಷವಾಗಿ ಅಭೂತಪೂರ್ವ ಬೆಂಬಲ ಕೊಟ್ಟುಬಿಟ್ಟಿರಿ 🙂

ಅದೇ ಕಾವೇರಿ ಗಲಾಟೆಯಲ್ಲಿ ನೀವುಗಳು ಪಾಲ್ಗೋಂಡು ಕಿಸಿದ್ದದ್ದಾದರೂ ಏನು?? ಎಷ್ಟು ಬೆಂಬಲ ಕೊಟ್ರೀ ?? ಪ್ರತ್ಯಕ್ಷವಾಗಿ ?? ಬೇಡ.. ಪರೋಕ್ಷವಾಗಿ ?? ಅಣ್ಣಾ ಹಜಾರೆಗೆ ಕೋಡೋ ಬೆಂಬಲ ನೀವು ತಾಯಿ ಕಾವೇರಿಗೆ ಯಾಕೆ ಕೊಡಲ್ಲಾ ?? ನಿಮ್ಮ ನಾರ್ಥ್ ಇಂಡಿಯನ್ ಫ್ರೆಂಡ್ಸ್/ ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ಬೇಡಾ ಅಂತಾ ಇದ್ದಾರ ??  ಕಾವೇರಿ ಚಳುವಳಿಗೆ ನೀವು ನಿಂತುಕೊಂಡರೇ ಅವರ ಮುಂದೆ ನಿಮ್ಮ ಮರ್ಯಾದೆ ಕಡಿಮೆಯಾಗತ್ತಾ ?? ನಿಮಗೆ ಪ್ರತಿಭಟನೆ ಮಾಡೋದಕ್ಕು ಪ್ರತಿಷ್ಟೆ, ಪ್ರಚಾರ ಅನ್ನೋದು ಇದ್ದರೇ ಮಾತ್ರ ನೀವು ಪ್ರತಿಭಟನೆ ಮಾಡೋದಾ ??! ನೀವು ಹಾಗೇನೇ ಯೋಚನೆ ಮಾಡ್ತಾ ಇದ್ದರೇ, ಬೆಂಕಿ ಬಿತ್ತು ನಿಮ್ಮ ಜನ್ಮಕ್ಕೇ..:P

ಅಷ್ಟಕ್ಕೂ ಕಾವೇರಿ ಸಮಸ್ಯೆಗೆ ಯಾಕೆ ಇಷ್ಟು ಪ್ರಾಧಾನ್ಯತೆ ಕೊಡಬೇಕು ಅನ್ನೋದರ ಬಗ್ಗೆ ಕನಿಷ್ಟ ಕಲ್ಪನೆಯಾದರು ನಿಮಗೆ ಇದಿಯಾ ?? ಇದ್ದಿದರೇ ನೀವುಗಳೂ ಹೀಗೆ ಮಾಡ್ತಾ ಇದ್ರಾ ??ಖಂಡಿತಾ ಇಲ್ಲಾ …ಪಾಪ ಯಾಕೆ ಇರತ್ತೆ ಹೇಳೀ ?ಮಂಡ್ಯದ ಯಾವುದೋ ಮೂಲೆಯಲ್ಲಿ ಕಬ್ಬು ಬೆಳೆದು ನೀವುಗಳು ನಿಮ್ಮವರ ಜೊತೆ ಕುಳಿತು ಕುಡಿಯೋ ಕಾಫಿಗೆ,ಟೀ ಗೆ, ನೀವು ಸಂಭ್ರಮಿಸಿ ತಿನ್ನೋ ಸಿಹಿಗೆ ಸಕ್ಕರೆ ಸರಬರಾಜು ಮಾಡುತ್ತಿದ್ದಾರೆ ನೋಡಿ, ಅವರಿಗೆ ಇರುತ್ತೆ.

