ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 20, 2013

6

ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದು ಯಾರ ಸ್ವತ್ತು ಅನಂತ ಮೂರ್ತಿಗಳೇ?

‍ನಿಲುಮೆ ಮೂಲಕ

– ನವೀನ್ ನಾಯಕ್

URAಮೊನ್ನೆ ಮೊನ್ನೆ ನಡೆದ ಒಂದು ಕಾರ್ಯಕ್ರಮದಲ್ಲಿ ಅನಂತ ಮೂರ್ತಿಯವರು ” ನರೇಂದ್ರ ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನು ಬದುಕಿರಲು ಇಷ್ಟಪಡುವುದಿಲ್ಲ ” ಎಂಬ ಹೇಳಿಕೆ ನೀಡಿ ಮೋದಿ ಅಭಿಮಾನಿಗಳ ವಿರೋಧಕ್ಕೆ ಗುರಿಯಾಗಿದ್ದರು.ತದನಂತರ ನಡೆದ ಸಂದರ್ಶನದಲ್ಲಿ ಅನಂತ ಮೂರ್ತಿಯವರು ” ಮೋದಿ ಪ್ರಧಾನಿಯಾಗಬಾರದೆಂದು ” ಎಂಬ ಉದ್ದೇಶದಿಂದ ಹಾಗೆ ಹೇಳಿದೆ. ಯೌವನದಲ್ಲಿಯಾಗಿದ್ದರೆ ಮೋದಿ ಪ್ರಧಾನಿಯಾಗಗೊಡವುದಿಲ್ಲ ಅಂತ ಹೇಳುತ್ತಿದ್ದೆ ಈಗ ವಯಸ್ಸಾಗಿದೆ ಅದಕ್ಕೆ ಹಾಗೆ ಹೇಳಿದೆ,ನನ್ನ ನಿಲುವೊಂದೆ ಮೋದಿ ಈ ದೇಶದ ಪ್ರಧಾನಿಯಾಗಬಾರದು. ಇದರರ್ಥ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆಂದು ಅರ್ಥವಲ್ಲ ವೆಂದು ಸಮಜಾಯಿಸಿ ನೀಡಿದರು.

ಹಾಗೆ ಮೋದಿ ಅಭಿಮಾನಿಗಳು ನೀಡುತ್ತಿರುವ ಉತ್ತರ ಮತ್ತು ಅವರು ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿದರೆ ಅಧಿಕಾರವಿಲ್ಲದೇನೇ ಹೀಗೆ ಇನ್ನು ಮೋದಿ ಅಧಿಕಾರವಹಿಸಿಕೊಂಡ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಇರೋದೇ ಇಲ್ಲ,  ಇದು ನಿಜವಾದ ಅಪಾಯವೆಂದಿದ್ದಾರೆ. ಅದೇ ಸಂದರ್ಶನದಲ್ಲಿ ಪ್ರಜಾಪ್ರಭುತ್ವವಾದಿಗೆ ಪ್ರಜಾಪ್ರಭುತ್ವವನ್ನು  ಸಂಶಯದಿಂದ ನೋಡುವ ಶಕ್ತಿಯಿರಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಮರುಳು ಮಾಡುವ ವಿಧಾನದಿಂದ ಆಯ್ಕೆಯಾಗಿ ಬರುವವರನ್ನು ವಿರೋಧಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.

ಅನಂತ ಮೂರ್ತಿಯವರಿಗೆ ಮಾತ್ರವೇ ಅಥವಾ ಅವರನ್ನು ಬೆಂಬಲಿಸುವವರಿಗೆ ಮಾತ್ರವೇ ಇರುವುದಾ ಆಭಿವ್ಯಕ್ತಿ ಸ್ವಾತಂತ್ರ್ಯ? ಇಲ್ಲಿ ಒಬ್ಬರ ಉದ್ದೇಶ ಮಾತ್ರ ಸ್ಪಷ್ಟಪಡಿಸಿಕೊಂಡರೆ ಅದು ಫ್ಯಾಸಿಸ್ಷ್ ಧೋರಣೆಯಾಗುತ್ತದೆ. ಕೇವಲ ಅನಂತಮೂರ್ತಿಯವರ ಹೇಳಿಕೆಗೆ ಅಥವ ಅವರನ್ನು ಸಮರ್ಥಿಸುವ ಹಿಂಬಾಲಕರಿಗೆ ಮಾತ್ರವಾ ಹಿಂದೆ ಉದ್ದೇಶವಿರುವುದು. ಆ ಹೇಳಿಕೆಯನ್ನು ಟೀಕಿಸುವವರಿಗೆ ಉದ್ದೇಶವಿಲ್ಲವೇ. ಅನಂತಮೂರ್ತಿಯವರು ನಾನು ಮೋದಿ ಪ್ರಧಾನಿಯಾದರೆ ಬದುಕಿರಲು ಇಷ್ಟಪಡುವುದಿಲ್ಲ ಎಂಬ ಹೇಳಿಕೆಗೆ ಅದಕ್ಕೆ ವಿರೋಧವಾಗಿ ನೀವು ಸಾಯಿರಿ ಎಂಬ ಹೇಳಿಕೆಯನ್ನು ಮೋದಿ ಅಭಿಮಾನಿಗಳು ಕೊಟ್ಟಿದ್ದಾರೆ. ಇಲ್ಲಿ ಮೋದಿ ಅಭಿಮಾನಿಗಳು ಕತ್ತಿ  ಕುಡಾರಿ ಹಿಡಿದುಕೊಂಡು ಅನಂತಮೂರ್ತಿಯವರ ಹಿಂದೆ ಬಿದ್ದಿದ್ದಾರಾ, ಇಲ್ಲವಲ್ಲ. ಅವರ ಹೇಳಿಕೆಗೆ ಇದು ವಿರೋಧವಾಗುತ್ತೆ ವಿನಃ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಹೇಳಿಕೆಯ ಹಿಂದಿರುವ ಉದ್ದೇಶ ಎರಡೂ ಕಡೆ ಗಮನಿಸುವುದು ಉತ್ತಮ.

