ದೇಹದಲ್ಲಿ ಏಳು ಗುಂಡುಗಳನ್ನು ಹೊತ್ತಿದ್ದರೂ ‘ಕತ್ತೆ ಒದೀತು’ ಎಂದು ನಕ್ಕ ಮಿಲಿಟರಿ ಕ್ರಾಸ್ ವೀರ ಸ್ಯಾಮ್ ಮಾಣಿಕ್ ಷಾ
– ಸಂತೋಷ್ ತಮ್ಮಯ್ಯ
೧೯೭೧ರ ಎಪ್ರಿಲ್ ನ ಒಂದು ತಿಂಗಳು. ಪ್ರಧಾನಮಂತ್ರಿಗಳು ಅಂದು ಕಂಡಾಪಟ್ಟೆ ತಲೆಬಿಸಿಯಲ್ಲಿದ್ದರು. ಸಿಟ್ಟಾಗಿದ್ದರು. ಏಕೆಂದರೆ ಪ.ಬಂಗಾಳ, ತ್ರಿಪುರಾ ಮತ್ತು ಅಸ್ಸಾಂಗಳಲ್ಲಿ ಪೂರ್ವ ಪಾಕಿಸ್ಥಾನದಿಂದ ನಿರಾಶ್ರಿತರ ಪ್ರವಾಹವೇ ಹರಿಯಲಾರಂಭಿಸಿತ್ತು. ಪೂರ್ವ ಪಾಕಿಸ್ಥಾನವೆಂಬ ಕುರದ ವ್ರಣ ಭಾರತಕ್ಕೂ ವ್ಯಾಪಿಸುತ್ತಾ ಬರುತ್ತಿತ್ತು. ಪ್ರಧಾನಮಂತ್ರಿಗಳು ಮಾಡಬಹುದಾದವುಗಳನ್ನೆಲ್ಲಾ ಮಾಡಿಯಾಗಿತ್ತು. ನಿರಾಶ್ರಿತರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಕೂಡಾ ಎತ್ತಿಕೊಂಡುಹೋದರು. ಎಲ್ಲರೂ ಇದು “ಭಾರತ ಮತ್ತು ಪಾಕಿಸ್ಥಾನಗಳ ಆಂತರಿಕ ಸಂಗತಿ” ಎಂದು ತಮಾಷೆ ನೋಡಲು ಕೂತಿತು. ಸಮಸ್ಯೆಯನ್ನುನಿಭಾಯಿಸುವ ಕೊನೆಯ ಪ್ರಯತ್ನ ಎಂಬಂತೆ ಪ್ರಧಾನಮಂತ್ರಿಗಳು ಕ್ಯಾಬಿನೆಟ್ ಮತ್ತು ಹಿರಿಯ ಮಿಲಿಟರಿ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಭೆಯನ್ನು ಅಂದು ಕರೆದಿದ್ದರು. ಮತ್ತಷ್ಟು ಓದು