ಬೆಳಿಗ್ಗೆ ನೀವುಗಳು ಬ್ರಷ್ ಮಾಡೀ,ಅಂಗಾಂಗಗಳನ್ನ ತೊಳೆದುಕೊಂಡು, ಸಾಧ್ಯವಾದ್ರೆ ಸ್ನಾನ ಮಾಡಿ, ತಿಂಡಿ ತಿಂದು ಕೆಲಸಕ್ಕೆ, ಕಾಲೇಜಿಗೆ,ಅಲ್ಲಿಗೇ,ಇಲ್ಲಿಗೇ ಕಂಡ ಕಂದವರ ಮುಂದೇ ಚೆನ್ನಾಗಿ ಕಾಣಬೇಕು ಅಂತಾ ಹೊರಟು ನಿಲ್ಲುವಿರಿ ನೋಡೀ ?? ಅದರ ಹಿಂದೆ ಕೂಡಾ ತಾಯಿ ಕಾವೇರಿ ಇದ್ದಾಳೇ ಪರೋಕ್ಷವಾಗಿ.

ನೀವುಗಳು ನಿಮ್ಮ ದಿನನಿತ್ಯದ ಕರ್ಮಕಾಂಡಗಳನ್ನ ಪೂರೈಸಲು ಕಾವೇರಿ ಬೇಕೇ ಬೇಕು. ತಿನ್ನೋದಕ್ಕೂ, ತಿಂದಿದ್ದನ್ನೂ ಅರಗಿಸಿಕೊಳ್ಳುವುದಕ್ಕೂ, ತಿಂದ ಮೇಲೆ ತೊಳೆದುಕೊಳ್ಳುವುದಕ್ಕೂ ನಿಮಗೆ ಕಾವೇರಿ ಬೇಕು.

ನಗರದ ಪ್ರತಿಷ್ಟಿತ ಜಾಗಗಳಲ್ಲೀ ನಡೆಯೋ ಮೋಜು, ಮಸ್ತಿಗಳಿಗೂ ಕಾವೇರಿ ನೀರಿನ ಕೊಡುಗೆ ಇದೆ.

ಅದೇ ಕಾವೇರಿಯನ್ನ ಪಕ್ಕದ ತಮಿಳುನಾಡಿಗೆ ಬಿಟ್ಟುಕೊಡಿ, ಅದು ನಿಮ್ಮ ರಾಜ್ಯದ ರೈತರ ಹೊಟ್ಟೆಯ ಮೇಲೆ ಹೊಡೆದು ಅಂದಾಗಾ ಬಾಯಿ ಮುಚ್ಚಿಕೊಂಡು ಇರುತ್ತೀರಲ್ಲಾ?? ಯಾಕೆ ??

ತಾಯಿಯ ಕರಳು ಕಿವುಚಿ, ಮಲತಾಯಿಯ ಹಸಿವನ್ನ ತುಂಬಿಸುವಂತಹ ಹೊಣೆಗೇಡೀ ಕೆಲಸಕ್ಕೇ ನಿಮ್ಮ ಪರೋಕ್ಷ ಬೆಂಬಲದ ಪ್ರತಿರೂಪವಾ ಇದು ?

ನಿಮ್ಮ ಕಥೆನೇ ಹೀಗಾದ್ರೆ..ನಮ್ಮ ರೈತರ ಕಥೆ ಏನು ?? ಬೆಳೆ ಬೆಳೆಯಲೂ ಏನ್ ಮಾಡ್ತಾರೆ ??

ಬಿಸ್ಲೇರಿ ವಾಟರ್ ಹಾಕಿ ಬೆಳೆ ಬೆಳೆಯೋಕೆ ಆಗತ್ತಾ ?? ಬಡಪಾಯಿಗಳು, ಬಡರೈತರ ಅವಸ್ಥೆ ಏನು ಆನ್ನೋದರ ಬಗ್ಗೆ ಸ್ವಲ್ಪನಾದರೂ ಯೋಚನೆ ಮಾಡಿದ್ದೀರಾ ?? ಅವರು ಹುಟ್ಟಿದ್ದು,ಬದುಕಿದ್ದೂ,ಬೆಳೆದಿದ್ದೂ, ಬಡಿಸಿದ್ದೂ, ತಾಯಿ ಕಾವೇರಿ ಇಂದ ತಾನೆ ??