ಇನ್ನೊಂದೆಡೆ ಪ್ರಜಾಪ್ರಭುತ್ವವನ್ನು ಸಂಶಯದಿಂದ ನೋಡೋ ಶಕ್ತಿಯಿರಬೇಕು ಎಂದಿದ್ದಾರೆ. ಅವರ ಮಾತಿನ ಪ್ರಕಾರ ನಡೆದರೆ ಮೋದಿ ಮೇಲಲ್ಲ ಅವರ ಸಂಶಯ ಬರಬೇಕಾಗಿದ್ದು. ಮೋದಿ ಭವಿಷ್ಯ, ಅವರು ಪ್ರಧಾನಿಯಾಗಬಹುದು ಆಗದೆನೂ ಇರಬಹುದು. ವಾಸ್ತವ ಯುಪಿಎ, ಸಂಶಯದಿಂದ ನೋಡಬೇಕಾಗಿದ್ದು ಯುಪಿಎನನ್ನ. ಅದರ ಬಗ್ಗೆ ಠೀಕಿಸಬಹುದಿತ್ತು. ಇಲ್ಲದಿದ್ದರೆ ಮಾಧ್ಯಮ ಸೃಷ್ಠಿಸಿದ ” ಪ್ರಳಯ ” ದಂತೆ ಇವರ ಹೇಳಿಕೆ ಹಾಸ್ಯಾಸ್ಪದ. ಅದೂ ಬುದ್ದಿಜೀವಿಯಾಗಿದ್ದು ಇಂಥ ಹೇಳಿಕೆ ! ಈಗ ಉಂಟಾಗಿರುವ ರಾಜಕೀಯ, ಜನಸಾಮನ್ಯ ಸಮಸ್ಯೆಗಳು ಅವರ ಕಣ್ಣಿಗೆ ಬೀಳದಿದ್ದದು ದುರಾದೃಷ್ಠ.ಲಕ್ಷಾಂತರ ಕೋಟಿಗಳ ಹಗರಣ ಅನಂತ ಮೂರ್ತಿಯವರ ಗಮನಕ್ಕೆ ಬರಲಿಲ್ಲವೆಂಬುದು ಸಂಶಯ. ಈಗ ಕಾಡುತ್ತಿರುವ ಸಮಸ್ಯೆಗಳಿಗೆ ನೇರ ಹೊಣೆ ಯುಪಿಎ. ತನ್ನ ತಪ್ಪನ್ನು ಒಪ್ಪಿಕೊಳ್ಳದೇ ಯಾವುದೋ ದೇಶದ ಆಂತರಿಕ ಸಮಸ್ಯೆ ಮೇಲೆ ಎತ್ತಿಹಾಕುವುದು ಅದರ ಜಾಯಮಾನ. ಸ್ವಲ್ಪ ದಿನದ ಹಿಂದೆ ಯುಪಿಎ ಸರಕಾರ  ದೇಶದಲ್ಲಿ 62 ಕೋಟಿ ಜನ ಆಹಾರ ಕೊರತೆ ಎದುರಿಸುತ್ತಿದೆ ಎಂದು ತನ್ನ ಆಹಾರ ಭದ್ರತೆ ಯೋಜನೆ ತರುವಾಗ ಸ್ಪಷ್ಟೀಕರಿಸಿದೆ. ಈ 62 ಕೋಟಿ ಜನರು ಉಪವಾಸವಿರುವಂತಹ ಸ್ಥಿತಿ ಸೃಷ್ಟಿಸಿದವರಾರು.ಇಲ್ಲಿ ಅನಂತ ಮೂರ್ತಿಯವರಿಗೆ ಸಂಶಯ ಬರಲಿಲ್ಲವೇ. ಅಡಗಿಸಿರುವ ಕಪ್ಪುಹಣದ ಚಿಂತೆ ತಮ್ಮ ಹನ್ನೊಂದು ಕೋಟಿಯ ಮನೆಯೊಳಗೆ ಕುಳಿತಾಗ ಬರಲಿಲ್ಲವೇ.

