ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 8, 2013

67

ಭಾರತದ ಮಾಣಿಕ್ಯ – ಮಾಣಿಕ್ ಸರ್ಕಾರ್

‍ನಿಲುಮೆ ಮೂಲಕ

-ಡಾ. ಅಶೋಕ್ ಕೆ ಆರ್

Manik Sarkarಭಾರತ ಬಡದೇಶವೇ? ನಮ್ಮ ರಾಜಕಾರಣಿಗಳು ಅಧಿಕೃತವಾಗಿಯೇ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ನೋಡಿದರೆ ಭಾರತದಲ್ಲಿ ಬಡವರ ಅಸ್ತಿತ್ವವೇ ಇಲ್ಲವೇನೋ ಎಂಬ ಭಾವನೆ ಮೂಡಿದರೆ ತಪ್ಪಲ್ಲ. ಎಲ್ಲೋ ಕೆಲವರನ್ನು ಹೊರತುಪಡಿಸಿ ನಮ್ಮ ಸಂಸದರು ಸಚಿವರು ಶಾಸಕರು ಮುಖ್ಯಮಂತ್ರಿಗಳೆಲ್ಲ ಕೋಟಿಗೂ ಅಧಿಕ ಬೆಲೆಬಾಳುವವರೇ! ಶಾಸನಸಭೆಯಲ್ಲಿ ಯಾರದೂ ವಿರೋಧವಿಲ್ಲದೆ ಅಂಗೀಕೃತವಾಗುವ ಮಸೂದೆ “ಶಾಸಕ – ಸಚಿವರ” ವೇತನ ಹೆಚ್ಚಳ ಮಾತ್ರ! ರಾಜಕಾರಣಿಗಳ ಬಗ್ಗೆ ರಾಜಕೀಯದ ಬಗ್ಗೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವ ಸಿನಿಕತೆಯ ನಡುವೆ ರಾಜಕಾರಣವೆಂದರೆ ಕೇವಲ ಹಣ ಮಾಡುವ, ಅನೈತಿಕ ರೀತಿಯಲ್ಲಿ ಜನರ ಮಧ್ಯೆಯೇ ವಿರೋಧ ಬೆಳೆಸುವ ದಂಧೆಯಲ್ಲ ಎಂಬುದನ್ನು ನಿರೂಪಿಸುವ ರಾಜಕಾರಣಿಗಳೂ ಇದ್ದಾರೆ ಎಂದರೆ ನಂಬುವುದು ಕೊಂಚ ಕಷ್ಟದ ಕೆಲಸವೇ ಸರಿ! ಅದರಲ್ಲೂ ಕರ್ನಾಟಕದ ರಾಜಕಾರಣ ಹಿಂದೆಂದೂ ಕಾಣದ ರೀತಿಯಲ್ಲಿ ಅಧಃಪತನಕ್ಕೊಳಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರನ್ನು ಅಪಹಾಸ್ಯದ ಸರಕನ್ನಾಗಿಸಿರುವುದು ಸುಳ್ಳಲ್ಲ.  ಈ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವೆಂದರೆ ಪ್ರಚಾರಕ್ಕಾಗಿ ಹಪಹಪಿಸುವುದಲ್ಲ, ವೋಟಿಗಾಗಿ ನೈತಿಕತೆ ತೊರೆಯುವುದಲ್ಲ, ಇವೆಲ್ಲಕ್ಕಿಂತ ಹೆಚ್ಚಾಗಿ ತನ್ನತನ ಕಳೆದುಕೊಳ್ಳುವುದಲ್ಲ ಎಂಬುದನ್ನು ನಿರೂಪಿಸುತ್ತ ತನ್ನ ಸಾಮರ್ಥ್ಯದ ಮಟ್ಟಿಗೆ ಜನರಿಗೆ ಅನುಕೂಲವನ್ನು ಮಾಡಿಕೊಡುತ್ತಿರುವ ಮಾಣಿಕ್ ಸರ್ಕಾರ್ ಬಗ್ಗೆ ತಿಳಿದುಕೊಳ್ಳುವುದು ರಾಜಕಾರಣಿಗಳಿಗೆ ಮತ್ತವರಿಗೆ ಮತ ನೀಡುವ ಜನರಿಗೂ ಅವಶ್ಯಕ.

“ಸೆವೆನ್ ಸಿಸ್ಟರ್ಸ್” ಎಂದೇ ಹೆಸರಾಗಿರುವ ಭಾರತದ ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಪುಟ್ಟ ಮತ್ತು ಕೊನೆಯ ರಾಜ್ಯ ತ್ರಿಪುರ. ತ್ರಿಪುರದಲ್ಲಿ 1998ರಿಂದಲೂ ಮುಖ್ಯಮಂತ್ರಿಯಾಗಿರುವವರು ಮಾಣಿಕ್ ಸರ್ಕಾರ್! ಜನವರಿ 22 1949ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಾಣಿಕ್ ಸರ್ಕಾರ್ ವಿಧ್ಯಾರ್ಥಿ ದೆಸೆಯಲ್ಲಿದ್ದಾಗ ನಕ್ಸಲ್ ವಿಚಾರಧಾರೆಗಳಿಗೆ ಆಕರ್ಷಿತರಾಗಿ ಕಮ್ಯುನಿಷ್ಟ್ ಪಕ್ಷ ಸೇರಿದರು. ಎಸ್ ಎಫ್ ಐನ ಪ್ರತಿನಿಧಿಯಾಗಿ, ಎಸ್ ಎಫ್ ಐನ ರಾಜ್ಯ ಕಾರ್ಯದರ್ಶಿಯಾಗಿ, ಅದೇ ಎಸ್ ಎಫ್ ಐನ ಅಖಿಲ ಭಾರತ ಸಮಿತಿಗೆ ಉಪಾಧ್ಯಕ್ಷನಾಗಿ ತಮ್ಮ ಹೋರಾಟದ ಹಾದಿಯನ್ನು ಮುಂದುವರೆಸಿದ ಮಾಣಿಕ್ 1972ರಲ್ಲಿ ಸಿ ಪಿ ಐ (ಎಂ)ನ ರಾಜ್ಯ ಕಮಿಟಿಯ ಸದಸ್ಯನಾಗಿ ಆಯ್ಕೆಯಾಗುತ್ತಾರೆ. 1978ರಲ್ಲಿ ಸಿ ಪಿ ಐ (ಎಂ)ನ ರಾಜ್ಯ ಕಾರ್ಯದರ್ಶಿಯಾಗುತ್ತಾರೆ. ಅದೇ ವರ್ಷ ಎಡರಂಗ ಮೊದಲ ಬಾರಿಗೆ ಅಧಿಕಾರಕ್ಕೆ ಬರುತ್ತದೆ. 1985ರಲ್ಲಿ ಮಾಣಿಕ್ ಸರ್ಕಾರ್ ಪಕ್ಷದ ಸೆಂಟ್ರಲ್ ಕಮಿಟಿಯ ಸದಸ್ಯರಾಗುತ್ತಾರೆ.

ರಾಜಕೀಯದಲ್ಲಿ ಹೋರಾಟದ ಹಾದಿ ಮುಂದುವರೆಸಿದ ಮಾಣಿಕ್ ಸರ್ಕಾರ್ 1998ರಲ್ಲಿ ಮುಖ್ಯಮಂತ್ರಿಯಾಗುತ್ತಾರೆ. ತ್ರಿಪುರಾದ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಸ್ವಾತಂತ್ರ್ಯ ಕಾಲದಲ್ಲಿ ಆದಿವಾಸಿಗಳೇ ಹೆಚ್ಚಿದ ಪ್ರದೇಶವಾಗಿತ್ತು ತ್ರಿಪುರಾ. ದೇಶ ಇಬ್ಭಾಗವಾದ ಸಮಯದಲ್ಲಿ ನಡೆದ ವಲಸೆಯಿಂದ ಆದಿವಾಸಿಗಳೇ ಅಲ್ಪಸಂಖ್ಯಾತರಾಗಿಬಿಟ್ಟಿದ್ದರು. ಮೂಲನಿವಾಸಿ ಮತ್ತು ವಲಸೆಗಾರರ ನಡುವಿನ ಕಲಹಗಳು ಯುದ್ಧೋನ್ಮಾದ ಸ್ಥಿತಿಗೆ ತಲುಪಿತ್ತು. ಕೊಲೆ ಸುಲಿಗೆ ವ್ಯಾಪಕವಾಗಿತ್ತು. ಭೌಗೋಳಿಕವಾಗಿ ತ್ರಿಪುರ ದೇಶದ ರಾಜಧಾನಿಯಿಂದ ಬಹಳವೇ ದೂರವಿದ್ದ ನೆರೆಯ ದೇಶಗಳೊಂದಿಗೆ ಗಡಿ ಹಂಚಿಕೊಂಡ ಒಂದು ಪುಟ್ಟ ಪ್ರದೇಶ. ಸ್ಥಳೀಯ ರಾಜಕಾರಣಿಗಳ ಬೇಜವಾಬುದಾರಿತನ, ರಾಷ್ಟ್ರ ರಾಜಕಾರಣಿಗಳ ಅಸಡ್ಡೆಯ ನಡುವೆ ನಲುಗಿದ ತ್ರಿಪುರ ಯಾವುದೇ ಅಭಿವೃದ್ಧಿ ಕಂಡಿರಲಿಲ್ಲ. ಆಧುನಿಕ ಅಭಿವೃದ್ಧಿಯ ವಿಚಾರವನ್ನು ಬದಿಗೆ ಸರಿಸಿದರೂ ಅಂತಃಕಲಹದಿಂದ ನಲುಗಿಹೋಗಿದ್ದ ರಾಜ್ಯವದು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಅಧಿಕಾರಕ್ಕೆ ಬಂದ ಮಾಣಿಕ್ ಸರ್ಕಾರ್ ಮುಂದಿನ ಹಾದಿ ಸುಗಮವಾದದ್ದಾಗಿರಲಿಲ್ಲ. ನೈಸರ್ಗಿಕ ಸಂಪನ್ಮೂಲಗಳ ಕೊರತೆ, ದೇಶದ ಒಟ್ಟು ಶೇಕಡವಾರುಗಿಂತ ಕಡಿಮೆಯಿದ್ದ ಸಾಕ್ಷರತೆಯ ಪ್ರಮಾಣ, ಅತ್ಯಂತ ಕೆಟ್ಟ ರಸ್ತೆಗಳು, ಹಿಂಸೆಗೆ ಓಗೊಡುತ್ತಿದ್ದ ಯುವಜನತೆ. ಇಷ್ಟೆಲ್ಲ ಸಮಸ್ಯೆಗಳನ್ನು ಏಕಕಾಲಕ್ಕೆ ಒಂದೇ ಏಟಿಗೆ ಬಗೆಹರಿಸಲು ಸಾಧ್ಯವಿರಲಿಲ್ಲ. ಪ್ರಥಮ ಅವಧಿಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡುವತ್ತ ಗಮನ ಕೊಟ್ಟು ಜೊತೆಗೆ ರಸ್ತೆಗಳ ಅಭಿವೃದ್ಧಿ, ಸ್ವ ಉದ್ಯೋಗಕ್ಕೆ ಪ್ರೋತ್ಸಾಹ, ಆದಿವಾಸಿಗಳಿಗೆ ಸ್ವಾಯತ್ತತೆ ನೀಡುವಲ್ಲಿ ಸಫಲವಾದ ಮಾಣಿಕ್ ಸರ್ಕಾರ ತನ್ನ ಮೊದಲ ಅವಧಿಯ ಕೊನೆಯಲ್ಲಿ ತ್ರಿಪುರಾದ ಹಿಂಸಾಚಾರವನ್ನು ಕಡಿಮೆ ಮಾಡುವಲ್ಲಿ ಯಶ ಕಂಡಿತ್ತು. ನಂತರ ಮಾಣಿಕ್ ಸರ್ಕಾರ್ ಹಿಂದಿರುಗಿ ನೋಡುವ ಪ್ರಮೇಯ ಬಂದಿಲ್ಲ. 1998ರಿಂದಲೂ ತ್ರಿಪುರಾದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ತ್ರಿಪುರಾದ 60ಸ್ಥಾನಗಳಲ್ಲಿ 50ನ್ನು ಎಡರಂಗ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗೆಲುವಿನ ಬಗ್ಗೆ ಮಾತನಾಡುತ್ತ “ಈ ಜನಾದೇಶ ನನಗೆ ಅಚ್ಚರಿಯುಂಟುಮಾಡಿಲ್ಲ. ನಿರೀಕ್ಷೆಯ ಫಲಿತಾಂಶವಿದು. ಇದು ನನ್ನೊಬ್ಬನದೇ ಗೆಲುವಲ್ಲ. ನನ್ನ ವ್ಯಕ್ತಿತ್ವದ ಗೆಲುವೂ ಅಲ್ಲ. ನಾವೆಲ್ಲರೂ ಸೇರಿ ಮಾಡಿದ ಕಾರ್ಯಗಳ ಗೆಲುವಿದು. ಈ ಚುನಾವಣೆ ನನ್ನ ಮೇಲೆಯೇ ಕೇಂದ್ರೀಕೃತವಾಗಿತ್ತೆಂಬ ಭಾವನೆ ನಿಮ್ಮದಾಗಿರಬಹುದು, ಆದರದು ನನಗೆ ಸಮ್ಮತವಲ್ಲ” ಎಂದು ನುಡಿದಿದ್ದಾರೆ. “ಪಕ್ಷ ಗೆಲ್ಲಿಸಿದ್ದು ನಾನು, ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾನು ಇವರನ್ನು ಮುಖ್ಯಮಂತ್ರಿ ಮಾಡಿದ್ದು ನಾನು” ಎಂಬ ವಾಕ್ಯಗಳನ್ನೇ ಕಳೆದೈದು ವರುಷದಿಂದ ಕೇಳುತ್ತಿರುವ ಕನ್ನಡಿಗರಿಗೆ ಮಾಣಿಕ್ ಸರ್ಕಾರ್ ಮಾತುಗಳು ಬೆಚ್ಚಿಬೀಳಿಸಿದರೆ ಅಚ್ಚರಿಯಿಲ್ಲ!

ಮಾಣಿಕ್ ಸರ್ಕಾರ್ ರವರ ವೈಯಕ್ತಿಕ ಜೀವನವನ್ನು ನೋಡಿದರೆ ಮತ್ತಷ್ಟು ಅಚ್ಚರಿಗೊಳಗಾಗುತ್ತೇವೆ! ಭಾರತದ ಪರಿಶುದ್ಧ ಮತ್ತು ಅತಿ ಬಡ ಮುಖ್ಯಮಂತ್ರಿ (ಬಹುಶಃ ಬಡ ರಾಜಕಾರಣಿ!) ಮಾಣಿಕ್ ಸರ್ಕಾರ್! ಅವರು ಘೋಷಿಸಿಕೊಂಡಿರುವ ಆಸ್ತಿಯ ಒಟ್ಟು ಮೌಲ್ಯ ಎರಡೂವರೆ ಲಕ್ಷಕ್ಕಿಂತಲೂ ಕಡಿಮೆ; ಅದರಲ್ಲಿ ಅವರ ತಾಯಿಯಿಂದ ಬಂದ ಒಂದು ಮನೆ ಕೂಡ ಸೇರಿದೆ! 2013ರ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಅವರ ಬಳಿಇದ್ದ ಹಣ 1080 ಮಾತ್ರ, ಬ್ಯಾಂಕಿನಲ್ಲಿದ್ದ ಠೇವಣಿ 9720/-! ದೇಶದಲ್ಲಿ ಅತಿ ಕಡಿಮೆ ಸಂಬಳ (9200/-) ಪಡೆಯುತ್ತಿರುವ ಮಾಣಿಕ್ ಸರ್ಕಾರ್ ಆ ಸಂಬಳವನ್ನೂ ಪಕ್ಷಕ್ಕೆ ನೀಡಿ ಪಕ್ಷದ ಇತರೆ ಕಾರ್ಯಕರ್ತರಂತೆ ಐದು ಸಾವಿರ ರುಪಾಯಿಗಳನ್ನು ಪಡೆಯುತ್ತಿದ್ದಾರೆ! ಇನ್ನು ಮುಖ್ಯಮಂತ್ರಿಯ ಜೀವನ ನಿರ್ವಹಣೆ ನಡೆಯುತ್ತಿರುವುದು ಸರಕಾರಿ ಕೆಲಸದಲ್ಲಿದ್ದ ಅವರ ಮಡದಿ ನಿವೃತ್ತರಾದಾಗ ಬಂದ ಪಿಎಫ್ ಮತ್ತಿತರ ಹಣವನ್ನು (24 ಲಕ್ಷ) ಬ್ಯಾಂಕಿನಲ್ಲಿ ಠೇವಣಿರೂಪದಲ್ಲಿಟ್ಟು ಅದರಿಂದ ಬರುವ ಬಡ್ಡಿಯಿಂದ!

ತ್ರಿಪುರ ರಾಜ್ಯವನ್ನು ಮಾಣಿಕ್ ಸರ್ಕಾರ್ ಭೂಲೋಕದ ಸ್ವರ್ಗವನ್ನಾಗೇನೂ ರೂಪಿಸಿಲ್ಲ. ಅಲ್ಲೂ ಸಮಸ್ಯೆಗಳಿವೆ. ಆದರೆ ತಮ್ಮ ಅಧಿಕಾರಾವಧಿಯಲ್ಲಿ ಹಿಂಸಾಚಾರವನ್ನು ಕಡಿಮೆಗೊಳಿಸುವಲ್ಲಿ ಸಫಲರಾಗಿದ್ದಾರೆ, ತ್ರಿಪುರದಲ್ಲೀಗ ಶಾಂತಿಯಿದೆ. 2008ರಿಂದ ಒಂದೂ ಭಯೋತ್ಪಾದಕ ಕೃತ್ಯ ನಡೆದಿಲ್ಲ. ಸಾಕ್ಷರತೆಯ ಪ್ರಮಾಣ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ! ರಸ್ತೆ ಮತ್ತು ರೈಲು ಸಂಪರ್ಕ ಉತ್ತಮಗೊಂಡಿವೆ. ವಿದ್ಯುತ್ ಕಡಿತ ಮುಂಚಿನಷ್ಟಿಲ್ಲ. ಇಲ್ಲಿಯವರೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ನಮಗೆ ಮತ್ತೊಂದು ಅವಕಾಶ ನೀಡಿ ಎಂದೇ ಚುನಾವಣೆಗೆ ಹೊರಟಿದ್ದ ಸಿ ಪಿ ಐ(ಎಂ) ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ವಿಶ್ವಾಸಕ್ಕೆ ಕುಂದುಬರದ ರೀತಿಯಲ್ಲಿ ಮತ್ತಷ್ಟು ಉತ್ತಮ ಆಡಳಿತ ನೀಡುವ ಬೃಹತ್ ಜವಾಬುದಾರಿಯೂ ಮಾಣಿಕ್ ಸರ್ಕಾರ್ ನೇತೃತ್ವದ ಎಡರಂಗ ಸರಕಾರಕ್ಕಿದೆ.

ಯಾವೊಂದು ಜವಾಬ್ದಾರಿಯನ್ನೂ ಇದುವರೆಗು ನಿರ್ವಹಿಸದ ರಾಹುಲ್ ಗಾಂಧಿ ಮತ್ತು ಸರಕಾರಿ ಕೃಪಾಪೋಷಿತ ಕೋಮುಗಲಭೆ ನಡೆದಾಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮಾತ್ರ ಪ್ರಧಾನಿ ಸ್ಥಾನಕ್ಕೆ ಅರ್ಹರು ಎಂಬಂತೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಪ್ರಚುರಪಡಿಸುತ್ತಿರುವ ಮಾಧ್ಯಮಗಳಿಗೆ, ಜನರಿಗೆ ಮಾಣಿಕ್ ಸರ್ಕಾರರಂತಹವರು ಯಾಕೆ ಪ್ರಧಾನಿ ಸ್ಥಾನಕ್ಕೆ ಬೇರೆಯವರಿಗಿಂತ ಹೆಚ್ಚಾಗಿಯೇ ಅರ್ಹರು ಎಂದು ಹೇಳಬೇಕೆನಿಸುವುದಿಲ್ಲ? “ಮುಖ್ಯಭಾರತದ” ಹೊರಗಿರುವ ರಾಜ್ಯದ ಮುಖ್ಯಮಂತ್ರಿ ಎಂಬ ಅಸಡ್ಡೆಯಾ? ಹೆಚ್ಚು ಲೋಕಸಭಾ ಸೀಟುಗಳಿರದ ರಾಜ್ಯವೆಂಬ ತಿರಸ್ಕಾರವಾ? ಅಥವಾ ಪ್ರಧಾನಿ ಹುದ್ದೆಯ ರೇಸಿಗೆ ಬರಲು ಧರ್ಮದ ಹೆಸರಿನಲ್ಲಿ ಮಾರಣಹೋಮ ನಡೆಸಿರಬೇಕಾ? ಅಥವಾ ರಾಜಕಾರಣಿಯ ಕುಟುಂಬಕ್ಕೇ ಸೇರಿದವರಾಗಿರಬೇಕಾ?!

67 ಟಿಪ್ಪಣಿಗಳು Post a comment
  1. SSNK's avatar
    ಮಾರ್ಚ್ 8 2013

    ಮಾಣಿಕ್ ಸರ್ಕಾರ್ ಅವರ ಕುರಿತಾಗಿ ವಿಷಯ ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು.

    ಆದರೆ, ಕಡೆಯಲ್ಲಿ ನೀವಾಡುವ ಈ ಮಾತು ಸರಿಯೆನಿಸಲಿಲ್ಲ:
    > ಸರಕಾರಿ ಕೃಪಾಪೋಷಿತ ಕೋಮುಗಲಭೆ ನಡೆದಾಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ

    ಗುಜರಾತಿನ ಗೋದ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿ ೬೫ ಜನರನ್ನು ಸುಟ್ಟದ್ದೂ ನಿಜ, ಆ ನಂತರದಲ್ಲಿ ಗುಜರಾತ್ ರಾಜ್ಯದೆಲ್ಲೆಡೆ ಕೋಮುಗಲಭೆಗಳಾದದ್ದೂ ನಿಜ. ಅದು ನಡೆದಾಗ ನರೇಂದ್ರ ಮೋದಿಯವರುಲ್ಲಿನ ಮುಖ್ಯಮಂತ್ರಿಯಾಗಿದ್ದರೆಂಬುದೂ ನಿಜ.
    ಆದರೆ, ಅದು ಸರಕಾರವೇ ನಡೆಸಿದ್ದು ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ನ್ಯಾಯಾಲಯಗಳಲ್ಲಿ ಇದರ ಕುರಿತಾಗಿ ಮೊಕದ್ದಮೆಗಳು ನಡೆದಿವೆ, ವಿಚಾರಣೆಗಳೂ ನಡೆದಿವೆ. ಆದರೆ, ಆ ಗಲಭೆಗಳು ಸರಕಾರೀ ಕೃಪಾಪೋಷಿತ ಎನ್ನುವುದು ಸಾಬೀತಾಗಿಲ್ಲ. ನಮ್ಮ ನ್ಯಾಯವ್ಯವಸ್ಥೆಯಲ್ಲಿ ನನಗಿನ್ನೂ ನಂಬಿಕೆಯಿದೆ. ಮಾಧ್ಯಮಗಳ ಕೂಗಾಟ/ಕಿರುಚಾಟದಿಂದ ವಿಚಲಿತರಾಗದೆ ನ್ಯಾಯಾಲಯಗಳು ಏನು ಹೇಳಿವೆ ಎಂಬುದನ್ನು ಸ್ವಲ್ಪ ಗಮನಿಸಿ.
    ಸರಕಾರೀ ಕೃಪಾಪೋಷಿತ ಎಂದು ನಿರೂಪಿಸಲು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ ತೀಸ್ತಾ ಸೆಟಲ್ವಾಡ್ ಅವರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಕಳೆದ ವಾರ ಅವರು ಯಾರಿಗಾಗಿ ಹೋರಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದರೋ, ಆ ಜನರೇ ಅವರನ್ನು ದೂರವಿಡುವಂತೆ ನ್ಯಾಯಾಲಯದಲ್ಲಿ ವಿನಂತಿಸಿದ್ದಾರೆ.
    ಈ ತೀಸ್ತಾ ಸೆಟಲ್ವಾಡ್ ಅವರೂ ಸಹ ಕಮ್ಯುನಿಸ್ಟ್ ಸಿದ್ಧಾಂತದಿಂದಲೇ ಪ್ರೇರೇಪಿತರಾದವರು ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು.
    ಮಾಣಿಕ್ ಸರ್ಕಾರ್ ಭ್ರಷ್ಟಾಚಾರಿಯಾಗಲಿಲ್ಲ, ಶುದ್ಧ ಸರಕಾರ ನೀಡಿದರು ಎನ್ನುವುದಕ್ಕೆ ಅವರ ವೈಯಕ್ತಿಕ ಸಂಸ್ಕಾರವೇ ಕಾರಣವೇ ಹೊರತು, ಅವರು ನಂಬಿಕೊಂಡ ಸಿದ್ಧಾಂತವಲ್ಲ.
    ಪಶ್ಚಿಮ ಬಂಗಾಳದಲ್ಲಿಯೂ ಇದೇ ಸಿದ್ಧಾಂತಕ್ಕೆ ಅಂಟಿಕೊಂಡಿದ್ದ ಸರಕಾರ, ಏನೇನು ಮಾಡಿತು ಎನ್ನುವುದು ಜಗತ್ತಿಗೆಲ್ಲಾ ತಿಳಿದಿದೆ.
    ಮಾಣಿಕ್ ಸರ್ಕಾರ್ ತರಹವೇ ಇಂದಿನ ಕಲುಷಿತ ರಾಜಕೀಯ ವಾತಾವರಣದಲ್ಲಿಯೂ ಶುದ್ಧರಾಗಿರುವ ಇನ್ನೂ ಕೆಲವರಿದ್ದಾರೆ. ಉದಾಹರಣೆಗೆ, ಎ.ಕೆ.ಆಂಟೋನಿ, ಎಲ್.ಕೆ.ಅಡ್ವಾಣಿ, ಸುರೇಶ್ ಕುಮಾರ್, ನರೇಂದ್ರ ಮೋದಿ, ಶಿವರಾಜ್ ಸಿಂಗ್ ಚೌಹಾಣ್.

    ಉತ್ತರ
  2. Ananda Prasad's avatar
    Ananda Prasad
    ಮಾರ್ಚ್ 8 2013

    ಗುಜರಾತಿನಲ್ಲಿ ನಡೆದದ್ದು ಸರ್ಕಾರೀ ಕೃಪಾಪೋಷಿತ ಗಲಭೆ ಎಂಬುದು ಬಹುತೇಕ ಪ್ರಜ್ಞಾವಂತರ ಅನಿಸಿಕೆ. ಇದಕ್ಕೆ ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ ಎಂದು ಜಾರಿಕೊಳ್ಳುವುದು ಸಮಂಜಸವೆಂದು ಕಾಣುವುದಿಲ್ಲ. ಹಾಗೆ ನೋಡಿದರೆ ಎಷ್ಟೋ ಕೊಲೆ ಪ್ರಕರಣಗಳಲ್ಲಿ ಎಷ್ಟೋ ಅಪರಾಧಿಗಳು ಸಾಕ್ಷ್ಯ ಇಲ್ಲ ಎಂದು ನ್ಯಾಯಾಲಯದಿಂದ ಹೊರಬರುತ್ತಾರೆ, ಆದರೆ ಅಂಥವರನ್ನು ಜನ ಕೊಲೆಗಾರ ಎಂದೇ ಗುರುತಿಸುತ್ತಾರೆ. ಗುಜರಾತಿನಲ್ಲಂತೂ ಸರ್ಕಾರ ಎಲ್ಲ ಸಾಕ್ಷ್ಯಗಳನ್ನೂ ನಾಶಪಡಿಸಿದೆ ಎಂಬುದು ಪ್ರಜ್ನಾವಂತರಿಗೆ ತಿಳಿದಿರುವ ಸಂಗತಿ. ಹೀಗಾಗಿ ನ್ಯಾಯಾಲಯದಲ್ಲಿ ಅದು ಸಾಬೀತಾಗಲಿಕ್ಕಿಲ್ಲ. ಸರ್ಕಾರೀ ಯಂತ್ರವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ಈ ಗಲಭೆಯನ್ನು ಸಣ್ಣ ಪ್ರಮಾಣದಲ್ಲೇ ತಡೆಯಬಹುದಿತ್ತು. ಆದರೆ ಸರ್ಕಾರವು ರಾಜಧರ್ಮವನ್ನು ಪಾಲಿಸಲಿಲ್ಲ ಎಂಬುದು ವಾಜಪೇಯಿಯವರು ಅದನ್ನು ಪಾಲಿಸುವಂತೆ ಮೋದಿಗೆ ಹೇಳಿದುದರಿಂದಲೇ ತಿಳಿದುಬರುತ್ತದೆ.

    ಅಲ್ಲದೆ ಗುಜರಾತ್ ಗಲಭೆಗಳು ಇದ್ದಕ್ಕಿದ್ದಂತೆ ನಡೆದದ್ದಲ್ಲ. ಅದಕ್ಕೆ ಬೇಕಾದ ವಾತಾವರಣವನ್ನು ಮೂಲಭೂತವಾದಿಗಳು ತಮ್ಮ ದೊಡ್ಡ ಬಾಯಿಯಿಂದ ವಿಷವನ್ನು ಕಕ್ಕೀ ಕಕ್ಕೀ ಸಿದ್ಧಪಡಿಸಿದ್ದರು. ಅಯೋಧ್ಯೆಯ ಕರಸೇವೆ ಇದರ ಒಂದು ಭಾಗ ಅಷ್ಟೇ.