ಅವರು ನಿಮಗೆ ಸಂಬಳ ಕೊಟ್ಟು ಸಾಕದೇ ಇರಬಹುದು.. ಆದರೇ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅನ್ನದಾತರು.

ಅವರ ಕಷ್ಟಗಳಿಗೆ ನಮ್ಮ ಬೆಂಬಲ ಚಿಕ್ಕದಾದರು ಪರವಾಗಿಲ್ಲ, ಆದ್ರೆ..ಬೆಂಬಲ ಕೊಡಬೇಕಾಗಿದ್ದು ನಮ್ಮ ಕರ್ತವ್ಯ ಅಲ್ವಾ.??

ಕೊನೆಗೆ ಒಂದು ಮಾತು ಹೇಳ್ತೀನಿ ಕೇಳಿ ?? ಅಣ್ಣಾ ಹಜಾರೆಗೆ ಅಷ್ಟೋಂದು ಸಪೋರ್ಟ್ ಮಾಡಿದ್ರಲ್ಲಾ?? ಅಬ್ಬಬ್ಬಾ ಅಂದ್ರೇ ಏನಾಗಬಹುದು?? ಭ್ರಷ್ತಾಚಾರ ಅನ್ನೋದು ನಿಲ್ಲಬಹುದು. ಒಂದು ಉತ್ತಮ ವ್ಯವಸ್ಥೆ ಬರಬಹುದು.

ಆದರೇ ಅದನ್ನ ಅನುಭವಿಸುವುದಕ್ಕೇ ನಾವು ,ನೀವುಗಳು ದೈಹಿಕವಾಗಿ ಗಟ್ಟಿಮುಟ್ಟಾಗಿ ಇರಬೇಕಲ್ಲಾ?! ಅದಕ್ಕಾದರೂ ನೀವು ತಿನ್ನಲು ನಮ್ಮ ರೈತರು ಬೆಳೆಯಬೇಕಲ್ಲವಾ ????

ರೈತಕುಲದ ಸೇವೆ ನಿಮಗೆ ಬೇಕೆ ಬೇಕು ಅಲ್ವಾ??

ಅದಿಲ್ಲಾವಾದಲ್ಲಿ ನೀವು ಏನ್ ತಾನೆ ದಬ್ಬಿಹಾಕುತ್ತೀರಾ??

ಇದೇ ಅಣ್ಣಾ ಹಜಾರೆ ಫಾಲೋ ಮಾಡ್ತಾ ಇರೋ ಮಹತ್ಮಾ ಗಾಂಧಿ ಕೂಡಾ ಒಂದು ಮಾತು ಹೇಳಿದ್ರು,

ರೈತ ನಮ್ಮ ದೇಶದ ಬೆನ್ನೆಲುಬು ಅಂತಾ . ಅದನ್ನ ನಮ್ಮ ರಾಜ್ಯದಲ್ಲಿ ಮುರಿತಾ ಇದ್ದಾರೆ. ಏನು ಮಾಡ್ತೀರಾ ? ನಿಮ್ಮ ಕಣ್ಣಿಗೆ ಅವೆಲ್ಲಾ ಕಾಣಿಸೋಲ್ಲಾ ಬಿಡಿ.

ಜಾಗತೀಕರಣದ ಭರದಲ್ಲೀ, ರಾಜ್ಯದ, ನಗರದ ಜನರನ್ನ ಬರಗೆಡಿಸಿದ ಮಹಾ ಜನತೆಗಳು ನೀವು. ಇನ್ನು ಕಾವೇರಿಗೋಸ್ಕರ ಯಾಕೆ ಬೀದಿಗೆ ಬರ್ತೀರಾ ಅಲ್ವಾ ??

