ವಿಷಯದ ವಿವರಗಳಿಗೆ ದಾಟಿರಿ

Archive for

30
ಜೂನ್

ಪ್ರತಿಭಾ ಪಲಾಯನ

-ಮಯೂರ ಲಕ್ಷ್ಮೀ

artಅದೊಂದು ಕಾಲದಲ್ಲಿ ನಳಂದಾ, ತಕ್ಷಶಿಲಾ ಮುಂತಾದ ವಿಶ್ವವಿಖ್ಯಾತ ವಿದ್ಯಾಲಯಗಳಿಂದ ಪ್ರಸಿದ್ಧಿಹೊಂದಿ ಎಲ್ಲೆಡೆಯಿಂದ ಎಲ್ಲರನ್ನೂ ಆಕರ್ಷಿಸಿ ಜ್ಞಾನದೇಗುಲವೆನಿಸಿದ್ದ ಭಾರತ ದೇಶವು ತನ್ನ ಹಿಂದಿನ ವೈಭವಗಳನ್ನು ಮರೆತುಹೋಗುವ ಸ್ಥಿತಿ ತಲುಪಿದ್ದಾದರೂ ಏಕೆ? ಯಾವುದೇ ಒಂದು ದೇಶವು ಆರ್ಥಿಕವಾಗಿ ಸಧೃಢವೆನಿಸಿಕೊಳ್ಳುವುದು ದೇಶದ ಬೆನ್ನೆಲುಬಾದ ಯುವಶಕ್ತಿಯಿಂದಾ ಮಾತ್ರ! ಜಗತ್ತಿಗೆ ಅರಿವು ನೀಡುವ ಜ್ಞಾನದೇಗುಲವೆನಿಸಿದ್ದ ಭಾರತ ಮೆಕಾಲೆಯ ಆಗಮನದಿಂದ ತನ್ನ ಮೌಲ್ಯಾಧರಿತ ಶಿಕ್ಷಣ ವ್ಯವಸ್ಥೆಯನ್ನೇ ಕಳೆದುಕೊಂಡಿತು. ಭಾರತವು ವಿಶ್ವಮಾನ್ಯವೆನಿಸಿದ್ದು ತನ್ನ ಜ್ಞಾನ-ವಿಜ್ಞಾನ, ತಂತ್ರಜ್ಞಾನಗಳಿಂದ ಪ್ರಪಂಚಕ್ಕೆ ನೀಡಿದ ಕೊಡುಗೆಯಿಂದ. ಮತ್ತಷ್ಟು ಓದು »

28
ಜೂನ್

ಗಾಂಧಿ ತಾತಾ ಯಾಕಾಗಿ ಹೀಗೆಲ್ಲಾ ಮಾಡಿದಿರಿ?

– ಶ್ರೀಕಾಂತ್ ಆಚಾರ್ಯ

mahatma_gandhiನೇರಾ ನೇರಾ ವಿಷಯಕ್ಕೆ ಬರುತ್ತೀನಿ. ಕೆಲವಷ್ಟು ವಿಷಯಗಳಲ್ಲಿ ಗಾಂಧೀ ತಾತಾ ತುಂಬಾ ಇಷ್ಟವಾಗಿ ಬಿಡುತ್ತಾರೆ. ಆದರೆ ಉಳಿದ ಕೆಲವು ವಿಷಯಗಳಲ್ಲಿ ನನಗೆ ಗಾಂಧೀಜಿಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅಷ್ಟಕ್ಕೂ ನನ್ನ ಅಭಿಪ್ರಾಯ ಇಲ್ಲಾರಿಗೂ ಅನಿವಾರ್ಯವಲ್ಲ ಬಿಡಿ. ಹೇಳಿದ್ದೆಲ್ಲವನ್ನ ಸುಖಾಸುಮ್ಮನೆ ನಂಬಿ ಬಿಡಿ ಅಂತ ನಿಮ್ಮಲ್ಲಿ ಅಂಗಾಲಾಚುವುದೂ ಇಲ್ಲ. ಸಮಾನ ಮನಸ್ಕರಿದ್ದರೆ ಓದಿಕೊಳ್ಳಬಹುದು. ಹೌದು ಅಂತನ್ನಿಸಿದರೆ ಮಾತ್ರ ತಾಕಲಾಟಕ್ಕೆ ಎಡತಾಕುತ್ತೀರಿ. ಯೋಚನೆಗೆ ಬೀಳುತ್ತೀರಿ. ಅಖಂಡ ಭಾರತದ ಕೋಟ್ಯಾಂತರ ಜನರ ಹೃದಯ ಹೊಕ್ಕಿ ಕುಳಿತ ಗಾಂಧೀಜಿಯನ್ನ ಕೆಲವೊಂದು ಕಾರಣಕ್ಕೆ ದ್ವೇಷಿಸುತ್ತಿದ್ದೀನಿ ಅಂದರೆ ಬಹುಷಃ ನೀವೂ ತಕರಾರು ಮಾಡಲಿಕ್ಕಿಲ್ಲ(ವಿಷಯ ಬಲ್ಲವರಿಗೆ ಮಾತ್ರ) ಅಲ್ಲವಾ? ಮತ್ತಷ್ಟು ಓದು »