ರೂಪಾಯಿ ಮೌಲ್ಯ ಕುಸಿದಿರುವ ಈ ದಿನಗಳಲ್ಲಿ ಕಾರ್ಮಿಕರು ಸಂಬಳ ಹೆಚ್ಚಾಗದೇ ಮೂಲ ಅವಶ್ಯಕತೆ ಪೂರೈಸಿಕೊಳ್ಳಲಾಗದೇ ಒದ್ದಾಡುವುದು ಅನಂತ ಮೂರ್ತಿಯವರ ಗಮನಕ್ಕೆ ಬರಲಿಲ್ಲವೇ .ಅವರು ಜನ ಸಾಮನ್ಯರನ್ನು ನೋಡುವುದು ಕೇವಲ ಕಾರ್ಯಕ್ರಮಗಳಲ್ಲಿ ಮಾತ್ರವೇ. ಈ ಎಲ್ಲಾ ನೂರಾರು ಸಮಸ್ಯೆಗಳು ತಂದೊಡ್ಡಿದ್ದೇ ಯುಪಿಎ ತಾನೆ. ಇದರ ಬಗ್ಗೆ ಏಕೆ ಜಾಣ ಮೌನ. ಯುಪಿಎ ಸಮಸ್ಯೆ ಕೆಲವರಿಗಿದು ಪಿಕ್ ಪಾಕೆಟ್ ತರ ಕಾಣುವುದು. ನಮ್ಮ ಜೀವನಕ್ಕೆ ಕಂಟಕವಾಗಿರುವ ಸರಕಾರವನ್ನು ಪಿಕ್ ಪಾಕೆಟ್ ತರ ಸಮರ್ಥನೆ. ಇದಕ್ಕಿಂತ ದೊಡ್ಡ ಪೂರ್ವಗ್ರಹ ಪೀಡಿತ ಮನಸ್ಸು ಇನ್ನೊಂದು ಇರಲಿಕ್ಕಿಲ್ಲ.  ಪೆಡಂಬೂತದೊಂದಿಗೆ ಜೀವನ ನಡೆಸುತಿದ್ದೇವೆ . ಮುಂಬರುವ ಸುಳ್ಳು ಭೂತದ ಚಿಂತೆ ನಮಗೇಕೆ.

ಚಿತ್ರ ಕೃಪೆ : http://www.frontline.in

6 ಟಿಪ್ಪಣಿಗಳು Post a comment
  1. M.A.Sriranga's avatar
    M.A.Sriranga
    ಸೆಪ್ಟೆಂ 20 2013

    Really I pity for Ananthamurthy. He himself is spoiling the charisma and honour which he gained from his literary works. A man like him should respect the voice of the people if he believes in democracy. As he himself said he cannot go to politics at this age. Then why unnecessarily gives such statements.

    ಉತ್ತರ
    • Nagshetty Shetkar's avatar
      ಸೆಪ್ಟೆಂ 20 2013

      You are speaking as if people of India have voted namo as pm of India! May be that’s your dream. But it is nightmare to the country. This is what URA highlighted. Stop pitying URA and start pitying yourself.

      ಉತ್ತರ
      • M.A.Sriranga's avatar
        M.A.Sriranga
        ಸೆಪ್ಟೆಂ 21 2013

        Mr.Shetkar why should I pity myself? I am not an astrologer to tell what will happen in the future days. If a man like URA is making so much of controversy just because Modi”s name is announced by BJP as its PM candidate,for next lokasabha elections,
        I have no other option but to pity for him. URA’s full history is daily coming in medias. If you brand all of them belongs to namo company you have every right to do that.

        ಉತ್ತರ
  2. Vikas Nayak's avatar
    ಸೆಪ್ಟೆಂ 21 2013

    It’s not sensational that Anant Murti whether likes or hates Narendra Modi but his statement to quit mother India in any circumstance what so ever it may be!!!! Is he an intellectual ? Can he be deemed as conscientious Indian ? I heartily condemn his statement in the context of patriotism!!! I learnt that he was a professor and is an icon of Kannada Literature world and had been honoured with Jynan Pitha Prashasti. He lost his personal control on the usage of words. People speak that he had stated so under the pressure of congress party!!! Some do assert that he lost command on the language in bias and due excitement. If he will read me I expect he should beg pardon for hurting the sentiment of Indians. If he thinks that his status is all above the sentiment of being Indian, then let him proceed with the dent to be incorporated in history.

    ಉತ್ತರ
  3. Bindu's avatar
    Bindu
    ಸೆಪ್ಟೆಂ 23 2013

    I agree with Vikas Nayak.

    ಉತ್ತರ
  4. Purushothama Raju's avatar
    Purushothama Raju
    ಸೆಪ್ಟೆಂ 25 2013

    Sir ನವೀನ್ ನಾಯಕ್ neevu heluvudu 100% sariyaagi ide. Adre idakke uttara koduva hambala URM avrige ideya ?

    ಉತ್ತರ

Leave a reply to Purushothama Raju ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments