ಅಸಲಿಗೆ ರಾಜ್ಯವೊಂದು ಎಲ್ಲೂ ಏಳಲಿಲ, ಧ್ವಜವೊಂದು ಏರಿತ್ತು ಅಷ್ಟೇ
– ಸಂತೋಷ್ ತಮ್ಮಯ್ಯ
ಪರಾಕ್ರಮಿ ದೊರೆ ದಾಹಿರ ರಾಜನಾಗಿದ್ದಾಗ ಸಿಂಧ್ ನ ಜನರಲ್ಲಿ ವಿಚಿತ್ರವಾದ ಒಂದು ನಂಬಿಕೆಯಿತ್ತು. ರಾಜ್ಯದ ದೇವಲ ಬಂದರಿನ ಒತ್ತಿನಲ್ಲೊಂದು ಪುರಾತನ ದೇವಾಲಯ. ಅದು ರಾಜ್ಯದ ಸಮಸ್ತ ಪ್ರಜೆಗಳ ಶ್ರದ್ಧಾಕೇಂದ್ರ ಕೂಡ. ಅದರ ಮೇಲೆ ಜನರಿಗೆಷ್ಟು ನಂಬಿಕೆಯೆಂದರೆ ಆ ದೇವಾಲಯದ ಧ್ವಜವನ್ನು ಕೆಳಗಿಸಿದರೆ ರಾಜನ ಶಕ್ತಿ ಇದ್ದಕ್ಕಿದ್ದಂತೆ ಕ್ಷೀಣಿಸುತ್ತದೆ ಎಂಬ ನಂಬಿಕೆಯನ್ನು ಅವರು ಬೆಳೆಸಿಕೊಂಡಿದ್ದರು. ಈ ಭಾವನೆ ಜನರಲ್ಲಿ ಗಟ್ಟಿಯಿದ್ದಾಗಲೇ ಮುಸ್ಲಿಂ ದಾಳಿಕೋರ ಮಹಮದ್ ಬಿನ್ ಕಾಸಿಂ ಸಿಂಧ್ ನ ಮೇಲೆ ಆಕ್ರಮಣ ಮಾಡಿದ. ಮುಸಲ್ಮಾನನ ಎಂಜಲು ಕಾಸಿಗೆ ಕೈಯೊಡ್ಡಿದ ಕೆಲವು ಕಾಂಗ್ರೆಸಿನಂತವರು ಕಾಸಿಮನಿಗೆ ಈ ದೇವಾಲಯ, ಆ ಧ್ವಜ, ಅದರ ಶಕ್ತಿ ಮೊದಲಾದ ರಹಸ್ಯವನ್ನು ಶತ್ರು ಪಾಳಯಕ್ಕೆ ತಿಳಿಸಿಕೊಟ್ಟಿದ್ದರು. ದಾಹಿರ ಮತ್ತು ಕಾಸಿಮನ ನಡುವೆ ಭೀಕರ ಯುದ್ಧ ನಡೆಯಿತು. ಒಂದೆಡೆ ಯುದ್ಧ ನಡೆಯುತ್ತಿದ್ದಾಗಲೇ ಮುಸಲ್ಮಾನ ಸೈನ್ಯ ದೇವಾಲಯದ ಧ್ವಜವನ್ನು ಇಳಿಸಿ ಧ್ವಜಭಂಗ ಮಾಡಿದ್ದರು. ಯುದ್ಧರಂಗದಲ್ಲಿ ಪರಾಕ್ರಮಿ ಹಿಂದೂ ಸೈನ್ಯದ ಕೈ ಮೇಲಾಗುತ್ತಿದ್ದರೂ ಧ್ವಜಭಂಗದ ಸುದ್ಧಿಯಿಂದ ಸಮಸ್ತ ಸೈನ್ಯದ ಮಾನಸಿಕ ಶಕ್ತಿ ಇದ್ದಕ್ಕಿದ್ದಂತೆ ಕುಂದಿತು. ಮಾನಸಿಕವಾಗಿ ಹಿಂದೂ ಪಡೆ ಸೋತುಹೋಯಿತು. ಮಾನಸಿಕವಾಗಿ ಸೋತವರ ಕೈಯಲ್ಲಿ ಶಸ್ತ್ರವಿದ್ದರೇನು ಬಂತು? ಸೈನ್ಯ ಚದುರಿತು. ಮುಸಲ್ಮಾನ ಸೈನ್ಯ ಲೂಟಿ ಆರಂಭಿಸಿತು. ಸ್ವತಃ ರಾಜ ದಾಹಿರನೇ ಬಾಣ ತಗುಲಿ ಯುದ್ಧರಂಗದಲ್ಲೇ ಸತ್ತ. ಮತ್ತಷ್ಟು ಓದು
ಹಸುವಿನ ಕೆಚ್ಚಲು ಹಿಂಡಿ ತೋಳನಿಗೆ ಹಾಲುಣಿಸುವವರು
– ರೋಹಿತ್ ಚಕ್ರತೀರ್ಥ
ದಡ್ಡ ವೈರಿಯನ್ನು ಗೆಲ್ಲುವುದು ಸುಲಭ. ಆದರೆ ಅತಿ ಬುದ್ಧಿವಂತ ಶತ್ರುವಿನದ್ದೇ ಸಮಸ್ಯೆ. ಕ್ರಿಸ್ಟೋಫರ್ ನೊಲನ್‍ನ ಡಾರ್ಕ್ ನೈಟ್ ಸಿನೆಮಾ ಸರಣಿಯನ್ನು ನೋಡಿದವರಿಗೆ ಜೋಕರ್‍ನ ಪರಿಚಯ ಚೆನ್ನಾಗಿಯೇ ಇರುತ್ತದೆ. ಈತ ಹೊಡೆ ಬಡಿ ಕೊಲ್ಲು ಎನ್ನುವಂಥ ನೇರಾನೇರ ವಿಲನ್ ಅಲ್ಲ. ನಾಯಕನ ಜೊತೆಗೇ ಇದ್ದು, ಆತನ ತಂತ್ರಗಳನ್ನೆಲ್ಲ ಕರಗತ ಮಾಡಿಕೊಳ್ಳಬಲ್ಲ; ಸಂದರ್ಭ ಬಂದರೆ ನಾಯಕನಿಗಿಂತ ಚೆನ್ನಾಗಿ ಅವನ್ನು ಪ್ರಯೋಗಿಸಬಲ್ಲ ಚತುರನೀತ. ಇಂಥವರನ್ನು ಸಂಭಾಳಿಸುವುದು ಕಷ್ಟದ, ನಾಜೂಕಿನ, ಬುದ್ಧಿವಂತಿಕೆ ಮತ್ತು ಸಂಯಮ ಬೇಡುವ ಕೆಲಸ. ಸಿನೆಮಾದಲ್ಲಿ ಈತನ ಹಾವಭಾವ, ವೇಷಭೂಷಣಗಳನ್ನು ನೋಡಿಯಾದರೂ ವಿಲನ್ ಎನ್ನಬಹುದೇನೋ; ಆದರೆ ನಿಜಜೀವನದಲ್ಲಿ ಇವರು ನಮ್ಮ ನಿಮ್ಮಂತೆಯೇ ಇರುತ್ತಾರೆ. ನಮ್ಮ ಭಾಷೆಯನ್ನೇ, ನಮ್ಮ ಧಾಟಿಯಲ್ಲೇ ಮಾತಾಡುತ್ತಾರೆ. ನಮಗೇನೋ ಬಹಳ ದೊಡ್ಡ ಉಪಕಾರ ಮಾಡಲಿಕ್ಕೆಂಬಂತೆ ಹಿಂದೆ ಮುಂದೆ ಸುಳಿದಾಡಿಕೊಂಡಿರುತ್ತಾರೆ. “ನೀನೂ? ಬ್ರೂಟಸ್!” ಎಂದು ನಾವು ಕಂಗಾಲಾಗಿ ನೆಲಕ್ಕುರುಳುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಮತ್ತಷ್ಟು ಓದು
ನನ್ನ ಊರು ಬೆಂಗಳೂರು – ಇಂತಿ ನಿಮ್ಮ ಪ್ರೀತಿಯ ಬಾಂಗ್ಲಾ ನುಸುಳುಕೋರ
– ವೃಷಾಂಕ್ ಭಟ್
ಭಾರತದಲ್ಲಿ ದಿನಕಳೆದಂತೆ ಕೌಶಲ್ಯರಹಿತ ಕಾರ್ಮಿಕರ (Unskilled labourers) ಸಂಖ್ಯೆ ಕ್ಷೀಣಿಸುತ್ತಿದೆ. ಡ್ರೈವರ್ಗಳು, ಹೊಟೇಲ್ ಮಾಣಿಗಳು, ಮನೆಕೆಲಸದವರು, ಕೃಷಿಕಾರ್ಮಿಕರು, ಕ್ಲೀನರ್ಗಳು, ಹಮಾಲಿಗಳು, ಚಿಂದಿ ಸಂಗ್ರಹಿಸುವವರು ಕ್ಷೀಣಿಸಿರುವ ಪರಿಣಾಮ ದೇಶದ ಬಹುದೊಡ್ಡ ಉದ್ಯೋಗ ಕ್ಷೇತ್ರವೊಂದು ಖಾಲಿಯಾಗಿತ್ತು. ಬೆಂಗಾಲಿ ಮಾತನಾಡುವ ಮುಸಲ್ಮಾನರು ಇಂದು ಆ ಸ್ಥಾನವನ್ನು ತುಂಬಿದ್ದಾರೆ. ಬೆಂಗಾಲಿ ಮಾತನಾಡಿದ ತಕ್ಷಣ ಅವರೆಲ್ಲ ಪಶ್ಚಿಮ ಬಂಗಾಳದವರಲ್ಲ. ಅವರೆಲ್ಲರೂ ಬಾಂಗ್ಲಾ ನುಸುಳುಕೋರರು..! ಮತ್ತಷ್ಟು ಓದು
ಕಶ್ಮೀರಿಯತ್ – ಅಸ್ಮಿತೆಯೋ ವಿಸ್ಮೃತಿಯೋ

ಅರಿವೇ ಗುರು
– ಗೀತಾ ಹೆಗ್ಡೆ
ಗುರು ಬ್ರಹ್ಮ ಗುರು ವಿಷ್ಣುಃ ಗುರು ದೇವೊ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುಭ್ಯೋನಮಃ
ಕೆಲವೊಮ್ಮೆ ಅನಿರೀಕ್ಷಿತವಾಗಿ ಮನಸ್ಸನ್ನು ಕಲಕುವ ಬೇಸರದ ಸಂಗತಿಗಳು ಎದುರಾದಾಗ ಯಾವ ರೀತಿ ಸ್ವೀಕರಿಸಬೇಕು ಎನ್ನುವ ಗೊಂದಲ ಕಾಡುತ್ತದೆ. ತಪ್ಪು ಎಲ್ಲಿ ನಡೆದಿದೆ ಅನ್ನುವ ಹುಡುಕಾಟದಲ್ಲಿ ಅರಿವಾಗದೆ ಕಣ್ಣು ಮಂಜಾಗುವುದು ಸ್ವಾಭಾವಿಕ. ಇದುವರೆಗೆ ಸ್ನೇಹಿತರಂತೆ, ಹಿತೈಷಿಗಳಂತೆ ಜೊತೆಯಾಗಿದ್ದವರ ನಡೆ ಒಗಟಾಗಿ ಕಾಣುತ್ತದೆ. ನಾನು ನನ್ನವರು ಅನ್ನುವ ಮಮಕಾರ ಹೃದಯದಲ್ಲಿ ಮನೆ ಮಾಡಿ ಅನೇಕ ಸಂತಸದ ಕ್ಷಣಗಳು, ಮಾತುಗಳು ಮನಃಪಟದಲ್ಲಿ ಸರಿದಾಡಿ ದುಃಖಿಸಲು ಎಡೆಮಾಡಿಕೊಡುತ್ತದೆ. “ಹೊಡೆದವನಿಗೆ ನೋವು ಗೊತ್ತಾಗುವುದೇ ಇಲ್ಲ. ಆದರೆ ಹೊಡೆಸಿಕೊಂಡವನಿಗೆ ಮೌನದ ಪೆಟ್ಟು ಮನಸ್ಸನ್ನು ಘಾಸಿಗೊಳಿಸುತ್ತದೆ.” ಮತ್ತಷ್ಟು ಓದು
ಪುಸ್ತಕ ವಿಮರ್ಶೆ: ನಭಾರಣ್ಯದ ಮಾಯಾಮೃಗ
– ನಾಗೇಶ್ ಕುಮಾರ್ ಸಿ ಎಸ್
ಬಾಹ್ಯಾಕಾಶ ವಿಜ್ಞಾನದ ಅಧ್ಯಯನವನ್ನು “ರಾಕೆಟ್ ಸೈನ್ಸ್” ಎಂಬ ಲೇಬಲ್ ಹಚ್ಚಿ ಕ್ಲಿಷ್ಟಾತಿ-ಕ್ಲಿಷ್ಟ ವಿಷಯವೆನ್ನುವಂತೆ ವಿಡಂಬನೆಗಾಗಿಯೂ ನಾವು ಸಾಮಾನ್ಯವಾಗಿ ಬಳಸುವುದುಂಟು. ಇಂತಹ ಖಗೋಳ ಶಾಸ್ತ್ರದ ಬೆರಗುಗೊಳಿಸುವಂತಾ ಹಲವು ಬಾಹ್ಯಾಕಾಶ ಸಂಬಂಧಿ ವೈವಿಧ್ಯಮಯ ಲೇಖನಗಳನ್ನು ಹೊಂದಿ ಮೈವೆತ್ತಿಕೊಂಡಿರುವ ಪುಸ್ತಕ: ಚಿರಪರಿಚಿತ ಜನಪ್ರಿಯ ಲೇಖಕ ರೋಹಿತ್ ಚಕ್ರತೀರ್ಥರವರ ನಭಾರಣ್ಯದ ಮಾಯಾಮೃಗ.
ಯಾವನೇ ಮನುಷ್ಯನಾದರೂ ಬುದ್ದಿ ತಿಳಿದ ಮೇಲೆ ಸಹಜವಾಗಿಯೇ ತಾರೆಗಳ ವರ್ಣರಂಜಿತ ಪರದೆಯಾದ ಆಗಸವನ್ನು ದಿಟ್ಟಿಸಿ ” ಅಲ್ಲೇನಿರಬಹುದು?” ಎಂದು ಸೋಜಿಗದಿಂದ ವಿಚಾರ ಮಾಡಲಿಕ್ಕೆ ಸಾಧ್ಯ. ಇಂದಿನ ಖಗೋಳ ಶಾಸ್ತ್ರದ ಪ್ರಚಲಿತ ವಿಷಯಗಳನ್ನು ಆಯ್ದುಕೊಂಡು, ದೇಶ-ಕಾಲ(space time), ಕಪ್ಪು ಕುಳಿ( black hole). ಅದೃಶ್ಯ ಶಕ್ತಿ ಡಾರ್ಕ್ ಎನರ್ಜಿ, ಕ್ವಾನ್ಟಮ್ ಮೆಕಾನಿಕ್ಸ್ ಬಗೆಗಿನ ಹಲವಾರು ಕಠಿಣ ಪ್ರಶ್ನೆಗಳಿಗೆ ಲೇಖಕರು ಒಂದೊಂದಾಗಿ ತಮ್ಮದೇ ಆದ ಮಣ್ಣಿನ ಸೊಗಡಿನ ಸರಳ ದಿನಬಳಕೆಯ ಕನ್ನಡದ ಉಪಮೆ ಉದಾಹರಣೆಗಳ ಮೂಲಕ ಉತ್ತರಿಸುತ್ತಾ ಹೋಗಿದ್ದಾರೆ. ಹಲವು ವೈಜ್ಞಾನಿಕ ಸಿದ್ಧಾಂತಗಳನ್ನೂ, ಆವಿಷ್ಕಾರಗಳನ್ನೂ ಸವಿವರವಾಗಿ ಪಟ್ಟಿ ಮಾಡಿ, ಎಲ್ಲವನ್ನೂ ನಿರ್ದಿಷ್ಟವಾದ ವಾದಸರಣಿಯಲ್ಲಿ ಮಂಡಿಸುತ್ತಾ, ಅಲ್ಲಲ್ಲಿ ಚಿತ್ರಲೇಖನಗಳನ್ನು ಅದಕ್ಕೆ ಬೆಂಬಲವಾಗಿ ನೀಡಿ, ಸಾಮಾನ್ಯ ಓದುಗನೂ ಕುತೂಹಲದಿಂದ ‘ಕವರ್ ಟು ಕವರ್’ ಓದಿಕೊಂಡು ಹೋಗುವಂತೆ ಪ್ರೇರೇಪಿಸಿದ್ದಾರೆ.
