ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 12, 2013

428

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

‍ನಿಲುಮೆ ಮೂಲಕ

-ಡಾ. ಅಜಕ್ಕಳ ಗಿರೀಶ್ ಭಟ್

ನನ್ನ ” ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? ” ಎಂಬ ಪುಸ್ತಕದ ಕೆಲವು ಭಾಗಗಳು.

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿ” ಹೊಸ ಕನ್ನಡ”ವನ್ನು ಪ್ರತಿಪಾದಿಸುತ್ತಿದ್ದಾರೆ. ಕನ್ನಡದ ಅಕ್ಷರಗಳನ್ನು ಕಡಿಮೆ ಮಾಡಬೇಕು ಹಾಗೂ ಸಂಸ್ಕೃತದಿಂದ ಬಂದ ಪದಗಳನ್ನು ಬಿಟ್ಟುಬಿಡಬೇಕು ಎನ್ನುವುದು ಅವರ ವಾದದ ಮುಖ್ಯಾಂಶ. ಅವರ ಇತ್ತೀಚಿನ ಪುಸ್ತಕಗಳು ಅವರದೇ ಆದ ಹೊಸ ಕನ್ನಡದಲ್ಲಿ ಬರುತ್ತಿವೆ.

ಪರಂಪರೆ ಮತ್ತು ಸಂಸ್ಕೃತಿಗಳ ಬಗ್ಗೆ ಡಿ.ಎನ್.ಎಸ್. ಬರಹಗಳಲ್ಲಿ ವ್ಯಕ್ತವಾಗುವ ನಿಲುವೇನು ಎಂದು ನೋಡಬೇಕು. ಅವರು ಒಂದೆಡೆ ಸ್ವಾಭಿಮಾನ, ಸ್ವಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಇನ್ನೊಂದೆಡೆ ವ್ಯಾವಹಾರಿಕ ಪ್ರಯೋಜನಗಳ ಬಗ್ಗೆ ಮಾತಾಡುತ್ತಾರೆ.ಇನ್ನೊಂದೆಡೆ ವರ್ತಮಾನ ಕಾಲವನ್ನೂ ಈಚಿನ ಕೆಲ ಶತಮಾನಗಳ ಇತಿಹಾಸವನ್ನೂ ನಿರಾಕರಿಸುತ್ತಾರೆ.

ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ. ಆರ್. ಗಣೇಶ್ ಹೇಳುವಂತೆ , ಈ ಸುಧಾರಣೆಯು ” ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು.ಇಷ್ಟಾಗಿಯೂ ತಮಿಳು ಜಾಗತಿಕ ಸ್ತರದಲ್ಲಿ ತಾನೊಂದು ಭಾಷೆಯಾಗಿ ಏನನ್ನೂ ಸಾಧಿಸಲಾಗಲಿಲ್ಲ.ತಮಿಳರಿಗೆ ಜೀವಿಕೆಯ ಅನಿವಾರ್ಯತೆಯಿಂದ ವ್ಯವಹಾರಮಾತ್ರಕ್ಕಾಗಿ ಕಲಿಯಬೇಕಾಗಿ ಬರುವ ಇನ್ನಿತರ ಭಾಷೆಗಳನ್ನರಿಯಲೂ ಅದು ಸಹಕಾರಿಯಾಗಿಲ್ಲ.” ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ.

ಒಟ್ಟಿನಲ್ಲಿ ಭಾಷಾಪ್ರೇಮ ಭಾಷಾನೀತಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ತಮಿಳು ಭಾಷಿಗರು ನಮಗಾಗಲೀ ಯಾರಿಗೇ ಆಗಲೀ ಆದರ್ಶ ಅಥವಾ ಮಾದರಿ ಆಗಬಾರದು.ಶಾಸ್ತ್ರೀಯ ಭಾಷೆಯ ವಿಚಾರದಲ್ಲಿ ಮತ್ಸರದಿಂದ ಕನ್ನಡಕ್ಕೆ ಆ ಸ್ಥಾನಮಾನ ಸಿಗಬಾರದೆಂದು ನ್ಯಾಯಾಲಯದಲ್ಲಿ ಕೂಡ ಪಿತೂರಿ ಮಾಡುವ ಮನೋಭಾವ ತಮಿಳರದ್ದು. ಅದು ಒಬ್ಬ ವ್ಯಕ್ತಿಯ ವೈಯಕ್ತಿಕ ತೆವಲೇನೂ ಅಲ್ಲ ಅನ್ನುವುದು ಯಾರಿಗಾದರೂ ಅರ್ಥವಾದೀತು.ತಮಿಳನ್ನು ಮಾದರಿಯಾಗಿ ಇಟ್ಟುಕೊಳ್ಳುವ ಡಾ.ಡಿ.ಎನ್.ಎಸ್. ಅಲ್ಲಿ ಉಚ್ಚಾರಣೆಗೂ ಬರಹಕ್ಕೂ ಇರುವ ವ್ಯತ್ಯಾಸಗಳನ್ನು ತೊಂದರೆದಾಯಕ ಎಂದುಕೊಳ್ಳುವುದಿಲ್ಲ.ತಮಿಳಿನಲ್ಲಿ ಕನ್ನಡದ ಹಾಗೆ ಸ್ಪೆಲ್ಲಿಂಗ್ ಸಮಸ್ಯೆ ಇಲ್ಲ ಎಂದು ತಪ್ಪಾಗಿಯೆ ಹೇಳುತ್ತಾರೆ. ಹಾಗೆ ನೊಡಿದರೆ ಮಾತಾಡಿದಂತೆ ಬರೆಯ ಬೇಕಾದರೆ ತಮಿಳಿನಲ್ಲಿ ಇನ್ನೂ ಅನೇಕ ಅಕ್ಷರಗಳನ್ನು ಸೇರಿಸಬೇಕಾಗುತ್ತದೆ. ಉಚ್ಚಾರವೈವಿಧ್ಯವಿದ್ದು ಅಕ್ಷರಗಳ ಸಂಖ್ಯೆ ಕಡಿಮೆಯಿದ್ದಷ್ಟೂ ಸ್ಪೆಲ್ಲಿಂಗ್ ಸಮಸ್ಯೆ ಹೆಚ್ಚು ಎನುಉವುದು ನಮಗೆ ಇಂಗ್ಲಿಷನ್ನು ನೋಡಿಯಾದರೂ ಅರ್ಥವಾಗಬೇಕು. ಕನ್ನಡದಲ್ಲಿರುವ ಕೆಲವು ಅಕ್ಷರಗಳನ್ನು ತೆಗೆದುಹಾಕುವುದರಿಂದ ಇಂದು ಮೇಲ್ವರ್ಗದವರು ಬರಹಮೂಲಕ ಪಡೆಯುತ್ತಿರುವ ಸೌಲಭ್ಯವನ್ನು ಕೆಳವರ್ಗದವರೂ ಪಡೆಯುವಂತಾಗುತ್ತದೆ ಎನ್ನುವುದು ಡಾ. ಡಿ.ಎನ್.ಎಸ್. ನಿಲುವು.ಆದರೆ ಅವರೇ ಬರೆದ ವಾಕ್ಯ ಈ ಮುಂದಿನದು-” ಬೇರೆ ಭಾಷೆಯ ಲಿಪಿ ಕಲಿಯಬೇಕೆಂದರೆ ಕೆಲವೇ ತಾಸುಗಳಲ್ಲಿ ಕಲಿಯಬಹುದು.” ಅವರೇ ಹೇಳುವ ಮುಂದಿನ ಮಾತುಗಳನ್ನು ಗಮನಿಸಿ.-” ತೆಲುಗು ಭಾಷೆಯನ್ನು ಕಲಿಯಬೇಕೆಂಬ ಇಚ್ಛೆಯುಳ್ಳ ಕನ್ನಡಿಗನು ಅರ್ಧಗಂಟೆಯೊಳಗೆ ಅದರ ಲಿಪಿಯನ್ನು ಕೈವಶ ಮಾಡಿಕೊಳ್ಳಬಲ್ಲನು.” ಇನ್ನೊಂದು ಕಡೆ ಅವರು ಹೇಳುವ ಮಾತುಗಳನ್ನು ನೋಡಿ-” ನಿಜಕ್ಕೂ ಒಂದು ಭಾಷೆಯನ್ನು ಕಲಿಯುವ ಅವಶ್ಯಕತೆ ಬಂದರೆ ಚೀನೀ ಭಾಷೆಗಿರುವಂಥ ಅತೀ ಕ್ಲಿಷ್ಟವಾದ ಲಿಪಿಯನ್ನೂ ಜನ ಅರಗಿಸಿಕೊಂಡಾರು.ಬೇಡವಾಗಿರುವ ಭಾಷೆಯ ಲಿಪಿ ಸಮಾನವಾಗಿದ್ದರೂ ಒಂದೇ ವಿಭಿನ್ನವಾಗಿದ್ದರೂ ಒಂದೇ.”

ಡಾ.ಡಿ.ಎನ್.ಎಸ್. ಅವರ ವಾದದಲ್ಲಿರುವ ವೈರುಧ್ಯವನ್ನು ಗುರುತಿಸುವುದು ಕಷ್ಟವಲ್ಲ. ಅವರೆನ್ನುವಂತೆ ಅವರ “ಹೊಸ ಬರಹವನ್ನು ಓದಿ ಅಭ್ಯಾಸವಾದವರಿಗೆ ಹಳೆ ಬರಹಗಳಲ್ಲಿರುವ ಗ್ರಂಥಗಳನ್ನು ಓದಲು ಜಾಸ್ತಿ ಕಷ್ಟವಾಗಲಾರದು. ಒಂದೆರಡು ಗಂಟೆಗಳಲ್ಲೇ ಅವರು ಅದನ್ನು ಸಾಧಿಸಿಕೊಳ್ಳಬಲ್ಲರು.” ಹಾಗಿದ್ದರೆ ಈಗಿರುವ ಹಳೆ ಬರಹ ಕಲಿಯಲು ಕಷ್ಟವೆಂದು ಅವರು ಹೇಗೆ ತೀರ್ಮಾನಿಸುತ್ತಾರೆ? ಕೆಳವರ್ಗಗಳಿಗೆ ಕಲಿಕಾಸಾಮರ್ಥ್ಯ ಇಲ್ಲ ಎನ್ನುವ ಡಾ.ಡಿ.ಎನ್.ಎಸ್. ರ ಪರೋಕ್ಷ ನಂಬಿಕೆಯೇ ಪ್ರಶ್ನಾರ್ಹವಾದುದು.

ವರ್ಗ ಪ್ರಜ್ಞೆ ಅತಿ ಹೆಚ್ಚಾಗಿರುವ ಕೇರಳದಲ್ಲಿ ಅಕ್ಷರಗಳ ಸಂಖ್ಯೆ ತುಂಬ ಜಾಸ್ತಿ. ಅಲ್ಲಿ ಅಕ್ಷರಸ್ತರ ಪ್ರಮಾಣ ತಮಿಳುನಾಡಿಗೆ ಹೋಲಿಸಿದರೆ ತುಂಬ ಹೆಚ್ಚು.ಕಲೆ- ಸಾಹಿತ್ಯದಲ್ಲೂ ಕೇರಳ ತಮಿಳುನಾಡಿಗಿಂತ ತುಂಬ ಮುಂದಿದೆ. ಕೆಳವರ್ಗದವರು ಶಾಲೆಗೆ ಹೋಗುವುದರಿಂದ ಮತ್ತು ಬರಹ ಕಲಿಯುವುದರಿಂದ ವಂಚಿತರಾಗಿದ್ದರೆ ಅದಕ್ಕೆ ಭಾಷೇತರವಾದ ಸಾಮಾಜಿಕ-ಆರ್ಥಿಕ ಕಾರಣಗಳಿವೆ.ಕನ್ನಡದಲ್ಲಿ ಮೂವತ್ತೊಂದೇ ಅಕ್ಷರಗಳಾದರೆ ಕೆಳವರ್ಗದ ಕೀಳರಿಮೆ ಕಡಿಮೆಯಾದೀತು ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ.ವಾಸ್ತವವಾಗಿ ಇದರಿಂದ ಮತ್ತಷ್ಟು ಕೀಳರಿಮೆಯಾದೀತು.ಮೂವತ್ತೊಂದು ಅಕ್ಷರದವರು ಐವತ್ತೊಂದು ಅಕ್ಷರ ತಿಳಿದವರ ಎದುರು ಮತ್ತಷ್ಟು ಕುಬ್ಜರಾಗಬೇಕಾದೀತು.

ಒಟ್ಟಿನಲ್ಲಿ ಡಾ. ಡಿ.ಎನ್.ಎಸ್. ಯೋಜನೆಯು, “ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ ಸುಲಭ ಉಪಾಯವೆಂದರೆ ಬಡತನ ರೇಖೆಯನ್ನೇ ಸ್ವಲ್ಪ ಕೆಳಗೆ ಮಾಡುವುದು” ಎನ್ನುವಂತಿದೆ. ಚರ್ಚೆಗೆ ಸ್ವಾಗತ.

ಇತಿ, ಅಜಕ್ಕಳ ಗಿರೀಶ.

428 ಟಿಪ್ಪಣಿಗಳು Post a comment
  1. ssnkumar
    ಮಾರ್ಚ್ 28 2011

    ಭಾಷಾ ಕಲಿಕೆಗೂ ಹಿಂದುಳಿದ ವರ್ಗಕ್ಕೂ ಏನು ಸಂಬಂಧ!?
    ಸಂಸ್ಕೃತದಲ್ಲಿರುವಷ್ಟೇ ಅಕ್ಷರಗಳನ್ನು ಹೊಂದಿರುವ ಕನ್ನಡ ಅತ್ಯಂತ ಶ್ರೀಮಂತ ಭಾಷೆ.
    ವೈಜ್ಞಾನಿಕ ಹಿನ್ನೆಲೆಯಿಂದ ರಚಿತವಾಗಿರುವ ಈ ಅಕ್ಷರ ಮಾಲೆಯ ಸಹಾಯದಿಂದ, ಎಲ್ಲ ತರಹದ ಉಚ್ಚಾರಣೆಗಳಿಗೂ ಅಕ್ಷರ ರೂಪ ಕೊಡಬಹುದು.
    ಹಿಂದುಳಿದ ವರ್ಗದವರಿಗೆ ಒಂದು ಭಾಷೆ ಕಷ್ಟ ಎನ್ನುವುದು ಅರ್ಥವಾಗದ ಮಾತು.
    ಹಾಗಿದ್ದಿದ್ದರೆ, ಕನ್ನಡದಷ್ಟೇ ಅಕ್ಷರಗಳಿರುವ ಸಂಸ್ಕೃತದಲ್ಲಿ ವ್ಯಾಸ, ವಾಲ್ಮೀಕಿ, ಕಾಳಿದಾಸ ಮುಂತಾದವರ ಸಾಹಿತ್ಯಗಳು ರೂಪಿತವಾಗಲು ಸಾಧ್ಯವಿತ್ತೇ?
    ಶಂಕರ ಭಟ್ಟರ ಲೆಕ್ಕದಲ್ಲಿ ಇವರೆಲ್ಲರೂ ಹಿಂದುಳಿದ ವರ್ಗದವರೇ!
    ನಮ್ಮ ಸಮಾಜದಲ್ಲಿ ವರ್ಗಭೇಧವನ್ನು ಹುಟ್ಟುಹಾಖಿ, ಸಮಾಜವನ್ನು ಒಡೆಯಲು ಪ್ರಯತ್ನಿಸುವ ಶಕ್ತಿಗಳು ಈ ಶಂಕರ ಭಟ್ಟರಂಥಹವರ ಹಿಂದಿದ್ದಾರೆಂದು ನನ್ನ ಗುಮಾನಿ.

    ಉತ್ತರ
    • ರವಿ ಕುಮಾರ್ ಜಿ ಬಿ
      ಮಾರ್ಚ್ 28 2011
      • Shubhashree
        ಮಾರ್ಚ್ 28 2011

        Dear Mr. SSNkumar,

        ಸಂಸ್ಕೃತದಲ್ಲಿರುವಷ್ಟೇ ಅಕ್ಷರಗಳು ಹೊಂದಿರುವ ಕಾರಣಕ್ಕೆ ಕನ್ನಡ ಶ್ರೀಮಂತ ಭಾಷೆಯೇ? ಕನ್ನಡದಲ್ಲಿ ಬೇರೆಬೇರೆ ಉಚ್ಚರಣೆಗಾಗಿ ಹೆಚ್ಚೆಚ್ಚು ಅಕ್ಷರಗಳಿರುವುದು ಅದರ ಗರಿಮೆಯೇ? ಹಾಗೆ ನೋಡಿದರೆ ಬೇರೆ ಬೇರೆ ಉಚ್ಚರಣೆಗೆ ಬೇರೆಬೇರೆ ಅಕ್ಷರವಿರುವುದು ಒಂದು ತೆರನಾಗಿ ಲಾಭದಾಯಕ ಅನ್ನೋದು ಸರಿಯಾಗಿದೆ. ಕನ್ನಡಿಗರು ಉಲಿದಂತೆ ಬರೆಯುವುದು ಸರಿಯೋ ತಪ್ಪೋ ಅನ್ನುವುದಕ್ಕೆ ಇದು ಸಂಬಂಧವಿರದ ಮಾತು.
        ಹಿಂದುಳಿದ ವರ್ಗದವರಿಗೆ ಸಂಸ್ಕೃತ ಕಷ್ಟವಾದ್ದ ಕಾರಣದಿಂದಲೇ ನಿಮಗೆ quote ಮಾಡುವಷ್ಟು ಕಡಿಮೆ ಹಿಂದುಳಿದ ಜನಾಂಗದ ಕವಿಗಳ ಹೆಸರು ಬರೆಯಲಾಯಿತಲ್ಲವೇ? – ಹೀಗೂ ವಾದಿಸಬಹುದು ನೋಡಿ.
        ಬಹುಸಂಖ್ಯಾತರ ಕಲಿಕೆಗೆ, ಬಳಕೆಗೆ ಯಾವುದು ಸರಲವೋ ಅದನ್ನು ಬಳಸೋಣ ಅನ್ನುವುದು ಸರಿಯಾದ ನಿಲುವಲ್ಲವೇ?

        ಉತ್ತರ
        • ssnkumar
          ಮಾರ್ಚ್ 29 2011

          > ಸಂಸ್ಕೃತದಲ್ಲಿರುವಷ್ಟೇ ಅಕ್ಷರಗಳು ಹೊಂದಿರುವ ಕಾರಣಕ್ಕೆ
          > ಕನ್ನಡ ಶ್ರೀಮಂತ ಭಾಷೆಯೇ?
          ನಾನು ಹಾಗೆಲ್ಲಿ ಹೇಳಿದೆ. ಕನ್ನಡದಲ್ಲೂ ಸಂಸ್ಕೃತದಷ್ಟೇ ಅಕ್ಷರಗಳಿವೆ ಮತ್ತು ಕನ್ನಡವೂ ಶ್ರೀಮಂತ ಭಾಷೆಯೇ ಎಂಬ ಎರಡು ವಿಚಾರಗಳು ಅಲ್ಲಿವೆ. ಅಕ್ಷರ ಹೆಚ್ಚಿರುವುದರಿಂದ ಶ್ರೀಮಂತ ಎಂದು ನಾನು ಹೇಳುತ್ತಿಲ್ಲ.

          > ಹಿಂದುಳಿದ ವರ್ಗದವರಿಗೆ ಸಂಸ್ಕೃತ ಕಷ್ಟವಾದ್ದ
          > ಕಾರಣದಿಂದಲೇ ನಿಮಗೆ quote ಮಾಡುವಷ್ಟು ಕಡಿಮೆ
          > ಹಿಂದುಳಿದ ಜನಾಂಗದ ಕವಿಗಳ ಹೆಸರು
          > ಬರೆಯಲಾಯಿತಲ್ಲವೇ? – ಹೀಗೂ ವಾದಿಸಬಹುದು
          > ನೋಡಿ.
          ವಾದ ಮಾಡಿ ಗೆಲ್ಲಬೇಕೆಂದು ಹೊರಟರೆ ಇಂಥಾದ್ದೆಲ್ಲಾ ಆಗುತ್ತದೆ. ನಾನು ಕೇವಲ ಕೆಲವು ಸಾಲಿನ ಪ್ರತಿಕ್ರಿಯೆ ಬರೆದಿರುವೆನಷ್ಟೇ; ನನ್ನ ಪ್ರತಿಕ್ರಿಯೆಯೇನೂ ಪೂರ್ಣಪ್ರಮಾಣದ ಲೇಖನವಲ್ಲವಲ್ಲ. ಅಕ್ಕಿ ಬೆಂದಿದೆಯೇ ಎಂದುಉ ತಿಳಿಯಲು ಒಂದೆರಡು ಅಗುಳನ್ನು ಹಿಚುಕಿದರೂ ಸಾಕಲ್ಲವೇ? ನಮ್ಮ ದೇಶದ ಮೇರುಕೃತಿಗಳೆಂದು ಪರಿಗಣಿತವಾಗಿರುವ ಕೃತಿಗಳನ್ನು ಬರೆದವರು ತಥಾಕಥಿತ ಹಿಂದುಳಿದ ಜಾತಿಗಳವರು ಮತ್ತು ಅದನ್ನು ತಥಾಕಥಿತ ಮುಂದುವರೆದ ಜಾತಿಗಳವರೂ ಸ್ವೀಕರಿಸಿ ಪೂಜಿಸಿದ್ದಾರೆ.
          ಭಾಷೆಯೊಂದು ಯಾವುದೋ ಜಾತಿಗೆ ಮಾತ್ರ ಸೇರಿದ್ದೆಂಬುದನ್ನು ಒಪ್ಪುವ ಮಾತಲ್ಲ. ಸಂಸ್ಕೃತವು ಎಂದೂ ಯಾವ ಜಾತಿಗೂ ಸೇರಿರಲಿಲ್ಲ ಎಂದು ತಿಳಿಸುವುದಕ್ಕೆ ಒಂದೆರಡು ಉದಾಹರಣೆ ಕೊಟ್ಟೆನಷ್ಟೇ.
          ಈ ವಿಷಯದಲ್ಲಿ ನಿಮ್ಮ ವಾದವನ್ನು ಪುಷ್ಟೀಕರಿಸುವ ಆಧಾರಗಳಿದ್ದರೆ ಅದನ್ನು ಮುಂದೆ ತನ್ನಿ; ಚರ್ಚಿಸೋಣ; ಸತ್ಯವನ್ನು ಒಪ್ಪೋಣ.

          > ಬಹುಸಂಖ್ಯಾತರ ಕಲಿಕೆಗೆ, ಬಳಕೆಗೆ ಯಾವುದು
          > ಸರಲವೋ ಅದನ್ನು ಬಳಸೋಣ ಅನ್ನುವುದು ಸರಿಯಾದ
          > ನಿಲುವಲ್ಲವೇ?
          ಇದರ ಕುರಿತಾಗಿ ಯಾರ ವಿರೋಧವೂ ಇಲ್ಲ.
          ಇದನ್ನು ಯಾವ ರೀತಿ ಮಾಡಬೇಕೆಂಬ ಕುರಿತಾಗಿ ಅಭಿಪ್ರಾಯ ಭೇಧವಷ್ಟೇ!
          ಮತ್ತು ನಮ್ಮ ಭಾಷೆಯ ಉದ್ದಾರದ ನೆಪದಲ್ಲಿ ಮತ್ತೊಂದು ಭಾಷೆಯ ಕುರಿತಾಗಿ ಇಲ್ಲಸಲ್ಲದ ಮಾತುಗಳನ್ನು ಹೇಳಿದರೆ, ಚರ್ಚೆಯ ಜಾಡೇ ಬದಲಾಗುತ್ತದೆ. ಈ ರೀತಿಯ ಋಣಾತ್ಮಕ ಮಾತುಗಳು, ನಮ್ಮ ನಿಲುವನ್ನು ಸಾಬೀತು ಪಡಿಸಲು ನಮ್ಮ ಬಳಿ ಸಾಕಷ್ಟು ಸರಕಿಲ್ಲವೆಂಬುದನ್ನು ಎತ್ತಿ ತೋರಿಸುತ್ತದಷ್ಟೇ!

          > ಡಾ. ಶ್ರೀಧರ್ ಅನ್ನೋರು ಕನ್ನಡದ ವ್ಯಾಕರಣಾನ
          > ಇಂಗ್ಲೀಷಲ್ಲಿ ಬರೆದಿದ್ದಾರೆ. ಅವರ ಖನ್ನಡ ಪ್ರೇಮಾನ
          > ಇಡೀ ವಿಶ್ವವೇ ಕೊಂಡಾದ್ತಿದೆ ನೋಡ್ಕೊಳ್ಳಿ.
          > ಕನ್ನಡ ಭಾಷೆಯ ಪದಗಳನ್ನು ಉಲಿಯಲು, ಕಲಿಯಲು
          > ಭಟ್ಟರು ಹೇಳಿರುವ 31 ಅಕ್ಷರಗಳು ಸಾಕು
          31 ಏಕೆ, 26 ಕೂಡಾ ಸಾಕಾಗಬಹುದು. ಇಂಗ್ಲಿಷ್ ಲಿಪಿಯಲ್ಲೇ ಕನ್ನಡವನ್ನೂ ಬರೆದು ತೋರಿಸುತ್ತಿರುವವರು ಇದ್ದಾರಲ್ಲಾ? ಕನ್ನಡದಲ್ಲಿ ಮಾತನಾಡುವ ಎಲ್ಲವನ್ನೂ ಇಂಗ್ಲಿಷಿನಲ್ಲಿ ಬರೆಯಲು ಸಾಧ್ಯವಾದರೆ, ಅದನ್ನೇ ನಮ್ಮ ಲಿಪಿ ಮಾಡಿಕೊಂಡುಬಿಡೋಣ ಅಲ್ಲವೇ?
          ಅಲ್ಪಪ್ರಾಣ-ಮಹಾಪ್ರಾಣ, ಹ್ರಸ್ವ-ಧೀರ್ಘಗಳ ತಂಟೆಯೇ ಇರುವುದಿಲ್ಲ. ಒತ್ತಕ್ಷರದ ಪ್ರಾಣಸಂಕಟವೂ ತಪ್ಪುತ್ತದೆ.

          > ಇವುಗಳ ಮೂಲ “ಆದಿ ದ್ರಾವಿಡ” ಅನ್ನುವ ಕಲ್ಪಿತ
          > ಭಾಷೆ.
          ನಿಮಗೆ ಬೇಕಾದಾಗ ಕಲ್ಪಿತವೂ ಸರಿಯೇ ಅಲ್ಲವೇ?

          ಒಟ್ಟಿನಲ್ಲಿ “ಧನ”ವೆಲ್ಲಾ “ದನ”ವಾಗಲಿ; “ಮಧ್ಯ”ವು “ಮದ್ಯವಾಗಲಿ”…..

          ಉತ್ತರ
          • ಮಾಯ್ಸ
            ಮಾರ್ಚ್ 29 2011

            ಧನಕ್ಕೆ ಕನ್ನಡದ್ದೇ ಆದ ಹಣ ಇದೆ. ಮಧ್ಯಕ್ಕೆ ಕನ್ನಡದ್ದೇ ಹೆಂಡ ಇದೆ, ಹಾಗೇ ಮಧ್ಯಕ್ಕೆ ಕನ್ನಡದಲ್ಲೇ ನಡುವೆ ಅಂತ ಇದೆ.

            ಸಂಸ್ಕೃತದ್ದೇ ಆಗಬೇಕು ಎಂಬವರಿಗೆ ಏನು ಮಾಡೋಣ.

            ಕನ್ನಡದ್ದೇ ಪದಗಳಲ್ಲಿ ಉಸಿರಿದ/ಉಸಿರಿಲ್ಲದ ಅದಲುಬದಲು ಮಾಡಿದರೆ ಈ ಬಗ್ಗೆ ಏರುಪೇರು ಆಗು ಮಾದರಿ/ಉದಾಹರಣೆ ತೋರಿಸಿ ನೋಡೋಣ?!

            ಉತ್ತರ
            • ಮಾಯ್ಸ
              ಮಾರ್ಚ್ 29 2011

              ಅಲ್ಲಿ ಅವರು ಹೇಳೋ “ಆದಿ ದ್ರಾವಿಡ”/proto Dravidian ಎಂಬುದು theoretical.

              ಅದರಂತೆ ಸಂಸ್ಕೃತಕ್ಕೂ Avesta ಅನ್ನೋದು ಇದೆ. ಇದು ನುಡಿಯರಿಮೆಯಲ್ಲಿ ಮಾಮೂಲಿ ಸಂಗತಿ. ಗೊತ್ತಿಲ್ಲದಿದ್ದರೆ ತಿಳಿದು ಮಾತಾಡಬೇಕು.!

              ಉತ್ತರ
              • Narendra Kumar.S.S
                ಮಾರ್ಚ್ 29 2011

                > ಗೊತ್ತಿಲ್ಲದಿದ್ದರೆ ತಿಳಿದು ಮಾತಾಡಬೇಕು.!
                ನೀವು ಯಾರಿಗೆ ತಿಳಿಸುತ್ತಿದ್ದೀರೋ ತಿಳಿಯಲಿಲ್ಲ. “ಪ್ರಾಕೃತ”ವನ್ನು ಇಲ್ಲಿ ಪ್ರಸ್ತಾವನೆ ಮಾಡಿದವರು ಯಾರು?

                ಮತ್ತು ಗೊತ್ತಿಲ್ಲದಿರುವುದನ್ನು ತಿಳಿಯುತ್ತಾ ಹೋಗುವುದೇ ಜೀವನ. ಎಲ್ಲವನ್ನು ತಿಳಿದ ನಂತರವೇ ಮಾತನಾಡುತ್ತೇನೆಂದು ನೀವು ತಿಳಿದಿದ್ದರೆ, ನಿಮ್ಮ ತಿಳಿವಿನ ಕುರಿತಾಗಿ ಕನಿಕರಿಸಬೇಕಷ್ಟೇ!

                ಮತ್ತು ನಿಮ್ಮ ಮಾತಿನಲ್ಲಿರುವ “ಅಹಂ”ಕಾರವು ಶುಭದ ಸೂಚನೆಯಲ್ಲ.

                ಉತ್ತರ
                • ಮಾಯ್ಸ
                  ಮಾರ್ಚ್ 29 2011

                  ನಿಮ್ಮ ಮಾತಲ್ಲಿ ತಿಳುವಳಿಕೆ ಕೊರೆತೆ ಎದ್ದು ಕಾಣುತ್ತಿದ್ದು..

                  ಮಾತನ್ನು ಎತ್ತೆಲ್ಲೋ ಬಳಸಿ ಬೆಳೆಸುತ್ತಿರುವರಿ. ಆದುದರಿಂದ ತಮನೆ ಹುರುಳು ಏನೆಂದು ಅರಿತು ಮಾತಾಡುವ ಹುರುಪಾಗಲೀ, ಗುರಿಯಾಗಲಿ ಇಲ್ಲವೆಂದು ತೋರುವುದು.

                  ನನ್ನ ವೈಯುಕ್ತಿಕ ಗುಣಾವಗುಣಗಳ ಲೆಕ್ಕಕ್ಕೆ ಕೈ ಹಾಕಿರುವುದು ತಮಗೆ ತುಂಬಾ ಶೋಭಾಯಮಾನ! 🙂

                  ಇಂತಿ!

                  ಉತ್ತರ
                  • Narendra Kumar.S.S
                    ಮಾರ್ಚ್ 29 2011

                    > ನಿಮ್ಮ ಮಾತಲ್ಲಿ ತಿಳುವಳಿಕೆ ಕೊರೆತೆ ಎದ್ದು ಕಾಣುತ್ತಿದ್ದು
                    ಅದನ್ನು ತೋರಿಸಿದರೆ ಒಪ್ಪಿಕೊಳ್ಳುವೆ.
                    ಆದರೆ, ನನ್ನ ಪ್ರತಿಕ್ರಿಯೆ ಯಾರಿಗೆ ನೀಡಿದ್ದು, ಯಾವ ಕಾರಣಕ್ಕೆ, ಇತ್ಯಾದಿಗಳ ಪರಾಮರ್ಶೆಯೇ ಬೇಡವೇ?

                    > ಮಾತನ್ನು ಎತ್ತೆಲ್ಲೋ ಬಳಸಿ ಬೆಳೆಸುತ್ತಿರುವರಿ
                    ನನ್ನ ಪ್ರತಿಕ್ರಿಯೆಯ ಜಾಡು ತಮಗೆ ತಿಳಿಯಲಿಲ್ಲವೆಂದೆಣಿಸುತ್ತೇನೆ.

                    > ನನ್ನ ವೈಯುಕ್ತಿಕ ಗುಣಾವಗುಣಗಳ ಲೆಕ್ಕಕ್ಕೆ
                    ನೀವು ಹೇಳಿದ “ಗೊತ್ತಿಲ್ಲದಿದ್ದರೆ ತಿಳಿದು ಮಾತಾಡಬೇಕು” ಮಾತಿನಲ್ಲಿ ಎದ್ದು ಕಾಣುತ್ತಿರುವ ಗುಣವೇನು?
                    ಮೊದಲಿಗೆ ನಾನು ಪ್ರತಿಕ್ರಿಯಿಸುತ್ತಿರುವುದು ಯಾರಿಗೆ ಎನ್ನುವುದನ್ನೂ ತಿಳಿಯದೆ, ತಮಗೆ ಮಾತ್ರ ಎಲ್ಲವೂ ತಿಳಿದಿದೆ ಎನ್ನುವ ರೀತಿಯಲ್ಲಿ ತೋಚಿದ ಹಾಗೆ “ಉಪದೇಶ” ನೀಡುವವರಿಗೆ ಮತ್ತೇನು ಹೇಳಬೇಕು ನೀವೇ ಹೇಳಿ?

                    ನನಗೇನೂ ನಿಮ್ಮ ಬಗ್ಗೆ ತಿಳಿದಿಲ್ಲ; ಇನ್ನು ನಿಮ್ಮ ಗುಣಾವಗುಣಗಳ ವಿಮರ್ಶೆಯ ಅಗತ್ಯವೂ ನನಗಿಲ್ಲ ಮತ್ತು ಅದರಿಂದ ನಮ್ಮೆಲ್ಲರ ಸಮಯವೂ ವ್ಯರ್ಥ. ಆ ರೀತಿ ಆಗಲು “ಗೊತ್ತಿಲ್ಲದಿದ್ದರೆ ತಿಳಿದು ಮಾತಾಡಬೇಕು” ಎನ್ನುವ ಮೂದಲಿಕೆಯೇ ಕಾರಣವಲ್ಲವೇ?

                    ಉತ್ತರ
              • ಮಾರ್ಚ್ 30 2011

                ಮಾಯ್ಸರೇ,

                ಸಂಸ್ಕೃತ ಮತ್ತು ಅವೆಸ್ಟಾ ನಡುವೆ ಇರುವ ಸಂಬಂಧವೂ, ಕನ್ನಡ ಮತ್ತು ಆದಿ ದ್ರಾವಿಡಕ್ಕೂ ಇರುವ ಸಂಬಂಧ ಒಂದೇ ರೀತಿಯದ್ದಲ್ಲ ಅಂತ ನಿಮಗೆ ಗೊತ್ತೆಂಬುದು ನನಗೆ ಗೊತ್ತು. (ಗೊತ್ತಿಲ್ಲದವರನ್ನ) ಯಾಕೆ ತಪ್ಪು ದಾರಿಯಲ್ಲಿ ಎಳೀತಿದೀರಾ?

                ಉತ್ತರ
                • ಮಾಯ್ಸ
                  ಮಾರ್ಚ್ 30 2011

                  ಹೇಗೆ?

                  ನನಗೆ ಎರಡೂ ಒಂದೇ ತೆರನಾದುದು ಎಂದು ಅನ್ನಿಸುವುದು.

                  ಅವೇಸ್ತದಲ್ಲಿ ಬರೆವಣಿಗೆ ಇದೆ ಎಂದು ನಿಮ್ಮ ಮಾತಾದರೇ, ಕನ್ನಡ-ತಮಿಳು ಬೇರ್ಪಡುವ ಹಿಂದಿನ ಬರೆವಣಿಗೆ ಇದೆ.

                  ನಾನು ಹೇಳ ಹೊರಟಿದ್ದು, ಸಂಸ್ಕೃತಕ್ಕೂ ಇರಾನಿನುಡಿಗೂ ಆವೇಸ್ತಾ ಎಂಬುದು ತಾಯ್ನುಡಿ ಎಂದು ಹೇಳುತ್ತಾರೆ. ಹಾಗೇ ಎಲ್ಲ ದ್ರಾವಿಡನುಡಿಗಳಿಗೂ ಪ್ರೋಟೋ-ದ್ರಾವಿಡ ಎಂಬುದು ಇತ್ತು ಎಂಬುದರಲ್ಲಿ ಯಾವ ಅಯ್ಬೂ ಇಲ್ಲ.

                  ಉತ್ತರ
            • Narendra Kumar.S.S
              ಮಾರ್ಚ್ 29 2011

              ಕೇವಲ ನಮ್ಮ ಬಳಿ ಇರುವುದಷ್ಟೇ ಸಾಕು, ಬೇರಾವುದೂ ಬೇಡ ಎನ್ನುವುದು ವಿಶಾಲ ಮನೋಭಾವವನ್ನು ತೋರಿಸುವುದಿಲ್ಲ. “ಹೆಂಡ”ದೊಡನೆ “ಮಧ್ಯ” ಸೇರಿದರೆ “ಹೆಂಡ”ಕ್ಕೇನೂ ತೊಂದರೆಯಾಗುವುದಿಲ್ಲವಲ್ಲ.
              ಭಾಷೆಯೊಂದು ಶ್ರೀಮಂತವಾಗುವುದು ತನ್ನಲ್ಲಿರುವುದನ್ನು ಮಾತ್ರ ಇಟ್ಟುಕೊಳ್ಳುವುದರಿಂದಲ್ಲ, ಎಲ್ಲೆಡೆಯಿಂದಲೂ ಉತ್ತಮವಾದದ್ದನ್ನು ಪಡೆಯುವುದರಿಂದ.

              > ಸಂಸ್ಕೃತದ್ದೇ ಆಗಬೇಕು ಎಂಬವರಿಗೆ ಏನು ಮಾಡೋಣ
              ಇಲ್ಲಿ ಯಾರೂ ಸಂಸ್ಕೃತದ್ದೇ ಆಗಬೇಕು ಎಂದು ಹೇಳುತ್ತಿಲ್ಲ. ಬದಲಿಗೆ, ಸಂಸ್ಕೃತದ್ದು ಬೇಡವೇ ಬೇಡ ಎನ್ನುವ ಅರ್ಥವಿಲ್ಲದ ವಾದಕ್ಕಷ್ಟೇ ನನ್ನ ವಿರೋಧ.

              ಉತ್ತರ
    • Shubhashree
      ಮಾರ್ಚ್ 28 2011

      Dear SSNkumar,

      ಕನ್ನಡ ಭಾಷೆಯ ಪದಗಳನ್ನು ಉಲಿಯಲು, ಕಲಿಯಲು ಭಟ್ಟರು ಹೇಳಿರುವ 31 ಅಕ್ಷರಗಳು ಸಾಕು. ಕನ್ನಡದ್ದಲ್ಲದ ಅಕ್ಷರಗಳ ಉಲಿಯುವಿಕೆಗೆ ಬೇಕಾದಷ್ಟು ಅಕ್ಷರಗಳನ್ನು ಕಟ್ಟಿಕೊಳ್ಳಬಹುದು. ಹಳೆಗನ್ನಡದ ರ, ಳ ಗಳು, ಫ ಕೆಳಗಿನ ಎರಡು ಚುಕ್ಕೆಯ ಫೋಟೋ ಅನ್ನುವಾಗಿನ ಫ… ತಮಿಳರು ಬಳಸುವ ರ, ಳ ನಡುವಿನ ಅಕ್ಷರ, ಜೀಬ್ರಾದ ಜೀ… ಹೀಗೆ ಬೇರೆ ಬೇರೆ ಭಾಷೆಗಳ ಉಚ್ಚರಣೆಗೆ ಬೇಕಾದ ಅಕ್ಷರಗಳನ್ನೆಲ್ಲಾ ಕನ್ನಡಕ್ಕೆ ಸೇರಿಸಿ ಕನ್ನಡ ಶ್ರೀಮಂತಭಾಷೆ ಎನ್ನುವುದು ವಿವೇಕವೇ?

      ಉತ್ತರ
  2. Asthra
    ಮಾರ್ಚ್ 28 2011

    Kannada, Tamil, Telugu ithyaadi dakshina bhaarathada bhaashegalu sahodari bhaashegalaagive. ivugala moola praakrutha. Saamanya janarige nirbhanditavaagidda sanskruthakke jothu beeluvudu tharavalla. Kannada kannada endu bobiduva Bhairappa, Chidaananda murthy galu Sanskrutha V.V sthaapisuvaaga mounavahisuvudu kooda ide Bhraamanyada kaaranadinda.
    Ittichina dinagalalli(hindeyu nadedide, eega hecchu theevravaagi) bhramanyavannu ottaayapoorvakavaagi kannadada mele heralaaguttide. Idannu naavu tiraskarisi saamanya janasampadara kannadavaagabeku..

    ಉತ್ತರ
    • Narendra Kumar.S.S
      ಮಾರ್ಚ್ 28 2011

      ಕನ್ನಡದ ಕುರಿತಾದ ಚರ್ಚೆಗೆ ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಬರೆಯುವಾಗಲೇ ನಿಮ್ಮ “ಖನ್ನಡ ಪ್ರೇಮ” ತಿಳಿಯುತ್ತದೆ!

      > ivugala moola praakrutha.
      ಪ್ರಾಕೃತದ ಮೂಲವೇನು ಎಂದು ದಯವಿಟ್ಟು ತಿಳಿಸಬಹುದೇ?

      > Saamanya janarige nirbhanditavaagidda sanskruthakke jothu beeluvudu tharavalla.

      ಸಂಸ್ಕೃತ ನಿರ್ಬಂಧಿತವಾಗಿತ್ತು ಎನ್ನುವುದು ನಿಮ್ಮ ಊಹೆಯಷ್ಟೇ.
      ಅದು ನಿಜವೇ ಆಗಿದ್ದಲ್ಲಿ, ವಾಲ್ಮೀಕಿಯಿಂದ ರಾಮಾಯಣ, ವ್ಯಾಸರಿಂದ ಮಹಾಭಾರತ ರಚಿತವಾಗುತ್ತಿರಲಿಲ್ಲ ಮತ್ತು ಅದನ್ನು ಸಮಾಜ ಸ್ವೀಕರಿಸುತ್ತಿರಲಿಲ್ಲ.

      > Bhraamanyada kaaranadinda
      ಇದರ ಅರ್ಥವೇನೆಂದು ದಯವಿಟ್ಟು ತಿಳಿಸುವಿರಾ?

      > bhramanyavannu ottaayapoorvakavaagi kannadada mele heralaaguttide
      ಇದೂ ನನಗೆ ಅರ್ಥವಾಗುತ್ತಿಲ್ಲ. ಯಾರು ಹೇರುತ್ತಿದ್ದಾರೆ? ಎಲ್ಲಿ ಹೇರುತ್ತಿದ್ದಾರೆ?
      ಬ್ರಾಹ್ಮಣರಾದ ಯಡ್ಯೂರಪ್ಪನವರು ಇದಕ್ಕೆ ಕಾರಣರೇ ಅಥವಾ ಈಶ್ವರಪ್ಪನವರೇ?

      ಉತ್ತರ
      • Shubhashree
        ಮಾರ್ಚ್ 28 2011

        Dear Narendra kumar.S.S

        ಕನ್ನಡ ಕುರಿತಾದ ಚರ್ಚೆಯನ್ನು ಇಂಗ್ಲೀಷಲ್ಲಿ ಮಾಡುವುದು “ಖನ್ನಡಪ್ರೇಮ” ಎನ್ನುವ ವ್ಯಂಗ್ಯದಲ್ಲೇ ನಿಮ್ಮ ಮೇಲರಿಮೆಯ ಕೀಳುಬುದ್ಧಿ ಕಾಣುತ್ತಿದೆ. ಡಾ. ಶ್ರೀಧರ್ ಅನ್ನೋರು ಕನ್ನಡದ ವ್ಯಾಕರಣಾನ ಇಂಗ್ಲೀಷಲ್ಲಿ ಬರೆದಿದ್ದಾರೆ. ಅವರ ಖನ್ನಡ ಪ್ರೇಮಾನ ಇಡೀ ವಿಶ್ವವೇ ಕೊಂಡಾದ್ತಿದೆ ನೋಡ್ಕೊಳ್ಳಿ.
        ಇವುಗಳ ಮೂಲ ಪ್ರಾಕೃತ ಅನ್ನೋದು ತಪ್ಪು. ಇವುಗಳ ಮೂಲ “ಆದಿ ದ್ರಾವಿಡ” ಅನ್ನುವ ಕಲ್ಪಿತ ಭಾಷೆ.
        ನಿರ್ಬಂಧದ ಬಗ್ಗೆ ಇಲ್ಲಿ ವಾದ ಪ್ರಸ್ತಿತ ಎಂದು ನನಗನ್ನಿಸದು.
        ಬ್ರಾಹ್ಮಣ್ಯದ ಪದ ಬಳಕೆಯ ವ್ಯಾಖ್ಯಾನವನ್ನೂ ನಾನರಿಯೆ. ಅದು ಸರಿ ಅನಿಸುವುದಿಲ್ಲ. ಆದರೆ ಇಲ್ಲಿ ಹೀಗೆ ಉಚ್ಚರಿಸುವುದು ಸರಿ, ಹೀಗೆ ಉಚ್ಚರಿಸುವುದು ತಪ್ಪು,. ಹೀಗೆ ಉಚ್ಚರಿಸಿದರೆ ಮೇಲು, ಹೀಗೆ ಉಚ್ಚರಿಸಿದರೆ ಕೀಳು ಎನ್ನುವ ಏರ್ಪಾತಿರುವುದು ಮಾತ್ರಾ ನಿಜವಷ್ಟೇ?

        ಉತ್ತರ
        • Gopalakrishna Bhagwat
          ಆಗಸ್ಟ್ 3 2013

          Ms. Shubhashree Dravidian etymology is an independent discipline and it has been established long back about the separate existence of Dravidian linguistic group. You want to start a new argument which has no depth and research in it.

          ಉತ್ತರ
  3. Vasant
    ಮಾರ್ಚ್ 28 2011

    ಡಿ.ಎನ್.ಎಸ್ ಅವರ ಹಲವು ಪುಸ್ತಕಗಳು ನನ್ನಲ್ಲಿ ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿವೆ.
    ನಾನು ಓದಿದ ಹಳ್ಳಿಯ ಶಾಲೆಯಲ್ಲಿ ಓದುತ್ತಿದ್ದ ಹೆಚ್ಚಿನವರು ಸಮಾಜದ ದೃಷ್ಟಿಯಲ್ಲಿ ಕೆಳ ಜಾತಿ ಅನ್ನಿಸಿಕೊಂಡಿರುವ ಹುಡುಗರು. ಅಲ್ಲಿ ಗಣಿತ, ವಿಜ್ಞಾನದ ವಿಷಯಗಳು ಅವರಿಗೆಲ್ಲ ಹೇಗೆ ಕಬ್ಬಿಣದ ಕಡೆಲೆಯಾಗಿತ್ತು ಅನ್ನುವುದು ನನಗೆ ಗೊತ್ತು.

    ಅತೀ ಸಂಸ್ಕೃತದ ಬಳಕೆಯಿಂದ ಕನ್ನಡ ಮಾಧ್ಯಮದ ಕಲಿಕೆ ನಿಜಕ್ಕೂ ಕಗ್ಗಂಟಾಗಿದೆ. ನನ್ನ ಬ್ಲಾಗ್ ನಲ್ಲಿ ನಡೆದ ಈ ಚರ್ಚೆಯನ್ನು ಗಮನಿಸಿ:
    My post:
    http://thatskannada.oneindia.in/literature/my-karnataka/2009/1024-solve-the-problem-and-win-prize.html

    Principal’s reply:
    http://thatskannada.oneindia.in/literature/my-karnataka/2009/1026-god-save-kannada-medium-students.html

    And My reply to Principal:
    http://vasantabanda.blogspot.com/2009/10/thatskannada-dalli-nadeda-charchege.html

    ಉತ್ತರ
  4. Vasant
    ಮಾರ್ಚ್ 28 2011

    ಕನ್ನಡಿಗರ ನುಡಿ ಸಾವಿರಾರು ವರ್ಷಗಳಿಂದ ಇದ್ದು. ಆ ನುಡಿಯ ರಚನೆ, ಆಳ ಅಗಲವನ್ನು ಅರಿಯುವುದೇ ಕನ್ನಡ linguisticsನ ಕೆಲಸ. Literacy rate in India was just around 12% when British left India. ಬ್ರಿಟಿಶರು ಭಾರತ ಬಿಡುವಾಗ ಕಲಿಕೆ ಅನ್ನುವುದು ಭಾರತದ ಕೆಲವೇ ಕೆಲವು ಮೇಲ್ವರ್ಗದ ಜನರ ಸ್ವತ್ತಾಗಿತ್ತು ಹಾಗೂ ಅವರಿಗೆ ಮಾತ್ರ ಬೇಕಾದ ವಿದ್ಯೆಯಾಗಿತ್ತು. ಒಬ್ಬ ಉಳುವವನೋ, ಚಮ್ಮಾರನೋ, ನೇಕಾರನೋ, ಕುಂಬಾರನೋ ಯಾವತ್ತು ಕಲಿಕೆಯ ಬಗ್ಗೆ ಯೋಚಿಸುತ್ತಲೂ ಇರಲಿಲ್ಲ. ಅವನಿಗೆ ಅವನ ಕುಲಕಸುಬೊಂದೇ ಸಾಕಾಗಿತ್ತು.
    ಇವತ್ತಿಗೂ ಹಳ್ಳಿ ಗಾಡಿನ ಜನರ ನುಡಿಯನ್ನು ಗಮನಿಸಿದರೆ ಅಲ್ಲಿ ಕಾಣಿಸುವುದು ಬರಹದ ಮೂಲಕ ಕನ್ನಡಕ್ಕೆ ಬಂದ ಶಿಷ್ಟ ಕನ್ನಡದ ಪದಗಳಲ್ಲ. ಅಲ್ಲಿ ಕಾಣಿಸುವುದು ಬಹು ಪಾಲು ಅಚ್ಚ ಕನ್ನಡದ ಪದಗಳು.

    ಆದ್ರೆ ಕಳೆದ ಶತಮಾನ ವಿಶ್ವದೆಲ್ಲೆಡೆ ನಡೆದಂತೆ ಭಾರತದಲ್ಲೂ ಅಕ್ಷರ ಕಲಿಕೆಯ ಬಗ್ಗೆ ಸತತ ಗಮನದಿಂದಾಗಿ ಇವತ್ತು literacy rate ಸುಮಾರು ೬೮%ಕ್ಕೆ ಬಂದಿದೆ. ಸಮಾಜದ ಎಲ್ಲ ವರ್ಗದ ಜನರು ಇವತ್ತು ಕಲಿಕೆ ಬೇಕು ಅನ್ನುತ್ತಿದ್ದಾರೆ. ಬರಹದ ಮೂಲಕ ಕನ್ನಡಕ್ಕೆ ಬಂದ ಎಲ್ಲ ಪರ ನುಡಿಯ ಪದಗಳು ಹೆಚ್ಚಿನ ಕಲಿತ ಕನ್ನಡಿಗರಿಗೆ ಪರಿಚಯಗೊಂಡದ್ದು ಕಳೆದ ಶತಮಾನದಲ್ಲೇ ಅನ್ನಬಹುದು.

    ಯಾವ ಪದಗಳು, ಯಾವುದೇ ಮೂಲದಿಂದ ಬಂದಿರಲಿ,ಅವು ಕನ್ನಡಿಗರ ಕಲಿಕೆಯನ್ನು ಸುಧಾರಿಸಿವೆಯೊ, ಜ್ಞಾನ-ವಿಜ್ಞಾನದ ನಿಪುಣತೆಯನ್ನು ಹೆಚ್ಚು ಮನದಟ್ಟು ಮಾಡಿಕೊಡುವಂತೆ ಮಾಡಿವೆಯೋ ಅಂತ ಎಲ್ಲ ಪದಗಳು ಕನ್ನಡದ್ದೇ ಎಂದು ಪರಗಣಿಸಿ ಮುಂದುವರೆಯಬೇಕು. ಯಾವುದರಿಂದ ಕೆಲ ಮಟ್ಟಿನ ತೊಂದರೆ ಇದೆಯೋ, ಅಂತಹ ಪದಗಳಿಗೆ ಕನ್ನಡದಲ್ಲೇ ಸುಲಭದ ಪದವಿದ್ದಲ್ಲಿ ಅದನ್ನು ಪಠ್ಯ ಪುಸ್ತಕ ಪರಿಶೀಲನೆ ಮಾಡುವಾಗ ಗಣನೆಗೆ ತೆಗೆದುಕೊಳ್ಳಲಿ.

    ಲಿಪಿ ಬಗ್ಗೆ ಅತಿಯಾದ ವ್ಯಾಮೋಹವೂ ಬೇಕಿಲ್ಲ. ವಿಶ್ವದೆಲ್ಲೆಡೆ ತನ್ನ ಜನರ ಕಲಿಕೆಯ ವೇಗವನ್ನು ಹೆಚ್ಚಿಸಲು, ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ಹಲವಾರು ದೇಶಗಳು ತಮ್ಮ ಲಿಪಿಯನ್ನು ಕೈ ಬಿಟ್ಟು ರೋಮನ್ ಲಿಪಿಯನ್ನು ಬಳಸಿದ ಉದಾಹರಣೆಗಳು ಇದೆ. ಬರೀ ಇತಿಹಾಸ, ಹಳೆಯ ಹಿರಿಮೆ ಬಗ್ಗೆಯೇ ಇಮೋಷನಲ್ ಆಗದೇ ಕನ್ನಡವನ್ನು ಜಾಗತೀಕರಣದ ಈ ಪ್ರವಾಹದಲ್ಲಿ ಈಜಿ ದಡ ಸೇರುವುದಕ್ಕೆ ಏನು ಬೇಕೊ ಅದನ್ನೇ ಮಾಡುವಂತ ಮನಸ್ಥಿತಿ ನಮ್ಮನ್ನಾಳುವ ದೊರೆಗಳಿಗೆ ಬರಬೇಕು.

    ಎಲ್ಲ ನುಡಿಯಿಂದಲೂ ಬೇಕಾದದ್ದನ್ನು ಪಡೆಯೋಣ. ಕಲಿಕೆಯನ್ನು ಎಲ್ಲ ವರ್ಗದ ಜನರಿಗೆ ತಲುಪಿಸುವಲ್ಲಿ ಏನೇನ್ ಆಗಬೇಕೊ ಅದೆಲ್ಲ ಅಗಲಿ. ಆ ಹಾದಿಯಲ್ಲಿ ಎಲ್ಲ ರೀತಿಯ ಅನಿಸಿಕೆ, ಅಭಿಪ್ರಾಯಗಳಿಗೂ ಮುಕ್ತ ಹಾದಿ ಇರಲಿ. ಶಂಕರ ಭಟ್ಟರ ಅನಿಸಿಕೆಗಳು, ಅವರ ನಿಲುವನ್ನು ವಿರೋಧಿಸುವವರ ಅನಿಸಿಕೆಗಳು, ಎಲ್ಲವೂ ಮಾರುಕಟ್ಟೆಗೆ ಬರಲಿ.. ಯಾವುದು ಸರಿ ಅನ್ನುವುದನ್ನು ಸಮಯವೊಂದೇ ತೀರ್ಮಾನಿಸುತ್ತೆ.

    ಉತ್ತರ
    • Narendra Kumar.S.S
      ಮಾರ್ಚ್ 28 2011

      > Literacy rate in India was just around 12% when British left India.
      ಇದಕ್ಕೆ ಕಾರಣ ಯಾರು? ಬ್ರಿಟಿಷರೇ ಅಲ್ಲವೇ?
      ೧೮-೧೯ನೇ ಶತಮಾನದಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿ ಸಾಕ್ಷರತಾ ಪ್ರಮಾಣ ಎಷ್ಟಿತ್ತೆನ್ನುವುದು ತಿಳಿದರೆ, ನೀವು ತಿಳಿಸುತ್ತಿರುವ ಸಂಖ್ಯೆ ಹೆಚ್ಚೋ ಇಲ್ಲವೇ ಕಡಿಮೆಯೋ ತಿಳಿಯುತ್ತದೆ.

      > ಬ್ರಿಟಿಶರು ಭಾರತ ಬಿಡುವಾಗ ಕಲಿಕೆ ಅನ್ನುವುದು ಭಾರತದ ಕೆಲವೇ ಕೆಲವು ಮೇಲ್ವರ್ಗದ ಜನರ ಸ್ವತ್ತಾಗಿತ್ತು ಹಾಗೂ ಅವರಿಗೆ ಮಾತ್ರ ಬೇಕಾದ ವಿದ್ಯೆಯಾಗಿತ್ತು
      ಇದನ್ನು ಖಡಾಖಂಡಿತವಾಗಿ ಹೇಳಲು ನಿಮಗಿರುವ ಆಧಾರವೇನು?
      ಬ್ರಿಟಿಷರೇ ದಾಖಲಿಸಿಟ್ಟಿರುವ ಗೆಜೆಟಿಯರ್‌ನಲ್ಲಿ ಯಾವ್ಯಾವ ವರ್ಗದ ಎಷ್ಟೆಷ್ಟು ಜನ ಶಾಲೆಗೆ ಹೋಗುತ್ತಿದ್ದರೆಂಬ ದಾಖಲೆ ಇದೆ.
      “ಇಂಗ್ಲಿಷ್ ಎಜುಕೇಷನ್ ಸಿಸ್ಟಮ್” ಜಾರಿಗೆ ತರುವ ಪೂರ್ವದಲ್ಲಿ ಬ್ರಿಟಿಷರು ನಡೆಸಿದ ಸರ್ವೇಕ್ಷಣೆ ಮತ್ತು ಅವರ ಅವಲೋಕನಗಳೆಲ್ಲಾ ಅದರಲ್ಲಿ ಇದೆ.
      ಮತ್ತು ನೀವು ಹೇಳುತ್ತಿರುವುದು “ಬ್ರಿಟಿಷರು ಭಾರತ ಬಿಡುವಾಗ” ಎಂದು – ಬ್ರಿಟಿಷ್ ಆಡಳಿತದ ಪ್ರಾರಂಭದಲ್ಲಿ ಇದ್ದದ್ದಕ್ಕಿಂತ ಭಿನ್ನವಾದ ಸ್ಥಿತಿ, ಅವರು ದೇಶ ಬಿಡುವಾಗ
      ಇತ್ತೆಂದಾದರೆ, ಅದಕ್ಕೆ ಕಾರಣಕರ್ತರಾರು ಎಂಬುದು ಸುಲಭದಲ್ಲಿ ತಿಳಿಯುವ ವಿಷಯವೇ.

      > ಲಿಪಿ ಬಗ್ಗೆ ಅತಿಯಾದ ವ್ಯಾಮೋಹವೂ ಬೇಕಿಲ್ಲ.
      > ಬರೀ ಇತಿಹಾಸ, ಹಳೆಯ ಹಿರಿಮೆ ಬಗ್ಗೆಯೇ ಇಮೋಷನಲ್ ಆಗದೇ ಕನ್ನಡವನ್ನು ಜಾಗತೀಕರಣದ ಈ ಪ್ರವಾಹದಲ್ಲಿ ಈಜಿ ದಡ ಸೇರುವುದಕ್ಕೆ ಏನು ಬೇಕೊ ಅದನ್ನೇ
      > ಮಾಡುವಂತ ಮನಸ್ಥಿತಿ ನಮ್ಮನ್ನಾಳುವ ದೊರೆಗಳಿಗೆ ಬರಬೇಕು.
      ಕನ್ನಡದ ಕುರಿತಾಗಿಯೂ ವ್ಯಾಮೋಹವೇಕೆ? ಕೇವಲ ನಮ್ಮ ಕರ್ನಾಟಕಕ್ಕೆ ಸೇರಿದ್ದು, ಹಿಂದಿಂದ ಬಂದದ್ದು, ಹಳೆಯ ಹಿರಿಮೆ ಇತ್ಯಾದಿ ಇಮೋಷನಲ್ ಆಗದೇ ಕನ್ನಡವನ್ನೇ ಪಕ್ಕಕ್ಕಿಟ್ಟುಬಿಡಬಹುದಲ್ಲವೇ!?
      ಏಕೆಂದರೆ, ಇಂದು ಪ್ರವಾಹದಲ್ಲಿ ಈಜಿ ದಡ ಸೇರುವುದಕ್ಕೆ ಇಂಗ್ಲಿಷ್ ಇದ್ದರೆ ಸಾಕು. ಕನ್ನಡವೇಕೆ ಬೇಕು?

      > ಯಾವುದು ಸರಿ ಅನ್ನುವುದನ್ನು ಸಮಯವೊಂದೇ ತೀರ್ಮಾನಿಸುತ್ತೆ.
      ಇಲ್ಲಿ ಯಾವುದು ಸರಿ ಎನ್ನುವ ವಾದದಲ್ಲಿ ಕನ್ನಡವೇ ಕಳೆದು ಹೋಗುತ್ತದೇನೋ ಎನಿಸುತ್ತದೆ.
      ಒಂದು ಕಡೆ “ಯಾವುದು ಸರಿ” ಎನ್ನುವ ವಾದ ಮಾಡುವ ತಾವು, ಇನ್ನೊಂದು ಕಡೆ “ಪ್ರವಾಹದಲ್ಲಿ ಈಜಿ ದಡ ಸೇರುವುದಕ್ಕೆ ಏನು ಬೇಕೋ ಅದನ್ನೇ….” ಎನ್ನುವ ವಾದ ಮುಂದಿಡುವಿರಿ.
      ನಮ್ಮ ತನಕ್ಕಿಂತ, ನನ್ನ ಸ್ವಾರ್ಥವೇ ಮುಖ್ಯವೆನ್ನುವ ಭಾವ ನಿಮ್ಮ ಮಾತುಗಳಲ್ಲಿ ಹೊಮ್ಮುತ್ತಿದೆ.
      ನನ್ನ ನಾಡು, ನನ್ನ ಭಾಷೆ, ನನ್ನ ಸಂಸ್ಕೃತಿ ಇತ್ಯಾದಿಗಳೆಲ್ಲಾ ಎಮೋಷನಲ್ ವಿಷಯಗಳೇ ಅಲ್ಲವೆ?
      ಇಮೋಷನ್ ಬೇಡ ಎಂದ ಮೇಲೆ ಈ ಮೇಲಿನವೂ ಬೇಡವೆಂದೇ ಲೆಕ್ಕ.
      ಇಮೋಷನ್ ಬೇಡವೆಂದವರಿಗೆ “ತಾಯಿ ಮತ್ತು ಹೆಂಡತಿಯ ನಡುವಣ ವ್ಯತ್ಯಾಸವೇನು” ಎನ್ನುವುದು ನನ್ನ ಪ್ರಶ್ನೆ.

      ಸತ್ತ ಹೀಬ್ರೂ ಭಾಷೆ ಇಸ್ರೇಲಿನ ಆಡಳಿತ ಭಾಷೆ, ಕಲಿಕಾ ಮಾಧ್ಯವಾಗಬಲ್ಲುದು – ಅವರು ವಿಜ್ಞಾನವನ್ನೂ ಹೀಬ್ರೂ ಭಾಷೆಯಲ್ಲೇ ಕಲಿಯುತ್ತಾರೆ.
      ಅಂತಹ ದೇಶದ ಮೂಲದವರಿಗೇ ಜಗತ್ತಿನ ಗರಿಷ್ಠ ನೊಬೆಲ್ ಪಾರಿತೋಷಕಗಳೂ ಹುಡುಕಿಕೊಂಡು ಬಂದಿದೆ.
      ತಮ್ಮದೆನ್ನುವ ಪ್ರತಿಯೊಂದರ ಬಗೆಗೂ ಇರುವ ಉತ್ಕಟ ಪ್ರೀತಿ, ಇಮೋಷನ್ ಇಂದ ಮಾತ್ರ ಇದು ಸಾಧ್ಯವಾಯಿತು.
      ಇಮೋಷನ್ ಬೇಡ ಎಂದವರಿಗೆ ಬೆರಳೆಣಿಕೆಯ ಪಾರಿತೋಷಕಗಳೂ ಬರುವುದಿಲ್ಲ, ಎಲ್ಲರೂ ನಿಮ್ಮ ಭಾಷೆಯ ಮೇಲೆ ಸವಾರಿ ಮಾಡುತ್ತಾರೆ, ಎಲ್ಲೆಡೆಯೂ ನೀವು ಕಾಲಕಸವಾಗುತ್ತೀರಿ. ಜೀವಂತವಾದ ನಿಮ್ಮ ಭಾಷೆ ಸತ್ತ ಭಾಷೆಯಾಗುತ್ತದೆ.

      ಉತ್ತರ
      • Vasant
        ಮಾರ್ಚ್ 28 2011

        > Literacy rate in India was just around 12% when British left India.
        ಇದಕ್ಕೆ ಕಾರಣ ಯಾರು? ಬ್ರಿಟಿಷರೇ ಅಲ್ಲವೇ?
        ೧೮-೧೯ನೇ ಶತಮಾನದಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿ ಸಾಕ್ಷರತಾ ಪ್ರಮಾಣ ಎಷ್ಟಿತ್ತೆನ್ನುವುದು ತಿಳಿದರೆ, ನೀವು ತಿಳಿಸುತ್ತಿರುವ ಸಂಖ್ಯೆ ಹೆಚ್ಚೋ ಇಲ್ಲವೇ ಕಡಿಮೆಯೋ ತಿಳಿಯುತ್ತದೆ.
        ==> ಬ್ರಿಟಿಷರ ಕಾಲದಲ್ಲಿ ನಮ್ಮ ಜನರಲ್ಲಿ ಯಾರು ಏನ್ ಕಲಿಯುತ್ತಿದ್ದರು ಅನ್ನೋ ಬಗ್ಗೆ ಬಳ್ಳಾರಿಯ ಬಗ್ಗೆ ಕ್ಯಾಂಬೆಂಲ್ ಅನ್ನುವ ಬ್ರಿಟಿಷ ಅಧಿಕಾರಿ ಪರೆದ ಪತ್ರವನ್ನೊಮ್ಮೆ ಓದಿ. http://karnatique.blogspot.com/2009/11/campbells-letter-to-munro-dated-17th.html
        ಕನ್ನಡ ನಾಡಿನಲ್ಲಿ ಒಬ್ಬ ಬಡಿಗ, ಕುಂಬಾರ, ನೇಕಾರ, ಬೇಸಾಯ ಮಾಡುವವನು ಹಿಂದೆ ಅಕ್ಷರ ಕಲಿಯುವ ಗೋಜಿಗೆ ಹೋಗಿಲ್ಲ. ಆ ಅಗತ್ಯ ಬಿದ್ದಿರಲೂ ಇಲ್ಲ. ಕಳೆದ ನೂರು ವರ್ಷದಲ್ಲೇ ಈ ಬದಲಾವಣೆ, ಅಗತ್ಯ ಕಂಡು ಬಂದಿರುವುದು. ಸಮಾಜದ ಎಲ್ಲರನ್ನೂ ಒಳಗೊಂಡ ಕಲಿಕಾ ವ್ಯವಸ್ಥೆ ರೂಪಿಸುವಾಗ ಎಲ್ಲರ ಕನ್ನಡವನ್ನು ಪರಿಗಣಿಸಬೇಕಿದೆಯೇ ಹೊರತು ಯಾವುದೋ ಒಂದು ವರ್ಗದ ಸ್ವತ್ತಾಗಿದ್ದ ಬರಹ ರೂಪದ ಕನ್ನಡವೊಂದೇ ಅಲ್ಲ.

        > ಬ್ರಿಟಿಶರು ಭಾರತ ಬಿಡುವಾಗ ಕಲಿಕೆ ಅನ್ನುವುದು ಭಾರತದ ಕೆಲವೇ ಕೆಲವು ಮೇಲ್ವರ್ಗದ ಜನರ ಸ್ವತ್ತಾಗಿತ್ತು ಹಾಗೂ ಅವರಿಗೆ ಮಾತ್ರ ಬೇಕಾದ ವಿದ್ಯೆಯಾಗಿತ್ತು
        ಇದನ್ನು ಖಡಾಖಂಡಿತವಾಗಿ ಹೇಳಲು ನಿಮಗಿರುವ ಆಧಾರವೇನು?
        ಬ್ರಿಟಿಷರೇ ದಾಖಲಿಸಿಟ್ಟಿರುವ ಗೆಜೆಟಿಯರ್‌ನಲ್ಲಿ ಯಾವ್ಯಾವ ವರ್ಗದ ಎಷ್ಟೆಷ್ಟು ಜನ ಶಾಲೆಗೆ ಹೋಗುತ್ತಿದ್ದರೆಂಬ ದಾಖಲೆ ಇದೆ.
        “ಇಂಗ್ಲಿಷ್ ಎಜುಕೇಷನ್ ಸಿಸ್ಟಮ್” ಜಾರಿಗೆ ತರುವ ಪೂರ್ವದಲ್ಲಿ ಬ್ರಿಟಿಷರು ನಡೆಸಿದ ಸರ್ವೇಕ್ಷಣೆ ಮತ್ತು ಅವರ ಅವಲೋಕನಗಳೆಲ್ಲಾ ಅದರಲ್ಲಿ ಇದೆ.
        ಮತ್ತು ನೀವು ಹೇಳುತ್ತಿರುವುದು “ಬ್ರಿಟಿಷರು ಭಾರತ ಬಿಡುವಾಗ” ಎಂದು – ಬ್ರಿಟಿಷ್ ಆಡಳಿತದ ಪ್ರಾರಂಭದಲ್ಲಿ ಇದ್ದದ್ದಕ್ಕಿಂತ ಭಿನ್ನವಾದ ಸ್ಥಿತಿ, ಅವರು ದೇಶ ಬಿಡುವಾಗ
        ಇತ್ತೆಂದಾದರೆ, ಅದಕ್ಕೆ ಕಾರಣಕರ್ತರಾರು ಎಂಬುದು ಸುಲಭದಲ್ಲಿ ತಿಳಿಯುವ ವಿಷಯವೇ.
        >>>> ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಬರೀ ನೂರು ವರ್ಷದ ಹಿಂದಿನ ನಮ್ಮ ಹಳ್ಳಿಗಳಲ್ಲಿ ಶಾಲೆ ಎಷ್ಟು ಜನ ಕಲಿತಿರುತ್ತಿದ್ದರು? ಕೆಲ ಜಾತಿಯ ಜನರನ್ನು ಬಿಟ್ಟು. ನನ್ನ ಅನಿಸಿಕೆಯನ್ನು ತಪ್ಪೆಂದು ತಿಳಿಸುವ, ಬ್ರಿಟಿಷರಿಗಿಂತ ಮುಂಚೆ ಕನ್ನಡ ನಾಡಲ್ಲಿ, ಭಾರತದಲ್ಲಿ ಎಲ್ಲರೂ ಸಾಕ್ಷರರಿದ್ದರು ಅನ್ನುವುದಕ್ಕೆ ಯಾವುದಾದರೂ ಆಧಾರವಿದ್ದರೆ ಇಲ್ಲಿ ಕೊಡಿ.

        > ಲಿಪಿ ಬಗ್ಗೆ ಅತಿಯಾದ ವ್ಯಾಮೋಹವೂ ಬೇಕಿಲ್ಲ. ಬರೀ ಇತಿಹಾಸ, ಹಳೆಯ ಹಿರಿಮೆ ಬಗ್ಗೆಯೇ ಇಮೋಷನಲ್ ಆಗದೇ ಕನ್ನಡವನ್ನು ಜಾಗತೀಕರಣದ ಈ ಪ್ರವಾಹದಲ್ಲಿ ಈಜಿ ದಡ ಸೇರುವುದಕ್ಕೆ ಏನು ಬೇಕೊ ಅದನ್ನೇ ಮಾಡುವಂತ ಮನಸ್ಥಿತಿ ನಮ್ಮನ್ನಾಳುವ ದೊರೆಗಳಿಗೆ ಬರಬೇಕು.
        ಕನ್ನಡದ ಕುರಿತಾಗಿಯೂ ವ್ಯಾಮೋಹವೇಕೆ? ಕೇವಲ ನಮ್ಮ ಕರ್ನಾಟಕಕ್ಕೆ ಸೇರಿದ್ದು, ಹಿಂದಿಂದ ಬಂದದ್ದು, ಹಳೆಯ ಹಿರಿಮೆ ಇತ್ಯಾದಿ ಇಮೋಷನಲ್ ಆಗದೇ ಕನ್ನಡವನ್ನೇ ಪಕ್ಕಕ್ಕಿಟ್ಟುಬಿಡಬಹುದಲ್ಲವೇ!?
        ಏಕೆಂದರೆ, ಇಂದು ಪ್ರವಾಹದಲ್ಲಿ ಈಜಿ ದಡ ಸೇರುವುದಕ್ಕೆ ಇಂಗ್ಲಿಷ್ ಇದ್ದರೆ ಸಾಕು. ಕನ್ನಡವೇಕೆ ಬೇಕು?
        >> ಕನ್ನಡದ ಬಗ್ಗೆ ನನಗಾವ ವ್ಯಾಮೋಹವೂ ಇಲ್ಲ. ಇಂಗ್ಲಿಷ್ ಇಂದಲೇ ಜಾಗತೀಕರಣದ ಪ್ರವಾಹ ಈಜಬಲ್ಲೇವು ಅಂತಾಗಿದ್ದರೆ ಖಂಡಿತ ಅದನ್ನೇ ಮಾಡೋಣ. ಜನರ ಏಳಿಗೆಯ ಮುಂದೆ ಇನ್ನಾವುದು ದೊಡ್ಡದಾಗಬಾರದು. ಆದರೆ ಇಂಗ್ಲಿಷ್ ಯಾವತ್ತಿಗೂ ಕರ್ನಾಟಕದ ಏಳಿಗೆ ಮಾಡಲಾರದು. ಇಂಗ್ಲಿಷ್ ಯಿಂದಾನೇ ಎಲ್ಲ ಸಿಗುತ್ತಿರುವುದು ನಿಜವಾಗಿರುವಾಗ ಅವರು ಹೇಳಿರುವುದರಲ್ಲಿ ತಪ್ಪೇನಿದೆ ರೀ ಅಂತ ನೀವು ಕೇಳಬಹುದು. ಇಂಗ್ಲಿಷ್ ಯಿಂದ ಅದು ಸಾಧ್ಯ ಯಾಕಾಗಲ್ಲ ಅನ್ನುವುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. ಇವತ್ತಿಗೂ ಕರ್ನಾಟಕದ ೮೩% ಮಕ್ಕಳು ಕನ್ನಡ ಮಾಧ್ಯಮ ಶಾಲೆಯಲ್ಲೇ ಓದುತ್ತಿದ್ದಾರೆ. ೯೦ ಲಕ್ಷ ವಿದ್ಯಾರ್ಥಿಗಳಿಗೆ ಅವರ ವಾತಾವರಣದಲ್ಲಿ ಇಲ್ಲದ ಇಂಗ್ಲಿಷ್ ನುಡಿಯಲ್ಲಿ, ಅವರೆಲ್ಲ ಇಂಗ್ಲಿಷ್ ನಲ್ಲೇ ಚೆನ್ನಾಗಿ ಪಾಠ ಕೇಳಿ, ಕಲಿತು, ಮನದಟ್ಟು ಮಾಡಿಕೊಳ್ಳಲು ಇಂಗ್ಲಿಷ್ ಅನ್ನು ಅರೆದು ಕುಡಿದಿರುವ, ಅದನ್ನು ಮಕ್ಕಳಿಗೆ ಅಷ್ಟೇ ಪರಿಣಾಮಕಾರಿಯಾಗಿ ಕಲಿಸಬಲ್ಲ ಪರಿಣಿತ ಶಿಕ್ಷಕರು ಬೇಕು. ಪ್ರತಿ ಮೂವತ್ತು ವಿದ್ಯಾರ್ಥಿಗೆ ಒಬ್ಬ ಶಿಕ್ಷಕ ಅಂದರೆ ಕಡಿಮೆ ಅಂದರೂ 3 ಲಕ್ಷ ಜನ ಇಂಗ್ಲಿಷ್ ಬಲ್ಲ ಶಿಕ್ಷಕರು ಬೇಕು. ಹೇಳಿ ಎಲ್ಲಿಂದ ತರೋಣ ಇವರನ್ನೆಲ್ಲ? ಇರುವ ಮಕ್ಕಳಿಗೆ ಕನ್ನಡದಲ್ಲೇ ಪಾಠ ಮಾಡಲು ಶಿಕ್ಷಕರು ಸಿಗುತ್ತಿಲ್ಲ. ಇನ್ನೂ ಇವರನ್ನೆಲ್ಲಿಂದ ತರೋಣ ? ವಾತಾವರಣದಲ್ಲಿರುವ ಮಕ್ಕಳ, ಶಿಕ್ಷಕರೆಲ್ಲರ ಭಾಷೆಯಾಗಿರುವ ಕನ್ನಡದಲ್ಲಿ ಇಂತಹದೊಂದು ವ್ಯವಸ್ಥೆ ಕಲ್ಪಿಸುವುದು ಸುಲಭವೋ ಅಥವಾ ಇದಾವುದು ಇಲ್ಲದ ಇಂಗ್ಲಿಷ್ ನಲ್ಲೋ?

        > ಯಾವುದು ಸರಿ ಅನ್ನುವುದನ್ನು ಸಮಯವೊಂದೇ ತೀರ್ಮಾನಿಸುತ್ತೆ.
        ಇಲ್ಲಿ ಯಾವುದು ಸರಿ ಎನ್ನುವ ವಾದದಲ್ಲಿ ಕನ್ನಡವೇ ಕಳೆದು ಹೋಗುತ್ತದೇನೋ ಎನಿಸುತ್ತದೆ.
        ಒಂದು ಕಡೆ “ಯಾವುದು ಸರಿ” ಎನ್ನುವ ವಾದ ಮಾಡುವ ತಾವು, ಇನ್ನೊಂದು ಕಡೆ “ಪ್ರವಾಹದಲ್ಲಿ ಈಜಿ ದಡ ಸೇರುವುದಕ್ಕೆ ಏನು ಬೇಕೋ ಅದನ್ನೇ….” ಎನ್ನುವ ವಾದ ಮುಂದಿಡುವಿರಿ.
        ನಮ್ಮ ತನಕ್ಕಿಂತ, ನನ್ನ ಸ್ವಾರ್ಥವೇ ಮುಖ್ಯವೆನ್ನುವ ಭಾವ ನಿಮ್ಮ ಮಾತುಗಳಲ್ಲಿ ಹೊಮ್ಮುತ್ತಿದೆ.
        ನನ್ನ ನಾಡು, ನನ್ನ ಭಾಷೆ, ನನ್ನ ಸಂಸ್ಕೃತಿ ಇತ್ಯಾದಿಗಳೆಲ್ಲಾ ಎಮೋಷನಲ್ ವಿಷಯಗಳೇ ಅಲ್ಲವೆ?
        ಇಮೋಷನ್ ಬೇಡ ಎಂದ ಮೇಲೆ ಈ ಮೇಲಿನವೂ ಬೇಡವೆಂದೇ ಲೆಕ್ಕ.
        ಇಮೋಷನ್ ಬೇಡವೆಂದವರಿಗೆ “ತಾಯಿ ಮತ್ತು ಹೆಂಡತಿಯ ನಡುವಣ ವ್ಯತ್ಯಾಸವೇನು” ಎನ್ನುವುದು ನನ್ನ ಪ್ರಶ್ನೆ.
        >>> ನಿಮ್ಮ ಪ್ರತಿಕ್ರಿಯೆಯಲ್ಲಿ ಗೊಂದಲ ಕಾಣಿಸುತ್ತಿದೆ ನನಗೆ. ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವವನು. ಆದ್ದರಿಂದಲೇ ಅವರನ್ನು ವಿರೋಧಿಸುವವರಷ್ಟೇ ಹಕ್ಕು ಶಂಕರ ಭಟ್ಟರಿಗೂ ಅವರ ವಾದ ಮಂಡಿಸಲು ಇದೆ. ಎರಡೂ ವಾದಗಳ ಸಮರ್ಪಕತೆ, ಕೊರತೆ, ಒಳಿತುಗಳ ಚರ್ಚೆ ನಡೆಯಲಿ, ನಂತರ ಯಾವುದೂ ಸರಿಯೋ ಅದು test of the times ಅನ್ನು ಗೆಲ್ಲುತ್ತೆ ಅಂದೆ. ಅದು ನಿಮಗರ್ಥವಾದ ಹಾಗೆ ಕಾಣಲಿಲ್ಲ.

        ಸತ್ತ ಹೀಬ್ರೂ ಭಾಷೆ ಇಸ್ರೇಲಿನ ಆಡಳಿತ ಭಾಷೆ, ಕಲಿಕಾ ಮಾಧ್ಯವಾಗಬಲ್ಲುದು – ಅವರು ವಿಜ್ಞಾನವನ್ನೂ ಹೀಬ್ರೂ ಭಾಷೆಯಲ್ಲೇ ಕಲಿಯುತ್ತಾರೆ.
        ಅಂತಹ ದೇಶದ ಮೂಲದವರಿಗೇ ಜಗತ್ತಿನ ಗರಿಷ್ಠ ನೊಬೆಲ್ ಪಾರಿತೋಷಕಗಳೂ ಹುಡುಕಿಕೊಂಡು ಬಂದಿದೆ.
        ತಮ್ಮದೆನ್ನುವ ಪ್ರತಿಯೊಂದರ ಬಗೆಗೂ ಇರುವ ಉತ್ಕಟ ಪ್ರೀತಿ, ಇಮೋಷನ್ ಇಂದ ಮಾತ್ರ ಇದು ಸಾಧ್ಯವಾಯಿತು.
        ಇಮೋಷನ್ ಬೇಡ ಎಂದವರಿಗೆ ಬೆರಳೆಣಿಕೆಯ ಪಾರಿತೋಷಕಗಳೂ ಬರುವುದಿಲ್ಲ, ಎಲ್ಲರೂ ನಿಮ್ಮ ಭಾಷೆಯ ಮೇಲೆ ಸವಾರಿ ಮಾಡುತ್ತಾರೆ, ಎಲ್ಲೆಡೆಯೂ ನೀವು ಕಾಲಕಸವಾಗುತ್ತೀರಿ. ಜೀವಂತವಾದ ನಿಮ್ಮ ಭಾಷೆ ಸತ್ತ ಭಾಷೆಯಾಗುತ್ತದೆ.

        ಉತ್ತರ
    • ಬಸವಯ್ಯ
      ಮಾರ್ಚ್ 28 2011

      ವಸಂತ,

      ಮಡಿವಂತರಿಗೆ ಏನು ಹೇಳಿದರೂ ತಿಳಿಯಲ್ಲ! ಸುಮ್ನಿರೋದು ವಾಸಿ.

      ಈ ಬರಹ ಇಲ್ಲಿ ಹೊರತಂದವರು ಯಾರು? ನಿಲುಮೆಯ ಗುಣಮಟ್ಟ ಕಡಿಸಿತು ಈ ಬರಹ!

      ಉತ್ತರ
  5. ಬಸವಯ್ಯ
    ಮಾರ್ಚ್ 28 2011

    ೠ ಅಕ್ಕರವನ್ನು ಈಗಾಗಲೇ ಸರಕಾರವೇ ಬಿಟ್ಟಿದೆ.

    ತಲೆ ಬುಡುವಿಲ್ಲದ ಈ ಬರಹಕ್ಕೆ ಕಮೆಂಟು ಬರೆಯುವುದೇ ಹೊತ್ತುಪೋಲು. ತೆವಲು ತೆವಲಾದ ವಾದಗಳು!

    ಯಾವೋನು ಏನೇ ಹೇಳಿದರೂ ನಮಗೆ ಶಂಕರಬಟ್ಟರ ಮಾತುಗಳು ಸರಿ ಎನಿಸಿವೆ. ಹಾಗೂ ಅದನ್ನು ನಾವು ಒಪ್ಪಿಕೊಂಡು ಅದರಂತೆ ನಡೆಯುವುವು. ನಮ್ಮ ಇಂಡಿಯದಲ್ಲಿ ನಮಗೆ ಬೇಕಾದ ಊಂಕುದಾರಿ/ಸಿದ್ದಾಂತವನ್ನು ಬೆಂಬಲಿಸುವ ಅನುವು/ಹಕ್ಕು ನಮಗಿದೆ.

    ಇಶ್ಟಕ್ಕೆ ಹೆಚ್ಚಿ ಬರೆಯೋದು ಈ ಬರಹಕ್ಕೆ ಸಲ್ಲದ ಹಿರಿಮೆ ತೋರಿದಂತೆ. ಹುರುಳಿಲ್ಲದ ಜಾಳು ಇದು!

    ಉತ್ತರ
    • ಪೂರ್ವಿ
      ಮಾರ್ಚ್ 28 2011

      ಅನಂತರಾಮು ಅವ್ರು ಸರ್ಯಾಗ್ ಹೇಳಿದ್ದಾರೆ.ಈ ಬಸವಯ್ಯ ಅವ್ರು ತಾವೇನು ಅಂದುಕೊಂದಿದಾರೋ ಅದೇ ಪರಮ ಸತ್ಯ ಅದನ್ನೇ ಎಲ್ಲರು ಒಪ್ಪಬೇಕು ಅನ್ನೋ ರೀತಿ ಮಾತಾಡ್ತಾ ಇದ್ದಾರೆ.

      ಬರಹವನ್ನ ಜಾಳು ಅನ್ನುವವರ ಪ್ರತಿಕ್ರಿಯೆಯು ಬರಿ ಗೋಳು 🙂

      ಉತ್ತರ
      • ಪೂರ್ವಿ
        ಮಾರ್ಚ್ 28 2011

        ಹೆಣ್ಮಕ್ಳ ಜೊತೆ ಹೀಗೆ ಮಾತಾಡುವುದೇ ನಿಮ್ಮ ಸಂಸ್ಕೃತಿಯಾದರೆ, ನಮಸ್ಕಾರ ಬಸವಯ್ಯ.ನಿಮ್ಮ ಸುದ್ದಿಗೆ ನಾನು ಬರುವುದಿಲ್ಲ 🙂

        ಉತ್ತರ
        • ಪೂರ್ವಿ
          ಮಾರ್ಚ್ 28 2011

          ಓಹೋ! ಸತ್ಯ ಹೇಳೋಕೆ ಗಂಡ್ಮಕ್ಳೆ ಆಗ್ಬೇಕೆನಪ್ಪ.ನಿಮ್ಮ ಪ್ರತಿಕ್ರಿಯೆ ತಾವು ಸ್ತ್ರೀಯರನ್ನ ಅಡುಗೆಮನೆಗೆ ಸೀಮಿತ ಮಾಡುವಂತಿದೆ.ಇರಲಿ ಕನ್ನಡದ ಚರ್ಚೆಯಲ್ಲಿ ಇದೆಲ್ಲ ತಂದು ಚರ್ಚೆ ಹಾಳು ಮಾಡಲು ನನಗೆ ಮನಸ್ಸಿಲ್ಲ

          ಉತ್ತರ
        • ಮಾರ್ಚ್ 28 2011

          ಬಸವಯ್ಯ ನಿಮ್ಮ ಕಾಮೆಂಟ್ ಗಳು ವೈಯಕ್ತಿಕ ಮಟ್ಟಕ್ಕೆ ಇಳಿಯುತ್ತಿವೆ. ದಯವಿಟ್ಟು ಈ ರೀತಿಯ ಪ್ರತಿಕ್ರಿಯೆ ಬೇಡ. ನಿಲುಮೆಯನ್ನು ಆರೋಗ್ಯಕರ ಚರ್ಚೆಯ ತಾಣವಾಗಿ ಬಳಸಿ ಮತ್ತು ಬೆಳೆಸಿ. ನಿಮ್ಮ ವಾದಗಳು ಏನೇ ಇದ್ದರೂ ಸಮರ್ಥವಾಗಿ ಹೇಳಿ ಕನ್ವಿನ್ಸ್ ಮಾಡಿ. ಅದು ಬಿಟ್ಟು ಅಸಂಸದೀಯ ಭಾಷೆ ಸಲ್ಲದು

          ಉತ್ತರ
          • ಬಸವಯ್ಯ
            ಮಾರ್ಚ್ 28 2011

            ಸರಿ ಓಕೆ.!

            ಮಡಿವಂತರು ತುಸು ಮೊಂಡು.!

            ಅನಂತರಾಮು, ಪೂರ್ವಿ ಅವರು ನನ್ನ ಕಾಲುಕೆರೆದು ಜಗಳಕ್ಕೆ ಕರೆದರು.. ಪಾಪ ಯಾಕೆ ನಿರಾಸೆ ಮಾಡೋದು.

            ಅಂದ ಹಾಗೆ ತಾವು ಯಾವ ಯೋಚನೆ ಮಾಡದೇ ಈ ಬರಹ ಯಾಕೆ ಹೊರತಂದಿದ್ದು?.. ನಿಲುಮೆಗೇ ಕಳಂಕ ಇದು.

            ಉತ್ತರ
            • ಮಾರ್ಚ್ 28 2011

              ನೋಡಿ ಬಸವಯ್ಯ, ಇದು ಒಬ್ಬ ವಿದ್ವಾಂಸರು ಕಳಿಸಿದ ಲೇಖನ. ಅವರು ಪ್ರಸಿದ್ಧರು ಕೂಡ. ನಿಮಗೆ ಅವರ ಬಗ್ಗೆ ತಿಳಿಯದೇ ಇರಬಹುದು. ಆದರೆ ಅವರಿಂದ ಲೇಖನ ತರಿಸಿಕೊಂಡ ನಮಗೆ ಅದರ ಅರಿವು ಇರುತ್ತದೆ. ಅಜಕ್ಕಳರು ಆಧುನಿಕ ವಿಮರ್ಶೆಯಲ್ಲಿ ವಿದ್ವಾಂಸರು. ಅಲ್ಲದೇ ಅವರು ಕನ್ನಡ ಇಂಗ್ಲೀಷ್ ಎರದೂ ಭಾಷೆಯ ಸಾಹಿತ್ಯಗಳಲ್ಲೂ ಪ್ರಭುತ್ವ ಸಾಧಿಸಿದವರು. ಹೊಡೆದು ಓಡಿ ಹೋಗುವ ‘ಕಳ್ಳ ವಿದ್ವಾಂಸರ’ ಲೇಖನಗಳನ್ನು ನಿಲುಮೆ ಬೆಂಬಲಿಸುವುದಿಲ್ಲ. ನಿಲುಮೆಯ ನಿಲುವಿನಲ್ಲಿ ಹೇಳಿದಂತೆ ಎಲ್ಲ ವಿಚಾರಗಳನ್ನು ಪ್ರಕಟಿಸುತ್ತೇವೆ. ಚರ್ಚೆಯಾಗಿ ಗಟ್ಟಿಯಾಗಿದ್ದು ಉಳಿಯಲಿ ಎಂಬುದು ನಮ್ಮ ಉದ್ದೇಶ. ಇಲ್ಲದೇ ಹೋದಲ್ಲಿ ಯಾವುದೋ ಒಂದು ಜನಪ್ರಿಯ ವಾದ ಮಿಕ್ಕ ಸಮ್ಗತಿಗಳನ್ನು ಮರೆ ಮಾಡಬಹುದು.

              ಉತ್ತರ
              • ಬಸವಯ್ಯ
                ಮಾರ್ಚ್ 28 2011

                ಸರಿ ಹಾಗಿದ್ದಲ್ಲಿ
                “ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ. ಆರ್. ಗಣೇಶ್ ಹೇಳುವಂತೆ , ಈ ಸುಧಾರಣೆಯು ” ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು.ಇಷ್ಟಾಗಿಯೂ ತಮಿಳು ಜಾಗತಿಕ ಸ್ತರದಲ್ಲಿ ತಾನೊಂದು ಭಾಷೆಯಾಗಿ ಏನನ್ನೂ ಸಾಧಿಸಲಾಗಲಿಲ್ಲ.ತಮಿಳರಿಗೆ ಜೀವಿಕೆಯ ಅನಿವಾರ್ಯತೆಯಿಂದ ವ್ಯವಹಾರಮಾತ್ರಕ್ಕಾಗಿ ಕಲಿಯಬೇಕಾಗಿ ಬರುವ ಇನ್ನಿತರ ಭಾಷೆಗಳನ್ನರಿಯಲೂ ಅದು ಸಹಕಾರಿಯಾಗಿಲ್ಲ.” ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ.”

                ಈ ಸಾಲುಗಳನ್ನು ತೆಗೆಯಿರಿ. ತಮಿಳರು ಎಂದು ಯಾಕೆ ಒಂದು ಜನಾಂಗದವರನ್ನು ಕುರಿತು, ಹೀಗಳೆಯುವುದು. ಇದು ತುಂಬಾ ತಪ್ಪು. ಅವರ ವಾದದಲ್ಲಿ ಜನಾಂಗ ನಿಂದನೆ ಇದೆಯಲ್ಲ.

                ಇದು ನಮ್ಮಂತಹ ದೇಶದಲ್ಲಿ ಒಳ್ಳೇದಲ್ಲ. ಮಿಕ್ಕಿದ್ದು ನಿಮ್ಮಿಷ್ಟ. ನಿಮ್ಮ ಬ್ಲಾಗು.

                ಬರಹದ ತುಂಬಾ ತಮಿಳರನ್ನು, ಬಟ್ಟರ ವಾದವನ್ನು ಹೀಗಳೆದಿದ್ದಾರೆ. ವಾದಗಳು ಸರಿಯಾಗಿ ಅವರ ಯಾವ ವಿಷಯವನ್ನು ವಿರೋಧಿಸುತ್ತಿದ್ದಾರೆ ಎಂದಿಲ್ಲ.

                ಪ್ರಸಿದ್ಧರು ಆದ ತಕ್ಷಣ ಏನೇ ಬರೆದು ಹೊರತರುವುದೇ? ನಮ್ಮ ದೇಶದಲ್ಲಿ ‘ನಿತ್ಯಾನಂದ’ ಸ್ವಾಮಿಯೂ, ‘ಉಮೇಶರೆಡ್ಡಿ’ಯವರೂ ಪ್ರಸಿದ್ಧರೇ!

                ಉತ್ತರ
              • ಬಸವಯ್ಯ
                ಮಾರ್ಚ್ 28 2011

                ನೋಡಿ ನೀವು ವೈಯಕ್ತಿಕ ಟೀಕೆ ಬೇಡ ಅಂದ್ರಿ.. ಆದರೆ ನಿಮ್ಮ ಬರಹಗಾರರು ”
                ” ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ?” ಹೀಗೆ ಹೆಸರು ಇಟ್ಟು ಮಾಡಿರೋ ಘನಕಾರ್ಯವಾದರೂ ಏನು?

                ತಲೆಬರಹದಲ್ಲಿ ವ್ಯಕ್ತಿಯ ಹೆಸರು. ಇದು ಮರ್ಯಾದೆ ಇರೋ ಮನುಷ್ಯರು ಮಾಡೋ ಕೆಲಸವೇನು?

                ಉತ್ತರ
        • Shubhashree
          ಮಾರ್ಚ್ 31 2011

          ನರೇಂದ್ರ,

          ಈ ನಮ್ಮ ಯಾವ ಮಾತುಗಳಿಗೂ, ವಾದದಲ್ಲಿ ಯಾರಾದರೂ ಭಾಗವಹಿಸಬಹುದು ಅನ್ನುವುದರಲ್ಲೂ ಯಾವ ದ್ವಂದ್ವವೂ ವೈರುಧ್ಯವೂ ಇಲ್ಲ. ತಾಳ್ಮೆಯಿಂದ ನನ್ನ ಹೇಳಿಕೆಗಳನ್ನು ಅವಲೋಕಿಸಿ.

          “ವಾದದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಹಾಗೆ ಭಾಗವಹಿಸುವವರು ಸ್ವತಃ ಭಾಷಾವಿಜ್ಞಾನಿ ಆಗಿರಬೇಕೆಂಬುದು ಇಲ್ಯಾರ ಆಶಯವೂ ಅಲ್ಲ. ಯಾಕೆಂದರೆ ನಾನಂತೂ ಬಿಕಾಂ ಪದವೀಧರೆ, ಭಾಷಾವಿಜ್ಞಾನದ ಪದವೀಧರೆ ಅಲ್ಲ. ಹಾಗೆಂದು ಡಾ.ಗಿರೀಶರು ಆ ಕಾರಣಕ್ಕೇ ನನಗೆ ಉತ್ತರಿಸಲಾರೆ ಎಂದರೆ ಹೇಗೆ ಸರಿಯಲ್ಲವೋ ಹಾಗೇ ಇದೂ ಕೂಡಾ.

          ನನ್ನ ಎಣಿಕೆಯಂತೆ ಇಲ್ಲಿ ವಾದ ಮಂಡಿಸುವಾಗ ಅನಿಸಿಕೆಗಳನ್ನು, ಅನುಭವಗಳನ್ನೂ ಹೇಳಿಕೊಳ್ಳುತ್ತೇವೆ. ಅಂತೆಯೇ ಅದನ್ನು ಬೆಂಬಲಿಸುವ ವಿಜ್ಞಾನದ ಮೂಲತತ್ವವನ್ನೋ, ವಿಜ್ಞಾನಿಯ ಬರಹಗಳನ್ನೋ ಬಳಸುತ್ತೇವೆ. ಹಾಗೇ, ಸ್ವತಃ ಭಾಷಾತಜ್ಞರಲ್ಲದಿದ್ದವರು ಯಾವ ವೈಜ್ಞಾನಿಕ ಕಾರಣವಿಟ್ಟುಕೊಂಡು ವಾದಿಸುತ್ತಿದ್ದಾರೆ ಎನ್ನುವುದಷ್ಟೇ ಮುಖ್ಯವಾಗುತ್ತದೆ. ಆ ನೆಲೆಯಲ್ಲಿ ನೋಡಿದಾಗ ಶಂಕರ ಭಟ್ಟರ ನಿಲುವುಗಳನ್ನು ಡಾ. ರಾ ಗಣೇಶ್ ಅವರಾಗಲೀ, ಡಾ.ಗಿರೀಶ್ ಅವರಾಗಲೀ ವೈಜ್ಞಾನಿಕ ನೆಲೆಯಲ್ಲಿ ತಪ್ಪೆಂದು ತೋರಿಸಿಕೊಟ್ಟಿಲ್ಲ ಅಥವಾ… ಅವರು ತೋರಿಸಿಕೊಟ್ಟಿರುವ ಬಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮನವರಿಕೆ ಮಾಡಿಸುವಂತಿಲ್ಲ.”

          ಉತ್ತರ
        • Shubhashree
          ಏಪ್ರಿಲ್ 10 2011

          ಮಂಜುನಾಥ್ ಸರ್,
          ನಿಮ್ಮ ಅನಿಸಿಕೆಗಳಿಗೆ ಧನ್ಯವಾದ. ನೀವಂದಂತೆ ಕಲಿಕೆಯಲ್ಲಿ ಯಾವ ಕನ್ನಡ ಕಲಿಸಬೇಕು ಎನ್ನುವುದಕ್ಕೆ “ಎಲ್ಲರ ಕನ್ನಡ” ಎನ್ನುವುದು ಉತ್ತರ. ಹಾಗೆಂದರೇನು? ಅದಕ್ಕೂ ನಾನಾ ಪ್ರದೇಶದಲ್ಲಿ ಆಡುವ ಕನ್ನಡಿಗರ ಕನ್ನಡಕ್ಕೂ ವ್ಯತ್ಯಾಸವೇನು? ಹೋಲಿಕೆಯೇನು? ಸಂಬಂಧವೇನು? ಹೇಗೆ ಒಂದು ಪ್ರದೇಶದ ಮಕ್ಕಳಿಗೆ ಎಲ್ಲರ ಕನ್ನಡವನ್ನು ಕಲಿಸುವುದು ಹೇಗೆ? ಇತ್ಯಾದಿ ಎಲ್ಲಾ ಪ್ರಶ್ನೆಗಳಿಗೂ ಶಂಕರಬಟ್ತರ ಹೊತ್ತಗೆಗಳಲ್ಲೂ, ಎಲ್ಲರ ಕನ್ನಡ ವೆಬ್ ಸೈಟಲ್ಲೂ ವಿಸ್ತೃತವಾಗಿ ಚರ್ಚೆಯಾಗಿದೆ. ವಿವರಿಸಿ ಬರೆಯಲಾಗಿದೆ. ನೀವೊಮ್ಮೆ ಓದಿರಿ. ಹೀಗೆ ಬೇರೆ ಬೇರೆ ಕನ್ನಡಗಳು ಇರುವುದು ವಾಸ್ತವ ಪರಿಸ್ಥಿತಿ. ನೀವೇ ಹೇಳುವಂತೆ ಎಲ್ಲ ವೈವಿಧ್ಯಗಳನ್ನೂ ಎಲ್ಲರೂ ಕಡ್ಡಾಯವಾಗಿ ಕಲಿಯಬೇಕೆಂಬುದು ಸಲ್ಲದ ಹೊರೆ. ಈ ಸವಾಲುಗಳು ಇಡೀ ಕನ್ನಡ ಸಮಾಜದ್ದು, ಒಟ್ಟಾಗಿ ಎದುರಿಸಿ ತೊಂದರೆ ಇದ್ದಲ್ಲಿ ಹಗುರ ಮಾಡಿಕೊಳ್ಳಬೇಕು. ನೀವು ಹೇಳಿದ ಉಳಿದೆಲ್ಲಾ ಪಾಯಿಂಟುಗಳನ್ನೇ ನಾನೂ ಪ್ರತಿಪಾದಿಸಿರುವುದು.

          ಒಂದು ಸತ್ಯವೆಂದರೆ ಬರತರಾಗಲೀ, ಮಾಯ್ಸರಾಗಲೀ, ನಾನಾಗಲೀ, ಇನ್ಯಾರೇ ಆಗಲೀ…ಕನ್ನಡದಲ್ಲಿ ಹೊಸಪದಗಳನ್ನು ಕಟ್ಟಲು ಸ್ವತಂತ್ರರು. ಬಳಸಲೂ ಕೂಡಾ. ಆದರೆ ಯಾರಮೇಲಾದರೂ ಹೇರುವುದು ಸಾಧ್ಯವಿಲ್ಲದ್ದು. ಅಂತಹ ಕಲ್ಪನೆಯೂ ತಪ್ಪೇ. ಹೊಸಪದ ಬಳಸಲು ಅನುಕೂಲಕರವಾಗಿದ್ದರೆ ಜನರು ಬಳಸುತ್ತಾರೆ ಅಷ್ಟೆ. ಉಳಿದಂತೆ ನಮಸ್ಕಾರ.

          ಉತ್ತರ
  6. ಅನಂತರಾಮು
    ಮಾರ್ಚ್ 28 2011

    ಅನಂತರಾಮು
    ಬಸವಯ್ಯನವರೆ ನಿಮಗೆ ಸರಿ ಅನ್ನಿಸಿದ್ದನ್ನು ಎಲ್ಲರಿಗೂ ಹೇರಬೇಡಿ.ಶಂಕರಭಟ್ಟರ ವಾದವನ್ನು ಇನ್ನೂ ಯಾವ ವಿದ್ವಾಂಸರು ಸಂಪೂರ್ಣವಾಗಿ ಸಮರ್ಥಿಸಿಲ್ಲ. ಬೇಡದ ವಾದಕ್ಕಿಳಿದು ಸುಖಸುಮ್ಮನೆ ಜಗಳ ಮಾಡಬೇಡಿ. ಸೈಡಲ್ಲಿ ಇದ್ದು ಬಿಡೀ ಪ್ಲೀಸ್.

    ಉತ್ತರ
    • Narendra Kumar.S.S
      ಮಾರ್ಚ್ 28 2011

      > ಬಸವಯ್ಯನವರೆ ನಿಮಗೆ ಸರಿ ಅನ್ನಿಸಿದ್ದನ್ನು ಎಲ್ಲರಿಗೂ ಹೇರಬೇಡಿ.ಶಂಕರಭಟ್ಟರ ವಾದವನ್ನು ಇನ್ನೂ ಯಾವ ವಿದ್ವಾಂಸರು ಸಂಪೂರ್ಣವಾಗಿ
      > ಸಮರ್ಥಿಸಿಲ್ಲ.
      ಅನಂತ ರಾಮು ಅವರೇ, ನಿಮಗೆ ಬಸವಯ್ಯನವರ ಮಾತಿನ ಹಿಂದಿನ ವ್ಯಂಗ್ಯ ಅರ್ಥವಾಗಲಿಲ್ಲ ಎನಿಸುತ್ತದೆ.

      ಉತ್ತರ
  7. ಬಸವಯ್ಯ
    ಮಾರ್ಚ್ 28 2011

    ಅನಂತರಾಮೂ,

    ಶಂಕರಬಟ್ಟರ ಪುಸ್ತಕದ ಬಗ್ಗೆ ಮೊನ್ನೇ ತಾನೆ ಬೆಂಗಳೂರಲ್ಲಿ ಹತ್ತು ಇಪ್ಪತ್ತು ವಿದ್ವಾಂಸರು ಇಡೀ ಇಂಡಿಯದಿಂದ ಬಂದು ಬೆಂಬಲಿಸಿ, ಹೊಗಳಿದ್ದಾರ. ಕೂಪಮಂಡೂಕದಂತೆ ಏನೂ ಗೊತ್ತಿಲ್ಲದೆ ಬಂದು ಹರಟೆ ನಿಮ್ಮದು.

    ಒಂದು ಅಳಕುಪುಳಕು ಬರಹ ಅದಕ್ಕೊಂದು ತೆವಲುದಂಡು!

    ಇಡೀ ಬರಹದ ತುಂಬಾ ವಿದ್ವಾಂಸರಾದ ಶಂಕರಬಟ್ಟರ ಬಗ್ಗೆ ಹೀಗಳೆತನವಿದೆ. ಅವರ ವಿದ್ವತ್ ಎಲ್ಲಿ ಈ ಬರಹಗಾರ ಎಲ್ಲಿ? ಅದೇ ಸವಕಲು ಮಡಿವಂತ ವಾದಗಳು.

    ಅದಕ್ಕೆ ಈ ಬರಹದ ಬಗ್ಗೆ ತುಸು ತಲೆಕೆಡಿಸಿಕೊಳ್ಳೋ ದಂಡ! ಸುಮ್ಮನೆ ನನ್ನ ಗೆಳೆಯರು ಇಲ್ಲಿ ಬಂದು ಹೊತ್ತು ಪೋಲು ಮಾಡಬಾರದು ಎಂದು ಕಮೆಂಟು ಹಾಕಿದ್ದೀನಿ..

    ಹೇಗೆ ನಿಮ್ಮಗೆ ಹಿಂಡಿ ಏನೇನೋ ಜಾಳು ಜಾಳು ಹೇಳು ಅನುವಿದೆಯೋ, ಹಾಗೆ ನಮಗೂ ಕೂಡ ಇವೆಲ್ಲ ಮಡಿವಂತ ಒದರಾಟಗಳೂ ಎಂದು ಅದನ್ನು ತೆಗಳುವ ಅನುವೂ ಇದೆ.

    ಸುಮ್ಮನೇ ಹೋಗಿ ಸಂಸ್ಕೃತ ಸಮ್ಮೇಳನದಲ್ಲಿ ಅರ್ಥವಾಗದ ಭಾಷಣ ಕೇಳಿ ಬಿಸಿಬೇಳೆಬಾತ್ ತಿನ್ನಿ ನಿಮ್ಮ ಮಠದಲ್ಲಿ! 🙂

    ಉತ್ತರ
    • ಪೂರ್ವಿ
      ಮಾರ್ಚ್ 28 2011

      ನಿಮ್ಮ ಕನ್ನಡ ನಿಮಗೆ ಅರ್ಥವಾಗಬೇಕು ಸ್ವಾಮೀ.ಅಬ್ಬ ಎಂತ ಮಡಿವಂತಿಕೆಯ ಖನ್ನಡ ತಮ್ಮದು.ಧನ್ಯೋಸ್ಮಿ 🙂 … ಲೇಖನದ ಬಗ್ಗೆ ಮಾತಾಡುವುದ ಬಿಟ್ಟು ಲೇಖಕರ ಬಗ್ಗೆ ಮಾತಾಡುವ ತಾವು ತಮ್ಮ ಥಿಯರಿಗಳೋ..! ಟೂ ಬಿಡಿ ಹೋಗ್ಲಿ

      ಉತ್ತರ
    • ಏಪ್ರಿಲ್ 1 2011

      ರೀ ಬಸವಯ್ಯ, ಅನಂತರಾಮು ಬಿಸಿಬೇಳೆಬಾತ್ ಆದ್ರೂ ತಿಂತಾರೆ, ಚಿಕನ್ ಬಿರಿಯಾನಿ ಆದ್ರೂ ತಿಂತಾರೆ, ಮಠದಲ್ಲಾರ್ದೂ ತಿಂತಾರೆ ಮಿಲ್ಟ್ರಿ ಹೋಟಲ್ನಲ್ಲಾದ್ರೂ ತಿಂತಾರೆ, ಅದನ್ನ ಕಟಗೊಂಡು ನಿಮಗೇನ್ರೀ? ಮಾತಾಡ್ತಿರೋದು ಕನ್ನಡ ಭಾಷೆ ಬಗ್ಗೆ. ಅದರ ಬಗ್ಗೆ ಏನಾದ್ರೂ ಮಾತಾಡಕ್ಕೆ ಇದ್ರೆ ಮಾತಾಡಿ ಇಲ್ದಿದ್ರೆ ಸುಮ್ನೇ ಪಕ್ಕಕ್ಕೆ ಹೋಗ್ರೀ…

      ಜನಕ್ಕೆ ಕಾರಣವಿಲ್ದೇ ಸುಕಾಸುಮ್ನೆ ಜಾತಿ-ರಾಜಕೀಯ ಗಬ್ಬು ಹರಡದೇ ಇದ್ರೆ ನಿದ್ದೇನೇ ಬರೊಲ್ವೋ ಏನೋ!

      ಉತ್ತರ
  8. ಮಾಯ್ಸ
    ಮಾರ್ಚ್ 28 2011

    ಈ ಬಗ್ಗೆ ಈ ಬರಹಗಾರರು ಹೇಳುವ ತಿರುಮಲೇಶರ ಕೂಟೆ ಕೆಂಡಸಂಪಿಗೆಯಲ್ಲಿ ನಾನು ಮಾತುಕತೆ ನಡೆಸಿದ್ದೀನಿ. ಅವರು ಹಲವು ಪ್ರಶ್ನೆಗೆ ಉತ್ತರ ಹೇಳದೇ ಹೋದರು. ಅದನ್ನೊಮ್ಮೆ ಬೇಕಿದ್ದರೆ ನೋಡಿಕೊಳ್ಳಬಹುದು.

    ಮೊದಲು ಆಡುನುಡಿ ಆಮೇಲೆ ಬರಹ. ಬರವಣಿಗೆ ಯಾವಾಗಲೂ ಆಡುನುಡಿಗೆ ಹತ್ತಿರವಾಗಿರಬೇಕು. ಇದು ಲೋಕದ ಎಲ್ಲ ದೊಡ್ಡ ನುಡಿಯರಿಗರೂ ಹೇಳುವ ಮಾತು!

    ಇನಿತ್ತೇ! ಈ ಬರಹಕ್ಕೆ ಹೇಳಬಹುದು.!

    ಉತ್ತರ
  9. Priyank
    ಮಾರ್ಚ್ 28 2011

    ಅಜಕ್ಕಳ ಗಿರೀಶ ಭಟ್ಟರಿಗೆ ನನ್ನ ನಮಸ್ಕಾರಗಳು.

    ಶಂಕರ ಭಟ್ಟರು ಎತ್ತಿರುವ ವಿಷಯಗಳ ಬಗ್ಗೆ ಚರ್ಚೆಯಾಗಲಿ ಎಂಬ ನಿಮ್ಮ ಮಾತು ನನಗೆ ಒಪ್ಪಿಗೆಯಾಯಿತು.
    ಯಾವುದೇ ವೈಜ್ನ್ಯಾನಿಕ ವಿಷಯವು ಚರ್ಚೆಗೆ ಒಳಪಡಬೇಕು.

    ಶಂಕರ ಭಟ್ಟರ ಅಧ್ಯಯನದಿಂದ ಹೊರಹೊಮ್ಮಿದ ಕನ್ನಡದ ಬಗೆಗಿನ ಹಲವು ವಿಚಾರಗಳಿವೆ.
    ಅವುಗಳಲ್ಲಿ ನೀವು ಎಲ್ಲವನ್ನೂ ತಿರಸ್ಕರಿಸುತ್ತಿದ್ದೀರಾ? ಅಥವಾ ಮಹಾಪ್ರಾಣವನ್ನು ಬಿಡುವುದು ಮತ್ತು ಬರಹ ಸರಿಪಡಿಸೋದು, ಈ ಎರಡು ವಿಷಯಗಳ ಬಗೆಗೆ ಮಾತ್ರ ತಮ್ಮ ಭಿನ್ನಾಭಿಪ್ರಾಯವಿದೆಯಾ ತಿಳಿಸಿ.

    ಶಂಕರ ಭಟ್ಟರ ಪುಸ್ತಕಗಳನ್ನು ಓದಿದ ಮೇಲೆ, ಹಲವು ಕನ್ನಡ ಮಾಧ್ಯಮದ ಪಟ್ಯ ಪುಸ್ತಕಗಳನ್ನು ಮತ್ತೊಮ್ಮೆ ತಿರುವಿ ಹಾಕಿದೆ.
    ಶಂಕರ ಭಟ್ಟರು ಕೊಟ್ಟ ಕೆಲವು ಒಳನೋಟಗಳು ನನಗೆ ಸರಿಯೆಂದು ಕಂಡವು. ಕನ್ನಡ ಮಾಧ್ಯಮದ ಪಟ್ಯ ಪುಸ್ತಕಗಳಲ್ಲಿ ಹಲವು concept (ಇಂಗ್ಲೀಶ್ ಪದ ಸೂಕ್ತವೆನಿಸಿದ್ದರಿಂದ ಬಳಸಿದ್ದೇನೆ) ಗಳನ್ನು ಪರಿಚಯಿಸಲು/ತಿಳಿಸಲು, ಕಷ್ಟದ ಪದಗಳನ್ನು ಬಳಸಲಾಗಿದೆ.
    ಇದರ ಬದಲು, ಆಡುನುಡಿಯಲ್ಲೇ ಇರುವ ಹಲವು ಪದಗಳನ್ನು ಬಳಸಿದರೆ, ಮಕ್ಕಳಿಗೆ ಕಲಿಕೆ ಅಷ್ಟರ ಮಟ್ಟಿಗೆ ಸುಲಭವಾದೀತು ಎಂದೆನಿಸಿತು.
    ಇಲ್ಲಿ ಕೆಲವು ಉದಾಹರಣೆಗಳನ್ನು ಕೊಡಬಯಸುತ್ತೇನೆ.
    ೧. ಸಂಕಲನ – “ಕೂಡುವುದು” ಎಂಬ ಪದವನ್ನೇ ಬಳಕೆ ಮಾಡಬಹುದು. ಕನ್ನಡ ಮನೆಯಲ್ಲಿ ಕಲಿತ ಮಕ್ಕಳೆಲ್ಲರೂ, ಕೂಡುವುದು ಎಂಬ ಪದವನ್ನು ಸುಲಭವಾಗಿ ಗುರುತಿಸುತ್ತಾರೆ. ಅರ್ಥ ಮಾಡಿಕೊಳ್ಳುತ್ತಾರೆ.
    ೨. ವ್ಯವಕಲನ – “ಕಳೆಯುವುದು” ಎಂಬ ಪದವನ್ನೇ ಬಳಕೆ ಮಾಡಬಹುದು.
    ೩. ವ್ಯುತ್ಕ್ರಮ (reciprocal) – “ತಲೆಕೆಳಗೆ” ಎಂಬ ಪದವನ್ನೇ ಬಳಕೆ ಮಾಡಬಹುದು.
    ೪. ಆರೋಹಣ/ಅವರೋಹಣ – ಏರಿಕೆ/ಇಳಿಕೆ ಎಂಬ ಪದವನ್ನೇ ಬಳಕೆ ಮಾಡಬಹುದು.

    ಈ ಕೆಲವು ಬದಲಾವಣೆ ಮಾಡಿಕೊಳ್ಳುವುದು, ಕನ್ನಡ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಒಳಿತೇ ಮಾಡುತ್ತದಲ್ಲವೇ?
    ಆಡುನುಡಿಯ ಪದಗಳನ್ನು ತೆಗೆದುಹಾಕಿ, ಮಕ್ಕಳು ಉರು ಹೊಡೆಯಬೇಕಾದಂತ ಪರಿಸ್ಥಿತಿ ಕಟ್ಟೋದು ಬೇಕಾಗಿಲ್ಲ ಅಲ್ಲವೇ?

    ನಾನು ಹೇಳೋದನ್ನ. “ಸಂಸ್ಕೃತ ಪದಗಳನ್ನೇ ತೆಗೆಯಿರಿ” ಎಂದು ಹೇಳುತ್ತಿರೋದಾಗಿ ಅರ್ಥೈಸಿಕೊಳ್ಳಬೇಡಿರೆಂದು ಕೇಳಿಕೊಳ್ಳುತ್ತೇನೆ.
    ಕನ್ನಡ ಬೇರಿನ ಪದಗಳು ಇಲ್ಲದ ಪಕ್ಷದಲ್ಲಿ, ಸಂಸ್ಕೃತ ಬೇರಿನ ಪದಗಳು ಈಗಾಗಲೇ ಆಡುನುಡಿಗೆ ಬಂದಿರುವ ಪಕ್ಷದಲ್ಲಿ, ಸಂಸ್ಕೃತ ಬೇರಿನ ಪದಗಳನ್ನೇ ಬಳಸುವುದು ಸೂಕ್ತ ಎಂಬುದು ನನ್ನ ನಂಬಿಕೆಯಾಗಿದೆ.

    ಉತ್ತರ
  10. Vasant
    ಮಾರ್ಚ್ 28 2011

    ಎಲ್ಲ ಗೆಳೆಯರಲ್ಲಿ ಮನವಿ ಮಾಡುವೆ. ನಮ್ಮೆಲ್ಲ ಚರ್ಚೆಗಳು ಸಾಧ್ಯವಾದಷ್ಟು ವಿಷಯದತ್ತ ಇರಲಿ. ವೈಯಕ್ತಿಕ ಟೀಕೆ, ಕೆಟ್ಟ ನುಡಿಯ ಬಳಕೆ ಬೇಡ. ಅದು ಯಾವ ಒಳ್ಳೆ ಚರ್ಚೆಗೂ ದಾರಿ ಮಾಡಿಕೊಡದು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯ ತಿಳಿಸುವ,ತಳೆಯುವ ಎಲ್ಲ ಹಕ್ಕು ಇದೆ. ಯಾವುದು ಸರಿ ಎಂಬುದರ ಬಗ್ಗೆ ನಿಲುವು ತಳೆಯುವ, ಕೆಲಸ ಮಾಡುವ ಎಲ್ಲ ಆಯ್ಕೆ ಎಲ್ಲರಿಗೂ ಇದೆ. ಯಾವುದು ಸರಿಯೋ ಅದು ಖಂಡಿತ ಕಾಲದ ಪರೀಕ್ಷೆಯಲ್ಲಿ ಗೆಲುವು ಕಾಣುತ್ತೆ. ಅದಕ್ಕೆ ಅವಕಾಶವಿರಲಿ. ಇನ್ನೊಂದು ಅಭಿಪ್ರಾಯವೇ ಇರಕೂಡದು ಅನ್ನುವುದು feudal ಮನಸ್ಥಿತಿ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವವರು ನಡೆದುಕೊಳ್ಳುವ ರೀತಿಯಲ್ಲ. ಹೀಗಾಗಿ ಅನಿಸಿಕೆಗಳು ಚರ್ಚೆಗೆ ತಕ್ಕುದಾಗಿರಲಿ ಎಂದು ಕೇಳುವೆ.

    ಉತ್ತರ
  11. jayanth
    ಮಾರ್ಚ್ 28 2011

    ನಿಲುಮೆ ತಂಡ,
    ನುಡಿಯ ವಿಷಯದಲ್ಲಿ ಶಂಕರ ಭಟ್ಟರ ನಿಲುವು, ಅಥವಾ ಎಲ್ಲರ ಕನ್ನಡವೆಂದರೇನು ಅನ್ನುವುದರ ಬಗ್ಗೆ ತಿಳಿಯಲು ನೀವು ಹೆಚ್ಚು ಪ್ರಯತ್ನ ಮಾಡಿದಂತಿಲ್ಲ. ಗಿರೀಶ್ ಅವರ ಹಳೆಯ ಬ್ಲಾಗನ್ನೇ ಇಲ್ಲಿ ತಂದು ಹಾಕಲು ತೋರಿದ ಶ್ರದ್ಧೆಯನ್ನೇ ಭಟ್ಟರ ನಿಲುವೆನೆಂದು ತಿಳಿಯಲು, ಅದರ ಒಳಿತು,ಕೆಡುಕುಗಳ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದರೆ ಇನ್ನಷ್ಟು ಸಮತೂಕದ ಅಭಿಪ್ರಾಯ ನಿಮಗೆ ಸಿಕ್ಕಿರುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ. ಶಂಕರ ಭಟ್ಟರು ಹೇಳುವ ಸುಧಾರಣೆಗಳಿಗೆ ಅವರು ಕೊಡುವ ಕಾರಣಗಳೇನು? ಅದು ಸಮಾಜದ ಕೆಳ ವರ್ಗದ ಕನ್ನಡಿಗರ ಕಲಿಕೆಗೆ ಉತ್ತೇಜನ ಕೊಡುವುದು ಎಷ್ಟರ ಮಟ್ಟಿಗೆ ಸರಿ ನಿಲುವು. ಅದರ ಒಳಿತು ಕೆಡುಕೇನು ಅನ್ನುವುದನ್ನು ತಿಳಿದು (ಅವರ ಪುಸ್ತಕಗಳ ಮೂಲಕ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಹಲವು ಜನರ ಮೂಲಕ) ನಿಲುಮೆಯಲ್ಲಿ ಪ್ರಕಟಿಸಲು ಯತ್ನಿಸಿ, ಆ ಮೂಲಕ ನಿಲುಮೆಯ ನಿಲುವು ಜಾತ್ಯಾತೀತ ಅನ್ನುವುದನ್ನು ಇನ್ನೊಮ್ಮೆ ರುಜುವಾತು ಮಾಡಿ ಎನ್ನುವುದು ನನ್ನ ವಿನಂತಿ.

    ಉತ್ತರ
    • ಮಾರ್ಚ್ 28 2011

      ಜಯಂತ್,

      ಈ ಬರಹ ಹಳೆಯದೇ ಇರಬಹುದು.ಆದರೆ ವಿಷಯ ಇಂದಿಗೂ ಪ್ರಸ್ತುತ.ಕಾಳು-ಜೊಳ್ಳು ಯಾವುದು ಅನ್ನುವುದನ್ನ ಕಾಲ ನಿರ್ಧರಿಸಲಿ.

      ನಿಲುಮೆಯ ನಿಲುವು ನಿಮಗೆ ಬಹುಷಃ ತಿಳಿದಿರಬಹುದು.ನಾವು ಭಿನ್ನ ನಿಲುವುಗಳನ್ನ ಗೌರವಿಸುತ್ತೇವೆ.ಲೇಖಕರ ನಿಲುವನ್ನ ನೀವು ನಿಲುಮೆಯ ನಿಲುವಿಗೆ ಹೋಲಿಸುತಿದ್ದಿರಿ.ಇನ್ನ ಶಂಕರ ಭಟ್ಟರ ಬರಹಗಳನ್ನ ಪ್ರಕಟಿಸುವ ಬಗ್ಗೆ.ಆ ವಿಷಯವಾಗಿ ನೀವು ಇಲ್ಲ ಯಾರೇ ಆದರು ಬರೆದು ಕಳಿಸಿದರೆ ಅದರ ಬಗ್ಗೆಯೂ ಖಂಡಿತ ನಿಲುಮೆ ಕಾಳಜಿವಹಿಸುತ್ತದೆ.

      ಕೆಲವು ಬರಹಗಳು ಕೆಲವರಿಗೆ ಹಿಡಿಸಬಹುದು ಇನ್ನು ಕೆಲವರಿಗೆ ಹಿಡಿಸದಿರಬಹುದು.ಅದಕ್ಕೆಲ್ಲ ನಿಲುಮೆ ಇಷ್ಟೇ ಅಂತ ಪಟ್ಟ ಕಟ್ಟುವುದು ಸರಿಯೇ ನೀವೇ ಯೋಚಿಸಿ.

      ಅಂತಿಮವಾಗಿ ಕನ್ನಡ ಗೆಲ್ಲಲಿ,ಕನ್ನಡದ ಮಕ್ಕಳಿಗೆ ಒಳ್ಳೆಯದಾಗಲಿ ಅನ್ನುವ ಹಾರೈಕೆ ನಿಲುಮೆಯದು.

      ನಿಮ್ಮೊಲುಮೆಯ,

      ನಿಲುಮೆ

      ಉತ್ತರ
      • Priyank
        ಮಾರ್ಚ್ 28 2011

        ನಿಲುಮೆ ತಂಡದವರೇ,

        ಈ ಬರಹದ ಬಗ್ಗೆ ಕೆಲವು ಪ್ರಶ್ನೆಗಳು. ತಾವು ಉತ್ತರಿಸುತ್ತೀರೆಂದು ನಂಬಿರುತ್ತೇನೆ.
        ೧. ಈ ಬರಹ ಹಳೆಯದೆಂದು ನೀವು ಹೇಳುತ್ತಿದ್ದೀರ.
        ಇದು ಗಿರೀಶ ಭಟ್ಟರ ಪುಸ್ತಕದಿಂದ ಆಯ್ದುದಕ್ಕೆ ಹಾಗೆ ಹೇಳುತ್ತಿದ್ದೀರೋ, ಅಥವಾ ಗಿರೀಶ ಭಟ್ಟರೇ ಬೇರೆ ಕಡೆ ಬರೆದ ಬರಹವನ್ನು ಇಲ್ಲಿ ಹಾಕಲಾಗಿ ಹಳೆಯದು ಎಂದು ಕರೆಸಿಕೊಳ್ಳುತ್ತಿದೆಯೋ?

        ೨. ಅಜಕ್ಕಳ ಗಿರೀಶ ಭಟ್ಟರು, “ಚರ್ಚೆಗೆ ಸ್ವಾಗತ” ಎಂದು ತಮ್ಮ ಬರಹದಲ್ಲಿ ಹೇಳಿದ್ದಾರೆ.
        ಚರ್ಚೆಯಲ್ಲಿ ಅವರು ಪಾಲ್ಗೊಳ್ಳುವರು ಎಂಬ ನಂಬಿಕೆ ಓದುಗರದ್ದಾಗಿದೆ.
        ಕಾರಣಾಂತರಗಳಿಂದ, ಗಿರೀಶ ಭಟ್ಟರಿಗೆ ಈ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇದ್ದರೆ, ಆ ಬಗ್ಗೆ ಓದುಗರಿಗೆ ತಿಳಿಸುವ ಜವಾಬ್ದಾರಿ ನಿಮ್ಮದಾಗುತ್ತದೆ.

        ಉತ್ತರ
        • ಮಾರ್ಚ್ 28 2011

          ಪ್ರಿಯಾಂಕ್,

          ಇದು ಅಜಕ್ಕಳ ಗಿರೀಶ್ ಅವರ ಪುಸ್ತಕದಲ್ಲಿ ಬರುವ ಒಂದು ಲೇಖನ.ಅದು ಈ ಮೊದಲು ಬೇರೆ ಕಡೆ ಪ್ರಕಟವಾಗಿದೆ ಅನ್ನುವುದು ನಿಮಗೆ ಗೊತ್ತಿದೆಯಲ್ವಾ? ಜಯಂತ್ ಅವರು ಇದನ್ನ ಹಳೆಯದು ಅಂದರು,ಈ ಮೊದಲು ಬರೆದಿದ್ದೆಲ್ಲ ಹಳೆಯದು ಅನ್ನುವುದಾದರೆ, ಹೌದು ಅನ್ನುವ ಅರ್ಥದಲ್ಲಿ ಬರೆದಿದ್ದು.ಇದಕ್ಕೆ ವಿಶೇಷ ಗಮನ ಕೊಡಬೇಕಿಲ್ಲ ಬಿಡಿ.

          ಇನ್ನ ನಿಮ್ಮ ಎರಡನೇ ಪ್ರಶ್ನೆ ಅಜಕ್ಕಳ ಉತ್ತರದ ಬಗ್ಗೆ.ಸದ್ಯ,ಕಾರ್ಯ ನಿಮಿತ್ತ ಹೊರಗಿರುವ ಅಜಕ್ಕಳರು ಉತ್ತರಿಸಲಿದ್ದಾರೆ ಅನ್ನುವ ಮಾತನ್ನ ಹೇಳಲಿಚ್ಚಿಸುತ್ತೇವೆ.

          ಉತ್ತರ
  12. Priyank
    ಮಾರ್ಚ್ 28 2011

    ನಿಲುಮೆ ತಂಡದವರೇ, ನನ್ನಿ.

    ಉತ್ತರ
  13. Shubhashree
    ಮಾರ್ಚ್ 28 2011

    ಅಜಕ್ಕಳರ ಪುಸ್ತಕ ನೋಡಿದಾಗ ಅನ್ನಿಸಿದ್ದು,

    ಈ ಪುಸ್ತಕವನ್ನು ಬರೆದಿರುವ ಡಾ. ಅಜಕ್ಕಳ ಗಿರೀಶ್ ಭಟ್ಟರು ತಾವು ಬರೆದ ಪುಸ್ತಕಕ್ಕೆ ಇಟ್ಟಿರುವ ಹೆಸರೇ ಶ್ರೀಯುತರ ಉದ್ದೇಶವು ತಾತ್ವಿಕ ನಿಲುವನ್ನು ಪ್ರತಿಪಾದಿಸುವುದಾಗಲೀ, ವಾದವೊಂದನ್ನು ಆರೋಗ್ಯಕರವಾಗಿ ನಡೆಸುವುದಾಗಲೀ ಅಲ್ಲವೆಂದೂ ವ್ಯಕ್ತಿಯ ತೇಜೋವಧೆಯನ್ನು ಮಾಡುವುದಕ್ಕಾಗಿ ಮಾತ್ರವೇ ಎಂದೂ ವೇದ್ಯವಾಗುವುದಿಲ್ಲವೇ? ಇಲ್ಲದಿದ್ದರೆ “ಕನ್ನಡಕ್ಕೇಕೆ ಕತ್ತರಿ?” ಎನ್ನುವ ಹೆಸರು ಸಾಕಾಗುತ್ತಿತ್ತು. ಶಂಕರಭಟ್ಟರ ಎಂದು ಬರೆದಿರುವ ಉದ್ದೇಶವೇ ಡಾ. ಡಿ ಎನ್ ಎಸ್ ಅವರನ್ನು ಏಕಾಂಗಿ ಎಂದು ಬಿಂಬಿಸುವ ದುರುದ್ದೇಶದಿಂದ ಅಲ್ಲವೇ?

    ಡಾ. ಡಿ ಎನ್ ಶಂಕರಭಟ್ಟರ ವಿಚಾರಗಳ ಬಗ್ಗೆ ನಡುನಡುವೆ ತಮ್ಮ ವಾದಕ್ಕೆ ಅನುಕೂಲವಾಗುವಂತಹ ಸಾಲುಗಳನ್ನು ಮಾತ್ರಾ ಎತ್ತಿಕೊಂಡು ತಮಗೆ ತೋಚಿದಂತೆ ವಿಶ್ಲೇಷಿಸಿರುವುದರಲ್ಲಿ ವಿತಂಡತನವಲ್ಲದೆ ಮತ್ತೆ ಯಾವ ವಿದ್ವತ್ತು ಕೂಡಾ ಕಾಣದು.

    ಉತ್ತರ
  14. Shubhashree
    ಮಾರ್ಚ್ 28 2011

    ಮೂಲತಃ ಶಂಕರಭಟ್ಟರ ನಿಲುವುಗಳನ್ನು ಖಂಡಿಸುತ್ತಾ ಇವುಗಳನ್ನು ಒಪ್ಪಿರುವ ಯಾವ ಭಾಷಾ ವಿಜ್ಞಾನಿಯೂ ಇಲ್ಲವೆನ್ನುವಂತೆ ಬರೆದಿರುವುದು ಸರಿಯಲ್ಲ. ಕರ್ನಾಟಕದ ಬಹುತೇಕ ಭಾಷಾ ವಿಜ್ಞಾನಿಗಳು ಇಂದು ಡಾ. ಡಿ ಎನ್ ಎಸ್ ಅವರ ನಿಲುವುಗಳ ಬಗ್ಗೆ – ಅವುಗಳಲ್ಲಿ ಒಪ್ಪಿತವಾಗುವುವೆಷ್ಟು? ಆಗದವೆಷ್ಟು? – ಎಂದೆಲ್ಲಾ ಚರ್ಚೆ ನಡೆಸಿದ್ದಾರೆ. ಹಾಂ… ಅದೂ ಭಾಷಾ ವಿಜ್ಞಾನದ ನೆಲೆಯಲ್ಲಿ. ಆದರೆ ಸ್ವತಃ ವಿದ್ವಾಂಸರಾದ(?) ಗಿರೀಶ್ ಬಳಸಿರುವುದು ಬಹುಭಾಷಾ ಪಂಡಿತರಾದ ಶ್ರೀ ರಾ. ಗಣೇಶ್ ಅವರ ಮಾತುಗಳನ್ನು. ನೆನಪಿಡಿ, ಗಣೇಶ್ ಅವರೊಬ್ಬ ಬಹುಭಾಷಾ ವಿದ್ವಾಂಸರೇ ಹೊರತು ಭಾಷಾ ವಿಜ್ಞಾನಿಯಲ್ಲ.

    ಉತ್ತರ
    • Narendra Kumar.S.S
      ಮಾರ್ಚ್ 29 2011

      > ನೆನಪಿಡಿ, ಗಣೇಶ್ ಅವರೊಬ್ಬ ಬಹುಭಾಷಾ ವಿದ್ವಾಂಸರೇ ಹೊರತು ಭಾಷಾ ವಿಜ್ಞಾನಿಯಲ್ಲ.
      ಒಬ್ಬ ವ್ಯಕ್ತಿ ಭಾಷಾ ವಿಜ್ಞಾನಿ ಎನ್ನಲು ನೀವು ಬಳಸುತ್ತಿರುವ ಮಾಪನವಾವುದು ಎಂದು ತಿಳಿಯಬಹುದೇ?

      ಮತ್ತು ಭಾಷಾ ವಿಜ್ಞಾನಿಯಾಗದವರು ಸಲಹೆಯನ್ನೇ ನೀಡಬಾರದು ಎಂದು ನಿಮ್ಮ ಸೂಚನೆಯೇ ಅಥವಾ ಅವರ ಸಲಹೆಗಳಿಗೆ ಬೆಲೆಯಿಲ್ಲ ಎಂದೋ?

      ಒಂದೆಡೆ “ಬಹುಸಂಖ್ಯಾತರ ನಿಲುಮೆಯನ್ನು ಒಪ್ಪೋಣ” ಎನ್ನುವುದನ್ನು ಓದಿದೆ. ಮತ್ತೊಂದೆಡೆ ಭಾಷಾ ವಿಜ್ಞಾನಿಗಳ ಮಾತನ್ನು ಮಾತ್ರ ಒಪ್ಪಬಹುದೆನ್ನುವ ಸೂಚನೆ. ನಿಮ್ಮ ನಿಲುಮೆ ನನಗೆ ಅರ್ಥವಾಗುತ್ತಿಲ್ಲ, ಗೊಂದಲವಾಗುತ್ತಿದೆ. ದಯವಿಟ್ಟು ತಿಳಿಗೊಳಿಸುವಿರಾ?

