ನಿಂತು ಹೋಗುವವರು ಸತ್ತವರು ಮಾತ್ರ’ ಎನ್ನುವ ದಿಟ್ಟೆಯ ಕುರಿತು…..
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ಬಾಳಿನಲ್ಲೊಂದು ಹೋರಾಟವಿರದಿದ್ದರೆ ಪ್ರಗತಿಯೂ ಇಲ್ಲ. ಸ್ವಾತಂತ್ರ್ಯದ ಪ್ರತಿಪಾದಕರಂತೆ ವರ್ತಿಸುವ ಆದರೆ ಬದುಕಿನ ಸಂಘರ್ಷವನ್ನು ಹಳಿಯುವ ಅನೇಕ ಜನರನ್ನು ನಾನು ಕಂಡಿದ್ದೇನೆ. ನೆಲವನ್ನು ಉಳದೆ, ಬಿತ್ತದೆ ಬೆಳೆಯನ್ನು ಬಯಸುವ ಮನಸ್ಥಿತಿಯ ಇಂಥಹ ಜನ ಗುಡುಗು ಸಿಡಿಲುಗಳಿಲ್ಲದ ಮಳೆಯನ್ನು ಬಯಸುವವರು. ಇವರಿಗೆ ಸಾಗರದ ಸಂಪತ್ತು ಬೇಕು, ಅದರೊಳಗಿನ ಉಪ್ಪುನೀರು, ಅಲೆಗಳ ಅಬ್ಬರ ಬೇಕಿಲ್ಲ. ಬದುಕಿನ ಸಂಘರ್ಷವೆನ್ನುವುದು ನೈತಿಕವಾಗಿರಬಹುದು, ದೈಹಿಕವಾಗಿರಬಹುದು ಅಥವಾ ಇವೆರಡರ ಮಿಶ್ರಣವೂ ಆಗಿರಬಹುದು. ಆದರೆ ಬದುಕಿನ ಅಭಿವೃದ್ಧಿಗೆ ಸಂಘರ್ಷವಂತೂ ಬೇಕೇ ಬೇಕು” ಎಂದು ಭಾವುಕವಾಗಿ ನುಡಿಯುತ್ತಾನೆ ಆಫ್ರೋ ಅಮೇರಿಕನ್ ಸಮಾಜ ಸುಧಾರಕ ಮತ್ತು ಲೇಖಕ ಫ್ರೆಡ್ರಿಕ್ ಡಗ್ಲಾಸ್. ಪ್ರತಿಯೊಬ್ಬ ಸಾಧಕನ ಬದುಕಿನಲ್ಲೂ ನಮ್ಮ ಕಣ್ಣಿಗೆ ಬೀಳದ ಅಗೋಚರವಾದ ಹೋರಾಟವೊಂದಿರುತ್ತದೆ. ಸಾಧನೆಯ ಶಿಖರದ ಶೃಂಗದಲ್ಲಿ ನಿಂತ ಸಾಧಕನ ಚಿತ್ರ ನಮ್ಮೆದುರಿಗೆ ಕಾಣುತ್ತದೆ. ಆದರೆ ಅಂಥದ್ದೊಂದು ಶಿಖರದ ತುತ್ತ ತುದಿಗೆರಲು ಆತ ಪಟ್ಟ ಶ್ರಮ ನಮ್ಮೆದುರಿಗಿರುವುದಿಲ್ಲ. ಪ್ರತಿಯೊಬ್ಬರೂ ಸಹ ತಮ್ಮ ಬದುಕಿನಲ್ಲಿ ಏಟು ತಿಂದವರೇ, ಆದರೆ ಬಿದ್ದ ಏಟಿನಿಂದ ವಿಚಲಿತರಾಗದೇ ಮುನ್ನುಗ್ಗುವವರು ಮಾತ್ರ ಸಾಧಕರಾಗಲು ಸಾಧ್ಯ. ಹಾಗೆ ಬದುಕಿನ ಪ್ರತಿಕ್ಷಣವೂ ಪೆಟ್ಟುತಿನ್ನುತ್ತಲೇ ಬಂದಿದ್ದರೂ, ಸಾಧನೆಯ ಶಿಖರವನ್ನೇರಿ ನಿಂತ ಪೆಟ್ರಿಶಿಯಾ ನಾರಾಯಣ ಎನ್ನುವ ದಿಟ್ಟ ತಮಿಳರ ಹೆಣ್ಣುಮಗಳ ಕತೆಯನ್ನು ಇಂದು ನಿಮಗೆ ಹೇಳಲು ಹೊರಟಿದ್ದೇನೆ. ಮತ್ತಷ್ಟು ಓದು
ಪ್ಯಾಸೆಂಜರ್ ರೈಲು ….
