ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಮಧುಚಂದ್ರ ಭದ್ರಾವತಿ
ಬಹಳ ದಿನಗಳಿಂದ ಈ ಲೇಖನ ಪ್ರಕಟಿಸಬೇಕು ಎನ್ನುವ ಕಾತರ ಆದರೆ ಸರಿಯಾದ ಸಮಯ ಸಿಗದೇ ಇಂದು ನಾಳೆ ನಾಡಿದ್ದು …. ಹಾಗೆ ಮುಂದುವರಿತ ಹೋಯ್ತು. ಕೊನೆಗೆ ಅ ದಿನ ಬರಲೇ ಇಲ್ಲ. ಇಂದು ಪ್ರಕಟಣೆ ಮಾಡಲೇ ಬೇಕು ಎನ್ನುವ ತುಡಿತ ಇದ್ದುದರಿಂದ ಇಂದೇ ಪ್ರಕಟಿಸುತ್ತಿದ್ದೇನೆ.
ನಿಮಗೆಲ್ಲ ಗೊತ್ತಿರುವ ಹಾಗೆ ಮಾನವ ಒಬ್ಬ ಸಂಘ ಜೀವಿ. ದಿನ ನಿತ್ಯದ ಜೀವನದಲ್ಲಿ ಹಲವರನ್ನು ಭೇಟಿ ಮಾಡುತ್ತಾನೆ. ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ತನ್ನ ಮನದಾಳದ ವಿಚಾರವನ್ನು ಭಾಷೆಯ ಮೂಲಕ ಹಂಚಿ ಕೊಳ್ಳುತ್ತಾನೆ.
ಭಾಷೆ ಎಂದರೆ ಅದೊಂದು ಸಂವಹನ. ಇಬ್ಬರ ನಡೆಯುವ ಮಾತುಕತೆ ಇರಬಹುದು ಅಥವಾ ಹಲವರ ಜೊತೆ ನಡೆಯುವ ಇರುವ ಸಂವಾದವು ಇರಬಹುದು. ಅದು ಎಲ್ಲರಿಗು ಅರ್ಥವಾಗುವ ಹಾಗಿದ್ದರೆ ಕೇಳುವವನು ಮತ್ತು ಅಡುವವನಿಗೆ ಗೌರವ ಸಲ್ಲುತ್ತದೆ. ಭಾಷೆಯಲ್ಲಿ ಎರಡು ವಿಧ. ಒಂದು ಮಾತೃ ಭಾಷೆ ಮತ್ತೊಂದು ವ್ಯವಹಾರಿಕ ಭಾಷೆ. ಮಾತೃ ಭಾಷೆ ತಾಯಿಯ ಕರುಳ ಬೇರಿನಿಂದ ಬಂದದು. ಆಗತಾನೆ ಧರೆಗಿಳಿದ ಮುಗ್ದ ಕಂದಮ್ಮ ಮೊದಲು ಆಡುವುದೇ ಮಾತೃಭಾಷೆ . ಅದೇ ಮುದ್ದಿನ ಕಂದ ಮಾತೃ ಭಾಷೆಯ ಮೂಲಕ ಹೆತ್ತ ತಾಯಿಗೆ ತನ್ನ ಋಣವನ್ನು ತೀರಿಸುತ್ತದೆ. ಮಗು ಮುಂದೆ ದೊಡ್ಡವನಾಗುತ್ತ ಹೋದ ಹಾಗೆ ಅನ್ನ ಸಂಪಾದನೆಗಾಗಿ ವ್ಯವಹಾರಿಕ ಪ್ರಪಂಚಕ್ಕೆ ಕಾಲಿಡುತ್ತಾ ಹಲವು ಭಾಷೆ ಮತ್ತು ವಿದ್ಯೆಯನ್ನು ಕಲಿಯುತ್ತ ಬೆಳೆಯುತ್ತದೆ. ಕಡೆಗೆ ಒಂದು ಹಂತ ಮೀರಿದಾಗ ತನ್ನ ಮಾತುಭಾಷೆಯನ್ನೇ ಮರೆತು ಪರಿಪೂರ್ಣ ವ್ಯಾಪರಿಯಾಗಿ ಬೇರೆ ಭಾಷಗೆ ಮನ್ನಣೆ ಕೊಟ್ಟು ತನಗೆ ಉಸಿರಾಡಿ ಬದುಕಲು ಅವಕಾಶ ಕೊಟ್ಟ ತಾಯಿನುಡಿಯನ್ನೇ ದೂರ ಮಾಡಿ ತನ್ನ ಮುಂದಿನ ಪೀಳಿಗೆಗೆ ಮಮ್ಮಿ ಡ್ಯಾಡಿ ಎನ್ನುವ ಹುಚ್ಚು ಸಂಸ್ಕೃತಿಗೆ ಮುನ್ನುಡಿ ಬರೆಯುತ್ತಾನೆ.
ಇದು ಇಂದಿನ ವಾಸ್ತವ , ನಿಮ್ಮಲ್ಲಿ ಎಷ್ಟು ಜನ ಅಮ್ಮ, ಅಪ್ಪ ಎಂದು ತಮ್ಮ ಹೆತ್ತವರನ್ನು ಕರೆಯುತ್ತಿರ?
ಉತ್ತರ ಶೇಕಡಾ ೫೦ಕ್ಕಿಂತ ಕಡಿಮೆ.
ಇತ್ತೀಚಿಗೆ ಪ್ರತಿಷ್ಟಿತ ಬಹುರಾಷ್ಟ್ರೀಯ ಸಂಸ್ತೆಯಲ್ಲಿ ಕೆಲಸ ಮಾಡುವ ಕನ್ನಡಿಗರು , ತಮ್ಮ ಸಂಸ್ತೆಯಲ್ಲಿ ಕನ್ನಡ ಮಾತನಾಡಿದರೆ ನಮಗೆ ಅವಮಾನವೆಂಬಂತೆ ಅಂಗ್ಲ ಭಾಷೆಯಲ್ಲೇ ತಮ್ಮ ಕಷ್ಟ ಸುಖಗಳ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಇನ್ನ ಹಳ್ಳಿಯವರು ತಮ್ಮ ಮಕ್ಕಳ್ಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಿ , ತಮ್ಮ ಹಳ್ಳಿ ಸೊಗಡಿನ ಕನ್ನಡವನ್ನು ಬಿಟ್ಟು ಅಲ್ಪ ಸ್ವಲ್ಪ ಇಂಗ್ಲಿಷ್ ಪದಗಳ ಬಳಕೆ ಮಾಡಿ ನನಗೂ ಬರತೈತಿ ಇಂಗ್ಲೀಸು ಅಂತ ತೋರಿಸ್ಕೊಳ್ಳುತಾ , ಹುಚ್ಚು ಭ್ರಮೆಯಲ್ಲಿ ತಾನು ಕನ್ನಡಿಗ ಎನ್ನುವುದನ್ನೇ ಮರೆಯುತ್ತ ಇದ್ದಾನೆ . ಈ ಬೆಳವಣಿಗೆ ಒಂದರ್ಥದಲ್ಲಿ ಉತ್ತಮವಲ್ಲ ಒಂದು ಸಮಾಜ ಮತ್ತು ಅದರ ಸಂಸ್ಕಾರಕ್ಕೆ ದೊಡ್ಡ ಆಘಾತ.
ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಬಹು ರಾಷ್ಟ್ರೀಯ ಸಂಸ್ತೆಗಳ ಮುಖ್ಯಸ್ತರು ಮೂಲ ಸಂಸ್ತೆಯ ದೇಶದ ನಾಗರಿಕರು (ನನ್ನ ಸಂಸ್ತೆಯು ಸಹ ಇದರಲ್ಲಿ ಸೇರಿದೆ). ಮೂಲ ಸಂಸ್ತೆಯ ವ್ಯವಹಾರವೆಲ್ಲ ಅ ದೇಶದ ರಾಷ್ಟ್ರೀಯ ಭಾಷೆಯಲ್ಲಿ ಇದ್ದರೆ ಅದಕ್ಕೂ ಭಾರತದಲ್ಲೂ ಸಹ ಮನ್ನಣೆ ಇದೆ.(ಸಂಸ್ತೆಯ ಪತ್ರ ವ್ಯವಹಾರಗಳಲ್ಲಿ ಮೊದಲು ತಮ್ಮ ರಾಷ್ಟ್ರ ಭಾಷೆ( ಜರ್ಮನ್ , ಫ್ರೆಂಚ್ , ಫಿನ್ನಿಷ್ ) ನಂತರ ವ್ಯವಹಾರಿಕ ಭಾಷೆಯಾಗಿ ಅಂಗ್ಲ ಭಾಷೆ). ಅ ದೇಶದ ನಾಗರೀಕರು ತಮ್ಮ ಮಾತೃ ಭಾಷಗೆ ನೀಡುತ್ತಿರುವ ಮನ್ನಣೆ ಶ್ಲಾಘನೀಯ.