      ಉತ್ತರ
      • ಮಾರ್ಚ್ 29 2011
        • Shubhashree
          ಮಾರ್ಚ್ 30 2011

          ನರೇಂದ್ರಕುಮಾರ್ ಅವರೇ,

          ಸಲಹೆ ಯಾರು ಬೇಕಾದರೂ ಕೊಡಬಹುದು. ಇಲ್ಲಿ ಸಲಹೆಯ ಪ್ರಶ್ನೆ ಇಲ್ಲ. ಭಾಷಾವಿಜ್ಞಾನಿಯಾದ ಶಂಕರಭಟ್ಟರನ್ನು (ಅವರ ವಾದವನ್ನು?)ಖಂಡಿಸಲು ಅವರಿಂದ ಕೆಲಕಾಲ ಮಾರ್ಗದರ್ಶನ ಪಡೆದ(?)(ಹೀಗಂತ “ಕತ್ತರಿ” ಪುಸ್ತಕದಲ್ಲಿದೆ.) ಡಾ. ಗಿರೀಶ್ ಭಟ್ಟರು ಭಾಷಾ ವಿಜ್ಞಾನದಲ್ಲಿ ಯಾವ ತೆರನಾದ ಅಧ್ಯಯನದ ಹಿನ್ನೆಲೆ ಇರದ (?)(I think Dr. R Ganesh is an Engineer) ಗಣೇಶರ ಬರಹದ ಸಾಲುಗಳನ್ನು ಒಂದು ಗುರಾಣಿಯಂತೆ, ಬ್ರಹ್ಮಾಸ್ತ್ರದಂತೆ ಬಳಸಿರುವುದಕ್ಕೆ ಆಕ್ಷೇಪಿಸಿದ್ದು ಅಷ್ಟೆ.

          ಉತ್ತರ
          • ಮಾಯ್ಸ
            ಮಾರ್ಚ್ 30 2011

            ಗಣೇಶ ಅವರು ಇಂಜಿನಿಯರ್ ಎಂದು ಕೇಳಿಬಲ್ಲೆ. ಅವರ ಓದಿನ ಬಗ್ಗೆ ಸರಿಯಾದ ತಿಳಿವು ಎಲ್ಲಿದೆ?

            ಉತ್ತರ
            • ಮಾಯ್ಸ
              ಮಾರ್ಚ್ 30 2011

              Shatavadhani Dr. R. Ganesh

              Dr.Ganesh holds an M.Sc degree in Material Science and Metallurgy from the well-known Indian Institute of Science in Bangalore. He also holds a Masters’ in Sanskrit from the Mysore University.

              ಇವರು ಕನ್ನಡದ ಬಗ್ಗೆ ಒಂದು ಪದವಿಯನ್ನೂ ಗಳಿಸಿಲ್ಲ.. ಗಿರೀಶ್ ಭಟ್ ಆದರೂ ಕನ್ನಡಲ್ಲಿ ಎಂ.ಎ ಮಾಡಿದ್ದಾರೆ.

              ಉತ್ತರ
              • ನನಗೆ ತಿಳಿದ ಮಹನೀಯರು ಕೆಲವರು ಸಂಸ್ಕೃತದಲ್ಲಿ ಎಂ.ಎ ಮಾಡಿ, ಕೆಲವು ಪೇಪರುಗಳಲ್ಲಿ ಚಿನ್ನದ ಪದಕ ಪಡೆದು, ಮುಂದೆ ಪಿ.ಹೆಚ್.ಡಿ ಮಾಡಿ ಈಗ ಯೂನಿವರ್ಸಿಟಿಗಳಲ್ಲಿ ಬೋಧನೆಯ ಕೆಲಸ ನೋಡುತ್ತಿದ್ದಾರೆ. ಆದರೆ ಅವರಲ್ಲಿ ಬಹಳಷ್ಟು ಜನಕ್ಕೆ ಸಂಸ್ಕೃತದ ಒಂದು ವಾಕ್ಯಖಂಡದ ರಚನೆಯೂ ಬರದು, ಅಲ್ಪಪ್ರಾಣ ಮಹಾಪ್ರಾಣಗಳ ಔಚಿತ್ಯ ತಿಳಿಯದು. ಗಣೇಶರು ಅವರ ವಿದ್ಯಾರ್ಹತೆಯ ಕಾರಣದಿಂದ ಕನ್ನಡದ ಬಗ್ಗೆ ಮಾತಾಡಲು ಅನರ್ಹರು ಎಂದಾದರೆ ನಾವು ಸಂಸ್ಕೃತಬಗ್ಗೆ ಈ ಮೇಲೆ ಹೇಳಿದ ಮಹನೀಯರ ಮಾತಿನ “ಮಾನ-ದಂಡ”ವನ್ನನುಸರಿಸಬೇಕಾಗುತ್ತದೆ. By the way, ನಾನು ಯಃಕಶ್ಚಿತ್ b.com ಆದ್ದರಿಂದ ಭಾಷೆಯ ವಿಷಯದಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ ಹೇಗಾದೀತೋ ಎಂದು ಅಂಜಿ ಸುಮ್ಮನೆ ಇದ್ದೇನೆ. ಶಂಕರಬಟ್ಟರ ಪರ-ವಿರೋಧೀ ವಿದ್ವಾಂಸರು ನನ್ನ ಕನ್ನಡ ಹೇಗಿರಬೇಕೆಂದು ಇತ್ಯರ್ಥಗೊಳಿಸಿ ತಿಳಿಸುವವರೆಗೂ ನನ್ನ ಕನ್ನಡ ಸರಿಯೋ ತಪ್ಪೋ ಎಂಬ ಕಳವಳವಿದ್ದೇ ಇದೆ ನನಗೆ.

                ಉತ್ತರ
                • ಮಾಯ್ಸ
                  ಮಾರ್ಚ್ 31 2011

                  ನೋಡಿ..

                  ರಾ.ಗಣೇಶ ಅವರು ಮನೆ ಮಾತು ತಮಿಳು, ಓದು ಸಂಸ್ಕೃತ, ಹೀಗಿರುವಾಗ ಅವನ್ನು ಕನ್ನಡದ ಬಗ್ಗೆ ಮಾದರಿಯಾಗಿ ಹೇಗೆ ತೆಗೆದುಕೊಳ್ಳುವುದು?

                  ಒಬ್ಬೊಬ್ಬ ಹುಟ್ಟಾ ಕನ್ನಡಿಗನಿಗೂ ತನ್ನ ನುಡಿ ಹೇಗಿರಬೇಕು ಎಂದು ಹೇಳುವ ಅದಿಕಾರವಿದೆ. ಮೊದಲು ನಾವು ಕನ್ನಡಿಗರು, ಹಾಗು ನಮ್ಮ ಹಕ್ಕು, ಆಮೇಲೆ ವಲಸೆ ಬಂದೋರ ಇಶ್ಟ!

                  ನೀವು ಹೇಳಿದ ಸಂಸ್ಕ್ರುತ ಪಂಡಿತರು ಬೇಕಾದಶ್ಟು ಮಂದಿ ಇದ್ದಾರೆ. ಸಂಸ್ಕ್ತುತ ಪರೀಕ್ಷೆಯಲ್ಲಿ ೧೦೦ಕ್ಕೆ ನೂರು ಇಂಗ್ಲೀಶಲ್ಲಿ ಬರೆದು ಪಡೆಯಬಹುದಾದ ಮೋಸದ ಅನುವು ಸಲೀಸಾಗಿ ಸರಕಾರದಿಂದ ಮಾಡಿಸಿಕೊಂಡಿದ್ದಾರೆ.

                  ಅನಿಲ್ ಕುಂಬ್ಳೆಯವರು ಇದನ್ನೇ ಸಂಸ್ಕ್ರುತ ಸಮ್ಮೇಳನದಲ್ಲಿ ಹೇಳಿ, ಸಂಸ್ಕ್ರುತವು ಎಲ್ಲಾ ನುಡಿಗಳ ತಾಯಿ ಎಂದು ತೀರ್ಪುಕೊಟ್ಟಿದ್ದು!

                  ಉತ್ತರ
                  • ಹಾಗಿದ್ದರೆ ವಿಷಯ-ಸ್ಪಷ್ಟತೆ ಬಿಟ್ಟು ಕೇವಲ ವಿದ್ಯಾರ್ಹತೆ, ಸರ್ಟಿಫಿಕೇಟು, ಯೂನಿವರ್ಸಿಟಿ ಅಫಿಲಿಯೇಶನ್ನುಗಳ ಹಿಂದೆ ಬೀಳುವುದು, ಅದನ್ನೇ ಮಾನದಂಡವಾಗಿರಿಸಿಕೊಳ್ಳುವುದು ಮೂರ್ಖತನವಲ್ಲವೇ ಮಾಯ್ಸರೇ?

                    ಮನೆಮಾತು, ಹಿನ್ನೆಲೆ ಇವುಗಳ ಬಗ್ಗೆ ನಿಮ್ಮ ಮುಂದಿನ ಕಾಮೆಂಟಿನಲ್ಲಿ ಉತ್ತರಿಸುವೆ.

                    ಉತ್ತರ
                    • ಮಾಯ್ಸ
                      ಮಾರ್ಚ್ 31 2011

                      ಅಲ್ಲ..

                      ನಾವಿಲ್ಲಿ ಬರಿಯ ಬೆಂಬಲಿಗರು. ನಾನು ಶಂಕರಬಟ್ಟರ ಬೆಂಬಲಿಗ,

                      ಆದರೆ ನಾನು ಯಾವ ಹೊತ್ತಗೆನ್ನಾಗಲಿ, ಇಲ್ಲವೇ ಒಬ್ಬರು ಲೆಕ್ಕಮಾಡತಕ್ಕವರು ಎಂದು ಅವರ ಮಾತನ್ನು ಎತ್ತುಗೆಯಾಗಿ ಹೇಳಿರುವಾಗ ಅವರಿಗೆ ಏನು ತಕ್ಕುಮೆ/ಯೋಗ್ಯತೆ ಇದೆ ಎಂಬುದು ಬೇಕು.

                      ಅದನ್ನೇ ಬರತ್ ಹೇಳಿದ್ದು ಎದೆಬೇನೆಗೆ ನಾವು ಎದೆಮಾಂಜುಗಾರ/ಡಾಕ್ಟರ ಬಳಿ ಹೋಗುವೆವು, ಇಂಜಿನಿಯರ್ ಬಳಿ ಅಲ್ಲ.

      • ಮಾರ್ಚ್ 30 2011

        ಮಾಯ್ಸ,
        ಮಾತುಗಳು ವೈಯಕ್ತಿಕ ಮಟ್ಟಕ್ಕೆ ಇಳಿಯದಿರಲಿ.ನಿಲುಮೆಯಲ್ಲಿ ಈ ರೀತಿಯ ಪ್ರತಿಕ್ರಿಯೆಗಳನ್ನು ಒಪ್ಪಲಾಗದು.

        ಉತ್ತರ
        • ಮಾಯ್ಸ
          ಮಾರ್ಚ್ 30 2011

          ರಾಕೇಶ್

          ನಾನು ಮೊದಲ ಸಾಲಲ್ಲೇ ಬರೆದಂತೆ ಇದು ಹಾಗೆ ಅನ್ನಿಸಬಹುದು. ಆದರೆ ಒಂದು ಸಂಸ್ಕೃತದ ಕಟ್ಟರ್ ಗುಂಪಿನ ಮನಸ್ಥಿತಿಯನ್ನು ತಿಳಿಯುವಲ್ಲಿ ಇದು ಬೇಕು.

          ನಾನು ಕೊಟ್ಟ ಲಿಂಕ್ ನೋಡಿ. ಅವರು ಆಡುಮಾತಿನಲ್ಲ ಕನ್ನಡವನ್ನು ಬಿಟ್ಟು ಬಿಟ್ಟಿದಕ್ಕೆ ಹೆಮ್ಮೆಯಂತೆ!

          ಉತ್ತರ
          • ಮಾಯ್ಸ
            ಮಾರ್ಚ್ 30 2011

            ಹಿಂದೆ ಇದೇ ಗುಂಪಿನ ನಾಗರಾಜು ಎಂಬುವರು ‘ಸಂಸ್ಕೃತವಿಲ್ಲದ ಕನ್ನಡ ಜಾಳು’ ಎಂಬ ಮಾತುಹೇಳಿದ್ದರು.

            ತಮಿಳು ನೆಲದಲ್ಲಿ ನಡೆದ ದಲಿತ ಚಳುವಳಿಯಿಂದ ಹಲವಾರು ಕಟ್ಟರ್ ಸಂಸ್ಕೃತ ಪ್ರೇಮಿ ಹಾಗು ತಾವೇ ಮೇಲು ಎಂದು ಬೀಗುವ ತೆಲುಗು/ತಮಿಳು ಬ್ರಾಹ್ಮಣರು ಕರ್ನಾಟಕಕ್ಕೆ ವಲಸೆ ಬಂದರು. ಹಾಗೆ ವಲಸೆ ಬಂದವರಲ್ಲು ಹೆಚ್ಚಿನವರಿಗೆ ಕನ್ನಡ ಬೇಡವೇ ಬೇಡ. ಅವರು ನಮ್ಮ ಕನ್ನಡ ಸಾಂಸ್ಕೃತಿಕ ವಲಯಗಳಲ್ಲಿ ಜಾಚಿಕೊಂಡು ಎಷ್ಟು ಸಂಸ್ಕೃತ ಸೇರಿಸಿ ತಮ್ಮ ಜೀವನ ಧನ್ಯವೆಂದು ಬೀಗಬಹುದು ಅಷ್ಟು ಮಾಡುತ್ತಿದ್ದಾರೆ.

            ಈ ಗುಂಪಿಗೆ ಸೇರಿದ ದೊಡ್ಡ ಪಟ್ಟಿ ಇದೆ. ಈ ಗುಂಪು ತಮಿಳರೆಂದರೆ ರಾಕ್ಷಸ ಸಮಾನರು, ದಡ್ಡರು, ಒರಟು ಜನ ಎಂದು ಬಿಂಬಿಸುವಂತೆ, ಹಾಗು ತಮಿಳು ಚಳುವಳಿ ಅಂಶಗಳೆಲ್ಲ ಸವಕಲು, ಕೆಲಸಕ್ಕೆ ಬಾರದ್ದು ಸಂಸ್ಕೃತ ದ್ವೇಷ ಎಂದು ಬರೆಯುವರು.

            ಹಾಗೇ ನೋಡಿದರೆ ಇವರೆಲ್ಲ ಮೂಲತಃ ಕನ್ನಡಿಗರೇ ಅಲ್ಲ! ಆದರೂ ತಮ್ಮ ಮೇಲ್ಮೆಯನ್ನ ನಮ್ಮ ನೆಲದಲ್ಲೆ ತೋರಿಸಲು ಪ್ರಖಂಡ ಪಂಡಿತರಂತೆ ಸಂಸ್ಕೃತಕ್ಕೆ ಲಾಬಿ ಮಾಡುವರು. ಅಷ್ಟೆಲ್ಲ ಇಲ್ಲದಿದ್ರೆ ಸಂಸ್ಕೃತ ವಿಶ್ವವಿದ್ಯಾನಿಲಯ, ಕರ್ನಾಟಕದಂತಹ ಸಮಾಜಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಬರುತ್ತಿತ್ತೇ?

            ಉತ್ತರ
            • ಮಾಯ್ಸ
              ಮಾರ್ಚ್ 30 2011

              ಈ ಗುಂಪಿಗೆ ತಾಳ ಹಾಕು ಕನ್ನಡಿಗರದ್ದೇ ಇನ್ನೊಂದು ಗುಂಪಿದೆ. ಅದೂ ಕೂಡ ಮೇಲುಗಾರಿಕೆಯ ತೆವಲಿನಲ್ಲಿ ಸಂಸ್ಕೃತದ ಬಾಲ ಹಿಡಿದಿದೆ. ಅದಕ್ಕೆ ಸಂಸ್ಕೃತವೆಂದರೆ ಹಿಂದೂ ಧರ್ಮದ ಬೇರು. ಕನ್ನಡದ ಪ್ರತಿಯೊಂದು ಸಾಲಿನಲ್ಲಿ ಎಷ್ಟು ಸಂಸ್ಕೃತ ಸೇರಿಸಬಹುದು ಅಷ್ಟನ್ನು ಸೇರಿಸಿದರೆ ಅವರಿಗೆ ತಮ್ಮ ಹಿಂದೂ ಧರ್ಮವನ್ನು ರಕ್ಷಣೆ ಮಾಡಿ ಮೋಕ್ಷ ಪಡೆದಂತೆ.!

              ಇಂತಹ ಮಂದಿಯಿಂದ ನಮ್ಮ ಕನ್ನಡ ಭಾಷೆ ತನ್ನ ನೈಜತೆಯಿಂದ ದೂರವಾಗಿ ಅಂದಗೆಟ್ಟು, ಅದರ ಮೂಲಭಾಷಿಕರಿಗೇ ತೊಡಕಾಗುತ್ತಿದೆ.

              ನಾನು ಹೇಳುತ್ತಿರುವ ಗುಂಪು ಕೇಳವ ಸಂಸ್ಕೃತ ಭಾಷಾದುರಭಿಮಾನಿಗಳಲ್ಲ. ಅವರು ಅತಿ ಬಲಪಂಥೀಯ, ಜಾತಿವಾದಿ ಹಾಗು ಕಟ್ಟರ್ Nazism ಮತ್ತು racism ಮನಸ್ಥಿತಿ ಉಳ್ಳವರು. ಈ ತಮಿಳು ಜನಾಂಗವೇ ಅಸಭ್ಯರು ಎನ್ನುವವರು. ಸಂಸ್ಕೃತದ ಉಚ್ಚರಣೆಯ ಮಾಡಲು ಮೂಲವಾಸಿಗಳೆ ಕಷ್ಟವನ್ನು ನೋಡಿ, ಅವರನ್ನು ಕೀಳು ಎಂದು ನಗುವವರು.

              ರಾಕೇಶ ಶೆಟ್ಟಿಯವರೇ,

              ಹೇಳಿ ಈ ಬಗೆಯ ಗುಂಪು ನಮ್ಮ ನಾಡಿನಲ್ಲಿ ಇದೆಯೋ, ಇಲ್ಲವೋ?

              ಉತ್ತರ
              • ಮಾರ್ಚ್ 30 2011

                ಅಂತ ಮನಸ್ಥಿತಿಯವರು ಎಲ್ಲ ಕಡೆಯೂ, ಎಲ್ಲ ಪಂಥ/ಗುಂಪಿನಲ್ಲೂ ಇರುವರು.

                ತಾವು ಅವರಂತೆ ಆಗದಿರಿ ಅಂತಷ್ಟೇ ನನ್ನ ಅಭಿಲಾಷೆ.ತಮಗೊಳ್ಳೆ ಓದಿದೆ ಅದನ್ನ ಬಳಸಿ ಹೇರಿಕೆಯ ಬಗ್ಗೆ ಹಾಗು ಮುಂದೆ ಭಾಷೆಯ ಬಳಕೆ ಹೇಗಿರಬೇಕು ಅಂತ ಮಾತನಾಡಿದರೆ ಒಳ್ಳೆಯದು.ಅದನ್ನ ಬಿಟ್ಟು ವೈಯುಕ್ತಿಕ ಟೀಕೆಗೆ ಇಳಿಯುವನ್ತಾದರೆ ಅವರಿಗೂ ನಿಮಗೂ ವ್ಯತ್ಯಾಸ ಉಳಿಯದಲ್ಲವೇ? ಹಾಗಾಗದಿರಲಿ.

                ಉತ್ತರ
                • ಮಾಯ್ಸ
                  ಮಾರ್ಚ್ 30 2011

                  ನಾನು ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ಅದಕ್ಕೆ ಇಷ್ಟೊಂದು ವಿವರಣೆ.

                  ನಾನು ನಮ್ಮ ನಾಡಿನಲ್ಲಿರುವ ಸಂಸ್ಕೃತ-ತುರುಕರ ಹಿಂಡನ್ನು ಕುರಿತು ಹೇಳುತ್ತಿದ್ದಾನೆ. ಹಾಗು ಅದಕ್ಕೆ ಉದಹಾರಣೆಯಾಗಿ ‘ಹಕಾರ ಹೊರಳದ ಹಾಸನದವರು’ ಎಂದು ಮೂದಲಿಕೆಯ ಬರಹ ಬರೆದ ನೀಲಾಂಜನ ಅವರನ್ನು ತೆಗೆದುಕೊಂಡಿದ್ದೀನಿ.

                  ಅವರ ಲೇಖನ ಕೊನೆಗೆ ದಟ್ಸ್ ಕನ್ನಡ ವೆಬ್‌ ಸೈಟ್ ವಿರೋಧದಿಂದ ಅಳಿಸಿಹಾಕಿದೆ.!

                  ಉತ್ತರ
                  • ಮಾಯ್ಸ
                    ಮಾರ್ಚ್ 30 2011

                    ನಾನು ಅಂತಹ ಮನಸ್ಥಿತಿಯವನಾಗು ಪ್ರಶ್ನೆಯೇ ಇಲ್ಲ.

                    ನನಗೆ ಸಂಸ್ಕೃತವೂ ಸಂಸ್ಕೃತತನದಲ್ಲೇ ಬೇಕು, ಕನ್ನಡವೂ ಬೇಕು, ತುಳುವೂ ಬೇಕು.. ಆದರೆ ಅವೆಲ್ಲ ಸಮಾನ ಯಾವುದೂ ಮೇಲಲ್ಲ ಕೇಳಲ್ಲ.

                    ಕನ್ನಡದ ಸ್ವರೂಪ ದಿಟವಾಗಿ ಹೇಗಿದೆಯೋ ಹಾಗೇ ಇರಲು ಬಿಡಬೇಕು. ಅದಕ್ಕೆ ಕನ್ನಡಿಗರು ಬಯಸುವ ಮಾರ್ಪಾಟುಗಳಿಗೆ ಮೂದಲಿಕೆಯಾಗಲಿ, ಅಣಕವಾಗಲಿ ಇಲ್ಲವೇ ‘ಬಟ್ಟರ ಕತ್ತರಿ’ ಮುಂತಾದ ತೇಜೋವಧೆಯಾಗಲಿ ಸಲ್ಲದು. ಈ ತೋಜೋವಧಾನಿರತರಿಗೆ ಇರುವ ಹಿಂಡಿನ ಮೇಲುಗಾರಿಕೆಯೂ ಖಂಡನೀಯ!

                    ಉತ್ತರ
                • ಮಾಯ್ಸ
                  ಮಾರ್ಚ್ 30 2011

                  ಮತ್ತೆ ಇನ್ನೊಂದು ಸಂಗತಿ…

                  ಈ ಇಡೀ ಮಾತುಕತೆಯ ಪರ ಹಾಗು ವಿರೋಧದಲ್ಲಿ ವಿರೋಧವೇ ಹೆಚ್ಚಿದೆ.

                  ಆದರೆ ಒಬ್ಬ ವ್ಯಕ್ತಿ ಮಾತ್ರ ಶಂಕರಬಟ್ಟರ ಪರವಾಗಿ ಮಾತಾಡಿ ಎಲ್ಲರನ್ನು ಶುಭಶ್ರೀ, ಭರತ್, ನಾನು ರೇಗಿಸುತ್ತಾ ಬಂದಿದ್ದಾರೆ. ಅದಕ್ಕೆ ಒಬ್ಬರು ಬಂದು ಅವರನ್ನು ‘ಶಿಟ್’ ರದ್ದಿ. ಅವರಿಗೆ ಉತ್ತರ ಕೊಡದೇ ಮುಂದೆ ಹೋಗಿ ಎಂದು ಬರೆದುದು.

                  ಇಂತಹವರ ಮನಸ್ಥಿತಿ ಹೇಗೆ ಎಂದರೆ ಎಲ್ಲವಾದಕ್ಕೆ ಒಂದು ಮರುವಾದ ಎಲ್ಲ ವಿಷಯಕ್ಕೂ ಸಂಸ್ಕೃತಿ ಉಳಿಸುವಿಕೆಯ ಕಾರಣ. ಒಟ್ಟಿನಲ್ಲಿ ಏನೇ ಆದರು ತಾನು ವಾದದಲ್ಲಿ ಗೆಲ್ಲಬೇಕು ಎಂಬ ಮೊಂಡುತನ.! ನಾನು ಹೇಳಿದ ಹಿಂಡು ಇದೇ ಮೊಂಡುತನದ್ದು. ಅದು ಇತರರಿಗೆ ಆಗುವ ತೊಂದರೆಯನ್ನು ಲೆಕ್ಕೆಸದೇ ತಮ್ಮ ಸಂಸ್ಕೃತ ಶೋಕಿಗೆ ಎಷ್ಟು ಬೇಕಾದರೂ ಲಾಬಿ ಮಾಡಲೂ ರೆಡಿ!

                  ಉತ್ತರ
                  • Narendra Kumar.S.S
                    ಮಾರ್ಚ್ 30 2011

                    > ನಾನು ಹೇಳುತ್ತಿರುವ ಗುಂಪು
                    > ಕೇಳವ ಸಂಸ್ಕೃತ
                    > ಭಾಷಾದುರಭಿಮಾನಿಗಳಲ್ಲ.
                    > ಅವರು ಅತಿ
                    > ಬಲಪಂಥೀಯ, ಜಾತಿವಾದಿ
                    > ಹಾಗು ಕಟ್ಟರ್ Nazism
                    > ಮತ್ತು racism ಮನಸ್ಥಿತಿ
                    > ಉಳ್ಳವರು
                    ಇದು ನಿಮ್ಮ ಪೂರ್ವಾಗ್ರಹಕ್ಕೆ ಹಿಡಿದ ಕನ್ನಡಿಯಂತಿದೆ ಅಷ್ಟೆ.

                    ಮುಂದೆ ನೀವು ಹೇಳುತ್ತಿರುವಿರಿ:
                    > ಈ ಇಡೀ ಮಾತುಕತೆಯ ಪರ ಹಾಗು ವಿರೋಧದಲ್ಲಿ ವಿರೋಧವೇ ಹೆಚ್ಚಿದೆ.
                    > ಆದರೆ ಒಬ್ಬ ವ್ಯಕ್ತಿ ಮಾತ್ರ ಶಂಕರಬಟ್ಟರ ಪರವಾಗಿ ಮಾತಾಡಿ ಎಲ್ಲರನ್ನು ಶುಭಶ್ರೀ, ಭರತ್, ನಾನು ರೇಗಿಸುತ್ತಾ ಬಂದಿದ್ದಾರೆ
                    ಅಂದರೆ ನಿಮ್ಮನ್ನು ಯಾರೂ ವಿರೋಧಿಸಬಾರದು, ಪ್ರಶ್ನಿಸಬಾರದು. ಹಾಗೆ ಮಾಡಿದರೆ ನಿಮಗೆ ರೇಗುತ್ತದೆ!?
                    ಇದಲ್ಲವೆ Nazism!?

                    ನಾನು ನಿಮ್ಮ ಯಾರನ್ನೂ ರೇಗಿಸಲು ಯಾವ ಮಾತನ್ನೂ ಬರೆದಿಲ್ಲ. ಪ್ರಾಮಾಣಿಕವಾದ ಚರ್ಚೆಯನ್ನೇ ನಡೆಸಿರುವೆ.
                    ಆದರೆ, ಪೂರ್ವಾಗ್ರಹ ಪೀಡಿತರೊಡನೆ, ತಮ್ಮ ಮಾತನ್ನು ಪ್ರಶ್ನಿಸುವುದನ್ನೇ ಸಹಿಸದವರೊಡನೆ, ಚರ್ಚೆ ಹೇಗೆ ತಾನೇ ಸಾಧ್ಯ?

                    > ಎಷ್ಟೇ ಆದರೂ ನಾನೂ, ನೀವು, ನಮ್ಮಂತಹವರೇ ಈ ನಾಡಿನ ಮೂಲವಾಸಿಗಳು ತಾನೆ! ನಮ್ಮ ನುಡಿ ನಮ್ಮ ಇಷ್ಟ!
                    ಇದು ನಮ್ಮ ನುಡಿಯೂ ಹೌದು. ನಿಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಪ್ರಶ್ನಿಸುವ ಹಕ್ಕು ನಮಗೆಲ್ಲರಿಗಿದೆ.
                    ನಿಮಗೆ ರೇಗಿದರೆ, ಇಷ್ಟವಾಗದಿದ್ದರೆ ಅದು ನಿಮ್ಮ ಹಣೆಬರಹ.

                    ಉತ್ತರ
          • ಮಾರ್ಚ್ 30 2011

            ನಮ್ಮ ವಿರೋಧವೆನಿದ್ದರು ಅನಗತ್ಯ ಸಂಸ್ಕೃತ ಹೇರಿಕೆಯ ವಿರುದ್ಧವಾಗಿರಬೇಕೆ ಹೊರತು ಸಂಸ್ಕೃತ ಅನ್ನುವ ಭಾಷೆಯ ಮೇಲಲ್ಲ ಅಲ್ವಾ? ನೀಲಾಂಜನರೋ ಅಥವಾ ಇನ್ನಾರೋ ಅವರ ಕನ್ನಡತನದ ಬಗ್ಗೆ ಅನುಮಾನಪಡಲು ನೀವು/ನಾನು ಎಷ್ಟರವನು? ನಿಮ್ಮ ಈ ಮಾತುಗಳನ್ನ ನಾನು ಈ ಹಿಂದೆಯೂ ಕೇಳಿದ್ದೇನೆ.ಅದಕ್ಕಾಗೆ ಇಲ್ಲಿ ಈ ರೀತಿಯ ಮಾತುಗಳು ಬೇಡ ಅಂದಿದ್ದು

            ಉತ್ತರ
            • ಮಾಯ್ಸ
              ಮಾರ್ಚ್ 30 2011

              ತಿಳಿಯಿತು.

              ಅದಕ್ಕೆ ತಮ್ಮ ಸಮಾಧಾನಕ್ಕೆಂದು ನಾನು ನನ್ನ ಮಾತಿಗೆ ವಿವರಣೆ ನೀಡುತ್ತಿದ್ದೀನಿ.

              ‘ನೀಲಾಂಜನ’ಅವರು ‘ಹಕಾರ ಹೊರಳದ ಹಾಸನದವರು’ ಎಂದು ಇಡೀ ಹಾಸನದ ಜನಾಂಗವನ್ನು ಮೂದಲಿ ಬರಹ ಬರೆದ ತಮ್ಮ ಮನಸ್ಥಿತಿಯನ್ನು ಮೇಲುಗಾರಿಕೆಯನ್ನು ಹಿಂದೆ ತೋರಿಸಿದ್ದರು. ಅವನ್ನು ವಿರೋಧಿಸಿದ ಮಂದಿ ಇಲ್ಲೂ ಇದ್ದಾರೆ. ಆ ಸತ್ಯವನ್ನು ನಾನು ಪುನಃ ಬರೆದೆನಷ್ಟೇ!

              ವ್ಯಕ್ತಿಯ ಸ್ವಾಭಾವ ಸಾಬೀತಾಗಿರುವಾಗ ಅವರ ವಾದದಲ್ಲಿರುವ ಗುಟ್ಟು ಅರಿಯೋದು ಕಷ್ಟವೇನಲ್ಲ.

              ನನ್ನ ಕಮೆಂಟಿನ ಮೊದಲ ಸಾಲೇ ನಾನು ಬರೆಯೋದು ‘ವೈಯಕ್ತಿಕ,ಜಾತಿ ವಿಷಯ’ ಎಂದು ತೋರುವುದು ಎಂದು ಬರೆದಿದ್ದೇನೆ. ಇರುವ ವಿಷಯವನ್ನ ಬೇರೆ ಬಗೆಯಲ್ಲಿ ಪ್ರಾಸ್ತಾಪಿಸಿ ಸಂಸ್ಕೃತ-ತುರುಕುವವರ ಮನಸ್ಥಿತಿಯನ್ನು ನನ್ನ ಕೈಯಲ್ಲಿ ವಿವರಿಸಲು ಬರಲಿಲ್ಲ.

              ಇಲ್ಲಿ ಅಗತ್ಯವಲ್ಲದ ಸಂಸ್ಕೃತ ಹೇರಿಕೆ ಅಷ್ಟೇ ಅಲ್ಲ. ಒಂಬತ್ತನ್ನು ಒಂಭತ್ತು ಮಾಡಿ, ಕೆಲ ಕನ್ನಡದ ಮೂಲನುಡಿಗರು ಒಂಬತ್ತ ಅಂದಾಗ ನಕ್ಕು ಅವರನ್ನು ಕೀಳುನೋಡುವುದು. ಹಾಗೇ ‘ಹಾಸನ’ವನ್ನು ‘ಆಸನ’ ಎಂದು ಹಾಸನದವರು ಹೇಳಿದರೆ, ನಾಲಗೆ ಹೊರಳ ‘ಗೌಡ’ ಎನ್ನುವುವ ಮೇಲುಗಾರಿಕೆ ಗುಂಪೊಂದಿದೆ ನಮ್ಮ ನೆಲದಲ್ಲಿ!

              ಉತ್ತರ
              • ಮಾರ್ಚ್ 30 2011

                ಹಾಸನದವ್ನೆ ಆಗಿ ನನಗೂ ಈ ‘ಅ’ ಕಾರ ‘ಹ’ ಕಾರಗಳ ಉಲಿಯುವಿಕೆ ಮತ್ತದಕ್ಕೆ ಕೆಲವರ ಕೊಂಕಿನ ಬಗ್ಗೆ ಅನುಭವವಾಗಿದೆ.ರಾಜಣ್ಣನ ಹಾಡಿದೆಯಲ್ವಾ,

                “ಯಾರೇ ಕೂಗಾಡಲಿ,ಊರೇ ಹೋರಾಡಲಿ… ” ಅಂತ ನನ್ನ ಪಾಡಿಗೆ ನಾನು ಮುಂದುವರೆಸುತ್ತಲೇ ಬಂದಿದ್ದೇನೆ.ಹಾಗೆಯೇ ಮುಂದುವರೆಸುತ್ತೇನೆ ಕೂಡ 🙂 … ಇರ್ಲಿ ಬಿಡಿ ಇದು ಮುಗಿಯೋ ಕತೆ ಅನ್ನಿಸ್ತಿಲ್ಲ

                ಉತ್ತರ
                • ಮಾಯ್ಸ
                  ಮಾರ್ಚ್ 30 2011

                  ಆದರೆ ನಾವು ಇಂತಹದಕ್ಕೆ ನಿರಂತರ ವಿರೋಧ ಮತ್ತು ಜಾಗರೂಕತೆ ವಹಿಸಬೇಕು. ಹಾಗು ಅದನ್ನು ಹರಡಬೇಕು.

                  ಎಷ್ಟೇ ಆದರೂ ನಾನೂ, ನೀವು, ನಮ್ಮಂತಹವರೇ ಈ ನಾಡಿನ ಮೂಲವಾಸಿಗಳು ತಾನೆ! ನಮ್ಮ ನುಡಿ ನಮ್ಮ ಇಷ್ಟ!

                  ಉತ್ತರ
        • ಮಾರ್ಚ್ 30 2011
      • Narendra Kumar.S.S
        ಮಾರ್ಚ್ 30 2011

        ನೀವು ಚರ್ಚಿಸುತ್ತಿರುವುದು ಕನ್ನಡದ ಸುಧಾರಣೆಯ ಕುರಿತಾಗಿ ಎಂದುಕೊಂಡಿದ್ದೆ.
        ಆದರೆ, ನಿಮ್ಮ ಉದ್ದೇಶ ಕನ್ನಡದ ಸುಧಾರಣೆಗಿಂತ ಸಂಸ್ಕೃತವನ್ನು ತೆಗಳುವುದು, ವ್ಯಕ್ತಿಗಳ ಕುರಿತಾಗಿ ಮಾತನಾಡುವುದು, ಇತ್ಯಾದಿಯಷ್ಟೇ ಆಗಿದೆ ಎನ್ನಿಸುತ್ತಿದೆ, ನಿಮ್ಮ ಮೇಲಿನ ಪ್ರತಿಕ್ರಿಯೆ ಓದಿದ ಮೇಲೆ.
        ಈ ರೀತಿಯ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ಸಂಸ್ಕೃತದಂತಹ ಭಾಷೆಗೆ ಹಾನಿ ಮಾಡುವುದರಲ್ಲಿ ನೀವು ಸಫಲರಾಗಿ ಸಮಾಧಾನ ಕಾಣಬಹುದು; ಆದರೆ, ಕನ್ನಡದ ಉದ್ಧಾರವನ್ನಂತೂ ಮಾಡುವುದಿಲ್ಲ.

        ಉತ್ತರ
      • ಮಾರ್ಚ್ 30 2011

        ನರೇಂದ್ರ ಕುಮಾರ್/ ನೀಲಾಂಜನ,

        “ಒಬ್ಬ ವ್ಯಕ್ತಿ ಭಾಷಾ ವಿಜ್ಞಾನಿ ಎನ್ನಲು ನೀವು ಬಳಸುತ್ತಿರುವ ಮಾಪನವಾವುದು ಎಂದು ತಿಳಿಯಬಹುದೇ? ಮತ್ತು ಭಾಷಾ ವಿಜ್ಞಾನಿಯಾಗದವರು ಸಲಹೆಯನ್ನೇ ನೀಡಬಾರದು ಎಂದು ನಿಮ್ಮ ಸೂಚನೆಯೇ ಅಥವಾ ಅವರ ಸಲಹೆಗಳಿಗೆ ಬೆಲೆಯಿಲ್ಲ ಎಂದೋ”

        ನುಡಿಯರಿಗರಾಗುವುದಕ್ಕೆ ಬೇಕಾದ ತಕ್ಕುಮೆಗಳು
        ೧. ನುಡಿಯರಿಮೆಯ ಇಲ್ಲವೆ ಉಲಿಕೆಯರಿಮೆಯ ಇಲ್ಲವೆ ಸೊಲ್ಲರಿಮೆಯ ಬಗ್ಗೆ ಅರಕೆ/ಸಂಶೋದನೆಗಳನ್ನು ಮಾಡಿರಬೇಕು
        ೨. ನುಡಿಯರಿಮೆಯ ಇಲ್ಲವೆ ಸೊಲ್ಲರಿಮೆಯ ಬಗ್ಗೆ ಹೊತ್ತಗೆಗಳನ್ನು ಬರೆದಿರಬೇಕು.
        ೩. ನುಡಿಯರಿಮೆಯ ಬಗ್ಗೆ ಪ್ರಪಂಚದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕೆಲಸ/ದುಡಿಮೆ ಮಾಡಿರಬೇಕು.
        ೪. ಕನ್ನಡವಲ್ಲದೆ ಬೇರೆ ಯಾವುದೇ ನುಡಿಗೆ ಸೊಲ್ಲರಿಮೆ ಬರೆದಿರಬೇಕು.
        ೫. ನುಡಿಯರಿಗರಾಗಿ ಕಮ್ಮಿ ಅಂದರೂ ೧೦ ವರುಶ ಪಳಗುವಿಕೆಯಾಗಿರಬೇಕು.

        ಶಂಕರಬಟ್ಟರು ಮೇಲೆ ಹೇಳಿರುವುದಕ್ಕಿಂತ ಹೆಚ್ಚಿನದನ್ನು ಸೊಲ್ಲರಿಮೆ ಮತ್ತು ನುಡಿಯರಿಮೆಯಲ್ಲಿ ಮಾಡಿದ್ದರೆ, ಮಾಡುತ್ತಿದ್ದಾರೆ.

        ಒಬ್ಬ ಕನ್ನಡಿಗನಾಗಿ ಮಣಿಪುರಿ ನುಡಿಗೆ ಸೊಲ್ಲರಿಮೆ ಬರೆಯುವುದು ಅಶ್ಟು ಸುಲಬವಲ್ಲ. ಅದನ್ನ ಶಂಕರಬಟ್ಟರು ಮಾಡಿದ್ದಾರೆ.

        ಸೊಲ್ಲರಿಗರಲ್ಲದೇ/ನುಡಿಯರಿಗರಲ್ಲದೆ ಸೊಲ್ಲರಿಮೆಯ/ನುಡಿಯರಿಮೆಯ ಬಗ್ಗೆ ಬೇರೆಯವರು ಮಾತಾಡಿದರೆ Cardiology ಬಗ್ಗೆ Cardiologist ಅಲ್ಲದೆ ಬೇರೆಯವರು ಮಾತಾಡಿದರೆ ಎಶ್ಟು ಬೆಲೆ ಸಿಗುವುದೊ ಅಶ್ಟೆ ಬೆಲೆ ಸಿಗುತ್ತದೆ, ಸಿಗಬೇಕು. ಅಂದರೆ ಬೇರೆಯವರು ಬರೆದ ಬರಹಕ್ಕೆ ಬೆಲೆಯಿಲ್ಲ ಅಂತ ಅರ್ತ. ಇದು ಸಾಮಾನ್ಯ ತಿಳುವಳಿಕೆ(common sense).

        Sociolinguistics, Transformational Grammar, Descriptive Grammar ಎಂಬ ಪದಗಳನ್ನೇ ಕೇಳದವರು ನುಡಿಯರಿಮೆಯ ಬಗ್ಗೆ ಬರೆಯಲು ತಕ್ಕವರಲ್ಲ.

        ಕೊ.ಕೊ: ನಾನು ಯಾವುದೊ ಇಂಜಿನಿಯರ್ ಹತ್ರ ಹೋಗಿ ನನ್ನ heart operation ಮಾಡಿಸ್ಕೊಳ್ಳಲ್ಲ. 🙂

        ಉತ್ತರ
        • ಮಾಯ್ಸ
          ಮಾರ್ಚ್ 30 2011

          ಮಾಪನ ಪದದ ತಪ್ಪು ಬಳಕೆಯಾಗಿದೆ! ಅವರ ಅನಿಸಿಕೆಯಾಗಿದೆ.

          ಮಾನದಂಡಕ್ಕೂ ಮಾಪನಕ್ಕೂ ಇರುವ ಅಂತರ ಪಾಪ ಗೊತ್ತಿಲ್ಲ, ದೊಡ್ಡ ಬುದ್ದಿಗಳಿಗೆ!

          ಮಾನ = ಎಣಿಕೆ, ಅರ್ಹತೆಯ ಮೇಲೆ ಅಳತೆ
          ಮಾಪನ = ಉದ್ದ ಅಗಲ ತೂಕ ನೋಡು! 🙂

          “ಒಬ್ಬ ವ್ಯಕ್ತಿ ಭಾಷಾ ವಿಜ್ಞಾನಿ ಎನ್ನಲು ನೀವು ಬಳಸುತ್ತಿರುವ ಮಾಪನವಾವುದು ಎಂದು ತಿಳಿಯಬಹುದೇ?”

          ಇದರ ಹುರುಳು ನೀವು ನುಡಿಯರಿಗ ಎಂದು ಹೇಳಲು ಆ ಆಳು ಎಶ್ಟು ಉದ್ದ, ಅಗಲ ಹಾಗು ತೂಕವಿರಬೇಕು ಎಂದು ಹೇಳದ ಹಾಗೇ! 🙂 .. ಪಾಪ ಏನು ಮಾಡೋದು ಸಂಸ್ಕ್ರುತದ ತೆವಲೋ, ಅಮಲೋ ಒಟ್ಟಿನಲ್ಲಿ ಮಂಪರು, ಗೊಂದಲ!

          ಉತ್ತರ
          • Narendra Kumar.S.S
            ಮಾರ್ಚ್ 31 2011

            > ಮಾನದಂಡಕ್ಕೂ ಮಾಪನಕ್ಕೂ ಇರುವ ಅಂತರ ಪಾಪ
            > ಗೊತ್ತಿಲ್ಲ, ದೊಡ್ಡ ಬುದ್ದಿಗಳಿಗೆ!
            ನನ್ನ ತಪ್ಪನ್ನು ತೋರಿಸಿ ತಿದ್ದಿದ್ದಕ್ಕೆ ಧನ್ಯವಾದಗಳು.
            ಇದೇ ರೀತಿಯ ಪ್ರೀತಿ ಮುಂದುವರೆಯಲಿ.
            ಆದರೂ ನಿಮ್ಮ ಉತ್ತರದಿಂದ, ನಿಮ್ಮ ತಲೆಯಲ್ಲಿನ್ನೂ “ದೊಡ್ಡ ಬುದ್ಧಿ”, “ಸಣ್ಣ ಬುದ್ಧಿ” ಇತ್ಯಾದಿ ಮೇಲು-ಕೀಳು, ಸ್ಪೃಷ್ಯ-ಅಸ್ಪೃಷ್ಯ ಭಾವನೆಗಳು ಆಳಕ್ಕೆ ಬೇರುಬಿಟ್ಟಿರುವುದು ಕಾಣುತ್ತಿದೆ.
            ಎಷ್ಟೇ ವಿದ್ಯಾವಂತರಾದರೂ ಈ ರೀತಿಯ ಹುಳುಗಳು ಹೊಕ್ಕಿದ್ದರೆ ದೇವರೇ ಗತಿ!

            >> “ಒಬ್ಬ ವ್ಯಕ್ತಿ ಭಾಷಾ ವಿಜ್ಞಾನಿ ಎನ್ನಲು ನೀವು ಬಳಸುತ್ತಿರುವ ಮಾಪನವಾವುದು ಎಂದು ತಿಳಿಯಬಹುದೇ?”
            > ಇದರ ಹುರುಳು ನೀವು ನುಡಿಯರಿಗ ಎಂದು ಹೇಳಲು ಆ ಆಳು ಎಶ್ಟು ಉದ್ದ, ಅಗಲ ಹಾಗು ತೂಕವಿರಬೇಕು ಎಂದು ಹೇಳದ ಹಾಗೇ
            “ಹೇಳದ” ಅನ್ನು “ಹೇಳಿದೆ” ಎಂದು ಮಾಡಿಕೊಳ್ಳಬೇಕೋ ಅಥವಾ “ನಿಘಂಟು ಪ್ರವೀಣ”ರು ಬರೆದದ್ದರ ಆಧಾರದ ಮೇಲೆ ನಿಘಂಟನ್ನೇ ತಿದ್ದಬೇಕೋ……!?
            ಇರಲಿ. ನನ್ನ ಪ್ರಶ್ನೆಯ ಹಿಂದಿರುವ “ಭಾವ”ವೇನೆಂದು ನಿಮಗೆ ತಿಳಿದಿತ್ತು ಎನ್ನುವುದು ನಿಮ್ಮ ಉತ್ತರದಿಂದಲೇ ತಿಳಿಯಿತು.
            ಹಾಗಿದ್ದಾಗ್ಯೂ ನೀವು ಪ್ರಶ್ನೆಗೆ ಉತ್ತರಿಸುವುದರ ಬದಲು, ನಿಮಗಿಷ್ಟವಾದ ಇನ್ಯಾವುದೋ ತಗಾದೆ ತೆಗೆದಿರುವಿರಿ.
            ನಿಮಗೆ ಚರ್ಚೆಯ ಕುರಿತಾಗಿ ಆಸಕ್ತಿ ಇಲ್ಲದಿದ್ದರೆ, ಇದನ್ನು ನಿಲ್ಲಿಸಿಬಿಡೋಣ.

            > ಭಾಷಾ ವಿಜ್ಞಾನದಲ್ಲಿ ಯಾವ ತೆರನಾದ ಅಧ್ಯಯನದ ಹಿನ್ನೆಲೆ ಇರದ (?)(I think Dr. R Ganesh is an Engineer) ಗಣೇಶರ
            > Dr.Ganesh holds an M.Sc degree in Material Science and Metallurgy from the well-known Indian Institute of Science in Bangalore. He also holds a Masters’ in
            > Sanskrit from the Mysore University.
            > ಇವರು ಕನ್ನಡದ ಬಗ್ಗೆ ಒಂದು ಪದವಿಯನ್ನೂ ಗಳಿಸಿಲ್ಲ
            ಅಧ್ಯಯನದ ಮಾನದಂಡವೆಂದರೆ ವಿಶ್ವವಿದ್ಯಾಲಯದ ಪದವಿ ಎಂದು ನೀವು ನಿಶ್ಚಯಿಸಿದ ಹಾಗೆ ಕಾಣುತ್ತದೆ.
            ವಿಜ್ಞಾನಿಯಾಗಬೇಕಾದರೆ ತನ್ನ ವಿಷಯದಲ್ಲಿ ಡಾಕ್ಟರೇಟ್ ಪಡೆದಿರಲೇಬೇಕು ಎಂದು ಹೇಳಿದ ಹಾಗಾಯಿತು ಇದು.
            ಇದನ್ನೇ ನಾವು ನಂಬಿ ಕುಳಿತಿದ್ದಿದ್ದರೆ, ನಮಗಿಂದು ಉರಿಯುವ ದೀಪವೇ ಸಿಗುತ್ತಿರಲಿಲ್ಲ – ಪಾಪ ಥಾಮಸ್ ಆಲ್ವಾ ಎಡಿಸನ್ ಯಾವ ಡಾಕ್ಟರೇಟ್ ಪದವಿಯನ್ನೂ ಗಳಿಸಿರಲಿಲ್ಲವಲ್ಲ!

            > ರಾ.ಗಣೇಶ ಅವರು ಮನೆ ಮಾತು ತಮಿಳು, ಓದು ಸಂಸ್ಕೃತ, ಹೀಗಿರುವಾಗ ಅವನ್ನು ಕನ್ನಡದ ಬಗ್ಗೆ ಮಾದರಿಯಾಗಿ ಹೇಗೆ ತೆಗೆದುಕೊಳ್ಳುವುದು?
            ಕನ್ನಡದ ಪ್ರಥಮ ನಿಘಂಟನ್ನು ಬರೆದವರ ಮನೆಮಾತು ಯಾವುದಿತ್ತು? ಅವರು ಕನ್ನಡದಲ್ಲಿ ಯಾವ ಪದವಿ-ಪುರಸ್ಕಾರಗಳನ್ನು ಗಳಿಸಿದ್ದರು!?
            ಅವರ ಕಾರ್ಯವನ್ನು ಕನ್ನಡಿಗರು ಸ್ವೀಕರಿಸಿ-ಪುರಸ್ಕರಿಸಿದ್ದು ಸುಳ್ಳೇ!?

            ಉತ್ತರ
      • ಮಾಯ್ಸ
        ಮಾರ್ಚ್ 30 2011

        ಹೇಗೆ?

        ತಾವು “ಹಕಾರ ಹೊರಳದ ಹಾಸನದವರು”( ೧೦೦% ಹೀಗೆ ತಲೆಬರಹ ಇರಲಿಲ್ಲ ಅನ್ನೋದು ಬಿಟ್ಟರೆ ) ಎಂದು ಹಕಾರ ಹಾಸನದವರು ಸರಿಯಾಗಿ ಉಲಿಯಲ್ಲ ಎಂದು ಒಂದು ಮೂದಲಿಸುವ ಬರಹ ಬರೆದು ಅದಕ್ಕೆ ಮಂದಿಯ ಮನಿಸು ಎದುರಿಸಿರಲಿಲ್ಲವೇ?! ಅದನ್ನು ದಟ್ಟ್‌ ಕನ್ನಡರ ತರುವಾಯ ಅಳಿಸಲಿಲ್ಲವೇ!

        ಉತ್ತರ
        • ಮಾಯ್ಸ
          ಮಾರ್ಚ್ 30 2011

          ತಪ್ಪು ತಿದ್ದು
          ‘ಮನಿಸು’ ಅಲ್ಲ ಮುನಿಸು

          ಉತ್ತರ
      • ನಿಮ್ಮ ಹಿಂದಿನ ಕಾಮೆಂಟಿಗೂ ಇದಕ್ಕೂ ಸೇರಿ ಈ ಪ್ರತಿಕ್ರಿಯೆ. ಬಿಜಿಎಲ್ ಸ್ವಾಮಿಯವರ “ತಮಿಳು ತಲೆಗಳ ನಡುವೆ” ತಾವು ಓದಿರಬೇಕು. ಅದರಲ್ಲಿ ತಮಿಳರ ಈ ರೀತಿಯ ವಾದಗಳಬಗ್ಗೆ ಸಾಕಷ್ಟು ಬರೆದಿದ್ದಾರೆ “ನೀವು ತಮಿಳರಲ್ಲ, ತಮಿಳಿನ ಪ್ರೊಫೆಸರರೂ ಅಲ್ಲ, ನಿಮ್ಮ ವಿಷಯ ಸಸ್ಯಶಾಸ್ತ್ರ, ಸುಮ್ಮನೆ ಅದರ ಬಗ್ಗೆ ಮಾತಾಡಿ” ಆಗೆಲ್ಲ ಅಂಥ ವಾದಗಳು ನಗೆಪಾಟಲೆನ್ನಿಸುತ್ತಿದ್ದುವು. ಈಗ ನಿಮ್ಮ ಅದೇ ರೀತಿಯ ವಾದಗಳನ್ನು ನೋಡಿ ಅದು ಸರಿಯೇ ಇರಬೇಕೆನ್ನಿಸುತ್ತದೆ. ಆ ಲೆಕ್ಕದಲ್ಲಿ ಸ್ವತಃ ಬಹುಶ್ರುತ ವಿದ್ವಾಂಸರಾದ ಸ್ವಾಮಿಯವರಿಗೆ ತಮಿಳಿರಲಿ ಕನ್ನಡದ ಬಗ್ಗೆ ಮಾತಾಡಲೂ ಯೋಗ್ಯತೆಯಿಲ್ಲವೆನ್ನಬೇಕಾಗುತ್ತದೆ, how sad!

        ಈಗ ನಾನು ಹೇಳುವುದು ಲಜ್ಜೆಗೆಟ್ಟ ಜಾತಿವಾದವೆನ್ನಿಸಬಹುದು, ಆದರೆ ಅದು ನನ್ನ ಇಷ್ಟದ್ದಲ್ಲ; ಕೇವಲ ನಿಮ್ಮ ತರ್ಕಕ್ಕೆ ಪ್ರತಿಕ್ರಿಯೆಯಷ್ಟೇ, ಕ್ಷಮೆಯಿರಲಿ.

        ಕನ್ನಡಕ್ಕೊಬ್ಬನೇ ಕೈಲಾಸಂ “ಶುದ್ಧ” ಆಡುಮಾತಿನಲ್ಲಿ ಬರೆದರು – ಮಾತಿಗೂ ಬರಹಕ್ಕೂ ವ್ಯತ್ಯಾಸವಿರದಂತೆ. ಅದೂ ಇವತ್ತಿನ ಕನ್ನಡಸುಧಾರಣೆಯ ಕೂಗಿನ ಒಂದು ಭಾಗ ತಾನೆ? ಆದರೆ ಕೈಲಾಸಂ ತಮಿಳಿನವರು, ಮೇಲಾಗಿ (ಕ್ಷಮಿಸಿ, ಮೇಲಾಗಿ ಅಲ್ಲ) ಬ್ರಾಹ್ಮಣರು. ಅಂಥಾ ತಮಿಳು ಬ್ರಾಹ್ಮಣನೊಬ್ಬನ ಮಾತನ್ನು ನಾವು ಒಪ್ಪಬೇಕೇ? (ಇಷ್ಟಕ್ಕೂ ಅವರು ಓದಿದ್ದು ಭೂಗರ್ಭಶಾಸ್ತ್ರ, ಕನ್ನಡದ ಬಗ್ಗೆ ಮಾತಾಡುವ ಯಾವುದೇ “ಯೋಗ್ಯತೆ” ಅವರಿಗಿರಲಿಲ್ಲ).

        ಕುವೆಂಪು ಹುಟ್ಟಿನಿಂದ ನಾಮಧಾರಿ ಒಕ್ಕಲಿಗ ಜನಾಂಗಕ್ಕೆ ಸೇರಿದವರು. ಆದ್ದರಿಂದ ಅವರ ಭಾಷಾಶೈಲಿ ಒಪ್ಪಿತವಾಗಬಹುದೇನೋ, ಆದರೆ ಅದರಲ್ಲಿ ಕನ್ನಡಕ್ಕಿಂತ ಸಂಸ್ಕೃತದ ಹಾವಳಿಯೇ ಹೆಚ್ಚು – ಒಪ್ಪಬಹುದೇ? ಅಲ್ಲದೇ ಅವರು ಓದಿದ್ದು ಮನಃಶಾಸ್ತ್ರ ಮತ್ತು ತತ್ತ್ವಶಾಸ್ತ್ರ.

        ಬೇಂದ್ರೆ ಅಚ್ಚಧಾರವಾಡದ ನೆಲದ ಭಾಷೆಯಲ್ಲಿ ಬರೆದರು. ಮಾತಿಗೂ ಬರಹಕ್ಕೂ ವ್ಯತ್ಯಾಸವಿಲ್ಲ. ಆದರೆ ಹುಟ್ಟಿನಿಂದ ಬ್ರಾಹ್ಮಣ – ಅವರ ಶೈಲಿ ಒಪ್ಪಿಗೆಯೇ?

        ಇನ್ನು ರನ್ನ-ಪಂಪ-ಕುಮಾರವ್ಯಾಸರ ಜಾತಿ ಯಾವುದು, ಭಾಷಾ ಹಿನ್ನೆಲೆಯೇನು? ಅವರ ಬರಹಗಳಂತೂ ಸಂಸ್ಕೃತ ಪದಗಳ ಗೂಡು. ನಮ್ಮ ಸುಧಾರಿತ ಬರಹ ಪದ್ಧತಿ ಬಂದನಂತರ ಅವರನ್ನೆಲ್ಲಾ ಮೂಟೆಕಟ್ಟಿ ಮೂಲೆಗೆ ಎಸೆಯಬೇಕಾದ್ದೇ!

        ಹೋಗಲಿ ಬಿಡಿ, ಇವರೆಲ್ಲಾ ಕವಿಗಳು-ಸಾಹಿತಿಗಳು, ಯಾರೂ ನುಡಿಯರಿಗರಲ್ಲ – ಅವರ ತಂಟೆಯೇ ಬೇಡ. ನಮ್ಮ ಕೇಶಿರಾಜ, ಕವಿರಾಜಮಾರ್ಗಕಾರ (ಇವನ ಹೆಸರೇ ನಮಗಿನ್ನೂ ಸರಿಯಾಗಿ ತಿಳಿಯದು), ಇವರೆಲ್ಲ ಯಾವ ಯೂನಿವರ್ಸಿಟಿಯಲ್ಲಿ ಕಲಿತರು; ಎಷ್ಟು ಸಂಶೋಧನಾಗ್ರಂಥಗಳನ್ನು ಮಂಡಿಸಿದರು, ಅದೆಷ್ಟು ವಿದೇಶೀ ವಿಶ್ವವಿದ್ಯಾಲಯಗಳಲ್ಲಿ guest lecturers ಆಗಿದ್ದರು? ಓಹ್ ಕ್ಷಮಿಸಿ. Going by that, ಶಂಕರಬಟ್ಟರನ್ನು ಬಿಟ್ಟರೆ ಕನ್ನಡದ ಬಗ್ಗೆ ಮಾತಾಡಲು ಬೇರಾರಿಗೂ ಯೋಗ್ಯತೆಯೇ ಇಲ್ಲ! ಆದರೆ ಜನಸಾಮಾನ್ಯರ ಮಾತಿನ ಹಕ್ಕುಗಳಬಗ್ಗೆ ಮಾತಾಡುವ ನೀವು ಕೇವಲ ಅಭಿಪ್ರಾಯ ವ್ಯಕ್ತಪಡಿಸಲೂ ಇಷ್ಟೊಂದು qualifications ಕೇಳಿದರೆ ಹೇಗೆ ಸ್ವಾಮೀ? ನೀವು ಪ್ರತಿನಿಧಿಸಬಯಸುವ ಅಸಂಖ್ಯ ಅನಕ್ಷರಸ್ಥ ಹಳ್ಳಿಗರು (ಅಳ್ಳಿಗರು); ನಾಲ್ಕನೆಯ ತರಗತಿಯನ್ನೂ ದಾಟದ ಅಮಾಯಕ ಜನ ಅವರಿಗೆ ಬೇಕಾದ ಕನ್ನಡದ ಬಗ್ಗೆ ಮಾತಾಡಲು ಶಂಕರಬಟ್ಟರ ಸಮಕ್ಕೆ ಬರಬೇಕೇ? ಅಥವಾ ಅವರೇ ಮಾತಾಡಬಹುದಾದರೆ ಗಣೇಶರೇಕೆ ಮಾತಾಡಬಾರದು, ನಾವೇಕೆ ಮಾತಾಡಬಾರದು. ಅಥವ ಕನ್ನಡದ ಬಗ್ಗೆ ಮಾತಾಡಬೇಕಾದರೆ ಒಂದೋ ಶಂಕರಬಟ್ಟರಷ್ಟು “ವಿದ್ಯಾರ್ಹತೆ” ಸಂಪಾದಿಸಿರಬೇಕು ಅಥವ ನಾಲ್ಕನೆಯ ತರಗತಿಯನ್ನು ದಾಟಿರಬಾರದು – ಹಾಗೋ? ಅರ್ಥವೇ ಆಗುತ್ತಿಲ್ಲ.

        ಉತ್ತರ
      • ಕ್ಷಮಿಸಿ, ಹಿಂದಿನ ಕಾಮೆಂಟು ಮುಗಿಸುವಷ್ಟರಲ್ಲಿ ಕರೆಂಟು ಹೋಯಿತು.

        ನನಗೇನೋ ಇದರಲ್ಲಿ ಭಾಷಾಸುಧಾರಣೆಯ ಕಳಕಳಿಗಿಂತ ಜಾತಿರಾಜಕೀಯದ ವಾಸನೆಯೇ ರಾಚುತ್ತಿದೆ. ಒಂದು ಜಾತಿ ಇನ್ನೊಂದು ಜಾತಿಯನ್ನು ಹಣಿಯಬೇಕು. ಸಂಸ್ಕೃತಿಯ ಕೆಲವು ಅಂಶಗಳನ್ನು (ಅದೆಷ್ಟೇ ಉತ್ಕೃಷ್ಟವಾಗಿದ್ದರೂ) ಅದನ್ನು ಒಂದು ಜಾತಿಗೆ ಜಂಟಿಸಬೇಕು, ಮತ್ತು ಆ ಜಾತಿಯನ್ನು ಹಣಿಯುವಾಗ ಸಂಸ್ಕೃತಿಯ ಆ ಅಂಶಗಳೆಲ್ಲವೂ ನಿರ್ನಾಮವಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಬರಹ “ಸುಲಭ” ಮಾಡುವ ನೆಪದಲ್ಲಿ ಅವರನ್ನು ಈ ನೆಲದ ಉತ್ಕೃಷ್ಟ ಸಾಹಿತ್ಯ ಸಂಪತ್ತಿನಿಂದ ಸಂಪೂರ್ಣ ವಂಚಿಸಿಬಿಡಬೇಕು. ಐವತ್ತು ಕನ್ನಡ ಅಕ್ಷರಗಳನ್ನು ಕಲಿತೇ ಆ ಸಾಹಿತ್ಯವನ್ನು ಓದುವರ ಸಂಖ್ಯೆ ನಮಗೆ ಗೊತ್ತೇ ಇದೆ, ಇನ್ನು ಆ ಸಾಹಿತ್ಯವನ್ನು ಕಲಿಯುವುದಕ್ಕೋಸ್ಕರವೇ ಹೆಚ್ಚುವರಿ ಅಕ್ಷರಗಳನ್ನು ಯಾರಾದರೂ ಕಲಿಯುತ್ತಾರಾ? ಇದೊಂದು ದೊಡ್ಡ ಹುನ್ನಾರ

        ಉತ್ತರ
        • ಮಾಯ್ಸ
          ಮಾರ್ಚ್ 31 2011

          ನೀವು ಹೇಳಿರುವ ಅಶ್ಟೂ ಮಂದಿ ನುಡಿಯರಿಗರಲ್ಲ, ಹಾಗೂ ಅವರು ಶಂಕರಬಟ್ಟರಿಗೆ ಹೋಲಿಸತಕ್ಕವರಲ್ಲ.

          ಕನ್ನಡದ ಹೆಚ್ಚಿನ ‘ಸಾಹಿತ್ಯ’ಎಂದಿ ನಮ್ಮ ನಾಡಿಗೆ, ‘ಸಾಹಿತ್ಯ ಸಮ್ಮೇಳನ’ಗಳಿಂದ ಆದಶ್ಟೇ ಬಾಳಿಕೆಯಾಗಿದೆ.

          ನಿಮ್ಮ ಮಿಕ್ಕವಾದಗಳೂ ನಕ್ಕು ಬಿಡತಕ್ಕದ್ದು..

          ಇಂತಿ.. ಇಶ್ಟೆ!

          ನೀವು ನರೇಂದ್ರ ಅವರ ಹಾಗೆ ದಂಬಗಾಲು ಬಿದ್ದ ನನ್ನ ಬೆನ್ನ ಹತ್ತಿದ ಬೇತಾಳದ ಹಾಗೆ ಎಶ್ಟು ಕಮೆಂಟು ಕಡೆದರೂ ನನ್ನ ಅದರು ಮರುಬರೆಯುವುದಿಲ್ಲ.

          ಎಲ್ಲದಕ್ಕೂ ‘ಜಾತಿ ರಾಜಕೀಯ’, ‘ಸಂಸ್ಕೃತಿ’ ಎಂದು ಅದೇ ಪೇರಿಸುತ್ತಿರುವವರು ಇಲ್ಲಿ ತಾವು!

          ಉತ್ತರ
          • ಶಂಕರಬಟ್ಟರಿಗೆ ಹೋಲಿಕೆಯೇ ಇಲ್ಲ ಬಿಡಿ.

            ಸರಿ ನಕ್ಕುಬಿಡಿ, “ನಗುವು ಸಹಜದ ಧರ್ಮ”

            ಅಯ್ಯೋ ಇಲ್ಲ ಸ್ವಾಮಿ, ನಿಮ್ಮ ಬೆನ್ನು ಹತ್ತಿ ನಿಮ್ಮಿಂದ ನುಡಿಮುತ್ತು ಉದುರಿಸುವ ಇರಾದೆಯೇನೂ ನನಗಿಲ್ಲ. ಬೇತಾಳನ ಬೆನ್ನು ಹತ್ತಿದವರುಂಟೇ? ಸುಮ್ಮನೇ confusionಉ

            ಜಾತಿರಾಜಕೀಯ ತಂದವರು ಯಾರು ಎಂದು ಸುಮ್ಮನೇ ಕಾಮೆಂಟುಗಳನ್ನು ನೋಡಿದವರಿಗೆ ತಿಳಿಯುತ್ತದೆ ಬಿಡಿ.

            ಉತ್ತರ
        • ವಿಜಯ
          ಮಾರ್ಚ್ 31 2011

          ಮಂಜುನಾಥರೊಂದಿಗೆ ನನ್ನ ಸಹಮತವಿದೆ.

          ಸ್ವತಹ ಶಂಕರ ಭಟ್ಟರಿಗೆ ತಮ್ಮ ಡಿಗ್ರಿಗಳ ಮೇಲೆ, ಕಲಿಕೆಯ ಮೇಲೆ ಈ ರೀತಿಯ ವ್ಯಾಮೋಹ, ‘ಮೇಲ್ಮೆ’, ತನಗೆಲ್ಲಾ ಗೊತ್ತುಂಟು ಎಂಬ ಭ್ರಮೆ ಇರಲಿಕ್ಕಿಲ್ಲ!. ಅವರು ಹೊರಟಿದ್ದು ಜನಸಾಮಾನ್ಯರಿಗೆ ಭಾಷೆ ಸುಲಭ ಮಾಡೋಣ ಎಂದು. ಆದರಿಲ್ಲಿ ಡಿಗ್ರಿಗಳನ್ನು ಹೊತ್ತುಕೊಂಡೆ ಚರ್ಚೆಗೆ ಬನ್ನಿ ಎನ್ನುವ ಅನುಯಾಯಿಗಳನ್ನು ಕಾಣುತ್ತಿದ್ದೇವೆ. ನಮ್ಮ ಬಳಕೆಗೆ ನೀವು ಭಾಷೆ ಮಾರ್ಪಾಡು ಮಾಡುತ್ತಿದ್ದಿರಾದರೆ, ಬಳಕೆಯಲ್ಲಿ ಆಗುವ ತೊಂದರೆ ತಿಳಿಸಬೇಕಾದವರು ಯಾರು? ಸಾಮಾನ್ಯರೊ ಅಥವಾ ಡಿಗ್ರಿಗಳ ಪಂಡಿತರೊ?
          ಹೊಸ ಕಾರು ಕೊಂಡವ ಗೇರು ಬಿಳುವಲ್ಲಿ ಆಗುತ್ತಿರುವ ತೊಂದರೆ ಹೇಳಿಕೊಂಡರೆ, ಕಾರು ಮಾರುವವನು ‘ ಏನಯ್ಯಾ..ನೀನು ಆಟೋಮಾಬಾಯಿಲ್ ಎಂಜಿನೀಯರಿಂಗ್ ಓದಿದ್ದಿಯಾ?’ ಎಂದು ಕೇಳಿದ ಹಾಗಾಯಿತು!

          ಉತ್ತರ
  15. Shubhashree
    ಮಾರ್ಚ್ 28 2011

    ಭಾಷಾ ವಿಜ್ಞಾನವೆನ್ನುವುದು ಭಾಷೆಯ ಸ್ವರೂಪ, ಅಕ್ಷರಗಳು, ಉಲಿಗಳು, ವ್ಯಾಕರಣಗಳು… ಇದರಲ್ಲಿ ಹೊಕ್ಕಿರುವ ಇತರೆ ಭಾಷಾ ಪದಗಳು, ನೆರೆಯ influenceಗಳು ಇವೆಲ್ಲದರ ಅಧ್ಯಯನವಷ್ಟೇ ಆಗಿರದೆ ಆ ನುಡಿಯಾಡುವ ಸಮಾಜದ ಅಧ್ಯಯನವೂ ಆಗಿರುತ್ತದೆ. ಇಂದು ಕನ್ನಡ ನುಡಿಯ ಬಳಕೆಯ ವ್ಯಾಪ್ತಿ ಎಷ್ಟು ಹಿಗ್ಗಿದೆಯೋ ಅಷ್ಟು ಹಿಂದೆಂದೂ ಇರಲಿಲ್ಲ ಎನ್ನುವುದು, ಈ ಹಿಗ್ಗುವಿಕೆಯಿಂದಾಗಿಯೇ ಕನ್ನಡಿಗರಿಗೆ ತಾವು ಬಳಸುವ ನುಡಿಯ ಬರವಣಿಗೆಯ ಅಗತ್ಯವೂ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ ತಾನೆ? ಹಾಗಾದರೆ ಒಬ್ಬನು ನುಡಿಯುವ ನುಡಿಯನ್ನು, ಅವನು ಉಲಿದಂತೆ ಬರೆಯಬೇಕೆನ್ನುವುದು ಸರಿಯಾದ್ದೋ, ನಿನ್ನ ಉಲಿಯುವಿಕೆಯೇ ತಪ್ಪು… ಅದನ್ನೇ ಬದಲಿಸಿಕೋ ಎನ್ನುವುದು ಸರಿಯಾದ್ದೋ? ಇಂತಹ ಸಾಮಾಜಿಕ ಚಿಂತನೆ ಶ್ರೀ ಅಜಕ್ಕಳರ ಬರಹದಲ್ಲಿ ಇಲ್ಲ…ಅಲ್ಲವೆ?

    ಉತ್ತರ
  16. Shubhashree
    ಮಾರ್ಚ್ 28 2011

    ಕನ್ನಡಿಗರು ಉಲಿಯುತ್ತಿರುವ ರೀತಿಯನ್ನೇ ಬದಲಾಯಿಸುತ್ತೇನೆ ಅನ್ನುವ ವಾದವೇ anti democratic ಅಲ್ಲವೇ? ಹೌದು, ನೂರು ಥರದ ಕನ್ನಡದ ಉಚ್ಚರಣೆಗಳಿವೆ, ಈ ವೈವಿಧ್ಯತೆ ಶಾಪವೇನೂ ಅಲ್ಲ. ಒಂದು ಪದದ ಉಚ್ಚರಣೆ ಹೀಗಿದ್ದರೆ ಮಾತ್ರಾ ಸರಿ ಎನ್ನುವ ನಿಲುವೇ ದಬ್ಬಾಳಿಕೆ ಮನಸ್ಥಿತಿಯದ್ದು. ವ್ಯಕ್ತಿಯ ಸುತ್ತಲಿನ ಸಮಾಜದಲ್ಲಿ ಹೇಗೆ ಉಲಿಯುವಿಕೆ ಇರುತ್ತದೋ ಹಾಗೇ ಉಲಿಯುವುದು (ಬೇರೆ ದೈಹಿಕ ನ್ಯೂನತೆಗಳಿಲ್ಲದಿದ್ದಾಗ) ಸಹಜವೂ ಸರಿಯೂ ಆಗಿದೆ. ಇದು ಭಾಷಾ ವಿಜ್ಞಾನದ ಮೊದಲ ಪಾಠ. ಗಮನಿಸಿ… ಇಂಗ್ಲೇಂಡಿನವರು ಉಚ್ಚರಿಸುವ ಇಂಗ್ಲೀಷ್, ಭಾರತೀಯರಿಗಿಂತ ಬೇರೆ. ಅಮೇರಿಕನ್ನರದ್ದು ಬೇರೆ… ಇಂತಹ ಭಿನ್ನ ಶೈಲಿಗಳನ್ನು ಇಂಡಿಯನ್ ಅಕ್ಸೆಂಟ್, ಅಮೇರಿಕನ್ ಅಕ್ಸೆಂಟ್ ಅಂತಾ ಗುರುತಿಸುತ್ತಾರೇ ಹೊರತು ಇದು ತಪ್ಪು, ಇದು ಸರಿ ಅಂತಲ್ಲಾ. ಹಾಗೇ ಕನ್ನಡವೂ…

    ಉತ್ತರ
  17. Shubhashree
    ಮಾರ್ಚ್ 28 2011

    ಇವತ್ತಿನ ದಿವಸ ಕರ್ನಾಟಕದಲ್ಲಿ ಭಾಷಾ ವಿಜ್ಞಾನಿಗಳಲ್ಲಿ ದೊಡ್ಡ ಹೆಸರು ಡಾ. ಕೆ ವಿ ನಾರಾಯಣ ಅವರದ್ದು. ಹಂಪಿ ವಿಶ್ವವಿದ್ಯಾಲಯದ ಹತ್ತಾರು ಅಧ್ಯಾಪಕರುಗಳು, ಮುಖ್ಯಸ್ಥರುಗಳು, ದ್ರಾವಿಡ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಅನೇಕ ಮುಖಂಡರುಗಳು ಇಂದು ಡಾ. ಡಿ ಎನ್ ಎಸ್ ಅವರ ನಿಲುವುಗಳನ್ನು ಸಮರ್ಥಿಸುತ್ತಿದ್ದಾರೆ ಎಂಬುದನ್ನು ಮರೆಮಾಚುವುದು ಬೇಕಿಲ್ಲ. ಇದುವರೆಗೂ ಕನ್ನಡದ ವೈಜ್ಞಾನಿಕ ಅಧ್ಯಯನ ಆಗಿರುವ ದಿಕ್ಕು ಸರಿಯಿಲ್ಲ ಎಂದು ಶಂಕರಭಟ್ಟರು ತಮ್ಮ ಅಧ್ಯಯನದಲ್ಲಿ ತೋರಿಸಿಕೊಟ್ಟಿದ್ದಾರೆ. ಅವುಗಳ ಬಗ್ಗೆ ಚರ್ಚೆಯಾಗಬೇಕೇ ಹೊರತು ವೈಯುಕ್ತಿಕ ನಿಂದನೆಗಳಲ್ಲ. ಇಂತಹ ಚರ್ಚೆಗೆ ಪೂರ್ವಾಗ್ರಹ ಪೀಡಿತರಾದ ಡಾ. ಗಿರೀಶ್ ಅಜಕ್ಕಳ ಅವರು ಅರ್ಹರೇ ಎನ್ನುವುದೇ ದೊಡ್ಡ ಪ್ರಶ್ನೆ…

    ಉತ್ತರ
  18. Shubhashree
    ಮಾರ್ಚ್ 28 2011

    ಕಲಿಕೆಯ ತೊಡಕುಗಳು ಎನ್ನುವುದನ್ನು ಸ್ವಲ್ಪ ನೋಡೋಣ. “ಹೆಚ್ಚಿನವರು ಶಾಲೆಯಲ್ಲಿ ಕಲಿಯುವಾಗ ಬಳಸುವುದು ಹೀಗೆ… ದೊಡ್ಡು ಪ, ಚಿಕ್ಕು ಪ, ಪಟ್ಟೆ ಶ, ಶಂಕು ಶ, ದೊಡ್ಡು ಬ, ಚಿಕ್ಕು ಬ…. ಹೌದೋ ಅಲ್ಲವೋ? ಇಂತಹ ಗೊಂದಲವಿಲ್ಲದೆ ಒಂದೇ ಪ, ಒಂದೇ ಬ, ಒಂದೇ ಶ ಎಂದು ಕಲಿಸಿಕೊಡೋಣ” ಎನ್ನುವುದನ್ನು… ಹೀಗೆ ಒಮ್ಮೆ ಕಲಿತವರಿಗೆ ಮುಂದೆ ಬ ಮತ್ತು ಭ ನಡುವಿನ ವ್ಯತ್ಯಾಸ ಕಲಿಯುವುದು ಸುಲಭವಾಗುತ್ತದೆ ಎನ್ನುವಾಗ ನೀಡಿದ ಉದಾಹರಣೆಗಳನ್ನು ಮಾತ್ರಾ ಉದ್ಧರಿಸಿ ಮಾತಿನಲ್ಲೇ ವೈರುಧ್ಯವಿದೆ ಎನ್ನುವುದು ಗಿರೀಶರ ಕೃತ್ರಿಮತೆ ಮತ್ತೆ ದುರುದ್ದೇಶಕ್ಕೆ ಸಾಕ್ಷಿಯಾಗಿಲ್ಲವೇ?

    ಉತ್ತರ
  19. Shubhashree
    ಮಾರ್ಚ್ 28 2011

    ಉಚ್ಚರಣೆಯಲ್ಲಿನ ಭಿನ್ನತೆಗಳನ್ನು ಸರಿ, ತಪ್ಪು ಎಂದು ಹೇಳಿ ಹೇಳಿ ನಾವು ಸಾಧಿಸಿರುವುದೇನೆಂದರೆ… ಕನ್ನಡಿಗ ಮಕ್ಕಳಲ್ಲಿ ಕೀಳರಿಮೆ ತುಂಬಿರುವುದು ಮಾತ್ರವೇ…. ರಾಜ್ಯೋತ್ಸವ ಎಂಬ ಕನ್ನಡದ್ದಲ್ಲದ ಪದವನ್ನು ಉಚ್ಚರಿಸಲಾಗದೇ ಅಪಮಾನಕ್ಕೊಳಗಾಗುವ ಜನಕ್ಕೆ ಈ ನೋವು ತಿಳಿದಿದೆ. ಒಮ್ಮೆ ವರ ಜಾಗದಲ್ಲಿ ನಿಂತು ಯೋಚಿಸಬೇಕು ಅಷ್ಟೆ. ಅದಕ್ಕೆ ಬದಲಾಗಿ ಕನ್ನಡದ್ದೇ ಆದ ಪದ ನಾಡಹಬ್ಬ ಬಳಸೋದು ಒಳಿತು ಎನ್ನುವುದು ಹೇಗೆ ನಾಡಿಗರನ್ನು ಹಿಂದಿಕ್ಕುತ್ತದೆ ಹೇಳಿ. ಹೀಗೆ ಹೇಳುವ ಮನಸ್ಸುಗಳಲ್ಲಿ ಕನ್ನಡ ಬಳಕೆ ಕೀಳು ಎನ್ನುವ ಚಿಂತನೆಯಿದ್ದಂತೆ ಅನಿಸುವುದಿಲ್ಲವೇ? ಇಂತಹ ಮನಸ್ಸೇ ಡಾ. ಗಿರೀಶ್ ಅವರದ್ದು ಅನಿಸುವುದಿಲ್ಲವೇ?

    ಉತ್ತರ
  20. ಮಾಯ್ಸ
    ಮಾರ್ಚ್ 28 2011

    Shubhashree ಅವರ ಕಮೆಂಟುಗಳನ್ನೆಲ್ಲ ಒಂದು ಬರಹವಾಗಿ ಹೊರತನ್ನಿ.. ಚೆನ್ನಾಗಿವೆ ಹಾಗು ಈ ಬರಹಕ್ಕೆ ತಕ್ಕ ಮರುಮಾತು!

    ಉತ್ತರ
  21. Chetan
    ಮಾರ್ಚ್ 28 2011

    ಈ ಬರಹ ಓದಿದ ಮೇಲೆ ಅನ್ನಿಸಿದ್ದು, ಶಂಕರ ಭಟ್ಟರ ವಾದಗಳನ್ನು ತಪ್ಪು ಎಂದು ಹೇಳುವ ಭರದಲ್ಲಿ ಲೇಖಕರು ಶಂಕರ ಭಟ್ಟರ ಒಂದು ವಾದ (ಕೆಳವರ್ಗದವರಿಗೆ ಶಿಕ್ಷಣ ಸರಿಯಾಗಿ ಸಿಗಬೇಕು ಅನ್ನುವ ವಾದ)ದ ಬಗ್ಗೆ ಧೀರ್ಘವಾಗಿ ಚರ್ಚಿಸಿದ್ದಾರೆ, ಆದರೆ ಭಟ್ಟರು ಹೇಳಿರುವ ವಾದ ತಪ್ಪು ಎಂದು ತೋರಿಸುವುದರಲ್ಲಿ ಸಫಲರಾಗಿಲ್ಲ . ಆದರೆ ಭಟ್ಟರ ಇತರೆ ವಿಷಯಗಳು ಉದಾ: ಹೊಸ ಪದಗಳನ್ನು ಹುಟ್ಟು ಹಾಕುವುದು ಹೇಗೆ, ಕನ್ನಡಕ್ಕೆ ಬೇಕಾಗಿರುವ ಸರಿಯಾದ ವ್ಯಾಕರಣ, ಆಡು ನುಡಿ ಹಾಗು ಬರಹದ ನುಡಿಯಲ್ಲಿ ಇರಬೇಕಾಗಿರುವ ಸಾಮ್ಯತೆಯ ಅಂಶಗಳು ಇದರ ಬಗ್ಗೆ ಪ್ರಸ್ತಾಪವಾಗಿಲ್ಲ. ಶಂಕರ ಭಟ್ಟರ ಹೊಸ ಕನ್ನಡವನ್ನ ಇತರೆ ಅನೇಕ ಹಿರಿಯ ನುಡಿಯರಿಗರು ಬೆಂಬಲಿಸಿದ್ದಾರೆ ಅನ್ನೋದನ್ನ ಲೇಖಕರ ಗಮನಕ್ಕೆ ತರಲು ಇಚ್ಚಿಸುತ್ತೇನೆ.

    ಉತ್ತರ
  22. vasant
    ಮಾರ್ಚ್ 28 2011

    ಶುಭಶ್ರೀ ಅವರೇ,
    ನೀವು ಎತ್ತಿರುವ ಪ್ರಶ್ನೆಗಳಿಗೆ ಗಿರೀಶ್ ಅವರ ಉತ್ತರಕ್ಕೆ ಕಾಯುತ್ತಿರುವೆ.

    ನಿಲುಮೆ ಗೆಳೆಯರೆ,
    ಶುಭಶ್ರೀ ಅವರ ಉತ್ತರವನ್ನೇ ಒಂದು ಅಂಕಣವಾಗಿ ನಿಲುಮೆಯಲ್ಲಿ ಯಾಕೆ ಪ್ರಕಟಿಸಬಾರದು ಅನ್ನಿಸುತ್ತೆ. ಅವರ ನಿಲುವಿನ ಬಗ್ಗೆಯೂ ಚರ್ಚೆಯಾಗಲಿ. ಇಂತಹ ಎಲ್ಲ ಚರ್ಚೆಗೆ ನಿಲುಮೆಯೇ ವೇದಿಕೆ ಕಲ್ಪಿಸಲಿ.

    ಚರ್ಚೆ ವೈಯಕ್ತಿಕ ಟೀಕೆಗಳಿಗಿಳಿಯದೇ ಆರೋಗ್ಯಕರವಾಗಿ ನಡೆಯುತ್ತಿರುವುದು ಕಂಡು ಸಂತಸವಾಯ್ತು

    ಉತ್ತರ
  23. ajakkalagirisha
    ಮಾರ್ಚ್ 28 2011

    ಎಲ್ಲ ಸಹೃದಯಿ ಓದುಗರೆ,
    ನಮಸ್ಕಾರಗಳು. ಈ ನನ್ನ ಚಿಕ್ಕ ಲೇಖನಕ್ಕೆ ಪ್ರತಿಕ್ರಿಯೆ ನೀಡಿ ಒಪ್ಪಿದವರಿಗೆ ಧನ್ಯವಾದಗಳು.ಗಂಭೀರವಾಗಿ ಆಕ್ಷೇಪಿಸಿದವರಿಗೂ ಕೃತಜ್ಞತೆಗಳು. ಹೀಗಳೆದವರಿಗೂ ಹೀಯಾಳಿಸಿದವರಿಗೂ ಇನ್ನಷ್ಟು ಧನ್ಯವಾದಗಳು. ಇದನ್ನು ವ್ಯಂಗ್ಯವಾಗಿ ಹೇಳುತ್ತಿಲ್ಲ, ನನ್ನ ನಿಲುವನ್ನು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಲು ಇದರಿಂದ ಸಹಾಯವಾಗುತ್ತದೆ ಅಂತ ಅಷ್ಟೆ.
    ಮೊದಲನೆಯದಾಗಿ, ಇದು ನನ್ನ ಒಂದು ಕಿರುಹೊತ್ತಗೆಯಿಂದ ಆಯ್ದ ಒಂದು ಸಣ್ಣ ಭಾಗ. ನನ್ನ ಪುಸ್ತಕದಲ್ಲಿರುವ ಅಭಿಪ್ರಾಯಗಳೆಲ್ಲ ಇದರಲ್ಲಿ ಬರಲು ಸಾಧ್ಯವಿಲ್ಲ.ಆದ್ದರಿಂದ ನಾನು ಪೂರ್ವಾಗ್ರಹಗಳಿಂದ ಬರೆದಿದ್ದೇನೆ ಅಥವಾ ಶಂಕರ ಭಟ್ಟರನ್ನು ತೇಜೋವಧೆ ಮಾಡಲು ಬರೆದಿದ್ದೇನೆ ಅನ್ನುವವರು ದಯವಿಟ್ಟು ಪುಸ್ತಕ ಓದಿ ಮತ್ತೆ ಚರ್ಚೆ ಮಾಡಿದರೆ ಒಳ್ಳೆಯದು. ಯಾಕೆಂದರೆ ಇಲ್ಲಿ ಎತ್ತಿರುವ ಹಲವು ಆಕ್ಷೇಪಗಳಿಗೆ ಪುಸ್ತಕದಲ್ಲಿ ಉತ್ತರಗಳಿವೆ.ವಸಂತ್ ಅವರು ಹೇಳಿದಂತೆ ವೈಯಕ್ತಿಕ ಟೀಕೆಗಳು ದಯವಿಟ್ಟು ಬೇಡ. ಪ್ರಿಯಾಂಕ್ ಅವರು ಸರಿಯಾಗಿ ಹೇಳಿದ್ದಾರೆ.
    ನಮ್ಮ ಪಠ್ಯ ಪುಸ್ತಕಗಳಲ್ಲಿ ಇಂಗ್ಲಿಷ್ , ಗಣಿತಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಸಂಸ್ಕೃತ ಪದಗಳು ಇವೆ ಅಂತ ನಾನು ನನ್ನ ಪುಸ್ತಕದಲ್ಲೇ ಹೇಳಿದ್ದೇನೆ. ಆದರೆ ಶಂಕರಭಟ್ಟರು ಹೇಳುವಂತೆ ಸೂರ್ಯ , ಚಂದ್ರ , ಪ್ರಶ್ನೆ , ಮೊದಲಾದ ದಿನನಿತ್ಯ ಬಳಸುವ ಪದಗಳನ್ನು ಬದಲಿಸಬೇಕೆ ಎಂಬುದಷ್ಟೆ ನನ್ನ ಪ್ರಶ್ನೆ. ಇದನ್ನೆಲ್ಲ ನನ್ನ ಪುಸ್ತಕದಲ್ಲಿ ಸ್ಪಷ್ಟ ಪಡಿಸಿದ್ದೇನೆ.
    ಚೆನ್ನಾಗಿ ತಿಳಿದ ಭಾಷಾವಿಜ್ಞಾನಿಯಾದ ಶಂಕರಭಟ್ಟರ ಬಗ್ಗೆ ನನಗೆ ತುಂಬ ಗೌರವ ಇದೆ. ಆದರೆ ಅವರು ವಿವರಣಾತ್ಮಕ ಭಾಷಾವಿಜ್ಞಾನ ಮತ್ತು ಸಾಮಾಜಿಕ ಭಾ.ವಿ.ಯನ್ನು ಬೆರೆಸಿದ್ದರಿಂದ ಅಂತಿಮವಾಗಿ ಕೆಳವರ್ಗದವರಿಗೇ ನಷ್ಟ.ನನ್ನಂಥ “ಮಡಿವಂತರು” ಹೇಗಿದ್ದರೂ ಮಹಾಪ್ರಾಣ ಇತ್ಯಾದಿ ಕಲೀತಾರೆ ಅಮ್ತ ಇಟ್ಕೊಳ್ಳಿ. ಶಂಕರ ಭಟ್ಟರು ಹೇಳೂವ ೩೧ ಅಕ್ಷರಗಳನ್ನು ಮಾತ್ರ ಶಾಲೆಗಳಲ್ಲಿ ಕಲಿಸಲಾರಂಭಿಸಿದರೆ ಇನ್ನಿ ೨೫ ವರ್ಷಗಳ ನಂತರ ಈಗಿರುವ ಲೇಖನಗಳನ್ನು ಓದಲಾರದ ಭವಿಷ್ಯದ ವಿದ್ಯಾವಂತರು ” ’ಭಟ್ಟರು’ ನಮಗೆ ಕನ್ನಡವನ್ನು ಪೂರ್ತಿಯಾಗಿ ಕಲಿಸದೆ ಅರ್ಧಂಬರ್ಧ ಕಲಿಸಿ ಮೋಸ ಮಾಡಿದರು , ಈಗ ನಾವು “ಮಡಿವಂತ” ಮಧ್ಯವರ್ತಿಗಳನ್ನು ಅವಲಂಬಿಸುವಂತೆ ಮಾಡಿದರು” ಎಂದು ಹೇಳುವ ಪ್ರಸಂಗ ಬಂದೀತು. ಇದನ್ನು ಸುಮ್ಮನೆ ವ್ಯಂಗ್ಯಕ್ಕೆ ಹೇಳುತ್ತಿಲ್ಲ, ಶಂಕರ ಭಟ್ಟರ ಲೇಖನ ದೇಶಕಾಲದಲ್ಲಿ ಪ್ರಕಟವಾದಾಗ “ಮುಂದಿನ ವರ್ಷದಿಂದಲೇ ಈ ಹೊಸ ಪಠ್ಯಕ್ರಮ ಬರಲಿ ಎಂದೂ ನಾನು ಇನ್ನು ಮುಂದೆ ಮಹಾಪ್ರಾಣವನ್ನೇ ಬಳಸುವುದಿಲ್ಲ” ಎಂದು ಕನ್ನಡ ವಿ.ವಿ. ಮಾಜಿ ಕುಲಪತಿಗಳಾದ ಕಂಬಾರರರು ಬರೆದರು.( ಆದರೆ ಅವರು ಮಹಾಪ್ರಾಣ ಬಳಸದೇ ಬರೆದಿಲ್ಲ ಆನಂತರ. ಬಳಸಿಯೇ ಬರೆದದ್ದು).
    ಮಾನ್ಯರಾದ ಶುಭಶ್ರೀಯವರೆ, ಕನ್ನಡ ಉಲಿಯುತ್ತಿರುವ ರೀತಿಯನ್ನೇ ಬದಲಾಯಿಸಬೇಕೆಂದು ಯಾರು ಹೇಳಿದ್ದಾರೆ? ನಾನಂತೂ ಎಲ್ಲೂ ಹೇಳಿಲ್ಲ.ಕನ್ನಡವನ್ನು ಹಲವು ಕಡೆಗಳಲ್ಲಿ ಉಲಿವ ವಿವಿಧ ಕ್ರಮಗಳನ್ನು ತಪ್ಪೆಂದು ಯಾರೂ ಹೇಳಿಲ್ಲ. ಯಾವ ಪ್ರದೇಶದ ಉಚ್ಚಾರವನ್ನೂ ತಪ್ಪೆಂದು ನಾನು ಹೇಳುವವನಲ್ಲ. ಎಲ್ಲವೂ ಮಾನ್ಯವೇ. ಈಗ ಕನ್ನಡ ಸಾಹಿತ್ಯದಲ್ಲಿ, ಅಂದರೆ ಕತೆ,ಕಾದಂಬರಿ ,ಕಾವ್ಯ ಇತ್ಯಾದಿಗಳಲ್ಲಿ, ಹಲವು ಪ್ರಭೇದಗಳು ಬಳಕೆಯಾಗುತ್ತಿಲ್ಲವೇ? ಅದನ್ನು ಯಾವ ಮಡಿವಂತರು ಆಕ್ಷೇಪ ಮಾಡಿದ್ದಾರೆ? (ಯಾರದ್ರೂ ಆಕ್ಷೇಪ ಮಾಡಿದರೂ ನಾನು ಅವರನ್ನು ಬೆಂಬಲಿಸಲಾರೆ) ಆದರೆ ಕೆಲವು ಅಕ್ಷರಗಳನ್ನು ನಿರ್ಮೂಲನೆ ಮಾಡಬೇಕೆಂಬುದು ಸರಿಯಲ್ಲ.
    ಅಕ್ಷರಕಡಿತ ಮಾಡುವುದರಿಂದ ನಷ್ಟವೆಂದಷ್ಟೆ ನನ್ನ ಅಭಿಪ್ರಾಯ. ತಮಿಳರನ್ನು ಜನಾಂಗ ನಿಂದೆ ಮಾಡಿದಂತೆ ಎಂದೊಬ್ಬರು ಹೇಳಿದಂತಿದೆ. ನಾನು ಅಂಥ ನಿಂದೆ ಮಾಡಿಲ್ಲ. ಭಾಷೆಯ ಮಟ್ಟಿಗೆ ಅವರು ಸಂಕುಚಿತ ಮನೋಭಾವದವರು ಅನ್ನುವುದು ನಿಜ.
    ಅಲ್ಲದಿದ್ರೆ ನಮಗೆ ಶಾಸ್ತ್ರೀಯ ಕೊಡಬಾರದು ಅನ್ನುವ ಅಧಿಕಪ್ರಸಂಗಕ್ಕೆ ಏನಂತೀರಿ?
    ಕನ್ನಡಿಗರು ಬರೆಯುತ್ತಿರುವ ರೀತಿಯನ್ನೇ ಬದಲಾಯಿಸಬೇಕು ಅನ್ನೋದು ಆಂಟಿ ಡೆಮಾಕ್ರಟಿಕ್ ಅಲ್ಲವೇ ಶುಭಶ್ರೀಯವರೆ?
    ಇನ್ನು ನನ್ನ ಪುಸ್ತಕದ ಹೆಸರಿನ ಬಗ್ಗೆ- ಈ ಹೆಸರು ಯಾಕೆ ಆಕ್ಷೇಪಕಾರಿ ಅಂತ ನನಗೆ ಗೊತ್ತಾಗುತ್ತಿಲ್ಲ. ಯಾಕೆಂದರೆ ಈ ಥಿಯರಿಯನ್ನು ಪ್ರಬಲವಾಗಿ ಮತ್ತು ಧೈರ್ಯವಾಗಿ ಪ್ರತಿಪಾದಿಸಿದವರು, ಹೇಳಿದಂತೆ ಬರೆದು ತೋರಿಸುತ್ತಿರುವವರು ಶಂಕರಭಟ್ಟರು.
    ಈಗಾಗಲೇ ಬರೆಯಲಾದ ಸಾಹಿತ್ಯರಾಶಿ ಏನಿದೆ ಅದನ್ನು ಓದುವುದೂ ಮುಂದಿನವರಿಗೆ ಕಷ್ಟ ಅನ್ನುವ ಹಾಗೆ ಆಗಬಾರದಲ್ಲ?
    ಚರ್ಚೆ ಬೆಳೆದರೆ ಸಂತೋಷ. ಇತಿ ನಿಮ್ಮ, ಗಿರೀಶ.

    ಉತ್ತರ
    • ಮಾರ್ಚ್ 28 2011

      ಅಜಕ್ಕಳ ಗಿರೀಶರೆ,
      ಈಗ ’ಱ್’, ’ೞ್’ ನಮ್ಮ ಹೊಸಗನ್ನಡದ ಬರಿಗೆಮಾಲೆಯಲ್ಲೇ ಇಲ್ಲ. ಆದರೂ ಅದನ್ನ ೮/೯/೧೦ನೇ ತರಗತಿಯ ಮಕ್ಕಳು ಹಳೆಗನ್ನಡವನ್ನು ಕಲಿಯುತ್ತಿಲ್ಲವೆ? ಮೊದಲೇ ಮಕ್ಕಳಿಗೆ ’ಱ್’, ’ೞ್’ ಕಲಿಸದಿದ್ದರೂ ಅವರು ಹಳೆಗನ್ನಡ ಹೇಗೆ ಓದುತ್ತಿದ್ದಾರೆ/ಕಲಿಯುತ್ತಿದ್ದಾರೆ? ಇದರ ಬಗ್ಗೆ ಕೊಂಚ ಉಂಕಿಸಿ.

      ಈ ಮೇಲಿನ ಮಾದರಿಯನ್ನೆ(ಅಂದರೆ ಱ್, ೞ್ ಮೊದಲ ಕಲಿಕೆಯಲ್ಲಿ ಇಲ್ಲದಿರುವುದು) ಮಾಪ್ರಾಣ, ಙ್, ಞ್,ಷ,ಋ,ಅಂ,ಅಃ – ಇವುಗಳಿಗೂ ಕೂಡ ಹಾಕಬಹುದು. ಇದರಿಂದ ಮೊದಲ ಕಲಿಕೆ ಸಲೀಸಾಗುತ್ತದೆ ಅಂತ ನಿಮಗೆ ಅನಿಸುವುದಿಲ್ಲವೆ?

      ಇದಲ್ಲದೆ ದಯವಿಟ್ಟು Sociolinguistics(http://en.wikipedia.org/wiki/Sociolinguistics) ಬಗ್ಗೆ ಕೊಂಚ ಓದಿಕೊಂಡರೆ ತಮಗೆ ಶಂಕರಬಟ್ಟರ ವಾದದ ತಿರುಳು ತಿಳಿಯುತ್ತದೆ. ಮತ್ತು ಬೇರೆ ಬೇರೆ ದೇಶಗಳಲ್ಲಿ(ನುಡಿಗಳಲ್ಲಿ) Language Planning(ನುಡಿ ಹಮ್ಮುಗೆ) ಬಗ್ಗೆ ಆಗುತ್ತಿರುವ ಅರಕೆ/ಸಂಶೋದನೆಗಳನ್ನು ಗಮನಿಸಿ. ಗೊಗಲ್ನಲ್ಲಿ ಹುಡುಕಿದರೆ ಹಲವು ಅರಿಮೆಗಳು ಸಿಗುತ್ತವೆ.

      ಈ ಹಿಂದೆ ನಾನು ನಿಮ್ಮ ಬ್ಲಾಗಿನಲ್ಲಿ ಹಾಕಿದ ಮಾರುಲಿಯನ್ನು ಮತ್ತೆ ಇಲ್ಲಿ ಹಾಕುತ್ತಿದ್ದೇನೆ(ಅಲ್ಲಿ ನಿಮ್ಮಿಂದ ನನಗೆ ಯಾವುದೇ ವಿವರಣೆ ದೊರೆತಿಲ್ಲವಾದುದರಿಂದ), ದಯವಿಟ್ಟೂ ಮತ್ತೊಮ್ಮೆ ಓದಬೇಕಾಗಿ ಕೋರಿಕೆ:-
      April 24, 2010 at 5:32 pm | Reply
      ಅಜಕ್ಕಳ ಗಿರೀಶ್ ರವರೆ,
      ನಿಮ್ಮ ಬರಹ ಹಲವು ತಪ್ಪು ತಿಳುವಳಿಕೆಗಳಿಂದ ಕೂಡಿದೆ ಯಾಕಂದರೆ ನಿಮ್ಮ ವಾದದಲ್ಲಿರುವ ’ವೈರುದ್ಯ’ವನ್ನು ಗುರುತಿಸುವುದು ಕಶ್ಟವೇನಲ್ಲ.

      ೧. ಡಿ.ಎನ್.ಎಸ್ ರವರು ತಮಿಳನ್ನು ಮಾದರಿಯಾಗಿ ಇಟ್ಟುಕೊಂಡಿದ್ದರೆ ಅವರ ಹೊಸ ಬರಹದಲ್ಲಿ ಗ,ಜ,ಡ,ದ,ಬ,ಹ ಯಾಕೆ ಉಳಿಸಿಕೊಂಡರು? ಅಂದರೆ ಇಲ್ಲಿ ತಮಿಳು ಮಾದರಿಯಲ್ಲ .ಅವರ ಮಾತಿನ ಸರಣಿಗೆ ಕನ್ನಡದ ಆಡುನುಡಿ( ಹೆಚ್ಚು ಬಳಕೆಯಲ್ಲಿರುವ)ಯೇ ಮಾದರಿ. ಇದರಿಂದಲೇ ತಿಳಿಯುವುದು ನೀವು ಅವರ ಬರಹವನ್ನು ಸರಿಯಾಗಿ ತಿಳಿದುಕೊಂಡಿಲ್ಲ ಅಂಬೋದು.

      ೨. ಆರ್. ಗಣೇಶ್ – ನುಡಿಯರಿಗರಲ್ಲ/ಸೊಲ್ಲರಿಗರಲ್ಲ…ಪಾಪ…ಆದ್ದರಿಂದ ನುಡಿ/ಬಾಶೆಯ ಬಗ್ಗೆ ಅವರ ಮಾತಿಗೆ ಹೆಚ್ಚು ಬೆಲೆ ಕೊಡಬೇಕಾಗಿಲ್ಲ. ಹಲವು ಮಂದಿಗೆ ಅವರು ಮಾತಾಡುವ ಸಕ್ಕದ ತುಂಬಿ ತುಳುಕುವ ’ಕನ್ನಡ’ ತಿಳಿಯುವುದಿಲ್ಲ.

      ೩. ನುಡಿಯರಿಮೆ ಅನ್ನುವುದು ಎಣಿಕೆಯರಿಮೆ ಅಲ್ಲ.. ಇಲ್ಲಿ ಹೆಚ್ಚು ಅಕ್ಕರಗಳು ಬೇಕೊ ಮೇಣ್ ಕಡಿಮೆ ಅಕ್ಕರಗಳು ಬೇಕೊ ಅನ್ನುವುದು ತಲೆಮೆಯಲ್ಲ. ಕನ್ನಡದ ಸೊಗಡಿಗೆ, ಕನ್ನಡದ ಆಡುನುಡಿಯನ್ನು ಗುರಿಯಲ್ಲಿಟ್ಟಿಕೊಂಡು ನಮ್ಮ ಬರಹದಲ್ಲಿ ಮಾಡಬೇಕಾದ ಮಾರ್ಪುಗಳು ಎಂತಹವು ಎಂಬುದರ ಬಗ್ಗೆ ಡಿ.ಎನ್.ಎಸ್ ಹೇಳಿದ್ದಾರೆ. ಯಾಕಂದರೆ ಹಳೆಯ ಕಾಲದಲ್ಲಿ ಕನ್ನಡ ಮಾತಾಡುವ ಬಹಳ ಮಂದಿಗೆ(ಅದರಲ್ಲೂ ಕೆಳವರ್ಗದವರಿಗೆ) ಬರಹದ ಪರಿಚಯ ಇರಲಿಲ್ಲ. ಬರಹ ಬಹುಮಟ್ಟಿಗೆ ಮೇಲ್ವರ್ಗದವರ ಸೊತ್ತಾಗೇ ಉಳಿದಿತ್ತು. ಆದ್ದರಿಂದ ಮಾತು-ಬರಹದ ನಡುವೆ ಈ ಕಂದಕ. ಅದೂ ಅಲ್ಲದೆ ೨೦೦೦ ಕ್ಕೂ ಹಳೆಯದಾದ ಸಕ್ಕದದ ಪದಗಳನ್ನು ಆ ನುಡಿ/ಬಾಶೆಯಲ್ಲಿ ಬರೆಯುವ ಹಾಗೆ ಬರೆಯಬೇಕೆಂಬ ಕಟ್ಟುಪಾಡು ಬೇಡದೇ ಇದ್ದರೂ ಕನ್ನಡದ ಬರಹಕ್ಕೆ ಹಾಕಿರುವುದು. ಈ ಕಟ್ಟುಪಾಡು ಬೇಕಿಲ್ಲ ಅನ್ನುವುದೇ ಡಿ.ಎನ್.ಎಸ್ ರವರ ವಾದ. ಇದರಲ್ಲಿ ಯಾವ ತಪ್ಪು ನನಗೆ ಕಾಣಲಿಲ್ಲ.

      ೪. ಇಶ್ಟಕ್ಕೂ ತಮಿಳು ಕೂಡ ಸಕ್ಕದದಿಂದ ಹಲವು ಪದಗಳನ್ನು ಪಡೆದುಕೊಂಡಿದೆ ಆದರೆ ಅವನ್ನು ತಮಿಳಿಗರ ಉಲಿಯುವಿಕೆಗೆ ತಕ್ಕಂತ ಮಾರ್ಪು ಮಾಡಿಕೊಳ್ಳಲಾಗಿದೆ. ಇದರಲ್ಲಿ ತಪ್ಪೇನು ?
      ನಾವು ನಮ್ಮ ಉಲಿಯುವಿಕೆಗೆ ತಕ್ಕಂತೆ ಸಕ್ಕದ ಪದಗಳನ್ನು ಮಾರ್ಪು ಮಾಡಿಕೊಂಡರೆ ತಪ್ಪೇನು?

      ಇಶ್ಟಕ್ಕೂ ತಮಿಳರ ನುಡಿಹೆಮ್ಮೆಯಿಂದಾಗಿ ತಮಿಳಿಗೆ/ತಮಿಳಿಗರಿಗೆ ಹೆಚ್ಚು ಒಳ್ಳೆಯದಾಗಿದಿಯೇ ಹೊರತು ಕೆಡುಕಾಗಿಲ್ಲ. ಇದು ತಮಗೂ ಗೊತ್ತು. ನಾವು ನಮ್ಮ ನುಡಿಯ ಬಗ್ಗೆ ಅವರಶ್ಟು ಹೆಮ್ಮೆ ಇಟ್ಟುಕೊಳ್ಳದೇ ಇರುವುದು(ಯಾಕಂದರೆ ನಾವು ನಮ್ಮ ನುಡಿಗೆ ಕ್ಲಾಸಿಕಲ್ ಪಟ್ಟ ಬೇಕು ಅಂತ ಸುರು ಮಾಡಿದ್ದೆ ಆ ಪಟ್ಟವನ್ನು ತಮಿಳಿಗೆ ಕೊಟ್ಟ ಮೇಲೆ) ನಮ್ಮ ತಪ್ಪೇ ಹೊರತು ಇದರಲ್ಲಿ ತಮಿಳರನ್ನು ತೆಗಳುವುದು ಬೇಕಾಗಿಲ್ಲ

      ಉತ್ತರ
    • Priyank
      ಮಾರ್ಚ್ 29 2011

      ಗಿರೀಶ ಭಟ್ಟರಿಗೆ ನನ್ನ ನಮಸ್ಕಾರಗಳು.

      ಶಂಕರ ಭಟ್ಟರು ಹೇಳುತ್ತಿರುವ ಕೆಲವು ಮಾತುಗಳು, ಅವನ್ನು ಪಾಲಿಸುವುದರಿಂದ ಆಗಬಹುದಾದ ತೊಂದರೆಗಳ ಬಗೆಗೆ ನೀವು ಮಾತನಾಡಿದ್ದೀರಿ.
      ಇವತ್ತಿನ ಶಾಲಾ ಅಂಕಿ ಅಂಶಗಳನ್ನು ನೋಡಿದರೆ ನಾವೆಲ್ಲರೂ ಖಿನ್ನರಾಗುವುದಂತೂ ನಿಜ.
      ೧೦೦ ಜನ ಶಾಲೆಗೆ ಸೇರಿದರೆ, ಐದನೇ ತರಗತಿ ಬರೋ ಹೊತ್ತಿಗೆ ೪೦ ಜನರು ಉಳಿದಿರುತ್ತಾರೆ. ಇನ್ನೂ ಮುಂದೆ ಹೋಗುತ್ತಾ ಹೋಗುತ್ತಾ ಉಳಿಯುವವರು ಬಹಳ ಕಡಿಮೆ.
      ವರ್ಷಕ್ಕೆ ೮ ಲಕ್ಷ ಜನರು ಕರ್ನಾಟಕದಿಂದ ೭ನೇ ತರಗತಿ ಪರೀಕ್ಷೆ ಕಟ್ಟಿದರೆ, ಅದೇ ಬ್ಯಾಚಿನ ಹುಡುಗರಲ್ಲಿ ಎರಡನೇ ಪಿ.ಯು.ಸಿ ಪಾಸು ಮಾಡುವವರು ೧ ಲಕ್ಷ ಮಂದಿ. ಉಳಿದವರು ಏನಾದರು, ಎಲ್ಲಿ ಹೋದರು, ಯಾಕೆ ಶಾಲೆ ಬಿಟ್ಟರು, ಗೊತ್ತಿಲ್ಲ!!

      ಕಲಿಕೆಯಲ್ಲಿ ಈ ಮಟ್ಟಿನ ಜನರು ಹಿಂದುಳಿಯುವಿಕೆಗೆ, ತಂದೆ ತಾಯಂದಿರ ದುಡಿಮೆ, ಶಾಲೆಗಳಲ್ಲಿರೋ ಸೌಲಭ್ಯಗಳು ಕಾರಣವೇ. ಜೊತೆಗೆ, ಅಕ್ಷರ ಕಲಿಯುವುದನ್ನು ಕಬ್ಬಿಣದ ಕಡಲೆ ಮಾಡಿರುವುದೂ ಕಾರಣವೇ.
      ಬಹುಪಾಲು ಕನ್ನಡಿಗರಿಗೆ ಕನ್ನಡ ಓದುವುದು, ಬರೆಯುವುದೇ ಕಷ್ಟ ಎಂಬಂತೆ ಮಾಡಿದ್ದೇವೆ.

      ಕನ್ನಡದ ಪ್ರಸಿದ್ಧ ಲೇಖಕರೊಬ್ಬರು “ಎಂ.ಎ ಕನ್ನಡ ಪಾಸು ಮಾಡಿದವರಿಗೇ, ನಿಷ್ಠೆ, ನಿಷ್ಟೆ, ಇವುಗಳಲ್ಲಿ ಯಾವುದು ಸರಿ ಎಂಬುದು ಗೊತ್ತಿರೋಲ್ಲ” ಎಂದು ಒಂದೂವರೆ ವರ್ಷದ ಹಿಂದೆ ಪತ್ರಿಕೆಯೊಂದರಲ್ಲಿ ಮೂಡಿ ಬಂದ ತಮ್ಮ ಅಂಕಣದಲ್ಲಿ ನೋವು ತೋಡಿಕೊಂಡಿದ್ದರು.
      ಸರಿಯಾದ ಬರೆಯುವ ರೀತಿ ಯಾವುದು ಎಂಬುದು ತಿಳಿಯಲು ಕನ್ನಡಿಗರಿಗೆ ಕಷ್ಟವಾಗುತ್ತಿದೆ. ಯಾಕೆ ಎಂಬುದನ್ನು ಅರಿಯಬೇಕಾಗಿದೆ.

      ಶಾಲೆಗಳಲ್ಲೂ ಕನ್ನಡ ಬರಹ ಕಲಿಸುವಾಗ, “ಮುಕ್ಯಮಂತ್ರಿ ಎಂದು ಬರೆಯುವಾಗ ದೊಡ್ಡ ಕ ಬರೀಬೇಕು” ಎನ್ನುತ್ತಾರೆ.
      “ಮಧ್ಯದಲ್ಲಿ ಶ ಬಂದರೆ ದೊಡ್ಡ ಶ ಬರೀರಿ” ಅಂತಾರೆ. “ಶುರುವಿನಲ್ಲಿ ಶ ಬಂದರೆ, ಚಿಕ್ಕ ಶ ಬರೀರಿ” ಅಂತಾರೆ.
      ಚಿಕ್ಕ ಮಕ್ಕಳು ಇದನ್ನೆಲ್ಲಾ ನೆನಪಿಡುವ ಹೊರೆ ಹೊರಬೇಕೇ? ಉಲಿಯುವಂತೆ ಬರೆಯುವ ಬರವಣಿಗೆ ಮಕ್ಕಳಿಗೆ ಕಲಿಸಿದರೆ, ಅವರಿಗೆ ಕಲಿಕೆಯು ಅಷ್ಟರ ಮಟ್ಟಿಗೆ ಸುಲಭವಾದಂತಲ್ಲವೇ?
      ಕಲಿಕೆಯು ಸುಲಭವೆನ್ನಿಸಿದರೆ, ಹೆಚ್ಚಿನ ಮಕ್ಕಳು ಶಾಲೆಯಲ್ಲಿ ಮುಂದುವರೆಯುತ್ತಾರಲ್ಲವೇ! ಅದರಿಂದ, ನಮ್ಮ ಸಮಾಜಕ್ಕೆ ಒಳಿತಲ್ಲವೇ!

      ಈ ರಾಜ್ಯದ ಜನರ ಏಳಿಗೆಯ ಬಗೆಗೆ ಕಾಳಜಿ ಹೊಂದಿರುವ ನೀವು, ಈ ವಿಷಯವನ್ನು ಗಮನಿಸುತ್ತೀರಿ ಎಂದು ನಂಬಿದ್ದೇನೆ.

      ಇನ್ನು, ಈಗಿನ ಸಾಹಿತ್ಯ ಮುಂದಿನ ಪೀಳಿಗೆ ಓದಲಾರದು ಎಂಬ ಕಳವಳ ತೋರ್ಪಡಿಸಿದ್ದೀರ.
      ಇವತ್ತು ಸಾಹಿತ್ಯ ಓದುತ್ತಿರುವ ಪೀಳಿಗೆಯು ನಮ್ಮ ಜನಸಂಖ್ಯೆಯ ಅತೀ ಚಿಕ್ಕ ಭಾಗವಷ್ಟೇ. ಅತೀ ದೊಡ್ಡ ಎಣಿಕೆಯ ಜನರು, ಅಕ್ಷರವನ್ನೇ ಅರಿಯದೇ ಕುಳಿತಿದ್ದಾರೆ.
      ಮುಂದಿನ ದಿನಗಳಲ್ಲಿ, ಓದು ಬಲ್ಲ ಜನರ ಸಂಖ್ಯೆಯು ಹೆಚ್ಚಿದರೆ, ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಿದರೆ, ಈಗಿರುವ ಸಾಹಿತ್ಯವನ್ನು ‘ಹೊಸ ಬರಹ’ಕ್ಕೆ ತರ್ಜುಮೆ ಮಾಡುವ ಕೆಲಸ ಕಷ್ಟವೇನಿಲ್ಲ.
      ತರ್ಜುಮೆ ಮಾಡುವ ಒಂದು ಉದ್ದಿಮೆಯೇ ಹುಟ್ಟಬಲ್ಲದು. ಜೊತೆಗೆ, ‘ಹೊಸ ಬರಹ’ದಲ್ಲೂ ಸಾಹಿತ್ಯಕ್ಕೆ ಕಾಣಿಕೆ ಸಲ್ಲಿಸುವವರು ಹೆಚ್ಚಾಗಬಹುದು.
      ಇದರಿಂದ ಕನ್ನಡಕ್ಕೆ, ಕನ್ನಡಿಗರಿಗೆ ಲಾಭವಿದೆ.

      ಈ ಬಗ್ಗೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.

      ಉತ್ತರ
      • ಮಾಯ್ಸ
        ಮಾರ್ಚ್ 29 2011

        ಪ್ರಿಯಾಂಕ್

        ಸಂಸ್ಕ್ರುತ ಕಲಿಯುವವರೇ ತಪ್ಪು ತಪ್ಪು ಉಲಿಕೆ ಮಾಡುವವರು.

        ಎಶ್ಟು ಗುಡಿಗಳಲ್ಲಿ “ನಮಃ ಸೂರ್ಯಾಯ.. ” ಶ್ಲೋಕ ಬರೆದು ಕೊನೆಗೆ “ರಾಹುವೇ ಕೇತುವೇ ನಮಃ” (“ರಾಹವೇ ಕೇತವೇ ನಮಃ” ಎಂಬುದು ಸರಿ ) ತಪ್ಪು ಬರೆಯುವರು.

        ವಿಧ್ಯೆ,ಧೀರ್ಘ, ಹಾರ್ಧಿಕ ಹೀಗೆ ಈ ಉಸಿರಿದ/ಉಸಿರಿರದ ಗೊಂದಲ ದೊಡ್ಡದಾಗಿ ಪಜೀತಿ ಎಬ್ಬಿಸಿದೆ.

        ಇನ್ನು ಷ ಮತ್ತು ಶ ನಡುವೆ ಸಂಸ್ಕ್ರುತ ಪಂಡಿತರಿಗೂ ವ್ಯತ್ಯಾಸ ಗೊತ್ತಿಲ್ಲ. ಇನ್ನು ಋ ಹೇಗೆ ಉಲಿಯೂ ಅಂದರೆ ‘ರು’ ಎಂದರು ಒಬ್ಬ ಸಂಸ್ಕ್ರುತ ಕಲಿಸೋರು. ಅಂತಹವರ ಬಳಿ ಹೋಗಿ, ಇವೆಲ್ಲ ಪಜೀತಿ ಯಾಕೆ, ಇವನ್ನೆಲ್ಲ ಬಿಟ್ಟು ಒಂದು ಸುಲಬವಾದ ಬರೆವಣಿಗೆ ಮಾಡಿಕೊಳ್ಳೋಣ, ಅಂದರೆ ಸಿಟ್ಟು ಮಾಡಿಕೊಂಡು, ನಿಮಗೆಲ್ಲ ‘ಸಂಸ್ಕೃತಿ’ ಗೌರವ ಇಲ್ಲ ಎಂದು ಸಿಡುಕಾಡಿದರು.

        ಒಂದು ಕಾಲದಲ್ಲಿ ನಾವು ವೇದಪಾಠಕ್ಕೆ ಹೋಗುತ್ತಿದ್ದಾಗ, ಸರಿಯಾದ ಸಂಸ್ಕೃತದ ಉಲಿಕೆ ಕಲಿಯಬೇಕೆಂದು ಎಶ್ಟು ಮಂದಿಯನ್ನು ‘ಋ’, ‘ಷ’, ‘ಜ್ಞ’ ಉಲಿಯೋದು ಹೇಗೆ ಎಂದರೆ ಒಬ್ಬೊಬ್ಬರು ಒಂದೊಂದು ರೀತಿ ಹೇಳೀ ಕಳಿಸಿದರು. 😦

        ಉತ್ತರ
      • Narendra Kumar.S.S
        ಮಾರ್ಚ್ 29 2011

        > ವರ್ಷಕ್ಕೆ ೮ ಲಕ್ಷ ಜನರು ಕರ್ನಾಟಕದಿಂದ ೭ನೇ ತರಗತಿ ಪರೀಕ್ಷೆ
        > ಕಟ್ಟಿದರೆ, ಅದೇ ಬ್ಯಾಚಿನ ಹುಡುಗರಲ್ಲಿ ಎರಡನೇ ಪಿ.ಯು.ಸಿ
        > ಪಾಸು ಮಾಡುವವರು ೧ ಲಕ್ಷ ಮಂದಿ. ಉಳಿದವರು ಏನಾದರು,
        > ಎಲ್ಲಿ ಹೋದರು, ಯಾಕೆ ಶಾಲೆ ಬಿಟ್ಟರು, ಗೊತ್ತಿಲ್ಲ
        ಇದಕ್ಕೆ ಕನ್ನಡ ಕಲಿಯುವುದು ಕಷ್ಟವೆದು ಮಾತ್ರ ಕಾರಣವೇ?
        ಕನ್ನಡವನ್ನು ಸರಳೀಕರಣಗೊಳಿಸಿಬಿಟ್ಟರೆ, ೧ ಲಕ್ಷ ಇದ್ದದ್ದು ೬-೭ ಲಕ್ಷಕ್ಕೆ ಏರಿಬಿಡುತ್ತದೆಯೇ?
        ತಮಿಳಿನಲ್ಲಿ ನುಡಿದಂತೆ ಬರೆಯುವರು ಎಂದು ಎಲ್ಲರೂ ತಿಳಿಸುತ್ತಿರುವರು. ಹಾಗಿದ್ದರೆ, ಅಲ್ಲಿ ಕಾಲೇಜಿನ ತನಕವೂ ಓದು ಮುಂದುವರೆಸುವವರು ಎಷ್ಟು ಮಂದಿ?

        > ಕಲಿಕೆಯು ಸುಲಭವೆನ್ನಿಸಿದರೆ, ಹೆಚ್ಚಿನ ಮಕ್ಕಳು ಶಾಲೆಯಲ್ಲಿ
        > ಮುಂದುವರೆಯುತ್ತಾರಲ್ಲವೇ
        ಇದು ನಿಜವೆಂದಾದರೆ ಯಾರದೂ ಅಭ್ಯಂತರವಿಲ್ಲ.
        ಆದರೆ, ನನಗೆ ಇದು ನಿಜವೆಂದು ಕಾಣುತ್ತಿಲ್ಲ.
        ನಮಗೆಲ್ಲಾ ತಿಳಿದಂತೆ ಇಂಗ್ಲಿಷ್ ಬಹಳ ಕಠಿಣವಾದ ಭಾಷೆ ಮತ್ತು ಅವೈಜ್ಞಾನಿಕವಾದದ್ದೂ ಸಹ.
        ಆದರೂ ಜಗತ್ತಿನಲ್ಲಿ ಇಂಗ್ಲಿಷ್ ಕಲಿಯುವವರ ಸಂಖ್ಯೆ ದಿನೇದಿನೇ ಹೆಚ್ಚೇ ಆಗುತ್ತಿದೆಯಲ್ಲಾ?
        ಆ ದೇಶಗಳಲ್ಲಿ ನಮಗಿಂತ ಹೆಚ್ಚು ಜನ ಶಾಲೆ ಬಿಡುವಂತಾಗಬೇಕಿತ್ತು; ಆದರೆ, ಹಾಗಾಗಿರುವುದು ಅಂಕಿ-ಅಂಶಗಳಲ್ಲಿ ಕಾಣುತ್ತಿಲ್ಲವಲ್ಲ?

        ಕನ್ನಡ ಸಾಹಿತ್ಯಕ್ಕೆ ತೊಡಕಾಗದಂತೆ ಕನ್ನಡವನ್ನು ಸರಳೀಕರಣಗೊಳಿಸುವುದಕ್ಕೆ ಯಾರ ಅಭ್ಯಂತರವೂ ಇರುವುದಿಲ್ಲ. ಎಲ್ಲ ಭಾಷೆಗಳೂ ಕಾಲ ಕಳೆದಂತೆ ಬದಲಾಗಿವೆ, ಸುಧಾರಣೆಗೊಂಡಿದೆ. ಕನ್ನಡವೇ ಕಳೆದ ೧೦೦೦ ವರ್ಷಗಳಲ್ಲಿ ಅದೆಷ್ಟು ಬದಲಾಗಿಲ್ಲ?
        ನಮ್ಮ ಲಿಪಿಯನ್ನು ಮತ್ತಷ್ಟು ಸರಳೀಕರಣಗೊಳಿಸುವುದು ಸಾಧ್ಯವಾದರೆ ಸಂತೋಷವೇ ಮತ್ತು ಅದು ಸ್ವಾಗತಾರ್ಹ ಕೂಡಾ.

        ಆದರೆ, ಇದನ್ನು ಮಾಡಲು ನೀವು ನೀಡುತ್ತಿರುವ ಕಾರಣಗಳು ಒಪ್ಪಿಗೆಯಾಗುತ್ತಿಲ್ಲ.
        ಮೊದಲನೆಯದಾಗಿ, “ಕನ್ನಡಕ್ಕೆ ಕನ್ನಡದ್ದೇ ಆದ, ಸಂಸ್ಕೃತದ ಛಾಪೂ ಇಲ್ಲದ ಲಿಪಿ ಮತ್ತು ವ್ಯಾಕರಣ ಬೇಕು”; ಎರಡನೆಯದು “ಇಂದಿನ ಕನ್ನಡದ ಲಿಪಿ ಕಷ್ಟವಾದ ಕಾರಣದಿಂದಲೇ ಹೆಚ್ಚಿನ ಮಕ್ಕಳು ಶಾಲೆ ಬಿಡುತ್ತಿದ್ದಾರೆ”. ಈ ಎರಡೂ ಸಮಂಜಸವಾದ ಕಾರಣಗಳೆಂದು ನನಗೆ ತೋರುತ್ತಿಲ್ಲ.
        ಮೊದಲನೆಯದು, ಕನ್ನಡದ ಸುಧಾರಣೆಗೆ ಸಂಸ್ಕೃತವನ್ನು ಮಾನದಂಡವಾಗಿ ಬಳಸಲಾಗುತ್ತಿದೆ.
        ಎರಡನೆಯದು, ಯಾವುದೇ ಆಧಾರವಿಲ್ಲದ ಮತ್ತು ಕನ್ನಡ ಲಿಪಿ ಸುಧಾರಣೆಯಿಂದಲೇ ಆಗುತ್ತದೆ ಎನ್ನುವುದು ಸಾಬೀತಾಗದ ವಾದ.

        ಉತ್ತರ
        • Priyank
          ಮಾರ್ಚ್ 29 2011

          ನರೇಂದ್ರ ಕುಮಾರ್ ಅವರೇ,

          ನೀವು ನನ್ನ ಅನಿಸಿಕೆಯನ್ನು ಪೂರ್ತಿಯಾಗಿ ಓದಿಲ್ಲವೆಂದು ನನಗನಿಸಿದೆ.
          ನನ್ನ ಅನಿಸಿಕೆಯಲ್ಲಿ ಹೇಳಿದ್ದನ್ನೇ ಇನ್ನೊಮ್ಮೆ ಇಲ್ಲಿ ಹಾಕಿದ್ದೇನೆ.
          “ಕಲಿಕೆಯಲ್ಲಿ ಈ ಮಟ್ಟಿನ ಜನರು ಹಿಂದುಳಿಯುವಿಕೆಗೆ, ತಂದೆ ತಾಯಂದಿರ ದುಡಿಮೆ, ಶಾಲೆಗಳಲ್ಲಿರೋ ಸೌಲಭ್ಯಗಳು ಕಾರಣವೇ. ಜೊತೆಗೆ, ಅಕ್ಷರ ಕಲಿಯುವುದನ್ನು ಕಬ್ಬಿಣದ ಕಡಲೆ ಮಾಡಿರುವುದೂ ಕಾರಣವೇ.”
          ಬೇರೆ ರೀತಿಯ ತೊಂದರೆಗಳೂ ಇವೆ, ಅವನ್ನೂ ಹೆಸರಿಸಿದ್ದೇನೆ. ನಾನು ಹೆಸರಿಸದೇ ಇರುವ ತೊಂದರೆಗಳೂ ಇರಬಹುದು.

          ತಮಿಳು ನಾಡಿನಲ್ಲಿ ಕಾಲೇಜು ಓದುಗರು ಎಷ್ಟು ಮಂದಿ ಎಂಬ ಬಗ್ಗೆ ನನ್ನ ಬಳಿ ಅಂಕಿ ಅಂಶಗಳಿಲ್ಲ.
          ಕರ್ನಾಟಕದ ಅಂಕಿ ಅಂಶಗಳು ಇವೆ, ಖಿನ್ನರಾಗಿಸುವಂತ ಅಂಕಿ ಅಂಶಗಳವು.

          ಇಂಗ್ಲೀಷಿನ ಬಗ್ಗೆ ಒಳ್ಳೆಯ ಪ್ರಶ್ನೆಯನ್ನೇ ಎತ್ತಿದ್ದೀರ. ಈ ಬಗ್ಗೆ, ನಾನೂ ಆಲೋಚಿಸಿದ್ದೇನೆ. ನನ್ನ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

          ಉಲಿಯುವಂತೆ ಬರೆಯುವುದು, ಮಕ್ಕಳ ಕಲಿಕೆಗೆ ಸುಲಭ ಎಂಬುದನ್ನು ಭಾಷಾ ತಜ್ನ್ಯರು, ಶಿಕ್ಷಣ ತಜ್ನ್ಯರು ಒಪ್ಪುತ್ತಾರೆ. ಇದು ಸಮಾಜದ ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಆಡುವ ಮಾತು.
          ಉಲಿಕೆಗೆ ಚಿನ್ಹೆಯನ್ನು ಹೋಲಿಸುವುದನ್ನು ಕಲಿಯುವುದು, ಎರಡು ಮೂರು ಚಿನ್ಹೆಯನ್ನು ಒಗ್ಗೂಡಿಸಿ ಪದಕ್ಕೆ ಹೋಲಿಸುವುದು ಇವುಗಳಲ್ಲಿ ಮೆದುಳಿನ ಕೆಲಸ ಅಡಗಿದೆ.
          ಈ ಕೆಲಸಕ್ಕೆ ಮೆದುಳನ್ನು ಪ್ರತಿಯೊಬ್ಬರೂ ಆದಷ್ಟು ಬೇಗ (೨ನೇ ತರಗತಿ ಅಷ್ಟೊತ್ತಿಗೆ) ತಯಾರು ಮಾಡಬೇಕು, ಇಲ್ಲವಾದಲ್ಲಿ ಕಲಿಕೆ ಕಷ್ಟವಾಗುತ್ತದೆ ಎಂಬುದನ್ನು ಅಧ್ಯಯನದ ಮೂಲಕ ತಿಳಿಯಲಾಗಿದೆ.
          ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಲು, ಈ ಬ್ಲಾಗನ್ನು ಓದಿರಿ: http://kspriyank.blogspot.com/2011/03/blog-post_25.html

          ಒಂದು ಪಕ್ಷ, ಆ ಸಮಯದೊಳಗೆ ಹೋಲಿಕೆಯನ್ನು ಅರಿಯದಿದ್ದಲ್ಲಿ, ಮುಂದೆ ಮೆದುಳನ್ನು ಆ ಕೆಲಸಕ್ಕೆ ತಯಾರು ಮಾಡುವುದು ಕಷ್ಟವೇ ಎನ್ನುವ ಅಭಿಪ್ರಾಯಕ್ಕೆ ತಜ್ನ್ಯರು ಬಂದಿದ್ದಾರೆ.
          ಹೋಲಿಕೆಯನ್ನು ಸರಿಯಾಗಿ ಅರಿತವರು, ಮುಂದಿನ ದಿನಗಳಲ್ಲಿ, ಕಷ್ಟದ ಪದಗಳನ್ನೂ, ಬೇರೆ ಭಾಷೆಗಳನ್ನೂ ಕಲಿಯಬಲ್ಲವರಾಗುತ್ತಾರಂತೆ.
          ಇಂಗ್ಲೀಷು ಕಲಿಸುವವರು, ರೋಮನ್ ಲಿಪಿಯನ್ನು ಬಳಸುತ್ತಾರೆ. ಅದರಲ್ಲಿ, ನಮ್ಮ ಹಾಗೆ ಒತ್ತಕ್ಷರ, ಇಳಿ, ದೀರ್ಗ ಇತ್ಯಾದಿ ಇಲ್ಲ. ಹಾಗಾಗಿ, ಅಷ್ಟರ ಮಟ್ಟಿನ ಮೆದುಳಿನ ಕೆಲಸ ಇಂಗ್ಲೀಶ್ ಭಾಷಿಕ ಮಕ್ಕಳಿಗೆ ಕಡಿಮೆಯೇ.
          ಮೇಲಾಗಿ, ಎರಡನೇ ತರಗತಿಗೆ ಬರುವವರೆಗೆ, ಮಕ್ಕಳಿಗೆ ಕ್ಲಿಷ್ಟವಾದ, ವಿಚಿತ್ರ ಸ್ಪೆಲ್ಲಿಂಗ್ ಇರುವ ಪದಗಳನ್ನು ಹೆಚ್ಚಾಗಿ ಪರಿಚಯಿಸುವುದಿಲ್ಲ. ಇಂಗ್ಲೀಶ್ ತಾಯ್ನುಡಿ ಇರುವ ಜಾಗಗಳಲ್ಲಿ, ಚಿಕ್ಕ ಮಕ್ಕಳಿಗೆ ಕಲಿಸಲು ಬಳಸುವ ಪಟ್ಯಗಳನ್ನು ಸಾಧ್ಯವಾದಲ್ಲಿ ತೆಗೆದು ನೋಡಿ.
          ನಿಮಗೂ, ನಾನು ಇಲ್ಲಿ ಹೇಳುತ್ತಿರೋದು ಕಾಣುತ್ತದೆ.

          ನಮ್ಮಲ್ಲಿ, ಈ ಅಧ್ಯಯನದ ಮೂಲಕ ಕಂಡುಕೊಂಡ ಒಳನೋಟಗಳ ಅಳವಡಿಕೆ ಯಾದರೆ, ಕನ್ನಡ ಮಕ್ಕಳಿಗೆ ಒಳಿತೆಂದು ನನಗನಿಸುತ್ತದೆ.
          ನನ್ನ ಮಾತುಗಳಲ್ಲಿ ನಿಮಗೆ ಒಪ್ಪಿಗೆಯಾಗದ್ದು ಇದ್ದರೆ, ತೋರಿಸಿ ಹೇಳಿ. ಚರ್ಚೆ ನಡೆಸೋಣ.

          ಉತ್ತರ
          • ಮಾಯ್ಸ
            ಮಾರ್ಚ್ 29 2011

            “ಉಲಿಕೆಗೆ ಚಿನ್ಹೆಯನ್ನು ಹೋಲಿಸುವುದನ್ನು ಕಲಿಯುವುದು, ಎರಡು ಮೂರು ಚಿನ್ಹೆಯನ್ನು ಒಗ್ಗೂಡಿಸಿ ಪದಕ್ಕೆ ಹೋಲಿಸುವುದು ಇವುಗಳಲ್ಲಿ ಮೆದುಳಿನ ಕೆಲಸ ಅಡಗಿದೆ.
            ಈ ಕೆಲಸಕ್ಕೆ ಮೆದುಳನ್ನು ಪ್ರತಿಯೊಬ್ಬರೂ ಆದಷ್ಟು ಬೇಗ (೨ನೇ ತರಗತಿ ಅಷ್ಟೊತ್ತಿಗೆ) ತಯಾರು ಮಾಡಬೇಕು, ಇಲ್ಲವಾದಲ್ಲಿ ಕಲಿಕೆ ಕಷ್ಟವಾಗುತ್ತದೆ ಎಂಬುದನ್ನು ಅಧ್ಯಯನದ ಮೂಲಕ ತಿಳಿಯಲಾಗಿದೆ.”