    ಉತ್ತರ
    • SSNK's avatar
      ಮಾರ್ಚ್ 8 2013

      ನಿಮಗೆ ತಿಳಿದ ಕೆಲವು “ಪ್ರಜ್ಞಾವಂತರ ಅನಿಸಿಕೆ” ಇರಬಹುದು.
      ದೇಶದ ಎಲ್ಲಾ ಪ್ರಜ್ಞಾವಂತರೂ ನಿಮಗೆ ತಿಳಿದಿದ್ದಾರೆ ಅಥವಾ ಅವರೆಲ್ಲರ ಹತ್ತಿರ ನೀವು ಚರ್ಚಿಸಿದ್ದೇನೆ ಎನ್ನುವ ಹುಂಬತನ ತೋರಿಸುತ್ತಿಲ್ಲ ತಾನೆ?
      “ಪ್ರಜ್ಞಾವಂತರ ಅನಿಸಿಕೆ” ಸತ್ಯವೇ ಆಗಿರಬೇಕೆಂದೇನೂ ಇಲ್ಲ.
      ಅನೇಕ ಪ್ರಜ್ಞಾವಂತರು, ಒಂದು ಕೋಮಿಗೆ ಸೇರಿದವರೆಲ್ಲಾ ಭಯೋತ್ಪಾದಕರೆಂದು ಅಂದುಕೊಂಡಿದ್ದಾರೆ.
      ಅವರು ಹಾಗೆಂದುಕೊಂಡಿದ್ದಾರೆಂದು ಸತ್ಯವೇ ಬದಲಾಗಿಬಿಡುತ್ತದೆಯೇ?

      ಎಲ್ಲಕ್ಕೂ “ಪ್ರಜ್ಞಾವಂತರ ಅನಿಸಿಕೆ”ಯೇ ಆಧಾರವಾಗುವುದಾದಲ್ಲಿ ನ್ಯಾಯಾಲಯ ಏಕಿರಬೇಕು, ತನಿಖಾ ಸಂಸ್ಥೆಗಳು ಏಕೆ ಬೇಕು?

      ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ. ಇಲ್ಲೊಂದು ಸಂವಿಧಾನವಿದೆ. ಅದರ ಆಧಾರದ ಮೇಲೆ ನ್ಯಾಯಾಲಯಗಳು ಕೆಲಸ ಮಾಡುತ್ತವೆ.

      ಗುಜರಾತು ಸರಕಾರ ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸಿಬಿಟ್ಟಿತು ಎಂದು ಹೇಳುವುದಕ್ಕಿಂತ ಬಾಲಿಶ ಹೇಳಿಕೆ ಮತ್ತೊಂದಿಲ್ಲ.
      ಅಲ್ಲಿ ಕೋಮು ಗಲಭೆ ಪ್ರಾರಂಭವಾದ ಕ್ಷಣದಿಂದಲ್ಲೇ ಮಾಧ್ಯಮಗಳು, “ಜಾತ್ಯಾತೀತ”ವಾದಿಗಳು, “ಮಾನವ ಹಕ್ಕು”ದಾರರು, ಇತ್ಯಾದಿಗಳೆಲ್ಲಾ ಭೂತದಗಾಜು ಹಿಡಿದು ಆ ರಾಜ್ಯವನ್ನು ಕಾಯುತ್ತಿದ್ದಾರೆ. ಅಲ್ಲಿ ನಡೆಯುವ ಸಣ್ಣ ಸಂಗತಿಗಳೂ ಜಗಜ್ಜಾಹೀರಾಗುತ್ತಿದೆ. ಕೇಂದ್ರ ಸರಕಾರವೂ ಗುಜರಾತಿನ ವಿಷಯದಲ್ಲಿ “ವಿಶೇಷ ಆಸಕ್ತಿ” ವಹಿಸಿದೆ.
      ಹೀಗೆಲ್ಲಾ ಇರುವಾಗ, ಅಷ್ಟು ಸುಲಭದಲ್ಲಿ ಸಾಕ್ಷ್ಯ ನಾಶ ಸಾಧ್ಯವೇ?

      ಗಲಭೆ ಪ್ರಾರಂಭವಾದ ಕೂಡಲೇ ಬಂದೋಬಸ್ತಿನ ವ್ಯವಸ್ಥೆಗಾಗಿ ಪೊಲೀಸರನ್ನು ಕಳುಹಿಸುವಂತೆ ವಿವಿಧ ರಾಜ್ಯಗಳಲ್ಲಿ ಕೇಳಿಕೊಂಡರು. ಆ ರಾಜ್ಯಗಳು ಏತಕ್ಕೆ ಸಹಾಯ ನಿರಾಕರಿಸಿಬಿಟ್ಟವು?

      ಇನ್ನು ನೀವು “ಪ್ರಜ್ಞಾವಂತರ ಅನಿಸಿಕೆ” ಎಂದು ಹೇಳುತ್ತಾ, ಗುಜರಾತಿನ ಜನರೆಲ್ಲಾ ಮೂರ್ಖರು ಎಂದು ತಿಳಿಸುತ್ತಿರುವಂತಿದೆ.
      ಅಲ್ಲಿನ ಬಹುಸಂಖ್ಯಾತ ಮುಸಲ್ಮಾನರೂ ಮೋದಿಯವರಿಗೆ ಮೂರನೇ ಬಾರಿ ಬಹುಮತ ನೀಡಿದ್ದಾರೆಂಬುದು, ನಿಮ್ಮ “ಪ್ರಜ್ಞಾವಂತರ ಅನಿಸಿಕೆ” ಅದೆಷ್ಟು ಸತ್ಯದೂರ ಎಂಬುದನ್ನು ನಿರೂಪಿಸುತ್ತಿದೆ.

      > ಅಲ್ಲದೆ ಗುಜರಾತ್ ಗಲಭೆಗಳು ಇದ್ದಕ್ಕಿದ್ದಂತೆ ನಡೆದದ್ದಲ್ಲ.
      ಹೌದೇ? ಗೋಧ್ರಾ ರೈಲು ಸುಟ್ಟದ್ದು ಇದ್ದಕ್ಕಿದ್ದಂತೆ ನಡೆಯಲಿಲ್ಲ ಅಲ್ಲವೇ? ಸಹಸ್ರಾರು ಮಂದಿ ಅಲ್ಲಿ ಸೇರಿ ರೈಲು ಸುಟ್ಟದ್ದು ಪೂರ್ವಯೋಜನೆಯಲ್ಲ ಅಲ್ಲವೇ? ಸಹಸ್ರಾರು ಲೀಟರು ಪೆಟ್ರೋಲು ಅಲ್ಲಿಗೆ ಅದೇ ಸಮಯಕ್ಕೆ ಬಂದದ್ದೂ ಪೂರ್ವಯೋಜನೆಯಲ್ಲ ಅಲ್ಲವೇ?

      ಗುಜರಾತಿನ ಗಲಭೆಗಳ ಕುರಿತಾಗಿ ಮತ್ತೆಮತ್ತೆ ತಿಳಿಸುವ ಮಂದಿ, ಗೋಧ್ರಾ ರೈಲಿನಲ್ಲಿ ೬೫ ಜನ ಹಿಂದುಗಳನ್ನು ಸುಟ್ಟುಕೊಂದದ್ದನ್ನು ಪ್ರಸ್ತಾಪಿಸುವುದೇ ಇಲ್ಲವಲ್ಲ!?
      ಹಿಂದುಗಳು ಸತ್ತರೆ ಅದು ಮುಖ್ಯವಿಷಯವಲ್ಲ ಎನ್ನುವುದು “ಪ್ರಜ್ಞಾವಂತರ ಅನಿಸಿಕೆ”ಯೇ?
      ನಿಮ್ಮಲ್ಲಿನ “ಕೋಮು ಭಾವನೆ” (ಅಥವಾ ಮುಸ್ಲಿಂ ತುಷ್ಟೀಕರಣ) ಎಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ ನೋಡಿ!!

      ಉತ್ತರ
  3. Ananda Prasad's avatar
    Ananda Prasad
    ಮಾರ್ಚ್ 8 2013

    ನನಗೆ ಯಾರ ತುಷ್ಟೀಕರಣ ಮಾಡಿ ಆಗಬೇಕಾದದ್ದು ಏನೂ ಇಲ್ಲ. ನನಗೆ ಅದರಿಂದ ಮೂರು ಕಾಸಿನ ಪ್ರಯೋಜನವೂ ಇಲ್ಲ. ದೇಶವು ಮೂಲಭೂತವಾದಿಗಳ ತೆಕ್ಕೆಗೆ ಬಿದ್ದರೆ ಅದರಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ ಎಂದು ದೇಶದ ಒಬ್ಬ ಪ್ರಜ್ಞಾವಂತ ನಾಗರಿಕನಾಗಿ ಎಚ್ಚರಿಸುವುದು ನನ್ನ ಕರ್ತವ್ಯ ಎಂದು ಹೇಳಿದ್ದೇನೆ ಅಷ್ಟೇ. ಗುಜರಾತಿನಲ್ಲಿ ಗಲಭೆ ನಡೆದ ದಿನಗಳಿಂದ ಅಲ್ಲಿ ಮೋದಿ ನೇತೃತ್ವದ ಸರ್ಕಾರವೇ ಇದೆ. ಹಾಗಾಗಿ ಗಲಭೆಯ ಕುರಿತಾದ ಎಲ್ಲ ಸಾಕ್ಷ್ಯಾಧಾರಗಳನ್ನು ಈಗಾಗಲೇ ನಾಶ ಮಾಡಿರುವುದರಲ್ಲಿ ಸಂದೇಹವೇ ಇಲ್ಲ. ಆಡಳಿತ ನಡೆಸುವವರಲ್ಲಿ ಅಪರಿಮಿತ ಅಧಿಕಾರ ಇರುವುದರಿಂದ ಕೇಂದ್ರ ಸರ್ಕಾರವಾಗಲೀ, ಮಾಧ್ಯಮಗಳಾಗಲೀ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಗುಜರಾತಿನ ಮಾಧ್ಯಮಗಳು ಕೇಸರೀಕರಣಗೊಂಡಿರುವುದರಿಂದ ಅಲ್ಲಿನ ಮಾಧ್ಯಮಗಳಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಗುಜರಾತಿನಲ್ಲಿ ಮೂಲಭೂತವಾದ ಬೆಳೆಸಿ ನಂತರ ಉಳಿದವರನ್ನು ಗಲಭೆ ನಿಯಂತ್ರಣಕ್ಕೆ ಪಡೆ ಕಳುಹಿಸಲಿಲ್ಲ ಎಂದು ದೂರುವುದರಲ್ಲಿ ಅರ್ಥವಿಲ್ಲ. ಮನಸ್ಸಿದ್ದಿದ್ದರೆ ರಾಜ್ಯ ಪೊಲೀಸರೇ ಅದನ್ನು ನಿಯಂತ್ರಿಸಬಹುದಿತ್ತು. ಗುಜರಾತಿನಲ್ಲಿ ಕಂಡುಬರುವ ಅಸಹನೆ, ಮೋದಿಯನ್ನು ವಿರೋಧಿಸುವವರ ಮೋದಿ ಬೆಂಬಲಿಗರು ಹಾರಿಬಿದ್ದು ಆಕ್ರಮಣ ಮಾಡುವ ನೋಡಿದರೆ ಗುಜರಾತಿನಲ್ಲಿ ನೈಜ ಪ್ರಜಾಪ್ರಭುತ್ವ ನಾಶವಾಗಿ ತುಂಬಾ ಸಮಯವಾಗಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ.

    ಹಿಂದೂಗಳು ಸತ್ತರೆ ಮುಖ್ಯ ವಿಷಯ ಅಥವಾ ಬೇರೆ ಧರ್ಮದವರು ಸತ್ತರೆ ಎಂಬ ಭೇದ ಭಾವ ಇಲ್ಲ. ಸತ್ತ ನಂತರ ಗಲಭೆ ಎಬ್ಬಿಸಿ ಅದರ ೫೦ ಪಟ್ಟು ಜನರನ್ನು ಕೊಲ್ಲುತ್ತೇವೆ ಎಂಬುವುದು ನಾಗರಿಕರು ಮಾಡುವ ಕೆಲಸ ಅಲ್ಲ. ಇದೆಲ್ಲ ಸಮೂಹ ಸನ್ನಿಗೆ ಸಿಲುಕಿ ಹುಚ್ಚರಂತೆ ವರ್ತಿಸುವ ಜನಸಮೂಹದ ಕೆಲಸ. ಅಂಥ ಜನಸಮೂಹವನ್ನು ದೇಶದಲ್ಲಿ ಬೆಳೆಸುವುದರಿಂದ ಯಾವ ಪ್ರಯೋಜನವೂ ಇಲ್ಲ.

    ಉತ್ತರ
    • ಬಸವಯ್ಯ's avatar
      ಬಸವಯ್ಯ
      ಮಾರ್ಚ್ 13 2013

      “ನನಗೆ ಯಾರ ತುಷ್ಟೀಕರಣ ಮಾಡಿ ಆಗಬೇಕಾದದ್ದು ಏನೂ ಇಲ್ಲ. ನನಗೆ ಅದರಿಂದ ಮೂರು ಕಾಸಿನ ಪ್ರಯೋಜನವೂ ಇಲ್ಲ”
      ನಿಮಗೆ ಇದರಿಂದ ಪ್ರಯೋಜನವಿಲ್ಲ..ಅದರೆ ನಿಮ್ಮ ಈ ಕಾಮಾಲೆ ಕಾಯಿಲೆಯಿಂದ ದೇಶಕ್ಕೆ ನಷ್ಟವಿದೆ. ಅಷ್ಟು ಕಾಳಜಿ ಇದ್ದರೆ ವಾರಾಂತ್ಯದಲ್ಲಿ ಮುಸ್ಲಿಂ ಕೇರಿಗಳಿಗೆ ಹೋಗಿ ಅವರಿಗೆ ಶಿಕ್ಷಣ ಕೊಡಿ..ತಿದ್ದಿ!.

      “..ಸಂದೇಹವೇ ಇಲ್ಲ, ,..ಮಾಡಲು ಸಾಧ್ಯವಿಲ್ಲ, ,..ದೂರುವುದರಲ್ಲಿ ಅರ್ಥವಿಲ ,.. ನಿಯಂತ್ರಿಸಬಹುದಿತ್ತು.” ಹೀಗೇ ಊಹೆಗಳಿಂದಲೇ ಪ್ರಾರಂಭಮಾಡಿ ಕೊನೆಗೆ “ಗುಜರಾತಿನಲ್ಲಿ ನೈಜ ಪ್ರಜಾಪ್ರಭುತ್ವ ನಾಶವಾಗಿ ತುಂಬಾ ಸಮಯವಾಗಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ.” ಎಂಬ ಪಕ್ಕಾ ತೀರ್ಮಾನಕ್ಕೆ ಬಂದಿರುವುದು ನೋಡಿ ಮರಿ ಜಿ.ಕೆ.ಗೋವಿಂದರಾಯರು, ಅನಂತ ಮೂತಿಗಳು ರೆಡಿಯಾಗುತ್ತಿದ್ದಾರೆ ಅನಿಸಿ ಸಂತೋಷವಾಯಿತು :).

      “ಹಿಂದೂಗಳು ಸತ್ತರೆ ಮುಖ್ಯ ವಿಷಯ ಅಥವಾ ಬೇರೆ ಧರ್ಮದವರು ಸತ್ತರೆ ಎಂಬ ಭೇದ ಭಾವ ಇಲ್ಲ. ಸತ್ತ ನಂತರ ಗಲಭೆ ಎಬ್ಬಿಸಿ ಅದರ ೫೦ ಪಟ್ಟು ಜನರನ್ನು ಕೊಲ್ಲುತ್ತೇವೆ ಎಂಬುವುದು ನಾಗರಿಕರು ಮಾಡುವ ಕೆಲಸ ಅಲ್ಲ.”
      ಹ್ಮ..ಮೊದಲು ಸತ್ತ ಹಿಂದುಗಳ ಆತ್ಮಶಾಂತಿಗಾಗಿ ಭಜನೆ ಮಾಡೋಣ ಮತ್ತು ಮುಸ್ಲಿಂರ ಕಾಲಿಗೆ ಬಿದ್ದು ಕ್ಷಮೆ ಕೇಳೋಣ, ಮತ್ತೊಮ್ಮೆ ಹೀಗೇ ನಮ್ಮನ್ನ ಬೆಂಕಿ ಹಚ್ಚಿ ಕೊಲ್ಲಬೇಡಿ ಅಂತ ಬೇಡಿಕೊಳ್ಳೊಣ ಅಂತ ಅಂದ್ಕೊಂಡಿದ್ರಂತೆ ಅದರೆ ಕೊನೆ ಗಳಿಗೆಯಲ್ಲಿ ಪ್ಲಾನ ಬದಲಿಸಿಬಿಟ್ರು ಅನಾಗರಿಕರು!

      ಉತ್ತರ
    • ನವೀನ's avatar
      ನವೀನ
      ಮಾರ್ಚ್ 13 2013

      ಆನಂದ್,

      ’ವರ್ತಮಾನ’ಕಾಲದ ಎಲ್ಲಾ ’ಪ್ರಜ್ಞಾವಂತರು,ಪ್ರಗತಿಪರರು,ಪ್ರಜಾಪ್ರಭುತ್ವವಾದಿಗಳು’ ನೀವು ಯೋಚಿಸಿದಂತೆಯೇ ಯೋಚಿಸಬೇಕು ಅಂದುಕೊಂಡಿರುವ ನಿಮ್ಮ ಚಿಂತನೆಯನ್ನು ನೋಡಿ ಚಿಂತೆಯಾಗಿದೆ ನಮಗೆ.ದಯವಿಟ್ಟು ಬಾವಿಯನ್ನು ಬಿಟ್ಟು ಹೊರಬರಲು ಪ್ರಯತ್ನಿಸಿ.

      ಉತ್ತರ
      • Ananda Prasad's avatar
        Ananda Prasad
        ಮಾರ್ಚ್ 14 2013

        ಬಾವಿಯೊಳಗೆ ಇರುವುದು ಪ್ರತಿಗಾಮಿ ಸ್ವಭಾವದ ಮೂಲಭೂತವಾದಿಗಳು. ಅವರು ಬಾವಿಯಿಂದ ಹೊರಗೆ ಬಾವಿಯಿಂದ ಹೊರಗೆ ಬಂದು ನೋಡಬೇಕಾದ ಅವಶ್ಯಕತೆ ಇದೆ. ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ನೋಡಿದಾಗ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಲು ಸಾಧ್ಯ. ವಿಶಾಲ ಮನೋಭಾವನೆಯ ಕೊರತೆಯೇ ಭಾರತದ ಮೂಲಭೂತವಾದಿಗಳ ದೊಡ್ಡ ಸಮಸ್ಯೆಯಾಗಿದೆ.

        ಉತ್ತರ
        • ನವೀನ's avatar
          ನವೀನ
          ಮಾರ್ಚ್ 14 2013

          ನೀವು ಹೇಳಿದ “ವಿಶಾಲ ಮನೋಭಾವನೆ”ಯನ್ನು ನೀವು ಹೇಳುತ್ತಿರುವ (ತಾವು ನಂಬಿರುವ) “ಪ್ರಜ್ಞಾವಂತರು,ಪ್ರಗತಿಪರರು,ಪ್ರಜಾಪ್ರಭುತ್ವವಾದಿಗಳು” ಬೆಳೆಸಿಕೊಳ್ಳಿ ಅಂತಲೇ ನಾನು ಹೇಳಿದ್ದು.ತಾವು “ಪ್ರಜ್ಞಾವಂತರು,ಪ್ರಗತಿಪರರು,ಪ್ರಜಾಪ್ರಭುತ್ವವಾದಿಗಳು,ಮೂಲಭೂತವಾದಿಗಳು” ಇಂತ ಪದಪುಂಜಗಳನ್ನು ಬಿಟ್ಟು ಯೋಚಿಸಲು ಪ್ರಯತ್ನಿಸಿ.ಇಲ್ಲವೆಂದರೆ ಹೀಗೆ ಬಾವಿಯೊಳಗೆ ಕೂತು ಧಾರ್ಮಿಕ ಮೂಲಭೂತವಾದಿಗಳು,ಅದು-ಇದು ಅಂತ ಬೊಬ್ಬೆ ಹಾಕಿ ಹಾಸ್ಯಾಸ್ಪದವಾಗದಿರಿ ಅನ್ನುವುದು ನಮ್ಮ ಆತ್ಮೀಯ ಹಂಬಲ.
          ನಮಸ್ಕಾರ

          ಉತ್ತರ
        • ಬಸವಯ್ಯ's avatar
          ಬಸವಯ್ಯ
          ಮಾರ್ಚ್ 14 2013

          ಪದ ಪುಂಜಗಳ ಅರ್ಥ
          ಆಕರ : ಪ್ರಗತಿಪರ,ಪ್ರಜ್ಞಾವಂತ, ವೈಜ್ಞಾನಿಕ ಪದಕೋಶ

          ವೈಜ್ಞಾನಿಕ ಮನೋಭಾವ – ಹಿಂದುಗಳ ಆಚರಣೆ, ನಂಬಿಕೆಯನ್ನು ಪ್ರಶ್ನಿಸುವುದು/ಗೇಲಿ ಮಾಡುವುದು.
          ಪ್ರಶ್ನಿಸುವ ಮನೋಭಾವ – ಮೋದಿಯನ್ನು, ಬಿ.ಜೆ.ಪಿ ಯನ್ನು, ಸಂಘ ಪರಿವಾರವನ್ನು, ಪೇಜಾವರ ಸ್ವಾಮಿಗಳನ್ನು ಪ್ರಶ್ನಿಸುವುದು.

          ವಿಶಾಲ ಮನೋಭಾವ – ಪಕ್ಕದವನು ಮಾಡಿದ ಕೊಚ್ಚೆಯನ್ನು ಅಲಕ್ಷಿಸಿ, ಮನೆಯಲ್ಲಿ ಕಸ ಹೊಡೆಯದ್ದನ್ನು ಉಗ್ರವಾಗಿ ಟೀಕಿಸುವುದು.

          ಬಾವಿಯಿಂದ ಹೊರಗೆ ಬಂದು ನೋಡುವುದು – ಇದರ ಅರ್ಥ, ಬಾವಿಯಿಂದ ಹೊರಬಂದು ಮತ್ತೆ-ಮತ್ತೆ ಅದೇ ಬಾವಿಯಲ್ಲೇ ಹಣಕಿ ನೋಡುವುದು.

          ಉತ್ತರ
    • SSNK's avatar
      ಮಾರ್ಚ್ 14 2013

      ಆನಂದ್ ಪ್ರಸಾದ್,
      ನನಗೆ ತಿಳಿದಂತೆ, “ಮೂಲಭೂತವಾದ” ಎಂಬ ಪದವೇ ನಮ್ಮ ದೇಶ, ಸಂಸ್ಕೃತಿಗಳಿಗೆ ಪರಕೀಯ.
      ನೀವು ಏನನ್ನು “ಮೂಲಭೂತವಾದ” ಎಂದು ಕರೆಯುತ್ತೀರೋ, ಯಾರನ್ನು “ಮೂಲಭೂತವಾದಿಗಳು” ಎಂದು ಕರೆಯುತ್ತಿರುವಿರೋ ನನಗೆ ತಿಳಿಯುತ್ತಿಲ್ಲ. ವಿವರಿಸಿದರೆ ಉತ್ತಮ.

      ಗುಜರಾತಿನ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಅನಿಸಿಕೆ ಓದಿದಾಗ, ನಿಮಗೆ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೇ ನಂಬಿಕೆಯಿಲ್ಲ ಎನಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮತ್ತು ನ್ಯಾಯಾಲಯಗಳಿಗೆ ಅಪಾರ ಬೆಲೆಯಿದೆ.
      ಗುಜರಾತಿನಲ್ಲಿ ಗಲಭೆ ಪ್ರಾರಂಭವಾದಂದಿನಿಂದಲೇ ಮಾಧ್ಯಮಗಳು ಅದರ ಮೇಲೆ ಹದ್ದಿನ ಕಣ್ಣಿಟ್ಟಿವೆ. ಅಲ್ಲಿ ಗಲಭೆಗಳಿಂದ ನೊಂದವರೂ ಇನ್ನೂ ಬದುಕಿದ್ದಾರೆ. ಇವೆಲ್ಲದರ ನಡುವೆಯೇ ರಾಜ್ಯ ಸರಕಾರ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಿಬಿಟ್ಟಿತು ಎಂಬುದು ಬಾಲಿಶವಾದ ಮಾತಾಗುತ್ತದೆ. ಅದು ಬಾಲಿಶವಲ್ಲದಿದ್ದರೆ, ಪೂರ್ವಾಗ್ರಹದ ಮಾತೆಂದೇ ಹೇಳಬೇಕು.

      ಗಲಭೆಗಳ ಸಾಕ್ಷ್ಯಗಳು ಇರುವುದು ಪುಸ್ತಕಗಳಲ್ಲಲ್ಲ ಅಥವಾ ಕೆಲವು ದಾಖಲೆಗಳಲ್ಲಲ್ಲ. ಅವು ಜೀವಂತ ಸಾಕ್ಷ್ಯಗಳು.
      ಉದಾಹರಣೆಗೆ, “ಬೆಸ್ಟ್ ಬೇಕರಿ ಗಲಭೆ” – ಇಲ್ಲಿನ ಗಲಭೆಗಳಲ್ಲಿ ನೊಂದವರೇ ಆ ಕೃತ್ಯದ ಜೀವಂತ ಸಾಕ್ಷಿಗಳು. ಅವರು ಜೀವಂತವಾಗಿರುವವರೆಗೆ ಸಾಕ್ಷಿಗಳೂ ಇರುತ್ತವೆ. ಮತ್ತು ಇಂದಿನವರೆಗೂ ಅವರು ಜೀವಂತವಾಗಿದ್ದಾರೆ.

      ಇನ್ನು ಸರಕಾರವನ್ನು ಸಿಕ್ಕಿಸಲು ಇನ್ನಿಲ್ಲದ ಪ್ರಯತ್ನ ನಡೆದಿದೆ ಎನ್ನುವುದಕ್ಕೂ ಸಾಕ್ಷಿಗಳಿವೆ.
      ತನಗೆ ಸುಳ್ಳು ಸಾಕ್ಷಿ ಹೇಳುವಂತೆ ಒತ್ತಾಯಿಸಲಾಯಿತು ಎಂದು ನೊಂದವರೊಬ್ಬರು ನ್ಯಾಯಾಲಯದ ಮುಂದೆ ಹೇಳಿದ್ದಾರೆ.
      ಈ ಕೊಂಡಿ ನೋಡಿ: http://articles.timesofindia.indiatimes.com/2011-04-30/india/29490452_1_special-court-zaheera-shaikh-life-imprisonment

      ಇನ್ನು ಗುಜರಾತಿನ ಸರಕಾರದ ಮೇಲೆ ಸಮರವನ್ನೇ ಸಾರಿರುವ ತೀಸ್ತಾ ಸೆಟಲ್^ವಾಡ್ ಅವರು ಮಾಡುತ್ತಿರುವ ಕೆಲಸದ ಕುರಿತಾಗಿ ಈ ಕೊಂಡಿ ಓದಿ:
      http://www.rediff.com/news/report/best-bakery-case-teestas-former-aide-demands-retrial/20111013.htm

      “ದಯವಿಟ್ಟು ಈ ಎನ್.ಜಿ.ಓಗಳನ್ನು ನಮ್ಮ ಕಾಲೋನಿಗೆ ಬರಲು ಬಿಡಬೇಡಿ” ಎಂದು ಗುಲ್ಬರ್ಗ್ ಸೊಸೈಟಿಯ ನಿವಾಸಿಗಳು ನ್ಯಾಯಾಲಯಕ್ಕೆ ವಿನಂತಿಸಿದ್ದಾರೆ. ಯಾರು ಈ “ಎನ್.ಜಿ.ಓ”ಗಳು? ಅವರು ಅಂಥ ಯಾವ ಪಾಪದ ಕಾರ್ಯಗಳನ್ನು ಮಾಡಿದರು?
      ಈ ಕೊಂಡಿ ಓದಿ: http://www.dnaindia.com/india/report_gujarat-riot-victims-seek-protection-from-money-minting-ngos_1802305

      ಈ ಎಲ್ಲಾ ಸಾಕ್ಷಿಗಳು ನಿಮಗೆ ಕಾಣುತ್ತಿಲ್ಲವೇ? ಅವರೇಕೆ “ತಮ್ಮ ಪರವಾಗಿ ಮಾತನಾಡುವವರ” ವಿರುದ್ದವೇ ತಿರುಗಿ ಬೀಳುತ್ತಿದ್ದಾರೆ? ಅವರನ್ನೇಕೆ ಸರಕಾರದ ವಿರುದ್ಧ ಸಾಕ್ಷಿ ಹೇಳುವಂತೆ ಒತ್ತಾಯಿಸಲಾಯಿತು?
      ಇದಕ್ಕೆಲ್ಲಾ ಉತ್ತರ ಹೇಳುವವರಾರು?

      ನೀವು ಗುಜರಾತಿನ ಗಲಭೆಯ ಕುರಿತಾಗಿ ಸಂತಾಪ ವ್ಯಕ್ತಪಡಿಸುತ್ತಿರುವಿರಿ. ಆದರೆ, ಗೋಧ್ರಾದಲ್ಲಿ ಸತ್ತವರ ಕುರಿತಾಗಿ ನಿಮ್ಮ ಕಣ್ಣಲ್ಲಿ ಒಂದು ಹನಿಯೂ ನೀರಿಲ್ಲ. ಗುಜರಾತಿನ ಗಲಭೆಗಳಲ್ಲಿ ಕೇವಲ ಮುಸಲ್ಮಾನರು ಸತ್ತರೆಂದು ನೀವು ಭಾವಿಸಿದ್ದರೆ ಅದು ಸುಳ್ಳೂ. ಅಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಹಿಂದೂಗಳೂ ಸತ್ತರು. ಅವರ ಕುರಿತಾಗಿಯೂ ಸಂತಾಪವಿರಲಿ.