ಪ್ರತಿ ಶುಕ್ರವಾರ ಗುರುದೇವ ರವೀಂದ್ರನಾಥ ಟ್ಯಾಗೂರು ಅವರು ತಮ್ಮ ನೂತನ ಕೃತಿಗಳನ್ನು ಶಾಂತಿ ನಿಕೇತನದ ವಿದ್ಯಾರ್ಥಿ ಳು ಮತ್ತು ಅಧ್ಯಾಪಕರ ಮುಂದೆ ವಾಚಿಸುವುದಕ್ಕೆ ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸುತ್ತಿ
ಭಾಷಾಭಿಮಾನ ಬೇಕೇ ಬೇಕು. ಭಾರತ ಪ್ರಜಾತಂತ್ರ ಒಕ್ಕೂಟ ನಿಂತಿರುವುದು ಭಾಷೆಯ ಮೇಲೆಯೇ ಎನ್ನುವುದನ್ನು ನಾವು ಎಂದು ಮರೆಯ ಬಾರದು. ಅನ್ಯ ಭಾಷಿಕರಿಗೆ ಇರುವ ಕನಿಷ್ಠ ಅಭಿಮಾನ ನಮಗೆಕಿಲ್ಲ. ಕನ್ನಡಕ್ಕೆ ಮೇರು ಕೊಡುಗೆ ನೀಡಿದ ಕಿಟ್ಟಲ್ , ರೈಸ್ , ಮಾಸ್ತಿ , ಕೈಲಾಸಂ , ಬೇಂದ್ರೆ , ರಾಜರತ್ನಂ , ನಿಸಾರ್ ಅಹಮದ್ ಮತ್ತು ಹಲವರ ಮಾತೃ ಭಾಷೆ ಕನ್ನಡವೇ ಅಲ್ಲ . ಕನ್ನಡಿಗ ಕೇವಲ ನವಂಬರಿಗೆ ಸೀಮಿತನಾಗಿ ಎಲ್ಲರ ಹಾಗೆ ಜೈ ಕರ್ನಾಟಕ ಎನ್ನದೆ, ಗಾಂಚಲಿ ಬಿಡಿ ಕನ್ನಡ ಮಾತನಾಡಿ ಎಂದು ಕೇವಲ ಫೇಸ್ ಬುಕ್ ಅಲ್ಲಿ ಲೈಕ್ ಮಾಡಿ ನಿಲ್ಲಬೇಡ . ನಿನ್ನ ದೇಶ ಮತ್ತು ನಿನ್ನ ಭಾಷೆಗೆ ನಿನ್ನ ಕೊಡುಗೆ ಬೇಕು. ಅದಕ್ಕೆ ಹೇಳಿರುವುದು ಕುವೆಂಪುರವರು ” ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ “.ದ್ದರು. ಕಾರ್ಯಕ್ರಮ ಮುಗಿದ ಮೇಲೆ ಅಲ್ಲಿ ನೆರೆದಿದ್ದವರ ಪ್ರಶ್ನೆಗಳಿಗೆ ಗುರುದೇವರು ಉತ್ತರಿಸುತ್ತಿದ್ದರು. ಒಂದು ಬಾರಿ ಒಬ್ಬ ಅನ್ಯ ಭಾಷಿಕ ಮತ್ತು ಒಬ್ಬ ಬಂಗಾಳಿ ವಿದ್ಯಾರ್ಥಿ ಒಟ್ಟಿಗೇ ಪ್ರಶ್ನೆ ಕೇಳುತ್ತಾರೆ. ಆಗ ಅನ್ಯಭಾಷಿಕ ವಿದ್ಯಾರ್ಥಿಗೆ ಗುರುದೇವರು ಹೇಳುತ್ತಾರೆ ” ನನ್ನ ಬಂಗಾಳಿ ಮಿತ್ರನಿಗೆ ಮೊದಲು ಉತ್ತರಿಸುತ್ತೇನೆ , ಆಮೇಲೆ ನಿಮ್ಮ ಸರದಿ ” .
ಬನ್ನಿ ಕನ್ನಡ ರಾಜ್ಯೋತ್ಸವನ್ನು ಅರ್ಥ ಪೂರ್ಣ ವಾಗಿ ಆಚರಿಸೋಣ…
* * * * * * * * *
ಚಿತ್ರ ಕೃಪೆ : ಅಂತರ್ಜಾಲ





ಆ ಬಹುರಾಷ್ಟ್ರೀಯ ಕಂಪನಿಗಳ ಮಾಲಕರು ಮತ್ತು ನೌಕರರು ಇಂದು ಅವರೆಲ್ಲ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಯಶಸ್ಸನ್ನು ಗಳಿಸಿದ್ದರೆ ಅದರ ಹಿಂದೆ ಅವರ ತಾಯ್ನುಡಿಯಲ್ಲಿ ಜ್ಞಾನದ ಕೊರತೆಯಾಗಲಿಲ್ಲ ಎಂಬ ಕಾರಣ ಖಂಡಿತವಾಗಿಯೂ ಇದೆ. ನಾವು ನೂರು ಭಾಷೆ ಮಾತನಾಡಿದರೂ ನಮ್ಮ ತಾಯ್ನುಡಿಯಲ್ಲಿ ಜ್ಞಾನದ ಕೊರತೆಯಾದಲ್ಲಿ ಅದು ನಮ್ಮ ಸ್ಪರ್ಧಾತ್ಮಕತೆಯನ್ನು ಕಡಿಮೆಗೊಳಿಸುವದರಲ್ಲಿ ಸಂಶಯವಿಲ್ಲ.
ನಿಮ್ಮ ಮಾತಿಗೆ ನನ್ನ ಸಹಮತವಿದೆ
-ಮಧುಚಂದ್ರ