ಕನಿಷ್ಟ ಪಕ್ಷ ಫೇಸ್ ಬುಕ್ಕಲ್ಲೀ ನೀರೆಯರ ಪೋಸ್ಟ್ ,ಪೋಟೋಗಳ ಮೇಲೇ ಕೊಡೋ ಗಮನದಲ್ಲೀ ಸ್ವಲ್ಪ ನಮ್ಮ ನೀರಿಗೂ ಕೊಡಿ 😛

ಕನ್ನಡಕ್ಕೇ, ಕಾವೇರಿಗೆ ಸಂಬಂಧಿಸಿದ ಯಾವುದೇ ವಿಷಯಗಳಲ್ಲಿ ಭಾಗವಹಿಸುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.

ಎಲ್ಲಾದರೂ ಇರೂ..ಎಂತಾದರೂ ಇರೂ..ಎಂದೆದಿಂಗೂ ನೀ ಕನ್ನಡವಾಗಿರು.

ಬೆಂಗಳೂರಲ್ಲೇ ಇರು,

ಬಟ್… ಬೀಯಿಂಗ್ ಕನ್ನಡಿಗನಾಗಿರು 🙂

* * * * * * *

ಚಿತ್ರಕೃಪೆ : http://www.icarelive.com

5 ಟಿಪ್ಪಣಿಗಳು Post a comment
  1. Muralidhar's avatar
    Muralidhar
    ಆಕ್ಟೋ 5 2012

    ಸ್ನೇಹಿತರೆ, ನಾನು ನಾಳೆ ಹಾಗು ನಾಡಿದ್ದು ಕಾವೇರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಬೇಕು, ಆದ್ರೆ ಹೇಗೆ? ಎಲ್ಲಿ? ಏನು? ಅನ್ನೋ ಪ್ರಶ್ನೆಗಳು ಕಾಡ್ತಾ ಇವೆ.

    ಉತ್ತರ
  2. Bindu's avatar
    ಆಕ್ಟೋ 5 2012

    We should write this article in English and ask all residents of Karnataka to support Karnataka in Kaveri Issue, because after all everybody is using Kaveri Water and also have bought houses in Bangalore and plan to stay there permanently!!