      ಕ್ರಿಯೆಗೆ ಪ್ರತಿಕ್ರಿಯೆ ಪ್ರಕೃತಿ ನಿಯಮ.
      ಪ್ರತಿಕ್ರಿಯೆ ಬೇಡವೆಂದರೆ ಕ್ರಿಯೆಯನ್ನು ನಿಷ್ಕ್ರಿಯಗೊಳಿಸಬೇಕು.
      ಗುಜರಾತಿನ ಗಲಭೆಗಳನ್ನು ಪ್ರಚೋದಿಸಿದ್ದು ಗೋಧ್ರಾ ಹತ್ಯಾಕಾಂಡ.
      ಅದು ನಡೆಯದೇ ಇದ್ದಿದ್ದರೆ ಗುಜರಾತಿನ ಗಲಭೆಗಳು ನಡೆಯುತ್ತಿರಲಿಲ್ಲ.
      ನಿಮಗೆ ಗುಜರಾತಿನ ಗಲಭೆಗಳ ವಿಷಯದಲ್ಲಿ ನಿಜಕ್ಕೂ ಸಂತಾಪವಿದ್ದ ಪಕ್ಷದಲ್ಲಿ, ನೀವು ಮೊದಲು ಖಂಡಿಸಬೇಕಾದುದು ಗೋಧ್ರಾ ಹತ್ಯಾಕಾಂಡವನ್ನೇ.

      ಗುಜರಾತಿಗಿಂತ ಬಹುದೊಡ್ಡ ಪ್ರಮಾಣದಲ್ಲಿ ಸತ್ತಿರುವವರು ಜಮ್ಮು-ಕಾಶ್ಮೀರದಲ್ಲಿದ್ದಾರೆ. ಹತ್ತಾರು ಸಹಸ್ರ ಜನರಲ್ಲಿ ಸತ್ತಿದ್ದಾರೆ. ಲಕ್ಷಾಂತರ ಮಂದಿಯನ್ನು ರಾಜ್ಯದಿಂದ ಹೊರದೂಡಲಾಗಿದೆ. ಅದರ ಕುರಿತಾಗಿ ಯಾವ ಮಾಧ್ಯಮಗಳೂ ಮಾತನಾಡುವುದಿಲ್ಲ. ಅದರ ಕುರಿತಾಗಿ ಯಾವ ಜಾತ್ಯಾತೀತ ವ್ಯಾಧಿಗಳೂ ಪರಿತಪಿಸುವುದಿಲ್ಲ. ಅದರ ಕುರಿತಾಗಿ ಯಾವ ಮೊಕ್ಕದಮೆಗಳೂ ನಡೆಯುತ್ತಿಲ್ಲ. ಇದರ ಕುರಿತಾಗಿ ಕ್ಷಮೆ ಯಾಚಿಸುವಂತೆ ಅಲ್ಲಿನ ಮುಖ್ಯಮಂತ್ರಿಗಳಿಗೆ ಯಾರೂ ಸೂಚಿಸುವುದಿಲ್ಲ. ಆ ಗಲಭೆಗಳ ಸಮಯದಲ್ಲಿ ಅಲ್ಲಿನ ಸರಕಾರ ಮೂಕಪ್ರೇಕ್ಷಕನಾಗಿತ್ತು. ಅಲ್ಲಿನ ಸರಕಾರವೇ ಆ ಗಲಭೆಗಳಿಗೆ ಕುಮ್ಮಕ್ಕು ನೀಡಿತು ಎಂಬುದಾಗಿ ಯಾರೂ ಹೇಳುವುದಿಲ್ಲ!

      ಕಳೆದ ಕೆಲವು ತಿಂಗಳಿನಿಂದ ಅಸ್ಸಾಮಿನಲ್ಲಿ ಗಲಭೆಗಳು ನಡೆಯುತ್ತಿವೆ. ನೂರಾರು ಹಿಂದುಗಳನ್ನು ಕೊಲ್ಲಲಾಗಿದೆ.
      ಇದರ ಕುರಿತಾಗಿ ನಿಮಗೆ ಏನೂ ಅನ್ನಿಸುವುದೇ ಇಲ್ಲವೆ? ಅವರಿಗಾಗಿ ನಿಮ್ಮ ಅನುಕಂಪದ ಮಾತುಗಳಿಲ್ಲವೆ? ಅವರು ನಿಮ್ಮ ಲೆಕ್ಕದಲ್ಲಿ ಮನುಷ್ಯರಲ್ಲವೇ?

      ಇದು ಏಕೆ ಹೀಗೆ? ಇದೇ ಏನು ನಿಮ್ಮ “ಜಾತ್ಯಾತೀತವಾದ”?

      ಒಂದು ವಿಷಯ ತಿಳಿದುಕೊಳ್ಳಿ.
      ನಿಮ್ಮ “ಜಾತ್ಯಾತೀತವಾದ ಪುಂಗಿ”ಯನ್ನು ಊದಲು ಸಾಧ್ಯವಾಗುವುದು ಭಾರತದಲ್ಲಿ ಮಾತ್ರ. ನಿಮಗೆ ಇದರ ಕುರಿತಾಗಿ ಅನುಮಾನವಿದ್ದರೆ, ನಿಮ್ಮ ಪುಂಗಿಯನ್ನೊಮ್ಮೆ ಪಾಕಿಸ್ತಾನದಲ್ಲೋ, ಬಾಂಗ್ಲಾದೇಶದಲ್ಲೋ, ಚೈನಾದಲ್ಲೋ ಊದಿ ನೋಡಿ. ಆಗ ತಿಳಿಯುತ್ತದೆ ನಿಮಗೆ ಸತ್ಯ.
      ಹಿಂದು ಬಹುಸಂಖ್ಯಾತನಾಗಿರುವಲ್ಲಿ ಮಾತ್ರ ನಿಮ್ಮ “ಜಾತ್ಯಾತೀತದ ಪುಂಗಿ”ಗೆ ಅವಕಾಶ.
      ಹಿಂದು ಅಲ್ಪಸಂಖ್ಯಾತನಾದರೆ ಜಾತ್ಯಾತೀತವಾದ ಸತ್ತಂತೆಯೇ.
      ಅದಕ್ಕೆ ಕರಾಚಿ, ಬಲೂಚಿಸ್ತಾನ, ಕಾಶ್ಮೀರ, ಆಫ್ಗಾನಿಸ್ತಾನ, ಪೂರ್ವ ಬಂಗಾಳಗಳೇ ಸಾಕ್ಷಿ.
      ಅಲ್ಲಿಂದು ಜಾತ್ಯಾತೀತವಾದದ ಸೊಲ್ಲೂ ಇಲ್ಲ. ಕಾರಣ ಹಿಂದುಗಳು ಅಲ್ಲಿಲ್ಲ ಅಥವಾ ಬಹಳ ಸಣ್ಣ ಸಂಖ್ಯೆಯ ಅಲ್ಪಸಂಖ್ಯಾತರು!

      ಉತ್ತರ
      • Ananda Prasad's avatar
        Ananda Prasad
        ಮಾರ್ಚ್ 15 2013

        ಪ್ರತಿಗಾಮಿ ಎಂದರೆ ಕಾಲದಲ್ಲಿ ಹಿಂದಿನ ಅಸಂಬದ್ಧ, ಅರ್ಥಹೀನ ಆಚರಣೆಗಳನ್ನು ಪುನಃ ಜಾರಿಗೆ ತರಬೇಕು, ಅದುವೇ ಶ್ರೇಷ್ಠ ಎಂದು ವಾದಿಸುವವರು. ಮೂಲಭೂತವಾದಿಗಳು ಎಂದರೆ ಹಿಂದಿನ ಅಸಮಾನತೆ, ಜಾತಿ ಕ್ರೌರ್ಯ, ಶೋಷಣೆ, ದೌರ್ಜನ್ಯ ಮೊದಲಾದವುಗಳು ಹಾಗೇ ಇರಬೇಕು, ಅದು ಬದಲಾಗಬಾರದು ಎಂದು ವಾದಿಸುವವರು. ಹಿಂದುತ್ವದ ಬಗ್ಗೆ ಬೊಬ್ಬೆ ಹಾಕುವ ಗುಂಪುಗಳಲ್ಲೇ ಇದು ಹೆಚ್ಚಾಗಿ ಕಂಡುಬರುತ್ತದೆ. ಹಿಂದುತ್ವದ ಗುಂಪುಗಳಲ್ಲಿ ಪ್ರಧಾನವಾಗಿ ಕಂಡುಬರುವುದು ಹಿಂದೆ ಹಳ್ಳಿಗಳಲ್ಲಿ ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ, ಜಾತಿ ಶ್ರೇಷ್ಠತೆ ಬೆಂಬಲಿಸುತ್ತಿದ್ದ ಮನೋಭಾವದ ಮಂದಿ. ಅವರೇ ಇಂದು ಹಿಂದುತ್ವಕ್ಕೆ ನಾಯಕತ್ವ ನೀಡುತ್ತಿರುವವರು ಎಂಬುದು ಕಂಡುಬರುತ್ತದೆ. ಹಿಂದುತ್ವದ ಹೆಸರಿನಲ್ಲಿ ಕೆಳಜಾತಿಯ, ಯೋಚನೆ ಮಾಡುವ ಸಾಮರ್ಥ್ಯವಿಲ್ಲದ ಮಂದಿಯನ್ನು ದೇವರು, ಧರ್ಮದ ಹೆಸರಿನಲ್ಲಿ ಕೆರಳಿಸಿ ಅವರನ್ನು ಹಿಂಸಾಚಾರಕ್ಕೆ ಪ್ರೇರೇಪಿಸಿ ಅದರ ರಾಜಕೀಯ ಲಾಭ ಪಡೆದು ಅಧಿಕಾರದ ಗದ್ದುಗೆ ಏರಿ ತಮ್ಮ ಸ್ವಾರ್ಥ ಸಾಧಿಸುವ ಗುಂಪುಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.

        ಗುಜರಾತ್ ಗಲಭೆಗೆ ಗೋಧ್ರ ಹತ್ಯಾಕಾಂಡ ಕಾರಣ ಎಂದು ಹೇಳುವುದಾದರೆ ಗೋಧ್ರ ಕಾಂಡಕ್ಕೆ ಬಾಬ್ರಿ ಮಸೀದಿಯ ವಿಷಯದಲ್ಲಿ ಮೂಲಭೂತವಾದಿಗಳು ಹಾಗೂ ಪ್ರತಿಗಾಮಿಗಳು ನಡೆಸಿದ ಸಂವಿಧಾನಬಾಹಿರ ಕೃತ್ಯಗಳು ಕಾರಣ ಎಂದು ಹೇಳಬಹುದು.

        ಉತ್ತರ
        • SSNK's avatar
          ಮಾರ್ಚ್ 15 2013

          > ಪ್ರತಿಗಾಮಿ ಎಂದರೆ ಕಾಲದಲ್ಲಿ ಹಿಂದಿನ ಅಸಂಬದ್ಧ, ಅರ್ಥಹೀನ ಆಚರಣೆಗಳನ್ನು ಪುನಃ ಜಾರಿಗೆ ತರಬೇಕು,
          > ಅದುವೇ ಶ್ರೇಷ್ಠ ಎಂದು ವಾದಿಸುವವರು.
          ದಯವಿಟ್ಟು ಯಾವ ಆಚರಣೆಗಳನ್ನು ಅರ್ಥಹೀನ, ಅಸಂಬದ್ಧ ಎಂದು ವಿವರಿಸಿದರೆ ಎಲ್ಲರಿಗೂ ತಿಳಿದೀತು.

          > ಮೂಲಭೂತವಾದಿಗಳು ಎಂದರೆ ಹಿಂದಿನ ಅಸಮಾನತೆ, ಜಾತಿ ಕ್ರೌರ್ಯ, ಶೋಷಣೆ, ದೌರ್ಜನ್ಯ ಮೊದಲಾದವುಗಳು ಹಾಗೇ
          > ಇರಬೇಕು, ಅದು ಬದಲಾಗಬಾರದು ಎಂದು ವಾದಿಸುವವರು.
          > ಹಿಂದುತ್ವದ ಬಗ್ಗೆ ಬೊಬ್ಬೆ ಹಾಕುವ ಗುಂಪುಗಳಲ್ಲೇ ಇದು ಹೆಚ್ಚಾಗಿ ಕಂಡುಬರುತ್ತದೆ.
          ಹಿಂದುತ್ವದ ಗುಂಪುಗಳಲ್ಲಿ ನೀವು ಹೇಳುತ್ತಿರುವ ಅಸಮಾನತೆ, ಜಾತಿ ಕ್ರೌರ್ಯ, ಶೋಷಣೆ, ದೌರ್ಜನ್ಯಗಳು ಹಾಗೇ ಇರಬೇಕು ಎಂದು ಯಾರು ಯಾರು ಹೇಳಿರುವರು?
          ನೀವು ಈ ರೀತಿ ಹೇಳುತ್ತಿರುವಿರಿ ಎಂದರೆ, ನಿಮ್ಮ ಬಳಿ ಅದಕ್ಕೆ ಸಾಕಷ್ಟು ಉದಾಹರಣೆಗಳು ಇರಲೇಬೇಕು.
          ಹಿಂದುತ್ವದ ಗುಂಪುಗಳಲ್ಲಿ ಈ ರೀತಿಯ ವಿಷಯಗಳನ್ನು ಬೆಂಬಲಿಸುತ್ತಿರುವ ವ್ಯಕ್ತಿಗಳ ಹೆಸರನ್ನು ಸಾದೋಹರಣೆಯಾಗಿ ದಯವಿಟ್ಟು ತಿಳಿಸಿರಿ.

          > ಹಿಂದುತ್ವದ ಗುಂಪುಗಳಲ್ಲಿ ಪ್ರಧಾನವಾಗಿ ಕಂಡುಬರುವುದು ಹಿಂದೆ ಹಳ್ಳಿಗಳಲ್ಲಿ ಜೀತ ಪದ್ಧತಿ,
          > ಜಮೀನ್ದಾರಿ ಪದ್ಧತಿ, ಜಾತಿ ಶ್ರೇಷ್ಠತೆ ಬೆಂಬಲಿಸುತ್ತಿದ್ದ ಮನೋಭಾವದ ಮಂದಿ.
          ಈ ವಿಷಯಕ್ಕೆ ಸಂಬಂಧಿಸಿದಂತೆಯೂ ಒಂದೈದು ಹಿಂದುತ್ವದ ನಾಯಕರ ಹೆಸರು ಮತ್ತು ಅವರು ನೀಡಿದ ಹೇಳಿಕೆ, ಅಥವಾ ಪ್ರವಚನ, ಅಥವಾ ಅವರ ಬರಹಗಳನ್ನು ತಿಳಿಸಿಕೊಟ್ಟರೆ ಬಹಳ ಉಪಕಾರವಾದೀತು.

          > ಗುಜರಾತ್ ಗಲಭೆಗೆ ಗೋಧ್ರ ಹತ್ಯಾಕಾಂಡ ಕಾರಣ ಎಂದು ಹೇಳುವುದಾದರೆ
          > ಗೋಧ್ರ ಕಾಂಡಕ್ಕೆ ಬಾಬ್ರಿ ಮಸೀದಿಯ ವಿಷಯದಲ್ಲಿ ಮೂಲಭೂತವಾದಿಗಳು ಹಾಗೂ ಪ್ರತಿಗಾಮಿಗಳು ನಡೆಸಿದ
          > ಸಂವಿಧಾನಬಾಹಿರ ಕೃತ್ಯಗಳು ಕಾರಣ ಎಂದು ಹೇಳಬಹುದು.
          ನೀವು ಹೇಳುತ್ತಿರುವ “ಬಾಬ್ರಿ ಮಸೀದಿ” ಎನ್ನುವ ಕಟ್ಟಡ ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳು ಅಯೋಧ್ಯೆಗೆ ಸಂಬಂಧಿಸಿದ್ದು. ಅದಿರುವುದು ಉತ್ತರಪ್ರದೇಶದಲ್ಲಿ.
          ಎಲ್ಲೋ ಆಗಿರುವ ಸಂಬಂಧವಿಲ್ಲದ ಘಟನೆಗೆ ಮನುಷ್ಯರನ್ನೇ ಸುಟ್ಟುಬಿಡುವುದನ್ನು ನೀವು ಸಮರ್ಥಿಸುತ್ತಿರುವಿರಿ.
          ನೀವು “ಮಾನವತೆ”ಯ ಪರವಾಗಿರುವವರು, ಎಲ್ಲೇ ಅನ್ಯಾಯ ನಡೆದರೂ ಪ್ರತಿಭಟಿಸುವ ನ್ಯಾಯಪರರು ಎಂದು ನಾನು ತಿಳಿದದ್ದೇ ತಪ್ಪಾಗಿರಬೇಕು.

          ಹಾಗಿದ್ದರೆ, ಜಗತ್ತಿನಲ್ಲಿ ಯಾವುದೂ ತಪ್ಪಲ್ಲ. ಪ್ರತಿಯೊಂದು ವಿಷಯಕ್ಕೂ “ಕಾರ್ಯ-ಕಾರಣ ಸಂಬಂಧ”ಗಳನ್ನು ಗಂಟು ಹಾಕಬಹುದು. ಅಜ್ಮಲ್ ಕಸಬ್ ಮಾಡಿದ್ದೂ ಸರಿ, ಅಫ್ಜಲ್ ಗುರು ಮಾಡಿದ್ದೂ ಸರಿ, ಬಿನ್ ಲಾಡೆನ್ ಮಾಡಿದ್ದೂ ಸರಿ, ಹಿಟ್ಲರ್ ಮಾಡಿದ್ದೂ ಸರಿ ಎಂದ ಹಾಗಾಯಿತು.

          ನಿಮ್ಮಂತ ತಿಳುವಳಿಕಸ್ಥರು, ಈ ರೀತಿ ಬೇಕಾದ ಹಾಗೆ ವಾದವನ್ನೇ ಬದಲಿಸಿ ಹಿಂಸೆಯನ್ನು ಬೆಂಬಲಿಸುತ್ತಿರುವುದು, ನಿಮ್ಮ “ಜಾತ್ಯಾತೀತವಾದ”ದ ಪರದೆಯನ್ನು ಸರಿಸಿದಂತೆಯೇ.

          ನಿಮ್ಮ ವಾದದ ಸಾರ ಹೀಗಿದೆ:
          ೧. ಮುಸಲ್ಮಾನರು ಹಿಂಸೆ ಮಾಡಿದರೆ, ಅದು ಅವರ ಹಕ್ಕು; ಅದನ್ನು ಅವರು ಹಿಂದೆ ಹಿಂದುಗಳು ಮಾಡಿದ ಹಿಂಸೆಗೆ ಪ್ರತೀಕಾರವಾಗಿಯೇ ಮಾಡುತ್ತಿರಬೇಕು; ಅದು ಅಯೋಧ್ಯೆಯ ಘಟನೆ ಇರಬಹುದು, ಅಥವಾ ಶಿವಾಜಿ ಅಫ್ಜಲ್^ಖಾನನನ್ನು ಕೊಂದದ್ದಿರಬಹುದು, ಅಥವಾ ಪೃಥ್ವೀರಾಜನು ಮಹಮ್ಮದ್ ಘೋರಿಯೊಡನೆ ಹೋರಾಡಿದ್ದಿರಬಹುದು.
          ೨. ಹಿಂದುಗಳು ಹಿಂಸೆಗಿಳಿದರೆ, ಅದು ಪ್ರಜಾಪ್ರಭುತ್ವಕ್ಕೆ ಅಪಚಾರ; ಅದು ಮತೀಯ ಮೂಲಭೂತವಾದ; ಅದು ಪ್ರತೀಗಾಮಿ; ಅದು ಜೀತಪದ್ಧತಿ, ಜಮೀನ್ದಾರಿಕೆ, ಜಾತಿಶೋಷಣೆ, ಅಸಂಬದ್ಧ ಆಚರಣೆಗೆ ಬೆಂಬಲ.
          ೩. ಮುಸಲ್ಮಾನರ ಹಿಂಸಾಚಾರವನ್ನು ಸದಾ ಬೆಂಬಲಿಸಬೇಕು. ಬಿನ್ ಲಾಡೆನ್ ಅನ್ನು ಮಾಡಿದ್ದರಲ್ಲಿ ತಪ್ಪೇನಿಲ್ಲ. ಇನ್ನೂ ಒಂದಷ್ಟು ವಿಮಾನಗಳನ್ನು ನೀಡಿ ಇನ್ನೊಂದಷ್ಟು ಕಟ್ಟಡಗಳಿಗೆ ಗುದ್ದಿಸಲು ಬಿಡಬೇಕಿತ್ತು.
          ೪. ಹಿಂದುಗಳನ್ನು ಸದಾ ವಿರೋಧಿಸಬೇಕು. ಅವರು ಹಿಂಸಾಚಾರ ಮಾಡಿದರೆ, ಅದು ಮೂಲಭೂತವಾದ. ಅವರು ಹಿಂಸೆಗಿಳಿಯದಿದ್ದರೆ, ಅವರು ಜೀತಪದ್ಧತಿ, ಜಮೀನ್ದಾರಿಕೆಗಳನ್ನು, ಜಾತಿಶೋಷಣೆಯನ್ನು ಬೆಂಬಲಿಸುವವರೆಂದು ಅವರನ್ನು ವಿರೋಧಿಸಬೇಕು.
          ೫. ಅಜ್ಮಲ್ ಕಸಬ್ ಮತ್ತು ಅಫ್ಜಲ್ ಗುರು ಅವರನ್ನು ನೇಣುಹಾಕಿದ್ದು ತಪ್ಪು. ಅವರು ತಮ್ಮ ಕರ್ತವ್ಯವನ್ನಷ್ಟೇ ಮಾಡಿದ್ದರು. ಶಿಕ್ಷಿಸಲು ಭಾರತಕ್ಕೆ ಯಾವುದೇ ಹಕ್ಕಿಲ್ಲ. ಏಕೆಂದರೆ, ಇದು ಹಿಂದುಗಳು ಬಹುಸಂಖ್ಯಾತರಿರುವ ದೇಶ.
          ಇಲ್ಲಿ ಮುಸಲ್ಮಾನರು ಬಹುಸಂಖ್ಯಾತರಾದ ಮೇಲೆ ಬೇಕಾದರೆ ಈ ರೀತಿಯ ಶಿಕ್ಷೆಗಳನ್ನು ನೀಡಲಿ.
          ೬. ಭಾರತದ ಮೇಲೆ ಚೀನಾ ಯುದ್ಧ ಮಾಡಿದರೆ ತಪ್ಪೇನಿಲ್ಲ. ಅದು ಮುಕ್ತಿಸೇನೆ. ಅದಕ್ಕೆ ಭಾರತ ಸ್ವಾಗತ ನೀಡಬೇಕು. ಅವರ ಮೇಲೆ ಭಾರತ ಯುದ್ಧ ನಡೆಸಿದ್ದೇ ತಪ್ಪು. ಅದೃಷ್ಟವಶಾತ್ ಭಾರತ ಯುದ್ಧದಲ್ಲಿ ಸೋತಿತು.

          ನಿಮ್ಮ ವಿಚಾರಗಳನ್ನು ನನಗೆ ಅರ್ಥವಾದಷ್ಟು ಬರೆದಿರುವೆ. ಯಾವುದಾದರೂ ಬಿಟ್ಟುಹೋಗಿದ್ದಲ್ಲಿ ಸೇರಿಸಿ ಉಪಕಾರ ಮಾಡಿರಿ.

          ಉತ್ತರ
          • Ananda Prasad's avatar
            Ananda Prasad
            ಮಾರ್ಚ್ 15 2013

            ಹಿಂದುತ್ವವಾದಿ ಗುಂಪುಗಳ ನಾಯಕತ್ವವನ್ನು ಯಾರು ವಹಿಸಿದ್ದಾರೆ ಎಂದು ಪ್ರತಿ ಜಿಲ್ಲೆ ಅಥವಾ ತಾಲೂಕುಗಳಲ್ಲಿ ನೋಡಿದರೆ ನನ್ನ ಮಾತಿಗೆ ಸಾಕಷ್ಟು ಪುಷ್ಟಿ ದೊರೆಯುತ್ತದೆ. ಹೆಚ್ಚಿನ ಕಡೆಗಳಲ್ಲೂ ಇದರ ನಾಯಕತ್ವ ವಹಿಸಿರುವವರು ಪಾಳೇಗಾರಿ ಹಾಗೂ ಸರ್ವಾಧಿಕಾರಿ ಮನೋಭಾವದ ಮೇಲ್ಜಾತಿಯ ಜನರೇ. ಕೆಳಜಾತಿಯ ಜನರನ್ನು ಹಿಂಸೆ ಹಾಗೂ ಕಾನೂನನ್ನು ದೇವರು, ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಕೈಗೆತ್ತಿಕೊಳ್ಳಲು ಪ್ರಚೋದಿಸುತ್ತಿರುವುದೂ ಇವರೇ ಎಂಬುದು ತಿಳಿಯುತ್ತದೆ. ಯಾರ ಹೆಸರನ್ನೂ ಉಲ್ಲೇಖಿಸುವುದು ಅಗತ್ಯವಿಲ್ಲ, ನಮ್ಮ ಸುತ್ತಮುತ್ತ ವಿವೇಚನೆಯಿಂದ ಕಣ್ಣು ಬಿಟ್ಟು ನೋಡಿದರೆ ಇದು ಎಲ್ಲರಿಗೂ ತಿಳಿಯುತ್ತದೆ. ಬುದ್ಧಿ ಬಳಸಿ ಯೋಚಿಸಿದರೆ ಇವರ ಪೊಳ್ಳುತನ ಎಲ್ಲರಿಗೂ ಅರ್ಥವಾಗುತ್ತದೆ. ನಾನು ಬುದ್ಧಿ ಹಾಗೂ ವಿಚಾರಶಕ್ತಿಯನ್ನು ಬಳಸುವುದಿಲ್ಲ, ಹಿಂದುತ್ವವಾದಿ ನಾಯಕರು ಹೇಳಿದುದನ್ನೇ ಗುಲಾಮನಂತೆ ಒಪ್ಪಿಕೊಳ್ಳುತ್ತೇನೆ ಹಾಗೂ ಅವರು ಹೇಳಿದಂತೆ ಕಾನೂನನ್ನು ಕೈಗೆತ್ತಿಕೊಳ್ಳುತ್ತೇನೆ ಎಂಬ ವಿವೇಚನೆ ಇಲ್ಲದ ಮಂದಿಗೆ ಏನು ಹೇಳಿದರೂ ದಂಡವೇ.

            ಉತ್ತರ
            • SSNK's avatar
              ಮಾರ್ಚ್ 15 2013

              ದಯವಿಟ್ಟು ಬುದ್ಧಿಯಿರುವ ನೀವು ಕೆಲವು ಹೆಸರುಗಳನ್ನು ತಿಳಿಸಿಕೊಟ್ಟರೆ ಮತ್ತು ಅವರು ಯಾವರೀತಿ ಪಾಳೇಗಾರಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರೆ ಮಾನವತೆಯ ಉದ್ದಾರ ಮಾಡಿದಂತಾಗುತ್ತದೆ.
              ನೀವೂ ಪಾಮರರ ಕೈಬಿಟ್ಟರೆ, ಇನ್ನಾರು ಅವರನ್ನು ಉಳಿಸಬಲ್ಲರು.
              ಮುಂದೆ ಎಲ್ಲಾ ಹಾಳಾಯಿತು ಎಂದು ಎಷ್ಟು ಕೂಗಾಡಿದರೂ ಪ್ರಯೋಜನಕ್ಕೆ ಬಾರದು.

              ಉತ್ತರ
      • Ananda Prasad's avatar
        Ananda Prasad
        ಮಾರ್ಚ್ 15 2013

        ನನಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ನ್ಯಾಯಾಲಯದಲ್ಲೂ ನಂಬಿಕೆ ಇದೆ. ಪ್ರಜಾಪ್ರಭುತ್ವದಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ನಂಬಿಕೆ ಇಲ್ಲದವರು ಹಿಂದುತ್ವವಾದಿ ಗುಂಪುಗಳು. ಉದಾಹರಣೆಗೆ ಸರ್ವೋಚ್ಛ ನ್ಯಾಯಾಲಯ ಅಯೋಧ್ಯೆಯಲ್ಲಿ ಯಥಾಸ್ಥಿತಿ ಕಾಪಾಡಲು ಆದೇಶ ನೀಡಿದ್ದರೂ ಬಾಬ್ರಿ ಮಸೀದಿಯನ್ನು ಒಡೆದು ಹಾಕಿದ್ದು ಹಿಂದುತ್ವವಾದಿ ಗುಂಪುಗಳು. ಮಂಗಳೂರಿನಲ್ಲಿ ಸಂವಿಧಾನಬಾಹಿರವಾಗಿ ಕಾನೂನನ್ನು ಕೈಗೆತ್ತಿಕೊಂಡು ನೈತಿಕ ಪೋಲಿಸ್ಗಿರಿ ಹೆಸರಿನಲ್ಲಿ ಪುಂಡಾಟಿಕೆ ಮಾಡುವುದು ಹಿಂದುತ್ವವಾದಿ ಗುಂಪುಗಳೇ. ಗುಜರಾತಿನ ಬಗ್ಗೆ ಹೇಳುವುದಾದರೆ ಅಲ್ಲಿನ ಅಲ್ಪಸಂಖ್ಯಾತರಿಗೆ ಮೋದಿಯನ್ನು ಬೆಂಬಲಿಸದೇ ಬೇರೆ ದಾರಿಯೇ ಇಲ್ಲದಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಬದುಕಬೇಕಾದರೆ ಮೋದಿಯನ್ನು ಬೆಂಬಲಿಸಬೇಕು ಇಲ್ಲದಿದ್ದರೆ ಅಲ್ಪಸಂಖ್ಯಾತರ ಬದುಕು ಬಹಳ ಕಷ್ಟ. ಹೀಗಾಗಿ ಅಲ್ಪಸಂಖ್ಯಾತರು ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಬಹುಸಂಖ್ಯಾತರ ವಿರುದ್ಧ ಸಾಕ್ಷ್ಯ ನೀಡಿದರೆ ಅಲ್ಲಿ ಬದುಕುವುದು ಕಷ್ಟ. ಹೀಗಾಗಿ ಅಲ್ಪಸಂಖ್ಯಾತರು ಗಲಭೆಯ ಕುರಿತು ಸಾಕ್ಷ್ಯ ಹೇಳುವುದು ಸಾಧ್ಯವಿಲ್ಲದ ಮಾತು.

