ವಿಷಯದ ವಿವರಗಳಿಗೆ ದಾಟಿರಿ

Archive for

12
ಜೂನ್

ಯಾಕ್ ಯಾಕ್ ಚಿಕ್ಕಪ್ಪ, ಕಣ್‍ಕಣ್ ಬಿಡ್ತೀಯ?

Untitledಗೊತ್ತಾಯ್ತಾ ಗೊತ್ತಾಯ್ತಾ ಗೊತ್ತಾಯ್ತಾ
ಎಂದರೆ ಗೊತ್ತಾದ್ದನ್ನು ಗೊತ್ತಾಯ್ತು ಅನ್ನಬೇಕು
ಗೊತ್ತಾಗದ್ದನ್ನು ಗೊತ್ತಾಗಿಲ್ಲ ಅನ್ನಬೇಕು
ಗೊತ್ತಾಗದ್ದನ್ನೂ ಗೊತ್ತಾಯ್ತು ಅಂದರೆ
ಗೊತ್ತಾಗದೇ ಹೋದೀತು ಗೊತ್ತಾಯ್ತಾ?

-ಅಂತ ನಾವು ಚಿಕ್ಕವರಿರುವಾಗ ಒಬ್ಬರಿಗೊಬ್ಬರು ಹೇಳಿಕೊಂಡು, ಈಗ ನೀನು ಹೇಳು ನೋಡೋಣ ಎಂದು ಸವಾಲು ಹಾಕಿಕೊಂಡು, ಹಾಕಿಸಿಕೊಂಡು, ಹೇಳಿ, ನಾಲಗೆ ತೊದಲಿ ಬ್ಬೆಬ್ಬೆಬ್ಬೆ ಎಂದು ನಕ್ಕು-ನಗಿಸುವ ಆಟವಾಡುತ್ತಿದ್ದೆವು. ಹಾಗೆಯೇ ಕಾಗೆಪುಕ್ಕ ಗುಬ್ಬಿಪುಕ್ಕ ಎಂದು ವೇಗವಾಗಿ ಹೇಳಲು ಹೋದರೆ ಅದು ಕಕ್ಕಪಕ್ಕ ಎಂದು ಬದಲಾಗುವ ಪರಿಗೆ ಕಕ್ಕಾಬಿಕ್ಕಿಯಾಗಿ ನಿಲ್ಲುತ್ತಿದ್ದೆವು. “ಯಾಕ್ ಯಾಕ್ ಚಿಕ್ಕಪ್ಪ ಕಣ್‍ಕಣ್ ಬಿಡ್ತೀಯ?” ಎಂದು ಹೇಳಲು ಹೋದರೆ ಚಿಕ್ಕಪ್ಪನ ಲಿಂಗ ಬದಲಾಗಿ ಚಿಪ್ಪಕ್ಕ ಎದುರು ನಿಲ್ಲುತ್ತಿದ್ದಳು. “ಬಂಕಾಪುರದ ಕೆಂಪು ಕುಂಕುಮ”ವನ್ನೂ ಅಷ್ಟೇ, ಜೋರಾಗಿ ಹಾರಿಸಹೋದರೆ ಅದು “ಕೆಂಕು ಪುಂಕಮ”ವಾಗಿ ಬದಲಾಗಿ ನಮಗೆ ಅಳ್ಳು ಹಿಡಿಸುವಷ್ಟು ನಗು ತರಿಸುತ್ತಿತ್ತು. “ಅವಳರಳಳೆದ ಕೊಳಗದಲಿ ಇವಳರಳಳೆದ”ದ್ದನ್ನು ನಿಧಾನವಾಗಿ ಹೇಳಿದೆವೋ ಬದುಕಿಕೊಂಡೆವು. ಜೋರಾಗಿ ಅಳೆಯಹೋದರೆ ಗಂಟಲಲ್ಲಿ ಬರಿಯ ಗೊಳಗೊಳಗಳೇ ನಿಂತು ಸುತ್ತಲಿನವರು ಗೊಳ್ಳೆಂದು ನಗುವಂತಾಗುತ್ತಿತ್ತು. ಅರಳು ಮತ್ತು ಕೊಳಗಗಳು ಮಾಯವಾಗಿರುವ ಈ ಕಾಲದ ಮಕ್ಕಳಿಗೆ ಇದೇನು ಗ್ರೀಕೋ ಫ್ರೆಂಚೋ ಎಂದೂ ಅನುಮಾನ ಬಂದೀತು! ಮತ್ತಷ್ಟು ಓದು »