    ಉತ್ತರ
  3. P K Chayapathi's avatar
    P K Chayapathi
    ಆಕ್ಟೋ 6 2012

    ಒಳ್ಳೆಯದು!
    ರೈತರ ಹಿತರಕ್ಷಣೆ ಸಂಬಂಧ ಯಾವುದೇ ರಾಜಿ ಇಲ್ಲ. ಬಂದ್ ಗೆ ಎಲ್ಲರೂ ಭಾಗವಹಿಸಬೇಕು. ಆದರೆ ನಮಗೊಂದಿಷ್ಟು ಡೌಟುಗಳಿವೆಯಲ್ಲ?!
    ಕರ್ನಾಟಕ ಅಂದರೆ ಬರೀ ದಕ್ಷಿಣ ಭಾಗವೇ? ಕಳಸಾ ಬಂಡೂರು, ಮಹಾದಾಯಿ, ಭೀಮಾ, ಕೃಷ್ಣಾ ವಿವಾದದ ಸಂದರ್ಭದಲ್ಲಿ ಎಷ್ಟು ಜನ ಬೆಂಗಳೂರು (ಆ ಕಡೆ ಭಾಗದವರು) ಜನತೆ ಉತ್ತರ ಕರ್ನಾಟಕದವರಿಗೆ ಸ್ಪಂದಿಸಿದ್ದಾರೆ?
    ಸಿನಿಮಾ ರಂಗದವರು ಕೂಡ ಚಳುವಳಿಯಲ್ಲಿ ಧುಮುಕಿದ್ದಾರೆ. ಅವರಿಗೆ ಅಭಿನಂದನೆಗಳು. ಆದರೆ ಅವರ ಸಿನಿಮಾಗಳನ್ನು ಉತ್ತರ ಕರ್ನಾಟಕದವರು ಕೂಡ ನೋಡುತ್ತಾರಲ್ಲ? ಈ ಕಡೆಯವರ ಭಾವನೆಗಳಿಗೆ ಅವರು ಯಾವ ರೀತಿ ಸ್ಪಂದಿಸಿದ್ದಾರೆ? ‘ಕಲ್ಲಾದರೆ ನಾನು ಬೇಲೂರ ಶಿಲೆಯಾಗುವೆ’ ಅಂತೇನೋ ಹಾಡಿದೆ. ತುಂಬ ಮಧುರವಾದ ಪದ. ಪದೇ ಪದೇ ಅದನ್ನು ಕೇಳುತ್ತಿದ್ದೇನೆ. ಈಚೆಗೆ ನನ್ನ ಸ್ನೇಹಿತನೊಬ್ಬ ಹೇಳಿದ: ಇಡೀ ಹಾಡಿನ್ ತುಂಬ ಬರೇ ಆ ಕಡೇ ಸ್ಥಳ ಬಣ್ಣಿಸ್ಯಾರ. ಯಾಕ ನಮ್ಮಲ್ಲಿ ಏನೂ ಇಲ್ಲಾ? ಚಿನ್ನದ ಗಣಿ ಎಂದರೆ ಕೋಲಾರ ಬಿಟ್ಟು ಹಟ್ಟಿ ಗಣಿ ಯಾಕಾಗಬಾರದು? ಶಿಲ್ಪಕಲೆಗೆ ಇಟಗಿ ದೇವಸ್ಥಾನ ಯಾವುದರಲ್ಲಿ ಕಮ್ಮಿ? ತುಂಗಭದ್ರಾ ನದಿ ನದಿಯಲ್ವಾ? ಇಡೀ ಹಾಡಿನ ತುಂಬ ಆ ಕಡೆಯದ್ದೇ ಆದರೆ ನಮ್ಮ ಸ್ಥಳದ ಬಗ್ಗೆ ಜನರಿಗೆ ಗೊತ್ತಾಗೋದು ಯಾವಾಗ?