– ಫಣೀಶ್ ದುದ್ದ
ಅದೆಷ್ಟೋ ಬಾರಿ ನಾವು ರೈಲ್ವೆ ಸ್ಟೇಷನ್ನಲ್ಲೋ, ಬಸ್ ಸ್ಟಾಂಡಿನಲ್ಲೋ, ” ಸಾರ್, ನನ್ನ ಪರ್ಸ್ ಕಳೆದು ಹೋಗಿದೆ.. ನಾನು ಆ ಊರಿಗೆ ಹೋಗಬೇಕು.. ಈ ಊರಿಗೆ ಹೋಗಬೇಕು.. ನನ್ನ ಹತ್ತಿರ ಹತ್ತೇ ರೂಪಾಯಿ ಇರುವುದು.. ನಮ್ಮೂರಿಗೆ ಇಪ್ಪತ್ತು ರೂಪಾಯಿ ಚಾರ್ಜು… ಹತ್ತು ರೂಪಾಯಿ ಇದ್ರೆ ಕೊಡ್ತೀರಾ.?” ಎಂದು ಕೇಳುವವರು ದಿನ ಬೆಳಗಾದರೆ ಸಿಗುತ್ತಾರೆ. ಕೆಲವರು,” ಹತ್ತು ರೂಪಾಯಿ ತಾನೆ, “ಟೀ”ಗೋ, ಸಿಗರೇಟಿಗೋ ಕಳೆಯುವ ಬದಲು ಇವರಿಗೆ ಕೊಟ್ಟರೆ ಉಪಯೋಗವಗುತ್ತದಲ್ಲ ಎಂದು ಹತ್ತೋ, ಇಪ್ಪತ್ತೋ ಕೈಗಿಟ್ಟು ಹೋಗುವವರಿದ್ದಾರೆ. ಇನ್ನು ಕೆಲವರು, “ನಿಮ್ಮಂತವರನ್ನು ಬೇಕಾದಷ್ಟು ಜನರನ್ನು ನೋಡಿದ್ದೀನಿ, ಮೈ ಬಗ್ಗಿಸಿ ದುಡಿಯುವುದು ಬಿಟ್ಟು ಬರಿ ಸುಳ್ಳು ಹೇಳ್ತೀರಾ… ಸುಮ್ನೆ ಹೋಗಿ” ಎಂದು ಬಾಯಿಗೆ ಬಂದಂತೆ ಬೈದು ಹೋಗಿ ಬಿಡುತ್ತಾರೆ. ಆದರೆ ನಾವ್ಯಾರು ಅದರ ಹಿಂದಿರುವ ಸತ್ಯಾಸತ್ಯತೆಗಳನ್ನು ತಿಳಿಯುವ ಗೋಜಿಗೇ ಹೋಗಿರುವುದಿಲ್ಲ… ಮನಬಂದಂತೆ ಬೈದು ಹೋದ ಮೇಲೂ ಕೆಲವರು ಮನದಲ್ಲೇ ಬೇಸರ ಮಾಡಿಕೊಳ್ಳುವುದೂ ಉಂಟು,” ಅಯ್ಯೋ, ನಿಜವಾಗಿ ಅವನಿಗೆ ಹಣ ಬೇಕಾಗಿತ್ತೋ ಏನೋ..ಛೇ..ಹತ್ತು ರೂಪಾಯಿ ಕೊಟ್ಟಿದ್ದರೆ ನನ್ನ ಗಂಟೇನೂ ಹೋಗುತ್ತಿರಲಿಲ್ಲ”ಎಂದು. ಮತ್ತಷ್ಟು ಓದು
ಭಾರತದಲ್ಲಿ ಶೂದ್ರರ ಶೋಷಣೆ ನಡೆದಿದೆಯೇ??
– ವಲವಿ ವಿಜಯಪುರ
ಸಾಮಾನ್ಯವಾಗಿ ಭಾರತದಲ್ಲಿ ಮನುಸ್ಮೃತಿಯು ಶೂದ್ರರಿಗೆ ವೇದಗಳನ್ನು ಕಲಿಯುವ ಅಧಿಕಾರ ನೀಡಲಿಲ್ಲ. ಅವರಿಗೆ ಸಂಸ್ಕೃತದ ಜ್ಞಾನವನ್ನು ಕೊಡಲಿಲ್ಲ. ವಿದ್ಯೆಯನ್ನು ಶೂದ್ರರಿಂದ ಮುಚ್ಚಿಡಲಾಯಿತು. ಮೇಲ್ವರ್ಗದವರ ಮನೆಯ ಸಗಣಿಯನ್ನು ಬಾಚುವದೇ ಅವರ ಕೆಲಸವಾಗಿತ್ತು. ಯಾವುದೇ ಉನ್ನತ ಹುದ್ದೆಗಳನ್ನು ನೀಡದೇ ಅವರನ್ನು ವಂಚಿಸಲಾಯಿತು. ಮತ್ತು ಈ ವಂಚನೆಯಲ್ಲಿ ಅಧಿಕವಾಗಿ ಬ್ರಾಹ್ಮಣರು ಭಾಗೀದಾರರು. ಸಮಾಜವೆಂಬ ಪಿರಮಿಡ್ ಆಕೃತಿಯಲ್ಲಿ ಅತ್ಯಂತ ಮೇಲೆ ಬ್ರಾಹ್ಮಣನಿದ್ದರೆ ಅತ್ಯಂತ ಕೆಳಸ್ತರದಲ್ಲಿ ಶೂದ್ರನಿದ್ದಾನೆ ಮತ್ತು ಅವನನ್ನು ವಿಶೇಷವಾಗಿ ಬ್ರಾಹ್ಮಣರು ಶೋಷಣೆ ಮಾಡಿದ್ದಾರೆ ಅನ್ನುವದು ಆಧುನಿಕ ಶಿಕ್ಷಣ ಪಡೆದವರ ವಾದವಾಗಿದೆ. ಮತ್ತಷ್ಟು ಓದು
ಹೋಮ ಹವನ ಸನಾತನ ಧರ್ಮದ ಪ್ರತೀಕ, ಅದರ ತೇಜೋವಧೆ ಡಂಭಾಚಾರಕ
– ಸಂದೀಪ್ ಶರ್ಮಾ .ಎಂ
ಕೆಲ ದಿನಗಳ ಹಿಂದೆ ಬಂಡಾಯ ಸಾಹಿತಿಗಳಾದ ಮಾನ್ಯ ವೇಣುರವರು ಕನ್ನಡದ ದಿನಪತ್ರಿಕೆ “ವಿಶ್ವವಾಣಿ”ಯಲ್ಲಿ ಮತ್ತೂರಿನಲ್ಲಿ ನಡೆದ ಸೋಮಯಾಗದ ಬಗ್ಗೆ ತಮ್ಮ ಕಪೋಲಕಲ್ಪಿತ ನಿಲುವನ್ನು ವ್ಯಕ್ತಪಡಿಸಿದ್ದಾರೆ. ವೇಣುರವರು ವೈಭವದ ಮಾತುಗಳಲ್ಲೇ ಮತ್ತು ತಮ್ಮ ಬರಹಗಳಿಂದ ವಾಚಕವೃಂದವನ್ನು ಆಕರ್ಷಿಸಬಹುದು ಎಂದು ತಿಳಿದಿದ್ದರೆ ಅದು ಅವರ ಭ್ರಮಾಲೋಕದ ಪರಮಾವಧಿ ಎಂದರೆ ತಪ್ಪಾಗಲಾರದು. ಬುದ್ಧುಜೀವಿಗಳ ಮುಖದ ರಾಡಿಯನ್ನು ಇವರು ಒರೆಸಲು ಹರಸಾಹಸ ಪಡುತ್ತಿದ್ದಾರೆ ಹಾಗು ಅವರುಗಳ ಗೊಡ್ಡುತನದ ಧೋರಣೆಗಳನ್ನು ಎತ್ತಿ ಹಿಡಿಯಲು ನೋಡುತ್ತಿದ್ದಾರೆ. ಆದರೆ ವಾಚಕವೃಂದದವರನ್ನು ಬೆಪ್ಪು ಮಾಡಲಿಕ್ಕೆ ಸಾಧ್ಯವಿಲ್ಲವೆಂಬುದು ಅವರಿಗೆ ತಿಳಿದಂತಿಲ್ಲ. ಮತ್ತೂರಿನಲ್ಲಿ ಸಂಸ್ಕೃತ ಭಾಷೆ ಮಾತನಾಡಿದರೆ ಇವರ ಗಂಟು ಏನು ಹೋಗುವುದೋ ಗೊತ್ತಿಲ್ಲ, ಇಲ್ಲಿನವರು ಮಾತನಾಡುವ ಭಾಷೆಗು ಹಾಗು ಅಲ್ಲಿ ನಡೆದ ಯಾಗಕ್ಕೂ ಯಾವ ಬಾದರಾಯಣ ಸಂಬಂಧ. ಸಂಸ್ಕೃತ ಮೃತ ಭಾಷೆ ಎಂದು ತಿಳಿದಿರುವ ಇವರು ಆ ಭಾಷೆಯಿಂದಲೇ ಮಿಕ್ಕೆಲ್ಲ ಭಾಷೆಗಳು ಉದ್ಭವಿಸಿದವು ಎಂಬುದನ್ನು ಇವರು ಮನಗಂಡಂತಿಲ್ಲ. ಸುಮಾರು ಅರವತ್ತು ಲಕ್ಷಕ್ಕೂ ಹೆಚ್ಚು ಜನ ಉಪಯೋಗಿಸುವ ಈ ಭಾಷೆಯು ಹೇಗೆ ಇವರ ಪ್ರಕಾರ ಮೃತವಾಯಿತೋ ಎಂಬುದನ್ನು ಇವರ ಅಧ್ಯಯನ ಹಾಗು ಚಿಂತನೆಯಿಂದ ತಿಳಿದುಕೊಳ್ಳಬೇಕಾಗಿದೆ. ಮತ್ತಷ್ಟು ಓದು
ವೈಚಾರಿಕತೆಯ ಹೆಸರಿನಲ್ಲಿ ವಸಾಹತುಪ್ರಜ್ಞೆಯನ್ನು ನೆಕ್ಕುತ್ತಿರುವ ಬುದ್ಧಿಜೀವಿಗಳು
– ವಿನಾಯಕ ಹಂಪಿಹೊಳಿ
ವಿಶ್ವವಾಣಿಯಲ್ಲಿ ೮-ಮೇ-೨೦೧೬ ರಂದು ಪ್ರಕಟವಾದ ಕೆ. ಎಸ್. ಭಗವಾನ್ ಅವರ “ಯಜ್ಞದ ಹೆಸರಿನಲ್ಲಿ ಮುಗ್ಧರನ್ನು ಮುಕ್ಕುತ್ತಿರುವ ದೈವಜ್ಞರು” ಎಂಬ ಲೇಖನವು ಎರಡು ಭ್ರಮೆಗಳ ಆಧಾರದ ಮೇಲೆ ನಿಂತಿದೆ. ಮೊದಲನೆಯದು ಮತ್ತೂರಿನಲ್ಲಿ ನಡೆದ ಯಾಗದಲ್ಲಿ ಪ್ರಾಣಿಬಲಿಯು ನಡೆದಿದೆ ಎಂಬ ಭ್ರಮೆ ಮತ್ತು ಎರಡನೆಯದು ಪಾಶ್ಚಿಮಾತ್ಯ ವಿದ್ವಾಂಸರು ವೈದಿಕ ಸಂಪ್ರದಾಯಗಳು ಹೊಂದಿರುವ ಸಾಹಿತ್ಯದ ಕುರಿತು ಕಟ್ಟಿಕೊಟ್ಟ ಚಿತ್ರಣವೇ ಸತ್ಯ ಎಂಬ ಭ್ರಮೆ. ಮತ್ತೂರಿನಲ್ಲಿ ಪ್ರಾಣಿಬಲಿ ನಡೆದಿಲ್ಲ ಎಂಬ ಪ್ರಾಥಮಿಕ ವರದಿಯನ್ನು ಸರ್ಕಾರೀ ಅಧಿಕಾರಿಗಳೇ ನೀಡಿರುವುದರಿಂದ ನೇರವಾಗಿ ಎರಡನೇ ಭ್ರಮೆಗೆ ಬರೋಣ. ಮತ್ತಷ್ಟು ಓದು
ಸುಳ್ಸುದ್ದಿ : “ಭ್ರಷ್ಟಾಚಾರ ಮುಕ್ತ ಭಾರತ” ಮಾಡುತ್ತೇವೆ ಎನ್ನುವವರಿಗೆ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ
ಪ್ರವೀಣ್ ಕುಮಾರ್, ಮಾವಿನಕಾಡು
ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ “ಭ್ರಷ್ಟಾಚಾರ ಮುಕ್ತ ಭಾರತ” ಎನ್ನುವ ಘೋಷಣೆ ಟ್ರೆಂಡ್ ಆಗಿ ಬೆಳೆದಿದ್ದು ಮೊನ್ನೆ ನಡೆದ ಪಂಚ ರಾಜ್ಯಗಳ ಚುನಾವಣೆಗಳ ಬಳಿಕ ಈ ಘೋಷಣೆ ಇನ್ನಷ್ಟು ಜೋರಾಗಿ ಕೇಳಿಬರುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು ನಮ್ಮ ‘ಸುಳ್ಸುದ್ದಿ’ ವಾಹಿನಿಯ ತಂಡ “ಭ್ರಷ್ಟಾಚಾರ ಮುಕ್ತ ಭಾರತ ಎನ್ನುವ ಘೋಷಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎನ್ನುವ ಪ್ರಶ್ನೆಯನ್ನು ಹಲವು ನಾಯಕರ ಬಳಿ ಕೇಳಿತು. ನಮ್ಮ ಪ್ರಶ್ನೆಗೆ ಉತ್ತರಿಸಿದ ಕೆಲವು ರಾಜಕೀಯ ನಾಯಕರ ಉತ್ತರಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ. ಮತ್ತಷ್ಟು ಓದು
ಭಾನುಮತಿ ನೀ ಸುಮತಿ.
– ನಾಗೇಶ ಮೈಸೂರು
ಮಹಾಭಾರತದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟು ನೇಪಥ್ಯಕ್ಕೆ ಸರಿಸಲ್ಪಟ್ಟ ಅನೇಕ ಸ್ತ್ರೀ ಪಾತ್ರಗಳಲ್ಲೊಂದು ಪ್ರಮುಖ ಪಾತ್ರ ಕೌರವೇಶ ದುರ್ಯೋಧನನ ಪತ್ನಿ ಭಾನುಮತಿಯದು. ಭೂಮಂಡಲವನ್ನಾಳುವ ಒಡೆಯನಾದ ಕೌರವೇಶನ ಸತಿಯಾದರೂ ಯಾಕೊ ಅವಳ ಉಲ್ಲೇಖ ಅಲ್ಲಿಲ್ಲಿ ತುಸು ಮೆಲುವಾಗಿ ಹೆಸರಿಸಿದ್ದು ಬಿಟ್ಟರೆ ಗಾಢವಾದ ವಿವರಣೆ ಕಾಣಿಸುವುದಿಲ್ಲ. ಬಹುಶಃ ಸುಯೋಧನನಿಗೆ ಆರೋಪಿಸಿದ ಋಣಾತ್ಮಕ, ಖಳನಾಯಕ ಪಟ್ಟದಿಂದಲೋ ಅಥವಾ ಚತುಷ್ಟಯದ ಚಟುವಟಿಕೆಗಳಿಗೆ ಕೊಟ್ಟಷ್ಟೇ ಗಮನ ಅವನ ಖಾಸಗಿ ಜೀವನಕ್ಕೆ ಕೊಡಲಿಲ್ಲವೆಂದೊ – ಒಟ್ಟಾರೆ ಭಾನುಮತಿ ಹೆಚ್ಚಾಗಿ ತೆರೆಮರೆಯ ಅಪ್ರತ್ಯಕ್ಷ ಪ್ರಭಾವ ಬೀರುವ ಪಾತ್ರವಾಗಷ್ಟೆ ಆಗಿ ಗೌಣವಾಗಿಬಿಡುತ್ತಾಳೆ. ಈಗಲೂ ಅಂತರ್ಜಾಲ ಹುಡುಕಿದರೆ ಅವಳ ಕುರಿತಾದ ವಿವರ ಸಿಗುವುದು ತೀರಾ ಅಲ್ಪವೇ. ಮತ್ತಷ್ಟು ಓದು