            ಒಳ್ಳೆಯ ಬೊಟ್ಟು! ಈ ಹಂತದಲ್ಲಿ ಗೊಂದಲಗಳು ಮೂಡಿಬಿಟ್ಟರೇ (ಉಸಿರಿರುವ /ಉಸಿರಿರದ ಗೊಂದಲ, ಋ ಗೊಂದಲ, ಶ/ಷ/ಸ ಗೊಂದಲ) ನುಡಿ ಕಲಿಕೆಯಲ್ಲಿ ತೊಡಕಾಗುವುದು. ಈ ಕನ್ನಡದಲ್ಲಿರುವ ಗೊಂದಲಗಳು ದೊಡ್ಡ ಹಾವಣಿಯೇ!

            ಉತ್ತರ
            • ಮಾಯ್ಸ
              ಮಾರ್ಚ್ 29 2011

              ಹಾವಣಿಯೇ! ಅಲ್ಲ ಹಾವಳಿಯೇ

              ಉತ್ತರ
          • Narendra Kumar.S.S
            ಮಾರ್ಚ್ 29 2011

            > ನೀವು ನನ್ನ ಅನಿಸಿಕೆಯನ್ನು ಪೂರ್ತಿಯಾಗಿ
            > ಓದಿಲ್ಲವೆಂದು ನನಗನಿಸಿದೆ. ನನ್ನ ಅನಿಸಿಕೆಯಲ್ಲಿ
            > ಹೇಳಿದ್ದನ್ನೇ ಇನ್ನೊಮ್ಮೆ ಇಲ್ಲಿ ಹಾಕಿದ್ದೇನೆ.
            > “ಕಲಿಕೆಯಲ್ಲಿ ಈ ಮಟ್ಟಿನ ಜನರು
            > ಹಿಂದುಳಿಯುವಿಕೆಗೆ, ತಂದೆ ತಾಯಂದಿರ ದುಡಿಮೆ,
            > ಶಾಲೆಗಳಲ್ಲಿರೋ ಸೌಲಭ್ಯಗಳು ಕಾರಣವೇ.
            > ಜೊತೆಗೆ, ಅಕ್ಷರ ಕಲಿಯುವುದನ್ನು ಕಬ್ಬಿಣದ ಕಡಲೆ
            > ಮಾಡಿರುವುದೂ ಕಾರಣವೇ.” ಬೇರೆ ರೀತಿಯ
            > ತೊಂದರೆಗಳೂ ಇವೆ, ಅವನ್ನೂ ಹೆಸರಿಸಿದ್ದೇನೆ.
            > ನಾನು ಹೆಸರಿಸದೇ ಇರುವ ತೊಂದರೆಗಳೂ
            > ಇರಬಹುದು.

            ಈ ಎಲ್ಲ ಸಮಸ್ಯೆಗಳ ಮಧ್ಯೆ ಕನ್ನಡದ ಲಿಪಿಯ ಬಳಕೆ ಕಷ್ಟ ಎನ್ನುವುದರ ಪ್ರಮಾಣವೆಷ್ಟು ಎನ್ನುವುದು ಮುಖ್ಯ ಅಲ್ಲವೇ?
            ಇಲ್ಲದಿದ್ದರೆ, ಬೇನೆಯಾವುದೆಂದು ಪೂರ್ಣವಾಗಿ ತಿಳಿಯದೇ ಮದ್ದು ನೀಡಿದಂತಾಗುತ್ತದೆಯಲ್ಲವೇ?
            ನಾನಿದನ್ನು ಏಕೆ ಹೇಳುತ್ತಿದ್ದೇನೆಂದರೆ, “ಕನ್ನಡ ಲಿಪಿ ಕಷ್ಟವಾದ್ದರಿಂದ ಅದನ್ನು ಸರಳೀಕರಣಗೊಳಿಸಬೇಕು” ಎನ್ನುವುದು ಕನ್ನಡ ಲಿಪಿ ಬದಲಾವಣೆಯನ್ನು ಇಚ್ಚಿಸುತ್ತಿರುವವರು ಮುಂದಿಡುತ್ತಿರುವ ವಾದ. ಇದರ ಸಮರ್ಥನೆಗಲ್ಲವೇ ನೀವೂ ಮೇಲಿನ ಉದ್ಧರಣೆ ನೀಡಿರುವುದು? ಅದು ಹಾಗಿಲ್ಲದಿದ್ದಲ್ಲಿ, ಇಲ್ಲಿ ಅಪ್ರಸ್ತುತವಾದೀತು.

            > ಉಲಿಯುವಂತೆ ಬರೆಯುವುದು, ಮಕ್ಕಳ ಕಲಿಕೆಗೆ
            > ಸುಲಭ ಎಂಬುದನ್ನು ಭಾಷಾ ತಜ್ನ್ಯರು, ಶಿಕ್ಷಣ
            > ತಜ್ನ್ಯರು ಒಪ್ಪುತ್ತಾರೆ. ಇದು ಸಮಾಜದ ಎಲ್ಲರನ್ನೂ
            > ಗಣನೆಗೆ ತೆಗೆದುಕೊಂಡು ಆಡುವ ಮಾತು.
            > ಉಲಿಕೆಗೆ ಚಿನ್ಹೆಯನ್ನು ಹೋಲಿಸುವುದನ್ನು
            > ಕಲಿಯುವುದು, ಎರಡು ಮೂರು ಚಿನ್ಹೆಯನ್ನು
            > ಒಗ್ಗೂಡಿಸಿ ಪದಕ್ಕೆ ಹೋಲಿಸುವುದು ಇವುಗಳಲ್ಲಿ
            > ಮೆದುಳಿನ ಕೆಲಸ ಅಡಗಿದೆ.
            ಇದು ಒಪ್ಪುವಂತ ಮಾತೇ.
            ಆದರೆ, ಲಿಪಿ ಎನ್ನುವುದು ಚಿಹ್ನೆಗಳ ಸಮೂಹ.
            ಏನೂ ತಿಳಿಯದ ಮಗು, ತನಗೆ ತೋರಿಸಿದ ಚಿಹ್ನೆಯನ್ನು ಕಲಿಯುತ್ತದೆ. ನೀವು “ಕ” ಹೇಳಿ ಅದರ ಚಿಹ್ನೆ ತೋರಿಸಿದರೆ ಅದನ್ನು ಕಲಿಯುತ್ತದೆ. “ಖ” ಹೇಳಿಕೊಟ್ಟು ಅದರ ಚಿಹ್ನೆ ತೋರಿಸಿದರೆ ಅದನ್ನೂ ಕಲಿಯುತ್ತದೆ.
            ಕಲಿಸದಿದ್ದರೆ ಕಲಿಯುವುದಿಲ್ಲ, ಅಷ್ಟೇ.
            ಗಣಿತದಲ್ಲಿ ಒಂದಂಕೆಯ ಗುಣಾಕಾರ ಸುಲಭ. ಎರಡಂಕೆಯದು ಸ್ವಲ್ಪ ಕಷ್ಠ. ಮೂರಂಕೆಯದು ಮತ್ತೂ ಕಷ್ಟ.
            ಶಾಲೆಗಳಲ್ಲಿ ಕಲಿಯುವ ಹೆಚ್ಚಿನ ವಿದ್ಯಾರ್ಥಿಗಳು ನಪಾಸಾಗುವುದು ಗಣಿತದಲ್ಲಿ. ಅವರನ್ನು ಕೇಳಿ, ಗುಣಾಕಾರ ಸುಲಭವೋ ಎಂದು?
            ಅನೇಕರು ನಪಾಸಾಗುತ್ತಾರೆಂಬ ಕಾರಣಕ್ಕೆ, ಮೂರಂಕೆಯ ಗುಣಾಕಾರವನ್ನೇ ಗಣಿತದಿಂದ ತೆಗೆದು ಬಿಟ್ಟರೆ, ಉತ್ತೀರ್ಣರಾಗುವ ಮಂದಿ ಹೆಚ್ಚುತ್ತಾರೆನ್ನುವುದಲ್ಲವೇ ನಿಮ್ಮ ತರ್ಕ?

            ಹೇಳಿಕೊಡುವ ವಿಷಯದ ಜೊತೆಗೆ, ಹೇಳಿಕೊಡುವ ರೀತಿಯೂ ಮುಖ್ಯವಾಗುತ್ತದೆ. ಸರಿಯಾಗಿ ಹೇಳಿಕೊಟ್ಟರೆ ಕಷ್ಟದ ವಿಷಯವೂ ಸುಲಭವಾಗುತ್ತದೆ. ಸುಲಭದ್ದು ಮಾತ್ರ ಇರಲಿ, ಕಷ್ಟದ್ದು ಬೇಡ ಎನ್ನುವುದು ಪಲಾಯನವಾದ ಎಂದು ನನ್ನ ಅಭಿಪ್ರಾಯ.

            ಉತ್ತರ
            • Priyank
              ಮಾರ್ಚ್ 29 2011

              ನರೇಂದ್ರ ಕುಮಾರ್ ಅವರೇ,

              ಲಿಪಿಯ ಕಷ್ಟತನವೆಷ್ಟು ಎಂಬ ಬಗ್ಗೆ ನೀವು ಕೇಳಿದ್ದೀರ.
              ಅದರ ಬಗ್ಗೆ, ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಕಲಿಕೆಗೆ ಹೇಗೆ ತೊಡಕು, ಹೇಗೆ ಇದನ್ನು ನಿವಾರಿಸಬಹುದು, ಈ ಪ್ರಶ್ನೆಯನ್ನು ನುಡಿಯರಿಗರು ಕೇಳಿಕೊಂಡು, ಅದಕ್ಕೆ ಉತ್ತರ ಹುಡುಕುತ್ತಾ ಇದ್ದಾರೆ.
              ತಮ್ಮ ಉತ್ತರ ಹುಡುಕಾಟದಲ್ಲಿ, ಕಂಡು ಬಂದ ಸತ್ಯಗಳನ್ನು ಜನರ ಮುಂದೆ ಇಡುತ್ತಲೂ ಬಂದಿದ್ದಾರೆ. ಈ ಚರ್ಚೆಯಲ್ಲಿ ಭಾಗವಹಿಸಿರುವ ನೀವೂ ಕೂಡ, ನುಡಿಯರಿಗರು ಜನರ ಮುಂದಿಟ್ಟ ವಿಷಯಗಳನ್ನು ಓದಿಕೊಂಡಿದ್ದೀರ ಎಂದು ನಾನು ನಂಬಿದ್ದೇನೆ.

              ಶಿಕ್ಷಣ ತಜ್ನ್ಯರು ನಡೆಸಿದ ಅಧ್ಯಯನದ ಮೂಲಕ ಹೊರಬಂದ ಸತ್ಯಗಳನ್ನು ಹೇಳುತ್ತಿದ್ದಾರೆ.
              ಅದರ ಮೂಲಕವೇ, ೨ನೇ ತರಗತಿಯ ತನಕ ಮೆದುಳಿನ ಸ್ಥಿತಿ ಹೇಗಿರುತ್ತದೆ, ಆಮೇಲೆ, ಅಕ್ಷರದೊಂದಿಗೆ ಹೋಲಿಕೆ ಯಾಕೆ ಕಷ್ಟವಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.
              ಆ ಅಧ್ಯಯನದ ಒಳನೋಟಗಳನ್ನು ಅಳವಡಿಸುವ ಮೂಲಕ ಜಾಂಬಿಯಾ ದೇಶದಲ್ಲಿ, ಸಾಕಷ್ಟು ಬದಲಾವಣೆ ಕಂಡು ಬಂದಿದೆ ಕೂಡ.
              ಇದನ್ನು, ತಾವು ಒಪ್ಪಲು ತಯಾರಿಲ್ಲದಂತೆ ಕಾಣುತ್ತದೆ. ಯಾಕೆ?

              ೨ನೇ ತರಗತಿಗೆ ಬರುವಷ್ಟರಲ್ಲಿ (ಅಥವಾ ಮುಗಿಯುವಷ್ಟರಲ್ಲಿ) ಅಕ್ಷರ ಹೋಲಿಕೆ ಕಲಿತ ಮಗುವು, ಓದಲು ಬೇಕಾದ ವೇಗ ಪಡೆದ ಮಗುವು, ಮುಂದಿನ ದಿನಗಳಲ್ಲಿ, ಕಲಿಕೆಯಲ್ಲಿ ಸಾಕಷ್ಟು ಬೆಳವಣಿಗೆ ಹೊಂದುತ್ತದೆ.
              ಆಮೇಲೆ, ಆ ಮಗುವಿಗೆ ಕಷ್ಟಕರ ಪದಗಳನ್ನು ಪರಿಚಯಿಸುತ್ತಾ ಹೋಗಬಹುದು. ಇಂಗ್ಲೀಶ್ ಭಾಷಿಕ ದೇಶಗಳಲ್ಲಿ ಇದನ್ನು ಮಾಡುತ್ತಿದ್ದಾರೆ ಎಂಬ ಉದಾಹರಣೆ ಮೊದಲೇ ಕೊಟ್ಟಿದ್ದೆ.
              ನೀವು ಗಣಿತದ ವಿಷಯವಾಗಿ ತೆಗೆದ ಮಾತೂ, ಇದನ್ನೇ ಸಮರ್ಥಿಸುತ್ತದೆ.

              ಹಾಗೇ ಇನ್ನೊಂದು ವಿಷಯ, ಗಣಿತ ಕಲಿಸಲು ನಮ್ಮಲ್ಲಿ ಬಳಸುತ್ತಿರುವ ಪದಗಳ ಒಂದು ಪಟ್ಟಿಯನ್ನು ನನ್ನ ಮೊದಲ ಕಾಮೆಂಟಿನಲ್ಲಿ ಹಾಕಿದ್ದೆ. ಇವು ಕಲಿಕೆಗೆ ತೊಡಕು ಎಂಬುದನ್ನೂ ತೋರಿಸಿದ್ದೆ.
              ಅಜಕ್ಕಳ ಗಿರೀಶ ಭಟ್ಟರೂ ಈ ಮಾತನ್ನು ಒಪ್ಪಿದ್ದಾರೆ.

              ನರೇಂದ್ರ ಕುಮಾರ್ ಅವರೇ,
              ನೀವು ನನ್ನ ಮಾತುಗಳನ್ನು ‘ಪಲಾಯನವಾದ’ ಎಂದು ಕರೆದಿದ್ದೀರ.
              ನೀವು ಮುಂದಿಟ್ಟ ಎಲ್ಲಾ ರೀತಿಯ ಪ್ರಶ್ನೆಗಳಿಗೂ, ನನ್ನ ಬಳಿಯಿರುವ, ವೈಜ್ನ್ಯಾನ್ಜಿಕವಾಗಿ ಜಗತ್ತು ಕಂಡುಕೊಂಡ ವಿಷಯಗಳ ಮೂಲಕ ವಿವರಿಸಿದ್ದೇನೆ.
              ಯಾವುದರಲ್ಲಾದರೂ ನಿಮಗೆ ಅರ್ಥವಾಗದಿದ್ದರೆ, ಇನ್ನೊಮ್ಮೆ ಕೇಳಿರಿ. ಆದರೆ, ಒಂದು ಆರೋಗ್ಯಕರ ಚರ್ಚೆಯಲ್ಲಿ ಈ ರೀತಿಯ ಪದಗಳನ್ನು ಬಳಸೋದು ಬೇಡ.

              ಉತ್ತರ
              • Narendra Kumar.S.S
                ಮಾರ್ಚ್ 29 2011

                > ನೀವು ನನ್ನ ಮಾತುಗಳನ್ನು
                > ‘ಪಲಾಯನವಾದ’ ಎಂದು ಕರೆದಿದ್ದೀರ.
                ಖಂಡಿತ ಇದು ನಿಮಗೆ ಮಾತ್ರ ಬರೆದ ಪ್ರತಿಕ್ರಿಯೆಯಲ್ಲ.
                ಒಟ್ಟಾರೆ ನಡೆಯುತ್ತಿರುವ ಚರ್ಚೆಯ ಸಾರವನ್ನು ಕುರಿತ ಪ್ರತಿಕ್ರಿಯೆಯಷ್ಟೆ.
                ನನ್ನ ಪ್ರತಿಕ್ರಿಯೆ ವೈಯಕ್ತಿಕ ಎಂದು ನಿಮಗನ್ನಿಸಿದ್ದರೆ, ಅದಕ್ಕೆ ಕ್ಷಮೆ ಇರಲಿ.

                > ೨ನೇ ತರಗತಿಗೆ ಬರುವಷ್ಟರಲ್ಲಿ
                > (ಅಥವಾ ಮುಗಿಯುವಷ್ಟರಲ್ಲಿ) ಅಕ್ಷರ
                > ಹೋಲಿಕೆ ಕಲಿತ ಮಗುವು, ಓದಲು
                > ಬೇಕಾದ ವೇಗ ಪಡೆದ ಮಗುವು,
                > ಮುಂದಿನ ದಿನಗಳಲ್ಲಿ, ಕಲಿಕೆಯಲ್ಲಿ
                > ಸಾಕಷ್ಟು ಬೆಳವಣಿಗೆ ಹೊಂದುತ್ತದೆ.
                > ಇದನ್ನು, ತಾವು ಒಪ್ಪಲು
                > ತಯಾರಿಲ್ಲದಂತೆ ಕಾಣುತ್ತದೆ. ಯಾಕೆ?
                ವಿಜ್ಞಾನ ನಿಂತ ನೀರಲ್ಲ. ಸದಾ ಹೊಸತನ್ನು ಹುಡುಕುವುದೇ ಅದರ ಪರಿ. ಇಂದು ಸತ್ಯವೆನಿಸಿದ್ದು ನಾಳೆ ಸುಳ್ಳಾಗಬಹುದು. “ವಿಮಾನ ಹಾರಾಟ ವೈಜ್ಞಾನಿಕ ತತ್ವಗಳಿಗೆ ವಿರುದ್ಧವಾದದ್ದು; ಹೀಗಾಗಿ ಅದು ಸಾಧ್ಯವಿಲ್ಲ” ಎಂಬುದಾಗಿ ವಿಜ್ಞಾನಿಗಳು ತೀರ್ಪುಕೊಟ್ಟ ಕಾಲವಿತ್ತು. ಆದರೆ, ಇಂದು ಅದು ಹಾಸ್ಯವೆಂದು ತೋರುತ್ತದಷ್ಟೆ.
                ಇದಮಿತ್ಥಂ ಎಂದು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ.
                ವಿಜ್ಞಾನವಿರುವುದೇ ಸಂದೇಹದ ತಳಹದಿಯ ಮೇಲೆ, ಪ್ರಶ್ನಿಸುವ ತಳಹದಿಯ ಮೇಲೆ.
                ಇದೇ ಭಾಷಾ ಶಾಸ್ತ್ರಕ್ಕೂ ಅನ್ವಯವಾಗುತ್ತದೆ.
                “ಭಾಷಾ ವಿಜ್ಞಾನಿಗಳು ಹೇಳಿದ್ದಾರೆ; ಅದನ್ನು ಬಿಟ್ಟು ಉಳಿದದ್ಯಾವುದೂ ಸತ್ಯವಲ್ಲ” ಎನ್ನುವುದು ವೈಜ್ಞಾನಿಕ ಮನೋಭಾವಕ್ಕೇ ವೈರುಧ್ಯವಾದುದು. ಪ್ರತಿಯೊಂದನ್ನೂ ಪ್ರಶ್ನಿಸೋಣ, ಕಠಿಣವಾಗಿ ಟೀಕಿಸೋಣ, ಅಪರಿಮಿತ ಪರೀಕ್ಷೆಗಳಿಗೊಡ್ಡೋಣ. ಇವೆಲ್ಲದರಲ್ಲೂ ಉಳಿದು ಬಂದದ್ದನ್ನು ಸತ್ಯವೆಂದು ಒಪ್ಪೋಣ.

                ಮೆದುಳೆಂಬುದನ್ನು ಇಂದಿನ ವಿಜ್ಞಾನವಿನ್ನೂ ಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲವೆಂಬುದು ಸತ್ಯ. “ಮೆದುಳು ಇದೇ ರೀತಿ ಕೆಲಸ ಮಾಡುತ್ತದೆ” ಎನ್ನುವುದನ್ನೂ ನಿಶ್ಚಿತವಾಗಿ ಹೇಳುವ ಸ್ಥ್ಜಿತಿಯಲ್ಲಿ ನಾವಿಲ್ಲ. “ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿಗಳಲ್ಲಿ ಕೆಲಸ ಮಾಡುವ ಈ ವಿಚಿತ್ರವಾದ ಮೆದುಳನ್ನು ಅರ್ಥ ಮಾಡಿಕೊಳ್ಳಲು” ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದಾರೆ.

                ನಮ್ಮ ಅನುಭವಕ್ಕೆ ಬಂದದ್ದು ನಮ್ಮ ಪಾಲಿಗೆ ಸತ್ಯವಷ್ಟೆ? ನಮ್ಮಲ್ಲಿ ಅನೇಕರು ಇಂಗ್ಲಿಷನ್ನು ಕಲಿತದ್ದೇ ಪ್ರೌಢಶಾಲೆಗೆ ಬಂದ ನಂತರ. ನಾನು ಆಗಲೇ ಹೇಳಿದಂತೆ, ಇಂಗ್ಲಿಷ್ ಭಾಷೆಯ ರಚನೆ ಅವೈಜ್ಞಾನಿಕವಾದದ್ದು; ಅದನ್ನು ಕಲಿಯುವುದು ಕಷ್ಟ. ಹೀಗಿದ್ದರೂ ನಾವೆಲ್ಲಾ ಇಂಗ್ಲಿಷನ್ನು ಚೆನ್ನಾಗಿಯೇ ಕಲಿತಿರುವೆವಲ್ಲವೆ? ಕಷ್ಟವೆಂದ ಮಾತ್ರಕ್ಕೆ ಅದನ್ನು ಕಲಿಯುವುದನ್ನೇ ಬಿಟ್ಟಿಲ್ಲವಲ್ಲ? ಮತ್ತು ೨ನೇ ತರಗತಿಗಿಂತ ಬಹಳ ಮುಂದೆ ಹೋದ ನಂತರವೂ ಕಲಿಯಲು ಸಾಧ್ಯವಾಯಿತಲ್ಲವೆ?

                ಭಾಷೆ ಕಲಿಯಲು ಸಣ್ಣ ವಯಸ್ಸಿನಲ್ಲೇ ಪ್ರಯತ್ನಿಸಿದರೆ ಸುಲಭ ಎನ್ನುವುದು ಒಪ್ಪುವ ಮಾತೇ. ಅದು ಭಾಷೆಗೆ ಮಾತ್ರವಲ್ಲ, ಪ್ರತಿಯೊಂದು ಕಲಿಕೆಗೂ ಅನ್ವಯವಾಗುತ್ತದೆ.
                ಆದರೆ, ಎಲ್ಲಾ ಭಾಷೆಗಳನ್ನೂ ಸಣ್ಣ ವಯಸ್ಸಿನಲ್ಲೇ ಕಲಿಯಲಾಗುವುದಿಲ್ಲವಲ್ಲ? ಅದಕ್ಕೇನು ಪರಿಹಾರ?

                ಉತ್ತರ
                • Priyank
                  ಮಾರ್ಚ್ 29 2011

                  ನರೇಂದ್ರ ಕುಮಾರ್ ಅವರೇ,

                  ವಿಜ್ನ್ಯಾನದ ಬಗ್ಗೆ ನೀವು ಹೇಳಿದ್ದು ಒಪ್ಪುವ ಮಾತು.
                  ಮತ್ತು, ವಿಜ್ನ್ಯಾನವು ಹೊಸತೊಸತು ಕೊಟ್ಟಂತೂ, ಅದನ್ನ ಜನರ ಏಳಿಗೆಗೆ ಬಳಕೆ ಮಾಡಿಕೊಳ್ಳಬೇಕು ಎಂದು ನಂಬಿರುವವನು ನಾನು.
                  ನಮ್ಮ ಲಿಪಿಯಲ್ಲಿ ಇರುವ ಕೆಲವು ತೊಂದರೆಗಳನ್ನು, ನುಡಿಯರಿಗರು ತೋರಿಸಿ ಕೊಟ್ಟ ಮೇಲೂ (ವಿಮಾನ ಹಾರಿಸಿದ ಮೇಲೂ), ಇದು ತೊಂದರೆಯೇ ಅಲ್ಲ (ವಿಮಾನ ಹಾರೋದೇ ಇಲ್ಲ) ಎನ್ನುವ ಮನೋಭಾವ ನನಗೆ ಸರಿ ಎನ್ನಿಸೋಲ್ಲ.
                  ನುಡಿಯರಿಗರ ಅಧ್ಯಯನದಿಂದ ಹೊರಬಂದ ವಿಷಯಗಳು, ಪ್ರಶ್ನೆಗೆ ಒಳಪಡಲಿ. ವೈಜ್ನ್ಯಾನಿಕವಾಗಿ ವಿಮರ್ಶೆ ಆಗಲಿ.
                  ಆದರೆ, ನುಡಿಯರಿಗರ ಕೆಲಸವನ್ನ ಹೀಗಳೆದು, “ಅದು ಕುತಂತ್ರದ ಕೆಲಸ”, “ರಾಜಕೀಯ ಲಾಭಕ್ಕೆ ಮಾಡಿದ ಕೆಲಸ”, “ಇನ್ನೊಬ್ಬರ ಅನುಕರಣೆ”, ಎಂದು ಕರೆಯುವುದು ವೈಜ್ನ್ಯಾನಿಕ ಮನೋಭಾವಕ್ಕೆ ವಿರುದ್ಧವಾದುದು ತಾನೇ?

                  ಮೆದುಳಿನ ಸ್ಥಿತಿ ಬಗ್ಗೆ, ಕಲಿಕೆಯು ಎರಡನೇ ತರಗತಿಗೆ ಎಷ್ಟಿದ್ದಾರೆ ಮುಂದೆ ಹೋದೀತು ಎಂಬ ಬಗ್ಗೆ, ವಿಧವಿಧದ ಸಂಶೋಧನೆ ನಡೆದಿದೆ.
                  ಅದನ್ನು ಪ್ರಾಕ್ಟಿಕಲ್ ಆಗಿಯೂ ತೋರಿಸಿ ಕೊಟ್ಟಿದ್ದಾರೆ.

                  ಪೂರ್ತಿಯಾದ ಮೆದುಳಿನ ಸ್ಥಿತಿ ಬಗ್ಗೆ, ಇನ್ನೂ ಹೆಚ್ಚು ಅಧ್ಯಯನವಾಗಬೇಕಿದೆ ಎಂಬುದು ದಿಟ. ನಾನು ಹೇಳಿದ್ದು, ಕಲಿಕೆಗೆ ಸಂಬಂಧಪಟ್ಟ ಚಿಕ್ಕ ಮಕ್ಕಳ ಮೆದುಳಿನ ಸ್ಥಿತಿ ಬಗ್ಗೆ ಮಾತ್ರ ಎಂಬುದನ್ನು ತಾವು ಗುರುತಿಸಬಲ್ಲಿರಿ.

                  ನಾವು ಇಂಗ್ಲೀಶ್ ಕಲಿತುದರ ಬಗ್ಗೆ ನಿಮ್ಮ ಪ್ರಶ್ನೆಯಿದೆ.
                  ನಾನು ಆಗಲೇ ಕೊಟ್ಟ ಅಂಕಿ ಅಂಶದ ಪ್ರಕಾರ, ಇವತ್ತು ಇಂಗ್ಲೀಷು ಕಲಿತು ಕೂತಿರುವವರು ಕರ್ನಾಟಕದ ಜನಸಂಖ್ಯೆಯಲ್ಲಿ ಕೆಲವರು ಮಾತ್ರ.
                  ೧೦೦ ರಲ್ಲಿ ೧೦ ಎನ್ನಬಹುದು (ಇನ್ನೂ ಕಮ್ಮಿ ಇದ್ದರೂ ಅಚ್ಚರಿಯಿಲ್ಲ).
                  ಉಳಿದವರಲ್ಲಿ ಹೆಚ್ಚಿನವರು ಶಾಲೆಯಿಂದ ಮಧ್ಯದಲ್ಲೇ ಹೊರಗುಳಿದರು. ಅವರಲ್ಲಿ ಹಲವರಿಗೆ, ೨ನೇ ತರಗತಿ ದಾಟುವವರೆಗೂ ಓದಿನ ವೇಗ ಬಂದಿರದ ಸಾಧ್ಯತೆ ಹೆಚ್ಚು.
                  ಉಳಿದ ಕನ್ನಡಿಗರಿಗೂ ಒಳ್ಳೆಯ ಕಲಿಕೆ ಸಿಗುವಂತಾಗಲಿ, ನುಡಿಯರಿಗರು ಕಂಡುಕೊಂಡ ವಿಚಾರಗಳು, ನಮ್ಮ ಜನರ ಕಲಿಕೆ ಹೆಚ್ಚಿಸುವಲ್ಲಿ ಸಹಾಯಕಾರಿಯಾಗಲಿ.
                  ಇದೇ ನನ್ನ ವಾದದ ತಿರುಳು.

                  ಎಲ್ಲಾ ಭಾಷೆಗಳನ್ನು ಕಲಿಯಲಾಗುವುದಿಲ್ಲವಲ್ಲ, ಇದಕ್ಕೇನು ಪರಿಹಾರ ಎಂದು ಕೇಳಿದ್ದೀರ.
                  ಎಲ್ಲಾ ಭಾಷೆಗಳನ್ನು ನಮ್ಮ ಜನರು ಕಲಿಯಬೇಕು ಎಂದು ತಮಗೆ ಯಾಕನ್ನಿಸಿತು?

                  ಉತ್ತರ
  24. Shubhashree
    ಮಾರ್ಚ್ 28 2011

    ಡಾ. ಗಿರೀಶ್ ಅವರಿಗೆ,

    ತಮಿಳರು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಗದಂತೆ ಮಾಡಿದ ಕಿತಾಪತಿಗೆ ಕಾರಣ ಭಾಷಾ ಸಂಕುಚಿತತೆ ಅನ್ನೋದ್ರ ಬಗ್ಗೆ ಖಚಿತವಾಗಿ ಏನೂ ಹೇಳಲಾರೆ. ಅದು ನಿಮ್ಮ ದೃಷ್ಟಿಕೋನ. ನನ್ನದು… ಅದು ಶಾಸ್ತ್ರೀಯ ಭಾಷೆಗಾಗಿ ಕೇಂದ್ರ ಕೊಡಮಾಡುವ ಹಣಕಾಸು ಸವಲತ್ತುಗಳನ್ನು ಮತ್ತೊಂದು ನುಡಿಯ ಜೊತೆ ಹಂಚಿಕೊಳ್ಳಬೇಕಾದೀತು ಅನ್ನೋ ಸ್ವಾರ್ಥ ಅನ್ನೋ ನಂಬಿಕೆ.

    ಕನ್ನಡ ಉಲಿಯುತ್ತಿರುವ ರೀತಿಯನ್ನು ಬದಲಿಸಬೇಕೆಂದು ತಾವು ಹೇಳುತ್ತಿಲ್ಲ ಎನ್ನುವುದಾದರೆ, ದಯಮಾಡಿ ತಿಳಿಸಿ… ಅಕಾರ, ಹಕಾರ ಬೇಧಗಳನ್ನು… ಮಹಾಪ್ರಾಣ ಬಿಟ್ಟು ಮಾತಾಡುವುದನ್ನು ತಾವು ಕೊರತೆ ಎಂದು ಭಾವಿಸುವಿರೋ? ವೈವಿಧ್ಯತೆಯ ಶೈಲಿ ಎಂದು ಭಾವಿಸಿವಿರೋ? ಎರಡನೆಯದು ನಿಮ್ಮ ನಿಲುವಾದರೆ ತುಂಬಾ ಸಂತೋಷವೇ ಅನ್ನಿ.

    ಉತ್ತರ
  25. Shubhashree
    ಮಾರ್ಚ್ 28 2011

    ನೀವು ಬರೆದಿರುವ ಪುಸ್ತಕವನ್ನು ನಾನು ಪೂರ್ತಿಯಾಗಿ ಓದಿದ್ದೇನೆ. ಸ್ವಲ್ಪ ಕಾಲಾವಕಾಶ ತೊಗೊಂಡು ನಿಮ್ಮ ಬರಹದ ಬಗ್ಗೆ ವಿವರವಾಗಿ ಮತ್ತೆ ಖಂಡಿತಾ ಬರೆಯುತ್ತೇನೆ. ಕನ್ನಡಿಗರು ಬರೆಯುತ್ತಿರುವ ರೀತಿಯನ್ನೇ ಬದಲಿಸಬೇಕು ಎಂದು ಯಾರು ಹೇಳಿದ್ದಾರೆ? ಕನ್ನಡಿಗರು ಮಹಾಪ್ರಾಣ ಕಲಿಯಬಾರದು ಎಂದು ಭಟ್ಟರು ಹೇಳಿದ್ದಾರೋ? ಮಹಾಪ್ರಾಣಗಳನ್ನು ಪ್ರಾಥಮಿಕ ಹಂತದಲ್ಲಿ ಕಲಿಸುವ ಅಗತ್ಯವಿಲ್ಲ ಅಂದಿದ್ದಾರೆಯೋ? ತಿಳಿಸಿ. ಉಲಿದಂತೆ ಬರೆಯುವುದು ಉತ್ತಮವಾದದ್ದು ಎನ್ನುವುದನ್ನು ಒಪ್ಪುತ್ತೀರೋ ಇಲ್ಲವೋ ತಿಳಿಸಿ. ದಿನನಿತ್ಯ ಬಳಸುವ ಪದಗಳನ್ನು ಬದಲಿಸೋ ಬಗ್ಗೆ ನಿಮ್ಮ ಆಕ್ಷೇಪ ಯಾಕೆ? ಭಟ್ಟರು ಮೂಲ ಕನ್ನಡದ್ದೇ ಪದವನ್ನು ಹುಟ್ಟು ಹಾಕಿದ್ದಾರೆಂದೋ ಬಳಕೆಗೆ ತಂದಿದ್ದಾರೆಂದೋ ಯಾಕೆ ಬೇಸರ? ಉದಾಹರಣೆಗೆ ಅವರು ಎತ್ತುಗೆ ಅನ್ನುವ ಪದ ಬಳಸಿದ್ದಾರೆ… ಜನರು ಎರಡರಲ್ಲಿ ತಮಗೆ ಯಾವುದು ಹೆಚ್ಚು ಅನುಕೂಲವಾಗುತ್ತೋ ಅದನ್ನು ಬಳಸುತ್ತಾರೆ. ಹೊಸ ಪದ ಕಟ್ಟಿದರೆ, ಬಳಕೆಗೆ ತಂದರೆ ಯಾಕೆ ಆಕ್ಷೇಪ?

    ಉತ್ತರ
  26. Shubhashree
    ಮಾರ್ಚ್ 28 2011

    ಹಳಗನ್ನಡದ ಸಾಹಿತ್ಯವನ್ನು ಓದಕ್ಕೆ ರ, ಳಗಳು ಬೇಡ್ವಾ ಗಿರೀಶರೇ, ಅವನ್ನು ಕನ್ನಡ ವರ್ಣಮಾಲೆಯಲ್ಲಿ ಯಾಕೆ ಸೇರಿಸಬಾರ್ದು? ಋ ಮತ್ತು ೠ ಗಳನ್ನು ಯಾಕೆ ಬಿಡಬಾರದು ಹೇಳಿ. ಇವನ್ನು ಎಷ್ಟು ಕನ್ನಡದ ಪದಗಳಲ್ಲಿ ಬಳಸುತ್ತೇವೆ ಹೇಳಿ. ರ, ಳ (ಹಳಗನ್ನಡದ್ದು – ನನಗೆ ಬರೆಯಲು ಬರುತ್ತಿಲ್ಲಾ.. ಮನ್ನಿಸಿ) ಬಿಟ್ಟದ್ದು ಓಕೇ ಆದರೆ ಇದ್ಯಾಕೆ ಅಲ್ಲಾ?

    ಉತ್ತರ
  27. Shubhashree
    ಮಾರ್ಚ್ 28 2011

    ಪುಸ್ತಕದ ಹೆಸರಿನ ಬಗ್ಗೆ ಆಕ್ಷೇಪಾ ಯಾಕೆ ಗೊತ್ತಾ? ಅದರಲ್ಲಿ ಶಂಕರಭಟ್ಟರನ್ನು ಹಳಿಯುವ ಉಮ್ಮೇದಿಯೊಂದೇ ಕಾಣುತ್ತಿರುವುದು. ಒಂದೇ ಅನ್ನಬಾರದು ಬಿಡಿ. ಅದರಲ್ಲೇ ನಿಮಗೆ ಸಂಸ್ಕೃತ ಭೂಯಿಷ್ಟ ಕನ್ನಡ ಪ್ರೇಮವು ಇರುವಂತೆ ತೋರುತ್ತಿದೆ. ಅದನ್ನು ನಿಮ್ಮ ಪುಸ್ತಕ ವಿಮರ್ಷೆ ಮಾಡುವಾಗ ತೋರಿಸಿಕೊಡ್ತೀನಿ.. ಇರಿ.
    ಕನ್ನಡಿಗರು ಬರೆಯುತ್ತಿರುವ ರೀತಿಯನ್ನೇ ಬದಲಾಯಿಸಬೇಕು ಅನ್ನೋದು ಆಂಟಿ ಡೆಮಾಕ್ರಟಿಕ್ ಅಲ್ಲವೇ ಶುಭಶ್ರೀಯವರೆ? ಅಂದಿದೀರಾ… ಸಾರ್, ಶಂಕರಭಟ್ಟರು ತಾವು ಹೊಸಗನ್ನಡದಲ್ಲಿ ಬರೆಯುತ್ತೇನೆ ಎಂದಿದ್ದಾರೆಯೇ ಹೊರತು ನೀವು ಬರೆಯಿರಿ ಎಂದಿದ್ದಾರಾ? ಅವರು ಪ್ರತಿಪಾದಿಸುತ್ತಿರುವುದನ್ನು ಮಹಾಪ್ರಾಣ ಸಹಿತ ಕನ್ನಡದಲ್ಲಿ ಬರೆದರೆ “ಇವರಿಗೇ ಬರೆಯಕ್ಕಾಗಲ್ಲಾ, ಬೇರೆಯವರಿಗೆ ಹೇಳ್ತಾರೆ” ಅನ್ನೋ ಆಕ್ಷೇಪ ಮಾಡ್ತಾರೆ, ಮಹಾಪ್ರಾಣವಿಲ್ಲದ ಕನ್ನಡದಲ್ಲಿ ಬರೆದರೆ ಅದಕ್ಕೂ ಆಕ್ಷೇಪ ಮಾಡೋದು ಇರುತ್ತೆ. ಭಟ್ಟರು ಅಂದುಕೊಂಡಂತೆ ನಡೆದುಕೊಳ್ಳುತ್ತಿರುವುದಂತೂ ಅವರ ಪ್ರಾಮಾನಿಕತೆಗೆ ಹಿಡಿದ ಕನ್ನಡಿ. ಏನಂತೀರಾ?

    ಉತ್ತರ
  28. Chetan
    ಮಾರ್ಚ್ 28 2011

    <>
    ಮೇಲೆ ಶುಭಶ್ರೀ ಭಾಷ ವೈವಿಧ್ಯತೆಯ ಬಗ್ಗೆ ಸರಿಯಾದ ಮಾತುಗಳನ್ನು ಆಡಿದ್ದಾರೆ. ನನ್ನದೇ ಉದಾಹರಣೆ ತಗೆದುಕೊಳ್ಳುವುದಾದರೆ ಉತ್ತರ ಕರ್ನಾಟಕದವನಾದ ನನಗೆ ಮೊದಲಿಗೆ ಕನ್ನಡ ಕಲಿಯಬೇಕಾದರೆ ಆದ ತೊಂದರೆ ಬಹಳವೇ, ನಾನು ಮನೆಯಲ್ಲಿ ಮಾತನಾಡುವ ಕನ್ನಡಕ್ಕೂ, ಹೊತ್ತಗೆಯಲ್ಲಿ ಓದುತಿದ್ದ ಕನ್ನಡಕ್ಕೂ ಬಹಳವೇ ವ್ಯತ್ಯಾಸ ಕಾಣುತ್ತಿತ್ತು ಹಾಗೂ ಬಹಳ ಗೊಂದಲಮಯವಾಗಿ ಕಾಣುತ್ತಿತ್ತು. ಈಗಿನ ಕನ್ನಡ ಕಲಿಯಲು ನನ್ನ ಹೆತ್ತವರು ಪಟ್ಟಿರುವ ಶ್ರಮ ಬಹಳವೇ. ಇಂತಹುದೇ ಅನೇಕ ಪ್ರಸಂಗಗಳನ್ನು ನಾವು ನಮ್ಮ ರಾಜ್ಯದ ಬೇರೆ ಬೇರೆ ಕಡೆಯಲ್ಲಿ ಕಾಣಬಹುದು. ಬೀದರ್ ಭಾಗ, ಕರಾವಳಿ ಭಾಗ, ಬಳ್ಳಾರಿ ಭಾಗ, ಚಾಮರಾಜನಗರ ಭಾಗ, ಮೈಸೂರು ಭಾಗ, ಬಯಲು ಸೀಮೆಯ ಭಾಗದ ಕನ್ನಡ ಹೀಗೆ ಅನೇಕ ತರಹದ ವೈವಿಧ್ಯತೆ ಕಾಣಲು ಸಾಧ್ಯ. ನಮ್ಮ ಹಳ್ಳಿಯಲ್ಲಿರುವ ಅನೇಕ ಕೆಳ ವರ್ಗದ ರೈತರ ಮಕ್ಕಳು ಶಾಲೆಗೇ ಹೋಗದಿರುವುದಕ್ಕೆ ಮುಖ್ಯ ಕಾರಣ ಅವರಿಗೆ ಸರಿಯಾಗಿ ಕನ್ನಡ ಉಚ್ಚರಿಸುವುದಕ್ಕೆ ಹಾಗೂ ಓದೋದಕ್ಕೆ ಬರೋದಿಲ್ಲ ಅನ್ನುವ ಶಿಕ್ಷಕರ ಹೀಯಾಳಿಕೆ. ಇಂತಹ ಹೀಯಾಳಿಕೆಗಳು ಕೆಳವರ್ಗದ ಜನರಲ್ಲಿ ಇಂದಿಗೂ ಅನಕ್ಷರತೆ ಹಾಗೂ ಕೀಳರಿಮೆ ಬಿತ್ತುತ್ತಿವೆ ಅನ್ನೋದನ್ನ ಲೇಖಕರು ಗಮನಿಸಿಲ್ಲ. ಭಟ್ಟರ ವಾದವನ್ನ ಅಲ್ಲಗೆಳೆಯುವ ಲೇಖಕರು ಭಾಷೆಯ ಸಾಮಾಜಿಕ ಆಯಾಮದ (socio linguistics) ಬಗ್ಗೆ ಆಲೋಚಿಸಿಲ್ಲ.

    ಉತ್ತರ
  29. ಮಾಯ್ಸ
    ಮಾರ್ಚ್ 28 2011

    ಱ ಮತ್ತು ೞಗಳು ಕನ್ನಡದ ಸೊಲ್ಲರಿಮೆಗೆ ಬೇಕು..

    ಮಾದರಿ.. ಅಱಿತು ಮತ್ತು ಅರೆದು, ಕುೞಿತು ಮತ್ತು ಹೊಳೆದು, ಕೊೞೆತು ಮತ್ತು ಕೊರೆದು

    ಗಮನಿಸಿರಿ, ಱ ಮತ್ತು ೞಗಳು ಬಂದಾಗಲೆಲ್ಲ ತು ಬಂದಿದೆ ಹಾಗೂ ಮಿಕ್ಕ ಕಡೆ ದು ಬಂದಿದೆ. ಈ ಸೊಲ್ಲರಿಮೆಯ ಕಟ್ಟಳೆಯನ್ನು ಬಿಡಿಸಿ ಹೇಳಲು ಱ ಮತ್ತು ೞಗಳು ಬೇಕು. ಆದರೆ ಅದು ಮೂಮೂಲಿ ಮಾತುಕತೆಯಲ್ಲಿ ಬೇಡ.

    ಉಸಿರದ/ಮಹಾಪ್ರಾಣ ಸೊಲ್ಲುಗಳು ಕನ್ನಡದ ಸೊಲ್ಲರಿಮೆಯಲ್ಲಿ ಯಾವ ಮಾರ್ಪಾಟುಗಳನ್ನು ತರದು. ಉಸಿರದ ಸೊಲ್ಲುಗಳಿಗೆ ಹೋಲಿಸಿದರೆ ಱ ಮತ್ತು ೞಗಳ ಬೇಕಾಗುವಿಕೆ ಹೆಚ್ಚು!

    “ಕನ್ನಡಿಗರು ಬರೆಯುತ್ತಿರುವ ರೀತಿಯನ್ನೇ ಬದಲಾಯಿಸಬೇಕು ಅನ್ನೋದು ಆಂಟಿ ಡೆಮಾಕ್ರಟಿಕ್ ಅಲ್ಲವೇ ಶುಭಶ್ರೀಯವರೆ?”
    ಅದು ಹೇಗೆ? ಹೆಚ್ಚಿನ ಮಂದಿ ಮಾರ್ಪಡಿಸಿ ಎಂದೂ ಹೇಳಿಲ್ಲ, ಮಾರ್ಪಡಿಸಬೇಡೀ ಎಂದೂ ಹೇಳಿಲ್ಲ. ಮೊದಲಿಗೆ ಶಂಕರಬಟ್ಟರ ಮಾತಿನ ಹುರುಳೇನು ಎಂದು ಹೆಚ್ಚು ಹೆಚ್ಚು ಮಂದಿಗೆ ತಿಳಿದ ತರುವಾಯದ ಮಾತದು ತಾನೆ! ಇಲ್ಲಿ ಮಂದಿಮನದ ಎದಿರಾಗಿರುವುದು/Anti-democratic ಮಾರ್ಪಡಿಸಲೇ ಬಾರದು ಎಂದು ಒತ್ತುಕೊಡಲು ‘ಶಂಕರಬಟ್ಟರ ಕತ್ತರಿ’, ‘ತಮಿಳರ ಸವಕಲು ವಾದ’ ಮುಂತಾದವು ತಕ್ಕುದ್ದೇ! ಸಂಗತಿಯನ್ನು ಮೊದಲು ಹೇಳುವಾಗಲೇ ಅದು ಕೆಡುಕೆಂಬ ದನಿಯಲ್ಲಿ ಹೇಳಿದರೆ ಅದು ಸಮಮಾತೇ!

    ಸಂಸ್ಕ್ರುತದಿಂದ ಹುಟ್ಟದ, ತನ್ನದೇ ನೆಲಗಟ್ಟಿನ ಹುಟ್ಟು ಹಾಗು ಬೆಳವಣಿಗೆ ಇರುವ ಕನ್ನಡ ತನ್ನತನವನ್ನು ಉಳಿಸಿಕೊಂಡು ಬೆಳೆದು ಹರಡಲು, ಅದರದೇ ಪರಗಳ ಬಳಕೆ ಬೇಕೇ ಬೇಕು. ಸೂರ್ಯ, ಚಂದ್ರ ಹೆಚ್ಚು ಬಳಕೆಯಾದರೇ, ಕನ್ನಡದ್ದೇ ಆದ ನೇಸರ ಹಾಗು ಕರೆ/ತಿಂಗಳು ಬಳಕೆ ತಪ್ಪಿ ಸಾಯುತ್ತವೆ. ಹಾಗೇ “ಆಪತ್ತು” ಪದ, ಕೆಡುಕು/ಕುತ್ತು ಪದವನ್ನು, ಗೀತೆ-ಹಾಡು ಪದವನ್ನು, ಕ್ಷಮಿಸಿ-ಮನ್ನಿಸಿ ಪದವನ್ನು, ಇತಿ-ಇಂತಿಯನ್ನು ಸಾಯಿಸುತ್ತದೆ.

    ಕನ್ನಡದ್ದೇ ಪದ ಬಳಿಸಿರಿ ಎಂದು ಬಟ್ಟರು ಹೇಳಿದರೆ, ಸಂಸ್ಕ್ರುತ ನುಡಿಗೆ ಮೂದಲಿಕೆ/ಅಪಮಾನ ಎನ್ನುವ ಮಾತು ಬಂದಿದೆ. ಅದು ಹೇಗೆ? ಸಂಸ್ಕ್ರುತ ತನ್ನ ನೆಲೆಯಲ್ಲಿ ಇರಲಿ. ಕನ್ನಡದ ತನ್ನ ನೆಲೆಯಾದ ಕನ್ನಡನಾಡಲ್ಲಿ ತನ್ನದೇ ತನವನ್ನು ಉಳಿಸಿಕೊಳ್ಳಲಿ. ಅದೇ ಸಯ್ಪು.

    ಚಿಕ್ಕದಾಗಿ ಹೇಳುವುದಾದರೇ Democratic/ಮಂದಿಮನದಲ್ಲಿ ನಂಬಿಕೆಯಿದ್ದರೆ, ಒಂದು ಸಂಗತಿ/ವಿಚಾರವನ್ನು ಮೊದಲು ಮಂದಿಗೆ ಅರಿಯಲು ಬಿಡುವುದು ಹಾಗು ಅದಕ್ಕೂ ಸಮವಾದ ಅನುವು/ಅವಕಾಶ ಕೊಡುವುದು.

    ಇನ್ನು ಬಡಕಟ್ಟೊಂದರ ಹಳಿತ/ಜನಾಂಗೀಯ ನಿಂದನೆ “ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು” ಎಂಬ ಮೂದಲಿಕೆಯಲ್ಲಿ ಅಡಗಿದೆ. ಅದು ತಿಳಿಯದಿದ್ದರೆ..! ತಮಿಳರು ತಮ್ಮ ನುಡಿಗೆ ಏನೋ ಒಳಿತು ಎನಿಸಿತೋ ಅದನ್ನು ಮಾಡಿಕೊಂಡರು. ಅವರೇನು ಬಂದು ಸಂಸ್ಕ್ರುತವನ್ನು ಮಾರ್ಪಡಿಸಿ ಎಂತಲೋ, ಇಲ್ಲವೇ ಕನ್ನಡವನ್ನು ತಮಿಳಿನ ಹಾಗೆ ಕ-ಗ, ಚ-ಜ, ಟ-ಡಗಳನ್ನು ಒಂದೇ ಅಕ್ಕರ ಮಾಡಿ ಎಂದಿದ್ದರೆ ಅದು ನಡೆಸ ತಕ್ಕದ್ದಲ್ಲ. ಇದು ವೆರೆಗೂ ಯಾರಾದರೂ ತಮಿಳು ಸೊಲ್ಲರಿಮೆಗಾರ ಅವರು ಮಾಡಿಕೊಂಡ ಮಾರ್ಪಡು ಅವರಿಗೆ ಕೇಡೆಸಗಿದೆ ಎಂದು ಹೇಳಿದ್ದುಂಟೇ? ಇಂದು ಕೆಳಗುಂಪಿನ ಏಳೆಗೆಯಲ್ಲಿ ಆ ನಾಡು ಎಲ್ಲ ನಾಡಿಗಿಂತ ಮುಂದಿದೆಯಲ್ಲ?

    ನಮ್ಮ ಮೇರುಸಯ್ಪುಮನೆ/ಸರ್ವೋಚ್ಛ ನ್ಯಾಯಲಯದ ಮುಂದಾಳು ಒಬ್ಬ ತಮಿಳು ಕೆಳಜಾತಿಯವನು! ಇಂತಹದ್ದ ನಮ್ಮ ಕನ್ನಡ ನಾಡಿನಲ್ಲಿ ಏನಾದರೂ ನಡೆದಿದೆಯೇ! ತಮಿಳರು ನುಡಿಮಾರ್ಪಾಟು ಹಾಗು ನಾಡುಮಾರ್ಪಟು/ಸಮಾಜ ಬದಲಾವಣೆ ಎರಡನ್ನು ಒಟ್ಟಿಗೆ ಅವರ ಒಳಿತಿಗೆ ಮಾಡಿ ತೋರಿಸಿದ್ದಾರೆ!

    ಇಂತು + ಈ = ಇಂತೀ/ಇಂತಿ (ಇತಿ ಅಲ್ಲ ಕನ್ನಡದಲ್ಲಿ )
    ಮಾಯ್ಸ!

    ಉತ್ತರ
  30. Shubhashree
    ಮಾರ್ಚ್ 28 2011

    ಶಂಕರಭಟ್ಟರು descriptive linguistics ಮತ್ತು Social linguisticsಗಳನ್ನು ಬೆರೆಸಿದ್ದಾರೆ ಅನ್ನೋದು ಕೂಡಾ ಆರೋಪದ ಧಾಟಿಯಲ್ಲಿದೆ. ಅದು ಸರಿಯಾದ ವಿಧಾನವೇ ಆಗಿದೆ. ಮೊದಲಿಗೆ ಭಾಷಾವಿಜ್ಞಾನ ಅನ್ನೋದನ್ನು ಅನುಕೂಲಕ್ಕಾಗಿ ವಿವರಣಾತ್ಮಕ ಮತ್ತು ಸಾಮಾಜಿಕ ಅಂತಾ ಬಿಡಿಸಿಕೊಳ್ಳಲಾಗಿದೆ. ಅದು ಯಾಕೆಂದರೆ ಅಧ್ಯಯನಕ್ಕೆ ಸುಲಭವಾಗಲಿ ಎಂದು ಮಾತ್ರವೇ. ಹಾಗೆಂದ ಮಾತ್ರಕ್ಕೆ ಸಮಾಜವನ್ನು ವಿವರಣಾತ್ಮಕ ಭಾಷಾ ವಿಜ್ಞಾನದಿಂದ ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ ಅನ್ನುವುದು ನನ್ನ ಅನಿಸಿಕೆ.

    ಉತ್ತರ
    • ಮಾಯ್ಸ
      ಮಾರ್ಚ್ 29 2011

      ಇದೊಂದು ಒಳ್ಳೆಯ ಬೊಟ್ಟು/point. ನುಡಿಯ ಮಾರ್ಪಾಟಿಂದ ನಾಡಿನ ಮಾರ್ಪಾಡು ಆಗುವುದು. ಇದಕ್ಕೆ ಇತ್ತೀಚೆ ಜರ್ಮನ್ ನುಡಿ ತನ್ನ ಸೊಲ್ಲರಿಮೆಯನ್ನು ಮಾರ್ಪಡಿಸಿ ಹೊಸತಿಗೆ ಹೊಂದಿಸಿಕೊಂಡಿರುವುದು ದೊಡ್ಡ ಎದ್ದುಕಾಣುವ ಮಾದರಿ!

      ಉತ್ತರ
      • Narendra Kumar.S.S
        ಮಾರ್ಚ್ 29 2011

        > ಇದಕ್ಕೆ ಇತ್ತೀಚೆ ಜರ್ಮನ್ ನುಡಿ ತನ್ನ ಸೊಲ್ಲರಿಮೆಯನ್ನು
        > ಮಾರ್ಪಡಿಸಿ ಹೊಸತಿಗೆ ಹೊಂದಿಸಿಕೊಂಡಿರುವುದು ದೊಡ್ಡ
        > ಎದ್ದುಕಾಣುವ ಮಾದರಿ

        ಪ್ರತಿಯೊಂದಕ್ಕೂ ಹೊರದೇಶಗಳತ್ತ ನೋಡುತ್ತಾ, ಅವರು ಮಾಡಿದ್ದು ಸರಿ, ನಮ್ಮದು ಸರಿಯಿಲ್ಲ ಎನ್ನುವ ಕೀಳರಿಮೆ ಎಂದು ಸರಿ ಹೋಗುತ್ತದೆ?
        ಇದು ಅಭಿಮಾನ್ಯಶೂನ್ಯತೆಯನ್ನೇ ತೋರಿಸುತ್ತದೆ.
        ನಾವು “ನಾವಾಗಿ” ಬಾಳಿ-ಬೆಳೆಯುವುದೆಂತು?

        ಉತ್ತರ
  31. ಮಾರ್ಚ್ 28 2011

    ಅಜಕ್ಕಳರ ಲೇಖನಕ್ಕಿಂತ ಶುಭಶ್ರೀಯವರ ಪ್ರತಿಕ್ರಿಯೆಯೆ ಧೀರ್ಘವಾಗಿದೆ 🙂
    ಶುಭಶ್ರೀಯವರೆ ಇದನ್ನೆಲ್ಲ ಸೇರಿಸಿ ಒಂದು ಲೇಖನ ಬರೆದರೆ ಅನುಕೂಲವಾಗುತ್ತದೆ.ಬರೆಯುವಿರಾ?

    ಉತ್ತರ
  32. Shubhashree
    ಮಾರ್ಚ್ 28 2011

    ಮತ್ತೊಂದು ಮಾತು ಡಾ.ಗಿರೀಶ್ ಅವರೇ,

    ಶಂಕರಭಟ್ಟರು ಅಕ್ಷರ ಕಡಿಮೆ ಮಾಡಲು ತಮಿಳು ಮಾದರಿ ಎಂದು ಹೇಳಿದ್ದರೆ ದಯಮಾಡಿ ದಾಖಲೆ ಕೊಡಿ. ನನ್ನ ಅರಿವಿನಂತೆ ಅವರ ಯಾವ ಹೊತ್ತಗೆಯಲ್ಲೂ ಇಂತಹ ಹೇಳಿಕೆ ಇಲ್ಲ. ಡಾ. ರಾ ಗಣೇಶ್ ಅವರು ದೇಶಕಾಲದಲ್ಲಿ ಇಂತಹ ಆರೋಪ ಮಾಡಿದ್ದಾರೆ ಎನ್ನುವ ಕಾರಣಕ್ಕೇ ತಮ್ಮ ಈ ಬರಹಕ್ಕೆ ಅಂತಹ ತಲೆಬರಹ ಕೊಡುವುದರ ಉದ್ದೇಶ ಶಂಕರಭಟ್ಟರ ಅವಹೇಳನ ಮಾಡಬೇಕೆನ್ನುವ ತುಡಿತವಲ್ಲ ಎನ್ನುವುದನ್ನು ನನ್ನಂತವಳಿಗೆ ತೋರಿಸಿಕೊಡಲಾದರೂ ನೀವು ಇದಕ್ಕೆ ಸಾಕ್ಷಿ ಕೊಡಿ. ಇಲ್ಲದಿದ್ದರೆ ನಿಮ್ಮದು ಪೂರ್ವಾಗ್ರಹ ಅನ್ನದೆ ವಿಧಿಯಿಲ್ಲ. ಇದೇ ದೇಶಕಾಲದಲ್ಲಿ ಶಂಕರಭಟ್ಟರ ಬಗ್ಗೆ ತೀರಾ ಕೀಳಾಗಿ ರಾಜಕೀಯದ ಲಾಭಕ್ಕಾಗಿ ಹೀಗೆ ಮಾಡ್ತಿದ್ದಾರೆ ಎಂದೂ ಬರೆಯಲಾಗಿದೆ ಎನ್ನುವ ಹಿನ್ನೆಲೆಯಲ್ಲಿ ಈ ವಿವರಣೆ ಕೇಳುತ್ತಿದ್ದೇನೆ. ಕೊಡಿ.

    ಉತ್ತರ
  33. ಮಾಯ್ಸ
    ಮಾರ್ಚ್ 28 2011

    ನಲ್ಮೆಯ ರಾಕೇಶ

    “ಅಜಕ್ಕಳರ ಬರಹಕ್ಕಿಂತ ಶುಭಶ್ರೀಯವರ ಅನಿಸಿಕೆಯೆ ಉದ್ದವಾಗಿದೆ
    ಶುಭಶ್ರೀಯವರೆ ಇದನ್ನೆಲ್ಲ ಸೇರಿಸಿ ಒಂದು ಬರಹ ಬರೆದರೆ ಅನುಕೂಲವಾಗುತ್ತದೆ.ಬರೆಯುವಿರಾ?

    ದೀರ್ಘ,ಧೀರ್ಘ ಅಲ್ಲ!
    ಅನುಕೂಲ ಇರಲಿ! 🙂

    ನೀವು ಶಂಕರಬಟ್ಟರ ಮಾತನ್ನು ಸಾಬೀತು ಮಾಡಿದರು. ತಮ್ಮಂತಹ ಓದಿದವರಿಗೂ ಉಸಿರದ/ಮಹಾಪ್ರಾಣ ಉಸಿರಿರದ/ಅಲ್ಪಪ್ರಾಣದ ಗೊಂದಲ. ಇನ್ನು ಮಾಮೂಲಿ ಮಂದಿ ಕತೆ ಏನು?! 🙂

    ಉತ್ತರ
    • ಮಾರ್ಚ್ 28 2011

      ಮಾಯ್ಸಣ್ಣ,
      ಅಲ್ಪನೋ,ಮಹಾನೋ ಯಾವ್ದೋ ಒಂದು ಪ್ರಾಣ ಬಿಡಪ್ಪ 😉 ನಾವ್ ಹಾಸ್ನದ ಮಂದಿ,ಮಾತಾಡೋದೆ ಹಿಂಗೆ.

      ಉತ್ತರ
      • ಮಾಯ್ಸ
        ಮಾರ್ಚ್ 28 2011

        ಇಲ್ಲೇ ಎದ್ದು ಕಾಣುವುದಲ್ಲ ನಮ್ಮಲ್ಲಿ ಇರುವ ಗೊಂದಲ ಹಾಗು ತೊಂದರೆ ಕನ್ನಡವನ್ನು ಕಲಿಯುವಲ್ಲಿ ಹಾಗು ಬರೆಯುವಲ್ಲಿ!

        ಉತ್ತರ
  34. ಮಾರ್ಚ್ 28 2011

    ಸ್ನೇಹಿತರೆ,
    ಇಲ್ಲಿ ಸಮಸ್ಯೆ ಪ್ರಾರಂಭ ಆಗಿದ್ದೆ ಶಂಕರಭಟ್ಟರು ಅಕ್ಷರಮಾಲೆಯಲ್ಲಿ ಕಡಿತ ಮಾಡಬೇಕು ಅನ್ನೋ ವಾದವನ್ನು ಮಂಡಿಸಿದಮೇಲೆ…. ಅದರಲ್ಲಿ ಕೆಲವು ಉಪಯುಕ್ತ , ಕೆಲವು ಅಸಮಂಜಸ .. ಇಲ್ಲಿ ಕಾಮೆಂಟ್ ಬರೆಯುತ್ತಿರುವ ನಾವೆಲ್ಲರೂ ಪೂರ್ಣ ಪ್ರಮಾಣದ ಕನ್ನಡವನ್ನೇ ಕಲಿತಿದ್ದೇವೆ, ಈಗ ನಮಗೆ ಯಾವುದೇ ಭಾಷೆಯ ಪದಗಳನ್ನು ಬರೆಯುವುದಾಗಲಿ, ಉಚ್ಚರಿಸುವುದಾಗಲಿ ಕಷ್ಟವಲ್ಲ, ಇದು ನಮ್ಮ ಅಕ್ಷರಮಾಲೆಯ ಶಕ್ತಿ, ಆದರೆ ಇದು ತಮಿಳರಿಗೆ ಸಾಧ್ಯವಿಲ್ಲ, ಅವರ ನಾಲಿಗೆ ಕೆಲವು ಪದಗಳಿಗೆ ಹೊರಳುವುದಿಲ್ಲ.. ಮಕ್ಕಳಿಗೆ ಕಲಿಯುವಾಗ ತುಸು ಹೊರೆಯನ್ನಿಸಬಹುದು, ಕ್ರಮೇಣ ಎಲ್ಲವು ಸಲೀಸಾಗುತ್ತದೆ, ನಾವು ಇದೆ ಹಂತವನ್ನು ದಾಟಿ ಬಂದಿದ್ದೇವೆ..

    ಉತ್ತರ
    • ಮಾಯ್ಸ
      ಮಾರ್ಚ್ 28 2011

      ತಮಿಳಲ್ಲಿ, ಅವರ ನುಡಿಗೆ ಬೇಕಾದ ಎಲ್ಲಾ ಪದಗಳನ್ನು ಬರೆಯಬಹುದು.

      ಸಂಸ್ಕ್ತುತದಲ್ಲಿ ಕೆರೆ, ಕೊರೆ, ಒದೆ, ಹಳ್ಳಿ, zebra ಬರೆಯಲು ಪದ ಸೇರಿಸಿ ಅಂದರೆ ಮಂದಿ ನಗುವರು!

      ಉತ್ತರ
      • ಮಾಯ್ಸ
        ಮಾರ್ಚ್ 28 2011

        ಪದ ಅಲ್ಲ ಅಕ್ಕರ ಸೇರಿಸಿ ಎಂದಾಗ ಬೇಕು

        ಸಂಸ್ಕ್ರುತದಲ್ಲಿ ಎ, ಒ, Z, f, ಳ ಇಲ್ಲವಲ್ಲ.. !

        ಉತ್ತರ
        • ಮಾರ್ಚ್ 28 2011

          ನಾನು ಸಂಸ್ಕೃತದ ಪರವಾಗಿ ಅಥವ ತಮಿಳಿನ ವಿರುದ್ದವಾಗಿ ವಾದ ಮಾಡುತ್ತಿಲ್ಲ, ಆದರೆ ಭಾಷೆಯ ಪರಿಪೂರ್ಣತೆಗೆ “ಋ” ಬಿಟ್ಟು ನಮ್ಮ ಈಗಿನ ಅಕ್ಷರಮಾಲೆ ಸರಿಯಾಗಿದೆ ಎಂಬುದು ನನ್ನ ವಾದ..

          ಉತ್ತರ
          • ಮಾಯ್ಸ
            ಮಾರ್ಚ್ 29 2011

            ನಿಮ್ಮ ‘ವಾದ’ ಸರಿಯಿಲ್ಲ. ಶಂಕರಬಟ್ಟರ ಹೊತ್ತಗೆಗಳನ್ನು ಓದಿರಿ.

            ಉತ್ತರ
  35. Shubhashree
    ಮಾರ್ಚ್ 28 2011

    ಸಾರ್,

    ಯಾವ IDಗೆ ಕಳಿಸಬೇಕು? ತಿಳಿಸಿ.
    ನಾನೇ ಕಳಿಸಬೇಕೆಂದರೆ ನಾಳೆ ಸಂಜೆಗೇ ಆಗುವುದು.. ಆದೀತೆ?

    ವಿಶ್ವಾಸಿ

    ಶುಭಶ್ರೀ

    ಉತ್ತರ
    • ಮಾರ್ಚ್ 28 2011

      kannada.hanate@gmail.com ಗೆ ನಿಮ್ಮ ಲೇಖನ ಕಳಿಸಿಕೊಡಿ.
      ವಂದನೆಗಳು 🙂

      ಉತ್ತರ
    • Shubhashree
      ಮಾರ್ಚ್ 28 2011

      ತಮಿಳಿನ ಬಗ್ಗೆ ಅರಿಯದೇ ಮಾತಾಡಬೇಡಿ ಮನು ಅವರೇ,

      ತಮಿಳಿನ ಎಲ್ಲಾ ಪದಗಳನ್ನೂ ತಮಿಳರು ಸರಿಯಾಗಿ ಬಳಸುತ್ತಾರೆ. ಅವರಿಗೆ ಹೆಚ್ಚುವರಿ ಅಕ್ಷರ ಬೇಕೆಂದಿದ್ದರೆ ಅವರೇ ಮಾಡಿಕೊಳ್ಳುತ್ತಿದ್ದರು. ಈಗ ಶಂಕರ ಭಟ್ಟರು ತಮಿಳಿನಂತೆ ಮಾಡಿ ಎಂದು ಎಲ್ಲಿ ಹೇಳಿದ್ದಾರೆ ಎಂಬುದಕ್ಕೆ ದಾ.ಗಿರೀಶ್ ಅವರು ಸಾಕ್ಷಿ ಕೊಟ್ಟಮೇಲೆ ಆ ಬಗ್ಗೆ ಮಾತಾಡೋಣ. ಏಕೆಂದರೆ ಶಂಕರಭಟ್ಟರು ಕ, ಗ, ಚ, ಸ ಎಲ್ಲವನ್ನೂ ಇಟ್ಟುಕೊಳ್ಳುವಂತೇ ಹೇಳಿದ್ದಾರೆ. ಸುಮ್ಮನೆ ಸರಿಯಾಗಿ ಹೇಳಿದ್ದನ್ನು ಅರಿಯದೇ ಆರೋಪ ಮಾಡುವುದು ಯಾರಿಗೂ ತರವಲ್ಲ.

      ಉತ್ತರ
      • ಮಾಯ್ಸ
        ಮಾರ್ಚ್ 28 2011

        ಶುಬಶ್ರೀ.

        ನಿಮ್ಮ ಮಾತುಗಳು ಆಣಿಮುತ್ತಿನಂತೆ ತಿಳಿಯಾಗಿ ಹಾಗೂ ಗೆರೆಎಳೆದಂತೆ ತಕ್ಕವಾಗಿದೆ. ಚನ್ನಾಗಿದೆ ಮರುಮಾತು ಬರೆದಿದ್ದೀರಿ.

        ನನ್ನಿ.. ಒಳ್ಳೇದಾಗಲಿ!

        ಉತ್ತರ
      • ಮಾರ್ಚ್ 28 2011

        ಇಲ್ಲಿ ನಾನು ಹೇಳಿದ್ದು ಅಕ್ಷರಮಾಲೆ ಕಲಿಸುವ ಉಚ್ಚಾರಣೆಯ ಬಗ್ಗೆ, ನಾವು ಕೇವಲ ನಮ್ಮ ಪದಗಳಿಗೆ ಮಾತ್ರ ನಮ್ಮ ಭಾಷೆಯನ್ನು ಸೀಮಿತಗೊಳಿಸಿಕೊಂಡರೆ ಬೇರೆ ಪದಗಳ ಉಚ್ಚಾರಣೆಯನ್ನು ಕನ್ನಡದಲ್ಲಿ ಹೇಗೆ ಬರೆದು ತಿಳಿಸುವುದು, ನೀವು ಯಾರೇ ತಮಿಳಿನವರಿಂದ ಒಮ್ಮೆ ರಾಷ್ಟ್ರಗೀತೆಯನ್ನು ಹಾಡಿಸಿ, ಧೋಷ ಏನೆಂದು ಅರಿವಾಗತ್ತದೆ, ಅದು ಬಂಗಾಳಿ ಎಂದು ನೀವು ವಾದಿಸಬಹುದು ಆದರೆ ಯಾವುದೇ ಶಭ್ದವನ್ನು ಬರೆಯಲು ಮತ್ತು ಓದಲು ಆಗುವಂತಿರಬೇಕು ಆಗ ಭಾಷೆ ಪರಿಪೂರ್ಣಗೂಳ್ಳುತ್ತದೆ.. ಕನ್ನಡ ಶೇಕಡಾ ೯೯.೯೯ ಪರಿಪೂರ್ಣ ಭಾಷೆ ಎಂದು ಕರೆಯಲು ನಮ್ಮ ಶ್ರೀಮಂತ ಅಕ್ಷರಮಾಲೆ ಇಂದ.. ಯಾರೋ ಹೇಳಿದ್ದೆ ಸರಿ ಅಂತ ವಾದ ಮಾಡುವುದರ ಬದಲು ಒಮ್ಮೆ out of box ಯೋಚನೆ ಮಾಡಿ..

        ಉತ್ತರ
        • ಮಾರ್ಚ್ 28 2011

          ಅಲ್ಲ. ಮನು ಗೋರೂರ್.

          ’ಶ್ರೀಮಂತ ಅಕ್ಶರ ಮಾಲೆ’ ಅನ್ನುವುದು ಕೇವಲ ಕೇವಲ ಡೋಂಗಿತನ ಯಾಕಂದರೆ ’ಶ್ರೀಮಂತ’ ಬರಿಗೆಮಾಲೆ ’ಅಂತೆ ಹೇಳುವ’ ಸಕ್ಕದದಲ್ಲಿ ’ಱ್’, ’ೞ್’, F, Z, ಳ,ಎ,ಒ ಇಲ್ಲ. ಯಾಕಂದರೆ ಸಕ್ಕದಕ್ಕೆ ಅವು ಬೇಕಾಗಿಲ್ಲ. ಯಾವುದೇ ನುಡಿಗೆ ಅದನ್ನ ಆಡುವ ಮಂದಿಯಲ್ಲಿ ಆ ನುಡಿ ಹೇಗಿದೆ ಎನ್ನುವುದೇ ಮುಕ್ಯ ಹೊರತು ಸುಮ್ನೆ ಸಿಂಗಾರಕ್ಕೆ ಕ್ಕರಗಳನ್ನು ಸೇರಿಸುವುದಲ್ಲ. ಇದರಿಂದ ಬಳಕೆಗಿಂತ ಕೆಡುಕೇ ಹೆಚ್ಚು.

          ಉತ್ತರ
          • Anand
            ಮಾರ್ಚ್ 29 2011

            ಮನು,

            ಕನ್ನಡಿಗರು ರಾಷ್ಟ್ರಗೀತೆ ಹಾಡಿಸರೂ ಅದು ಕೆಟ್ಟದಾಗೇ ಉಚ್ಚರಿಸಲಾಗಿರುತ್ತೆ ಅಂತಾರೆ ಉತ್ತರದೋರು ಗೊತ್ತಾ? ನಾವು ಜನ ಗಣ ಮನ ಅಧಿನಾಯಕ ಜಯ ಹೇ ಅಂತೀವಿ, ಆದರೆ ಉತ್ತರದವರು ಜನ್ ಗಣ್ ಮನ್ ಅಧಿನಾಯಕ್ ಜಯ್ ಹೈ ಅಂತಾರೆ. ಇದಕ್ಕೇನಂತೀರಿ?

            ಉತ್ತರ
            • ಮಾಯ್ಸ
              ಮಾರ್ಚ್ 29 2011

              ಆನಂದ್..

              ಯುರೋಪಿನ ಒಂದು ನಾಡಲ್ಲಿದ್ದೀನಿ. ಇಲ್ಲೆಲ್ಲ ಒಂದು ನಾಡಲ್ಲಿ ಒಂದಕ್ಕಿಂತ ಹೆಚ್ಚು ನುಡಿಗಳಿದ್ದರೆ, ಅವರ ನಾಡ-ಹಾಡನ್ನು ಅವರವರು ತಮ್ಮದೇ ನುಡಿಯಲ್ಲಿ ಹಾಡುವ ಅನುವು ಇದೆ.

              ಮಾದರಿ ಬೆಲ್ಜಿಯಂನ ನಾಡ-ಹಾಡು!
              http://en.wikipedia.org/wiki/The_Braban%C3%A7onne

              ಹೀಗೆ ನಮ್ಮ ನಾಡಲ್ಲೂ ಆಗಬೇಕು.

              ಇನ್ನು ಜನ್ ಗಣ್ ಮನ್ ಅದೂ ಕೂಡ ತಪ್ಪು. ನಮ್ಮದು ಬೆಂಗಾಲಿ ನಾಡು-ಹಾಡು. ಅದು ಇರೋದೇ ಜೊನೊ ಗೊನೊ ಮೊನೊ ಎಂದು ..
              http://en.wikipedia.org/wiki/Jana_Gana_Mana

              ಉತ್ತರ
          • ಕನ್ನಡದ ಅಕ್ಷರಮಾಲೆ “ಸಿಂಗಾರಕ್ಕಾಗಿ” ಮಾತ್ರ ಇದೆ ಅನ್ನೋ ಮೊದಲು ಅಕ್ಷರ ಮಾಲೆಯ ಉದ್ದೇಶ ತಿಳಿದುಕೊಳ್ಳಿ. ಅಕ್ಷರಮಾಲೆ ಇರೋದೇ ಭಾಷೆಯೊಂದರಲ್ಲಿ ಬಳಕೆಯಿರುವ, ಬಳಕೆಯಿದ್ದ, ಬಳಸಲು ಸಾಧ್ಯವಾಗುವ ಎಲ್ಲ ಶಬ್ದಗಳನ್ನು ಬರಹದಲ್ಲಿ ಇಳಿಸೋಕ್ಕೆ. ಇಲ್ಲಿ “ಬಳಕೆಯಲ್ಲಿ ಇರುವ” ಅಂದರೆ ಕನ್ನಡದಲ್ಲಿ ಮಾತ್ರ ಬಳಕೆಯಲ್ಲಿ ಇರುವ ಅಂತ ಅಲ್ಲ. ಜನಾಂಗವೊಂದು ಮತ್ತೊಂದು ಜನಾಂಗದೊಂದಿಗೆ ಲೇವಾದೇವಿ ಮಾಡದೆ ಬದುಕೋಕ್ಕೆ ಬೆಳೆಯೋಕ್ಕೆ ಸಾಧ್ಯವೇ ಇಲ್ಲ. ಹಾಗಂದಮೇಲೆ ಭಾಷೆಯಲ್ಲೂ ಈ ಲೇವಾದೇವಿ ನಡೆದೇ ನಡೆಯುತ್ತೆ. ಆದ್ದರಿಂದ ಭಾಷೆಯೊಂದರಲ್ಲಿ ಕೇವಲ ಆ ಭಾಷೆಯಲ್ಲ ಅದರ ಸಂಪರ್ಕದಲ್ಲಿರುವ ಇತರ ಭಾಷೆಗಳನ್ನೂ ಉಲಿಯುವ/ಬರೆಯುವ ಸಾಮರ್ಥ್ಯ ಇದ್ದೇ ತೀರಬೇಕಾಗುತ್ತದೆ. ನಿಮಗೆ ಇಷ್ಟವಿದೆಯೋ ಇಲ್ಲವೋ, ಕನ್ನಡಕ್ಕೆ (ಮತ್ತು ಭಾರತದ ಅನೇಕ ಭಾಷೆಗಳಿಗೆ ಸಂಸ್ಕೃತದಲ್ಲಿ ಈ ರೀತಿ ಕೊಡು/ಕೊಳ್ಳುವಿಕೆಯ ಸಂಬಂಧ ಇದ್ದೇ ಇತ್ತು/ಇದೆ). ಆದ್ದರಿಂದ ಸಂಸ್ಕೃತದ ಬಹುತೇಕ ಉಚ್ಚಾರಣೆ ಈ ಭಾಷೆಗಳಲ್ಲೂ ಬಂತು. ಆದ್ದರಿಂದ ಬಹುತೇಕ ವರ್ಣಮಾಲೆಗಳು ಸಂಸ್ಕೃತ ವರ್ಣಮಾಲೆಯನ್ನು ಹೋತಿದ್ದು ಸಹಜ.

            ವರ್ಣಮಾಲೆಯ ಅಕ್ಷರಗಳು ತರ್ಕಬದ್ಧವಾಗಿ ಜೋಡಿಸಲ್ಪಟ್ಟಿವೆ (ಸ್ವರಗಳು, ವರ್ಗೀಯ ವ್ಯಂಜನಗಳು, ಅವರ್ಗೀಯ ವ್ಯಂಜನಗಳು etc). ಸಂಸ್ಕೃತದಲ್ಲಾಗಲಿ ಅಥವ ಬೇರೆ ಭಾಷೆಯಾಗಲೀ ಇದಕ್ಕಿಂತ ತರ್ಕಬದ್ಧವಾಗಿ ಅನುವಾಗಿಸಲು ಸಾಧ್ಯವೇ? ಆ ಕಾರಣದಿಂದ ಈ ವರ್ಣಮಾಲೆ ಕನ್ನಡದಲ್ಲಿ ಬಂದಿದೆಯೇ ಹೊರತು ಕುರುಡುಕುರುಡಾಗಿ ಸಂಸ್ಕೃತದಿಂದ ಕಾಪಿ ಹೊಡೆದದ್ದಾಗಲಿ ಯಾರೋ ಸಂಸ್ಕೃತದ ಬ್ರಾಹ್ಮಣರು(?) ಇಲ್ಲಿ ತುರುಕಿದ್ದಾಗಲಿ ಅಲ್ಲ. ಹಾಗೇನಾದರೂ ಆಗಿದ್ದರೆ ಸಂಸ್ಕೃತದ ಲೃ, ಜ್ಞ್ನ ಇತ್ಯಾದಿ ಅಕ್ಷರಗಳು ಕನ್ನಡ ವರ್ಣಮಾಲೆಯಲ್ಲೂ ಇರಬೇಕಿತ್ತಲ್ಲವೇ? ಮತ್ತೆ ಸಂಸ್ಕೃತದಲ್ಲಿಲ್ಲದ ಎ ಒ ಅಕ್ಷರಗಳು ನಮ್ಮಲ್ಲಿಲ್ಲವೇ? That is more than enough to show that we have adapted the best features and not ALL features.

            ಮತ್ತೆ ಇಂಗ್ಲಿಷಿನ f, z ಇತ್ಯಾದಿಗಳು ಕನ್ನಡದಲ್ಲಿ ಇಲ್ಲದೇ ಇರೋದಕ್ಕೂ ಅದೇ ಕಾರಣ, ಇಂಗ್ಲಿಷಿನೊಡನೆ traditional ಆಗಿ ಆ ಕೊಡುಕೊಳ್ಳುವಿಕೆ ಇರಲಿಲ್ಲ. ಅದೇನಿದ್ದರೂ ಇಂಗ್ಲಿಷರ ಪರಿಚಯವಾದಮೇಲೆ ಬಂದದ್ದು. ಅದಕ್ಕೆ ನಾವು ಫ, ಝ ಎಂದು ಬಳಸಿ ಸುಮ್ಮನಾಗುತ್ತೇವಾದರೂ ಅದು ಮೂಲವನ್ನು ಸರಿಯಾಗಿ ಉಲಿಯುವುದಿಲ್ಲ ಎಂಬುದನ್ನು ಗಮನಿಸಿ. ಕೇವಲ ಕನ್ನಡಲಿಪಿಯನ್ನು ನೋಡಿ ಇಂಗ್ಲಿಷ್ ಕಲಿತವರು ಈ f, z ಗಳನ್ನು ಉಲಿಯುವ ಅಧ್ವಾನವನ್ನು ನೋಡಿ, ಆಗ ನಿಮಗೇ ಗೊತ್ತಾಗುತ್ತದೆ. ಆದ್ದರಿಂದ ಹೀಗೆ ಫ, ಝ ಅಂತ ಅಡ್ಜಸ್ಟ್ ಮಾಡಿಕೊಳ್ಳುವಬದಲು ಕನ್ನಡದಲ್ಲಿ f, z ಗಳನ್ನು ಸಂಕೇತಿಸಲು ಅಕ್ಷರಗಳ ಸೇರ್ಪಡೆ ಮತ್ತೂ ಒಳ್ಳೆಯದಲ್ಲವೇ? ಹಾಗೆಂದು ಪ್ರಪಂಚದ ಎಲ್ಲ ಭಾಷೆ/ಉಚ್ಚಾರಣೆಗಳನ್ನೂ ಕನ್ನಡದಲ್ಲಿ ತರಬೇಕೇ ಅನ್ನಬೇಡಿ(“ಸಂಸ್ಕ್ತುತದಲ್ಲಿ ಕೆರೆ, ಕೊರೆ, ಒದೆ, ಹಳ್ಳಿ, zebra ಬರೆಯಲು ಪದ ಸೇರಿಸಿ ಅಂದರೆ ಮಂದಿ ನಗುವರು! – ಮಾಯ್ಸ) ನಾವು ಹೇಳುತ್ತಿರುವುದೇನಿದ್ದರೂ ಕನ್ನಡಕ್ಕೆ ದಿನಬಳಕೆಯ ಸಂಬಂಧವಿರುವ/ಇದ್ದ ಭಾಷೆಗಳಬಗ್ಗೆ ಮಾತ್ರ. (ಇಂಗ್ಲಿಷ್ ಅಕ್ಷರಗಳನ್ನು ಇಂಗ್ಲಿಷಿನಲ್ಲೇ ಬರೆಯುವುದಾದರೆ ನಮ್ಮದೇನು ತಕರಾರಿಲ್ಲ – ಕೈಲಾಸಂ ಈ ಪ್ರಯೋಗವನ್ನು ಆಗಲೇ ಮಾಡಿದ್ದಾರೆ). ನಾನು ನಿಸ್ಸಂದಿಗ್ಧ ಉಚ್ಚಾರಣೆಗಾಗಿ ಹೆಚ್ಚು ಅಕ್ಷರಗಳನ್ನು ಸೇರಿಸಿ ಅನ್ನುತ್ತಿದ್ದೇನೆ, ನೀವು ಒಂದೊಂದು ಅಕ್ಷರಕ್ಕೇ ಹತ್ತು ಹತ್ತು ಉಚ್ಚಾರಣೆಯನ್ನು ಅದುಕಿದರೂ ಪರವಾಗಿಲ್ಲ ವರ್ಣಮಾಲೆಗೆ ಕತ್ತರಿ ಹಾಕಿ ಅನ್ನುತ್ತೀರಿ. ಈಗಾಗಲೇ ಹೀಗೆ ರೆಕ್ಕೆಪುಕ್ಕ ಕತ್ತರಿಸಿಕೊಂಡ ತಮಿಳಿನಲ್ಲಿ ಉಚ್ಚಾರಣೆಯ ಅಧ್ವಾನವನ್ನು ನೋಡುತ್ತಿದ್ದೀರಲ್ಲವೇ? ತಮಿಳಿನಲ್ಲಿ ತಮಿಳನ್ನು ಸ್ಪಷ್ಟವಾಗಿ ಬರೆಯಬಹುದು, ಓದಬಹುದು (ಹೌದೇ? ಅದು ಬೇರೆಯೇ ಚರ್ಚೆ), ಆದರೆ ಅದಕ್ಕೆ ದಿನನಿತ್ಯ ಸಂಬಂಧವಿರುವ ಬೇರೆ ಉಚ್ಚಾರಣೆಯನ್ನು ಮಾಡುವುದಾಗಲೀ ಕೊನೆಯಪಕ್ಷ ಅರ್ಥವಾದರೂ ಮಾಡಿಕೊಳ್ಳುವುದಾಗಲಿ ಸಾಧ್ಯವೇ ತಮಿಳು ಲಿಪಿಯಿಂದ? ಸುಮ್ಮನೇ ಉದಾಹರಣೆಗೆ ಹೇಳುತ್ತೇನೆ, ನನಗೆ ಗೊತ್ತಿರುವ ಒಬ್ಬ ತಮಿಳು ಗೆಳೆಯನ (ಗಮನಿಸಿ ಹೊರಗಿನವನಲ್ಲ) ಹೆಸರು ಸುಖರಾಜ್. ಅದನ್ನು சுகராச் ಎಂದು ಬರೆದು ಚುಗರಾಚ್ ಎಂದು ಉಚ್ಚರಿಸುತ್ತಾರೆ. ಮತ್ತೆ ಇಂಗ್ಲಿಷಿನಲ್ಲಿ ಬರೆಯುವಾಗ chuharas ಎಂದು ಬರೆಯುತ್ತಾರೆ. ತಮಿಳು ಗೊತ್ತಿಲ್ಲದ ನನ್ನಂಥವರು ಅದನ್ನು ಚುಹರಸ್ ಎಂದು ಓದುತ್ತೇವೆ. ಅದು ಅವರಿಗೆ ಅಸಹ್ಯವಾಗಿ ಕೇಳುತ್ತದೆ. ನನ್ನ ಮತ್ತೊಬ್ಬ ಮಲೇಶಿಯನ್ ತಮಿಳು ಸಹೋದ್ಯೋಗಿಯ ಹೆಸರು “ಕೂಗ”. ಸುತ್ತಮುತ್ತ ತಮಿಳು ಪರಿಸರವಿಲ್ಲದಿದ್ದುದರಿಂದ ಸುಮಾರು ಒಂದಾರು ತಿಂಗಳು ಇದೇನು ಹೆಸರು, ಇದರ ಅರ್ಥ ಏನು ಎಂದು ತಲೆಕೆಡಿಸಿಕೊಂಡದ್ದುಂಟು. ಆ ವ್ಯಕ್ತಿ ವಿದೇಶದಲ್ಲಿದ್ದುದರಿಂದ ಅವರೊಂದಿಗೆ ಮಾತುಕೂಡ ಆಡಿರಲಿಲ್ಲ. ಕೊನೆಗೊಮ್ಮೆ ಮತ್ತೊಂದು ತಮಿಳು ನಾಲಗೆ ಅದನ್ನು ಕುಖಾ ಎಂದು ನುಡಿದಾಗ ತಲೆಗೆ ಹೊಳೆಯಿತು, ಅದರ ಮೂಲ “ಗುಹ”. ಮುಂದೆ ಆ ವ್ಯಕ್ತಿಯನ್ನು ನಾನು ಮಾತಾಡಿಸುವಾಗ ಗುಹಾ ಎಂದು ಸಂಬೋಧಿಸಿದ, ಅವನಿಗಾದ ಆನಂದ ಅಷ್ಟಿಷ್ಟಲ್ಲ “ಇಷ್ಟುದಿನಕ್ಕೆ ನನ್ನ ಹೆಸರನ್ನು ಸರಿಯಾಗಿ ಕರೆದವನು ನೀನೊಬ್ಬನೇ” ಎಂದು ಖುಷಿಪಟ್ಟ. ಲಿಪಿ/ಲಿಪಿಯಂತರದ ಅವಾಂತರದಿಂದ ನಾವು ಅವರ ಹೆಸರುಗಳನ್ನು ಅಧ್ವಾನ ಮಾಡಿದಂತೆಯೇ ಅವರೂ ಮಾಡುತ್ತಾರೆ. ಬೆಂಗಳೂರು ಪೆಂಕಳೂರಾಗುತ್ತದೆ; ಮಂಜುನಾಥ ಮಂಜುನಾದ ಆಗುತ್ತದೆ… I am sorry, I can’t take my name mis-spelt like that. ನೀವೆಲ್ಲಾ ನಮ್ಮ ಮುದ್ದುಕನ್ನಡಕ್ಕೆ ಮಾಡಹೊರಟಿರುವುದು ಅದನ್ನೇ. ಬೇಕಾ?

            ಉತ್ತರ
            • ಏಪ್ರಿಲ್ 1 2011

              ಖಂಡಿತಾ ಬೇಡ, ಇವರೂ ಸಾಕು, ಇವರ ಸುಧಾರಣೆಯೂ ಸಾಕು… ನಮ್ಮಷ್ಟಕ್ಕೆ ನಮ್ಮನ್ನು ಬಿಟ್ಟುಬಿಡಲಿ

              ಉತ್ತರ
            • Narendra Kumar.S.S
              ಏಪ್ರಿಲ್ 1 2011
            • ಮಾಯ್ಸ
              ಏಪ್ರಿಲ್ 8 2011

              “ವರ್ಣಮಾಲೆಯ ಅಕ್ಷರಗಳು ತರ್ಕಬದ್ಧವಾಗಿ ಜೋಡಿಸಲ್ಪಟ್ಟಿವೆ (ಸ್ವರಗಳು, ವರ್ಗೀಯ ವ್ಯಂಜನಗಳು, ಅವರ್ಗೀಯ ವ್ಯಂಜನಗಳು etc). ಸಂಸ್ಕೃತದಲ್ಲಾಗಲಿ ಅಥವ ಬೇರೆ ಭಾಷೆಯಾಗಲೀ ಇದಕ್ಕಿಂತ ತರ್ಕಬದ್ಧವಾಗಿ ಅನುವಾಗಿಸಲು ಸಾಧ್ಯವೇ?”

              ಸಂಸ್ಕೃತದ ವರ್ಣಮಾಲೆ ಮಾಹೇಶ್ವರ ಸೂತ್ರದ ಮೇಲೆ, ಸಂಸ್ಕೃತ ಸಂಧಿಗಳನ್ನಾಧರಿಸಿ ಇರುವುದು.

              ಕನ್ನಡಕ್ಕೆ ಅದು ಒಗ್ಗುವುದಿಲ್ಲ.

              ಹೆಚ್ಚಿನ ಮಾಹಿತಿಗೆ ಶಂಕರಬಟ್ಟರ ಹೊತ್ತಗೆಗಳು.!

              ಉತ್ತರ
              • ಸಂಸ್ಕೃತದ ವರ್ಣಮಾಲೆ ಮಾಹೇಶ್ವರ ಸೂತ್ರವನ್ನು ಆಧರಿಸಿದ್ದೋ ಶನೀಶ್ವರ ಸೂತ್ರವನ್ನೋ ಅದು ನಮಗಿಲ್ಲಿ ಅಪ್ರಸ್ತುತ. ಕನ್ನಡದ ಇವತ್ತಿನ ವರ್ಣಮಾಲೆ ಕನ್ನಡದ ಭಾಷಾ ಅಗತ್ಯಗಳಿಗೆ ತಕ್ಕಂತೆ ತರ್ಕಬದ್ಧವಾಗಿಲ್ಲವೇ ಅನ್ನುವುದಷ್ಟೇ ಪ್ರಶ್ನೆ. ಕನ್ನಡದ ಭಾಷಾ ಅಗತ್ಯಗಳು, ಅದರ ನೆಲೆ ಇವುಗಳಬಗ್ಗೆ ಈಗಾಗಲೇ ಶುಭಶ್ರೀಯವರಿಗೆ ನೀಳೊಲೆ ಬರೆದಿದ್ದೇನೆ, ಓದಿಕೊಳ್ಳಬಹುದು. ನನ್ನ, ಕನ್ನಡ ವರ್ಣಮಾಲೆ ಕುರಿತ ನಿಲುವು ಆ ಹಿನ್ನೆಲೆಯದು. ಸಂಸ್ಕೃತದಿಂದ ಅದನ್ನು ತಂದಿದ್ದರೆ, ಅದು ಕನ್ನಡಕ್ಕೆ ಪ್ರಸ್ತುತವಾಗಿರುವವರೆಗೂ ನನ್ನ ತಕರಾರಿಲ್ಲ. ಅಲ್ಲದೆ ಇದು ಸಂಸ್ಕೃತದಿಂದ ಸಾರಾಸಗಟಾಗಿ ಇಳಿದಿದ್ದಲ್ಲ ಎಂದು ಮತ್ತೊಂದುಕಡೆ ನಿರೂಪಿಸಿದ್ದೇನೆ. ಅದರಬಗ್ಗೆ ಚರ್ಚಿಸುವುದಾದರೆ ಸಂತೋಷ.

                ಅದುಬಿಟ್ಟು ಸಂಸ್ಕೃತದ ವರ್ಣಮಾಲೆ ಮಾಹೇಶ್ವರ ಸೂತ್ರದ ಮೇಲೆ ನಿಂತಿದ್ದು, ಆದ್ದರಿಂದ ಕನ್ನಡದ ಈಗಿನ ವರ್ಣಮಾಲೆ (ಅದರ ತರ್ಕಬದ್ಧವಾದ ಪ್ರಸ್ತುತತೆಯನ್ನೂ ಕಡೆಗಳಿಸಿ) ಕನ್ನಡಕ್ಕೆ ಒಗ್ಗುವುದಿಲ್ಲ ಅಂದರೆ, ನಿಮ್ಮ ಅನಿಸಿಕೆಯ ಸ್ವಾತಂತ್ರಕ್ಕೆ ನನ್ನ ಮರಿಯಾದೆಯನ್ನಷ್ಟೇ ತೋರಬಲ್ಲೆನೇಹೊರತು, ಆ ಅನಿಸಿಕೆಯಲ್ಲಿ ತರ್ಕವಿಲ್ಲ ಎನ್ನಬೇಕಾಗುತ್ತದೆ.

                ಉತ್ತರ
  36. ಮಾರ್ಚ್ 29 2011

    ನಿಲುಮೆ,
    ನಮಗೆಲ್ಲರಿಗೂ ಶಂಕರಬಟ್ಟರ ಬಗ್ಗೆ ಅವರ ಕಲಿಕೆ, ಅರಕೆ ಮತ್ತು ಪಡೆಪಿನ ಬಗ್ಗೆ ಅರಿವಿದೆ. ಆದರೆ ಅಜಕ್ಕಳ ಗಿರೀಶ ಬಟ್ಟರ ಬಗ್ಗೆ ತಿಳಿದುಕೊಳ್ಳಬೇಕೆನಿಸುತ್ತಿದೆ ಯಾಕಂದರೆ ಒಂದು ವಾದವನ್ನ ಇದಿರಿಸುವುದಕ್ಕೆ ಇರುವ ಬೇಕಾದ ಹಿನ್ನಲೆ, ತಕ್ಕುಮೆ ಮತ್ತು ಆರ್ಪು ಅವರಲ್ಲಿದಿಯೇ ಎಂದು ತಿಳಿದುಕೊಳ್ಳಬೇಕು. ಅದಕ್ಕಾಗಿ ನಿಲುಮೆಯು ದಯವಿಟ್ಟು ಈ ಕೇಳ್ವಿಗಳಿಗೆ ಮಾರುಲಿಯಬೇಕಾಗಿ ಕೋರಿಕೆ

    ಕೆಲವು ಕೇಳ್ವಿಗಳು

    -> ಗಿರೀಶರು ನುಡಿಯರಿಗರೆ? ಕಲಿಕೆಯರಿಗರೆ? ಸೊಲ್ಲರಿಗರೆ? – ಅವರ ಓದು, ಕಲಿಕೆಯಲ್ಲಿ ಪಡೆದ ಹೆಗ್ಗಳಿಕೆಗಳ ಪಟ್ಟಿ.
    -> ಗಿರೀಶರ ನುಡಿಯರಿಮೆ ಇಲ್ಲವೆ ಸೊಲ್ಲರಿಮೆಯಲ್ಲಿ ಮಾಡಿರುವ ಅರಕೆ/ಸಂಶೋದನೆಗಳು ಎಂತಹವು? ಅವರು ಬರೆದಿರುವ ಹೊತ್ತಗೆಗಳ ಪಟ್ಟಿ

    ಉತ್ತರ
    • ಮಾಯ್ಸ
      ಮಾರ್ಚ್ 29 2011

      http://kendasampige.com/writer_profile.php?id=322

      ಅಜಕ್ಕಳ ಗಿರೀಶ್ ಭಟ್
      ಸದ್ಯಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಂಟ್ವಾಳ ಇಲ್ಲಿ ಕನ್ನಡ ಉಪನ್ಯಾಸಕ.
      ಎಂ.ಎ. (ಕನ್ನಡ) ಮಂಗಳೂರು ವಿ.ವಿ. -೧೯೯೩.
      ಎಂ.ಎ. (ಇಂಗ್ಲಿಷ್) ಮೈಸೂರು ವಿ.ವಿ. -೧೯೯೫.
      ಡಿ. ಆರ್. ನಾಗರಾಜರ ಆಧುನಿಕತೆಯ ವ್ಯಾಖ್ಯಾನ ಎಂಬ ವಿಷಯದ ಬಗ್ಗೆ ಮಂಗಳೂರು ವಿ.ವಿ. ಪ್ರಾಧ್ಯಾಪಕರಾದ
      ಡಾ.ಬಿ.ಶಿವರಾಮ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ.-೨೦೦೬.
      ” ಇಂಗ್ಲಿಷನ್ನು ಪಳಗಿಸೋಣ” ಮತ್ತು “ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ” ಪುಸ್ತಕಗಳು ಪ್ರಕಟಿ

      ಸಂಸ್ಕೃತಿ
      ಬಸವಣ್ಣನ ವಚನದ ಒಂದು ಮರು ಓದು
      ಈಗಿನ ಕನ್ನಡ ಬರಹ ಮತ್ತೆ ಹಳೆಗಾಲಕ್ಕೆ ಹೋಗಬೇಕೆ?
      ಸಂಪಿಗೆ ಸ್ಪೆಷಲ್
      ಮುಸ್ಲಿಂ ಕೋಮುವಾದವೂ, ಹಿಂದೂ ಕೋಮುವಾದವೂ

      ಉತ್ತರ
      • ಮಾರ್ಚ್ 29 2011

        ಅಜಕ್ಕಳ ಗಿರೀಶ್ ಬಟ್ಟರ ಬಗ್ಗೆ ಮಾಯ್ಸರವರು ಕೊಟ್ಟಿರುವ ಅರಿಮೆ ದಿಟವಾದರೆ ಇವರು ನುಡಿಯರಿಗರಲ್ಲ, ಸೊಲ್ಲರಿಗರೂ ಅಲ್ಲ. ಅಂದ ಮೇಲೆ ಇವರು ನುಡಿಯರಿಮೆ/ಸೊಲ್ಲರಿಮೆಯ ಬಗ್ಗೆ ಮಾತನಾಡಲು ತಕ್ಕವರೆ ಅಂತ ಈ ಬ್ಲಾಗ್ ಓದುಗರು ಮತ್ತು ನಿಲುಮೆ ತಂಡದವರು ಉಂಕಿಸಲಿ.

        ಯಾವುದೇ ಬೇನೆಯ/ರೋಗದ ಬಗ್ಗೆ ತಿಳಿಯಲು ಮಾಂಜುಗರ(ಡಾಕ್ಟರ್)ಮಾತನ್ನು ಕೇಳುವ ನಾವು ನುಡಿಯರಿಮೆ ಬಗ್ಗೆ ತಿಳಿದುಕೊಳ್ಳಲು ಹಿರಿಯ ನುಡಿಯರಿಗರ ಮಾತನ್ನು ಕೇಳಬೇಕು.
        ಇದು ಸಾಮಾನ್ಯ ತಿಳುವಳಿಕೆ(common sense)ಅಂತ ನಿಲುಮೆಯವರು ತಿಳಿದುಕೊಂಡರೆ ಒಳ್ಳೆಯದು.

        ಉತ್ತರ
        • ಮಾಯ್ಸ
          ಮಾರ್ಚ್ 29 2011

          ತಕ್ಕವಾದುದು!

          ಉತ್ತರ
        • ಮಾರ್ಚ್ 29 2011

          ಭರತ್,

          ನಿಲುಮೆಯಲ್ಲಿ ಪ್ರಖ್ಯಾತರೆ ಬರೆಯಬೇಕು ಅಂತ ಕಟ್ಟಳೆಯನ್ನ ನಾವಂತೂ ವಿಧಿಸಿಕೊಂಡಿಲ್ಲ.ವಿಧಿಸಿಕೊಳ್ಳುವುದು ಇಲ್ಲ.ಹಾಗೆ ಇಲ್ಲಿ ಬರುವ ಲೇಖನಗಳು ಎಲ್ಲರನ್ನು ಮೆಚ್ಚಿಸಲು ಸಾಧ್ಯವೂ ಇಲ್ಲ.ನಿಮಗೆ ಇಷ್ಟವಾಗದ ವಿಷಯ ಅನ್ನಿಸಿದರೆ ಅದಕ್ಕೆ ನಿಲುಮೆ ಹೊಣೆಯಾಗಲಾರದು.ನಿನ್ನೆಯ ಪ್ರತಿಕ್ರಿಯೆಯೊಂದರಲ್ಲಿ ಹೇಳಿದಂತೆ ವಿಭಿನ್ನ ನಿಲುವುಗಳಿಗೆ ದನಿಯಾಗ ಹೊರಟವರು ನಾವು.

          ಕಾಳು ಯಾವುದು?ಜೊಳ್ಳು ಯಾವುದು? ಅನ್ನುವುದು ತೀರ್ಮಾನವಾಗಲಿ.ಅದನ್ನ ಬಿಟ್ಟು,ಈ ಲೇಖನ ಪ್ರಕಟಿಸಿದ್ದು ಮಹಾನ್ ಅಪರಾಧವೆನೋ ಎಂಬಂತೆ ನಿಲುಮೆಯ ನಿಲುವುನ್ನ ಪ್ರಶ್ನಿಸುವವರೆಲ್ಲರಿಗೂ ಒಂದು ಮಾತನ್ನ ಹೇಳಲಿಚ್ಚಿಸುತ್ತೇವೆ.ತಾವುಗಳು ಇಲ್ಲಿ ಬರೆಯಲು ಸ್ವತಂತ್ರರು(ಹಾಗೆ,ಬರಹಕ್ಕೆ ಕತ್ತರಿ ಪ್ರಯೋಗ ಮಾಡುವ ಅಭ್ಯಾಸ ನಮ್ಮದಲ್ಲ,ಹಾಗಾಗಿ ಬರಹಗಾರರೆ ತಮ್ಮ ಬರಹದ ಮೌಲ್ಯದ ಬಗ್ಗೆ ಯೋಚಿಸುವುದು ಒಳ್ಳೆಯದು).ನಿನ್ನೆಯ ಕೆಲ ಪ್ರತಿಕ್ರಿಯೆಗಳು ಸಹ ಹೀಗೆ ಇದ್ದವು.ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯಗಳನ್ನ ಮಂಡಿಸುವ ಹಕ್ಕು ಎಲ್ಲರದ್ದು.ಮತ್ತು ಅಂತ ಹಕ್ಕುಗಳ ಮಂಡನೆಗೆ ನಿಲುಮೆ ಎಂದಿಗೂ ಜೊತೆಯಾಗಿ ನಿಲ್ಲಲಿದೆ.

          ನಿಮ್ಮೊಲುಮೆಯ,

          ನಿಲುಮೆ

          ಉತ್ತರ
          • ಮಾರ್ಚ್ 29 2011

            ನಿಲುಮೆ,
            ನಾನು ಬರೆದಿರುವುದನ್ನ ಮತ್ತೊಮ್ಮೆ ಓದಿ
            “ಬ್ಲಾಗ್ ಓದುಗರು ಮತ್ತು ನಿಲುಮೆ ತಂಡದವರು ಉಂಕಿಸಲಿ.”

            ನಾನು “ಉಂಕಿಸಿ” ಅಂತ ಹೇಳಿರುವುದಶ್ಟೆ, ನೀವು ಯಾವ ಬರಹವನ್ನಾದರೂ ಹೊರತನ್ನಿ. ನನ್ನ ಅಡತಡೆ ಇಲ್ಲ. ಸೊಲ್ಲರಿಮೆ/ನುಡಿಯರಿಮೆ ಯಾರು ಬೇಕಾದರೂ ಬಂದು ಮಾತನಾಡುವ ಒಂದು ವಿಶಯವಲ್ಲ ಅದಕ್ಕೆ ತಕ್ಕ ಓದು, ದುಡಿಮೆ ಬೇಕು ಎಂಬುದನ್ನ ತಿಳಿಯಪಡಿಸಲು ನಾನು ಹೇಳಬೇಕಾಗಿತ್ತು, ಹೇಳಿದ್ದೇನೆ.

            ಒಬ್ಬ Cardialogist ಆಗಕ್ಕೆ ಎಶ್ಟು ದುಡಿಮೆ/ಕಲಿಕೆ ಬೇಕೊ ಅಶ್ಟೆ ದುಡಿಮೆ/ಕಲಿಕೆ ಒಬ್ಬ ನುಡಿಯರಿಗನಾಗಲು ಬೇಕಾಗುತ್ತದೆ ಎಂಬುದು ನೆನಪಿರಲಿ.

            ವಿಶಯಕ್ಕೆ ತಕ್ಕ ಕಲಿಕೆ/ದುಡಿಮೆ ಇರುವವರು ಬರೆದ ಬರಹ ಮೇಲ್ಮಟ್ಟದಾಗಿರುತ್ತದೆ ಎಂಬುದನ್ನ ಬಿಡಿಸಿ ಹೇಳಬೇಕಾಗಿಲ್ಲ. ನಿಲುಮೆ ಒಂದು ಒಳ್ಳೆ ಬರಹಗಳ ತಾಣವಾಗಲಿ ಎಂಬ ಕಾಳಜಿ ಇರುವದರಿಂದಲೇ ನಾನು ಹೇಳಬೇಕಾಯಿತು

            ನಲ್ಮೆ,
            ಬರತ್

            ಉತ್ತರ
        • ತಮಾಷೆಯಾಗಿದೆ. ಇದೊಳ್ಳೇ, ಹೆತ್ತು ಅಭ್ಯಾಸವಿಲ್ಲದವರು ಹೆರಲೇ ಬಾರದು ಅಂದಂತಾಯಿತು

          ಉತ್ತರ
          • ಏಪ್ರಿಲ್ 9 2011

            ಱ್, ೞ್ ಗೊತ್ತಿರದ ಅಂದರೆ ಕನ್ನಡ ನುಡಿ ಹಿನ್ನಡಾವಳಿ/ಚರಿತ್ರೆ ತಿಳಿಯದವರು ಕನ್ನಡದಲ್ಲಿ ಎಶ್ಟು ಬರಿಗೆಗಳಿರಬೇಕು ಅನ್ನುವುದನ್ನ ಹೇಳಲು ತಕ್ಕವರೆ?

            ಉತ್ತರ
            • ಬರತಕುಮಾರ,

              “ಱ್, ೞ್ ಗೊತ್ತಿರದ”ವರು “ಕನ್ನಡ ನುಡಿ ಹಿನ್ನಡಾವಳಿ/ಚರಿತ್ರೆ ತಿಳಿಯದವರು” ಅಂತ ನಿಮ್ಮ ತಲೆಗೆ ಯಾಕೆ ಹೋಯಿತೋ ನಾನು ಬೇರೆ ಕಾಣೆ. ಮತ್ತೆ, ಱ್, ೞ್ ಬಗ್ಗೆ ಮೊದಲೇ ಹೇಳಿದೆ, ಈ ಅಜ್ಞಾನಕ್ಕೆ ನನ್ನು ಹೀಯಾಳಿಸುವುದರ ಬದಲು ನನ್ನ ಕಲಿಕೆಯಿಂದ ಈ ಎರಡು ಅಕ್ಷರಗಳನ್ನು ಕದ್ದ ಕಳ್ಳರನ್ನು ಹೀಯಾಳಿಸಿ. ಮತ್ತೆ ಇದೇ ತೋರಿಸುತ್ತದೆ, ನೀವು ಈಗ ಮಾಡಲು ಹೊರಟಿರುವ ಕೆಲಸ (ಅಕ್ಷರಚೌರ್ಯ) ಅದೆಂಥ ಹೀನಾಯದ್ದು ಅಂತ. ಇವತ್ತು ನನ್ನನ್ನು ಎರಡು ಅಕ್ಷರಗಳಿಗೆ ಹೀಯಾಳಿಸುತ್ತಿರುವಂತೆ ಮುಂದೆ ಇಡೀ ಪೀಳಿಗೆಗಳನ್ನೇ ಹೀಯಾಳಿಸುವ ಹುನ್ನಾರ ನಿಮ್ಮವರದಿದ್ದಂತೆ ತೋರುತ್ತೆ. ಅಲ್ವಾ? ಜನ ಇದನ್ನ ಸುಲಭವಾಗಿ ಅರ್ಥಮಾಡಿಕೊಳ್ತಾರೆ ಬಿಡಿ.

              ಉತ್ತರ
    • ಮಾಯ್ಸ
      ಮಾರ್ಚ್ 29 2011

      http://ellarakannada.org/parichaya.html

      ಡಿ. ಎನ್. ಶಂಕರಭಟ್

      ಇಡೀ ಹೆಸರು
      ದರ್ಭೆ ನಾರಾಯಣಭಟ್ ಶಂಕರಭಟ್
      ಹುಟ್ಟು
      15 ಜುಲೈ 1935
      ಪುತ್ತೂರು, ಕರ್ನಾಟಕ, ಭಾರತ

      ವಿದ್ಯಾರ್ಹತೆ
      ನಾಡೋಜ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2010
      ಇಂಗ್ಲೇಂಡಿನಲ್ಲಿ ಬ್ರಿಟಿಷ್ ಕೌನ್ಸಿಲ್ ಫೆಲೋ ಆಗಿ ಒಂದು ವರ್ಷ ಒಳನುಡಿ ಸರ್ವೇಕ್ಷಣ ವಿಧಾನಗಳ ಕಲಿಕೆ, 1966.
      ಪಿ.ಎಚ್.ಡಿ (ನುಡಿಯರಿಮೆ), ಪುಣೆ ವಿಶ್ವವಿದ್ಯಾಲಯ, 1962
      ಎಂ.ಎ. (ಸಂಸ್ಕೃತ), ಮದ್ರಾಸ್ ವಿಶ್ವವಿದ್ಯಾಲಯ, 1960
      ಹುದ್ದೆಗಳಲ್ಲಿದ್ದಿದ್ದು
      ಅತಿಥಿ ವಿಜ್ಞಾನಿ, ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್, ಲೈಪ್ಸಿಗ್, ಜರ್ಮನಿ, ಜನವರಿ-ಜುಲೈ 2001
      ವಿಸಿಟಿಂಗ್ ಫೆಲೋ, ಸೆಂಟರ್ ಫಾರ್ ಟೈಪೊಲಾಜಿಕಲ್ ಸ್ಟಡೀಸ್, ಲಾ ಟ್ರೋಬೆ ವಿಶ್ವವಿದ್ಯಾಲಯ, ಬಂಡೂರ (ಮೆಲ್ಬರ್ನ್), ಆಸ್ಟ್ರೇಲಿಯಾ, ಆಗಸ್ಟ್-ಅಕ್ಟೋಬರ್ 2000
      ವಿಸಿಟಿಂಗ್ ಸ್ಕಾಲರ್, ಆಂಟ್ವೆರ್ಪ್ ವಿಶ್ವವಿದ್ಯಾಲಯ, ಬೆಲ್ಜಿಯಂ, ಜುಲೈ-ಡಿಸೆಂಬರ್ 1997
      ಸಂಶೋಧನಾ ವಿಜ್ಞಾನಿ, ಯು.ಜಿ.ಸಿ., ಭಾರತೀಯ ಭಾಷಾ ಸಂಸ್ಥಾನ, ಮೈಸೂರಿನೊಡನೆ, 1988-95
      ನುಡಿಯರಿಮೆಯ ಪ್ರೊಫೆಸರ್, ಮಣಿಪುರ ವಿಶ್ವವಿದ್ಯಾಲಯ, ಇಂಫಾಲ್, 1985-88
      ನುಡಿಯರಿಮೆಯ ಪ್ರೊಫೆಸರ್, ಐ.ಎಸ್.ಡಿ.ಎಲ್, ತಿರುವನಂತಪುರಂ, 1979-85
      ಟಿಬೆಟೋ-ಬರ್ಮನ್ ರೀಡರ್, ಡೆಕನ್ ಕಾಲೇಜು, ಪುಣೆ, 1965-79
      ರಿಸರ್ಚ್ ಅಸೋಸಿಯೇಟ್, ಲ್ಯಾಂಗ್ವೇಜ್ ಯುನಿವರ್ಸಲ್ಸ್ ಯೋಜನೆ, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ, ಸ್ಟ್ಯಾನ್ಫೋರ್ಡ್, ಯು.ಎಸ್.ಎ., 1973-5
      ಸಂಶೋಧನೆ ನೆರವಿಗ, ಮರಾಠಿ ಒಳನುಡಿ ಸರ್ವೇಕ್ಷಣ ಯೋಜನೆ, ಡೆಕನ್ ಕಾಲೇಜು, ಪುಣೆ, 1963
      ದ್ರಾವಿಡನುಡಿಗಳ ಲೆಕ್ಚರರ್, ಪುಣೆ ವಿಶ್ವವಿದ್ಯಾಲಯ, 1963
      ಕೆಲವು ಹೊತ್ತಗೆಗಳು
      ಇಂಗ್ಲಿಷ್ ಪದಗಳಿಗೆ ಕನ್ನಡದ್ದೇ ಪದಗಳು, ಭಾಷಾ ಪ್ರಕಾಶನ, ಹೆಗ್ಗೋಡು, 2009
      ಮಾತಿನ ಒಳಗುಟ್ಟು, ಭಾಷಾ ಪ್ರಕಾಶನ, ಹೆಗ್ಗೋಡು, 2009
      ಕನ್ನಡ ನುಡಿ ನಡೆದು ಬಂದ ದಾರಿ, ಭಾಷಾ ಪ್ರಕಾಶನ, ಹೆಗ್ಗೋಡು, 2007
      ಕನ್ನಡ ಬರಹವನ್ನು ಸರಿಪಡಿಸೋಣ, ಭಾಷಾ ಪ್ರಕಾಶನ, ಮೈಸೂರು, 2005
      ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?, ಭಾಷಾ ಪ್ರಕಾಶನ, ಮೈಸೂರು, 2005
      Pronouns: A Cross Linguistic Study, Oxford, Oxford University Press, 2004
      ಕನ್ನಡ ವಾಕ್ಯಗಳ ಒಳರಚನೆ, ಭಾಷಾ ಪ್ರಕಾಶನ, ಮೈಸೂರು, 2004
      ಕನ್ನಡ ಸರ್ವನಾಮಗಳು, ಭಾಷಾ ಪ್ರಕಾಶನ, ಮೈಸೂರು, 2003
      ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಭಾಷಾ ಪ್ರಕಾಶನ, ಮೈಸೂರು, 2000
      Introducing grammatical notions, University of Pune, Pune, 2000
      The prominence of tense, aspect and Mood: a new basis for language typology, John Benjamins, Amsterdam, 1999.
      ಕನ್ನಡ ಶಬ್ದರಚನೆ, ಕ್ರೈಸ್ತ ಕಾಲೇಜು, ಕನ್ನಡ ಸಂಘ, ಬೆಂಗಳೂರು, 1999. ತಿದ್ದಿದ ಮುಂದಿನ ಒಬ್ಬೆ: ಕನ್ನಡ ಪದಗಳ ಒಳರಚನೆ, ಭಾಷಾ ಪ್ರಕಾಶನ, ಮೈಸೂರು, 2002.
      Manipuri grammar (written jointly with M.S. Ningomba), Lincom Europa, Munich, 1997
      The adjectival category, John Benjamins, Amsterdam, 1994
      Grammatical relations, Routledge, London, 1991. Reprinted by Bejing World Publishers, Bejing in 1992.
      An introduction to linguistics, Teachers’ Forum, Imphal. 1986
      Identification, Dravidian Linguistics Association, Trivandrum, 1981
      Referents of noun phrases, Deccan College, Pune, 1979
      ಕನ್ನಡ ವಾಕ್ಯಗಳು, ಗೀತಾ ಬುಕ್ ಹೌಸ್, ಮೈಸೂರು, 1978
      Pronominalization, Deccan College, Pune, 1978
      Sound change, Bhasha Prakashan, Pune, 1972, Revised edition, published by Motilal Banarsidass, New Delhi, 1999.
      The Koraga language, Deccan College, Pune, 1971
      Outline grammar of Havyaka, Deccan College, Pune, 1971
      ಭಾಷೆಯ ಬಗೆಗೆ ನೀವೇನು ಬಲ್ಲಿರಿ?, ಭಾಷಾ ಪ್ರಕಾಶನ, ಪುಣ, 1970, ತಿದ್ದಿದ ಎರಡನೆ ಒಬ್ಬೆ: ಕನ್ನಡ ಸಂಘ, ಪುತ್ತೂರು, 1998; ತಿದ್ದಿದ ಮೂರನೆ ಒಬ್ಬೆ: ಭಾಷಾ ಪ್ರಕಾಶನ, 2002.
      ಕನ್ನಡ ಭಾಷೆಯ ಸಂಕ್ಷಿಪ್ತ ಚರಿತ್ರೆ, ಭಾಷಾ ಪ್ರಕಾಶನ, ಪುಣೆ, 1970; ತಿದ್ದಿದ ಒಬ್ಬೆ: ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1995.
      Tankhur Naga vocabulary, Deccan College, Pune, 1969
      Boro grammar and vocabulary, Deccan College, Pune, 1968
      Descriptive analysis of Tulu, Deccan College, Pune, 1967.
      ವೈಜ್ಞಾನಿಕ ಪೇಪರುಗಳು (ಸುಮಾರು 150ರಲ್ಲಿ ಆಯ್ದ ಕೆಲವು)
      “The Indefinite-interrogative puzzle”, Linguistic Typology, 4, 2000.
      “Lexical suppletion in baby talk”, Anthropological Linguistics 1962-3
      “Adjectives”. (Jointly with R. Pustet). Handbücher zur Sprach- und Kommunikationswissenschaft: Morphology. Mouton de Gruyter, Berlin.2000
      “Havyaka Kannada: Modality and negation” (jointly with van der Auwera, J.) Indian Linguistics, 2000.
      “Functional constraints on word-formation rules”. The yearbook of South Asian languages and linguistics, 2000. New Delhi: Sage
      Review article on Stassen, L. 1997, Intransitive predication, and Wetzer, H. 1996, The typology of adjectival predication. Linguistic Typology, 3.1, 1999
      “Word classes and sentential functions”. In Comrie, B., and Vogel, P.M. (eds.), An anthology of word classes, Mouton de Gruyter, Berlin, 1999
      “Indefinite pronouns in Kannada”. In The life of Language: Papers in Linguistics in honor of W.Bright, 369-83. Berlin: Mouton de Gruyter, 1998.
      “Tulu”. In Steever, S. (ed.), The Dravidian Languages, (158-177), Routledge, London, 1997.
      “Need for a dualistic theory of language”, IJDL 14, 1985
      “Word and its meaning in the Indian Grammatical Tradition”, IJDL 14, 1985
      “Physical identification in Kannada”, Studies in Linguistic Sciences 11, 1982
      “A general study of palatalization”, in Greenberg et al (eds.) Universals of Human Language, Stanford University Press, Stanford, 1978
      “Multiple case roles”, Lingua 42, 1977
      “Ambiguity in negative sentences”, Glossa 11, 1977
      “Dichotomy in phonological change”, Lingua 39, 1976
      “A semantic constraint on neg-raising rule”, Papers in Linguistics 8, 1975
      “The basis of comparative method”, Language Sciences 35, 1975
      “Two studies on nasalization”, Nasalfest 1975
      “Retroflection and retraction”, Journal of Phonetics 2, 1975
      “The Phonology of liquid consonants”, Working Papers in Language Universals 16, 73-104.
      “Kudux indicatives”, Indo-Iranian Journal 12, 1970
      “Age grading and sound change”, Word 26, 1970
      “Is sound change gradual?”, Linguistics 40, 1968
      “The rate of language change”, Linguistics 39, 1968.

      ಉತ್ತರ
  37. ಮಾರ್ಚ್ 29 2011

    ನಿಲುಮೆ,

    ಈ ವಿಷಯದಲ್ಲಾಗಲೇ ಬೇಕಾದಷ್ಟು ಟಿಪ್ಪಣಿಗಳು. ಮರುಟಿಪ್ಪಣಿಗಳು, ಕೆಸರೆರಚಾಟಗಳು ಆಗಿ ಹೋಗಿರುವುದರಿಂದ, ನಾನು ಹೊಸತೇನನ್ನೂ ಹಾಕಲಾರೆ. ಆದರೆ, ನೀವು ಟಿಪ್ಪಣಿಯ ಜೊತೆಯಲ್ಲೇ ಐಪಿ ಅಡ್ರ್ರೆಸ್ ಗಳನ್ನೂ ಪ್ರಕಟಿಸುವಂತಿದ್ದರೆ ಬಗೆಬಗೆ ವೇಷತಾಳಿ ಬರುವ ಟಿಪ್ಪಣಿಗಳಿಗೊಂದು ತಡೆ ಹಾಕಬಹುದಿತ್ತೇನೋ!

    ಉತ್ತರ
  38. ಮಾಯ್ಸ
    ಮಾರ್ಚ್ 29 2011

    ಡಿ. ಎನ್. ಶಂಕರಭಟ್ಟರ ಹೊತ್ತಿಗೆಗಳು
    http://ellarakannada.org/hottigegalu.html

    ಎಲ್ಲರ ಕನ್ನಡ ಓದುಕೂಟ – 2011
    http://ellarakannada.org/ellarakannada_odukoota2011_varadi.html
    http://ellarakannada.org/nudisammelana2010.html

    ಉತ್ತರ
  39. Narendra Kumar.S.S
    ಮಾರ್ಚ್ 29 2011

    >> ಭಾಷೆಯೊಂದು ಶ್ರೀಮಂತವಾಗುವುದು ತನ್ನಲ್ಲಿರುವುದನ್ನು ಮಾತ್ರ ಇಟ್ಟುಕೊಳ್ಳುವುದರಿಂದಲ್ಲ, ಎಲ್ಲೆಡೆಯಿಂದಲೂ ಉತ್ತಮವಾದದ್ದನ್ನು ಪಡೆಯುವುದರಿಂದ.
    >> ಪ್ರತಿಯೊಂದಕ್ಕೂ ಹೊರದೇಶಗಳತ್ತ ನೋಡುತ್ತಾ, ಅವರು ಮಾಡಿದ್ದು ಸರಿ, ನಮ್ಮದು ಸರಿಯಿಲ್ಲ ಎನ್ನುವ ಕೀಳರಿಮೆ ಎಂದು ಸರಿ ಹೋಗುತ್ತದೆ? ಇದು ಅಭಿಮಾನ್ಯಶೂನ್ಯತೆಯನ್ನೇ ತೋರಿಸುತ್ತದೆ. ನಾವು “ನಾವಾಗಿ” ಬಾಳಿ-ಬೆಳೆಯುವುದೆಂತು?
    > Above are the two statements made by M. narendra kumar. can you see the double
    > standard?
    ಸುರೇಶ್, ಇಲ್ಲಿ ದ್ವಂದ್ವವೆಲ್ಲಿದೆ?
    ಎಲ್ಲೆಡೆಯಿಂದ ಉತ್ತಮವಾದುದನ್ನು ಪಡೆಯಬೇಕೆಂದು ನಾನು ಹೇಳಿರುವೆ ಮತ್ತು ಇಲ್ಲಿರುವ ಎಲ್ಲರೂ ಅದನ್ನೇ ಹೇಳುತ್ತಿರುವರು.
    ಆದರೆ, ನೀವು ತೋರಿಸುತ್ತಿರುವ ಎರಡನೆಯದು ಅದಕ್ಕೆ ಹೇಗೆ ಸಂಬಂಧಿಸಿದೆ?
    ಅಲ್ಲಿ ನಾವು ನೋಡುತ್ತಿರುವುದು “ಜರ್ಮನರಿಂದ ಒಳ್ಲೆಯದನ್ನು ತೆಗೆದುಕೊಳ್ಳುವುದಕ್ಕೆ” ಸಂಬಂಧಿಸಿದ್ದಲ್ಲ.
    ಬದಲಿಗೆ, “ಜರ್ಮನರು ಮಾಡಿದರು; ಹಾಗಾಗಿ ಅದು ಸರಿ ಇರಬೇಕು, ಅವರನ್ನು ನಾವೂ ಅನುಕರಿಸೋಣ” ಎಂಬ ಮಾತಲ್ಲವೇ?
    ಒಳ್ಳೆಯದನ್ನು ತೆಗೆದುಕೊಳ್ಳುವುದೆಂದರೆ, ಕಣ್ಮುಚ್ಚಿ ಅನುಕರಿಸುವುದು ಎಂಬ ಹಾಗಿದೆ ನಿಮ್ಮ ಮಾತು!

    > Do you still think there is a point in arguing with this guy?
    > It seems he is trying to just through shit on you. Neglect him.
    ಇದು ವೈಯಕ್ತಿಕ ನಿಂದನೆಯಲ್ಲವೇ? ನೀವು ಹುಟ್ಟು ಹಾಕುತ್ತಿರುವ ಅಸ್ಪೃಷ್ಯತೆಯಲ್ಲವೇ ಇದು!?

    ಕನ್ನಡದ ಚರ್ಚೆಯಲ್ಲಿ ಕನ್ನಡವನ್ನೇ ಬಳಸದೆ ಬರೆದ ನೀವು ಕನ್ನಡಕ್ಕೆ ನೀಡುವುದಾದರೂ ಏನನ್ನು?
    ಕನಿಷ್ಠ ಪಕ್ಷ ಕನ್ನಡದ ಲಿಪಿಯ ಬಳಕೆಯಿಂದ, ಕನ್ನಡದ ಭಾಷಾ ತಂತ್ರಜ್ಞಾನಕ್ಕೆ ಉತ್ತೇಜನ ನೀಡಬಹುದಲ್ಲವೇ?

    ನೀವು “shit” ಬಳಸಿದ್ದರಿಂದ ನನಗೇನೂ ತೊಂದರೆಯಿಲ್ಲ. ಅದು ನಿಮ್ಮ ಕೈಗೆ ಮತ್ತು ಮುಂದೆ ಮತ್ತೆಲ್ಲೆಲ್ಲೋ ಮೆತ್ತಿಕೊಂಡುಬಿಡುತ್ತದೆ, ಎಚ್ಚರಿಕೆಯಿಂದಿರಿ.
    ನೀವು ಬಳಸುವ ಭಾಷೆ ನಿಮ್ಮ ವ್ಯಕ್ತಿತ್ವವನ್ನೂ ತೋರಿಸುತ್ತದೆ ಎಂಬ ನೆನಪಿರಲಿ.

    ಉತ್ತರ
  40. Narendra Kumar.S.S
    ಮಾರ್ಚ್ 29 2011

    ಮಾಯ್ಸ ಅವರೇ, ನೀವು ಯಾರ ಕಳಕಳಿಯನ್ನು ಮೆಚ್ಚುತ್ತಿದ್ದೀರೋ ತಿಳಿಯುತ್ತಿಲ್ಲ. ಕಣ್ಮುಚ್ಚಿ, ಯೋಚಿಸದೆ ಒಬ್ಬರನ್ನು ಹಳಿಯುವುದು, ಮತ್ತೊಬ್ಬರನ್ನು ಅಟ್ಟಕ್ಕೇರಿಸುವುದನ್ನು ತಾವು ಮೆಚ್ಚುತ್ತಿರುವುದು ನೋಡಿ ಆಶ್ಚರ್ಯವಾಗುತ್ತಿದೆ!
    ಸುರೇಶ್ ಅವರ ಕುತರ್ಕ, ಕೀಳು ಅಭಿರುಚಿಯ ಟೀಕೆಗಳನ್ನು ನೀವು “ಕಳಕಳಿ” ಎಂದು ಕರೆಯುತ್ತಿರುವುದು ಕಂಡು ನೋವಾಗುತ್ತಿದೆ.

    ಇಲ್ಲಿ ನಾವು ಯಾರೂ ವೈಯಕ್ತಿಕ ಮಟ್ಟದ ಚರ್ಚೆ ಮಾಡುತ್ತಿಲ್ಲವಷ್ಟೇ?
    ಹಾಗಿದ್ದ ಮೇಲೆ, ನಮ್ಮ ವಾದವನ್ನು ಬೆಂಬಲಿಸಿದವರಿಗೆ ಧನ್ಯವಾದಗಳು, ವಿರುದ್ಧವಾಗಿ ಬರೆದವರ ಮೇಲೆ ಏರಿ ಹೋಗುವುದು ಏಕೆ? ಪ್ರಾಜ್ಞರು ಚರ್ಚಿಸುವ ರೀತಿ ಇದಲ್ಲ ಎಂದು ನನ್ನ ಅನಿಸಿಕೆ. ನಿಮಗೆ ಪೂರಕವಾದ ಪ್ರತಿಕ್ರಿಯೆ ಮಾತ್ರ ಬರಬೇಕೆಂದು ಬಯಸಿದರೆ, ಇಲ್ಲಿ ಚರ್ಚಿಸುವ ಅಗತ್ಯವೇ ಇಲ್ಲವಲ್ಲ?

    ಉತ್ತರ
  41. ಮಾಯ್ಸ
    ಮಾರ್ಚ್ 29 2011

    ಸುರೇಶ್ ನಿಮಗೆ!

    ಉತ್ತರ
  42. ವಿಜಯ
    ಮಾರ್ಚ್ 29 2011

    ಮಾಂಜುಗರ, ಉಂಕಿಸುವುದು, ಸೊಲ್ಲರಿಮೆ/ನುಡಿಯರಿಮೆ, ಅರಕೆ, ಪಡೆಪು, ತಕ್ಕುಮೆ , ಆರ್ಪು ,ಕೇಳ್ವಿಗಳು, ಮಾರುಲಿ,ಸೊಲ್ಲರಿಗ !!
    ನಂಗೆ ಇಂಗ್ಲೀಷ್ ಕಲಿಯೊದೇ ಸುಲಭ ಅನಿಸ್ತಿದೆ 🙂

    ಉತ್ತರ
    • ಬಸವಯ್ಯ
      ಮಾರ್ಚ್ 30 2011

      ಹೌದು ಇಂಗ್ಲೀಶ್ ಮತ್ತು ಸಂಸ್ಕೃತ ಮಾತ್ರ ಸುಲಭ!

      ಉತ್ತರ
      • ಇಲ್ಲ, ಹ್ರಸ್ವ-ದೀರ್ಘ, ಅಲ್ಪಪ್ರಾಣ ಮಹಾಪ್ರಾಣ ಎಲ್ಲ ಇರೋ ಸಂಸ್ಕೃತವೂ ಕಷ್ಟ, ಇಪ್ಪತ್ತಾರೇ ಅಕ್ಷರ ಇರೋ ಇಂಗ್ಲೀಷೂ ಕಷ್ಟ, ಐವತ್ತು ಅಕ್ಷರ ಇರೋ, ಯಾವುದನ್ನು ಬೇಕಾದರೂ ಗಡಿಬಿಡಿಯೇ ಇಲ್ಲದೇ ಬರೆಯಲು ಸಾಧ್ಯವಾಗೋ ಕನ್ನಡ ಮಾತ್ರ ಕಷ್ಟ. ಅದನ್ನೂ ತಮಿಳಿನ ಅಕ್ಷರಮಾಲೆ ತರಹ ಕುಲಗೆಡಿಸಿ ಹಾಕೋವರೆಗೂ ನೆಮ್ಮದಿಯಿಲ್ಲ!

        ಉತ್ತರ
    • ssnkumar
      ಮಾರ್ಚ್ 30 2011

      > ನಂಗೆ ಇಂಗ್ಲೀಷ್ ಕಲಿಯೊದೇ ಸುಲಭ ಅನಿಸ್ತಿದೆ
      ಆಗಲಿ ಸ್ವಾಮಿ. ಅಲ್ಪಪ್ರಾಣ-ಮಹಾಪ್ರಾಣ, ಹ್ರಸ್ವ-ಧೀರ್ಘ, ಒತ್ತಕ್ಷರಗಳಿಂದ ತಪ್ಪಿಸಿಕೊಳ್ಳಲು ಇದಕ್ಕಿಂತ ಉತ್ತಮ ಉಪಾಯವೇನಿದೆ!?
      reliquiae, requiescat, paleaceous, zoophorus, xenophobia, habeas corpus, rendezvous ಮುಂತಾದ ಸುಲಭ-ಸರಳ ಪದಗಳೇ ತುಂಬಿರುವ ಇಂಗ್ಲಿಷನ್ನೇ ಕಲಿಯೋಣ. 🙂

      ಉತ್ತರ
    • ಮಾಯ್ಸ
      ಮಾರ್ಚ್ 30 2011

      ಏನು ಬರತ್ ಅವರ ಬರಹದ ಬಗೆಯನ್ನು ಅಣಕ ಮಾಡುತ್ತಿದ್ದೀರ?

      ಆರ್ಪು ಕೇಳ್ವಿ ನುಡಿಯರಿಮೆ ಇವೆಲ್ಲ ಪ್ರಜಾವಾಣಿಯ ಪದಸಂಪದದಲ್ಲಿ ಸುಮಾರು ಏಡು/ವರುಶದಿಂದ ಬರ್ತಾ ಇದೆ. ಓದಿ ತಿಳಿದುಕೊಳ್ಳಿ!

      ಏನು ಮೇಲ್ಮೆಯೋ.. ಅದರ ಬೀಗೋ!

      ಉತ್ತರ
      • ವಿಜಯ
        ಮಾರ್ಚ್ 31 2011

        ಅಣ್ಣಾ ಮಾಯ್ಸಣ್ಣಾ..
        ನನಗೆ ಬರತ್ ರ ಭಾಷೆ ಮೇಲಿನ ಪ್ರೀತಿಗೆ ಗೌರವವಿದೆ. ನಾನಿಲ್ಲಿ ಬರತ್ ಬರಹದ ಬಗೆಯನ್ನು ಅಣಕ ಮಾಡುತ್ತಿಲ್ಲ, ಓದುವಲ್ಲಿ ನನಗಾಗುತ್ತಿರುವ ಕಷ್ಟವನ್ನು ತೋಡಿಕೊಳ್ಳುತ್ತಿದ್ದೇನೆ!. ಏಕೆಂದರೆ ನಾನು ತಮ್ಮಂತೆ ‘ನುಡಿಯರಿಮೆ’ಯನ್ನು ಗಳಿಸಿದವನಲ್ಲ. ಪ್ರಚಲಿತ ವಿಷಯ ಅರಿಯಲು ಪೇಪರ ಓದುವವನು ನಾನು. ಸಂವಹನ ಸಾಧ್ಯ ಮಾಡುವಂತಹ ಸುಲಭ ಕನ್ನಡದಲ್ಲಿ ನನಗೆ ನಂಬಿಕೆ. ನಾನೆಲ್ಲೊ ಕನ್ನಡ ಭಾಷೆಯನ್ನು ಸಾಮಾನ್ಯರಿಗೆ ಅರ್ಥವಾಗುವಂತೆ, ಕಲಿಯಲು ಸುಲಭವಾಗುವಂತೆ, ಕೆಳವರ್ಗದ ಅವಕಾಶ ವಂಚಿತರಿಗೆ ಸಹಾಯವಾಗುವಂತೆ ಸುಲಭ ಮಾಡುವಲ್ಲಿ ತಾವು ಚಳುವಳಿ ನಡೆಸುತ್ತಿದ್ದಿರಾ, ಜನಸಾಮಾನ್ಯರು ಬಳಸುತ್ತಿರುವ ಶಬ್ದಗಳನ್ನು ಬಳಕೆಗೆ ತಂದು ಉಪಕಾರ ಮಾಡಲು ಹೊರಟಿದ್ದಿರಾ ಅಂದುಕೊಂಡಿದ್ದೆ, ಆದರೆ ಈ ಥರದ ಮಾಂಜುಗರ, ಉಂಕಿಸುವುದು, ಸೊಲ್ಲರಿಮೆ/ನುಡಿಯರಿಮೆ, ಅರಕೆ, ಪಡೆಪು, ತಕ್ಕುಮೆ , ಆರ್ಪು ,ಕೇಳ್ವಿಗಳು, ಮಾರುಲಿ,ಸೊಲ್ಲರಿಗ, ನಲೆಯುಲಿ, ನಡೆಯುಲಿ ಗಳು ನಾಲಗೆ ಹೊರಳದ ಹಾಗೆ ಮಾಡಿ, ಈ ತರಹದ ಪದಗಳು ಗೊತ್ತಿರದ, ನೆನಪಿಟ್ಟುಕೊಳ್ಳಲಾಗದ ನನ್ನಂತವರಲ್ಲಿ ಕಿಳಿರಿಮೆ ಹುಟ್ಟುತ್ತಿದೆ! :(.

        ಉತ್ತರ
        • ಮಾಯ್ಸ
          ಮಾರ್ಚ್ 31 2011

          ವಿಜಯ,

          ಈ ಬಗ್ಗೆ ನಾನು ರವಿ ಅವರಿಗೆ ಹೀಗೆ ಹೇಳಿದ್ದೀನಿ..

          “ನನಗೆ ತೀರಾ ಅಣ್ಣೆಗನ್ನಡ/ಅಚ್ಚಗನ್ನಡದಲ್ಲಿ ಎಲ್ಲವನ್ನು ಬರೆಯಬೇಕು ಎಂದಿಲ್ಲ. ನಾನು ಹಾಗೇ ಬರೆಯುವುದೂ ಇಲ್ಲ. ಆದರೆ ಬರೆದರೆ ತಪ್ಪಲ್ಲ. ಅವರಿಗೆ ನನ್ನ ಬೆಂಬಲವಿದೆ.”

          ನಮಗೆ ಮೊದಲಿಂದಲೂ ಅಪ್ಪಟ ಕನ್ನಡ ಪದಗಳನ್ನು ಕಲಿಸಿದ್ದರೆ ಹೀಗೆ ಆಗುತ್ತಿರಲಿಲ್ಲ. ನೀವು ಕೀಳರಿಮೆ ಪಡುಬೇಕಾಗಿಲ್ಲ.. ನೋಡಿ ನೀವು ಎಶ್ಟು ಚುರುಕು ನಿಮಗೆ ಗೊತ್ತಿಲ್ಲದೇ ” ಮಾಂಜುಗರ, ಉಂಕಿಸುವುದು, ಸೊಲ್ಲರಿಮೆ/ನುಡಿಯರಿಮೆ, ಅರಕೆ, ಪಡೆಪು, ತಕ್ಕುಮೆ , ಆರ್ಪು ,ಕೇಳ್ವಿಗಳು, ಮಾರುಲಿ,ಸೊಲ್ಲರಿಗ, ನಲೆಯುಲಿ, ನಡೆಯುಲಿ ” ಎಶ್ಟೊಂದು ಪದಗಳನ್ನು ಕಲಿತುಬಿಟ್ಟಿರಿ..

          ನಮ್ಮ ನುಡಿ ಉಳಿಸಲು ಎಲ್ಲರೂ ದುಡಿಯಬೇಕು.. ಕುಂತಲ್ಲೇ ಎಲ್ಲ ಆಗಬೇಕು.. ಚೂರು ಕಶ್ಟ/ತೊಡರು ಬೇಡ ಅಂದರೆ ಹೇಗೆ.. 🙂 ತುಸು ಕಶ್ಟಪಡಿ.. ಎಶ್ಟೇ ಆದರು ಅದು ಕನ್ನಡದ್ದೇ ಪದಗಳು..

          ಸಂಸ್ಕ್ರುತವನ್ನು ಉಳಿಸಲು ಇಡೀ ೧೦೦ ಕೋಟಿಯ ದೇಶವೇ ಇದೆ. ಕನ್ನಡ ಉಳಿಸಲು ಬರೀ ನಾವು ಆರುಕೋಡಿ ಇರೋದು.

          ಉತ್ತರ
          • ಮಾಯ್ಸ
            ಮಾರ್ಚ್ 31 2011

            ಆರುಕೋಡಿ ಅಲ್ಲ ಆರು ಕೋಟಿ 🙂

            ಉತ್ತರ
        • ಅಯ್ಯೋ ಹೌದಾ? ಈ ತರಹ ಕೀಳರಿಮೆ ಹುಟ್ಟಿಸಿ ಅಮಾಯಕರನ್ನು ತುಳಿಯುವುದು ವಿದ್ಯೆಯ ಮದ ತಲೆಗೇರಿದ ಬ್ರಾಹ್ಮಣರ ಕೆಲಸ ಮಾತ್ರ ಅಂದುಕೊಂಡಿದ್ದೆ 😦

          ಉತ್ತರ
    • ದಿಟ ದಿಟ 😉

      ಉತ್ತರ
  43. ಮಾಯ್ಸ
    ಮಾರ್ಚ್ 30 2011

    ಅವರಿಗೆ ನಮ್ಮ ಕನ್ನಡದಲ್ಲಿ ಸಂಸ್ಕೃತದ ತುರುಕಾಟ ಬೇಡ ಎಂಬ ನೋವು ತಿಳಿಯುತ್ತಲೇ ಇಲ್ಲ.

    “ಕುಕ್ಕುಟ ಪಾಲನಾ ಇಲಾಖೆ” ಅಂತ ನಮ್ಮ ಮಂಡ್ಯದಲ್ಲಿ ಒಂದು ಸರಕಾರಿ ಹೆಸರುಹಲಗೆ ಇದೆ. ಅದು ಏನು ಗೊತ್ತಾ? ಕೋಳಿ ಸಾಕೋ ರಯ್ತರಿಗೆ ಸಲಹೆ ಕೊಡುವ ಜಾಗ! 🙂

    ಈಗ ನಾನು ನೀವು ಹೋಗಿ, ಸ್ವಾಮಿ “ಕೋಳಿ ಸಾಕಣೆ ಇಲಾಖೆ” ಎಂದು ದಯವಿಟ್ಟು ಹಾಕಿ ಎಂದು ಕೋರಿಕೆಕೊಟ್ಟರೂ ಈತ ಬಂದು ಸಂಸ್ಕೃತ-ವಿರೋಧಿ, ಸಂಸ್ಕೃತಿ-ವಿರೋಧಿ ಎಂದು ನಮ್ಮನ್ನೇ ರಾಕ್ಷಸರು ಎಂಬಂತೆ ಬಿಂಬಿಸುವರು!

    ಉತ್ತರ
    • ಮಾರ್ಚ್ 30 2011

      ಹೌದು ಮಾಯ್ಸಣ್ಣ,
      ನೀವು ಹೇಳಿದ್ದು ಸರಿ. ಅದನ್ನು ಕೋಳಿ ಸಾಕಣೆ ತರಬೇತಿ ಕೇಂದ್ರ ಅಂತ ಹೇಳಿದ್ರೆ ಸಾಕಿತ್ತು. ನಮ್ಮಲ್ಲಿ ಎಲ್ಲಕ್ಕೂ ಸಂಸ್ಕೃತ ಪದ ಹುದುಕುವ ಪರಿಪಾಠ ಜಾಸ್ತಿ

      ಉತ್ತರ
      • ಮಾಯ್ಸ
        ಮಾರ್ಚ್ 30 2011

        ಎಕ್ಕಡ ಹೊಲಿಸಿಕೊಳ್ಳಕ್ಕೆ ಹೋದರೇ ಅದು “ಚರ್ಮಕಾರನ ಕುಠೀರ”ವಂತೆ

        ಹಾಲು ತರಕ್ಕೆ ಹೋದರೇ “ಕ್ಷೀರ ಕೇಂದ್ರ”ವಂತೆ ..

        ಇನ್ನು ಇದೆಲ್ಲ ಹಾಳಾಗಿ ಹೋಗಲಿ ಎಂದು ಉಚ್ಚೆ/ಹೇಲು ಮಾಡಲು ಹೋದ “ಮೂತ್ರಾಲಯ, ಶೌಚಾಲಯ ಇಲ್ಲವೋ ಮಲಾಲಯ”ಕ್ಕೇ ಹೋಗಬೇಕು.
        ಉಚ್ಚೆ/ಹೇಲು ಅನ್ನಕ್ಕೆ ಇವರಿಗೆ ಹೇಸಿಗೆ ಆದರೆ “ಬಚ್ಚಿಲು” ಎಂದು ಕನ್ನಡದಲ್ಲೇ ಉಂಟಲ್ಲ.!

        “ದೊಡ್ಡ ಮರೆವಣಿಗೆ” ಹೋಗಿ ಈಗ “ಬೃಹತ್ ರ್ಯಾಲಿ” 🙂

        ಇನ್ನಿ ಈಕರಣ ಹಾವಳಿಯಂತು ಅಬ್ಬಬ್ಬ.. ನಗರೀಕರಣ, ಅಗಲೀಕರಣ, ಸಂಸ್ಕೃತೀಕರಣ, ಸಂಸ್ಕೃತಯೀಕರಣ..
        ಇನ್ನೊಂದು ಆತ್ಮಕದ ಹಾವಳಿ.. ನ್ಯಾಯಾತ್ಮಕ(ನ್ಯಾಯವಾಗಿ ಎಂದು ಹೇಳಿದರೆ ಏನೋ! ), ಕ್ರಿಯಾತ್ಮಕ.. ಅದೇನು ಆತ್ಮಕ ಅಂದರೇ!

        ಉತ್ತರ
        • ಮಾರ್ಚ್ 31 2011

          ಮಾಯ್ಸ,
          ಕನ್ನಡೀಕರಣ, ಪ್ರಪ್ರಥಮ ಬಿಟ್ಟಿದ್ದೀರ…ಆ ಕಡೆ ಸಂಸ್ಕ್ರುತನೂ ಅಲ್ಲ ಕನ್ನಡನೂ ಅಲ್ಲ… ಎಡಬಿಡಂಗಿ/ತ್ರಿಶಂಕು ಪದಗಳೇ ತುಂಬಿವೆ.
          ಲಬೊ ಲಬೊ ಅಂತ ಬಡ್ಕೊಬೇಕು

          ಉತ್ತರ
    • Narendra Kumar.S.S
      ಮಾರ್ಚ್ 31 2011

      > “ಕುಕ್ಕುಟ ಪಾಲನಾ ಇಲಾಖೆ” ಇದ್ದದ್ದು “ಕೋಳಿ ಸಾಕಣೆ ಇಲಾಖೆ” ಆಗಲಿ.
      ಇಂತಹದ್ದನ್ನು ನಾನೂ ಬೆಂಬಲಿಸುತ್ತೇನೆ.
      ಸಾಮಾನ್ಯ ಜನಕ್ಕೆ ಅರ್ಥವಾಗುವ ಪದಗಳನ್ನು ನಾವು ಉಪಯೋಗಿಸಬೇಕು ಎನ್ನುವುದು ಸರಿಯಾದದ್ದೇ.
      ಆದರೆ, ನೀವು ಹೊರಟಿರುವ ದಾರಿಯ ಕುರಿತಾಗಷ್ಟೇ ನನ್ನ ಟೀಕೆ.
      ನೀವು “ಸಾಮಾನ್ಯ ಜನಕ್ಕೆ ಅರ್ಥವಾಗುವ ಪದದ ಬಳಕೆ” ಎನ್ನುವುದಕ್ಕಿಂತ, “ಸಂಸ್ಕೃತವನ್ನು ಕನ್ನಡದಿಂದ ತೆಗೆದುಹಾಕುವುದು”, “ಬ್ರಾಹ್ಮಣ್ಯ”, “ಬಲಪಂಥೀಯ”ಎನ್ನುವುದಕ್ಕೇ ಹೆಚ್ಚು ಒತ್ತು ನೀಡುತ್ತಿರುವಿರಿ.
      ಈ ರೀತಿಯ ಋಣಾತ್ಮಕ ಚಿಂತನೆಗಳು ಒಳ್ಳೆಯದಲ್ಲ ಎನ್ನುವುದು ನನ್ನ ಭಾವನೆ.
      ಈ ಚರ್ಚೆಯಲ್ಲಿ ಬಂದ ಈ ರೀತಿಯ ಋಣಾತ್ಮಕ ಚಿಂತನೆಗಳ ಕೆಲವು ಸಾಲುಗಳನ್ನು ನೋಡಿ:
      Asthra> Kannada kannada endu bobiduva Bhairappa, Chidaananda murthy galu Sanskrutha V.V sthaapisuvaaga mounavahisuvudu kooda ide Bhraamanyada kaaranadinda
      ಬಸವಯ್ಯ> ಸುಮ್ಮನೇ ಹೋಗಿ ಸಂಸ್ಕೃತ ಸಮ್ಮೇಳನದಲ್ಲಿ ಅರ್ಥವಾಗದ ಭಾಷಣ ಕೇಳಿ ಬಿಸಿಬೇಳೆಬಾತ್ ತಿನ್ನಿ ನಿಮ್ಮ ಮಠದಲ್ಲಿ
      ಮಾಯ್ಸ> ಕನ್ನಡವನ್ನು ಆಡುಭಾಷೆಯಿಂದ ತೆಗೆದು ಸಂಸ್ಕೃತದಲ್ಲಿ ಮಾತಾಡುವರು ಹಾಗು ಅದಕ್ಕೆ ತುಂಬಾ ಹೆಮ್ಮೆ
      ಮಾಯ್ಸ> ಮೇಲುಗಾರಿಕೆಯ ತೆವಲಿನಲ್ಲಿ ಸಂಸ್ಕೃತದ ಬಾಲ ಹಿಡಿದಿದೆ
      ಮಾಯ್ಸ> ನಾನು ಹೇಳುತ್ತಿರುವ ಗುಂಪು ಕೇಳವ ಸಂಸ್ಕೃತ ಭಾಷಾದುರಭಿಮಾನಿಗಳಲ್ಲ. ಅವರು ಅತಿ ಬಲಪಂಥೀಯ, ಜಾತಿವಾದಿ ಹಾಗು ಕಟ್ಟರ್ Nazism ಮತ್ತು racism
      ಮಾಯ್ಸ> ಮನಸ್ಥಿತಿ ಉಳ್ಳವರು. ಈ ತಮಿಳು ಜನಾಂಗವೇ ಅಸಭ್ಯರು ಎನ್ನುವವರು. ಸಂಸ್ಕೃತದ ಉಚ್ಚರಣೆಯ ಮಾಡಲು ಮೂಲವಾಸಿಗಳೆ ಕಷ್ಟವನ್ನು ನೋಡಿ, ಅವರನ್ನು
      ಮಾಯ್ಸ> ಕೀಳು ಎಂದು ನಗುವವರು.

      > ಈತ ಬಂದು ಸಂಸ್ಕೃತ-ವಿರೋಧಿ, ಸಂಸ್ಕೃತಿ-ವಿರೋಧಿ ಎಂದು ನಮ್ಮನ್ನೇ ರಾಕ್ಷಸರು ಎಂಬಂತೆ ಬಿಂಬಿಸುವರು
      ಇದು ನಿಮ್ಮ ಊಹೆ ಎಂದು ನಾನು ತಿಳಿದಿರುವೆ. ನಮ್ಮ ಸರಕಾರದ ಅಧಿಕಾರಿಗಳಿಗೆ ಕನ್ನಡ ಪದ ಯಾವುದು, ಸಂಸ್ಕೃತ ಪದ ಯಾವುದು
      ಮತ್ತು ಸಂಸ್ಕೃತವನ್ನು ಉಳಿಸಿಕೊಳ್ಳಲು ಹಠವಿದೆ ಎನ್ನುವುದು ನನ್ನ ಅನುಭವಕ್ಕಂತೂ ಬಂದಿಲ್ಲ.
      ಪ್ರಾಯಶಃ ನೀವು “ಕನ್ನಡ ಪದ ಬಳಸೋಣ” ಎನ್ನುವುದಕ್ಕಿಂತ “ಸಂಸ್ಕೃತ ಪದ ತೆಗೆಯೋಣ” ಎನ್ನುವುದಕ್ಕೆ ಹೆಚ್ಚು ಒತ್ತು ನೀಡುವುದರಿಂದ ಈ ರೀತಿಯ ಪ್ರತಿಕ್ರಿಯೆಗಳು ಬರಬಹುದು.

      ಈ ಕೆಳಗಿನ ಮಾತುಗಳು ಎಲ್ಲರಿಗೂ ಒಪ್ಪಿಗೆಯಾಗುವ ಮಾತು ಮತ್ತು ಸರಿಯಾದ ಉದ್ದೇಶವನ್ನು ತಿಳಿಸುವಂತಹವು:
      Priyank> ನಾನು ಹೇಳೋದನ್ನ. “ಸಂಸ್ಕೃತ ಪದಗಳನ್ನೇ ತೆಗೆಯಿರಿ” ಎಂದು ಹೇಳುತ್ತಿರೋದಾಗಿ ಅರ್ಥೈಸಿಕೊಳ್ಳಬೇಡಿರೆಂದು ಕೇಳಿಕೊಳ್ಳುತ್ತೇನೆ.
      Priyank> ಕನ್ನಡ ಬೇರಿನ ಪದಗಳು ಇಲ್ಲದ ಪಕ್ಷದಲ್ಲಿ, ಸಂಸ್ಕೃತ ಬೇರಿನ ಪದಗಳು ಈಗಾಗಲೇ ಆಡುನುಡಿಗೆ ಬಂದಿರುವ ಪಕ್ಷದಲ್ಲಿ, ಸಂಸ್ಕೃತ ಬೇರಿನ ಪದಗಳನ್ನೇ ಬಳಸುವುದು
      Priyank> ಸೂಕ್ತ ಎಂಬುದು ನನ್ನ ನಂಬಿಕೆಯಾಗಿದೆ.
      ಮಾಯ್ಸ> ನನಗೆ ಸಂಸ್ಕೃತವೂ ಸಂಸ್ಕೃತತನದಲ್ಲೇ ಬೇಕು, ಕನ್ನಡವೂ ಬೇಕು, ತುಳುವೂ ಬೇಕು.. ಆದರೆ ಅವೆಲ್ಲ ಸಮಾನ ಯಾವುದೂ ಮೇಲಲ್ಲ ಕೇಳಲ್ಲ.

      ಉತ್ತರ
    • Ravi
      ಮಾರ್ಚ್ 31 2011

      ಮಾಯ್ಸ, “ನಮ್ಮ ಕನ್ನಡದಲ್ಲಿ ಸಂಸ್ಕೃತದ ತುರುಕಾಟ ಬೇಡ” ಸರಿ. ಸಂಸ್ಕೃತ ಯಾಕೆ ಬೇಡವಾಯಿತು? ಬಹು ಸಂಖ್ಯಾತರ ಆಡು ಮಾತಿನ ಭಾಷೆ ಅಲ್ಲ. ನಾಲಗೆ ಹೊರಳುವುದು ಕಷ್ಟ. ಅರ್ಥವಾಗುವುದೂ ಕಷ್ಟ ಕೆಲವೊಮ್ಮೆ. ಅಲ್ಲವೇ? ನನ್ನದೂ ಅದೇ ಭಾವನೆ. ಅಚ್ಚಗನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಮಾತಾಡುವುದೇ ಒಳ್ಳೆಯದು. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಅಚ್ಚಗನ್ನಡವೂ ಹೊಸ ತಲೆಮಾರಿಗೆ ಅರ್ಥವಾಗುವುದಿಲ್ಲ. ಕನ್ನಡ ವ್ಯಾಕರಣವೂ ಗೊತ್ತಿಲ್ಲ. ಈ ಸಾಧನೆಗೆ ಆಂಗ್ಲ ಮಧ್ಯಮ ಶಾಲೆಗಳಿಗೆ ಧನ್ಯವಾದ. ನಮ್ಮ ಆಡು ನುಡಿಯಲ್ಲಿ ಎಷ್ಟೋ ಇಂಗ್ಲಿಷ್ ಶಬ್ದ (ವರ್ಡ್!) ಗಳ ಬಳಕೆ (ಯೂಸ್ ಮಾಡುವುದು!) ರೂಢಿಯಾಗಿದೆ(ಕಾಮನ್! ಆಗಿದೆ). ಅದೇ ಸುಲಭವೂ ಆಗಿದೆ. ಮುಂದಿನ ಪೀಳಿಗೆ ಇದೆ ಥರ ದೊಡ್ಡ ಆಂದೋಲನವನ್ನೇ ಶುರು ಮಾಡಬಹುದು. ನಮಗೆ ಮೂಲ ಕನ್ನಡದ ಮಡಿವಂತಿಕೆ ಬೇಡ. ಆಡು ಮಾತೇ ಇರಲಿ ಅಂತ! ಆಗ ಕೋಳಿ ಸಾಕಣೆ ಕೇಂದ್ರಕ್ಕೆ ಏನು ಹೆಸರಿಡಬಹುದು?

      ಉತ್ತರ
      • ಮಾಯ್ಸ
        ಮಾರ್ಚ್ 31 2011

        ನೀವು ನನ್ನನ್ನು ಕುರಿತು ಹೇಳಿದ್ದೀರಿ, ಅದಕ್ಕೆ ಇಲ್ಲಿ ನನ್ನೊಬ್ಬನ ಅನಿಸಿಕೆ ಬಯಸಿದ್ದೀರಿ ಎಂದು ಹೇಳುವೆನು..

        ನನಗೆ ತೀರಾ ಅಣ್ಣೆಗನ್ನಡ/ಅಚ್ಚಗನ್ನಡದಲ್ಲಿ ಎಲ್ಲವನ್ನು ಬರೆಯಬೇಕು ಎಂದಿಲ್ಲ. ನಾನು ಹಾಗೇ ಬರೆಯುವುದೂ ಇಲ್ಲ. ಆದರೆ ಬರೆದರೆ ತಪ್ಪಲ್ಲ. ಅವರಿಗೆ ನನ್ನ ಬೆಂಬಲವಿದೆ.

        ಸಂಸ್ಕ್ರುತ ಬೇಡ ಎಂದು ಹೇಳಿಲ್ಲ. ಆದರೆ ಸಂಸ್ಕ್ರುತದ ಸೊಲ್ಲರಿಮೆ/ವ್ಯಾಕರಣ ಕನ್ನಡಕ್ಕೆ ಬೇಡ. ಹಾಗು ಶಂಕರಬಟ್ಟರು ಹೇಳುವ ಹಾಗೆ ಹೊಸತನ್ನು ಸಂಸ್ಕ್ರುತದಿಂದ/ಮೂಲಕ ನೋಡುವುದ ಬೇಡಬೇಡ.

        ಹಾಗಾದರೆ ಸಂಸ್ಕ್ರುತ ಎಲ್ಲಿ ಬೇಕು? ಸಂಸ್ಕ್ರುತದಿಂದ ನಾವೇನಾದರೂ ಹೊಸತನ್ನು ಪಡೆಯುತ್ತಿದ್ದರೆ ಆಗಬೇಕು.. ಅದು ಈಗಿನ ಹೊತ್ತಿನಲ್ಲಿ ಏನೂ ಇಲ್ಲ. ಆದರೆ ಈ ಮಾದರಿಯಾಗಿ ‘ಭಗವದ್ಗೀತೆ’ ಎಂಬ ಪದವನ್ನು ‘ಬಗವದ್ಗೀತೆ’ ಎಂದು ಕನ್ನಡದಲ್ಲಿ ಬರೆಯಬೇಕು ಹೊರತು ‘ದೇವರ ಹಾಡು’ಎಂದು ಅಲ್ಲ.. ಹಾಗೇ ‘ವೇದ’ ಕನ್ನಡದಲ್ಲೂ ‘ವೇದ’, ‘ಭಾರತ’ ಕನ್ನಡದಲ್ಲಿ ‘ಬಾರತ’, ‘ಪ್ರಸ್ಥಾನತ್ರಯ’ ಕನ್ನಡದಲ್ಲಿ ‘ಪ್ರಸ್ತಾನತ್ರಯ’ ಹೀಗೆ!

        ಆದರೆ ಸಂಸ್ಕ್ರುತದಿಂದ ನಾವು Modern sciences ಮತ್ತು technology ಅಲ್ಲಿ ಪಡೆಯುವುದು ಏನೂ ಇಲ್ಲವೆಂದೇ ಹೇಳಬೇಕು..
        ಅದಕ್ಕೆ ‘ಗಣಕ’ಬೇಡ , ಕನ್ನಡದಲ್ಲಿ ‘ಎಣಿ’, ತಂತ್ರಾಂಶ ಬೇಡ ಕನ್ನಡದಲ್ಲಿ ‘ಮೆದುಜಾಣ್ಮೆ’, ಅಂತರ್ಜಾಲ ಬೇಡ, ಕನ್ನಡದಲ್ಲಿ ‘ಮಿಂಬಲೆ’, ವಿದ್ಯುನಮಾನ ಪತ್ರ ಬೇಡ, ಮಿಂನಂಚೆ/ಮಿಂಚೆ ಕನ್ನಡದಲ್ಲಿ.

        ಇನ್ನು ಸಂಸ್ಕ್ರುತಕ್ಕೆ ಕನ್ನಡಿಗರು ದರ್ಮದ ಕಾರಣವನ್ನು ಬಿಟ್ಟು ಬೇರಾವ ಕಾರಣದಿಂದ ವಿಶೇಶವಾದ ಜಾಗ ಕೊಡುವುದು ಬೇಕಿಲ್ಲ. ನುಡಿಗೆ ದರ್ಮದ ಹಂಗು ಇರಬಾರದು. ಕನ್ನಡ ಹಿಂದೂಗಳದ್ದೂ, ಮುಸಲಿಮರದ್ದು, ಕ್ರಿಸ್ರರನ್ನು ಹಾಗೇ ಎಲ್ಲದರದ್ದು. ಅದಕ್ಕೆ ಸಂಸ್ಕ್ರುತಕ್ಕೆ ನಮ್ಮ ನಾಡಿನಲ್ಲಿ ಸೊಪ್ಪು ಹಾಕು ಯಾವ ಸಲುವೂ ನನಗೆ ತೋಚುವುದಿಲ್ಲ.! ಮಡಿವಂತರ ಲಾಬಿ ಹಾಗು ಮೇಲಾಟಗಳನ್ನು ಬಿಟ್ಟು!

        ಉತ್ತರ
        • ಮಾಯ್ಸ
          ಮಾರ್ಚ್ 31 2011

          ಇರು ರವಿ ಅವರಿಗೆ! ಬರೆದುದು

          ಉತ್ತರ
        • Ravi
          ಮಾರ್ಚ್ 31 2011

          ಮಾಯ್ಸ, ನಿಮ್ಮ ವಾದವನ್ನು ಮೆಚ್ಚುತ್ತೇನೆ. ಮಡಿವಂತರ ಲಾಬಿಯೋ ಮೇಲಾಟವೋ ಕನ್ನಡ ಕನ್ನಡದಲ್ಲಿ ಸಂಸ್ಕೃತ ನುಸುಳಿದೆ. ನನ್ನಂತ ಪಾಮರರಿಗೆ ಯಾವುದು ಸುಲಭ? ಅಣ್ಣೆಗನ್ನಡವೋ ಅಚ್ಚಗನ್ನಡವೋ?, ಸೊಲ್ಲರಿಮೆಯೋ ವ್ಯಾಕರಣವೋ? ಗಣಕವೋ, ಎಣಿಯೋ? ತಂತ್ರಾಂಶವೋ ಮೆದುಜಾಣ್ಮೆಯೋ? ನಾನು ಕನ್ನಡ ಮತ್ತೆ ಹೊಸದಾಗಿ ಕಲಿಯಬೇಕಲ್ಲವೇ? ಇದ್ದುದನ್ನು ಮುಂದುವರೆಸುವುದು ಒಳ್ಳೆಯದಲ್ಲವೇ?

          ಹಾಗಾದರೆ ಭಾಷೆ ಉಳಿಯುವುದು ಹೇಗೆ ಎನ್ನಬಹುದು ನೀವು. ಸಹಜ ಪ್ರಶ್ನೆ. ಉತ್ತರ ಆಡುಮಾತು. ಶೌಚಾಲಯ ಎಂದು ಬರೆದರೂ ಮನೆಯಲ್ಲಿ ಬಚ್ಚಿಲು ಎನ್ನುವುದಿಲ್ಲವೇ? ಮನೆಯಲ್ಲಿ ಕನ್ನಡ ಉಳಿಯಲಿ. ಆರು ಕೋಟಿ ಕನ್ನಡಿಗರೇ ಈ ರೀತಿ ಹೆದರಬೇಕಾದರೆ, ತುಳು, ಬ್ಯಾರಿ, ಕೊಂಕಣಿ ಭಾಷಿಗರು ಏನು ಮಾಡೋಣ? ದ.ಕ./ಉಡುಪಿ ಜಿಲ್ಲೆಯಲ್ಲಿ ಕನ್ನಡ ಭಾಷೆ ಮನೆಯಲ್ಲಿ ಸಿಗದು. ಕರ್ನಾಟಕದಲ್ಲಿ ಇದ್ದೇವೆ ಎಂಬ ಕಾರಣಕ್ಕೆ ಶಾಲೆ, ಕಛೇರಿಗಳಲ್ಲಿ ಕನ್ನಡ. ಇಲ್ಲದಿದ್ದರೆ ತುಳುವಲ್ಲೇ ವ್ಯವಹಾರ. ಕನ್ನಡ ಹೇರಿದಂತಾಗಲಿಲ್ಲವೇ? ಹಾಗೆಂದು ಹೊರಗೆ ಕನ್ನಡ ಬಳಸಿದರೂ ತಂತಮ್ಮ ಮನೆಗಳಲ್ಲಿ ತಮ್ಮ ಆಡು ಭಾಷೆಯನ್ನು ಉಳಿಸಿಕೊಂಡಿಲ್ಲವೇ? ತಮ್ಮ ಮೂಲ ಭಾಷೆಯನ್ನು ಉಳಿಸಲು ಅವಕಾಶವಾದರೂ ಇದೆಯೇ? ಏಕೆಂದರೆ ಓದು ಬರೆಯುವುದು ಕನ್ನಡ ಅಥವಾ ಇಂಗ್ಲಿಷ್ ನಲ್ಲಿ. ನನ್ನ ಆಡು ಭಾಷೆ ಕೊಂಕಣಿ. ಆದರೆ ಗೋವಾದ ಮೂಲ ಕೊಂಕಣಿಯಲ್ಲ. ದ.ಕ./ಉಡುಪಿ ಕೊಂಕಣಿಯಲ್ಲಿ ಕನ್ನಡ, ತುಳುವಿನ ಪ್ರಭಾವ ಸಾಕಷ್ಟಿದೆ. ಹಾಗೆಂದು ಕನ್ನಡ ತುಳುವನ್ನು ತೆಗೆಯಹೊರಟರೆ ನಾನು ನನ್ನ ಮಾತೃಭಾಷೆಯನ್ನು ಹೊಸತಾಗಿ ಕಲಿಯಬೇಕು. ಇಲ್ಲಿ ಲಾಬಿ ನಡೆಸಿ ಯಾರಿಗೂ ಏನೂ ಪ್ರಯೋಜನವಿಲ್ಲ ಮಾಯ್ಸ. ನಾವು ಆಡುವುದು ಇನ್ನೊಬ್ಬರಿಗೆ ಅರ್ಥವಾದರೆ ಆಯಿತು. ಎಣಿಯಂತಹ ಹೊಸ ಪದಗಳ ಆವಿಷ್ಕಾರ ಬೇಡವೇ ಬೇಡ. ಬೇರೆ ಭಾಷೆ ಕಲಿತ ಅನುಭವವೂ ಬೇಡ. ನಾನು ಮಾತಾಡುವ ಕನ್ನಡ, ಕೊಂಕಣಿ, ತುಳುವಿನ ಬಗ್ಗೆ ಹೆಮ್ಮೆಯಿದೆ. ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಸದ್ಯ ಇರುವ ಕನ್ನಡವನ್ನು ಉಳಿಸಿ ಬೆಳೆಸೋಣ.

          ಉತ್ತರ
          • Ravi
            ಮಾರ್ಚ್ 31 2011

            in response to -“ತುಳು ಕೊಂಕಣಿಯ ಸಂಗತಿಗಳೇ ಬೇರೆ… ಆ ಬಗ್ಗೆ ಮಾತುಕತೆ ನಡೆಯಲಿ..ತುಳು ಕೊಂಕಣಿಗಾಗಿ ಕನ್ನಡದಲ್ಲಿ ಸಂಸ್ಕ್ರುತ ತುಂಬಿಕೊಳ್ಳಿಲಿ ಅನ್ನೋದೇ ನೀವು? ಈ ಮಾತುಕತೆಯಲ್ಲಿ ಕೊಂಕಣಿ, ತುಳು ಇವೆಲ್ಲ ಒಳಪಡಲ್ಲ.!” —
            ಕ್ಷಮೆ ಇರಲಿ ಮಾಯ್ಸ. ಆ ಅರ್ಥದಲ್ಲಿ ಹೇಳಲಿಲ್ಲ. ತುಳು ಕೊಂಕಣಿ ಬ್ಯಾರಿ ಭಾಷೆಗಳನ್ನು ಉದಾಹರಣೆಯಾಗಿ ಕೊಟ್ಟೆ ಅಷ್ಟೇ. ಕನ್ನಡ ಕನ್ನಡಿಗರಿಗೆ ಕಷ್ಟವಾಗದಿರಲಿ ಎಂದೆನಷ್ಟೆ.

            ಉತ್ತರ
          • ಮಾರ್ಚ್ 31 2011

            ರವಿ,
            ಕಡಿಮೆ ಎಣಿಕೆಯಲ್ಲಿರುವ ಕೊಂಕಣಿಯವರಿಗೋಸ್ಕರ ಹೆಚ್ಚಿನ ಕನ್ನಡಿಗರು ತಮ್ಮ ತನವನ್ನು ಬಿಟ್ಟೂ ಸಂಸ್ಕ್ರುತವನ್ನು ಅಪ್ಪಿಕೊಳ್ಳಬೇಕು ಎನ್ನುತ್ತೀರ? ಒಪ್ಪಲಾಗ್ದು.

            ಈವತ್ತು ಕರ್ನಾಟಕದಲ್ಲಿ ಕನ್ನಡ ಗೊತ್ತಿಲ್ಲದೆ ಬದುಕುವುದ್ ಕಶ್ಟ. ಆದರೆ ಕೊಂಕಣಿ/ಹಿಂದಿ ಗೊತ್ತಿಲ್ಲದೆ ಚೆನ್ನಾಗಿ ಬದುಕಬಹುದು.
            ಅದಕ್ಕಾಗಿ ಕೊಂಕಣಿಯವರಾದ ಗೋವಿಂದ ಪೈ, ಗಿರೀಶ್ ಕಾರ್ನಾಡ್ ಮತ್ತು ಜಯಂತ್ ಕಾಯ್ಕಿಣಿ ಅಂತಹವರು ಕನ್ನಡದ ಮೂಲಕ ಹೆಸರನ್ನು ಪಡೆದು ಬದುಕನ್ನ ಕಂಡುಕೊಂಡಿದ್ದಾರೆ. ಗೋವಿಂದ ಪೈ ಅವರ ಅಣ್ಣೆಗನ್ನಡ ಓದಿದರೆ ಅವರು ಕೊಂಕಣಿ ಅಂತ ಹೇಳಕ್ಕೇ ಆಗಲ್ಲ.

            -ಬರತ್

            ಉತ್ತರ
            • Ravi
              ಮಾರ್ಚ್ 31 2011

              ಭರತ, “ಕಡಿಮೆ ಎಣಿಕೆಯಲ್ಲಿರುವ ಕೊಂಕಣಿಯವರಿಗೋಸ್ಕರ ಹೆಚ್ಚಿನ ಕನ್ನಡಿಗರು ತಮ್ಮ ತನವನ್ನು ಬಿಟ್ಟೂ ಸಂಸ್ಕ್ರುತವನ್ನು ಅಪ್ಪಿಕೊಳ್ಳಬೇಕು” ಎನ್ನುವ ಅರ್ಥದಲ್ಲಿ ಹೇಳಿಲ್ಲ ಎಂದು ಮತ್ತೆ ಟಿಪ್ಪಣಿ ಬರೆದಿದ್ದೇನೆ. ಅದನ್ನು ಉದಾಹರಣೆಯಾಗಿ ಅಷ್ಟೇ ಕೊಟ್ಟೆ.
              “ಈವತ್ತು ಕರ್ನಾಟಕದಲ್ಲಿ ಕನ್ನಡ ಗೊತ್ತಿಲ್ಲದೆ ಬದುಕುವುದ್ ಕಶ್ಟ. ಆದರೆ ಕೊಂಕಣಿ/ಹಿಂದಿ ಗೊತ್ತಿಲ್ಲದೆ ಚೆನ್ನಾಗಿ ಬದುಕಬಹುದು.” ನಿಮ್ಮ ಈ ವಾಕ್ಯದ ಅಗತ್ಯವಿರಲಿಲ್ಲ.
              “ಗೋವಿಂದ ಪೈ ಅವರ ಅಣ್ಣೆಗನ್ನಡ ಓದಿದರೆ ಅವರು ಕೊಂಕಣಿ ಅಂತ ಹೇಳಕ್ಕೇ ಆಗಲ್ಲ.” ಇದೂ ಅಗತ್ಯವಿಲ್ಲದ ಮಾತು. ಕೊಂಕಣಿಗರಾಗಲಿ, ತುಳುವರಾಗಲಿ, ಬ್ಯಾರಿಗಳಗಲಿ ತಮ್ಮನ್ನು ಕನ್ನಡದಿಂದ ಬೇರ್ಪಡಿಸಿಲ್ಲ. ನೀವೇ ಅವರನ್ನು ಬೇರ್ಪಡಿಸುವ ಪ್ರಯತ್ನದಲ್ಲಿ ಇದ್ದೀರೆಂದು ಕಾಣುತ್ತದೆ. ಪೈಗಳೂ ನಮ್ಮಂತೆ ಕನ್ನಡಿಗರೇ. ಕೊಂಕಣಿಗರಾಗಿ ಕನ್ನಡ ಬರೆದರೆ ಆಶ್ಚರ್ಯಪಡುವುದೇನೂ ಬೇಡ.

              ಉತ್ತರ
              • ಮಾರ್ಚ್ 31 2011

                ರವಿ ಅವರೆ,

                ನನ್ನ ಮಟ್ಟಿಗೆ ನೀವು ಹೇಳುವ ಈ ಕೆಳಗಿನ ಮಾತು ನೂರಕ್ಕೆ ನೂರು ಸರಿ.

                “ಗೋವಿಂದ ಪೈ ಅವರ ಅಣ್ಣೆಗನ್ನಡ ಓದಿದರೆ ಅವರು ಕೊಂಕಣಿ ಅಂತ ಹೇಳಕ್ಕೇ ಆಗಲ್ಲ.” ಇದೂ ಅಗತ್ಯವಿಲ್ಲದ ಮಾತು. ಕೊಂಕಣಿಗರಾಗಲಿ, ತುಳುವರಾಗಲಿ, ಬ್ಯಾರಿಗಳಗಲಿ ತಮ್ಮನ್ನು ಕನ್ನಡದಿಂದ ಬೇರ್ಪಡಿಸಿಲ್ಲ. ನೀವೇ ಅವರನ್ನು ಬೇರ್ಪಡಿಸುವ ಪ್ರಯತ್ನದಲ್ಲಿ ಇದ್ದೀರೆಂದು ಕಾಣುತ್ತದೆ. ಪೈಗಳೂ ನಮ್ಮಂತೆ ಕನ್ನಡಿಗರೇ. ಕೊಂಕಣಿಗರಾಗಿ ಕನ್ನಡ ಬರೆದರೆ ಆಶ್ಚರ್ಯಪಡುವುದೇನೂ ಬೇಡ.

                ಉತ್ತರ
                • ಮಾರ್ಚ್ 31 2011

                  ಕನ್ನಡತನಕ್ಕೆ ಯಾರ certification ಅಗತ್ಯವಿಲ್ಲ ಬಿಡಿ.ಮಾಯ್ಸ ಅವರ ಈ ಸಿದ್ಧಾಂತ ಈಗಿನದಲ್ಲ ಅನ್ನುವುದು ನಿಮಗೂ ಗೊತ್ತಿದೆಯಲ್ವಾ? 🙂 … ಆ ಮಾತುಗಳನ್ನ ತುಂಬಾ ಸಿರೀಯಸ್ ಆಗಿ ತಗೋಬೇಡಿ 🙂

                  ಉತ್ತರ
                  • Ravi
                    ಏಪ್ರಿಲ್ 1 2011
                  • ಮಾಯ್ಸ
                    ಏಪ್ರಿಲ್ 2 2011

                    ನಿಲುಮೆಯಲ್ಲಿ ಅನಿಸಿಕೆಗಳ ಎಳೆ ಸರಿಯಾಗಿ ತೋರುತ್ತಿಲ್ಲ.. ನನಗೆ ರಾಕೇಶ ಶೆಟ್ಟಿ ಯಾವ ಅನಿಸಿಕೆ ಹೀಗೆ ಬರೆದಿದ್ದಾರೆ ಎಂದು ಗೊತ್ತಾಗ್ತಿಲ್ಲ.

                    ಕನ್ನಡತನದ certification ಅಂದರೇನು? ಸರಕಾರವೇ ಆಗಲೇ ಇದಕ್ಕೊಂದು ಕಟ್ಟಲೆ ಮಾಡಿಯಲ್ಲ.! ಆ certification ಕೊಡಲು ನಾನ್ಯಾರು? 🙂

                    ಕರಾಮಾದಲ್ಲಿ ಹೇಳಿದಯಲ್ಲ ‘ಕನ್ನಡ’ ಅನ್ನೋದೊಂದು ಅನಿಸು/ತುಡಿತ/ಭಾವನೆ. ಅದು ಇರೋರೆಲ್ಲ ಕನ್ನಡರೇ!
                    “ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್
                    ಭಾವಿಸಿದ ಜನಪದಂ
                    ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ”

                    ಉತ್ತರ
                    • “ಕರಾಮಾದಲ್ಲಿ ಹೇಳಿದಯಲ್ಲ ‘ಕನ್ನಡ’ ಅನ್ನೋದೊಂದು ಅನಿಸು/ತುಡಿತ/ಭಾವನೆ. ಅದು ಇರೋರೆಲ್ಲ ಕನ್ನಡರೇ!”

                      “(ಡಿವಿಜಿ) ಅವರು ಮನೆ ಮಾತು ತೆಲುಗು. ಅವರು ಕನ್ನಡಿಗರು ಆದುದು ಬರೀ ರಾಜಾಸ್ಥಾನದಲ್ಲಿ ಕೀರ್ತಿ ಗಿಟ್ಟಿಸಲು!”

                      “ರಾ.ಗಣೇಶ ಅವರು ಮನೆ ಮಾತು ತಮಿಳು, ಓದು ಸಂಸ್ಕೃತ”

                      “ಅನಿಸಿಕೆಗಳ ಎಳೆ ಸರಿಯಾಗಿ ತೋರುತ್ತಿಲ್ಲ..” – ಈ ಕೊನೆಯ ಮಾತು ಎಷ್ಟು ನಿಜ!!!

                • ಮಾಯ್ಸ
                  ಏಪ್ರಿಲ್ 4 2011

                  ಇದು ಯಾವುದಕ್ಕೂ ಅವರು ಮರುಬರೆಯರು.. 🙂

                  ಉತ್ತರ
                • ಮಾಯ್ಸ
                  ಏಪ್ರಿಲ್ 5 2011

                  ನಿಲುಮೆ,

                  ಈ ಅನಿಸಿಕೆಯನ್ನು ಅಳಿಸಿರಿ.. ಇಲ್ಲಿ “ಆದರೆ ಇಲ್ಲೇ ಮಾಯ್ಸ ಅವರು ನನ್ನನ್ನೂ ಸೇರಿದಂತೆ ಹಲವರನ್ನು “ಕನ್ನಡದ ಬಗ್ಗೆ ಮಾತನಾಡಲು ತಕ್ಕವರಲ್ಲ” ಎಂಬ ತೀರ್ಮಾನವನ್ನಾಗಲೇ ಕೊಟ್ಟಿದ್ದಾರಲ್ಲ! ಇದಕ್ಕೆ ಏನು ಹೇಳೋಣ?” ಎಂಬ ಚಾಡಿ ಮಾತಿದೆ.

                  ನಾನು ಹಾಗೇ ಹೇಳೇ ಇಲ್ಲ.. ಇದಕ್ಕೆ ನಾವು ಕೊಟ್ಟು ಉತ್ತರವನ್ನು ಅಳಿಸಿದ್ದೀರಿ. ಹಾಗೇ ಈ ಕೊಂಕುಬುದ್ದಿಯ ಅನಿಸಿಕೆಯನ್ನು ಅದರಲ್ಲೂ ನನ್ನ ನೇರ ದೋಶಾರೋಪವನ್ನು ಅಳಿಸಿರಿ.

                  ಇದೇ ಬಗೆಯಲ್ಲಿ ಇವರು ಮೂರುಕಡೆ ‘ತಾನು ಎರಡನೇ ದರ್ಜೆ’ ಎಂದು ನನ್ನಿಂದ ಅನ್ನಿಸಿಕೊಂಡರು ಎಂದು ಸುಳ್ಳು ಸುಳ್ಳೇ ಬರೆದುಕೊಂಡಿದ್ದಾರೆ.

                  ಉತ್ತರ
                  • Narendra Kumar.S.S
                    ಏಪ್ರಿಲ್ 5 2011

                    > ಆರ್. ಗಣೇಶ್ – ನುಡಿಯರಿಗರಲ್ಲ/ಸೊಲ್ಲರಿಗರಲ್ಲ…ಪಾಪ…ಆದ್ದರಿಂದ ನುಡಿ/ಬಾಶೆಯ ಬಗ್ಗೆ ಅವರ ಮಾತಿಗೆ ಹೆಚ್ಚು ಬೆಲೆ ಕೊಡಬೇಕಾಗಿಲ್ಲ
                    ಈ ಮೇಲಿನ ಮಾತುಗಳು ಮತ್ತು ಆ ಮಾತುಗಳನ್ನು ಸಮರ್ಥಿಸಿದ ಪ್ರತಿಕ್ರಿಯೆಗಳು, “ಕೆಲವರನ್ನು ಬಿಟ್ಟು ಇನ್ನು ಯಾರಿಗೂ ಮಾತನಾಡುವ, ಪ್ರತಿಕ್ರಿಯಿಸುವ ಹಕ್ಕಿಲ್ಲ” ಎಂದು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹೇಳಿವೆ.
                    ಹಾಗಿದ್ದ ಮೇಲೆ, ತಾವು ಹಾಗೆ ಹೇಳೇ ಇಲ್ಲ ಎಂದು ಹೇಳಿಕೊಳ್ಳುವುದರಲ್ಲಿ ಏನು ಜಾಣತನವಿದೆ?

                    > ಎಷ್ಟೇ ಆದರೂ ನಾನೂ, ನೀವು, ನಮ್ಮಂತಹವರೇ ಈ ನಾಡಿನ ಮೂಲವಾಸಿಗಳು ತಾನೆ! ನಮ್ಮ ನುಡಿ ನಮ್ಮ ಇಷ್ಟ!
                    ಏನು ಈ ಮಾತಿನ ಅರ್ಥ!? ಇದಲ್ಲವೇ Racism!?
                    ಇವರ ಹಿಂದೆ ಕೆಲಸ ಮಾಡುತ್ತಿರುವ ಮನಸ್ಸಿಗೆ ಬೇರೆ ರುಜುವಾತು ಬೇಕೇ?

                    > ಆದರೆ ಒಬ್ಬ ವ್ಯಕ್ತಿ ಮಾತ್ರ ಶಂಕರಬಟ್ಟರ ಪರವಾಗಿ ಮಾತಾಡಿ ಎಲ್ಲರನ್ನು ಶುಭಶ್ರೀ, ಭರತ್, ನಾನು ರೇಗಿಸುತ್ತಾ ಬಂದಿದ್ದಾರೆ
                    ಚರ್ಚೆಯಲ್ಲಿ ರೇಗುವುದು ಏತಕ್ಕೆ? ಇವರೇ ತಿಳಿಸುವಂತೆ, ಇವರು ಆಗಾಗ ರೇಗುತ್ತಿರುತ್ತಾರೆ!
                    ಇಂತಹವರಿಂದ ಅರ್ಥವತ್ತಾದ ಚರ್ಚೆ ಸಾಧ್ಯವೇ?
                    ಈಗ ಇವರು ಬೇರೆಯವರು ಚಾಡಿ ಹೇಳಿದರೆಂದು ಚಾಡಿ ಹೇಳಲಾರಂಭಿಸಿದ್ದಾರೆ! ಇದು ಬಾಲಿಶವಲ್ಲವೇ!?
                    ಇವರು ತಿಳಿಸುತ್ತಿರುವ “Comment”ಗಳನ್ನು ಅಳಿಸುವಂತೆ ಇವರ ಕೇಳಿಕೆ, “ಕುಂಬಳಕಾಯಿ ಕಳ್ಳ….” ಎನ್ನುವ ಗಾಧೆ ಮಾತನ್ನು ನೆನಪಿಗೆ ತರುತ್ತಿದೆ!
                    ಯಾರ “Comment”ಗಳನ್ನು ಅಳಿಸಿಹಾಕಲಾಯಿತು ಎನ್ನುವುದು ಇಲ್ಲಿಯವರೆಗೂ ಯಾರಿಗೂ ತಿಳಿದಿರಲಿಲ್ಲ.
                    ಇವರ ಕೇಳಿಕೆಯನ್ನು ನೋಡಿದ ಮೇಲೆ, ಯಾವ ಅನುಮಾನವೂ ಉಳಿಯದು. 🙂

                    ಉತ್ತರ
                    • ಏಪ್ರಿಲ್ 5 2011

                      ನರೇಂದ್ರ,
                      ಈ ವೈಯುಕ್ತಿಕ ಮಟ್ಟದ ಪ್ರತಿಕ್ರಿಯೆಗಳು ಇನ್ನಾದರೂ ನಿಲ್ಲಲಿ 🙂

                    • Narendra Kumar.S.S
                      ಏಪ್ರಿಲ್ 5 2011

                      +1 🙂

                  • ಏಪ್ರಿಲ್ 5 2011

                    ಮಾಯ್ಸ ಅವರೇ,
                    ಬಹುಷಃ ಎಲ್ಲವನ್ನು ಅಳಿಸಿದ್ದೇವೆ ಅನಿಸುತ್ತಿದೆ 🙂
                    ಇನ್ನು ಮುಂದೆಯಾದರೂ ಆರೋಗ್ಯಕರ ಚರ್ಚೆ ಮುಂದುವರೆಯಲಿ ಅನ್ನುವುದೇ ನಮ್ಮ ಆಶಯ 🙂

                    ಉತ್ತರ
                    • ಮಾಯ್ಸ
                      ಏಪ್ರಿಲ್ 5 2011

                      ಹು. ವೆರಿ ಗುಡ್.!

              • ಏಪ್ರಿಲ್ 1 2011

                ““ಈವತ್ತು ಕರ್ನಾಟಕದಲ್ಲಿ ಕನ್ನಡ ಗೊತ್ತಿಲ್ಲದೆ ಬದುಕುವುದ್ ಕಶ್ಟ. ಆದರೆ ಕೊಂಕಣಿ/ಹಿಂದಿ ಗೊತ್ತಿಲ್ಲದೆ ಚೆನ್ನಾಗಿ ಬದುಕಬಹುದು.” ನಿಮ್ಮ ಈ ವಾಕ್ಯದ ಅಗತ್ಯವಿರಲಿಲ್ಲ.” – ಯಾಕೆ? ಅದು ದಿಟವಲ್ಲವೆ?

                “ಕೊಂಕಣಿಗರಾಗಲಿ, ತುಳುವರಾಗಲಿ, ಬ್ಯಾರಿಗಳಗಲಿ ತಮ್ಮನ್ನು ಕನ್ನಡದಿಂದ ಬೇರ್ಪಡಿಸಿಲ್ಲ. ನೀವೇ ಅವರನ್ನು ಬೇರ್ಪಡಿಸುವ ಪ್ರಯತ್ನದಲ್ಲಿ ಇದ್ದೀರೆಂದು ಕಾಣುತ್ತದೆ” – ಇಲ್ಲ. ನಾನು ಹೇಳ ಹೊರಟಿದ್ದು ಕೊಂಕಣಿಗರು ಕನ್ನಡ ನೆಲನುಡಿಗೆ ತಕ್ಕಂತೆ ಒಗ್ಗಿಕೊಂಡಿದ್ದಾರೆ ಮತ್ತು ಅದರಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದಕ್ಕೆ ಅವರಿಗೆ ಸವಿಯೊದಗು.

                “ಹಾಗೆಂದು ಕನ್ನಡ ತುಳುವನ್ನು ತೆಗೆಯಹೊರಟರೆ ನಾನು ನನ್ನ ಮಾತೃಭಾಷೆಯನ್ನು ಹೊಸತಾಗಿ ಕಲಿಯಬೇಕು” – ಇದಕ್ಕೂ ಕನ್ನಡಕ್ಕೂ ಏನೊ ನಂಟಿಲ್ಲ… ನೀವು ಕೊಂಕಣಿಯಲ್ಲಿ ಏನು ಇಟ್ಕೊತಿರೊ ಏನ್ ಬಿಡ್ತಿರೊ ಅದು ನಿಮಗೆ ಬಿಟ್ಟಿದ್ದು.

                ಉತ್ತರ
                • Ravi
                  ಏಪ್ರಿಲ್ 1 2011

                  ಹೌದು ದಿಟವೆ ಭರತ, ಆದರೆ ಎಲ್ಲ ದಿಟ ಎಲ್ಲ ಸ್ಥಳಗಳಲ್ಲಿ ಅಗತ್ಯವಿಲ್ಲ ಎಂದೆನಷ್ಟೆ. ಇನ್ನೊದು ದಿಟ ಹೇಳಲೇ? ಕರ್ನಾಟಕದಲ್ಲಿ ಈಗಿರುವ ಕನ್ನಡದಿಂದ ಆರಾಮಾಗಿ ಬದುಕಬಹುದು. ನಿಮ್ಮ ಈ ಮಾತಾಡಲಾಗದ ಕನ್ನಡದಿಂದ ಬದುಕು ಹೈರಣಾಗುತ್ತದೆ ಅಷ್ಟೇ.

                  ಉತ್ತರ
                  • ಏಪ್ರಿಲ್ 1 2011

                    Ravi :
                    ಹೌದು ದಿಟವೆ ಭರತ, ಆದರೆ ಎಲ್ಲ ದಿಟ ಎಲ್ಲ ಸ್ಥಳಗಳಲ್ಲಿ ಅಗತ್ಯವಿಲ್ಲ ಎಂದೆನಷ್ಟೆ. ಇನ್ನೊದು ದಿಟ ಹೇಳಲೇ? ಕರ್ನಾಟಕದಲ್ಲಿ ಈಗಿರುವ ಕನ್ನಡದಿಂದ ಆರಾಮಾಗಿ ಬದುಕಬಹುದು. ನಿಮ್ಮ ಈ ಮಾತಾಡಲಾಗದ ಕನ್ನಡದಿಂದ ಬದುಕು ಹೈರಣಾಗುತ್ತದೆ ಅಷ್ಟೇ.

                    ಏನೆ ಆಗಲಿ 100% ನಿಜ

                    ಉತ್ತರ
                  • ಏಪ್ರಿಲ್ 1 2011

                    ರವಿ,
                    ” ಇನ್ನೊದು ದಿಟ ಹೇಳಲೇ? ಕರ್ನಾಟಕದಲ್ಲಿ ಈಗಿರುವ ಕನ್ನಡದಿಂದ ಆರಾಮಾಗಿ ಬದುಕಬಹುದು”

                    ಇಲ್ಲ, ಯಾಕಂದ್ರೆ

                    ೧. ಇವತ್ತು ಕನ್ನಡದಲ್ಲಿ BE, MBBS ಮಾಡಕ್ಕಾಗ್ತ ಇಲ್ಲ (ಅಂದರೆ ಇಂಗ್ಲಿಶ್ ಗೊತ್ತಿಲ್ಲದವರನ್ನು BE, MBBS ಮಾಡಕ್ಕೆ ನಾವು ಬಿಡದೇ ಇರುವ ವೆವಸ್ತೆ ಕಟ್ಟಿಕೊಂಡಿದ್ದೇವೆ. ಇದು ಅನ್ಯಾಯ/ಸಯ್ಪಲ್ಲ)

                    ೨. ಇವತ್ತು ಕನ್ನಡದಲ್ಲಿ software ಮಾಡಕ್ಕಾಗ್ತ ಇಲ್ಲ
                    ೩. ಇವತ್ತು ಕನ್ನಡಿಗರು ಜರ್ಮನ್ನರಂತೆಯೊ, ಇಸ್ರೇಲಿಗರಂತೆಯೊ ಹೊಸ ಹೊಸ ಅರಿಮೆಗಳಲ್ಲಿ ಮುಂದಿಲ್ಲ
                    ೪. ಇಂಗ್ಲಿಶಿಂದ ಎಲ್ಲ ಕನ್ನಡಿಗರ ಏಳಿಗೆ ಆಗಲ್ಲ.
                    ೫. ಕನ್ನಡದಲ್ಲಿ ಕಲಿಕೆ ವೇಗ ಪಡೆದುಕೊಳ್ಳಬೇಕಿದೆ. ಕನ್ನಡದಲ್ಲೇ ಎಲ್ಲ ಅರಿಮೆಗಳು ಸಿಗುವಂತಾಗಬೇಕಾದರೆ,ಕನ್ನಡದಲ್ಲೇ ಹೊಸ ಹೊಸ ಅರಿಮೆಯ ಬಗ್ಗೆ ಅರಕೆ/ಸಂಶೋದನೆಗಳು ಆಗಬೇಕಾದರೆ ಕನ್ನಡವನ್ನು ಸುಲಬ ಮಾಡಿ ಕಲಿಕೆಗೆ ಒಗ್ಗಿಸಬೇಕಾಗುತ್ತದೆ. ಇದಕ್ಕಾಗಿ ನುಡಿಯರಿಗ, ಸೊಲ್ಲರಿಗ ಮತ್ತು ಕಲಿಕೆಯರಿಗರ ದುಡಿಮೆ/ಅರಕೆ/ನೆರವು ನಮಗೆ ಬೇಕಾಗಿದೆ. ಕನ್ನಡ ಬರೀ ಸಾಹಿತ್ಯ, ಕವನ, ಹಾಡು, ಕುಣಿತ ಗಳಿಗೆ ಮೊಟಕುಗೊಳಿಸಬಾರದು. ಅದರಿಂದಾಚೆಗೂ ಕನ್ನಡವನ್ನ ಕೊಂಡೊಯ್ಯಬೇಕಾಗಿದೆ.

                    ಉತ್ತರ
                    • Ravi
                      ಏಪ್ರಿಲ್ 1 2011

                      ಒಪ್ಪಿದೆ. ನಮ್ಮ ದುರದೃಷ್ಟ. ಕನ್ನಡಿಗರು ಮಾತ್ರವಲ್ಲ ಭಾರತದ ಎಲ್ಲ ಭಾಷೆಗಳ ದುರದೃಷ್ಟ.
                      ೧. ಇವತ್ತು ಕನ್ನಡದಲ್ಲಿ BE, MBBS ಮಾಡಕ್ಕಾಗ್ತ ಇಲ್ಲ – ಭಾರತದ ತಮಿಳು ಸೇರಿ, ಬೇರೆ ಯಾವುದಾದರೂ ಭಾಷೆಯಲ್ಲಿ ಈ ಪ್ರಯತ್ನ ನಡೆದಿದೆಯೇ?, ಅದು ಯಶಸ್ವಿ ಆಗಿದೆಯೇ?
                      ೨. ಇವತ್ತು ಕನ್ನಡದಲ್ಲಿ software ಮಾಡಕ್ಕಾಗ್ತ ಇಲ್ಲ – ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಹೊಸ ಮಾದರಿ ಈ ನಿಟ್ಟಿನಲ್ಲಿ ಹೇಗೆ ಸಹಾಯ ಮಾಡಬಲ್ಲುದು? software ಕ್ಷೇತ್ರದಲ್ಲಿ ತಮಿಳಿಗೆ ಏನು ಸಾಧಿಸಲಿಕ್ಕಾಯಿತು? ಕನ್ನಡಕ್ಕಿಂತ ಸ್ವಲ್ಪ ಮುಂದಿರಬಹುದೇ ವಿನಃ ಬೇರಾವ ಮಹಾ ಸಾಧನೆ ಮಾಡಿಲ್ಲ.
                      ೪. ಇಂಗ್ಲಿಶಿಂದ ಎಲ್ಲ ಕನ್ನಡಿಗರ ಏಳಿಗೆ ಆಗಲ್ಲ – ಖಂಡಿತ ಒಪ್ಪತಕ್ಕ ಮಾತು. ಕನ್ನಡ ಬಳಕೆ ಜಾಸ್ತಿ ಮಾಡೋಣ. ಆದರೆ ಇದ್ದ ಪದಗಳ ಅಸಂಬದ್ಧ ಉಚ್ಚಾರ ಸರಿಯಲ್ಲ (ಬರತ ವೆ ತೆಗೆದುಕೊಳ್ಳಿ)
                      ೫. ಕನ್ನಡದಲ್ಲಿ ಕಲಿಕೆ ವೇಗ ಪಡೆದುಕೊಳ್ಳಬೇಕಿದೆ. – ಖಂಡಿತ.

                      ಭಾರತದಂಥ ದೇಶದಲ್ಲಿ ಪ್ರತೀ ಭಾಷೆಯೂ ಸ್ವಂತ ಶಿಕ್ಷಣ ಮಾಧ್ಯಮ ಇಟ್ಟುಕೊಳ್ಳುವುದು ತುಸು ಕಷ್ಟ. ಬೆಂಗಳೂರೇ ತೆಗೆದುಕೊಳ್ಳಿ, ಎಷ್ಟು ಅನ್ಯ ಭಾಷಿಗರಿಲ್ಲ? ಅವರೆಲ್ಲ ಹಿಂದಿಯಲ್ಲಿ BE ಮಾಡಿದ್ದರೆ, ಬೆಂಗಳೂರಲ್ಲಿ ದುಡಿಮೆ ಸಾಧ್ಯವಿತ್ತೆ? ಅವರು ಬಂದಿರುವುದರಿಂದ ನಮ್ಮ ಆದಾಯ ಹೆಚ್ಚಾಗಿರುವುದು ಸುಳ್ಳಲ್ಲ. ಕನ್ನಡವರು ಅಮೆರಿಕೆಗೆ ಹೋಗುವುದು ಸಾಧ್ಯವಿತ್ತೆ? ಈಗ ಕನ್ನಡದ ಜೊತೆ ಇಂಗ್ಲಿಷ್ ಮಾಧ್ಯಮವೂ ಇರಲಿ ಇಟ್ಟುಕೊಳ್ಳೋಣ. ಎಷ್ಟು ಜನ ಕನ್ನಡ ಮಾಧ್ಯಮ ತೆಗೆದುಕೊಂಡಾರು, ಇಂಗ್ಲಿಷಿನಲ್ಲಿ ಇಂಥ ಪ್ರಯೋಜನಗಳನ್ನು ಬಿಟ್ಟು? ಹಾಗೆಂದು ಭಾರತದ ಎಲ್ಲ ಭಾಷೆಗಳವರು ತಮ್ಮ ಭಾಷೆಗಳನ್ನೇ ಹೇರಿದರೆ ರಾಜ್ಯಗಳು ದ್ವೀಪಗಳಾದಂತೆಯೇ…

                    • Priyank
                      ಏಪ್ರಿಲ್ 1 2011

                      ರವಿ ಅವರೇ,

                      ಕಲಿಕೆಗೂ ಭಾಷೆಗೂ ಇರುವ ಸಂಬಂಧ ತಾವು ಅರಿತಂತಿಲ್ಲ. ಈ ಕೆಲವು ವಿಷಯಗಳನ್ನು ತಮ್ಮ ಮುಂದಿಡುತ್ತೇನೆ.
                      ಒಮ್ಮೆ ಯೋಚಿಸಿ ನೋಡಿ.
                      ಕಲಿಕೆಯು ತಾಯ್ನುಡಿಯಲ್ಲಿ ನಡೆದರೆ ಒಳಿತು ಅನ್ನೋದನ್ನ ಇಡೀ ಜಗತ್ತೇ ಒಪ್ಪುತ್ತೆ. ಯುನೆಸ್ಕೋ ಸಂಸ್ಥೆ ಕೂಡ, ಇದನ್ನೇ ಪ್ರತಿಪಾದಿಸುತ್ತೆ.
                      ಯಾಕಂದ್ರೆ, concept ಕಲಿಕೆ ತಾಯ್ನುಡಿಯಲ್ಲಿ ಹೆಚ್ಚು ಪರಿಣಾಮಕಾರಿ. ತಾಯ್ನುಡಿಯಲ್ಲಿ ಕಲಿತ ಎಷ್ಟೋ ದೇಶದ (ಉದಾಹರಣೆಗಳು ನಿಮಗೆ ತಿಳಿದಿರುತ್ತವೆ ಎಂದು ನಂಬಿದ್ದೇನೆ) ಜನರು, ತಮ್ಮ ಜ್ನ್ಯಾನವನ್ನ ಹೆಚ್ಚುಸ್ಕೊಳ್ತಾ ಇರೋದು ನೋಡಬಹುದು.
                      ತಮ್ಮ ಜ್ನ್ಯಾನವನ್ನ ಎಲ್ಲೆಡೆ ತೊಡಗಿಸಿ ಒಳ್ಳೆಯ ಸಮಾಜ ಕಟ್ಟಿದ್ದಾರೆ ಕೂಡ. ಅವರಿಗೆ ಈ ಮಟ್ಟಿನ ಸಾಧನೆ ಮಾಡುವಲ್ಲಿ, ಅವರ ನುಡಿಯ ಪಾತ್ರ ದೊಡ್ಡದಿದೆ.
                      ಹೆಚ್ಚಿನ ಕಲಿಕೆಗೆ ಇಂಗ್ಲೀಶ್ ಬೇಕು ಎಂಬ ಸ್ಥಿತಿ ಇವತ್ತು ನಮ್ಮಲ್ಲಿ ಇರೋದರಿಂದ, ಇಂಗ್ಲೀಶ್ ಎಂಬ ಗೋಡೆ ದಾಟಲಾದವರು ಮಾತ್ರ ಹೆಚ್ಚಿನ ಕಲಿಕೆ ಪಡೆಯುತ್ತಿದ್ದಾರೆ. ಆಗದವರು, ಹಿಂದೆ ಉಳಿಯುತ್ತಿದ್ದಾರೆ. ಇಂಗ್ಲೀಶ್ ಕಲಿಯಲಾಗದವರ ಸಂಖ್ಯೆ ಹೆಚ್ಚು.

                      “ಎಲ್ಲಾ ರಾಜ್ಯಗಳೂ ತಮ್ಮ ತಮ್ಮ ನುಡಿಯಲ್ಲಿ ಕಲಿಕೆ ಹೇರಿದರೆ, ರಾಜ್ಯಗಳು ದ್ವೀಪಗಳಾಗುತ್ತವೆ, ಅದು ಬೇಕಾಗಿಲ್ಲ” ಎಂಬ ಅರ್ಥದಲ್ಲಿ ನೀವು ಹೇಳಿದ್ದೀರ.
                      ಪ್ರತಿಯೊಂದು ಭಾಷಿಕ ಸಮುದಾಯಕ್ಕೂ, ಇತರೆ ಭಾಷಿಕ ಸಮುದಾಯಗಳೊಡನೆ ವ್ಯವಹಾರ ಮಾಡಬೇಕಾಗಿ ಬಂದೇ ಬರುತ್ತದೆ. ವ್ಯವಹಾರ ಮಾಡುವವರು ಒಂದು ಲಿಂಕ್ ಲಾಂಗ್ವೇಜ್ ಬಳಸೋದು ನೀವೂ ಕಂಡಿರ್ತೀರ.
                      ಅಂತಹ ಒಂದು ಲಿಂಕ್ ಲಾಂಗ್ವೇಜ್ ಅನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳಬಹುದು. ಆ ಮೂಲಕ ನೀವು ಹೇಳಿದ ತೊಂದರೆ ತಪ್ಪಿಸಬಹುದು.
                      ಆದರೆ, ಲಿಂಕ್ ಲಾಂಗ್ವೇಜ್ ಅನ್ನು ಭಾಷಿಕ ಸಮುದಾಯದ ಎಲ್ಲರೂ ಕಲಿಯಬೇಕಾದ ಅವಶ್ಯಕತೆ ಇಲ್ಲ. ಯಾರಿಗೆ, ಕಲಿಯಬೇಕು ಎಂಬ ಆಸಕ್ತಿ ಇರುತ್ತೋ ಅವರು ಕಲಿಯುತ್ತಾರೆ.
                      ಇಂತದೆ ಒಂದು ವ್ಯವಸ್ಥೆ, ಹಲವು ದೇಶಗಳಲ್ಲಿ ಇರೋದು ನೀವು ನೋಡಿರಬಹುದು. ಜಪಾನ್ ದೇಶದ ಉದಾಹರಣೆ ತಗೊಂಡ್ರೆ, ಅವರು ಹಲವು ದೇಶಗಳೊಡನೆ ವ್ಯವಹಾರ ಮಾಡುವಾಗ ಇಂಗ್ಲೀಶ್ ಬಳಸುತ್ತಾರೆ.
                      ಜಪಾನ್ ದೇಶದ ಜನರು, ಇಂಗ್ಲೀಶ್ ಅನ್ನು ಇತರೆ ಭಾಷಿಕ ಸಮುದಾಯಗಳ ಜೊತೆ ವ್ಯವಹಾರಕ್ಕಾಗಿ ಲಿಂಕ್ ಲಾಂಗ್ವೇಜ್ ಆಗಿ ಮಾಡಿಕೊಂಡಿದ್ದಾರೆ ಎಂದೇ ಹೇಳಬಹುದು.
                      ಆದರೆ, ಜಪಾನ್ ದೇಶದ ಎಲ್ಲರಿಗೂ ಇಂಗ್ಲೀಶ್ ಬರೋಲ್ಲ. ಕೆಲವರು ಮಾತ್ರ ಇಂಗ್ಲೀಶ್ ಕಲಿತಿದ್ದಾರೆ. ನಮ್ ದೇಶಕ್ಕಿಂತ ಹೆಚ್ಚು ಇತರೆ ದೇಶಗಳ ಜೊತೆ ವ್ಯಾಪಾರ ಮಾಡ್ತಿರೋ ಜಪಾನಿನಲ್ಲಿ ನೀವು ಹೇಳಿದಂತ ತೊಂದರೆ ಕಾಣಿಸುತ್ತಿಲ್ಲ.

                    • Ravi
                      ಏಪ್ರಿಲ್ 1 2011

                      ಇಲ್ಲ ಪ್ರಿಯಾಂಕ್, ನನ್ನ ಹಿಂದಿನ ಪ್ರತಿಕ್ರಿಯೆ ಮತ್ತೊಮ್ಮೆ ಓದಿ. ನಾನು ಭಾರತದಂತಹ ದೇಶದಲ್ಲಿ ಇಂಥ ವ್ಯವಸ್ಥೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಮಾತನಾಡಿದೆ ವಿನಃ ಯಾವುದೇ ಪರ ವಹಿಸಲಿಲ್ಲ. ಸದ್ಯ ನಾನಿರುವುದು ಥಾಯ್ಲ್ಯಾಂಡ್ ನಲ್ಲಿ. ಇಲ್ಲಿ ನೀವು ಹೇಳಿದ ಲಿಂಕ್ ಭಾಷೆಯ ವ್ಯವಸ್ಥೆಯನ್ನ ನಾನು ಮೊದಲೇ ನೋಡಿದ್ದೇನೆ. ಅದು ಇಲ್ಲಿ ಬಹಳ ಚೆನ್ನಾಗಿ ಅಳವಡಿಸಲ್ಪಟ್ಟಿದೆ. ಜನರಿಗೆ ಇಂಗ್ಲಿಷ್ ಬರದಿದ್ದರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪರದೇಶಿಗರು ಇಲ್ಲಿ ಬರುತ್ತಾರೆ. ನಮ್ಮಲ್ಲೂ ಇದು ಯಾಕೆ ಸಾಧ್ಯವಿಲ್ಲ ಎಂದು ಯೋಚಿಸಿದ್ದೇನೆ. ಥಾಯ್ಲ್ಯಾಂಡ್, ಜಪಾನ್, ಜರ್ಮನಿ ಇವೆಲ್ಲ ದೇಶಗಳು. ಕರ್ನಾಟಕ ರಾಜ್ಯ. ಇಂಥ ಅನೇಕ ರಾಜ್ಯಗಳಿವೆ ನಮ್ಮಲ್ಲಿ. ಇಡೀ ದೇಶಕ್ಕೆ ಒಂದೇ ಭಾಷೆ ಇದ್ದಿದ್ದರೆ ಇದು ಸಾಧ್ಯವಿತ್ತು. ಈ ವ್ಯವಸ್ಥೆಯ ಅಳವಡಿಕೆ ಕಷ್ಟ ಎಂಬ ಅಭಿಪ್ರಾಯ ನನ್ನದು.

                    • Priyank
                      ಏಪ್ರಿಲ್ 1 2011

                      ರವಿ ಅವರೇ,

                      ನೀವು ಇತರೆ ಸಮುದಾಯಗಳನ್ನು ನೋಡಿ, ನಮ್ಮ ಮತ್ತು ಅವರ ವ್ಯವಸ್ಥೆಗಳ ನಡುವೆ ಇರುವ ವ್ಯತ್ಯಾಸ ಅರಿಯಲು ಪ್ರಯತ್ನಿಸಿರೋದು ಮೆಚ್ಚಬೇಕಾದ್ದೆ.

                      ದೇಶ ರಾಜ್ಯಗಳೆಂಬ ಗೊಂದಲ ಬೇಡ ಎಂದೇ, ನಾನು ‘ಭಾಷಿಕ ಸಮುದಾಯ’ ಎಂದು ಕರೆದದ್ದು.
                      ನಮ್ಮ ದೇಶದ ಪ್ರತಿಯೊಂದು ಭಾಷಿಕ ಸಮುದಾಯದಲ್ಲೂ, ನಾನು ತೆಗೆದುಕೊಂಡ ಉದಾಹರಣೆಯ ರೀತಿಯಲ್ಲಿ, ಭಾಷೆಯ ಮೂಲಕ ಏಳಿಗೆಯಾದರೆ ಎಲ್ಲರಿಗೂ ಒಳಿತು.
                      ನಮ್ಮ ಭಾಷಿಕ ಸಮುದಾಯಗಳು, ತಮ್ಮ ತಮ್ಮ ಏಳಿಗೆಗೆ ತಮ್ಮ ಭಾಷೆ ಮೇಲೆ ಒರಗಿ, ವ್ಯವಹಾರಕ್ಕಾಗಿ ಒಂದು ಲಿಂಕ್ ಲಾಂಗ್ವೇಜ್ ಇಟ್ಟುಕೊಂಡರೆ ಎಲ್ಲರಿಗೂ ಅನುಕೂಲ. ಅದು ಸಾಮಾಜಿಕ ನ್ಯಾಯ ಕೂಡ.
                      ಆ ಲಿಂಕ್ ಲಾಂಗ್ವೇಜ್, ಒಂದು ಭಾಷಿಕ ಸಮುದಾಯಕ್ಕೆ ಇತರೆ (ಹೆಚ್ಚಿನ) ಭಾಷಿಕ ಸಮುದಾಯಗಳ ಜೊತೆ ವ್ಯವಹಾರಕ್ಕೆ ಆಗಿಬರುವಂತಿರಬೇಕು.
                      ಲಿಂಕ್ ಲಾಂಗ್ವೆಜನ್ನು ಎಲ್ಲರೂ ಕಲಿಯಬೇಕಾಗಿಲ್ಲವಾದ್ದರಿಂದ, ಒಂದು ಭಾಷೆಯನ್ನು ಇನ್ನೊಬ್ಬರ ಮೇಲೆ ಹೇರುವ ಕೆಲಸವೂ ಬೇಕಾಗಿಲ್ಲ.

                      ಇಂತಹ ವ್ಯವಸ್ಥೆಯ ಅಳವಡಿಕೆಯೇ ಸುಲಭವಾದ್ದು. ಜನರಿಗೆ ತಾನಾಗೇ ಬರುವ ಭಾಷೆಯಲ್ಲಿ ಎಲ್ಲವೂ ಸಿಕ್ಕುವಂತೆ ಮಾಡುವುದು ಏಳಿಗೆಗೆ ಒಳದಾರಿ.
                      ದೇಶಕ್ಕೆ ಒಂದು ನುಡಿ ಬೇಕು ಎಂದು ಹೊರಟು, ಒಂದು ನುಡಿಯನ್ನು ಎಲ್ಲರಿಗೂ ಕಲಿಸಲು ತಿಣುಕಾಡಿ, ದುಡ್ಡು ಖರ್ಚು ಮಾಡಿ, ಜನರ ನಡುವೆ ಒಡಕು ಮೂಡಿಸೋದು ಕಷ್ಟದ ಕೆಲಸ ತಾನೇ.

                    • ಏಪ್ರಿಲ್ 1 2011

                      “ತಮಿಳು ಸೇರಿ, ಬೇರೆ ಯಾವುದಾದರೂ ಭಾಷೆಯಲ್ಲಿ ಈ ಪ್ರಯತ್ನ ನಡೆದಿದೆಯೇ”
                      ತಮಿಳ್ ನಾಡಿನಲ್ಲಿ ಸುರು ಮಾಡಿದ್ದಾರೆ.

                      ಹಿಂದು ಸುದ್ದಿಹಾಳೆಯಲ್ಲಿ ಬಂದ ಈ ವರದಿ ನೋಡಿ.

                      ಹಿಂದಿನ ವರುಶವೆ (೨೦೧೦) ಇಂಜಿನಿಯರಿಂಗ್ ಸುರು ಆಗಿದೆ.
                      ಈ ವರುಶದಿಂದ(೨೦೧೧) ಮೆಡಿಕಲ್ ಸುರು ಆಗುತ್ತಾ ಇದೆ.

                      VILLUPURAM, July 3, 2010 Medical courses in Tamil from next year: Ponmudy
                      http://www.thehindu.com/news/states/tamil-nadu/article497155.ece

                      Learning in mother tongue Tamil will give a fillip to creativity and hence Tamil medium has been introduced in engineering courses from this academic year.

                      From the next academic year, medical studies will also be introduced in Tamil, said Higher Education Minister K. Ponmudy

                    • ಏಪ್ರಿಲ್ 1 2011

                      ಭರತ್,
                      ನನ್ನ ಬಹಳ ದಿನಗಳ ಆಸೆ ನಮ್ಮ ಹುಡುಗರು ಕನ್ನಡದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಲಿಯುವುದನ್ನು ನೋಡಬೇಕೆಂಬುದು. ನಮ್ಮ ಕಲಾವಿಭಾಗದ ವಿದ್ಯಾರ್ಥಿಗಳು ಕನ್ನಡದಲ್ಲಿ ಓದುತ್ತಾರಾದರೆ ವಿಜ್ಞಾನದ ವಿಷಯಗಳದ್ದೇನು ವಿಶೇಷ? ಇದು ನಮ್ಮ ಆಡಳಿತಗಾರರಿಗೆ ಮತ್ತು ಹೆತ್ತವರಿಗೆ ಗೊತ್ತಿರಬೇಕಾದ ವಿಷಯ. ವಿಜ್ಞಾನ ಕಲಿತವರೆಲ್ಲರೂ ವಿದೇಶಗಳಿಗೆ ಹೋಗುತ್ತಾರಾ? ವಿಜ್ಞಾನ ಇಂಗ್ಲೀಶ್ ನಲ್ಲಿ ಇರುವುದರಿಂದಲೇ ಎಷ್ಟೋ ವಿಜ್ಞಾನ ಪ್ರಿಯ ವಿದ್ಯಾರ್ಥಿಗಳು ಅದನ್ನು ಓದುತ್ತಿಲ್ಲ . ಇದು ತೀರಾ ದುರದೃಷ್ಟಕರ ಮತ್ತು ಸಾಮಾಜಿಕ ನ್ಯಾಯದ ಉಲ್ಲಂಘನೆ.

                      ಸಾತ್ವಿಕ್

                    • ಏಪ್ರಿಲ್ 1 2011

                      “.. ಬೆಂಗಳೂರೇ ತೆಗೆದುಕೊಳ್ಳಿ, ಎಷ್ಟು ಅನ್ಯ ಭಾಷಿಗರಿಲ್ಲ? ಅವರೆಲ್ಲ ಹಿಂದಿಯಲ್ಲಿ BE ಮಾಡಿದ್ದರೆ, ಬೆಂಗಳೂರಲ್ಲಿ ದುಡಿಮೆ ಸಾಧ್ಯವಿತ್ತೆ”

                      ವಲಸಿಗರನ್ನು ಹೇಗೆ ನಮ್ಮವರನ್ನಾಗಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನ ಪಿನ್ ಲ್ಯಾಂದನ್ನ ನೋಡಿ ಕಲಿತುಕೊಳ್ಳಬೇಕು.

                      Interview with Finland’s Education minister:-

                      http://hechingerreport.org/content/an-interview-with-henna-virkkunen-finlands-minister-of-education_5458/

                      The Hechinger Report: How does Finland incorporate immigrants and minorities into its educational system?

                      Virkkunen(Finland’s education minister): In some schools, in the areas around Helsinki, more than 30 percent of the pupils are immigrants. It seems that we have been doing good work, also with the immigrants, if we look at PISA results. Normally, if children come from a very different schooling system or society, they have one year in a smaller setting where they study Finnish and maybe some other subjects. We try to raise their level before they come to regular classrooms. We think also that learning one’s mother tongue is very important, and that’s why we try to teach the mother tongue for all immigrants as well. It’s very challenging. I think in Helsinki, they are teaching 44 different mother tongues. The government pays for two-hour lessons each week for these pupils. We think it is very important to know your own tongue—that you can write and read and think in it. Then it’s easier also to learn other languages like Finnish or English, or other subjects

                    • ಮಾಯ್ಸ
                      ಏಪ್ರಿಲ್ 2 2011

                      ಈಗ ತಾನೇ ಪಿನ್‌ಲ್ಯಾಂಡಿನಿಂದ ಬಂದೆ.. ಅಲ್ಲಿಯ ಮ್ಯೂಸಿಯಮ್ಮಲ್ಲಿ ಅವರ ನುಡಿಹೋರಾಟದ ಬಗ್ಗೆ ಇದೆ. ಸ್ವೀಡಿಶ್ ಮತ್ತು ರಶ್ಶಿಯನ್ ನುಡಿಗಳ ನಡುವೆ ಸಿಕ್ಕಿ ಹಾಕಿಕೊಂಡು ಒದ್ದಾಡಿದ ನುಡಿಯದು.

                  • Priyank
                    ಏಪ್ರಿಲ್ 1 2011

                    ರವಿ ಅವರೇ,

                    ನಿಮ್ಮ ಹಳೆಯ ಕಾಮೆಂಟುಗಳಲ್ಲಿ ಹಲವನ್ನು ನಾನೂ ಒಪ್ಪುತ್ತೇನೆ.
                    ‘ಬದುಕು ಹೈರಾಣಾಗುತ್ತದೆ’ ಎಂಬ ತೀರ್ಪನ್ನು ನೀವು ಪೂರ್ತಿ ತಿಳಿಯದೇ ಕೊಟ್ಟಿದ್ದೀರ ಎಂದು ನನಗನಿಸುತ್ತಿದೆ.
                    ಕನ್ನಡ ಬರವಣಿಗೆ ಸುಲಭಗೊಳಿಸುವುದು, ಶಾಲೆಗಳ ಪಟ್ಯದಲ್ಲಿ ಆಡು ನುಡಿಗೆ ಹತ್ತಿರವಿರುವ ಪದಗಳನ್ನು ಅಳವಡಿಸುವುದರಿಂದ, ಜನರ ಬದುಕು ಸುಲಭವಾಗುತ್ತದೆ.
                    ಶಾಲೆಗಳ ಪಟ್ಯದಲ್ಲಿ “ದ್ಯುತಿ ಸಂಶ್ಲೇಷಣ ಕ್ರಿಯೆ”, “ಶ್ರುಂಗಾಭಿಮುಖ ಕೋನ”, “ವಿಲೋಮ”, “ವ್ಯುತ್ಕ್ರಮ”, “ನಿರ್ದೇಶಾಂಕ” ಇತ್ಯಾದಿ ಪದಗಳನ್ನು ಬಳಸುತ್ತಿರೋದರಿಂದ ನಿಜಕ್ಕೂ ಕನ್ನಡ ಮಕ್ಕಳ ಬದುಕು ಹೈರಾಣಾಗಿದೆ.

                    ಉತ್ತರ
                    • Ravi
                      ಏಪ್ರಿಲ್ 1 2011

                      ಭರತರಿಗೆ ಪ್ರತಿಕ್ರಿಯಿಸುವ ಭರದಲ್ಲಿ ಆದ ತಪ್ಪು. ತೀರ್ಪು ಕೊಡಬಾರದಿತ್ತು. 🙂 “ಬದುಕು ಹೈರಾಣಾಗಬಹುದು” ಎನ್ನಬೇಕಿತ್ತು.

                    • “ಆಡು ನುಡಿಗೆ ಹತ್ತಿರವಿರುವ ಪದಗಳನ್ನು…”

                      ““ದ್ಯುತಿ ಸಂಶ್ಲೇಷಣ ಕ್ರಿಯೆ”, “ಶ್ರುಂಗಾಭಿಮುಖ ಕೋನ”, “ವಿಲೋಮ”, “ವ್ಯುತ್ಕ್ರಮ”, “ನಿರ್ದೇಶಾಂಕ” ಇತ್ಯಾದಿ” ಆಡುನುಡಿಗೆ ದೂರ, ಒಪ್ಪಿದೆ. ಆದರೆ “ಎದೆಮಾಂಜುಗಾರ, ತಲೆಮಾಂಜುಗಾರ, ಉಂಕಿಸು, ಬೊಟ್ಟುಗಳು, ಪಡೆಪು, ತಕ್ಕುಮೆ , ಆರ್ಪು”… ಇವೆಲ್ಲ ಆಡುನುಡಿಗೆ ಹತ್ತಿರವೆಂದು ಒಪ್ಪಲು (ಕೊನೇಪಕ್ಷ ನಂಬಲು) ಮನಸ್ಸು ಬರುತ್ತಿಲ್ಲ.

                      ಇದೊಳ್ಳೇ ಬಾಣಲೆಯಿಂದ ಬೆಂಕಿಗೆ ಹಾರಿಕೋ ಎಂದಂತಾಯಿತು

                    • ಏಪ್ರಿಲ್ 2 2011

                      ಮಂಜುನಾಥ,
                      ಎದೆ ಅಂದ್ರೆ ಗೊತ್ತಿಲ್ವ,
                      ತಲೆ ಅಂದ್ರೆ ಗೊತ್ತಿಲ್ವ,
                      ಗಾರ ( ಓಲೆಗಾರ, ಸೊಗಸುಗಾರ, ಹೂಗಾರ ಗೊತ್ತಿಲ್ವ)
                      ಮದ್ದು =ಔಷದಿ ಅಂತ ತಮಗೆ ಗೊತ್ತಿಲ್ಲವ?

                      ಬೊಟ್ಟು ( ಹಣೆಯಲ್ಲಿ ಹೆಂಗಸರು ಬೊಟ್ಟು ಇಡುವುದ್ ತಮಗೆ ಗೊತ್ತಿಲ್ವ)
                      ಪಡೆಪು( ನೀವು ನಿಮ್ಮ ಬದುಕಿನಲ್ಲಿ ಏನನ್ನೂ ’ಪಡೆ’ದೇ ಇಲ್ವ)
                      ತಕ್ಕುಮೆ( ನಿಮಗೆ ನಿಮ್ಮ ಕಲಿಕೆಗೆ ’ತಕ್ಕ’ ಕೆಲಸ ಸಿಕ್ಕಿಲ್ವ)
                      ಆರ್ಪು( ನೀವು ಯಾವುದೇ ಕೆಲಸ ಮಾಡಲಾರೆ(ಮಾಡಲ್+ಆರ್+ಎ) ಅಂತ ಹೇಳಿದ್ದೀರ)

                      ಕನ್ನಡದಲ್ಲಿ ಇಶ್ಟೊಂದು ಓದಿರುವ ನಿಮಗೆ ಎಸಗುಪದಗಳಿಗೆ(ಕ್ರಿಯಾಪದ) ’ಪು’, ’ಮೆ’ ಸೇರಿಸಿ ಹೆಸರುಪದಗಳನ್ನಾಗಿ ಮಾಡುವ ಒಂದು ಚಳಕ ಕನ್ನಡದಲ್ಲಿದೆ ಎಂಬುದು ನಿಮಗೆ ಗೊತ್ತಿದೆ ಅಂತ ನನಗೆ ಚೆನ್ನಾಗಿ ಗೊತ್ತು.
                      ಆರ್ +ಪು = ಆರ್ಪು,
                      ತಕ್ಕು(ತಕ್ಕ)+ಮೆ = ತಕ್ಕುಮೆ
                      ಪಡೆ+ಪು = ಪಡೆಪು

                      ನನ್ನಿ,
                      ಬರತ್

                    • ಬರತಕುಮಾರ,

                      “ಎದೆ ಅಂದ್ರೆ ಗೊತ್ತಿಲ್ವ… ಇತ್ಯಾದಿ” – ನನಗೆ ಗೊತ್ತಿದೆ, ಆದರೆ ಇವನ್ನೆಲ್ಲ ಜನಪ್ರಿಯಗೊಳಿಸಲು ನೀವು ಹೊರಟ ಜನಪದಕ್ಕೆ ಇವು ಅಷ್ಟಾಗಿ ನೆನಪಿದೆಯೋ ಇಲ್ಲವೋ ಕಾಣೆ. ಮಾಂಜುಗಾರ ಎಂದರೆ ಎಂಬಿಬಿಎಸ್ ಡಾಕ್ಟರು ಇರಲಿ ಕನ್ನಡ ಪಿ ಹೆಜ್ ಡಿ ಡಾಕ್ಟರೂ ಮುಖಮುಖ ನೋಡಿಯಾರು ಅಂತಷ್ಟೇ ನಾನು ಹೇಳಿದ್ದು. ಅಂದಹಾಗೆ ನಿಮ್ಮ ಪದಕೋಶದಲ್ಲಿ “ಮದ್ದು” ಎಂದಿರಿ, “ಮಾಂಜು” ಅನ್ನುವುದನ್ನು ನೀವೂ ವಿವರಿಸಲಿಲ್ಲ 😉

                    • “http://kn.wiktionary.org/wiki/%E0%B2%AE%E0%B2%BE%E0%B2%82%E0%B2%9C%E0%B3%81”

                      ಈ ರೀತಿ ಎತ್ತುಗೆಗಳನ್ನು ನಾನೂ ಕೊಡುತ್ತೀನಿ, ಜೈ ಗೂಗಲೇಶ್ವರ. ಆದರೆ ನೀವು ತಲುಪಬೇಕೆಂದಿರುವ ನಾಡಿನ ಮೂಲೆಯ ಹಳ್ಳಿಗಾಡಿನ ಹೈಕಳಿಗೆ ಈ ರೀತಿ web-link ಗಳೆಲ್ಲಾ ಕೈ ಹತ್ತುವುದಿಲ್ಲ. ಬಾಸೆ ಸಿಮ್ಪಲ್ ಮಾಡಬೇಕು ಅನ್ನೋರು explanationಎಲ್ಲ ಇಸ್ಟು complicate ಮಾಡ್ಬುಟ್ರೆ ಹ್ಯಾಗೆ?

                    • shanti
                      ಏಪ್ರಿಲ್ 9 2011

                      ++1

                    • shanti
                      ಏಪ್ರಿಲ್ 9 2011

                      ++100

          • Shubhashree
            ಮಾರ್ಚ್ 31 2011

            ರವಿಯವರೇ,

            ಇದ್ದದ್ದನ್ನು ಮುಂದುವರೆಸುವುದಕ್ಕಿಂತಾ, ಇದ್ದದ್ದರಿಂದ ಬದಲಾವಣೆ ಹೊಂದುವುದು ನಿಜಕ್ಕೂ ತೊಡಕಿನ ಮಾತೇ. ಆದರೆ ನಿಂತಲ್ಲಿಂದ ಸರಿಯಾದ ಗುರಿಯೆಡೆಗೆ ಹೋಗಬೇಕಾದರೆ ಈ ಅನಿವಾರ್ಯತೆ ಇದ್ದದ್ದೇ. ಹೇಗೆ ನಿಧಾನವಾಗಿ ಪರಭಾಷಾಪದಗಳು ಪದಗಳು ಕನ್ನಡವನ್ನು ಹೊಕ್ಕವೋ ಹಾಗೇ ಕನ್ನಡದಿಂದ ಹೊರಕ್ಕೂ ಹೋಗಬಲ್ಲವು.(ಹೋಗಲೇಬೇಕು ಅನ್ನೋದು ನನ್ನ ನಿಲುವಲ್ಲ. ನಿಜಕ್ಕೂ ಯಾವ ಪದಗಳನ್ನು ತೊಡಕಿಲ್ಲದೆ ಕನ್ನಡಿಗರು ಬಳಸುತ್ತಾರೋ ಅವೆಲ್ಲಾ ಉಳಿಯುತ್ತವೆ, ಹಾಗೇ ತೊಡಕಿನ ಕನ್ನಡ ಪದವೂ ಬಳಕೆಯಿಂದ ದೂರ ಹೋಗುತ್ತದೆ)

            ಇಲ್ಲಿ ಯಾರಾದರೂ ಜನರ ಮಾತುಗಳನ್ನು ಬದಲಾಯಿಸುತ್ತೇನೆ ಎಂದರೆ ಅಂದು ತಪ್ಪೇ ಆಗಿರುತ್ತದೆ. ಕನ್ನಡದವರೆಲ್ಲಾ ಹಳಗನ್ನಡದಲ್ಲಿ ಮಾತಾಡಲಿ ಅಂತನ್ನೋ ನಿಲುವು ಇವರ್ಯಾರದ್ದೂ ಅಲ್ಲಾ ಅನ್ಸುತ್ತೆ.

            ಹೊಸ ಭಾಷೆಯನ್ನು ಕಲಿಯುವ ಬಗ್ಗೆ, ಬೇರೆ ಭಾಷೆಯನ್ನು ಕಲಿಯುವುದರ ಬಗ್ಗೆ ಎಲ್ಲೂ ವಿರೋಧವಿಲ್ಲ. ಕನ್ನಡದ ಪದಗಳನ್ನು ಹೆಚ್ಚು ಹೆಚ್ಚು ಬಳಸುವುದು ಈ ದಿಕ್ಕಲ್ಲಿ ಒಂದು ಹೆಜ್ಜೆ. ಹಾಗೆ ನೋಡಿದರೆ ಎಲ್ಲೂ ಇದು ಸರಿಯಾದ ಕನ್ನಡ, ಇದು ತಪ್ಪು ಕನ್ನಡ ಅನ್ನಲು ಸಾಧ್ಯವಿಲ್ಲ. (ಎಣಿಯಂಥಾ)ಹೊಸ ಪದಗಳ ಅವಿಷ್ಕಾರ ಬೇಡ ಅನ್ನೋಕ್ಕಿಂತಾ ಹೊಸಹೊಸ ಪದಗಳು ಹುಟ್ಟಲಿ, ಜನಕ್ಕೆ ಒಪ್ಪಿಗೆಯಾದಲ್ಲಿ ಅವರೇ ಬಳಸುತ್ತಾರೆ, ಇಲ್ಲದಿದ್ದರೆ ಇಲ್ಲ… ಎಂದು ಯೋಚಿಸುವುದು ಉತ್ತಮ ಅನ್ನಿಸುತ್ತೆ. ಕನ್ನಡಕ್ಕಿಂತ ತುಳು, ತೆಲುಗು, ಕೊಂಕಣಿ ಬೇರೆ… ಸಹಜವಾಗಿ ತಾಯ್ನುಡಿ ಕನ್ನಡವಾಗಿರುವವರು, ವಲಸೆ ಬಂದು ಶತಮಾನಗಳ ಕಾಲ ನೆಲೆಸಿ ಕನ್ನಡವನ್ನು ಒಪ್ಪಿಕೊಂಡವರೂ ಬೇರೆ ಬೇರೆ ಅಂದ ತಕ್ಷಣ ಅವರಿಬ್ಬರನ್ನು ಶತ್ರುಗಳು ಅಂತಂದ ಹಾಗಂದುಕೊಳ್ಳಬಾರದು. ಮಾಯ್ಸ ಅವರು ಇರುವ ವ್ಯತ್ಯಾಸಗಳ ಬಗ್ಗೆ ಮಾತಾಡಿದ್ದಾರೆ ಅಷ್ಟೇ ಅನ್ಸುತ್ತೆ. ಯಾವ ಭಾಷೆಯಿಂದ ಯಾವಭಾಷೆಯನ್ನೂ ತೆಗೆದುಬಿಡಬೇಕು ಅನ್ನೋದು ಸಾಧ್ಯವಿಲ್ಲದ ಮಾತು, ಹಾಗೆ ತೆಗೆಯುವಿಕೆ, ಸೇರಿಸುವಿಕೆಗಳು ಆಗೋದೂ ಕೂಡಾ ಬಳಸೋರು ತಮ್ಮರಿವಿಲ್ಲದಂತೆಯೇ ಮಾಡಿಕೊಳ್ಳುವ ಬದಲಾವಣೆಯಿಂದ. ಆದರೆ ಮಾಧ್ಯಮದಲ್ಲಿ, ಕಲಿಕೆಯಲ್ಲಿ ಯಾವ ಪದಗಲನ್ನು ಬಳಸುತ್ತೇವೆ ಅದು ಖಂಡಿತಾ ಪ್ರಭಾವ ಬೀರುತ್ತೆ. ಹಾಗಾಗಿ ಹೆಚ್ಚೆಚ್ಚು ಕನ್ನಡ ಪದಗಳನ್ನೇ ಬಳಸಬೇಕೆನ್ನುವುದು ಈ ವಾದದ ಹಿಂದಿರುವ ಕಾಳಜಿ ಅನ್ನಿಸುತ್ತೆ.

            ಉತ್ತರ
            • ಏಪ್ರಿಲ್ 1 2011

              “ಇಲ್ಲಿ ಯಾರಾದರೂ ಜನರ ಮಾತುಗಳನ್ನು ಬದಲಾಯಿಸುತ್ತೇನೆ ಎಂದರೆ ಅಂದು ತಪ್ಪೇ ಆಗಿರುತ್ತದೆ…”

              “…ಹಾಗೆ ನೋಡಿದರೆ ಎಲ್ಲೂ ಇದು ಸರಿಯಾದ ಕನ್ನಡ, ಇದು ತಪ್ಪು ಕನ್ನಡ ಅನ್ನಲು ಸಾಧ್ಯವಿಲ್ಲ.”

              ಹಾಗಾದರೆ “ಕನ್ನಡಭಾಷೆಯೊಂದರಲ್ಲಿ ಮಾತ್ರ ಬಳಕೆಯಲ್ಲಿಲ್ಲದ” ಎಲ್ಲಾ ಅಕ್ಷರಗಳನ್ನೂ ತೆಗೆದುಹಾಕಬೇಕೆನ್ನುವ ಕೂಗಿನ ಹಿಂದಿರುವ ಮರ್ಮವನ್ನು ಒಂದಷ್ಟು ತಿಳಿಸಿ ಶುಭಶ್ರೀಯವರೇ. ಭಾಷೆಯೊಂದು ಗಡಿಬಿಡಿಗೆ ಆಸ್ಪದವಿಲ್ಲದಂತೆ ಹೆಚ್ಚು ಹೆಚ್ಚು ಶಬ್ದಗಳನ್ನು ಉಲಿಯುವಂತಿರಬೇಕು, ಕೊನೆಯ ಪಕ್ಷ ತನ್ನ ಮತ್ತು ತನ್ನ ಸುತ್ತಮುತ್ತಲಿನ ಭಾಷಾಶಬ್ದಗಳನ್ನಾದರೂ. ಕನ್ನಡದಲ್ಲಿ ಹೊಸ ಹೊಸ ಉಚ್ಚಾರಣೆ ಬಂದಿದ್ದರೆ (ಉದಾ: f, z etc), ಹೊಸಹೊಸ ಅಕ್ಷರಗಳನ್ನು ಸೇರಿಸಿ, ಅದುಬಿಟ್ಟು ಇರುವ ಅಕ್ಷರಗಳನ್ನು ತೆಗೆಯಬೇಕೆಂದರೆ ಹೇಗೆ?

              ಉತ್ತರ
              • Priyank
                ಏಪ್ರಿಲ್ 1 2011

                ಚಾರ್ವಾಕ ಅವರೇ,

                ನಿಮ್ಮ ಪ್ರಶ್ನೆ ಶುಭಶ್ರೀ ಅವರೆಡೆಗೆ ಇದ್ದರೂ, ನಾನೂ ಉತ್ತರಿಸಬೇಕೆನಿಸಿತು.
                ಹೊಸ ಉಲಿ-ಗಳು ಕನ್ನಡಕ್ಕೆ ಬಂದಿವೆ, ಅವಕ್ಕೆ ಹೊಸ ಅಕ್ಷರಗಳು ಬೇಕು.
                ಇನ್ನು, ಕನ್ನಡಿಗರು ಉಲಿಯದ ಅಕ್ಷರಗಳು ಕನ್ನಡ ಅಕ್ಷರಮಾಲೆಯಲ್ಲಿ ಇವೆ.
                “ಇವುಗಳಲ್ಲಿ ಎಲ್ಲವೂ ನಮಗೆ ಬೇಕಾ? ಇವಲ್ಲಿ ಕೆಲವನ್ನು ತೆಗೆದರೆ ಒಳಿತೆ, ಕೆಡುಕೆ? ಒಳಿತಾದರೆ ಹೇಗೆ? ಕೆಡುಕಾದಲ್ಲಿ ಹೇಗೆ?” ಈ ವಿಚಾರಗಳ ಬಗ್ಗೆ ವೈಜ್ನ್ಯಾನಿಕ ಚರ್ಚೆಯ ಅಗತ್ಯವಿದೆ.
                ಈ ಚರ್ಚೆ ಮಾಡಲು ಈಗಾಗಲೇ ಹಲವು ಭಾಷಾ ವಿಜ್ನ್ಯಾನಿಗಳು ಇಳಿದಿದ್ದಾರೆ. ಆಳವಾದ ಅಧ್ಯಯನವೂ ನಡೆಯುತ್ತಿದೆ.
                ತಮ್ಮ ಅಧ್ಯಯನದಿಂದ ಹೊರಬಂದ ವಿಷಯಗಳನ್ನು, ಭಾಷಾ ವಿಜ್ನ್ಯಾನಿಗಳು ಪುಸ್ತಕಗಳ ಮೂಲಕ ಜನರ ಮುಂದೆ ಇಡುತ್ತಲೂ ಬಂದಿದ್ದಾರೆ.
                ಭಾಷಾ ವಿಜ್ನ್ಯಾನಿಗಳು ಈ ನಿಟ್ಟಿನಲ್ಲಿ ಏನು ಹೇಳುತ್ತಾರೆ ಎಂಬುದನ್ನು ಅರಿಯುವ ಆಸಕ್ತಿ ನಿಮಗೆ ಇದ್ದರೆ, ಆ ಪುಸ್ತಕಗಳನ್ನು ಓದಬಹುದು.

                ಉತ್ತರ
                • ಹೊಸ ಉಲಿಗಳು ಕನ್ನಡಕ್ಕೆ ಬಂದಿವೆ, ಅವಕ್ಕೆ ಹೊಸ ಅಕ್ಷರಗಳು ಬೇಕು, ಸೈ. ಒಪ್ಪಿದೆ. ಆದರೆ ಇರುವ ಅಕ್ಷರಗಳನ್ನು ತೆಗೆಯುವ ಇರಾದೆಯೇಕೆ? ಕನ್ನಡದಲ್ಲಿ ಬಳಕೆಯಲ್ಲಿಲ್ಲದಿದ್ದರು ಅದು ಲೇವಾದೇವಿ ನಡೆಸುವ ಇತರ ಭಾಷೆಗಳ ಪದಗಳನ್ನು ಉಲಿಯುವ ಸೌಲಭ್ಯ ಕನ್ನಡದಲ್ಲಿದ್ದರೆ ಅದಕ್ಕೆ ಹೆಮ್ಮೆ ಪಡಬೇಕೇ ಹೊರತು ಕಿತ್ತುಹಾಕಬೇಕೆಂಬ ಹಟವೇಕೆ? “ನಮ್ಮ ಮಾತು ನಮ್ಮ ಇಷ್ಟ ಅದಕ್ಕೆ ಬೇರೊಬ್ಬರ ಅಂಕೆ ಬೇಕಿಲ್ಲ” ಎಂದೆಲ್ಲಾ ಕೂಗಾಡುವ ಗುಂಪು ಕೆಲವು ಭಾಷಾವಿಜ್ಞಾನಿಗಳ ಕತ್ತರಿಗೆ ತಲೆಗೊಡಬೇಕೇ? ಮತ್ತೊಮ್ಮೆ ಹೇಳುತ್ತೇನೆ, ಇಲ್ಲಿ ನನ್ನ ತಕರಾರು ಹೊಸ ಅಕ್ಷರಗಳನ್ನು ತರುವುದಕ್ಕಲ್ಲ, ಇರುವುದನ್ನು ತೆಗೆಯುವುದಕ್ಕೆ. ಇದರಿಂದ ಈಗಾಗಲೇ ಇರುವ ಸಾಹಿತ್ಯದ ಬಳಕೆಯೇ ತಪ್ಪಿಹೋಗುವುದಲ್ಲವೇ? ಭಾಷೆಯೊಂದು ಕೇವಲ “ಆಡುನುಡಿ” ಮಾತ್ರವೇ?

                  ಉತ್ತರ
                  • ಏಪ್ರಿಲ್ 1 2011

                    ಮಂಜುನಾಥ,

                    “…ಇದರಿಂದ ಈಗಾಗಲೇ ಇರುವ ಸಾಹಿತ್ಯದ ಬಳಕೆಯೇ ತಪ್ಪಿಹೋಗುವುದಲ್ಲವೇ..”
                    ಈಗ ಱ, ೞ್ ಬಿಟ್ಟಿದ್ದರೂ ಹಳೆಗನ್ನಡ ಓದುವುದನ್ನ ಯಾರು ಬಿಟ್ಟಿಲ್ಲ. ಯಾರಿಗೆ ಬೇಕೊ ಅವರು ಓದುತ್ತಿಲ್ವ?
                    ಹೊಸಗನ್ನಡದ ಬರಿಗೆ ಮಾಲೆಯಲ್ಲಿ ’ಱ್’, ’ೞ್’ ಇಲ್ಲ ಹಾಗಾಗಿ ಇದನ್ನ ’ಮೊದಲ ಕಲಿಕೆ’ಯಲ್ಲಿ ಹೇಳಿಕೊಡುವುದಿಲ್ಲ.

                    ಮಹಾಪ್ರಾಣನು ಹಾಗೆ ಇದನ್ನ ಮೊದಲ ಕಲಿಕೆಯ ಹೇಳಿಕೊಡಬೇಕಾಗಿಲ್ಲ. ಱ್, ೞ್ ಈಗ ಹಯ್ ಸ್ಕೂಲ್ನಲ್ಲಿ ಹೇಗೆ ಕಲಿಯುತ್ತಿದ್ದಾರೊ ಮಾಪ್ರಾಣವನ್ನು ಹಾಗೆ ಕಲಿಯಬಹುದು. ಮಾಪ್ರಾಣ ಇರುವ ಕನ್ನಡದ್ದೇ ಬೇರಿನ ಪದಗಳೇ ಇಲ್ಲ. ಮಾಪ್ರಾಣ, ಷ, ಅಃ ಮೊದಲ ಕಲಿಕೆಯಲ್ಲಿ ಬೇಡದ ಹೊರೆಯಾಗಿದೆ. ಇದರ ಬಗ್ಗೆ ಉಂಕಿಸಿ, ಅಲ್ಲ ಯೋಚಿಸಿ ಎಂಬುದಾಗಿ ಓದುಗರಲ್ಲಿ ಕೋರಿಕೆ.

                    ಒಬ್ಬ ನುಡಿಯರಿಗರಾಗಿ ಕನ್ನಡದ ಸೊಲ್ಲರಿಮೆಯ ಮತ್ತು sociolinguistics ತಳಹದಿಯ ಮೇಲೆ ಶಂಕರಬಟ್ಟರು ಕನ್ನಡ ಬರಹದಲ್ಲಿ ಕೆಲವು ಬರಿಗೆಗಳು ಬೇಕಾಗಿಲ್ಲ ಅಂತ ಹೇಳಿದ್ದಾರೆ. ಇದುವರೆಗೂ ಯಾವ ನುಡಿಯರಿಗರೂ ಇದನ್ನ ತಪ್ಪು ಅಂತ ಹೇಳಿಲ್ಲ. ಹಾಗಾದರೆ ಶಂಕರಬಟ್ಟರು ಹೇಳುವುದನ್ನ ತಪ್ಪು ಅಂತ ಹೇಳಬೇಕಾದರೆ ಸೊಲ್ಲರಿಮೆ ಮತ್ತು sociolinguistics ನೆಲೆಯಲ್ಲೇ ಅದನ್ನ ತಪ್ಪು ಅಂತ ತೋರಿಸಿದಲ್ಲಿ ಅದನ್ನ ಆಗ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ದಯವಿಟ್ಟೂ ಓದುಗರು ಮತ್ತು ಅಜಕ್ಕಳ ಗಿರೀಶರು ಸೊಲ್ಲರಿಮೆ, ನುಡಿಯರಿಮೆ ನೆಲೆಯಲ್ಲಿ ಇಲ್ಲಿ ಕಮೆಂಟ್ ಮಾಡಿದರೆ ಈ ಚರ್ಚೆಯು ಒಳ್ಳೆ ದಿಕ್ಕಿನಲ್ಲಿ ಸಾಗಬಹುದು.

                    ನನ್ನಿ,
                    -ಬರತ್

                    ಉತ್ತರ
                    • “ಈಗ ಱ, ೞ್ ಬಿಟ್ಟಿದ್ದರೂ ಹಳೆಗನ್ನಡ ಓದುವುದನ್ನ ಯಾರು ಬಿಟ್ಟಿಲ್ಲ. ಯಾರಿಗೆ ಬೇಕೊ ಅವರು ಓದುತ್ತಿಲ್ವ?” – ಪ್ರಶ್ನೆ, ಯಾರಿಗೆ ಬೇಕಾಗುತ್ತದೆ ಅನ್ನೋದು. ಕಲಿಕೆಯ ಹಂತದಲ್ಲೇ ಓದಿನ ರುಚಿ ಹತ್ತದಿದ್ದರೆ, ಮುಂದೆ ಕಾಸಿನ ಹಿಂದೆ ಓಡುವಾಗ ಅದರ ರುಚಿ ಹತ್ತುತ್ತದೆಯೇ. ಮೊದಲಿಗೆ ಇವತ್ತು ಕನ್ನಡದ ಕಲಿಸುವಿಕೆಯೇ ಕೇವಲ ಅಂಕ ಗಳಿಸುವ ಕಲಿಕೆಯಾಗಿ ಕೂತಿದೆ. ಸಾಹಿತ್ಯಕ್ಕೋಸ್ಕರ ಸಾಹಿತ್ಯ ಯಾರಾದ್ರೂ ಓದುತ್ತಾರೆ ಅಂದುಕೊಂಡ್ರಾ ಮುಂದಿನ ಪೀಳಿಗೆಯಲ್ಲಿ.

                      ಇನ್ನು “ಮಾಪ್ರಾಣ”ದ ವಿಷಯ. “ಮಹಾಪ್ರಾಣ” ತಪ್ಪು, “ಮಾಪ್ರಾಣ” ಸರಿಯೆಂದು ನಿಮ್ಮ ಅನಿಸಿಕೆ, ಏಕೆಂದರೆ “ಮಾಪ್ರಾಣ” ಕನ್ನಡದ ಜಾಯಮಾನಕ್ಕೆ ಒಗ್ಗಿದ್ದು, ನಿಮ್ಮ ಪ್ರಕಾರ. ಹಾಗಿದ್ದರೆ ತಮಗೆ “ಮಾಪ್ರಾಣ”ವೇ ಬಹಳ ಸಹಜವಾಗಿ ಬರಬೇಕಲ್ಲವೇ? ಆದರೆ “ಮಹಾಪ್ರಾಣ”ವೇ ತಮಗೂ ಬಹು ಸಹಜವಾಗಿ ಬರುತ್ತಿದ್ದು ಅದನ್ನು ತಾವು ಕಷ್ಟಪಟ್ಟು ’ತಿದ್ದಿ’ಕೊಳ್ಳುತ್ತಿದ್ದುದು ನನ್ನ ಗಮನಕ್ಕೆ ಬಂತು. ಅಲ್ಲವೇ?

                    • ಏಪ್ರಿಲ್ 9 2011

                      ಇಲ್ಲ. ನನಗೆ ’ಮಾಪ್ರಾಣ’ನೆ ಸಹಜ. ಕಶ್ಟ ಪಟ್ಟು ’ಮಹಾಪ್ರಾಣ’ ಅಂತ ಬರೆಯುತ್ತಿದ್ದೇನೆ.

                      ಅಲ್ಲದೆ ಹೆಚ್ಚಿನ ಮಂದಿಗೆ ನನ್ನ ಹಾಗೆ

                      ಎತ್ತುಗೆ:
                      ಮಾದೇವ, ಮಾಮಂಗ್ಳಾರ್ತಿ, ಬಿನ್ನ(ಬಿನ್ನಹ ಅಲ್ಲ),

                    • “ಇಲ್ಲ. ನನಗೆ ’ಮಾಪ್ರಾಣ’ನೆ ಸಹಜ. ಕಶ್ಟ ಪಟ್ಟು ’ಮಹಾಪ್ರಾಣ’ ಅಂತ ಬರೆಯುತ್ತಿದ್ದೇನೆ.” – ಓಹೋ, ಯಾಕೋ? ಗಮನವಿಟ್ಟು ಆದಷ್ಟೂ ತೆಳುಗನ್ನಡದಲ್ಲೇ ಬರೆಯುವ ನೀವು ಕಷ್ಟಪಟ್ಟು ಆದರೂ ತಪ್ಪು “ಮಹಾಪ್ರಾಣ” ಬರೆಯೋದು ಯಾಕೋ?

                      ಮಾತಿನಲ್ಲಿ ಸುಲುಬವಾದ್ದು ಮೊದಲು ಎಡವಿ ಬಂದುಬಿಡುತ್ತೆ. ಆಮೇಲೆ ’ಸರಿ’ಯಾದ ಪದ ನಿದಾನಕ್ಕೆ ಬರುತ್ತೆ, ಅದೇ ಸಾಜ, ಅಲ್ವಾ? ನಿಮ್ಮ ಮಾತನ್ನೇ ನೋಡಿ:

                      “ಮಹಾಪ್ರಾಣನು ಹಾಗೆ ಇದನ್ನ ಮೊದಲ ಕಲಿಕೆಯ ಹೇಳಿಕೊಡಬೇಕಾಗಿಲ್ಲ. ಱ್, ೞ್ ಈಗ ಹಯ್ ಸ್ಕೂಲ್ನಲ್ಲಿ ಹೇಗೆ ಕಲಿಯುತ್ತಿದ್ದಾರೊ ಮಾಪ್ರಾಣವನ್ನು ಹಾಗೆ ಕಲಿಯಬಹುದು. ಮಾಪ್ರಾಣ ಇರುವ ಕನ್ನಡದ್ದೇ ಬೇರಿನ ಪದಗಳೇ ಇಲ್ಲ. ಮಾಪ್ರಾಣ, ಷ, ಅಃ ಮೊದಲ ಕಲಿಕೆಯಲ್ಲಿ ಬೇಡದ ಹೊರೆಯಾಗಿದೆ. ಇದರ ಬಗ್ಗೆ ಉಂಕಿಸಿ, ಅಲ್ಲ ಯೋಚಿಸಿ ಎಂಬುದಾಗಿ ಓದುಗರಲ್ಲಿ ಕೋರಿಕೆ.” ಮೊದಲು “ಮಹಾಪ್ರಾಣ” ಬಾಯಿತಪ್ಪಿ ಬಂದುಬಿಡ್ತು, ಆಮೇಲೆ “ಸರಿಯಾದ” ’ಮಾಪ್ರಾಣ’ ಬಂತು. ಸಾಮಾನ್ಯ ಸೈಕಾಲಜಿ, ಜನಕ್ಕೆ ಅರ್ತ ಆಗಲ್ಲ ಅಂತೀರಾ? ಇದ್ದದ್ದನ್ನ ಇದ್ದಹಾಗೆ ಒಪ್ಕೊಂಡ್ರೆ ಚರ್ಚೆಗೆ ಒಂದು ತೂಕ ಬರುತ್ತಲ್ವಾ? ಮಾದೇವ, ಮಾಮಂಗ್ಳಾರ್ತಿ, ಬಿನ್ನ ಎಲ್ಲ ಓಕೆ, ಆದ್ರೆ ಮಾಪ್ರಾಣ ಮಾತ್ರ ನಿಮಗೆ ಸಹಜವಾಗಿ ಬರ್ಲಿಲ್ಲ, ಏನಂತೀರಿ? 😉

                  • Shubhashree
                    ಏಪ್ರಿಲ್ 1 2011

                    ಮಂಜುನಾಥರೇ,
                    ನೀವಂದಂತೆ ಬೇರೆ ಭಾಷೆಯ ಪದಗಳನ್ನು ಉಲಿಯಲು ಬೇಕಾಗುವ ಹೆಚ್ಚುವರಿ ಅಕ್ಷರಗಳನ್ನು ಹೊಂದುವುದು ಒಳ್ಳೆಯದೇ ಆಗಿದೆ. ನೀವು ತಿಳಿದಂತೆ ಕನ್ನಡದಿಂದ ಯಾವುದೇ ಅಕ್ಷರಗಳನ್ನು ಬಿಡುವುದು ಅನ್ನೋದು ಸಹಜವಾಗಿ ಸಿಟ್ಟಿಗೇಳಿಸುತ್ತೆ. ಆದರೆ ಹೀಗೆ ಬರೆಯುವಾಗ ಶಂಕರಭಟ್ಟರು ಹೇಳಿರುವುದನ್ನು ಆಧರಿಸಿ ಬರೆಯುವುದು ಅವರ ಬರಹದ ಸಮರ್ಥನೆ, ಕ್ರಿಟಿಕ್ಕು ನೋಡಿ ಬರೆಯೋದಕ್ಕಿಂತ ಒಳ್ಳೆಯದು ಅನ್ನಿಸುತ್ತೆ. ನೀವು ಓದಿಕೊಂಡೇ ಬರೆಯುತ್ತಿದ್ದೀರಾ ಎಂದು ಭಾವಿಸುವೆ. ಭಟ್ಟರ ನಿಲುವು ಓದುವ ಮುನ್ನ ನನ್ನಲ್ಲೂ ಗೊಂದಲವಿತ್ತು. ಬದಲಾವಣೆಗೆ ವಿರೋಧವಿತ್ತು. ಸರಳವಾಗಿ ಅವರ ನಿಲುವು ತಿಳಿಸಲು ಯತ್ನಿಸುವೆ.
                    ಕನ್ನಡದ ಪದಗಳಲ್ಲಿ ಮಹಾಪ್ರಾಣಾಕ್ಷರಗಳು ಇಲ್ಲ. ಇರುವುದು ಆಮದಾದ ಪದಗಳಲ್ಲಿ. ಹಾಗೆ ಆಮದು ಆದವೂ ಕೂಡಾ ಕನ್ನಡಿಗರ ಬಾಯಲ್ಲಿ ಅಲ್ಪಪ್ರಾಣವಾಗಿ ಬದಲಾಗುತ್ತವೆ. ಕನ್ನಡಿಗರು ಮಹಾಪ್ರಾಣಾಕ್ಷರಗಳನ್ನು ಉಲಿಯುವಲ್ಲಿ ಸಾಮಾನ್ಯವಾಗಿ ಅಲ್ಪಪ್ರಾಣವನ್ನೇ ಉಲಿಯುತ್ತಾರೆ. ನುಡಿಯನ್ನು ಉಲಿಯುವಂತೆಯೇ ಬರೆಯುವುದು ಅದರ ಸ್ಪೆಲ್ಲಿಂಗ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕನ್ನಡಿಗರಿಗೆ ಕನ್ನಡವನ್ನಾಡಲು, ಬರೆಯಲು ಮಹಾಪ್ರಾಣದ ಅಗತ್ಯವಿಲ್ಲ.ಕಲಿಕೆಯಲ್ಲಿ ಹಾಗಾಗಿ ಮಹಾಪ್ರಾಣಗಳನ್ನು ಕಲಿಸುವ ಅಗತ್ಯವಿಲ್ಲ.ಮುಂದೊಮ್ಮೆ ಅವರು ಸಂಸ್ಕೃತವನ್ನೋ, ಮತ್ತೊಂದನ್ನೋ ಬರೆಯಲು, ಓದಲು ತೊಡಗುವುದೇ ಆದರೆ ಆಗ ಮಹಾಪ್ರಾಣಾಕ್ಷರಗಳನ್ನು ಕಲಿಯುತ್ತಾರೆ.
                    ಕನ್ನಡದಲ್ಲಿ ಆಡುಭಾಷೆಯ ಪದಗಳನ್ನಾಗಲೀ, ನಾಲಗೆಯಲ್ಲಿ ಸುಲಲಿತವಾಗಿ ಉಲಿಯಬಲ್ಲ ಪದಗಳಾಗಲೀ.. ಅವುಗಳನ್ನೇ ಹೆಚ್ಚು ಹೆಚ್ಚು ಬಳಸುವ ಮೂಲಕ ಕಲಿಕೆಯನ್ನು ಸುಲಬವಾಗಿಸಿಕೊಳ್ಳಲು ಅನುಕೂಲ. ಹಾಗಾಗಿ ಹೆಚ್ಚು ಹೆಚ್ಚು ಕನ್ನಡ ಮೂಲದ ಪದಗಳನ್ನು ಬಳಸೋಣ. ಒಂದು ಪರಭಾಷಾ ಪದವನ್ನು ತೆಗೆದುಕೊಳ್ಳುವ ಬಗ್ಗೆ ಭಟ್ಟರು ಹೇಳುವುದು. ಅಂಥಾ ಪದಗಳು ಕನ್ನಡದ ಶೈಲಿಗೆ ಒಗ್ಗಿಕೊಂಡೇ ಬರುವುದು ಸಹಜ. ಹಾಗಾಗಿ ಆ ಕನ್ನಡಕ್ಕೆ ಒಗ್ಗಲಾದ ಪದವನ್ನು ತಪ್ಪೆನ್ನುವುದಕ್ಕಿಂತಾ ಹಾಗೇ ಬಳಸೋಣ. ಎಂದು. ಉದಾಹರಣೆಗೆ ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ನಿದ್ರಾ ಎನ್ನುವುದು ನಿದ್ದೆಯಾಗಿ ಬಂದಿರುವು ಸರಿಯಷ್ಟೇ. ಈಗ ನಿದ್ದೆ ತಪ್ಪು ನಿದ್ರೆ ಸರಿ ಎನ್ನುವುದು ಬೇಡ ಎನ್ನುವಂತೆ. ಎಲ್ಲಾ ಪದಗಳೂ ಬದಲಾಗಬೇಕು ಅನ್ನುತ್ತಿಲ್ಲ. ಬದಲು ಮಾಡುವುದಕ್ಕೆ ಆಗುವುದೂ ಇಲ್ಲ. ಯಾವುದು ಜನರ ಬಳಕೆಗೆ ಬಾಗಿ ಬದಲಾಗುತ್ತೋ ಅದನ್ನು ಹಾಗೇ ಒಪ್ಪಿಕೊಳ್ಳೋಣ… ಎನ್ನುವುದು ಭಟ್ಟರ ನಿಲುವೆಂಬುದು ನನಗೆ ಅರ್ಥವಾಗಿರುವ ಬಗೆ.

                    ಉತ್ತರ
                  • Priyank
                    ಏಪ್ರಿಲ್ 2 2011

                    ಮಂಜುನಾಥ ಅವರೇ,

                    ದ್ಯುತಿ ಸಂಶ್ಲೇಷಣ ಕ್ರಿಯೆ, ಶ್ರುಂಗಾಭಿಮುಖ ಕೋನ, ಮತ್ತು ಇತ್ಯಾದಿ ನಾನು ಮೊದಲೇ ಹೆಸರಿಸಿದ ಪದಗಳು ಕಷ್ಟವೆಂದೂ ಮಕ್ಕಳಿಗೆ ಅರ್ಥವಾಗುವುದಿಲ್ಲವೆಂದೂ ನೀವು ಒಪ್ಪಿದ್ದೀರ ಎಂದು ತಿಳಿದಿದ್ದೇನೆ.
                    “ಬಾಣಲೆ” ಎಂಬ ಪದದ ಉಪಯೋಗದ ಮೂಲಕ ನೀವು ಈ ಪದಗಳು ಕ್ಲಿಷ್ಟ ಎಂಬುದನ್ನು ಹೇಳುತ್ತಿದ್ದೀರ ಎಂದುಕೊಂಡೆ – ಹಾಗಿಲ್ಲದಿದ್ದರೆ ತಿಳಿಸಿ.

                    ಇನ್ನು ನಿಮ್ಮ ಪ್ರಶ್ನೆ, “ಈ ಪದಗಳಿಗೆ ಆಡುನುಡಿಯ ಪದಗಳನ್ನೇ ಹುಟ್ಟು ಹಾಕಿದರೂ, ಅವು ಅರ್ಥವಾಗಿಬಿಡುತ್ತೆ ಅಂತ ಎನ್ ಗ್ಯಾರಂಟೀ?”
                    ಅರ್ಥವಾಗದಂತ ಕನ್ನಡ ಬೇರಿನ ಪದ ಹುಟ್ಟು ಹಾಕುವುದೂ ಬೇಡ. ಅಂತ ಪದಗಳಿಂದ ಜನರಿಗೆ ಒಳಿತು ಆಗದು.
                    ಅರ್ಥವಾಗುವಂತ ಕನ್ನಡ ಬೇರಿನ ಪದಗಳನ್ನು ಹುಟ್ಟು ಹಾಕುವೆಡೆ ಕೆಲಸ ನಡೆಯಬೇಕು. ಅಧ್ಯಯನ ನಡೆಯಬೇಕು. ಆ ಕೆಲಸದಿಂದ ಹೊರಬಂದ ಪದಗಳನ್ನು ನಮ್ಮ ಸಮಾಜದ ಮುಂದಿಡಬೇಕು. ಜನರಿಗೆ ಒಪ್ಪಿಗೆಯಾದರೆ, ಅದರ ಬಳಕೆ ಆಗತೊಡಗುತ್ತದೆ.
                    ಇಲ್ಲದಿದ್ದರೆ, ಜನರು ಆ ಪದದ ಬಳಕೆ ಕೈಬಿಡುತ್ತಾರೆ. ಇಲ್ಲಿ, ಕಲಿಕೆಯನ್ನು ಸುಲಭಗೊಳಿಸುವುದು ಗುರಿಯಾಗಬೇಕು.

                    ಈ ಕೆಲಸ ಮಾಡುತ್ತಿರುವ ಹಲವಾರು ನುಡಿಯರಿಗರನ್ನ ಹೀಗಳೆಯುವುದು, ಕುತಂತ್ರ ಎನ್ನುವುದು, ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಕೆಲಸ ಎನ್ನುವುದು ಎಷ್ಟು ಸರಿ?
                    ಬೇರೆ ರೀತಿಯ ಅಭಿಪ್ರಾಯವಿದ್ದರೆ, ಅದನ್ನು ವೈಜ್ನ್ಯಾನಿಕವಾಗಿ ಮಂಡನೆ ಮಾಡಿ, ಚರ್ಚೆ ಮಾಡುವುದು ಆರೋಗ್ಯಕರವಲ್ಲವೇ!

                    ಉತ್ತರ
                    • @ ಪ್ರಿಯಾಂಕ್,

                      “ಅರ್ಥವಾಗದಂತ ಕನ್ನಡ ಬೇರಿನ ಪದ ಹುಟ್ಟು ಹಾಕುವುದೂ ಬೇಡ. ಅಂತ ಪದಗಳಿಂದ ಜನರಿಗೆ ಒಳಿತು ಆಗದು.
                      ಅರ್ಥವಾಗುವಂತ ಕನ್ನಡ ಬೇರಿನ ಪದಗಳನ್ನು ಹುಟ್ಟು ಹಾಕುವೆಡೆ ಕೆಲಸ ನಡೆಯಬೇಕು. ಅಧ್ಯಯನ ನಡೆಯಬೇಕು. ಆ ಕೆಲಸದಿಂದ ಹೊರಬಂದ ಪದಗಳನ್ನು ನಮ್ಮ ಸಮಾಜದ ಮುಂದಿಡಬೇಕು. ಜನರಿಗೆ ಒಪ್ಪಿಗೆಯಾದರೆ, ಅದರ ಬಳಕೆ ಆಗತೊಡಗುತ್ತದೆ.
                      ಇಲ್ಲದಿದ್ದರೆ, ಜನರು ಆ ಪದದ ಬಳಕೆ ಕೈಬಿಡುತ್ತಾರೆ.” – ಅಕ್ಷರಶಃ ಒಪ್ಪಿದೆ

                      “ಈ ಕೆಲಸ ಮಾಡುತ್ತಿರುವ ಹಲವಾರು ನುಡಿಯರಿಗರನ್ನ ಹೀಗಳೆಯುವುದು, ಕುತಂತ್ರ ಎನ್ನುವುದು, ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಕೆಲಸ ಎನ್ನುವುದು ಎಷ್ಟು ಸರಿ?” – ಚೆ ಚೆ… ಮೇಲೆ ಹೇಳಿದ ಕೆಲಸ ಮಾಡುವವರನ್ನು ಹಾಗೆಲ್ಲ ಸಾರಾಸಗಟಾಗಿ ಹೀಗಳೆದಿಲ್ಲ ನಾನು. ಕುತಂತ್ರ, ರಾಜಕೀಯ ಲಾಭಕ್ಕಾಗಿ ಮಾಡುವ ಕೆಲಸ ಇತ್ಯಾದಿ ನನಗನ್ನಿಸಿದಲ್ಲೆಲ್ಲ ಅದು ಯಾಕೆ ಹಾಗೆ ಅನಿಸುತ್ತದೆ ಅನ್ನೋದನ್ನ ತರ್ಕಬದ್ಧವಾಗಿ ತೋರಿಸಿಯೇ ಹೀಗಳೆದಿದ್ದೇನೆ. ಮಾತಿನ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಯಾವಾಗಲು ಚರ್ಚೆಯಿಂದ ನಡೆಯುವಂತದ್ದೇ ಹೊರತು, ವೈಯಕ್ತಿಕ ನಿಂದನೆ, ರಾಜಕೀಯ ಅಜೆಂಡಾಗಳಿಂದಲ್ಲ ಅಂತ ಮಾತ್ರ ಹೇಳುತ್ತೇನೆ.

                      “ಬೇರೆ ರೀತಿಯ ಅಭಿಪ್ರಾಯವಿದ್ದರೆ, ಅದನ್ನು ವೈಜ್ನ್ಯಾನಿಕವಾಗಿ ಮಂಡನೆ ಮಾಡಿ, ಚರ್ಚೆ ಮಾಡುವುದು ಆರೋಗ್ಯಕರವಲ್ಲವೇ!” – ಖಂಡಿತ. ಆದರೆ ಅಂಥ ಅರ್ಥಪೂರ್ಣ ಚರ್ಚೆ ಇಲ್ಲಿ ಎಷ್ಟು ಚೆನ್ನಾಗಿ ಆಗುತ್ತಿದೆ ಎಂದು ನೀವೇ ನೋಡುತ್ತಿದ್ದೀರಿ “ಬಿಸಿಬೇಳೆಭಾತ್ ತಿನ್ನಿ ನಿಮ್ಮ ಮಠದಲ್ಲಿ”, “ಡಿವಿಜಿಯವರು ಕನ್ನಡಗರಾದದ್ದು ರಾಜಾಸ್ಥಾನದಲ್ಲಿ ಮನ್ನಣೆ ಗಿಟ್ಟಿಸಲಿಕ್ಕೆ” ಇತ್ಯಾದಿಗಳು ನೀವು ಹೇಳಿದ “ವೈಜ್ಞಾನಿಕ, ಆರೋಗ್ಯಕರ ಚರ್ಚೆ”ಯ ಅಳತೆಯಲ್ಲಿ ಬರುವುದೇ?

  44. Shubhashree
    ಮಾರ್ಚ್ 30 2011

    ಡಾ.ಗಿರೀಶರೇ

    >> ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ.

    >>ಅಕ್ಷರ ಕಡಿತಕ್ಕೆ ತಮಿಳು ಮಾದರಿ?

    ಹೌದಾ! ಭಟ್ಟರು ಹೀಗಂದಿರುವುದಕ್ಕೆ ಆಧಾರ ಕೊಡ್ತೀರಾ?

    ಉತ್ತರ
  45. Ravi
    ಮಾರ್ಚ್ 31 2011

    ಬಸವಯ್ಯ, ಬಹುಸಂಖ್ಯಾತರಿಗೆ ಅರ್ಥವಾಗದ ಬೇಂದ್ರೆ, ಡಿವಿಜಿ, ಇನ್ನಿತರರ ಸಾಹಿತ್ಯವೇಕೆ.. ಎಲ್ಲರಿಗೂ ಅರ್ಥವಾಗುವ “ಹಳೆ ಪಾತ್ರೆ ಹಳೆ ಕಬ್ಬಿಣ.. ” ಸಾಹಿತ್ಯವೇ ಇರಲಿ.. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮಡಿವಂತರೆ.

    ಉತ್ತರ
    • ಮಾಯ್ಸ
      ಮಾರ್ಚ್ 31 2011

      ಹಾಗಾದರೆ ತಮ್ಮಂತೆ “ಹಳೇ ಪಾತ್ರೆ ಹಳೇ ಕಬ್ಬಿಣ” ಕೀಳು?

