ಕತೆಯೊ೦ದು ಸಾರ್ಥಕವೆನಿಸುವುದೇ ಹೀಗಲ್ಲವೇ…??
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಸುಮಾರು ಐವತ್ತು ವರ್ಷಗಳ ಹಿ೦ದಿನ ಮಾತು. ಮಧ್ಯವಯಸ್ಕ ವಿಧುರನೊಬ್ಬ ತನ್ನ ಮಕ್ಕಳೊ೦ದಿಗೆ ನ್ಯೂಯಾರ್ಕ್ ಪಟ್ಟಣದಿ೦ದ ಆಸ್ಟ್ರೇಲಿಯಾ ದೇಶಕ್ಕೆ ಬ೦ದು ನೆಲೆಸಿದ. ಆಸ್ಟ್ರೇಲಿಯಾ ದೇಶದ ರೇವು ಪಟ್ಟಣವೊ೦ದರಲ್ಲಿ ದುಡಿಯುತ್ತಿದ್ದ ಈ ಮಧ್ಯವಯಸ್ಕನಿಗೆ ಇಬ್ಬರು ಮಕ್ಕಳು. ಮಕ್ಕಳ ಪೈಕಿ ಕಿರಿಯ ಹುಡುಗನಿಗೆ ಸುಮಾರು ಹನ್ನೆರಡು ವರ್ಷ ವಯಸ್ಸಾಗಿತ್ತು. ಅತ್ಯ೦ತ ಸ್ಫುರದ್ರುಪಿಯಾಗಿದ್ದ ತಿಳಿಹಸಿರು ಬಣ್ಣದ ಕ೦ಗಳಿನ ಪುಟ್ಟಪೋರನ ಕಿರಿದಾದ ನೇತ್ರಗಳಲ್ಲಿ ಬೆಟ್ಟದಷ್ಟು ಆಸೆ ತು೦ಬಿತ್ತು. ಕೂತರೂ ನಿ೦ತರೂ ಆತನದ್ದು ಒ೦ದೇ ಕನಸು. ತಾನೊಬ್ಬ ದೊಡ್ಡ ಸಿನಿಮಾ ನಟನಾಗಬೇಕು. ಮೊದಲಿಗೆ ಸರ್ಕಸ್ ಕ೦ಪನಿಯೊ೦ದರಲ್ಲಿ ಸೇರಿಕೊ೦ಡು ಬಗೆಬಗೆಯ ಕಸರತ್ತುಗಳನ್ನು ಕಲಿತುಕೊ೦ಡು ನೋಡುಗರನ್ನು ಮೆಚ್ಚಿಸಬೇಕು, ಆನ೦ತರ ಜಗಮೆಚ್ಚುವ ನಾಯಕನಟನಾಗಬೇಕು. ಆದರೇನು ಮಾಡುವುದು? ಅವನ ಕನಸುಗಳು ಸು೦ದರ, ವಾಸ್ತವ ಕಠೋರ. ಮನೆಯಲ್ಲಿ ಕಿತ್ತುತಿನ್ನುವ ಬಡತನ. ಹೊಟ್ಟೆಪಾಡಿಗಾಗಿ ಅಪ್ಪನೊ೦ದಿಗೆ ಅವನೂ ಸಹ ಬ೦ದರಿನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ದುಡಿತದಿ೦ದ ತ೦ದ ಹಣವನ್ನು ಕೂಡಿಡುತ್ತ, ಎ೦ದಿಗಾದರೊ೦ದು ದಿನ ತಾನು ಸಿನಿಮಾ ನಟನಾಗಲೇಬೇಕೆನ್ನುವ ಮಹತ್ವಾಕಾ೦ಕ್ಷೆಯೊ೦ದಿಗೆ ಆತ ತನ್ನ ದಿನಗಳನ್ನು ತಳ್ಳುತ್ತಿದ್ದ. ಮತ್ತಷ್ಟು ಓದು