ತಲೆಕೆಟ್ಟ ಕಾನೂನುಗಳು ಮತ್ತು ಸ್ವಂತ ಬುದ್ಧಿಯಿಲ್ಲದ ಜೀವಿಗಳು
– ರಾಕೇಶ್ ಶೆಟ್ಟಿ
ಇತ್ತೀಚೆಗೆ ಮತ್ತೂರಿನಲ್ಲಿ ನಡೆದ ಸೋಮಯಾಗದಲ್ಲಿ ಸಂಕೇತಿ ಬ್ರಾಹ್ಮಣರು ಮೇಕೆ ಬಲಿ ಕೊಟ್ಟು ತಿಂದರಂತೆ, ಸೋಮರಸ ಕುಡಿದರಂತೆ ಅಂತ ಪ್ರಗತಿಪರರ ವಾಣಿಯೊಂದು ಸುಳ್ಳು ಸುದ್ದಿ ಬರೆಯಿತು. ಈ ಸುದ್ದಿಯಿಂದಾಗಿ ಟೌನ್ ಹಾಲ್ ಮುಂದೆ ನಿಂತು ದನ ತಿನ್ನುವುದನ್ನು ಬೆಂಬಲಿಸುವ ಕಬಾಬ್ ಕ್ರಾಂತಿಕಾರಿಗಳಿಗೂ ಹೊಟ್ಟೆನೋವು ಕಾಣಿಸಲಾರಂಭಿಸಿತು. ಇವರನ್ನು ಕರೆಯದೇ ತಿಂದರೂ ಎಂದು ಹೊಟ್ಟೆ ನೋವಾಗಿತ್ತೋ ಏನೋ. PhD ಮಹಾಶಯನೊಬ್ಬ ಬ್ರಾಹ್ಮಣರು ಮಾಂಸ ತಿನ್ನಲು ಶುರು ಮಾಡಿದರೆ ರೇಟ್ ಜಾಸ್ತಿಯಾಗುತ್ತೆ ಅಂತ ಅಳ್ತಾ ಇದ್ದ. ಎಂತೆಂತವರೆಲ್ಲ ವಿವಿಗಳಲ್ಲಿ ಪಾಠ ಮಾಡುತ್ತಾರಪ್ಪಾ ಅನಿಸಿತು. ಎಲ್ಲಾ (ಜಾತಿ/ಪಂಗಡದ) ಬ್ರಾಹ್ಮಣರು ಸಸ್ಯಹಾರಿಗಳು ಅನ್ನೋದು “ಮೂಢನಂಬಿಕೆ”. ಸಿದ್ರಾಮಯ್ಯನವರಿಗೆ ಹೇಳಿ ಮೌಢ್ಯ ನಿಷೇಧ ಕಾಯ್ದೆಯ ಮೂಲಕ ಈ ಮೂಢನಂಬಿಕೆಯನ್ನು ನಿಷೇಧಿಸಬೇಕು. ಕಾಶ್ಮೀರಿ ಪಂಡಿತರಿಗೆ ಶಿವರಾತ್ರಿ ಹಬ್ಬದಂದು ಮಾಂಸದಡುಗೆಯೇ ವಿಶೇಷವಾದದ್ದು. ಬಂಗಾಳಿ, ಓಡಿಶಾದ ಬ್ರಾಹ್ಮಣರೂ, ಗೌಡ ಸಾರಸ್ವತ ಬ್ರಾಹ್ಮಣರಲ್ಲೂ ಮಾಂಸಹಾರಿಗಳಿದ್ದಾರೆ. ಮತ್ತಷ್ಟು ಓದು
ಅರುಣಾ ಶಾನಭಾಗ: ಸ್ತ್ರೀ ಶೋಷಣೆಯ ಇನ್ನೊಂದು ಮುಖ
-ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ
(ಅರುಣಾ ಶಾನಭಾಗ ನಿಧನಹೊಂದಿ ಮೇ 18 ಕ್ಕೆ ಒಂದು ವರ್ಷವಾಯಿತು. ಅವರ ನೆನಪಿನಲ್ಲಿ ಈ ಲೇಖನ)
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೇ?