        ಉತ್ತರ
        • SSNK's avatar
          ಮಾರ್ಚ್ 15 2013

          > ನನಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ನ್ಯಾಯಾಲಯದಲ್ಲೂ ನಂಬಿಕೆ ಇದೆ.
          ಹಾಗಿದ್ದರೆ ನ್ಯಾಯಾಲಯಗಳಲ್ಲಿ ವಿಚಾರ ಇತ್ಯರ್ಥವಾಗುವವರೆಗೆ ಕಾಯಬೇಕು.
          ನ್ಯಾಯಾಲಯ ಹೇಳಿದ್ದನ್ನು ಮಾನ್ಯ ಮಾಡಬೇಕು.

          > ಗುಜರಾತಿನ ಬಗ್ಗೆ ಹೇಳುವುದಾದರೆ ಅಲ್ಲಿನ ಅಲ್ಪಸಂಖ್ಯಾತರಿಗೆ ಮೋದಿಯನ್ನು ಬೆಂಬಲಿಸದೇ ಬೇರೆ ದಾರಿಯೇ ಇಲ್ಲದಂಥ
          > ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ.
          ಇದು ನಿಮ್ಮ ಊಹೆ. ಪ್ರಾಯಶಃ ಪತ್ರಿಕೆಯಲ್ಲಿ ಬಂದಿರುವುದನ್ನೇ ಓದಿಕೊಂಡು ಹೀಗಾಗಿರಬೇಕು.
          ದಯವಿಟ್ಟು ಒಮ್ಮೆ ಗುಜರಾತಿಗೆ ಪ್ರವಾಸ ಹೋಗಿ, ಅಲ್ಲಿನ ಜನರನ್ನು ಮಾತನಾಡಿಸಿಕೊಂಡು ಬನ್ನಿ.
          ಕರ್ನಾಟಕದಲ್ಲೂ ಗುಜರಾತಿನ ಸಾಕಷ್ಟು ಜನ ಕೆಲಸ ಮಾಡುತ್ತಿರುವರು. ಇವರಲ್ಲಿ ಸಾಕಷ್ಟು ಜನ ಮುಸಲ್ಮಾನರೂ ಇರುವರು.
          ಅವರನ್ನೊಮ್ಮೆ ಅಭಿಪ್ರಾಯ ಕೇಳಿ ಅಲ್ಲಿನ ಸ್ಥಿತಿಯ ಕುರಿತಾಗಿ ತಿಳಿದುಕೊಳ್ಳಿ.
          ದೆಹಲಿ, ಪಾಟ್ನಾ, ಕಾನ್ಪುರಗಳಲ್ಲಿ ರಾತ್ರಿಯ ವೇಳೆ ಮಹಿಳೆಯರು ಸಂಚರಿಸುವುದು ಅಪಾಯಕಾರಿ ಎನ್ನುವುದು ಇತ್ತೀಚೆಗಿನ ಘಟನೆಗಳಿಂದ ಸಾಬೀತಾಗಿದೆ.
          ಅದೇ ಅಹಮ್ಮದಾಬಾದ್, ಸೂರತ್ ಮುಂತಾದ ನಗರಗಳಲ್ಲಿ ಒಂಟಿಯಾಗಿ ಮಹಿಳೆಯರು ಮಧ್ಯರಾತ್ರಿಯಲ್ಲಿಯೂ ಧೈರ್ಯವಾಗಿ ಸಂಚರಿಸುವುದನ್ನು ಕಾಣಬಹುದು. ಕೇವಲ ಹಿಂದು ಹೆಂಗಸರಲ್ಲ; ಮುಸಲ್ಮಾನ ಹೆಂಗಸರೂ ಯಾವುದೇ ಅಳುಕಿಲ್ಲದೆ ಸಂಚರಿಸುವುದನ್ನು ಕಾಣಬಹುದು. ಪ್ರವಾಸ ಹೋದರೆ ನಿಮಗೇ ತಿಳಿದೀತು. ಅಲ್ಲಿಯವರೆಗೆ ಅವರಿವರ ಮಾತುಗಳನ್ನೇ ಕೇಳಿಕೊಂಡು ಬದುಕಬೇಕು!

          ಉತ್ತರ
          • Ananda Prasad's avatar
            Ananda Prasad
            ಮಾರ್ಚ್ 15 2013

            ನಾನೂ ಅದನ್ನೇ ಹೇಳುವುದು ನ್ಯಾಯಾಲಯಗಳು ವಿವಾದ ಇತ್ಯರ್ಥ ಮಾಡುವಲ್ಲಿವರೆಗೆ ಕಾಯಬೇಕು. ಆದರೆ ಹಿಂದುತ್ವವಾದಿ ಗುಂಪುಗಳು ಕಾಯಲಿಲ್ಲ ಬಾಬ್ರಿ ಮಸೀದಿಯನ್ನು ಉರುಳಿಸಿಹಾಕಿದವು. ಅದರಿಂದ ದೇಶದಲ್ಲಿ ನಡೆದ ಹಿಂಸೆಗೆ ಹಾಗೂ ಬಂದಿನಿಂದ ಸುಮಾರು ೨೦,೦೦೦ ಕೋಟಿ ರೂಪಾಯಿಗಳಷ್ಟು ರಾಷ್ಟ್ರೀಯ ನಷ್ಟವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಯಾರು ಹೊಣೆ? ಹಿಂದುತ್ವವಾದಿ ಗುಂಪುಗಳ ಸಂವಿಧಾನಬಾಹಿರ ಕೃತ್ಯವೇ ಇದಕ್ಕೆ ಕಾರಣ ಅಲ್ಲವೇ? ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಹಿಂದುತ್ವವಾದಿ ಗುಂಪುಗಳಿಗೆ ಆಗ ಸಂವಿಧಾನದ ಹಾಗೂ ಕಾನೂನಿನ ನೆನಪು ಆಗುವುದಿಲ್ಲವೇ? ಗುಜರಾತಿನ ವಿಷಯದಲ್ಲಿ ಮೋದಿಗೆ ಕ್ಲೀನ್ ಚಿಟ್ ನೀಡುವಾಗ ಮಾತ್ರ ನ್ಯಾಯಾಲಯ ಹಾಗೂ ಕಾನೂನಿನ ನೆನಪು ಆಗುವುದೇ?

            ಇನ್ನು ಬೇರೆ ಬೇರೆ ಕಡೆ ಉಂಟಾಗುವ ಹಿಂಸೆಯನ್ನು ಖಂಡಿಸಬೇಕು, ಖಂಡಿಸದಿದ್ದರೆ ಅದನ್ನು ಬೆಂಬಲಿಸಿದಂತೆ ಎಂಬ ನಿಮ್ಮ ವಾದ ಪ್ರಜ್ಞಾವಂತರು ಒಪ್ಪಲು ಸಾಧ್ಯವಿಲ್ಲ. ಎಲ್ಲ ಹಿಂಸೆಗಳೂ ಖಂಡನೀಯ.

            ಉತ್ತರ
            • SSNK's avatar
              ಮಾರ್ಚ್ 15 2013

              > ನಾನೂ ಅದನ್ನೇ ಹೇಳುವುದು ನ್ಯಾಯಾಲಯಗಳು ವಿವಾದ ಇತ್ಯರ್ಥ ಮಾಡುವಲ್ಲಿವರೆಗೆ ಕಾಯಬೇಕು.
              > ಆದರೆ ಹಿಂದುತ್ವವಾದಿ ಗುಂಪುಗಳು ಕಾಯಲಿಲ್ಲ ಬಾಬ್ರಿ ಮಸೀದಿಯನ್ನು ಉರುಳಿಸಿಹಾಕಿದವು.
              ಹಿಂದುತ್ವವಾದಿಗಳು ಪ್ರಜಾಪ್ರಭುತ್ವ ವಿರೋಧಿಗಳು ಎಂದೇ ಇಟ್ಟುಕೊಳ್ಳೋಣ.
              ಅವರು ನ್ಯಾಯಾಲಯಕ್ಕೆ ಬೆಲೆ ಕೊಡುವುದಿಲ್ಲ, ಹಿಂಸಾಚಾರ ಮಾಡುತ್ತಾರೆ.

              ಆದರೆ, ನೀವು ಗುಜರಾತಿನ ವಿಷಯದಲ್ಲಿ ಮಾಡುತ್ತಿರುವುದೂ ಅದನ್ನೇ ಅಲ್ಲವೇ?

              ಅಯೋಧ್ಯೆಯ ವಿಷಯದಲ್ಲಿ ನ್ಯಾಯಾಲಯದ ತೀರ್ಪು ವಿಳಂಬವಾಗುವಂತೆ ನರಸಿಂಹ ರಾವ್ ಸರಕಾರ ಮಾಡಿತು.
              ೭ ಲಕ್ಷ ಜನ ಅಯೋಧ್ಯೆಯಲ್ಲಿ ಸೇರಿದ್ದರು. ಅವರೆಲ್ಲಾ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದರು. ಎರಡು ಬಾರಿ ತೀರ್ಪನ್ನು ಮುಂದೂಡಲಾಯಿತು. ಮೂರನೆ ಬಾರಿ ಮುಂದೂಡಿದಾಗ ಜನರ ಸಹನೆಯ ಕಟ್ಟೆಯೊಡೆಯಿತು. ಈ ರೀತಿ ಆದಾಗ, ಅದನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ೧೯೯೨ರ ಡಿಸೆಂಬರ್ ೬ರಂದು ನಡೆದ ಘಟನೆಗಳು ಪೂರ್ವ ಯೋಜಿತವಲ್ಲ. ಅಂದು ನ್ಯಾಯಾಲಯವು ಸರಿಯಾದ ಸಮಯಕ್ಕೆ ತೀರ್ಪು ನೀಡಿದ್ದರೆ ಆ ಘಟನೆಯನ್ನು ತಪ್ಪಿಸಬಹುದಿತ್ತು.

              ಆದರೆ, ಅಯೋಧ್ಯೆಯಲ್ಲಾದ ಘಟನೆ, ಅಲ್ಲಿ ನಡೆದ “ನ್ಯಾಯಾಲಯದ ಮೂಲಕ ರಾಜಕೀಯ”, ಇತ್ಯಾದಿಗಳನ್ನು ಗುಜರಾತಿನಲ್ಲಿ ನಡೆದದ್ದಕ್ಕೆ ಸಮರ್ಥನೆಯಾಗಿ ಉಪಯೋಗಿಸುತ್ತಿರುವುದು ಅರ್ಥವಾಗದ ಮಾತು.

              > ಇನ್ನು ಬೇರೆ ಬೇರೆ ಕಡೆ ಉಂಟಾಗುವ ಹಿಂಸೆಯನ್ನು ಖಂಡಿಸಬೇಕು, ಖಂಡಿಸದಿದ್ದರೆ ಅದನ್ನು ಬೆಂಬಲಿಸಿದಂತೆ
              > ಎಂಬ ನಿಮ್ಮ ವಾದ ಪ್ರಜ್ಞಾವಂತರು ಒಪ್ಪಲು ಸಾಧ್ಯವಿಲ್ಲ. ಎಲ್ಲ ಹಿಂಸೆಗಳೂ ಖಂಡನೀಯ
              ನೀವು ಎಲ್ಲಾ ಹಿಂಸೆಗಳನ್ನು ಸಮಾನವಾಗಿ ಖಂಡಿಸುತ್ತಿಲ್ಲವಲ್ಲಾ!?
              ಗೋಧ್ರಾ ಹಿಂಸೆಯನ್ನು ನೀವು ಖಂಡಿಸಿದ್ದು ನಾನು ಕಂಡೇ ಇಲ್ಲ!
              ಇದೀಗ ನಡೆದಿರುವ ಅಸ್ಸಾಂ ಹಿಂಸೆಯನ್ನು ಎಲ್ಲಿ ಖಂಡಿಸಿರುವಿರಿ?
              ಜಮ್ಮು-ಕಾಶ್ಮೀರದ ಹಿಂಸೆಯೂ ಪ್ರಸ್ತಾಪವಾಗಿದೆ. ಆದರೆ, ನಿಮ್ಮಿಂದ ಒಮ್ಮೆಯೂ ಅದು ತಪ್ಪೆನ್ನುವ ಮಾತಿಲ್ಲವಲ್ಲ!?

              ಉತ್ತರ
            • ನವೀನ's avatar
              ನವೀನ
              ಮಾರ್ಚ್ 15 2013

              ಬೀಗ ಜಡಿಯಲಾಗಿದ್ದ “ಬಾಬರಿ ಮಸೀದಿ”ಯನ್ನು ಕೆಡವಿದ್ದರ ಬಗ್ಗೆ ನಿಮ್ಮ ಆಕ್ರೋಶ ಅರ್ಥವಾಗುತ್ತದೆ.ಆದರೆ ಹಿಂದುತ್ವವಾದಿಗಳ ಕೈಗೆ ಇಂತ ಅಸ್ತ್ರವನ್ನು ಕೊಟ್ಟ ‘ಶಾ ಬಾನು’ ಪ್ರಕರಣವೇ ಈ ದೇಶದ ಸೆಕ್ಯುಲರ್ ಸಿದ್ಧಾಂತಗಳಿಗೆ ಕೊಳ್ಳಿಯಿಟ್ಟಿದ್ದು ಅಂತ ಹೇಳುವಷ್ಟು ಧೈರ್ಯ ತೋರಿಸಿ.
              ಪ್ರಜಾಪ್ರಭುತ್ವ,ಸಂವಿಧಾನ ಅಂತೀರಿ.ಇದೇ ಸಂವಿಧಾನದಡಿಯಲ್ಲಿ ಎರಡೆರಡು ಸಿವಿಲ್ ಕೋಡ್ ಯಾಕೆ ಬೇಕು?

              ಉತ್ತರ
  4. Gurumurthy CM's avatar
    Gurumurthy CM
    ಮಾರ್ಚ್ 11 2013

    ಬಹುಶಹ ಏಡ್ಸ್ ರೋಗಕ್ಕೆ ಮದ್ದು ಕಂಡು ಹಿಡಿಯಬಹುದೇನೋ ಆದರೆ ಮೋದಿ ದೂಷಕರ ಕಾಯಿಲೆಗೆ ಮದ್ದು ಸಿಗಲು ಸಾಧ್ಯವೇ ಇಲ್ಲ.. Supremecourt,SIT ಮೋದಿಗೆ ಕ್ಲೀನ್ ಚಿಟ್ ಕೊಟ್ಟು,ತೀಸ್ತಾ & ಟೀಮ್ ಗೆ ಮಂಗಳಾರತಿ ಮಾಡಿದ್ದರೂ ಜಟ್ಟಿ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎನ್ನುವ ಜಾಯಮಾನ ಇವರದ್ದು…ಹಿಂದುತ್ವ,ಸಂಘಪರಿವಾರದ ವಿಷಯ ಬಂದಾಗ ಸಂವಿಧಾನ,ಕಾನೂನು,ಕೋರ್ಟ್ ಗಳಿಗೆ ಮಾತ್ರ ನಮ್ಮ ನಿಷ್ಟೆ ಎಂದು ವಾದಿಸುವ ಇವರು ಮೋದಿ ವಿಚಾರಬಂದಾಗ ಕಾನೂನು ವ್ಯವಸ್ಥೆ,ಕೋರ್ಟ ತೀರ್ಪನ್ನು ನಂಬಲು ಸಿದ್ದರಿಲ್ಲ.,ಮೋದಿಯನ್ನು ವಿರೋಧಿಸುವವರಿಗೆ ಕನಿಷ್ಥ ಸೈದ್ಧಾಂತಿಕ ಬದ್ಧತೆಯೂ ಇಲ್ಲ,ಇವರ ಚಿಂತನೆ, ಬರಹ ,ಅನುಕಂಪ ಎಲ್ಲವೂ ಧರ್ಮಾಧಾರಿತ ಅದರಲ್ಲೂ ಮುಸಲ್ಮಾನ ಧರ್ಮಾಧಾರಿತ ಎಂದರೆ ಸರಿಯಾದಿತೇನೋ. ಗುಜರಾತಿನ ಮುಸಲ್ಮಾನರೂ ಇವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಮೋದಿಯನ್ನು ಬೆಂಬಲಿಸುತ್ತಿದ್ದರೂ ಇವರ ಅರಣ್ಯ ರೋಧನ ನಿಲ್ಲುತ್ತಿಲ್ಲ.. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ಆಯ್ಕೆಯಾದ ಮೋದಿ,ಆಡ್ವಾಣಿ ಇವರಿಗೆ ಅಸ್ಪರ್ಶರು ಅದರೆ ದಿನನಿತ್ಯ ನರಹತ್ಯೆ ನಡೆಸುವ ನಕ್ಸಲರೊಂದಿಗೆ ಇವರದ್ದು ಅಪ್ಪಿಕೋ ಚಳುವಳಿ..ಇದಕ್ಕಿಂತಾ ಬೌದ್ಧಿಕ ದಿವಾಳಿತನ ಬೇಕೇ???

    ಉತ್ತರ
  5. SSNK's avatar
    ಮಾರ್ಚ್ 14 2013

    ಆನಂದ್ ಪ್ರಸಾದ್ ಅವರೇ,

    ಈ ಕೆಳಗಿನ ಎರಡು ವಿಷಯಗಳ ಕುರಿತಾಗಿ ನೀವೆಲ್ಲೂ ಬರೆದದ್ದು ಕಾಣಲಿಲ್ಲ!
    ೧. http://timesofindia.indiatimes.com/world/south-asia/Hindu-temples-homes-attacked-across-Bangladesh/articleshow/18954491.cms
    ೨. http://samvada.org/2013/news-digest/threat-to-kashmiri-pandits-to-leave-kashmir-minister-in-rajyasabha/

    ಪ್ರಾಯಶಃ ಇದು “ಜಾತ್ಯಾತೀತ ವ್ಯಾಧಿ”ಯ ಮೂಲಭೂತ ಹಕ್ಕುಗಳಾಗಿರಬಹುದೇ?

    ಉತ್ತರ
  6. SSNK's avatar
    ಮಾರ್ಚ್ 15 2013

    ನಾನು ಕಾಶ್ಮೀರ, ಅಸ್ಸಾಂ ರಾಜ್ಯಗಳಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆಯೂ ಕೇಳಿದ್ದೆ.
    ನೀವು ಅದರ ಕುರಿತಾಗಿ ಬರೆದಿಲ್ಲ. ನೀವು ಅದನ್ನು ಎಲ್ಲಿಯೂ ವಿರೋಧಿಸಿಲ್ಲದ ಕಾರಣ, ಅದನ್ನು ಬೆಂಬಲಿಸುವಿರಿ ಎಂದು ತಿಳಿದಿರುವೆ.
    ಅಲ್ಲಿ ನಡೆದಿರುವುದೂ ಅಯೋಧ್ಯಾ ಘಟನೆಗೆ ಪ್ರತಿಕ್ರಿಯೆಯಾಗಿಯೋ ಹೇಗೆ?

    ಉತ್ತರ
  7. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಮಾರ್ಚ್ 15 2013

    ಕುಮಾರರೆ , ಈ ಬುದ್ದುಜೀವಿ ಆನಂದ ಪ್ರಸಾದ ಹೀಗೆಯೇ ಇರುತ್ತಾರೆ ! ಅವರ ಬುಡಕ್ಕೆ ಪೆಟ್ಟು ಆ ಆತಂಕವಾದಿಗಳು ಕೊಡೊವರೆಗೆ ಅವರಿಗೆ ನೀವು ಜಪ್ಪಯ್ಯ ಅಂದರೂ ಬುದ್ದಿ ಬರೋದಿಲ್ಲ! ಏನು ಮಾಡೋದು? ಅವರಿಗೆ ಪೆಟ್ಟು ಬೀಲೋವಾಗ ಕೆಲವು ಅಮಾಯಕರಿಗೂ ಅನ್ಯಾಯವಾಗಿ ಪೆಟ್ಟು ಬೀಳಹ್ಬಹುದು! ಏನೂ ಮಾಡೋಕಾಗಲ್ಲ! ಇಂತಹವರಿಗೆ ಅವರನ್ನ(ಭಯೋತ್ಪಾದಕರನ್ನ) ಹೋಗಳೊದರಲ್ಲಿ ಅದೇನು ಖುಷಿಯೋ ಅವರಿಗೂ ದೇವರಾಣೆ ಗೊತ್ತಿರಲಾರದು! ಇವರಿಗೆ ಹಿಂದೂ ಸಂಘಟನೆಗಳು ಜನರನ್ನು ಹಿಂಸೆ ಹಾಗೂ ಕಾನೂನನ್ನು ದೇವರು, ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಕೈಗೆತ್ತಿಕೊಳ್ಳಲು ಪ್ರಚೋದಿಸುತ್ತಿರುವುದೂ ಇವರೇ ಎಂಬುದು ತಿಳಿಯುತ್ತದೆ. ಯಾರ ಹೆಸರನ್ನೂ ಉಲ್ಲೇಖಿಸುವುದು ಅಗತ್ಯವಿಲ್ಲ,” ಗೊತ್ತಿದ್ದರೆ ತಾನೇ ಹೇಳೋದು?

    ಉತ್ತರ
    • Ananda Prasad's avatar
      Ananda Prasad
      ಮಾರ್ಚ್ 16 2013

      ವೈಯಕ್ತಿಕ ನಿಂದನೆಯಿಂದ ಏನೂ ಪ್ರಯೋಜನ ಇಲ್ಲ. ಅದು ನಿಂದಿಸಿದವರ ನಾಗರಿಕತೆಯ ಮಟ್ಟ, ವಿವೇಚನೆಯ ಕೊರತೆ, ಅವರು ಬೆಳೆದು ಬಂದ ಪರಿಸರ ಹೇಗಿದೆ ಎಂಬುದನ್ನು ಸೂಚಿಸುತ್ತದೆ. ನಾನು ಎಲ್ಲಿಯೂ ಕೂಡ ಭಯೋತ್ಪಾದಕರನ್ನು ಬೆಂಬಲಿಸಿ ಮಾತನಾಡಿಲ್ಲ. ಅನಾವಶ್ಯಕವಾಗಿ ಏನೇನೋ ಪ್ರತಿಕ್ರಿಯೆ ವ್ಯಕ್ತಪಡಿಸುವವರ ಮನಸ್ಥಿತಿ ಏನು ಎಂಬುದು ಎಲ್ಲರಿಗೂ ತಿಳಿಯುತ್ತದೆ.

      ಉತ್ತರ
      • ಬಸವಯ್ಯ's avatar
        ಬಸವಯ್ಯ
        ಮಾರ್ಚ್ 16 2013

        ಒಹೊ..ಮಾತು-ಮಾತಿಗೆ, ತುರಿಕೆ ಹತ್ತಿದವರ ಹಾಗೆ ಮೋದಿ ಫ್ಯಾಸಿಸ್ಟ, ನರಹಂತಕ ಅನ್ನುವವರ ವಿವೇಚನೆಯ ಮಟ್ಟ ಎಂಥದ್ದು? ನಾಗರೀಕತೆಯ ಮಟ್ಟ ಎಂಥದ್ದು? ಬೆಳೆದು ಬಂದ ಪರಿಸರ ಎಂಥದ್ದು? ಮನಸ್ಥಿತಿ ಎಂಥದ್ದು??
        ನಿಮ್ಮ ಪ್ರಜ್ಞಾವಂತ, ವಿಶಾಲ ಮನೋಭಾವದ ಸ್ನೇಹಿತರನ್ನು ಕೇಳಿನೋಡಿ!

        ಉತ್ತರ
      • ನವೀನ's avatar
        ನವೀನ
        ಮಾರ್ಚ್ 16 2013

        ನನ್ನ ಮೇಲಿನ ಎರಡೂ ಥ್ರೆಡ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ನೀವು ಉತ್ತರಿಸಲಿಲ್ಲವಲ್ಲ…!

        ಉತ್ತರ
      • Kumar's avatar
        ಮಾರ್ಚ್ 17 2013

        ಆನಂದ ಪ್ರಸಾದರೆ,
        ನಿಮಗೆ ಹಿಂದುತ್ವ ಮತ್ತು ಅದರ ಸಂಘಟನೆಗಳ ವಿಷಯದಲ್ಲಿ ವೈಯಕ್ತಿಕ ವಿರೋಧವಿರುವುದು ನಿಮ್ಮ ಬರಹಗಳಲ್ಲಿ ಢಾಳಾಗಿ ಎದ್ದು ಕಾಣುತ್ತದೆ. ನಿಮ್ಮ ವಿರೋಧಕ್ಕೆ ಕಾರಣವೇನು ಎಂಬುದು ಮಾತ್ರ ಎಲ್ಲಿಯೂ ಸ್ಪಷ್ಟವಾಗೋದಿಲ್ಲ!
        ಆ ವಿರೋಧವು ವಿರೋಧಾಭಾಸವಾಗಿಯೂ ಪರಿವರ್ತನೆಗೊಂಡಿರುವುದು ಈ ಚರ್ಚೆಯಲ್ಲಿಯೇ ಅಲ್ಲಲ್ಲಿ ಕಂಡುಬರುತ್ತದೆ.
        ಗುಜರಾತಿಗೆ ಸಂಬಂಧಿಸಿದಂತೆ ಮಾತನಾಡುವಾಗ, ನಿಮಗೆ ನ್ಯಾಯಾಲಯ-ಸಂವಿಧಾನ-ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲವೆಂದು ನೀವೇ ಬರೆದಿರಿ. ಅದಾದ ಸ್ವಲ್ಪ ಸಮಯದಲ್ಲಿಯೇ ನಿಮಗೆ ಅವೆಲ್ಲದರಲ್ಲಿಯೂ ನಂಬಿಕೆಯಿದೆ, ಆದರೆ ಹಿಂದುತ್ವದ ಮಂದಿಯಲ್ಲಿ ಅದಿಲ್ಲ ಎಂದಿರಿ.
        ನಿಮಗೆ ನಂಬಿಕೆಯಿದ್ದರೆ, ನ್ಯಾಯಾಲಯಗಳು ಮೋದಿ ಮತ್ತು ಅವರ ಕುರಿತಾಗಿ ತಿಳಿಸಿರುವ ಸಂಗತಿಗಳನ್ನು ಆಧಾರವಾಗಿಟ್ಟುಕೊಂಡು ಚರ್ಚಿಸಬೇಕಲ್ಲವೇ? ನ್ಯಾಯಾಲಯ ಎಲ್ಲಿಯೂ ಮೋದಿ ತಪ್ಪಿತಸ್ಥರೆಂದು ತಿಳಿಸಿಲ್ಲ. ಹೀಗಿರುವಾಗ, ನೀವು ಅವರು ತಪ್ಪಿತಸ್ಥರೆಂದು ತೀರ್ಪು ನೀಡಿದರೆ (ಅದೂ ಯಾವುದೇ ಪುರಾವೆ ಇಲ್ಲದೆ), ನಿಮಗೆ ನ್ಯಾಯಾಲಯದಲ್ಲಿ ನಂಬಿಕೆಯಿಲ್ಲವೆಂದು ತಿಳಿಸಿದಂತೆಯೇ ಅಲ್ಲವೇ?
        ಒಂದೆಡೆ ನಂಬಿಕೆಯಿದೆಯೆನ್ನುವುದು, ಆದರೆ ನಿಮಗೆ ಬೇಕಾದಾಗ ನ್ಯಾಯಾಲಯವನ್ನೇ ತಿರಸ್ಕರಿಸಿಬಿಡುವುದು – ಇದಲ್ಲವೇ ವಿರೋಧಾಭಾಸ.
        ನಿಮ್ಮ ಈ ವಿರೋಧಾಭಾಸದ ಕುರಿತಾಗಿ ಎತ್ತಿ ತೋರಿಸಿದರೆ, ಅದನ್ನು ವೈಯಕ್ತಿಕ ನಿಂದನೆ ಎಂದುಬಿಡುವುದು!
        ಇದು ಯಾವ ರೀತಿಯ ವೈಚಾರಿಕ ಸಂವಾದ.