    ಇನ್ನು ಬೆಂಗಳೂರಿನಲ್ಲಿರುವ ಎಷ್ಟೋ ಮಂದಿಗೆ ಆಲಮಟ್ಟೆ ಆಣೆಕಟ್ಟೆ ಕೆ.ಆರ್.ಸಾಗರ ಆಣೆಕಟ್ಟೆಗಿಂತ ಎಷ್ಟೋ ದೊಡ್ಡದು ಎಂಬುದೇ ಗೊತ್ತಿಲ್ಲ. ಬಿಜಾಪೂರ, ಬೀದರ, ಕಲಬುರ್ಗಿ ಎಷ್ಟು ದೂರ ಇವೆ? ಯಾವ ದಿಕ್ಕಿಗೆ ಇವೆ ಎಂಬುದೇ ಗೊತ್ತಿಲ್ಲ. ಈ ಕಡೆಯಿಂದ ವಲಸೆ ಹೋದವರಿಗಷ್ಟೇ ಆ ಬಗ್ಗೆ ಮಾಹಿತಿ ಇದೆ.
    ಅಂದ ಹಾಗೆ 371ನೇ ವಿಧಿ ತಿದ್ದುಪಡಿಗೆ ಒತ್ತಾಯಿಸಿ ಕಳೆದ ವರ್ಷ ಹೈದ್ರಾಬಾದ ಕರ್ನಾಟಕ ಭಾಗದ ಸಂಘಟನೆಗಳು ಹೋರಾಟ ನಡೆಸಿದಾಗ ಉಳಿದ ಭಾಗದವರು ಅದರ ಬಗ್ಗೆ ಚಕಾರವೆತ್ತಲಿಲ್ಲ. ಆದರೆ ಕರ್ನಾಟಕ ಬಂದಗೆ ಆ ಭಾಗದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
    ಕಾವೇರಿ ನದಿ ವಿವಾದದಲ್ಲಿ ಬಲಿಪಶುಗಳಾಗುವವರು ಕನ್ನಡ ನಾಡಿನ ರೈತರು. ಅವರಿಗೆ ಬೆಂಬಲ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ. ಈ ಬಗ್ಗೆ ಅನಾದರ ತೋರುವವನೇ ಪಾಪಿ. ಈ ವಿಷಯದಲ್ಲಿ ಬೇಧ-ಭಾವ ಇಲ್ಲ. ಆದರೆ ಬಂದ್ ಗೆ ಬೆಂಬಲಿಸುವವರು ಆ ಕಡೆ ಭಾಗದ ಸಮಸ್ಯೆಗೂ ಸ್ಪಂದಿಸಬೇಕಲ್ಲವೇ?
    ನಿಮಗೆ ನಾವು- ನಮಗೆ ನೀವು ಎಂಬುದೇ ಕಣ್ಮರೆಯಾಗುತ್ತಿದೆ. ನಮಗೆ ನೀವು- ನಮಗೆ ನಾವು ಎಂಬುದು ಎದ್ದು ಕಾಣುತ್ತಿದೆ.
    ಇನ್ನು ಮುಂದಾದರೂ ಭೀಮಾ, ಕೃಷ್ಣಾ, ತುಂಗಭದ್ರಾ ನದಿ ತೀರದ ರೈತರ ಸಮಸ್ಯೆಗಳಿಗೆ ಎಲ್ಲರೂ ಸ್ಪಂದಿಸಬೇಕು.
    ಏನಂತೀರಿ?
    – ಪಿ.ಕೆ.ಛಾಯಾಪತಿ