27
ಜೂನ್

ದೇಹದಲ್ಲಿ ಏಳು ಗುಂಡುಗಳನ್ನು ಹೊತ್ತಿದ್ದರೂ ‘ಕತ್ತೆ ಒದೀತು’ ಎಂದು ನಕ್ಕ ಮಿಲಿಟರಿ ಕ್ರಾಸ್ ವೀರ ಸ್ಯಾಮ್ ಮಾಣಿಕ್ ಷಾ

– ಸಂತೋಷ್ ತಮ್ಮಯ್ಯ

Field_Marshal_SAM_Manekshaw

೧೯೭೧ರ ಎಪ್ರಿಲ್ ನ ಒಂದು ತಿಂಗಳು. ಪ್ರಧಾನಮಂತ್ರಿಗಳು ಅಂದು ಕಂಡಾಪಟ್ಟೆ ತಲೆಬಿಸಿಯಲ್ಲಿದ್ದರು. ಸಿಟ್ಟಾಗಿದ್ದರು. ಏಕೆಂದರೆ ಪ.ಬಂಗಾಳ, ತ್ರಿಪುರಾ ಮತ್ತು ಅಸ್ಸಾಂಗಳಲ್ಲಿ ಪೂರ್ವ ಪಾಕಿಸ್ಥಾನದಿಂದ ನಿರಾಶ್ರಿತರ ಪ್ರವಾಹವೇ ಹರಿಯಲಾರಂಭಿಸಿತ್ತು. ಪೂರ್ವ ಪಾಕಿಸ್ಥಾನವೆಂಬ ಕುರದ ವ್ರಣ ಭಾರತಕ್ಕೂ ವ್ಯಾಪಿಸುತ್ತಾ ಬರುತ್ತಿತ್ತು. ಪ್ರಧಾನಮಂತ್ರಿಗಳು ಮಾಡಬಹುದಾದವುಗಳನ್ನೆಲ್ಲಾ ಮಾಡಿಯಾಗಿತ್ತು. ನಿರಾಶ್ರಿತರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಕೂಡಾ ಎತ್ತಿಕೊಂಡುಹೋದರು. ಎಲ್ಲರೂ ಇದು “ಭಾರತ ಮತ್ತು ಪಾಕಿಸ್ಥಾನಗಳ ಆಂತರಿಕ ಸಂಗತಿ” ಎಂದು ತಮಾಷೆ ನೋಡಲು ಕೂತಿತು. ಸಮಸ್ಯೆಯನ್ನುನಿಭಾಯಿಸುವ ಕೊನೆಯ ಪ್ರಯತ್ನ ಎಂಬಂತೆ ಪ್ರಧಾನಮಂತ್ರಿಗಳು ಕ್ಯಾಬಿನೆಟ್ ಮತ್ತು ಹಿರಿಯ ಮಿಲಿಟರಿ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಭೆಯನ್ನು ಅಂದು ಕರೆದಿದ್ದರು. ಮತ್ತಷ್ಟು ಓದು »