        ಇನ್ನು ನಾನು ಇದೇ ಚರ್ಚೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನೀವು ಯಾವ ರೀತಿ ಒಂದು ಮತೀಯ ಗುಂಪಿನ ಪರವಾಗಿ ಮಾತನಾಡುತ್ತಿರುವಿರಿ ಎಂದು ಉದಾಹರಣೆ ಸಹಿತ ತಿಳಿಸಿರುವೆ.
        ನಿಮಗೆ ಗೋಧ್ರಾದಲ್ಲಿ ಸತ್ತ ಹಿಂದುಗಳ ಕುರಿತಾಗಿ ಸಹಾನುಭೂತಿಯಿಲ್ಲ.
        ನಿಮಗೆ ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ಲಕ್ಷಾಂತರ ಹಿಂದುಗಳ ಪರಿಸ್ಥಿತಿ ಕಾಣುವುದೇಯಿಲ್ಲ. ಅಲ್ಲಿಂದ ಓಡಿಸಲ್ಪಟ್ಟ ಲಕ್ಷಾಂತರ ಹಿಂದುಗಳ ವಿಷಯ ನಿಮಗೆ “ಏನೂ” ಅಲ್ಲ!
        ಅಸ್ಸಾಂನಲ್ಲಿ ಕೊಲ್ಲಲ್ಪಡುತ್ತಿರುವ ಸಹಸ್ರಾರು ಹಿಂದುಗಳ ವಿಷಯ ನಿಮಗೆ ಆಸಕ್ತಿಯಿಲ್ಲ.

        ಗುಜರಾತಿನ ವಿಷಯ ಬಂದಕೂಡಲೇ, ಒಂದೇ ಉಸಿರಿನಲ್ಲಿ, ಅದಕ್ಕೆ ಅಲ್ಲಿನ ಸರಕಾರವೇ ಕಾರಣ, ಮೋದಿಯೇ ತಪ್ಪಿತಸ್ಥ, ಸರಕಾರೀ ಪ್ರಾಯೋಜಿತ ಗಲಭೆ, ಎಂದೆಲ್ಲಾ ಬಡಬಡಿಸುವಿರಿ. ಈ ವಿಷಯದಲ್ಲಿ ನ್ಯಾಯಾಲಯಗಳ ತೀರ್ಪೂ ನಿಮಗೆ ಲೆಕ್ಕವಿಲ್ಲ.

        ಆದರೆ, ಕಾಶ್ಮೀರ, ಅಸ್ಸಾಂ, ಮುಂತಾದ ರಾಜ್ಯಗಳಲ್ಲಿ ನಡೆದ ಗಲಭೆಗಳ ವಿಷಯದಲ್ಲಿ ನೀವು ಮಾತನಾಡದಿರುವುದು, ಅಲ್ಲಿನ ನೊಂದವರ ಕುರಿತಾಗಿ ಒಂದು ಸಾಲಿನ ಸಹಾನುಭೂತಿಯನ್ನೂ ತೋರಿಸದಿರುವುದು, ಏನನ್ನು ತೋರಿಸುತ್ತದೆ?

        ನಿಮಗೆ “ಮಾನವತೆಯ ಕುರಿತಾದ ಆಸಕ್ತಿ”ಗಿಂತ ಹಿಂದುತ್ವದ ವಿರೋಧವೇ ಹೆಚ್ಚು ಅಪ್ಯಾಯಮಾನ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

        ಉತ್ತರ
  8. Gurumurthy CM's avatar
    Gurumurthy CM
    ಮಾರ್ಚ್ 18 2013

    ಆನಂದ ಪ್ರಸಾದರೇ ನಿಮ್ಮ ಬಳಿ ಮೋದಿಯನ್ನು ಟೀಕಿಸಲು ಸಮರ್ಥ ಕಾರಣಗಳೇ ಸಿಗುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಿ ಇಲ್ಲವೇ ನಮ್ಮದ್ದೇನಿದ್ದರೂ ವಿರೋಧಕ್ಕಾಗಿ ವಿರೋಧ ಎಂದು ಒಪ್ಪಿಲಕೊಳ್ಳುವ ಪ್ರಾಮಾಣಿಕತೆ ತೋರಿಸಿ..ಅದನ್ನು ಬಿಟ್ಟು ಆಧಾರವಿಲ್ಲದ ,ಬರೀ ಅಂತೆಕಂತೆಗಳನ್ನೇ ಮುಂದುಮಾಡಿ ಮೊಂಡುವಾದ ಮಾಡಬೇಡಿ .ಪ್ರಜಾಪ್ರಭುತ್ವ,ನ್ಯಾಯಲಯದ ತೀರ್ಪು ಎಂದು ಪುಟಗಟ್ಟಲೇ ಬರಿಯುತ್ತೀರಿ ಅದೇ ಗುಜರಾತ್ ವಿಷಯಕ್ಕೆ ಬಂದರೆ ಎಲ್ಲವನ್ನೂ ಅನುಮಾನಿಸುತ್ತೀರಿ..ವಾದ ಮಾಡುವುದಕ್ಕೂ ಒಂದು ವೈಚಾರಿಕ ಚೌಕಟ್ಟಿರುತ್ತದೆ ಅದನ್ನು ಬಿಟ್ಟು ಅದಾರವಿಲ್ಲದೇ ಮನಸ್ಸಿಗೆ ಬಂದಿದ್ದನ್ನು ಬಡಬಡಿಸಿದರೆ ನಯಾಪೈಸೆ ಬೆಲೆ ಸಿಗುವುದಿಲ್ಲ.ಗುಜರಾತ್ ಮುಸಲ್ಮಾನರು ಹೆದರಿ ಮೋದಿ ಬೆಂಬಲಿಸುತ್ತಿದ್ದಾರೆ ಎನ್ನುತ್ತಿರಲ್ಲ ಇದಕ್ಕಿಂತ ಹಾಸ್ಯ ಬೇಕೇ???ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆದರಿಸಿ ಅದರಲ್ಲೂ ಮುಸಲ್ಮಾನ ಸಮುದಾಯದ ಮತ ಪಡೆಯಲು ಸಾಧ್ಯವೇ??? ನಿಮ್ಮ ಬೌದ್ಧಿಕ ದಿವಾಳಿತ ಅನುಕಂಪಕ್ಕೂ ಅರ್ಹವಲ್ಲ ಬರಿ ಅಸಹ್ಯ ಪಡಬಹುದಷ್ಟೆ..ಇನ್ನು ಸಂಘಪರಿವಾರದವರು ಜಾತೀಯತೆ,ಅಸ್ಪರ್ಶತೆಯನ್ನು ಪೋಷಿಸುತ್ತಿದಾರೆ ಎಂದು ಹೇಳುವಾಗ ಅದಕ್ಕೆ ಪೂರಕವಾದ ಸಂಘಪರಿವಾರದ ಪ್ರಮುಖರ ಹೇಳಿಕೆಯನ್ನ ಉದಾಹರಿಸಬೇಕಾಗುತ್ತದೆ ಎಂಬ ಕನಿಷ್ಟ ಜ್ನಾನ ಬೇಡವೇ ನಿಮಗೆ???? ನಿಮಗೆ ವೈಚಾರಿಕ ಜ್ನಾನ, ಬದ್ಧತೆ,ಸ್ವಲ್ಪವಾದರೂ ಇದ್ದರೆ ಕುಮಾರ್ ಅವರ ಪ್ರತಿ ಪ್ರಶ್ನೆಗೂ ಉತ್ತರ ನೀಡಿ ಇಲ್ಲವೇ ಸಂಘ ಪರಿವಾರ ಮತ್ತು ದೂಷಣೆಯನ್ನು ಇಲ್ಲಿಗೆ ಕೊನೆ ಮಾಡಿ….

    ಉತ್ತರ
    • Ananda Prasad's avatar
      Ananda Prasad
      ಮಾರ್ಚ್ 18 2013

      ನನ್ನ ಮೇಲೆ ನಿಮ್ಮ ಸರ್ವಾಧಿಕಾರಿ ಮನೋಭಾವನೆ ತೋರಿಸಲು ಬರುವುದು ಅನಗತ್ಯ. ಹಾಗೆ ಹೇಳುವ ಮೊದಲು ಯಾವುದೇ ಚುನಾವಣೆಯಲ್ಲಿ ನಿಂತು ಗೆಲ್ಲದೆ ಆಡಳಿತದ ಮೇಲೆ ಸವಾರಿ ಮಾಡುತ್ತಿರುವ ಸಂಘದ ನಾಯಕರು ಮೊದಲು ಅದನ್ನು ನಿಲ್ಲಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಲು ಕಲಿಯುವುದು ಒಳ್ಳೆಯದು. ಜನರಿಂದ ಆಯ್ಕೆಯಾಗದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರೀ ಯಂತ್ರದ ಮೇಲೆ ಸವಾರಿ ಮಾಡಲು ಸಂಘದ ನಾಯಕರಿಗೆ ಯಾವುದೇ ಹಕ್ಕೂ ಇಲ್ಲ.

      ಉತ್ತರ
      • SSNK's avatar
        ಮಾರ್ಚ್ 18 2013

        ಆನಂದ ಪ್ರಸಾದ್ ಅವರೇ,
        ನಿಮ್ಮ ಚರ್ಚೆ ಎಲ್ಲಿಂದಲೋ ಎಲ್ಲಿಗೋ ಹೋಗುತ್ತಿದೆ.

        ಗುಜರಾತ್ ಗಲಭೆಯಿಂದ ಪ್ರಾರಂಭಿಸಿ, ಮೋದಿಯೇ ಅದಕ್ಕೆಲ್ಲಾ ಕಾರಣ ಎಂದು ಹೇಳಿ, ನೀವು ಹೇಳುವುದಕ್ಕೆ ಯಾವುದೇ ಆಧಾರವೂ ಬೇಕಿಲ್ಲ ಮತ್ತು ನ್ಯಾಯಾಲಯಗಳೂ ಸತ್ಯವನ್ನು ಹೇಳುತ್ತಿಲ್ಲ ಎಂದೆಲ್ಲಾ ಹೇಳಿ, ಹಿಂದುತ್ವವಾದಿಗಳೆಲ್ಲಾ ಮೂಲಭೂತವಾದಿಗಳು ಎಂದೆಲ್ಲಾ ವಾದಿಸಿ, ಇದೀಗ “ಸಂಘದ ನಾಯಕರು ಆಡಳಿತದ ಮೇಲೆ ಸವಾರಿ ಮಾಡುತ್ತಿದ್ದಾರೆ” ಎಂದು ಹೇಳುತ್ತಿರುವಿರಿ!

        ನೀವು ಹೇಳುತ್ತಿರುವ ವಿಷಯಗಳು ಒಂದಕ್ಕೊಂದು ಸಂಬಂಧವಿಲ್ಲದ್ದು. ನೀವೇನು ಹೇಳಬೇಕೆಂದಿರುವಿರೋ ಸ್ಪಷ್ಟವಾಗುತ್ತಿಲ್ಲ.

        ಸಂಘದ ನಾಯಕರು ಆಡಳಿತದ ಮೇಲೆ ಸವಾರಿ ಮಾಡುತ್ತಿದ್ದರೆ, ಮಾಡಿಕೊಳ್ಳಲಿ ಬಿಡಿ, ನಿಮಗೇನು ಕಷ್ಟ?
        ಮಾಡಿಸಿಕೊಳ್ಳುತ್ತಿರುವವರು ತಾನೆ ಅದರ ಕುರಿತಾಗಿ ಧ್ವನಿಯೆತ್ತಬೇಕು?
        ಅವರೇ ಸುಮ್ಮನಿರುವಾಗ ನೀವೇಕೆ ವೃಥಾ ತೊಂದರೆ ತೆಗೆದುಕೊಳ್ಳುತ್ತಿರುವಿರಿ?

        ಮಹಾತ್ಮಾ ಗಾಂಧಿಯವರೂ ಎಂದೂ ಯಾವ ಚುನಾವಣೆಯಲ್ಲೂ ನಿಲ್ಲಲಿಲ್ಲ. ತಮ್ಮ ಮಾತೇ ನಡೆಯಬೇಕೆಂದು ಒತ್ತಾಯಿಸುತ್ತಿದ್ದರು, ಉಪವಾಸ ಕುಳಿತುಕೊಳ್ಳುತ್ತಿದ್ದರು. ಇದೂ ಆಡಳಿತದ ಮೇಲಿನ ಸವಾರಿಯೇ ಅಲ್ಲವೇ?
        ಅವರೇ ಮಾಡಿದ ಮೇಲೆ ಮತ್ತು ಅವರು ಮಾಡಿದ್ದನ್ನು ಯಾರೂ ಪ್ರಶ್ನಿಸದಿದ್ದಾಗ, ಸಂಘದವರು ಮಾಡಿದ್ದನ್ನು ಪ್ರಶ್ನಿಸುವುದೇಕೆ?

        > ಜನರಿಂದ ಆಯ್ಕೆಯಾಗದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರೀ ಯಂತ್ರದ ಮೇಲೆ ಸವಾರಿ ಮಾಡಲು
        > ಸಂಘದ ನಾಯಕರಿಗೆ ಯಾವುದೇ ಹಕ್ಕೂ ಇಲ್ಲ.
        ನಮ್ಮ ಪ್ರಧಾನ ಮಂತ್ರಿಯವರೂ ಜನರಿಂದ ಆಯ್ಕೆಯಾಗಿಲ್ಲ. ಅವರಿಗೂ ಯಾವ ಹಕ್ಕೂ ಇಲ್ಲ ಎಂದೇನು ನಿಮ್ಮ ಅಭಿಪ್ರಾಯ?

        ನಾನು ಕೇಳಿದ ಪ್ರಶ್ನೆಗಳೊಂದಕ್ಕೂ ಇಲ್ಲಿಯವರೆಗೂ ಉತ್ತರಿಸುವ ಪ್ರಯತ್ನವನ್ನೂ ಮಾಡದ್ದು ನೋಡಿದರೆ, ನಿಮ್ಮ ವಾದವೆಲ್ಲವೂ “ಹಿಂದುತ್ವ” ಹಾಗೂ “ಸಂಘ ಪರಿವಾರ”ವನ್ನು ತೆಗಳುವುದಕ್ಕಷ್ಟೇ ಸೀಮಿತ; ನಿಮಗೆ ಸತ್ಯದಲ್ಲಿ ಆಸಕ್ತಿಯಿಲ್ಲ; ನಿಮಗೆ ಮಾನವತೆ ಎಂಬುದು ಒಂದು ಸೋಗು ಅಷ್ಟೇ; – ಎಂಬ ನಿಷ್ಕರ್ಷೆಗೆ ಬರುವ ಅಪಾಯವಿದೆ!

        ಉತ್ತರ
        • Ananda Prasad's avatar
          Ananda Prasad
          ಮಾರ್ಚ್ 18 2013

          ಪ್ರಧಾನಿ ಜನರಿಂದ ಆಯ್ಕೆಯಾಗದಿದ್ದರೂ ಅವರು ಜನರಿಂದ ಆಯ್ಕೆಯಾದ ಸಂಸತ್ ಸದಸ್ಯರಿಂದ ಆಯ್ಕೆಯಾಗುವವರು. ಸಂಘದವರು ಎಲ್ಲಿಯೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜನರಿಂದ ಆಯ್ಕೆಯಾದವರಲ್ಲ. ಹೀಗಾಗಿ ಇವರಿಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಇಲ್ಲ. ಗಾಂಧಿಯವರು ಸ್ವತಂತ್ರ ಭಾರತದಲ್ಲಿ ಬದುಕಿದ್ದು ಕೇವಲ ನಾಲ್ಕು ತಿಂಗಳು ಮಾತ್ರ. ಹೀಗಾಗಿ ಅವರು ಪ್ರಜಾಪ್ರಭುತ್ವ ಸ್ವತಂತ್ರ ಭಾರತದಲ್ಲಿ ಆಡಳಿತ ಯಂತ್ರದ ಮೇಲೆ ಸವಾರಿ ಮಾಡುತ್ತಿದ್ದರು ಎಂದು ಹೇಳುವ ಅವಕಾಶವೇ ಇಲ್ಲ. ಸಂಘದವರು ಆಡಳಿತದ ಮೇಲೆ ಸವಾರಿ ಮಾಡುವುದು ಎಲ್ಲ ಪ್ರಜೆಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಅದರ ವಿರುದ್ಧ ಧ್ವನಿ ಎತ್ತುವ ಹಕ್ಕು ಎಲ್ಲ ಭಾರತೀಯ ಪ್ರಜೆಗಳಿಗೂ ಇದೆ. ನನಗೆ ನನ್ನ ಅನಿಸಿಕೆಗಳನ್ನು ಹೇಳುವ ಅವಕಾಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ಅದನ್ನು ನೀವು ಒಪ್ಪಬೇಕೆಂದು ನಾನು ಆಗ್ರಹಿಸುವುದಿಲ್ಲ. ನಾನು ನನ್ನ ಅನಿಸಿಕೆಗಳನ್ನು ಹೇಳಬಾರದು ಎಂದು ಆಜ್ಞಾಪಿಸುವುದು ಸರ್ವಾಧಿಕಾರಿ ಮನೋಭಾವವಾಗುತ್ತದೆ.

          ಉತ್ತರ
          • SSNK's avatar
            ಮಾರ್ಚ್ 19 2013

            > ನಾನು ನನ್ನ ಅನಿಸಿಕೆಗಳನ್ನು ಹೇಳಬಾರದು ಎಂದು ಆಜ್ಞಾಪಿಸುವುದು ಸರ್ವಾಧಿಕಾರಿ ಮನೋಭಾವವಾಗುತ್ತದೆ.
            ಖಂಡಿತ. ನಿಮ್ಮ ಅನಿಸಿಕೆಯನ್ನು ನಿರ್ದಾಕ್ಷಿಣ್ಯವಾಗಿ ಹೇಳಿ. ಆದರೆ, ಅದೇ ರೀತಿ ಇತರರಿಗೂ ಅವಕಾಶ ಮಾಡಿಕೊಡಿ.

            ಇತರರು ನಿಮಗಿಂತ ಭಿನ್ನವಾದ ಅನಿಸಿಕೆಗಳನ್ನು ಹೊಂದಿದ್ದಲ್ಲಿ, ಅದನ್ನು ಜಮೀನ್ದಾರಿಕೆ, ಜಾತೀವಾದ, ಎಂದೆಲ್ಲಾ ಹೇಳಿ ತುಳಿಯಲು ಯತ್ನಿಸಬೇಡಿ.
            ಅನಿಸಿಕೆಗಳು ಊಹೆಗಿಂತ ವಾಸ್ತವಕ್ಕೆ ಹತ್ತಿರವಿದ್ದರೆ ಚೆನ್ನ. ಊಹೆಯನ್ನೇ ವಾಸ್ತವವೆಂದು ವಾದಿಸಿದರೆ ನಿಮ್ಮ ಅನಿಸಿಕೆಗಳಿಗೆ ಸಿಗುವ ಪ್ರತಿಕ್ರಿಯೆಗಳೂ ಯದ್ವಾತದ್ವಾ ಇರುತ್ತವೆಂಬುದನ್ನು ನೆನಪಿಟ್ಟುಕೊಳ್ಳಿ.
            ಮತ್ತೊಂದು ಮುಖ್ಯ ವಿಷಯ. ಚರ್ಚೆಯಲ್ಲಿ ನಿಮ್ಮ ಪೂರ್ವಾಗ್ರಹಗಳನ್ನು ಮುಂದೆ ತರಬೇಡಿ. ಪ್ರತಿಯೊಂದು ಚರ್ಚೆಯೂ ಹೊಸ ಚರ್ಚೆಯೇ.
            ಉದಾಹರಣೆಗೆ ಗುಜರಾತಿನ ವಿಷಯ ಬಂದಕೂಡಲೇ ಗುಜರಾತಿನ ಗಲಭೆಗಳನ್ನೇ ಮುಂದು ಮಾಡಿ ಚರ್ಚಿಸುವುದು.
            ಈ ರೀತಿ ಮಾಡುವುದರಿಂದ ಚರ್ಚೆಯ ಹಳಿ ತಪ್ಪುತ್ತದೆ. ಗುಜರಾತಿನ ವಿಷಯದಲ್ಲಿ ಅತಿರಂಜಿತವಾಗಿ ಪ್ರಚಾರವಾಗಿರುವ “ಗಲಭೆ”ಗಿಂತ ಭಿನ್ನವಾದ ಮುಖಗಳೂ, ಅಭಿಪ್ರಾಯಗಳೂ ಇವೆ. ಯಾವುದೋ ಉದ್ದೇಶದಿಂದ ಪ್ರಚಾರಗೊಂಡಿರುವ ವಿಚಾರವನ್ನೇ ಸತ್ಯವೆಂದು ನಂಬುತ್ತಾ ಹೋದರೆ, ಸತ್ಯ ಮತ್ತು ನಮ್ಮ ಮನಸ್ಸಿನ ನಡುವೆ ದೊಡ್ಡ ಕಂದಕವೇ ನಿರ್ಮಾಣವಾಗಿಬಿಡುತ್ತದೆ.

            ನಿಮಗೆ ನಿಮ್ಮ ವಿಚಾರವು ಗೆಲ್ಲಬೇಕೋ ಅಥವಾ ಸತ್ಯಾನ್ವೇಷಣೆ ಮುಖ್ಯವೋ ಎಂದು ಒಮ್ಮೆ ನಿಮ್ಮ ಮನಸ್ಸನ್ನು ಕೇಳಿಕೊಂಡು ನೋಡಿ.

            ಉತ್ತರ
          • SSNK's avatar
            ಮಾರ್ಚ್ 19 2013

            ಮಹಾತ್ಮಾ ಗಾಂಧಿಯವರು ೧೩ನೇ ಜನವರಿ ೧೯೪೮ರಂದು ಉಪವಾಸ ಸತ್ಯಾಗ್ರಹ ಕೈಗೊಂಡರು.
            ಆ ಹೊತ್ತಿಗೆ ಸ್ವರಾಜ್ಯ ಪ್ರಾಪ್ತವಾಗಿ ಐದು ತಿಂಗಳು ಕಳೆದಿದ್ದವು.
            ಹಾಗಿದ್ದರೆ, ಅವರು ಯಾತಕ್ಕಾಗಿ ಮತ್ತೊಮ್ಮೆ ಸತ್ಯಾಗ್ರಹ ಪ್ರಾರಂಭಿಸಿದರು? ಅವರ ಸತ್ಯಾಗ್ರಹ ಯಾರ ಮೇಲೆ ಒತ್ತಡ ಹಾಕಲು?
            ಅದನ್ನು ತಿಳಿಯಲು ಇಲ್ಲಿ ಓದಿ: http://books.google.co.in/books?id=NurqxSttqjoC&pg=PA47&lpg=PA47&dq=mahatma+gandhi+last+fast+%2B+55+crore&source=bl&ots=TNdqNKSyRy&sig=LC4W_0OHnDpCiECrHEp2_mFmUVM&hl=en&sa=X&ei=SKBIUbXOA4SErQe844HQCA&ved=0CFwQ6AEwBg#v=onepage&q=mahatma%20gandhi%20last%20fast%20%2B%2055%20crore&f=false

            ಆಗ ರಾಜ್ಯವಾಳುತ್ತಿದ್ದುದು ನೆಹರೂ ನೇತೃತ್ವದ ಕಾಂಗ್ರೆಸ್ ಸರಕಾರ.
            ಮಹಾತ್ಮಾ ಗಾಂಧಿಯವರು ಸರಕಾರದ ಯಾವ ಹುದ್ದೆಯನ್ನೂ ಪಡೆಯಲಿಲ್ಲ. ಅವರೆಂದೂ ಚುನಾವಣೆಯಲ್ಲಿ ನಿಲ್ಲಲಿಲ್ಲ.
            ಆದರೆ, ಸರಕಾರ ತಮ್ಮ ಮಾತನ್ನು ಕೇಳುತ್ತಿಲ್ಲ ಎನಿಸಿದಾಗ ಸತ್ಯಾಗ್ರಹ ಕೈಗೊಳ್ಳುತ್ತಿದ್ದರು. ಬ್ರಿಟಿಷರಿದ್ದಾಗ, ಅವರ ಮೇಲೆ ಒತ್ತಡ ಹಾಕಲು ಸತ್ಯಾಗ್ರಹ.
            ಅವರು ಹೋದನಂತರ, ನಮ್ಮದೇ ಸರಕಾರದ ಮೇಲೆ ಒತ್ತಡ ಹಾಕಲು ಸತ್ಯಾಗ್ರಹ.

            ಉತ್ತರ
            • Ananda Prasad's avatar
              Ananda Prasad
              ಮಾರ್ಚ್ 20 2013

              ಗಾಂಧೀಜಿಯವರ ಸತ್ಯಾಗ್ರಹವನ್ನೂ ಸಂಘದ ಸರ್ಕಾರದ ಮೇಲಿನ ಹಸ್ತಕ್ಷೇಪವನ್ನೂ ಒಂದೇ ಮಾನದಂಡದಿಂದ ನೋಡುವುದು ಸಮಂಜಸವಲ್ಲ. ಗಾಂಧೀಜಿ ಹೆಸರೇ ಹೇಳುವಂತೆ ಸತ್ಯ ಹಾಗೂ ನ್ಯಾಯಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದದ್ದು. ಸಂಘದ ಮುಖಂಡರು ಆ ರೀತಿ ಸತ್ಯ ಹಾಗೂ ನ್ಯಾಯಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುವುದು ಕಂಡು ಬಂದಿಲ್ಲ ಬದಲಿಗೆ ಅವರು ಬಿಜೆಪಿ ಸರ್ಕಾರದ ಆಡಳಿತ ಯಂತ್ರದ ಮೇಲೆ ಹಿಡಿತ ಸಾಧಿಸಿ ಸಂವಿಧಾನಬಾಹಿರವಾಗಿ ವರ್ತಿಸುತ್ತಿದ್ದಾರೆ ಹಾಗೂ ಕಾನೂನಿಗಿಂತ, ಸಂವಿಧಾನಕ್ಕಿಂತ ತಾವು ಮೇಲೆ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಗಾಂಧೀಜಿಯವರು ಪ್ರಜಾಪ್ರಭುತ್ವ ಭಾರತದಲ್ಲಿ ಬದುಕಿರಲಿಲ್ಲ. ಭಾರತದ ಸಂವಿಧಾನ ಅಸ್ತಿತ್ವಕ್ಕೆ ಬರುವ ೧೯೫೦ರ ವೇಳೆಗೆ ಗಾಂಧೀಜಿ ಬದುಕಿರಲಿಲ್ಲ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವನ್ನೂ ಮೀರಿ ಅವರು ತನ್ನ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಹೇಳಲು ಅವಕಾಶವೇ ಇಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ದೀರ್ಘಕಾಲ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಹಿರಿಯ ಎಂಬ ನೆಲೆಯಲ್ಲಿ ಗಾಂಧೀಜಿ ಸತ್ಯ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿದ್ದರೆ ಅದು ತಪ್ಪೆಂದು ಹೇಳಲಾಗದು. ಏಕೆಂದರೆ ಅವರು ದೇಶಕ್ಕಾಗಿ ತನ್ನ ವ್ಯೆಯಕ್ತಿಕ ಜೀವನವನ್ನು ತ್ಯಜಿಸಿ ಹೋರಾಡಿದ್ದಾರೆ.

              ಉತ್ತರ
              • SSNK's avatar
                ಮಾರ್ಚ್ 20 2013

                ಗಾಂಧೀಜಿ ಸರಕಾರದ ಮೇಲೆ ಸವಾರಿ ಮಾಡಲಿಲ್ಲ ಎಂದು ಮೊದಲಿಗೆ ಹೇಳಿದಿರಿ.
                ಗಾಂಧೀಜಿಯವರ ಕೊನೆಯ ಉಪವಾಸ ಸತ್ಯಾಗ್ರಹ ನಡೆದದ್ದು ಸ್ವತಂತ್ರ ಭಾರತದ ಸರಕಾರದ ವಿರುದ್ಧ ಎಂಬ ಸತ್ಯ ತಿಳಿಸಿದಾಗ, ನಿಮ್ಮ ವಾದವೇ ಬದಲಾಗಿಬಿಟ್ಟಿತು!
                ಈಗ ಹೇಳುತ್ತಿರುವಿರಿ, ಮಹಾತ್ಮಾ ಗಾಂಧಿಯವರು ಮಾಡಿದ್ದರೆ ಅದು ಸರಿಯೇ ಇರಬೇಕು!!

                ಗಾಂಧಿಯವರ ಕುರಿತಾಗಿ ಗೌರವ ನನಗೂ ಇದೆ. ಅವರ “ಸತ್ಯದೊಡನೆ ಒಂದು ಪ್ರಯೋಗ”ವನ್ನು ನಾನೂ ಓದಿಕೊಂಡಿದ್ದೇನೆ.
                ಹಾಗೆಂದ ಮಾತ್ರಕ್ಕೆ ಅವರು ಮಾಡಿದ್ದೆಲ್ಲವನ್ನೂ ಕಣ್ಮುಚ್ಚಿಕೊಂಡು ಒಪ್ಪಿಬಿಡುವಷ್ಟು “ಮೂಢನಂಬಿಕೆ” ನನಗಿಲ್ಲ.
                ಗಾಂಧೀಜಿಯವರು ಮಾಡಿದ ಅನೇಕ ನಿರ್ಧಾರಗಳನ್ನು ಅನೇಕರು ಒಪ್ಪಿಲ್ಲ.

