ವಿಷಯದ ವಿವರಗಳಿಗೆ ದಾಟಿರಿ

Archive for

14
ಸೆಪ್ಟೆಂ

ಧರ್ಮ ಮತ್ತು ಅಂಧತ್ವ

-ಡಾ ಅಶೋಕ್ ಕೆ ಆರ್.

World_Religionಆಗ ನಾನು ಕಲ್ಬುರ್ಗಿಯಲ್ಲಿ ಓದುತ್ತಿದ್ದೆ. ಗೆಳೆಯನೊಬ್ಬನನ್ನು ಕಾಣುವ ಸಲುವಾಗಿ ಕಲ್ಬುರ್ಗಿಯಿಂದ ಲಿಂಗಸೂರು ಕಡೆಗೆ ಹೋಗುವ ಬಸ್ಸನ್ನೇರಿದೆ. ದಾರಿ ಮಧ್ಯದಲ್ಲಿ ಕುಟುಂಬವೊಂದು ಬಸ್ಸಿನೊಳಗೆ ಬಂತು. ಮಗ, ಸೊಸೆ ಮತ್ತು ಅತ್ತೆ ಎಂಬುದು ಅವರ ಮಾತಿನಿಂದ ಅರಿವಾಗುತ್ತಿತ್ತು. ಅದು ಮುಸ್ಲಿಂ ಕುಟುಂಬವೆಂದು ತಿಳಿದಿದ್ದು ಬುರ್ಖಾ ಧರಿಸಿದ್ದ ಸೊಸೆಯ ಉಡುಪಿನಿಂದ. ಉತ್ತರ ಕರ್ನಾಟಕದ ಕಡೆ (ನಂತರದ ದಿನಗಳಲ್ಲಿ ಕರಾವಳಿ ಭಾಗದಲ್ಲೂ ಕಂಡಂತೆ) ಮುಸ್ಲಿಮರನ್ನು ಅವರ ಮಾತಿನ ದಾಟಿಯಿಂದ ಗುರುತು ಹಿಡಿಯಲಾಗುವುದಿಲ್ಲ ನಮ್ಮ ಹಳೆ ಮೈಸೂರು ಭಾಗದಲ್ಲಿ ಗುರುತಿಸುವಂತೆ, ಮತ್ತು ಬಹುತೇಕ ಎಲ್ಲ ಕನ್ನಡ ಚಿತ್ರಗಳಲ್ಲೂ ತೋರಿಸಿರುವಂತೆ. ಅಂದು ಬಸ್ಸೇರಿದ ಕುಟುಂಬದಲ್ಲಿ ಅತ್ತೆ ಉತ್ತರ ಕರ್ನಾಟಕದ ಕಡೆಯ ಸೀರೆಯನ್ನು ಉಟ್ಟಿದ್ದರು, ಸೊಸೆ ಬುರ್ಖಾಧಾರಿಯಾಗಿದ್ದರು.

