ವಿಷಯದ ವಿವರಗಳಿಗೆ ದಾಟಿರಿ

Archive for

2
ಆಗಸ್ಟ್

ಕೀಳರಿಮೆಯನ್ನೂ ಕಥಾವಸ್ತುವಾಗಿ ಬಳಸಿಕೊಂಡ ಅಕ್ಷರ ಮಾಂತ್ರಿಕನೀತ……!!!

ಗುರುರಾಜ್ ಕೊಡ್ಕಣಿ, ಯಲ್ಲಾಪುರ

stock-photo-taganrog-russia-june-sculpture-illustrates-a-short-story-fat-and-thin-by-anton-347343851ಅದು ಇಬ್ಬರು ಸ್ನೇಹಿತರು ತುಂಬ ವರ್ಷಗಳ ನಂತರ ಸೇರಿದ ಕ್ಷಣ. ಸ್ಥೂಲದೇಹಿ ವ್ಯಕ್ತಿಯೊಬ್ಬ, ತನ್ನ ಕೃಶಕಾಯದ ಸ್ನೇಹಿತನನ್ನು ನಿಕೋಲಿವಸ್ಕಿ ಸ್ಟೇಷನ್ನಿನಲ್ಲಿ ಸಂಧಿಸಿದ ಸಂತಸಮಯ ಗಳಿಗೆಯದು. ಸ್ಥೂಲಕಾಯದ ವ್ಯಕ್ತಿಯ ತುಟಿಗಳು ಕೆಂಪಗೆ ಕಳಿತ ಚೆರ್ರಿಯ ಹಣ್ಣುಗಳಂತೆ ಹೊಳೆಯುತ್ತಿದ್ದರೆ, ಆತನ ಬಾಯಿಯಿಂದ ಹೊಮ್ಮುತ್ತಿದ್ದ ವೈನ್ ಮತ್ತು ಕಿತ್ತಳೆ ಹಣ್ಣಿನ ಗಂಧ ಆತ ಅದಾಗಲೇ ತನ್ನ ಊಟವನ್ನು ಮುಗಿಸಿದ್ದನ್ನೆನ್ನುವುದಕ್ಕೆ ಸಾಕ್ಷಿಯಾಗಿದ್ದವು. ನಿಧಾನವಾಗಿ ಹಳಿಗಳ ಮೇಲೆ ತೆವಳುತ್ತಿದ್ದ ರೈಲಿನಿಂದ ಪ್ಲಾಟಿಫಾರ್ಮಿನ ಮೇಲೆ ಕುಪ್ಪಳಿಸಿದ್ದ ಕೃಶದೇಹಿ ವ್ಯಕ್ತಿಯ ಎರಡೂ ಕೈಗಳಲ್ಲಿ ಬಟ್ಟೆ ತುಂಬಿದ ಸೂಟ್ ಕೇಸು ಮತ್ತೀತರ ಸರಂಜಾಮುಗಳಿದ್ದವು. ಅವನ ಅಂಗಿಯಿಂದ ಹೊಮ್ಮುತ್ತಿದ್ದ ತಿಳಿಯಾದ ಕಂಪು ಆತ ರೈಲಿನಲ್ಲಿಯೇ ಮಾಂಸದ ತುಂಡುಗಳ ಜೊತೆಗೆ ಕಾಫಿಯನ್ನು ಸೇವಿಸಿದ್ದನೆನ್ನುವುದರ ಪುರಾವೆಯಾಗಿದ್ದವು. ಅವನ ಜೊತೆಗಿದ್ದ ತೆಳ್ಳಗಿನ ಮೈಕಟ್ಟಿನ, ನೀಳ ಗದ್ದದ ಅವನ ಮಡದಿ ಮತ್ತು ಒಕ್ಕಣ್ಣನಂತೇ ಕಾಣುತ್ತಿದ್ದ ಬಾಲಕ ರೈಲಿನಿಂದಿಳಿದು ಕೃಶಕಾಯದ ವ್ಯಕ್ತಿಯನ್ನೇ ಹಿಂಬಾಲಿಸತೊಡಗಿದರು. ಮತ್ತಷ್ಟು ಓದು »