” ಬನ್ನಿ , ಪ್ರೀತಿಯಿಂದ ಬದಲಾಯಿಸೋಣ ನಮ್ಮ ಈ ಭಾರತವನ್ನು “
-ದರ್ಶನ್ ಕುಮಾರ್
ಭಾರತ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಅನ್ನಿಸುವುದು, ಈ ದೇಶದ ತುಂಬಾ ಬರಿ ಸಮಸ್ಯೆಗಳ ಸಾಗರವೆ ಇದೆ ಅನ್ನುವಂತಹ ಭಾವನೆ . ನನ್ನ ಪ್ರಶ್ನೆ, ಈ ಸಮಸ್ಯೆಗಳ ಕಾರಣಕರ್ತರು ಯಾರು ??? ಇದಕ್ಕೆ ಉತ್ತರ ಹುಡಕಲು ಹೊರಟರೆ “ಮೊಟ್ಟೆ ಮೊದಲ-ಕೋಳಿ ಮೊದಲ” ಅನ್ನೋ ಪ್ರಶ್ನೆಗಳೇ ನಮಗೆ ಸಿಗೋ ಉತ್ತರಗಳು . ಕೆಲವರು ಸರ್ಕಾರಗಳೇ ಇದಕ್ಕೆ ಕಾರಣವೆಂದರೆ, ಈ ಸರ್ಕಾರಗಳು ರಚಿಸಲ್ಪಟ್ಟಿದ್ದು ನಮ್ಮಂತಹ ಜನ ಸಾಮಾನ್ಯರಿಂದಲ್ಲವೇ.. ಅನ್ನೋ ಪ್ರಶ್ನೆಗಳ ಸರಣಿ ಮುಂದುವರೆಯುತ್ತದೆ ವಿನಹ ಉತ್ತರ ಸಿಗುವುದಿಲ್ಲ .
ಹೋಗ್ಲಿ ಬಿಡಿ ನಾವು ಏನು ಮಹಾ ಮಾಡೋಕೆ ಆಗುತ್ತೆ, ಈ ವ್ಯವಸ್ತೆ ಇರೋದೆ ಹೀಗೆಂದು, ಆ ವ್ಯವಸ್ಥೆಯಲ್ಲಿ ನಮ್ಮ ಪಾತ್ರವೇನು ಇಲ್ಲ ಎಂಬಂತೆ ನುಣಿಚಿಕೊಳ್ಳುತ್ತಾ ಸಾಗಿದ್ದೇವೆ ಅಲ್ಲವೇ? ಈ ಭ್ರಷ್ಟ ವ್ಯವಸ್ತೆಯಲ್ಲಿ ಯಾವುದಾದರು ಒಂದು ರೀತಿಯಲ್ಲಿ ನಾವು ಕೂಡ ಭ್ರಷ್ಟಾಚಾರಕ್ಕೆ ಸಹಾಯ ಮಾಡಿದ್ದೇವೆ ಅಥವಾ ಸಹಾಯ ಪಡೆದುಕೊಂಡಿದ್ದೇವೆ ಅಲ್ಲವೇ ?. ಇಂದಿನ ನಮ್ಮ ಭಾರತದಲ್ಲಿ ಮತ್ತೊಮ್ಮೆ ಏನಾದರೂ ಬುದ್ಧ ಹುಟ್ಟಿದ್ದರೆ “ಸಾವಿಲ್ಲದ ಮನೆಯಲ್ಲಿ ಸಾಸಿವೆ” ತೆಗೆದುಕೊಂಡು ಬಾ ಎಂದು ಹೇಳುವದರ ಬದಲು “ಭ್ರಷ್ಟಾಚಾರ ಇಲ್ಲದ ಜಾಗದಿಂದ ಅಥವಾ ಭ್ರಷ್ಟಾಚಾರವನ್ನೇ ಮಾಡದ ವ್ಯಕ್ತಿಯನ್ನು” ಹುಡುಕಿಕೊಂಡು ಬಾ ಎಂದು ಹೇಳಿರುತ್ತಿದ್ದನೇನೋ ..! ಮತ್ತಷ್ಟು ಓದು