ರೋಹಿತ್ ಲೇಖನಿಯಿಂದ ಚಿಮ್ಮುವ ಕ್ಲಿಷ್ಟ ವಿಚಾರಗಳೂ ಸರಳ ಸುಂದರವಾಗಿ ನಮಗೆ ಸ್ಪಷ್ಟವಾಗುತ್ತಾ ಹೋಗುತ್ತವೆ. ವಿಜ್ಞಾನಿಗಳ ಅನ್ವೇಷಣೆಗಳ ಇತಿಹಾಸದಿಂದ ಸಂಗ್ರಹಿಸಲ್ಪಟ್ಟ ಉಪಯುಕ್ತ ವೈಜ್ಞಾನಿಕ ವಿಚಾರಗಳ ರೋಚಕ ಚಿತ್ರ ಈ ಪುಸ್ತಕದಲ್ಲಿದೆ, ಅದರಲ್ಲಿ ಆಸಕ್ತಿಯಿದ್ದ ಓದುಗರಿಗೆ ಇದು ಮೃಷ್ಟಾನ್ನ ಭೋಜನವೇ ಸರಿ!
ನನ್ನ ಮತ : 5/5
ಆಜಾದ್ ಕಾಶ್ಮೀರವಾದಿಗಳಿಗೆ ಶಾಶ್ವತ “ಆಜಾದಿ” ಕೊಡಬೇಕಾದ ಕಠಿಣ ಸಮಯವಿದು
– ರಾಕೇಶ್ ಶೆಟ್ಟಿ
ಕಾಶ್ಮೀರದಲ್ಲಿ ಬರ್ಹನ್ ವನಿ ಎಂಬ ಭಯೋತ್ಪಾದಕ ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ನಂತರ ಶುರುವಾದ ಗಲಭೆಗೆ 42 (ಈ ಲೇಖನ ಬರೆಯುವ ಸಮಯಕ್ಕೆ) ಜನರು ಬಲಿಯಾಗಿ, 3000ದಷ್ಟು ಜನರು ಗಾಯಾಳುಗಳಾಗಿದ್ದಾರೆ ಎಂದು ವರದಿಯಾಗಿದೆ ಮತ್ತು 12ನೇ ದಿನಕ್ಕೂ ಕರ್ಫ್ಯೂ ಮುಂದುವರೆದಿದೆ! ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಉಗ್ರನ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟ ಕೇಂದ್ರ ಸರ್ಕಾರ ತಪ್ಪು ನಡೆ. ಉಗ್ರರು ಸತ್ತಾಗ ಅವರ ಕಳೆಬರವನ್ನು ಸಮುದ್ರಕ್ಕೋ, ನಾಯಿ-ನರಿಗಳಿಗೋ ಎಸೆಯುವುದು ಬಿಟ್ಟು ಕುಟುಂಬಸ್ಥರಿಗೆ ಕೊಟ್ಟಿದ್ದೇಕೆ? ಮುಂಬೈ ಸರಣಿ ಬಾಂಬ್ ಸ್ಪೋಟದ ಅಪರಾಧಕ್ಕಾಗಿ ನೇಣಿಗೇರಿದ ಯಾಕೂಬ್ ಮೆಮನ್ ಅಂತ್ಯಸಂಸ್ಕಾರದಲ್ಲಿ ಸೇರಿದ್ದ ಜನಸ್ತೋಮವನ್ನು ನೋಡಿಯಾದರೂ ಇವರು ಬುದ್ದಿ ಕಲಿಯಬಾರದಿತ್ತೇ? ಕನಿಷ್ಟ ಅಫ್ಜಲ್ ಗುರುವಿನ ಕಳೆಬರವನ್ನು ಕೊಡದೇ ಯುಪಿಎ ಸರ್ಕಾರ ತೋರಿದ ನಡೆಯನ್ನು ತೋರುವ ಜಾಣ್ಮೆಯನ್ನೇಕೆ ಕೇಂದ್ರದ ಬಿಜೆಪಿ ತೋರಿಸಲಿಲ್ಲ? ಮೈತ್ರಿ ಸರ್ಕಾರದ ಮರ್ಜಿಗೆ ಬಿದ್ದು ಈ ರೀತಿ ಮಾಡಿತೇ? ಇವರ ಈ ನೀತಿಯಿಂದಾಗಿ ಸಂಕಟ ಅನುಭವಿಸುತ್ತಿರುವುದು ಭದ್ರತಾಪಡೆಗಳು ಹಾಗೂ ಪೋಲಿಸರು. ಮತ್ತಷ್ಟು ಓದು
ಒಳಗಣ್ಣು – 1 ( ಭಗವದ್ಗೀತೆಯನ್ನು ಯಾವ ಪ್ರಾಯದಲ್ಲಿ ಓದಬೇಕು? )
– ಸ್ವಾಮಿ ಶಾಂತಸ್ವರೂಪಾನಂದ