                ಉದಾಹರಣೆಗೆ, ಕಾಂಗ್ರೆಸ್ಸಿನ ಚುನಾವಣೆಯಲ್ಲಿ ಗಾಂಧೀಜಿಯವರ ಅಬ್ಯರ್ಥಿ ಸುಭಾಷ್ ಚಂದ್ರ ಬೋಸರ ವಿರುದ್ಧ ಸೋತಾಗ, ಪಟ್ಟು ಹಿಡಿದು ಸುಭಾಷರೇ ಕಾಂಗ್ರೆಸ್ ಬಿಡುವಂತೆ ಮಾಡಿದ್ದು ಇದೇ ಗಾಂಧೀಜಿ. ಇದು ಯಾವ ರೀತಿಯ ಪ್ರಜಾಪ್ರಭುತ್ವ? ಇದು ಯಾವ ರೀತಿಯ ಸತ್ಯಸಂಧತೆ? ಕಾಂಗ್ರೆಸ್ಸಿನ ಮತದಾರರು ಮತ ನೀಡುವ ಆವಶ್ಯಕತೆಯಾದರೂ ಏನು? ಅವರ ಮತಕ್ಕೆ ಬೆಲೆಯೇ ಇಲ್ಲವೇ?
                ಅದೇ ರೀತಿ ೧೯೪೬ರ ಚುನಾವಣೆಯಲ್ಲಿ ಸರ್ದಾರ್ ಪಟೇಲರು ಗೆಲ್ಲುವರು, ನೆಹರೂ ಸೋಲುವರು ಎಂದು ತಿಳಿದಾಗ, ಸರ್ದಾರ್ ಪಟೇಲರು ತಮ್ಮ ಉಮೇದುವಾರಿಕೆಯನ್ನೇ ವಾಪಸ್ ಪಡೆಯುವಂತೆ ಗಾಂಧೀಜಿ ಪಟ್ಟು ಹಿಡಿದು ಸಾಧಿಸಿದರು! ಇವರಿಗೆ ಚುನಾವಣೆ, ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ನಂಬಿಕೆಯಿದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ ಅಲ್ಲವೇ?

                ಗಾಂಧೀಜಿಯವರು ಮಾಡಿದ್ದೆಲ್ಲವನ್ನೂ, ತೆಗೆದುಕೊಂಡ ನಿರ್ಧಾರಗಳೆಲ್ಲವನ್ನೂ ಕಣ್ಮುಚ್ಚಿ ಒಪ್ಪಬೇಕಿಲ್ಲವೆಂದು ತಿಳಿಸುವುದಕ್ಕೆ ಒಂದೆರಡು ಉದಾಹರಣೆ ನೀಡಿದೆನಷ್ಟೇ.

                ಇನ್ನು ನಿಮ್ಮ ವಾದದ ರೀತಿ ಕುರಿತಾಗಿ ಕಡೆಯ ಮಾತು.
                ನಿಮ್ಮ ಅನಿಸಿಕೆಗಳನ್ನು ತಿಳಿಸಲು ನೀವು ಸ್ವತಂತ್ರರು. ನಿಮ್ಮದೇ ಸ್ವತಂತ್ರ ಅಭಿಪ್ರಾಯಗಳನ್ನೂ ನೀವು ರೂಪಿಸಿಕೊಳ್ಳಿರಿ, ಅದಕ್ಕೆ ಯಾರ ಅಭ್ಯಂತರವೂ ಇರುವುದಿಲ್ಲ.
                ಆದರೆ, ಇದೆಲ್ಲವೂ ಸತ್ಯದ ಆಧಾರದ ಮೇಲೆ ಇರಲಿ. ನಾನು ಇಲ್ಲಿಯವರೆಗೆ ನಂಬಿಕೊಂಡಿರುವುದು ಸತ್ಯವಲ್ಲ ಎಂದು ತಿಳಿದಾಗ, ಅಭಿಪ್ರಾಯವನ್ನು ತಿದ್ದಿಕೊಂಡರೆ ಅದನ್ನು ಸೋಲೆಂದು ತಿಳಿಯಬೇಡಿ. ಇತಿಹಾಸದ ಚರ್ಚೆ ನಡೆದಾಗ, ವ್ಯಕ್ತಿನಿಷ್ಠೆಯನ್ನು ಪಕ್ಕಕ್ಕಿಟ್ಟು ವಸ್ತುನಿಷ್ಠ ವಿಶ್ಲೇಷಣೆ ನಡೆಸಿರಿ. ತಪ್ಪು ಮಾಡಿದ್ದು ಗಾಂಧಿಯೇ ಇರಬಹುದು, ಸುಭಾಷರೇ ಇರಬಹುದು, ಶ್ರೀರಾಮಚಂದ್ರನೇ ಇರಬಹುದು. ತಪ್ಪು ಸಾಭೀತಾದಾಗ, ಅದನ್ನು ತಪ್ಪೆಂದು ಒಪ್ಪುವ ಧೈರ್ಯ ತೋರಿಸಿ.

                ಕೇವಲ ಮೊಂಡುವಾದದಿಂದ ನೀವೇನೂ ಸಾಧಿಸುವುದಿಲ್ಲ, ಎದುರಿಗಿರುವವರಿಗೂ ಸಮಯ ವ್ಯರ್ಥ. ಇಲ್ಲಿಯವರೆಗೆ ನಾನಿಲ್ಲಿ ಚರ್ಚಿಸಿರುವುದು ನನ್ನ ವಾದ ಗೆಲ್ಲಲೆಂದೇನೂ ಅಲ್ಲ. ಸತ್ಯವನ್ನು ತೋರಿಸಲಷ್ಟೇ ನನ್ನ ಪ್ರಯತ್ನ. ಸತ್ಯಕ್ಕೆ ಅನೇಕ ಮುಖಗಳಿವೆ ಎಂಬುದು ಸದಾ ತಿಳಿದಿರಲಿ ಮತ್ತು ನಮಗೆ ಕೇವಲ ಸತ್ಯದ ಒಂದು ಪಾರ್ಶ್ವ ಮಾತ್ರ ಕಾಣುತ್ತಿರಬಹುದು. ಆದರೆ, ಅದನ್ನೇ ಸತ್ಯವೆಂದು ವಾದಿಸಿದರೆ ಅದು ನನ್ನ ಮೂರ್ಖತನವನ್ನಷ್ಟೇ ಬಯಲು ಮಾಡುತ್ತದೆ.

                ಇನ್ನು ನಿಮ್ಮಿಷ್ಟ. ನಿಮಗೆ ಸತ್ಯ ಬೇಕೋ-ಬೇಡವೋ ಎನ್ನುವ ಆಯ್ಕೆ ನಿಮಗೆ ಬಿಟ್ಟದ್ದು.

                ಉತ್ತರ
                • Ananda Prasad's avatar
                  Ananda Prasad
                  ಮಾರ್ಚ್ 20 2013

                  ಗಾಂಧೀಜಿ ಸತ್ಯ ಹಾಗೂ ಅಹಿಂಸೆಯಲ್ಲಿ ನಂಬಿಕೆ ಇಟ್ಟು ಹೋರಾಡುತ್ತಿದ್ದರು. ಸುಭಾಷ್ ಚಂದ್ರ ಬೋಸರು ಇದಕ್ಕೆದುರಾಗಿ ಸಶಸ್ತ್ರ ಹೋರಾಟದ ಹಾದಿಯೆಡೆಗೆ ತೀವ್ರ ಒಲವು ಹೊಂದಿದ್ದರು. ಹೀಗಾಗಿ ಗಾಂಧೀಜಿ ನಂಬಿಕೊಂಡು ಮುನ್ನಡೆಸುತ್ತಿದ್ದ ಹೋರಾಟಕ್ಕೆ ಸುಭಾಷರು ಅಧ್ಯಕ್ಷರಾಗಿ ಬಂದರೆ ಅಹಿಂಸಾತ್ಮಕ ಹೋರಾಟ ಸಂಪೂರ್ಣ ದಾರಿ ತಪ್ಪುತ್ತದೆ ಎಂದು ಗಾಂಧೀಜಿ ಹಾಗೆ ನಡೆದುಕೊಂಡಿರಬಹುದು. ಇನ್ನು ಪಟೇಲರ ವಿಷಯದಲ್ಲಿಯೂ ಗಾಂಧೀಜಿ ಹಾಗೆ ನಡೆದುಕೊಳ್ಳಲು ಬಲವಾದ ಕಾರಣ ಇರಬಹುದು. ಅದು ಏನು ಎಂದು ಕೇಳಲು ಗಾಂಧೀಜಿ ಈಗ ಇಲ್ಲ. ಆದರೂ ಊಹೆಯ ಮೇಲೆ ಹೇಳುವುದಾದರೆ ಪಟೇಲರು ಉದಾರ ನಿಲುವಿನ ವ್ಯಕ್ತಿತ್ವ ಹೊಂದಿರಲಿಲ್ಲ, ಹೀಗಾಗಿ ಉದಾರ ವ್ಯಕ್ತಿತ್ವದ ನೆಹರೂ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ ಸಾಧ್ಯತೆ ಇದೆ. ರಾಜಕೀಯ ಸಂತನ ವ್ಯಕ್ತಿತ್ವ ಹೊಂದಿದ್ದ ಗಾಂಧೀಜಿ ಬಲವಾದ ಕಾರಣ ಇಲ್ಲದೆ ಹೀಗೆ ಮಾಡಿರುವ ಸಾಧ್ಯತೆ ಇಲ್ಲ ಎಂದು ನನ್ನ ಭಾವನೆ.ವಾದಕ್ಕಾಗಿ ವಾದ ಮಾಡುವ ಉದ್ಧೇಶ ನನಗಂತೂ ಇಲ್ಲ. ನೀವುಗಳು ವಿಜ್ಞಾನದ ಆವಿಷ್ಕಾರವಾದ ಅಂತರ್ಜಾಲವನ್ನು ಹಿಂದುತ್ವದ ಹಾಗೂ ಸಂಘದ ಸಮರ್ಥನೆಗೆ ಬಳಸುವಾಗ ಸತ್ಯದ ಅನಾವರಣಕ್ಕಾಗಿ ನಾನು ಮುಂದೆ ಬರಲೇಬೇಕಾಯಿತು. ವಿಜ್ಞಾನದ ಆವಿಷ್ಕಾರವಾದ ಅಂತರ್ಜಾಲವನ್ನು ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ ಬಳಸಬೇಕಾದುದು ಅತೀ ಅಗತ್ಯ.

                  ಉತ್ತರ
                  • SSNK's avatar
                    ಮಾರ್ಚ್ 20 2013

                    ನಿಮಗಿಷ್ಟ ಬಂದ ರೀತಿಯಲ್ಲಿ ಗಾಂಧೀಜಿಯವರ ನಿರ್ಧಾರಗಳನ್ನು ನೀವು ಸಮರ್ಥಿಸಬಹುದು.
                    ನಿಮಗೆ ಗಾಂಧಿಯವರ ಕುರಿತಾಗಿ ಬಲವಾದ ನಂಬಿಕೆಯಿರುವುದರಿಂದ ಅವರ ನಿರ್ಧಾರಗಳು ಸರಿಯೆಂದು ಭಾವಿಸಿದ್ದೀರಿ.
                    ಅದಕ್ಕಾಗಿಯೇ ನಾನು ಹೇಳಿದ್ದು “ಇತಿಹಾಸದ ಅಧ್ಯಯನ ವಿಶ್ಲೇಷಣೆ ನಡೆಸುವಾಗ ವ್ಯಕ್ತಿನಿಷ್ಠೆ ಅಡ್ಡಬರಬಾರದು. ವ್ಯಕ್ತಿನಿಷ್ಠೆ ಅಡ್ಡಬಂದಾಗ ವಸ್ತುನಿಷ್ಠತೆ ಮಾಯವಾಗುತ್ತದೆ”.

                    ಸುಭಾಷರ ವಿಷಯಕ್ಕೆ ಸಂಬಂಧಿಸಿಂತೆ, ನಿಮ್ಮ ಅನಿಸಿಕೆ ಸತ್ಯದೂರವಾಗಿದೆ.
                    ಸುಭಾಷರು ಸಶಸ್ತ್ರ ಕ್ರಾಂತಿಗೆ ಕೈಹಾಕಿದ್ದು ಕಾಂಗ್ರೆಸ್ ಬಿಟ್ಟ ನಂತರದಲ್ಲಿಯೇ.
                    ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಗೆದ್ದಾಗ, ಅವರು ಕಾಂಗ್ರೆಸ್ಸಿನವರೇ ಆಗಿದ್ದರು, ಸಶಸ್ತ್ರ ಕ್ರಾಂತಿಗೆ ಇಳಿದಿರಲಿಲ್ಲ.

                    ಆದರೆ, ಮುಖ್ಯ ವಿಷಯ ಅದಲ್ಲ. ಚುನಾವಣೆ ಇರುವುದು, ಪ್ರಜಾಭಿಮತ ಇರುವುದು, ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ನೀಡಲು.
                    ನನ್ನ ಅಭಿಪ್ರಾಯವೇ ಸರಿ, ಬೇರೆಲ್ಲರ ಅಭಿಪ್ರಾಯಕ್ಕೆ ಮನ್ನಣೆಯಿಲ್ಲ ಅನ್ನುವುದು, ಸರ್ವಾಧಿಕಾರಿ ಮನೋಭಾವದ ಧ್ಯೋತಕ.
                    ಸುಭಾಷರ, ಪಟೇಲರ ಚಿಂತನೆಗಳು ಎನೇ ಇರಲಿ, ಗಾಂಧೀಜಿಯವರೊಡನೆ ಯಾವುದೇ ತಾತ್ವಿಕ ಭಿನ್ನಾಭಿಪ್ರಾಯಗಳಿರಲಿ, ಚುನಾವಣೆಯಲ್ಲಿ ಅವರು ಗೆದ್ದರೆಂದರೆ, ಕಾಂಗ್ರೆಸ್ಸಿನಲ್ಲಿರುವ ಹೆಚ್ಚಿನ ಸದಸ್ಯರಿಗೆ ಗಾಂಧೀಜಿಯವರ ಅಭಿಪ್ರಾಯ ಒಪ್ಪಿಗೆಯಿಲ್ಲ; ಮತ್ತು ಸುಭಾಷರ/ಪಟೇಲರ ಅಭಿಪ್ರಾಯ ಒಪ್ಪಿಗೆಯಿದೆ ಎಂದ ಹಾಗಾಯಿತಲ್ಲವೇ?
                    ಗಾಂಧೀಜಿಯವರು ಚುನಾವಣೆಯಲ್ಲಿ ಗೆದ್ದ ಸುಭಾಷರನ್ನು ಪಕ್ಕಕ್ಕೆ ಸರಿಸಿದ್ದು, ಚುನಾವಣೆಯಲ್ಲಿ ಗೆಲ್ಲುವರೆಂಬ ಕಾರಣಕ್ಕೆ ಪಟೇಲರ ಮೇಲೆ ಒತ್ತಡ ತಂದು ಅವರು ಹಿಂದೆಗೆಯುವಂತೆ ಮಾಡಿದ್ದು, ಬಹುಮತಕ್ಕೆ ಮನ್ನಣೆಯಿಲ್ಲ ಎಂದರ್ಥವಲ್ಲವೇ?

                    ಹಾಗೆ ಒಬ್ಬರ ಅಭಿಪ್ರಾಯಕ್ಕೇ ಮನ್ನಣೆ ಎನ್ನುವುದಾದಲ್ಲಿ ಚುನಾವಣೆಯ ನಾಟಕ ಏತಕ್ಕೆ!?

                    ಮತ್ತು ನೆನಪಿರಲಿ – ಗಾಂಧೀಜಿಯವರು ಕಾಂಗ್ರೆಸ್ಸಿನಲ್ಲಿ ಯಾವುದೇ ಅಧಿಕಾರದ ಅಥವಾ ಜವಾಬುದಾರಿಯ ಹುದ್ದೆಯಲ್ಲಿರಲಿಲ್ಲ.
                    ಆದರೆ, ಕಾಂಗ್ರೆಸ್ಸಿನಲ್ಲೆ ತಮ್ಮ ಮಾತಿನಂತೆಯೇ ನಡೆಯಬೇಕೆಂದು ಸದಾ ಒತ್ತಾಯಿಸುತ್ತಿದ್ದರು. ಅದಕ್ಕಾಗಿ ಪಟ್ಟು ಹಿಡಿಯುತ್ತಿದ್ದರು, ಉಪವಾಸ ಕುಳಿತುಕೊಳ್ಳುತ್ತಿದ್ದರು.

                    ನೀವು ಕೇವಲ ಊಹೆಯ ಮೇಲೆ ಗಾಂಧೀಜಿಯವರನ್ನು ಸಮರ್ಥಿಸಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದವೆನಿಸುತ್ತಿದೆ.
                    ಇತಿಹಾಸದ ಬೆಳಕಿನಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿರುವ ಸತ್ಯವನ್ನೊಪ್ಪಲು ನಿಮಗೆಷ್ಟು ಕಷ್ತವೆನಿಸುತ್ತಿದೆ ನೋಡಿ!?
                    ಏಕೆಂದರೆ, ಇತಿಹಾಸದ ಅನೇಕ ಸಂಗತಿಗಳನ್ನು ಇತಿಹಾಸಾಧ್ಯಯನ ನಡೆಸದೆಯೇ ನೀವು ಸತ್ಯವೆಂದು ನಂಬಿಬಿಟ್ಟಿರುವಿರಿ. ಆ ಪಾಠಗಳನ್ನು ಇತಿಹಾಸದ ಪಠ್ಯಪುಸ್ತಕಗಳ ಮೂಲಕ ಎಲ್ಲರ ತಲೆಗೆ ಸ್ವಾತಂತ್ರ್ಯಾನಂತರದಲ್ಲಿ ಬಂದ ನಮ್ಮ ಸರಕಾರಗಳು ಯಶಸ್ವಿಯಾಗಿ ತುಂಬಿಬಿಟ್ಟಿವೆ. ಆದರೆ, ನಾವು ಅನೇಕ ಮಿಥ್ಯಗಳನ್ನೇ ಸತ್ಯವೆಂದು ನಂಬಿರುವೆವು ಎಂಬುದು ಇತಿಹಾಸದ ಅಧ್ಯಯನ ನಡೆಸಿದಾಗ ತಿಳಿಯುತ್ತದೆ.

                    ದಯವಿಟ್ಟು ಊಹೆಯ ಮೇಲೆ ನಿಮ್ಮ ನಿರ್ಧಾರಗಳನ್ನು ಅವಲಂಭಿಸದೆ, ಅಧ್ಯಯನದಿಂದ ಗೋಚರವಾದ ಸತ್ಯದ ಮೇಲೆ ಅವಲಂಭಿಸಿ. ಆಗ ನಿಮ್ಮ ಮಾತು-ಬರಹಗಳಲ್ಲೂ ಆತ್ಮವಿಶ್ವಾಸ ಹೊಮ್ಮುತ್ತದೆ.

                    ಇತಿಹಾಸ = ಇತಿ + ಹ + ಅಸ
                    ಅಂದರೆ, “ಅದು ಹೀಗೆ ಇತ್ತು” ಎಂದು ತಿಳಿಸುವುದೇ ಇತಿಹಾಸ.

                    ಉತ್ತರ
                    • Ananda Prasad's avatar
                      Ananda Prasad
                      ಮಾರ್ಚ್ 20 2013

                      ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿಯವರು ಯಾಕೆ ಹಾಗೆ ವರ್ತಿಸುತ್ತಿದ್ದರೆಂಬುದು ಸ್ಪಷ್ಟವಾಗಿ ಈಗ ಗೊತ್ತಾಗುವುದಿಲ್ಲ. ಆದರೂ ಉಳಿದವರು ಗಾಂಧೀಜಿಯ ಮಾತಿಗೆ ಮನ್ನಣೆ ಕೊಡಬೇಕೆಂದೇನೂ ಇರಲಿಲ್ಲ. ಬಹುಮತ ಇದ್ದರೆ ಗಾಂಧೀಜಿಯ ಮಾತನ್ನು ಕಡೆಗಣಿಸಿ ಹೋರಾಟವನ್ನು ಮುಂದಕ್ಕೆ ಒಯ್ಯಬಹುದಾಗಿತ್ತು. ಪಟೇಲರಿಗೆ ಬಹುಮತ ಇದ್ದರೆ ಪಟೇಲರು ಅಧ್ಯಕ್ಷರಾಗಬಹುದಾಗಿತ್ತು. ಅವರು ಯಾಕೆ ಹಿಂದೆ ಸರಿಯಬೇಕಾಗಿತ್ತು? ನನಗೆ ಬಹುಮತ ಇದೆ ಎಂದು ಗಟ್ಟಿಯಾಗಿ ಕುಳಿತುಕೊಳ್ಳಬೇಕಾಗಿತ್ತು. ನಾನು ಗಾಂಧೀಜಿಯವರ ಪರಮಭಕ್ತನೇನೂ ಅಲ್ಲ. ಗಾಂಧೀಜಿವರ ಕೆಲವು ವಿಚಾರಗಳನ್ನು ನಾನು ಒಪ್ಪುವುದೂ ಇಲ್ಲ. ಆದರೂ ಗಾಂಧೀಜಿಯವರಲ್ಲಿ ಒಬ್ಬ ಉದಾರ ಮನೋಭಾವದ ರಾಜನೀತಿಜ್ಞ ಇದ್ದ ಕಾರಣ ನಾನು ಅವರನ್ನು ಗೌರವಿಸುತ್ತೇನೆ

                  • ಬಸವಯ್ಯ's avatar
                    ಬಸವಯ್ಯ
                    ಮಾರ್ಚ್ 21 2013

                    “ನೀವುಗಳು ವಿಜ್ಞಾನದ ಆವಿಷ್ಕಾರವಾದ ಅಂತರ್ಜಾಲವನ್ನು ಹಿಂದುತ್ವದ ಹಾಗೂ ಸಂಘದ ಸಮರ್ಥನೆಗೆ ಬಳಸುವಾಗ ಸತ್ಯದ ಅನಾವರಣಕ್ಕಾಗಿ ನಾನು ಮುಂದೆ ಬರಲೇಬೇಕಾಯಿತು. ವಿಜ್ಞಾನದ ಆವಿಷ್ಕಾರವಾದ ಅಂತರ್ಜಾಲವನ್ನು ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ ಬಳಸಬೇಕಾದುದು ಅತೀ ಅಗತ್ಯ.”

                    ಒಹೊ ಹೌದಾ? ನಕ್ಸಲಿಸಂ ತಮಟೆ ಬಡೆಯುವುದು, ಸಮರ್ಥಿಸುವುದು ವೈಜ್ಞಾನಿಕ ಮನೋಭಾವದಲ್ಲಿ ಬರುತ್ತಾ? ಗೊತ್ತಿರಲಿಲ್ಲ!
                    ಕುಮಾರ..ಧನ್ಯವಾದಗಳು ನಿಮಗೆ. ಉತ್ತಮ ವಿಷಯ ಮಂಡನೆಗೆ ಮತ್ತು ಈ ‘ಪ್ರಜ್ಞಾವಂತ’ರ ಜೊತೆ ವಾದ ಮಾಡುವ ತಾಳ್ಮೆಗೆ 🙂

                    ಉತ್ತರ
                    • Ananda Prasad's avatar
                      Ananda Prasad
                      ಮಾರ್ಚ್ 21 2013

                      ನಕ್ಸಲಿಸಂ ಪರ ತಮಟೆ ಬಡಿಯುವುದು, ಸಮರ್ಥಿಸುವ ಕೆಲಸವನ್ನು ನಾನು ಮಾಡಿಲ್ಲ. ಹೀಗಿರುವಾಗ ಇಂಥ ಕುತ್ಸಿತ ಪ್ರತಿಕ್ರಿಯೆಯ ಅಗತ್ಯ ಇರಲಿಲ್ಲ. ಇಂಥ ಕುತ್ಸಿತ ಪ್ರತಿಕ್ರಿಯೆಯಿಂದ ನೀವು ಸಾಧಿಸುವುದಾದರೂ ಏನು?

                    • ಬಸವಯ್ಯ's avatar
                      ಬಸವಯ್ಯ
                      ಮಾರ್ಚ್ 21 2013

                      ನಾವು ಮಾತಾಡಿದ್ರೆ ಕುತ್ಸಿತ..ನೀವು ಮಾತಾನಾಡಿದ್ರೆ ಅದು ಜನಪರ, ಸಮಾಜಪರ ಕಾಳಜಿ!. ಯಾಕೆ ಸ್ವಾಮಿ ಹೀಗೆ?. ಇಲ್ಲಿ ಹೇಗೆ ‘ಸತ್ಯ’ದ ಅನಾವರಣಕ್ಕಾಗಿ ನುಗ್ಗಿ ಬಂದಿದ್ದೀರೊ, ಹಾಗೇಯೇ ನಿಮ್ಮ ಸ್ನೇಹಿತರು/ಗುರುಗಳು/ಹಿತೈಷಿಗಳು ನಕ್ಸಲಿಸಂ ತಮಟೆ ಬಡಿಯುವಾಗ, ನಮಗೆ ಬುದ್ಧಿ ಹೇಳಿದಂತೆ, ಸ್ವಲ್ಪ ಅವರಿಗೂ ಹೇಳಬಹುದಲ್ಲ.. ಅಂತರ್ಜಾಲ ಸದ್ಭಳಕೆ ಮಾಡುವ ನಿಮ್ಮ ಉದ್ದೇಶ ಈಡೇರಿಸಬಹುದಲ್ಲ.

                  • ನವೀನ's avatar
                    ನವೀನ
                    ಮಾರ್ಚ್ 21 2013

                    ಯಪ್ಪ! ಆನಂದಣ್ಣ ಇತಿಹಾಸ ಗೊತ್ತಿಲ್ಲಂದ್ರೆ ಸ್ವಲ್ಪ ಸುಮ್ನಿರಪ್ಪ. ಸುಭಾಷ್ ಸಶಸ್ತ್ರ ಹೋರಾಟದಲ್ಲಿ ಒಲವುಳ್ಳವರಾಗಿದ್ದರು ಅಂತ ಗಾಂಧೀಜಿ ತಗಾದೆ ತೆಗೆದಿದ್ದಾ? ನೀವು ಒಪ್ಪಿ ಬಿಡಿ,ಅದನ್ನು ಮಾಡಿಸಿದ್ದು ಗಾಂಧಿಯ ಸರ್ವಾಧಿಕಾರಿ ಮನಸ್ಥಿತಿ.
                    ಇನ್ನು ನಿಮ್ಮ “ಉದಾರ ಮನಸ್ಥಿತಿ’ಯ ನೆಹರೂ ಕೋಕೋ ದ್ವೀಪವನ್ನು ಉದಾರವಾಗಿ ಬಿಟ್ಟುಕೊಟ್ಟಿದ್ದು,ಕಾಶ್ಮೀರಕ್ಕೆ ಕೊಳ್ಳಿಯಿಟ್ಟಿದ್ದು,ಚೀನಿ ಸೈನಿಕರ ಕೈಗೆ ನಮ್ಮ ಅಮಾಯಕ ಸೈನಿಕರನ್ನು “ಉದಾರ”ವಾಗಿ ಒಪ್ಪಿಸಿದ್ದು ತಮಗೆ ಗೊತ್ತಿರಲಿ.
                    ವಿಜ್ಞಾನದ ಆವಿಷ್ಕಾರವಾದ ಅಂತರ್ಜಾಲವನ್ನು ತಾವು ತಮ್ಮ ಪ್ರಗತಿಪರ,ಪ್ರಜ್ನಾವಂತ ಮನಸ್ಥಿತಿಯಿಂದ ಮೈಲಿಗೆ ಮಾಡದಿರಿ

                    ಉತ್ತರ
                    • Ananda Prasad's avatar
                      Ananda Prasad
                      ಮಾರ್ಚ್ 22 2013

                      ಸ್ವಾಮೀ ಬಸವಯ್ಯನವರೇ, ನನಗೆ ಯಾರೂ ನಕ್ಸಲ್ ಬೆಂಬಲಿಸುವ/ತಮಟೆ ಬಡಿಯುವ ಸ್ನೇಹಿತರು/ಗುರುಗಳು/ಹಿತೈಷಿಗಳು ಇಲ್ಲ. ಹೀಗಾಗಿ ನಿಮ್ಮ ಹೇಳಿಕೆ ಕುತ್ಸಿತ ಅಲ್ಲದೆ ಮತ್ತಿನ್ನೇನು? ಇಂಥ ಕುತ್ಸಿತ ಪ್ರತಿಕ್ರಿಯೆಗಳಿಂದ ಏನೂ ಪ್ರಯೋಜನವಿಲ್ಲ ಎಂದಷ್ಟೇ ಹೇಳಬಹುದು.

                    • SSNK's avatar
                      ಮಾರ್ಚ್ 22 2013

                      ನಿಮ್ಮನ್ನು ಏತಕ್ಕಾಗಿ “ನಕ್ಸಲ್ ಬೆಂಬಲಿಗರು” ಎಂದು ಧೂಷಿಸಲಾಗುತ್ತಿದೆ ಎಂದು ವಿವರವಾಗಿ ತಿಳಿಸಿದ್ದೇನೆ.
                      ಇನ್ನೂ ಓದಿಲ್ಲದಿದ್ದರೆ ದಯವಿಟ್ಟು ಓದಿಕೊಳ್ಳಿ.