      ಉತ್ತರ
      • Ravi
        ಮಾರ್ಚ್ 31 2011

        ಮಾಯ್ಸ, ನಾನೆಲ್ಲಿ ಹಾಗೆಂದೆ. ಹಳೆ ಪಾತ್ರೆ ಹಳೆ ಕಬ್ಬಿಣ ವೇ ಹೆಚ್ಚು ಇಷ್ಟ, ಹೆಚ್ಚು ಕೇಳೋನು ನಾನು. ನಿಮ್ಮದೇ ಧ್ವನಿಯಲ್ಲಿ ಹೇಳಿದೆ, ಬೇಂದ್ರೆ, ಡಿವಿಜಿ ಸಾಹಿತ್ಯ ಅರ್ಥವಾಗಲ್ಲ ಅದು ಬಹು ಸಂಖ್ಯಾತರಿಗೆ ಬೇಡ. ಅದನ್ನ ಬ್ಯಾನ್ ಮಾಡೋಣ ಅಂತ. ಮೇಲು ಕೀಳಿನ ಮಾತೇ ಬಂದಿಲ್ಲ. ನಿಮ್ಮ ತಲೆಯಲ್ಲೇ ಇದೆ ಆ ಸಾಹಿತ್ಯ ಮೇಲು ಇದು ಕೀಳು ಅಂತ. ಕಳ್ಳನ ಮನಸ್ಸು ಹುಳ್ಳಗೆ ಅಂತೆ! ನಾನು ಹೇಳದಿದ್ದುದನ್ನು ಹುಡುಕ್ತ ಇದ್ದೀರಾ ನೀವು. ಕೀಳು ಎಂಬುದು ಯಾಕೆ ನಿಮ್ಮ ತಲೆಗೆ ಬಂತು? ನಿಮ್ಮ ಮನಸ್ಸು ಎಷ್ಟು ಕೆಟ್ಟಿದೆ ದಯವಿಟ್ಟು ಒಮ್ಮೆ ನೋಡಿ. ನಿಮ್ಮ ತಪ್ಪಲ್ಲ. ಇದಕ್ಕೆ ಕಾರಣ ನಿಮ್ಮ ವೈಯುಕ್ತಿಕ ಅನುಭವವಿರಬಹುದು. ನಮ್ಮ ಸಮಾಜದ ಕೆಲ ಕೆಟ್ಟ ಸಂಪ್ರದಾಯಗಳು ಕೆಲವರನ್ನು ಈ ರೀತಿ ಯೋಚಿಸುವಂತೆ ಮಾಡಿವೆ.
        ನರೇಂದ್ರ ಅವರು ಹೇಳಿದಂತೆ, ಕನ್ನಡ ಬೇಕು ಅನ್ನುವುದಕ್ಕಿಂತ, ಸಂಸ್ಕೃತ ಬೇಡ ಅನ್ನುವುದೇ ಮುಖ್ಯವಾಗಿದೆ. ತಮಿಳಿನವರು, ಕನ್ನಡ ಶಾಸ್ತ್ರೀಯ ಅಲ್ಲ ಅಂದ ಹಾಗೆ. ದಯವಿಟ್ಟು ನೋಡಿ ಈ ಬರಹ ಮೇಲು ಕೀಳಿನ ಮೇಲಿಲ್ಲ. ಅಸ್ಪ್ರಶ್ಯತೆಯ ಮೇಲಿಲ್ಲ. ಎಲ್ಲಿಂದ ಎಲ್ಲಿಗೋ ಹೋಗಿವೆ ಮಾತುಗಳು. ಕಾಳು, ಜೊಳ್ಳು ಎಂಬಂತಹ ಮಾತುಗಳು ಅನವಶ್ಯ. ಜೊಳ್ಳಿಗೂ ಅದರದ್ದೇ ಮಹತ್ವ ಇದೆ. ಎಲ್ಲವೂ ಸಮಾನ ಭೂಮಿಯಲ್ಲಿ. ಮಡಿವಂತಿಕೆ ಬ್ರಾಹ್ಮಣ್ಯದಲ್ಲಿ ಇರುವುದಲ್ಲ ಮನಸ್ಸಿನಲ್ಲಿ.

        ಉತ್ತರ
        • ಮಾಯ್ಸ
          ಮಾರ್ಚ್ 31 2011

          ನನಗೆ ಹಾಗೆ ಅನ್ನಿಸುವುದಿಲ್ಲ..

          ನಮ್ಮಲ್ಲಿ ಸಮತನ ಮೊದಲಿದಂದಲೂ ಇದ್ದಿದ್ದರೇ, ಇಂದು ಸಂಸ್ಕ್ರುತ ತುಂಬಿದ ಕನ್ನಡದಲ್ಲಿ ಆಳ್ವಿಕೆಯಾಗಲಿ, ಕಲಿಕೆಯಾಗಲಿ ಬರುತ್ತಲೇ ಇರುತ್ತಿರಲಿಲ್ಲ.

          ಈ ಸಂಸ್ಕ್ರುತ ತುರುಕುವಿಕೆಗೆ ಒಂದು ವರ್ಗ/ಗುಂಪು ಕಾರಣ/ಸಲುವು. ಅದನ್ನು ಯಾರೂ ತೆಗೆದುಹಾಕುವ ಹಾಗೇ ಇಲ್ಲ. ಹಾಗೂ ಆ ಗುಂಪು ಈ ಸಂಸ್ಕ್ರುತ ತುರುಕುವಿಕೆಯನ್ನೇ ಏನೋ ತನ್ನ ಮೇಲ್ಮೆ, ಹಾಗು ದೊಡ್ಡಸ್ತಿಕೆ ಎಂದು ತಿಳಿದುಕೊಂಡಿದೆ.

          ಬೇಂದ್ರೆ ಬೇಡ. ಅವರು ಆಡುನುಡಿಯ ಸೊಗಡನ್ನು ಹರಡಿದರು.. ಆದರೆ ಡೀವೀಜಿಯನ್ನು ಬ್ಯಾನ್ ಮಾಡಿದರೆ ನನಗೆ ಅಡ್ಡಿಯಿಲ್ಲ.. ಹಳಗನ್ನಡದಲ್ಲಿ ಬರುವೆನು ಎಂದು ಸಂಸ್ಕ್ರುತ ತುಂಬಿ, ನಾಲ್ಕು ಕರ್ನಾಟಕಗಳು ಆಗಲಿ ಎಂದವರು. ಅವರು ಮನೆ ಮಾತು ತೆಲುಗು. ಅವರು ಕನ್ನಡಿಗರು ಆದುದು ಬರೀ ರಾಜಾಸ್ಥಾನದಲ್ಲಿ ಕೀರ್ತಿ ಗಿಟ್ಟಿಸಲು! ಅವರೊಬ್ಬ ಮಡಿವಂತ ಬ್ರಾಹ್ಮಣರೇ!

          ಆದರೆ ಬೇಂದ್ರೆಯಾಗಲೀ, ಶಿವರಾಮ ಕಾರಂತರಾಗಲಿ, ಅನಂತಮೂರ್ತಿ, ಕಾರ್ನಾಡ ಮುಂತಾದವರಾಗಲಿ ಅಲ್ಲ!

          ಉತ್ತರ
  46. Narendra Kumar.S.S
    ಮಾರ್ಚ್ 31 2011

    > Can you show, where the supporters of DNS have shown hatred towards sanskrit
    ಸುರೇಶ್, DNS ಏನೆಂದು ನನಗೆ ತಿಳಿಯದು. ಅಥವಾ ನೀವು “DSS” ಎಂದು ಹೇಳುತ್ತಿರುವಿರೇ?
    ನಾನೆಲ್ಲಿ DNS/DSS ಪ್ರಸ್ತಾಪ ಮಾಡಿರುವೆ? ಆ ವಿಷಯ ಇಲ್ಲಿ ಹೇಗೆ ಬಂದಿತು ನನಗೆ ತಿಳಿಯುತ್ತಿಲ್ಲ.

    ಉತ್ತರ
    • Suresh
      ಮಾರ್ಚ್ 31 2011

      jaana Narendrarige namaskaaragaLu,

      Dr. D N Shankara bhat avarannu ee charcheyalli DNS eMdu bareyalaagide. ajakkaLara lEkhanadalloo DNS eMdoo ullEkhavaagide. innu DSS andare dalita saMgharSha samiti, idu dalitara para hOraatada saMghaTaneyaagiddu, ee vaadadalli avara paatra illinavaregoo iddaMtilla.
      So, DNS ennuvudannu darbhe naarayana shankara bhaT eMdu OdikoLLi. adachaNegaagi mannisi

      ಉತ್ತರ
      • ಮಾಯ್ಸ
        ಮಾರ್ಚ್ 31 2011

        ಸರೇಶ ಈ ಬರಹದ ಕೊನೆ ಸಾಲು ಓದಿದವರಿಗೆ DNS ಯಾರು ಎಂದು ತಿಳಿದೇ ಇರಬೇಕಲ್ಲ.

        ಆ ಸಾಲು ಹೀಗಿದೆ.
        “ಒಟ್ಟಿನಲ್ಲಿ ಡಾ. ಡಿ.ಎನ್.ಎಸ್. ಯೋಜನೆಯು, “ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ ಸುಲಭ ಉಪಾಯವೆಂದರೆ ಬಡತನ ರೇಖೆಯನ್ನೇ ಸ್ವಲ್ಪ ಕೆಳಗೆ ಮಾಡುವುದು” ಎನ್ನುವಂತಿದೆ. ಚರ್ಚೆಗೆ ಸ್ವಾಗತ.” 🙂

        ಇನ್ನು ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲ. ಅವರೇ ಅವರೊಂದು ಹೊತ್ತಗೆಯಲ್ಲಿ ಇದನ್ನು ಹೇಳಿಕೊಂಡಿದ್ದಾರೆ!

        ಉತ್ತರ
  47. ಮಾಯ್ಸ
    ಮಾರ್ಚ್ 31 2011

    ತುಳು ಕೊಂಕಣಿಯ ಸಂಗತಿಗಳೇ ಬೇರೆ… ಆ ಬಗ್ಗೆ ಮಾತುಕತೆ ನಡೆಯಲಿ..

    ತುಳು ಕೊಂಕಣಿಗಾಗಿ ಕನ್ನಡದಲ್ಲಿ ಸಂಸ್ಕ್ರುತ ತುಂಬಿಕೊಳ್ಳಿಲಿ ಅನ್ನೋದೇ ನೀವು?

    ಈ ಮಾತುಕತೆಯಲ್ಲಿ ಕೊಂಕಣಿ, ತುಳು ಇವೆಲ್ಲ ಒಳಪಡಲ್ಲ.!

    ಉತ್ತರ
  48. ಮಾಯ್ಸ
    ಮಾರ್ಚ್ 31 2011

    ರವಿ..

    ಕನ್ನಡಿಗರೇ ನಮಗೆ ಈ ಸಂಸ್ಕ್ರುತ ಸೊಲ್ಲರಿಮೆಯ/ವ್ಯಾಕರಣದ ಕನ್ನಡ ತೊಡರು/ಕಶ್ಟ ಎಂದು ಹೇಳುತ್ತಿರುವುದು. ನಾನು, ಶಂಕರಬಟ್ಟರ, ಶುಬಶ್ರೀ, ಬರತ ಇವರೆಲ್ಲರೂ ಕನ್ನಡಿಗರೇ ತಾನೆ. ನಮ್ಮ ಅಳಲನ್ನು ಹೇಳಿಕೊಂಡರೆ ಅದು ಹೇಗೆ ಜಾತಿವಾದ, ಅದು ಹೇಗೆ ಸಂಸ್ಕ್ರುತಿಗೆ ವಿರುದ್ದ?

    ನಾನು ಒಂದು ಗುಂಪಿನ ಬಗ್ಗೆ ಮಾತಾಡಿದ್ದೀನಿ. ಅಲ್ಲಿ ಜಾತಿ ಬಂದಿದೆ ದಿಟ. ಅದು ಏಕೆ ಅಂದರೆ ಆ ಗುಂಪು, ನಮ್ಮಂತಹ ಕನ್ನಡಿಗರು, ನಮಗಿಂತ ಅರಿವಿನ ಮಟ್ಟ ಹಾಗು ಅರಿವುಪಡೆಯಲು ಹೆಣಗಾಡುವ ಕನ್ನಡಿಗರ ನೋವು ಚೂರು ಲೆಕ್ಕ ತೆಗೆದುಕೊಳ್ಳದೇ, ತಮ್ಮ ಪರಂಪರೆ, ತಮ್ಮ ಸಂಸ್ಕ್ರುತಿ, ತಮ್ಮ ಶ್ರೇಶ್ಟತೆ ಎಂದು ಕನ್ನಡದಲ್ಲಿ ರೋಸುವಶ್ಟು ಸಂಸ್ಕ್ರುತ ತುಂಬಿದ್ದಾರೆ. ಅದು ದಿಟವಾಗಲೂ ಒಂದು ನುಡಿಗೆ ಅದರತನವನ್ನೇ ಕಡಿದು ಹಾಕುವ ಮಹಾಪಾಪ!

    ಉತ್ತರ
  49. Shubhashree
    ಮಾರ್ಚ್ 31 2011

    ನರೇಂದ್ರ ಸಾರ್, ಮಂಜುನಾಥ್ ಸಾರ್,

    ವಾದದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಹಾಗೆ ಭಾಗವಹಿಸುವವರು ಸ್ವತಃ ಭಾಷಾವಿಜ್ಞಾನಿ ಆಗಿರಬೇಕೆಂಬುದು ಇಲ್ಯಾರ ಆಶಯವೂ ಅಲ್ಲ. ಯಾಕೆಂದರೆ ನಾನಂತೂ ಬಿಕಾಂ ಪದವೀಧರೆ, ಭಾಷಾವಿಜ್ಞಾನದ ಪದವೀಧರೆ ಅಲ್ಲ. ಹಾಗೆಂದು ಡಾ.ಗಿರೀಶರು ಆ ಕಾರಣಕ್ಕೇ ನನಗೆ ಉತ್ತರಿಸಲಾರೆ ಎಂದರೆ ಹೇಗೆ ಸರಿಯಲ್ಲವೋ ಹಾಗೇ ಇದೂ ಕೂಡಾ.
    ನನ್ನ ಎಣಿಕೆಯಂತೆ ಇಲ್ಲಿ ವಾದ ಮಂಡಿಸುವಾಗ ಅನಿಸಿಕೆಗಳನ್ನು, ಅನುಭವಗಳನ್ನೂ ಹೇಳಿಕೊಳ್ಳುತ್ತೇವೆ. ಅಂತೆಯೇ ಅದನ್ನು ಬೆಂಬಲಿಸುವ ವಿಜ್ಞಾನದ ಮೂಲತತ್ವವನ್ನೋ, ವಿಜ್ಞಾನಿಯ ಬರಹಗಳನ್ನೋ ಬಳಸುತ್ತೇವೆ. ಹಾಗೇ, ಸ್ವತಃ ಭಾಷಾತಜ್ಞರಲ್ಲದಿದ್ದವರು ಯಾವ ವೈಜ್ಞಾನಿಕ ಕಾರಣವಿಟ್ಟುಕೊಂಡು ವಾದಿಸುತ್ತಿದ್ದಾರೆ ಎನ್ನುವುದಷ್ಟೇ ಮುಖ್ಯವಾಗುತ್ತದೆ. ಆ ನೆಲೆಯಲ್ಲಿ ನೋಡಿದಾಗ ಶಂಕರ ಭಟ್ಟರ ನಿಲುವುಗಳನ್ನು ಡಾ. ರಾ ಗಣೇಶ್ ಅವರಾಗಲೀ, ಡಾ.ಗಿರೀಶ್ ಅವರಾಗಲೀ ವೈಜ್ಞಾನಿಕ ನೆಲೆಯಲ್ಲಿ ತಪ್ಪೆಂದು ತೋರಿಸಿಕೊಟ್ಟಿಲ್ಲ ಅಥವಾ… ಅವರು ತೋರಿಸಿಕೊಟ್ಟಿರುವ ಬಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮನವರಿಕೆ ಮಾಡಿಸುವಂತಿಲ್ಲ. ಅದಕ್ಕಾಗಿಯೇ ಅವರಿಗೆ ಹೀಗೆ ಸಾಲು ಸಾಲು ಪ್ರಶ್ನೆಗಳಿಟ್ಟಿದ್ದಾರೆ ಓದುಗರು.
    ನಿಲುಮೆಯಲ್ಲಿ ಹೊಡೆದು ಓಡಿಹೋಗುವವರ ಲೇಖನ ಪ್ರಕಟಿಸಲ್ಲ ಎಂದು ಬರೆದಿದ್ದನ್ನು ಓದಿದ ನೆನಪು. ಈಗ ಇಷ್ಟೂ ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಡಾ. ಗಿರೀಶ ಅಜಕ್ಕಳರು ಮೌನಕ್ಕೆ ಮೊರೆಹೋಗಿರುವುದನ್ನು ಏನೆನ್ನಬೇಕು?

    ಉತ್ತರ
    • ಮಾರ್ಚ್ 31 2011

      ನಿಲುಮೆ,
      ಎಲ್ಲಿದ್ದೀರ? ಶುಬಶ್ರೀ ಅವರ ಕೇಳ್ವಿಗೆ ಮಾರುಲಿಯಿರಿ.

      “ನಿಲುಮೆಯಲ್ಲಿ ಹೊಡೆದು ಓಡಿಹೋಗುವವರ ಲೇಖನ ಪ್ರಕಟಿಸಲ್ಲ” ಅಂತ ನಿಲುಮೆಯವರು ಹೇಳಿದ್ದು ದಿಟ. ಆದರೆ ಇದುವರೆಗೂ ಅಜಕ್ಕಳ ಗಿರೀಶರು ಇನ್ನು ’ದಿವ್ಯಮೌನ’ ತಳೆದಿದ್ದಾರೆ. ನಿಲುಮೆ- ನಿಮ್ಮ ಮಾತು ಉಳಿಸಿಕೊಳ್ಳಿ.

      -ಬರತ್

      ಉತ್ತರ
      • ಮಾರ್ಚ್ 31 2011

        ಭರತ್,ಶುಭಶ್ರೀ,

        ಅಜಕ್ಕಳರು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಲ್ಲ.ಈಗಲೇ ಬಂದು ಉತ್ತರಿಸಲಿ ಅಂದರೆ ಸಾಧ್ಯವಿಲ್ಲ.ತುಸು ತಾಳ್ಮೆಯಿರಲಿ 🙂

        ಉತ್ತರ
    • Narendra
      ಮಾರ್ಚ್ 31 2011

      Shubhashree> ವಾದದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.
      Shubhashree> ಹಾಗೆ ಭಾಗವಹಿಸುವವರು ಸ್ವತಃ ಭಾಷಾವಿಜ್ಞಾನಿ ಆಗಿರಬೇಕೆಂಬುದು ಇಲ್ಯಾರ ಆಶಯವೂ ಅಲ್ಲ.
      ಆದರೆ, ಈ ಲೇಖನಕ್ಕೆ ಬರೆದಿರುವ ಕೆಲವು ಪ್ರತಿಕ್ರಿಯೆಗಳನ್ನು ನೋಡಿದರೆ ನೀವು ಹೇಳುವುದಕ್ಕೆ ವ್ಯತ್ಯಾಸವಿರುವುದು ತೋರುತ್ತದೆ.
      ಕೆಲವು ಪ್ರತಿಕ್ರಿಯೆಗಳನ್ನು ಈ ಕೆಳಗೆ ನೋಡಿ:
      Shubhashree> ನೆನಪಿಡಿ, ಗಣೇಶ್ ಅವರೊಬ್ಬ ಬಹುಭಾಷಾ ವಿದ್ವಾಂಸರೇ ಹೊರತು ಭಾಷಾ ವಿಜ್ಞಾನಿಯಲ್ಲ
      Bharath Kumar> ೨. ಆರ್. ಗಣೇಶ್ – ನುಡಿಯರಿಗರಲ್ಲ/ಸೊಲ್ಲರಿಗರಲ್ಲ…ಪಾಪ…ಆದ್ದರಿಂದ ನುಡಿ/ಬಾಶೆಯ ಬಗ್ಗೆ ಅವರ ಮಾತಿಗೆ ಹೆಚ್ಚು ಬೆಲೆ ಕೊಡಬೇಕಾಗಿಲ್ಲ
      ಮಾಯ್ಸ> Dr.Ganesh holds an M.Sc degree. ಇವರು ಕನ್ನಡದ ಬಗ್ಗೆ ಒಂದು ಪದವಿಯನ್ನೂ ಗಳಿಸಿಲ್ಲ
      ಮಾಯ್ಸ> ರಾ.ಗಣೇಶ ಅವರು ಮನೆ ಮಾತು ತಮಿಳು, ಓದು ಸಂಸ್ಕೃತ, ಹೀಗಿರುವಾಗ ಅವನ್ನು ಕನ್ನಡದ ಬಗ್ಗೆ ಮಾದರಿಯಾಗಿ ಹೇಗೆ ತೆಗೆದುಕೊಳ್ಳುವುದು?
      Bharath Kumar> ಅಜಕ್ಕಳ ಗಿರೀಶ್ ಬಟ್ಟರ ಬಗ್ಗೆ ಮಾಯ್ಸರವರು ಕೊಟ್ಟಿರುವ ಅರಿಮೆ ದಿಟವಾದರೆ ಇವರು ನುಡಿಯರಿಗರಲ್ಲ, ಸೊಲ್ಲರಿಗರೂ ಅಲ್ಲ. ಅಂದ ಮೇಲೆ ಇವರು
      Bharath Kumar> ನುಡಿಯರಿಮೆ/ಸೊಲ್ಲರಿಮೆಯ ಬಗ್ಗೆ ಮಾತನಾಡಲು ತಕ್ಕವರೆ ಅಂತ ಈ ಬ್ಲಾಗ್ ಓದುಗರು ಮತ್ತು ನಿಲುಮೆ ತಂಡದವರು ಉಂಕಿಸಲಿ

      ಉತ್ತರ
  50. ಮಹೇಶ ನೀರ್ಕಜೆ
    ಮಾರ್ಚ್ 31 2011

    ಮಾಯ್ಸ ಅಂಥೋರು ಸಾವಿರ ಬಾರಿ ಹೇಳಿದರೂ ಕನ್ನಡಿಗರು ತಮಗೆ ರೂಢಿಯಾಗಿರೋ ಸಂಸ್ಕೃತ ಪದಗಳನ್ನ ಬಿಡಲ್ಲ. ಭಾಷೆ ಬೆಳೆಸೋದು, ಉಳಿಸೋದು ಹೇಗೆ ಅನ್ನೋ ಕನಿಷ್ಟ ಜ್ಞಾನ ಇಲ್ಲದೇ ಇರೋರಿಂದ ಸಂಸ್ಕೃತ ದ್ವೇಷ ಬಿಟ್ಟು ಇನ್ನೇನನ್ನು ನಿರೀಕ್ಷಿಸಬಹುದು. ಬನವಾಸಿ ಬಳಗದ ಸೈಟ್ ಒಂದರಲ್ಲೇ ಸಂಸ್ಕೃತ ಬಳಕೆ ಬಗ್ಗೆ ಸ್ಪಷ್ಟ ನಿಲುವು ಓದಿದ್ದೆ. ಅದೇನೆಂದರೆ ರೂಢಿಗತವಾಗಿಲ್ಲದ ಸಂಸ್ಕೃತ ಪದಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ ಎಲ್ಲರಿಗೂ ಅರ್ಥವಾಗುವ ಥರ ಭಾಷೆ ಇರಬೇಕು ಎಂದು. ಅದು ಬಿಟ್ಟು ಇದ್ದ ಬದ್ದ ರೂಢಿಗತ ಪದಗಳನ್ನೆಲ್ಲ ಹುಡುಕಿ ಹುಡುಕಿ ನಿವಾರಿಸಬೇಕು ಅಂತ ಅನ್ನೋರು ಕೆಲವು ‘ಕೇಮೆ’ ಇಲ್ಲದ ಜನ ಮಾತ್ರ. ಶಂಕರ ಭಟ್ಟರು ಏನು ಬರೆದಿದ್ದಾರೆ ಅಂತ ಓದಿಲ್ಲ. ಸಾಕಷ್ಟು ಅಧ್ಯಯನ ಮಾಡಿ ಬರೆದಿರುವುದರಿಂದ ಅಂಥವರಿಂದ ಇಂಥಾ ಬಾಲಿಶ ತರ್ಕಗಳನ್ನು ನಾನು ನಿರೀಕ್ಷಿಸುವುದಿಲ್ಲ. ಒಂದುವೇಳೆ ತಮ್ಮ ಪುಸ್ತಕದಲ್ಲಿ ಸಂಸ್ಕೃತದ ಎಲ್ಲಾ ಪದಗಳನ್ನೂ ಕನ್ನಡದಿಂದ ಅಳಿಸಿ ಹಾಕಬೇಕೆಂದು ಬರೆದಿದ್ದರೂ ಆ ಬರಹದ ಹಿನ್ನೆಲೆಯನ್ನು ಮತ್ತು ಹರವನ್ನು ನೋಡುವುದು ಅಗತ್ಯವಾಗುತ್ತದೆ. ಇದನ್ನೆಲ್ಲಾ ನೋಡದೆ ಮೇಲ್ನೋಟಕ್ಕೆ ಏನೆನ್ನಿಸುತ್ತದೋ ಅದನ್ನು ಹೇಳಿ ಇತರರನ್ನು ದಿಕ್ಕು ತಪ್ಪಿಸುವುದು ಸುಲಭ. ಅಂಥಾ ಪ್ರಯತ್ನಕ್ಕೆ ಯಾರೂ ಬಲಿಯಾಗದಿರಲಿ.

    ಉತ್ತರ
    • Narendra Kumar.S.S
      ಏಪ್ರಿಲ್ 1 2011

      ಮಹೇಶ್, ಬಹಳ ಸರಿಯಾಗಿ ಹೇಳಿದಿರಿ.
      ಇವರುಗಳು ಹೆಸರಿಗೆ “ಕನ್ನಡ ಉದ್ದಾರ” ಎಂದರೂ, ಅವರ ಮನಸ್ಸಿನ ಹಿಂದೆ ಭಾಷೆ, ಜಾತೀಯತೆ ಇತ್ಯಾದಿ ವಿಷ ಬೀಜಗಳನ್ನಿಟ್ಟುಕೊಂಡೇ ಮಾತನಾಡುತ್ತಿದ್ದಾರೆ.
      ಇಂತಹವರಿಂದ ಕನ್ನಡದ ಉದ್ದಾರ ಸಾಧ್ಯವಿಲ್ಲ.
      ಇತರರನ್ನು “ಅತಿ ಬಲಪಂಥೀಯ, ಜಾತಿವಾದಿ ಹಾಗು ಕಟ್ಟರ್ Nazism ಮತ್ತು racism ಮನಸ್ಥಿತಿ ಉಳ್ಳವರು” ಎಂದು ಹಂಗಿಸಲೂ ಹೇಸುವುದಿಲ್ಲ.
      ಆದರೆ, ತಾವು ಹೇಳಿದುದನ್ನು ಒಪ್ಪದಿದ್ದರೆ, “ಶಿಟ್” ಇತ್ಯಾದಿ ತಮ್ಮ ಬಾಯಿ-ಹೊಟ್ಟೆಯಲ್ಲಿದ್ದುದೆಲ್ಲವನ್ನೂ ಕಕ್ಕಲಾರಂಭಿಸುತ್ತಾರೆ. ಇದಲ್ಲವೇ Nazism?
      ತಮಗೆ ತಿಳಿದವರು ಹೇಳಿದ್ದು ಮಾತ್ರ ಸರಿ; ತಮಗೆ ಮಾತ್ರ ಪದವಿ-ಪಾರಿತೋಷಕಗಳಿವೆ; ತಮಗೆ ಮಾತ್ರ ಈ ವಿಷಯದಲ್ಲಿ ಮಾತನಾಡಲು ಹಕ್ಕಿದೆ ಎನ್ನುತ್ತಾರೆ.
      ಜೊತೆಜೊತೆಗೆ Democratic ಎಂದೂ ಹೇಳಲಾರಂಭಿಸುತ್ತಾರೆ.
      ಇಲ್ಲಿನ ಈವರೆಗಿನ ಚರ್ಚೆಯಲ್ಲಿ, ವಿಷಯಕ್ಕಿಂತ ವ್ಯಕ್ತಿಗಳ ಕುರಿತಾಗಿ ನಡೆದಿರುವ ಚರ್ಚೆಯೇ ಹೆಚ್ಚಾಗಿದೆ.
      ಒಟ್ಟಿನಲ್ಲಿ ಈ ವ್ಯಕ್ತಿಗಳ ಮನಸ್ಸಿನಾಳದಲ್ಲಿದ್ದ ವಿಷ ಹೊರಬಂದು ಸತ್ಯಗೋಚರವಾಗಿದೆ.
      ಇದೇ ಈ ಚರ್ಚೆಯಿಂದ ಆಗಿರುವ ಉಪಯೋಗ.

      ಉತ್ತರ
      • Ravi
        ಏಪ್ರಿಲ್ 1 2011

        ನರೇಂದ್ರ, ಈ ಚರ್ಚೆಯ ಉಪಯೋಗವನ್ನು ಚೆನ್ನಾಗಿ ಬರೆದಿರಿ. ಅನಗತ್ಯ ಸ್ಥಳಗಳಲ್ಲಿ ಧರ್ಮದ ಜಾತಿಯ ಪ್ರಸ್ತಾಪ, ಕೊಂಕು ಮಾತು, ನಿಂದನೆ. ಸಮಾಜ ಉದ್ಧಾರ ಮಾಡ ಹೊರಟವರು “reversal of roles ” ಮಾಡುತ್ತಿರುವಂತಿದೆ.

        ಉತ್ತರ
    • ಮಾಯ್ಸ
      ಏಪ್ರಿಲ್ 2 2011

      ಮಹೇಶ ನೀರ್ಕಜೆ,

      ನಾನು ಎಲ್ಲ ಸಂಸ್ಕ್ರುತ ಪದಗಳನ್ನು ತೆಗೆಯಿರಿ ಎಂದು ಎಲ್ಲೂ ಹೇಳೇ ಇಲ್ಲ. ನಾನೇ ಸಂಸ್ಕ್ರುತ ಪದಗಳನ್ನು ಬಳಸುವೆನಲ್ಲ.! ಇದನ್ನು ನಾನಿಲ್ಲಿ ಮೂರು ಸಲ ಹೇಳಿ ಆಯಿತು.

      ಸುಮ್ನೆ ಕೇಮೆ ಇಲ್ವ? 🙂 ಸರಿಯಾಗಿ ನೋಡಿ ಮಾತಾಡಿ.!

      ಉತ್ತರ
  51. Priyank
    ಏಪ್ರಿಲ್ 1 2011

    ರವಿ ಅವರೇ,

    ನೀವು ಇತರೆ ಸಮುದಾಯಗಳನ್ನು ನೋಡಿ, ನಮ್ಮ ಮತ್ತು ಅವರ ವ್ಯವಸ್ಥೆಗಳ ನಡುವೆ ಇರುವ ವ್ಯತ್ಯಾಸ ಅರಿಯಲು ಪ್ರಯತ್ನಿಸಿರೋದು ಮೆಚ್ಚಬೇಕಾದ್ದೆ.

    ದೇಶ ರಾಜ್ಯಗಳೆಂಬ ಗೊಂದಲ ಬೇಡ ಎಂದೇ, ನಾನು ‘ಭಾಷಿಕ ಸಮುದಾಯ’ ಎಂದು ಕರೆದದ್ದು.
    ನಮ್ಮ ದೇಶದ ಪ್ರತಿಯೊಂದು ಭಾಷಿಕ ಸಮುದಾಯದಲ್ಲೂ, ನಾನು ತೆಗೆದುಕೊಂಡ ಉದಾಹರಣೆಯ ರೀತಿಯಲ್ಲಿ, ಭಾಷೆಯ ಮೂಲಕ ಏಳಿಗೆಯಾದರೆ ಎಲ್ಲರಿಗೂ ಒಳಿತು.
    ನಮ್ಮ ಭಾಷಿಕ ಸಮುದಾಯಗಳು, ತಮ್ಮ ತಮ್ಮ ಏಳಿಗೆಗೆ ತಮ್ಮ ಭಾಷೆ ಮೇಲೆ ಒರಗಿ, ವ್ಯವಹಾರಕ್ಕಾಗಿ ಒಂದು ಲಿಂಕ್ ಲಾಂಗ್ವೇಜ್ ಇಟ್ಟುಕೊಂಡರೆ ಎಲ್ಲರಿಗೂ ಅನುಕೂಲ. ಅದು ಸಾಮಾಜಿಕ ನ್ಯಾಯ ಕೂಡ.
    ಆ ಲಿಂಕ್ ಲಾಂಗ್ವೇಜ್, ಒಂದು ಭಾಷಿಕ ಸಮುದಾಯಕ್ಕೆ ಇತರೆ (ಹೆಚ್ಚಿನ) ಭಾಷಿಕ ಸಮುದಾಯಗಳ ಜೊತೆ ವ್ಯವಹಾರಕ್ಕೆ ಆಗಿಬರುವಂತಿರಬೇಕು.
    ಲಿಂಕ್ ಲಾಂಗ್ವೆಜನ್ನು ಎಲ್ಲರೂ ಕಲಿಯಬೇಕಾಗಿಲ್ಲವಾದ್ದರಿಂದ, ಒಂದು ಭಾಷೆಯನ್ನು ಇನ್ನೊಬ್ಬರ ಮೇಲೆ ಹೇರುವ ಕೆಲಸವೂ ಬೇಕಾಗಿಲ್ಲ.

    ಇಂತಹ ವ್ಯವಸ್ಥೆಯ ಅಳವಡಿಕೆಯೇ ಸುಲಭವಾದ್ದು. ಜನರಿಗೆ ತಾನಾಗೇ ಬರುವ ಭಾಷೆಯಲ್ಲಿ ಎಲ್ಲವೂ ಸಿಕ್ಕುವಂತೆ ಮಾಡುವುದು ಏಳಿಗೆಗೆ ಒಳದಾರಿ.
    ದೇಶಕ್ಕೆ ಒಂದು ನುಡಿ ಬೇಕು ಎಂದು ಹೊರಟು, ಒಂದು ನುಡಿಯನ್ನು ಎಲ್ಲರಿಗೂ ಕಲಿಸಲು ತಿಣುಕಾಡಿ, ದುಡ್ಡು ಖರ್ಚು ಮಾಡಿ, ಜನರ ನಡುವೆ ಒಡಕು ಮೂಡಿಸೋದು ಕಷ್ಟದ ಕೆಲಸ ತಾನೇ.

    ಉತ್ತರ
  52. Shubhashree
    ಏಪ್ರಿಲ್ 1 2011

    ಮಂಜುನಾಥರೇ,

    ನೀವಂದಂತೆ ಬೇರೆ ಭಾಷೆಯ ಪದಗಳನ್ನು ಉಲಿಯಲು ಬೇಕಾಗುವ ಹೆಚ್ಚುವರಿ ಅಕ್ಷರಗಳನ್ನು ಹೊಂದುವುದು ಒಳ್ಳೆಯದೇ ಆಗಿದೆ. ನೀವು ತಿಳಿದಂತೆ ಕನ್ನಡದಿಂದ ಯಾವುದೇ ಅಕ್ಷರಗಳನ್ನು ಬಿಡುವುದು ಅನ್ನೋದು ಸಹಜವಾಗಿ ಸಿಟ್ಟಿಗೇಳಿಸುತ್ತೆ. ಆದರೆ ಹೀಗೆ ಬರೆಯುವಾಗ ಶಂಕರಭಟ್ಟರು ಹೇಳಿರುವುದನ್ನು ಆಧರಿಸಿ ಬರೆಯುವುದು ಅವರ ಬರಹದ ಸಮರ್ಥನೆ, ಕ್ರಿಟಿಕ್ಕು ನೋಡಿ ಬರೆಯೋದಕ್ಕಿಂತ ಒಳ್ಳೆಯದು ಅನ್ನಿಸುತ್ತೆ. ನೀವು ಓದಿಕೊಂಡೇ ಬರೆಯುತ್ತಿದ್ದೀರಾ ಎಂದು ಭಾವಿಸುವೆ. ಭಟ್ಟರ ನಿಲುವು ಓದುವ ಮುನ್ನ ನನ್ನಲ್ಲೂ ಗೊಂದಲವಿತ್ತು. ಬದಲಾವಣೆಗೆ ವಿರೋಧವಿತ್ತು. ಸರಳವಾಗಿ ಅವರ ನಿಲುವು ತಿಳಿಸಲು ಯತ್ನಿಸುವೆ.

    ಕನ್ನಡದ ಪದಗಳಲ್ಲಿ ಮಹಾಪ್ರಾಣಾಕ್ಷರಗಳು ಇಲ್ಲ. ಇರುವುದು ಆಮದಾದ ಪದಗಳಲ್ಲಿ. ಹಾಗೆ ಆಮದು ಆದವೂ ಕೂಡಾ ಕನ್ನಡಿಗರ ಬಾಯಲ್ಲಿ ಅಲ್ಪಪ್ರಾಣವಾಗಿ ಬದಲಾಗುತ್ತವೆ. ಕನ್ನಡಿಗರು ಮಹಾಪ್ರಾಣಾಕ್ಷರಗಳನ್ನು ಉಲಿಯುವಲ್ಲಿ ಸಾಮಾನ್ಯವಾಗಿ ಅಲ್ಪಪ್ರಾಣವನ್ನೇ ಉಲಿಯುತ್ತಾರೆ. ನುಡಿಯನ್ನು ಉಲಿಯುವಂತೆಯೇ ಬರೆಯುವುದು ಅದರ ಸ್ಪೆಲ್ಲಿಂಗ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕನ್ನಡಿಗರಿಗೆ ಕನ್ನಡವನ್ನಾಡಲು, ಬರೆಯಲು ಮಹಾಪ್ರಾಣದ ಅಗತ್ಯವಿಲ್ಲ.ಕಲಿಕೆಯಲ್ಲಿ ಹಾಗಾಗಿ ಮಹಾಪ್ರಾಣಗಳನ್ನು ಕಲಿಸುವ ಅಗತ್ಯವಿಲ್ಲ.ಮುಂದೊಮ್ಮೆ ಅವರು ಸಂಸ್ಕೃತವನ್ನೋ, ಮತ್ತೊಂದನ್ನೋ ಬರೆಯಲು, ಓದಲು ತೊಡಗುವುದೇ ಆದರೆ ಆಗ ಮಹಾಪ್ರಾಣಾಕ್ಷರಗಳನ್ನು ಕಲಿಯುತ್ತಾರೆ.

    ಕನ್ನಡದಲ್ಲಿ ಆಡುಭಾಷೆಯ ಪದಗಳನ್ನಾಗಲೀ, ನಾಲಗೆಯಲ್ಲಿ ಸುಲಲಿತವಾಗಿ ಉಲಿಯಬಲ್ಲ ಪದಗಳಾಗಲೀ.. ಅವುಗಳನ್ನೇ ಹೆಚ್ಚು ಹೆಚ್ಚು ಬಳಸುವ ಮೂಲಕ ಕಲಿಕೆಯನ್ನು ಸುಲಬವಾಗಿಸಿಕೊಳ್ಳಲು ಅನುಕೂಲ. ಹಾಗಾಗಿ ಹೆಚ್ಚು ಹೆಚ್ಚು ಕನ್ನಡ ಮೂಲದ ಪದಗಳನ್ನು ಬಳಸೋಣ. ಒಂದು ಪರಭಾಷಾ ಪದವನ್ನು ತೆಗೆದುಕೊಳ್ಳುವ ಬಗ್ಗೆ ಭಟ್ಟರು ಹೇಳುವುದು. ಅಂಥಾ ಪದಗಳು ಕನ್ನಡದ ಶೈಲಿಗೆ ಒಗ್ಗಿಕೊಂಡೇ ಬರುವುದು ಸಹಜ. ಹಾಗಾಗಿ ಆ ಕನ್ನಡಕ್ಕೆ ಒಗ್ಗಲಾದ ಪದವನ್ನು ತಪ್ಪೆನ್ನುವುದಕ್ಕಿಂತಾ ಹಾಗೇ ಬಳಸೋಣ. ಎಂದು. ಉದಾಹರಣೆಗೆ ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ನಿದ್ರಾ ಎನ್ನುವುದು ನಿದ್ದೆಯಾಗಿ ಬಂದಿರುವು ಸರಿಯಷ್ಟೇ. ಈಗ ನಿದ್ದೆ ತಪ್ಪು ನಿದ್ರೆ ಸರಿ ಎನ್ನುವುದು ಬೇಡ ಎನ್ನುವಂತೆ. ಎಲ್ಲಾ ಪದಗಳೂ ಬದಲಾಗಬೇಕು ಅನ್ನುತ್ತಿಲ್ಲ. ಬದಲು ಮಾಡುವುದಕ್ಕೆ ಆಗುವುದೂ ಇಲ್ಲ. ಯಾವುದು ಜನರ ಬಳಕೆಗೆ ಬಾಗಿ ಬದಲಾಗುತ್ತೋ ಅದನ್ನು ಹಾಗೇ ಒಪ್ಪಿಕೊಳ್ಳೋಣ… ಎನ್ನುವುದು ಭಟ್ಟರ ನಿಲುವೆಂಬುದು ನನಗೆ ಅರ್ಥವಾಗಿರುವ ಬಗೆ.

    ಉತ್ತರ
    • ಶುಭಶ್ರೀ, ತಡವಾದ ಬದಲಿಗಾಗಿ ಕ್ಷಮೆಯಿರಲಿ. ಖಾಸಗೀ ತುರ್ತುಗಳಿಂದಾಗಿ ಕೆಲವು ದಿನ ದೂರವಿದ್ದೆ.

      ಮೊದಲಿಗೆ ನನ್ನಿ, ವಸ್ತುನಿಷ್ಠವಾಗಿ ವಿಷಯವನ್ನು ಮುಂದಿಟ್ಟಿದ್ದಕ್ಕಾಗಿ. You stand out in the crowd of abusers. ನಿಮ್ಮಂತೆ ಮಾತಾಡಿದರೆ ಮಾತಾಡೋದಕ್ಕೂ ಖುಶಿಯಾಗುತ್ತದೆ.

      ನನ್ನ ಅಭಿಪ್ರಾಯಗಳನ್ನು ಬರೆಯುವುದಕ್ಕೆ ಮೊದಲು ಒಂದು ಸ್ಪಷ್ಟೀಕರಣ. ಶಂಕರಬಟ್ಟರ ವಿಷಯದಲ್ಲಿ ನನ್ನ ತಕರಾರುಗಳು ಒರಿಜಿನಲ್ ಆದದ್ದೇ, ಅದರ ಕ್ರಿಟಿಕ್ಕುಗಳನ್ನು ನೋಡಿ ಬಂದದ್ದಲ್ಲ (ಕ್ರಿಟಿಕ್ಕನ್ನು ನೋಡಿ ಬಂದ ಸಿಟ್ಟು ಬೇರೆಯೇ ಕಾರಣಕ್ಕೆ, ಅದು ಬೇರೆ ವಿಷಯ).

      ನಿಮ್ಮ ನಿಲುವುಗಳಲ್ಲಿ ನಾನೂ ಒಪ್ಪಿದ್ದು ಇವು:

      “ಕನ್ನಡದ ಪದಗಳಲ್ಲಿ ಮಹಾಪ್ರಾಣಾಕ್ಷರಗಳು ಇಲ್ಲ. ಇರುವುದು ಆಮದಾದ ಪದಗಳಲ್ಲಿ. ಹಾಗೆ ಆಮದು ಆದವೂ ಕೂಡಾ ಕನ್ನಡಿಗರ ಬಾಯಲ್ಲಿ ಅಲ್ಪಪ್ರಾಣವಾಗಿ ಬದಲಾಗುತ್ತವೆ. ಕನ್ನಡಿಗರು ಮಹಾಪ್ರಾಣಾಕ್ಷರಗಳನ್ನು ಉಲಿಯುವಲ್ಲಿ ಸಾಮಾನ್ಯವಾಗಿ ಅಲ್ಪಪ್ರಾಣವನ್ನೇ ಉಲಿಯುತ್ತಾರೆ. ನುಡಿಯನ್ನು ಉಲಿಯುವಂತೆಯೇ ಬರೆಯುವುದು ಅದರ ಸ್ಪೆಲ್ಲಿಂಗ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕನ್ನಡಿಗರಿಗೆ ಕನ್ನಡವನ್ನಾಡಲು, ಬರೆಯಲು ಮಹಾಪ್ರಾಣದ ಅಗತ್ಯವಿಲ್ಲ.” ಇದನ್ನು ನಾನೂ ಒಪ್ಪಿದೆ, ಎಲ್ಲಿಯವರಗೆ? “ಕನ್ನಡ” “ಕನ್ನಡಿಗರು” ಇದರ ಅತಿ ಕಿರಿದಾದ ಅರ್ಥದಲ್ಲಿ. ಆದರೆ ಯಾವುದನ್ನು “ಕನ್ನಡ” ಎಂದು ನಮ್ಮ ಗೆಳೆಯರು ಸಾಧಿಸಹೊರಡುತ್ತಿದ್ದಾರೋ ಅದಷ್ಟೇ ಕನ್ನಡ ಅಲ್ಲ. ಕನ್ನಡ/ಕನ್ನಡತನದ ವ್ಯಾಪ್ತಿ ಇವರು ತೋರಿಸುತ್ತಿರುವುದಕ್ಕೂ ಹಿರಿದು; ಅದು ಇವರಿಗೆ ತಿಳಿಯದ್ದೇನಲ್ಲ. ಅದು ಹೀಗೆ:

      ಯಾವುದು ಕನ್ನಡ? *ಈ* ನೆಲದಲ್ಲಿ *ಕಾಲದಿಂದ* ನಾವು ಆಡಿಕೊಂಡುಬಂದ ಭಾಷೆ. ಹೀಗೆಂದಮೇಲೆ ಅದಕ್ಕೊಂದು ಸ್ಥಳೀಯತೆಯ ಮತ್ತು ಕಾಲದ ಆಯಾಮ ಬಂತು. ಇದೆರಡೂ ಆಯಾಮಗಳನ್ನು ಒಂದೊಂದಾಗಿ ನೋಡೋಣ.

      First of all, ಈ “ಕನ್ನಡನೆಲ”ದ ವ್ಯಾಪ್ತಿಯೇನು? ಇವತ್ತು ಇರುವಂತೆ ಉತ್ತರ-ದಕ್ಷಿಣವಾಗಿ ಬೀದರಿನಿಂದ ಮೈಸೂರಿನವರೆಗೂ, ಪೂರ್ವ-ಪಶ್ಚಿಮವಾಗಿ ಕೋಲಾರದಿಂದ ಅರಬ್ಬೀ ಸಮುದ್ರದವರೆಗೂ ಇರುವ ಹುರಳೀಬೀಜದಂತಿರುವ ಭೂಭಾಗವೇ? ಅಥವಾ ಕವಿರಾಜಮಾರ್ಗಕಾರನ ಕಾಲದ “ಕಾವೇರಿಯಿಂದಮಾ ಗೋದಾವರಿವರಗಿರ್ದ” ನಾಡೇ? ಅಥವ ನಮ್ಮ ಸಂಸ್ಕೃತಿಯ ಸ್ವರ್ಣಯುಗ ವಿಜಯನಗರ ಕಾಲದ ಕನ್ನಡಾಂಧ್ರ ಕೇರಳ ಕೊಂಗುನಾಡುಗಳನ್ನೊಳಗೊಂಡ ಬಹುಪಾಲು ದಕ್ಖನ್ ಭೂಭಾಗವೇ? (ಹಾಗಿದ್ದರೆ ನಮ್ಮ ಆಯ್ಕೆಗನುಗುಣವಾಗಿ ಆ ಇಡೀ ಭೂಭಾಗದ ಎಲ್ಲ ನುಡಿ-ನುಡಿಗಟ್ಟುಗಳೂ ಕನ್ನಡವೇ?) ಇನ್ನು ಕಾಲದ ಆಯಾಮಕ್ಕೆ ಬಂದರೆ, ನಾವು ಮೇಲೆ ನೋಡಿದಂತೆ ಕನ್ನಡ ಭಾಷಿಕರ ಭೂವ್ಯಾಪ್ತಿಯೇ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಇವತ್ತಂತೂ ಕನ್ನಡಿಗರು ಪ್ರಪಂಚದ ಮೂಲೆಮೂಲೆಯಲ್ಲೂ ಇದ್ದಾರೆ. ಅವರ ಪರಿಸರದೊಡನೆ ಅವರ ಕೊಡು ಕೊಳ್ಳುವಿಕೆಯ ಸಂಬಂಧ ಈ ಕನ್ನಡತನಕ್ಕೆ ಅವರವೇ ಆಯಾಮಗಳನ್ನು ತೊಡಿಸುತ್ತದೆ, ಅಲ್ಲವೇ? ಹಾಗಾದರೆ ಕನ್ನಡ ನಾಡು ಅನ್ನೋದು ಯಾವುದು?

      ಇನ್ನು ಕನ್ನಡಿಗರೆಂದರೆ ಯಾರು? ಈ ಭೂಭಾಗದಲ್ಲಿ ಹುಟ್ಟಿದವರೇ, ಬೆಳೆದವರೇ, ಅಥವ ಎರಡೂ ಆಗಿರುವವರೇ? ಹಾಗಿದ್ದರೆ ಇಲ್ಲಿಂದ ಬೇರೆಡೆಗೆ ವಲಸೆಹೋದವರ ಅಥವ ಇಲ್ಲಿ ವಲಸೆ ಬಂದು ಇಲ್ಲಿಯವರೇ ಆಗಿರುವವರ ನೆಲೆ ಏನು? ಅವರ ಭಾಷೆ/ಸಂಸ್ಕೃತಿ ಇಲ್ಲಿ ಬೆರೆತು ಇಲ್ಲಿಯದೇ ಆಗಿಲ್ಲವೇ? ಮೊನ್ನೆ ಮೈಸೂರಿನ ಹೋಟೆಲೊಂದರಲ್ಲಿ ನನಗೊಬ್ಬ ಜರ್ಮನ್ ಪ್ರಜೆಯ ಪರಿಚಯವಾಯಿತು. ಆತ ಬಹುಪಾಲು ಭಾರತದಲ್ಲೇ ಇರುವುದಂತೆ, ಕಳೆದ ಆರು ತಿಂಗಳಿಂದ ಕರ್ನಾಟಕದಲ್ಲಿರುವನಂತೆ, ಆಗೀಗ ಜರ್ಮನಿಗೆ ಹೋಗಿಬರುವನಂತೆ. ಮಾತಾಡುತ್ತಾ ಆಡುತ್ತಾ ಆತ ಕನ್ನಡದಲ್ಲಿ ಮಾತಾಡಲು ಶುರು ಮಾಡಿದ, ನಾನು ಅವಾಕ್ಕಾದೆ. ಸ್ವಚ್ಛ ಕನ್ನಡ! ಸ್ಪಷ್ಟತೆಯಲ್ಲಿ ಸಹಜತೆಯಲ್ಲಿ ಒಂದುಚೂರೂ ರಾಜಿಯಿಲ್ಲ, ಒಂಚೂರೂ ವಿದೇಶೀಯತೆಯ ಸೋಂಕಿಲ್ಲ!. ದಿನಬೆಳಗಾದರೆ FM ರೇಡಿಯೋ, ಕನ್ನಡ TV ವಾಹಿನಿಗಳ ಕಿತ್ತೋದ ಕನ್ನಡವನ್ನೇ ಕೇಳಿ ರೋಸಿದ್ದ ಕಿವಿಗಳಿಗೆ ಜೇನು ಸುರಿದಂತಾಯಿತು. ಈ ವ್ಯಕ್ತಿ ಕನ್ನಡದವನೇ? ಅಲ್ಲವೇ? ಅಲ್ಲವಾದರೆ ಯಾಕಲ್ಲ? (ಇವನು ತಮಿಳನ್ನೂ ಅಷ್ಟೇ ಕ್ಷಮತೆಯಿಂದ ಮಾತಾಡುವುದನ್ನು ಕಂಡು ಅನಂತರ ಬೆರಗಾದೆ). ಮತ್ತೊಂದು ಚಿಕ್ಕ ಉದಾಹರಣೆ, ಮುಂದೆ ಸರಿಯುವ ಮೊದಲು. ಮೊನ್ನೆ ನಮ್ಮ ತಂದೆಯವರ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದೆ. ಅಲ್ಲಿ ಡ್ಯೂಟಿ ಡಾಕ್ಟರಿಗೆ ಸಮಸ್ಯೆಯನ್ನು ವಿವರಿಸುತ್ತಾ “ಇವರಿಗೆ ಸಂಜೆ ಹಸು ಗುದ್ದಿತು ಸ್ವಲ್ಪ ನೋಡಿ” ಎಂದೆ. ಆಕೆ ತನ್ನ ಗೆಳಯನ ಬಳಿ ಕೇಳಿದಳು (ಸರಿಯಾದ ಕನ್ನಡದಲ್ಲೇ!) “ಹಸು ಅಂದ್ರೆ ಏನು?” ಅವನು “cow” ಎಂದು ಉತ್ತರ ಕೊಟ್ಟಮೇಲೇ ಆಕೆಗೆ ನಮ್ಮ ಸಮಸ್ಯೆ ಅರ್ಥವಾಗಿದ್ದು. ಈಕೆ ಕನ್ನಡದವಳೇ? ಹೌದಾದರೆ ಏಕೆ ಹೌದು. ಹಾಗಾದರೆ *ಯಾರು* ಆಡುವ ಮಾತು, ಕನ್ನಡ?

      ನಮ್ಮ ಗೆಳೆಯರಿಗೆ ಹಾಸನದವರಾದ ನೀಲಾಂಜನ ಕನ್ನಡದವರಲ್ಲವಂತೆ, ಕಾರಣ ಅವರ ಯಾವುದೋ ಮರೆತುಹೋದ ತಲೆಮಾರಿನವರು ತಮಿಳುನಾಡಿನಿಂದ ಇಲ್ಲಿ ಬಂದು ನೆಲೆಸಿದರಂತೆ, ಅವರ ಮನೆಮಾತು ಅರೆತಮಿಳು ಅರೆಕನ್ನಡವಂತೆ. (ಅವರು ಈಗಲೂ ಹಲವು ವರ್ಷದಿಂದ ಅಮೆರಿಕದಲ್ಲೇ ಇರುವುದು ಬಿಡಿ); ಆರ್ ಗಣೇಶರು ಕನ್ನಡದವರಲ್ಲವಂತೆ, ಡಿವಿಜಿಯವರು ಕನ್ನಡದವರಲ್ಲವಂತೆ, ಮತ್ತೇನು, ಅವರು ಕನ್ನಡಿಗರಾದದ್ದು ಕೇವಲ ರಾಜಾಸ್ಥಾನದಲ್ಲಿ ಮನ್ನಣೆ ಗಿಟ್ಟಿಸಲಂತೆ. ಇದೆಲ್ಲ ಮೂರ್ಖವಾದಗಳನ್ನೂ ಶಂಕರಬಟ್ಟರ ಬುಟ್ಟಿಯಲ್ಲೇ ಹಾಕಿದರೆ ಹೇಗೆ?

      ಭಾಷೆ, ಜನಾಂಗ ಅದರ ಸ್ವರೂಪ ಕಾಲದಿಂದ ಕಾಲಕ್ಕೆ ಬದಲಾಗುವಂಥದ್ದು ಅಲ್ಲವೇ?. ಇಲ್ಲಿನ ಮೂಲನಿವಾಸಿಗಳಂತೆ. ಅವರು ಯಾರು? ಎಷ್ಟುವರ್ಷಗಳಿಂದ ಇಲ್ಲಿದ್ದರು? ಮೂಲ “ಕನ್ನಡ”ದ ಸ್ವರೂಪ ಹೇಗಿತ್ತು? ಕಾಲಕಾಲಕ್ಕೆ ಅದು ಯಾವವಾವ ಭಾಷೆ ಜನಾಂಗಗಳ ಜೊತೆ ವಿನಿಮಯ ನಡೆಸಿತು? ಆಧುನಿಕ ಮಾನವನ ಮೂಲ ಏಷಿಯಾ, ಯೂರೋಪು ಮತ್ತು ಆಫ್ರಿಕಾ ಖಂಡಗಳಲ್ಲೆಲ್ಲೋ ಆಯಿತೆನ್ನುತ್ತದೆ ಅಧ್ಯಯನ. ಹಾಗಿದ್ದರೆ ಶತಶತಮಾನಗಳಾಚೆ ಅಲ್ಲೆಲ್ಲಿಂದಲೋ ಬಂದು ಇಲ್ಲಿ ನೆಲೆಸಿದ ಜನಪದ ಕನ್ನಡದ್ದೆಂದು *ಯಾವಾಗಿನಿಂದ* ಕರೆಯಲ್ಪಟ್ಟಿತು. ಅವರ ನುಡಿ ಎಂದು ಕನ್ನಡವಾಯಿತು? ಆಗ ವಲಸೆ ಬಂದವರು ಕನ್ನಡಿಗರೆಂದಾದರೆ ಇವತ್ತು ಇಲ್ಲಿ ವಲಸೆ ಬಂದು ಇಲ್ಲಿಯವರಾಗೇ ಇರುವವರು ಕನ್ನಡಿಗರಲ್ಲವೇ? (ಅಥವ ಕನ್ನಡದ್ದೇ *ಹೋಮೋಸೆಪಿಯನ್* ನಮೂನೆ ಇಲ್ಲೇ ಉದ್ಭವವಾಯಿತೇ?) ಇತಿಹಾಸವನ್ನು ಕೆದಕುತ್ತಾ ಹೋದರೆ ಅನೇಕ ಉತ್ತರವಿಲ್ಲದ ಪ್ರಶ್ನೆಗಳು.

      ನನ್ನ ಅರ್ಥ ಕನ್ನಡಕ್ಕೆ ಒಂದು ಅಸ್ತಿತ್ವವೇ ಇಲ್ಲ ಎಂದಲ್ಲ? ಖಂಡಿತಾ ಇದೆ. ಭಾಷೆಯೊಂದು ಕಾಲದ ವಿವಿಧ ಘಟ್ಟಗಳಲ್ಲಿ, ದೇಶದ ವಿವಿಧ ಖಂಡಗಳಲ್ಲಿ, ವಿವಿಧ ಭಾಷೆಗಳೊಡನೆ ನಿಧಾನವಾಗಿ ರೂಪುಗೊಳ್ಳುತ್ತಾ ತನ್ನ ನೆಲೆ ಕಂಡುಕೊಳ್ಳುತ್ತದೆ. ಭಾಷೆಯ ನೆಲೆಯನ್ನು ಕೇವಲ ಸ್ಥೂಲವಾಗಿ ಗುರುತಿಸಬೇಕೇ ಹೊರತು ಗೆರೆಕುಯ್ದಷ್ಟು ನಿಖರವಾಗಲ್ಲ. ಏಕೆಂದರೆ ಈ *ನೆಲೆ*ಯೇ ಚಲನಶೀಲ. ಕಾಲದ ಅಖಂಡ ಅಳತೆಗೋಲಿನಲ್ಲಿ ಈ *ಇವತ್ತು* ತಾತ್ಕಾಲಿಕ. ಹೀಗಾಗಿ ಯಾವುದು “ಮೂಲ ಕನ್ನಡ” ಯಾವುದು ಹೊರಗಿನದ್ದು ಎಂಬ ಪರಿಕಲ್ಪನೆಯೂ ಕೇವಲ ಸ್ಥೂಲ ರೂಪದ್ದಾಗಿರುತ್ತದೆ. ಹೀಗಿರುವಾಗ, ಈಗಾಗಲೇ ನುಡಿಯಲ್ಲಿ ಹಾಸುಹೊಕ್ಕಾಗಿ ಬಳಕೆಗೆ ಬಂದಿರುವ ಪದಗಳನ್ನು ಅದು ಬಳಕೆಯಲ್ಲಿರುವಂತೆಯೇ ಒಪ್ಪಿಕೊಳ್ಳಬೇಕೇ ಹೊರತು ಅದು ಸಂಸ್ಕೃತದ್ದು/ಇಂಗ್ಲಿಷಿನದು, ಅದನ್ನು ತೆಗೆದುಹಾಕಿ “ಮೂಲ ಕನ್ನಡ ಪದ”ಗಳನ್ನೇ ಬಳಸಬೇಕು ಅಥವ ಅದನ್ನು “ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ” ಬಳಸಬೇಕು ಎಂಬ ವಾದಗಳು ಹಾಸ್ಯಾಸ್ಪದವೆನಿಸುತ್ತವೆ. ಏಕೆಂದರೆ ಭಾಷೆಯೊಂದರ “ಜಾಯಮಾನ” ಅದರ ಜನಪದವನ್ನವಲಂಬಿಸುತ್ತದೆ. “ಜನಪದ”ದಲ್ಲಿ ಎಲ್ಲ ಜಾತಿ, ಪಂಗಡ, ಸಂಸ್ಕೃತಿ ಮತ್ತವುಗಳ ಪ್ರಾಬಲ್ಯ ದೌರ್ಬಲ್ಯಗಳೂ ಮಿಳಿತವಾಗಿರುತ್ತದೆ. ಬ್ರಾಹ್ಮಣರು ಸಂಸ್ಕೃತದೊಡನೆ ಹೆಚ್ಚು ವ್ಯವಹರಿಸಿರಬಹುದು, ಸಂಕೇತಿಗಳು ತಮಿಳಿನೊಡನೆ, ಸೆಟ್ಟರು ತೆಲುಗಿನೊಡನೆ… ಅವೆಲ್ಲ “ಭಾಷಾ ವ್ಯವಹಾರಗಳೂ” ಭಾಷೆಗೆ ತಮ್ಮವೇ ಪದ/ವಾಕ್ಯ/ವ್ಯಾಕರಣದ ಅಂಶಗಳನ್ನು ಸೇರಿಸುತ್ತವೆ. ಮರಾಠೀ ಗಡಿಯ ಕನ್ನಡಿಗನ ಕನ್ನಡದಲ್ಲಿ ಹೆಚ್ಚು ಮರಾಠಿಯೂ, ಕೊಯಂಬತ್ತೂರಿನ ಕನ್ನಡಿಗನ ಕನ್ನಡದಲ್ಲಿ ಹೆಚ್ಚು ತಮಿಳೂ ಬಳ್ಳಾರಿಯ ಕನ್ನಡಿಗನಲ್ಲಿ ಹೆಚ್ಚು ತೆಲುಗೂ ಕಂಡುಬಂದರೆ ಅದು ಸಹಜವೇ. ಇನ್ನು ಇಂಗ್ಲೀಷನ್ನೇ (ಅದೂ ಹರುಕು ಮುರುಕು) ಕುಡಿದು ತಿಂದು ವಿಸರ್ಜಿಸುವ ನಮ್ಮ ಕಾನ್ವೆಂಟ್ ಹೈಕಳ ಕನ್ನಡವಂತೂ ಇಂಗ್ಲೀಷ್ ಮಯ. ಅದ್ಯಾವುದಕ್ಕೂ ಇಲ್ಲದ “ಶುದ್ಧೀಕರಣ”ದ ಅಗತ್ಯ ಸಂಸ್ಕೃತ ಸಂಬಂಧಕ್ಕೆ ಮಾತ್ರ ಏಕೆ? ಸಂಸ್ಕೃತ ಕೇವಲ ಬ್ರಾಹ್ಮಣರ ಭಾಷೆಯಾಗಿತ್ತೆಂದೇ? (ಈ ಬುಡವಿಲ್ಲದ ವಾದವನ್ನು ಹುಟ್ಟುಹಾಕಿದ ಪುಣ್ಯಾತ್ಮನಾರೋ ನನಗಂತೂ ತಿಳಿಯದು. ಲೋಕಪೂಜ್ಯವಾದ ರಾಮಾಯಣವನ್ನು ಬರೆದ ವಾಲ್ಮೀಕಿ ಬೇಡರವನು; ಮಹಾಭಾರತ/ಭಗವದ್ಗೀತೆಯ ಕರ್ತೃ ವೇದವ್ಯಾಸ, ಋಷಿಯೊಬ್ಬನಿಂದ ಬೆಸ್ತರ ಹೆಣ್ಣಿಗೆ ಹುಟ್ಟಿದವನು. ಪರಮ ಮಂತ್ರವಾದ “ಗಾಯತ್ರೀ”ಯನ್ನು ಕೊಟ್ಟ ವಿಶ್ವಾಮಿತ್ರ ಕ್ಷತ್ರಿಯ. ಆದರೆ ಸಂಸ್ಕೃತ ಮಾತ್ರ ಬ್ರಾಹ್ಮಣರ ಭಾಷೆ; ಅದರ ಸಂಪರ್ಕ ಕನ್ನಡಕ್ಕೆ ಮೈಲಿಗೆ!!!)

      ಇರಲಿ, ನಾನು ಹೇಳಹೊರಟಿದ್ದು ಇಷ್ಟೇ. ನೀವು ಯಾವುದನ್ನು ಕನ್ನಡವೆಂದೂ ಯಾರನ್ನು ಕನ್ನಡಿಗರೆಂದೂ ಬಿಂಬಿಸಲು ಹೊರಟಿದ್ದೀರೋ ಅದಷ್ಟೇ ಕನ್ನಡವಲ್ಲ, ಅವರಷ್ಟೇ ಕನ್ನಡಿಗರಲ್ಲ. ಕನ್ನಡಕ್ಕೆ ಅನೇಕ ರೂಪ ಹರಿವುಗಳಿದ್ದಾಗ ಅದರ ವರ್ಣಮಾಲೆ ಅದೆಲ್ಲವನ್ನೂ ಒಳಗೊಳ್ಳುವುದೇ ಸರಿಯಾದ ಮಾರ್ಗ. ಈ ದೃಷ್ಟಿಯಿಂದ ಕನ್ನಡದ ಈಗಿನ ವರ್ಣಮಾಲೆ ಅಚ್ಚುಕಟ್ಟಾಗಿದೆ. ನಿಮ್ಮ ವಾದ “ಕನ್ನಡಿಗರಿಗೆ ಕನ್ನಡವನ್ನಾಡಲು, ಬರೆಯಲು ಮಹಾಪ್ರಾಣದ ಅಗತ್ಯವಿಲ್ಲ.ಕಲಿಕೆಯಲ್ಲಿ ಹಾಗಾಗಿ ಮಹಾಪ್ರಾಣಗಳನ್ನು ಕಲಿಸುವ ಅಗತ್ಯವಿಲ್ಲ.” – ಇದು ಒಪ್ಪತಕ್ಕದ್ದಲ್ಲ. ಏಕೆಂದರೆ ನೀವು ಪ್ರತಿಪಾದಿಸುತ್ತಿರುವ ಹೊಸ ಕನ್ನಡ ವರ್ಣಮಾಲೆಯಲ್ಲಿ ಕೇವಲ ಕನ್ನಡದ ಒಂದು ಹರಿವನ್ನು ಉಲಿಯಬಹುದೇ ಹೊರತು ಕನ್ನಡದ ಎಲ್ಲ ಹರಿವುಗಳನ್ನೂ ಅಲ್ಲ. “ಮುಂದೊಮ್ಮೆ ಅವರು ಸಂಸ್ಕೃತವನ್ನೋ, ಮತ್ತೊಂದನ್ನೋ ಬರೆಯಲು, ಓದಲು ತೊಡಗುವುದೇ ಆದರೆ ಆಗ ಮಹಾಪ್ರಾಣಾಕ್ಷರಗಳನ್ನು ಕಲಿಯುತ್ತಾರೆ.” – ಎನ್ನುವ ನಿಮ್ಮ ಮಾತು ಮತ್ತಷ್ಟು ವಿಚಿತ್ರವಾಗಿದೆ. ಸಂಸ್ಕೃತವನ್ನು ಕಲಿಯಬೇಕೆನ್ನುವ ವ್ಯಕ್ತಿ ಸಂಸ್ಕೃತದ ವರ್ಣಮಾಲೆಯನ್ನು ಕಲಿಯುತ್ತಾನೆಯೇ ಹೊರತು ಕನ್ನಡದ “ಮಿಕ್ಕ” ವರ್ಣಮಾಲೆಯನ್ನಲ್ಲ. ಆದರೆ ಗಮನಿಸಿ, ನಿಮ್ಮ “ಹೊಸ” ವರ್ಣಮಾಲೆಯ ಪ್ರಕಾರ ಕನ್ನಡದ ಈಗಿರುವ ಮತ್ತು ಹಿಂದಿನ ಬಹುಪಾಲು ಸಾಹಿತ್ಯವನ್ನು ಬರೆಯುವುದಾಗಲೀ ಓದುವುದಾಗಲೀ ಸಾಧ್ಯವಿಲ್ಲ. ನಮ್ಮ ಗೆಳೆಯರೊಬ್ಬರು ಹೇಳಿದ್ದರು, “ಹಿಂದೆ ಹಳೆಗನ್ನಡದ ರ ಳ ಗಳನ್ನು ಬಿಡಲಿಲ್ಲವೇ, ಅವಿಲ್ಲದೆಯೇ ಈಗಲೂ ಹಳೆಗನ್ನಡವನ್ನೋದುತ್ತಿಲ್ಲವೇ?” ಆದರೆ ಅದು ಕೇವಲ ಎರಡು ಅಕ್ಷರಗಳ ವಿಷಯ (ಅದನ್ನೂ ಬಿಟ್ಟಿದ್ದು ತಪ್ಪೆಂದೇ ನನ್ನ ವಾದ). ಆದರೆ ಇದು ಸರಿಸುಮಾರು ೧೫-೨೦ ಅಕ್ಷರಗಳ ವಿಷಯ. ಇವುಗಳ ಕೈಬಿಡುವಿಕೆಯಿಂದ ಉಂಟಾಗುವ ಗೊಂದಲದ ಕಲ್ಪನೆಯೂ ಯಾರಿಗೂ ಬೇಕಿದ್ದಂತಿಲ್ಲ. ಸುಮ್ಮನೇ ಇದೊಂದು ಸಾಲನ್ನು ನೋಡಿ:

      “ಆ ರವಮಂ ನಿರ್ಜಿತ ಕಂಠೀರವರವಮಂ ನಿರಸ್ತ ಘನರವಮಂ ಕೋಪಾರುಣನೇತ್ರಂ ಕೇಳ್ದಾ ನೀರೊಳಗಿರ್ದುಂ ಬೆಮರ್ದನುರಗಪತಾಕಂ” – ಗದಾಯುದ್ಧ.

      ಇದನ್ನೇ ನಿಮ್ಮ ಹೊಸ(!)ಗನ್ನಡದಲ್ಲಿ ಬರೆದರೆ

      “ಆ ರವಮಂ ನಿರ್ಜಿತ ಕಂಟೀರವರವಮಂ ನಿರಸ್ತ ಗನರವಮಂ ಕೋಪಾರುಣನೇತ್ರಂ ಕೇಳ್ದಾ ನೀರೊಳಗಿರ್ದುಂ ಬೆಮರ್ದನುರಗಪತಾಕಂ” – ಗದಾಯುದ್ದ.

      ನನಗಂತೂ ಅಸಹ್ಯವೆನಿಸುತ್ತದೆಯಪ್ಪ. ಮಾನಧನನಾದ ಸುಯೋಧನನು ಮಾನ*ದನ*ನಾದ ಸುಯೋ*ದನ*ನಾದರು ಸರಿ, ಒಸಗನ್ನಡದಲ್ಲಿ ಎಲ್ಲವೂ ಸರಿ. ಇಸ್ಟಕ್ಕೂ ಧನಕ್ಕು ದನಕ್ಕು ಎನಾದ್ರು ವೆತ್ಯಾಸವುಂಟೇ?

      ಈಗ ಹೇಳಿ. ರನ್ನನ ಗದಾಯುದ್ಧದಲ್ಲಿ ಬರುವ ಸಂಸ್ಕೃತ ಪದಗಳನ್ನೆಲ್ಲಾ ಸೋಸಿಹಾಕಿ ಬರೀ “ಕನ್ನಡ” ಪದಗಳನ್ನು ಉಳಿಸಿಕೊಂಡು ಕಾವ್ಯ ಬೋಧಿಸುತ್ತೀರೋ? ಅಥವಾ ಕಾವ್ಯ ಹೇಳಿಕೊಡುವಾಗ ಆ ಮೈಲಿಗೆಪದಗಳನ್ನೆಲ್ಲ ಅಶ್ಲೀಲ ಪದಗಳೆಂಬಂತೆ ಮುಗುಂ ಆಗಿ ಹಾರಿಸಿಕೊಂಡು ಮುಂದೆ ಹೋಗುತ್ತೀರೋ? ಅಥವಾ ಅದು ಸಂಸ್ಕೃತಭೂಯಿಷ್ಟ (ಬ್ರಾಹ್ಮಣ?) ಸಾಹಿತ್ಯವೆಂದು ಬಹಿಶ್ಕಾರವನ್ನೇ ಹಾಕಿಬಿಡುತ್ತೀರೋ (ದುರದೃಷ್ಟವಶಾತ್, ರನ್ನನೂ ಬ್ರಾಹ್ಮಣನಲ್ಲ – ವೃತ್ತಿಯಿಂದಲೂ!). ಇನ್ನು ಬಹುಪಾಲು ಸಂಸ್ಕೃತವೇ ಇರುವ ಕುವೆಂಪುರವರ ಸಾಹಿತ್ಯವನ್ನು ಎಲ್ಲಿ ಎಸೆಯುತ್ತೀರಿ (ದುರದೃಷ್ಟವಶಾತ್, ಅವರೂ ಬ್ರಾಹ್ಮಣರಲ್ಲ). ಕನ್ನಡವೆಂದರೆ ಕೇವಲ ಸಾಹಿತ್ಯವಷ್ಟೇ ಅಲ್ಲ; ಸಾಹಿತ್ಯವನ್ನು ಕಲಿಯುವ ಆಸಕ್ತಿಯಿರುವವರು ಮುಂದೆ ಪೂರ್ಣಪ್ರಮಾಣದ ಕನ್ನಡವನ್ನು ಕಲಿಯಬಹುದು ಎನ್ನೋಣ. ಆದರೆ ಸಾಹಿತ್ಯ ಕಲಿಕೆಯ ಕೀಲಿಕೈಯಾದ ವರ್ಣಮಾಲೆಯನ್ನೇ ಎಗರಿಸಿ, ಸಾಹಿತ್ಯದ ಭಂಡಾರಕ್ಕೆ ಬೀಗಜಡಿದುಬಿಟ್ಟರೆ, ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಅದರ ರುಚಿಯನ್ನೂ ತೋರಿಸದಿದ್ದರೆ, ಮುಂದೆಂದಾದರೂ ಸಾಹಿತ್ಯವನ್ನು ಕಲಿಯುವ ಆಸಕ್ತಿಯಾದರು ಹೇಗೆ ಬರುತ್ತದೆ? ಈಗಿರುವಹಾಗೆಯೇ ಶಾಲೆಯಲ್ಲಿ ಸಾಹಿತ್ಯವನ್ನು ಬೋಧಿಸುವುದೇ ಇಲ್ಲ; ಕನ್ನಡ ಕೇವಲ ಅಂಕಗಳಿಕೆಯ “ಪೇಪರ್” ಆಗಿ ಕೂತಿದೆ. ಏನೋ ಆಸಕ್ತಿಯಿರುವ ಅಪ್ಪ ಅಮ್ಮಂದಿರು ಮನೆಯಲ್ಲಿ ಮಕ್ಕಳಿಗೆ ಅಷ್ಟೋ ಇಷ್ಟೋ ಸಾಹಿತ್ಯದ ರುಚಿ ತೋರಿಸುತ್ತಾರೆ. ಇನ್ನು ವರ್ಣಮಾಲೆಯನ್ನೇ ತುಂಡರಿಸಿಬಿಟ್ಟರೆ, ನಮ್ಮ ಈ ಪ್ರಯತ್ನಕ್ಕೂ ಕತ್ತರಿ ಬಿದ್ದಂತೆ ಅಲ್ಲವೇ? ಅಥವಾ ಆಸಕ್ತಿಯಿರುವ ತಂದೆತಾಯಿಗಳು “ಬೇಕಾದರೆ” ಮಕ್ಕಳಿಗೆ ಮನೆಯಲ್ಲಿ ಪೂರ್ಣಪ್ರಮಾಣದ ವರ್ಣಮಾಲೆಯನ್ನೂ ಬೋಧಿಸಬೇಕೇ? ಅದನ್ನು ಎಷ್ಟುಜನ ಮಾಡಬಲ್ಲರು? ಹಾಗಿದ್ದರೆ ಶಾಲೆಗಳಿರುವುದು ಏತಕ್ಕೆ? ಇದು ನಮ್ಮ (ನೆನಪಿಡಿ *ನಮ್ಮ*, ಬರೀ ಒಂದು ಪಂಗಡದ ಅಲ್ಲ) ಸಂಸ್ಕೃತಿಯನ್ನೇ ಮುಂದಿನ ಪೀಳಿಗೆಗೆ ಶಾಶ್ವತವಾಗಿ ಇಲ್ಲವಾಗಿಸುವ ಹುನ್ನಾರವಲ್ಲದೇ ಮತ್ತೇನು?

      On a serious note, ಯಾವುದಾದರೂ ಪದ ಕ್ಲಿಷ್ಟವಾಗಿ ಕನ್ನಡದ ನಾಲಗೆಯಲ್ಲಿ ಹೊರಳದಿದ್ದರೆ ಅದು ತಾನಾಗಿಯೇ ಬದಲಾಗಿರುವುದನ್ನು ನಾವು ಕಾಣುತ್ತೇವೆ (ಉದಾಹರಣೆಗೆ cash = ಕಾಸು; godown = ಗುಡಾಣ; ನಿದ್ರಾ = ನಿದ್ದೆ; ಆರ್ಯ = ಅಜ್ಜ) ಆದರೆ ಗಮನಿಸಿ, ಇವೆಲ್ಲಾ ತಾವಾಗಿಯೇ ಭಾಷೆಯ ಸಹಜ ಹರಿವಿನಲ್ಲಿ ಬಂದಿರುವ ಬದಲಾವಣೆಗಳೇ ಹೊರತು ಯಾವುದೋ “ಚಳುವಳಿ”ಯೊಂದರ ಪ್ರಯತ್ನದಿಂದ ಆದದ್ದಲ್ಲ. ನೀವೇ ಹೇಳುವಂತೆ ನುಡಿಯು ನಾಲಗೆಗೆ ಸಹಜವಾಗಿ ಬರಬೇಕೇ ಹೊರತು ಪ್ರಯತ್ನಪೂರ್ವಕವಾಗಿ ನುಡಿಸಬಾರದು. ನಮ್ಮ “ಹೊಸಗನ್ನಡಪರ” ಗೆಳೆಯರ ಪೋಸ್ಟುಗಳನ್ನು ನೋಡಿ. ಪಾಪ ಅವರಿಗೆ “ಮಹಾಪ್ರಾಣ” ಅನ್ನುವ ಪದ ಸಹಜವಾಗಿಯೇ ಹೊಮ್ಮಿದರೂ ಪ್ರಯತ್ನಪಟ್ಟು ಅದನ್ನು “ಮಾಪ್ರಾಣ” ಅನ್ನಲು try ಮಾಡುತ್ತಾರೆ. ಅದೆಷ್ಟೇ ಪ್ರಯತ್ನಿಸಿದರೂ ಪಾಪ, ದುರಭ್ಯಾಸದ ಫಲ, “ಮಹಾಪ್ರಾಣ” ಅದುಹೇಗೋ ಅಲ್ಲಲ್ಲಿ ನುಸುಳಿಬಿಟ್ಟಿದೆ.

      ಒಂದೆಡೆ ಸಹಜ ಉಚ್ಚಾರದ ಮಾತಾಡುವ ನೀವು ಮತ್ತೊಂದೆಡೆ ಹೇಳುತ್ತೀರಿ “ಕನ್ನಡದಲ್ಲಿ ಆಡುಭಾಷೆಯ ಪದಗಳನ್ನಾಗಲೀ, ನಾಲಗೆಯಲ್ಲಿ ಸುಲಲಿತವಾಗಿ ಉಲಿಯಬಲ್ಲ ಪದಗಳಾಗಲೀ.. ಅವುಗಳನ್ನೇ ಹೆಚ್ಚು ಹೆಚ್ಚು ಬಳಸುವ ಮೂಲಕ ಕಲಿಕೆಯನ್ನು ಸುಲಬವಾಗಿಸಿಕೊಳ್ಳಲು ಅನುಕೂಲ” – ಇದು ವಿರೋಧಾಭಾಸವಲ್ಲವೇ? ಹಾಗೂ ಪದೇಪದೇ ಉಚ್ಚರಿಸಿ ಘಟ್ಟಿ ಮಾಡಿಕೊಳ್ಳಲೇಬೇಕಾದರೆ, ಅದೆಂದೋ ಇದ್ದು ನೆನಪಿನಿಂದ ಮರೆಯಾದ ಅತಿ ಹಳೇ ಕನ್ನಡಪದಗಳನ್ನು ಹುಡುಕಿ ತಂದು, ಬಹುಜನಕ್ಕೆ ಪರಿಚಯವಿರುವ ಇವತ್ತಿನ ಕನ್ನಡವನ್ನು ಬುಡಮೇಲುಮಾಡಿ, ಇಡೀ ವ್ಯವಸ್ಥೆಯನ್ನೇ ಜಾಲಾಡಿ “ಹೊಸ” ಭಾಷೆಯನ್ನು ಸೃಷ್ಟಿಸಿ ಕಷ್ಟ ಪ(ಕೊ)ಡುವ ಬದಲು, ಇರುವ ಕನ್ನಡವನ್ನೇ ಸ್ವಚ್ಚವಾಗಿ ಉಚ್ಚರಿಸಲು ಕಲಿಯಲಾಗದೇ? ಎಲುಬಿಲ್ಲದ ನಾಲಿಗೆಗೆ ಅಭ್ಯಾಸವೊಂದು ದೊಡ್ಡ ಕಷ್ಟವೇ? ಬುದ್ಧಿಯಿಲ್ಲದ ಗಿಣಿಯೇ ಮಾತು ಕಲಿಯುವುದಂತೆ!

      ನಮ್ಮ ಸದ್ಯದ ಕಳಕಳಿ “ಕುಕ್ಕುಟ ಪಾಲನಾ ಕೇಂದ್ರ”, “ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು”, “cow ಬಂದು knock ಮಾಡಿತು” ಇತ್ಯಾದಿ ಹೊಸ ಹೊಸ ಅಸಹ್ಯ ಪ್ರಯೋಗಗಳನ್ನು ನಿಲ್ಲಿಸಿ ಕನ್ನಡದ ಸ್ವರೂಪವನ್ನು ಈಗಿರುವಂತೆ ಕಾಯ್ದುಕೊಳ್ಳುವುದೇ ಹೊರತು, ಈಗಾಗಲೇ ಕನ್ನಡದಲ್ಲಿ ಹಾಸುಹೊಕ್ಕಾಗಿ ಕನ್ನಡದ್ದೇ ಆಗಿಬಿಟ್ಟಿರುವ ಪದಗಳನ್ನು “ಶುದ್ಧೀಕರಿಸ”ಹೊರಡುವುದೋ, ಯಾರೂ ಬಳಸದ, ಯಾರಿಗೂ ಅರ್ಥವಾಗದ “ಎದೆ ಮಾಂಜುಗಾರ”, “ಉಂಕಿಸು”, “ಬೊಟ್ಟುಗಳು” ಇತ್ಯಾದಿ ಅಭಾಸಗಳನ್ನು ಜನದ ಮೇಲೆ ಹೇರುವುದೋ ಅಲ್ಲ. ಜನಕ್ಕೆ ಬೇಕಾದ್ದನ್ನು ಅವರೇ ಆರಿಸಿಕೊಳ್ಳುತ್ತಾರೆ, ಕಾಲ ಕಳೆದಂತೆ ಅವು ವ್ಯಾಕರಣ ನಿಯಮಗಳಲ್ಲಿ ಒಪ್ಪಿತವೂ ಆಗುತ್ತದೆ (ತತ್ಸಮ ತದ್ಭವಗಳ ಪರಿಕಲ್ಪನೆಯೇ ಅದಲ್ಲವೇ?). ಹಾಗಲ್ಲದೆ ಇರುವುದನ್ನು ಬಲಾತ್ಕಾರವಾಗಿ ಅದೂ ಇಷ್ಟು ಭೀಕರ ಪ್ರಮಾಣದಲ್ಲಿ ಬದಲಿಸಹೊರಟರೆ ಅದು ಭಾಷೆಯ ಸ್ವರೂಪವನ್ನೇ ಕೊಲ್ಲುತ್ತದೆ ಅಷ್ಟೇ.

      ಇಷ್ಟಕ್ಕೂ ಕನ್ನಡದ ಕಲಿಕೆ ಅಷ್ಟೊಂದು ಕ್ಲಿಷ್ಟವೆಂದೇಕೆ ಎಂದುಕೊಳ್ಳುತ್ತೀರಿ. ಕನ್ನಡ ಅನ್ನ ನೀಡುವ ಭಾಷೆಯಾಗಬೇಕು, ವೈದ್ಯದಿಂದ ರಾಕೆಟ್ಟಿನ ವರೆಗೂ ಸಕಲವನ್ನೂ ಕನ್ನಡದಲ್ಲೇ ಕಲಿಯಬೇಕು ಎನ್ನುವ ನೀವು, ಜುಜುಬಿ ಐವತ್ತು ಅಕ್ಷರಗಳನ್ನು ಕಲಿಯುವುದೇ ದೊಡ್ಡ ಹೊರೆಯೆಂಬ ಭಾವನೆಯನ್ನು ಜನದ ತಲೆಯಲ್ಲಿ ತುಂಬುವಿರಲ್ಲ, ಐವತ್ತು ಅಕ್ಷರಗಳನ್ನು ಕಲಿಯಲಾರದ ತಲೆ, Trigonometry, calculus ಗಳಂತಹ ಕ್ಲಿಷ್ಟ ವಿಷಯಗಳನ್ನು, ಅದೂ ಕನ್ನಡದಲ್ಲಿ conceptualise ಮಾಡಿ ಕಲಿಯುತ್ತದೆಯೇ? ಅಥವ ಅಂಥ ಪ್ರಚಂಡ ಬುದ್ಧಿಯಾದರೆ ಐವತ್ತು ಅಕ್ಷರಗಳನ್ನು ಕಲಿಯುವುದು ಕಷ್ಟವೇ?

      ಕನ್ನಡದ ಕಲಿಕೆಯ ಸಮಸ್ಯೆ ನೀವೆನ್ನುವಂತೆ ಅದರ ಕ್ಲಿಷ್ಟತೆಯಿಂದ ಬಂದದ್ದೆಂದು ನನಗನ್ನಿಸುವುದಿಲ್ಲ, ಹಾಗೂ ಮಹಾಪ್ರಾಣಗಳು ಕನ್ನಡದ ನಾಲಿಗೆಯಲ್ಲಿ ಹೊರಳದು ಎಂದು ನನಗನ್ನಿಸುವುದಿಲ್ಲ. ಈ ಕೆಳಗಿನ ನುಡಿಗಳನ್ನು ನೋಡಿ:

      ನಿಮಿಶಾಂಭ ದೇವಸ್ತಾನ;
      ನಂಜುಂಡೆಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಈ ದಿನ ಬಕ್ತಾಧಿಗಳಿಗೆ ಅನ್ನದಾಹನ ಕಾರ್ಯಕ್ರಮವಿದೆ
      ಶ್ರೀ ಎಕ್ಸ್ ವೈ ಝಡ್ ರವರು, ಮಹಾಧಾನಿಗಳು
      ಹಿರಿಯ ಪ್ರಭಂದಕರು

      ಮಹಾಪ್ರಾಣಗಳು ಅಗತ್ಯವಿಲ್ಲದೆಡೆಯಲ್ಲೂ ಹೊರಳುತ್ತಿದೆಯಲ್ಲವೇ? ಇದು ನಾಲಿಗೆಯ ಸಮಸ್ಯೆಯೋ understanding ಸಮಸ್ಯೆಯೋ ನೀವೇ ಹೇಳಿ.

      ಕೊ.ಕೊ: ಶುಭಶ್ರೀಯವರೇ, ಈ ಲೇಖನದಲ್ಲಿ ಬಳಸಿರುವ “ನೀವು”, “ನಿಮ್ಮ” ಇತ್ಯಾದಿಗಳು ನಿಮ್ಮನ್ನು ಕುರಿತದ್ದಲ್ಲ, ಬದಲಿಗೆ “ಹೊಸ(!)ಕನ್ನಡ” ಗುಂಪಿನ ಕುರಿತದ್ದು. ದಯವಿಟ್ಟು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ.

      ಉತ್ತರ
      • ಏಪ್ರಿಲ್ 8 2011

        ಮಂಜುನಾಥ,
        “ಕೇವಲ ಎರಡು ಅಕ್ಷರಗಳ ವಿಷಯ (ಅದನ್ನೂ ಬಿಟ್ಟಿದ್ದು ತಪ್ಪೆಂದೇ ನನ್ನ ವಾದ).”

        ನೀವು ಱ್, ೞ್ ಬಿಟ್ಟಿದ್ದು ತಪ್ಪೆಂದು ಒಪ್ಪಿರುವುದರಿಂದ ನೀವೇ ನಿಮ್ಮ ಕಮೆಂಟಿನಲ್ಲಿ ಬರೆದಿರುವ ತಪ್ಪು ಬಳಕೆಗಳ ಬಗ್ಗೆ ನಾನು ಬರೆಯಲೇಬೇಕಾಗುತ್ತದೆ.

        <<"ಕನ್ನಡಿಗರು” ಇದರ ಅತಿ ಕಿರಿದಾದ ಅರ್ಥದಲ್ಲಿ"
        ಕಿರಿದು ತಪ್ಪು, ಕಿಱಿದು ಸರಿ

        <<"ಈಗಾಗಲೇ ನುಡಿಯಲ್ಲಿ ಹಾಸುಹೊಕ್ಕಾಗಿ ಬಳಕೆಗೆ ಬಂದಿರುವ ಪದಗಳನ್ನು ಅದು ಬಳಕೆಯಲ್ಲಿರುವಂತೆಯೇ ಒಪ್ಪಿಕೊಳ್ಳಬೇಕೇ "
        ಬಳಕೆ ತಪ್ಪು, ಬೞಕೆ ಸರಿ

        <<"ಸಂಕೇತಿಗಳು ತಮಿಳಿನೊಡನೆ, ಸೆಟ್ಟರು ತೆಲುಗಿನೊಡನೆ"
        ತಮಿಳು ತಪ್ಪು, ತಮಿೞ್ ಸರಿ

        <<"ಇಂಗ್ಲೀಷನ್ನೇ (ಅದೂ ಹರುಕು ಮುರುಕು) ಕುಡಿದು "
        ಮುರುಕು ತಪ್ಪು, ಮುಱುಕು ಸರಿ

        << "ಬದಲಾವಣೆಗಳೇ ಹೊರತು ಯಾವುದೋ "
        ಹೊರತು ತಪ್ಪು, ಹೊಱತು ಸರಿ

        <<"ಈಗ ಹೇಳಿ. ರನ್ನನ ಗದಾಯುದ್ಧದಲ್ಲಿ "
        ಹೇಳಿ ತಪ್ಪು, ಹೇೞಿ ಸರಿ

        << " ಇತ್ಯಾದಿಗಳು ನಿಮ್ಮನ್ನು ಕುರಿತದ್ದಲ್ಲ"
        ಕುರಿತು ತಪ್ಪು, ಕುಱಿತು ಸರಿ

        << "ಈ ಕೆಳಗಿನ ನುಡಿಗಳನ್ನು ನೋಡಿ"
        ಕೆಳಗಿನ ತಪ್ಪು, ಕೆೞಗಿನ ಸರಿ

        ಮಹಾಪ್ರಾಣ ಬಿಟ್ಟು ಬರೆದಾಗ ನೀವು ಹೀಗೆನ್ನುವಿರಿ
        <<"ನನಗಂತೂ ಅಸಹ್ಯವೆನಿಸುತ್ತದೆಯಪ್ಪ"

        ಆದರೆ ಮೇಲಿನ ಒಂದು ಕಮೆಂಟಿನಲ್ಲೇ ಇಶ್ಟೊಂದು ’ತಪ್ಪು’ ಮಾಡಿರುವ ನಿಮಗೆ ನಿಮ್ಮ ಕಮೆಂಟಿನ ಬಗ್ಗೆ ’ಅಸಹ್ಯ’ ಹುಟ್ಟಲಿಲ್ಲವೇಕೆ? ಅದೂ ತಾವು ಱ್,ೞ್ ಇರಬೇಕೆಂದು ಒಪ್ಪಿಕೊಂಡಮೇಲೂ.

        ಇದು ಇಬ್ಬಂದಿತನವಲ್ಲವೆ?

        ನಾನು, ಱ್,ೞ್ ಹೊಸಗನ್ನಡದಲ್ಲಿ ಬಿಟ್ಟಿದ್ದು ತಪ್ಪೆಂದು ತಿಳಿದಿಲ್ಲ ಹಾಗಾಗಿ ಱ್/ರ, ೞ್/ಳ ಎರಡೂ ನನಗೆ ಒಂದೇ.

        ಬರತ್

        ಉತ್ತರ
        • ಮಾಯ್ಸ
          ಏಪ್ರಿಲ್ 8 2011

          ಬರತ್..

          ಏನ್ರೀ. ಕನ್ನಡದಿಂದ ಬಿಟ್ಟಿರೋದು ಮೂರು ಅಕ್ಕರಗಳು ಱ, ೞ ಮತ್ತು ನ್ ಗುರುತು.. ಹಾಗೇ ಹೞಗನ್ನಡದಲ್ಲಿರ ಮೂಗಿನ ಯ, ರ, ಲ, ವ ಗಳು ಹೊಸಗನ್ನಡದಲ್ಲಿ ಮಾಯವಾಗಿದೆ.

          ಹಾಂವು (ಇಲ್ಲಿ ಮೂಗಿನ ವ, ಇನ್ನೂ ಹುಬ್ಬಳ್ಳಿ ಕಡೆ ಹೀಗೇ ಹೇಳೋದು)

          ಹಾಗೇ ೠ, ಲೃ, ಲೄ ಈ ಮೂರು ಅಕ್ಕರಗಳನ್ನು ಕನ್ನಡ ಅಕ್ಕರಮಾಲೆಯಿಂದ ಬಿಡಲಾಗಿದೆ.

          ಈಗ ಇರೋದು ನಲವತ್ತೊಂಬತ್ತು ಅಕ್ಕರಗಳು!

          ಉತ್ತರ
          • ಏಪ್ರಿಲ್ 8 2011

            “ಹಾಂವು (ಇಲ್ಲಿ ಮೂಗಿನ ವ, ಇನ್ನೂ ಹುಬ್ಬಳ್ಳಿ ಕಡೆ ಹೀಗೇ ಹೇಳೋದು)”

            ಮಾಯ್ಸಣ್ಣೊ,
            ಇನ್ನು ನಮ್ ಮಂಡ್ಯದಲ್ ’ಪಾಂಮು’ ಅಂತಾರೆ ಗೊತ್ತ?

            ಇನ್ನು ’ಇಲ್ಲ’ ಅನ್ನಕ್ಕೆ ’ಇಇಲ್ಲ’ ಅಂದರೆ ’ಇ’ಗೆ ಒತ್ತು ಕೊಟ್ಟು ಹೇಳ್ತಾರೆ.

            ಬರತ್

            ಉತ್ತರ
            • ಮಾಯ್ಸ
              ಏಪ್ರಿಲ್ 9 2011

              ಹು .. ಪಾಂವೂ, ಪೂಂಚಿ.. ಇವೆಲ್ಲ ಗೊತ್ತು..

              ಆದರೆ ನಾನು ಹೇಳಿದವನ್ನು ಶಬ್ದಮಣಿದರ್ಪಣ ಹೇಳಿದೆ.

              ಇಲ್ಲಿ ಕೆಲವರು ವ್ಯಾಕರಣದ ವಿಶಯದ ಬಗ್ಗೆ ಉದ್ದುದ್ದು ಬರೆಯುವರು, ಅವರು ಒಂದಾದರೂ ವ್ಯಾಕರಣದ ಹೊತ್ತಗೆಯನ್ನು ಎತ್ತುಗೆಯಾಗಿ ಹೇಳುವರೇ ಇಲ್ಲ… ಏನೋ ಒಟ್ಟಿನಲ್ಲಿ ಉದ್ದಕ್ಕೆ ತಮ್ಮ ‘ವಾದ’ ‘ಮಂಡಿ’ಸೋದು ಪರಾಕ್ರಮ…

              ಕೇಶೀರಾಜನೇ ಕನ್ನಡದಲ್ಲಿ ದೇಶಿ ಅಕ್ಕರಗಳನ್ನು ನಲವತ್ತೇಳೋ-ಎಂಟೋ ಎಂದು ಹೇಳಿದ್ದನು.. ಹಾಗು ಮಹಾಪ್ರಾಣಗಳಿಗೆ ಪ್ರಾಕ್ರುತ ಎತ್ತುಗೆ ನೀಡಿದ್ದನು ಎಂದು ನನ್ನ ಅರಿವು. ಕೇಶೀರಾಜ ಕೂಡ ಋ, ಷ, ಮುಂತಾದವು ಕನ್ನಡದ ದೇಶ ಪದಗಳಲ್ಲಿ ಇಲ್ಲ ಎಂದು ಗುರುತಿಸಿದ್ದಾನೆ.

              ಇನ್ನು ಕಿಟ್ಟಲ್ ಅವರು ಕನ್ನಡಿಗರು ಱ ಸದ್ದನ್ನು ಇನ್ನೂ ಬಳಸುವರು. ಅವರು ಱೋಡುನಾನು ಓದಿದ ಹಲವು ಬರಹಗಳಂತೆ ( ಕೆ.ವಿ.ನಾರಾಯಣ ಅವರ ‘ಕನ್ನಡದ ಮೇಲೆ ಸಂಸ್ಕೃತದ ಸವಾರಿ’ ಮುಂತಾದವು ) ಕನ್ನಡದಲ್ಲಿ ಕಳೆದ ನಲವತ್ತು ವರುಶಗಳಿಂದ ಒಂದು ಗುಂಪು ಒಂದೊಂದೇ ಸಂಸ್ಕೃತ ಮೂಲವಲ್ಲದ ಪದಗಳನ್ನು ಸಂಸ್ಕೃತಮೂಲದ ಪದಗಳಿಂದ ಕದಲಿಸುತ್ತಾ ಇದೆ.) , ಱಾಡು ಎಂದಾಗ ಮೆತ್ತನೆಯ ರ ಅಲ್ಲ ಒರಟಾ ಱ ಉಲಿಯುವರು ಎಂದು ಹೇಳಿದ್ದಾರೆ.

              ಆದರೂ ಇಶ್ಟು ದಿವಸ ಇರುವ ಯಾವ ಕನ್ನಡ ಪಂಡಿತರೂ ಅದನ್ನು ಮರು-ತನ್ನಿ ಎನ್ನಲಿಲ್ಲ. ಅವರಿಗೆ ಆ ಕಡೆಯ ಧ್ಯಾನವೇ ಇಲ್ಲ.

              ಉತ್ತರ
            • ಮಾಯ್ಸ
              ಏಪ್ರಿಲ್ 9 2011

              ಹು .. ಪಾಂವೂ, ಪೂಂಚಿ.. ಇವೆಲ್ಲ ಗೊತ್ತು..

              ಆದರೆ ನಾನು ಹೇಳಿದವನ್ನು ಶಬ್ದಮಣಿದರ್ಪಣ ಹೇಳಿದೆ.

              ಇಲ್ಲಿ ಕೆಲವರು ವ್ಯಾಕರಣದ ವಿಶಯದ ಬಗ್ಗೆ ಉದ್ದುದ್ದು ಬರೆಯುವರು, ಅವರು ಒಂದಾದರೂ ವ್ಯಾಕರಣದ ಹೊತ್ತಗೆಯನ್ನು ಎತ್ತುಗೆಯಾಗಿ ಹೇಳುವರೇ ಇಲ್ಲ… ಏನೋ ಒಟ್ಟಿನಲ್ಲಿ ಉದ್ದಕ್ಕೆ ತಮ್ಮ ‘ವಾದ’ ‘ಮಂಡಿ’ಸೋದು ಪರಾಕ್ರಮ…

              ಕೇಶೀರಾಜನೇ ಕನ್ನಡದಲ್ಲಿ ದೇಶಿ ಅಕ್ಕರಗಳನ್ನು ನಲವತ್ತೇಳೋ-ಎಂಟೋ ಎಂದು ಹೇಳಿದ್ದನು.. ಹಾಗು ಮಹಾಪ್ರಾಣಗಳಿಗೆ ಪ್ರಾಕ್ರುತ ಎತ್ತುಗೆ ನೀಡಿದ್ದನು ಎಂದು ನನ್ನ ಅರಿವು. ಕೇಶೀರಾಜ ಕೂಡ ಋ, ಷ, ಮುಂತಾದವು ಕನ್ನಡದ ದೇಶ ಪದಗಳಲ್ಲಿ ಇಲ್ಲ ಎಂದು ಗುರುತಿಸಿದ್ದಾನೆ.

              ಇನ್ನು ಕಿಟ್ಟಲ್ ಅವರು ಕನ್ನಡಿಗರು ಱ ಸದ್ದನ್ನು ಇನ್ನೂ ಬಳಸುವರು. ಅವರು ಱೋಡುನಾನು ಓದಿದ ಹಲವು ಬರಹಗಳಂತೆ ( ಕೆ.ವಿ.ನಾರಾಯಣ ಅವರ ‘ಕನ್ನಡದ ಮೇಲೆ ಸಂಸ್ಕೃತದ ಸವಾರಿ’ ಮುಂತಾದವು ) ಕನ್ನಡದಲ್ಲಿ ಕಳೆದ ನಲವತ್ತು ವರುಶಗಳಿಂದ ಒಂದು ಗುಂಪು ಒಂದೊಂದೇ ಸಂಸ್ಕೃತ ಮೂಲವಲ್ಲದ ಪದಗಳನ್ನು ಸಂಸ್ಕೃತಮೂಲದ ಪದಗಳಿಂದ ಕದಲಿಸುತ್ತಾ ಇದೆ.) , ಱಾಡು ಎಂದಾಗ ಮೆತ್ತನೆಯ ರ ಅಲ್ಲ ಒರಟಾ ಱ ಉಲಿಯುವರು ಎಂದು ಹೇಳಿದ್ದಾರೆ.

              ಆದರೂ ಇಶ್ಟು ದಿವಸ ಇರುವ ಹಲವು ಕನ್ನಡ ಪಂಡಿತರೂ ಅದನ್ನು ಮರು-ತನ್ನಿ ಎನ್ನಲಿಲ್ಲ. ಅವರಿಗೆ ಆ ಕಡೆಯ ಧ್ಯಾನವೇ ಇಲ್ಲ.

              ಉತ್ತರ
              • ವಾದಕ್ಕೆ ಎರಡು ಅಂಗ. ಒಂದು ತರ್ಕ, ಎರಡು ಅಗತ್ಯಬಿದ್ದೆಡೆಯಲ್ಲಿ ಅದಕ್ಕೊಂದು ಎತ್ತುಗೆ. ಬರೀ ಎತ್ತುಗೆಯಿಂದ ವಾದವಾಗೋಲ್ಲ.

                ಇರಲಿ, ವಾದ ಮಂಡಿಸುವ ’ಪರಾಕ್ರಮ’ ಬರೀ ಜಾತಿ, ವಿದ್ಯಾರ್ಹತೆ, ಇತಿಹಾಸ ಹಿಡಿದು ಹೀಗಳೆಯುವ ’ಅಕ್ರಮ’ಕ್ಕಿಂತ ಎಷ್ಟೋ ಮೇಲು.

                ಉತ್ತರ
                • “ನಿಮ್ಮ ಅನಿಸಿಕೆಗೆ ನಾನು ಮರುಬರೆಯೋಲ್ಲ..” – ನಿಮ್ಮ ಓಡಿಹೋಗುವ ಹಕ್ಕನ್ನು ನಾನು ಮರಿಯಾದಿಸುತ್ತೇನೆ.

                  “ಚೇಲ-ಚೇಲಿಯರಿದ್ದರೂ..” – ಈ ಚೇಲ-ಬಾಲಗಳಮೇಲಿನ ನಿಮ್ಮ ನಂಬಿಕೆ ಬಲು ಗಟ್ಟಿ. ಆದರೆ ನನಗೆ ಅದರಲ್ಲಿ ನಂಬಿಕೆಯೂ ಇಲ್ಲ, ಅದಕ್ಕೇ ಚೇಲಾಗಳೂ ಇಲ್ಲ. ಭ್ರಮೆ ಬಿಡಿ.

                  ನೀವು ಬರತರಿಗೆ ಹೇಳಿದರೂ ಅದು ಚರ್ಚೆಯ ವಿಷಯವೆಂದಾದಲ್ಲಿ ನನ್ನ ಅನಿಸಿಕೆ ಬರೆಯಲು ಅಡ್ಡಿಯೇನೂ ಇಲ್ಲ ಅಲ್ಲವೇ? ಅಡ್ಡಿಯಿದೆ ಎಂದಾದರೆ, ಬರತರಿಗೆ ಖಾಸಗಿ ಓಲೆ ಬರೆಯಬಹುದಲ್ಲ. ಈ ಸಾರ್ವಜನಿಕ ವೇದಿಕೆಯಲ್ಲಿ ಬರುವ ಯಾವ ಓಲೆಗೂ ಯಾರೂ ಪ್ರತಿಕ್ರಿಯಿಸಬಹುದು ಅಂತ ನನ್ನ ಅನಿಸಿಕೆ. ನಿಲುಮೆ ಸ್ಪಷ್ಟಪಡಿಸಲಿ.

                  “ಅನಿಸಿಕೆಯನ್ನು ಅಳಿಸಲು ನಿಮ್ಮ ಬಳಗವನ್ನೇ ಅಟ್ಟುವಿರಿ” – ಕ್ಷಮಿಸಿ, ಒಮ್ಮೆ ಮಾತಾಡಿದಮೇಲೆ ಅದನ್ನು “ಹಿಂಪಡೆಯುವುದರಲ್ಲಿ” “ಅಳಿಸುವುದರಲ್ಲಿ” ಯಾವುದೇ ಅರ್ಥವಿಲ್ಲವೆಂದು ನಾನು ಬಲ್ಲೆ. ಕಾಮೆಂಟುಗಳನ್ನು ಅಳಿಸುವುದನ್ನು ವಿರೋಧಿಸುವವರಲ್ಲಿ ನಾನೂ ಒಬ್ಬ. ಈ ಬಗ್ಗೆ ನಿಲುಮೆಗೆ ಓಲೆಯೂ ಇದೆ, ತಾವು ನೋಡಿರಬಹುದು.

                  ಪುಣ್ಯಾತ್ಮಾ, ತರ್ಕ ಗಟ್ಟಿಗೊಳ್ಳುವುದು ತರ್ಕದಿಂದಲೇ ಹೊರತು ಪ್ರಾಸ, ಛಂದಸ್ಸು, ಚೇಲ, ಚಮಚಾಗಳಿಂದಲ್ಲ. ಆ ಭ್ರಮೆಗಳಿಂದ ಹೊರಬನ್ನಿರಿ.

                  ಉತ್ತರ
        • ಬರತಕುಮಾರ, ಱ್, ೞ್ ಬಗೆಗಿನ ನಿಮ್ಮ ತಿಳಿವಿಗೆ ತಲೆವಾಗುತ್ತೇನೆ. ನನ್ನಲ್ಲಿ ಆ ತಿಳಿವಿಲ್ಲ. ನಾನು ಱ್, ೞ್ ಕಣ್ಮರೆಯಾದಮೇಲೆ ಬಂದ ಪೀಳಿಗೆಗೆ ಸೇರಿದವನು, ನನಗೆ ಯಾರೂ ಱ್, ೞ್ ಮತ್ತು ಳ್, ರ್ ಗಳ ನಡುವಿನ ಉಲಿಯುವಿಕೆಯ ವ್ಯತ್ಯಾಸವನ್ನು ಹೇಳಿಕೊಡಲಿಲ್ಲ. ಅದೇ ನನ್ನ ಅಳಲು. ಜನ ಱ್, ೞ್ ಮತ್ತು ಳ್, ರ್ ಗಳ ನಡುವಿನ ವ್ಯತ್ಯಾಸವನ್ನು ಗಮನಿಸುತ್ತಿರಲಿಲ್ಲವೆಂಬ ಒಂದೇ ಕಾರಣಕ್ಕಾಗಿ ಆ ವ್ಯತ್ಯಾಸವೇ ಇಲ್ಲವೆಂಬಂತೆ ಕನ್ನಡದಲ್ಲಿ ಱ್, ೞ್ ಬೇಕಿಲ್ಲವೆಂಬ ಮೂರ್ಖವಾದ ಅದು ಹೇಗೋ ಬಲ ಪಡೆದು ಈ ಅಕ್ಷರಗಳ ಅಳಿವಿಗೆ ಕಾರಣವಾಯಿತು. ಅದರ ಪರಿಣಾಮ ನಿಜಕ್ಕೂ ಆ ವ್ಯತ್ಯಾಸವೇ ಅಳಿಸಿಹೋಯಿತು. ಇವತ್ತಿನ ಕನ್ನಡದಲ್ಲಿ ನಿಜಕ್ಕೂ ಆ ವ್ಯತ್ಯಾಸವೇ ಕಾಣಬರುತ್ತಿಲ್ಲವಾದ್ದರಿಂದ ನಾನು ಬಳಸಿದ ಳ್, ರ್ ಗಳು ಇವತ್ತಿನ ಕನ್ನಡದ ಪ್ರಕಾರ ಸರಿಯೇ! ಆದರೆ ಮೂಲದಲ್ಲಿ ಇದು ತಪ್ಪು ಎಂಬ ನಿಮ್ಮ ಮಾತನ್ನು ಒಪ್ಪಿದೆ.

          ನೋಡಿದಿರಾ, ಕೆಲವೇ ಭಾಷಾತಜ್ಞರೆನಿಸಿಕೊಂಡವರ ವಿವೇಚನೆಯಿಲ್ಲದ ಹೆಜ್ಜೆ ಹೇಗೆ ನನ್ನ ನನ್ನಂಥವರ ಅಜ್ಞಾನಕ್ಕೆ ಕಾರಣವಾಯಿತು. ಈ ಕಾರಣಕ್ಕಾಗಿ ನನ್ನ ಬಗ್ಗೆ ಮರುಕ ತೋರಿಸುವುದರ ಬದಲು ನೀವು ನನ್ನ “ಅಜ್ಞಾನ”ವನ್ನು ಹೀಗಳೆಯುತ್ತಿದ್ದೀರಿ. ಮತ್ತೊಂದೆಡೆಯಿಂದ ಅದೇ ರೀತಿಯ ವಿವೇಚನೆಯಿಲ್ಲದ ಹೆಜ್ಜೆಯನ್ನು ಮತ್ತೂ ದೊಡ್ಡ ಪ್ರಮಾಣದಲ್ಲಿ ಇಡುತ್ತಿದ್ದೀರಿ. ನನ್ನಂತೆಯೇ ಮುಂದಿನ ಪೀಳಿಗೆಯೂ ನಿಮ್ಮಂಥ ತಿಳಿದವರಿಂದ ತಮ್ಮ ತಪ್ಪು ಪ್ರಯೋಗಕ್ಕಾಗಿ ಮುಜುಗರ ಅನುಭವಿಸಬೇಕೆಂದು ನಿಮ್ಮ ಅಭಿಲಾಶೆಯೇ?

          “ಆದರೆ ಮೇಲಿನ ಒಂದು ಕಮೆಂಟಿನಲ್ಲೇ ಇಶ್ಟೊಂದು ’ತಪ್ಪು’ ಮಾಡಿರುವ ನಿಮಗೆ ನಿಮ್ಮ ಕಮೆಂಟಿನ ಬಗ್ಗೆ ’ಅಸಹ್ಯ’ ಹುಟ್ಟಲಿಲ್ಲವೇಕೆ?” – ಇದರಬಗ್ಗೆ ಇದುವರೆಗೂ ಅಸಹ್ಯವಿರಲಿಲ್ಲ, ಏಕೆಂದರೆ ಇವು ತಪ್ಪೆಂದೇ ಗೊತ್ತಿರಲಿಲ್ಲ (ನನಗೆ ಇದು ಗೊತ್ತಿಲ್ಲದ ತಪ್ಪು ನನ್ನದಲ್ಲ, ವಿನಾಕಾರಣ ಱ್, ೞ್ ಎರಡು ಅಕ್ಷರಗಳನ್ನು ಗುಳುಂ ಮಾಡಿ ನಮ್ಮನ್ನು ವಂಚಿಸಿದ ಅಕ್ಷರಚೋರರದು). ಈಗ ನೀವು ಹೇಳಿದ ಮೇಲೆ ಅದು ತಪ್ಪು ಬಳಕೆಯೆಂದು ತಿಳಿದಿದೆ, ಆದರೇನು ಮಾಡಲಿ, ಅದನ್ನು ಎಲ್ಲರೂ ಉಚ್ಚರಿಸುವುದೇ ಹಾಗೆ ಇವತ್ತು!

          ಉತ್ತರ
          • ಏಪ್ರಿಲ್ 9 2011

            <<"ನಾನು ಬಳಸಿದ ಳ್, ರ್ ಗಳು ಇವತ್ತಿನ ಕನ್ನಡದ ಪ್ರಕಾರ ಸರಿಯೇ! ಆದರೆ ಮೂಲದಲ್ಲಿ ಇದು ತಪ್ಪು ಎಂಬ ನಿಮ್ಮ ಮಾತನ್ನು ಒಪ್ಪಿದೆ"

            ಅದೇ ರೀತಿ ಮಾಪ್ರಾಣ ಬಿಟ್ಟು ಬರೆದರೆ ಕನ್ನಡದಲ್ಲಿ ಇವತ್ತಿಗಲ್ಲ ಎಂದೆಂದಿಗೂ ಸರಿಯೇ!. ನೋಡಿ ಇದುವರೆವಿಗೂ ನೀವು ಱ್/ೞ್ ಬಿಟ್ಟು ಬರೆದುದ್ದನ್ನು ಎಶ್ಟೊ ಮಂದಿ ಓದಿದ್ದಾರೆ ಅವರಿಗೆ ಯಾವ ತೊಡಕು ಆಗಿಲ್ಲ. ಹಾಗೆ ಮಾಪ್ರಾಣ ಬಿಟ್ ಬರೆದರೂ ಯಾವ ತೊಡಕೂ ಇರಲ್ಲ. ನಾನು ಎತ್ತಿ ತೋರಿದ್ದು ನಿಮಗೆ ಮಾಪ್ರಾಣದ ಬಗ್ಗೆ ತಿಳಿಹೇಳಲು(for the sake of argument).

            ಇನ್ನು ’ಸಹ್ಯ/ಅಸಹ್ಯ’ ಇದು ಬೇರೆಯವರ ಉಲಿಕೆಯ(ಮಾಪ್ರಾಣ ಉಲಿಯದಿರುವವರ) ಬಗ್ಗೆ ಇರುವ ನಿಮ್ಮ ’ಅಮಾನವೀಯತೆ’ಯನ್ನ ತೋರಿಸುತ್ತೆ.

            <<"ಈಗ ನೀವು ಹೇಳಿದ ಮೇಲೆ ಅದು ತಪ್ಪು ಬಳಕೆಯೆಂದು ತಿಳಿದಿದೆ, ಆದರೇನು ಮಾಡಲಿ, ಅದನ್ನು ಎಲ್ಲರೂ ಉಚ್ಚರಿಸುವುದೇ ಹಾಗೆ ಇವತ್ತು!"

            ಇದೆಲ್ಲ ಗೊತ್ತಿಲ್ಲದ ಮೇಲೆ ನಿಮಗೆ ಸೊಲ್ಲರಿಮೆ, ನುಡಿಯರಿಮೆ ಬಗ್ಗೆ ಮಾತನಾಡುವುದಕ್ಕೆ ತಕ್ಕವರು ಅಂತ ತಮಗೆ ಅನಿಸುತ್ತಾ?

            ಈಗ ಕನ್ನಡ ನಲ್ಬರಹಕ್ಕೆ/ಸಾಹಿತ್ಯಕ್ಕೆ ಬರೋಣ. ಆಂಡಯ್ಯನ ಕಬ್ಬಿಗರ ಕಾವಂ – ಇದರ ಈ ಸಾಲುಗಳನ್ನ ನೋಡಿ.

            ದೋಸದ ಮಾತು ಪೊರ್ದದೆನೆ ಬಲ್ಲವರಗ್ಗದ ಕನ್ನಡಂಗಳಿಂ
            ಬಾಸಣಮಾಗೆ ಪೇೞ್ದ ನೊಲವಿಂ ನೆಱೆ ಕಬ್ಬಿಗರೊಪ್ಪೆ ನಾಡೆಯುಂ
            ಗೋಸಣೆ ಮೀಱುವನ್ನಮಿದು ರಾಯನ ನಾೞ್ಕಳೊಳಿರ್ಕೆ ನಿಚ್ಚಮುಂ
            ದೇಸೆಯ ಗೊತ್ತು ಜಾಣ್ಣುಡಿಯ ತಾಯ್ವನೆ ನುಣ್ಬುರುಳೇೞ್ಗೆಯೆಂ

            ಇಲ್ಲಿ ಬಳಕೆಯಾಗಿರುವ ’ದೋಸ’, ಗೋಸಣೆ, ಬಾಸಣ, ದೇಸೆ ಈ ಪದಗಳನ್ನ ನೋಡಿ. ಅಂತಹ ದೊಡ್ಡ ಕಬ್ಬಿಗ ಮಾಪ್ರಾಣ ಬಿಟ್ ಯಾಕೆ ಬರೆದ? ಯಾಕಂದರೆ ಅದೇ ಕನ್ನಡತನ, ಅದೇ ಕನ್ನಡಕ್ಕೊಗ್ಗುವ ಸೊಗಡು. ಅದೇ ಮಂದಿಯ ಆಡುನುಡಿ/ಉಲಿಕೆ.

            "ನನಗೆ ಇದು ಗೊತ್ತಿಲ್ಲದ ತಪ್ಪು ನನ್ನದಲ್ಲ, ವಿನಾಕಾರಣ ಱ್, ೞ್ ಎರಡು ಅಕ್ಷರಗಳನ್ನು ಗುಳುಂ ಮಾಡಿ ನಮ್ಮನ್ನು ವಂಚಿಸಿದ ಅಕ್ಷರಚೋರರದು)"

            ಇದೆಲ್ಲ ಗೊತ್ತಿಲ್ಲದ ಮೇಲೆ ನಿಮಗೆ ಸೊಲ್ಲರಿಮೆ, ನುಡಿಯರಿಮೆ ಬಗ್ಗೆ ಮಾತನಾಡುವುದಕ್ಕೆ ತಕ್ಕವರು ಅಂತ ತಮಗೆ ಅನಿಸುತ್ತಾ?

            ಉತ್ತರ
            • “ಇದೆಲ್ಲ ಗೊತ್ತಿಲ್ಲದ ಮೇಲೆ ನಿಮಗೆ ಸೊಲ್ಲರಿಮೆ, ನುಡಿಯರಿಮೆ ಬಗ್ಗೆ ಮಾತನಾಡುವುದಕ್ಕೆ ತಕ್ಕವರು ಅಂತ ತಮಗೆ ಅನಿಸುತ್ತಾ?” – ಇದೆಲ್ಲಾ ಗೊತ್ತಿದ್ದರೆ ತಾನೆ ಏನು? ನಾನೇನು ಬಾಸಾಸಾಸ್ತ್ರದ ಎಮ್ಮೆ ಮಾಡಿದೀನಾ, ವಿದೇಸಿ ಯುನಿವರ್ಸಿಟಿಯಲ್ಲಿ ಲೇಕನ ಮಂಡ್ಸಿದೀನಾ… ಬರೀ ಱ್, ೞ್ ಕಲಿತಮಾತ್ರಕ್ಕೇ ನೀವು ನನ್ನ ನುಡಿಯರಿಮೆ ಒಪ್ಪೋದಾದ್ರೆ ರಾತ್ರೋರಾತ್ರಿ ಪಟ್ಟು ಹಿಡಿದು ಕಲ್ತುಬಿಡ್ಬೋದು. ಆದರೆ ಹಾಗಿಲ್ವೇ! ಅಂತಾ ಗಣೇಶರಿಗೇ ನುಡಿಯರಿಮೆಬಗ್ಗೆ ಮಾತಾಡೋ ಯೋಗ್ತಿ ಇಲ್ಲ ಅಂತಾಯ್ತು, ಇನ್ನು ನನ್ನ ’ತಕ್ಕುಮೆ’ಬಗ್ಗೆ ನಿಮಗೆ ಯಾಕೆ ದುಕ್ಕ. ಸುಮ್ಮನೇ ಈ ತರ ನೆಪಾ ತೆಕ್ಕೊಂಡು ನನ್ನ ಬಾಯಿ ಮುಚ್ಚಿಸಿದರೆ ನಿಮ್ಗೆ ನೆಮ್ದಿ ಅಂತಾದ್ರೂ ನೇರ ಹೇಳಿ ಅತ್ತಗೆ, ಅರ್ತಾದ್ರು ಆಗ್ತದೆ.

              ಉತ್ತರ
      • ವಿಜಯ
        ಏಪ್ರಿಲ್ 9 2011

        ಮಂಜುನಾಥ..
        +1
        ನಿಮ್ಮ ಪ್ರತಿಕ್ರಿಯೆಗೆ ಒಂದು ಲೇಖನದಂತಿದೆ. ಸರಳವಾಗಿ, ಉದ್ವೇಗವಿಲ್ಲದೇ ವಿಷಯವನ್ನು ವಿವರಿಸಿದ್ದಿರಿ.

        <>
        ಈ ಪ್ಯಾರಾಕ್ಕೆ ಮತ್ತೊಂದು +1. 🙂

        ಉತ್ತರ
        • ವಿಜಯ
          ಏಪ್ರಿಲ್ 9 2011

          >>ಇಷ್ಟಕ್ಕೂ ಕನ್ನಡದ ಕಲಿಕೆ ಅಷ್ಟೊಂದು ಕ್ಲಿಷ್ಟವೆಂದೇಕೆ ಎಂದುಕೊಳ್ಳುತ್ತೀರಿ. ಕನ್ನಡ ಅನ್ನ ನೀಡುವ ಭಾಷೆಯಾಗಬೇಕು, ವೈದ್ಯದಿಂದ ರಾಕೆಟ್ಟಿನ ವರೆಗೂ ಸಕಲವನ್ನೂ ಕನ್ನಡದಲ್ಲೇ ಕಲಿಯಬೇಕು ಎನ್ನುವ ನೀವು, ಜುಜುಬಿ ಐವತ್ತು ಅಕ್ಷರಗಳನ್ನು ಕಲಿಯುವುದೇ ದೊಡ್ಡ ಹೊರೆಯೆಂಬ ಭಾವನೆಯನ್ನು ಜನದ ತಲೆಯಲ್ಲಿ ತುಂಬುವಿರಲ್ಲ, ಐವತ್ತು ಅಕ್ಷರಗಳನ್ನು ಕಲಿಯಲಾರದ ತಲೆ, Trigonometry, calculus ಗಳಂತಹ ಕ್ಲಿಷ್ಟ ವಿಷಯಗಳನ್ನು, ಅದೂ ಕನ್ನಡದಲ್ಲಿ conceptualise ಮಾಡಿ ಕಲಿಯುತ್ತದೆಯೇ? ಅಥವ ಅಂಥ ಪ್ರಚಂಡ ಬುದ್ಧಿಯಾದರೆ ಐವತ್ತು ಅಕ್ಷರಗಳನ್ನು ಕಲಿಯುವುದು ಕಷ್ಟವೇ? <<
          ಈ ಪ್ಯಾರಾಕ್ಕೆ ಮತ್ತೊಂದು +1.

          ಉತ್ತರ
      • Shubhashree
        ಏಪ್ರಿಲ್ 9 2011

        ಮಂಜುನಾಥ್ ಸರ್,
        ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ನಿಮ್ಮ ಬರಹದ ಬಗ್ಗೆ ನನ್ನ ನಿಲುವನ್ನು ತಿಳಿಸಬಯಸುತ್ತೇನೆ.
        ಕನ್ನಡ ನೆಲ: ಕರ್ನಾಟಕವೆಂದರೆ ಇಂದಿನ ದಿವಸ ಇಂಥದ್ದೇ ಎಂದು ಹೇಳುವುದು ಸುಲಭವಾಗಿದೆ. ಇಂದು ರಾಜಕೀಯವಾಗಿ ಕರ್ನಾಟಕವೆಂದು ಯಾವುದನ್ನು ಕರೆಯಲಾಗುತ್ತಿದೆಯೋ ಅದನ್ನೇ ನಾನು ಕರ್ನಾಟಕವೆಂದು ಒಪ್ಪುತ್ತೇನೆ. ಆದರೆ ಕನ್ನಡ ನೆಲವೆನ್ನುವುದು ಸಮಾಜದಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿರುವ ಪ್ರದೇಶ ಅನ್ನಬಹುದು.
        ಕನ್ನಡ : ಇನ್ನು ಕನ್ನಡವೆಂದರೆ ಕರ್ನಾಟಕದ ಬೇರೆ ಬೇರೆ ವಿಧಗಳ ಶೈಲಿಗಳನ್ನೂ ಒಳಗೊಂಡಿರುವ ಕನ್ನಡವೇ ಆಗಿದೆ. ಅಲ್ಲಿ ತಮಿಳಿಂದ ಪ್ರಭಾವಿತವಾದ, ಮರಾಟಿಯಿಂದ ಪ್ರಭಾವಿತವಾದವುಗಳಷ್ಟೇ ಅಲ್ಲದೆ ಕರ್ನಾಟಕದ ಮೂಲೆ ಮೂಲೆಯ ಕನ್ನಡಿಗರೆಲ್ಲಾ ಆಡುವ ನುಡಿಯನ್ನು ಕನ್ನಡವೆಂದೇ ಬಗೆಯಬಹುದಾಗಿದೆ.
        ಕನ್ನಡಿಗ : ಕನ್ನಡವನ್ನು ಬಳಸುವವರೆಲ್ಲರನ್ನೂ ಕನ್ನಡ ಬಲ್ಲವರೆಂದು ಹೇಳಬಹುದಾಗಿದೆ ಮತ್ತು ತಾಯ್ನುಡಿಯನ್ನು ಕನ್ನಡವಾಗಿ ಹೊಂದಿದವರು ಕನ್ನಡಿಗರೂ (ಕನ್ನಡ ಜನಾಂಗ), ಮನೆಮಾತು ಬೇರಾಗಿದ್ದರೂ ಕನ್ನಡವನ್ನು ಓದಲು, ಬರೆಯಲು, ಬಳಸಲು ಬಂದು ಕನ್ನಡದ ಒಲವಿರುವರೆಲ್ಲರನ್ನೂ ಕನ್ನಡಿಗರು ಎನ್ನಬಹುದಾಗಿದೆ. ಕನ್ನಡಿಗನೊಬ್ಬ ಚೆನ್ನಾಗಿ ಇಂಗ್ಲೀಷ್ ಕಲಿತಾಕ್ಷಣ ಹೇಗೆ ಇಂಗ್ಲೀಶಿನವನಾಗನೋ ಹಾಗೆಯೇ ಜರ್ಮನಿಯ ಮೂಲದವ ಇಲ್ಲಿಬಂದು ಕನ್ನಡ ಕಲಿತಾಕ್ಷಣ ಕನ್ನಡಿಗ ಆಗುವುದಿಲ್ಲ. ಇನ್ನು ಹುಟ್ಟಿನಿಂದ ಕನ್ನಡಿಗರಾಗಿದ್ದೂ ಕನ್ನಡ ಬಾರದವರನ್ನು ಏನೆನ್ನಬಹುದು ಎಂದರೆ “ಅಯೋಗ್ಯ ಕನ್ನಡಿಗರು” ಅನ್ನಬಹುದೇನೋ! ಹ ಹ್ಹ ಹ್ಹಾ… ರಾ ಗಣೇಶ್ ಮತ್ತು ನೀಲಾಂಜನರನ್ನು ಮೂಲಕನ್ನಡಿಗರಲ್ಲ, ಆ ಕಾರಣಕ್ಕೇ ಅವರಿಗೆ ಕನ್ನಡದ ಬಗ್ಗೆ ಮಾತಾಡಲು ಅರ್ಹತೆಯಿಲ್ಲ ಎಂದು ಯಾರಾದರೂ ಹೇಳಿದರೆ ಅದು ಕನ್ನಡಿಗರ ಒಗ್ಗಟ್ಟು ಮುರಿಯುವಂತಹುದ್ದಾಗಿದೆ. ಇದಕ್ಕೆ ನನ್ನ ಸಹಮತವಿಲ್ಲ. ಇನ್ನು ನಾನಾಗಲೀ ನಾವಾಗಲೀ ಕನ್ನಡಿಗರೆಂದು ಯಾರನ್ನು ಬಿಂಬಿಸಹೊರಟಿದ್ದೇವೆ ಎನ್ನುವ ಆರೋಪಕ್ಕೆ ಮೇಲೆ ಬರೆದಿರೋ ವಿವರಣೆ ಬಿಟ್ಟು ಮತ್ತೊಂದು ನನ್ನಲ್ಲಿಲ್ಲ.
        ನಾನು ಅರ್ಥ ಮಾಡಿಕೊಂಡಂತೆ ತಮಿಳರ ಬಗ್ಗೆ ಅಸಹನೆ ತೋರಿಸುತ್ತಿರುವವರ ಹಿನ್ನೆಲೆಯಲ್ಲಿ ತಲೆಮಾರುಗಳ ಹಿಂದೆ ತಾವು ತಮಿಳುನಾಡಿನಲ್ಲಿ ಅನುಭವಿಸಿದ ತೊಂದರೆ ಮತ್ತು ಅಲ್ಲಿಂದ ಗುಳೆ ಬರಲು ಕಾರಣವಾದ ಘಟನೆಗಳು, ಅವರುಗಳ ಇಂದಿನ ನಿಲುವಿನ ಮೇಲೂ ಪ್ರಭಾವ ಬೀರಿರುತ್ತದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೊಂದು ಸಣ್ಣ ಉದಾಹರಣೆ ಕೊಡುತ್ತೇನೆ. ಕೆಲವರ್ಷಗಳ ಹಿಂದೆ ಬನವಾಸಿ ಬಳಗದವರು ಆಲೂರು ವೆಂಕಟರಾಯರ ಪುಣ್ಯದಿನ ಆಚರಿಸಿದ್ದರು. ಅಂದು ಅಲ್ಲಿಗೆ ಮುಖ್ಯಅತಿಥಿಯಾಗಿ ಬಂದಿದ್ದ ಡಾ. ರಾ ಗಣೇಶ್ ಅವರು ತಮ್ಮ ಭಾಷಣದಲ್ಲಿ “ಕನ್ನಡ ಇನ್ನೈವತ್ತು ವರ್ಷಗಳಲ್ಲಿ ಸಾಯುತ್ತದೆ” ಎಂದು ಹೇಳಿಬಿಟ್ಟರು. ಸಭೆಯಲ್ಲಿದ್ದ ನನಗೆ ಸಕ್ಕತ್ ಶಾಕ್! ಇಂತಹ ಹೇಳಿಕೆಗಳನ್ನು ನೀಡುವುದನ್ನು ಕಂಡಾಗ ತಕ್ಷಣ ಅವರ ತಮಿಳು ಹಿನ್ನೆಲೆ ನನ್ನ ಮನದಲ್ಲಿ ಸುಳಿದಾಡಿದ್ದು ಸತ್ಯ. ಬಹುಷಃ ಇದೇ ಕಾರಣಕ್ಕಾಗೇ ಈ ಚರ್ಚೆಯಲ್ಲಿ ನನಗೆ ಗಣೇಶರ ಕನ್ನಡತನದ ಬಗ್ಗೆ ಎದ್ದ ಪ್ರಶ್ನೆ ಅಷ್ಟೊಂದು ಅಪಮಾನಕಾರಿ ಅನ್ನಿಸಲಿಲ್ಲ. ಅಂದಹಾಗೇ ನೀವು ಶಂಕರಬಟ್ಟರ ಬುಟ್ಟಿಯಲ್ಲಿ ಹಾಕಿದರೆ ಹೇಗೆ ಅಂದಿದ್ದರ ಅರ್ಥ ತಿಳಿಯಲಿಲ್ಲ ನನಗೆ.
        ಈಗಾಗಲೇ ನುಡಿಯಲ್ಲಿ ಹಾಸುಹೊಕ್ಕಾಗಿ ಬಳಕೆಗೆ ಬಂದಿರುವ ಪದಗಳನ್ನು ಅದು ಬಳಕೆಯಲ್ಲಿರುವಂತೆಯೇ ಒಪ್ಪಿಕೊಳ್ಳಬೇಕು ಎಂಬುದಕ್ಕೆ ನನ್ನ ಸಹಮತವಿದೆ. ನೀವು ಒಪ್ಪದಿರುವ ಕೆಲವಿಷಯಗಳ ಬಗ್ಗೆ ವಿವರಿಸಲು ಬಯಸುತ್ತೇನೆ. ಕನ್ನಡದ ಜಾಯಮಾನಕ್ಕೆ ಒಗ್ಗಿಸುವುದನ್ನು ಒಪ್ಪಲ್ಲ ಅಂದಿರಿ. ನಿದ್ರೆ ಅನ್ನುವುದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿದರೆ ನಿದ್ದೆ ಆಗುತ್ತೆ. ಇದನ್ನು ಒಪ್ತೀರಾ ತಾನೇ? ಬಸ್ ಅನ್ನುವುದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿದರೆ ಬಸ್ಸು ಆಗುತ್ತದೆ. ಬ್ರಹ್ಮ ಬ್ರಮ್ಮ/ ಬ್ರಮ್ಹ ಆಗುತ್ತೆ. ಬ್ರಾಹ್ಮಣ ಎನ್ನುವುದನ್ನು ಯಾವ ಕನ್ನಡಿಗನಿಂದಲೇ ಓದಿಸಿ ನೋಡಿ. ಬ್ರಾಮ್ಹಣ ಎಂದೇ ಓದುತ್ತಾರೆ. ಇದು ನನ್ನ ಗಮನಕ್ಕೆ ಬಂದಿರುವುದು. ಈಗ ಹೇಳಿ, ಬ್ರಹ್ಮ ಅನ್ನುವ ಬದಲು ಬ್ರಮ್ಹ ಎಂದು ಬರೆಯುವುದು ತಪ್ಪಾ?
        ಶುದ್ಧೀಕರಣ: ಕನ್ನಡದ ಪದಗಳನ್ನು ಹುಟ್ಟುಹಾಕುವುದೇ ಸಂಸ್ಕೃತ ಪದಗಳ ಬಗ್ಗೆ ದ್ವೇಷ ಎನ್ನುವುದಾದರೆ ಏನೆಂದು ಹೇಳುವುದು? ಕನ್ನಡದ ಪದಗಳನ್ನು ಕನ್ನಡಿಗರಲ್ಲದೇ ಮತ್ತೊಬ್ಬರಂತೂ ಹುಟ್ಟುಹಾಕುವುದಿಲ್ಲವಲ್ಲಾ? ಹಾಗಾಗಿ ನಾವು ಹೊಸಪದಗಳನ್ನು ಕನ್ನಡದಲ್ಲಿ ಕಟ್ಟಿದರೆ ಅದರಿಂದ ತೊಡಕೇನು? ವಿದ್ಯುನ್ಮಾನ ಅಂಚೆಗೆ ಮಿಂಚೆಯೆಂಬ ಪದ ಕಟ್ಟಿ ಕೊಟ್ಟದ್ದು ಬನವಾಸಿ ಬಳಗದ ಕಿರಣಣ್ಣ ಅವರು. ಹಾಗೆಯೇ ಗ್ರೀಸ್ ಎಂಬುದಕ್ಕೆ ಕೀಲ್ಬೆಣ್ಣೆಯೆಂದೂ, ನಿಮ್ನ ದರ್ಪಣ, ಪೀನ ದರ್ಪಣಗಳಿಗೆ ಉಬ್ಬುಗನ್ನಡಿ, ತಗ್ಗುಗನ್ನಡಿ ಎಂಬ ಪದಗಳನ್ನು ಕಟ್ಟಿಕೊಟ್ಟವರು ಹೇಗೆ ಸಂಸ್ಕೃತ ದ್ವೇಷಿಗಳಾಗಿ ಬಿಡುತ್ತಾರೆ ಎಂಬುದಷ್ಟೇ ನನ್ನ ಕಳಕಳಿ. ನನ್ನ ಅರಿವಿನಂತೆ ಕನ್ನಡದ್ದೇ ಆಗಿರುವ ಸಂಸ್ಕೃತ ಮೂಲದ ಸಾವಿರಾರು ಪದಗಳನ್ನು ಬದಲಿಸುವ ಚಳವಳಿಯನ್ನು ಯಾರೂ ಮಾಡುತ್ತಿಲ್ಲ. ಇಲ್ಲಿ ಕಮೆಂಟು ಬರೆದ ಕೆಲ ಗೆಳೆಯರು ಉಂಕಿಸು, ಬೊಟ್ಟು ಮುಂತಾದ ಕನ್ನಡದ್ದೇ ಪದಗಳನ್ನು ಬಳಸುತ್ತಿರುವುದು ನನಗೆ ತಪ್ಪೆಂದು ಅನಿಸುವುದಿಲ್ಲ. ಕನ್ನಡದ್ದೇ ಪದಗಳನ್ನು ಕಟ್ಟುವ ಕೆಲಸವದು ಎನಿಸುತ್ತದೆ. ನಿಮಗೆ ಅದು ಕಷ್ಟದ್ದೆನಿಸಿದರೆ ಬಿಡಿ, ಬಳಸಬೇಡಿ. ಮಿಂಚೆ ಎಂಬ ಪದವೂ ಹಾಗೇ. ಮಿಂಚೆ ಮತ್ತು ಮಿಂಚಂಚೆ ಎಂಬ ಎರಡು ಪದಗಳನ್ನು ಒಟ್ಟೊಟ್ಟಿಗೆ ಬಳಕೆಗೆ ತರಲಾಯಿತು. ಆದರೂ ಜನ ಒಪ್ಪಿದ್ದರಿಂದ ಮಿಂಚೆ ಬಳಕೆಗೆ ಬಂತು. ಹೀಗಾಗಿದ್ದು ಸಂಸ್ಕೃತ ದ್ವೇಷದಿಂದ ಕನ್ನಡ ಮೂಲದ್ದನ್ನು ಹುಟ್ಟಿಸಿ ಜನರ ಮೇಲೆ ಹೇರಿದ ಅಭಾಸದಿಂದಲ್ಲವಷ್ಟೇ? ನಿಜವಾಗಿಯೂ ಯಾರಾದರೂ ಸಂಸ್ಕೃತವನ್ನೋ ಮತ್ತೊಂದು ನುಡಿಯನ್ನೋ ದ್ವೇಷಿಸಿ, ಆ ಕಾರಣಕ್ಕಾಗಿ ಜನರ ನುಡಿಯಲ್ಲಿ ಬಳಕೆಯಲ್ಲಿರುವ ಪದಗಳನ್ನು ಬದಲಿಸುತ್ತೇನೆ ಎನ್ನುವುದೇ ಪ್ರಜಾಪ್ರಭುತ್ವದಲ್ಲಿ ಹಾಸ್ಯಾಸ್ಪದ ವಿಷಯ. ನೀವನ್ನುವಂತೆ ಮೂರ್ಖತನದ್ದು. ಆದರೆ ಕನ್ನಡಪದಗಳನ್ನು ಕಟ್ಟುವ ಬಗ್ಗೆ ಹಾಗೆಂದರೆ ಅದು ಸಲ್ಲದ ಅಸಹನೆ ಎನಿಸುತ್ತದೆ.
        ಕನ್ನಡಕ್ಕೆ ಅನೇಕ ರೂಪ ಹರವುಗಳಿವೆ ಎನ್ನುವುದು ಕನ್ನಡ ಆಡುವುದರಲ್ಲಿ ತಾನೇ? ಸಂಸ್ಕೃತ ಓದಬೇಕಾದವರು ಮುಂದೆ ಮಹಾಪ್ರಾಣ ಅಕ್ಷರಗಳನ್ನು ಬಳಸುವುದನ್ನು ಕಲಿಯುತ್ತಾರೆ ಎನ್ನುವುದಕ್ಕೆ ಭರತಣ್ಣನಂತಹ, ಮಾಯ್ಸಣ್ಣನಂತಹ ಉತ್ಸಾಹಿಗಳು ಕನ್ನಡದ್ದೇ ಮೂಲದ ಪದ ಬಳಸುವುದರಲ್ಲಿ ಹೆಮ್ಮೆ ಹೊಂದಿದ್ದು ಅವನ್ನು ಬಳಸುತ್ತಿದ್ದರೆ ನೀವು ಸರಳವಾದ ಸಂಸ್ಕ್ರುತ ಪದಕ್ಕೂ ಕನ್ನಡ ಮೂಲದ ಪದ ಬಳಸುವುದು ಉಗ್ರವಾದ ಎಂದರೇನು ಮಾಡೋದು? ಹೀಗೆ ಪದ ಕಟ್ಟುವ, ಬಳಸುವ ಸ್ವಾತಂತ್ರ್ಯವೇ ಇರಬಾರದೇ? ನಿಜಕ್ಕೂ ಅವರುಗಳು ಬಳಸಿದ ಎಷ್ಟೋ ಪದಗಳು ನನಗೆ ಅರ್ಥವಾಗುತ್ತಿಲ್ಲ. ಆದರೆ ಹಾಗೆ ಅವರು ಪದ ಬಳಸುವುದನ್ನು ತಪ್ಪೆನ್ನಲಾಗದು ಎನ್ನುವುದು ನನ್ನ ನಿಲುವು.
        ಮಾನಧನನಾದ ಸುಯೋಧನ ಎನ್ನುವುದನ್ನು, ಮಾನದನನಾದ ಸುಯೋದನ ಎಂದು ಕನ್ನಡಿಗರು ಉಲಿಯುವುದೇ ನಿಮಗೆ ಅಸಹ್ಯವೆನಿಸದಿದ್ದಾಗ ಹಾಗೆ ಬರೆಯುವುದು ಅಸಹ್ಯವೆಂದರೆ ಏನೆಂದು ಅರ್ಥ ಮಾಡಿಕೊಳ್ಳುವುದು ತಿಳಿಯುತ್ತಿಲ್ಲ. ಬಹುಷಃ ಮಹಾಪ್ರಾಣಗಳಿಲ್ಲದ ಕನ್ನಡವನ್ನು ಕೇಳಲು ಓಕೆ, ನೋಡಲು ಆಗಲ್ಲಾ ಎಂದೇ? ನೀವು ತೋರಿಸಿಕೊಟ್ಟಿರುವ ಬರಹದಲ್ಲಿನ ತಪ್ಪುಗಳು ಏಕಾಗುತ್ತೆವೆ ಎಂದರೆ ಎಲ್ಲಿ ಮಹಾಪ್ರಾಣ ಬರೆಯಬೇಕೆಂದು ಗೊತ್ತಿಲ್ಲದೇ ಇದ್ದಾಗ. ಯಾಕೆ ಗೊತ್ತಾಗಲ್ಲಾ ಎಂದರೆ ಉಲಿಕೆಯಲ್ಲಿಲ್ಲದಿದ್ದರು ಬರಹದಲ್ಲಿ ಇರಬೇಕೆಂಬ ಕಟ್ಟುಪಾಡಿದ್ದಾಗ. ಹಾಗಾಗಿ ಉಲಿದಂತೆ ಬರೆಯುವುದು ಸಹ್ಯವಾಗುವುದಾದರೆ ಸುಯೋದನನೂ ಸಹ್ಯನೇ ಆಗುತ್ತಾನೆ ಎನ್ನುವುದು ನನ್ನ ಅನಿಸಿಕೆ.
        ಇಷ್ಟಕ್ಕೂ ಒಂದು ಪದವನ್ನು ಹೀಗೇ ಉಲಿಯಬೇಕು ಎನ್ನುವ ಕಟ್ಟುಪಾಡು ಇರುವುದು, ಇರಬೇಕಾದ್ದು ಸಹಜ ಎಂಬುದು ಸರಿಯೇ. ಆದರೆ ಹೆಚ್ಚಿನ ಸಂದರ್ಭದಲ್ಲಿ ಪದಗಳ ಕಲಿಕೆ ಆಗುವುದು ಮಾತಿನಲ್ಲಿ ಬಳಸುವುದರಿಂದ. ಮಾತಿನಲ್ಲಿ ಮಹಾಪ್ರಾಣ ಮಾತಿನಲ್ಲಿ ಇಲ್ಲದಿದ್ದಾಗ ಬರಹದಲ್ಲೂ ಇರದಿದ್ದರೆ ಅದು ಸರಿಯಾದದ್ದೇ ಅನ್ನುವುದು ನನ್ನ ನಿಲುವು. (ಉದಾಹರಣೆಗೆ ರ, ಳ ಬಗ್ಗೆ ನೀವು ಭರತಣ್ಣ ನಡೆಸಿದ ಸಂವಾದ)
        ಕನ್ನಡದಲ್ಲಿಯೇ ವೈದ್ಯದಿಂದ ರಾಕೆಟ್ಟಿನವರೆಗೂ ಕಲಿಸಬೇಕೆನ್ನುವವರು ಕನ್ನಡ ಲಿಪಿಯನ್ನು ಕಲಿಯುವಲ್ಲಿ ಮಕ್ಕಳಿಗೆ ಗೊಂದಲ ಬೇಡವೆಂಬ ಕಾರಣಕ್ಕಾಗಿಯೇ, ಕಲಿಕೆಯಲ್ಲಿ ಉಲಿದು ತೋರಿಸಲಾಗದೆ ದೊಡ್ಡ ಪ – ಚಿಕ್ಕ ಪ, ದೊಡ್ಡ ಬ – ಚಿಕ್ಕ ಬ, ಶಂಕು ಶ – ಪಟ್ಟೆ ಷ ಎಂಬ ತಪ್ಪಾದ ಪಾಠ ಬೇಡವೆಂದೆ ಶಂಕರಬಟ್ಟರ ಈ ನಿಲುವನ್ನು ಒಪ್ಪಿರುವುದು. ಗೊಂದಲವಿಲ್ಲದೆ ಮೊದಲ ಪಾಠ ಕಲಿತ ಮಕ್ಕಳು ಮುಂದೆ ಸಲೀಸಾಗಿ ತಾವು ಮಹಾಪ್ರಾಣ ಉಲಿಯುವಾಗ ಎರಡರ ನಡುವಿನ ವ್ಯತ್ಯಾಸವನ್ನು ಉಲಿಯಲ್ಲೂ ಬರಹದಲ್ಲೂ ತೋರಿಸಬಲ್ಲವರಾಗುತ್ತಾರೆ. ಇನ್ನು ಸಂಸ್ಕೃತ ಕಲಿಯುವ ಮಕ್ಕಳು ದೇವನಾಗರಿಯಲ್ಲೇ ಕಲಿತರೆ ಅದವರ ಸೌಕರ್ಯ, ಆದರೆ ಕನ್ನಡದ ಲಿಪಿಯಲ್ಲಿ ಬರೆಯುವವರಿಗೆ, ಓದುವವರಿಗೆ ಈ ಪದ್ಧತಿ.

        ಉತ್ತರ
  53. Suresh
    ಏಪ್ರಿಲ್ 2 2011

    shubhashree akkaa,

    neevu tumbaa logical aagi bareyutteera. nimma maatina logical points ge sariyaagi uttarisidare saaku. nimma maatugaLalli naavellaa oTTaagi saagabEkeMba kaLakali iddare, innu nimma virodha maaduva kelavara maatalli – hEge nimmannu khandisuvudu, hege neevu tappendu torisuvudu, hege naane sari endu saahisuvudu – emba dani ide. adakke hEliddu – do youy really need to argue with these guys? I appreciate you for your patience, attitude and for the conviction you have to convince.

    ಉತ್ತರ
    • Ravi
      ಏಪ್ರಿಲ್ 2 2011

      ಅಣ್ಣ ಸುರೇಶ, ದಯವಿಟ್ಟು ಅಪಾರ್ಥ ಮಾಡಿಕೊಳ್ಳಬಾರದು. ಇಲ್ಲಿ ಪರ ಹಾಗೂ ವಿರೋಧದ ಯಾರಿಗೂ ತಮ್ಮ ವಾದವೇ ಗೆಲ್ಲಬೇಕು ಎಂದು ಇದ್ದಂತೆ ನನಗೆ ಕಾಣುತ್ತಿಲ್ಲ. ಅಷ್ಟಕ್ಕೂ, ಈ ಚರ್ಚೆಯನ್ನು ಕರ್ನಾಟಕ ಸರಕಾರವಾಗಲಿ, ಇನ್ನಾರೆ ಆಗಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಕೆಲಸಕ್ಕೆ ಉಪಯೋಗಿಸಲಿಕ್ಕಿಲ್ಲ. ನನಗೆ ಕಂಡಿದ್ದು ಇಲ್ಲಿ ಹೇರಳ ವಿಚಾರ ವಿನಿಮಯ ಮಾತ್ರ (ಕೆಲವು ಅನಗತ್ಯ ಟೀಕೆ ಟಿಪ್ಪಣಿಗಳ ಬಿಟ್ಟು!). ನಾನೂ ಪಾಮರ ಈ ವಿಷಯದಲ್ಲಿ. ಅಷ್ಟು ಬೇಗ ಅರ್ಥ ಆಗಲ್ಲ. ಅಲ್ಲದೆ ನನ್ನ ನಾಡು-ನುಡಿಯ ವಿಷಯ. ಯಾವುದೋ ಹರಕೆ-ಹರಾಜಿನ ಚರ್ಚೆಯಲ್ಲ. ಅದಕ್ಕೆ ನಾಲ್ಕು ಪ್ರಶ್ನೆ ಕೇಳಿದೆ. ನಿಮ್ಮ ವಾದ ಒಪ್ಪಿಲ್ಲವೆಂದರೆ, ಒಪ್ಪಲು ಇನ್ನಷ್ಟು ಸಮಯ ಬೇಕಾಗಬಹುದು ಎಂದೋ, ಬದಲಾವಣೆ ಇಷ್ಟಪಡದ ಜನರೆಂದೋ, ವಾದಿಸಿ ಈ ಚರ್ಚೆ ಮುಗಿಯದೆಂದು ಸುಮ್ಮನಾದವರೆಂದೋ ಅಥವಾ ವಾದಿಸಲು ಇನ್ನಷ್ಟು ಪ್ರಶ್ನೆಗಳಿದ್ದು ಅದನ್ನು ಕೇಳಿ ಇನ್ನಷ್ಟು ಜನರ ಹೊತ್ತುಪೋಲು ಮಾಡುವ ಬಯಕೆಯಿಲ್ಲದೆ ಸುಮ್ಮನಿದ್ದವರೆಂದೋ ತಿಳಿಯಬೇಕು. ಅದು ಬಿಟ್ಟು ವೈಯುಕ್ತಿಕವೇನಿಲ್ಲ ಇಲ್ಲಿ. ಗೆದ್ದವರಿಗೆ ಪಾರಿತೋಷಕವೂ ಇಲ್ಲ. ಅದಕ್ಕೆ ಹೇಳುವುದಲ್ಲವೇ ಎಡಪಂಥೀಯರು (ಸದಾ ಬದಲಾವಣೆ ಬಯಸುವವರು), ಬಲಪಂಥೀಯರು (ಬದಲಾವಣೆ ಬಯಸದವರು) (ಕಮ್ಯೂನಿಷ್ಟ್ ಮತ್ತು ಬಿಜೆಪಿ ಅಲ್ಲ :P). ಸಮಾಜದಲ್ಲಿ ಎರಡೂ ಕಡೆಯವರು ಹೇರಳವಾಗಿದ್ದಾರೆ. ಪರಸ್ಪರ ಗೌರವವಿರಲಿ.

      ಶುಭಶ್ರೀ, ಭರತ, ಪ್ರಿಯಾಂಕ್, ಮಾಯ್ಸ,
      ತಾಳ್ಮೆಯಿಂದ ನನ್ನ ಪ್ರಶ್ನೆಗಳಿಗೆ ಉತ್ತರಿಸಿದುದಕ್ಕೆ ಅನಂತ ಧನ್ಯವಾದಗಳು. ನಿಮ್ಮ ವಾದದಿಂದ ತುಂಬಾ ಹೊಸ ವಿಷಯಗಳು ತಿಳಿದಿವೆ. ಒಪ್ಪಿದೆ ಕೂಡ. ಆದರೂ ಶುಬಶ್ರೀ, ಬರತ ಎನ್ನಲು ಮನಸಾಗುತ್ತಿಲ್ಲ, 🙂 ಇಲ್ಲ, ಹಾಗೆ ಕರೆಯಲು ನಾಲಗೆ ಹೊರಳುತ್ತಿಲ್ಲ. ನಿಮ್ಮ ಹೊತ್ತುಪೋಲು ಮಾಡಿದ್ದಿಕ್ಕೆ ಕ್ಷಮೆಯಿರಲಿ.
      ಪ್ರೀತಿಯಿಂದ, ರವಿ.

      ಉತ್ತರ
      • ಏಪ್ರಿಲ್ 2 2011

        ರವಿ,
        “.. ಆದರೂ ಶುಬಶ್ರೀ, ಬರತ ಎನ್ನಲು ಮನಸಾಗುತ್ತಿಲ್ಲ..”
        ಒಳ್ಳೇದು. ಬರಹದಲ್ಲಿ ಮಾಪ್ರಾಣ ಬಿಡುಬೇಕಾದಾಗ ನಿಮಗಾದ ಮುಜುಗರ ನನಗೆ ತಿಳಿಯುತ್ತದೆ. ನೀವು ಬಿಡಲೇಬೇಕೆಂದು ಯಾರು ಒತ್ತಡೆ ಹೇರುತ್ತಿಲ್ಲ.. ಆದರೆ ಬೇರೆಯವರು ಮಾಪ್ರಾಣ ಬಿಟ್ಟ್ ಬರೆದರೆ ಅದನ್ನ ಕೀಳು ಎಂದು ನೀವು ತಿಳಿಯದಿದ್ದರೆ ಸಾಕು. ಅಶ್ಟೆ

        ಉತ್ತರ
  54. Ravi
    ಏಪ್ರಿಲ್ 5 2011

    ನಿಲುಮೆ.
    ಈ ಚರ್ಚೆ ಭಾಷಾ ವಿಷಯಕ್ಕಷ್ಟೇ ಸೀಮಿತವಾಗಿರಲಿ. ದಯವಿಟ್ಟು ವೈಯುಕ್ತಿಕ ಟೀಕೆಗಳನ್ನು ಅಳಿಸಿ, ಮುಂದೆ ಪ್ರಕಟಿಸಬೇಡಿ. ಓದಲು ವಾಕರಿಕೆ ಬರುತ್ತಿದೆ.
    ಧನ್ಯವಾದ.

    ಉತ್ತರ
    • ಏಪ್ರಿಲ್ 5 2011

      ರವಿ
      ಜಾತಿಯ ಬಗ್ಗೆ,ಮನೆ ಮಾತಿನ ಬಗ್ಗೆ ಬರೆದಿದ್ದ ಪ್ರತಿಕ್ರಿಯೆಗಳನ್ನ ಅಳಿಸಿ ಹಾಕಲಾಗಿದೆ.ನಿಲುಮೆಯನ್ನ ಆರೋಗ್ಯಕರ ಚರ್ಚಾ ತಾಣವಾಗಿ ಮಾಡುವುದೇ ನಮ್ಮ ಉದ್ದೇಶ.ಪ್ರತಿಕ್ರಿಯೆಗಳನ್ನ ಆದಷ್ಟು ನಾವು ನೋಡುತ್ತಲಿರುತ್ತೇವೆ.ಒಮ್ಮೊಮ್ಮೆ ಕಣ್ತಪ್ಪಬಹುದು.ಓದುಗರು ಈ ಬಗ್ಗೆ ತಿಳಿಸುವುದನ್ನ ಸ್ವಾಗತಿಸುತ್ತೇವೆ

      ಉತ್ತರ
      • ನಿಲುಮೆ, ಕಾಮೆಂಟುಗಳನ್ನು ಅಳಿಸುವಲ್ಲಿ ನನ್ನದೊಂದು ತಕರಾರಿದೆ. ಮೊದಲಿಗೆ ಇದೊಂದು ವಿವಾದಾತ್ಮಕ ವಿಚಾರ; ಭಾವನೆಗಳ ಮೇಲಾಟ ಸಹಜ. ಹಾಗೇ ಸುಳ್ಳು ದೋಷಾರೋಪಗಳು ಸಹ. ನೀವು ಒಂದು ಕಾಮೆಂಟನ್ನು ಅಳಿಸಿಹಾಕಿದಮಾತ್ರಕ್ಕೆ ಅದು ಇತರರಲ್ಲಿ ಸೃಷ್ಟಿಸಿದ ಕೋಪತಾಪಗಳು ನಿಲ್ಲುವುದಿಲ್ಲ, ಹಾಗೆಯೇ ಅವರ ಪ್ರತಿಕ್ರಿಯೆಗಳೂ ಇದರಿಂದ ಪ್ರೇರಿತವಾಗಿರುತ್ತವೆ. ಈಗ ನೀವು ಮೊದಲ ಕಾಮೆಂಟನ್ನು ಅಳಿಸಿದರೆ, ಇತರರ ಮುಂದಿನ ಪ್ರತಿಕ್ರಿಯೆಗಳು ಕೇವಲ ಹುಚ್ಚಾಟದಂತೆ ಕಾಣುತ್ತವೆ. ಕೆಲವೊಮ್ಮೆ ಅವೇ ಮೊದಲ ಹೊಡೆತದಂತೆ ಕಾಣುತ್ತವೆ ಕೂಡ. ಅಲ್ಲದೆ ಸುಳ್ಳು ಆರೋಪಗಳನ್ನು ಮಾಡುವವರಿಗೆ ಅದನ್ನು ಅಳಿಸಿಹಾಕಿದ ಮೇಲೆ “ನಾನು ಹಾಗೆ ಹೇಳಲೇ ಇಲ್ಲ” ಎನ್ನಲು ಸುಲಭ. “ಇಲ್ಲ, ನೀವು ಹಾಗೆ ಹೇಳಿದಿರಿ ಎನ್ನಲು ಇತರರ ಬಳಿ ಯಾವ ಸಾಕ್ಷಿಯೂ ಇಲ್ಲ” ಚರ್ಚೆ ವಸ್ತುನಿಷ್ಟವಾಗಿರಬೇಕೆನ್ನುವುದು ಆದರ್ಶ, ಆದರೆ ನಿಜಕ್ಕೂ ಹಾಗಿರುವುದಿಲ್ಲವಾದ್ದರಿಂದ ನಿಲುಮೆ ಮಧ್ಯೆ ಪ್ರವೇಶಿಸಿ ಯಾವುದೋ ಒಂದು ಕಾಮೆಂಟನ್ನು ಅಳಿಸಿಹಾಕುವುದು ತೀರ ಅಸಹಜವಾಗಿರುತ್ತದೆ. ಬದಲಿಗೆ ನನ್ನ ಸಲಹೆಯೇನೆಂದರೆ, ಅಂಥ ಕಾಮೆಂಟುಗಳನ್ನು ಪ್ರಕಟಿಸಲೇ ಬೇಡಿ. ಪ್ರಕಟಿಸಿದನಂತರ, ಅದು ಓದುಗರ ಮನಸಿನಲ್ಲಿ ನಾಟಿದ ನಂತರ, ಆ ಕಾಮೆಂಟುಗಳನ್ನು ಹಾಗೆಯೇ ಬಿಡುವುದು ಸೂಕ್ತವೆನ್ನಿಸುತ್ತದೆ.

        ಉತ್ತರ
  55. Narendra Kumar.S.S
    ಏಪ್ರಿಲ್ 5 2011

    ಈ ಚರ್ಚೆಯಲ್ಲಿ ಬಂದಿರುವ ಪ್ರತಿಕ್ರಿಯೆಗಳು, ಸಂಬಂಧವೇ ಇರದ ವಿಷಯಗಳನ್ನು ಎಳೆದು ತಂದಿರುವುದು, ಹೊಲಸು ಮಾತುಗಳು – ಇವುಗಳ ಕುರಿತಾಗಿ “ನಿಲುಮೆ” ಮೌನವಾಗಿರುವುದು – ಇವನ್ನೆಲ್ಲ ಕಂಡಾಗ “ನಿಲುಮೆ”ಯ ನಿಲುವಿನ ಬಗ್ಗೆಯೇ ಅನುಮಾನಗಳೇಳುತ್ತವೆ.
    ಪ್ರಾರಂಭದಲ್ಲಿ ಆರ್.ಗಣೇಶ್ ಅವರ ಕುರಿತಾಗಿ, ಅವರ ತಾಯ್ನುಡಿ ಇತ್ಯಾದಿಗಳ ಕುರಿತಾಗಿ ಬರೆದರು – ಈ ಚರ್ಚೆಗೆ ಅದು ಅಗತ್ಯವಿರಲಿಲ್ಲ.
    ಕನ್ನಡದ ಬಗ್ಗೆ ಮಾತನಾಡಲು ಕೆಲವರಿಗೆ ಮಾತ್ರ ಹಕ್ಕಿದೆ ಎನ್ನುವ ಅರ್ಥದಲ್ಲಿ ವಾದಗಳು ನಡೆದವು – ಕನ್ನಡಿಗರೇ ಆದ ಕೆಲವರನ್ನು “ವಲಸೆ ಬಂದವರು” ಎಂದು ಹಂಗಿಸಲಾಯಿತು.
    ಯಾರೋ ಯಾವುದೋ ಬೇರೆ ಕಡೆ ನಡೆಸಿದ ಚರ್ಚೆ (ಹಕಾರದ ಕುರಿತಾಗಿ)ಯ ಎಳೆಯನ್ನು ಇಲ್ಲಿಗೂ ಎಳೆದು ತರಲು ಯತ್ನಿಸಲಾಯಿತು – ಇನ್ನೂ ಅದರ ಕುರಿತಾಗಿ ಎಳೆದಾಡಲಾಗುತ್ತಿದೆ – ಇಲ್ಲಿ ನಡೆಯುತ್ತಿರುವ ಚರ್ಚೆಗೂ ಹಕಾರದ ಚರ್ಚೆಗೂ ಯಾವುದೇ ಸಂಬಂಧವಿಲ್ಲ.
    ಜಾತಿವಾದದ ಕುರಿತಾಗಿ ಮಾತನಾಡಲಾಯಿತು – “ಸಂಕೇತಿ”ಗಳು ತಮಿಳು ಧ್ವೇಷಿಗಳು ಎಂದು ಹೇಳಲಾಗಿದೆ – ಇದಕ್ಕೆ ಯಾವುದೇ ಆಧಾರವಿಲ್ಲ ಮತ್ತು ಈ ರೀತಿ ಯಾವುದೇ ಜಾತಿಯ ಕುರಿತಾಗಿ ಹೇಳುವುದು ಖಂಡನೀಯ ಮತ್ತು ಅಪಮಾನಕರ. “ಸಂಕೇತಿ”ಗಳೇನಾದರೂ ಇದನ್ನೇ ಹಿಡಿದು ಮಾನನಷ್ಟ ಮೊಕ್ಕದ್ದಮೆ ಹೂಡಿದರೆ ಯಾರ‍್ಯಾರಿಗೆ ಶಿಕ್ಷೆಯಾಗುತ್ತದೋ ದೇವರೇ ಬಲ್ಲ!
    ತಮ್ಮ ಸಂಸ್ಕೃತ ಧ್ವೇಷವನ್ನೂ ಇಲ್ಲಿ ಕಕ್ಕಿದರು – ಕನ್ನಡ ಪ್ರೇಮಕ್ಕಿಂತ ಅವರ ಸಂಸ್ಕೃತ ಧ್ವೇಷವೇ ಹೆಚ್ಚಿನದು ಎಂದು ನಿರೂಪಣೆಯಾಯಿತು.
    ಜಾತಿವಾದಿ, ಬಲಪಂಥೀಯ, ಕಟ್ಟರ್ Nazism ಮತ್ತು racism ಮನಸ್ಥಿತಿ ಉಳ್ಳವರು ಎಂದೂ ಟೀಕಿಸಲಾಯಿತು.
    “ಶಿಟ್” ಎಂದು ತಮ್ಮ ಬಾಯಿಯ ಹೊಲಸನ್ನು ಹೊರಹಾಕಿ “ಅಂತರಂಗ” ದರ್ಶನವನ್ನೂ ಮಾಡಿಸಲಾಯಿತು.

    ಈ ರೀತಿ, ಮೂಲ ಲೇಖನಕ್ಕೆ ಸಂಬಂಧವೇ ಇರದ ವಿಷಯಗಳನ್ನಿಲ್ಲಿ ಪ್ರಸ್ತಾಪಿಸಿ, ಇತರರಿಗೆ ನೋವುಂಟು ಮಾಡುವ ಕೆಲಸವನ್ನು ಕೆಲವು ಸ್ವಹಿತಾಸಕ್ತ ವ್ಯಕ್ತಿಗಳು ಮಾಡುತ್ತಿರುವುದು, ಈ ಚರ್ಚೆಯ ಕೊಂಡಿಯನ್ನು ಓದುತ್ತಿರುವ ಎಲ್ಲರಿಗೂ ತಿಳಿದ ವಿಷಯವೇ.
    ಹೀಗಿದ್ದಾಗ್ಯೂ, ಇದಾವುದರ ಕುರಿತಾಗಿಯೂ ಗಟ್ಟಿಯಾಗಿ ಮಾತನಾಡದೇ “ತಟಸ್ಥ”ವಾಗುಳಿದಿದೆ “ನಿಲುಮೆ”.
    ಈ ಮೇಲೆ ಹೇಳಿದ ವಿಷಯಗಳೆಲ್ಲವೂ ಖಂಡನೀಯವಲ್ಲವೇ? ಇವು ಮೂಲ ವಿಷಯಕ್ಕೆ ಸಂಬಂಧಿಸಿದ್ದೇ? ಇಲ್ಲದಿದ್ದರೆ, “ನಿಲುಮೆ”ಯ ಮೌನಕ್ಕೆ ಕಾರಣವೇನು?

    ಉತ್ತರ
    • ಏಪ್ರಿಲ್ 5 2011

      ನಾಗೇಂದ್ರ,
      ನಿಲುಮೆ ಈ ನಿಟ್ಟಿನಲ್ಲಿ ಏನು ಮಾಡಬಹುದು ಎಂಬುದನ್ನು ನೀವೆ ಹೇಳಿ? ಚರ್ಚೆಯಾಗುವಾಗ ಎಲ್ಲ ತರಹದ ವಿಚಾರಗಳು ಬಂದು ಹೋಗುತ್ತವೆ. ನಾವು ಯಾರನ್ನೇ ನಿಯಂತ್ರಿಸ ಹೊರಟರೂ ನಿಲುಮೆ ಬಯಾಸ್ಡ್ ಎಂಬ ಭಾವನೆ ಬರಬಹುದು. ಆದರೂ ತೀರ ಅತೃಪ್ತಿದಾಯಕ ಕಾಮೆಂಟ್ ಗಳನ್ನು ಕಿತ್ತು ಹಾಕಲಾಗುವುದು. ಇದು ನಿಮಗೂ ತಿಳಿದಿರುವ ಸಂಗತಿ. ಪ್ರತಿಯೊಂದಕ್ಕೂ ನಿಲುಮೆಯೇ ಕೋಲು ಹಿಡಿದು ನಿಲ್ಲಬೇಕೆ? ಕಾಮೆಂಟ್ ಮಾಡುವವರೆ ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದು ಉಚಿತವಲ್ಲವೇ ?

      ಪ್ರಕಾಶ್,
      ಗಿರೀಶ್ ಭಟ್ ತರಗತಿಯಲ್ಲಿ ಇರಬಹುದು. ಸ್ವಲ್ಪ ಸಮಯ ನೀಡಿ. ಅವರು ನಿಮ್ಮ ಪ್ರಶ್ನೆಗಳಿಗೆ ಖಂಡಿತಾ ಉತ್ತರಿಸುವರು.

      ನಿಮ್ಮ
      ನಿಲುಮೆ

      ಉತ್ತರ
      • Narendra Kumar.S.S
        ಏಪ್ರಿಲ್ 5 2011

        ಅನುಚಿತ ಕಾಮೆಂಟ್‌ಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಬೇಕು.
        ಈ ಚರ್ಚೆಯಲ್ಲಂತೂ, ಈ ರೀತಿಯ ಪ್ರತಿಕ್ರಿಯೆಗಳ ಸರಣಿಯೇ ಹರಿದಿದೆ.
        ಲೇಖನದ ವಿಷಯವೇ ಒಂದು, ಪ್ರತಿಕ್ರಿಯೆಗಳ ಸರಪಣಿಯೇ ಇನ್ನೊಂದು!

        ಉದಾಹರಣೆಗೆ “ಸಂಕೇತಿ” ಎನ್ನುವ ಜಾತಿಯನ್ನು ಇಲ್ಲಿ ಎಳೆತಂದಿರುವುದನ್ನು ನೀವೆಲ್ಲಿ ಖಂಡಿಸಿದಿರಿ?
        “ಸಂಕೇತಿ” ಪ್ರಸ್ತಾಪ ಇಲ್ಲಿ ಅಗತ್ಯವಿತ್ತೇ?
        “ಬಲಪಂಥೀಯ” “ಬ್ರಾಹ್ಮಣ್ಯ” ಇತ್ಯಾದಿ ಪದಗಳ ಬಳಕೆಯಾದಾಗಲೂ ಮೌನವಾಗೇ ಇದ್ದಿರಲ್ಲವೆ?

        ಉತ್ತರ
        • ಏಪ್ರಿಲ್ 5 2011

          ಜಾತಿಯ ಬಗ್ಗೆ,ಮನೆ ಮಾತಿನ ಬಗ್ಗೆ ಬರೆದಿದ್ದ ಪ್ರತಿಕ್ರಿಯೆಗಳನ್ನ ಅಳಿಸಿ ಹಾಕಲಾಗಿದೆ.ನಿಲುಮೆಯನ್ನ ಆರೋಗ್ಯಕರ ಚರ್ಚಾ ತಾಣವಾಗಿ ಮಾಡುವುದೇ ನಮ್ಮ ಉದ್ದೇಶ.ಪ್ರತಿಕ್ರಿಯೆಗಳನ್ನ ಆದಷ್ಟು ನಾವು ನೋಡುತ್ತಲಿರುತ್ತೇವೆ.ಒಮ್ಮೊಮ್ಮೆ ಕಣ್ತಪ್ಪಬಹುದು.ಓದುಗರು ಈ ಬಗ್ಗೆ ತಿಳಿಸುವುದನ್ನ ಸ್ವಾಗತಿಸುತ್ತೇವೆ

          ಉತ್ತರ
          • Narendra Kumar.S.S
            ಏಪ್ರಿಲ್ 5 2011

            ಧನ್ಯವಾದಗಳು.
            ನೀವು ಅನುಚಿತ ಪ್ರತಿಕ್ರಿಯೆಗಳನ್ನು ಅಳಿಸಿಹಾಕಿದ್ದು ತಿಳಿದಿರಲಿಲ್ಲ.
            ಈಗಲಾದರೂ ಆ ರೀತಿ ಪ್ರತಿಕ್ರಿಯಿಸಿದವರು ತಮ್ಮ ಅನುಚಿತ ವರ್ತನೆಯನ್ನು ಅರಿತು ತಿದ್ದಿಕೊಳ್ಳುತ್ತಾರೆಂದು ಆಶಿಸುವ.
            ಅದೇ ಚಾಳಿ ಮುಂದುವರೆದರೆ, “……ಬಾಲ ಡೊಂಕು” ಎಂದು ಸುಮ್ಮನಿರಬೇಕಷ್ಟೇ.
            ನಿಮ್ಮ ಪ್ರಯತ್ನಗಳನ್ನು ನಿಜಕ್ಕೂ ಮೆಚ್ಚಿದೆ.

            ಉತ್ತರ
  56. Shubhashree
    ಏಪ್ರಿಲ್ 5 2011

    ನಿಲುಮೆ,
    ಕಮೆಂಟುಗಳನ್ನು ಅಳಿಸಿರುವುದಕ್ಕೆ ನನ್ನ ಆಕ್ಷೇಪವಿದೆ. ಅಳಿಸಲು ಬಳಸಿದ ಮಾನದಂಡ “ವೈಯುಕ್ತಿಕ ನಿಂದನೆ” ಅನ್ನುವುದೇ ಆಗಿದ್ದರೆ ಅಜಕ್ಕಳ ಗಿರೀಶ್ ಭಟ್ ಅವರ ಈ ಲೇಖನವೇ ಅಳಿಸಲು ತಕ್ಕುದಾಗಿಲ್ಲವೇ? ಹೊಲಸು ಪದಗಳು ಇರುವ ಕಮೆಂಟುಗಳನ್ನು ತೆಗೆದು ಹಾಕುವುದಕ್ಕೆ ನನ್ನ ಸಮ್ಮತಿಯೂ ಇದೆ.
    ಶಂಕರಬಟ್ ಅವರು ಹೇಳದ ಮಾತುಗಳನ್ನು ಬರೆದ ಅಜಕ್ಕಳರ ಬರಹದ ಆಧಾರದ ಮೇಲೆ ನರೇಂದ್ರ ಅವರು ಬರೆದಿರುವ ಮೊದಲ ಕಮೆಂಟೂ ಅಳಿಸಲು ಯೋಗ್ಯವಾಗಿಲ್ಲವೆ? ಖನ್ನಡ ಪ್ರೇಮ ಎಂದು ವ್ಯಂಗ್ಯವಾಡಿದ ಕಮೆಂಟು? ಅಳಿಸುತ್ತಾ ಹೋದಂತೆ ಕೊನೆಮೊದಲಿರುವುದಿಲ್ಲ. ಇರಲಿ, ನಾಲಗೆ ಕುಲ ಹೇಳುತ್ತೆ ಅನ್ನುವ ಮಾತಿನಂತೆ ನಮ್ಮ ನಮ್ಮ ಮಾತುಗಳು ನಮ್ಮ ಯೋಗ್ಯತೆಗಳನ್ನು ತಿಳಿಸುತ್ತವೆ. ತೀರಾ ಕೊಳಕು ಮಾತುಗಳನ್ನು ಬಿಟ್ಟು ಉಳಿದ ಎಲ್ಲ್ಲಾ ಕಮೆಂಟುಗಳೂ ಇದ್ದಿದ್ದರೆ ಚೆನ್ನಿತ್ತು.
    ಮಾಯ್ಸಾ ಅವರು ಸಂಕೇತಿಗಳ ಬಗ್ಗೆ ಹೇಳಿರುವುದಕ್ಕೆ, ವಲಸಿಗ ತಮಿಳು ಜನರ ಕುಲದ ಬಗ್ಗೆ ಹೇಳಿರುವುದನ್ನು ಕೂಡಾ ಒಂದು ವಾದ, ಒಂದು ದೃಷ್ಟಿಕೋನವಾಗಿ ನೋಡಬಹುದೇ ಹೊರತು ಮಾಯ್ಸರಿಗೆ ಸಂಕೇತಿಗಳ ಬಗ್ಗೆ ದ್ವೇಶವಿದೆ ಎಂದಲ್ಲ ಎನ್ನುವುದು ನನ್ನ ಭಾವನೆ. ಇರಲಿ, ನಿಮ್ಮ ಬ್ಲಾಗಿನಲ್ಲಿ ಇಷ್ಟಾದರೂ ಚರ್ಚೆಗೆ ಅನುವು ಮಾಡಿಕೊಟ್ಟದ್ದಕ್ಕಾಗಿ ಕೃತಜ್ಞಳಾಗಿರುತ್ತೇನೆ.
    ನನ್ನ ಮಾತುಗಳಾನ್ನು ಬೆಂಬಲಿಸಿದ, ನನ್ನೊಡನೆ ಚರ್ಚೆಗ್ಇಳಿದ ಎಲ್ಲರಿಗೂ ಧನ್ಯವಾದಗಳು.

    ಉತ್ತರ
  57. Narendra
    ಏಪ್ರಿಲ್ 5 2011

    > ಅಜಕ್ಕಳರ ಬರಹದ ಆಧಾರದ ಮೇಲೆ ನರೇಂದ್ರ ಅವರು ಬರೆದಿರುವ ಮೊದಲ ಕಮೆಂಟೂ ಅಳಿಸಲು ಯೋಗ್ಯವಾಗಿಲ್ಲವೆ?
    ನನ್ನ ಮೊದಲ “ಕಾಮೆಂಟ್”ನಲ್ಲಿ ಆಕ್ಷೇಪಾರ್ಹವಾದ ಸಂಗತಿಗಳಿದ್ದರೆ ದಯವಿಟ್ಟು ತಿಳಿಸಬಹುದೇ?

    > ಖನ್ನಡ ಪ್ರೇಮ ಎಂದು ವ್ಯಂಗ್ಯವಾಡಿದ ಕಮೆಂಟು?
    ನಾನು “ಖನ್ನಡ ಪ್ರೇಮ” ಕಾಮೆಂಟು ಬರೆದದ್ದು ಯಾವ ಕಾಮೆಂಟಿಗೆ ಎನ್ನುವುದನ್ನು ಸ್ವಲ್ಪ ಗಮನಿಸಿ.
    ಇಲ್ಲಿ ನಾವು ಚರ್ಚಿಸುತ್ತಿರುವುದು ಕನ್ನಡದ ಕುರಿತಾಗಿ; ಅದರಲ್ಲೂ ಕನ್ನಡದ ಲಿಪಿಯ ಸುಧಾರಣೆಯ ಕುರಿತಾಗಿ.
    ಈ ಸಂದರ್ಭದಲ್ಲಿ ಇಂಗ್ಲಿಷ್ ಲಿಪಿಯಲ್ಲಿ ಕಾಮೆಂಟ್ ಬರೆದದ್ದು ಎಷ್ಟು ಸರಿ?
    ಮತ್ತು ಅವರು ಬಳಸಿದ ಭಾಷೆಯಾದರೂ ಹೇಗಿದೆ ನೋಡಿ:
    > Kannada kannada endu bobiduva
    > ide Bhraamanyada kaaranadinda
    > bhramanyavannu ottaayapoorvakavaagi kannadada mele heralaaguttide
    ಈ ಮೇಲಿನ ಭಾಷೆ, ಅದರ ಹಿಂದಿರುವ ಆಂತರ್ಯ ಆಕ್ಷೇಪಾರ್ಹವಲ್ಲವೇ?
    ಅದರ ಕುರಿತಾಗಿ ನೀವು ಏಕೆ ಸೊಲ್ಲೇ ಎತ್ತುವುದಿಲ್ಲ?

    > ಇರಲಿ, ನಾಲಗೆ ಕುಲ ಹೇಳುತ್ತೆ ಅನ್ನುವ ಮಾತಿನಂತೆ ನಮ್ಮ ನಮ್ಮ ಮಾತುಗಳು ನಮ್ಮ ಯೋಗ್ಯತೆಗಳನ್ನು ತಿಳಿಸುತ್ತವೆ
    ಹೌದು. ನನ್ನ ಕುರಿತಾಗಿ “ಶಿಟ್” ಪದ ಉಪಯೋಗಿಸಿದಾಗ, ಮತ್ತು ಅದನ್ನು ಮಾಯ್ಸ ಅವರು ಸಮರ್ಥನೆ ಮಾಡಿಕೊಂಡು ಸಂತೋಷಿಸಿದಾಗ, ನಿಮಗೆ ಈ “ಜ್ಞಾನೋದಯ”ವಾಗಿರಲಿಲ್ಲವೇ? ಅದನ್ನು ನೀವು ಒಂದು ಬಾರಿಯೂ ಖಂಡಿಸಲಿಲ್ಲವಲ್ಲ!?

    > ಮಾಯ್ಸಾ ಅವರು ಸಂಕೇತಿಗಳ ಬಗ್ಗೆ ಹೇಳಿರುವುದಕ್ಕೆ, ವಲಸಿಗ ತಮಿಳು ಜನರ ಕುಲದ ಬಗ್ಗೆ ಹೇಳಿರುವುದನ್ನು ಕೂಡಾ ಒಂದು ವಾದ, ಒಂದು ದೃಷ್ಟಿಕೋನವಾಗಿ
    ಮೊದಲನೆಯದಾಗಿ ಇದು ಜಾತಿ ಕುರಿತಾದ ಚರ್ಚೆಯಲ್ಲ.
    ಇಲ್ಲಿ ಚರ್ಚೆ ನಡೆಸಿದ ಒಬ್ಬರು “ಸಂಕೇತಿ” ಎಂಬ ಕಾರಣಕ್ಕೆ ಅವರು ಹೊರಗಿನವರು ಮತ್ತು ಹೀಗಾಗಿ ಕನ್ನಡದ ಕುರಿತಾಗಿ ಪ್ರೀತಿಯಿಲ್ಲ, ಚರ್ಚಿಸುವ ಹಕ್ಕಿಲ್ಲ ಎನ್ನುವ ಅರ್ಥದಲ್ಲಿ ಮಾಯ್ಸಾ ಅವರು ಈ ವಿಷಯವನ್ನು ಇಲ್ಲಿ ತಂದದ್ದು.
    “ಸಂಕೇತಿ” ವಿಷಯ ಈ ಚರ್ಚೆಗೆ ಯಾವ ರೀತಿಯಲ್ಲಿ ಪ್ರಸ್ತುತ ಹೇಳಿ?

    ಉತ್ತರ
    • Shubhashree
      ಏಪ್ರಿಲ್ 6 2011

      ಹೊಲಸು ಪದಗಳು ಇರುವ ಕಮೆಂಟುಗಳನ್ನು ತೆಗೆದು ಹಾಕುವುದಕ್ಕೆ ನನ್ನ ಸಮ್ಮತಿಯೂ ಇದೆ.

      ಉತ್ತರ
      • Narendra
        ಏಪ್ರಿಲ್ 6 2011

        ಶುಭಶ್ರೀ ಅವರೇ,

        ನೀವು ನಿಮ್ಮ ಹಿಂದಿನ ಕಾಮೆಂಟುಗಳನ್ನೊಮ್ಮೆ ಓದಿಕೊಳ್ಳಿ.
        ಅದರಲ್ಲಿ ನನ್ನ ಕಾಮೆಂಟಿನ ಕುರಿತಾಗಿ ಆಕ್ಷೇಪವೆತ್ತಿದ್ದೀರಿ ಮತ್ತು ಅದಕ್ಕೆ ನಾನು ಉತ್ತರಿಸಿರುವೆ.
        ಆದರೆ, ಅದೊಂದಕ್ಕೂ ಪ್ರತಿಕ್ರಿಯಿಸದೆ “ಹೊಲಸು ಪದಗಳು ಇರುವ ಕಮೆಂಟುಗಳನ್ನು ತೆಗೆದು ಹಾಕುವುದಕ್ಕೆ ನನ್ನ ಸಮ್ಮತಿಯೂ ಇದೆ.”
        ಎಂದು ತಿಳಿಸಿ ಸುಮ್ಮನಾಗಿರುವಿರಿ.
        ನನ್ನ ಕಾಮೆಂಟುಗಳಲ್ಲಿ ಆಕ್ಷೇಪಾರ್ಹವಾದದ್ದಿದ್ದರೆ ದಯವಿಟ್ಟು ತಿಳಿಸಿ ಎಂದು ಕೇಳಿದ್ದೆ.
        ಇದಕ್ಕೆ ಉತ್ತರ ಕೊಡದೆ ನೀವು ಮೌನವಾಗಿರುವುದು, ನನ್ನ ಕಾಮೆಂಟಿನಲ್ಲಿ ಆಕ್ಷೇಪಾರ್ಹವಾದುದು ನಿಮಗೆ ಯಾವುದೂ ಕಂಡಿಲ್ಲವೆಂದೇ ಅರ್ಥವೆಂದುಕೊಳ್ಳಬಹುದೇ?
        ಹೀಗಿದ್ದೂ ನೀವು ಹಿಂದಿನ ಕಾಮೆಂಟಿನಲ್ಲಿ ನನ್ನ ಕಾಮೆಂಟನ್ನು ತೆಗೆದು ಹಾಕುವಂತೆ ತಿಳಿಸಿದ್ದು ದುರುದ್ದೇಶಪೂರಿತ ಎಂದೇ ನನ್ನ ಅನಿಸಿಕೆ!

        -ನರೇಂದ್ರ

        ಉತ್ತರ
        • Shubhashree
          ಏಪ್ರಿಲ್ 14 2011

          ನರೇಂದ್ರ ಅವರೇ,

          ಡಾ. ಅಜಕ್ಕಳರ ಬರಹವೇ ಡಾ ಗಣೇಶರು ಮಾಡಿರುವ ಆರೋಪದ ಮೇಲೆ ನಿಂತಿರುವಾಗ… ನಿಲುಮೆ ವೈಯುಕ್ತಿಕ ನಿಂದನೆಯ ಕಮೆಂಟುಗಳನ್ನು ಅಳಿಸುವುದಾದರೆ ,ಮೊದಲಿಗೆ ವರ್ಗಬೇಧ, ಸಮಾಜ ಒಡೆಯುವ ಶಕ್ತಿ ಎಂದೆಲ್ಲಾ ಚರ್ಚೆಯ ಆರಂಭಕ್ಕೆ ಮೊದಲೇ ಆರೋಪಿಸಿರುವ ಪೂರ್ವಾಗ್ರಹದ ಕಮೆಂಟು ಕೂಡಾ ಅಳಿಸಲು ಅರ್ಹವಾಗಿದೆ ಅನ್ನುವುದು ನನ್ನ ಅನಿಸಿಕೆಯಾಗಿತ್ತು.

          “ಶಂಕರ ಭಟ್ಟರ ಲೆಕ್ಕದಲ್ಲಿ ಇವರೆಲ್ಲರೂ ಹಿಂದುಳಿದ ವರ್ಗದವರೇ!”
          >> ಶಂಕರಬಟ್ಟರು ಈ ಲೇಖನದಲ್ಲಿ ಆರೋಪಿಸಿರುವಂತೆ ಎಲ್ಲಾದರೂ ಹೇಳಿದ್ದಾರಾ? ನೇರವಾಗಿ ಹೇಳಿಲ್ಲ ಎಂದು ಡಾ ಗಿರೀಶರೇ ಬರೆದಿರುವಾಗ ನೀವು ಇಂಥಾ ಕಮೆಂಟು ಬರೆದಿರುವುದು ಕೂಡಾ… ಚರ್ಚೆಗೆ ಇಳಿಯುವ ಮೊದಲೇ ಎದುರಾಳಿಯನ್ನು ಹಳಿಯುವಂತಿಲ್ಲವೇ?
          “ನಮ್ಮ ಸಮಾಜದಲ್ಲಿ ವರ್ಗಭೇಧವನ್ನು ಹುಟ್ಟುಹಾಖಿ, ಸಮಾಜವನ್ನು ಒಡೆಯಲು ಪ್ರಯತ್ನಿಸುವ ಶಕ್ತಿಗಳು ಈ ಶಂಕರ ಭಟ್ಟರಂಥಹವರ ಹಿಂದಿದ್ದಾರೆಂದು ನನ್ನ ಗುಮಾನಿ.”
          ಹೀಗೆ ಗುಮಾನಿ ಗಿಮಾನಿ ಅಂತಾ ಗೋಡೆ ಮೇಲಿನ ದೀಪದಂತೆ ಪೊಲಿಟಿಕಲ್ ಸ್ಟೇಟ್‍ಮೆಂಟ್‍ಗಳು ಸರಿಯೇ? ಇಂಥಾ ಆರೋಪ ಶಂಕರಬಟ್ ಅವರ ವಯಸ್ಸು, ಹಿರಿಮೆ, ಪಾಂಡಿತ್ಯ, ನಿಲುವು ಯಾವುದಕ್ಕೂ ಗೌರವವಿಲ್ಲದೆ ಮಾಡಿದ ಆರೋಪವಲ್ಲವೇ?
          ಗೊತ್ತು… ಇನ್ಯಾರದೋ ಕಮೇಂಟ್ ಬಗ್ಗೆ ನಾನು ಮಾತಾಡಿಲ್ಲ ಅಥವಾ ಚಿಕ್ಕದಾಗಿ ಮಾತಾಡಿದೆ ಎಂದಿರಿ. ನಿಮ್ಮಗಳ ಯಾವ ಮಾತಿಗೂ ನಾನು ಕಮೆಂಟ್ ಮಾಡಿಲ್ಲ. ಈಗ ಅಳಿಸುವ ವಿಷಯಕ್ಕೆ ಬಂದಾಗ ಎದುರಾಳಿಯ ಮೇಲೆ ಮೊದಲ ಆಕ್ರಮಣ ಮಾಡಿದ ಶ್ರೀರಾಮಚಂದ್ರ ತಾವೇ ಎಂದು ಅಳಿಸಲು ಯೋಗ್ಯವಾಗಿದೆ ಎಂದೆ. ದೇವರು ನಿಮಗೆ ಎದುರಿರುವವರ ನಿಲುವನ್ನು, ವಾದವನ್ನು ಮೊದಲು ಅರಿತು ಗೌರವದಿಂದ ಅದನ್ನು ಕಾಣುವ ಸದ್ಬುದ್ಧಿ ಕೊಡಲೆಂದು ಆಶಿಸುವೆ.
          ನಮಸ್ಕಾರ

          ಉತ್ತರ
        • Shubhashree
          ಏಪ್ರಿಲ್ 14 2011

          ನರೇಂದ್ರ ಅವರೇ,
          ಡಾ. ಅಜಕ್ಕಳರ ಬರಹವೇ ಡಾ ಗಣೇಶರು ಮಾಡಿರುವ ಆರೋಪದ ಮೇಲೆ ನಿಂತಿರುವಾಗ… ನಿಲುಮೆ ವೈಯುಕ್ತಿಕ ನಿಂದನೆಯ ಕಮೆಂಟುಗಳನ್ನು ಅಳಿಸುವುದಾದರೆ ,ಮೊದಲಿಗೆ ವರ್ಗಬೇಧ, ಸಮಾಜ ಒಡೆಯುವ ಶಕ್ತಿ ಎಂದೆಲ್ಲಾ ಚರ್ಚೆಯ ಆರಂಭಕ್ಕೆ ಮೊದಲೇ ಆರೋಪಿಸಿರುವ ಪೂರ್ವಾಗ್ರಹದ ಕಮೆಂಟು ಕೂಡಾ ಅಳಿಸಲು ಅರ್ಹವಾಗಿದೆ ಅನ್ನುವುದು ನನ್ನ ಅನಿಸಿಕೆಯಾಗಿತ್ತು.
          “ಶಂಕರ ಭಟ್ಟರ ಲೆಕ್ಕದಲ್ಲಿ ಇವರೆಲ್ಲರೂ ಹಿಂದುಳಿದ ವರ್ಗದವರೇ!”
          >> ಶಂಕರಬಟ್ಟರು ಈ ಲೇಖನದಲ್ಲಿ ಆರೋಪಿಸಿರುವಂತೆ ಎಲ್ಲಾದರೂ ಹೇಳಿದ್ದಾರಾ? ನೇರವಾಗಿ ಹೇಳಿಲ್ಲ ಎಂದು ಡಾ ಗಿರೀಶರೇ ಬರೆದಿರುವಾಗ ನೀವು ಇಂಥಾ ಕಮೆಂಟು ಬರೆದಿರುವುದು ಕೂಡಾ… ಚರ್ಚೆಗೆ ಇಳಿಯುವ ಮೊದಲೇ ಎದುರಾಳಿಯನ್ನು ಹಳಿಯುವಂತಿಲ್ಲವೇ?
          “ನಮ್ಮ ಸಮಾಜದಲ್ಲಿ ವರ್ಗಭೇಧವನ್ನು ಹುಟ್ಟುಹಾಖಿ, ಸಮಾಜವನ್ನು ಒಡೆಯಲು ಪ್ರಯತ್ನಿಸುವ ಶಕ್ತಿಗಳು ಈ ಶಂಕರ ಭಟ್ಟರಂಥಹವರ ಹಿಂದಿದ್ದಾರೆಂದು ನನ್ನ ಗುಮಾನಿ.”
          ಹೀಗೆ ಗುಮಾನಿ ಗಿಮಾನಿ ಅಂತಾ ಗೋಡೆ ಮೇಲಿನ ದೀಪದಂತೆ ಪೊಲಿಟಿಕಲ್ ಸ್ಟೇಟ್‍ಮೆಂಟ್‍ಗಳು ಸರಿಯೇ? ಇಂಥಾ ಆರೋಪ ಶಂಕರಬಟ್ ಅವರ ವಯಸ್ಸು, ಹಿರಿಮೆ, ಪಾಂಡಿತ್ಯ, ನಿಲುವು ಯಾವುದಕ್ಕೂ ಗೌರವವಿಲ್ಲದೆ ಮಾಡಿದ ಆರೋಪವಲ್ಲವೇ?
          ಗೊತ್ತು… ಇನ್ಯಾರದೋ ಕಮೇಂಟ್ ಬಗ್ಗೆ ನಾನು ಮಾತಾಡಿಲ್ಲ ಅಥವಾ ಚಿಕ್ಕದಾಗಿ ಮಾತಾಡಿದೆ ಎಂದಿರಿ. ನಿಮ್ಮಗಳ ಯಾವ ಮಾತಿಗೂ ನಾನು ಕಮೆಂಟ್ ಮಾಡಿಲ್ಲ. ಈಗ ಅಳಿಸುವ ವಿಷಯಕ್ಕೆ ಬಂದಾಗ ಎದುರಾಳಿಯ ಮೇಲೆ ಮೊದಲ ಆಕ್ರಮಣ ಮಾಡಿದ ಶ್ರೀರಾಮಚಂದ್ರ ತಾವೇ ಎಂದು ಅಳಿಸಲು ಯೋಗ್ಯವಾಗಿದೆ ಎಂದೆ. ದೇವರು ನಿಮಗೆ ಎದುರಿರುವವರ ನಿಲುವನ್ನು, ವಾದವನ್ನು ಮೊದಲು ಅರಿತು ಗೌರವದಿಂದ ಅದನ್ನು ಕಾಣುವ ಸದ್ಬುದ್ಧಿ ಕೊಡಲೆಂದು ಆಶಿಸುವೆ.
          ನಮಸ್ಕಾರ

          ಉತ್ತರ
          • Shubhashree
            ಏಪ್ರಿಲ್ 14 2011

            ನರೇಂದ್ರ ಸಾರ್,

            ಖನ್ನಡ ಪ್ರೇಮ ಎಂದು ಹಳಿದಿದ್ದೀರಲ್ಲಾ… ನೀವೇ ಮೊದಲ ಕಾಮೆಂಟಿನಲ್ಲಿ ಭೇಧ, ಹುಟ್ಟುಹಾಖಿ ಅಂದಿದ್ದೀರಲ್ಲಾ? ಎಂದು ಆಕ್ಷೇಪಿಸಬಹುದಿತ್ತು ತಾನೇ? ಅದಕ್ಕೇ ಆ ಹಳಿಯುವಿಕೆಯ ಮನಸ್ಥಿತಿ ಬಗ್ಗೆ ಮಾತಾಡಿದೆ. ತನ್ನೆಲೆಯಲ್ಲಿ ___ ಬಿದ್ದಿದ್ದರೂ ಪರ್ವಾಗಿಲ್ಲಾ. ಇನ್ನೊಬ್ಬರ ಎಲೆಯಲ್ಲಿ ನೊಣ ಬಿದ್ದಿರುವುದನ್ನು ಎತ್ತಿ ಆಡಬೇಕು ಅನ್ನುವಂತೆ ಇಲ್ಲವೇ ಅದು!

            ಉತ್ತರ
      • ಮಾಯ್ಸ
        ಏಪ್ರಿಲ್ 6 2011

        ಹೊಲಸು ಎಂಬುದು ಆಳಿಂದ ಆಳಿಗೆ ಬೇರೆಬೇರೆಯಾಗುವ ಸಂಗತಿ/subjective. ಯಾರು ಏನನ್ನಾದರೂ ಹೇಗೆ ಹೇಳಿದರೂ ಅದನ್ನು ಹಾಗೇ ಕೇಳಿಸಿಕೊಂಡು, ಓದಿಕೊಂಡು ಅದರ ಹುರುಳನ್ನು ಒರೆಹಚ್ಚುವ ಮನ ಬೆಳೆಸಿಕೊಳ್ಳಬೇಕು. ಅದೇ ಹೇಳುಅನುವು/freedom of expression.

        ಉತ್ತರ
    • ಮಾಯ್ಸ
      ಏಪ್ರಿಲ್ 6 2011

      ನರೇಂದ್ರ,

      ನಾನು ನಿಮಗೆ ಅನಿಸಿಕೆ ಬರೆಯಲ್ಲ.. ಆದರೆ ನೀವು ನನ್ನ ಬೆನ್ನು ಹೆತ್ತಿದ ಬೇತಾಳ. ಒಂದೇ ಸಮನೇ ನನ್ನ ಬಗ್ಗೆ ಬರೆಯುತ್ತಿದ್ದೀರಿ.

      “ಹೌದು. ನನ್ನ ಕುರಿತಾಗಿ “ಶಿಟ್” ಪದ ಉಪಯೋಗಿಸಿದಾಗ, ಮತ್ತು ಅದನ್ನು ಮಾಯ್ಸ ಅವರು ಸಮರ್ಥನೆ ಮಾಡಿಕೊಂಡು ಸಂತೋಷಿಸಿದಾಗ, ನಿಮಗೆ ಈ “ಜ್ಞಾನೋದಯ”ವಾಗಿರಲಿಲ್ಲವೇ? ಅದನ್ನು ನೀವು ಒಂದು ಬಾರಿಯೂ ಖಂಡಿಸಲಿಲ್ಲವಲ್ಲ!?”

      ಅಲ್ಲಿ ‘ಶಿಟ್’ ಎಂದು ಬರೆದವರು ‘ಶಿಟ್’ ಅಂದರೆ ಹೊಲಸು ಅಂತ ಅಶ್ಟೇ ಅಲ್ಲ… ಪೋಲು ಎಂಬ ಹುರುಳು ಇದೆ (ಬುಲ್ಶಿಟ್). ಅವರು ನಿಮ್ಮನ್ನು ಹೇಲು ಎನ್ನನ್ನಲಿಲ್ಲ.. ನಿಮ್ಮ ಜತೆ ಮಾತುಕತೆಯ ನಿಮಗೆ ಸಿಗುವುದು ಹೇಲುನಂತತದ್ದು/ಬೆಲೆ ಇಲ್ಲದ್ದು ಎಂದು. ಅದಕ್ಕೆ ಅವರು ಬಂದು ನಿಮ್ಮ ಜತೆ ಮಾತಾಡುವುದು “ಸರಣಿಯ ಜತೆ ಸರಸ” ಎಂದು ಇಂಗ್ಲೀಶಿನ ‘ಶಿಟ್’ಎಂಬ ಪದದಿಂದ ಹೇಳಿದರು.

      ಇನ್ನು ಈ ಕಮೆಂಟು ಕೂಡ ವೈಯಕ್ತಿಕ ನಿಂದನೆ ಎಂದು ಅಳಬೇಡಿ.. ನೀವೇ ವಿವರಣೆಕೋರಿದಿರಿ… ಅದಕ್ಕೆ ನಾನು ನನ್ನ ಮಾತುಗಾರಿಕೆಯಂತೆ ಕೊಟ್ಟೆ… ಅದು ಹೊಲಸು ಗಿಲಸು ಅದು ನಮ್ಮ ಕಣ್ಣಿನ ಕಮಾಲೆಯ ಮಟ್ಟದ ಮೇಲೆ.!

      ಉತ್ತರ
      • ಮಾಯ್ಸ
        ಏಪ್ರಿಲ್ 6 2011

        “ನಿಮ್ಮ ಜತೆ ಮಾತುಕತೆಯ ನಿಮಗೆ ಸಿಗುವುದು” ಅನ್ನು “ನಿಮ್ಮ ಜತೆಯ ಮಾತುಕತೆಯಿಂದ ನಮಗೆ ಸಿಗುವುದು” ಎಂದಿರಬೇಕಿತ್ತು..

        ಉತ್ತರ
      • Ravi
        ಏಪ್ರಿಲ್ 6 2011

        ಶಿಟ್, ಬುಲ್ ಶಿಟ್ ಎಲ್ಲ ಒಂದೇ. ಹೊಲಸೇ. ನಿಮಗೆ ನರೇಂದ್ರರಲ್ಲಿ ಹೊಲಸು ಕಂಡಿರಬಹುದು. ಅದು ಅವರ ಮೈಯ ಹೊಲಸು ಇದ್ದಿರಲಿಕ್ಕಿಲ್ಲ. ಹೊಲಸಿಗೆ ಕಲ್ಲೆಸೆದಾಗ ಮೈಗೆ ರಾಚಿದ ಹೊಲಸು ಇರಬಹುದೇನೋ.

        ನರೇಂದ್ರ,
        ದಯವಿಟ್ಟು ಹೊಲಸಿಗೆ ಕಲ್ಲೆಸೆಯಬೇಡಿ. ಹೀಗೆಲ್ಲ ಆಗುತ್ತದೆ. ನಿಮ್ಮ ಕೆಲಸ ನೋಡಿ.

        ನಿಲುಮೆ,
        ನನ್ನ ಈ ಕಾಮೆಂಟ್ ಬಗ್ಗೆ ನನಗೇ ಆಕ್ಷೇಪ ಇದೆ. ದಯವಿಟ್ಟು ಅಳಿಸಿ.

        ಉತ್ತರ
        • ಏಪ್ರಿಲ್ 6 2011

          ನಿನ್ನೆಯೇ ಕದನವಿರಾಮ ಘೋಷಣೆಯಾಗಿದೆ ಅಂದುಕೊಂಡಿದ್ದೆ,ಆದರೆ ಎಲ್ಲರು ಮತ್ತೊಂದು ಸುತ್ತಿನ ವೈಯುಕ್ತಿಕ ಕೆಸರೆರಚಾಟಕ್ಕೆ ಮುನ್ನುಡಿ ಬರೆಯುತ್ತಿರುವ ಲಕ್ಷಣಗಳಿವೆ! 🙂 … ಮತ್ತೊಮ್ಮೆ ನಿಲುಮೆಯೇ ಕೋಲು ಹಿಡಿದು ನಿಲ್ಲಬೇಕಾ?
          ದಯವಿಟ್ಟು ವಿಷಯದ ಬಗ್ಗೆ ಮುಕ್ತ ಸಂವಾದ ಮಾಡೋಣ.ಹೊಸ ವಿಚಾರಗಳನ್ನು ಹೊರತರುವಲ್ಲಿ ಪಾತ್ರವಹಿಸೋಣ.ಏನ್ ಅಂತಿರಾ?

          ಉತ್ತರ
      • Narendra Kumar.S.S
        ಏಪ್ರಿಲ್ 6 2011

        > ನೀವೇ ವಿವರಣೆಕೋರಿದಿರಿ… ಅದಕ್ಕೆ ನಾನು ನನ್ನ
        > ಮಾತುಗಾರಿಕೆಯಂತೆ ಕೊಟ್ಟೆ
        ಇದನ್ನೇ “ಕುಂಬಳಕಾಯಿ ಕಳ್ಳ ಅಂದರೆ….” ಎನ್ನುವುದು.
        ನಾನು ನಿಮ್ಮ ವಿವರಣೆ ಕೇಳಿಯೇ ಇಲ್ಲವಲ್ಲ!?
        > ಅಲ್ಲಿ ‘ಶಿಟ್’ ಎಂದು ಬರೆದವರು ‘ಶಿಟ್’ ಅಂದರೆ ಹೊಲಸು ಅಂತ ಅಶ್ಟೇ ಅಲ್ಲ
        ಇದರ ಕುರಿತಾಗಿ ನಾನು ಆಗಲೇ ಹೇಳಿ ಆಗಿದೆ. ಬಾಯಿಯಿಂದ ಹೊರಬರುವುದು ಒಳಗಿರುವುದಲ್ಲದೆ ಬೇರೇನೂ ಅಲ್ಲ.
        ನಿಮಗೆ ಅದು ಹೊಲಸು ಅಲ್ಲದೇ ಇರಬಹುದು ಅಥವಾ ಮತ್ತೇನೇನೋ ಇರಬಹುದು, ಅದು ನಿಮ್ಮಿಷ್ಟ. ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ.

        > ಇನ್ನು ಈ ಕಮೆಂಟು ಕೂಡ ವೈಯಕ್ತಿಕ ನಿಂದನೆ ಎಂದು ಅಳಬೇಡಿ
        ನಾನು ಯಾವುದಕ್ಕೂ ಅತ್ತಿಲ್ಲ, ಅಳುತ್ತಿಲ್ಲ. ಈ “ನಿಲುಮೆ” ವೇದಿಕೆ ವಿದ್ಯಾವಂತರ, ಓದಿದವರ ವೇದಿಕೆ ಮತ್ತು ಉತ್ತಮ ವಿಚಾರಗಳನ್ನು ಚರ್ಚಿಸಿ ನಮ್ಮ ಜ್ಞಾನವನ್ನು ಹೆಚ್ಚಿಸುವ ವೇದಿಕೆ ಎನ್ನುವುದು ನನ್ನ ಭಾವನೆ. ಆದರೆ, ಅನಾವಶ್ಯಕವಾಗಿ ಬೇಡದ ವಿಷಯಗಳನ್ನು ಚರ್ಚೆಗೆ ಎಳೆದು ತಂದು ಸಮಯ ವ್ಯರ್ಥ ಮಾಡುವುದು ಕಂಡು ಬೇಸರವಾಯಿತು.

        > “ಸಂಕೇತಿ ಬ್ರಾಹ್ಮಣರು ತುಂಬಿರುವ ಮತ್ತೂರು
        > ಹಳ್ಳಿಯಲ್ಲಿ ಆಡುನುಡಿಯಗಾಗಿ ಕನ್ನಡವನ್ನು ಬಿಟ್ಟು
        > ಸಂಸ್ಕ್ರುತವನ್ನು ಹಾಕಿಕೊಂಡಿದ್ದಾರೆ.”
        ಪ್ರಾಯಶಃ ನೀವು ಮತ್ತೂರಿಗೆ ಹೋಗಿಲ್ಲ; ಹೋಗಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಸಂಸ್ಕೃತದ ಕುರಿತಾಗಿ, ಬ್ರಾಹ್ಮಣರ ಕುರಿತಾಗಿ ಮನಸ್ಸಿನ ತುಂಬ ಪೂರ್ವಾಗ್ರಹವನ್ನೇ ತುಂಬಿಕೊಂಡಿದ್ದರೆ, ಈ ರೀತಿಯ ಮಾತಲ್ಲದೆ ಬೇರೆ ಬರಲು ಸಾಧ್ಯವೂ ಇಲ್ಲ.
        ಮತ್ತೂರಿನಲ್ಲಿ ಅವರು ಸಂಸ್ಕೃತ ಕಲಿತಿರುವುದು ನಿಜ. ಹಾಗೆಂದು ಕನ್ನಡ ಬಿಟ್ಟಿದ್ದಾರೆ ಎನ್ನುವುದು ನಿಮ್ಮ ಊಹೆ ಅಷ್ಟೆ.
        ಅವರು ಕನ್ನಡವನ್ನೂ ಮಾತನಾಡುತ್ತಾರೆ, ಕನ್ನಡಕ್ಕೆ ಶಕ್ತಿ ತುಂಬುವ ಕೆಲಸವನ್ನೂ ಮಾಡುತ್ತಾರೆ, ಕನ್ನಡದಲ್ಲೇ ಕಾರ್ಯಕ್ರಮಗಳನ್ನೂ ನಡೆಸುತ್ತಾರೆ.
        “ಸಂಕೇತಿ”ಗಳು ಕನ್ನಡದ ಲಿಪಿಯನ್ನೇ ತಮ್ಮ ಭಾಷೆ ಬರೆಯಲು ಉಪಯೋಗಿಸುತ್ತಾರೆ.

        > ನರೇಂದ್ರ, ದಯವಿಟ್ಟು ಹೊಲಸಿಗೆ ಕಲ್ಲೆಸೆಯಬೇಡಿ. ಹೀಗೆಲ್ಲ ಆಗುತ್ತದೆ. ನಿಮ್ಮ ಕೆಲಸ ನೋಡಿ.
        ಧನ್ಯವಾದಗಳು. ಈ ಚರ್ಚೆಯಲ್ಲಿ ಇದೇ ನನ್ನ ಕಡೆಯ ಕಾಮೆಂಟು.

        ಉತ್ತರ
  58. ಮಾಯ್ಸ
    ಏಪ್ರಿಲ್ 6 2011

    ಶುಬಶ್ರೀ…

    ನಿಮ್ಮ ಅಡ್ಡಿಹೇಳಿಕೆ/ಆಕ್ಷೇಪಕ್ಕೆ ಬಗ್ಗೆ.. ನಮ್ಮ ಇಂಡಿಯದಲ್ಲಿ ಈ ಅನಿಸಿಕೆತಡೆ/ಅನಿಸಿಕೆಅಂಕೆ/ಅನಿಸಿಕೆಕುಂದು ಮಾಮೂಲಿ ತಾನೆ.

    ‘ಹೊಲಸು’ ಎಂದು ತೀರ್ಮಾನವೂ ಆಳಿಂದ ಆಳಿಂದ ಬೇರೆ ಬೇರೆಯಾಗಿರುತ್ತದೆ/Subjective. ಅದಕ್ಕೆ ಒಬ್ಬರು ಏನನ್ನು ಹೇಗೇ ಹೇಳಿದರೂ ಅದನ್ನು ಹಾಗೇ ಕೇಳಿಸಿ, ಓದಿ, ಅದರ ಹುರುಳನ್ನು ಒರೆಹಚ್ಚುವ ಮನ ಬೆಳೆಸಿಕೊಳ್ಳಬೇಕು.

    ಮಾದರಿ : Stool test ಗೆ ಮಲಪರೀಕ್ಶೆ ಹೊಲಸೆನಿಸುವುದಿಲ್ಲ ಹಲವರಿಗೆ, ಅದೇ ಅದಕ್ಕೆ ‘ಹೇಲೊರೆ’ ಎಂದರೆ ಅದು ಹೊಲಸು.

    ಇನ್ನು ಆಳೊಬ್ಬರ ಹಳಿತ/ವೈಯಕ್ತಿಕ ನಿಂದನೆ…. ಎಂಬ ಮಾತು.. ನಾನು ಒಂದು ಗುಂಪಿನ ಬಗ್ಗೆ ಮಾತಾಡಿದ್ದು ಹೊರತು, ಓರಾಳು/ಒಬ್ಬ ವ್ಯಕ್ತಿಯ ಬಗ್ಗೆಯಲ್ಲ. “ಸಂಕೇತಿ ಬ್ರಾಹ್ಮಣರು ತುಂಬಿರುವ ಮತ್ತೂರು ಹಳ್ಳಿಯಲ್ಲಿ ಆಡುನುಡಿಯಗಾಗಿ ಕನ್ನಡವನ್ನು ಬಿಟ್ಟು ಸಂಸ್ಕ್ರುತವನ್ನು ಹಾಕಿಕೊಂಡಿದ್ದಾರೆ.” ಈ ಹಿಂದಿನ ಸಾಲಿನಲ್ಲಿರುವ ಯಾವ ಗುಂಪು ಹಾಗೆ ಮಾಡಿದೆ ಎಂಬ ಅರಿವನ್ನು ಇನ್ನು ಹೇಗೆ ಹೇಳುವುದು?

    ಇನ್ನು ಓರಾಳಿನ ಮಾತನ್ನು ಕಟ್ಟಿಕೊಂಡು ಒಂದು ಮಾತುಕತೆಗೆ ಇಳಿದಾಗ, ಯಾವ ಆಳಿನ ಮಾತನ್ನು ಏನೋ ದೊಡ್ಡ ಸಂಗತಿ ಎಂದು ಹೇಳಲಾಗಿದೆಯೋ, ಆ ಆಳಿನ ಬಗ್ಗೆ ಮಾತುಕತೆ ತಾನೇತಾನಾಗಿ ಬಂದಿದೆ. ಈ ಬರಹಗಾರರು ರಾ.ಗಣೇಶ, ತಿರುಮಲೇಶ ಹೇಳಿದುದು ಏನೋ ನಮ್ಮ ದೇಶದ ಕಾನೂನು, ಆದರ್ಶ ಎಂಬಂತೆ ಬರೆದಿದ್ದಾರೆ, ಅದಕ್ಕೆ ಎದುರಾಗಿ ತಾನೇತಾನಾಗಿ ಈ ಮಂದಿಯ ತಕ್ಕುಮೆಯ ಬಗ್ಗೆ ಬೊಟ್ಟುತೋರಿಕೆ ಆಗೇ ಆಗುವುದು. ಅದೂ ಅಲ್ಲದೇ ತರ್ಕದಲ್ಲಿ ಹೀಗೆ ಓರಾಳಿನ ಮಾತನ್ನು ವಾದವಾಗಿ ಮುಂದಿಡುವುದು ಸಲ್ಲದು. ಅದೊಂದು ತಪ್ಪು-ತರ್ಕ.

    ಉತ್ತರ
  59. “http://kn.wiktionary.org/wiki/%E0%B2%AE%E0%B2%BE%E0%B2%82%E0%B2%9C%E0%B3%81” – ಅಯ್ಯಯ್ಯೋ ದಣಿಗಳೇ, ನೀವು ಕೊಟ್ಟ ಲಿಂಕ್ ನಲ್ಲಿ ಮಾಂಜು ಅಂದ್ರೆ “ನೋವು ತಗ್ಗಿಸು” ಅಂತಿದೆ. ಆ ಅರ್ತ ತಗೊಂಡ್ರೆ, ಮಾಂಜುಗಾರ ಅಂದ್ರೆ ನೋವು ತಗ್ಗಿಸುವವನು ಅಂತಾಗುತ್ತೆ (english: pain killer). ಆದ್ರೆ ಡಾಕ್ಟರ ಕೆಲಸ ಕೇವಲ ನೋವು ತಗ್ಗಿಸೋದಲ್ಲ ಅನ್ನೋದು ನಿಮಗೂ ಗೊತ್ತಲ್ಲ. ಬಿದ್ದು ಮೂಳೆ ಮುರಕೊಂಡು ಹೋದ್ರೆ ನಮ್ಮ ಮಾಂಜುಗಾರ ಬರೀ “ನೋವು ತಗ್ಗಿಸೋ” ಗುಳಿಗೆ ಕೊಟ್ಟು ಕಳಿಸಿದ್ರೆ ಒಪ್ತೀರಾ? Doctor = ಮಾಂಜುಗಾರ, ಎಷ್ಟು ಕಳಪೆ translation ಅಲ್ಲ?

    ಮಾಂಜುಗಾರ ನಿಜವಾದ ಅರ್ಥ ಇಲ್ಲಿದೆ ನೋಡಿ (ಕಿಟೆಲ್ ನುಡಿಕೋಶದಲ್ಲಿದ್ದಂತೆ):

    ಮಂಜು = dimness (of sight, etc), ಮಬ್ಬು
    ಮಾಂಜು.1 = to cause to grow dim, to hide, to conceal, ಮಬ್ಬುಗೊಳಿಸುವಿಕೆ
    ಮಾಂಜು.2 = hiding (ಮರೆ), dissimulation, deceit (ಮೋಸ), fraud (ವಂಚನೆ)
    ಮಾಂಜಿಸು.1 = ಕಡಿಮೆಗೊಳಿಸು, ಮಾಯಮಾಡು, ಮುಚ್ಚಿಡು, ಮರೆಮಾಡು
    ಮಾಂಜಿಸು.2 = ಮೋಸಮಾಡು, ದಗಾಹಾಕು

    ಗಮನಿಸಿ: ಮೇಲೆ ಕೊಟ್ಟಿರುವ ಅರ್ಥಗಳು ಕಿಟ್ಟೆಲ್ ನುಡಿಕೋಶವನ್ನು ಅನುಸರಿಸಿದ್ದು. ಅಲ್ಲಿ ಕೊಟ್ಟಿರುವ ಇಂಗ್ಲಿಷ್ ವಿವರಣೆಗಳನ್ನು ಕನ್ನಡಿಸಲಾಗಿದೆ ಅಷ್ಟೇ.

    ಇನ್ನು “ಮಾಂಜುಗಾರ” ಈ ನುಡಿಕೋಶದಲ್ಲಿಲ್ಲ, ಆದರೆ ಗಾರ ಪ್ರತ್ಯಯವನ್ನು ಸೇರಿಸಿ ಮೇಲಿನ ಅರ್ಥವನ್ನು ಬೆಳೆಸುವುದು ಕಷ್ಟವಲ್ಲ, ಹೀಗೆ: ಕಡಿಮೆಗೊಳಿಸುವವನು, ಮಾಯಗಾರ, ಮುಚ್ಚಿಡುವವನು, ಮರೆಮಾಚುವವನು, ಮೋಸಗಾರ, ದಗಾಕೋರ, ವಂಚಕ.

    ಮತ್ತೆ ಇದೇ ನುಡಿಕೋಶದ ವಿವಿದಾರ್ಥಗಳನ್ನು ಬೆಸೆದರೆ:

    ಮಂಜು -> ಮಾಂಜಿಸು -> ಮಾಂಜು -> ಮಾಜು -> ಮಾಚು -> (ಮಱೆಮಾಚು etc)

    ಉತ್ತರ
    • ಮತ್ತೆ ಇಲ್ಲೆಲ್ಲೂ ನೋವಿನ ಪ್ರಸ್ತಾಪವೇ ಇಲ್ಲ. ಹಾಗೊಂದು ವೇಳೆ ಮಾಂಜು = to cause to grow dim, ಮಬ್ಬುಗೊಳಿಸುವಿಕೆ ಅನ್ನೋ ಅರ್ಥ ತಗೊಂಡು (ನೋವು) ಮಬ್ಬುಗೊಳಿಸುವಿಕೆ, to cause (the pain) to grow dim ಅಂತ ಕಷ್ಟಪಟ್ಟು ಅರ್ತವನ್ನ ಹಿಗ್ಗಿಸಿದ್ರೂ, ಹೆಚ್ಚೆಂದ್ರೆ ಮಾಂಜುಗಾರ ಅಂದ್ರೆ anesthetist ಅನ್ನಬೋದೇ ಹೊರತು ಡಾಕ್ಟರು ಅಲ್ಲ, ಅಲ್ವಾ ಗುರುಗಳೇ?

      ಉತ್ತರ
  60. Shubhashree
    ಏಪ್ರಿಲ್ 10 2011

    ಮಂಜುನಾಥ್ ಸರ್,
    ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ನಿಮ್ಮ ಬರಹದ ಬಗ್ಗೆ ನನ್ನ ನಿಲುವನ್ನು ತಿಳಿಸಬಯಸುತ್ತೇನೆ.
    ಕನ್ನಡ ನೆಲ: ಕರ್ನಾಟಕವೆಂದರೆ ಇಂದಿನ ದಿವಸ ಇಂಥದ್ದೇ ಎಂದು ಹೇಳುವುದು ಸುಲಭವಾಗಿದೆ. ಇಂದು ರಾಜಕೀಯವಾಗಿ ಕರ್ನಾಟಕವೆಂದು ಯಾವುದನ್ನು ಕರೆಯಲಾಗುತ್ತಿದೆಯೋ ಅದನ್ನೇ ನಾನು ಕರ್ನಾಟಕವೆಂದು ಒಪ್ಪುತ್ತೇನೆ. ಆದರೆ ಕನ್ನಡ ನೆಲವೆನ್ನುವುದು ಸಮಾಜದಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿರುವ ಪ್ರದೇಶ ಅನ್ನಬಹುದು.
    ಕನ್ನಡ : ಇನ್ನು ಕನ್ನಡವೆಂದರೆ ಕರ್ನಾಟಕದ ಬೇರೆ ಬೇರೆ ವಿಧಗಳ ಶೈಲಿಗಳನ್ನೂ ಒಳಗೊಂಡಿರುವ ಕನ್ನಡವೇ ಆಗಿದೆ. ಅಲ್ಲಿ ತಮಿಳಿಂದ ಪ್ರಭಾವಿತವಾದ, ಮರಾಟಿಯಿಂದ ಪ್ರಭಾವಿತವಾದವುಗಳಷ್ಟೇ ಅಲ್ಲದೆ ಕರ್ನಾಟಕದ ಮೂಲೆ ಮೂಲೆಯ ಕನ್ನಡಿಗರೆಲ್ಲಾ ಆಡುವ ನುಡಿಯನ್ನು ಕನ್ನಡವೆಂದೇ ಬಗೆಯಬಹುದಾಗಿದೆ.
    ಕನ್ನಡಿಗ : ಕನ್ನಡವನ್ನು ಬಳಸುವವರೆಲ್ಲರನ್ನೂ ಕನ್ನಡ ಬಲ್ಲವರೆಂದು ಹೇಳಬಹುದಾಗಿದೆ ಮತ್ತು ತಾಯ್ನುಡಿಯನ್ನು ಕನ್ನಡವಾಗಿ ಹೊಂದಿದವರು ಕನ್ನಡಿಗರೂ (ಕನ್ನಡ ಜನಾಂಗ), ಮನೆಮಾತು ಬೇರಾಗಿದ್ದರೂ ಕನ್ನಡವನ್ನು ಓದಲು, ಬರೆಯಲು, ಬಳಸಲು ಬಂದು ಕನ್ನಡದ ಒಲವಿರುವರೆಲ್ಲರನ್ನೂ ಕನ್ನಡಿಗರು ಎನ್ನಬಹುದಾಗಿದೆ. ಕನ್ನಡಿಗನೊಬ್ಬ ಚೆನ್ನಾಗಿ ಇಂಗ್ಲೀಷ್ ಕಲಿತಾಕ್ಷಣ ಹೇಗೆ ಇಂಗ್ಲೀಶಿನವನಾಗನೋ ಹಾಗೆಯೇ ಜರ್ಮನಿಯ ಮೂಲದವ ಇಲ್ಲಿಬಂದು ಕನ್ನಡ ಕಲಿತಾಕ್ಷಣ ಕನ್ನಡಿಗ ಆಗುವುದಿಲ್ಲ. ಇನ್ನು ಹುಟ್ಟಿನಿಂದ ಕನ್ನಡಿಗರಾಗಿದ್ದೂ ಕನ್ನಡ ಬಾರದವರನ್ನು ಏನೆನ್ನಬಹುದು ಎಂದರೆ “ಅಯೋಗ್ಯ ಕನ್ನಡಿಗರು” ಅನ್ನಬಹುದೇನೋ! ಹ ಹ್ಹ ಹ್ಹಾ… ರಾ ಗಣೇಶ್ ಮತ್ತು ನೀಲಾಂಜನರನ್ನು ಮೂಲಕನ್ನಡಿಗರಲ್ಲ, ಆ ಕಾರಣಕ್ಕೇ ಅವರಿಗೆ ಕನ್ನಡದ ಬಗ್ಗೆ ಮಾತಾಡಲು ಅರ್ಹತೆಯಿಲ್ಲ ಎಂದು ಯಾರಾದರೂ ಹೇಳಿದರೆ ಅದು ಕನ್ನಡಿಗರ ಒಗ್ಗಟ್ಟು ಮುರಿಯುವಂತಹುದ್ದಾಗಿದೆ. ಇದಕ್ಕೆ ನನ್ನ ಸಹಮತವಿಲ್ಲ. ಇನ್ನು ನಾನಾಗಲೀ ನಾವಾಗಲೀ ಕನ್ನಡಿಗರೆಂದು ಯಾರನ್ನು ಬಿಂಬಿಸಹೊರಟಿದ್ದೇವೆ ಎನ್ನುವ ಆರೋಪಕ್ಕೆ ಮೇಲೆ ಬರೆದಿರೋ ವಿವರಣೆ ಬಿಟ್ಟು ಮತ್ತೊಂದು ನನ್ನಲ್ಲಿಲ್ಲ.
    ನಾನು ಅರ್ಥ ಮಾಡಿಕೊಂಡಂತೆ ತಮಿಳರ ಬಗ್ಗೆ ಅಸಹನೆ ತೋರಿಸುತ್ತಿರುವವರ ಹಿನ್ನೆಲೆಯಲ್ಲಿ ತಲೆಮಾರುಗಳ ಹಿಂದೆ ತಾವು ತಮಿಳುನಾಡಿನಲ್ಲಿ ಅನುಭವಿಸಿದ ತೊಂದರೆ ಮತ್ತು ಅಲ್ಲಿಂದ ಗುಳೆ ಬರಲು ಕಾರಣವಾದ ಘಟನೆಗಳು, ಅವರುಗಳ ಇಂದಿನ ನಿಲುವಿನ ಮೇಲೂ ಪ್ರಭಾವ ಬೀರಿರುತ್ತದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೊಂದು ಸಣ್ಣ ಉದಾಹರಣೆ ಕೊಡುತ್ತೇನೆ. ಕೆಲವರ್ಷಗಳ ಹಿಂದೆ ಬನವಾಸಿ ಬಳಗದವರು ಆಲೂರು ವೆಂಕಟರಾಯರ ಪುಣ್ಯದಿನ ಆಚರಿಸಿದ್ದರು. ಅಂದು ಅಲ್ಲಿಗೆ ಮುಖ್ಯಅತಿಥಿಯಾಗಿ ಬಂದಿದ್ದ ಡಾ. ರಾ ಗಣೇಶ್ ಅವರು ತಮ್ಮ ಭಾಷಣದಲ್ಲಿ “ಕನ್ನಡ ಇನ್ನೈವತ್ತು ವರ್ಷಗಳಲ್ಲಿ ಸಾಯುತ್ತದೆ” ಎಂದು ಹೇಳಿಬಿಟ್ಟರು. ಸಭೆಯಲ್ಲಿದ್ದ ನನಗೆ ಸಕ್ಕತ್ ಶಾಕ್! ಇಂತಹ ಹೇಳಿಕೆಗಳನ್ನು ನೀಡುವುದನ್ನು ಕಂಡಾಗ ತಕ್ಷಣ ಅವರ ತಮಿಳು ಹಿನ್ನೆಲೆ ನನ್ನ ಮನದಲ್ಲಿ ಸುಳಿದಾಡಿದ್ದು ಸತ್ಯ. ಬಹುಷಃ ಇದೇ ಕಾರಣಕ್ಕಾಗೇ ಈ ಚರ್ಚೆಯಲ್ಲಿ ನನಗೆ ಗಣೇಶರ ಕನ್ನಡತನದ ಬಗ್ಗೆ ಎದ್ದ ಪ್ರಶ್ನೆ ಅಷ್ಟೊಂದು ಅಪಮಾನಕಾರಿ ಅನ್ನಿಸಲಿಲ್ಲ. ಅಂದಹಾಗೇ ನೀವು ಶಂಕರಬಟ್ಟರ ಬುಟ್ಟಿಯಲ್ಲಿ ಹಾಕಿದರೆ ಹೇಗೆ ಅಂದಿದ್ದರ ಅರ್ಥ ತಿಳಿಯಲಿಲ್ಲ ನನಗೆ.
    ಈಗಾಗಲೇ ನುಡಿಯಲ್ಲಿ ಹಾಸುಹೊಕ್ಕಾಗಿ ಬಳಕೆಗೆ ಬಂದಿರುವ ಪದಗಳನ್ನು ಅದು ಬಳಕೆಯಲ್ಲಿರುವಂತೆಯೇ ಒಪ್ಪಿಕೊಳ್ಳಬೇಕು ಎಂಬುದಕ್ಕೆ ನನ್ನ ಸಹಮತವಿದೆ. ನೀವು ಒಪ್ಪದಿರುವ ಕೆಲವಿಷಯಗಳ ಬಗ್ಗೆ ವಿವರಿಸಲು ಬಯಸುತ್ತೇನೆ. ಕನ್ನಡದ ಜಾಯಮಾನಕ್ಕೆ ಒಗ್ಗಿಸುವುದನ್ನು ಒಪ್ಪಲ್ಲ ಅಂದಿರಿ. ನಿದ್ರೆ ಅನ್ನುವುದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿದರೆ ನಿದ್ದೆ ಆಗುತ್ತೆ. ಇದನ್ನು ಒಪ್ತೀರಾ ತಾನೇ? ಬಸ್ ಅನ್ನುವುದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿದರೆ ಬಸ್ಸು ಆಗುತ್ತದೆ. ಬ್ರಹ್ಮ ಬ್ರಮ್ಮ/ ಬ್ರಮ್ಹ ಆಗುತ್ತೆ. ಬ್ರಾಹ್ಮಣ ಎನ್ನುವುದನ್ನು ಯಾವ ಕನ್ನಡಿಗನಿಂದಲೇ ಓದಿಸಿ ನೋಡಿ. ಬ್ರಾಮ್ಹಣ ಎಂದೇ ಓದುತ್ತಾರೆ. ಇದು ನನ್ನ ಗಮನಕ್ಕೆ ಬಂದಿರುವುದು. ಈಗ ಹೇಳಿ, ಬ್ರಹ್ಮ ಅನ್ನುವ ಬದಲು ಬ್ರಮ್ಹ ಎಂದು ಬರೆಯುವುದು ತಪ್ಪಾ?
    ಶುದ್ಧೀಕರಣ: ಕನ್ನಡದ ಪದಗಳನ್ನು ಹುಟ್ಟುಹಾಕುವುದೇ ಸಂಸ್ಕೃತ ಪದಗಳ ಬಗ್ಗೆ ದ್ವೇಷ ಎನ್ನುವುದಾದರೆ ಏನೆಂದು ಹೇಳುವುದು? ಕನ್ನಡದ ಪದಗಳನ್ನು ಕನ್ನಡಿಗರಲ್ಲದೇ ಮತ್ತೊಬ್ಬರಂತೂ ಹುಟ್ಟುಹಾಕುವುದಿಲ್ಲವಲ್ಲಾ? ಹಾಗಾಗಿ ನಾವು ಹೊಸಪದಗಳನ್ನು ಕನ್ನಡದಲ್ಲಿ ಕಟ್ಟಿದರೆ ಅದರಿಂದ ತೊಡಕೇನು? ವಿದ್ಯುನ್ಮಾನ ಅಂಚೆಗೆ ಮಿಂಚೆಯೆಂಬ ಪದ ಕಟ್ಟಿ ಕೊಟ್ಟದ್ದು ಬನವಾಸಿ ಬಳಗದ ಕಿರಣಣ್ಣ ಅವರು. ಹಾಗೆಯೇ ಗ್ರೀಸ್ ಎಂಬುದಕ್ಕೆ ಕೀಲ್ಬೆಣ್ಣೆಯೆಂದೂ, ನಿಮ್ನ ದರ್ಪಣ, ಪೀನ ದರ್ಪಣಗಳಿಗೆ ಉಬ್ಬುಗನ್ನಡಿ, ತಗ್ಗುಗನ್ನಡಿ ಎಂಬ ಪದಗಳನ್ನು ಕಟ್ಟಿಕೊಟ್ಟವರು ಹೇಗೆ ಸಂಸ್ಕೃತ ದ್ವೇಷಿಗಳಾಗಿ ಬಿಡುತ್ತಾರೆ ಎಂಬುದಷ್ಟೇ ನನ್ನ ಕಳಕಳಿ. ನನ್ನ ಅರಿವಿನಂತೆ ಕನ್ನಡದ್ದೇ ಆಗಿರುವ ಸಂಸ್ಕೃತ ಮೂಲದ ಸಾವಿರಾರು ಪದಗಳನ್ನು ಬದಲಿಸುವ ಚಳವಳಿಯನ್ನು ಯಾರೂ ಮಾಡುತ್ತಿಲ್ಲ. ಇಲ್ಲಿ ಕಮೆಂಟು ಬರೆದ ಕೆಲ ಗೆಳೆಯರು ಉಂಕಿಸು, ಬೊಟ್ಟು ಮುಂತಾದ ಕನ್ನಡದ್ದೇ ಪದಗಳನ್ನು ಬಳಸುತ್ತಿರುವುದು ನನಗೆ ತಪ್ಪೆಂದು ಅನಿಸುವುದಿಲ್ಲ. ಕನ್ನಡದ್ದೇ ಪದಗಳನ್ನು ಕಟ್ಟುವ ಕೆಲಸವದು ಎನಿಸುತ್ತದೆ. ನಿಮಗೆ ಅದು ಕಷ್ಟದ್ದೆನಿಸಿದರೆ ಬಿಡಿ, ಬಳಸಬೇಡಿ. ಮಿಂಚೆ ಎಂಬ ಪದವೂ ಹಾಗೇ. ಮಿಂಚೆ ಮತ್ತು ಮಿಂಚಂಚೆ ಎಂಬ ಎರಡು ಪದಗಳನ್ನು ಒಟ್ಟೊಟ್ಟಿಗೆ ಬಳಕೆಗೆ ತರಲಾಯಿತು. ಆದರೂ ಜನ ಒಪ್ಪಿದ್ದರಿಂದ ಮಿಂಚೆ ಬಳಕೆಗೆ ಬಂತು. ಹೀಗಾಗಿದ್ದು ಸಂಸ್ಕೃತ ದ್ವೇಷದಿಂದ ಕನ್ನಡ ಮೂಲದ್ದನ್ನು ಹುಟ್ಟಿಸಿ ಜನರ ಮೇಲೆ ಹೇರಿದ ಅಭಾಸದಿಂದಲ್ಲವಷ್ಟೇ? ನಿಜವಾಗಿಯೂ ಯಾರಾದರೂ ಸಂಸ್ಕೃತವನ್ನೋ ಮತ್ತೊಂದು ನುಡಿಯನ್ನೋ ದ್ವೇಷಿಸಿ, ಆ ಕಾರಣಕ್ಕಾಗಿ ಜನರ ನುಡಿಯಲ್ಲಿ ಬಳಕೆಯಲ್ಲಿರುವ ಪದಗಳನ್ನು ಬದಲಿಸುತ್ತೇನೆ ಎನ್ನುವುದೇ ಪ್ರಜಾಪ್ರಭುತ್ವದಲ್ಲಿ ಹಾಸ್ಯಾಸ್ಪದ ವಿಷಯ. ನೀವನ್ನುವಂತೆ ಮೂರ್ಖತನದ್ದು. ಆದರೆ ಕನ್ನಡಪದಗಳನ್ನು ಕಟ್ಟುವ ಬಗ್ಗೆ ಹಾಗೆಂದರೆ ಅದು ಸಲ್ಲದ ಅಸಹನೆ ಎನಿಸುತ್ತದೆ.
    ಕನ್ನಡಕ್ಕೆ ಅನೇಕ ರೂಪ ಹರವುಗಳಿವೆ ಎನ್ನುವುದು ಕನ್ನಡ ಆಡುವುದರಲ್ಲಿ ತಾನೇ? ಸಂಸ್ಕೃತ ಓದಬೇಕಾದವರು ಮುಂದೆ ಮಹಾಪ್ರಾಣ ಅಕ್ಷರಗಳನ್ನು ಬಳಸುವುದನ್ನು ಕಲಿಯುತ್ತಾರೆ ಎನ್ನುವುದಕ್ಕೆ ಭರತಣ್ಣನಂತಹ, ಮಾಯ್ಸಣ್ಣನಂತಹ ಉತ್ಸಾಹಿಗಳು ಕನ್ನಡದ್ದೇ ಮೂಲದ ಪದ ಬಳಸುವುದರಲ್ಲಿ ಹೆಮ್ಮೆ ಹೊಂದಿದ್ದು ಅವನ್ನು ಬಳಸುತ್ತಿದ್ದರೆ ನೀವು ಸರಳವಾದ ಸಂಸ್ಕ್ರುತ ಪದಕ್ಕೂ ಕನ್ನಡ ಮೂಲದ ಪದ ಬಳಸುವುದು ಉಗ್ರವಾದ ಎಂದರೇನು ಮಾಡೋದು? ಹೀಗೆ ಪದ ಕಟ್ಟುವ, ಬಳಸುವ ಸ್ವಾತಂತ್ರ್ಯವೇ ಇರಬಾರದೇ? ನಿಜಕ್ಕೂ ಅವರುಗಳು ಬಳಸಿದ ಎಷ್ಟೋ ಪದಗಳು ನನಗೆ ಅರ್ಥವಾಗುತ್ತಿಲ್ಲ. ಆದರೆ ಹಾಗೆ ಅವರು ಪದ ಬಳಸುವುದನ್ನು ತಪ್ಪೆನ್ನಲಾಗದು ಎನ್ನುವುದು ನನ್ನ ನಿಲುವು.
    ಮಾನಧನನಾದ ಸುಯೋಧನ ಎನ್ನುವುದನ್ನು, ಮಾನದನನಾದ ಸುಯೋದನ ಎಂದು ಕನ್ನಡಿಗರು ಉಲಿಯುವುದೇ ನಿಮಗೆ ಅಸಹ್ಯವೆನಿಸದಿದ್ದಾಗ ಹಾಗೆ ಬರೆಯುವುದು ಅಸಹ್ಯವೆಂದರೆ ಏನೆಂದು ಅರ್ಥ ಮಾಡಿಕೊಳ್ಳುವುದು ತಿಳಿಯುತ್ತಿಲ್ಲ. ಬಹುಷಃ ಮಹಾಪ್ರಾಣಗಳಿಲ್ಲದ ಕನ್ನಡವನ್ನು ಕೇಳಲು ಓಕೆ, ನೋಡಲು ಆಗಲ್ಲಾ ಎಂದೇ? ನೀವು ತೋರಿಸಿಕೊಟ್ಟಿರುವ ಬರಹದಲ್ಲಿನ ತಪ್ಪುಗಳು ಏಕಾಗುತ್ತೆವೆ ಎಂದರೆ ಎಲ್ಲಿ ಮಹಾಪ್ರಾಣ ಬರೆಯಬೇಕೆಂದು ಗೊತ್ತಿಲ್ಲದೇ ಇದ್ದಾಗ. ಯಾಕೆ ಗೊತ್ತಾಗಲ್ಲಾ ಎಂದರೆ ಉಲಿಕೆಯಲ್ಲಿಲ್ಲದಿದ್ದರು ಬರಹದಲ್ಲಿ ಇರಬೇಕೆಂಬ ಕಟ್ಟುಪಾಡಿದ್ದಾಗ. ಹಾಗಾಗಿ ಉಲಿದಂತೆ ಬರೆಯುವುದು ಸಹ್ಯವಾಗುವುದಾದರೆ ಸುಯೋದನನೂ ಸಹ್ಯನೇ ಆಗುತ್ತಾನೆ ಎನ್ನುವುದು ನನ್ನ ಅನಿಸಿಕೆ.
    ಇಷ್ಟಕ್ಕೂ ಒಂದು ಪದವನ್ನು ಹೀಗೇ ಉಲಿಯಬೇಕು ಎನ್ನುವ ಕಟ್ಟುಪಾಡು ಇರುವುದು, ಇರಬೇಕಾದ್ದು ಸಹಜ ಎಂಬುದು ಸರಿಯೇ. ಆದರೆ ಹೆಚ್ಚಿನ ಸಂದರ್ಭದಲ್ಲಿ ಪದಗಳ ಕಲಿಕೆ ಆಗುವುದು ಮಾತಿನಲ್ಲಿ ಬಳಸುವುದರಿಂದ. ಮಾತಿನಲ್ಲಿ ಮಹಾಪ್ರಾಣ ಮಾತಿನಲ್ಲಿ ಇಲ್ಲದಿದ್ದಾಗ ಬರಹದಲ್ಲೂ ಇರದಿದ್ದರೆ ಅದು ಸರಿಯಾದದ್ದೇ ಅನ್ನುವುದು ನನ್ನ ನಿಲುವು. (ಉದಾಹರಣೆಗೆ ರ, ಳ ಬಗ್ಗೆ ನೀವು ಭರತಣ್ಣ ನಡೆಸಿದ ಸಂವಾದ)
    ಕನ್ನಡದಲ್ಲಿಯೇ ವೈದ್ಯದಿಂದ ರಾಕೆಟ್ಟಿನವರೆಗೂ ಕಲಿಸಬೇಕೆನ್ನುವವರು ಕನ್ನಡ ಲಿಪಿಯನ್ನು ಕಲಿಯುವಲ್ಲಿ ಮಕ್ಕಳಿಗೆ ಗೊಂದಲ ಬೇಡವೆಂಬ ಕಾರಣಕ್ಕಾಗಿಯೇ, ಕಲಿಕೆಯಲ್ಲಿ ಉಲಿದು ತೋರಿಸಲಾಗದೆ ದೊಡ್ಡ ಪ – ಚಿಕ್ಕ ಪ, ದೊಡ್ಡ ಬ – ಚಿಕ್ಕ ಬ, ಶಂಕು ಶ – ಪಟ್ಟೆ ಷ ಎಂಬ ತಪ್ಪಾದ ಪಾಠ ಬೇಡವೆಂದೆ ಶಂಕರಬಟ್ಟರ ಈ ನಿಲುವನ್ನು ಒಪ್ಪಿರುವುದು. ಗೊಂದಲವಿಲ್ಲದೆ ಮೊದಲ ಪಾಠ ಕಲಿತ ಮಕ್ಕಳು ಮುಂದೆ ಸಲೀಸಾಗಿ ತಾವು ಮಹಾಪ್ರಾಣ ಉಲಿಯುವಾಗ ಎರಡರ ನಡುವಿನ ವ್ಯತ್ಯಾಸವನ್ನು ಉಲಿಯಲ್ಲೂ ಬರಹದಲ್ಲೂ ತೋರಿಸಬಲ್ಲವರಾಗುತ್ತಾರೆ. ಇನ್ನು ಸಂಸ್ಕೃತ ಕಲಿಯುವ ಮಕ್ಕಳು ದೇವನಾಗರಿಯಲ್ಲೇ ಕಲಿತರೆ ಅದವರ ಸೌಕರ್ಯ, ಆದರೆ ಕನ್ನಡದ ಲಿಪಿಯಲ್ಲಿ ಬರೆಯುವವರಿಗೆ, ಓದುವವರಿಗೆ ಈ ಪದ್ಧತಿ.

    ಉತ್ತರ
    • ಶುಭಶ್ರೀಯವರೇ,

      ಕನ್ನಡ ನೆಲದ ವ್ಯಾಪ್ತಿ ನೀವು ನಿರೂಪಿಸಿದ್ದು ಒಳ್ಳೆಯದಾಯಿತು. ನಮ್ಮೂರು ಕೊಳ್ಳೇಗಾಲ. ನಮ್ಮ ಇಂದಿನ ಕರ್ನಾಟಕ ರಚನೆಯಾಗುವವರೆಗೂ ತಮಿಳುನಾಡು ಪ್ರಾಂತ್ಯಕ್ಕೆ ಸೇರಿತ್ತು ಅದು. ಇವತ್ತಿಗೂ ಅಲ್ಲಿ ಸ್ಥಳೀಯ ತಮಿಳರು, ತೆಲುಗು ಮಾತಾಡುವ ಶೆಟ್ಟರು ಮತ್ತು ದೇವಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. “ಇಂದಿನ ಕರ್ನಾಟಕ” ರಚನೆಯಾದಾಗ, *ನಾನು* ವಲಸೆ ಬರದಿದ್ದರೂ ನನ್ನ ಊರೇ ತಮಿಳುನಾಡಿನಿಂದ ಕನ್ನಡನಾಡಿಗೆ ವಲಸೆಬಂತು. ಆ ಕಾರಣಕ್ಕೆಲ್ಲಾದರೂ ನಾನು ತಮಿಳು ಮೂಲದವನೆಂದು ಇಲ್ಲಿ ಮಾತಾಡುವ ಹಕ್ಕಿಗೆ ಎರವಾಗಿಬಿಡುತ್ತೇನೋ ಎಂದು ತುಸು ಕಳವಳವಾಗಿತ್ತು (ಕ್ಷಮಿಸಿ, ಇದು ನಿಮ್ಮನ್ನು ಕುರಿತ ವೈಯಕ್ತಿಕ ವ್ಯಂಗ್ಯ ಖಂಡಿತ ಅಲ್ಲ, ನಿಮಗಿದು ಗೊತ್ತು ಎಂದು ತಿಳಿಯುವೆ), ಮುಂದುವರೆಯೋಣ.

      ನಿಮ್ಮ “ಕನ್ನಡಿಗರ” ಅರ್ಥೈಸುವಿಕೆಯಲ್ಲಿ, ಇಡೀ ಕನ್ನಡ ನಾಡಿನ ಎಲ್ಲ ಪಂಗಡಗಳ, ಎಲ್ಲ ಎತ್ತರಗಳ ಕನ್ನಡ ಜನಪದ ಸೇರಿದೆ ಎಂದಾಯಿತು. ವಿವರಿಸಿ ಹೇಳುವುದಾದರೆ ಇದರಲ್ಲಿ ಮರಾಠಿ ಪ್ರಭಾವದ ಮುಂಬೈ ಕನ್ನಡಿಗರು, ತುಳು ಪ್ರಭಾವದ ಮಂಗಳೂರು ಕನ್ನಡಿಗರು, ತೆಲುಗು ಪ್ರಭಾವದ ಹೈದರಾಬಾದು ಕನ್ನಡಿಗರು, ತಮಿಳು ಪ್ರಭಾವದ ದಕ್ಷಿಣ ಮೈಸೂರು ಕನ್ನಡಿಗರು, ಅಷ್ಟೇನು ಪ್ರಭಾವಗಳಿರದ ಬಾಕಿ ಮೈಸೂರು ಕನ್ನಡಿಗರು ಎಲ್ಲ ಸೇರಿದ್ದಾರೆಂದಾಯಿತು; ಹಾಗೆಯೇ ಇಂಗ್ಲಿಷ್ ಬೆರಕೆಯ ಕಾನ್ವೆಂಟ್ ಕನ್ನಡಿಗರು, ಬೆರಕೆ ಇಂಗ್ಲಿಷಿನ ನಗರ ಕನ್ನಡಿಗರು, ಸಹಜ ಕನ್ನಡದ ಹಳ್ಳಿ ಕನ್ನಡಿಗರು; ಹಾಗೆಯೇ ಸಂಸ್ಕೃತದ ಪ್ರಭಾವದ ಬ್ರಾಹ್ಮಣ ಕನ್ನಡಿಗರು, ಅವರನ್ನು ಬಹುಪಾಲು ಅನುಸರಿಸುವ ಇತರ ಜಾತಿ ಕನ್ನಡಿಗರು, ಉರ್ದೂ ಪ್ರಭಾವವಿರುವ ಮುಸ್ಲಿಂ ಕನ್ನಡಿಗರು, ತಮಿಳು ಪ್ರಭಾವದ ಸಂಕೇತಿ ಕನ್ನಡಿಗರು, ಗ್ರಾಮ್ಯ ಕನ್ನಡದ ಇತರ ವರ್ಗದ ಕನ್ನಡಿಗರು; ಹಾಗೆಯೇ ಶ್ರೀಮಂತ ಕನ್ನಡಿಗರು, ಬಡ ಕನ್ನಡಿಗರು; ಮತ್ತು ಹಾಗೆಯೇ ತುಸು ಹೆಚ್ಚು ವಿದ್ಯಾವಂತ ಕನ್ನಡಿಗರು, ತುಸು ಕಡಿಮೆ ವಿದ್ಯಾವಂತ ಕನ್ನಡಿಗರು, ಅವಿದ್ಯಾವಂತ ಕನ್ನಡಿಗರು… ಇವರೆಲ್ಲ ಸೇರಿರುವರೆಂದಾಯಿತು. ಜಾತಿಯ ಮಾತಾಡಿದೆನೆನ್ನದಿರಿ, ಇದನ್ನು ಇಲ್ಲಿ ಯಾಕೆ ಹೇಳಿದೆನೆಂದರೆ ಇವರೆಲ್ಲರ ಕನ್ನಡವೂ ಒಂದೇರೀತಿಯದಲ್ಲ. ನಾನು ಮೇಲೆ ಹೇಳಿದ ಒಂದೊಂದು ಪಂಗಡವೂ, ಒಂದೊಂದು ಮಟ್ಟವೂ ಒಂದೊಂದುರೀತಿಯ ಕನ್ನಡ ಮಾತಾಡುತ್ತದೆ, ಕೆಲವೊಮ್ಮೆ ತುಸುವೇ ವ್ಯತ್ಯಾಸ, ಆದರೆ ಮತ್ತೆ ಕೆಲವೊಮ್ಮೆ ವ್ಯತ್ಯಾಸ ಎಷ್ಟೆಂದರೆ ಒಬ್ಬರ ಕನ್ನಡ ಇನ್ನೊಬ್ಬರಿಗೆ ಅರ್ಥವೇ ಆಗದಷ್ಟು! ಇದರ ಮತ್ತೊಂದು ಆಯಾಮ, ಒಂದೇ ವ್ಯಕ್ತಿ ವಿವಿಧ ಸಂದರ್ಭದಲ್ಲಿ ವಿವಿಧ ಶೈಲಿ ಬಳಸುತ್ತಾನೆ. ವರದಿಗಳಲ್ಲಿ ಬಳಸುವ ಕನ್ನಡವು ಸಾಹಿತ್ಯದಲ್ಲೂ, ಸಾಹಿತ್ಯದಲ್ಲಿ ಬಳಸುವ ಕನ್ನಡವು ಕಾನೂನಿನಲ್ಲೂ ಬಳಕೆಗೆ ಬರುವುದಿಲ್ಲ. ಇವತ್ತು ನಾವು ಮಾತಾಡುತ್ತಿರುವ ಕನ್ನಡಿಗ ಶ್ರೀಸಾಮಾನ್ಯ, ಇವೆಲ್ಲವನ್ನೂ ಒಳಗೊಂಡವನು (ವ್ಯತ್ಯಾಸಗಳ ಉದ್ದ-ಅಗಲ, ಏರು-ತಗ್ಗುಗಳನ್ನೊಳಗೊಂಡ ಮೂರಾಯಾಮ (3d) ಗಮನಿಸಿ). ಈಗ ಹೇಳಿ, ಇವೆಲ್ಲ ಅಜಗಜಾಂತರ ವ್ಯತ್ಯಾಸಗಳನ್ನು ವೈವಿಧ್ಯಗಳನ್ನು ಪುಸ್ತಕದ ಭಾಷೆಯ ಒಂದು ಏಕಸೂತ್ರದಲ್ಲಿ ಕಟ್ಟಿಹಾಕಲಾಗುವುದೋ? ಪ್ರತಿಯೊಂದೂ ಅದರದರ ಮಟ್ಟಕ್ಕೆ ಸರಿಯೇ ಸರಿ. ನಮ್ಮ ಮಿತ್ರರು ಹೇಳುವಂತೆ ಅದು ತಪ್ಪೆಂದು “ಕೀಳರಿಮೆ ಬೆಳೆಸುವ” ಪ್ರಯತ್ನಗಳನ್ನು ನಾನಂತೂ ಕಾಣೆ. ಆದರೆ ಪ್ರಶ್ನೆ, ಕಲಿಯುವಿಕೆ/ಕಲಿಸುವಿಕೆ/ವಿಷಯಗಳಲ್ಲಿ ಏಕರೂಪತೆಯಿರದೇ ಕೇವಲ ಇವಿಷ್ಟೂ ರೂಪಗಳು ಸರಿಯೆಂದು ಒಪ್ಪಿದ ಮಾತ್ರಕ್ಕೆ ಅವಷ್ಟನ್ನೂ ಶಾಲೆಯಲ್ಲಿ ಕಲಿಸಲು ಸಾಧ್ಯವೇ? ಹಾಗೆಂದರೆ ಶಾಲೆಯಲ್ಲಿ ಏನನ್ನೂ ಕಲಿಸದೇ ಬಿಟ್ಟುಬಿಡಬೇಕೇ? ಹಾಗಿದ್ದಲ್ಲಿ ಪ್ರಾದೇಶಿಕ ಮಟ್ಟದ ವೈವಿಧ್ಯವನ್ನು ಒಪ್ಪುವ ನೀವು ವೈಯಕ್ತಿಕ ವೈವಿಧ್ಯವನ್ನೂ ಒಪ್ಪಬೇಕು. ಒಂದೇ ಪ್ರದೇಶದವರಾದರೂ ನನ್ನಂತೆ ನನ್ನ ಗೆಳೆಯ ಮಾತಾಡುವುದಿಲ್ಲ. ನಾವಿಬ್ಬರು ಮಾತಾಡುವುದೂ ನಮ್ಮ ನಮ್ಮ ಮಟ್ಟಕ್ಕೆ ಸರಿಯೇ, ಆದರೆ ಹಾಗೆಂದು ನಮ್ಮ ಗುರುಗಳು ನಮ್ಮಿಬ್ಬರಿಗೂ “ನಮ್ಮನಮ್ಮ” ಕನ್ನಡವನ್ನೇ ಕಲಿಸಬೇಕೇ? ನನ್ನದೇ ಸರಿಯೆಂದಾದಲ್ಲಿ ಇನ್ನು ನನಗೇ ಗೊತ್ತಿರುವ ಕನ್ನಡವನ್ನು ನನಗೆ ಕಲಿಸುವುದಾದರೂ ಏನು ಬಂತು? ಹಾಗಿದ್ದಲ್ಲಿ ಶಾಲೆಯೇಕೆ ಶಿಕ್ಷಕರೇಕೆ? ಅದೇ ವಾದವನ್ನು ಮತ್ತೂ ಹಿಗ್ಗಲಿಸಿದರೆ, ಒಂದು ಮಗು ಆರು ಮೂರು ಒಂಬತ್ತು ಎನ್ನುತ್ತದೆ, ಮತ್ತೊಂದು ಮಗು ಆರು ಮೂರು ಅರವತ್ಮೂರು ಅನ್ನುತ್ತದೆ. ಅವರವರ ದೃಷ್ಟಿಯಲ್ಲಿ ಇಬ್ಬರೂ ಸರಿಯೇ? ಆರು ಮತ್ತು ಮೂರರ ನಡುವೆ ನಡೆಯುವ ಕ್ರಿಯೆಯನ್ನು ಹೇಳಿಕೊಡಬೇಡವೇ?

      ಆದ್ದರಿಂದ ನಾನು ಹೇಳಹೊರಟಿದ್ದು; ಆಯಾ ಪ್ರದೇಶ/ಜನಪದ/ಜಾತಿ/ಪಂಗಡ/ಮಟ್ಟಗಳ ದೃಷ್ಟಿಯಿಂದ ಅವವುಗಳ ಕನ್ನಡ ಸರಿಯೇ, ಅದನ್ನು ಯಾರೂ ಅಲ್ಲಗಳೆದಿಲ್ಲ. ಆದರೆ ಇಡೀ ಕರ್ನಾಟಕಕ್ಕೆ ಕಲಿಕೆಯಲ್ಲಿ ಒಂದು ಏಕರೂಪತೆ (standard) ಇರಬೇಕಾಗುತ್ತದೆ. ಆಗ ಈ standard ರೂಪ ಎಲ್ಲ ಆಡುಭಾಷೆಯ ಪ್ರಕಾರಗಳನ್ನು ಹೋತಿದ್ದೂ ಅವುಗಳಿಂದ ಭಿನ್ನವೂ ಆಗಿರಬೇಕಾದ್ದು ಅನಿವಾರ್ಯವಾಗುತ್ತದೆ. ನಮ್ಮ ಗೆಳೆಯರು ತೋರಿಸಿಕೊಟ್ಟಂತೆ, ಹುಬ್ಬಳ್ಳಿ ಕಡೆಯವರು ಹಾಂವು ಎನ್ನುತ್ತಾರೆ, ನಾವು ಹಾವು ಅನ್ನುತ್ತೇವೆ, ಮತ್ತೆ ಕೆಲವರು ಪಾಂಪು ಎನ್ನುತ್ತಾರೆ. ಅದರೆ ಕಲಿಯುವವನು ಇದೆಲ್ಲವನ್ನೂ ಬರೆದು ಓದಿ ಕಲಿಯುವುದು ಅಶಕ್ಯ.ಕೇವಲ ಐವತ್ತು ಅಕ್ಷರಗಳ ಹೊರೆಗೆ ತಿಣುಕಾಡುವ ನಾವು ಪದವೊಂದೊಂದರ ಈ ಎಲ್ಲಾ ಪ್ರಕಾರಗಳನ್ನೂ ಕಲಿಯಿರೆಂದರೆ ಸತ್ತೇಹೋಗುತ್ತೇವೋ ಏನೊ. ಆದ್ದರಿಂದ ಹಾವು ಎನ್ನುವ standard ರೂಪವನ್ನು ಕಲಿಸುತ್ತೇವೆ, ಅದನ್ನೇ ಬರೆಯುತ್ತೇವೆ. ಆದರೆ ಮಾತಿನ ಮಟ್ಟದಲ್ಲಿ ನಮ್ಮ ಉಚ್ಚಾರಣೆ ಸ್ಥಳೀಯವೇ ಆಗಿರುತ್ತದೆ (ಹಾಂವು, ಪಾಂಪು ಇತ್ಯಾದಿ). ಅರ್ಥವೇ ಆಗದಷ್ಟು ವಿವಿಧ ರೂಪಗಳನ್ನು ಹೊಂದಿರುವ ನಮ್ಮ ಬಳಕೆಯಲ್ಲಿ ಇದೊಂದು ರೀತಿಯ standard ರೂಪವಿರುವುದು ವಿವಿಧ ಕನ್ನಡ ಗುಂಪುಗಳೊಳಗೆ ಉತ್ತಮ ಸಂವಹನವಾಗಿಯೂ ಸಹಾಯಕಾರಿ. ಹೀಗೊಂದು standard ರೂಪವೆಂದಾದಲ್ಲಿ ಅದಕ್ಕೊಂದು ಕಟ್ಟು ನಿಯಮಗಳೂ ಇರಬೇಕಾಗುತ್ತದೆ, ಕಲಿಯುವವನು ಆ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅದನ್ನು ಮೀರಿದರೆ “ತಪ್ಪು” ಎನ್ನಲಾಗುತ್ತದೆ, ಅದು ಸಹಜವೇ. ಆದರೆ ಗಮನಿಸಿ ಈ “ತಪ್ಪು” ಕಲಿಕೆಯ ದೃಷ್ಟಿಯಿಂದಷ್ಟೇ ವಿನಾ ಸ್ಥಳೀಯ ಭಾಷೆಯ ದೃಷ್ಟಿಯಿಂದಲ್ಲ. ಇದೇ ದೃಷ್ಟಿಯಿಂದಲೇ “ಮಾದೇವಿ” ಬಳಕೆಯ ದೃಷ್ಟಿಯಿಂದ ಸರಿಯಾದರು ಕಲಿಕೆಯ ದೃಷ್ಟಿಯಿಂದಲ್ಲ. ಇದೇ ಕಾರಣಕ್ಕೇ ಬ್ರಮ್ಹ ಎಂದು ಉಲಿಯುವುದು ಸರಿಯೆಂದಾದರೂ ಬರೆಯುವುದು ತಪ್ಪೆನ್ನಲಾಗುತ್ತದೆ. ಈ ರೀತಿ ಕಲಿಕೆಯಲ್ಲಿ ಮೇಷ್ಟ್ರು ಮಾಡಬೇಕಾದ್ದಿಷ್ಟೇ. “ನೋಡ್ರೋ, ಬ್ರಮ್ಹ ಅಂತ ಬಳಕೆಯಲ್ಲಿ ಬಂದಿದೆ, ಆದ್ದರಿಂದ ಅದು ಸರಿಯೇ, ಆದರೆ ಅದರ original ಬಳಕೆ ಬ್ರಹ್ಮ ಅಂತ. ಹಾಗೇ ಹೇಳಬೇಕು, ಬರೆಯಬೇಕು ಅಂತ” ಕಲಿಯುವವನು ಬ್ರಹ್ಮ ಎಂದು ಕಲಿತರೆ ಆಯಿತು. ಅವನು ಬ್ರಮ್ಹ ಅಂದರೂ ಅಡ್ಡಿಯಿಲ್ಲ. ಅಷ್ಟೇಕೆ, ಬ್ರಹ್ಮ ಅನ್ನೋದು ಬೊಮ್ಮ ಆಗಿ ಬಳಕೆಯಲ್ಲಿದೆ, ಅದನ್ನು ಒಪ್ಪಿದ್ದೇವೆ ಕೂಡ. ನಿದ್ರೆ, ನಿದ್ದೆ ಎರಡೂ ರೂಪಗಳೂ ಕನ್ನಡದಲ್ಲಿ ಮಾತು ಬರಹಗಳೆರಡರಲ್ಲೂ ಬಳಕೆಯಲ್ಲಿದೆಯಾದ್ದರಿಂದ ನಿದ್ರೆ ಮತ್ತು ನಿದ್ದೆ ಎರಡೂ ಸರಿ, ಬಳಕೆಯಲ್ಲೂ ಬರಹದಲ್ಲೂ.

      “ಕನ್ನಡದ ಜಾಯಮಾನಕ್ಕೆ ಒಗ್ಗಿಸುವುದನ್ನು ಒಪ್ಪಲ್ಲ ಅಂದಿರಿ” – ಹೌದು. ಯಾವುದನ್ನೂ ಪ್ರಯತ್ನಪಟ್ಟು “ಒಗ್ಗಿಸುವುದು” ಭಾಷೆಯ ದೃಷ್ಟಿಯಿಂದ ಅಭಾಸ. ನೀವು ಗಮನಿಸುವಿರಾದರೆ, ನಿಮ್ಮದೇ ಉದಾಹರಣೆಯ ನಿದ್ದೆ, ಬಸ್ಸು, ಬ್ರಮ್ಹ ಇವಾವುದೂ ಜನ ಪ್ರಯತ್ನಪಟ್ಟು “ಒಗ್ಗಿಸಿ”ದ್ದಲ್ಲ. ಹೀಗೆ ಯಥಾಸಹಜವಾಗೇ ಬರುವ “ಒಗ್ಗುವಿಕೆ”ಗಳನ್ನು ಯಾವತ್ತೂ ಯಾರೂ ವಿರೋಧಿಸಿಲ್ಲ, ಹಾಗೊಂದುವೇಳೆ ವಿರೋಧಿಸಿದ್ದರೂ ಆ ವಿರೋಧಗಳೇ ನಿಂತಿಲ್ಲ. ಆದ್ದರಿಂದ “ಕನ್ನಡದ ಪದಗಳನ್ನು ಹುಟ್ಟುಹಾಕುವುದೇ ಸಂಸ್ಕೃತ ಪದಗಳ ಬಗ್ಗೆ ದ್ವೇಷ” ಎಂಬುದು ನನ್ನ ಅಭಿಪ್ರಾಯವಲ್ಲ, *ಇದು ನನ್ನ ಸ್ಪಷ್ಟೀಕರಣ*. ಮಿಂಚಂಚೆ, ಮಿಂಚೆ, ಮಿನ್ನೋಲೆ, ಕೀಲ್ಬೆಣ್ಣೆ ಈ ರೀತಿ ಹೊಸ ಪ್ರಯೋಗಗಳನ್ನು ನಾನೆಂದೂ ವಿರೋಧಿಸಿಲ್ಲ.. ಹಾಗೆಯೇ “ನಿಮ್ನ ದರ್ಪಣ, ಪೀನ ದರ್ಪಣಗಳಿಗೆ ಉಬ್ಬುಗನ್ನಡಿ, ತಗ್ಗುಗನ್ನಡಿ ಎಂಬ ಪದಗಳನ್ನು ಕಟ್ಟಿಕೊಟ್ಟವರು ಹೇಗೆ ಸಂಸ್ಕೃತ ದ್ವೇಷಿಗಳಾಗಿ ಬಿಡುತ್ತಾರೆ” ಎಂಬ ನಿಮ್ಮ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ, ಏಕೆಂದರೆ ಉಬ್ಬುಗನ್ನಡಿ ತಗ್ಗುಗನ್ನಡಿಗಳು ಪೀನ/ನಿಮ್ನ ದರ್ಪಣಗಳಿಗಿಂತ ಉತ್ತಮ ಅನುವಾದಗಳೆಂಬುದರಲ್ಲಿ ನನಗಂತೂ ಸಂದೇಹವೇ ಇಲ್ಲ. ಅದನ್ನು ನಾನಂತೂ ವಿರೋಧಿಸಿಲ್ಲ. ನನಗನ್ನಿಸುತ್ತದೆ, ಯಾವುದರಲ್ಲಿ ನನಗೂ ವಿರೋಧವಿಲ್ಲವೋ ಅದನ್ನೇ ಮೇಲೆತ್ತಿ ನನ್ನ ವಿರೋಧವಿದೆಯೆಂದು ನೀವು ಅಂದುಕೊಳ್ಳುತ್ತಿದ್ದೀರಿ. *ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ*, ಹೊಸಹೊಸ ಪದ ಬಳಕೆಯನ್ನು (ಅದರಲ್ಲೂ ಅದು ಕನ್ನಡದ್ದೇ ಆಗಿರುವಾಗ) ನಾನು ಯಾವತ್ತೂ ವಿರೋಧಿಸಿಲ್ಲ. ಹೆಚ್ಚೆಂದರೆ ಅದರ ಅರ್ಥ, ಔಚಿತ್ಯಗಳ ಬಗ್ಗೆ ಚರ್ಚಿಸುತ್ತೇನಷ್ಟೇ. ಆದರೆ ನನ್ನ ವಿರೋಧ ಯಾವುದಕ್ಕೆಂದರೆ, ಈಗಾಗಲೇ ಜನಪ್ರಿಯವಾಗಿ ಬಳಕೆಯಲ್ಲಿರುವ ಪದಕ್ಕೆ ನೀವು ಅಷ್ಟೇನೂ ಜನಪ್ರಿಯವಲ್ಲದ ಪದ ಬಳಕೆಗೆ ತಂದು *ಅದನ್ನೇ ಬಳಸಿರೆಂದು ಹಟ ಹಿಡಿದಾಗ*, ಮತ್ತು ಇರುವ ಪದಗಳಿಗಿಂತಾ ಈ ಹೊಸ ಪದಗಳೇ ಹೆಚ್ಚು ಸೂಕ್ತವೆಂದು ಸಾಧಿಸಹೊರಟಾಗ. ಇರುವ ಪದಗಳ ಬಗ್ಗೆ ನಾನು ವಕಾಲತ್ತು ವಹಿಸಲು ಒಂದೇ ಕಾರಣ, ಅದರ ಬಳಕೆಯ ಸೌಲಭ್ಯ. ಅದು ಕಾಲದಿಂದ ಬಳಕೆಯಲ್ಲಿದೆ, ಸಹಜ ಹರಿವಿದೆ, ಜನಕ್ಕೆ ಅರ್ಥವಾಗುತ್ತದೆ. ಹೊಸ ಪದಗಳು ಬಂದರೆ ಬರಲಿ, ಇರುವ ಪದಗಳೊಡನೆ ಬಾಳಲಿ, ಅದಕ್ಕೆ ನಿಲ್ಲುವ ಯೋಗ್ಯತೆಯಿದ್ದರೆ ನಿಲ್ಲುತ್ತದೆ. ಅದು ಕಾಲಕ್ರಮದಲ್ಲಿ (ರಾತ್ರೋರಾತ್ರಿ ಅಲ್ಲ) ಜನಪ್ರಿಯವಾದರೆ ಸಂತೋಷ. ಅದರಿಂದ ಈಗಿರುವ ಬಳಕೆ ತೆರೆಮರೆಗೆ ಸರಿದರೆ (ಸಹಜವಾಗಿ, ನಿಧಾನವಾಗಿ) ನನಗಾವ ದುಃಖವೂ ಇಲ್ಲ. ಬಹುಶಃ ನಿಮ್ಮ ಅಭಿಪ್ರಾಯವೂ ಅದೇ ಎಂದು ತೋರುವುದು “ನಿಜವಾಗಿಯೂ ಯಾರಾದರೂ ಸಂಸ್ಕೃತವನ್ನೋ ಮತ್ತೊಂದು ನುಡಿಯನ್ನೋ ದ್ವೇಷಿಸಿ, ಆ ಕಾರಣಕ್ಕಾಗಿ ಜನರ ನುಡಿಯಲ್ಲಿ ಬಳಕೆಯಲ್ಲಿರುವ ಪದಗಳನ್ನು ಬದಲಿಸುತ್ತೇನೆ ಎನ್ನುವುದೇ ಪ್ರಜಾಪ್ರಭುತ್ವದಲ್ಲಿ ಹಾಸ್ಯಾಸ್ಪದ ವಿಷಯ. ನೀವನ್ನುವಂತೆ ಮೂರ್ಖತನದ್ದು” – ಆದರೆ ಶುಭಶ್ರೀಯವರೇ ಗಮನಿಸಿ, ಇತರ “ಬದಲಿಗರ” ಅಭಿಪ್ರಾಯವೂ ನಿಮ್ಮಂತೆಯೇ ಎಂದು ನನಗನಿಸುವುದಿಲ್ಲ (ಇದುವರೆಗೆ ನಡೆದಿರುವ ಚರ್ಚೆ ಗಮನಿಸಿ). ಈ ಬದಲಾವಣೆಯ ಕೂಗಿನಲ್ಲಿ ಢಾಳಾಗಿ ಕಂಡುಬರುವ ಅದೊಂದುಬಗೆಯ ದ್ವೇಷ – ಒಂದು ಜಾತಿ, ಜನಾಂಗ, ವರ್ಗ, ಪಂಗಡದ ಬಗ್ಗೆ – ನಿಮ್ಮ ಗಮನಕ್ಕೆ ಬಂದಿಲ್ಲವೆಂದರೆ ಅದು ಆಶ್ಚರ್ಯ. ನಮ್ಮ ವಿರೋಧ ಈ ದ್ವೇಷದಬಗ್ಗೆ. “ಕೇವಲ ಹೊಸ ಪದಗಳನ್ನು ಕಟ್ಟುವುದು ಬಳಸುವುದು “ಉಗ್ರವಾದ”ವೆನ್ನಿಸಿಕೊಳ್ಳುವುದೇ?” ಏನು ಮಾತು ಶುಭಶ್ರೀ, ನಿಮಗೂ ಗೊತ್ತು ನಮ್ಮ “ಉಗ್ರವಾದದ” ಆರೋಪ ಈ ರೀತಿ “ನಿಷ್ಪಾಪಿ” ಭಾಷಾಚಟುವಟಿಕೆಯ ಮೇಲಲ್ಲ ಎಂದು. ಸಂಸ್ಕೃತದ್ದೆಂಬುದೆಲ್ಲವನ್ನೂ – ತನ್ಮೂಲಕ ಒಂದು ಜಾತಿ/ಪಂಗಡದ್ದೆಲ್ಲವನ್ನೂ – ತೊಡೆದುಬಿಡುತ್ತೇನೆ ಅನ್ನುವ ಮೂರ್ಖ ಹಟ ತಮಗೆ ಕಾಣುತ್ತಿಲ್ಲವೇ? ಕಾಣದಿದ್ದರೆ, ಮತ್ತೊಮ್ಮೆ ನಿಲುಮೆಯಲ್ಲಿ ಮತ್ತು ಬೇರೆಲ್ಲ ಕಡೆ ಇದುವರೆಗೆ ನಡೆದಿರುವ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿ.

      “ಕನ್ನಡಕ್ಕೆ ಅನೇಕ ರೂಪ ಹರವುಗಳಿವೆ ಎನ್ನುವುದು ಕನ್ನಡ ಆಡುವುದರಲ್ಲಿ ತಾನೇ? ಸಂಸ್ಕೃತ ಓದಬೇಕಾದವರು ಮುಂದೆ ಮಹಾಪ್ರಾಣ ಅಕ್ಷರಗಳನ್ನು ಬಳಸುವುದನ್ನು ಕಲಿಯುತ್ತಾರೆ” – ನಾನು ಈ ಬಗ್ಗೆ ಮೊದಲೂ ಸ್ಪಷ್ಟಪಡಿಸಿದ್ದೇನೆ, ನೀವು ಯಾವುದನ್ನು “ಕನ್ನಡ” ಎಂದು ಪ್ರತಿಪಾದಿಸುತ್ತಿದ್ದೀರೋ *ಅದಷ್ಟೇ* ಕನ್ನಡ ಅಲ್ಲವೆನ್ನುವುದು ನಿಮಗೂ ತಿಳಿದಿದೆ. ಯಾವಯಾವುದೋ ಕಾರಣಗಳಿಗೆ ನೀವು “ಕನ್ನಡ”ದ ಅರ್ಥವ್ಯಾಪ್ತಿಯನ್ನು ತೀರ ಅಸಹಜವಾಗಿ ಕಿರಿದುಗೊಳಿಸುತ್ತಿದ್ದೀರಿ. ಕನ್ನಡ, ಬೇರಾವುದೇ ಭಾಷೆಯಂತೆ ಶತಮಾನಗಳಿಂದ ಇತರ ಭಾಷೆ/ಸಂಸ್ಕೃತಿ/ಜನಾಂಗಗಳೊಡನೆ ವಿನಿಮಯ ನಡೆಸಿದೆ, ಈ ಅವಧಿಯಲ್ಲಿ ಕನ್ನಡ ಮೂಲ ಪದಗಳಲ್ಲದೇ ಸಮುದ್ರದಷ್ಟು ಪರಪದಗಳು ಕನ್ನಡವನ್ನು ಸೇರಿ, ಇಲ್ಲಿ ಮೂಲರೂಪದಲ್ಲೋ, ಮಾರ್ಪಟ್ಟ ರೂಪದಲ್ಲೋ ಬಳಕೆಗೊಂಡು ಕನ್ನಡದ್ದೇ ಆಗಿವೆ, ಅವೆಲ್ಲಾ ಕನ್ನಡವೇ. ಹಾಗೆಂದಾಗ ಅವುಗಳನ್ನು ಉಲಿಯುವ ಸೌಲಭ್ಯ ಸಹಜವಾಗಿಯೇ ಕನ್ನಡದಲ್ಲಿ ಇರಬೇಕಾಗುತ್ತದೆ, ಇದೆ. ಮಹಾಪ್ರಾಣದ ಕಲಿಕೆ “ಮುಂದೆ ಸಂಸ್ಕೃತವನ್ನೋದಬೇಕಾದವರಿಗಾಗಿ” ಅಲ್ಲ, ಕನ್ನಡವನ್ನೇ (ಅದರೆಲ್ಲ ಪದಗಳೊಡನೆ) ಪೂರ್ಣವಾಗಿ ಕಲಿಯಬೇಕೆನ್ನುವವರಿಗೆ. ಕೇವಲ ಮಹಾಪ್ರಾಣ ಹೊರೆಯೆಂಬ ಕಾರಣವಲ್ಲದ ಕಾರಣಕ್ಕಾಗಿ, ಮಹಾಪ್ರಾಣವಿರುವ ಕನ್ನಡದ ಪದಗಳನ್ನೆಲ್ಲಾ ಅದರ ಸಂಸ್ಕೃತ ಭಾಷಾಮೂಲದ ನೆಪವೊಡ್ಡಿ “ಕನ್ನಡೀಕರಿಸಿ” ಅದರ ಕೊಂಬು-ಬಾಲಗಳನ್ನು ಕಿತ್ತುಹಾಕಬೇಕೆನ್ನುವುದು ಯಾವ ವಾದ, ನೀವೇ ಹೇಳಿ?

      ಇನ್ನು “ಮಾನಧನ ಸುಯೋಧನನು” ನಿಮ್ಮ ಉಲಿಕೆಯಲ್ಲಿ “ಮಾನದನ ಸುಯೋದನ”ನಾದರೆ ನನ್ನ ತಕರಾರೇನಿಲ್ಲ, as long as you are aware what is the original, and hence right form. ನನ್ನ ತಕರಾರೇನಿದ್ದರೂ “ನನ್ನ ಬಾಯಿ ಹೀಗೇ ತಿರುಗುವುದರಿಂದ ಮಾನದನ ಸುಯೋದನನೇ ಸರಿ” ಎಂದು ಸಾಧಿಸುವುದರ ಬಗ್ಗೆ. ಸಂಸ್ಕೃತದ ಉದಾಹರಣೆಯನ್ನು ಬಿಡಿ, ನೀವು ಕನ್ನಡದ “ಉಳಿಕೆ”ಯನ್ನೂ “ಉಲಿಕೆ”ಯೆಂದೇ ಉಲಿಯಿರಿ, ಆದರೆ ಆ ಸಂದರ್ಭಕ್ಕೆ “ಉಳಿಕೆ” ಸರಿ, “ಉಲಿಕೆ” ತಪ್ಪು ಎಂಬ ಅರಿವೂ ಇರಬಾರದೆಂದರೆ ಹೇಗೆ? “ಹೇಳು”ವುದಕ್ಕೂ “ಹೇಲು”ವುದಕ್ಕೂ ವ್ಯತ್ಯಾಸವೇ ಇಲ್ಲವೇ (ಇದು ಇರುಸುಮುರುಸಾಗುವಂತಿದ್ದರೆ ಕ್ಷಮಿಸಿ, ಅಭಾಸಕ್ಕೆ ಇದೊಂದು ಉತ್ತಮ ಉದಾಹರಣೆಯೆಂದು ಕೊಟ್ಟೆನಷ್ಟೇ); seriously, I have seen many people embarassingly mix up ಳ & ಲ in pure Kannada itself. ಇಲ್ಲಿ ಭಾಷಾಜ್ಞಾನದ ಅಗತ್ಯವನ್ನು ನೀವು ಅಲ್ಲಗಳೆಯುವಂತೆಯೇ ಇಲ್ಲ, ಅಲ್ಲವೇ?. ಹಾಗಿದ್ದರೆ ಇದಕ್ಕೆ ಮಾತ್ರ ಬೇಕಾಗುವ ಭಾಷಾಜ್ಞಾನ ಕನ್ನಡದ ಬೇರಿನದ್ದಲ್ಲದ, ಆದರೆ ಕನ್ನಡದ್ದೇ ಆಗಿಹೋಗಿರುವ ಪದಗಳ ಬಗ್ಗೆ ಏಕೆ ಬೇಡ?

      ಪರಪದಗಳ ಬಗ್ಗೆ ನನ್ನ ನಿಲುವು ಇದು:
      – ಕೂಡಿದಮಟ್ಟಿಗೂ ಹೊರಗಿನ ಪದಗಳನ್ನು ಹೊಸಹೊಸದಾಗಿ ಪರಭಾಷೆಯ ಪದಗಳನ್ನು ಬಳಸದಿರುವುದು.
      – ಆದರೆ concept ಹೊರಗಿನದ್ದಾದರೆ, ಅದಕ್ಕೆ ಕನ್ನಡದ ಪರಿಭಾಷೆ ತೀರ ಅಗಡಾಗಿ ಕಂಡರೆ, ಮತ್ತು ಹೊರಗಿನ ಪದ ಹೆಚ್ಚು ಸಹಜವಾಗಿ ಕಂಡರೆ (ಉದಾ: ಎಂಜಿನು, ಬಸ್ಸು, ಕಾರು), ನಿರ್ಭಿಡೆಯಿಂದ ಹೊರಭಾಷೆಯ ಪದವನ್ನು ಒಪ್ಪಿಕೊಳ್ಳುವುದು, ನಮ್ಮದಾಗಿಸಿಕೊಳ್ಳುವುದು.
      – ಈಗಾಗಲೇ ಕನ್ನಡದ ಬಳಕೆಯಲ್ಲಿ ಬಿದ್ದು ಕನ್ನಡದ್ದೇ ಆಗಿಹೋಗಿರುವ ಪರ ಪದಗಳನ್ನು ಕನ್ನಡದ್ದೆಂದೇ ಮನ್ನಿಸಿ ಮುಂದುವರೆಸುವುದು (ಹೊಸ “ಕನ್ನಡದ್ದೇ” ಪರ್ಯಾಯ ಪದ ಬಳಸಬಾರದೆಂದಲ್ಲ, ಇರುವುದನ್ನು ತಿರಸ್ಕರಿಸಬಾರದೆಂದಷ್ಟೇ)
      – ಹೀಗೆ ಕನ್ನಡದ್ದೇ ಆಗಿಹೋಗಿರುವ ಪರಪದಗಳನ್ನು ಕೂಡಿದಮಟ್ಟಿಗೂ ಅದರ ಮೂಲದಲ್ಲಿರುವಂತೆಯೇ ಬಳಸುವುದು, ಅದರ “ವಿರೂಪ”ಗಳನ್ನು ಮನ್ನಿಸಿದರೂ ಅದು ತಪ್ಪು ಪ್ರಯೋಗಗಳೆಂದು ನೆನಪಿನಲ್ಲಿಡುವುದು (ಸುಯೋಧನ – ಸುಯೋದನ)
      – ಹಾಗೆಯೇ ಮೇಲಿನದಕ್ಕೆ exceptions ಕೂಡಾ ಈಗಾಗಲೇ ಸಹಜವಾಗಿ ಬಳಕೆಯಲ್ಲಿದ್ದರೆ, ಆ exception ಗಳನ್ನು ಹಾಗೆಯೇ ಒಪ್ಪಿ ಮನ್ನಿಸುವುದು (ನಿದ್ರಾ – ನಿದ್ರೆ – ನಿದ್ದೆ, ಎಲ್ಲ ಪ್ರಯೋಗಗಳೂ ಕನ್ನಡಕ್ಕೆ ಸರಿ, ಏಕೆಂದರೆ ಅವು ಈಗಾಗಲೇ ಸಹಜ ಬಳಕೆಯಲ್ಲಿದೆ)
      – ಹೊಸ ಹೊಸ exceptionಗಳನ್ನು ಉದ್ದೇಶಪೂರ್ವಕವಾಗಿ ಬಳಕೆಗೆ ತರದಿರುವುದು (ನನಗೆ ಭಗವದ್ಗೀತೆ ಅನ್ನುವುದು ಸರಿಯೆಂದು ಗೊತ್ತು, ಅದನ್ನು ಹಾಗೆಯೇ ಉಲಿಯಬಲ್ಲೆ, ಆದರೂ ಅದನ್ನು “ಕನ್ನಡೀಕರಿಸುವ” ಹಟದಿಂದ ಅದನ್ನು ಬಗವದ್ಗೀತೆಯೆಂದೇ ಉಲಿಯುತ್ತೇನೆ, ಅಥವ “ದೇವರ ಹಾಡು” (ಇನ್ನೂ ಮೀರಿ “ಕಡವನ ಹಾಡು”) ಎಂದು ಅನುವಾದಿಸುತ್ತೇನೆ – come on, that is senseless!).
      – ಬಳಕೆಯಲ್ಲೇ ಇಲ್ಲದ ಕನ್ನಡ ಪದಗಳನ್ನು ಅವು ಕನ್ನಡದ್ದೆಂಬ ಒಂದೇ ಕಾರಣಕ್ಕಾಗಿ ಬಳಕೆಯಲ್ಲಿರುವ ಸುಲಭವಾದ ಪರಪದಗಳ ಬದಲಿಗೆ ಬಳಸಬೇಕೆಂದು ಹಟ ಹಿಡಿಯದಿರುವುದು (ಬಳಸುವುದು ಬೇರೆ, ಇತರರು ಬಳಸಬೇಕೆಂದು ಹಟ ಹಿಡಿಯುವುದು ಬೇರೆ. ಈ ಹಟ ಅನೇಕವೇಳೆ ನೇರ “ಹಟ”ದ ರೂಪದಲ್ಲಿರುವುದಿಲ್ಲ, ಜಾತಿ ಪಂಗಡದ ಹೀಯಾಳಿಕೆಯ ರೂಪದಲ್ಲಿರುತ್ತದೆ)
      – ಕನ್ನಡದ್ದೆಂಬ ಒಂದೇ ಕಾರಣಕ್ಕಾಗಿ ಸರಿಯಾದ ಅರ್ಥಕೊಡದ ಪದಗಳ ಬಳಕೆಯನ್ನು ಜನಪ್ರಿಯಗೊಳಿಸಲು ಯತ್ನಿಸದಿರುವುದು (ಉದಾಹರಣೆಗೆ ಡಾಕ್ಟರು = ಮಾಂಜುಗಾರ)

      “ಆದರೆ ಹೆಚ್ಚಿನ ಸಂದರ್ಭದಲ್ಲಿ ಪದಗಳ ಕಲಿಕೆ ಆಗುವುದು ಮಾತಿನಲ್ಲಿ ಬಳಸುವುದರಿಂದ” – ಇರಬಹುದು. ಆದರೆ ಗಮನಿಸಬೇಕಾದ್ದೆಂದರೆ ಮಾತು ಮೊದಲು, ಬರಹ ಆಮೇಲೆ. ಆದ್ದರಿಂದ ಬರಹದಲ್ಲಿಲ್ಲದ ಕೆಲವು ಅನುಕೂಲಗಳು ಮಾತಿನಲ್ಲಿವೆ. ಬರಹಕ್ಕಿಲ್ಲದ ಕೆಲವು ಸ್ವಾತಂತ್ರ್ಯವನ್ನು ನಾವು ಮಾತಿನಲ್ಲಿ ವಹಿಸುವುದು ಸಹಜವೇ ಆಗಿದೆ. ಸಂಗೀತದಿಂದ ಒಂದು ಉದಾಹರಣೆ ತೆಗೆದುಕೊಂಡು ಇದನ್ನು ವಿವರಿಸುತ್ತೇನೆ. ಸಂಗೀತಕ್ಕೂ ಅದರ ಲಿಪಿರೂಪಕ್ಕೂ ಬಹಳ ವ್ಯತ್ಯಾಸವಿದೆ. ದನಿಯಲ್ಲಿ ಹೊಮ್ಮುವ ಎಲ್ಲ ಪಲುಕುಗಳನ್ನು ಲಿಪಿಯಲ್ಲಿ ದಾಖಲಿಸಲು ಆಗುವುದಿಲ್ಲ. ಹೆಚ್ಚೆಂದರೆ ಹಾಡಿನಲ್ಲಿ ಬರುವ ಸ್ವರಗಳನ್ನು (ಸರಿಗಮಪದನಿ ಇತ್ಯಾದಿ) ಬರಹದಲ್ಲಿ ದಾಖಲಿಸಬಹುದು; ಆದರೆ ಸ್ವರಗಳ ನಡುವಿನ ಸೂಕ್ಷ್ಮ ಉಲಿಗಳು ಹಾಡುಗಾರನ “ಉಲಿಯರಿಮೆಗೆ” ಬಿಟ್ಟಿದ್ದು. ಆದರೆ ಹಾಡುವವನು ಆ ಸ್ಥೂಲ ಸ್ವರಗಳನ್ನು ತೆಗೆದುಕೊಂಡು, ತನ್ನದೇ ಉಲಿಯುವಿಕೆಯನ್ನು ಅದಕ್ಕೆ ತುಂಬುತ್ತಾನೆ. ಸಂಗೀತಕ್ಕೆ ಈ “ಉಲಿಕೆ”ಯೇ ಜೀವಾಳ (ಇದನ್ನು ಸಂಗೀತದ ಪರಿಭಾಷೆಯಲ್ಲಿ ಗಮಕ ಅನ್ನುತ್ತಾರೆ). ಹಾಗಲ್ಲದೇ ಕೇವಲ ನೋಟ್ ಬುಕ್ಕಿನಲ್ಲಿ ಬರೆದಿರುವ ಲಿಪಿಯನ್ನು ಹಾಗೇ ಹಾಡಿ ನೋಡಿ, ಹಾಡು ಎಷ್ಟು ಅಭಾಸವಾಗಿರುತ್ತದೆ ಎಂಬುದು ನಿಮಗೆ ತಿಳಿಯುತ್ತದೆ. ಇದು ದನಿಗೆ ಸಂಬಂಧಿಸಿದ ಯಾವುದಕ್ಕೂ ಅನ್ವಯಿಸುತ್ತದೆ, ಮಾತಿಗೂ. ಬರಹ, ಸಹಜವಾಗಿ ಮಾತಿಗಿಂತ ಹೆಚ್ಚು ಔಪಚಾರಿಕವಾಗಿರುತ್ತದೆ ಅದಕ್ಕೆಂದೇ ಅದು ಶಿಷ್ಟ (standard) ಎನಿಸುತ್ತದೆ. ಈ ದೃಷ್ಟಿಯಿಂದ ಮಾತಿನಲ್ಲಿರುವ ಸ್ವಾತಂತ್ರ್ಯ ಬರಹದಲ್ಲಿಲ್ಲದಿರುವುದು ಸಹಜವೇ ಆಗಿದೆ. ಅದಕ್ಕೆಂದೇ ಮಾತಿನಲ್ಲಿ ಸಹ್ಯವಾದ “ಸುಯೋದನ” ಬರಹದಲ್ಲಿ ಅಸಹ್ಯವಾಗುವುದು!

      “ಕಲಿಕೆಯಲ್ಲಿ ಉಲಿದು ತೋರಿಸಲಾಗದೆ ದೊಡ್ಡ ಪ – ಚಿಕ್ಕ ಪ, ದೊಡ್ಡ ಬ – ಚಿಕ್ಕ ಬ, ಶಂಕು ಶ – ಪಟ್ಟೆ ಷ ಎಂಬ ತಪ್ಪಾದ ಪಾಠ” – ಇಲ್ಲಿ ಎರಡು ಅಂಶ, ನನ್ನ ಗಮನ ಸೆಳೆಯಿತು. ಒಂದು, “ಪ, ಫ, ಶ, ಷ, ಇವುಗಳನ್ನು ಕಲಿಕೆಯಲ್ಲಿ “ಉಲಿದು ತೋರಿಸಲಾಗುವುದಿಲ್ಲ (!)”; ಎರಡು, “*ಆದ್ದರಿಂದ* ಇದು ತಪ್ಪಾದ ಪಾಠ”. ಕ್ಷಮಿಸಿ, ಖಾಸಗೀ ಶಾಲೆಗಳ ಹಾವಳಿಯಿಲ್ಲದ ಹಳ್ಳಿಗಾಡಿನ ಪರಿಸರದಲ್ಲಿ ಕಲಿತು ಬಂದ ನನ್ನ ಕಲಿಕೆ ಇದಕ್ಕಿಂತ ತುಸು ಭಿನ್ನ (ಬಹುಶಃ, ಇವತ್ತು ಈ ಬಗ್ಗೆ ನಾನು ಹೆಮ್ಮೆ ಪಡಬೇಕೆನ್ನಿಸುತ್ತಿದೆ!). ನನ್ನ ಗುರುಗಳೆಲ್ಲ ನನಗೆ ವರ್ಣಮಾಲೆಯನ್ನು ಉಲಿದೇ ಕಲಿಸಿದ್ದು. “ಶಂಕು ಶ, ಪಟ್ಟೆ ಷ” ಇತ್ಯಾದಿ “ತಪ್ಪಾದ” ಪಾಠ ನನ್ನ ವೈಯಕ್ತಿಕ ಅನುಭವಕ್ಕಂತೂ ಬರಲಿಲ್ಲ. ಹೆಚ್ಚೆಂದರೆ “ಶಂಕರ ಶ; ಷಣ್ಮುಖ ಷ” ಎಂದು ಹೇಳುತ್ತಿದ್ದುದು ನೆನಪಿದೆ, ಆದರೆ ಅದು ನಮಗೀಗಾಗಲೇ “ಶಂಕರ, ಷಣ್ಮುಖ” ಇತ್ಯಾದಿಗಳ ಪರಿಚಯವಾಗಿತ್ತೆನ್ನುವ ಕಾರಣದಿಂದ (ಮತ್ತೆ ಶಂಕರ, ಷಣ್ಮುಖರನ್ನು ನಮಗೆ ಉಲಿದೇ ತೋರಿಸಿದ್ದು). ಇನ್ನು ನೀವು ಹೇಳಿದ “ತಪ್ಪಾದ” ಪಾಠಕ್ಕೆ ಬಂದರೆ, ತಪ್ಪಾದ ಪಾಠ ಟೀಚರನ ಯೋಗ್ಯತೆಯನ್ನು ಪ್ರಶ್ನಿಸುತ್ತದೆ. ಟೀಚರ್ ಅಯೋಗ್ಯನಾದರೆ ಅವನನ್ನು ಬದಲಿಸಬೇಕೇ ಹೊರತು ಪಾಠವನ್ನೇ ಅಲ್ಲ, ಅಲ್ಲವೇ? ಸರಿಯಾಗಿ ಉಲಿದು ತೋರಿಸುವ ಟೀಚರ್ ಇದ್ದರೆ ನೀವು ಹೇಳುವ “ಮೊದಲ ಕಲಿಕೆಯಲ್ಲಿನ ಗೊಂದಲ” ಸಾಧ್ಯವೇ ಇಲ್ಲ, ಇದು ನನ್ನ *ಅನುಭವ*

      ನೆಗಡಿ ಬಂತೆಂದು ಮೂಗನ್ನೇ ಕೊಯ್ಯಬಾರದಲ್ಲವೇ?

      ಉತ್ತರ
      • Shubhashree
        ಏಪ್ರಿಲ್ 10 2011

        ಮಂಜುನಾಥ್ ಸರ್,
        ನಿಮ್ಮ ಅನಿಸಿಕೆಗಳಿಗೆ ಧನ್ಯವಾದ. ನೀವಂದಂತೆ ಕಲಿಕೆಯಲ್ಲಿ ಯಾವ ಕನ್ನಡ ಕಲಿಸಬೇಕು ಎನ್ನುವುದಕ್ಕೆ “ಎಲ್ಲರ ಕನ್ನಡ” ಎನ್ನುವುದು ಉತ್ತರ. ಹಾಗೆಂದರೇನು? ಅದಕ್ಕೂ ನಾನಾ ಪ್ರದೇಶದಲ್ಲಿ ಆಡುವ ಕನ್ನಡಿಗರ ಕನ್ನಡಕ್ಕೂ ವ್ಯತ್ಯಾಸವೇನು? ಹೋಲಿಕೆಯೇನು? ಸಂಬಂಧವೇನು? ಹೇಗೆ ಒಂದು ಪ್ರದೇಶದ ಮಕ್ಕಳಿಗೆ ಎಲ್ಲರ ಕನ್ನಡವನ್ನು ಕಲಿಸುವುದು ಹೇಗೆ? ಇತ್ಯಾದಿ ಎಲ್ಲಾ ಪ್ರಶ್ನೆಗಳಿಗೂ ಶಂಕರಬಟ್ತರ ಹೊತ್ತಗೆಗಳಲ್ಲೂ, ಎಲ್ಲರ ಕನ್ನಡ ವೆಬ್ ಸೈಟಲ್ಲೂ ವಿಸ್ತೃತವಾಗಿ ಚರ್ಚೆಯಾಗಿದೆ. ವಿವರಿಸಿ ಬರೆಯಲಾಗಿದೆ. ನೀವೊಮ್ಮೆ ಓದಿರಿ. ಹೀಗೆ ಬೇರೆ ಬೇರೆ ಕನ್ನಡಗಳು ಇರುವುದು ವಾಸ್ತವ ಪರಿಸ್ಥಿತಿ. ನೀವೇ ಹೇಳುವಂತೆ ಎಲ್ಲ ವೈವಿಧ್ಯಗಳನ್ನೂ ಎಲ್ಲರೂ ಕಡ್ಡಾಯವಾಗಿ ಕಲಿಯಬೇಕೆಂಬುದು ಸಲ್ಲದ ಹೊರೆ. ಈ ಸವಾಲುಗಳು ಇಡೀ ಕನ್ನಡ ಸಮಾಜದ್ದು, ಒಟ್ಟಾಗಿ ಎದುರಿಸಿ ತೊಂದರೆ ಇದ್ದಲ್ಲಿ ಹಗುರ ಮಾಡಿಕೊಳ್ಳಬೇಕು. ನೀವು ಹೇಳಿದ ಉಳಿದೆಲ್ಲಾ ಪಾಯಿಂಟುಗಳನ್ನೇ ನಾನೂ ಪ್ರತಿಪಾದಿಸಿರುವುದು.
        ಒಂದು ಸತ್ಯವೆಂದರೆ ಬರತರಾಗಲೀ, ಮಾಯ್ಸರಾಗಲೀ, ನಾನಾಗಲೀ, ಇನ್ಯಾರೇ ಆಗಲೀ…ಕನ್ನಡದಲ್ಲಿ ಹೊಸಪದಗಳನ್ನು ಕಟ್ಟಲು ಸ್ವತಂತ್ರರು. ಬಳಸಲೂ ಕೂಡಾ. ಆದರೆ ಯಾರಮೇಲಾದರೂ ಹೇರುವುದು ಸಾಧ್ಯವಿಲ್ಲದ್ದು. ಅಂತಹ ಕಲ್ಪನೆಯೂ ತಪ್ಪೇ. ಹೊಸಪದ ಬಳಸಲು ಅನುಕೂಲಕರವಾಗಿದ್ದರೆ ಜನರು ಬಳಸುತ್ತಾರೆ ಅಷ್ಟೆ. ಉಳಿದಂತೆ ನಮಸ್ಕಾರ.

        ಉತ್ತರ
        • ಶುಭಶ್ರೀಯವರೇ, ನೀವಾಗಲೀ ಮಾಯ್ಸ ಆಗಲೀ ಅಥವಾ ನಾನೇ ಆಗಲಿ, ಹೊಸ ಕನ್ನಡ ಪದಗಳನ್ನು ಕಟ್ಟುವ ಸ್ವಾತಂತ್ರ್ಯದಲ್ಲಿ ಎರಡು ಮಾತಿಲ್ಲ, ಹಾಗೆಯೇ ಅದು ಸರಿಕಂಡರೆ ಅದನ್ನು ಬಳಸುವುದಕ್ಕೂ ನನ್ನದೇನು ತಕರಾರಿಲ್ಲ. ಆದರೆ ಅವೇ ಸರಿಯೆಂದೂ, ಈಗಾಗಲೇ ಬಳಕೆಯಲ್ಲಿರುವ ಪದಗಳನ್ನು ಕೈಬಿಟ್ಟುಬಿಡಿ ಎಂದು ಆಗ್ರಹಿಸುವುದಾಗಲೀ, “ಸಂಸ್ಕೃತಮೂಲ”ದ (ಅವು ಸೊಗಸಾಗಿ ಬಳಕೆಯಲ್ಲಿರುವುದರಿಂದ ನಿಜಕ್ಕೂ ಕನ್ನಡಪದವೇ!!) ಪದಗಳನ್ನು ಉಪಯೋಗಿಸಲು ಸಾಧ್ಯವಾಗದಂತೆ ಕನ್ನಡದ ಅಕ್ಷರಗಳನ್ನೇ ತೆಗೆದುಹಾಕಿಬಿಡಿ ಎಂದು ಆಗ್ರಹಿಸುವುದಾಗಲೀ ಬೇಡವೆಂದು ನನ್ನ ನಿಲುವು ಅಶ್ಟೇ. ಕನ್ನಡಕ್ಕೆ ಇನ್ನೆರಡು ಅಕ್ಷರ ಸೇರಿದರೆ ಸಂತೋಷ, ಆದರೆ ತೆಗೆಯುವುದಲ್ಲ.

          ಉತ್ತರ
          • Shubhashree
            ಏಪ್ರಿಲ್ 11 2011

            ಒಪ್ಪಿದೆ.
            ಸಂಸ್ಕೃತಮೂಲದ್ದೆಂದೋ, ಮತ್ತೊಂದು ಭಾಷೆಯ ಮೂಲದ್ದೆಂದೋ ಕನ್ನದದಲ್ಲಿ ಬಲಕೆಯಲ್ಲಿರುವ ಪದಗಳನ್ನು ಬಿಡಲಾಗದು. ಅವುಗಳನ್ನು ಬಿಡಬೇಕೆಂಬ ಹಟ ಸಲ್ಲದು.ಅಂತೆಯೇ ಮೂಲದಲ್ಲಿರುವಂತೆ ಉಲಿಯದಿದ್ದರೆ ಕೀಳು ಎಂಬ ಹಟವೂ ಸಲ್ಲದು ಎನ್ನುವುದು ನನ್ನ ನಿಲುವು. ಹೊಸಪದಗಳನ್ನು ಹುಟ್ಟಿಸುವವರು ವ್ಯಕ್ತಿಯಾದ್ದರಿಂದ ಅದಕ್ಕೆ ನಿಸ್ಚಿತವಾಗಿ ಮಿತಿ ಇರುವುದು ಸಹಜ. ಹಾಗಾಗಿ ಅರ್ಥದಲ್ಲಿ ಸಂಪೂರ್ಣವಾಗಿ ಅದು ಬಳಕೆಯ ಅರ್ಥವನ್ನು ಬಿಂಬಿಸದೇ ಇರುವುದೂ ಸಹಜ. ಹಾಗೆ ನೋಡಿದರೆ ಸಂಸ್ಕೃತದ ಪದಗಳಲ್ಲೂ ಇಂತಹವು ಇವೆ. ಇದು ಕನ್ನಡದಲ್ಲಿ ನಿಜ ಅರ್ಥಕ್ಕೆ ಸನಿಹವಲ್ಲದ ಪದಹುಟ್ಟಿಸುವಿಕೆಗೆ ಸಮರ್ಥನೆ ಅಲ್ಲ. ನುಡಿಯೆಂದರೆ ಹೀಗೆ ಬಳಸುವುದು ಸಹಜ ಎನ್ನುವುದಕ್ಕೆ ಹೇಳಿದ್ದೇನೆ. ಉದಾಹರಣೆ ಎಂದರೆ ಉತ್-> ಮೇಲೆ ಆಹರಣ್ -> ಎತ್ತಿಕೊಳ್ಳು ಎಂದರ್ಥವೆಂದು ಒಬ್ಬ ಪಂದಿತರು ತಿಳಿಸಿದರು. ಹೌದೇ? ಉತ್->ಮೇಲೆ, ಯೋಗ->ಅದೃಷ್ಟ, ಉದ್ಯೋಗ-> ಕೆಲಸ, ವಿ->Special, ದ್ಯುತ್-> ಬೆಳಕು ವಿದ್ಯುತ್->electricity… ಹೀಗೆ.

            ಉತ್ತರ
            • Shubhashree
              ಏಪ್ರಿಲ್ 11 2011

              ಮಂಜುನಾಥ್ ಸಾರ್,
              ನೀವು ಬರೆದಿರೋ ಹಲವಾರು ಪಾಯಿಂಟುಗಳೂ ನಾನು ಹೇಳುತ್ತಿರುವುವೂ ಒಂದೇ ಆಗಿವೆ. ಸಣ್ಣಪುಟ್ಟ ಅಭಿಪ್ರಾಯಬೇಧವಿರುವುದು ಕೂಡಾ ಹೌದು. ನೀವಂದಂತೆ ಸಂಗೀತದ ಉದಾಹರಣೆಯನ್ನೇ ನೋಡಿದರೆ… ಸಂಗೀತವೆನ್ನುವುದು ಕಲಿಸುವುದೇ ಬಾಯಿಪಾಟದಲ್ಲಿ. ಅದೂ ಒಂದು ಭಾಷೆಯೇ ಎಂದು ನೀವು ಕೊಟ್ಟ ಉದಾಹರಣೆಯಂತೆಯೇ, ಆ ನುಡಿಯನ್ನು ಕಲಿಯುವಾಗ ಬೇಕಿರುವ ಏಳು ಅಕ್ಷರಗಳು ಸ-ರಿ-ಗ-ಮ-ಪ-ದ-ನಿ. ಆದರೆ ಅವುಗಳಲ್ಲಿನ ಒಳ ವ್ಯತ್ಯಾಸಗಳನ್ನು ಗುರುತಿಸಲು ಸಂಗೀತದ ಲಿಪಿಗೆ `ರಿ1’, `ರಿ2’, `ಗ1’, `ಗ2’, `ಗ3’ ಗಳೂ, `ಸ with ಅಡಿಚುಕ್ಕಿ’ – `ಸ’ – `ಸ with ಮೇಲ್ಚುಕ್ಕಿ’ಗಳೂ ಇವೆ. (ನನಗೆ ಸಂಗೀತದ ಆಳರಿವು ಇಲ್ಲ, ಮನ್ನಿಸಿ). ಅಂದರೆ ನುಡಿಯನ್ನು ಬಳಸುವವರು ಉಲಿಯುವಲ್ಲಿ ವ್ಯತ್ಯಾಸವಿದ್ದಲ್ಲಿ, ಆ ವ್ಯತ್ಯಾಸವು ಮಹತ್ವವುಳ್ಳದ್ದಾಗಿದ್ದಲ್ಲಿ ಅವುಗಳನ್ನು ಗುರುತಿಸಲು ಬೇಕಾದ ಹೊಸ ಅಕ್ಷರಗಳನ್ನು ತಾವೇ ಹುಟ್ಟಿಹಾಕಿಕೊಳ್ಳುತ್ತಾರೆ. ಕನ್ನಡದಲ್ಲೂ Za, fa ಎನ್ನುವಾಗಿನ ಜ, ಫ ಕೆಳಗಿನ ಜೋಡಿಚುಕ್ಕಿಗಳೂ ಇದೇ ಜಾತಿಗೆ ಸೇರಿದವು.
              ನಿಮ್ಮ ನಿಲುವು… ಇಂತಹವುಗಳನ್ನೂ ಅಕ್ಷರಮಾಲೆಗೆ ಸೇರಿಸುವುದು ಸರಿಯೆಂಬುದಾಗಿದೆ. ನೀವೇ ಮತ್ತೊಂದೆಡೆ “ಎಲ್ಲಾ ಉಲಿಗಳನ್ನೂ ಒಳಗೊಳ್ಳುವ ಅಕ್ಷರ ಮಾಲೆ ಕಲಿಯಲು ಕಠಿಣ” ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದೀರಾ. (ನಾನಿಲ್ಲಿ ನಿಮಗೆ ದ್ವಂದ್ವವಿದೆ, ವೈರುಧ್ಯವಿದೆ ಎನ್ನುವುದನ್ನು ಹೇಳಲು ಹೊರಟಿಲ್ಲ.) ನಿಮ್ಮ ಎರಡನೆಯ ಅಭಿಪ್ರಾಯವೇ ಸರಿಯಾದ್ದು ಎಂಬುದು ನನ್ನ ನಿಲುವು. ಕೆಲವಷ್ಟೇ ಕಡೆ ಉಲಿಯಲಾಗುವ ಈ ಅಕ್ಷರಗಳಿಗಾಗಿ ವರ್ಣಮಾಲೆಯನ್ನೇ ಹಿಗ್ಗಿಸುತ್ತಾ ಹೋಗುವುದು ಸರಿಯಲ್ಲ ಎಂಬುದನ್ನೇ ಕೆಲವೆಡೆ ಹೇಳಿದ್ದೀರಾ ಎಂದುಕೊಳ್ಳುತ್ತೇನೆ.
              ಈಗ ಇದೇ ನಿಲುವನ್ನು ಈಗಿರುವ ಅಕ್ಷರಮಾಲೆಗೂ ಅನ್ವಯಿಸುವುದು ಸರಿಯಲ್ಲವೇ? ಹೆಚ್ಚಿನ ಕನ್ನಡಿಗರು ಮಹಾಪ್ರಾಣಾಕ್ಷರಗಳನ್ನು ಅಲ್ಪಪ್ರಾಣವಾಗಿ ಉಲಿಯುತ್ತಾರೆ ಎಂಬುದನ್ನು ನೀವೂ ಒಪ್ಪಿದ್ದೀರ. ಈಗ ಕೆಳಗಿನ ಈ ನಾಲ್ಕು ವಿಭಿನ್ನ ಸಂದರ್ಭಗಳನ್ನು ನೋಡೋಣ.
              ೧. ಮಹಾಪ್ರಾಣಾಕ್ಷರಗಳ್ನು ಮಹಾಪ್ರಾಣವಾಗಿಯೂ, ಅಲ್ಪಪ್ರಾಣಾಕ್ಷರಗಳನ್ನು ಅಲ್ಪಪ್ರಾಣದಂತೆಯೂ ಉಲಿಯುವುದು – ಇದು ಅತ್ಯುತ್ತಮ ಸಂದರ್ಭ ಮತ್ತು ಪರಿಸ್ಥಿತಿ ಹೀಗಿದ್ದಿದ್ದರೆ, ಹೀಗಾಗುವುದಾದರೆ ಒಳ್ಳೆಯದೇ. ಇದರರ್ಥ ಇಡೀ ಭಾಷಿಕ ಜನಾಂಗಕ್ಕೆ ಉಲಿಯುವಿಕೆಯಲ್ಲಿ ವ್ಯತ್ಯಾಸವನ್ನು ಉಳಿಸಿಕೊಳ್ಳುವ ಅಗತ್ಯವೂ ಸಂದರ್ಭವೂ ಇದೆ. ಅಂತಹ ಅಭ್ಯಾಸವೂ ಅವರಲ್ಲಿದೆ.
              ೨. ಮಹಾಪ್ರಾಣಾಕ್ಷರಗಳನ್ನೂ ಅಲ್ಪಪ್ರಾಣಾಕ್ಷರಗಳನ್ನು ಅಲ್ಪಪ್ರಾಣದಂತೆಯೂ ಉಲಿಯುವುದು – ಇದು ಇಂದಿನ ಕನ್ನಡನಾಡಿನಲ್ಲಿನ ಸಂದರ್ಭವಾಗಿದೆ. ಇಲ್ಲಿನ ಬಹುತೇಕರು ಬಹುತೇಕ ಸಂದರ್ಭಗಳಲ್ಲಿ ಅಲ್ಪಪ್ರಾಣವನ್ನೇ ಉಲಿಯುತ್ತಾರೆ. ಉಳಿದಂತೆ ಕೆಲವರು ಕೆಲವು ಸಂದರ್ಭಗಳಲ್ಲಿ ಮಹಾಪ್ರಾಣವನ್ನೂ ಬಳಸುತ್ತಾರೆ. ಇದೇ ವಾಸ್ತವ ಸ್ಥಿತಿ ಎಂದು ನನ್ನ ಅನಿಸಿಕೆ.
              ೩. ಮಹಾಪ್ರಾಣಾಕ್ಷರಗಳ್ನು ಮಹಾಪ್ರಾಣವಾಗಿಯೂ, ಅಲ್ಪಪ್ರಾಣಾಕ್ಷರಗಳನ್ನು ಮಹಾಪ್ರಾಣದಂತೆಯೂ ಉಲಿಯುವುದು – ಇದರರ್ಥ ಅಲ್ಪಪ್ರಾಣಾಕ್ಷರದ ಬಳಕೆಯೇ ಇವರಲ್ಲಿಲ್ಲ. ಸದ್ಯಕ್ಕೆ ಕನ್ನಡಿಗರಿಗೆ ಇದು ಅನ್ವಯಿಸದು.
              ೪. ಮಹಾಪ್ರಾಣಾಕ್ಷರಗಳ್ನು ಅಲ್ಪಪ್ರಾಣವಾಗಿಯೂ, ಅಲ್ಪಪ್ರಾಣಾಕ್ಷರಗಳನ್ನು ಮಹಾಪ್ರಾಣದಂತೆಯೂ ಉಲಿಯುವುದು – ಇದೂ ಕೂಡಾ ಒಂದುಲೆಕ್ಕದಲ್ಲಿ ಇವೆರಡು ಉಲಿಕೆಗಳು ಕಾಲಕ್ರಮದಲ್ಲಿ ಬದಲಾಗುತ್ತಿರುವ (ಉಲ್ಟಾ ಆಗುತ್ತಿರುವ) ಒಂದು ಬೆಳವಣಿಗೆ. ಸದ್ಯಕ್ಕೆ ನಮ್ಮ ಪರಿಸ್ಥಿತಿ ಇದೂ ಅಲ್ಲ. ಆದರೆ ಉಲಿಕೆಯಲ್ಲಿ, ಬರಹದಲ್ಲಿ ಅದಕ್ಕಿದು ಇದಕ್ಕದು ಮಾಡುವುದು ಕನ್ನಡಿಗರಲ್ಲಿ ಇದೆ.
              ಎರಡನೆಯ ಮತ್ತು ನಾಲ್ಕನೆಯ ಸಂದರ್ಭಗಳು ಕನ್ನಡಿಗರಲ್ಲಿದೆ ಎನ್ನುವುದನ್ನು ತಾವೂ ಒಪ್ಪಿದ್ದೀರಾ ಎಂದು ತಮ್ಮ ಹಿಂದಿನ ಕಮೆಂಟುಗಳ ಆಧಾರದ ಮೇಲೆ ನಾನು ಭಾವಿಸಿ ಮುಂದುವರೆಯುತ್ತೇನೆ. ಬರಹದಲ್ಲಿ ಮಹಾಪ್ರಾಣಾಕ್ಷರಗಳನ್ನು ಬಳಸಿ, ಉಚ್ಚರಿಸುವಾಗ ಅಲ್ಪಪ್ರಾಣದಂತೆ ಉಚ್ಚರಿಸುವ ಸಂದರ್ಭಗಳು ಕನ್ನಡಿಗರಲ್ಲಿ ಹೆಚ್ಚು. ಇದನ್ನು ಒಂದು ಸಮಸ್ಯೆಯೆಂದೂ, ಸರಿಯಿಲ್ಲದ್ದು ಎಂದೂ ಭಾವಿಸುವ ನಿಲುವಿದ್ದಲ್ಲಿ ಈ ಸಮಸ್ಯೆಗಿಂತ ಉಲಿಯುವಾಗ ಮಹಾಪ್ರಾಣ ಉಲಿದು, ಬರಹದಲ್ಲಿ ಅಲ್ಪಪ್ರಾಣ ಬರೆಯುವ ಸಮಸ್ಯೆ ಉತ್ತಮವಲ್ಲವೇ? ಇದು ಹೀಗಾಗುವುದೇ ಒಳಿತು ಏಕೆಂದರೆ ಹೆಚ್ಚಿನ ಕನ್ನಡಿಗರು ಅಲ್ಪಪ್ರಾಣವನ್ನೇ ಉಲಿಯುತ್ತಾರೆ ಎಂಬುದು. ಒಂದನೇ ಸಂದರ್ಭವೇ ಅತ್ಯುತ್ತಮ ಎನ್ನುವುದು ಮಾದರಿ ಸನ್ನಿವೇಶವಾಗಿದ್ದರೂ ಸಾಧಿಸಲು ಅಸಾಧ್ಯವಾದದ್ದು ಮತ್ತು ಅಗತ್ಯವಿಲ್ಲದ್ದು ಎನ್ನುವುದು ನನ್ನ ನಿಲುವು.
              ಬನವಾಸಿ ಬಳಗದವರು ಕನ್ನಡ ಲಿಪಿಸುಧಾರಣೆಯ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪೆಲ್ಲಿಂಗ್ ಸಮಸ್ಯೆ ಸರಿಮಾಡಬೇಕಾದ ತುರ್ತು ಕನ್ನಡಕ್ಕೆ ಈಗೇನಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಅಂದರೆ ಲಿಪಿಕ್ರಾಂತಿಗಿಂತ ತುರ್ತಾಗಿ ಪದಕ್ರಾಂತಿಯಾಗಬೇಕೆಂದು ಅವರ ನಿಲುವೆಂಬುದಾಗಿ ನನ್ನ ಅನಿಸಿಕೆ. ತುರ್ತು ಇಲ್ಲ ಅನ್ನುವುದರ ಅರ್ಥ ಹಾಗೆ ಮಾಡುವುದು ತಪ್ಪು ಎಂದೇನಲ್ಲ ಅಂದುಕೊಳ್ಳುತ್ತೇನೆ. ಶಂಕರಬಟ್ಟರು ತೋರಿಸಿಕೊಟ್ಟಿರುವಂತೆ ಕನ್ನಡದಲ್ಲಿ ಋಕಾರ, ಷಕಾರಗಳ ಬಳಕೆ ಬೆರಳೆಣಿಕೆಯ ಪದಗಳಿಗಷ್ಟೇ ಸೀಮಿತವಾಗಿದ್ದು ಇಂತಹ ಕೆಲವು ಪದಗಳನ್ನು ಸರಿಯಾಗಿ(?) ಉಲಿಯಲು/ ಬರೆಯಲು ಈ ಅಕ್ಷರಗಳನ್ನು ವರ್ಣಮಾಲೆಯಲ್ಲಿಟ್ಟುಕೊಳ್ಳುವುದು ಅಗತ್ಯವಿಲ್ಲ ಎನ್ನಿಸುತ್ತದೆ. ಹೌದು, ಭಾವುಕ ನೆಲೆಯಲ್ಲಿ ನೀವಂದಂತೆ ನಮ್ಮ ಹಿಂದಿನ/ ಪರಂಪರೆಯ ಯಾವುದನ್ನೇ ಬಿಡುವುದು ಮನಸ್ಸಿಗೆ ಹಿಂಸೆಯೇ ಆಗುತ್ತದೆ ಎನ್ನುವುದನ್ನು ಬಲ್ಲೆನು. ಆದರೂ ಬಹುಸಂಖ್ಯೆಯ ಕನ್ನಡಿಗರಿಗೆ ಗೊಂದಲಮುಕ್ತವಾದ ಅಕ್ಷರಮಾಲೆ ಅನುಕೂಲಕರವಾಗಿಯೇ ಇದೆ ಎನ್ನುವುದು ನನ್ನ ಅನಿಸಿಕೆ. ಇಲ್ಲಿ ಅಕ್ಷರಗಳ ಸಂಖ್ಯೆ ಹೆಚ್ಚಿದೆಯೋ ಕಡಿಮೆಯಿದೆಯೋ ಎನ್ನುವುದು ಅಪ್ರಸ್ತುತ. ಎಷ್ಟು ಬೇಕಿದೆಯೋ ಅಷ್ಟಿದೆಯೋ? ಬೇಕಿರುವುದಕ್ಕಿಂತ ಹೆಚ್ಚಿದೆಯೋ? ಮತ್ತಷ್ಟು ಬೇಕಿದೆಯೋ? ಯಾವುದು ಹೆಚ್ಚು ಅನುಕೂಲಕರ ಎನ್ನುವುದೇ ಪರಿಗಣಿಸಬೇಕಾದ/ ಪರಿಗಣಿಸಲಾದ ವಿಷಯವಾಗಿದೆ.
              ಕೊ.ಕೊ: ನನ್ನ ಮಕ್ಕಳ ಶಾಲೆಯಲ್ಲಾಗಲೀ, ನಾ ಕಲಿತ ಶಾಲೆಯಲ್ಲಾಗಲೀ ಶಂಕು ಶ, ಪಟ್ಟೆ ಶ (ಪಟ್ಟೆ ಅಲ್ಲದಿದ್ದರೆ ಷಣ್ಮುಖ) ಎಂದೇ ಹೇಳಿಕೊಡುವುದು. ಆದರೆ ಉಚ್ಚರಣೆಯಲ್ಲಿ ವಿಶೇಷ ಪ್ರಯತ್ನವಿಲ್ಲದೆ ವ್ಯತ್ಯಾಸವನ್ನು ತೋರಿಸಿಕೊಡುವುದು ಪಂಡಿತರಿಗೆ ಮಾತ್ರಾ ಸಾಧ್ಯವೇನೋ.

              ವಂದನೆಗಳು

              ಉತ್ತರ
              • ಮಾಯ್ಸ
                ಏಪ್ರಿಲ್ 12 2011

                ” ಅಂದರೆ ಲಿಪಿಕ್ರಾಂತಿಗಿಂತ ತುರ್ತಾಗಿ ಪದಕ್ರಾಂತಿಯಾಗಬೇಕೆಂದು ಅವರ ನಿಲುವೆಂಬುದಾಗಿ ನನ್ನ ಅನಿಸಿಕೆ. ತುರ್ತು ಇಲ್ಲ ಅನ್ನುವುದರ ಅರ್ಥ ಹಾಗೆ ಮಾಡುವುದು ತಪ್ಪು ಎಂದೇನಲ್ಲ ಅಂದುಕೊಳ್ಳುತ್ತೇನೆ. ಶಂಕರಬಟ್ಟರು ತೋರಿಸಿಕೊಟ್ಟಿರುವಂತೆ ಕನ್ನಡದಲ್ಲಿ ಋಕಾರ, ಷಕಾರಗಳ ಬಳಕೆ ಬೆರಳೆಣಿಕೆಯ ಪದಗಳಿಗಷ್ಟೇ ಸೀಮಿತವಾಗಿದ್ದು ಇಂತಹ ಕೆಲವು ಪದಗಳನ್ನು ”

                ಆ ಪದಗಳನ್ನು ತೋರಿಸಿರಿ. ಈ ‘ಅಷ್ಟು’ ಪದ ಹಳಗನ್ನಡದಲ್ಲಿ, ನಡುಗನ್ನಡದಲ್ಲಿ ಇಲ್ಲವಲ್ಲ. ಅದು ಹೇಗೆ ಹೊಸಗನ್ನಡದಲ್ಲಿ ‘ಷ’ಕಾರದಿಂದ ಬಂತು?

                ಹಾಗೆ ಒಂಭತ್ತು ಎಂದು ಬರೆಯೋದು ಸರಿಯೇ? ಇಂಗ್ಲೀಷು, ಷುಗರ್ ಹೀಗೆಲ್ಲ ಬರೆದು ಕನ್ನಡದಲ್ಲಿ ಮಹಾಪ್ರಾಣ, ಷಕಾರ ಬೇಕು ಎಂದು ವಾದ ಮಾಡಿದವರೂ ಇದ್ದಾರೆ.

                ಇನ್ನು ಋ ಇರುವ ಒಂದು ಕನ್ನಡ ಪದ ತೋರಿಸಿರಿ.

                ಇನ್ನು ಹಿಂದಿನ ಪರಂಪರೆಯ ಮಾತಾದರೆ, ನಾವು ೧೮ಶತಮಾನ ಕನ್ನಡ ಲಿಪಿಯಲ್ಲಿ ಬರೆಯುತ್ತಲೇ ಇಲ್ಲ. ಆ ಲಿಪಿ ತೆಲುಗಿಗೆ ಹತ್ತಿರವಾಗಿದ್ದು, ಆಗಿನ ವ, ಮ ಹಾಗು ದೀರ್ಗ ಗುರುತುಗಳ ಬೇರೆಯಾಗಿದ್ದವಲ್ಲ.

                ಇನ್ನೂ ಹಿಂದೆ ಹೋದರೆ, ಕದಂಬ ಲಿಪಿ ಎಶ್ಟು ಮಂದಿಗೆ ಬರುವುದು?

                ಅಶ್ಟೆಲ್ಲ ಯಾಕೆ ಹೊಸಗನ್ನಡ ಮೊದಲ ಗದ್ಯವಾದ ‘ಮುದ್ರಾ ಮಂಜೂಶ’ ಎಶ್ಟು ಮಂದಿ ಓದಿ ಅರಿಯಬಲ್ಲರು ಹಾಗೂ ಡಿವಿಜಿಯವರ ಮಂಗು ತಿಮ್ಮನ ಕಗ್ಗ ಪದ್ಯವನ್ನು ಹಾಗ್ ಹಾಗೇ ಎಶ್ಟು ಮಂದಿ ಓದಬಲ್ಲರು..? ಹಾಗಾದರೆ ನಾವು ಮುದ್ರಾ ಮಂಜೂಶದ ಬಗೆಯ ಕನ್ನಡದಲ್ಲಿ ಈಗ ಬರೆಯಲು ಬರುವುದೇ?

                ಹೊಸಗನ್ನಡದ ಶುರುವಿನಲ್ಲೂ ಕನ್ನಡದ ಓದು-ಬರಹ ಸಂಸ್ಕ್ರುತ ಕುಲದವರಲ್ಲೇ ಹೆಚ್ಚಿತ್ತು, ಅದು ಈಗ ಇದರ ಗುಂಪುಗಳಿಗೂ ಹರಡಬೇಕು ಹಾಗು ಅದು ಸಲೀಸಾಗಬೇಕು. ಅದಕ್ಕೆ ಈ ಎಲ್ಲ ಮಾರ್ಪಾಟುಗಳು ಬೇಕು, ಇಲ್ಲವಾದಲ್ಲಿ ಈ ಅಸಂಸ್ಕ್ರುತ ಗುಂಪುಗಳಿಗೆ ಕನ್ನಡ ಕಲಿಕೆಯೇ ಹೊರೆಯಾಗಿ ಇಂಗ್ಲೀಶು, ಹಿಂದಿಯ ಕಡೆ ಹೊರಳುವರು.
                ಅದೇ ಹಲವರಿಗೆ ಬೇಕಾಗಿರುವುದೂ ಕೂಡ.

                ಉತ್ತರ
                • ಮಾಯ್ಸ
                  ಏಪ್ರಿಲ್ 12 2011

                  “ಅದೇ ಹಲವರಿಗೆ ಬೇಕಾಗಿರುವುದೂ ಕೂಡ.” ಎಂದಾಗ ಹಲವರಿಗೆ ಕನ್ನಡಿಗರು ಹಿಂದಿ ಹಾಗು ಇಂಗ್ಲೀಶನ್ನೇ ಮೊದಲ ನುಡಿಯಾಗಿ/primary ನುಡಿಯಾಗಿ ಕಲಿಯುಂತೆ ವ್ಯವಸ್ತೆ ಇರಬೇಕು ಎಂಬುದೇ ಕೆಲವರಿಗೆ ಬೇಕಿದೆ. ಅದರಿಂದ ಅವರಿಗೆ ಲಾಬವೂ ಇದೆ.!

                  ಉತ್ತರ
                • Shubhashree
                  ಏಪ್ರಿಲ್ 12 2011

                  ಮಾಯ್ಸಾ ಅವರೇ,

                  “ಕನ್ನಡದಲ್ಲಿ ಋಕಾರ, ಷಕಾರಗಳ ಬಳಕೆ ಬೆರಳೆಣಿಕೆಯ ಪದಗಳಿಗಷ್ಟೇ ಸೀಮಿತವಾಗಿದ್ದು ಇಂತಹ ಕೆಲವು ಪದಗಳನ್ನು…” ಎನ್ನುವಾಗ ನಾನು ಹೇಳಬಯಸಿದ್ದು ಋಷಿ, ಸಂತೋಷ.. ಮುಂತಾದವನ್ನು. ಇವು ಕನ್ನಡ ಬೇರಿನದ್ದು ಎಂದು ಹೇಳುವ ಉದ್ದೇಶ ನನ್ನದಾಗಿರಲಿಲ್ಲ. ಕನ್ನಡದಲ್ಲಿ ಎನ್ನುವ ಬದಲು ಕನ್ನಡಿಗರಲ್ಲಿ ಎಂದಿದ್ದರೆ ಸರಿ ಹೋಗ್ತಿತ್ತೇನೋ. ಇರಲಿ, ನನ್ನ ಅನಿಸಿಕೆಯ ಉದ್ದೇಶಕ್ಕಂತೂ ಇದರಿಂದ ಭಂಗ ಬಂದಿಲ್ಲ ಎಂದುಕೊಳ್ಳುತ್ತೇನೆ.
                  ವಂದನೆಗಳು

                  ಉತ್ತರ
                  • ಮಾಯ್ಸ
                    ಏಪ್ರಿಲ್ 12 2011

                    ಶುಬಶ್ರೀ

                    ಹಾಗಿದ್ದಲ್ಲಿ ಓಕೆ!

                    ಆದರೂ ನಾವು ಸಂತೋಶ, ರುಶಿ ಎಂದೇ ಉಲಿಯೋದು!

                    ಆದರೆ ಇಂಗ್ಲೀಷು, ಷುಗರು ಎಂದು ಅದು ಯಾವ ಕಾರಣದಿಂದ ಷ ಬಳಸಿಬರೆಯುವರೋ ನಾ ಕಾಣೆ!

                    ಉತ್ತರ
            • ಮಾಯ್ಸ
              ಏಪ್ರಿಲ್ 11 2011

              ಶುಬಶ್ರೀ..

              ಸಂಸ್ಕ್ರುತ ಹಾಗು ಬೇರೆ ಹೊರನುಡಿಗಳ ಎರಡವಲಲ್ಲಿ ಇಂದು ದೊಡ್ಡ ಬೇರೆತನವಿದೆ. ಇದನ್ನು ಶಂಕರಬಟ್ಟರು ಬಿಡಿಸಿ ಬಿಡಿಸಿ ಹೇಳುವರು.

              ೧) ಮೊದಲಿಗೆ ಸಂಸ್ಕ್ರುತವಲ್ಲದ ಹೊರನುಡಿ ಎರವಲು :
              ಇವು ತಲೆಮೆ/ಮುಕ್ಯವಾಗಿ ಪಾರಸೀ/ಉರ್ದು, ಮರಾಟಿ ಪೋರ್ಚುಗೀಸು, ಹಿಂದಿ, ಇಂಗ್ಲೀಶು, ತುಳು, ತೆಲುಗು, ಹಾಗು ಕೊಂಕಣಿಯಿಂದ…

              ಆದರೆ ಇವು ಕನ್ನಡಕ್ಕೆ ಬರುವಾಗ ಕನ್ನಡತನಗೊಂಡು ಬರುವುವು..

              ಮಾದರಿ: ಅರಝ್ => ಅರ್ಜಿ, ಖಸ್‌ಖಸ್ => ಕಸಕಸೆ, ಖರಡಾ => ಕರಡು, appeal => ಅಪೀಲು

              ಗಮನಿಸಿರಿ ಇವು ಹೆಚ್ಚಿನವು ಅವುಗಳ ಮೂಲರೂಪದಲ್ಲಿ ಕನ್ನಡದಾಗೆ ಬಾಳಿಕೆಯಲ್ಲೇ ಇಲ್ಲ.

              ಆದರೆ
              ೨. ಸಂಸ್ಕ್ರುತ ಮೂಲದವು

              ಅ. ಹಳಗನ್ನಡದಲ್ಲಿ ಬಂದ ಸಂಸ್ಕ್ರುತ ತತ್ಸಮಗಳು ಹಾಗು ತದ್ಬವಗಳು ಇಲ್ಲಿ ತತ್ಸಮಗಳೇ ಹೆಚ್ಚು.. ಹಾಗು ಇದು ಆಸ್ತಾನ ಪಂಡಿತರಾದ ವೈದಿಕರೂ ಹಾಗು ಜೈನರು ಬರೆದ ಕಾವ್ಯದಲ್ಲಿ.
              ಆ. ನಡುಗನ್ನಡದಲ್ಲಿ ಹೆಚ್ಚು ತದ್ಬವಗಳು.. ಇವು ಹೆಚ್ಚು ಬರೆದುದು ಲಿಂಗಾಯತರ ವಚನಗಳು. ಸಾಮಾನ್ಯ ಮಂದಿಗೆಂದು. ಹಾಗೇ ದಾಸರ ಪದಗಳು.
              ಇ. ನಡುಗನ್ನಡದ ನಂತರ ಬಂದ ಸಂಸ್ಕ್ರುತ ತುಂಬಿದ ಕಾವ್ಯ. ಇಲ್ಲಿ ಹೆಳೆಯ ತದ್ಬವಗಳನ್ನು ತಿರುಗಿ ಸಂಸ್ಕ್ರುತ ಮೂಲರೂಪಕ್ಕೆ ಒಯ್ಯಲಾಯಿತು. ಇದ ಮೊದಲು ರಾಜಾಸ್ತಾನದಲ್ಲಿ ನಡೆದುದು. ಒಡೆಯರ್ ಆಸ್ತಾನದ ಹೆಚ್ಚಿನ ಪಂಡತರಿಂದ ನಡೆದುದು.

              ಆದರೆ.. ಇವಿಶ್ಟೂ ನಡೆದ ಕಾಲದಲ್ಲಿ ಓದು-ಬರಹ ತಿಳಿದವರು ತುಂಬಾ ಕಡಮೆ ಇದ್ದರು ಹಾಗೂ ಅವರೆಲ್ಲರೂ ಓದು-ಬರಹವನ್ನು ತಲೆಮಾರಿನಿಂದ ಕಲಿತ ಮನೆಯವರಾಗಿದ್ದರು.

              ಈ ಬಗ್ಗೆ ಡಾ||ಎಂ.ಎಂ ಕಲಬುರ್ಗಿಯವರ ಉದ್ಗಾಟನಾ ಬಾಶಣ “ಕನ್ನಡ ಮನಸ್ಸು ಬೌದ್ಧಿಕ ಸ್ವಾತಂತ್ರ್ಯ” ಎಂಬ ಹೊತ್ತಗೆ ನೋಡಿರಿ.

              ಅಲ್ಲಿ ಅವರದೊಂದ ಸಾಲು ಹೀಗಿದೆ.. ಕನ್ನಡ ಸಾಹಿತ್ಯ ಹಲವಾರು ಹಂತಗಳನ್ನು ಬಿಡಿಸಿ ಹೇಳುತ್ತಾ “ಒಟ್ಟಾರೆ, ಸೋಲು ಗೆಲುವುಗಳೇನೇ ಇರಲಿ, ವಚನ – ಪ್ರಗತಿಶೀಲ – ದಲಿತ ಬಂಡಾಯ – ಮಹಿಳಾವಾದ ಕಾಲಗಟ್ಟಗಳಲ್ಲಿ ಮಾತ್ರ ಬೌದ್ದಿಕ ಸ್ವಾತಂತ್ರ್ಯ ಒಂದು ‘ತತ್ವ’ವಾಗಿ ಕೆಲಸ ಮಾಡಲು ಹವಣಿಸಿದೆ. ಇಲ್ಲೆಲ್ಲ ಅಪಾಯವನ್ನು ಮೈಮೇಲೆ ಎಳೆದುಕೊಂಡ ಬರೆವಣಿಗೆ ಎದ್ದು ಕಾಣುತ್ತದೆ”.

              ಅಲ್ಲಿ ಯಾರಿಂದ ಅಪಾಯ ಎಂಬುದನ್ನು ಬಿಡಿಸಿ ಇಲ್ಲಿ ಹೇಳಿದರೆ ಈ ಅನಿಸಿಕೆಯನ್ನು ಅಳಿಸಿಹಾಕುವರು. ಹುರುಪಿರುವವರು ಆ ಹೊತ್ತಗೆ ಓದಿಕೊಳ್ಳತಕ್ಕದ್ದು.

              ಉತ್ತರ
              • ಮಾಯ್ಸ
                ಏಪ್ರಿಲ್ 11 2011

                “ಎರಡವಲಲ್ಲಿ” ಅನ್ನು “ಎರವಲಲ್ಲಿ” ಎಂದು ತೆಗೆದುಕೊಳ್ಳಿ..

                ಉತ್ತರ
              • ಹೊರನುಡಿಯೊಂದು ಕನ್ನಡಕ್ಕೆ ಬಂದಾಗ ಅದು ಕನ್ನಡ ನಾಲಿಗೆಗೆ ಹೊರಳಿಕೊಳ್ಳುವುದು ಸಹಜ, ಒಪ್ಪಿದೆ. ಆದರೆ ಅದು ಎಂಥ ಜನ ಹೀಗೆ ಎರವಲು ತರುತ್ತಾರೆ ಅನ್ನೋದರ ಮೇಲೆ ಅವಲಂಬಿಸಿದೆಯಲ್ಲವೇ. ನೀವೇ ಹೇಳುವಂತೆ ಸಂಸ್ಕೃತ ನುಡಿಗಳನ್ನು ಎರವಲು ತಂದವರು ಓದು-ಬರಹ ತಿಳಿದವರು, ಪಂಡಿತರು etc. ಸಹಜವಾಗೇ ಅವರಿಗೆ ಅದನ್ನು ಹೊರಳಿಸಿಕೊಳ್ಳುವ ಅಗತ್ಯವಿರಲಿಲ್ಲ ಅನ್ನೋಣ. ಅವೂ ಎಲ್ಲ್ಲೆ ಜನಸಾಮಾನ್ಯರ ಬಾಯಲ್ಲಿ ಬಿದ್ದು ಹೊರಳಿಕೊಳ್ಳುವ ಅಗತ್ಯ ಬಂತೋ ಅಲ್ಲೆಲ್ಲಾ ಹೊರಳೇ ಇದೆ. ಈ ಕ್ರಿಯೆಯೇನಿದ್ದರೂ ಪದವೊಂದು ಕನ್ನಡಕ್ಕೆ ಬರುವಾಗ ನಡೆಯುವಂಥದ್ದು. ಬಂದು ಬಹುಕಾಲ ಇದ್ದು ಅದು ಕನ್ನಡದ್ದೇ ಆದಮೇಲೆ ಅದನ್ನು ಕೃತಕವಾಗಿ “ಹೊರಳಿಸ”ಬೇಕೆಂಬ ಹಟಕ್ಕೇನರ್ಥ? ಈ ಸುತ್ತುಬಳಸಿಗೆ ಇಲ್ಲದ ಅರ್ಥ ಅಂದು ಎಂದೋ ಸಹಜವಾಗಿ ನಡೆದ ಎರವಲುಗಳಿಗೆ ಬಂತೇ? ಇದೆಲ್ಲಾ ಬಳಸೋರು ಕೆಲವೇ ಓದಿದ ಜನ, ರಾಜಾಸ್ಥಾನದಲ್ಲಿದ್ದ ಪಂಡಿತರು ಅಂದದ್ದಕ್ಕೆ ಹೇಳ್ತೀನಿ. ಕುವೆಂಪು, ಬೇಂದ್ರೆ, ಕೊನೆಗೆ ಅನೇಕ ಹಿಂದಿನ ಇಂದಿನ ತಲೆಮಾರಿನ ಲೇಖಕರ್ಯಾರು ರಾಜಾಸ್ತಾನ ಗಿಟ್ಟಿಸಿಕೊಳ್ಳೋಕ್ಕೆ ಸಾಹಿತ್ಯ ಬರೆದವರಲ್ಲ ಅಂದುಕೊಳ್ತೀನಿ. ಅಷ್ಟೇಕೆ, ಬಹುತೇಕ ಶಂಕರಬಟ್ಟರ ಹೊತ್ತಗೆಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಹಿರಿಯ ಲೇಖಕರ ಭಾಷೆಯಲ್ಲೂ ಈ so called “ಸಂಸ್ಕೃತ”ದ ಪದಗಳೇ ತುಂಬಿವೆಯಲ್ಲ? ಅವರೆಲ್ಲಾ ಈ “ಅಪಾಯಕಾರಿ” ಸಾಹಿತ್ಯ ಏಕೆ ಬರೆದರೋ?!!!

                ಉತ್ತರ
                • ಮಾಯ್ಸ
                  ಏಪ್ರಿಲ್ 12 2011

                  ಮೊದಲಿಗೆ ಹಟ ಅಲ್ಲ ಹಠ ನಿಮ್ಮಂತೆ..

                  “ಮಿಕ್ಕೆಲ್ಲಾ ಹಿರಿಯ ಲೇಖಕರ ಭಾಷೆಯಲ್ಲೂ ಈ so called “ಸಂಸ್ಕೃತ”ದ ಪದಗಳೇ ತುಂಬಿವೆಯಲ್ಲ?”

                  ಹೋ! 😀

                  ಉತ್ತರ
                  • “ನಿಮ್ಮಂತೆ..” ಹಠ, ನನ್ನಂತೆ ಅಂತ ಕಂಡುಕೊಂಡಿಕೊಂದ್ರಲ್ಲ, ನಿಮ್ಮ ಕಾಣ್ಕೆ ಅದ್ಭುತವೇ ಸೈ.

                    ವಾದಕ್ಕೆ ನಿಲ್ಲದೇ ನುಣುಚಿಕೊಳ್ಳುವ ನಿಮ್ಮ ವ್ಯಂಗ್ಯದ ಹಿಂದಿನ ದುರುದ್ದೇಶಗಳು ಇನ್ನಿಷ್ಟೇ ಅರ್ಥವಾದರೂ, ನನ್ನ ನಿಲುವನ್ನಷ್ಟೇ clear ಮಾಡುವ ನನ್ನ ಹುಚ್ಚು ಹೋಗದು, ಇರಲಿ.

                    ಹಠ, ನನ್ನಂತೆ, ಅಲ್ಲ. ಸಂಸ್ಕೃತದಲ್ಲಿ ಇದ್ದ ಹಠ ಕನ್ನಡದಲ್ಲಿ ಹಟವಾಗಿದೆ, ಅದು ಸಹಜವಾಗಿದ್ದು ನಾವು ಅದನ್ನು ಅಂತೆಯೇ ಬಳಸುತ್ತಿದ್ದೀವಿ. ಭಾಷೆಯ ಹರಿವಿನಲ್ಲಿ ಯಾವುದು ಈಗಾಗಲೇ ಬಂದು ಸಹಜವಾಗಿ ಇಲ್ಲಿ ನಿಂತಿದೆಯೋ ಅದನ್ನು ಕದಲಿಸಬಾರದು ಅನ್ನೋದಷ್ಟೇ ನನ್ನ ನಿಲುವು. ನಿಮ್ಮ ಭ್ರಮೆಯಂತೆ ನಾನು ಸಂಸ್ಕೃತದ ದುರಭಿಮಾನಿಯಾಗಿದ್ದರೆ ಇದು ಹಠವೇ ಆಗಬೇಕು ಅಂತಿದ್ದೆ. ಇಲ್ಲ ನಿದ್ದೆ/ನಿದ್ರೆ ತಪ್ಪು “ನಿದ್ರಾ” ಆಗಬೇಕು ಅಂತಿದ್ದೆ, ಹಾಗೆಯೇ ಸೀತಾ, ಮಾತಾ ಆಗಬೇಕೆನ್ನುತ್ತಿದ್ದೆ. ಅಥವ ಎಡಹೃತ್ಕರ್ಣ, ಬಲಹೃತ್ಕುಕ್ಷಿಯೇ ಆಗಬೇಕೆನ್ನುತ್ತಿದ್ದೆ. On the other hand, ಡಾಕ್ಟರು ಬೇಡ ಮಾಂಜುಗಾರನೇ ಬೇಕು, ಪಾಯಿಂಟ್ ಬೇಡ ಬೊಟ್ಟುಗಳೇ ಬೇಕು ಅಂತ ಹಟ (ಸರಿ, ಹಠವೇ ಇರಲಿ) ಹಿಡಿಯುತ್ತಿರುವವರು ನೀವು. ನಿಮ್ಮನ್ನು ಕನ್ನಡ ದುರಭಿಮಾನಿಯೆನ್ನುವುದು ಸುಲಭ, ಆದರೆ ನನಗಿನ್ನೂ ವಸ್ತುನಿಷ್ಠ ಚರ್ಚೆಯಲ್ಲಿ ನಂಬಿಕೆ ಹೋಗಿಲ್ಲವಾದ್ದರಿಂದ ನಿಮ್ಮನ್ನು ಹೀಗಳೆದು, ಮೂದಲಿಸಿ ವಾದದಲ್ಲಿ ಗೆಲ್ಲುವ ದರ್ದೇನೂ ನನಗಿಲ್ಲ.

                    ನಿಮ್ಮ “ಹೋ :)” ನನಗಿಷ್ಟವಾಯಿತು. ನಗುವುದು ಆರೋಗ್ಯಕ್ಕೆ ಒಳ್ಳೇದು. ನಕ್ಕು ನೂರ್ಕಾಲ ಬಾಳಿ

                    ಉತ್ತರ
                    • ಕಂಡುಕೊಂಡಿಕೊಂದ್ರಲ್ಲ = ಕಂಡುಕೊಂಡ್ರಲ್ಲ

                    • ಮಾಯ್ಸ
                      ಏಪ್ರಿಲ್ 12 2011

                      ನೋಡಿ ಸ್ವಾಮಿ..

                      ನಾನು ನಿಮ್ಮ ಸಂಸ್ಕ್ರುತ ದುರಬಿಮಾನಿ ಎಂದು ಕರೆದೆನೆ? ಯಾಕೆ ಏನೇನೋ ಅಂದುಕೋತೀರಿ..

                      ನಾನ್ ಮಾಡಿದ್ದು ಇಶ್ಟೆ.. ಶಂಕರಬಟ್ಟರನ್ನು ಬಿಟ್ಟು ಮಿಕ್ಕ ಎಲ್ಲ ಅಂದರೆ ಪ್ರತಿಯೊಬ್ಬರೂ ಸಂಸ್ಕ್ರುತದ ಪದ ತುಂಬಿ ಬರೆದಿದ್ದಾರೆ ಎಂಬ ನಿಮ್ಮ ಮಾತಿಗೆ ನಕ್ಕಿದ್ದು.!

                      ನಾನು ಕನ್ನಡದ ದುರಬಿಮಾನಿ ಅನ್ನೋದು ನಾನೇ ಒಪ್ಪಿಕೊಳ್ತೀನಿ! ನನಗೆ ಕನ್ನಡವೊಂದೇ ಬೇಕು. ಮಿಕ್ಕಿದ್ದೆಲ್ಲ ಹಾಳಾಗಿ ಹೋಗಲಿ!.. ನಾನು ಪ್ರಮಾಣಿಕವಾಗಿ ೧೦೦% ಕುಟಿಲಬುದ್ದಿಯವನು ಕನ್ನಡತನಕ್ಕಾಗಿ. ಇದಕ್ಕೆ ನನಗೆ ಹೆಮ್ಮೆ!

                    • ಮಾಯ್ಸ
                      ಏಪ್ರಿಲ್ 12 2011

                      “On the other hand, ಡಾಕ್ಟರು ಬೇಡ ಮಾಂಜುಗಾರನೇ ಬೇಕು, ”

                      ಇದು ಒಳ್ಳೆಯ ಕನ್ನಡದ ಬಳಕೆ.

                      “ನಕ್ಕು ನೂರ್ಕಾಲ ಬಾಳಿ” ಒಳ್ಳೇದು.. ಆದರೆ ನಿಮಗೆ ಹೀಗಾಗುವುದು ಬೇಡ! ಬೇಡ ಹೋಗಿ.

                • ಮಾಯ್ಸ
                  ಏಪ್ರಿಲ್ 12 2011

                  ಹುಂರಿ.. ಕರೆಕ್ಟು.. 🙂

                  ಉತ್ತರ
                  • ಮಾಯ್ಸ
                    ಏಪ್ರಿಲ್ 12 2011

                    ಇನ್ನು ಇಲ್ಲಿ ನಕ್ಕಿದ್ದು ನಿಮ್ಮ ಎರವಲು ಪದಗಳ ವಿವರಣೆಯ ಬಗ್ಗೆ..

                    ನಡುಗನ್ನಡದ ತದ್ಬವಗಳಲ್ಲೆ ಹೊಸಗನ್ನಡದಲ್ಲಿ ತತ್ಸಮಗಳಾಗಿ ಹೋದವು.

                    ಸಂಸ್ಕ್ರುತದ ನುಸಿ ನನ್ನ ಒಲುಮೆಯ ಕನ್ನಡದಿಂದ ಯಾವಾಗ ತೊಲಗುವುದು.. ಅದಕ್ಕೆ ನಾವು ಯಾವ ನಂಜು ತಂದು ಸಿಂಪಡಿಸಬೇಕೋ..!! 🙂

                    ಉತ್ತರ
                    • ಫುಕುವೋಕಾ One Straw Revolution ತಂದು ಓದಿ. “ಒಂದು ಹುಲ್ಲಿನ ಕ್ರಾಂತಿ” ಅಂತ ಕನ್ನಡದಲ್ಲಿ ಸಿಗುತ್ತದೆ.

                      ಸಹಜಕೃಷಿಯ ಮೂಲತತ್ತ್ವಗಳು ನಿಮ್ಮನ್ನು ಕಾಡುತ್ತಿರುವ ಸಂಸ್ಕೃತ-ನುಶಿ ಸಮಸ್ಯೆಗೆ ಒಳ್ಳೇ insight ಕೊಡಬಲ್ಲುವು.

            • ಶುಭಶ್ರೀ, ನಿಮ್ಮ ಕಮೆಂಟಿಗೆ ತುಸು ಬಿಡುವು ಮಾಡಿಕೊಂಡು ಉತ್ತರಿಸುವೆ

              ಉತ್ತರ
      • Narendra
        ಏಪ್ರಿಲ್ 10 2011

        > ಇದೇ ಕಾರಣಕ್ಕೇ ಬ್ರಮ್ಹ ಎಂದು ಉಲಿಯುವುದು ಸರಿಯೆಂದಾದರೂ ಬರೆಯುವುದು ತಪ್ಪೆನ್ನಲಾಗುತ್ತದೆ.
        ನನಗನ್ನಿಸುವುದು ಕನ್ನಡದಲ್ಲಿ ನುಡಿದಂತೆ ಬರೆಯುವ ಕೆಲವೇ ಪದಗಳಲ್ಲಿ ಬ್ರಹ್ಮ ಕೂಡಾ ಒಂದು.
        ಉದಾಹರಣೆಗೆ “ಅಷ್ಟು” ಪದವನ್ನೇ ತೆಗೆದುಕೊಳ್ಳಿ. ನಾವು ಉಚ್ಚರಿಸುವಾಗ “ಟು” ಬರುತ್ತದೆ; ಆದರೆ ಬರೆಯುವಾಗ “ಷು” ಬರೆದು “ಟ” ಒತ್ತಕ್ಷರವಾಗುತ್ತದೆ.
        ಇದು ಹೆಚ್ಚು ಕಡಿಮೆ ಎಲ್ಲಾ ಒತ್ತಕ್ಷರಗಳಿಗೂ ಅನ್ವಯವಾಗುತ್ತದೆ.
        ಉಚ್ಚಾರಣೆಯಲ್ಲಿ ಅರ್ಧ ಹೇಳುವ ಅಕ್ಷರವನ್ನು ಬರವಣೆಗೆಯಲ್ಲಿ ಪೂರ್ಣವಾಗಿ ಬರೆಯುತ್ತೆವೆ; ಹಾಗೆಯೇ, ಉಚ್ಚಾರಣೆಯಲ್ಲಿ ಪೂರ್ಣ ಉಚ್ಚರಿಸುವ ಅಕ್ಷರ ಬರವಣಿಗೆಯಲ್ಲಿ ಅರ್ಧ (ಅರ್ಥಾತ್ ಒತ್ತು) ಆಗಿರುತ್ತದೆ.
        “ಬ್ರಹ್ಮ” ಪದ ಇದಕ್ಕೆ ಅಪವಾದ. ಉಚ್ಚರಿಸುವಾಗಲೂ “ಹ” ಪೂರ್ಣ, “ಮ” ಅರ್ಧ; ಬರೆಯುವಾಗಲೂ ಅದೇ ರೀತಿ.
        ಇದು ನಮ್ಮ ಕಾಗುಣಿತದಲ್ಲಿರುವ ದೋಷವಲ್ಲವೆ?

        ಉತ್ತರ
        • ನರೇಂದ್ರರೇ, ಒತ್ತಕ್ಷರಗಳು ಪೂರ್ಣ ಉಚ್ಚರಿಸಲ್ಪಡುವುದು ಮುಖ್ಯ ಅಕ್ಷರಗಳು ಅರ್ಧ ಉಚ್ಛರಿಸಲ್ಪಡುವುದು ವಿಚಿತ್ರವಾದರೂ ಅದನ್ನು ನಮ್ಮ ಕಾಗುಣಿತದ ದೋಷವೆನ್ನಲಾರೆ, ಏಕೆಂದರೆ ಈ ನಿಯಮ ಅಪವಾದವಿಲ್ಲದೇ ಬಹುತೇಕ ಎಲ್ಲ ಸಂದರ್ಭಗಳಲ್ಲೂ ಅನ್ವಯಿಸುತ್ತದೆ. ಸಂಸ್ಕೃತ, ಹಿಂದಿ ಅಷ್ಟೇಕೆ ದ್ರಾವಿಡ ಭಾಷೆಯಾದ ತಮಿಳಿನಲ್ಲೂ ಒತ್ತಕ್ಷರಗಳಲ್ಲಿ ಅರ್ಧ ಉಚ್ಚರಿಸುವ ಅಕ್ಷರ ಅರ್ಧವಾಗಿ ಮೊದಲು ಬಂದು ಪೂರ್ಣ ಉಚ್ಚರಿಸುವ ಅಕ್ಷರ ಪೂರ್ಣವಾಗಿ ಅನಂತರ ಬರುತ್ತದೆ. काव्य, अक्बर, அன்பு ಇತ್ಯಾದಿ. ಉಚ್ಚಾರಣೆಯ ಕ್ರಮದ ದೃಷ್ಟಿಯಿಂದ ಇದು ಸರಿಯೇ. ಆದರೆ ಕನ್ನಡದಲ್ಲಿ ಮಾತ್ರಾ ಇದನ್ನು ಬರೆಯುವಾಗ ಕಾವ್ಯ, ಅಕ್ಬರ್, ಅನ್ಬು ಎಂದು ಬರೆಯುತ್ತೇವೆ. ಆದರೆ ಇದು ಯಾವುದೇ ಗಲಿಬಿಲಿಯಿಲ್ಲದೇ ಕನ್ನಡದಲ್ಲಿ ಬರೆಯುವ ರೀತಿಯೇ ಆಗಿರುವುದರಿಂದ ಇದನ್ನು ಕನ್ನಡದ ರೀತೆಯಿನ್ನಬಹುದೇ ಹೊರತು ದೋಷವೆಂದು ಪರಿಗಣಿಸಲಾರೆ.

          ಉತ್ತರ
        • ಮಾಯ್ಸ
          ಏಪ್ರಿಲ್ 11 2011

          🙂 ಬ್ರಹ್ಮ, ಚಿಹ್ನೆ, ಇವನ್ನು ಹಾಗೇ ಉಲಿಯಬೇಕು..

          ಅಲ್ಲಿ ನೆರವು ಪರೆಯಿರಿ..
          http://www.shabdkosh.com/s?e=mark&f=0&t=10&l=hi

          ಬ್ರಹ್ಮ ಅನ್ನು ಬ್ರಮ್ಹ ಎಂದೂ, ಚಿಹ್ನೆಯನ್ನು ಚಿನ್ಹೆ ಎಂದೂ ಉಲಿಯೋದು ತಪ್ಪು.!

          ಹಾಗೇ ಜ್ಞಾನ ಅನ್ನು ಗ್ಯಾನ ಎಂದು ಬರತ್ ಬರೀತಿರೋದು ತಮ್ಮ.. ಅದು ಜ್ನಾನಕ್ಕೆ ಹತ್ತಿರವಾಗಿ..

          ಈ ಬಗೆಯ ಸದ್ದು ಇಂಗ್ಲೀಶಲ್ಲೂ ಇದೆ

          ಹೆ ಹೆ..! ಅಶ್ಟು ಮತ್ತು ಅಷ್ಟು ಗಳನ್ನ ಬೇರೆ ಬೇರೆಯಾಗಿ ಉಲಿದು ತೋರಿಸಿ ನೋಡೋಣ!

          ಉತ್ತರ
          • ಮಾಯ್ಸ
            ಏಪ್ರಿಲ್ 11 2011

            ಹಾಗೇ ಜ್ಞಾನ ಅನ್ನು ಗ್ಯಾನ ಎಂದು ಬರತ್ ಬರೀತಿರೋದು ತಪ್ಪು.. ಅದು ಜ್ನಾನಕ್ಕೆ ಹತ್ತಿರವಾಗಿ..

            ಉತ್ತರ
          • ನೀವು ಎದುರಿಗೆ ಇಲ್ಲದಿರೋದ್ರಿಂದ ಉಲಿದು ತೋರಿಸಕ್ಕಾಗಲ್ಲ, ಆದರೆ ಅದು ವಿವರಿಸಕ್ಕೆ try ಮಾಡ್ತೀನಿ.

            ಷ ಅನ್ನೋದ್ರ ಉಲಿಕೆ ಶ ಅನ್ನೋದ್ರ ಉಲಿಕೆಗಿಂತ ತುಸು ಆಳವಾಗಿರುತ್ತೆ. ಶ is sharper than ಷ. ಶ ಹೇಳೋವಾಗ ನಾಲಿಗೆ position ಏನಿರುತ್ತೋ ಅದಕ್ಕಿಂತ ನಾಲಗೆ ಮಧ್ಯಭಾಗವನ್ನ ತುಸುವೇ ತುಸು ಅಳ ಮಾಡಿದ್ರೆ ಬಂತು ಷ.

            ಇನ್ನೊಂದು ರೀತಿ ಹೇಳಬೇಕು ಅಂದ್ರೆ, ನೀವು ಸ ಶ ಷ ಮೂರೂ ಅಕ್ಷರ ತಗೊಂಡ್ರೆ, ಸ is the sharpest and ಷ is the hollowest. ಶ comes in between.

            ಇದು ಒಮ್ಮೆ ತಲೆಯಲ್ಲಿ ಕೂತರೆ ತಾನಾಗೇ “ಅಷ್ಟು” ಅನ್ನೋ ಉಲಿಕೆ ಬರುತ್ಯೇ ಹೊರತು “ಅಶ್ಟು” ಅಂತ ಬರಲ್ಲ. ನೀವು ಗಮನಿಸಿರಬಹುದು, ಇಂಗ್ಲಿಶ್ ನ adjust (ಉದಾಹರಣೆಗೆ), ನಾವು ಉಲಿಯುವಾಗ ಅಡ್ಜಶ್ಟ್ ಅಂತ್ಲೇ ಉಲೀತೀವಿ, ಕಾರಣ ಇದು: ಟ್ ಅನ್ನೋದನ್ನ ನಾಲಿಗೆ ತುದಿಯನ್ನ ಹಲ್ಲಿನ ಹಿಂಬಾಗದ ದಿಬ್ಬಕ್ಕೆ ಸೋಕಿಸಿ ಉಲೀತೀವಿ. ಸ್ ಉಲೀಬೇಕಾದ್ರೆ ನಾಲಿಗೆ ತುದಿಯನ್ನ ಟ್ ಜಾಗಕ್ಕಿಂತಾ ಇನ್ನೂ ಮುಂದೆ ತರ್ತೀವಿ. ಅದೇ ಶ್ ಅನ್ನೋದು ಟ್ ಗಿಂತಾ ತುಸು ಹಿಂಭಾಗದಲ್ಲೇ ಹುಟ್ಟುತ್ತೆ. ಆದ್ರಿಂದ ಅಡ್ಜಶ್ಟ್ ಅನ್ನುವಾಗ ಜ್ ಉಲಿದ ಮೇಲೆ ನಾಲಿಗೆ ಶ್ ಉಲಿದು ತುಸು ಮುಂದೆ ಹೊರಳಿ ಟ್ ಉಲಿಯುತ್ತೆ. ಆದೇ ಅಡ್ಜಸ್ತ್ ಅನ್ನಬೇಕಾದ್ರೆ ಜ ಉಲಿದ ನಂತರ ನಾಲಗೆ ತುದಿಯನ್ನು ಟ್ ಜಾಗಕ್ಕಿಂತಾ ತೀರ ಮುಂದೆ ತಗೊಂಡು ಹೋಗಿ ಸ್ ಉಲಿದು ಮತ್ತೆ ವಾಪಸ್ ಬಂದು ಟ್ ಉಲಿ ಹೊರಡಿಸಬೇಕಾಗುತ್ತೆ. ಅದಕ್ಕೇ ಬಹಳಷ್ಟು ಜನ, ಅದ್ಜಸ್ತ್ ಅನ್ನೋದನ್ನ ಅದ್ಜಶ್ಟ್ ಅಂತ್ಲೇ ಉಲೀತಾರೆ. ಹೀಗೆ ಶ್ ಅನ್ನೋ ಕಡೆ ನಾಲಗೆಯನ್ನ ತುಸುವೇ ಆಳ ಮಾಡಿದರೆ ಷ್ ಬರುತ್ತೆ. That should produce ಅಷ್ಟು instead of ಅಶ್ಟು.

            ಇದು ಸಾಕಷ್ಟು ದೊಡ್ಡ ವಿವರಣೆ ಅನ್ನೋದು ನನಗೆ ಗೊತ್ತು, ಆದರೆ ಪ್ರತ್ಯಕ್ಷ ತೋರಿಸುವಲ್ಲಿ ಇದಕ್ಕೆ ಐದು ಸೆಕೆಂಡೂ ಬೇಕಿಲ್ಲ ಅನ್ನೋದು ಅಷ್ಟೇ ನಿಜ 🙂

            ಉತ್ತರ
            • ಮಾಯ್ಸ
              ಏಪ್ರಿಲ್ 12 2011

              ನಾನು adjustಅನ್ನು http://www.thefreedictionary.com/adjust ಅಲ್ಲಿ ಉಲಿಯೋ ಹಾಗೆ ಸ್ ಇಂದಲೇ ಉಲಿಯೋದು..

              ನಿಮಗೂ ಮುಂದೆ ಇದ್ದರೆ ಉಲಿದು ತೋರಿಸುತ್ತಿದ್ದೆ..

              ಅಂದ ಹಾಗೆ ಷ ಬಗ್ಗೆ ತಮ್ಮ ಉದ್ದಟಿಪ್ಪಣಿ ತಪ್ಪು..! ಯಾಕೆ ಏನು ನೋಡಿಕೊಳ್ಳಬಹುದು.

              ಟೈಮ್ ೮:೩೮. ನೀವು ಹೇಳಿದ “ನೀವು ಸ ಶ ಷ ಮೂರೂ ಅಕ್ಷರ ತಗೊಂಡ್ರೆ, ಸ is the sharpest and ಷ is the hollowest. ಶ comes in between.” ಇದೊಂದು ಕಿವಿ ಮೇಲೆ ಕಾಲಿಪ್ಲವರ್!

              ಸ = ತ/ಲ ಹೇಳಿದ ಹಾಗೆ ಹಲ್ಲಿನಿಂದ ಹೇಳಿದ ‘ಸ’
              ಶ = ಚ ಹೇಳಿದ ಹಾಗೆ palatal
              ಷ = ಟ/ಳ ಹೇಳಿದ ಹಾಗೆ cerebral

              ಹೇಗೆ ಹಳಗನ್ನಡದ ೞ ಹಾಗು ಱ cerebralಗಳು ನಾವು ಉಲಿಯಲು ಹೆಣಗುವೆವೋ ಹಾಗು ಹಲ-ಕನ್ನಡಿಗರ ಬಾಯಿಂದ ಬಿಟ್ಟು ಹೋಗಿದೆ (ಸ್ವಾಬಾವಿಕ ಉಲಿಕೆಯಿಂದ)..

              ಇಲ್ಲ ನಾನು ತಲೆಮೇಲೆ ನಿಲ್ಲಲು ಬಲ್ಲೇ ಅದಕ್ಕೇ ಎಲ್ಲರೂ ಹಾಗೆ ಮಾಡಿ ಎನ್ನೋ ವಾದಕ್ಕೆ ಬದಿಲು ನಗು ಅಶ್ಟೇ.!

              ಒಮ್ಮೆ ಟೀವಿಯಲ್ಲಿ ಬರುವ ಹಲ ಹೆಣ್ಣು ಮಕ್ಖಳನ್ನು ಗಮನಿಸಿರಿ ಅವರು ಅಸ್ಟು ಎಂದು ಹೇಳುವರು..

              ಇನ್ನು ಈ cerebral ಸದ್ದುಗಳು ಇನ್ನೂ ಹಲವು ಕಡೆ ಕಾಣೆಯಾಗುವುದು..

              ಯಾರು ಬಂದಳು ಎಂದು ಆಡು ಮಾತಲ್ಲಿ ಹೇಳಲ್ಲ.. ಎಲ್ಲರು ಬಂದ್ಲು ಎಂದು ಹಲ್ಲಿನ ಲಕಾರವನ್ನೇ ಹೇಳೋದು..

              ಅದೇ ಹೊರಟಳು ಎಂಬ ಸದ್ದೂ ಕೂಡ ಈಗೀಗ ಹಲವರು ಹೊರಟ್ಲು ಎಂದು ಹೇಳ್ತಾರೆ.. ಆದರೆ ಕೆಲಸ ಹಳೆಮಂದಿ ಇನ್ನು ಹೊರಟ್ಳು ಎನ್ನುವರು..

              ಕೇಶೀರಾಜ ಹೇಳೋ ಹಾಗೆ ಅತಿಪಿಡನೆಯಿಂದ ೞ ಮತ್ತು ಱಕಾರವನ್ನು ಉಲಿಯಬೇಕು.. ಎಂದು ಹಾಗೇ ಷಕಾರವನ್ನು.. ಇನ್ನು ಋಕಾರದ ಬಗ್ಗೆ ಇಲ್ಲದ ಕಾಗೆ ಕತೆ ಹೇಳೋಕ್ಕೆ ಮುನ್ನ ಅದು ರು ಅಲ್ಲ… ಅದನ್ನು ಚಾಚೂತಪ್ಪದೇ ಎಲ್ಲ ಸಲ ಉಲಿಯೋರು ಎಶ್ಟು ಅಪರೂಪ ಅಂದ್ರೆ ಸರ್ಕಸ್ ಅಲ್ಲಿ ಕತ್ತಿ ನುಂಗೋರಶ್ಟು..

              ಅದೇ ಹೇಳಿದ್ನಲ್ಲ.. ನಾವು ಒಂದಶ್ಟು ಜನ ಸರ್ಕಸ್ ಮಾಡ್ತೀವಿ ಅದಕ್ಕೆ ಊರೋರೆಲ್ಲ ಮಾಡಿ ಅನ್ನೋ ವಾದಕ್ಕೆ ಏನು ಮಾಡೋದು..

              ಇಲ್ಲಿ “ಇದು ಸಾಕಷ್ಟು ದೊಡ್ಡ ವಿವರಣೆ ಅನ್ನೋದು ನನಗೆ ಗೊತ್ತು,” ತನಗೆ ಗೊತ್ತು ಎಂಬೋದೇ ದೊಡ್ಡಸ್ತಿಕೆ!…

              ಅಂದ ಹಾಗೆ… ಈ ಅನಿಸಿಕೆಯನ್ನು ಅಳಿಸಬಹುದು.!..

              ಉತ್ತರ
            • ಮಾಯ್ಸ
              ಏಪ್ರಿಲ್ 12 2011

              ನಾನು adjustಅನ್ನು http://www.thefreedictionary.com/adjust ಅಲ್ಲಿ ಉಲಿಯೋ ಹಾಗೆ ಸ್ ಇಂದಲೇ ಉಲಿಯೋದು..
              ನಿಮಗೂ ಮುಂದೆ ಇದ್ದರೆ ಉಲಿದು ತೋರಿಸುತ್ತಿದ್ದೆ..
              ಅಂದ ಹಾಗೆ ಷ ಬಗ್ಗೆ ತಮ್ಮ ಉದ್ದಟಿಪ್ಪಣಿ ತಪ್ಪು..! ಯಾಕೆ ಏನು ನೋಡಿಕೊಳ್ಳಬಹುದು.

              ಟೈಮ್ ೮:೩೮. ನೀವು ಹೇಳಿದ “ನೀವು ಸ ಶ ಷ ಮೂರೂ ಅಕ್ಷರ ತಗೊಂಡ್ರೆ, ಸ is the sharpest and ಷ is the hollowest. ಶ comes in between.” ಇದೊಂದು ಕಿವಿ ಮೇಲೆ ಕಾಲಿಪ್ಲವರ್!
              ಸ = ತ/ಲ ಹೇಳಿದ ಹಾಗೆ ಹಲ್ಲಿನಿಂದ ಹೇಳಿದ ‘ಸ’
              ಶ = ಚ ಹೇಳಿದ ಹಾಗೆ palatal
              ಷ = ಟ/ಳ ಹೇಳಿದ ಹಾಗೆ cerebral
              ಹೇಗೆ ಹಳಗನ್ನಡದ ೞ ಹಾಗು ಱ cerebralಗಳು ನಾವು ಉಲಿಯಲು ಹೆಣಗುವೆವೋ ಹಾಗು ಹಲ-ಕನ್ನಡಿಗರ ಬಾಯಿಂದ ಬಿಟ್ಟು ಹೋಗಿದೆ (ಸ್ವಾಬಾವಿಕ ಉಲಿಕೆಯಿಂದ)..
              ಇಲ್ಲ ನಾನು ತಲೆಮೇಲೆ ನಿಲ್ಲಲು ಬಲ್ಲೇ ಅದಕ್ಕೇ ಎಲ್ಲರೂ ಹಾಗೆ ಮಾಡಿ ಎನ್ನೋ ವಾದಕ್ಕೆ ಬದಿಲು ನಗು ಅಶ್ಟೇ.!
              ಒಮ್ಮೆ ಟೀವಿಯಲ್ಲಿ ಬರುವ ಹಲ ಹೆಣ್ಣು ಮಕ್ಖಳನ್ನು ಗಮನಿಸಿರಿ ಅವರು ಅಸ್ಟು ಎಂದು ಹೇಳುವರು..
              ಇನ್ನು ಈ cerebral ಸದ್ದುಗಳು ಇನ್ನೂ ಹಲವು ಕಡೆ ಕಾಣೆಯಾಗುವುದು..
              ಯಾರು ಬಂದಳು ಎಂದು ಆಡು ಮಾತಲ್ಲಿ ಹೇಳಲ್ಲ.. ಎಲ್ಲರು ಬಂದ್ಲು ಎಂದು ಹಲ್ಲಿನ ಲಕಾರವನ್ನೇ ಹೇಳೋದು..
              ಅದೇ ಹೊರಟಳು ಎಂಬ ಸದ್ದೂ ಕೂಡ ಈಗೀಗ ಹಲವರು ಹೊರಟ್ಲು ಎಂದು ಹೇಳ್ತಾರೆ.. ಆದರೆ ಕೆಲಸ ಹಳೆಮಂದಿ ಇನ್ನು ಹೊರಟ್ಳು ಎನ್ನುವರು..
              ಕೇಶೀರಾಜ ಹೇಳೋ ಹಾಗೆ ಅತಿಪಿಡನೆಯಿಂದ ೞ ಮತ್ತು ಱಕಾರವನ್ನು ಉಲಿಯಬೇಕು.. ಎಂದು ಹಾಗೇ ಷಕಾರವನ್ನು.. ಇನ್ನು ಋಕಾರದ ಬಗ್ಗೆ ಇಲ್ಲದ ಕಾಗೆ ಕತೆ ಹೇಳೋಕ್ಕೆ ಮುನ್ನ ಅದು ರು ಅಲ್ಲ… ಅದನ್ನು ಚಾಚೂತಪ್ಪದೇ ಎಲ್ಲ ಸಲ ಉಲಿಯೋರು ಎಶ್ಟು ಅಪರೂಪ ಅಂದ್ರೆ ಸರ್ಕಸ್ ಅಲ್ಲಿ ಕತ್ತಿ ನುಂಗೋರಶ್ಟು..
              ಅದೇ ಹೇಳಿದ್ನಲ್ಲ.. ನಾವು ಒಂದಶ್ಟು ಜನ ಸರ್ಕಸ್ ಮಾಡ್ತೀವಿ ಅದಕ್ಕೆ ಊರೋರೆಲ್ಲ ಮಾಡಿ ಅನ್ನೋ ವಾದಕ್ಕೆ ಏನು ಮಾಡೋದು..
              ಇಲ್ಲಿ “ಇದು ಸಾಕಷ್ಟು ದೊಡ್ಡ ವಿವರಣೆ ಅನ್ನೋದು ನನಗೆ ಗೊತ್ತು,” ತನಗೆ ಗೊತ್ತು ಎಂಬೋದೇ ದೊಡ್ಡಸ್ತಿಕೆ!…
              ಅಂದ ಹಾಗೆ… ಈ ಅನಿಸಿಕೆಯನ್ನು ಅಳಿಸಬಹುದು.!..

              ಉತ್ತರ
              • ಮಾಯ್ಸ
                ಏಪ್ರಿಲ್ 12 2011

                ಇನ್ನು.. ಆ ವಿಡಿಯೋದಲ್ಲಿ ಹೇಳೋ ಹಾಗೆ “ಶ ಮತ್ತು ಷಗಳ ನಡುವಣ ಬೇರೆತನ ಹಾಗೇ ಹೇಳಲು ಬರದು ಆದರೆ ಪದಗಳನ್ನು ಉಲಿಯುವಾದ ಮುಂದಿನ ಪದದನುಸಾರ ಶ ಇಲ್ಲವೇ ಷ ಬರುವುದು ಎಂದು. ಮಾದರಿ ಕಷ್ಟ, ಇಷ್ಟ ಹೀಗೆ” ಎಂದು..

                ಆದರೆ ಇದನ್ನು ಶಂಕರಬಟ್ಟರು ಬಿಡಿಸಿ ಹೇಳಿದ್ದಾರೆ.. ಹೇಗೆ ಸಂಸ್ಕ್ರುತ ಸೊಲ್ಲರಿಮೆಯಂತ ಅ + ಇ = ಏ ( ರಾಮ + ಈಶ = ರಾಮೇಶ )ಆಗುವುದು, ಆದರೆ ಕನ್ನಡದಲ್ಲಿ ಅ + ಇ = ಇ ( ಅತ್ತ + ಇತ್ತ = ಅತ್ತಿತ್ತ.. ಅತ್ತೇತ್ತ ಅಲ್ಲ ) ಹಾಗೇ ಕನ್ನಡದಲ್ಲಿ ಟ ಮತ್ತು ಡಗಳು ಶಕಾರ ಅನ್ನು ಷಕಾರಗೊಳಿಸುವುದಿಲ್ಲ..

                ಇನ್ನೂ ಅಶ್ಟು, ಇಶ್ಟು ಪದಗಳನ್ನು ಹಳ್ಳಿಗರು ಬಳಸೋ ಆಟು, ಈಟು, ಆಸು, ಈಸು ಎಂದು.

                ಉತ್ತರ
                • ಮಾಯ್ಸ
                  ಏಪ್ರಿಲ್ 12 2011

                  ಒಂದು ವೇಳೆ ಕೆಲವರು ಡ/ಟ ಸದ್ದುಗಳು ಕನ್ನಡದಲ್ಲಿ ಹಿಂದೆ ಬರುವ ಶ ಸದ್ದನ್ನು ಷ ಗೆ ಮಾರ್ಪಡಿಸುವುದು ಎಂದು ಹೇಳಿದರೆ ಅದು ಅವರ ಬ್ರಾಂತು ಎಂದೂ ಶಂಕರಬಟ್ಟರು ಹೇಳಿದ್ದಾರೆ…

                  ಉತ್ತರ
              • “ಷ ಬಗ್ಗೆ ತಮ್ಮ ಉದ್ದಟಿಪ್ಪಣಿ ತಪ್ಪು..!” ಅಂದಾಗ ಶ ಷ ಬಗೆಗಿನ ನನ್ನ ಮೂಲ ತಿಳಿವು ತಪ್ಪಿರಬಹುದೇನೋ ಅಂದುಕೊಂಡು ನೀವು ದಯಪಾಲಿಸಿದ ವಿಡಿಯೋ ನೋಡಿದೆ. ಆಮೇಲೆ ತಿಳಿಯಿತು, ಇದು false alarm ಅಂತ. ಇರಲಿ, thanks for the nice video.

                ನನ್ನ ಟಿಪ್ಪಣಿಗೂ ನಿಮ್ಮ ಸ ಶ ಷ ವಿವರಣೆಗೂ ನಡುವಿನ ದೊಡ್ಡ ವ್ಯತ್ಯಾಸ ಏನಂದ್ರೆ ನಾನು dental, palatal, cerebral ಅಂತೆಲ್ಲ technical ಪದ ಬಳಸಲಿಲ್ಲ, ಯಾಕೆ ಅಂದ್ರೆ ನನ್ನ ಉದ್ದೇಶ irrespective of what it is called, ಅದು ಹ್ಯಾಗೆ ಆ ಉಲಿಗಳು ಬಾಯಲ್ಲಿ ಹೊರಡುತ್ವೆ ಅಂತ ವಿವರಿಸೋದಷ್ಟೇ ಆಗಿತ್ತು. ಇರಲಿ ಬಿಡಿ, ನಿಮಗೆ ಕಾಲಿಪ್ಲವರ್, ಕಾಗೆಕತೆಗಳೇ ಇಷ್ಟ ಅಂತ ಗೊತ್ತಾಯ್ತು.

                ಬಂದಳು ಬಂದ್ಲು ಆಗೋಕ್ಕೆ ಕಾರಣ ದ ಉಲಿದಮೇಲೆ ಲ position ನಾಲಗೆಗೆ ಸುಲಭ ಅಂತ. ಹಾಗೇ ಹೊರಟಳು ಹೊರಟ್ಳು ಆಗಕ್ಕೆ ಕಾರಣ ಟ ಆದಮೇಲೆ ಳ ಉಲಿಯೋದು ಸುಲಭ.

                ನಿಮ್ಮ ಮಾತಿಗೆ ಟಿವಿಯಲ್ಲಿ ಬರೋ ಹೆಣ್ಣು ಮಕ್ಕಳೇ ಲಕ್ಷ್ಯ ಅಂದ್ರೆ ನಾನೇನು ಮಾಡೋಕ್ಕೆ ಆಗುತ್ತೆ, ನಾವು ಟಿವಿ ನೋಡೋದು ಮನೋರಂಜನೆಗೇ ಹೊರತು ಕನ್ನಡ ಕಲಿಯೋಕ್ಕಲ್ಲ 😉

                “ತನಗೆ ಗೊತ್ತು ಎಂಬೋದೇ ದೊಡ್ಡಸ್ತಿಕೆ!…” ಇಲ್ಲಿ ಗೊತ್ತಿನ ದೊಡ್ಡಸ್ತಿಕೆ ಯಾರು ತೋರಿಸ್ತಿದಾರೆ ಅನ್ನೋದು ಒಂದು ಮಗುವಿಗೂ ಗೊತ್ತಾಗುತ್ತೆ. ಇನ್ನುಮುಂದೆ ಚರ್ಚೆ ಮಾಡುವುದಾದರೆ ದಯವಿಟ್ಟು ತಲೆಯಲ್ಲಿ ವಿಷಯ ತುಂಬಿಕೊಂಡು ಬನ್ನಿ, ನಾಲಿಗೆಯಲ್ಲಿ ವಿಷ ತುಂಬಿಕೊಂಡು ಬರೋದರ ಬದಲು. ಇಲ್ಲ ಹೀಗೆ personal abuse ಮಾಡುವುದೇ ನಿಮ್ಮ ಸಂಸ್ಕೃತಿಯಾದರೆ, ಇದೋ ದೊಡ್ಡ ನಮಸ್ಕಾರ ತಗೊಳ್ಳಿ.

                ಉತ್ತರ
                • “ಇದು false alarm ಅಂತ” – false alarm ನಿಮ್ಮದು, ವಿಡಿಯೋದಲ್ಲ. Video is really good and informative. Thanks for that.

                  ಉತ್ತರ
                  • ಮಾಯ್ಸ
                    ಏಪ್ರಿಲ್ 12 2011

                    ಹೋ.. “Video is really good and informative. Thanks for that.”

                    ಆದರೆ information ಸರಿಹಾಕಿ ತಲೆಗೆ ಸೇರಲಿಲ್ಲವಲ್ಲ.. ವಿಡಿಯೋ ಹೇಳೋದು ಸಂಸ್ಕ್ರುತದ ಸೊಲ್ಲರಿಮೆ ಬಗ್ಗೆ.. ಆದರೆ ಕನ್ನಡ ಅದರಂತೆ ಇಲ್ಲ..

                    ಕನ್ನಡದಲ್ಲಿ ಅ + ಇ = ಏ ಅಲ್ಲ. ಕನ್ನಡದಲ್ಲಿ ಶ್ಚುತ್ವ, ಜಸ್ತ್ವ ಸಂದಿಗಳಿಲ್ಲ.. ಹಾಗೇ ಶ ಸದ್ದು ಡ/ಟ/ಳ ಅಂತಹ cerebral ಸದ್ದುಗಳ ಹಿಂದೆ ಬಂದಾಗ ಷ ಆಗುವುದಿಲ್ಲ. ಆಗುವುದು ಎಂಬುದು ಬ್ರಾಂತು. ಇದನ್ನ ಶಂಕರಬಟ್ಟರು ತಮ್ಮ ಹೊತ್ತಗೆಯಲ್ಲಿ ಹೇಳಿದ್ದಾರೆ.

                    ಉತ್ತರ
                    • ಮಾಯ್ಸ
                      ಏಪ್ರಿಲ್ 12 2011

                      ಸರಿಹಾಕಿ ಅಲ್ಲ ಸರಿಯಾಗಿ.

                    • tom and jerry cartoon ನಲ್ಲಿ ಕೆಲವು ಸಲ ಟಾಮ್ (ಬೆಕ್ಕು) ಮಾಯಾಕಸಬರಿಗೆ ಮೇಲೆ ಕೂತ್ಕೊಂಡು ಅದಕ್ಕೇ ಗೊತ್ತಿಲ್ದೇ ಮೇಲೆ ಹಾರೊಕ್ಕೆ ಶುರುಮಾಡಿಬಿಡುತ್ತೆ. ಅಕಸ್ಮಾತ್ತಾಗಿ ಕೆಳಗೆ ನೋಡುತ್ತೆ, ಅರ್ರೆ, ನಾನು ಮೇಲೆ ಹಾರ್ತಾ ಇದೀನಿ ಅಂತ ಅದಕ್ಕೆ ಗೊತ್ತಾಗುತ್ತೆ. ತಕ್ಷಣ ಗಾಬರಿ ಮಾಡಿಕೊಂಡು ಕಿರುಚ್ತಾ ಎರಡೂ ಕೈಬಿಟ್ಟು ಕೆಳಗೆ ಬೀಳೋಕ್ಕೆ ಶುರು ಮಾಡಿಬಿಡುತ್ತೆ. ಹಾಗಾಯ್ತು.

                • ಮಾಯ್ಸ
                  ಏಪ್ರಿಲ್ 12 2011

                  “ಅಂದ್ರೆ ನನ್ನ ಉದ್ದೇಶ irrespective of what it is called, ಅದು ಹ್ಯಾಗೆ ಆ ಉಲಿಗಳು ಬಾಯಲ್ಲಿ ಹೊರಡುತ್ವೆ ಅಂತ ವಿವರಿಸೋದಷ್ಟೇ ಆಗಿತ್ತು.”

                  ತುಂಬಾ ಚನ್ನಾಗಿ ಇಂಗ್ಲೀಶಲ್ಲಿ ಹೇಳಿದ್ರಿ.. ಆದರೆ ನನ್ನ ಗುರಿ ಅದು ಆಗಿರಲಿಲ್ಲ.. ಅದು ಸಂಸ್ಕ್ರುತದ ಸೊಲ್ಲರಿಮೆ/ವ್ಯಾಕರಣ ಅದು ಕನ್ನಡಕ್ಕೆ ಹೇಗೆ ಒಗ್ಗುವುದಿಲ್ಲ ಎಂದು ನಾನು ಮಾದಿರಿ ಕೊಟ್ಟು ತೋರಿಸಲು ಹೋದೆ.. ಆದರೆ ತಾವು ‘ಹಂಸಕ್ಶೀರ ನ್ಯಾಯ’ ತಮಗೇನು ಬೇಕೋ ವಾದಕ್ಕೆ ಅದನ್ನು ತೆಗೆದುಕೊಂಡಿದ್ದಿರಿ..

                  “ನಾಲಿಗೆಯಲ್ಲಿ ವಿಷ ತುಂಬಿಕೊಂಡು ಬರೋದರ ಬದಲು. ಇಲ್ಲ ಹೀಗೆ personal abuse ಮಾಡುವುದೇ ನಿಮ್ಮ ಸಂಸ್ಕೃತಿಯಾದರೆ, ಇದೋ ದೊಡ್ಡ ನಮಸ್ಕಾರ ತಗೊಳ್ಳಿ.”

                  ಒಳ್ಳೇದು.. ಆದರೆ ನಾನು ನಿಮಗೆ ನಮಸ್ಕಾರ ಹೇಳಲ್ಲ.. ನನಗೆ ನಾಟಕವಾಡೋ ಅಲುವಾಟವೂ ಇಲ್ಲ.. ಬೇಕೂ ಇಲ್ಲ.!

                  ನಾನು ಮುನ್ನವೇ ಹೇಳಿದಂತೆ ನೀವು ಉದ್ದುದ್ದು ಬರೆದು ಪುಂಗಿದ್ದನ್ನೇ ಪುಂಗುವಿರಿ, ಕೊನೆ ಸಬ್ಯತೆ, “personal abuse ” ಎಂದು ನೀವು ನೀವೇ ಕರೆದುಕೊಂಡು ವಾದದಲ್ಲಿ ಒಬ್ಬರನ್ನು ಕೆಟ್ಟವರಂತೆ ತೋರಿಸಿ ಬೀಗುವಿರಿ.

                  ಆಮೇಲೆ ದೂರು ಹೇಳಿ ಅನಿಸಿಕೆಗಳನ್ನು ಅಳಿಸುವಿರಿ.

                  ಇದು ಸಾವಿರಾರು ವರುಶ ಸಂಪ್ರದಾಯ.. ಅದಕ್ಕೆ ‘ಬೌದ್ದಿಕ ಸ್ವಾತಂತ್ರ್ಯ’ದ ಬಗ್ಗೆ ಏನೇನು ಯಾರು ಯಾರಿಂದ ಅಪಾಯ/ಕುತ್ತು ನಮ್ಮ ನಾಡಿನಲ್ಲಿ ಎಂದು ಟಿಪ್ಪಣಿ ಬರೆದುದು.

                  ನಿಮ್ಮದು ನೀವೊಬ್ಬರು ತಲೆಕೆಳಗಾಗಿ ನಿಲ್ಲ ಬಲ್ಲಿರಿ ಎಂದು ಊರೆಲ್ಲ ನಿಲ್ಲಬೇಕು, ಇಲ್ಲವೇ ಅವರೆಲ್ಲ ಅಯೋಗ್ಯರು ಎಂಬ ವಾದ. ಅದಕ್ಕೆ ಪ್ರತಿ ಬರೆದರೆ ಅದರಿಂದ ನುಣುಚಿಕೊಳ್ಳು ‘ನೋಡಿ.. ಈ ಅಧಮ ನನ್ನನ್ನು abuse ಮಾಡುತ್ತಿದ್ದಾನೆ ಎಂದು ಅಳುವುದು’.

                  ಅಳಿರಿ, ನಿಮ್ಮ ಅಳು ಒಂದೆರಡು ನಿಮಿಶದಿಂದ, ನಮ್ಮ ಒಂದೆರಡು ಸಾವಿರ ವರುಶಗಳಿಂದ ಅಶ್ಟೇ ಯತ್ವಾಸ!

                  ಉತ್ತರ
                  • ಆಗಲೇ ಒಪ್ಪಿದ್ದಾಯ್ತಲ್ಲ, ನಿಮ್ಮನ್ನು ಬಿಟ್ಟು ಮಿಕ್ಕ ನಾವೆಲ್ಲ ೧೦೦%ಗಿಂತ ಕಮ್ಮಿ ಕನ್ನಡಿಗರು ಅಂತ. ಮಾತಿನಲ್ಲಿ ಇಂಗ್ಲಿಶೋ ಸಂಸ್ಕೃತವೋ ಕನ್ನಡವೋ ಸುಲಭವಾಗಿ communicate ಆಗೋದು ಮುಖ್ಯ ನಮಗೆ. ನೀವು ಮಾತ್ರ ೧೦೦% ಕನ್ನಡ ಬಿಟ್ಟು ಬೇರೆ ಒಂದನ್ನು ಉಲಿಯುವಹಾಗಿಲ್ಲ, ನೆನಪಿರಲಿ 😉

                    ನಮಸ್ಕಾರ ಹೇಳುವ ಸಭ್ಯತೆಯನ್ನು ನಾಟಕವೆಂದೂ, ಬಾಯಿಗೆ ಬಂದಹಾಗೇ ನಿಂದಿಸಿ ಬರೆಯುವುದನ್ನು ಪ್ರಾಮಾಣಿಕತೆಯೆಂದೂ ಬೀಗುತ್ತಿರುವವರು ಯಾರು, ಯಾರ ಬೌದ್ಧಿಕ ಸ್ವಾತಂತ್ರದ ಮೇಲೆ ಯಾರು ನಾಲಿಗೆ ಚಾಟಿ ದಾಳಿಮಾಡುತ್ತಿದ್ದಾರೆ ಅನ್ನೋದು ಇವಿಷ್ಟೂ ಓದುವ ಕುರಿಗೂ ತಿಳಿಯುತ್ತದೆ, ಇನ್ನು ನಾಲ್ಕಕ್ಷರ ಕಲಿತು ಇದನ್ನು ಓದುವವರು ಕುರಿಗಳಲ್ಲ ಅನ್ನೋದು ನಿಮಗೂ ಗೊತ್ತು. ಅದು ನಿಮಗೆ ಗೊತ್ತಿಲ್ಲದಿದ್ದರೆ ಅದು ನಿಮ್ಮ ಬೇನೆ, ನಾನೇಕೆ ಅಳಲಿ 🙂

                    ಖಾಲಿಮಾತು… ಸಾಕುಮಾಡೋಣಲ್ಲ?

                    ಉತ್ತರ
                    • ಮಾಯ್ಸ
                      ಏಪ್ರಿಲ್ 12 2011

                      ಇಲ್ಲ..

                      ನೀವು ಹೀಗೆ “ನಮಸ್ಕಾರ ಹೇಳುವ ಸಭ್ಯತೆಯನ್ನು ನಾಟಕವೆಂದೂ, ಬಾಯಿಗೆ ಬಂದಹಾಗೇ ನಿಂದಿಸಿ ಬರೆಯುವುದನ್ನು ಪ್ರಾಮಾಣಿಕತೆಯೆಂದೂ ಬೀಗುತ್ತಿರುವವರು ಯಾರು, ಯಾರ ಬೌದ್ಧಿಕ ಸ್ವಾತಂತ್ರದ ಮೇಲೆ ಯಾರು ನಾಲಿಗೆ ಚಾಟಿ ದಾಳಿಮಾಡುತ್ತಿದ್ದಾರೆ ಅನ್ನೋದು ಇವಿಷ್ಟೂ ಓದುವ ಕುರಿಗೂ ತಿಳಿಯುತ್ತದೆ, ಇನ್ನು ನಾಲ್ಕಕ್ಷರ ಕಲಿತು ಇದನ್ನು ಓದುವವರು ಕುರಿಗಳಲ್ಲ ಅನ್ನೋದು ನಿಮಗೂ ಗೊತ್ತು.”

                      ಎಲ್ಲರಿಗೂ ಗೊತ್ತಿರುವ ವಿಶಯವನ್ನು ಮತ್ತೆ ಮತ್ತೆ ಮತ್ತೆ ಮತ್ತೆ ಬರೆಯಬೇಕು.. ಸಂಸ್ಕ್ರುತ ದ್ವೇಶಿಗಳು, ಕನ್ನಡ ದುರಬಿಮಾನಿಗಳು, ಹಾಗು ತಮ್ಮಂತಹ ಸಾದುಜನ ಬಣ್ಣ ಬಯಲು ಮಾಡಲೇ ಬೇಕು..

                      ನೀವು ನನ್ನ ಮೇಲೆ ಒಂದು ವೈಯಕ್ತಿಕದಾಳಿಯನ್ನು ನಿಂದೆಯನ್ನು ಮಾತಾಡಲೇ ಇಲ್ಲವೆಂದು ನೀವು ನಿಶ್ಚಿಂತೆಯಿಂದ ಇರುವಿರಿ ತಾನೆ..! ಅದು ಸ್ವಾಬಾವವೇ!

                • ಮಾಯ್ಸ
                  ಏಪ್ರಿಲ್ 12 2011

                  “ಹಾಗೇ ಹೊರಟಳು ಹೊರಟ್ಳು ಆಗಕ್ಕೆ ಕಾರಣ ಟ ಆದಮೇಲೆ ಳ ಉಲಿಯೋದು ಸುಲಭ.”

                  ಇದನ್ನು ಹಲವರು ಇಂದು ಹೊರಟ್ಲು ಎಂದೇ ಉಲಿಯೋದು, ಅಂತ ಬರೆದಿದ್ದೀನಿ ಮೊದಲೇ.! ಹಾಗೇ ಕಡಲೆ ಅನ್ನು ಕಡ್ಳೆ, ಕೂಡಲೆ ಅನ್ನು ಕೂಡ್ಳೆ ಎಂದು ಕೆಲವರು ಹೇಳುವರು ಎಂದು ಎಲ್ಲರೂ ಹೇಳುವರು ಎಂದಲ್ಲ.. ಕಡಲೆ ಎಂದು ಕಡ್ಲೆ, ಕೂಡಲೆ ಅನ್ನು ಕೂಡ್ಲೆ ಎಂದು ಹೇಳೋರು ಇದ್ದಾರೆ.

                  ಆ ಬಗೆ ಸಂಸ್ಕ್ರುತದ ಸೊಲ್ಲರಿಮೆ ಕನ್ನಡದ್ದಲ್ಲ.. ಯಾರು ಎಶ್ಟು ಸಲ ಮತ್ತೆ ಮತ್ತೆ ಹೇಳಿದರೂ!

                  ಉತ್ತರ
                  • ಇದರಲ್ಲಿ ನಿಮ್ಮ ತಕರಾರೇನೋ ನನಗೆ ಅರ್ಥವಾಗಲಿಲ್ಲ. ಕಡ್ಳೆ, ಕೊಡ್ಳೇ ಅನ್ನೋದೇ ಸಹಜ, ಆದ್ದರಿಂದ ಅದೇ ಸರಿಯಾದ ರೂಪ; ಕೆಲವರು ಕಡ್ಲೆ, ಕೊಡ್ಲೆ ಅಂದ್ರೆ ಅದು ನಾಲಗೆ ತೊಡಕು ಅಂತ್ಲೇ ನಾನೂ ಹೇಳಿದ್ದು ಅಲ್ಲ್ವಾ? ಇದರ ಬಗ್ಗೆ ಸಂಸ್ಕೃತದ ಸೊಲ್ಲರಿಮೆ ಏನು ಹೇಳುತ್ತೋ ನನಗೆ ಗೊತ್ತಿಲ್ಲ, ಅದು ನನಗೆ ಬೇಕೂ ಇಲ್ಲ. ನಿಮಗೆ ಗೊತ್ತಿದ್ರೆ ತಿಳಿಸಿ, ತಿಳ್ಕೊಳ್ಳೋಣ. ಹಾಗೇ ನಿಮ್ಮ ತಕರಾರನ್ನು ನಾನು ಸರಿಯಾಗಿ ಅರ್ಥ ಮಾಡಿಕೊಂಡಿಲ್ದೇ ಇದ್ರೆ ಅದನ್ನೂ ಹೇಳಿ. ನಿಜಕ್ಕೂ ಕಡ್ಲೆ ಕೊಡ್ಲೆ ಇದರಲ್ಲಿ ನಿಮ್ಮ ನಿಲುವು ಏನು ಅಂತ ನನಗೆ ಅರ್ಥ ಆಗ್ಲಿಲ್ಲ.

                    ಉತ್ತರ
                    • ಮಾಯ್ಸ
                      ಏಪ್ರಿಲ್ 12 2011

                      ಹೊರಟಳು ಇದನ್ನು ಹಲವರು ಇಂದು ಹೊರಟ್ಲು ಎಂದೇ ಉಲಿಯೋದು ಹಾಗೇ ಕಡಲೆ ಅನ್ನು ಕಡ್ಳೆ, ಕೂಡಲೆ ಅನ್ನು ಕೂಡ್ಳೆ ಎಂದು ಕೆಲವರು ಹೇಳುವರು ಎಂದೂ, ಎಲ್ಲರೂ ಹೇಳುವರು ಎಂದಲ್ಲ.. ಕಡಲೆ ಎಂದು ಕಡ್ಲೆ, ಕೂಡಲೆ ಅನ್ನು ಕೂಡ್ಲೆ ಎಂದು ಹೇಳೋರು ಇದ್ದಾರೆ.

                      ಈ ಬಗೆಯ ಕಟ್ಟಳೆ ಕನ್ನಡದಲ್ಲಿಲ್ಲ!

                      ಆ ಬಗೆ ಸಂಸ್ಕ್ರುತದ ಸೊಲ್ಲರಿಮೆ ಕನ್ನಡದ್ದಲ್ಲ..

                      ಯಾರು ಎಶ್ಟು ಸಲ ಮತ್ತೆ ಮತ್ತೆ ಹೇಳಿದರೂ!

                • ಮಾಯ್ಸ
                  ಏಪ್ರಿಲ್ 12 2011

                  “ನನ್ನ ಟಿಪ್ಪಣಿಗೂ ನಿಮ್ಮ ಸ ಶ ಷ ವಿವರಣೆಗೂ ನಡುವಿನ ದೊಡ್ಡ ವ್ಯತ್ಯಾಸ ಏನಂದ್ರೆ ನಾನು dental, palatal, cerebral ಅಂತೆಲ್ಲ technical ಪದ ಬಳಸಲಿಲ್ಲ, ಯಾಕೆ ಅಂದ್ರೆ ನನ್ನ ಉದ್ದೇಶ irrespective of what it is called, ಅದು ಹ್ಯಾಗೆ ಆ ಉಲಿಗಳು ಬಾಯಲ್ಲಿ ಹೊರಡುತ್ವೆ ಅಂತ ವಿವರಿಸೋದಷ್ಟೇ ಆಗಿತ್ತು.”

                  ನೀವು ಇಂಗ್ಲೀಶಲ್ಲಿ ಏನೇ ಹೇಳಿದ್ರೂ, ಮೊದಲು ನಿಮ್ಮ ಸ, ಶ, ಷಗಳ ಉಲಿಕೆಯ ಬಿಡಿಸಿ ಹೇಳಿಕೆ ತಪ್ಪಿತ್ತು. ಸುಮ್ನೆ ಬಿಟ್ಟು ಒಂದು ಹುಸಿಬಾಣ. ಅದರಲ್ಲೂ ತಪ್ಪು. ಏಕೆಂದರೆ ಅದು ಸಂಸ್ಕ್ರುತದ ಸೊಲ್ಲರಿಮೆ/ವ್ಯಾಕರಣ ಕನ್ನಡದ್ದಲ್ಲ.

                  ಕನ್ನಡದಲ್ಲಿ ಗುರು + ಉಪದೇಶ = ಗುರೂಪದೇಶ ಸವರ್ಣದೀರ್ಗ ಸಂದಿ ಎಂದು ಸಂಸ್ಕ್ರುತದಲ್ಲಿ ಆಗೋ ಹಾಗೇ ಆಗಲ್ಲ.. ಕನ್ನಡದಲ್ಲಿ ಕುರು+ಉಂಟು = ಕುರುವುಂಡು ಎಂದಾಗುವುದು.

                  ಕನ್ನಡವು ಸಂಸ್ಕ್ರುತದ ಸೊಲ್ಲರಿಮೆಯಂತಿಲ್ಲ.! ಕನ್ನಡವು ಸಂಸ್ಕ್ರುತಕ್ಕಿಂತ ನೀಟಾದ ಲೇಸಾದ ಸೊಲ್ಲರಿಮೆಯಿರುವ ದ್ವಾವಿಡನುಡಿ..

                  “ಸಂಸ್ಕ್ರುತಕ್ಕಿಂತ ನೀಟಾದ ಲೇಸಾದ” ಈ ಬಗ್ಗೆ ಹೆಚ್ಚಿನ ಅರಿಕೆಗೆ ಸಂಸ್ಕ್ರುತದ ಲಿಂಗ ನಿರ್ದರಣೆ, ಉಪಸರ್ಗ ಮುಂತಾದ ಹದವಿಲ್ಲ ಸೊಲ್ಲರಿಮೆ ಸಂಸ್ಕ್ರುತಕ್ಕಿದೆ, ಕನ್ನಡಕ್ಕಲ್ಲ.

                  ಉತ್ತರ
                  • ನಾನು ಸಂಸ್ಕೃತದ್ದೋ ಕನ್ನಡದ್ದೋ ಸೊಲ್ಲರಿಮೆ/ವ್ಯಾಕರಣದ ಬಗ್ಗೆ ಎಲ್ಲಿ ಹೇಳಿದೆ? ನಾವು ಆ ಅಕ್ಷರಗಳನ್ನು (ಬರೀ ಆ ಅಕ್ಷರಗಳನ್ನ, not in relation to some other letters) ಉಲಿಯುವಾಗ ನಾಲಿಗೆ ಹೇಗೆ ಹೊರಳುತ್ತೆ ಅಂತ ವಿವರಿಸಿದೆ ಅಷ್ಟೇ, ಅದೂ ಎದುರಿಗೆ ಉಲಿದು ತೋರಿಸಲಿಕ್ಕೆ ಆಗಲಿಲ್ಲ ಅಂತ. ಉಲಿದು ತೋರಿಸುವುದಕ್ಕೆ ಆಗಿದ್ದರೆ ಬರೀ ಉಲಿದು ತೋರಿಸುತ್ತಿದ್ದೆ, ಅದರ linguistic ವಿಷಯ ಮಾತಾಡ್ತಾನೂ ಇರಲಿಲ್ಲ. ಕನ್ನಡದಲ್ಲಿ ಜಸ್ತ್ವಸಂಧಿ ಇದೆಯೋ, ಸಂಸ್ಕೃತದಲ್ಲಿ ಲೋಪಸಂಧಿ ಇದೆಯೋ ಅನ್ನೋದು ಇಲ್ಲಿನ discussion ಅಲ್ವೇ ಅಲ್ಲ. ಸುಮ್ನೇ ಅದನ್ನ ಯಾಕೆ ಎಳೆದು ತಂದು ಬೇಕು ಅಂತ ಗಲಿಬಿಲಿ ಹುಟ್ಟಿಸ್ತಿದೀರಿ?

                    ಇರಲಿ, ನಾನು ಹೇಳಿದ್ದು ನಿಮಗೆ ಅರ್ಥವಾಗದೇ ಏನಿಲ್ಲ. ನಿದ್ದೆ ಮಾಡೋರನ್ನ ಎಬ್ಬಿಸಬಹುದು, ಹಾಗೆ ನಟಿಸೋರನ್ನಲ್ಲ. ಆದ್ದರಿಂದ ನನ್ನ ನಿಲುವು ಈಗ ಏನಿರಬೇಕು ಅಂದ್ರೆ, ಬಿಟ್ಟಾಕಿ, ನಾನೇನು ನಿಮಗೆ ಇದನ್ನ ಅರ್ಹ ಮಾಡಿಸಲೇ ಬೇಕು ಅಂತ ಹೊಣೆಹೊತ್ತಿಲ್ಲ. ನಿಮಗೆ ನಾನು ಹೇಳಿದ್ದು ಅರ್ಥವಾಗಲಿಲ್ಲ ಅಂದ್ರೆ ಅದನ್ನ ಅಲ್ಲಿಗೆ ಬಿಟ್ಟುಬಿಡಿ.

                    ಉತ್ತರ
                • ಮಾಯ್ಸ
                  ಏಪ್ರಿಲ್ 12 2011

                  “ನ್ನುಮುಂದೆ ಚರ್ಚೆ ಮಾಡುವುದಾದರೆ ದಯವಿಟ್ಟು ತಲೆಯಲ್ಲಿ ವಿಷಯ ತುಂಬಿಕೊಂಡು ಬನ್ನಿ,”

                  ಸ್ವಾಮಿ.. ನನ್ನ ಮಾತನ್ನು ವಿಶ, ಮಲ ಏನಾದರೂ ಅನ್ನಿ.. ನಿಮ್ಮ ದೊಡ್ಡಬುದ್ದಿಯಿಂದ.. ನನಗೆ ಗೊತ್ತು ನಾನು ಏನು ಹೇಳುತ್ತಿದ್ದೀನಿ ಎಂದು..
                  ನಾನು ವಿಶಯಕ್ಕೆ ಆನಿಕೊಂಡೇ ಮಾತಾಡುತ್ತಿರುವುದು, ನಿಮಗೆ ತಲೆಗಿಳಿದಿದ್ದಕ್ಕೆ ನನ್ನ ಮಾತು ವಿಶವೇ?

                  ಇನ್ನೂ ಒಂದು ಮಾತು.. ನಾವು ಕನ್ನಡಿಗರು ನಮಗೆ ಕನ್ನಡದ ಮೇಲಣ ಒಲುಮೆ ಸ್ವಾಬಾವಿಕ, ಹುಟ್ಟುನಿಂದ ತಾಯಿಯ ನೆತ್ತರಿಂದ ಬಂದಿರೋದು.. ನಾವು ಸಂಸ್ಕ್ರುತಕ್ಕೆ ಯಾವ ಸೊಪ್ಪು, ಬೆಲೆಕೊಡುವ ಬಾದ್ಯತೆಗೆ, ಹೊಣೆಗೆ, ರುಣಕ್ಕೆ ಸಿಲುಕಿದವನೋ, ಬಿದ್ದವನೋ ಅಲ್ಲ…

                  ಸಂಸ್ಕ್ರುತಕ್ಕೆ ನಾವು ಮರ್ಯಾದೆ ತೋರಿಸುವುದು ನಮ್ಮ ಉದಾರತನ ಹೊರತು ತೋರಿಸದೇ ಇರೋದು ಕೆಟ್ಟತನವಲ್ಲ.!

                  ಉತ್ತರ
                  • ನೀವು ಸಂಸ್ಕೃತಕ್ಕೆ ಮರ್ಯಾದೆಯಾದರೂ ತೋರಿಸಿ ಮತ್ತೇನಾದರೂ ಮಾಡಿ, ಅದು ನನ್ನ ತಲೆನೋವಲ್ಲ. ಕನ್ನಡಕ್ಕೆ ನೀವು ಮಾತ್ರ ಬಾಧ್ಯಸ್ತರು, ಮಿಕ್ಕವರೆಲ್ಲ (ಅದರಲ್ಲೂ ಸಂಸ್ಕೃತಕ್ಕೆ ಮರ್ಯಾದೆ ತೋರಿಸುವವರು) ಕನ್ನಡದ ವೈರಿಗಳು ಅನ್ನೋಹಾಗೆ ನಡೆದುಕೊಳ್ಳುವುದು ಒಳ್ಳೆಯದಲ್ಲ ಅಂತಷ್ಟೇ ನನ್ನ ನಿಲುವು.

                    ಉತ್ತರ
                    • ಮಾಯ್ಸ
                      ಏಪ್ರಿಲ್ 12 2011

                      “ಬಾಧ್ಯಸ್ತರು, ಮಿಕ್ಕವರೆಲ್ಲ (ಅದರಲ್ಲೂ ಸಂಸ್ಕೃತಕ್ಕೆ ಮರ್ಯಾದೆ ತೋರಿಸುವವರು) ಕನ್ನಡದ ವೈರಿಗಳು ಅನ್ನೋಹಾಗೆ ನಡೆದುಕೊಳ್ಳುವುದು ಒಳ್ಳೆಯದಲ್ಲ ಅಂತಷ್ಟೇ ನನ್ನ ನಿಲುವು.”

                      ಆಹಾ.. ಸಕಳ ತೀರ್ಪುಗಳ ಹೊಣೆ ಹೊತ್ತಿದವರು ತಾವು.. ಈ ತೀರ್ಪುನ್ನು ಹೇಳಲು ಏನು ಪುರಾವೆ? ನಾನು ಬೇರೆವರು ಅಲ್ಲ ಎಂದು ಎಲ್ಲಿ ಹೇಳಿಹೆನು?

                      ಸುಮ್ನೆ.. ಏನೋ ಏನೋ ಸಾರಬೇಡಿ. ಸುಳ್ಳು ಪೊಳ್ಳು ಹೇಳಿಯೂ ಸಬ್ಯಸ್ತಿಕೆಯ ಪೋಸು!

                      ನಿಮ್ಮ ಯಾವ ನಿಲುವಿಗೆ ನನ್ನ ಬೆಲೆ ಏನು ಅಂತ ಗೊತ್ತಿಲ್ಲ..

                      ವಿಶಯವಾಗಲಿ! ಅದೇನು ನಿಮ್ಮ ನುಡಿಯರಿಮೆಯ ತರ್ಕ!?