25
ಜೂನ್

ಸಂಪುಟ ಪುನಾರಚನೆಯ ಸುದ್ದಿ ಕೇಳಿ ದಿಕ್ಕಾಪಾಲಾಗಿ ಓಡಿದ ಜನ

ಪ್ರವೀಣ್ ಕುಮಾರ್, ಮಾವಿನಕಾಡು 

sulsuddi (4)ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಪಕ್ಷದ ಹಲವಾರು ಹಿರಿಯ ಮುಖಂಡರು, ಹಲವು ಜಾತಿಯ ನಾಯಕರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದಾಗಿ ಇನ್ನೆರಡು ದಿನಗಳಲ್ಲಿ ಕೆಲವು ಸಚಿವರನ್ನು ಕೈ ಬಿಟ್ಟು ಅವರ ಬದಲಿಗೆ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತೊಮ್ಮೆ ಮಂತ್ರಿಮಂಡಲವನ್ನು ಪುನರ್ ರಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇಂದು ತಿಳಿಸಿದರು. ಮತ್ತಷ್ಟು ಓದು »

23
ಜೂನ್

ಕನ್ನಡದ ಕಲಿಗಳಾಗಿ ಆಂಗ್ಲವನ್ನು ಮಣಿಸಿ- ಖಾಸಗಿ ಶಾಲೆಗಳ ಕಡೆಗಣಿಸಿ.

– ಸುದರ್ಶನ ಗುರುರಾಜರಾವ್

ಕನ್ನಡ ಮಾಧ್ಯಮದಲ್ಲಿದ್ದು ಇಂಗ್ಲಿಷ್ ಕಲಿಯಲು/ಕಲಿಸಲು ಸುಲಭ ವಿಧಾನ

unnamed

೧.ಪರಿಚಯ
೨.ಕಲಿಕೆಯ ಕ್ರಮ (ಸ್ಥೂಲ ರೂಪು ರೇಷೆ )
೩.ಇಂಗ್ಲಿಷ್ ಭಾಷೆಯ ವ್ಯವಸ್ಥಿತ ಅಭ್ಯಾಸ ಮತ್ತು ಇಂಗ್ಲಿಷ್ ಕಲಿಕೆಯ ಪರಿಕರಗಳು- ಭಾಷಾಂತರ ಪಾಠಮಾಲೆ
೪.ಉಪಸಂಹಾರ ಮತ್ತು ಪರಿಸಮಾಪ್ತಿ.

ಪರಿಚಯ :
ಕನ್ನಡದಲ್ಲಿ ಕಲಿತರೆ ಭವಿಷ್ಯವಿಲ್ಲ, ಇಂಗ್ಲೀಷ್ ಮಾಧ್ಯಮ ಎಂದರೆ ಮಾತ್ರವೇ ಯಶಸ್ಸಿನ ಮಂತ್ರ ಎಂಬೊಂದು ನಂಬಿಕೆಯನ್ನು ಜನಮಾನಸದಲ್ಲಿ ಬಲವಾಗಿ ಬಿತ್ತಿ ಕಾಲಕ್ರಮದಲ್ಲಿ ನೀರೆರೆರ್ದು ಪೋಷಿಸಿಕೊಂಡು ಬಂದ ಖಾಸಗಿ ವ್ಯವಸ್ಥಾಪಕರು, ಅವರೊಡನೆ ಕೈಜೋಡಿಸಿ ತಮ್ಮ ನೆಲ-ಜಲ- ಭಾಷೆ ಸಂಸ್ಕೃತಿಗೆ ಚೂರಿ ಹಾಕಿದ ಭ್ರಷ್ಟ ರಾಜಕಾರಿಣಿಗಳು, ಧೃತರಾಷ್ಟ್ರನಂತೆ ತಿಳಿದು ಸುಮ್ಮನಿದ್ದ ಸರಕಾರವು ಜನರನ್ನು ಸುಲಿದು ಹಣದ ಹೊಳೆಯನ್ನು ತಮ್ಮ ಕಡೆಗೆ ಹರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿವೆ. ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಬಹಳಷ್ಟು ಬಾರಿ ಸರಳವೇ ಇರುತ್ತದೆ. ಅದನ್ನು ಗುರುತಿಸಿ ಅಳವಡಿಸಿಕೊಳ್ಳುವ ಭಾರ ಪ್ರಜ್ಞಾವಂತ ಸಮಾಜದ್ದಾಗಿರಬೇಕು. ಅಂತಹ ಸರಳೋಪಾಯಗಳನ್ನು ಹುಡುಕಿಸಿ ಪಸರಿಸುವ ಕೆಲಸ ಶಿಕ್ಷಣ ಮತ್ತು ಸಾಹಿತ್ಯ-ಸಂಸ್ಕೃತಿ ಇಲಾಖೆಗಳದ್ದಾಗಿರಬೇಕು. ಆದರೆ ಎಲ್ಲರೂ ಕಳ್ಳರೇ! ಗೊಂದಲವನ್ನು ಹಬ್ಬಿಸಿ ಅದರ ಲಾಭ ಪಡೆಯಲು ನಿಂತ ಬೇಲಿಯೇ ಎದ್ದು ಹೊಲ ಮೇಯ್ದ ಪರಿಣಾಮವಾಗಿ ಇಂದು ಕನ್ನಡ ಶಾಲೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಖಾಸಗಿಗೆ ಪೈಪೋಟಿ ಕೊಡುವಲ್ಲಿ ಸೋಲುತ್ತಿವೆ. ಅವುಗಳಲ್ಲಿ ಕೆಲವನ್ನು ನೋಡೋಣ ಮತ್ತಷ್ಟು ಓದು »

22
ಜೂನ್

ಕತೆಯೊ೦ದು ಸಾರ್ಥಕವೆನಿಸುವುದೇ ಹೀಗಲ್ಲವೇ…??

Mel Gibson

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಸುಮಾರು ಐವತ್ತು ವರ್ಷಗಳ ಹಿ೦ದಿನ ಮಾತು. ಮಧ್ಯವಯಸ್ಕ ವಿಧುರನೊಬ್ಬ ತನ್ನ ಮಕ್ಕಳೊ೦ದಿಗೆ ನ್ಯೂಯಾರ್ಕ್ ಪಟ್ಟಣದಿ೦ದ ಆಸ್ಟ್ರೇಲಿಯಾ ದೇಶಕ್ಕೆ ಬ೦ದು ನೆಲೆಸಿದ. ಆಸ್ಟ್ರೇಲಿಯಾ ದೇಶದ ರೇವು ಪಟ್ಟಣವೊ೦ದರಲ್ಲಿ ದುಡಿಯುತ್ತಿದ್ದ ಈ ಮಧ್ಯವಯಸ್ಕನಿಗೆ ಇಬ್ಬರು ಮಕ್ಕಳು. ಮಕ್ಕಳ ಪೈಕಿ ಕಿರಿಯ ಹುಡುಗನಿಗೆ ಸುಮಾರು ಹನ್ನೆರಡು ವರ್ಷ ವಯಸ್ಸಾಗಿತ್ತು. ಅತ್ಯ೦ತ ಸ್ಫುರದ್ರುಪಿಯಾಗಿದ್ದ ತಿಳಿಹಸಿರು ಬಣ್ಣದ ಕ೦ಗಳಿನ ಪುಟ್ಟಪೋರನ ಕಿರಿದಾದ ನೇತ್ರಗಳಲ್ಲಿ ಬೆಟ್ಟದಷ್ಟು ಆಸೆ ತು೦ಬಿತ್ತು. ಕೂತರೂ ನಿ೦ತರೂ ಆತನದ್ದು ಒ೦ದೇ ಕನಸು. ತಾನೊಬ್ಬ ದೊಡ್ಡ ಸಿನಿಮಾ ನಟನಾಗಬೇಕು. ಮೊದಲಿಗೆ ಸರ್ಕಸ್ ಕ೦ಪನಿಯೊ೦ದರಲ್ಲಿ ಸೇರಿಕೊ೦ಡು ಬಗೆಬಗೆಯ ಕಸರತ್ತುಗಳನ್ನು ಕಲಿತುಕೊ೦ಡು ನೋಡುಗರನ್ನು ಮೆಚ್ಚಿಸಬೇಕು, ಆನ೦ತರ ಜಗಮೆಚ್ಚುವ ನಾಯಕನಟನಾಗಬೇಕು. ಆದರೇನು ಮಾಡುವುದು? ಅವನ ಕನಸುಗಳು ಸು೦ದರ, ವಾಸ್ತವ ಕಠೋರ. ಮನೆಯಲ್ಲಿ ಕಿತ್ತುತಿನ್ನುವ ಬಡತನ. ಹೊಟ್ಟೆಪಾಡಿಗಾಗಿ ಅಪ್ಪನೊ೦ದಿಗೆ ಅವನೂ ಸಹ ಬ೦ದರಿನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ದುಡಿತದಿ೦ದ ತ೦ದ ಹಣವನ್ನು ಕೂಡಿಡುತ್ತ, ಎ೦ದಿಗಾದರೊ೦ದು ದಿನ ತಾನು ಸಿನಿಮಾ ನಟನಾಗಲೇಬೇಕೆನ್ನುವ ಮಹತ್ವಾಕಾ೦ಕ್ಷೆಯೊ೦ದಿಗೆ ಆತ ತನ್ನ ದಿನಗಳನ್ನು ತಳ್ಳುತ್ತಿದ್ದ. ಮತ್ತಷ್ಟು ಓದು »

21
ಜೂನ್

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ

21-1434882123-raghavendra-swami2

-ರಾಮಚಂದ್ರ ಹೆಗಡೆ

ಇಂದು ಅಂತಾರಾಷ್ಟ್ರೀಯ ಯೋಗದಿನ. ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರುವ ಈ ಹೊತ್ತು ನಾವು ನೆನೆಯಲೇಬೇಕಾದ ಒಬ್ಬ ಸಾಧಕರೆಂದರೆ ಯೋಗಾಚಾರ್ಯ, ಅಭಿನವ ಧನ್ವಂತರಿ ಅಂತಲೇ ಪ್ರಸಿದ್ಧರಾದ , ಸುಮಾರು ೫೦ ವರ್ಷಗಳ ಹಿಂದೆಯೇ ಯೋಗದಲ್ಲಿ ಅಪಾರ ಸಾಧನೆ ಮಾಡಿ ಸಾವಿರಾರು ಶಿಷ್ಯರನ್ನು ತಯಾರು ಮಾಡಿ ರಾಜ್ಯದ ಮೂಲೆಮೂಲೆಗಳಿಗೆ ಯೋಗಸಂದೇಶ ತಲುಪಿಸಿದ ಮಹಾನುಭಾವ, ಯೋಗವೆಂದರೆ ಅವರು ಎಂಬಷ್ಟರ ಮಟ್ಟಿಗೆ ಮನೆಮಾತಾದ ಯೋಗಸಾಧಕ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಯವರು. ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರು ತಾವೇ ಯೋಗದಲ್ಲಿ ಬಹುದೊಡ್ಡ ಸಾಧಕರಾಗಿದ್ದರು. ತಮ್ಮ ಗುರು ‘ಶಿವಾನಂದ’ರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ‘ಪೂಜೆ’ಯಾಗಿ ಸ್ವೀಕರಿಸಿ, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನು ಕೈಗೆತ್ತಿಕೊಂಡು ಗ್ರಾಮೀಣರಿಗೆ ಅರಿವು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. 1943ರಲ್ಲಿ ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಜನರ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ 50 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು. ತಾವು ನೀಡುತ್ತಿದ್ದ ಆಯುರ್ವೇದ ಔಷಧಿ ಯಿಂದ ಲಕ್ಷಾಂತರ ರೋಗಿಗಳ ಬದುಕಲ್ಲಿ ಬೆಳಕು ತಂದವರು. ಚಿತ್ರದುರ್ಗ ಜಿಲ್ಲೆಯ ಪುಟ್ಟ ಹಳ್ಳಿಯೊಂದನ್ನು ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಿದ ಸಾಧನೆ ಪೂಜ್ಯರದು. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಲ್ಲಾಡಿಹಳ್ಳಿ ಆಶ್ರಮ ಮಾಡಿದ ಕ್ರಾಂತಿ ದೊಡ್ಡದು. ಮತ್ತಷ್ಟು ಓದು »

19
ಜೂನ್

ಅಪ್ಪನ ಪತ್ರ

– ರೋಹಿತ್ ಚಕ್ರತೀರ್ಥ

Untitled58

ಮಗನನ್ನು ಬದುಕಿನ ಬೆಟ್ಟ ಹತ್ತಿ ತೋರಿಸುವ ಅಪ್ಪ
ಪ್ರೀತಿಯ ಅಶ್ವಿನ್,
ಬಹಳ ದಿನಗಳಿಂದ ನಿನಗೆ ಪತ್ರ ಬರೆದಿರಲಿಲ್ಲ. ಬರೆದು ಹೇಳುವಂಥಾದ್ದೇನೋ ಬಹಳ ಇತ್ತೆನ್ನೋಣ. ಆದರೆ, ನನ್ನ ಪತ್ರಗಳಿಂದ ನಿನ್ನ ಓದಿಗೆಲ್ಲಿ ಕಿರಿಕಿರಿಯಾದೀತೋ ಅಂತ ಸ್ವಲ್ಪ ಸಮಯ ಪೆನ್ನಿಗೂ ಅಂಚೆಯಣ್ಣನಿಗೂ ವಿಶ್ರಾಂತಿ ಕೊಟ್ಟಿದ್ದೆ. ಅಂದ ಹಾಗೆ, ಪರೀಕ್ಷೆ ಹೇಗೆ ಮಾಡಿದ್ದೀಯ? ನಿನ್ನಮ್ಮ ಇಲ್ಲಿ ಮೂರು ಹೊತ್ತು ಕೈ ಮುಗಿಯುವ ರಾಘವೇಂದ್ರ ಸ್ವಾಮಿಗಳಿಗೆ ನೀನು ನಿರಾಸೆ ಮಾಡುವುದಿಲ್ಲವೆಂದು ನಂಬುತ್ತೇನೆ! ಮತ್ತಷ್ಟು ಓದು »

18
ಜೂನ್

ಬರಹಗಾರನ ತಲ್ಲಣಗಳು

gururaj kodkani

ಹಚ್ಚಿದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ; ಆರಿಸಿದರೆ ಬೆಂಕಿ ಆರಿಸು, ದೀಪ ಆರಿಸಬೇಡ – ದಿನಕರ ದೇಸಾಯಿ

ತೀರ ಬೇಸರ, ಅವಮಾನದ ಸಂದರ್ಭ, ಖಿನ್ನತೆ ಮನಸ್ಸನ್ನು ಆವರಿಸಿದಾಗ ಆ ಘಳಿಗೆ ನಾನು ಓದಿನ ಮೊರೆ ಹೋಗುತ್ತೇನೆ. ಓದುತ್ತ ಹೋದಂತೆ ಬರಹಗಾರನ ತಲ್ಲಣಗಳೆದುರು ನನ್ನ ವೈಯಕ್ತಿಕ ಸಂಕಟಗಳೆಲ್ಲ ತೀರ ಸಣ್ಣ ಸಂಗತಿಗಳೆನಿಸಿ ಆ ಕ್ಷಣ ಮನಸ್ಸನ್ನು ಆವರಿಸಿದ ಖಿನ್ನತೆಯ ತೆರೆ ಸರಿದು ಹೋಗುತ್ತದೆ. ಬರಹಗಾರರ ಸಮಾಜಮುಖಿ ತಲ್ಲಣಗಳ ಎದುರು ನನ್ನ ವೈಯಕ್ತಿಕ ತಲ್ಲಣಗಳು ಸೋತು ನೆಲಕಚ್ಚುತ್ತವೆ. ಈ ದೃಷ್ಟಿಯಿಂದ ನಾನು ಬರಹಗಾರರಿಗೆ ಮತ್ತು ಅವರೊಳಗಿನ ತಲ್ಲಣಗಳಿಗೆ ಹೆಚ್ಚು ಕೃತಜ್ಞನಾಗಿದ್ದೇನೆ. ನನ್ನನ್ನಾವರಿಸುವ ಬೇಸರದಿಂದ ಹೊರಬರಲು ಓದು ನನಗೆ ಪರ್ಯಾಯ ಮಾರ್ಗವಾಗಿ ತೋರುತ್ತದೆ. ಮನುಷ್ಯ ಸಂಬಂಧಗಳಿಂದ ಮನಸ್ಸು ಘಾಸಿಗೊಂಡಾಗ ನಾನು ಕಾಫ್ಕಾನ ಮೆಟಾಮಾರ್ಫಸಿಸ್ ಕಥೆಯನ್ನು ಮತ್ತೆ ಮತ್ತೆ ಓದಿಗೆ ಕೈಗೆತ್ತಿಕೊಳ್ಳುತ್ತೇನೆ. ಮನುಷ್ಯ ಸಂಬಂಧಗಳು ಸಂದರ್ಭದ ಕೈಗೆ ಸಿಲುಕಿ ಹೇಗೆ ಬದಲಾಗುತ್ತ ಹೋಗುತ್ತವೆ ಎನ್ನುವುದನ್ನು ಗ್ರೇಗರ್‍ನ ಪಾತ್ರದ ಮೂಲಕ ಕಾಫ್ಕಾ ತುಂಬ ಅನನ್ಯವಾಗಿ ಹೇಳುತ್ತಾನೆ. ಕಥೆ ಕಾಲ್ಪನಿಕವಾಗಿದ್ದರೂ ಅಲ್ಲಿ ಮನುಷ್ಯ ಸಂಬಂಧಗಳನ್ನು ಬದಲಾದ ಸನ್ನಿವೇಶದಲ್ಲಿ ನೋಡುವ ಕಾಫ್ಕಾನ ತಲ್ಲಣಗಳಿವೆ. ಅನಂತಮೂರ್ತಿ ಅವರ ಕಥೆಗಳು, ಭೈರಪ್ಪನವರ ಕಾದಂಬರಿಗಳು, ಮಹಾದೇವರ ಲೇಖನಗಳನ್ನು ಓದುವಾಗಲೆಲ್ಲ ಈ ಬರಹಗಾರರ ತಲ್ಲಣಗಳು ಒಬ್ಬ ಓದುಗನಾಗಿ ನನಗೆ ಅನೇಕ ಸಲ ಎದುರಾದದ್ದುಂಟು. ಮತ್ತಷ್ಟು ಓದು »

17
ಜೂನ್

ಭಿಕ್ಷೋದ್ಯಮ ಕ್ಷೇತ್ರದಲ್ಲೂ ಮೀಸಲಾತಿಗಾಗಿ ಬಡಿದಾಡಿ: ಕಾಣೇಶ್ ಜಲ್ಲಿಕಟ್ಟು ಸಲಹೆ (ಸುಳ್ಸುದ್ದಿ)

praveenkumar mavina kadu

ಕಡಿಮೆ ಸಂಖ್ಯೆಯಲ್ಲಿರುವ ಸರಕಾರೀ ಹುದ್ದೆಗಳಿಗಾಗಿ ಹೊಡೆದಾಡುತ್ತಾ ಕುಳಿತರೆ ಉತ್ತಮ ಲಾಭವಿರುವ ಭಿಕ್ಷೋದ್ಯಮ ಬಲಾಢ್ಯರ ಪಾಲಾಗುತ್ತದೆ. ಆದ್ದರಿಂದ ಭಿಕ್ಷೋದ್ಯಮ ಕ್ಷೇತ್ರದತ್ತಲೂ ಗಮನ ಹರಿಸಿ, ಅಲ್ಲಿಯೂ ಮೀಸಲಾತಿ ಜಾರಿಗೆ ಹೋರಾಟ ನಡೆಸುವ ಮೂಲಕ ಶೋಷಿತರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು ಎಂದು ಹಿರಿಯ ಬುದ್ದಿಜೀವಿ ಪತ್ರಕರ್ತ ರಾಜಕಾರಣಿ ಶ್ರೀ ಕಾಣೇಶ್ ಜಲ್ಲಿಕಟ್ಟು ಸಲಹೆ ನೀಡಿದರು. ಅವರು ಶಿವಮೊಗ್ಗದಲ್ಲಿ ನಿನ್ನೆ ‘ಪ್ರಗತಿಪರ ಬರ್ನ್ ಆಲ್ ವೇದಿಕೆ’ ಹಮ್ಮಿಕೊಂಡಿದ್ದ “ಮೋದಿ ವಿರೋಧಿಗಳ ತವಕ ತಲ್ಲಣಗಳು” ಎನ್ನುವ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮತ್ತಷ್ಟು ಓದು »