ವಿಷಯದ ವಿವರಗಳಿಗೆ ದಾಟಿರಿ

Archive for

5
ಜೂನ್

ಜೀವಮಾನದ ಸಿದ್ಧಿ ಮತ್ತು ಹದಿನೈದು ನಿಮಿಷಗಳ ಪ್ರಸಿದ್ಧಿ

– ರೋಹಿತ್ ಚಕ್ರತೀರ್ಥ
startup-pr-media-publicity1966ರಲ್ಲಿ ನಡೆದ ಸಣ್ಣ ಘಟನೆ ಅದು. ಆಂಡಿ ವಾರ್ಹಲ್ ಎಂಬ ಪ್ರಸಿದ್ಧ ಅಮೆರಿಕನ್ ಕಲಾವಿದನನ್ನು ನ್ಯಾಟ್ ಫಿಂಕಲ್‍ಸ್ಟೀನ್ ಎಂಬ ಫೋಟೋಗ್ರಾಫರ್ ಸೆರೆ ಹಿಡಿಯುತ್ತಿದ್ದಾಗ, ಆಂಡಿಯ ನೂರಾರು ಅಭಿಮಾನಿಗಳು ತಾವೂ ಕ್ಯಾಮೆರಾ ಫ್ರೇಮಿನಲ್ಲಿ ಬರಬೇಕೆಂದು ಆತನ ಹಿಂಬದಿಯಲ್ಲಿ ಮುಖ ತೂರಿಸುವುದೋ ಸುಮ್ಮಸುಮ್ಮನೆ ಅಡ್ಡ ಹಾಯುವುದೋ ಮಾಡುತ್ತಿದ್ದರಂತೆ. ಆಗ ಆಂಡಿ ನ್ಯಾಟ್‍ಗೆ “ನೋಡಯ್ಯ, ಪ್ರತಿಯೊಬ್ಬರೂ ಪ್ರಸಿದ್ಧರಾಗಲು ಬಯಸುತ್ತಿದ್ದಾರೆ” ಎಂದ. ನ್ಯಾಟ್, “ಹೌದು ಆಂಡಿ! ಹದಿನೈದು ನಿಮಿಷಗಳ ಪ್ರಸಿದ್ಧಿಗಾಗಿ!” ಎಂದುತ್ತರಿಸಿದ. ಹಾಗೆ ಅಕಸ್ಮಾತ್ತಾಗಿ ಹುಟ್ಟಿದ ಈ “ಹದಿನೈದು ನಿಮಿಷಗಳ ಪ್ರಸಿದ್ಧಿ” ಎಂಬ ಪಡೆನುಡಿ ಅಮೆರಿಕನ್ ಸಂಸ್ಕೃತಿಯಲ್ಲಿ ಹದಿನೈದು ನಿಮಿಷಗಳಲ್ಲ, ಹಲವು ವರ್ಷಗಳ ಕಾಲ ಪ್ರಸಿದ್ಧವಾಗಿ ಚಾಲ್ತಿಯಲ್ಲಿತ್ತು. ಜಗತ್ತಿನಲ್ಲಿ ಮೊದಲೆಲ್ಲ ದೇಶದ ರಾಜರಾಣಿಯರು ಮತ್ತು ಬೆರಳೆಣಿಕೆಯಷ್ಟು ಸಚಿವರನ್ನು ಬಿಟ್ಟರೆ ಬೇರಾರೂ ಪ್ರಸಿದ್ಧಿಯ ಉತ್ತುಂಗಕ್ಕೆ ಏರುತ್ತಿರಲಿಲ್ಲ. ರಾಜಕೀಯದ ಸೋಂಕಿಲ್ಲದೆ ಪ್ರಸಿದ್ಧಿಗೆ ಬರಬೇಕೆಂದರೆ ಒಂದೋ ಸಾಹಿತಿ/ಕಲಾವಿದನಾಗಬೇಕಿತ್ತು ಇಲ್ಲವೇ ವಿಜ್ಞಾನಿಯಾಗಬೇಕಿತ್ತು. ಎರಡೂ ಹತ್ತುಹಲವು ವರ್ಷಗಳ ಕಠಿಣ ಪರಿಶ್ರಮ, ತಪಸ್ಸುಗಳನ್ನು ಬೇಡುವ ಕೆಲಸಗಳು. ದಿನಬೆಳಗಾಗುವುದರಲ್ಲಿ ಪ್ರಸಿದ್ಧರಾದರು ಎಂದು ಹೇಳುವ ವ್ಯಕ್ತಿಗಳು ಕೂಡ ಅಂಥದೊಂದು ಪ್ರಸಿದ್ಧಿಗಾಗಿ ಹಲವು ವರ್ಷಗಳ ದಿನ-ರಾತ್ರಿಗಳನ್ನು ವ್ಯಯ ಮಾಡುತ್ತಿದ್ದರು. ಕಾಲ ಮುಂದುವರಿದಂತೆ, ಪತ್ರಿಕೆ ರೇಡಿಯೋ ಟಿವಿ ಸಿನೆಮ ಇತ್ಯಾದಿ ಹಲವು ಮಾಧ್ಯಮಗಳು ಬಂದವು. ಇಂಥ ಹಲವು ಆಯ್ಕೆಗಳು ಸುಲಭಸಾಧ್ಯವಾದ ಮೇಲೆ ಯೇನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ ಎಂಬ ಧ್ಯೇಯಮಾರ್ಗದಲ್ಲಿ ನಡೆಯುವವರೂ ಹೆಚ್ಚಾದರು. ಶಾಶ್ವತ ಸಿದ್ಧಿ ಬಯಸುವವರಿಗಿಂತ ಇಂದೋ ಈ ವಾರವೋ ತಪ್ಪಿದರೆ ಈ ಒಂದು ತಿಂಗಳು ಚಲಾವಣೆಯಲ್ಲಿದ್ದರೆ ಸಾಕು ಎಂಬ ಮನೋಭಾವದವರು ಹೆಚ್ಚಾದರು. ಇವೆಲ್ಲವನ್ನು ಮುಂಚಿತವಾಗಿ ಊಹಿಸಿಯೇ “ಮುಂದೊಂದು ದಿನ ಜನ ಕೇವಲ ಹದಿನೈದು ನಿಮಿಷಗಳ ಪ್ರಸಿದ್ಧಿಯನ್ನಷ್ಟೇ ಪಡೆಯುವ ಸಂದರ್ಭ ಬರಬಹುದು” ಎಂಬರ್ಥದಲ್ಲಿ ನ್ಯಾಟ್ ಆ ಮಾತುಗಳನ್ನು ಹೇಳಿದ್ದ. ಮತ್ತಷ್ಟು ಓದು »