-ಜಿ.ಎಸ್.ಶಿವರುದ್ರಪ್ಪ
ಸ್ತ್ರೀ ಶೋಷಿತಳು ಎನ್ನುವುದಕ್ಕೆ ಇತಿಹಾಸವೇ ಬಹುದೊಡ್ಡ ಸಾಕ್ಷಿ. ಇಲ್ಲಿ ಕಾನೂನಿನ ನಿಯಮಗಳು ಎಷ್ಟೇ ಕಠಿಣವಾಗಿದ್ದರೂ ಮಹಿಳೆಯನ್ನು ಶೊಷಣೆಯ ಪರಧಿಯಿಂದ ಹೊರತರಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಶೋಷಣೆಗೆ ಒಳಗಾಗುವ ಮಹಿಳೆ ಮಾನ ಮತ್ತು ಗೌರವಕ್ಕೆ ಹೆದರಿ ಕಾನೂನಿನ ನೆರವು ಪಡೆಯಲು ಮುಂದಾಗುತ್ತಿಲ್ಲವಾದ್ದರಿಂದ ಮಹಿಳಾ ಶೋಷಣೆ ಎನ್ನುವುದು ಅನೂಚಾನವಾಗಿ ಮುಂದುವರೆಯುತ್ತಿದೆ. ಈ ಸಂದರ್ಭ ಮಾಧ್ಯಮಗಳ ಪಾತ್ರವನ್ನು ನಾವು ಒಂದಿಷ್ಟು ಶ್ಲಾಘಿಸಲೇ ಬೇಕು. ಸ್ತ್ರೀ ದೌರ್ಜನ್ಯದ ಸಂದರ್ಭಗಳಲ್ಲೆಲ್ಲ ಪತ್ರಿಕಾ ಮಾಧ್ಯಮ ಕಾನೂನಿಗೆ ತನ್ನ ನೆರವನ್ನು ನೀಡುತ್ತ ಬಂದಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಮಾಧ್ಯಮದಲ್ಲಿ ತಂತ್ರಜ್ಞಾನದ ಬಳಕೆಯ ಪರಿಣಾಮ ಮಹಿಳೆಯರ ಮೇಲಿನ ದೌರ್ಜನ್ಯ ಬಹುಬೇಗ ಜನರನ್ನು ಹೋಗಿ ತಲುಪುತ್ತಿದೆ. ಹೀಗೆ ಸುದ್ಧಿ ವಾಹಿನಿಗಳು ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಶೋಷಣೆಯನ್ನು ಜನರಿಗೆ ಒಯ್ದು ತಲುಪಿಸುತ್ತಿರುವ ಸಂದರ್ಭ ನನಗೆ ಅರುಣಾ ಶಾನಭಾಗ ಎನ್ನುವ ನತದೃಷ್ಟ ಹೆಣ್ಣುಮಗಳು ನೆನಪಾಗುತ್ತಾಳೆ. ಒಂದು ವೇಳೆ 1970 ರ ದಶಕದಲ್ಲಿ ಸುದ್ದಿವಾಹಿನಿಗಳು ಈಗಿನಂತೆ ಕಾರ್ಯನಿರ್ವಹಿಸುತ್ತಿದ್ದರೆ ಆ ಹತಭಾಗ್ಯಳಿಗೆ ನಿಜಕ್ಕೂ ನ್ಯಾಯ ದೊರೆಯುತ್ತಿತ್ತು. ಮತ್ತಷ್ಟು ಓದು
ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!
– ರೋಹಿತ್ ಚಕ್ರತೀರ್ಥ
ಉಪೇಂದ್ರರ “ಉಪ್ಪಿ 2” ಚಿತ್ರ ಬಿಡುಗಡೆಯಾದ ಮರುದಿನ ಕನ್ನಡ ಪತ್ರಿಕೆಯೊಂದರಲ್ಲಿ ಒಂದು ಲೇಖನ ಬಂದಿತ್ತು. ಅದರಲ್ಲಿ ಮೊದಲಿಂದ ಕೊನೆವರೆಗೆ ಇದ್ದದ್ದು ಉಪ್ಪಿಟ್ಟಿನ ವಿವರಣೆ! ಉಪ್ಪಿಟ್ಟನ್ನು ಜನ ಹೇಗೆ ಮಾಡುತ್ತಾರೆ; ಹೇಗೆ ತಿನ್ನುತ್ತಾರೆ; ಮನೆಗಳಲ್ಲಿ ಉಪ್ಪಿಟ್ಟು ಮಾಡುವಾಗ ಯಾರ್ಯಾರ ಭಾವನೆ ಹೇಗಿರುತ್ತದೆ ಎಂದು ಇಡೀ ಲೇಖನದ ತುಂಬ ಉಪ್ಪಿಟ್ಟಿನ ಮಹಿಮೆಯನ್ನೇ ವರ್ಣಿಸಲಾಗಿತ್ತು. ಕೊನೆಗೆ ಮಾತ್ರ “ಇಲ್ಲಿ ಉಪ್ಪಿಟ್ಟು ಎಂದಿರುವಲ್ಲೆಲ್ಲ ಉಪ್ಪಿ – 2 ಎಂದು ಓದಿಕೊಳ್ಳಿ” ಎಂಬ ಸೂಚನೆ ಕೊಟ್ಟಿದ್ದರು! ಬಹುಶಃ ಸಿನೆಮದ ಬಗ್ಗೆ ಒಂದು ಸಾಲನ್ನೂ ಆಡದೆ ಬರೆದ ಮೊದಲ ಸಿನೆಮ ವಿಮರ್ಶೆ ಅದೇ ಇರಬೇಕು! ವಾಸ್ತವದಲ್ಲಿ, ವಿಮರ್ಶಕರು ತಾನು ಉಪ್ಪಿಟ್ಟಿನ ಬಗ್ಗೆ ಏನೇನು ಹೇಳುತ್ತ ಹೋಗುತ್ತಿದ್ದೇನೋ ಅವೆಲ್ಲವೂ ಆ ಹೆಸರಲ್ಲಿ ಬಂದ ಸಿನೆಮಕ್ಕೂ ಅನ್ವಯವಾಗುತ್ತವೆ ಎನ್ನುವುದನ್ನು ಲೇಖನದ ಉದ್ದಕ್ಕೂ ಪರೋಕ್ಷವಾಗಿ ಹೇಳಿಬಿಟ್ಟಿದ್ದರು. “ಈ ಚಿತ್ರ ಕೂಡ ಉಪ್ಪಿಟ್ಟಿನಂತೆ; ಅವರವರ ಭಾವಕ್ಕೆ, ಅವರವರ ಭಕುತಿಗೆ” ಎನ್ನುವುದು ಅವರ ಲೇಖನದ ಆಶಯವಾಗಿತ್ತು. ಹೀಗೆ, ಉಪ್ಪಿಯ ಚಿತ್ರವಿಮರ್ಶೆಯಲ್ಲಿ ಉಪಮಾ, ಉಪಮಾನವಾಗಿ ಬಂದುಹೋಯಿತು! ಮತ್ತಷ್ಟು ಓದು