                      ಒಟ್ಟಿನಲ್ಲಿ ನಿಮ್ಮ ಚರ್ಚೆಯ ಧಾಟಿಯೇ ಯಾರಿಗೂ ಅರ್ಥವಾಗುತ್ತಿಲ್ಲ.
                      ನಿಮ್ಮ ಮನಸ್ಸಿನಲ್ಲಿ ಕೆಲವು ಕಲ್ಪನೆಗಳನ್ನು (ಅವನ್ನು ಭ್ರಮೆಗಳೆಂದೇ ಹೇಳಬೇಕು) ಇಟ್ಟುಕೊಂಡಿರುವಿರಿ. ಅದರ ಸತ್ಯಾಸತ್ಯತೆಯನ್ನು ತಿಳಿಯುವ ಪ್ರಯತ್ನವನ್ನೂ ನಡೆಸಿಲ್ಲ. ಆ ಕಲ್ಪನೆಗಳ ಆಧಾರದ ಮೇಲೆ ಅನಿಸಿಕೆಗಳನ್ನು ಹೆಣೆಯುತ್ತಿರುವಿರಿ.
                      ಅಧ್ಯಯನವಿಲ್ಲದೆ ಇತಿಹಾಸದ ಚರ್ಚೆ, ವಿಮರ್ಶೆ ಸಾಧ್ಯವಿಲ್ಲ. ಇವೆಲ್ಲಕ್ಕೂ ಪ್ರಮುಖವಾದುದೆಂದರೆ, ವಸ್ತುನಿಷ್ಠತೆ ಇರಬೇಕು – ಅದಕ್ಕಾಗಿ ವ್ಯಕ್ತಿನಿಷ್ಠೆಯನ್ನು ತುಳಿದಿಡಬೇಕು. ಅದು ಕೂಡಾ ನಿಮಗೆ ಸಾಧ್ಯವಾಗುತ್ತಿಲ್ಲ.
                      ಇಷ್ಟೆಲ್ಲಾ ಇದ್ದಾಗ್ಯೂ ನೀವು, ನಿಮ್ಮ ವಾದವೇ ಸರಿಯಿರಬೇಕೆಂದು ಪಟ್ಟುಹಿಡಿದು ಕುಳಿತುಬಿಟ್ಟಿರುವಿರಿ.
                      ಇದರಿಂದಾಗಿ, ಅನೇಕರು ಅನೇಕ ರೀತಿಯಲ್ಲಿ ನಿಮ್ಮ ಕುರಿತಾಗಿ ಕಲ್ಪನೆ ಮಾಡಿಕೊಳ್ಳತೊಡಗುವ ಅವಕಾಶ ಲಭಿಸಿದೆ (ನೀವೂ ಕೆಲವು ಕಲ್ಪನೆಗಳನ್ನು ಮಾಡಿಕೊಂಡು ಅನಿಸಿಕೆಗಳನ್ನು ಹರಿಯಬಿಡುತ್ತಿಲ್ಲವೇ, ಹಾಗೆ!).

                      ಇತಿಹಾಸದ ಅಧ್ಯಯನ, ಸಂಶೋಧನೆ, ವಿಶ್ಲೇಷಣೆಯ ಆಸಕ್ತಿಯಿರುವವರಲ್ಲಿ ಇರಬೇಕಾದ ಮೊದಲ ಗುಣ, ಸತ್ಯವನ್ನು ಒಪ್ಪುವುದು – ಆ ಸತ್ಯವು ನಮ್ಮ ನಂಬಿಕೆ, ಅನಿಸಿಕೆಗಳಿಗೆ ವಿರುದ್ಧವಾಗಿದ್ದರೂ ಒಪ್ಪುವ ಎದೆಗಾರಿಕೆ ಇರಬೇಕು.
                      ದಯವಿಟ್ಟು ಅದನ್ನು ರೂಢಿಸಿಕೊಳ್ಳುವ ಯತ್ನವನ್ನು ಆರಂಭಿಸಿ. ನಿಮಗೆ ಒಳ್ಳೆಯದಾಗಲಿ.

                    • Ananda Prasad's avatar
                      Ananda Prasad
                      ಮಾರ್ಚ್ 22 2013

                      ಗಾಂಧೀಜಿಯವರ ‘ಸರ್ವಾಧಿಕಾರಿ ಮನಸ್ಥಿತಿ’ಯ ವಿರುದ್ಧ ಸುಭಾಷರು ಹೋರಾಡಿ ಅವರೇ ಅಧ್ಯಕ್ಷರಾಗಬಹುದಿತ್ತಲ್ಲವೇ? “ನಿಮ್ಮ ನೆಹರೂ” ಎಂಬ ವ್ಯಂಗ್ಯದ ಅಗತ್ಯ ಇಲ್ಲ ಎಂದು ನನ್ನ ಭಾವನೆ. ನೆಹರೂ ಇಡೀ ದೇಶವೇ ಚುನಾವಣೆಗಳಲ್ಲಿ ಭಾರೀ ಬಹುಮತದಿಂದ ಗೆಲ್ಲಿಸುತ್ತಿದ್ದ ನಾಯಕ. ಹೀಗಾಗಿ ಅವರು ಇಡೀ ದೇಶಕ್ಕೆ ಸೇರಿದವರು, ಕೇವಲ “ನಿಮ್ಮ ನೆಹರೂ” ಆಗಿರಲಿಲ್ಲ.

                    • SSNK's avatar
                      ಮಾರ್ಚ್ 22 2013

                      Ananda Prasad> ಗಾಂಧೀಜಿಯವರ ‘ಸರ್ವಾಧಿಕಾರಿ ಮನಸ್ಥಿತಿ’ಯ ವಿರುದ್ಧ ಸುಭಾಷರು ಹೋರಾಡಿ ಅವರೇ ಅಧ್ಯಕ್ಷರಾಗಬಹುದಿತ್ತಲ್ಲವೇ?

                      ನೀವು ಹೇಳಿದ್ದು ಸರಿ – ಸುಭಾಷ್ ಭೋಸರು ಏನೇ ಆದರೂ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯಬಾರದಿತ್ತು.
                      ಆದರೆ, ಕಾಂಗ್ರೆಸ್ಸಿನೊಳಗೆ ಗಾಂಧೀಜಿಯವರನ್ನು ಎದುರು ಹಾಕಿಕೊಂಡು ಅಧಿಕಾರ ನಡೆಸಲಾಗದ ವಾತಾವರಣ ಸೃಷ್ಟಿಯಾಗಿತ್ತು.

                      ಆದರೆ, ಇಷ್ಟಂತೂ ಸತ್ಯ: ಸುಭಾಷ್^ರು ಚುನಾವಣೆಯಲ್ಲಿ ಗೆದ್ದರು; ಅವರ ಎದುರಿಗೆ ಗಾಂಧೀಜಿಯವರ ಅಭ್ಯರ್ಥಿ ಸೋತರು. ಸುಭಾಷರು ಗಾಂಧೀಜಿಯವರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಬಿಟ್ಟರು.

                      ಗಾಂಧೀಜಿ ಏತಕ್ಕಾಗಿ ಒತ್ತಡ ಹಾಕಿದರು, ಏತಕ್ಕೆ ಸುಭಾಷರು ಒತ್ತಡವನ್ನು ಮೆಟ್ಟಿ ನಿಲ್ಲಲಿಲ್ಲ, ಇತ್ಯಾದಿ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿಲ್ಲ ಮತ್ತು ಮೇಲಿನ ಘಟನೆಗಳು ಆ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ.

                      ಆದರೆ, ನಾವು ಯಾವುದೇ ಗೊಂದಲವಿಲ್ಲದೆ ನಿಶ್ಕರ್ಷೆಗೆ ಬರಬಹುದಾದ ಸಂಗತಿಯೆಂದರೆ, ಕಾಂಗ್ರೆಸ್ಸಿನಲ್ಲಿ ಮಹಾತ್ಮಾ ಗಾಂಧಿಯವರ ಅಭಿಪ್ರಾಯಕ್ಕಿಂತಲೂ ಸುಭಾಷರ ಅಭಿಪ್ರಾಯಕ್ಕೆ ಹೆಚ್ಚಿನ ಮನ್ನಣೆ ಲಭಿಸಿತ್ತು.

                    • Ananda Prasad's avatar
                      Ananda Prasad
                      ಮಾರ್ಚ್ 22 2013

                      ಕುಮಾರ್ ಅವರಿಗೆ – ನೀವು ಎಲ್ಲಿಯೂ ನನ್ನನ್ನು ಏಕೆ ನಕ್ಸಲ್ ಬೆಂಬಲಿಗ ಎಂದು ದೂಷಿಲಾಗುತ್ತಿದೆ ಎಂದು ತಿಳಿಸಿರುವುದು ಕಂಡುಬಂದಿಲ್ಲ. ನಾನು ಪುನಃ ಎಲ್ಲವನ್ನೂ ನೋಡಿದೆ. ನಕ್ಸಲ್ ಎಂದರೆ ಯಾರು? ನಕ್ಸಲ್ ಸಿದ್ಧಾಂತ ಇಟ್ಟುಕೊಂಡು ಸಶಸ್ತ್ರ ಹೋರಾಟದ ಮೂಲಕ ಬದಲಾವಣೆ ತರುತ್ತೇವೆ ಎಂದು ಹೋರಾಡುತ್ತಿರುವವರು ನಕ್ಸಲರು. ನಾನು ಎಲ್ಲಿಯೂ ನಕ್ಸಲ್ ಹೋರಾಟವನ್ನಾಗಲೀ, ಸಿದ್ಧಾಂತವನ್ನಾಗಲೀ ಬೆಂಬಲಿಸಿಲ್ಲ. ಹೀಗಾಗಿ ನನ್ನನ್ನು ನಕ್ಸಲ್ ಬೆಂಬಲಿಗ ಎಂದು ದೂಷಿಸುವುದು ಕುತ್ಸಿತ ಬುದ್ಧಿಯಲ್ಲದೆ ಮತ್ತಿನ್ನೇನು?

                    • Kumar's avatar
                      ಮಾರ್ಚ್ 22 2013

                      Ananda Prasad> ನೀವು ಎಲ್ಲಿಯೂ ನನ್ನನ್ನು ಏಕೆ ನಕ್ಸಲ್ ಬೆಂಬಲಿಗ ಎಂದು ದೂಷಿಲಾಗುತ್ತಿದೆ ಎಂದು ತಿಳಿಸಿರುವುದು ಕಂಡುಬಂದಿಲ್ಲ.

                      ದಯವಿಟ್ಟು, ಈ ಕೊಂಡಿಯನ್ನು ಒತ್ತಿ ಮತ್ತು ಅದು ಪೂರ್ತಿ Load ಆಗುವವರೆಗೂ ಕಾಯಿರಿ.
                      ಅದು ಪೂರ್ತಿ Load ಆದಾಗ ಯಾವ commentನಲ್ಲಿ ಇರುತ್ತದೆಯೋ, ಅದೇ ನಾನು ನಿಮ್ಮ ಪ್ರಶ್ನೆಗೆ ಬರೆದಿರುವ ಉತ್ತರ.

                      ಭಾರತದ ಮಾಣಿಕ್ಯ – ಮಾಣಿಕ್ ಸರ್ಕಾರ್

                      ಅಥವಾ, ಈ ಲೇಖನದ ಪುಟದಲ್ಲಿರುವ ಕಡೆಯ comment ನೋಡಿ.

      • ನವೀನ's avatar
        ನವೀನ
        ಮಾರ್ಚ್ 19 2013

        ’ಸಂಘ’ವನ್ನು ವಿರೋಧಿಸುವುದನ್ನೇ ಪ್ರಜ್ನಾವಂತ ಮನಸ್ಥಿತಿ ಅಂದುಕೊಂಡಿರುವವರ ಮನಸ್ಥಿತಿಯನ್ನು ನೋಡಿ ಮರುಕವುಂಟಾಗುತ್ತಿದೆ

        ಉತ್ತರ
        • ನವೀನ's avatar
          ನವೀನ
          ಮಾರ್ಚ್ 22 2013

          ನನ್ನ ಯಾವ ಪ್ರಶ್ನೆಗಳಿಗೂ ಆನಂದ್ ಅವರಿಗೆ ಉತ್ತರಿಸಲಾಗದಿರುವುದು ನೋಡಿ “ನನ್ನ ಪ್ರಜ್ನಾವಂತ” ಮನಸ್ಥಿತಿಗೆ ಕಳವಳವಾಗಿದೆ

          ಉತ್ತರ
          • ಬಸವಯ್ಯ's avatar
            ಬಸವಯ್ಯ
            ಮಾರ್ಚ್ 22 2013

            ಸ್ವಾಮಿ ನವೀನ ಅವ್ರೆ..

            ಸುಮ್ಮ-ಸುಮ್ಮನೇ ಇನ್ನೊಬ್ಬರ ಬಿರುದು-ಬಾವಲಿ ಕಸಿದೊಕೊಳ್ಳೊ ಪ್ರಯತ್ನಕ್ಕೆ ಇಳಿಬೇಡಿ. ಸರಿ ಅನಿಸಲ್ಲ.
            ಈಗ ಹೇಳಿ..
            ೧) ನಿಮಗೆ ಟಿಪೂ ಸುಲ್ತಾನ್ ಮಹಾನ್ ದೇಶ ಭಕ್ತ, ಪರಧರ್ಮ ಸಹಿಷ್ಣು ಅಂತ ಹೇಳಲಿಕ್ಕೆ ಬರುತ್ತಾ?
            ೨) ಈ ದೇಶದಲ್ಲಿ ಎಲ್ಲೂ, ಏನೆ ಗಲಭೆ ನಡೆದರೆ, ಅದರ ಮೂಲವನ್ನು ಸಂಘ ಪರಿವಾರ/ ಹಿಂದೂ ಮೂಲಭೂತವಾದಿಗಳಿಗೆ ಕಾಲ ಬುಡಕ್ಕೆ ತಂದು ನಿಲ್ಲಿಸಲು ಆಗುತ್ತಾ?
            ೩) ನಿಮಗೆ ಮಾಲೆಗಾಂವ್, ಮೆಕ್ಕಾ ಮಸ್ಜಿದ್, ಸಂಜೋತಾ ಎಕ್ಸಪ್ರೆಸ್, ಪ್ರಗ್ಯಾ ಸಿಂಗ್ ಹೆಸರುಗಳನ್ನು ಬಾಯಿಪಾಠ ಮಾಡುವ ಸಾಮರ್ಥ್ಯ ಇದೆಯಾ? ಈ ದೇಶದ ಸಮಸ್ತ ಮೂಲಭೂತವಾದದ ಬೀಜ ಈ ನಾಲ್ಕು ಹೆಸರುಗಳಲ್ಲಿದೆ ಎಂಬ ಕಲ್ಪನೆ ನಿಮಗಿದೆಯೆ?
            ೪) ಕಾಶ್ಮಿರಿ ಪಂಡಿತರು ಅಂದ್ರೆ ‘ಯಾರ್ರಿ ಅವರು? ಅಲೆಮಾರಿ ಜನಾಂಗದವರಾ? ದೆಹಲಿಯಲ್ಲಿ ನೋಡಿದ್ದೆ ಅವರನ್ನು’ ಅನ್ನುವ , ಅದೇ ಸಮಯದಲ್ಲಿ ಅಫ್ಜಲ್ ಗುರುವಿಗೆ ಸರಿಯಾದ ನ್ಯಾಯ ದೊರೆಯಲಿಲ್ಲ ಎಂದು ಕೊರಗುವ ಮಾನವೀಯತೆ ನಿಮ್ಮಲ್ಲಿ ಎಳ್ಳಷ್ಟಾದರೂ ಇದೆಯಾ?
            ನನಗೆ ಗೊತ್ತು..ನಿಮ್ಮ ಹತ್ತಿರ ಇದ್ಯಾವುದೂ ಇಲ್ಲ. ಶುದ್ಧ ಅನಾಗರಿಕ,ಪ್ರಜ್ಞೆ ಇಲ್ಲದ, ಹಿಂದೂ ಮೂಲಭೂತವಾದಿ ಜನ ನೀವು!. ‘ಪ್ರಜ್ಞಾ’ವಂತರ ಪಟ್ಟ ಅಷ್ಟು ಸುಲಭ ಅಲ್ಲ ಸ್ವಾಮಿ.

            ಉತ್ತರ
  9. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಮಾರ್ಚ್ 20 2013

    ಈ ಆನಂದ ಪ್ರಸಾದರು ,ಇನ್ನೊಂದು ಸ್ವಲ್ಪ ಹೊತ್ತಾದರೆ ಏಎ ಅಪ್ಜಲ್ ಗುರು,ಕಸಬ್ ಇತ್ಯಾದಿ ಭಯೋತ್ಪಾದಕರನ್ನೂ ಹೊಗಳಲು ಪ್ರಾರ೦ಬಿಸಿಬಿಡುತ್ತಾರೆ ನೋಡುತ್ತಿರಿ! ಆಮೇಲೆ ನಾನೆಂದೂ ಭಯೋತ್ಪಾದಕತೆಯ ಬೆಮ್ಬಲಿಗನಲ್ಲ ಅಂತಲೂ ಹೇಳುತ್ತಾರೆ! ಅವರಿಗೆ ಅವರೇನು ಅಂತಲೇ ಗೊತ್ತಿಲ್ಲ ಇನ್ನು ಬೇರೆಯವರ ಬಗ್ಗೆಯೆಲ್ಲ ತಮ್ಮ ತೀರ್ಮಾನಗಳನ್ನು ಹೇಳಲು ಹೊರಟಿದ್ದಾರೆ ! ಅಸಂಬದ್ದ ಪ್ರಲಾಪೀ ತರ !!! ನಾನು ಮೊದಲೇ ಹೇಳಿದಂತೆ ಇವರ ಮೂಲಕ್ಕೆ ಬಿಸಿನೀರು ಹಾಕುವ ತನಕ ಅವರು ಇಂತದ್ದನ್ನು ಬಿಡೋದಿಲ್ಲ , ಬಿಸಿನೀರು ಬಿದ್ದ ಮೇಲೆ ಇವರೇ ಇರೋದಿಲ್ಲ !! ಅಂತೂ ಇಂತೂ ಇಂತಹವರಿಗೆ ಬುದ್ದಿ ಬರೋದಿಲ್ಲ!

    ಉತ್ತರ
  10. SSNK's avatar
    ಮಾರ್ಚ್ 21 2013

    Ananda Prasad> ನಕ್ಸಲಿಸಂ ಪರ ತಮಟೆ ಬಡಿಯುವುದು, ಸಮರ್ಥಿಸುವ ಕೆಲಸವನ್ನು ನಾನು ಮಾಡಿಲ್ಲ.

    ಪ್ರಸ್ತುತ ಲೇಖನವು ನಕ್ಸಲ್ ವಿಚಾರಗಳಿಂದ ಆಕರ್ಷಿತರಾದ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ್ದು.
    ನರೇಂದ್ರ ಮೋದಿ, ಗುಜರಾತ್, ಹಿಂದುತ್ವ, ಸಂಘ ಪರಿವಾರ – ಈ ಪದಗಳನ್ನು ಕೇಳಿದ ಕೂಡಲೇ ಚೇಳು ಕುಟುಕಿದಂತೆ ಆಡುವ ನೀವು, ಮೂಲ ಲೇಖನದ ಲೇಖಕರು ನಕ್ಸಲರನ್ನು ಸಮರ್ಥಿಸುವಂತಹ ಲೇಖನವನ್ನು ಬರೆದಾಗ, ಅದರ ವಿರುದ್ಧ ಒಂದೇ ಒಂದು ಮಾತನ್ನೂ ಆಡದಿರುವುದು, “ನಕ್ಸಲಿಸಂ ಪರ ತಮಟೆ ಬಡಿಯುವುದು, ಸಮರ್ಥಿಸುವ ಕೆಲಸ” ಅಲ್ಲದೆ ಮತ್ತಿನ್ನೇನು?

    ನಿಮಗೆ ನಿಜಕ್ಕೂ ಮಾನವತೆಯ ಉದ್ದಾರದ ಉದ್ದೇಶ, ಸತ್ಯವನ್ನು ಎತ್ತ ಹಿಡಿಯುವ ಆಸಕ್ತಿ, ಸಮಾಜದಲ್ಲಿರುವ ನೋವು-ಹಿಂಸೆಗಳನ್ನು ತೊಡೆದು ಹಾಕುವ ತಳಮಳ ಇದ್ದಲ್ಲಿ, ನೀವು ಮೊದಲು ವಿರೋಧಿಸಬೇಕಾದುದು ನಕ್ಸಲಿಸಂ, ಮಾರ್ಕ್ಸಿಸಂ, ಕಮ್ಯುನಿಸಂ ಅನ್ನು.

    ಗುಜರಾತಿನಲ್ಲಿ ಪ್ರತಿಕ್ರಿಯಾತ್ಮಕವಾಗಿ ಭುಗಿಲೆದ್ದ ಹಿಂಸಾಚಾರದ ಕುರಿತು “ನಭೂತೋ” ಎಂಬಂತೆಲ್ಲ ವಿರೋಧಿಸುವ ನೀವು, ನಕ್ಸಲಿಸಂ ಕುರಿತಾಗಿ “ದಿವ್ಯ ಮೌನ” ವಹಿಸುವುದು ಏನನ್ನು ತೋರಿಸುತ್ತದೆ?

    ನಮ್ಮ ದೇಶದಲ್ಲಿ ಕಳೆದ ೬೫ ವರ್ಷಗಳಲ್ಲಿ ನಡೆದಿರುವ ಹಿಂಸಾಚಾರಗಳಲ್ಲಿ ಶೇಕಡಾ ೫೦ಕ್ಕೂ ಹೆಚ್ಚು ಹಿಂಸಾಚಾರಗಳು ನಡೆದಿರುವುದು ನಕ್ಸಲಿಸಂ, ಮಾರ್ಕ್ಸಿಸಂ ಹೆಸರಿನಲ್ಲೇ. ಹಲವು ದಶಕಗಳಿಂದ ಇವರ ಅಟ್ಟಹಾಸ ನಡೆದಿದೆ. ಉತ್ತರದ ನೇಪಾಳ, ಬಿಹಾರದಿಂದ ಹಿಡಿದು, ಕರ್ನಾಟಕದ ಉತ್ತರ ಕನ್ನಡದವರೆಗೆ ಇವರ ಕಾರ್ಯಕ್ಷೇತ್ರ (Red Corridor) ವ್ಯಾಪಿಸಿದೆ. ನೆತ್ತರಿನ ಬಣ್ಣವನ್ನೇ ಹೊಂದಿರುವ ನಕ್ಸಲಿಸಂ, ಹಿಂಸಾಚಾರಕ್ಕೆ ಸಮಾನಾರ್ಥಕವಾಗಿದೆ.

    ಉತ್ತರ
    • Ananda Prasad's avatar
      Ananda Prasad
      ಮಾರ್ಚ್ 22 2013

      ಹಿಂದುತ್ವವನ್ನು ವಿರೋಧಿಸುವವರೆಲ್ಲ ನಿಮ್ಮ ದೃಷ್ಟಿಯಲ್ಲಿ ನಕ್ಸಲ್ ಬೆಂಬಲಿಗರೆಂದು ಕಾಣುವಂತೆ ಇದೆ. ಈ ರೀತಿಯ ಮಾನದಂಡಗಳನ್ನು ಆರೋಗ್ಯವಂತ ಮನಸ್ಸು ಇರುವ ಯಾರೂ ಒಪ್ಪಿಕೊಳ್ಳಲಾರರು. ನಕ್ಸಲ್ ಕುರಿತ ಸಮರ್ಥನೆ ಇರಬಹುದಾದ ಲೇಖನಗಳು ಎಲ್ಲೆಲ್ಲೊ ಪ್ರಕಟವಾಗುತ್ತಿರಬಹುದು, ಅದನ್ನೆಲ್ಲ ವಿರೋಧಿಸಲೇಬೇಕು, ಅದನ್ನು ವಿರೋಧಿಸದಿದ್ದರೆ ಅಂಥವರೆಲ್ಲ ನಕ್ಸಲ್ ಬೆಂಬಲಿಗರೆಂಬ ಆರೋಪ ಹುರುಳಿಲ್ಲದ್ದು. ಪ್ರಜಾಪ್ರಭುತ್ವದಲ್ಲಿ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳಲು ಎಲ್ಲರಿಗೂ ಅವಕಾಶ ಇದೆ. ಅದನ್ನು ನಕ್ಸಲ್ ಬೆಂಬಲಿಗ ಎಂಬ ಹಣೆಪಟ್ಟಿ ಕಟ್ಟಿ ಹತ್ತಿಕ್ಕಲು ಸಾಧ್ಯವಿಲ್ಲ. ಅಂಥ ಪ್ರಯತ್ನ ಯಶಸ್ವಿಯೂ ಆಗದು ಎಂದಷ್ಟೇ ಹೇಳಬಯಸುತ್ತೇನೆ.

      ಉತ್ತರ
      • SSNK's avatar
        ಮಾರ್ಚ್ 22 2013

        Ananda Prasad> ನಕ್ಸಲ್ ಕುರಿತ ಸಮರ್ಥನೆ ಇರಬಹುದಾದ ಲೇಖನಗಳು ಎಲ್ಲೆಲ್ಲೊ ಪ್ರಕಟವಾಗುತ್ತಿರಬಹುದು,

        “ಎಲ್ಲೆಲ್ಲೋ” ಪ್ರಕಟವಾದ ಲೇಖನಗಳ ಕುರಿತಾಗಿ ಇಲ್ಲಿ ಚರ್ಚಿಸುತ್ತಿಲ್ಲ.
        ನೀವು ಇಲ್ಲಿಯವರೆಗೆ “ಪ್ರತಿಕ್ರಿಯೆ”ಗಳನ್ನು ನೀಡುತ್ತಿರುವ, “ಸಮರ್ಥನೆ” ಮಾಡುತ್ತಿರುವ ಲೇಖನದ ಕುರಿತಾಗಿಯೇ ನಾವು ಚರ್ಚಿಸುತ್ತಿರುವುದು.
        ನಿಮ್ಮ ಮಾತನ್ನು ನೋಡಿದರೆ, ನೀವು ಲೇಖನವನ್ನೇ ಓದದೆ ಚರ್ಚೆಗೆ/ಸಮರ್ಥನೆಗೆ ಇಳಿದಂತೆ ಕಾಣಿಸುತ್ತಿದೆ!!

        Ananda Prasad> ಪ್ರಜಾಪ್ರಭುತ್ವದಲ್ಲಿ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳಲು ಎಲ್ಲರಿಗೂ ಅವಕಾಶ ಇದೆ.
        ಹೌದು. ನಿಮ್ಮ ಅನಿಸಿಕೆ ಹೇಳಿಕೊಳ್ಳಲು ಅವಕಾಶವಿರುವಂತೆಯೇ, ಇತರರಿಗೂ ತಮ್ಮ ಅನಿಸಿಕೆ ಹೇಳಿಕೊಳ್ಳುವ ಅವಕಾಶ ಇದೆಯಲ್ಲವೇ?
        ನೀವು “ಹಿಂದುತ್ವ” ಎಂದ ಕೂಡಲೇ ಯಾವ ರೀತಿಯ ಅನಿಸಿಕೆಗಳನ್ನು ಹರಿಯಬಿಟ್ಟಿರೋ, ಅದೇ ರೀತಿ,
        ನಿಮ್ಮ ಅನಿಸಿಕೆಗಳನ್ನು/ಚರ್ಚೆಗಳನ್ನು/ವಾದಗಳನ್ನು ಕಂಡ ನಂತರ ಎಲ್ಲರೂ ನಿಮ್ಮ ಕುರಿತಾದ “ಅನಿಸಿಕೆ”ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

        ಅದನ್ನು ಸ್ವಾಗತಿಸುವುದು ಬಿಟ್ಟು ಕೋಪಿಸಿಕೊಂಡರೆ ಹೇಗೆ?

        ನೀವು ನಿಮ್ಮ ಕಲ್ಪನೆಗೆ ತಕ್ಕಂತೆ ಅನಿಸಿಕೆಗಳನ್ನು ರೂಢಿಸಿಕೊಂಡಿರುವಿರಿ. ಅದು ಈಗಾಗಲೇ ನಡೆದ ವಿಸ್ತೃತ ಚರ್ಚೆಯಲ್ಲಿ ಸಾಭೀತಾಗಿದೆ.
        ಬೇರೆಯವರೂ ತಮ್ಮ ಕಲ್ಪನಿಗೆ ತಕ್ಕಂತೆ ನಿಮ್ಮ ಕುರಿತಾಗಿ ಅನಿಸಿಕೆಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ.
        ಅದರಲ್ಲಿ ತಪ್ಪೇನಿದೆ ಹೇಳಿ?

        ಉತ್ತರ
        • Ananda Prasad's avatar
          Ananda Prasad
          ಮಾರ್ಚ್ 22 2013

          ಈ ಲೇಖನದಲ್ಲಿ ನಕ್ಸಲರ ಸಮರ್ಥನೆ ಎಲ್ಲಿಯೂ ಕಂಡುಬರುವುದಿಲ್ಲ. ಇದರಲ್ಲಿ ಮಾಣಿಕ್ ಸರ್ಕಾರ್ ಅವರ ಸ್ವಚ್ಛ ವ್ಯಕ್ತಿತ್ವವನ್ನಷ್ಟೇ ಎತ್ತಿ ಹಿಡಿಯಲಾಗಿದೆ. ಕಮ್ಯುನಿಷ್ಟ್ ಪಕ್ಷಗಳು ನಮ್ಮ ದೇಶದಲ್ಲಿ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದಿವೆ. ಅವುಗಳು ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿ ಆಡಳಿತ ನಡೆಸುತ್ತಿರುವಾಗ ಅವುಗಳನ್ನು ನಕ್ಸಲ್ ಎಂದು ಹೇಳುವುದು ಸಾಧ್ಯವೂ ಇಲ್ಲ. ಲೇಖನದಲ್ಲಿ ಮಾಣಿಕ್ ಸರ್ಕಾರ್ ಸಶಸ್ತ್ರ ಹೋರಾಟ ಮಾಡಿ ಜನರನ್ನು ಕೊಂದು ಯಾ ಕೊಲ್ಲಿಸಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿಲ್ಲ ಅಥವಾ ಅವರು ನಕ್ಸಲ್ ಆಗಿ ಬಂದೂಕು ಹಿಡಿದು ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂಬ ಬಗ್ಗೆಯೂ ನನಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಇದರಲ್ಲಿ ಖಂಡಿಸುವ ಅಥವಾ ವಿರೋಧಿಸಬೇಕಾದ ಯಾವ ಅಂಶಗಳೂ ಕಂಡುಬರುತ್ತಿಲ್ಲ. ಈ ಲೇಖನದ ಲೇಖಕರು ನಕ್ಸಲ್ ಹೋರಾಟವನ್ನು ಬೆಂಬಲಿಸಿದ ಬಗ್ಗೆಯಾಗಲೀ, ನಕ್ಸಲ್ ಹಿಂಸಾಚಾರವನ್ನು ಸಮರ್ಥಿಸಿದ ಬಗ್ಗೆಯಾಗಲೀ ನನಗೆ ತಿಳಿದಿಲ್ಲ. ಹೀಗಾಗಿ ಖಂಡಿಸುವ ಅಥವಾ ವಿರೋಧಿಸುವ ಅವಶ್ಯಕತೆ ಉದ್ಹ್ಭವಿಸುವುದೇ ಇಲ್ಲ.