ಕಳೆದೊಂದು ವಾರದಿಂದ ಅಂತರ್ಜಾಲ ತಾಣಗಳಲ್ಲಿ ಬುರ್ಖಾದ ಬಗೆಗಿನ ಚರ್ಚೆ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಮೇಲಿನ ಘಟನೆ ನೆನಪಾಯಿತು. ‘ನಾನು ವಿವಾದದ ವಿಷಯಗಳನ್ನು ಎತ್ತಿಕೊಂಡು ಮಾತನಾಡುತ್ತಿದ್ದೇನೋ ಅಥವಾ ನಾನು ಮಾತನಾಡಿದ್ದೆಲ್ಲವೂ ವಿವಾದವಾಗುತ್ತೋ ಗೊತ್ತಿಲ್ಲ’ ಎಂದೇ ಮಾತುಗಳನ್ನಾರಂಭಿಸಿದ್ದ ದಿನೇಶ್ ಅಮೀನ್ ಮಟ್ಟುರವರ ಮಾತುಗಳು ಮತ್ತೆ ಚರ್ಚೆಗಳೊಂದಷ್ಟನ್ನು ಹುಟ್ಟುಹಾಕಿವೆ. ಪತ್ರಕತ್ರ ಬಿ.ಎಂ.ಬಷೀರ್‍ರವರ “ಬಾಡೂಟದ ಜೊತೆ ಗಾಂಧಿ ಜಯಂತಿ” ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ. ಅವರು ಮೋದಿಯ ಬಗ್ಗೆ, ಮಾಧ್ಯಮದ ಬಗ್ಗೆ, ಮಂಗಳೂರಿನ ಕೋಮು ಸಾಮರಸ್ಯದ ಬಗ್ಗೆ, ಆ ಕೋಮು ಸಾಮರಸ್ಯದಿಂದಲೇ ಹುಟ್ಟಿದ ಕೋಮುವಾದತನದ ಬಗ್ಗೆ, ಕೋಮುವಾದಿಗಳ ಅಟ್ಟಹಾಸದ ನಡುವೆಯೇ ನಿಜ ಜಾತ್ಯತೀತ ಮನೋಭಾವದ ಧರ್ಮಸಹಿಷ್ಣುಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಕೊನೆಗೆ ಅವರ ಭಾಷಣ ಚರ್ಚೆಗೊಳಗಾಗುತ್ತಿರುವುದು ಅವರು ಪ್ರಸ್ತಾಪಿಸಿದ ಬುರ್ಖಾ ಪದ್ಧತಿಯ ಬಗೆಗೆ ಮಾತ್ರ! ಅವರು ಬುರ್ಖಾ ವಿಷಯಕ್ಕೆ ಬರುವುದಕ್ಕೆ ಮೊದಲು ಮುಸ್ಲಿಂ ಸಮಾಜದ ಒಳಬೇಗುದಿಗಳನ್ನು ಸಮಾಜದ ಮುಂದೆ ತೆರದಿಡುವ ಕೆಲಸವನ್ನು ಬೋಳುವಾರ ಮೊಹಮದ್, ಸಾರಾ ಅಬೂಬಕ್ಕರ್, ಫಕೀರ್ ಮೊಹಮದ್ ಕಟ್ಪಾಡಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರು ಹಾಕಿದ ದಾರಿಯಲ್ಲಿ ಜ್ಯೋತಿಯನ್ನಿಡಿದು ನಡೆಯುವವರ ಕೊರತೆ ಎದ್ದು ಕಾಣುತ್ತಿದೆ ಎಂಬ ಮಾತುಗಳನ್ನು ಹೇಳಿದ್ದಾರೆ. ಬಿ.ಎಂ.ಬಷೀರ್ ಸ್ವಲ್ಪ ಸಾಫ್ಟ್ ಕಾರ್ನರಿನಲ್ಲಿ ಬರೆಯೋದು ಜಾಸ್ತಿ. ಮುಸ್ಲಿಂ ಸಮುದಾಯದ ತಲ್ಲಣಗಳು ಈ ಪುಸ್ತಕದಲ್ಲಿ ಕಾಣಸಿಗುತ್ತಿಲ್ಲ ಎಂದು ಸಲಹೆಯನ್ನು ಕೊಟ್ಟಿದ್ದಾರೆ. ಮುಸ್ಲಿಮನಾದವನು ಆ ಸಮುದಾಯದ ತಲ್ಲಣಗಳನ್ನು ಸಮರ್ಥವಾಗಿ ಬಿಂಬಿಸಲು ಸಾಧ್ಯ ಎಂಬುದು ಎಷ್ಟು ಸತ್ಯವೋ ಮುಸ್ಲಿಂ ಲೇಖಕನಾದ ಮಾತ್ರಕ್ಕೆ ಮುಸ್ಲಿಂ ಸಮುದಾಯದ ತಲ್ಲಣಗಳನ್ನಷ್ಟೇ ಬರೆಯಬೇಕು ಎಂಬುದೂ ಒಪ್ಪತಕ್ಕ ವಿಷಯವೇನಲ್ಲ. ಮತ್ತಷ್ಟು ಓದು »