      • ಏಪ್ರಿಲ್ 11 2011

        “ನೆಗಡಿ ಬಂತೆಂದು ಮೂಗನ್ನೇ ಕೊಯ್ಯಬಾರದಲ್ಲವೇ?
        ಅವ್ದು. ಆದರೆ ಮೂಗಿಗೆ operation ಮಾಡಿದರೆ ಸರಿಯಾಗುವುದಿದ್ದರೆ ಮಾಡಬಹುದು.

        ಉತ್ತರ
        • ನಿಲುಮೆಯ ಅಭಿಮಾನಿ
          ಏಪ್ರಿಲ್ 11 2011

          ಅಣ್ಣಾ ಭರತಣ್ಣ,

          ಚರ್ಚೆ ಈಗ ತಾನೇ ಪುನಃ ಹಾದಿಗೆ ಬಂದಿದೆ……ದಯವಿಟ್ಟು ಪುನಃ ಟ್ರ್ಯಾಕ್ ಬದಲಿಸಬೇಡಣ್ಣಾ ದಮ್ಮಯ್ಯ ಅಂತೀನಿ !!!! ನಾವು ಚರ್ಚೆಲಿ ಜ್ಞಾನ ವನ್ನ ಹೆಚ್ಚಿಸಲು ಅವಕಾಶ ಮಾಡಿಕೊಡಣ್ಣ ದಮ್ಮಯ್ಯ ಅಂತೀನಿ ….

          ಉತ್ತರ
          • ಏಪ್ರಿಲ್ 11 2011

            ನಿಲುಮೆಯ ಅಬಿಮಾನಿ,
            ನಾನ್ ಹೇಳಿದ್ದು ತಮಗೆ ಸರಿಯಾಗಿ ಗೊತ್ತಾಗ್ಲಿಲ್ಲ ಅನ್ಸುತ್ತೆ.

            ನಾನು ಗ್ನಾನವನ್ನು ಹೆಚ್ಚಿಸುವ ಕಮೆಂಟೇ ಮಾಡಿರೋದು. ಮೂಗಿಗೆ ತೊಂದರೆಯಾದಾಗ ಆಪರೇಶನ್ ಮಾಡಿದರೆ ಸರಿಹೋಗುವುದಿದ್ದರೆ ಅದನ್ನೇ ಮಾಡುವುದು ಲೇಸು. ಅಲ್ಲವೆ? ಕನ್ನಡಕ್ಕೆ ತೊಂದರೆಯಿದೆ ಅಂತ ನಮ್ಗೆಲ್ಲರಿಗೂ ಗೊತ್ತು. ಅದು ಒಂದು ಆಪರೇಶನ್ ಮೂಲಕ ಸರಿಯಾಗುವುದಿದ್ದರೆ ಯಾಕೆ ಬ್ಯಾಡ?

            ಉತ್ತರ
  61. ajakkalagirisha
    ಏಪ್ರಿಲ್ 11 2011

    ಕೊಳ್ಳೇಗಾಲದ ಮಂಜುನಾಥರು ಬರೆದ ದೀರ್ಘವಾದ ಲೇಖನರೂಪದ ಪ್ರತಿಕ್ರಿಯೆಗಳು ಗಂಭೀರವಾಗಿವೆ. ಅನೇಕ ಚಿಂತನಾರ್ಹ ವಿಚಾರಗಳನ್ನು ಅದು ಒಳಗೊಂಡಿದೆ. ಇಷ್ಟವಾದವು.

    ಉತ್ತರ
    • ಏಪ್ರಿಲ್ 11 2011

      ಅಜಕ್ಕಳರೆ,
      ನಾನು ಈ ಹಿಂದೆ ಕೇಳಿದ ಕೇಳ್ವಿಗೆ ತಾವಿನ್ನು ಮಾರುಲಿದಿಲ್ಲ ಹಾಗಾಗಿ ಮತ್ತೆ ಅದನ್ನೇ ಕೇಳುತ್ತಿದ್ದೇನೆ. ಮನ್ನಿಸಿ
      ಈಗ ’ಱ್’, ’ೞ್’ ನಮ್ಮ ಹೊಸಗನ್ನಡದ ಬರಿಗೆಮಾಲೆಯಲ್ಲೇ ಇಲ್ಲ. ಆದರೂ ಅದನ್ನ ೮/೯/೧೦ನೇ ತರಗತಿಯ ಮಕ್ಕಳು ಹಳೆಗನ್ನಡವನ್ನು ಕಲಿಯುತ್ತಿಲ್ಲವೆ? ಮೊದಲೇ ಮಕ್ಕಳಿಗೆ ’ಱ್’, ’ೞ್’ ಕಲಿಸದಿದ್ದರೂ ಅವರು ಹಳೆಗನ್ನಡ ಹೇಗೆ ಓದುತ್ತಿದ್ದಾರೆ/ಕಲಿಯುತ್ತಿದ್ದಾರೆ? ಇದರ ಬಗ್ಗೆ ಕೊಂಚ ಉಂಕಿಸಿ.

      ಈ ಮೇಲಿನ ಮಾದರಿಯನ್ನೆ(ಅಂದರೆ ಱ್, ೞ್ ಮೊದಲ ಕಲಿಕೆಯಲ್ಲಿ ಇಲ್ಲದಿರುವುದು) ಮಾಪ್ರಾಣ, ಙ್, ಞ್,ಷ,ಋ,ಅಂ,ಅಃ – ಇವುಗಳಿಗೂ ಕೂಡ ಹಾಕಬಹುದು. ಇದರಿಂದ ಮೊದಲ ಕಲಿಕೆ ಸಲೀಸಾಗುತ್ತದೆ ಅಂತ ನಿಮಗೆ ಅನಿಸುವುದಿಲ್ಲವೆ?

      ಉತ್ತರ
      • ಕಲಿಕೆಯಲ್ಲಿ ಮಿಸ್ ಆದ ಎರಡು ಅಕ್ಷರಗಳನ್ನು manage ಮಾಡೋದಕ್ಕೂ ಸಾರಾಸಗಟು ೧೫-೨೦ ಅಕ್ಷರಗಳ ನಾಪತ್ತೆಯನ್ನು manage ಮಾಡುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. Later will be a nuance in education system. ಇವತ್ತು ಮುಂದೆಂದಾದರೂ ಈ ಬಾಕಿ ೧೫-೨೦ ಅಕ್ಷರಗಳನ್ನು ಹೇಳಿಕೊಡಬಹುದು ಅನ್ನುವವರು ನಾಳೆ ಅದನ್ನು ಮುಂದೆ ತಾನೆ ಏಕೆ ಹೇಳಿಕೊಡಬೇಕು, ಅದ ಕಲಿತು ಯಾರು ಉದ್ಧಾರ ಆಗುತ್ತಾರೆ ಅನ್ನಲ್ಲ ಅನ್ನೋದು ಏನೂ ಗ್ಯಾರಂಟಿ ಇಲ್ಲ. ಅದಕ್ಕೆ ನೆಪ ಹೀಗೆ ಸಾಗಬಹುದು. “ಇವತ್ತು ಇರೋ ಎಂಟೋ ಹತ್ತೋ ಕೋಟಿ (ಮುಂದೊಂದು ದಿನ) ಎಷ್ಟುಜನ ಕಾವ್ಯ ಕಲೀತಾರೆ? ಕೇವಲ ಬೆರಳೆಣಿಕೆ ಜನ ಕಾವ್ಯ ಕಲೀಲಿಕ್ಕೆ ಎರಡನೇ ಸುತ್ತಿನ ಅಕ್ಷರಾಭ್ಯಾಸ ಏಕೆ ಬೇಕು?” majority ಮೇಲೆ ಹೋಗೋ ವಾದವೆಲ್ಲಾ ಹೀಗೇ. ಇವತ್ತು ಕೊಡಕ್ಕಾಗದ ಉತ್ತರ ಇದಕ್ಕೆ ನಾಳೆ ಕೊಡಕ್ಕೆ ಆಗುತ್ತಾ? ಅದಕ್ಕೆ ಹೇಳೋದು, ಕಲಿಯೋರು ಬೆರಳೆಣಿಕೆಯಷ್ಟು ಜನ ಇರಲಿ ಬಹುಪಾಲು ಜನ ಇರಲಿ, ಈಗ ಇರೋದನ್ನು ಹಾಗೇ ಬಿಡಬೇಕು. ಬೇಕಾದ್ರೆ ಮತ್ತಷ್ಟು ಅಕ್ಷರ ಸೇರಿಸಿ, ಯಾರ ಅಡ್ಡಿಯೂ ಇಲ್ಲ (ನಮ್ಮ ಮಕ್ಕಳೇನು ಇನ್ನೊಂದು ಎರಡು ಅಕ್ಸರ ಹೆಚ್ಚು ಕಲಿಯೋದು ಕಷ್ಟ ಅನ್ನೋಲ್ಲ 🙂 ). ಆದರೆ ಇರೋದನ್ನು ತೆಗೆಯೋದು ಮಾತ್ರ ಬ್ಯಾಡ.

        ಉತ್ತರ
  62. ajakkalagirisha
    ಏಪ್ರಿಲ್ 11 2011

    ನಿಲುಮೆಯಲ್ಲಿ ಪ್ರತಿಕ್ರಿಯೆಗಳನ್ನು ಕೊನೆಗೆ ಸೇರಿಸುತ್ತಾ ಹೋದರೆ ಉತ್ತಮ ಅಂತ ನನಗೆ ಅನಿಸುತ್ತೆ.ಆಗ ಚರ್ಚೆಗೆ ಉತ್ತಮ ಸ್ವರೂಪ ಬರುತ್ತೆ. ಒಂದು ಡಯಲಾಗ್ ಬೆಳೆದಂತೆ ಆಗುತ್ತೆ. ವ್ಯಕ್ತಿಗತ ನೇರ ಪ್ರಶ್ನೋತ್ತರಗಳಿಗಿಂತ ಇದು ಹೆಚ್ಚು ಉಪಯುಕ್ತ. ಹಿಂದಿನಯಾವುದೇ ಪ್ರತಿಕ್ರಿಯೆಗೆ ನಿರ್ದಿಷ್ಟವಾಗಿ ಪ್ರತಿಕ್ರಿಯಿಸಿದ್ದಾದರೆ ಆಗ ಆ ಹಿಂದಿನ ಪ್ರತಿಕ್ರಿಯೆಯ ಸಂಖ್ಯೆಯನ್ನು ಉಲ್ಲೇಖಿಸಿದರಾಯಿತು. (ಈಗಿನ ಸ್ವರೂಪದಲ್ಲಿ ಆ ಸಂಖ್ಯೆಗಳು ಮಧ್ಯದಲ್ಲೊಂದು ಕಮೆಂಟು ಬಂದಾಗ ಬದಲಾಗುತ್ತವೆ)

    ಉತ್ತರ
  63. ಮಾಯ್ಸ :
    ನೋಡಿ ಸ್ವಾಮಿ..
    ನಾನು ನಿಮ್ಮ ಸಂಸ್ಕ್ರುತ ದುರಬಿಮಾನಿ ಎಂದು ಕರೆದೆನೆ? ಯಾಕೆ ಏನೇನೋ ಅಂದುಕೋತೀರಿ..
    ನಾನ್ ಮಾಡಿದ್ದು ಇಶ್ಟೆ.. ಶಂಕರಬಟ್ಟರನ್ನು ಬಿಟ್ಟು ಮಿಕ್ಕ ಎಲ್ಲ ಅಂದರೆ ಪ್ರತಿಯೊಬ್ಬರೂ ಸಂಸ್ಕ್ರುತದ ಪದ ತುಂಬಿ ಬರೆದಿದ್ದಾರೆ ಎಂಬ ನಿಮ್ಮ ಮಾತಿಗೆ ನಕ್ಕಿದ್ದು.!
    ನಾನು ಕನ್ನಡದ ದುರಬಿಮಾನಿ ಅನ್ನೋದು ನಾನೇ ಒಪ್ಪಿಕೊಳ್ತೀನಿ! ನನಗೆ ಕನ್ನಡವೊಂದೇ ಬೇಕು. ಮಿಕ್ಕಿದ್ದೆಲ್ಲ ಹಾಳಾಗಿ ಹೋಗಲಿ!.. ನಾನು ಪ್ರಮಾಣಿಕವಾಗಿ ೧೦೦% ಕುಟಿಲಬುದ್ದಿಯವನು ಕನ್ನಡತನಕ್ಕಾಗಿ. ಇದಕ್ಕೆ ನನಗೆ ಹೆಮ್ಮೆ!

    ಹೌದುಹೌದು. ನೀವು ನಿಮ್ಮ ಶಂಕರಬಟ್ಟರು ಬಿಟ್ಟರೆ ಮಿಕ್ಕೆಲ್ಲರ ಕನ್ನಡಾಭಿಮಾನವೂ ೧೦೦%ಗಿಂತ ಕಡಿಮೆಯೇ.

    ಉತ್ತರ
    • ಮಾಯ್ಸ
      ಏಪ್ರಿಲ್ 12 2011

      ಅನಿಸಿಕೆ ಇನ್ನೂ ತಿರುಚಿ.. ಯಾರು ಬೇಡ ಅಂತಿರೋದು..!

      ಉತ್ತರ
      • ಅಯ್ಯೋ, ಈ ಕಲೆಯಲ್ಲಿ ನಾನು ತಮ್ಮಷ್ಟು ಪರಿಣತನಲ್ಲ ಸ್ವಾಮಿ. ನೀವೇ ಹೇಳಿಕೊಂಡಿದೀರಲ್ಲ, “ನಾನು ಪ್ರಾಮಾಣಿಕವಾಗಿ ೧೦೦% ಕುಟಿಲಬುದ್ಧಿಯವನು” ಅಂತ. ನಾವೆಲ್ಲಾ ಏನಿದ್ರೂ ೧೦೦%ಗಿಂತಾ ಕಡಿಮೆಯೇ.

        ಉತ್ತರ
        • ಮಾಯ್ಸ
          ಏಪ್ರಿಲ್ 12 2011

          “ಅಯ್ಯೋ, ಈ ಕಲೆಯಲ್ಲಿ ನಾನು ತಮ್ಮಷ್ಟು ಪರಿಣತನಲ್ಲ ಸ್ವಾಮಿ. ನೀವೇ ಹೇಳಿಕೊಂಡಿದೀರಲ್ಲ, “ನಾನು ಪ್ರಾಮಾಣಿಕವಾಗಿ ೧೦೦% ಕುಟಿಲಬುದ್ಧಿಯವನು” ಅಂತ. ನಾವೆಲ್ಲಾ ಏನಿದ್ರೂ ೧೦೦%ಗಿಂತಾ ಕಡಿಮೆಯೇ.”

          ಮತ್ತದೇ ಚಾಳಿ.. ಅದೇನೋ ಹೇಳಿದ್ರಲ್ಲ. ಓದಿದೋರು ತಿಳಿಕೋತಾರೆ ಅಂತ. ತಾವೇ ಬಾಯಿಬಿಟ್ಟು ಹೇಳೋದು..

          ವೈಯಕ್ತಿ ಚರ್ಚೆ ಬೇಡ ಅಂದರೆ ಆ ಕಡೆ ಹೋಗೋ ಅನಿಸಿಕೆಗೆ ಪ್ರತಿಕ್ರಿಯೆ ಕೊಡದೇ ಇರೋದು.

          ನಿಮಗಿಲ್ಲಿ ಬೇಕಾಗಿರೋದ ನನ್ನನ್ನು ಖಳನಾಗಿಸಿ, ಗೋವಿನಂತ ಸಂಸ್ಕ್ರುತದ ರಕ್ಶಕನೆಂಬ ಬಿರುದು.! 😉 Typical!

          ಉತ್ತರ
          • ಹ್ಮ್ಮ್… ಸರಿ, ಇದು ಮುಗಿಯೋದಲ್ಲ. ನಿಮ್ಮ ಮೇಲೆ ಸಂಸ್ಕೃತದ ದೆವ್ವ ಮೆಟ್ಟಿಕೊಂಡಿದೆ, ಅದಕ್ಕೇ ಕಣ್ಣಿಗೆ ಕಂಡವರೆಲ್ಲರೂ ಸಂಸ್ಕೃತದ ಪೂಜಾರಿಗಳ ಥರ ಕಾಣ್ತಾರೆ ಅಷ್ಟೇ. ನಾನು ಅಷ್ಟು ಸಲ ಹೇಳಿದೀನಿ ನಾನಿಲ್ಲಿ ಮಾತಾಡ್ತಿರೋದು ಸಂಸ್ಕೃತದ ಬಗ್ಗೆ ಅಲ್ಲ, ಕನ್ನಡದ ಬಗ್ಗೆ ಅಂತ… ಮತ್ತೇನದು ಮೊಂಡುನುಡಿ. ನೀವು ಮಾತಾಡೋದೇ ಹೀಗಾ?

            ಉತ್ತರ
            • ನಿಮ್ಮ-ಸಂಸ್ಕೃತದ ದ್ವೇಷದ ಮಧ್ಯೆ ನನ್ನ ಯಾಕ್ರೀ ಎಳೀತೀರಿ?

              ಉತ್ತರ
              • ಮಾಯ್ಸ
                ಏಪ್ರಿಲ್ 12 2011

                ನನಗೆ ಸಂಸ್ಕ್ರುತದ ದ್ವೇಶ, ನೀವು ಹೇಳಿದಿರಿ ಎಂದು? 🙂

                ಉತ್ತರ
            • ಮಾಯ್ಸ
              ಏಪ್ರಿಲ್ 12 2011

              ಅಯ್ಯಾ ಮಹಾನುಬಾವ..

              ನನ್ನ ಸಂಸ್ಕ್ರುತದ ಬಗ್ಗೆಯ ಪ್ರೇಮದ ಬಗ್ಗೆ ನಿಮಗೇನು ಗೊತ್ತು?

              ನಾನು ಮಕ್ಕಳಿಗೆ ಆಗೀಗ ಬೆಂಗಳೂರಿಗೆ ಬಂದಾಗಲೆಲ್ಲ ಸಂಸ್ಕ್ರುತ ಕಲಿಯಲು ನೆರವಾಗುವೆ. ನಮ್ಮ ಮನೆಯಲ್ಲಿ ಬಗವದ್ಗೀತೆ ಪಾಟ ಹೇಳಿಕೊಡುವರು ನಮ್ಮ ನೆಂಟರು. ಅವರು ಇರದಿದ್ದರೆ ನಾನು ಹೇಳಿಕೊಡುವೆ.

              ಹಾಗೆಂದ ಮಾತ್ರಕ್ಕೆ ಕನ್ನಡದ ತುಂಬ ಸಂಸ್ಕ್ರುತವನ್ನು ತುಂಬಬೇಕೇ? ಕನ್ನಡಕ್ಕೆ ಅದರದೇ ಆದ ಅಂದವಿದೆ. ಸಂಸ್ಕ್ರುತಕ್ಕೆ ಅದರದೇ ಸೌಂದರ್ಯವಿದೆ. ಈ ನಂಟನ್ನು ಅರಿಯದ ಮುಟ್ಟಾಳರು ಕನ್ನಡದ ಮೇಲೆ ಸಂಸ್ಕ್ರುತವನ್ನು ಸವಾರಿ ಮಾಡಿಸಲು ಹೋಗಿ ಅನರ್ತ ಮಾಡಿಹರು. ಅವರ ತೆವಲಿನ ಫಲವೇ ಇಂದು ಕನ್ನಡ ಮಾದ್ಯಮ ಶಿಕ್ಶಣದಲ್ಲಿಹ ದೊಡ್ಡ ಕೊರತೆ ಹಾಗು ಅದರ ವಿಪಲತೆ.

              ಸಂಸ್ಕ್ರುತದಿಂದ ಕಲಿಯುವುದೇನಿದೆಯೋ ಹಾಗೇ ಕನ್ನಡದಲ್ಲಿ ಕಲಿಸುವುದೋ ಪವಿತ್ರವಾದುದು ಎರಡೂ ಸಲೀಸಾಗಿ ಸರಾಗವಾಗಿರಬೇಕಾದರೆ, ಅವರೆರಡ ತಮ್ಮ ತಮ್ಮ ಜಾಗದಲ್ಲಿ ಇರಬೇಕು. ಒಂದ ಅವಕಾಶ/ಅನುವನ್ನು ಇನ್ನು ಆಕ್ರಮಿಸಲು ಪ್ರಯತ್ನಿಸಬಾರದು.!

              ಉತ್ತರ
              • ಕನ್ನಡಕ್ಕೆ ಅದರದೇ ಅಂದವಿದೆ, ಸಂಸ್ಕೃತಕ್ಕೆ ಅದರದೇ ಸೌಂದರ್ಯವಿದೆ, ತಮಿಳಿಗೆ ಅದರದೇ ಅಳಗು ಇದೆ, ಸರಿ.

                ಆದರೆ ನೆರೆಹೊರೆ ಭಾಷೆ ಒಂದರಿಂದ ಇನ್ನೊಂದು ಪಡೆಯುವುದು ಸಹಜ. ಸಂಸ್ಕೃತ ಪದಗಳು ಕನ್ನಡದಲ್ಲಿ ತುಂಬಿದ್ದರೆ ಅದು ಯಾರದೋ ಪ್ರಯತ್ನದಿಂದ ಆದದ್ದಲ್ಲ. ನೀವೇ ಬೇರೆಲ್ಲೋ ಹೇಳಿದ ಹಾಗೆ ಆಗ ಕನ್ನಡ ಬಳಸುದ್ದಿದ್ದ ಮಂದಿಗೆ ಸಂಸ್ಕೃತದಲ್ಲೂ ಹೆಚ್ಚು ಬಳಕೆಯಿದ್ದುದರಿಂದ, ಸಂಸ್ಕೃತದ ಪ್ರಭಾವ ಸಹಜವಾಗೇ ಕನ್ನಡದ ಮೇಲಾಗಿದೆ. ಆಮೇಲೆ ಅದನ್ನೇ ಸಂಸ್ಕೃತದ ಅಷ್ಟು ಪರಿಚಯವಿಲ್ಲದ ನನ್ನಂಥ ಮಂದಿಯೂ ಕಲಿತು ಬಳಸಿದ್ದೇವೆ, ಅದು ಅದರ ಸಹಜ ಹರಿವಿನಲ್ಲೇ ಕನ್ನಡದ ಭಾಗವಾಗಿದೆ. ಅದನ್ನು ನೀವು “ತೆವಲು” ಅಂದರೆ ಅದು ನಿಮ್ಮ ದೃಷ್ಟಿಕೋನ. ಈಗ ನಮ್ಮ ಹೊಣೆಯೇನೆಂದರೆ ಹೊಸ ಹೊಸ ಸಂಸ್ಕೃತ/ಬೇರೆ ಪದಗಳು ಅನಗತ್ಯವಾಗಿ ಬರುವುದನ್ನು ತಡೆಯುವುದೇ ಹೊರತು ಇರುವುದನ್ನು ಗಲಬರಿಸಿ ಹಾಕುವುದಲ್ಲ.

                ಉತ್ತರ
                • ಮಾಯ್ಸ
                  ಏಪ್ರಿಲ್ 12 2011

                  ಮೊದಲ ಸಂಸ್ಕ್ರುತವನ್ನು ಸಂಸ್ಕ್ರುತವಾಗೇ ಕಲಿಯಿರಿ.

                  ಸಂಸ್ಕ್ರುತ ಹೇಗೆ ಕನ್ನಡ ನೆರೆಹೊರೆ ನುಡಿ?

                  ಹಳೇ ಪ್ಲೇಟು!

                  ಉತ್ತರ
                  • ನಿಮ್ಮ ಸಲಹೆಗೆ ತ್ಯಾನ್ಕ್ಸು. ಕಲೀತೀನಿ.

                    ಸಂಸ್ಕೃತ ಹೇಗೆ ಕನ್ನಡದ ನೆರೆಹೊರೆ ನುಡಿ ಅಲ್ಲ?

                    ಪ್ಲೇಟು ಜೋಡಿಸೋ ಕಲೆ ನಿಮ್ಮಷ್ಟು ಕೈಹತ್ತಿಲ್ಲ.

                    ಉತ್ತರ
  64. ಮಾಯ್ಸ
    ಏಪ್ರಿಲ್ 12 2011

    ಮಂಜುನಾಥ ಕೊಳ್ಳೇಗಾಲ :
    ಫುಕುವೋಕಾ One Straw Revolution ತಂದು ಓದಿ. “ಒಂದು ಹುಲ್ಲಿನ ಕ್ರಾಂತಿ” ಅಂತ ಕನ್ನಡದಲ್ಲಿ ಸಿಗುತ್ತದೆ.
    ಸಹಜಕೃಷಿಯ ಮೂಲತತ್ತ್ವಗಳು ನಿಮ್ಮನ್ನು ಕಾಡುತ್ತಿರುವ ಸಂಸ್ಕೃತ-ನುಶಿ ಸಮಸ್ಯೆಗೆ ಒಳ್ಳೇ insight ಕೊಡಬಲ್ಲುವು.

    ಹೌದು.. ನಿಮಗೆ insight ಬೇಕಿದೆ.. ಮತ್ತೊಮ್ಮೆ ಓದಿ..!

    ಉತ್ತರ
  65. ಮಾಯ್ಸ :
    “On the other hand, ಡಾಕ್ಟರು ಬೇಡ ಮಾಂಜುಗಾರನೇ ಬೇಕು, ”
    ಇದು ಒಳ್ಳೆಯ ಕನ್ನಡದ ಬಳಕೆ.
    “ನಕ್ಕು ನೂರ್ಕಾಲ ಬಾಳಿ” ಒಳ್ಳೇದು.. ಆದರೆ ನಿಮಗೆ ಹೀಗಾಗುವುದು ಬೇಡ! ಬೇಡ ಹೋಗಿ.

    🙂 ಪಾಪ!

    ಉತ್ತರ
    • ಮಾಯ್ಸ
      ಏಪ್ರಿಲ್ 12 2011

      🙂 ದೊಡ್ಡಸ್ತಿಕೆ?

      ಉತ್ತರ
    • ಮಾಯ್ಸ
      ಏಪ್ರಿಲ್ 12 2011

      ನನಗಂತೂ ಈ ಪೊಳ್ಳು ತಳುಕ ಬರಲ್ಲ. ನಾನು ದಿಟವಾಗಿಯೂ ನನ್ನ ಬಾವನೆ ನಾನು ಹೇಳಿದ್ದೆ. !

      ಉತ್ತರ
      • ತಮಗೆ ನೂರ್ಕಾಲ ಬಾಳಿ ಅಂತ ಯಾರು ಹೇಳಿಯೇ ಇಲ್ಲವೇ? ಅದಕ್ಕೇ ಯಾರಾದ್ರೂ ಒಳ್ಳೇ ಮಾತಾಡಿದ್ರೆ ಪೊಳ್ಳು ತಳುಕು ಅನ್ಸುತ್ತೆ. ಇರಲಿ ಬಿಡಿ. ನೀವು ಅದೇನು ಅಂದುಕೊಂಡರೂ (ಅಥವಾ ಅಂದರೂ) ನೂರ್ಕಾಲ ಬಾಳಿ!

        ಉತ್ತರ
        • ಮಾಯ್ಸ
          ಏಪ್ರಿಲ್ 12 2011

          🙂 ದೊಡ್ಡಸ್ತಿಕೆಯ ಚಾಳಿ..

          ನೀವು ಯಾರ್ರಿ ನನಗೆ ಆಶೀರ್ವಾದ, ಹಾರೈಕೆ ಮಾಡಲು!?

          ಸುಮ್ನೆ.. ವಿಶಯವಾಗಲಿ!

          ಉತ್ತರ
          • ಅಯ್ಯೋ ಬ್ಯಾಡ ಬಿಡ್ರೀ,

            serious ಆಗಿ ಮಾತಾಡ್ತಾ ಇದ್ದಾಗ ಸುಮ್ನೇ ಹಲ್ಕಿರೀತಿದ್ರಲ್ಲ, ಅದಕ್ಕೇ ಹೇಳಿದೆ, ನಗು ಆರೋಗ್ಯಕ್ಕೆ ಒಳ್ಳೇದು, ನಕ್ಕು ನೂರ್ಕಾಲ ಬಾಳಿ ಅಂತ. ಅದು ಹಾರೈಕೆಯೂ ಅಲ್ಲ, ಆಶೀರ್ವಾದವೂ ಅಲ್ಲ. ಸುಮ್ನೇ ಒಂದು ಒಳ್ಳೇ ಮಾತು. ನಾನು ಸುಮ್ನೇ ನೂರ್ಕಾಲ ಬಾಳಿ ಅಂದ್ರೆ ನೀವು ಬಾಳ್ತೀರಾ ಅಥವ ನೀವು “ನಿಮಗೆ ಹೀಗಾಗುವುದು ಬೇಡ, ಬೇಗ ಹೋಗಿ” ಅಂದ್ರೆ ನಾನೇನು ಹೊರಟುಹೋಗ್ತೀನ 🙂 ಅವರವರ time ಅವರವರಿಗೆ.

            ವಿಷಯ ಹೇಳಿದ್ದಾಯ್ತಲ್ಲ. ಅದರಬಗ್ಗೆ ಚರ್ಚೆ ಮಾಡೋದಾದ್ರೆ ಮಾಡಿ, ಇಲ್ಲ ಅಂದ್ರೆ ಬಿಟ್ಟಾಕಿ

            ಉತ್ತರ
            • ಮಾಯ್ಸ
              ಏಪ್ರಿಲ್ 12 2011

              ನಿಮಗೇನೇ ಏನೋ ಮಂಪರು.. ಇದು ನುಡಿಯರಿಮೆಯ ಬಗ್ಗೇ ಅಲ್ಲ ಅಂದಿರಿ..

              ನಿಮ್ಮ ಪ್ರಶ್ನೇ( ತಮಿಳಲ್ಲಿ ಪ್ರಶ್ನೆ ಅಂದರೆ problem 🙂 ) ಏನು ಈಗ?

              ಉತ್ತರ
              • ನನ್ನ ಪ್ರಶ್ನೆ (ತಮಿಳಿನ 😉 ) ಏನೂ ಇಲ್ಲ. ನಿಮ್ಮ ಪ್ರಶ್ನೆ (ಕನ್ನಡದ್ದೋ, ತಮಿಳಿನದೋ, ಸಂಸ್ಕೃತದ್ದೋ ಯಾವುದೊ ಆಯಿತು) ಏನು ಹೇಳಿ. ಏನೂ ಇಲ್ದಿದ್ರೆ, ನಾನು ತುಸುಹೊತ್ತು ನಿದ್ದೆ ಮಾಡುವೆ (ನಾನಿರುವುದು ಭಾರತದಲ್ಲಿ) 😉

                ಉತ್ತರ
  66. ಮಾಯ್ಸ
    ಏಪ್ರಿಲ್ 12 2011

    ಮಂಜುನಾಥ ಕೊಳ್ಳೇಗಾಲ :
    tom and jerry cartoon ನಲ್ಲಿ ಕೆಲವು ಸಲ ಟಾಮ್ (ಬೆಕ್ಕು) ಮಾಯಾಕಸಬರಿಗೆ ಮೇಲೆ ಕೂತ್ಕೊಂಡು ಅದಕ್ಕೇ ಗೊತ್ತಿಲ್ದೇ ಮೇಲೆ ಹಾರೊಕ್ಕೆ ಶುರುಮಾಡಿಬಿಡುತ್ತೆ. ಅಕಸ್ಮಾತ್ತಾಗಿ ಕೆಳಗೆ ನೋಡುತ್ತೆ, ಅರ್ರೆ, ನಾನು ಮೇಲೆ ಹಾರ್ತಾ ಇದೀನಿ ಅಂತ ಅದಕ್ಕೆ ಗೊತ್ತಾಗುತ್ತೆ. ತಕ್ಷಣ ಗಾಬರಿ ಮಾಡಿಕೊಂಡು ಕಿರುಚ್ತಾ ಎರಡೂ ಕೈಬಿಟ್ಟು ಕೆಳಗೆ ಬೀಳೋಕ್ಕೆ ಶುರು ಮಾಡಿಬಿಡುತ್ತೆ. ಹಾಗಾಯ್ತು.

    ನನಗೆ ತಿಳಿಯಲಿಲ್ಲ.! ಅದೇನು?

    ಉತ್ತರ
    • ನಾನು ಸಂಸ್ಕೃತ ಮಾತಾಡುತಿರೋ ವರೆಗೂ ಷ ಅನ್ನೋದನ್ನ ಸರಿಯಾಗೇ ಉಲಿಯುತೀನಿ (ಉದಾಹರಣೆ ವಿಷ). ಆದರೆ ಒಂದೈದು ನಿಮಿಷ ಬಿಟ್ಟು ಅದೇ ವಿಷ ಅನ್ನೋ ಪದ ಕನ್ನಡದಲ್ಲಿ ಬಂದಾಗ “ಒಹ್, ಇದಕ್ಕೆ ಸಂಸ್ಕೃತ ಸೊಲ್ಲರಿಮೆ apply ಆಗಲ್ಲ” ಅಂತ ನೆಪ್ಪಿಗೆ ಬಂದು, ವಿಶ ಅಂತ್ಲೋ ವಿಸ ಅಂತ್ಲೋ ಅನ್ನಬೇಕು (ಅದು ಮೂಲದಲ್ಲಿ ವಿಷ ಅಂತ ನನಗೆ ಗೊತ್ತಿದ್ರೂ, ಷ ಅನ್ನೋದನ್ನ ಉಲಿಯೋಕ್ಕೆ ಬಂದ್ರೂ, ಹಿಂದುಮುಂದಿನ ಪದ, ಭಾಷೆ ಏನೇ ಆಗಿದ್ರೂ ವಿ ಮತ್ತು ಷ ಅದೇ ಅಕ್ಷರಗಳಾಗಿರುತ್ತಲ್ಲ, ಹಾಗಿದ್ರೂ…!!!

      ಉತ್ತರ
  67. ಮಾಯ್ಸ :
    ಹೊರಟಳು ಇದನ್ನು ಹಲವರು ಇಂದು ಹೊರಟ್ಲು ಎಂದೇ ಉಲಿಯೋದು ಹಾಗೇ ಕಡಲೆ ಅನ್ನು ಕಡ್ಳೆ, ಕೂಡಲೆ ಅನ್ನು ಕೂಡ್ಳೆ ಎಂದು ಕೆಲವರು ಹೇಳುವರು ಎಂದೂ, ಎಲ್ಲರೂ ಹೇಳುವರು ಎಂದಲ್ಲ.. ಕಡಲೆ ಎಂದು ಕಡ್ಲೆ, ಕೂಡಲೆ ಅನ್ನು ಕೂಡ್ಲೆ ಎಂದು ಹೇಳೋರು ಇದ್ದಾರೆ.
    ಈ ಬಗೆಯ ಕಟ್ಟಳೆ ಕನ್ನಡದಲ್ಲಿಲ್ಲ!
    ಆ ಬಗೆ ಸಂಸ್ಕ್ರುತದ ಸೊಲ್ಲರಿಮೆ ಕನ್ನಡದ್ದಲ್ಲ..
    ಯಾರು ಎಶ್ಟು ಸಲ ಮತ್ತೆ ಮತ್ತೆ ಹೇಳಿದರೂ!

    ಆ ಬಗ್ಗೆ ಸಂಸ್ಕೃತದ ಸೊಲ್ಲರಿಮೆ ಏನು ಹೇಳುತ್ತೋ ಗೊತ್ತಿಲ್ಲ. ಆದರೆ ಕನ್ನಡದಲ್ಲಿ ಮಾತ್ರ ಹಾಗೆ ಉಲಿಯುವುದು (ಕಡ್ಲೆ, ಕೊಡ್ಲೆ etc) ತಪ್ಪು ಅಂತ ನಿಮ್ಮ ವಾದ ಅಂದುಕೊಂಡಿದೀನಿ. ಒಪ್ಪಿದೆ ನಿಮ್ಮ ಮಾತು.

    ಉತ್ತರ
    • ಮಾಯ್ಸ
      ಏಪ್ರಿಲ್ 12 2011

      ಅದೇ ಸಾಲನ್ನು ಎರಡು ಸಲ ಬರೆದುದು. ‘ಸೌಜನ್ಯ’ ಅಂತೆಲ್ಲ ಒಪ್ಪಿಕೊಳ್ಳಬೇಡಿ..! ಮತ್ತೊಮ್ಮೆ ನೀಟಾಗಿ ಕೂಲಕುಂಶ ಪರೀಕ್ಷಿಸಿ!

      “ಆ ಬಗ್ಗೆ ಸಂಸ್ಕೃತದ ಸೊಲ್ಲರಿಮೆ ಏನು ಹೇಳುತ್ತೋ ಗೊತ್ತಿಲ್ಲ.” ನನಗೆ ಗೊತ್ತಲ್ಲ.! ನಾನು ಸಂಸ್ಕ್ರುತ ಕಲಿತಿದ್ದೀನಿ. ಬೇಕಾದರೆ ಪರೀಕ್ಶೆ ನಡೆಸಿರಿ. ನಿಮಗೆ ಸಂಸ್ಕ್ರುತ ತಿಳಿದಿಲ್ಲ ಅಂದಮೇಲೆ… ಏನು ನಿಮ್ಮ ಮೊಂಡುವಾದ?

      ಉತ್ತರ
      • ಸ್ವಾಮೀ, ನಾನು ನಿಮ್ಮ ವಾದ ಒಪ್ಪಿದರೆ ಅದು ಸೌಜನ್ಯದ ನಾಟಕ, ನಮಸ್ಕಾರ ಅಂದ್ರೆ ಅದು ಬೂಟಾಟಿಕೆ, ನೂರ್ಕಾಲ ಬಾಳಿ ಅಂದ್ರೆ “ಸಾಯಿ ಅಂದ” ಅಂದುಕೊಳ್ಳೋದು – ನಿಮ್ಮ reverse thinking ಬಗ್ಗೆ ನನಗೆ ನಿಜಕ್ಕೂ ನನ್ನ ಮಾತಿಗೆ ಮೀರಿದ್ದು.

        ನಿಮಗೆ ಸಂಸ್ಕೃತ ಗೊತ್ತಿದ್ರೆ ಸಂತೋಷ. ಅದನ್ನು ನಾನು ಅಲ್ಲಗಳೆದೆನೇ? ಕಡ್ಲೆ ತಪ್ಪು, ಕಡ್ಳೆ ಸರಿ ಅಂತ ನೀವಂದ್ರಿ. ನಾನು ಹೌದು ಅಂದೆ. ಅದರಲ್ಲಿ ಸೌಜನ್ಯವೇನು ಬಂತು ಮಣ್ಣು. ಇನ್ನು ಅದರಲ್ಲಿ ಸಂಸ್ಕೃತದ ಸೊಲ್ಲರಿಮೆಯೇನು ಬಂತು? ನೋಡಿ, ನೀವು ಯಾರಹತ್ರನಾದರೂ ಜಗಳವಾಡಲೇಬೇಕು ಅಂತ ಬಂದಿದ್ರೆ ಅದನ್ನ ನೇರವಾಗಿ ಹೇಳಿ. ಸುಮ್ನೆ ಸಮಯ ಹಾಳುಮಾಡೋದಾದ್ರೂ ತಪ್ಪುತ್ತೆ

        ಉತ್ತರ
        • ಮಾಯ್ಸ
          ಏಪ್ರಿಲ್ 12 2011

          ಅಯ್ಯೋ ಶಿವ.. “ಕಡ್ಲೆ ತಪ್ಪು, ಕಡ್ಳೆ ಸರಿ ಅಂತ ನೀವಂದ್ರಿ. ನಾನು ಹೌದು ಅಂದೆ. ”

          ನಾನು ಹಾಗೆ ಅಂದಿಲ್ಲ ಮಹಾಸ್ವಾಮಿ.. ನಾನು ಹೇಳ್ತಾ ಇರೋದು.. ಕಡ್ಲೆ ಸರಿ, ಕಡ್ಳೆ ತಪ್ಪು ಎಂದು ನಾವು ತೀರ್ಪಮಾನ ಮಾಡಕ್ಕೆ ಬರೊಲ್ಲ. ಹಾಗೆ ಎಲ್ಲ ಕನ್ನಡಿಗರು ಉಲಿಯಲ್ಲ. ಕನ್ನಡದ ಸೊಲ್ಲರಿಮೆಯಲ್ಲಿ ಹಾಗೆ ಇಲ್ಲ.

          ಹಾಗೇ ಶ ಸದ್‌ದು ಡ/ಟಕ್ಕೆ ಮುನ್ನ ಬಂದರೆ ಅದು ಕನ್ನಡದಲ್ಲಿ ಷ ಆಗಲ್ಲ. ಇದನ್ನು ಹಲನುಡಿಯನ್ನು ತಿಳಿದ, ಕನ್ನಡದ ದೊಡ್ಡ ಪಂಡಿತರೂ ಹೇಳಿದ್ದಾರೆ.

          ನಿಮಗೆ ಇದು ತಲೆಗೆ ಇಳೀತೀಲ್ಲ. ಅದಕ್ಕೆ ನಾನು ಏನು ಗಲಿಬಿಲಿ ಕೇಳಿ ಅಂದಿದ್ದು.

          ನಿಮಗೆ ಮಂದಿಯನ್ನು ಹೆಸರಗಳನ್ನು ಮಡಗಿ ಕರೆಯುವ ಕಯಾಲಿ “ದುರಬಿಮಾನಿ ಆಯ್ತು, ಈ reverse thinking”.

          ತುಸು ವಿಶಯವೇನು ಎಂದು ತಿಳಿದಕೊಳ್ಳಿರಿ. ಉದ್ದುದ್ದು ಅನಿಸಿಕೆ ಅಬ್ಬರಿಸಬೇಡಿ.

          ನಾನು ಮತ್ತೊಮ್ಮೆ ಕೋರಿಕೊಂಬೆ. ಈ ಶ/ಷ ಬಗ್ಗೆ ನನ್ನ ಅನಿಸಿಕೆ ಏನು ಎಂದು ತುಸು ಮೆಲ್ಲಗೆ ತಿಳಿದಿದರೂ ಓದಿ..

          ಕನ್ನಡ ನೀವು ಅಂದುಕೊಂಡ ಹಾಗೇ ಶ ಇಂದ ಷಗೆ ಮುಂದೆ ಬರುವ ಟ/ಡ/ಳ cerebral ಸದ್ದುಗಳ ಮೇಲೆ ಬದಲಾಗದು.!

          ಉತ್ತರ
          • ಇಷ್ಟು ಚೊಕ್ಕವಾಗಿ ನೀವು ಮೊದಲೇ ಹೇಳಲಿಲ್ಲ. ಬರೀ ಅಪಹಾಸ್ಯ ಮಾಡಿದ್ದೇ ಆಯ್ತು.

            ಈಗ ಅರ್ಥವಾಯಿತು. ಕಡ್ಲೆ ಅನ್ನೋದು ಸಹಜವಾದರೂ ಅದು ಮಾತ್ರ ಸರಿ ಕಡ್ಳೆ ತಪ್ಪು ಅಂತ ಹೇಳೋಕ್ಕೆ ಬರೊಲ್ಲ, ಹಾಗೂ ಉಲಿಯುವವರು ಇದಾರೆ ಅಂತ. ಸರಿ ಬಿಡಿ. ಅದನ್ನೂ ಒಪ್ಪಿದೆ, ನನ್ನ ತಕರಾರಿಲ್ಲ.

            ಆದರೆ ಅದನ್ನು ಒಪ್ಪಿದ್ರಿಂದ್ಲೇ ನನ್ನ ಮೊದಲ ತಕರಾರು ಉಳಿಯಿತು. ಯಾವುದೋ ಒಂದನ್ನು ಕೆಲವರು ಉಲೀತಾರೆ ಕೆಲವರು ಉಲಿಯಲ್ಲ ಅಂದ್ರೆ, ಷ ಕನ್ನಡದ ಸೊಲ್ಲರಿಮೆಯಲ್ಲಿ ಆಗಲ್ಲ ಅಂತ ಹೇಳೋಹಾಗೇ ಇಲ್ಲ. ಷ ಸರಿಯಾಗಿ ಉಲಿಯುವವರು ಬೇಕಾದಷ್ಟು ಜನ ಇದಾರೆ. ನೀವು ಉಲಿಯೊಲ್ಲ ಅಂದಮಾತ್ರಕ್ಕೆ ಅದನ್ನು ಉಲಿಯೋ/ಬರೆಯೋ ಸೌಲಭ್ಯವನ್ನೇ ಕಿತ್ತಾಕಿಬಿಡಬೇಕು ಅನ್ನೋದ ಒಪ್ಪಕ್ಕಾಗಲ್ಲ ಬಿಡಿ.

            ಉತ್ತರ
            • ಮಾಯ್ಸ
              ಏಪ್ರಿಲ್ 12 2011

              “ಷ ಕನ್ನಡದ ಸೊಲ್ಲರಿಮೆಯಲ್ಲಿ ಆಗಲ್ಲ ಅಂತ ಹೇಳೋಹಾಗೇ ಇಲ್ಲ. ಷ ಸರಿಯಾಗಿ ಉಲಿಯುವವರು ಬೇಕಾದಷ್ಟು ಜನ ಇದಾರೆ.”

              ಎಶ್ಟು ಜನ ಇದ್ದಾರೆ? ಇದರ ಬಗ್ಗೆ ಸಂಶೋದನೆಗಳು ಏನು?

              ಹೆಚ್ಚಿನ ಸಂಶೋದವು ಇದನ್ನು ಅಲ್ಲಗಳೆಯುವುವು ಇಲ್ಲಿಯ ತನಕ. ಕನ್ನಡದ ಯಾವ ಕವಲುನುಡಿಯಲ್ಲೂ ಷಕಾರವಿಲ್ಲ ಎಂದು ಶಂಕರಬಟ್ಟರ ಹೊತ್ತಗೆ ಹೇಳುವುದು ಹಾಗು ಅದಕ್ಕೆ ಆಕಾರಗ್ರಂತಗಳ ಪಟ್ಟಿಕೊಡುವುದು. ನಿಮ್ಮ ಆದಾರ ಏನು?

              ಬರೀ ಬಾಯಿಮಾತಲ್ಲೇ ಹೇಳಿದ್ರೆ ಆಗಲ್ಲ.!

              ಉರ್ದು ನುಡಿಯೋ ಕನ್ನಡಿಗರು ಹಲವು ಅರಬ್ಬಿ ಸದ್ದುಗಳನ್ನು ಉಲಿಯಬಲ್ಲರೆಂದು ಅವನ್ಉನ ನಾವು ಕನ್ನಡದಲ್ಲಿ ಸೇರಿಸಲು ಬರುವುದಿಲ್ಲ ನುಡಿಯರಿಮೆಯಂತೆ!

              ನಾನು ಶ/ಷ ಉಲಿಯಬಲ್ಲೆ. ಋ ಕೂಡ. ಆದರೂ ಕನ್ನಡದಲ್ಲಿ ಅದು ಬೇಡ. ನನಗೆ ಸರಿಸುಮಾರು ೧೮ಕ್ಕೂ ಹೆಚ್ಚು ಸ್ವರಗಳನ್ನು ಉಲಿಯಲು ಬರುವುದು. ಸ್ವೀಡಶ್ ಬಾಶೆಯವು, ಸಂಸ್ಕ್ರುತದವು, ಕನ್ನಡದವು, ಬಡಗ-ಕನ್ನಡದವು ಹೀಗೆ.. ಆದರೂ ನನಗೆ ಹೆಚ್ಚಿನ ಕನ್ನಡಿಗರ ಸಲುವಾಗಿ ಅವು ಬೇಡ.

              ಉತ್ತರ
              • ಹೀಗೆ ಉಲಿಯುವ ಕೆಲವೇ ಕನ್ನಡಿಗರಿದ್ದರೂ ಅದು ಬಳಕೆಯೇ. ಆದ್ದರಿಂದ ಅದು ಬೇಕು (ಹೊಸದಾಗಿ ತರುವುದಾದರೆ ಬೇರೆ ವಿಷಯ; ಈಗಾಗಲೇ ಇರುವುದು ಇರಬೇಕು)

                ಉತ್ತರ
                • ಮಾಯ್ಸ
                  ಏಪ್ರಿಲ್ 12 2011

                  ತಲೆಗಿಳಿದಲ್ಲ..’ಕವಲುನುಡಿ’/dialect ಎಂದರೇನು ಎಂಬುದು.

                  ಉರ್ದೂ ಬಾಶಿಕ ಎತ್ತುಗೆ ನೋಡಿ.. ಅವರು ಕೆಲವು ಅರಬ್ಬಿ ಸದ್ದುಗಳನ್ನು ಸರಿಯಾಗಿ ಉಲಿಯುವರೆಂದ ಅರಬ್ಬಿ ಸದ್ದುಗಳನ್ನು ಕನ್ನಡಕ್ಕೆ ಸೇರಿಸಲು ಬರುವುದು.

                  ನೀವೇನೋ ಸ್ಪೆಶಲ್ ಮಂದಿ …

                  ಉತ್ತರ
    • ಮಾಯ್ಸ
      ಏಪ್ರಿಲ್ 12 2011

      ನಿಮ್ಮ ವಾದ ಸರಣಿಯ ಹಿಂದೆ ‘ನಾನು ಮಾತಾಡಬಲ್ಲೆ. ಬೇಕಾದರೆ ಷ, ಋ, ಲೃ ಎಲ್ಲ ಉಲಿದು ತೋರಿಸಲಾ?’ ಎನ್ನೋ ದಾಟಿ ಇದೆ.

      ಆದರೆ ಹೆಚ್ಚಿನ ಕನ್ನಡಿಗರಿಗೆ ಅದು ಆಗದು, ಏಕಾಗದು ಎಂದು ಜಗತ್ತಿನ ಒಂದೊಂದು ನುಡಿಮಂದಿಗೂ ಒಂದೊಂದಿಶ್ಟು ಸದ್ದುಗಳು ನುಡಿಯಲು ಸಹಜವಾಗೇ ಆಗುವುವು, ಸಹಜವಾಗಿ ಹಲವು ಆಗುವುದಿಲ್ಲ. ಬೆಂಗಳೂರನ್ನು ಬ್ರಿಟಿಶ್ ಕನ್ನಡದಂತೆ ಉಲಿಯಲಾರದೇ ಬ್ಯಾಂಗಲೊರ್ ಮಾಡಿದ್ದು. ಇದು ಜಗತ್ತಿನ ಎಲ್ಲ ನುಡಿಯರಿಗರೂ ಕಂಡುಕೊಂಡಿರುವ ವಿಜ್ನಾನದ ದಿಟ.

      ಆದುದರಿಂದ ಕನ್ನಡಿಗ ನುಡಿಮಂದಿಗೆ ಯಾವ ಯಾವ ಸದ್ದುಗಳು ಸಹಜವೋ ಅವನ್ನಶ್ಟೇ ಕನ್ನಡದಲ್ಲಿ ಇಟ್ಟುಕೊಂಡರೆ, ಹಾಗು ಹೊರನುಡಿ ಪದಗಳನ್ನು ಆ ಸದ್ದುಗಳಶ್ಟರಲ್ಲೇ ಮಾರ್ಪಡಿಸಿ ಬಳಸಿದರೆ, ಹೆಚ್ಚಿನ ಕನ್ನಡಿಗರಿಗೆ ಸಲೀಸು. ಇಲ್ಲದೇ ಹೋದರೇ ಹೆಚ್ಚಿನ ಕನ್ನಡಿಗರು ಬರಹ-ಕನ್ನಡ ಹಾಗು ಆಡುಗನ್ನಡವೆಂಬ ಎರಡು ಬೇರೆ ಬೇರೆ ಕನ್ನಡಗಳನ್ನು ಕಲಿಯಬೇಕು. ಅದು ತೊಡರು ಹಾಗು ಗೊಂದಲ.

      ಹೀಗೆಯೇ ಜಗತ್ತಿ ಸುಮಾರು ಎಲ್ಲಾ ನುಡಿಗಳು (ಇಂಡಿಯದಿಂದ ಹೊರಗಿನವು) ಮಾಡಿಕೊಂಡು ಮುಂದೆ ಸಾಗಿವೆ.

      ಈ ಕನ್ನಡತನಗೊಳಿಸಿ ಬಳಸುವ ಹೊರನುಡಿಪದಗಳಲ್ಲಿ ಸಂಸ್ಕ್ರುತವೊಂದನ್ನು ಬಿಟ್ಟು ಬೇರಾವ ನುಡಿಯ ಬಗ್ಗೆಯ ಯಾರದ್ದೂ ತಕರಾರು ಇಲ್ಲ. ಆದರೆ ಸಂಸ್ಕ್ರುತ ಎಂದ ಕೂಡಲೆ ಒಂದು ಗುಂಪು ಅದು ಸಂಸ್ಕ್ರುತದಲ್ಲಿ ಹೇಗಿದೆಯೋ ಹಾಗೇ ಉಲಿಯಬೇಕು ಎಂದು ತಾಕೀತು ಮಾಡುವುದು.

      ಉತ್ತರ
      • “ನಿಮ್ಮ ವಾದ ಸರಣಿಯ ಹಿಂದೆ ‘ನಾನು ಮಾತಾಡಬಲ್ಲೆ. ಬೇಕಾದರೆ ಷ, ಋ, ಲೃ ಎಲ್ಲ ಉಲಿದು ತೋರಿಸಲಾ?’ ಎನ್ನೋ ದಾಟಿ ಇದೆ.” – ಹೌದು, ನಾನು ಮಾತಾಡಬಲ್ಲೆ, ನನಗೆ ನಿಮ್ಮಷ್ಟು ಸಂಸ್ಕೃತ ಗೊತ್ತಿಲ್ಲ, ಆದರೆ ನಾನು ಮಾತಾಡಬಲ್ಲದ್ದು ನನ್ನ ಕನ್ನಡ ಕಲಿಕೆಯ ಭಾಗವಾಗಿ. ನನ್ನ ಪಾಲಿಗೆ, ನನ್ನಂಥ ಅನೇಕರ ಪಾಲಿಗೆ ಇವೆಲ್ಲಾ ಕನ್ನಡದ್ದೇ ಭಾಗ. ನನಗೆ ಇದು ಉಲಿಯಲು ಬರುತ್ತಾದ್ದರಿಂದ, ಈ ಲಿಪಿಯನ್ನು ನಾನೂ ದಿನನಿತ್ಯದ ಜೀವನದಲ್ಲಿ ಬಳಸುತ್ತೇನಾದ್ದರಿಂದ ಇದನ್ನು ಉಲಿಯುವ ಬರೆಯುವ ಸೌಲಭ್ಯ ಕನ್ನಡದಲ್ಲಿ ಈಗಿರುವಂತೆಯೇ ಉಳಿದುಕೊಳ್ಳಬೇಕು, ಅಷ್ಟ್ಟೆ ನನ್ನ ನಿಲುವು. ಇನ್ನು ಸಂಸ್ಕೃತ, ಸಂಸ್ಕೃತಕುಲ ಅದರ ನುಸಿ ಈ ಮಣ್ಣಂಗಟ್ಟಿಯೆಲ್ಲ ನಿಮ್ಮ ತಲೆನೋವು.

        ಉತ್ತರ
        • ಮಾಯ್ಸ
          ಏಪ್ರಿಲ್ 12 2011

          ಅಕಟಕಟ…

          ಗುರುವೇ …

          ತಾವು ಉಲಿಯಬಲ್ಲಿರಿ ಗೊತ್ತು.. ಆದರೆ.. ಸಕಳ ಕನ್ನಡ ಕುಲಕೋಟಿ ಉಲಿಯಬಲ್ಲವರಲ್ಲ. ಅದನ್ನೇ ಆಂಡಯ್ಯ-ಕೇಶಿರಾಜನಿಂದ ಹಿಡಿದು ಬಿ.ಎಂ.ಶ್ರೀ ಬಳಿಕ ಶಂಕರಬಟ್ಟರ ತನಕದ ನುಡಿಯರಿಗರೂ ಹೇಳಿರೋದು.

          ತಾವು ತಮ್ಮ ಮನೆಯಲ್ಲಿ ಪ್ರಾಣಿಯನ್ನು ಪಳಗಿಸಿದ ಹಾಗೆ ಆ ಸದ್ದುಗಳನ್ನು ಮಾಡಲು ಪಳಗಿಸಿಸಿಕೊಂಡಿದ್ದೀರಿ( ದಯವಿಟ್ಟು ಇದು ಹೀನ ಉದಾಹರಣೆ ಎಂದುಕೊಳ್ಳಬೇಡಿ.. ಈ ಉಪಮೆ ತಕ್ಕುದ್ದೆ.. ನಮ್ಮ ಹೀನೋಚ್ಛದ ಕನ್ನಡಕ ಕಳಚಿದರೆ ).

          ಆದರೆ ಸ್ವಾಬಾವಿಕವಾಗಿ ಬೆಳೆದ ಗ್ರಾಮೀಣ ಕನ್ನಡಿಗರಿಗೆ ಅದು ಬರುವುದಿಲ್ಲ. ಏಕೆಂದರೆ ಅದು ಕನ್ನಡದ ಸಹಜ ಉಲಿಕೆಯಲ್ಲಿಲ್ಲ. ಈ ಸಂಗತಿಯನ್ನು ..ಆಂಡಯ್ಯ –ನಯಸೇನ-ಕೇಶಿರಾಜನಿಂದ ಹಿಡಿದು ಬಿ.ಎಂ.ಶ್ರೀ ಬಳಿಕ ಶಂಕರಬಟ್ಟರ ತನಕದ ನುಡಿಯರಿಗರೂ ಹೇಳಿರೋದು.

          ನಿಮ್ಮ ನಿಲುವು ನಿರಾದಾರವಾದುದು.. ಏನೋ ಯಾವೂದೋ ಪ್ರೇರೇಪಣೆಯಿಂದ ನಿಮ್ಮ ಒಳಬಿಲಾಶೆ ಹಾಗು ತಾಯ್ನುಡಿಯಲ್ಲದ ದೂರ ಸಂಸ್ಕ್ರುತದ ಮೇಲಣ ವ್ಯಾಮೋಹ!

          ಇಲ್ಲಿ ನಿಮ್ಮೊಬ್ಬರ ವಿಶಯವಲ್ಲ ಚರ್ಚೆ! ಇಡೀ ಕನ್ನಡ ಸಮುದಾಯದ ಬಗ್ಗೆ..

          ಈ ಬಗ್ಗೆ ಹಲವು ಸಂಶೋದನೆಗಳು ನಡೆದಿವೆ. ಹಾಲಕ್ಕಿ ಕನ್ನಡ, ಕುರಬ ಕನ್ನಡ, ಹವೀಕ, ತುಳು, ಮಂಡ್ಯಗನ್ನಡ, ಹಾಸನದ ಕನ್ನಡ, ಹಕಾರದ ಗೆರೆ, ಕತ್ತೆ ಎಂಬ ಹುರುಳಿನ ಕತ್ತಿ ಎಂಬ ಪದ, ಹೊಡಿ/ಹೊಡೆ ಹೀಗೆ.. ಈ ಎಲ್ಲ ಸಂಶೋದನೆಗಳಿಂದ ಬಂದ ಪರಿಣಾಮ ಈ ನುಡಿಯರಿಮೆ.

          ನಿಮಗಾಗಿ ತುಂಬಾ ಸಂಸ್ಕ್ರುತ ಪದಗಳನ್ನೇ ಬಳಸಿ ಬರೆದಿದ್ದೀನಿ. ಅರ್ತವಾಗುವುದೇನೋ ಎಂದು!

          ಉತ್ತರ
          • ತುಂಬಾ ಅಕಟಕಟಿಸುವುದು ಹಲ್ಲಿಗೆ ಒಳ್ಳೆಯದಲ್ಲ. ಅಲ್ಲ, ನೀವು ಕಟಕಟಿಸಬೇಡಿ ಅಂದದ್ದಲ್ಲ, ನೆನಪಿಗೆ ಬಂತು ಹೇಳಿದೆ ಅಷ್ಟೆ. ನೀವು ಮುಂದುವರೆಸಲು ನನ್ನ ತಕರಾರೇನೂ ಇಲ್ಲ.

            ಈ ಹಾಲಕ್ಕಿ ಕನ್ನಡ, ಕುರುಬಗನ್ನಡ, ಹವೀಕ, ತುಳು, ಮಂಡ್ಯಗನ್ನಡ, ಹಾಸನದ ಕನ್ನಡ ಇವುಗಳ ಜೊತೆ ನಮ್ಮ ಕನ್ನಡವನ್ನೂ ಸೇರಿಸಿಕೊಳ್ರಲ್ಲ. ಅದೂ ಕನ್ನಡವೇ. ಅದಕ್ಕೂ ಬದುಕುವ ಹಕ್ಕಿದೆ.

            ಉತ್ತರ
            • ಮಾಯ್ಸ
              ಏಪ್ರಿಲ್ 12 2011

              ನಿಮ್ಮ ಕನ್ನಡ ಯಾವುದು ಹಾಗು ಆ ಕನ್ನಡದ ಬಗ್ಗೆಯ ಸಂಶೋದನೆಗಳಾವುವು?

              ಆ ಕನ್ನಡ ಮಾತಾಡು ಪ್ರದೇಶ ಹಾಗು ಜನಾಂಗ ಯಾವುದು?

              ಏಕೆಂದರೆ ಪ್ರತಿಯೊಂದು ಕವಲುನುಡಿಗೂ ಅದರದೇ ಆದ ಪ್ರದೇಶ ಹಾಗು ಬುಡಕಟ್ಟು ಇರುತ್ತೆ ಹಾಗು ಇದೆ.

              ಉತ್ತರ
              • ಮಾಯ್ಸ
                ಏಪ್ರಿಲ್ 12 2011

                ಹಾಗು ನಿಮ್ಮ ಕನ್ನಡ ಬೇರೆ ಕವಲುಗನ್ನಡಕ್ಕಿಂತ ಬೇರೆಯದು ಹೇಗೆ?

                ಅದನ್ನು ಆಡುಮಂದಿಯೆಶ್ಟು?

                ಒಂದು ವೇಳೆ ನಿಮ್ಮ ಕವಲುನುಡಿಯ ಬಗ್ಗೆ ಯಾವ ಸಂಶೋದನೆಯೂ ನಡೆಯದೇ ಇದ್ದರೆ, ಬೇಗನೇ ಕರ್ನಾಟಕದ ಒಂದು ವಿಶ್ವವಿದ್ಯಾಲಯ ಈ ಬಗ್ಗೆ ಸಂಶೋದನೆ ಕೈಗೊಳ್ಳಲು ಸಂಪರ್ಕಿಸಿರಿ.

                ( ಕರ್ನಾಟಕದ ಎಲ್ಲ ನುಡಿಗಳ ಬಗ್ಗೆ ಸಂಶೋದನೆ ನಡೆದಿದೆ.. ಅದರಲ್ಲಿ ತುಳು, ಕೊಂಕಣಿ, ಬ್ಯಾರಿ, ಲಂಬಾಣಿ ಹೀಗೆ ಎಲ್ಲದವುಗಳ ಮಾಹಿತಿ ಮೈಸೂರು, ಹಂಪಿ, ಗುಲಬರ್ಗ ಹೀಗ ಹಲವು ವಿಶ್ವವಿದ್ಯಾಲಯದಲ್ಲಿವೆ. )

                ಉತ್ತರ
            • ಮಾಯ್ಸ
              ಏಪ್ರಿಲ್ 12 2011

              ಕನ್ನಡದ ಹೊಸ ಕವಲು ನುಡಿಕಾರರೇ ಇತ್ತ..

              ನಿಮ್ಮ ಹೊಸ ಕವಲು ಯಾವ ಊರಿನದು ಎಂದು ಹೇಳಿ?

              ಕೊಳ್ಳೇಗಾಲದ್ದು ಈಗಾಗಲೇ ಸಂಶೋದನೆ ಆಗಿದೆ.

              ಉತ್ತರ
              • ನಾನು ಸಂಶೋಧಕನೂ ಅಲ್ಲ, ನನ್ನ ಬಳಿ ನೀವು ಕೇಳುವ ಅಂಕಿ-ಅಂಶಗಳೂ ಇಲ್ಲ. ಆದರೆ ಪ್ರಶ್ನೆ ಅಂಕಿ-ಅಂಶಗಳದ್ದಲ್ಲ ಅಂತ ನಿಮಗೂ ಗೊತ್ತು.

                ನೀವು ಇದುವರೆಗೂ ಹೇಳಿದ ಯಾವ “ಕವಲು ಭಾಷೆ”ಯಲ್ಲೂ ಷ, ಋ ಇತ್ಯಾದಿಗಳಿಲ್ಲ ಅಂತೆಲ್ಲಾ ಹೇಳಿದಿರಿ. ಸರಿಯೇ. ಆದರೆ ಅದೆಲ್ಲವನ್ನೂ ಮೀರಿ, ಈಗಿರುವ ವರ್ಣಮಾಲೆಯನ್ನೂ ಈಗಿರುವ ಸಂಸ್ಕೃತಮೂಲದ, ಆದರೆ ಕನ್ನಡದಲ್ಲಿ ಹಾಸುಹೊಕ್ಕಾಗಿರುವ vocabularyಯನ್ನೂ ಉಪಯೋಗಿಸುತ್ತಿರುವ ಜನವರ್ಗವಿಲ್ಲವೇ? ಅದನ್ನು ತೋರಿಸಲು ನಿಮಗೆ ಸಂಶೋಧನೆ ಬೇಕೇ?

                ಉತ್ತರ
                • ಇದು ನಿಮ್ಮೆಲ್ಲ ವ್ಯಂಗ್ಯದ ಕುಟುಕನ್ನೂ ಮೀರಿ 🙂

                  ಉತ್ತರ
                  • ಹ್ಮ್… ನೀವು ಸೀಟಿನಲ್ಲಿಲ್ಲ ಅನ್ಸುತ್ತೆ. ನಾನೀಗ ತಾಚಿ… ನಿಮ್ಮ ಕಮೆಂಟ್ ಹಾಕಿ, ನಾಳೆ ಮಾತಾಡೋಣ

                    ಉತ್ತರ
                  • ಮಾಯ್ಸ
                    ಏಪ್ರಿಲ್ 12 2011

                    ನಿಮ್ಮ ತವುಡುಕುಟ್ಟಣವನ್ನು ನೋಡ್ತಾ ಕೂತಿರಶ್ಟು ಬೆಲೆವುಳ್ಳು ಅರಿಕೆ ತಮ್ಮಿಂದ ಬರಲಿಲ್ಲ..

                    ಅಂದಹಾಗೆ ಮತ್ತೆ ತಲೆಗಿಳಿದಲ್ಲ..’ಕವಲುನುಡಿ’/dialect ಎಂದರೇನು ಎಂಬುದು.

                    ತುಸು ಆರಯ್ಯು ನಡೆಸಿ.. ನಿಮಗೋ ಉದ್ದುದ್ದ ಕಮೆಂಟು ಬರೆಯೋ ಹುಮ್ಮಸ್ಸು ಜಾಸ್ತಿ.. ತುಸು ಅದನ್ನ ಶಂಕರಬಟ್ಟರ ಹೊತ್ತಗೆಯನ್ನು ಓದಿ ತಲೆಗೆ ಇಳಿಸಿಕೊಳ್ಳಿರಿ..

                    ಒಳ್ಳೇ ಚೈಲ್ಡ್ ವಾದ. ಹೇಳಿದೇ ಹೇಳ್ತಾ ಇದ್ದೀರ.. !

                    ಉತ್ತರ
                    • ಹೌದಪ್ಪ, ನಿಮ್ಮ ಶಂಕರಬಟ್ಟರ ಹೊತ್ತಗೆ ಬರೋ ಮೊದಲು ಕನ್ನಡವೇ ಇರಲಿಲ್ಲ.

                      ಚೈಳ್ಡ್ ವಾದ!! 🙂

  68. ಮಾಯ್ಸ :
    ಇಲ್ಲ..
    ನೀವು ಹೀಗೆ “ನಮಸ್ಕಾರ ಹೇಳುವ ಸಭ್ಯತೆಯನ್ನು ನಾಟಕವೆಂದೂ, ಬಾಯಿಗೆ ಬಂದಹಾಗೇ ನಿಂದಿಸಿ ಬರೆಯುವುದನ್ನು ಪ್ರಾಮಾಣಿಕತೆಯೆಂದೂ ಬೀಗುತ್ತಿರುವವರು ಯಾರು, ಯಾರ ಬೌದ್ಧಿಕ ಸ್ವಾತಂತ್ರದ ಮೇಲೆ ಯಾರು ನಾಲಿಗೆ ಚಾಟಿ ದಾಳಿಮಾಡುತ್ತಿದ್ದಾರೆ ಅನ್ನೋದು ಇವಿಷ್ಟೂ ಓದುವ ಕುರಿಗೂ ತಿಳಿಯುತ್ತದೆ, ಇನ್ನು ನಾಲ್ಕಕ್ಷರ ಕಲಿತು ಇದನ್ನು ಓದುವವರು ಕುರಿಗಳಲ್ಲ ಅನ್ನೋದು ನಿಮಗೂ ಗೊತ್ತು.”
    ಎಲ್ಲರಿಗೂ ಗೊತ್ತಿರುವ ವಿಶಯವನ್ನು ಮತ್ತೆ ಮತ್ತೆ ಮತ್ತೆ ಮತ್ತೆ ಬರೆಯಬೇಕು.. ಸಂಸ್ಕ್ರುತ ದ್ವೇಶಿಗಳು, ಕನ್ನಡ ದುರಬಿಮಾನಿಗಳು, ಹಾಗು ತಮ್ಮಂತಹ ಸಾದುಜನ ಬಣ್ಣ ಬಯಲು ಮಾಡಲೇ ಬೇಕು..
    ನೀವು ನನ್ನ ಮೇಲೆ ಒಂದು ವೈಯಕ್ತಿಕದಾಳಿಯನ್ನು ನಿಂದೆಯನ್ನು ಮಾತಾಡಲೇ ಇಲ್ಲವೆಂದು ನೀವು ನಿಶ್ಚಿಂತೆಯಿಂದ ಇರುವಿರಿ ತಾನೆ..! ಅದು ಸ್ವಾಬಾವವೇ!

    “ಬಣ್ಣ ಬಯಲು ಮಾಡಬೇಕು ಅಂದ್ರೆ ನೀವು ನೀರೆರಚಬೇಕು, ಆದರೆ ಕೆಸರು ಎರಚುತ್ತಿದ್ದೀರಿ 🙂

    ಉತ್ತರ
    • ಮಾಯ್ಸ
      ಏಪ್ರಿಲ್ 12 2011

      ತಿರುಗಿ ಅದೇ.. ನೀವು ನಾನು ಕೆಸರೆಚಿದೆ ಎಂದು ಡಂಗೂರ ಹೊಡೆಯಿರಿ.. ಯಾರನ್ನು ಕೆಟ್ಟವರು ಒಳ್ಳೆಯವರು ಎಂದು ತೀರ್ಮಾನಿಸವ ಇಲ್ವೆ ಹೆಸರಿಸು ತೆವಲಿಲ್ಲ… ನೀವೇ ತಾನೇ ನಾನು ‘ದುರಬಿಮಾನಿ’ ತಾವು ನನಗೆ ಸಾಬ್ಯಾಸ್ತಿಕೆ ನಮಸ್ಕಾರ ಹೇಳುವವರು ಎಂದು ಶುರು ಹೆಚ್ಚಿದ್ದು..

      ಈಗ ನನ್ನ ಮಾತು ಕೆಸರು ಎಂದು ಸೌಜನ್ಯವಾಗಿ ಹೇಳಿದ್ದು..!

      ನಿಮಗೆ ಈ ಬಗೆಯ ಚರ್ಚೆ ಬೆಳೆಸೋದು ಬೇಡವೆಂದಿದ್ರೆ, ನಾನು ವಿಶಯವಾಗೂ ಅನಿಸಿಕೆ ಹಾಕಿದ್ದೀನಿ.. ಅದಕ್ಕೆ ನಿಗವಹಿಸಿ, ಇದನ್ನು ತಿರಸ್ಕರಿಸಿ.. ಆಗ ‘ನಿಮ್ಮ ಗೌರವ ಉಳಿಸಿಕೊಳ್ಳುವಿಕ’ ಎಂಬುದು ನಡೆಯುವುದು!

      ಉತ್ತರ
      • ತಿರಸ್ಕರಿಸಿದೆ

        ಉತ್ತರ
        • ಮಾಯ್ಸ
          ಏಪ್ರಿಲ್ 12 2011

          ಅಲ್ಲಿ ಮತ್ತೆ ನಿಮಗ ಗೆಳೆಯನ ಜತೆ ಅದೇ ತಾಳಮದ್ದಳೆಯ ಅದಿಕ ಪ್ರಸಂಗ ಸುರು ಹಚ್ಚಿದ್ರಲ್ಲ.

          ರಾತ್ರಿಯೆಲ್ಲ ಹರಿಕತೆ ಕೇಳಿ ಬೆಳಗ್ಗೆ ರಾಮಂಗೂ ಸೀತೇಗೂ ಏನು ಅಂತ ಅಂದಂಗೆ.. ಹಳೇ ಪ್ಲೇಟು ಇಡೀ ನುಡಿಯರಮೆಯನ್ನು ಬಿಟ್ಟಾಕಿ.. ನಮ್ಮ ಕುಳಕ್ಕೆ ಷ ಬರುತ್ತೆ, ಅದಕ್ಕೆ ಇರಲಿ ಪ್ರಬಲಾಸ್ತ್ರ ಪ್ರಯೋಗ 🙂 ಮಾಡಿದ್ರಲ್ಲ.

          ಇದರಲ್ಲಿ ಏನಾರ ತರ್ಕ ಅಯ್ತ?! ನಿಮಗೆ ನುಡಿಯರಿಮೆ ಬರೊಲ್ಲ, ಅದರ ಬಗ್ಗೆ ಕ್ರುಶಿ ಇಲ್ಲ.. ಆದರೂ ಆರ್ಬಟ, ಪರಾಕ್ರಮ, ನಿಮ್ಮ ಮೊಂಡುವಾದ ಗೆಲ್ಲಲೇ ಬೇಕು ಎಂಬ ಹಟ. ಎಶ್ಟೇ ಆದರೂ ಅದನ್ನು ಪರಂಪರೆಯ ರಕ್ಶಣೆ ಎಂದು ಕರೆದುಕೊಂಡಿದ್ದೀರಲ್ಲ.

          ಉತ್ತರ
          • “ಅಲ್ಲಿ ಮತ್ತೆ ನಿಮಗ ಗೆಳೆಯನ ಜತೆ ಅದೇ ತಾಳಮದ್ದಳೆಯ ಅದಿಕ ಪ್ರಸಂಗ ಸುರು ಹಚ್ಚಿದ್ರಲ್ಲ.” – ಯಾರಿಗೋ ಕಾಮೆಂಟು ಮಾಡಕ್ಕೆ ಹೋಗಿ ನನಗೆ ಮಾಡಿದ್ರಿ ಅನ್ಸುತ್ತೆ; ಅತವಾ ನಿದ್ದೆನಾ? ಹೋಗಿ ಮುಕಕ್ಕೆ ತುಸು ನೀರು ಚಿಮುಕಿಸಿಕೊಂದು ಬನ್ನಿ. ನಿಮ್ಮ ಮಾತು ಅರ್ಥವಾಗ್ತಿಲ್ಲ.

            ಉತ್ತರ
  69. ಮಾಯ್ಸ
    ಏಪ್ರಿಲ್ 12 2011

    ಮಂಜುನಾಥ ಕೊಳ್ಳೇಗಾಲ :
    ನಾನು ಸಂಸ್ಕೃತದ್ದೋ ಕನ್ನಡದ್ದೋ ಸೊಲ್ಲರಿಮೆ/ವ್ಯಾಕರಣದ ಬಗ್ಗೆ ಎಲ್ಲಿ ಹೇಳಿದೆ? ನಾವು ಆ ಅಕ್ಷರಗಳನ್ನು (ಬರೀ ಆ ಅಕ್ಷರಗಳನ್ನ, not in relation to some other letters) ಉಲಿಯುವಾಗ ನಾಲಿಗೆ ಹೇಗೆ ಹೊರಳುತ್ತೆ ಅಂತ ವಿವರಿಸಿದೆ ಅಷ್ಟೇ, ಅದೂ ಎದುರಿಗೆ ಉಲಿದು ತೋರಿಸಲಿಕ್ಕೆ ಆಗಲಿಲ್ಲ ಅಂತ. ಉಲಿದು ತೋರಿಸುವುದಕ್ಕೆ ಆಗಿದ್ದರೆ ಬರೀ ಉಲಿದು ತೋರಿಸುತ್ತಿದ್ದೆ, ಅದರ linguistic ವಿಷಯ ಮಾತಾಡ್ತಾನೂ ಇರಲಿಲ್ಲ. ಕನ್ನಡದಲ್ಲಿ ಜಸ್ತ್ವಸಂಧಿ ಇದೆಯೋ, ಸಂಸ್ಕೃತದಲ್ಲಿ ಲೋಪಸಂಧಿ ಇದೆಯೋ ಅನ್ನೋದು ಇಲ್ಲಿನ discussion ಅಲ್ವೇ ಅಲ್ಲ. ಸುಮ್ನೇ ಅದನ್ನ ಯಾಕೆ ಎಳೆದು ತಂದು ಬೇಕು ಅಂತ ಗಲಿಬಿಲಿ ಹುಟ್ಟಿಸ್ತಿದೀರಿ?

    ಇರಲಿ, ನಾನು ಹೇಳಿದ್ದು ನಿಮಗೆ ಅರ್ಥವಾಗದೇ ಏನಿಲ್ಲ. ನಿದ್ದೆ ಮಾಡೋರನ್ನ ಎಬ್ಬಿಸಬಹುದು, ಹಾಗೆ ನಟಿಸೋರನ್ನಲ್ಲ. ಆದ್ದರಿಂದ ನನ್ನ ನಿಲುವು ಈಗ ಏನಿರಬೇಕು ಅಂದ್ರೆ, ಬಿಟ್ಟಾಕಿ, ನಾನೇನು ನಿಮಗೆ ಇದನ್ನ ಅರ್ಹ ಮಾಡಿಸಲೇ ಬೇಕು ಅಂತ ಹೊಣೆಹೊತ್ತಿಲ್ಲ. ನಿಮಗೆ ನಾನು ಹೇಳಿದ್ದು ಅರ್ಥವಾಗಲಿಲ್ಲ ಅಂದ್ರೆ ಅದನ್ನ ಅಲ್ಲಿಗೆ ಬಿಟ್ಟುಬಿಡಿ.

    ೧. ಸ್ವಾಮಿ… ನಿಮಗೆ ಅದನ್ನೇ ಹೇಳುತ್ತಿರುವುದು. ಗಮನವಿಟ್ಟು ಓದಿ ದಯವಿಟ್ಟು.

    ನೀವೊಬ್ಬು ಒಂದು ಬಗೆಯಲ್ಲಿ ಉಲಿಯಬಲ್ಲಿರಿ ( ಇಲ್ಲಿ ಶ ಆದ ಮೇಲೆ ಡ/ಟ ಬರುವ ವಿಶಯವಾಗಿ ) ಎಂದು ಎಲ್ಲ ಕನ್ನಡಿಗರೂ ಹಾಗೆ ಅಲ್ಲ. ಅದಕ್ಕೆ ನಾನು ಕೂಡಲೆ, ಹೊರಳು, ಕಡಲೆಯನ್ನು ಎತ್ತುಗೆ/ಉದಾಹರಣೆ ಆಗಿ ಕೊಟ್ಟಿದ್ದು. ಕನ್ನಡದಲ್ಲಿ ಸೊಲ್ಲರಿಮೆ, ನುಡಿಯರಿಮೆಯಲ್ಲಿ ಆಳವಾಗಿ ತಿಳಿದವರ ಹೊತ್ತಗೆಗಳಲ್ಲಿ ಈ ಸಂಗತಿ ಬಂದಿದ್ದು.. ಅವರೂ ಇದನ್ನೇ ಹೇಳುವರು. ಇನ್ನೂ ಬಿಡಿಸಿ ಹೇಳಿದರೇ, ಶ ಸದ್ದು, ಡ/ಟ ಮುನ್ನ ಕನ್ನಡದಲ್ಲಿ ಬಂದರೆ ಅದು ಷ ಆಗುವುದಿಲ್ಲ.

    ೨. ಇದು ಒಂದು ನುಡಿಯರಿಮೆಯ ಸಂಗತಿ, “linguistic ವಿಷಯ ಮಾತಾಡ್ತಾನೂ ಇರಲಿಲ್ಲ” ಅಂದರೇನು ಅರ್ತ? ಸುಮ್ನೆ ಬಂಡಲ್ ಬಿಟ್ಟಿರ? ಈ ಇಡೀ ವಿಶಯವೇ linguistics/ನುಡಿಯರಿಮೆ ಒಳಗೆ ಬರೋದು. ತಿಳಿದು ಉಲಿಯಬೇಕು ತಾನೆ! ನುಡಿಯರಿಮೆ ಆದುದರಿಂದಲೇ ಸಂಸ್ಕ್ರುತ ಸೊಲ್ಲರಿಮೆ ಹಾಗು ಕನ್ನಡದ ಸೊಲ್ಲರಿಮೆಯ ಹೋಲಿಕೆ ಬರುವುದು. ಇದನ್ನೆಲ್ಲ ಬಿಟ್ಟು ಇಲ್ಲಿ ಮಾತಾಡು ಬರೀ chattering(ನಿಮ್ಮ style). ಇಶ್ಟು ಹೊತ್ತು ನೀವು ಅದನ್ನೇ ಮಾಡಿದ್ದು? ಇದು ನಿಮ್ಮನ್ನು “personal abuse”ಮಾಡಿ ಹೇಳುತ್ತಿಲ್ಲ. ಈ ಇಡೀ ಬರಹವೇ ನುಡಿಯರಿಮೆಯ ಬಗ್ಗೆ ಅದನ್ನು ಬಿಟ್ಟು ನಾವು ಇಲ್ಲಿ ಮಾತಾಡೋದಕ್ಕೆ ಆಗುವುದೇ ಇಲ್ಲ.

    ೩. ನಿಮ್ಮ ಗಲಿಬಿಲಿ ಏನು? ಯಾವ ವಿಶಯದೊಳಗೆ ಈ ಚರ್ಚೆ ಎಂದು ನಿಕ್ಕಿ ಆಗದೇ ಬಂದು ಅನಿಸಿಕೆ ಬರೆದುದೇ ಏನು?

    ೪. ನಾನು ಆಗಲೇ ಹೇಳದ ಹಾಗೆ ನಟನೆ ಮಾಡೋ ಬಾಬತ್ತು ನನಗಿಲ್ಲ. ನಾನು ಏನು ಹೇಳಬೇಕೋ, ಅದನ್ನು ಹೇಳೇ ಹೇಳುವೆನು!
    ೫. ನುಡಿಯರಿಮೆ ವಿಶಯವಾಗಿ ಚರ್ಚೆ ಇದು. ಮತ್ತೊಮ್ಮೆ ತಮ್ಮ ಅವಗಹನೆಗೆ!

    ಉತ್ತರ
    • ವಾದ ಎಲ್ಲಿಂದ ಎಲ್ಲಿಗೋ ಹೋಯಿತು. ಇಲ್ಲಿ ನಡೆಯುವುದು ನುಡಿಯರಿಮೆಯ ಚರ್ಚೆಯೇ, ಅದನ್ನು ನಾನು ಇಲ್ಲ ಅನ್ನಲಿಲ್ಲ. ಆದರೆ ನಾನು ಅದನ್ನು ಹೇಳಿದ್ದು ತೀರ narrow context ನಲ್ಲಿ. ನೀವು ಷ ಉಲಿದು ತೋರಿಸಲು ಹೇಳಿದಿರಿ, ನಾನು ಅದನ್ನು ಉಲಿದು ತೋರಿಸಲು ಆಗದ್ದರಿಂದ ವಿವರಿಸಿ ತೋರಿಸಿದೆ. *ಆ ಸಮಯದಲ್ಲಿ* ಅಲ್ಲಿ ನಾನು ಮಾತಾಡುತ್ತಿದ್ದು ನುಡಿಯರಿಮೆಯ ವಿಷಯವಲ್ಲ, ಕೇವಲ ದನಿ ಹೇಗೆ ಹೊರಡಿಸುವುದು ಅನ್ನುವ ವಿಷಯ. ಅದನ್ನು ನಾನು ತುಂಬಾ ಸಲ clarify ಮಾಡಿದೆ. ಅಷ್ಟರಲ್ಲೂ ಅದೆಷ್ಟು ನಿಂದನೆ!

      ಉತ್ತರ
      • ಮಾಯ್ಸ
        ಏಪ್ರಿಲ್ 12 2011

        “ಉಲಿದು ತೋರಿಸುವುದಕ್ಕೆ ಆಗಿದ್ದರೆ ಬರೀ ಉಲಿದು ತೋರಿಸುತ್ತಿದ್ದೆ, ಅದರ linguistic ವಿಷಯ ಮಾತಾಡ್ತಾನೂ ಇರಲಿಲ್ಲ.”

        ಹಿಂಗಂದ್ರೆ ಏನರ್ತ?

        ಅವರವರ ಮನಸಿನ ಭ್ರಾಂತೀಯ ನಿಂದನೆಗಳಿಗೆ ನಾನು ಹೊಣೆಯಲ್ಲ!

        ಉತ್ತರ
        • “ಇಲ್ಲಿ ನಡೆಯುವುದು ನುಡಿಯರಿಮೆಯ ಚರ್ಚೆಯೇ, ಅದನ್ನು ನಾನು ಇಲ್ಲ ಅನ್ನಲಿಲ್ಲ. ಆದರೆ ನಾನು ಅದನ್ನು ಹೇಳಿದ್ದು ತೀರ narrow context ನಲ್ಲಿ. ನೀವು ಷ ಉಲಿದು ತೋರಿಸಲು ಹೇಳಿದಿರಿ, ನಾನು ಅದನ್ನು ಉಲಿದು ತೋರಿಸಲು ಆಗದ್ದರಿಂದ ವಿವರಿಸಿ ತೋರಿಸಿದೆ. *ಆ ಸಮಯದಲ್ಲಿ* ಅಲ್ಲಿ ನಾನು ಮಾತಾಡುತ್ತಿದ್ದು ನುಡಿಯರಿಮೆಯ ವಿಷಯವಲ್ಲ, ಕೇವಲ ದನಿ ಹೇಗೆ ಹೊರಡಿಸುವುದು ಅನ್ನುವ ವಿಷಯ. ಅದನ್ನು ನಾನು ತುಂಬಾ ಸಲ clarify ಮಾಡಿದೆ” ಅಂತ ಇದೇ ಪೋಸ್ಟಿನಲ್ಲಿ ಹಾಕಿದ್ದೆ. ಅದಕ್ಕೇ ನೀವು ಮತ್ತೆ ಕಾಮೆಂಟ್ ಹಾಕಿ ““ಉಲಿದು ತೋರಿಸುವುದಕ್ಕೆ ಆಗಿದ್ದರೆ ಬರೀ ಉಲಿದು ತೋರಿಸುತ್ತಿದ್ದೆ, ಅದರ linguistic ವಿಷಯ ಮಾತಾಡ್ತಾನೂ ಇರಲಿಲ್ಲ.”
          ಹಿಂಗಂದ್ರೆ ಏನರ್ತ?” ಅಂತ ಕೇಳಿದರೆ ಏನುತ್ತರ ಹೇಳಲಿ.

          ಭ್ರಾಂತೀಯ ನಿಂದನೆಗಳಿಗೆ ನೀವು ಹೊಣೆಯಲ್ಲ, ಆದರೆ ಅವು ಭ್ರಾಂತೀಯ ನಿಂದನೆಗಳಲ್ಲ, ನಿಜದ ನಿಂದನೆಗಳು ಅನ್ನೋದು ನಿಮಗೂ ಗೊತ್ತು. ಮತ್ತೆ ಇವತ್ತಿನ ಸುಮಾರು ೫೫ ಪೋಸ್ಟುಗಳಿಂದ ನಿಮ್ಮ ಎಲ್ಲ ನಿಂದನೆಗಳನ್ನು ಹೆಕ್ಕಿ ತೋರುವಷ್ಟು ಚೈತನ್ಯ ನನ್ನಲ್ಲಿ ಉಳಿದಿಲ್ಲ. ವಿಷಯದ ಚರ್ಚೆಯಿದ್ದರೆ ಮುಂದುವರೆಸೋಣ.

          ಉತ್ತರ
      • ಮಾಯ್ಸ
        ಏಪ್ರಿಲ್ 12 2011

        ನಿಮ್ಮ ಕನ್ನಡದವರೆಲ್ಲ ಷ ಕಾರ ಉಲಿಯುವರು ಎಂದು ನೀವು ಸುಳ್ಳು ಹೇಳುವಿರಿ ಎಂದು ನಾನು ಹೇಳುವೆನು.

        ಪುರಾವೆ ತೋರಿ, ನಾನು ತಪ್ಪೆಂದು ತೋರಿಸಿರಿ.

        ನನ್ನ ಎಲ್ಲ ಮಾತಿಗೆ ಶಂಕರಬಟ್ಟರ ಹೊತ್ತಗೆಗಳು ಹಾಗು ಅದರ ಆಕಾರ ಗ್ರಂತಗಳು ಸಾಕ್ಶಿ ಇವೆ.

        ಉತ್ತರ
        • “ನಮ್ಮ ಕನ್ನಡದವರೆಲ್ಲ ಷ ಕಾರ ಉಲಿಯುವರು” ಎಂದು ನಾನು ಹೇಳಲಿಲ್ಲ, “ಷ ಕಾರ ಉಲಿಯುವವರು, ಅದನ್ನು ಹಾಗೆಯೇ ಬಳಸಬೇಕೆನ್ನುವವರು, ಬಳಸುವವರು ನಮ್ಮ ಕನ್ನಡದವರು” ಅಂದೆ. ಎರಡೂ ಹೇಳಿಕೆಗಳಿಗೂ ವ್ಯತ್ಯಾಸವಿದೆ. ಹಾಗೆ ಷಕಾರವಿರುವ ಶಬ್ದವನ್ನು ಷಕಾರದೊಂದಿಗೆ ಉಚ್ಚರಿಸದಿದ್ದರೆ ಅದು ತಪ್ಪೆಂದು ನಮ್ಮ ನಿಲುವು. ನಮ್ಮ (ಕನ್ನಡ) ಗುರುಗಳು ಹಾಗೇ ಹೇಳಿಕೊಟ್ಟಿರುವರು, ಅದು ಸರಿಯೆಂದೂ ನಮಗೆ ಮನದಟ್ಟಾಗಿದೆ. ನಿಮಗೆ ನಿಮ್ಮ ಶಂಕರಬಟ್ಟರ ಮಾತು ಹೇಗೆ ಪುರಾವೆಯೋ ನಮಗೆ ಕನ್ನಡ ಕಲಿಸಿದವರ ಮಾತು ನಮಗೆ ಪುರಾವೆ.

          ಇನ್ನಿಷ್ಟು ಹೊತ್ತಗೆ ಆಕರಗ್ರಂಥಗಳನ್ನು ಎತ್ತಿಕೊಟ್ಟರೂ ಅವೆಲ್ಲ ಮಾತಾಡುವುದು ಕನ್ನಡದ ವಿವಿಧ ಪ್ರಬೇಧಗಳ ಬಗ್ಗೆ, ಅವು ಹೇಗೆ ಕೆಲಸ ಮಾಡುತ್ತವೆಂಬುದರ ಬಗ್ಗೆ. ನಾನು ಹೇಳುತ್ತಿರುವುದೂ ಕನ್ನಡದ ಒಂದು ಪ್ರಮುಖ ಪ್ರಬೇಧವಷ್ಟೇ.

          ಉತ್ತರ
          • ಮಾಯ್ಸ
            ಏಪ್ರಿಲ್ 12 2011

            ತಲೆಗಿಳಿದಲ್ಲ..’ಕವಲುನುಡಿ’ ಎಂದರೇನು ಎಂಬುದು.

            ಉತ್ತರ
  70. ಮಾಯ್ಸ :
    “ಬಾಧ್ಯಸ್ತರು, ಮಿಕ್ಕವರೆಲ್ಲ (ಅದರಲ್ಲೂ ಸಂಸ್ಕೃತಕ್ಕೆ ಮರ್ಯಾದೆ ತೋರಿಸುವವರು) ಕನ್ನಡದ ವೈರಿಗಳು ಅನ್ನೋಹಾಗೆ ನಡೆದುಕೊಳ್ಳುವುದು ಒಳ್ಳೆಯದಲ್ಲ ಅಂತಷ್ಟೇ ನನ್ನ ನಿಲುವು.”
    ಆಹಾ.. ಸಕಳ ತೀರ್ಪುಗಳ ಹೊಣೆ ಹೊತ್ತಿದವರು ತಾವು.. ಈ ತೀರ್ಪುನ್ನು ಹೇಳಲು ಏನು ಪುರಾವೆ? ನಾನು ಬೇರೆವರು ಅಲ್ಲ ಎಂದು ಎಲ್ಲಿ ಹೇಳಿಹೆನು?
    ಸುಮ್ನೆ.. ಏನೋ ಏನೋ ಸಾರಬೇಡಿ. ಸುಳ್ಳು ಪೊಳ್ಳು ಹೇಳಿಯೂ ಸಬ್ಯಸ್ತಿಕೆಯ ಪೋಸು!
    ನಿಮ್ಮ ಯಾವ ನಿಲುವಿಗೆ ನನ್ನ ಬೆಲೆ ಏನು ಅಂತ ಗೊತ್ತಿಲ್ಲ..
    ವಿಶಯವಾಗಲಿ! ಅದೇನು ನಿಮ್ಮ ನುಡಿಯರಿಮೆಯ ತರ್ಕ!?

    ನಿಮ್ಮ ಮಾತೇ ಅರ್ಥವಾಗಲಿಲ್ಲ. ಅದೇನೋ ಮತ್ತೊಂದು ಬೆಂಕಿಯುಂಡೆ ಅಂತಷ್ಟು ಮಾತ್ರ ಗೊತ್ತಾಯಿತು. ಇರಲಿ ಬಿಡಿ.

    ಉತ್ತರ
    • ಮಾಯ್ಸ
      ಏಪ್ರಿಲ್ 12 2011

      “ನಿಮ್ಮ ಮಾತೇ ಅರ್ಥವಾಗಲಿಲ್ಲ. ಅದೇನೋ ಮತ್ತೊಂದು ಬೆಂಕಿಯುಂಡೆ ಅಂತಷ್ಟು ಮಾತ್ರ ಗೊತ್ತಾಯಿತು. ಇರಲಿ ಬಿಡಿ.”

      ಅರ್ತವಾಗದೇ ಅದರ ಬಗ್ಗೆ ತೀರ್ಮಾನವೇ.. ಇದಕ್ಕೇ ಪೂರ್ವಗ್ರಹವೆಂದರೆ ತಪ್ಪಲ್ಲ.. ಆದರೆ ನನಗೆ ಹಾಗೆಲ್ಲ ಅನ್ನುವ ಚಾಳಿಯಿಲ್ಲ. ನಿಮ್ಮನ್ನು ಹಾಗೆಲ್ಲ ಅನ್ನೊಲ್ಲ.

      ಇನ್ನೊಮ್ಮೆ ಓದಿ.. ನಿಮ್ಮನ್ನು ನಾನೇನು ತೀರಾ ಬೈಯಲು ಹೋಗಿಲ್ಲ.!

      ಉತ್ತರ
      • ಓಹೋ, ತೀರಾ ಬೈಯೋದು ಬೇರೆ ಇದೆಯೋ? ತಿಳಿದಿರಲಿಲ್ಲ. ಹಾಗಿದ್ರೆ ಇದನ್ನು ಇಲ್ಲೇ ಬಿಡೋಣ ಬಿಡಿ.

        ನಮಸ್ಕಾರ, ಓಹ್ ಇಲ್ಲ, ಮರೆತುಬಿಡಿ… ಹೊರಡೋಣ.

        ಉತ್ತರ
        • ಮಾಯ್ಸ
          ಏಪ್ರಿಲ್ 12 2011

          ಎಲ್ಲಿಗೆ ಹೊರಟ್ರಿ..

          “ನಿಮ್ಮ ಕನ್ನಡದ ಬಗ್ಗೆ” ನನ್ನ ಕೇಳ್ವಿಗೆ ಉತ್ತರ ಹೇಳಿ..

          ನಾನು ದುರಬಿಮಾನಿ, ಸಂಸ್ಕ್ರುತದ್ವೇಶಿ ಎಂಬು ಬಿಟ್ಟಿಗೆ ಅನ್ನಿಸಿಕೊಂಡಿಲ್ಲ ಇಲ್ಲ..!

          ಉತ್ತರ
          • ನಾನೂ ಅಷ್ಟೇ. ಸಂಸ್ಕೃತಪ್ರೇಮಿ, ಸಂಸ್ಕೃತದುರಭಿಮಾನಿ, ಅಪಾಯಕಾರಿ ಬರಹಗಾರ ಅಂತೆಲ್ಲಾ ಬಿಟ್ಟಿಗೆ ಅನ್ನಿಸಿಕೊಂಡಿಲ್ಲ!

            ನಿಂದನೆಯಿಲ್ಲದ ಆರೋಗ್ಯಕರ ಚರ್ಚೆಯಲ್ಲಿ ನಿಮಗೆ ಇನ್ನೂ ಆಸಕ್ತಿಯಿದ್ದರೆ ನಾನು ಎಲ್ಲಿಗೂ “ಹೊರಡು”ವುದಿಲ್ಲ 🙂 ಕೇಳಿ ಅದೇನು ಕೇಳ್ವಿ.

            ಉತ್ತರ
            • ಮಾಯ್ಸ
              ಏಪ್ರಿಲ್ 12 2011

              “ನಾನೂ ಅಷ್ಟೇ. ಸಂಸ್ಕೃತಪ್ರೇಮಿ, ಸಂಸ್ಕೃತದುರಭಿಮಾನಿ, ಅಪಾಯಕಾರಿ ಬರಹಗಾರ ಅಂತೆಲ್ಲಾ ಬಿಟ್ಟಿಗೆ ಅನ್ನಿಸಿಕೊಂಡಿಲ್ಲ!”

              ನಿಮಗೆ ಸಂಸ್ಕ್ರುತವೇ ಬರೊಲ್ಲ! ಇನ್ನೂ ಸಂಸ್ಕ್ರುತ ಪ್ರೇಮದಿಂದ ಏನು ಬಾಗ್ಯ..

              😀
              ಕೇಳ್ವಿ ಅತ್ತ ಇನ್ನೊಂದೆಡೆ ಇದೆ.. ನೋಡಿ!

              ಉತ್ತರ
              • ಅರೇ, ಹೊರಟವನನ್ನು ಹಿಡಿದು ನಿಲ್ಲಿಸಿ ಮತ್ತೆ ಬೈಯಲು ಶುರುಮಾಡುವುದು ಯಾವ ಸೀಮೆ ಚರ್ಚೆ ಸಿವಾ?

                ಇರಲಿ, ನನಗೆ ಸಂಸ್ಕೃತ ಬರದು ಅಂತ ನೀವಂದುಕೊಂಡರೂ ಪರವಾಗಿಲ್ಲ, ನನ್ನ ಚರ್ಚೆಯೆಲ್ಲಾ ಸಂಸ್ಕೃತಪ್ರೇಮದಿಂದ ಬರ್ತಾ ಇದೆ ಅಂತ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದ ಆ ಪೊರೆ ಹರಿಯಿತಲ್ಲ, ಅದು ಸಂತೋಷ 😉 😉

                ನಿಮ್ಮ ಕೇಳ್ವಿಗೆ ಬದಲು ಕೊಟ್ಟೆ

                ಉತ್ತರ
                • ಮಾಯ್ಸ
                  ಏಪ್ರಿಲ್ 12 2011

                  ಅಲ್ರೀ.. ಸಂಸ್ಕ್ರುತ ಬರದೇ ಸಂಸ್ಕ್ರುತದ ಮೇಲಣ ಪ್ರೇಮ ಯಾವ ಬಾಗ್ಯಕ್ಕೆ?

                  ಇದು ಯಾವ ಸೀಮೆ ನಿಂದನೆ.. ನೀವು ಯಾಕೆ ಕಮೆಂಟು ಕಮೆಂಟು ‘ನಿಂದನೆ ನಿಂದನೆ’ ಅಂತೀರ?

                  ಅಂದ ಹಾಗೆ ನಿಮ್ಮ ‘ಬ್ರಹ್ಮ’ ನೀವು ಬೃಹಸ್ಪತಿಗಳು ಅದೇ ಬರೆದಿದ್ರಲ್ಲ.. ಅದನ್ನು ನೋಡೇ ನಾನು ನಿಮಗೆ ಸಂಸ್ಕ್ರುತ ನೆಟ್ಟಗೆ ಬರಲ್ಲ ಎಂದಿದ್ದು.

                  ಉತ್ತರ
                  • ಕಾಮೆಂಟನ್ನು ಓದದೇ ಮಾಡಿದ ತಲೆಹರಟೆ ಕಾಮೆಂಟು ಇದು, ಉತ್ತರಿಸಬೇಕಾದ್ದಿಲ್ಲ.

                    ನಾನು ಸಂಸ್ಕೃತಪ್ರೇಮಿ ಅಂತ ಅನ್ಲಿಲ್ಲ ಅಂತ ನೀವು ಕಾಮೆಂಟ್ ಮತ್ತೊಮ್ಮೆ ಓದಿದರೆ ಗೊತ್ತಾಗುತ್ತೆ.

                    ನನ್ನ ಸಂಸ್ಕೃತ ಎಷ್ಟು ಅಂತ ನಂಗೇ ಗೊತ್ತು, ಅದು ನಂಗೆ ಬರುತ್ತೆ ಅಂತ ನಿಮಗೆ ತೋರಿಸುವ ಅಗತ್ಯವಾಗಲೀ, ನಂಗೆ ಬರುತ್ತೆ ನಿಮ್ಮ ಸರ್ಟಿಪಿಕೇಟ್ ಗಿಟ್ಟಿಸಿಕೊಳ್ಳೋ ಅಗತ್ಯವಾಗಲೀ ನನಗಿಲ್ಲ. ಏನು ಹಮ್ಮು ಏನು ಬಿಮ್ಮು!

                    ಉತ್ತರ
  71. Narendra
    ಏಪ್ರಿಲ್ 12 2011

    ಮಂಜುನಾಥ್ ಅವರೇ,
    ನಿಮ್ಮ ಮತ್ತು ಶುಭಶ್ರೀ ಅವರ ನಡುವೆ ನಡೆದ ಸಂವಾದ “ತಾಳ-ಮದ್ದಲೆ”ಯನ್ನು ನೆನಪಿಗೆ ತಂದಿತು.
    ಬಹಳ ಸೊಗಸಾಗಿ ಸಂವಾದ ನಡೆದಿದೆ; ಉತ್ತರ-ಪ್ರತ್ಯುತ್ತರಗಳಿಂದ ನಮ್ಮೆಲ್ಲರ ಜ್ಞಾನ, ತರ್ಕಶಕ್ತಿಗಳೂ ಹೆಚ್ಚಿವೆ; ಅದು ಹಾಗೇ ಮುಂದುವರೆಯಲಿ.
    “ತಾಳ-ಮದ್ದಲೆ”ಯ ರಾಮಾಯಣದಲ್ಲಿ ರಾಮನೇ ಗೆಲ್ಲಬೇಕೆಂದಿಲ್ಲ. ರಾವಣನ ಪಾತ್ರಧಾರಿಯ ಪಾಂಡಿತ್ಯ, ತರ್ಕಶಕ್ತಿ ಹೆಚ್ಚಿದ್ದರೆ, ರಾಮನೂ ಸೋಲಬಹುದು.
    ಹಾಗೆಂದ ಮಾತ್ರಕ್ಕೆ, ಅದು ರಾಮಾಯಣದ ರಾಮನ ಸೋಲೆಂದು ಪರಿಗಣಿತವಾಗುವುದಿಲ್ಲ.
    ಹೀಗಾಗಿ, ಇಲ್ಲಿ ಯಾರ ವಾದ ಗೆಲ್ಲುತ್ತದೆ, ಸೋಲುತ್ತದೆ ಎನ್ನುವುದು ಮುಖ್ಯವಲ್ಲ – ಸತ್ಯ ಹೊರಬರುತ್ತಾ ಹೋಗಬೇಕು, ಅಷ್ಟೇ.
    ಆದರೆ, ಈ “ತಾಳ-ಮದ್ದಲೆ”ಯ ಮಧ್ಯೆ “ಶತಾವಧಾನ”ದ ’ಅಧಿಕಪ್ರಸಂಗಿ’ಯೂ ಬಂದಿರುವುದು ಸೋಜಿಗ.
    ’ಅಧಿಕಪ್ರಸಂಗಿ’ ಶತಾವಧಾನದುದ್ದಕ್ಕೂ ಅವಧಾನಿಗಳ ಕಾಲೆಳೆಯಲು, ದಿಕ್ಕುತಪ್ಪಿಸಲು, ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಲೇ ಇರುತ್ತಾನೆ.
    ಈ ’ಅಧಿಕಪ್ರಸಂಗಿ’ಯೇನಾದರೂ ಅವಧಾನಿಗಳ ದಿಕ್ಕುತಪ್ಪಿಸಲು ಹೋಗಿ ತಾನೇ ದಿಕ್ಕುತಪ್ಪಿ, ಕಡೆಗೆ “ತಾಳ-ಮದ್ದಲೆ”ಗೆ ಬಂದು ಬಿದ್ದು,
    ಇಲ್ಲೂ ಅದೇ ಪಾತ್ರವನ್ನು ಮುಂದುವರೆಸಿಬಿಟ್ಟಿರುವನೇನೋ ಎಂದು ಅನುಮಾನ.
    ಏನಾದರಾಗಲೀ, ನೀವು ಅಧಿಕಪ್ರಸಂಗಿಯ ವಿಷಯದಲ್ಲಿ ಜಾಗರೂಕರಾಗಿರಿ. ಅವನ ಕೆಲಸವೇ ದಿಕ್ಕುತಪ್ಪಿಸುವುದು, ಗಲಿಬಿಲಿ ಮಾಡುವುದು, ಚರ್ಚೆಯನ್ನು ಹಾದಿ ತಪ್ಪಿಸುವುದು, ಇತ್ಯಾದಿ.
    ನಿಮ್ಮ “ತಾಳ-ಮದ್ದಲೆ” ಮುಂದುವರೆಯಲಿ.

    ಉತ್ತರ
    • ಮಾಯ್ಸ
      ಏಪ್ರಿಲ್ 12 2011

      ಅದೇನೋ ಹಿಂದೆ ಪುಂಗಿದ್ರಿ.. ಬ್ರಹ್ಮ ಅನ್ನು ಬ್ರಮ್ಹ ಎಂದು ಉಲಿಯಬೇಕು.. ಅದು ಯಾವ ಸೀಮೆ ವ್ಯಾಕರಣ?

      ನಿಮ್ಮ ಈ ಕಮೆಂಟಿನಲ್ಲಿ ತುಂಬಾ ಮಾಹಿತಿ ತುಂಬಿಕೊಂಡಿದೆ.. ಏನು ವಿಶಯ.. 🙂

      ಹೆ ಹೆ, ಚಿಲ್ಲರೆ!

      ಉತ್ತರ
      • ಒಹ್ಹೋಹೋ, ಅಲ್ಲೆಲ್ಲೋ ಹಾಕಿದ್ದ ಮಾಯ್ಸಣ್ಣನ “ತಾಳಮದ್ದಳೆ” ಕಾಮೆಂಟಿನ ಅರ್ತ ಇಲ್ಲಿ ಸಿಕ್ತು. sorry ಮಾಯ್ಸಣ್ಣ, continue your entertainment. 🙂

        ನರೇಂದ್ರ, ಬಿಟ್ಟಾಕಿ, this is useless and pathetic.

        ಉತ್ತರ
    • Suresh
      ಏಪ್ರಿಲ್ 12 2011

      Mr. Narendra,

      What do you mean? Who is Rama? who is ravana here? I think you consider people with your views are Rama and the others are Ravana? Cheap gimmic! I think now you are feeling lost!

      ಉತ್ತರ
      • ಮಾಯ್ಸ
        ಏಪ್ರಿಲ್ 12 2011

        ಸುರೇಶ,

        ಕನ್ನಡದಲ್ಲಿ ಬರೀರಿ.. ಇಲ್ಲದಿದ್ದರೆ ಕಮೆಂಟು ಅಳಿಸಲು ಇವರಿಗೊಂದು ಸಬೂಬು ಸಿಗುವುದು!

        ನಿಮ್ಮ ಮಾತೇ ಇವರೆಲ್ಲ ರಾಮನ ಕಡೆಯೋದು, ಏಕೆಂದರೆ ಇವರು ಸಂಸ್ಕ್ರುತದ ಕಡೆಯವರು, ಮಿಕ್ಕವರು ರಾವಣರು( ದ್ರಾವಿಡವಾದದಲ್ಲಿ ತಂದರೆ 🙂 ) ..

        ಈ ಮನುಶ್ಯ ತೀರಾ ಚಿಲ್ಲರೆ.. ನೆನ್ನೆಯಿಂದ ಮಂಜುನಾತ್ ಆದರೂ ಎಲ್ಲ ಕಮೆಂಟಿಗೂ ಉತ್ತರ ಕೊಟ್ಟರು ( ಅದರ ಗುಣಮಟ್ಟ ಏನೇ ಇರಲಿ ).. ಈ ವಯ್ಯ ಬರೋದು ‘ವೈಯುಕ್ತಿಕ ನಿಂದನೆ’ ಎಂದು ಅತ್ತು ಕಮೆಂಟುಗಳನ್ನು ಅಳಿಸಿಸೋದು.. ಮತ್ತೆ ಬಂದು ಏನೋ ಗನಂದಾರಿ ಎಂದು ಹೀಗೆ ‘ಚಿಲ್ಲರೆ’ ಮಾತು ಹೇಳೋದು!

        ಉತ್ತರ
        • ನನ್ನ ಹೆಸರು ಮಂಜುನಾತ್ ಅಲ್ಲ, ಮಂಜುನಾಥ (ಥ ಕೂಡ ಪೂರ್ತಿ). ನಿಮಗೆ ಥ ಉಲಿಯುವ ಮನಸ್ಸಿಲ್ದಿದ್ರೆ ನನ್ನ ಹೆಸರನ್ನೇ ಉಲಿಯಬೇಡಿ.

          ಉತ್ತರ
      • ಏಪ್ರಿಲ್ 12 2011

        ರೀ ಸುರೇಶ್,
        ಈ ಮೊದಲೇ ಕನ್ನಡದಲ್ಲಿ ಬರೆಯಿರಿ ಅಂತ ಎರಡೆರಡು ಬಾರಿ ಹೇಳಿದ್ದೇವೆ,ಮತ್ತೆ ಮತ್ತೆ ಯಾಕೆ ಇಂಗ್ಲಿಷ್ ಬಳಸುತಿದ್ದಿರಿ ಇಲ್ಲಿ?

        ಉತ್ತರ
        • Suresh
          ಏಪ್ರಿಲ್ 12 2011

          Mr. Rakesh/ Mr. Suresh,

          I have no facility to write in kannada here, due to many reasons. Let nilume declare its policy that english commetns are not allowed.
          Yes, My english may be poor. Will i take out my right to put my views forward. I have not used any “bad words” in my comment this time.

          ಉತ್ತರ
          • ಏಪ್ರಿಲ್ 12 2011

            ಸುರೇಶ ಕನ್ನಡದಲ್ಲಿ ಬರೆಯಲು ಈ ಕೊಂಡಿಯನ್ನು ಬಳಸಿ https://nilume.wordpress.com/%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81/

            ಅರವಿಂದ್

            ಉತ್ತರ
            • Narendra Kumar.S.S
              ಏಪ್ರಿಲ್ 12 2011

              ಅರವಿಂದ್, ಧನ್ಯವಾದಗಳು. ನೀವು ಕೊಟ್ಟ ಕೊಂಡಿ http://www.kannadaslate.com ಗೆ ಕರೆದೊಯ್ಯುತ್ತದೆ.
              ಬಹಳ ಸುಲಭವಾಗಿ ಉಪಯೋಗಿಸಬಹುದಾದ ಸಲಕರಣೆ ಅದು. ನೋಡುವುದಕ್ಕೆ “Baraha Pad” ತರಹ ಇದೆ.
              ಆದರೆ, Installation ಬೇಕಾಗಿಲ್ಲ. Internet ಸೌಕರ್ಯ ಇರುವ ಎಲ್ಲರೂ (ಯಾವುದೇ Operating System ಇರಲಿ, ಯಾವುದೇ Browser ಉಪಯೋಗಿಸುತ್ತಿರಲಿ) ಇದರ ಪ್ರಯೋಜನ ಪಡೆಯಬಹುದು.

              ಉತ್ತರ
      • Narendra Kumar.S.S
        ಏಪ್ರಿಲ್ 12 2011

        ಸುರೇಶ್,
        ಇದು ಈ ಚರ್ಚೆಯಲ್ಲಿ ನಿಮ್ಮ ಮೂರನೇ ಪ್ರತಿಕ್ರಿಯೆ. ಅಷ್ಟನ್ನೂ ನೀವು ಇಂಗ್ಲಿಷಿನಲ್ಲೇ ಬರೆದಿರುವಿರಿ.
        ನಿಮ್ಮ ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವ ಸೌಕರ್ಯ ಇಲ್ಲದೇ ಇರಬಹುದು.
        ಕನ್ನಡ ಬರೆಯುವ ಸಾಕಷ್ಟು ಸಲಕರಣೆಗಳು ಉಚಿತವಾಗಿ ಸಿಗುತ್ತವೆ.
        ಯಾವುದೂ ಬೇಡ; GMAIL ಉಪಯೋಗಿಸುವಿರಾದರೆ, ಅದರೊಳಗೇ ಕನ್ನಡ ಬರೆಯಬಹುದು.
        ಕನ್ನಡಕ್ಕಾಗಿ ಇಷ್ಟು ಪ್ರಯತ್ನವೂ ಮಾಡದಿದ್ದರೆ, ನಿಮ್ಮ ಕನ್ನಡದ ಆಸಕ್ತಿ ಕುರಿತು ನಾವೇನು ಹೇಳೋಣ?

        > I think now you are feeling lost!
        ಈ ಮೇಲಿನ ವಾಕ್ಯ ಓದಿದ ಮೇಲೆ, ನಿಮ್ಮ ಇಂಗ್ಲಿಷ್ ಕುರಿತಾಗಿಯೂ ಅನುಮಾನಗಳೇಳುತ್ತೆ.

        > What do you mean? Who is Rama? who is ravana here?
        ನಾನು ಉದಾಹರಣೆಗೆ ರಾಮಾಯಣದ ಪ್ರಸಂಗ ತೆಗೆದುಕೊಂಡೆನಷ್ಟೇ.
        ತಾಳ-ಮದ್ದಲೆ ಪ್ರಸಂಗದಲ್ಲಿ ಎರಡೂ ಪಾತ್ರಧಾರಿಗಳಿರುವರು. ಹಾಗೆಂದ ಮಾತ್ರಕ್ಕೆ, ರಾವಣನ ಪಾತ್ರಧಾರಿಗೆ ರಾವಣನು ಅಚ್ಚುಮೆಚ್ಚು ಎಂದೇನೂ ಇರುವುದಿಲ್ಲ.
        ಪ್ರಸಂಗ ಮುಗಿದ ನಂತರ, ಎಲ್ಲ ಪಾತ್ರಧಾರಿಗಳೂ ರಾಮನಿಗೆ ನಮಸ್ಕಾರ ಮಾಡುತ್ತಾರೆ.
        ಮುಂದಿನ ಸಲ, ರಾವಣನ ಪಾತ್ರಧಾರಿ ರಾಮನ ಪಾತ್ರವನ್ನೂ ತೆಗೆದುಕೊಳ್ಳಬಹುದು.

        > ನಿಮ್ಮ ಮಾತೇ ಇವರೆಲ್ಲ ರಾಮನ ಕಡೆಯೋದು, ಏಕೆಂದರೆ ಇವರು ಸಂಸ್ಕ್ರುತದ ಕಡೆಯವರು, ಮಿಕ್ಕವರು ರಾವಣರು( ದ್ರಾವಿಡವಾದದಲ್ಲಿ ತಂದರೆ ) ..
        ನಿಮಗಿಷ್ಟ ಬಂದ ಪಾತ್ರ ನಿಮಗೆ. ಯಾರು ಯಾವ ಪಾತ್ರ ವಹಿಸಿದರೇನು, ಶ್ರೋತೃಗಳಿಗೆ ಜ್ಞಾನದ ಹಸಿವಿಗೆ ಉಣಬಡಿಸುವುದು ಮತ್ತು ಮನರಂಜನೆ ನೀಡುವುದು ಮುಖ್ಯ.
        ರಾವಣ ಎಂದ ಕೂಡಲೇ ’ದ್ರಾವಿಡ’ ಎಂದು ಕೆಲವರಿಗೆ ಅನ್ನಿಸಿದರೆ, ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ. ಪಾಪ, ಮಂಡೋದರಿ ರಾವಣನನ್ನು ತಿಳಿಯದೇ ’ಆರ್ಯಪುತ್ರ’ ಎಂದು ಸಂಬೋಧಿಸಿಬಿಟ್ಟಿದ್ದಾಳಲ್ಲಾ? ಅವಳ ಅಜ್ಞಾನವನ್ನು ನೀವು ಹಳಿಯಬೇಕಷ್ಟೇ.

        ಉತ್ತರ
  72. ಮಾಯ್ಸ
    ಏಪ್ರಿಲ್ 12 2011

    ಮಂಜುನಾಥ ಕೊಳ್ಳೇಗಾಲ :
    ನಾನು ಸಂಶೋಧಕನೂ ಅಲ್ಲ, ನನ್ನ ಬಳಿ ನೀವು ಕೇಳುವ ಅಂಕಿ-ಅಂಶಗಳೂ ಇಲ್ಲ. ಆದರೆ ಪ್ರಶ್ನೆ ಅಂಕಿ-ಅಂಶಗಳದ್ದಲ್ಲ ಅಂತ ನಿಮಗೂ ಗೊತ್ತು.
    ನೀವು ಇದುವರೆಗೂ ಹೇಳಿದ ಯಾವ “ಕವಲು ಭಾಷೆ”ಯಲ್ಲೂ ಷ, ಋ ಇತ್ಯಾದಿಗಳಿಲ್ಲ ಅಂತೆಲ್ಲಾ ಹೇಳಿದಿರಿ. ಸರಿಯೇ. ಆದರೆ ಅದೆಲ್ಲವನ್ನೂ ಮೀರಿ, ಈಗಿರುವ ವರ್ಣಮಾಲೆಯನ್ನೂ ಈಗಿರುವ ಸಂಸ್ಕೃತಮೂಲದ, ಆದರೆ ಕನ್ನಡದಲ್ಲಿ ಹಾಸುಹೊಕ್ಕಾಗಿರುವ vocabularyಯನ್ನೂ ಉಪಯೋಗಿಸುತ್ತಿರುವ ಜನವರ್ಗವಿಲ್ಲವೇ? ಅದನ್ನು ತೋರಿಸಲು ನಿಮಗೆ ಸಂಶೋಧನೆ ಬೇಕೇ?

    ಆಹಾ ..! ಈ ವಯ್ಯ ಇವರೇ ಒಂದು ಕವಲುನುಡಿ ಅಯ್ತೆ. ಅದರಾಗೇ ಇವರ ಕುಳದವರು ಋ, ಷ ಎಲ್ಲ ಸಕ್ಕತ್ತಾಗಿ ಉಲಿತಾರೆ ಅಂತ ಓಳು ಬಿಟ್ಟರು ಮೊದಲು. ಈಗ ಪ್ಲೇಟೇ ಚೇಂಚು. ಈಗ ಇವರ ವಾದದ ಮೂಲ ‘ಈಗಾಗಲೇ ಅಯ್ತೆ.. ಅದು ನಮಗೆ ನಮ್ಮ ಕುಳದವರಿಗೆ ಬೇಕಾದಂಗ್ ಅಯ್ತೆ.. ಇರಲಿ ಬಿಡು ಅಂತೆ’ ಹಂಗಾದರೆ ಮಿಕ್ಕ ಮಂದಿ ಕತೆ ಏನು? ಹೆಚ್ಚು ಕನ್ನಡಿಗರಿಗೆ ಸಲೀಸಾಗೋ ಹಾಗೆ ಕನ್ನಡ ಇರಬೇಕು ಅನ್ನೋದು ಇಲ್ಲಿ ಮಾತು. ಇವರ ಮಟಕ್ಕೆ ಇವರ ಗುಂಪಿಗೆ ಸರಿಯಾಗಿ ಇರಲಿ ಅಂದ್ರೆ ಅದೇನು?

    ಎಶ್ಟು ಹೇಳಿದ್ರು ಮತ್ತೆದೇ ರಾಗ! ಆಗ ಆಗ ತಾವು ಸಿಕ್ಕಾಪಟ್ಟೆ ತರ್ಕ ಎಂಬ ಉದ್ದುದ್ದ ಸಾಲು.

    ಒಂದು ರನ್ನನ ಗದಾಯುದ್ದ ಎಲ್ರೂ ಓದ್ರಾರಂತೆ ಅದಕ್ಕೆ ಅದ್ರಾಗಿರೋ ಸಂಸ್ಕ್ರುತ ಪದಗೊಳ್ ಬೇಕಾಂತೆ.! ಆಹಾ ಮಣ್ಣಂಗಟ್ಟಿ!

    ಉತ್ತರ
  73. ಮಾಯ್ಸ
    ಏಪ್ರಿಲ್ 12 2011

    ‘ನಿಲುಮೆ ತಂಡ’

    ನೀವು ಹಲವಾರು ಕಮೆಂಟುಗಳನ್ನು ಚಾಡಿಕೋರರ ಮಾತುಗಳನ್ನು ಕೇಳಿ ಅಳಿಸಿದಿರಿ. ಹಾಗೆ ‘ನಾವು ಎಲ್ಲಾ ನಿಟ್ಟಿನ ಅನಿಸಿಕೆಗಳನ್ನು ಪ್ರಕಟಿಸುವೆವು’ ಎನ್ನುವಿರಿ ಇನ್ನೊಂದು ಕಡೆ. ಮತ್ತೂ ಏನೂ ವಿಶಯವೇ ಇರದ ಅನಿಸಿಕೆಗಳನ್ನು, ನರೇಂದ್ರ, ಮಂಜುನಾತ್ ಕೊಳ್ಳೇಗಾಲ ಅನ್ನೋರಂತಹ ತೀರಾ ಕಳಪೆ ( ಬರೀ ಪದಗಳಶ್ಟು ಸಬ್ಯಸ್ತಿಕೆ ಎನ್ನಿಸುವುದು, ವಿಶಯವಾಗಿ) ಕಮೆಂಟುಗಳಿಗೆ ದೊಡ್ಡ ಅನುವು ಮಾಡಿಕೊಟ್ಟಿರಿ..

    ಆದುದರಿಂದ ನೀವು ಪಕ್ಶಪಾತಿಗಳು ಎಂದು ಅನ್ನಿಸುತ್ತಿದೆ…

    ಉತ್ತರ
    • ಏಪ್ರಿಲ್ 12 2011

      ‘ನಿಲುಮೆ’ ಬಳಗಕ್ಕೆ ಒಂದು ಚೌಕಟ್ಟಿದೆ, ಇದನ್ನು ಮೀರಿ ಪ್ರತಿಕ್ರಿಯಿಸುವ ಯಾರದೇ ಪ್ರತಿಕ್ರಿಯೆ ವ್ಯೆಯುಕ್ತಿಕ ನಿಂದನೆಯಾಗಿದ್ದಾರೆ, ಯಾವುದೇ ಕಾರಣ ನೀಡದೆ ಪ್ರತಿಕ್ರಿಯೆಯನ್ನು ಅಳಿಸುವೆವು.

      ಉತ್ತರ
      • ಮಾಯ್ಸ
        ಏಪ್ರಿಲ್ 12 2011

        ಆ ಚೌಕಟ್ಟು ಬರೀ ನರೇಂದ್ರ ಅವರು ಕಂಪ್ಲೇಂಟಿನ ಮೇಲೆ ನಿಂತಿದೆ ಎಂದು ಯಾಕೆ ಅನ್ನಿಸುವುದು?

        ಏನಾದರೂ ನೀವು ಅಳಿಸಿರೋ ಕಮೆಂಟಿಗಳಿಗಿಂದ, ಅವರ ಕಂಪ್ಲೆಂಟೇ ಜಾಸ್ತಿಯಾ?

        ಆದಶ್ಟು ಕಡಮೆ ಕಮೆಂಟುಗಳನ್ನು ಅಳಿಸಿ! ಕೋರಿಕೆ.

        ಉತ್ತರ
      • ನಿಲುಮೆ, ಕಾಮೆಂಟುಗಳನ್ನು ಅಳಿಸುವುದು ಸರಿಯೆಂದು ನನಗೆ ಅನ್ನಿಸುವುದಿಲ್ಲ, ಏಕೆಂದರೆ:
        ೧) ಮಾತು ಒಮ್ಮೆ ಬಂದಮೇಲೆ ಅದರ ಪರಿಣಾಮ ಓದುಗನಲ್ಲಿ ಆಗಿಯೇ ಆಗುತ್ತದೆ. ಆಮೇಲೆ ಕಾಮೆಂಟನ್ನು ಅಳಿಸುವುದರಲ್ಲಿ ಯಾವ ಅರ್ಥವೂ ಇಲ್ಲ.
        ೨) ಕಾಮೆಂಟನ್ನು ಅಳಿಸಿದರೆ, ಆ ಕಾಮೆಂಟನ್ನು ಮಾಡಿದವನು ಮುಂದೆ ನಾನು ಹಾಗನ್ನಲೇ ಇಲ್ಲ ಅನ್ನಲು ಅನುಕೂಲವಾಗುತ್ತದೆ. ಇದನ್ನು ಈಗಾಗಲೇ ನೋಡಿದ್ದೇವೆ.
        ೩) ಸಾಧ್ಯವಾದರೆ ಕಾಮೆಂಟು ಪ್ರಕಟವಾಗುವುದರೊಳಗೇ filter ಮಾಡಲು ಸಾಧ್ಯವೋ ನೋಡಿ, ಅದರಿಂದ ಕೊನೆಯ ಪಕ್ಷ ಚರ್ಚೆಯನ್ನು ಒಂದು ಹಳಿಯಮೇಲೆ ನಡೆಸಲು ಅನುಕೂಲವಾಗುವುದು.

        ಉತ್ತರ
        • ಏಪ್ರಿಲ್ 12 2011

          ಮಂಜುನಾಥ್,
          ಏನು ಮಾಡಿದರೂ ಕಡೆಗೆ ಕೆಟ್ಟ ಹೆಸರು ನಿಲುಮೆಗೆ. ಒಂದು ಕಡೆ ನಮಗೆ ಎಲ್ಲರ ವಾದಗಳನ್ನು ಗೌರವಿಸಬೇಕೆಂಬ ನಿಲುವು, ಇನ್ನೊಂದು ಕಡೆ ಕಾಮೆಂಟ್ ಗಳಲ್ಲಿ ಜಗಳ ಏನೂ ಮಾಡುವುದು ಹೀಗಾದರೆ? ಎಲ್ಲರೂ ತಮಗೆ ತೋಚಿದನ್ನು ಹೇಳಿದರೆ ಯಾರ ಮಾತುಗಳನ್ನು ಗಣನೆಗೆ ತೆಗೆದು ಕೊಳ್ಳುವುದು ನೀವೆ ಹೇಳಿ ?

          ನಿಲುಮೆ

          ಉತ್ತರ
          • ನಿಲುಮೆಯ ಮೇಲ್ವಿಚಾರಣೆ ಹಕ್ಕನ್ನು ನಾನು ಗೌರವಿಸುತ್ತೇನೆ. ಕಾಮೆಂಟುಗಳನ್ನು ಅಳಿಸುವುದು ನಿಲುಮೆಗೆ ಸರಿಯೆನ್ನಿಸಿದರೆ ಅದು ನನಗೆ ಮಾನ್ಯವೇ, ನಾನು ನಿಲುಮೆಯಲ್ಲಿ ಮಾತಾಡುತ್ತಿರುವವರೆಗೂ. ನನ್ನದೇನಿದ್ದರೂ ಕೋರಿಕೆ/ಅನಿಸಿಕೆ ಅಷ್ಟೇ, ಅದನ್ನು ಮನ್ನಿಸದಿರುವ ಹಕ್ಕು ನಿಲುಮೆಗಿದೆ, ಅದರಲ್ಲಿ ಎರಡು ಮಾತಿಲ್ಲ.

            ಈಗಾಗಲೇ ನೀವು ಗಮನಿಸಿರಬೇಕು ಇಲ್ಲಿ ನಡೆಯುತ್ತಿರುವ ವಾದದ ರೀತಿಯನ್ನು. ಯಾರೋ ಇನ್ನೊಬ್ಬರನ್ನು ನಿಂದಿಸುತ್ತಾರೆ. ಅವರು ನಿಲುಮೆಗೆ ದೂರುತ್ತಾರೆ (ಅವರಷ್ಟಕ್ಕೆ ಅದು ಸರಿ, ಪಾಪ). ನಿಲುಮೆ ಅದನ್ನು ಮನ್ನಿಸಿ, ಕೆಟ್ಟ ಕಾಮೆಂಟನ್ನು ಅಳಿಸುತ್ತದೆ. ಮೊದಲು ಕಾಮೆಂಟ್ ಹಾಕಿದ ವ್ಯಕ್ತಿಗೆ ಕೋಪ ಬರುತ್ತದೆ. ಮತ್ತೆ ಇನ್ಯಾವತ್ತೋ ಇನ್ನಾವುದೋ ವಾದದಲ್ಲಿ ನಾನು ಸಿಲುಕುತ್ತೇನೆ. ಆಗ ಆ ವ್ಯಕ್ತಿ ತನ್ನ ಕಾಮೆಂಟ್ ಅಳಿಸಿದ ಕೋಪವನ್ನ ನನ್ನ ಮೇಲೆ ತೋರಿಸುತ್ತಾನೆ; ನಾನು, ನನ್ನಂಥವರು, ನಮ್ಮವರು ದೂರು ಕೊಟ್ಟು ತನ್ನ ಕಾಮೆಂಟ್ ಅಳಿಸಿಹಾಕಿಸುತ್ತಾರೆಂದು ನನ್ನಮೇಲೆ ವಿನಾಕಾರಣ ಹರಿಹಾಯುತ್ತಾನೆ. ಈ ಗಲಭೆಯಲ್ಲಿ, ನಾನೇ ಸ್ವತಃ ಕಾಮೆಂಟುಗಳನ್ನು ಅಳಿಸಬಾರದೆನ್ನುವ ನಿಲುವನ್ನು ಹೊಂದಿದ್ದರೂ ಅದು ಅವನ ತಲೆಗೆ ಹೋಗುವುದೇ ಇಲ್ಲ. ವ್ಯಕ್ತಿಯೊಬ್ಬನನ್ನು ವ್ಯಕ್ತಿಯಾಗಿ ಪರಿಗಣಿಸದೇ ಅವನನ್ನು ತನಗಿಷ್ಟವಿಲ್ಲದವರ “ಗುಂಪಿಗೆ” ಸೇರಿಸಿ ಜಬ್ಬರಿಸುವ ಈ ಗುಂಪುಗಾರಿಕೆಗೆ ನಾವೇನು ಮಾಡಬೇಕು, ನಿಲುಮೆ ತಿಳಿಸಲಿ.

            ಉತ್ತರ
  74. Shubhashree
    ಏಪ್ರಿಲ್ 14 2011

    ಇವುಗಳ ಮೂಲ “ಆದಿ ದ್ರಾವಿಡ” ಅನ್ನುವ ಕಲ್ಪಿತ
    > ಭಾಷೆ.
    ನಿಮಗೆ ಬೇಕಾದಾಗ ಕಲ್ಪಿತವೂ ಸರಿಯೇ ಅಲ್ಲವೇ?

    ಎಂಥಾ ಪ್ರತಿಕ್ರಿಯೆ ನೋಡಿ ನಿಮ್ಮಿಂದ!
    ಆದಿ ದ್ರಾವಿಡ ಅನ್ನುವ ಕಲ್ಪಿತ ಭಾಷೆ ಎನ್ನುವ ದಿಟವನ್ನು ಯಾವುದೇ ದುರುದ್ದೇಶವಿಲ್ಲದೆ ಬರೆದರೆ ಎಂಥಾ ವ್ಯಂಗ್ಯ ನೋಡಿ! ನಾಚಿಕೆ ಆಗಿಹೋಯ್ತು ನಿಮ್ಮೊಂದಿಗೆ ವಾದಿಸಲು!! ಅಲ್ಲಿಗೇ ನಿಲ್ಲಿಸಿದ್ದೆ… ಸುಮ್ಮನೆ ಈಗ ದುರುದ್ದೇಶ ಅಂದು ಮಾತಿಗೆಳೆದಿರಿ.

    ಉತ್ತರ
  75. Shubhashree
    ಏಪ್ರಿಲ್ 14 2011

    ನರೇಂದ್ರ ಸಾರ್,

    ಇವುಗಳ ಮೂಲ “ಆದಿ ದ್ರಾವಿಡ” ಅನ್ನುವ ಕಲ್ಪಿತ
    > ಭಾಷೆ.
    ನಿಮಗೆ ಬೇಕಾದಾಗ ಕಲ್ಪಿತವೂ ಸರಿಯೇ ಅಲ್ಲವೇ?
    ಎಂಥಾ ಪ್ರತಿಕ್ರಿಯೆ ನೋಡಿ ನಿಮ್ಮಿಂದ!
    ಆದಿ ದ್ರಾವಿಡ ಅನ್ನುವ ಕಲ್ಪಿತ ಭಾಷೆ ಎನ್ನುವ ದಿಟವನ್ನು ಯಾವುದೇ ದುರುದ್ದೇಶವಿಲ್ಲದೆ ಬರೆದರೆ ಎಂಥಾ ವ್ಯಂಗ್ಯ ನೋಡಿ! ನಾಚಿಕೆ ಆಗಿಹೋಯ್ತು ನಿಮ್ಮೊಂದಿಗೆ ವಾದಿಸಲು!! ಅಲ್ಲಿಗೇ ನಿಲ್ಲಿಸಿದ್ದೆ… ಸುಮ್ಮನೆ ಈಗ ದುರುದ್ದೇಶ ಅಂದು ಮಾತಿಗೆಳೆದಿರಿ.

    ಉತ್ತರ
    • ಮಾಯ್ಸ
      ಏಪ್ರಿಲ್ 15 2011

      ಶುಬಶ್ರೀ..

      🙂

      ಉತ್ತರ
  76. ಬಸವಯ್ಯ
    ಏಪ್ರಿಲ್ 12 2013

    ಈ ಚರ್ಚೆಯಲ್ಲಿರೊ ಬಸವಯ್ಯನೋರು ಮತ್ತು ‘ಶಂಕರ ಬಟ್ಟರದ್ದು ಎಲ್ಲರ ಕನ್ನಡವೆ?’ ದ ಬಸವಯ್ಯ ಬೇರೆ!. ನಮ್ಮ ಹೆಸರು ಒಂದಾದರೂ ವಿಚಾರ ಶೈಲಿ ಬೇರೆ. ಇದ್ಯಾವುದಪ್ಪ ಎರಡು ತಲೆ ಹಾವು ಅಂತ ನಿಲುಮೆಯ ಓದುಗರು ಅಂದುಕೊಳ್ಳಬಾರದು ಎಂದು ಈ ಸ್ಪಷ್ಟಿಕರಣ:)

    ಉತ್ತರ

Trackbacks & Pingbacks

  1. Reformation of Kannada Script: A brain-dead idea borrowed from the “Dravidians” | Sanskrit-Animus Begotten of Sin
  2. Reformation of Kannada Script: A brain-dead idea borrowed from the “Dravidians” | Sanskrit-Animus Begotten of Sin

Leave a reply to ರಾಕೇಶ್ ಶೆಟ್ಟಿ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments