ವಿಷಯದ ವಿವರಗಳಿಗೆ ದಾಟಿರಿ

Archive for

2
ಸೆಪ್ಟೆಂ

ಬಯಲು ಆಲಯದೊಳಗೊ?ಆಲಯವು ಬಯಲೊಳಗೊ?

-ಮು. ಅ. ಶ್ರೀರಂಗ, ಬೆಂಗಳೂರು

Pragatiparate“ಚಿಂತನ ಬಯಲು”ಸಾಹಿತ್ಯಿಕ ತ್ರೈಮಾಸಿಕದ ಎಪ್ರಿಲ್-ಜೂನ್ ೨೦೧೩ರ ಸಂಚಿಕೆಯಲ್ಲಿ ಡ ರಾಜಾರಾಮ ಹೆಗಡೆಯವರ “ಸಾಮಾಜಿಕ ಸಂಶೋಧನೆಗೆ ಮುಳುವಾಗುತ್ತಿರುವ ಜನಪ್ರಿಯ ಧೋರಣೆಗಳು”ಎಂಬ ಲೇಖನ ಓದಿ   ಮನಸ್ಸಿಗೆ ತುಂಬಾ ಖೇದವಾಯಿತು. ಪ್ರಗತಿಪರರೆಂದು ಹೇಳಿಕೊಳ್ಳುವ ನಮ್ಮ ಬುದ್ಧಿಜೀವಿಗಳು ಚಿಂತಕರು ಯಾವಾಗ ಯಾವ ರೀತಿ ನಡೆದುಕೊಳ್ಳುತ್ತಾರೆಂದು ಯಾವ ಜ್ಯೋತಿಷಿಯೂ ಹೇಳಲಾರ! ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಇವರಲ್ಲಿ ಕೆಲವರು,ಒಂದಾನೊಂದು ಕಾಲದಲ್ಲಿ ನಮ್ಮ ದೇಶದಲ್ಲಿ ಇದಕ್ಕೆ ಕಂಟಕ ಬಂದಾಗ ಅದನ್ನು ವಿರೋಧಿಸಿ ಜೈಲಿಗೂ ಹೋಗಿಬಂದು ಹೀರೋಗಳಾಗಿದ್ದವರು. ಆದರೆ ಈಗ ತಾನೇ ಮುಗಿದ ಲೋಕಸಭೆಯ ಉಪ ಚುನಾವಣೆಯಲ್ಲಿ ಈ ಹಿಂದೆ ಯಾವ ಪಕ್ಷದ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿತ್ತೊ ಆ ಪಕ್ಷದ ಪರವಾಗಿ ಪ್ರಚಾರ ಮಾಡಿ ಅದರ ಅಭ್ಯರ್ಥಿಗಳ “ಕೈ”ಯನ್ನು ಬಲಪಡಿಸಿ ಗೆಲ್ಲಿಸಿದರು. ಸಮಾಜದ ಎಲ್ಲಾ ರಂಗಗಳಲ್ಲಿ ಈ ಗುಂಪುಗಳು ಹೇಳಿದ್ದೆ ಕೊನೆಯ ಮಾತು. ಅವರು ವ್ಯಾಖ್ಯಾನಿಸಿದ ಪ್ರಕಾರ ನಡೆದರೆ ಮಾತ್ರ ಅದು ಅಭಿವ್ಯಕ್ತಿ ಸ್ವಾತಂತ್ರ್ಯ,ಪ್ರಗತಿಪರ ಚಿಂತನೆ. ಇತರರದ್ದೆಲ್ಲಾ ಪ್ರಗತಿ ವಿರೋಧಿ,ಜಾತೀಯತೆ,ಸನಾತನವಾದಿ,ಪುರೋಹಿತಶಾಹಿಯ ಪುನರುತ್ಹಾನದ ಹಿಡನ್ ಅಜೆಂಡಾ ಹೊಂದಿರುವಂತಹುದು………. ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇದುವರೆಗೆ ಸಾಹಿತ್ಯ  ಮತ್ತು ರಾಜಕೀಯ ಕ್ಷೇತ್ರಗಳತ್ತ ಮಾತ್ರ ಗಮನವಿರಿಸಿದ್ದ ಈ ಗುಂಪುಗಳು ಈಗ ಸಾಮಾಜಿಕ ಸಂಶೋಧನಾ ವಲಯದ ಕಡೆಗೂ ಗಮನ ಹರಿಸಿ ಅದನ್ನೂ ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ಈ ಗುಂಪಿನಲ್ಲಿ ಹಲವರು “ನಾನಾ ಕಾರಣಗಳಿಂದ”ರಾಜ್ಯದ ಶಕ್ತಿ ಕೇಂದ್ರಕ್ಕೆ ಹತ್ತಿರವಾಗಿರುತ್ತಾರೆ,ಬೇಕಾಗಿದವರಾಗಿರುತ್ತಾರೆ.

ಮತ್ತಷ್ಟು ಓದು »