          ಉತ್ತರ
          • SSNK's avatar
            ಮಾರ್ಚ್ 22 2013

            > ಮಾಣಿಕ್ ಸರ್ಕಾರ್ ಸಶಸ್ತ್ರ ಹೋರಾಟ ಮಾಡಿ ಜನರನ್ನು ಕೊಂದು ಯಾ ಕೊಲ್ಲಿಸಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿಲ್ಲ
            > ಅವರು ನಕ್ಸಲ್ ಆಗಿ ಬಂದೂಕು ಹಿಡಿದು ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ.
            > ಹೀಗಾಗಿ ಇದರಲ್ಲಿ ಖಂಡಿಸುವ ಅಥವಾ ವಿರೋಧಿಸಬೇಕಾದ ಯಾವ ಅಂಶಗಳೂ ಕಂಡುಬರುತ್ತಿಲ್ಲ.

            ನರೇಂದ್ರ ಮೋದಿಯವರೂ ಎಂದೂ ಸಶಸ್ತ್ರ ಹೋರಾಟ ಮಾಡಿ ಜನರನ್ನು ಕೊಂದು ಯಾ ಕೊಲ್ಲಿಸಿ ಅಧಿಕಾರಕ್ಕೆ ಬಂದಿಲ್ಲ.
            ಅವರು ಬಂದೂಕು ಹಿಡಿದು ಹಿಂಸಾಚಾರವನ್ನು ಪ್ರಚೋದಿಸಿದ ಮಾಹಿತಿಯೂ ಇಲ್ಲ.
            ಹೀಗಿದ್ದಾಗ್ಯೂ ನೀವು ಅವರನ್ನು ವಿರೋಧಿಸುತ್ತಿರುವಿರಿ.
            ಇದು ವಿರೋಧಾಭಾಸವಲ್ಲವೇ!? ನಿಮ್ಮ ನಿಲುವು ಎಡಬಿಡಂಗಿತನವನ್ನು ತೋರಿಸುತ್ತಿದೆಯಲ್ಲವೇ?

            ಉತ್ತರ
            • Ananda Prasad's avatar
              Ananda Prasad
              ಮಾರ್ಚ್ 22 2013

              ನರೇಂದ್ರ ಮೋದಿ ಬಂದೂಕು ಹಿಡಿದು ಯಾರನ್ನೂ ಕೊಂದಿಲ್ಲ ಅಥವಾ ಯಾರನ್ನೂ ಕೊಲ್ಲಿಸಿಲ್ಲ. ಆದರೆ ಅವರಿಗೆ ಗಲಭೆಯನ್ನು ನಿಯಂತ್ರಿಸದೆ ಇರುವ ಕಳಂಕ ಅಂಟಿಕೊಂಡಿದೆ. ಅದಕ್ಕಾಗಿಯೇ ಅಲ್ಲವೇ ಅವರನ್ನು ವಿರೋಧಿಸುತ್ತಿರುವುದು. ಸುಮ್ಮನೆ ಯಾರು ವಿರೋಧಿಸುತ್ತಾರೆ? ಸಂವಿಧಾನವನ್ನು ಪರಿಪಾಲಿಸುತ್ತೇನೆ ಎಂದು ಪ್ರಮಾಣವಚನ ತೆಗೆದುಕೊಂಡು ಅವರು ಅದನ್ನು ಪಾಲಿಸಿಲ್ಲ. ಹೀಗಾಗಿಯೇ ವಿರೋಧ ಹೊರತು ವಿರೋಧಕ್ಕಾಗಿ ವಿರೋಧ ಅಲ್ಲ.

              ಉತ್ತರ
              • SSNK's avatar
                ಮಾರ್ಚ್ 22 2013

                ನಿಮಗಿಷ್ಟ ಬಂದ ರೀತಿಯಲ್ಲಿ ನೀವು ಯಾರನ್ನು ಬೇಕಾದರೂ ಸಮರ್ಥಿಸಬಹುದು, ವಿರೋಧಿಸಬಹುದು, ಅನಿಸಿಕೆಗಳನ್ನು ಹೊಂದಬಹುದು.
                ಅದೇ ರೀತಿ, ಇತರರೂ ನಿಮ್ಮ ಬಗ್ಗೆ ಅನಿಸಿಕೆ ಹೊಂದುತ್ತಾರೆ. ಅದನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ.

                Ananda Prasad> ನರೇಂದ್ರ ಮೋದಿ ಅವರಿಗೆ ಗಲಭೆಯನ್ನು ನಿಯಂತ್ರಿಸದೆ ಇರುವ ಕಳಂಕ ಅಂಟಿಕೊಂಡಿದೆ.
                Ananda Prasad> ಸಂವಿಧಾನವನ್ನು ಪರಿಪಾಲಿಸುತ್ತೇನೆ ಎಂದು ಪ್ರಮಾಣವಚನ ತೆಗೆದುಕೊಂಡು ಅವರು ಅದನ್ನು ಪಾಲಿಸಿಲ್ಲ.
                Ananda Prasad> ಹೀಗಾಗಿಯೇ ವಿರೋಧ ಹೊರತು ವಿರೋಧಕ್ಕಾಗಿ ವಿರೋಧ ಅಲ್ಲ.
                ಅದೇ ರೀತಿ,
                ನಕ್ಸಲರ ವಿಚಾರಕ್ಕೆ ಹತ್ತಿರವಿರುವವರು, ನಕ್ಸಲರ ವಿಚಾರದ ಕುರಿತಾಗಿ ಅನುಕಂಪ ಹೊಂದಿರುವವರು, ನಕ್ಸಲರ ಭಯೋತ್ಪಾದಕತೆಯನ್ನು, ಹಿಂಸೆಯನ್ನು ನಿಯಂತ್ರಿಸಲು ಪ್ರಯತ್ನಿಸಿಲ್ಲ. ಸಂವಿಧಾನವನ್ನು ಪರಿಪಾಲಿಸುತ್ತೇವೆ ಎಂದು ಪ್ರಮಾಣವಚನ ತೆಗೆದುಕೊಂಡು, ಅವರು ಅದನ್ನು ಪಾಲಿಸುವುದರಲ್ಲಿ ಸೋತಿದ್ದಾರೆ.
                ಹೀಗಾಗಿ, “ಅವರು ನಕ್ಸಲರಿಗೆ ಬೆಂಬಲವಾಗಿದ್ದಾರೆ ಮತ್ತು ನಕ್ಸಲಿಸಂ ಅನ್ನು ಸಮರ್ಥಿಸುತ್ತಾರೆ” ಎಂದೇ ಜನ ನಂಬುತ್ತಾರೆ!!

                ಉತ್ತರ
                • Ananda Prasad's avatar
                  Ananda Prasad
                  ಮಾರ್ಚ್ 22 2013

                  “ಅದೇ ರೀತಿ,
                  ನಕ್ಸಲರ ವಿಚಾರಕ್ಕೆ ಹತ್ತಿರವಿರುವವರು, ನಕ್ಸಲರ ವಿಚಾರದ ಕುರಿತಾಗಿ ಅನುಕಂಪ ಹೊಂದಿರುವವರು, ನಕ್ಸಲರ ಭಯೋತ್ಪಾದಕತೆಯನ್ನು, ಹಿಂಸೆಯನ್ನು ನಿಯಂತ್ರಿಸಲು ಪ್ರಯತ್ನಿಸಿಲ್ಲ. ಸಂವಿಧಾನವನ್ನು ಪರಿಪಾಲಿಸುತ್ತೇವೆ ಎಂದು ಪ್ರಮಾಣವಚನ ತೆಗೆದುಕೊಂಡು, ಅವರು ಅದನ್ನು ಪಾಲಿಸುವುದರಲ್ಲಿ ಸೋತಿದ್ದಾರೆ.
                  ಹೀಗಾಗಿ, “ಅವರು ನಕ್ಸಲರಿಗೆ ಬೆಂಬಲವಾಗಿದ್ದಾರೆ ಮತ್ತು ನಕ್ಸಲಿಸಂ ಅನ್ನು ಸಮರ್ಥಿಸುತ್ತಾರೆ” ಎಂದೇ ಜನ ನಂಬುತ್ತಾರೆ!!”

                  ಇದು ನನಗೆ ಅನ್ವಯ ಆಗುವುದಿಲ್ಲ. ನಾನು ನಕ್ಸಲರ ಹಿಂಸಾಚಾರವನ್ನು ನಿಯಂತ್ರಿಸುವ ಯಾವುದೇ ಸಂವಿಧಾನಾತ್ಮಕ ಸ್ಥಾನದಲ್ಲಿ ಇಲ್ಲ. ಅಲ್ಲದೆ ನಾನು ಚುನಾವಣೆಗೆ ನಿಂತೂ ಇಲ್ಲ, ಹಾಗೂ ಯಾವುದೇ ಅಧಿಕಾರ ಸ್ಥಾನದ ಆಕಾಂಕ್ಷಿಯೂ ಅಲ್ಲ. ಇದು ಯಾರಿಗೆ ಅನ್ವಯ ಆಗುತ್ತದೋ ಅವರ ಬಗ್ಗೆ ಜನ ನಂಬುತ್ತಾರೆ ಎಂದರೆ ನನ್ನ ಅಭ್ಯಂತರ ಏನೂ ಇಲ್ಲ.

                  ಉತ್ತರ
  11. ಬಸವಯ್ಯ's avatar
    ಬಸವಯ್ಯ
    ಮಾರ್ಚ್ 22 2013

    @ ಆನಂದ ಪ್ರಸಾದ
    ” ನಕ್ಸಲ್ ಹೋರಾಟಗಳಿಗೆ ಮೂಲ ಅಪರಾಧಿ ಎಂದು ಇದ್ದರೆ ಅದು ನಮ್ಮ ಬೇಜವಾಬ್ದಾರಿಯುತ, ಭ್ರಷ್ಟ ಸರ್ಕಾರಗಳೇ ಆಗಿವೆ. ಆರಂಭದಲ್ಲೇ ಎಲ್ಲ ರಾಜ್ಯಗಳಲ್ಲೂ ಭೂಸುಧಾರಣೆ, ಭೂಮಿಯ ನ್ಯಾಯಯುತ ಹಂಚಿಕೆ ನಡೆಸಿದ್ದಿದ್ದರೆ ನಕ್ಸಲ್ ಹೋರಾಟ ಹುಟ್ಟಿಕೊಳ್ಳಲು ಸಾಧ್ಯವೇ ಇರಲಿಲ್ಲ. ಹೀಗಾಗಿ ಮೂಲ ಅಪರಾಧಿ ನಮ್ಮ ಸರ್ಕಾರಗಳೇ ಎಂಬುದರಲ್ಲಿ ಸಂದೇಹವೇ ಇಲ್ಲ. ಯಾವ ರೀತಿ ದೇಶದ ಎಲ್ಲಾ ರಾಜ್ಯಗಳನ್ನೂ, ಸಂಸ್ಥಾನಗಳನ್ನೂ ದಿಟ್ಟತನದಿಂದ ದೇಶದಲ್ಲಿ ವಿಲೀನಗೊಳಿಸಲಾಯಿತೋ ಅದೇ ರೀತಿಯ ದಿಟ್ಟತನವನ್ನು ಸ್ವಾತಂತ್ರ್ಯ ದೊರಕಿದಾಗಲೇ ಇಡೀ ದೇಶದಲ್ಲಿ ಭೂಸುಧಾರಣೆ ಹಾಗೂ ಭೂಮಿಯ ನ್ಯಾಯಯುತ ಹಂಚಿಕೆಯಲ್ಲಿಯೂ ತೋರಿಸಿದ್ದಿದ್ದರೆ ನಕ್ಸಲ್ ಹೋರಾಟದ ಬೀಜಗಳೇ ಹುಟ್ಟಿಕೊಳ್ಳುತ್ತಿರಲಿಲ್ಲ.”

    ಮೇಲಿನವು ನಿಮ್ಮ ವಿಚಾರಗಳೆ. ನಕ್ಸಲ್ ಹೋರಾಟದ ಮೂಲ ಅಪರಾಧಿಗಳನ್ನು, ಆಗ ಕೈಗೊಳ್ಳಬೇಕಾಗಿದ್ದ ಕ್ರಮಗಳನ್ನು ಇಷ್ಟು ಚೆನ್ನಾಗಿ ಪಟ್ಟಿಮಾಡಿರುವ ನೀವು..ಈಗ ಹೆಚ್ಚಾಗುತ್ತಿರುವ ಮೂಲಭೂತವಾದ, ಧರ್ಮಾಂಧತೆಗೆ ಏಕೈಕ ಕಾರಣ ಸಂಘ ಪರಿವಾರ, ಹಿಂದುತ್ವವಾದಿಗಳು, ನರೇಂದ್ರ ಮೋದಿ ಎಂಬಂತೆ ಬಿಂಬಿಸುತ್ತಿರುವುದು ಏಕೆ? ನಿಮಗನಿಸಿದಂತೆ, ದೇಶ ಸ್ವತಂತ್ತವಾದ ಮೇಲೆ ಒಂದೇ ಸಿವಿಲ್ ಕೋಡ್, ಈ ದೇಶವಾಸಿಗಳು ಎಲ್ಲರೂ ಸಮಾನರು, ಆರ್ಥಿಕ ಆಧಾರದ ಮೇಲೆ ಮೇಲೆತ್ತುವಿಕೆ/ಶಿಕ್ಷಣ ಕೊಡುವಿಕೆಗಳ ದಿಟ್ಟತನವನ್ನು ತೋರಿಸಿದ್ದಿದ್ದರೆ ಈ ಅಲ್ಪ/ಬಹು, ಜಾತಿ/ಧರ್ಮದಿಂದ ಒಡೆದು ಆಳುವ ಸಮಸ್ಯೆಗಳಿಂದು ಇರುತ್ತಿರಲಿಲ್ಲ, ಮೂಲಭೂತವಾದವು ಕೂಡ ಇಷ್ಟಾಗಿರುತ್ತಿರಲಿಲ್ಲ ಎಂದು ನನಗನಿಸುತ್ತದೆ.

    ಗಾಂಧಿ/ನೆಹರೂ/ಸುಭಾಶ/ವಲ್ಲಭ ಭಾಯಿ ಬಗ್ಗೆ ನನ್ನ ಅಭಿಪ್ರಾಯ
    ಗಾಂಧೀಜಿ ವೈಯುಕ್ತಿಕವಾಗಿ ಪ್ರಾಮಾಣಿಕರು, ನಿಷ್ಕಳಂಕ ವ್ಯಕ್ತಿತ್ವ ಹೊಂದಿದವರು..ಆದರೆ ಅವರಿಗೆ ತಾವು ಹೇಳಿದ್ದೇ ನಡೆಯಬೇಕೆಂಬ ಮೊಂಡುತನವಿತ್ತು. ಅವರ ಸತ್ಯಾಗ್ರಹಗಳು ಬ್ರಿಟೀಶರನ್ನು ಮಣಿಸಿದ್ದಕ್ಕಿಂತ, ದೇಶವಾಸಿಗಳನ್ನು ಮಣಿಸುವಲ್ಲೇ ಉಪಯೋಗವಾದವು. ಆಗಿನ ಕಾಲದವರು ಅವರ ಮೊಂಡುತನವನ್ನು ಸಹಿಸಿಕೊಂಡು, ಅವರನ್ನು ಗೌರವಿಸಿದ್ದು ಅವರ ಉಳಿದ ಗುಣಗಳಿಗಾಗಿ. ನಾಥೂರಾಂ ಗೋಡ್ಸೆ ಕೂಡ ಗಾಂಧೀಜಿಯಷ್ಟೇ ಪ್ರಾಮಾಣಿಕ ದೇಶಭಕ್ತ. ಆತ ಕೊಂದಿದ್ದು ಗಾಂಧೀಜಿಯನ್ನಲ್ಲ, ಗಾಂಧೀಜಿಯ ಮೊಂಡುತನವನ್ನ.
    ನೆಹರೂ ನಮ್ಮ ದೇಶದ ಅವಕಾಶವಾದಿ ರಾಜಕಾರಣದ ಪಿತಾಮಹ. ಒಂದು ಕಡೆ ಗಾಂಧೀಜಿಯ ಕಾಲು ಒತ್ತುವಿಕೆ, ಇನ್ನೊಂದು ಕಡೆ ಲೇಡಿ ಬ್ಯಾಟನ್ ಜೊತೆ ಚಕ್ಕಂದ..ಹೀಗೇ ಭಾರತ-ಇಂಗ್ಲೆಂಡ ಗಳನ್ನು ಸರಿ ತೂಗಿಸಿಕೊಂಡು ಹೋಗುವ, ತನ್ನ ಬೇಳೆ ಬೇಯಿಸಿಕೊಳ್ಳುವ ಕಲೆ ನಮ್ಮ ಪ್ರೀತಿಯ ಚಾಚಾಗಿತ್ತು. ಗಾಂಧೀಜಿಯನ್ನು ಬ್ಲಾಕ್ ಮೇಲ್ ಮಾಡಿಯೇ ಪ್ರಥಮ ಪ್ರಧಾನಿಯಾದ ಕೀರ್ತಿ ನೆಹರೂದು. ಈ ಮನುಷ್ಯನನ್ನು ಸುಭಾಶ/ವಲ್ಲಭಭಾಯ್ ಜೊತೆ ಹೋಲಿಸುವಂತೆಯೇ ಇಲ್ಲ. ಅವರು ನಿಜವಾದ ತ್ಯಾಗಿಗಳು, ಈ ನೆಹರೂ ಹಾಗೆ ವೈಯುಕ್ತಿಕ ಸ್ವಾರ್ಥ ಮೆರೆದವರಲ್ಲ.

    ಉತ್ತರ
    • Ananda Prasad's avatar
      Ananda Prasad
      ಮಾರ್ಚ್ 22 2013

      ಮೇಲಿನ ಅನಿಸಿಕೆಗಳು ಸಮಸ್ಯೆಯ ಮೂಲದ ಕುರಿತ ವಿಶ್ಲೇಷಣೆಯೇ ಹೊರತು ಅದಕ್ಕಾಗಿ ಬೆಂಬಲ ಅಲ್ಲ. ಮೂಲಭೂತವಾದ ಇತ್ಯಾದಿಗಳ ಬಗ್ಗೆ, ನೆಹರೂ, ಸುಭಾಷ್, ಗಾಂಧಿ, ಗೋಡ್ಸೆ ಇತ್ಯಾದಿಗಳ ಬಗ್ಗೆ ನೀವು ನಿಮ್ಮ ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯ ಬೇರೆ. ಅದನ್ನು ನಾನು ಇಲ್ಲಿ ಚರ್ಚಿಸಲು ಹೋಗುವುದಿಲ್ಲ, ಅದು ಚರ್ಚಿಸಿ ಮುಗಿಯುವಂಥದ್ದೂ ಅಲ್ಲ. ಅದನ್ನು ಸಮಾನಮನಸ್ಕರ ವೇದಿಕೆಗಳಲ್ಲಿ ಚರ್ಚಿಸುತ್ತೇನೆ. ಈ ವೇದಿಕೆಯಲ್ಲಿ ಪ್ರಗತಿಶೀಲ, ವೈಜ್ಞಾನಿಕ ಮನೋಭಾವದ, ಪ್ರಜ್ಞಾವಂತರ ಕೊರತೆ ಇದೆ. ಹಾಗಾಗಿ ಇಲ್ಲಿ ಚರ್ಚಿಸುವುದರಿಂದ ಪ್ರಯೋಜನ ಇಲ್ಲ.

      ಉತ್ತರ
      • ಬಸವಯ್ಯ's avatar
        ಬಸವಯ್ಯ
        ಮಾರ್ಚ್ 22 2013

        ಹ್ಮ..ಸಮಾನ ಮನಸ್ಕರ ವೇದಿಕೆ ಅಂದರೆ ಈತ ಮಾತನಾಡಿದ್ದಕ್ಕೆ ಆತ, ಆತ ಹಲುಬಿದ್ದಕ್ಕೆ ಈತ ಚಪ್ಪಾಳೆ ಹೊಡೆಯುವ ವೇದಿಕೆಯೆ? ಈ ದೇಶದ ಪ್ರಗತಿಯೆಲ್ಲ ಇಂತಹ ಸಮಾನ ಮನಸ್ಕ ವೇದಿಕೆಯ ಪ್ರಗತಿಶೀಲ, ವೈಜ್ಞಾನಿಕ ಮನೋಭಾವದ, ಪ್ರಜ್ಞಾವಂತ ಪಂಡಿತರಿಂದಾಗಿಯೇ ಆಗಿದೆಯೆ? ನನಗೆ ಗೊತ್ತಿರಲಿಲ್ಲ .. ನಿಮಗೆ ಚಪ್ಪಾಳೆ ಹೊಡೆಯಲು ಮನಸ್ಸು ಬರುತ್ತಿಲ್ಲ..ಕ್ಷಮಿಸಿ!:(. ಪ್ರಯೋಜನವಿಲ್ಲ ಅಂತ ಗೊತ್ತಿದ್ದರೂ, ತಮ್ಮ ಅತ್ಯಮೂಲ್ಯ ಸಮಯದಲ್ಲಿ ಸ್ವಲ್ಪ ಸಮಯವನ್ನು ಅನಾಗರಿಕ ರಾದ ನಮ್ಮನ್ನು ತಿದ್ದುವ ವ್ಯರ್ಥ ಪ್ರಯತ್ನಕ್ಕೆ ಇಟ್ಟಿದ್ದಕ್ಕೆ ಧನ್ಯವಾದಗಳು.:)

        ಉತ್ತರ
  12. SSNK's avatar
    ಮಾರ್ಚ್ 22 2013

    ಆನಂದ ಪ್ರಸಾದರೆ, ನೀವು ಲೇಖನವನ್ನು ಸಮರ್ಥಿಸಿ ಮಾತನಾಡಿರುವಿರಿ.
    ಪ್ರಸ್ತುತ ಲೇಖನವು, ಮಾಣಿಕ್ಯ ಸರ್ಕಾರ್ ಅವರು ನಕ್ಸಲ ವಿಚಾರಗಳಿಂದ ಪ್ರಭಾವಿತರಾದರು ಎಂದು ಸ್ಪಷ್ಟವಾಗಿ ತಿಳಿಸುತ್ತಿದೆ.
    ನಕ್ಸಲ ವಿಚಾರಗಳಿಂದ ಸಮಾಜಕ್ಕೆ ಒಳಿತಾಗಿಲ್ಲ ಎನ್ನುವುದು ಹಗಲಿನಷ್ಟೇ ಸ್ಪಷ್ಟ.
    ಇಂತಹ ಲೇಖನವನ್ನು ಸಮರ್ಥಿಸುವುದು ನಕ್ಸಲ ವಿಚಾರಕ್ಕೆ ಉತ್ತೇಜನ ನೀಡಿದಂತಲ್ಲದೆ ಮತ್ತೇನಿಲ್ಲ.

    ನರೇಂದ್ರ ಮೋದಿ, ಹಿಂದುತ್ವವನ್ನು ಟೀಕಿಸಲು, ತೆಗಳಲು ಇಷ್ಟೆಲ್ಲಾ ಉತ್ಸಾಹದಿಂದ ಮುನ್ನುಗ್ಗುವವರು, ನಕ್ಸಲ ವಿಚಾರದ ಕುರಿತಾಗಿ ಒಂದು ಸಣ್ಣ ತೆಗಳಿಕೆಯನ್ನೂ ಮಾತನಾಡದ್ದು ನೋಡಿದರೆ ನನಗೆ ಆಶ್ಚರ್ಯವೆನಿಸುತ್ತದೆ.

    ಅದೇ ರೀತಿ, ಗುಜರಾತಿನಲ್ಲಿ ನಡೆದ ಗಲಭೆಗಳ ಕುರಿತಾಗಿ ರೆಕ್ಕೆ-ಪುಕ್ಕಗಳನ್ನೆಲ್ಲಾ ಕಟ್ಟಿ ಮಾತನಾಡುವ ಮಂದಿ, ಗೋದ್ರಾ ಹತ್ಯಾಕಾಂಡದಲ್ಲಿ ನೊಂದವರಿಗೆ, ಕಾಶ್ಮೀರದಲ್ಲಿ ದಶಕಗಳಿಂದ ನಡೆಯುತ್ತಿರುವ ಭಯೋತ್ಪಾದನೆಯಲ್ಲಿ ನರಳುತ್ತಿರುವವರಿಗೆ, ಅಸ್ಸಾಂನಲ್ಲಿ ನಡೆಯುತ್ತಿರುವ ಗಲಭೆಗಳಲ್ಲಿ ನೊಂದವರಿಗೆ ಒಂದು ಸಣ್ಣ ಕಣ್ಣೀರನ್ನೂ ಹಾಕದಿರುವುದು ನೋಡಿ ಆಶ್ಚರ್ಯವೆನಿಸುತ್ತದೆ.

    ಉತ್ತರ
    • Ananda Prasad's avatar
      Ananda Prasad
      ಮಾರ್ಚ್ 22 2013

      ಮಾಣಿಕ್ ಸರ್ಕಾರ್ ನಕ್ಸಲ್ ವಿಚಾರಗಳಿಂದ ಪ್ರಭಾವಿತರಾದರು ಎಂದಷ್ಟೇ ಅಲ್ಲಿ ಇದೆ. ಅದರಿಂದ ಪ್ರಭಾವಿತರಾಗಿ ಹಿಂಸಾಚಾರಕ್ಕೆ ಇಳಿದರು ಎಂದು ಅಲ್ಲಿ ಇಲ್ಲ. ಹೀಗಾಗಿ ಅದನ್ನು ನಕ್ಸಲ್ ಬೆಂಬಲ ಎಂದು ನೀವು ತಿಳಿದುಕೊಳ್ಳುವುದಾದರೆ ನಾನೇನೂ ಹೇಳಲಾರೆ.

      ಉತ್ತರ
  13. ಬಸವಯ್ಯ's avatar
    ಬಸವಯ್ಯ
    ಏಪ್ರಿಲ್ 17 2013

    ನಿನ್ನೆ ರಾತ್ರಿ ಕನ್ನಡದ ಜಾಲತಾಣಗಳಲ್ಲಿ ಸುತ್ತು ಹೊಡೆಯುತ್ತಿರಬೇಕಾದರೆ, ನಮ್ಮ ‘ಪ್ರಜ್ನಾವಂತ’ ರ ಒಂದು ಕಮೆಂಟ್ ನೋಡಿದೆ. ನನಗನಿಸಿದ್ದು ಶ್ರೀಯುತರು ವಿಧಾನ ಸಭೆಯ ಚುನಾವಣೆ ಮುಗಿಯುವ ತನಕ ತಮ್ಮ ‘ಪ್ರಜ್ಞಾ’ ಲೇಖನಿಗೆ ರಜೆ ಕೊಡುವ ‘ಅಗತ್ಯ ಇದೆ’ ಅಂತ. ನನಗೆ ಗೊತ್ತು ಸುತ್ತ-ಮುತ್ತಲಿನ ಜಗತ್ತಿನಲ್ಲಿ ಅನ್ಯಾಯ-ಆಕ್ರಮ-ಧರ್ಮಾಂಧತೆ-ಇನ್ನೂ ಏನೇನೊ ನಡೆಯುತ್ತಿರಬೇಕಾದರೆ ಅವರಿಗೆ ತಡೆದುಕೊಳ್ಳಲು ಆಗುವುದಿಲ್ಲ ಎಂದು..ಆದರೂ ಕಷ್ಟ ಪಟ್ಟಾದರೂ ಅವರು ಸುಮ್ಮನೆ ಕೂಡುವ ‘ಅಗತ್ಯ ಇದೆ’!. ಅವರ ಈ ಒಂದು ಸಂಯಮ ಅವರ ಗುರುಗಳಿಗೆ ಏನಿಲ್ಲವೆಂದರೂ ನಾಲ್ಕಾರು ಹೆಚ್ಚಿನ ಮತಗಳನ್ನು ಕೊಡಿಸುತ್ತದೆ ಎಂದು ‘ಊಹಿಸಬಹುದು’. ‘ಸಮಾನ ಮನಸ್ಕ’ರ ಓಟುಗಳನ್ನೇ ನಂಬಿದರೆ ಇಡುಗಂಟು ಉಳಿಯಬಹುದು ಎಂಬ ಭರವಸೆ ಇಲ್ಲ ಎಂದು ನಂಬಲರ್ಹ, ನಿಷ್ಪಕ್ಷಪಾತ ಮೂಲಗಳಿಂದ ತಿಳಿದುಬಂದ ಮಾಹಿತಿಯಿದೆ.

    ಉತ್ತರ
    • ನವೀನ's avatar
      ನವೀನ
      ಏಪ್ರಿಲ್ 17 2013

      “ನಾಲ್ಕು ಮತ” ಗಳು….????
      ನಿಮ್ಮ ನಂಬಿಕೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕಾದ “ಅಗತ್ಯ ಇದೆ”

      ಉತ್ತರ

Leave a reply to Kumar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments