ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 4:
ಖುದಿರಾಮ್ ಬೋಸ್ (ಡಿಸೆಂಬರ್ 3, 1889 – ಆಗಸ್ಟ್ 11, 1908)
– ರಾಮಚಂದ್ರ ಹೆಗಡೆ
ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕ ವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್. ‘ಕಿಂಗ್ಸ್ ಫೊರ್ಡ್’ ಎಂಬ ಬ್ರಿಟೀಷ್ ನ್ಯಾಯಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ ಆನಂದವನ್ನು ಅನುಭವಿಸುತ್ತಿದ್ದ. ಭಾರತೀಯರ ಮೇಲೆ ಆತನ ದೌರ್ಜನ್ಯ ಮಿತಿಮೀರಿತ್ತು. ಈತನ ಕ್ರೌರ್ಯಕ್ಕೆ ಕೊನೆಹಾಡಬೇಕೆಂದು ನಿರ್ಧರಿಸಿದ ಖುದಿರಾಮ್ ಕಿಂಗ್ಸ್ ಫೊರ್ಡ್ ನನ್ನ ಕೊಲ್ಲುವ ಯತ್ನ ಮಾಡಿದ. ಆದರೆ ಕಿಂಗ್ಸ್ ಫೊರ್ಡ್ ಬಚಾವಾದ. ಆದರೂ ಆ ಪ್ರಯತ್ನದಲ್ಲಿ ಈ ಪ್ರಖರ ದೇಶಭಕ್ತನಿಗೆ ಗಲ್ಲು ಶಿಕ್ಷೆಯಾಯ್ತು. Read more