ನಮ್ಮಲ್ಲೊಂದು ಅಭಿಪ್ರಾಯವಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು ಇವೆಲ್ಲ ಪ್ರಾಯವಾದವರಿಗೆ. ಅಜ್ಜಂದಿರಿಗೆ. ಕೈಲಾಗದೆ ಕೂತವರಿಗೆ. ಊರುಗೋಲಿಲ್ಲದೆ ನಡೆದಾಡಲು ಆಗದ ಸ್ಥಿತಿಗೆ ತಲುಪಿದ ಮೇಲೆ ಇವೆಲ್ಲ ವೇದಾಂತಗಳು. ಅಲ್ಲಿಯವರೆಗೆ ನಮಗೆ ಧರ್ಮಗ್ರಂಥಗಳು ಬೇಕಾಗಿಲ್ಲ, ಅಂತ. ಒಮ್ಮೆ ನಾನು ಉತ್ತರಭಾರತದ ಪ್ರವಾಸದಲ್ಲಿದ್ದಾಗ ಒಂದು ಹಳ್ಳಿಯ ದೇವಸ್ಥಾನದಲ್ಲಿ ಪೂಜೆ ಮತ್ತು ಪ್ರವಚನ ಏರ್ಪಾಟಾಗಿತ್ತು. ಪೂಜೆಯ ಹೊತ್ತಿಗೆ ಊರಿನ ಹಲವು ತರುಣರು ಹಾಜರಿದ್ದರು. ಆದರೆ ಪೂಜೆಯ ಬಳಿಕ ಗೀತಾಪ್ರವಚನ ಎಂದಾದಾಗ ಅಲ್ಲಿದ್ದ ತರುಣರೆಲ್ಲ ಹೊರಟುಹೋಗಿ ನಡುವಯಸ್ಸು ದಾಟಿದ ಮಂದಿಯಷ್ಟೇ ಉಳಿದರು. ಹಾಗೇಕಾಯಿತು ಎಂದು ಅಲ್ಲಿದ್ದವರಲ್ಲಿ ಕೇಳಿದಾಗ “ಸತ್ಸಂಗ, ಪ್ರವಚನ ಇವೆಲ್ಲ ಮಕ್ಕಳಿಗೇಕೆ ಸ್ವಾಮಿ! ಅದನ್ನು ಕೇಳುವುದೇನಿದ್ದರೂ ಜೀವನದ ಎಲ್ಲ ವ್ಯಾಪಾರ ಮುಗಿಸಿ ಪರಲೋಕಕ್ಕೆ ಹೊರಡಲನುವಾದ ಮುದುಕರ ಕೆಲಸವಲ್ಲವೆ?” ಎಂದು ಹೇಳಿದರು. ಇನ್ನೊಂದು ಸಂದರ್ಭದಲ್ಲಿ, ಮುಂಬಯಿಯ ಮನೆಯೊಂದಕ್ಕೆ ಆಮಂತ್ರಿತನಾಗಿ ಹೋಗಿದ್ದೆ. ಮನೆ ಯಜಮಾನ ನನಗೆ ಅವರ ದೇವರ ಮನೆ ತೋರಿಸುತ್ತ, ಅಲ್ಲೇ ಪಕ್ಕದಲ್ಲಿ ಪೇರಿಸಿದ್ದ ಉದ್ಗ್ರಂಥಗಳನ್ನು ತೋರಿಸಿ, ಅವಕ್ಕೆ ಪ್ರತಿದಿನ ಪೂಜೆ ಮಾಡುತ್ತೇನೆ ಎಂದರು. “ಹೌದೆ? ಏನು ಪುಸ್ತಕಗಳವು?” ಎಂದು ಕೇಳಿದೆ. ನೋಡಿದರೆ ಬಹಳ ಹಳೆಯ ಕಾಲದ ಪುಸ್ತಕಗಳಂತೆ ಕಂಡವು. ಹಾಳೆ ವೃದ್ಧಾಪ್ಯದ ಕಾರಣದಿಂದ ಬೂದುಬಣ್ಣಕ್ಕೆ ತಿರುಗಿತ್ತು. ರಟ್ಟಿಗೂ ಮನುಷ್ಯನೊಬ್ಬನ ಆಯುಸ್ಸಿನಷ್ಟೇ ಪ್ರಾಯವಾಗಿರಬೇಕು! “ಇವು ರಾಮಾಯಣ, ಮಹಾಭಾರತ ಮತ್ತು ಭಾಗವತದ ಗ್ರಂಥಗಳು. ನನ್ನ ಅಜ್ಜ ಅವನ್ನು ಬಳಸುತ್ತಿದ್ದರಂತೆ. ನಂತರ ತಂದೆಯ ಕೈಗೆ ಬಂದವು. ಅಲ್ಲಿಂದ ನನಗೆ ಸಿಕ್ಕವು. ಮೂರು ತಲೆಮಾರಿನಿಂದ ಅವು ಹೀಗೆ ದೇವರ ಕೋಣೆಯಲ್ಲಿ ಪೂಜೆಗೊಳ್ಳುತ್ತಿವೆ” ಎಂದರಾತ. “ಓಹ್! ನೀವು ಇವನ್ನು ಅಭ್ಯಾಸ ಮಾಡಿದ್ದೀರೆಂದು ತುಂಬ ಖುಷಿಯಾಯಿತು” ಎಂದು ಹರ್ಷ ವ್ಯಕ್ತಪಡಿಸಿದೆ. “ಇಲ್ಲ ಇಲ್ಲ! ಇವೆಲ್ಲ ಸಂಸ್ಕೃತದಲ್ಲಿರುವ ಪುಸ್ತಕಗಳು! ನನಗೆ ಇಂಗ್ಲೀಷ್ ಮತ್ತು ಕೊಂಚ ಹಿಂದಿ ಬಿಟ್ಟರೆ ಮಿಕ್ಕ ಭಾಷೆಗಳ ಅಭ್ಯಾಸವಿಲ್ಲ. ಸಂಸ್ಕೃತವಂತೂ ನನ್ನ ಅಜ್ಜನ ಕಾಲಕ್ಕೇ ನಿಂತುಹೋಯಿತು. ಅವರು ಆಗಿನ ಕಾಲದ ಮೇಧಾವಿಗಳೊಂದಿಗೆ ಸಂಸ್ಕೃತದಲ್ಲಿ ಚರ್ಚೆ ಮಾಡುತ್ತಿದ್ದರಂತೆ. ತಂದೆಗೆ ಅಲ್ಪಸ್ವಲ್ಪ ಬರುತ್ತಿದ್ದಿರಬೇಕು. ನನಗಂತೂ ಸಂಸ್ಕೃತವನ್ನು ಸುಡುತಿನ್ನಲಿಕ್ಕೂ ಬರುವುದಿಲ್ಲ! ಇವೆಲ್ಲ ಹಳೆ ತಲೆಮಾರಿನ ವಸ್ತುಗಳೆಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇವೆ ಅಷ್ಟೆ! ನಿವೃತ್ತನಾದ ಮೇಲೆ ನಾನು ಮಹಾಭಾರತವೋ ರಾಮಾಯಣವೋ ಯಾವುದಾದರೊಂದು ಕೃತಿಯ ಇಂಗ್ಲೀಷ್ ಅನುವಾದವನ್ನು ಕೊಳ್ಳಬೇಕೆಂದಿದ್ದೇನೆ” ಎಂದರು ಆ ಪುಣ್ಯಾತ್ಮ. ನನಗೆ ಭ್ರಮನಿರಸನವಾದರೂ ಮತ್ತಷ್ಟು ಕುತೂಹಲ ಉಳಿದಿತ್ತು. “ಅದೇಕೆ ಯಾವುದಾದರೊಂದು ಕೃತಿ ಎನ್ನುತ್ತೀರಿ? ಎರಡೂ ಕೊಳ್ಳಬಹುದಲ್ಲ!” ಎಂದೆ ನಾನು. ಅದಕ್ಕೆ ಆ ಮನುಷ್ಯ ನಗುತ್ತ “ತಮಾಷೆ ಮಾಡ್ತಿದ್ದೀರಾ ಸ್ವಾಮೀಜಿ! ನಿವೃತ್ತನಾದ ಮೇಲೆ ನಮಗೆ ಎಷ್ಟು ಮಹಾ ಆಯುಷ್ಯ ಉಳಿದಿರುತ್ತೆ! ಹೆಚ್ಚೆಂದರೆ ಹತ್ತು ವರ್ಷ! ಅಷ್ಟರಲ್ಲಿ ಒಂದು ಗ್ರಂಥ ಓದಿ ಅರ್ಥೈಸಿಕೊಳ್ಳುವುದೇ ಕಷ್ಟದ ಮಾತು. ಅಂಥಾದ್ದರಲ್ಲಿ ಎರಡೆರಡು ಹೇಗೆ ಸಾಧ್ಯ? ಎರಡು ಪುಸ್ತಕ ಕೊಂಡು ಅವುಗಳಲ್ಲೊಂದನ್ನು ಓದಲು ಆಗದೇ ಹೋದರೆ ಆ ನಿರಾಸೆ ಮನಸ್ಸಲ್ಲಿ ಉಳಿದುಬಿಡುತ್ತದಲ್ಲವೆ?” ಎಂದು ಉತ್ತರಿಸಿದರು. ಮತ್ತಷ್ಟು ಓದು
ವೈದ್ಯಕೀಯ ವಿದ್ಯಾಲಯಗಳಲ್ಲಿ ಕಲಿಸದ ವಿಷಯವೇನೆಂದರೆ……!!
– ಗುರುರಾಜ್ ಕೊಡ್ಕಣಿ, ಯಲ್ಲಾಪುರ
ಅಸಲಿಗೆ ನಾನೇಕೆ ವೈದ್ಯನಾಗಬೇಕೆಂದುಕೊಂಡಿದ್ದೆ ಎನ್ನುವುದು ನನಗೆ ನೆನಪೇ ಇಲ್ಲ. ಆದರೆ ವೈದ್ಯನಾದ ಮೇಲೆ ನನ್ನ ವರ್ತನೆ ಉಳಿದೆಲ್ಲ ವೈದ್ಯರಿಗಿಂತ ತೀರ ಭಿನ್ನವೇನಾಗಿರಲಿಲ್ಲ. ನನ್ನಲ್ಲೊಂದು ಹೆಮ್ಮೆಯಿತ್ತು. ನಾನೊಬ್ಬ ವೈದ್ಯನೆನ್ನುವ ಗರ್ವ ಮೀರಿದ ಅಹಂಕಾರವಿತ್ತು. ನನ್ನಲ್ಲಿದ್ದ ಅಹಮಿಕೆಗೆ ಮೊದಲ ಪೆಟ್ಟು ಬಿದ್ದಿದ್ದು ಸರಿಸುಮಾರು ಮೂವತ್ತು ವರ್ಷಗಳ ಹಿಂದೆ. ಅದೊಂದು ನಸುಕಿನ ಜಾವಕ್ಕೆ ಮಹಿಳೆಯೊಬ್ಬಳು ಮೂವತ್ತರ ಹರೆಯದ ತನ್ನ ಪತಿಯ ಶವವನ್ನು ನಮ್ಮ ಆಸ್ಪತ್ರೆಗೆ ತಂದಿದ್ದಳು. ತನ್ನ ಗಂಡ ತೀರಿಕೊಂಡಿದ್ದಾನೆಂಬ ಸತ್ಯವನ್ನು ಅರಗಿಸಿಕೊಳ್ಳಲಾಗದ ಆಕೆ, ನನ್ನ ಮೊಣಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಕ್ಕುತ್ತ, “ಡಾಕ್ಟರ್, ನನ್ನ ಗಂಡ ಏಕೆ ಸತ್ತ.’? ಎಂದು ಪ್ರಶ್ನಿಸಿದಳು. ಅದೊಂದು ಪ್ರಶ್ನೆ ನಾನೊಬ್ಬ ದೊಡ್ಡ ವೈದ್ಯನೆನ್ನುವ ಗರ್ವವನ್ನು ಒಂದೇ ಪೆಟ್ಟಿಗೆ ಮುರಿದುಹಾಕಿತ್ತು. ಆಕೆ ತನ್ನ ಪತಿ’ಹೇಗೆ’ಸತ್ತ ಎಂದು ಪ್ರಶ್ನಿಸಿದ್ದರೆ ನಾನು ಆಕೆಗೆ ಹತ್ತಾರು ಕಾರಣಗಳನ್ನು ಕೊಡಬಹುದಿತ್ತು. ಅವನಿಗೆ ಹೃದಯಾಘಾತವಾಗಿದೆಯೆಂದೋ ಅಥವಾ ಅವನ ರಕ್ತದೊತ್ತಡ ಕುಸಿದಿದ್ದರಿಂದ ಸತ್ತನೆಂದೋ ಸುಳ್ಳುಹೇಳಿಬಿಡಬಹುದಾಗಿತ್ತು. ಆದರೆ ಆಕೆ ಕೇಳಿದ್ದು ತನ್ನ ಗಂಡ ‘ಏಕೆ’ ಸತ್ತ ಎನ್ನುವ ಪ್ರಶ್ನೆ. ನಿಜಕ್ಕೂ ಬಲು ಕ್ಲಿಷ್ಟ ಪ್ರಶ್ನೆಯದು. ಆತನಿಗೆ ಕೇವಲ ಮೂವತ್ತು ಚಿಲ್ಲರೆ ವರ್ಷಗಳಷ್ಟು ವಯಸ್ಸು. ಆತನ ರಕ್ತದೊತ್ತಡ, ಸಕ್ಕರೆಯ ಮಟ್ಟ ತೀರ ಸಾಮಾನ್ಯವಾಗಿದ್ದವು. ಹೃದಯವೂ ಗಟ್ಟಿಮುಟ್ಟಾಗಿಯೇ ಇತ್ತು. ಆದರೂ ಆತ ಏಕೆ ಸತ್ತ ಎನ್ನುವ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. ನಿಜ ಹೇಳಬೇಕೆಂದರೆ ಅಂಥದ್ದೊಂದು ಪ್ರಶ್ನೆಗೆ ಉತ್ತರ ವೈದ್ಯಕೀಯ ಲೋಕಕ್ಕೂ ಇದುವರೆಗೆ ಸಿಕ್ಕಿಲ್ಲ. ಅದೊಂದು ಪ್ರಶ್ನೆ ನನ್ನನ್ನು ತುಂಬ ಕಾಲ ಬೆನ್ನುಬಿಡದೇ ಕಾಡಿತ್ತು. ‘ಏಕೆ’ ಎನ್ನುವ ಸಂಕೀರ್ಣ ಪ್ರಶ್ನೆಯೇ ನನ್ನನ್ನು ತತ್ವಶಾಸ್ತ್ರ, ಧರ್ಮ, ವೇದಾಂತಗಳತ್ತ ಆಕರ್ಷಿಸಿತ್ತು. ಅಂತಹ ಸವಾಲಿನ ಜವಾಬು ಹುಡುಕುತ್ತ ಹೊರಟ ನನಗೆ ಆಧುನಿಕ ವೈದ್ಯ ಲೋಕದ ದೌರ್ಬಲ್ಯಗಳ ಪರಿಚಯವೂ ಆಯಿತು” ಮತ್ತಷ್ಟು ಓದು
ಅನಂತದಿಂದ ಸೊನ್ನೆಯವರೆಗೆ: ಸಂಖ್ಯೆಗಳ ಸಂಕ್ಷಿಪ್ತ ಚರಿತ್ರೆ
– ರೋಹಿತ್ ಚಕ್ರತೀರ್ಥ
ಒಂದಾನೊಂದು ಕಾಲ ಇತ್ತು. ಮನುಷ್ಯ ಪ್ರಾಣಿಜಗತ್ತಿನ ಉಳಿದ ಜೀವರಾಶಿಗಿಂತ ಕೊಂಚ ಭಿನ್ನನಾಗಿ, ಚತುಷ್ಪಾದಗಳ ಅವಲಂಬನೆಯಿಂದ ಹೊರಬಂದು, ಎರಡು ಕಾಲಿನಲ್ಲಿ ನಿಂತು ಬ್ಯಾಲೆನ್ಸ್ ಮಾಡುತ್ತ ನಡೆಯಲು ತೊಡಗಿದ್ದ ಕಾಲ. ಹಾಗೆ ಓಲಾಡುತ್ತ ಡ್ಯಾನ್ಸ್ ಮಾಡುತ್ತ ಕೊನೆಗೊಂದು ದಿನ ದೃಢವಾಗಿ ನಿಲ್ಲಬಲ್ಲ ತಾಕತ್ತು ಗಳಿಸಿಕೊಂಡವನಿಗೆ ದೃಷ್ಟಿ ಹೋದದ್ದು ಆಕಾಶದತ್ತ. ರಾತ್ರಿ ಹೊತ್ತಲ್ಲಿ ಅಲ್ಲಿ ಮಿನುಗುವ ಚುಕ್ಕಿಗಳೆಷ್ಟು! ಸಂಜೆಯಾದರೆ ಹಾರುವ ಹಕ್ಕಿಗಳೆಷ್ಟು! ಬೇಸಗೆಯಲ್ಲಿ ತೇಲುವ ಬಿಳಿ ಮೋಡಗಳೆಷ್ಟು! ಮಳೆಗಾಲದಲ್ಲಿ ಫಳಾರನೆ ಹೊಳೆದು ಮರೆಯಾಗುವ ಮಿಂಚುಗಳೆಷ್ಟು! ಇವುಗಳನ್ನೆಲ್ಲ ನೋಡುತ್ತಿದ್ದವನಿಗೆ ಅವುಗಳೆಲ್ಲ ಎಷ್ಟು ಎಷ್ಟು ಎಷ್ಟು ಎನ್ನಿಸುತ್ತ ಆಶ್ಚರ್ಯವಾಗುತ್ತಿತ್ತೇ ಹೊರತು ನಿಜವಾಗಿಯೂ ಎಷ್ಟಿವೆ ಎಂಬ ಅಂದಾಜು ಮಾತ್ರ ಸಿಕ್ಕಿರಲಿಲ್ಲ. ಯಾಕೆಂದರೆ ಆ ಕಾಲದ ಮನುಷ್ಯನಿಗೆ “ಲೆಕ್ಕ ಮಾಡುವುದು” ಎಂಬ ಪರಿಕಲ್ಪನೆಯೇ ಹುಟ್ಟಿರಲಿಲ್ಲ! ಹೀಗೆಯೇ ದಿನಗಳು ಸರಿಯುತ್ತಿದ್ದಾಗ ಆ ಆದಿಮಾನವ ಒಂದು ವಿಚಿತ್ರ ಕಂಡ. ಆಕಾಶದಲ್ಲಿ ಚಂದ್ರ ರೊಟ್ಟಿಯಂತೆ ದುಂಡಗಿದ್ದವನು ದಿನ ಹೋದಂತೆ ಕರಗುತ್ತಾ ಕರಗುತ್ತಾ ಹೋಗಿ ಒಂದು ದಿನ ಮಾಯವಾಗಿಬಿಡುತ್ತಾನೆ. ಅಂದು ಕಾಡೆಲ್ಲ ಗಾಢಾಂಧಕಾರ! ಕಾರ್ಗತ್ತಲೆ! ಅದರ ಮರುದಿನದ ರಾತ್ರಿ ಸಣ್ಣಗೆ ಬೆಳ್ಳಿಯ ಸರಿಗೆಯಂತೆ ಮತ್ತೆ ಮೂಡಿದವನು ಚಾಪೆ ಬಿಡಿಸಿದಂತೆ ದೊಡ್ಡವನಾಗುತ್ತಾ ಬಂದು ಕೊನೆಗೊಂದು ದಿನ ಪೂರ್ಣಾವತಾರಿಯಾಗುತ್ತಾನೆ. ಅಂದು ಕಾಡೆಲ್ಲ ಬೆಳ್ಳಂಬೆಳಕು! ತರುಲತೆಗಳ ನಡುವಲ್ಲಿ ತೂರಿಕೊಂಡಾದರೂ ಬಂದು ನೆಲಮುಟ್ಟುವ ಹಾಲು ಬೆಳುದಿಂಗಳು! ಹೀಗೆ ಚಂದ್ರ ಉರುಟಾಗುವುದಕ್ಕೂ ಪೂರ್ತಿಯಾಗಿ ಕಾಣೆಯಾಗುವುದಕ್ಕೂ ನಡುವಿನ ಅವಧಿ ಕರಾರುವಾಕ್ಕಾಗಿ ಒಂದೇ ರೀತಿ ಇದೆ ಎನ್ನುವುದು ಮನುಷ್ಯನಿಗೆ ನಿಧಾನವಾಗಿ ತಿಳಿಯುತ್ತ ಹೋಯಿತು. ಬದುಕೆಲ್ಲ ಕಾಡಲ್ಲೇ ಕಳೆದುಹೋಗುತ್ತಿದ್ದುದರಿಂದ, ಚಂದ್ರನ ಇಂಥ ಬದಲಾವಣೆಗಳನ್ನು ಗುರುತು ಮಾಡಿಟ್ಟುಕೊಳ್ಳುವುದು ಅವನಿಗೆ ಮುಖ್ಯವೂ ಆಗಿತ್ತು. ಚಂದ್ರ ಮಾಯವಾಗುವ ದಿನವನ್ನು ಅವನು ಅಮವಾಸ್ಯೆ ಎಂದು ಕರೆದ. ಪೂರ್ತಿಯಾಗಿ ಬೆಳಗುವ ದಿನವನ್ನು ಹುಣ್ಣಿಮೆ ಎಂದ. ಅಮವಾಸ್ಯೆಗಳಂದು ಕಾಡಿನಲ್ಲಿ ಅಲೆದಾಡುವುದನ್ನು ತಪ್ಪಿಸಿಕೊಂಡ. ಹುಣ್ಣಿಮೆಯ ಬೆಳಕಲ್ಲಿ ಗುಂಪು ಸೇರಿ ಕುಣಿಯುತ್ತ ಹಾಡು ಹಾಡುವ, ಊಟ ಬೇಯಿಸುವ ಕಾರ್ಯಕ್ರಮಗಳನ್ನು ಇಟ್ಟುಕೊಂಡ. ನಾವಿಂದು ಸಂಸ್ಕೃತಿ ಎಂದು ಕರೆಯುವ ಎಲ್ಲವೂ ಹೀಗೆ ನಿಧಾನವಾಗಿ ಕಣ್ಣುಬಿಟ್ಟವು. ಮತ್ತಷ್ಟು ಓದು