    ಉತ್ತರ
  4. Lingraj's avatar
    ಆಕ್ಟೋ 6 2012

    Dhanyavaadagalu intha valle article ge..

    @ bindu and Nilume:

    A Note to Bengalurians and Kannadigas – –

    Are you in Bengaluru? Came to Bengaluru?? Good J. Born and brought up in Bengaluru? Very Good J. Are you planning to settle in Bengaluru? Awesome J
    But have you given a thought about the language, land, water, infrastructure, arrangements, and dis-arrangements? For this, did you participate in the discussions? Publically ? Personally?
    Let’s not go that far…Have you posted on your Facebook profile? Have you liked the related posts? Have you commented on them?
    Let us have a look at the present Kaveri Dispute itself. How many people who think they are Bengalurians or Kannadigas are supporting this cause? Few days back when our Annaji was fighting against corruption, how many of us (Bengalurians) supported Annaji and how many of us are supporting the present Kaveri Dispute?
    Yes! Corruption is the biggest plague. Anna stood to fight against it. Our country men supported Annaji.
    You all were screaming, standing on the roads and of our (Namma) Bengaluru, “I am Anna”, “I am Anna”. You stood wearing a cap in Freedom Park all day long. You even did successfully sought the attention of people on road by sticking a logo on your bikes. You also posted on facebook and got the likes and comments for them. Your support is appreciated. Even if you didn’t have time to be there as a person, you were there with unprecedented support allusively or indirectly. J
    But what did you prove participating in the Kaveri Dispute. How much did you support? In person? No. Atleast allusively? The support which you gave for Annaji, why aren’t you showing for Mother Kaveri. Are your so called Funky boy friends/ Girl friends are saying not to support? If you stand for the supporting Kaveri dispute whether you will be dishonoured in front of them?? Do you only support if you want feel its your prestige, and only seek others attention? If you are thinking the same then SHAME on your part.
    Atleast do you have any idea why should we give importance to the Kaveri dispute? If you did, were you doing like this? Never…. Why will you have an idea? Sitting somewhere in Mandya, farming sugarcane and supplying sugar to your cup of Coffee/Tea which you have, or the sweets which you celebrate on an occasion.
    In the morning, you brush, the a bath, have breakfast, move to college, or work. You use the water to look good, keep yourself clean right? Mother Kaveri is present behind it, indirectly.
    You need Kaveri in your daily life. To eat, to digest what you eat, and even to wash after you eat.
    Kaveri is needed to run the programs major places in Namma Bengaluru.
    But when they say they want to let leave Kaveri to TamilNadu, kicking on the stomachs of our Farmers in Karnataka, you Shut you mouth. Why is this???
    Is it not like you are indirectly supporting in Stabing your own mother and feeding your step mother?
    If it’s your story, what about our farmers? What will they do to cultivate?
    Will it be possible to cultivate using Bisileri water? Have you ever imagined what will be the situation and fate of our poor Farmers? They were Born, grown, and fed all because of Mother Kaveri right?
    They might not pay you salary and look after you but, they are directly and indirectly responsible for our Food.
    Even if the support is in a small quantity, we need to support their cause. Its our responsibility right?
    Lastly, I want to tell you few words, You supported Anna Hazare ji with huge amount right? What Might happen? Corruption might stop. We might see a better administration.
    But we need to be healthy to see and use that better administration and facilities right? Atleast for that our farmers should cultivate and we have to eat right???
    You need to thank farmers by serving them right??
    Same Annaji who followed Mahatma Gandhiji, had said few words “Farmers are our backbones” . But the Irony is we are breaking and letting to break that backbone of our farmers. What to do? Our eyes don’t see those sins right?
    Bengaluru and bengalurians were broken apart in the name of globalization and you said its westernization. You accepted it whole heartedly. Now, Why do want to come for the sake of Kaveri right?
    Atleast instead of staring at a post of a women on Facebook, please spare some time to stare at our water as well.
    It’s the duty of every bengalurian and every Kannadiga to participate in any event which is related to Kaveri or kannada.

    ಎಲ್ಲಾದರೂ ಇರೂ..ಎಂತಾದರೂ ಇರೂ..ಎಂದೆದಿಂಗೂ ನೀ ಕನ್ನಡವಾಗಿರು.

    ಬೆಂಗಳೂರಲ್ಲೇ ಇರು,
    ಬಟ್… ಬೀಯಿಂಗ್ ಕನ್ನಡಿಗನಾಗಿರು

    ಉತ್ತರ
  5. Bharath BK's avatar
    ಆಕ್ಟೋ 6 2012

    ಲಿಂಗರಾಜ್ ಗವಿಮಠ್ ರವರಿಗೆ 🙂 ಫೇಸ್ ಬುಕ್ ಅಲ್ಲಿ ನೀವು ಪ್ರಕಟಿಸಿರುವ ಪತ್ರ ನನ್ನದು, ಆದರೆ ನಾನು ಅದನ್ನ ಕನ್ನಡದಲ್ಲಿ ಬರೆದಿದ್ದೆ. ನಿಲುಮೆ ತಂಡ ನನ್ನ ಅನುಮತಿಯೊಂದಿಗೆ ಅದನ್ನ ಬಳಸಿಕೊಂಡಿತ್ತು. ಪ್ರಕಟಿಸುವ ಮೊದಲು ಕನಿಷ್ಟ ಪಕ್ಷ ನೀವು ಅದರ ಮೂಲ ಲೇಖಕರನ್ನ ಓಂದು ಮಾತು ಕೇಳಬಹುದಿತ್ತು ಅಲ್ವಾ ?? 🙂
    .

    ಉತ್ತರ

Leave a reply to Muralidhar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments