ವಿಷಯದ ವಿವರಗಳಿಗೆ ದಾಟಿರಿ

Archive for

31
ಆಗಸ್ಟ್

ಕಾಶ್ಮೀರದ ಐತಿಹಾಸಿಕ ಸತ್ಯಗಳು : ನಿಲುಮೆ ವಿಚಾರ ಸಂಕಿರಣ

– ಹರೀಶ್ ಆತ್ರೇಯ

14088692_10154596775090649_5386569408904041755_nಕಾಶ್ಮೀರ ವಿವಾದಿತ ಪ್ರದೇಶವೇಕಾಗುತ್ತಿದೆ ಮತ್ತು ಅಲ್ಲಿನ ನಿಜ ಸ್ವರೂಪವೇನು ಎಂಬುದನ್ನು ತಿಳಿಯಲು ನಿಲುಮೆ ತಂಡ ಆಯೋಜಿಸಿದ ಕಾಶ್ಮೀರದ ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು ಎಂಬ ಸಂವಾದ ಕಾರ್ಯಕ್ರಮದಲ್ಲಿನ ಪ್ರೊ. ಪ್ರೇಮಶೇಖರ್ ರವರ ಕೆಲವು ವಿಚಾರಗಳನ್ನು ಹಂಚಿಕೊಳ್ಳುತಿದ್ದೇನೆ..

ಭಾರತದ ವಿಭಜನೆಯಾದಾಗ ಬ್ರಿಟಿಷರು ತಮ್ಮ ನೇರ ಆಡಳಿತಕ್ಕೆ ಒಳಪಟ್ಟ ರಾಜ್ಯಗಳನ್ನು ಭಾರತವೆಂದು ಮತ್ತು ಉಳಿದ ದೇಶೀಯ ಸ್ವತಂತ್ರ್ಯ ಪ್ರಾಂತ್ಯಗಳನ್ನು ಅವುಗಳ ಇಚ್ಚೆಯಂತೆ ಭಾರತದಲ್ಲಾಗಲೀ ಅಥವಾ ಪಾಕೀಸ್ತಾನದಲ್ಲಿಯಾಗಲೀ ಸೇರುವಂತೆ ಹೇಳಲಾಯ್ತು. ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ ಪ್ರಕಾರ “British paramount should relapse on the midnight of 14 Aug 1947. ಎಂದರೆ ಸುಮಾರು ಆರುನೂರು ಸ್ಥಳೀಯ ಸಂಸ್ಥಾನಗಳು ಬ್ರಿಟಿಷ್ ಕಾಲನಿಗಳಾಗುವದಕ್ಕೂ ಮುಂಚೆ ಇದ್ದ ರೀತಿಯಲ್ಲಿ ಸ್ವತಂತ್ರ್ಯವಾಗಿರಬಹುದು. ಅಲ್ಲಿನ ಸ್ಥಳೀಯ ನಾಯಕನ (ಆತ ನವಾಬನಾಗಿರಬಹುದು ಅಥವ ಅರಸನಾಗಿರಬಹುದು) ಆತನ ಆಜ್ಞೆ ಅಥವಾ ನಡೆಯಂತೆ ಆ ಸಂಸ್ಥಾನಗಳು ಪಾಕೀಸ್ತಾನದೊಳಗೆ ಅಥವಾ ಭಾರತದೊಳಗೆ ವಿಲೀನವಾಗಬಹುದು. ಅದರ ಜೊತೆಗೆ ಮತ್ತೂ ಒಂದು ಸಲಹೆಯನ್ನು ಬ್ರಿಟಿಷರು ಕೊಡುತ್ತಾರೆ ಅದೇನೆ೦ದರೆ ವಿಲೀನಗೊಳಿಸಿಕೊಳ್ಳುವಾಗ ಆ ಪ್ರಾಂತ್ಯದ ಭೌಗೋಳಿಕ ನೆಲೆ ಮತ್ತು ಪ್ರಜೆಗಳ ಧರ್ಮವನ್ನು ಪರಿಗಣಿಸಿ ಎಂಬುದಾಗಿತ್ತು. ಇದನ್ನು ಕೇಳಿದ ಕಾಶ್ಮೀರ ಮತ್ತು ತಿರುವನಂತಪುರಂ ಸಂಸ್ಥಾನಗಳು ಸ್ವತಂತ್ರ್ಯವಾಗುವ ಯೋಚನೆಯನ್ನು ಮಾಡಿದವು. ಅಂದರೆ ಯಾರ ಆಡಳಿತಕ್ಕೂ ಒಳಪಡದೆ (ಅತ್ತ ಪಾಕೀಸ್ತಾನವೂ ಅಲ್ಲ ಇತ್ತ ಭಾರತವೂ ಅಲ್ಲ) ಸ್ವತಂತ್ರ್ಯವಾಗಿ ರಾಜ್ಯಭಾರ ಮಾಡುವುದು. ಇದು ಪಾಕೀಸ್ತಾನಕ್ಕೆ ಸಮ್ಮತವಾಗಲಿಲ್ಲ. ಏಕೆಂದರೆ PAKISTAN ನಲ್ಲಿನ K ಕಾಶ್ಮೀರವನ್ನ ಸೂಚಿಸುತ್ತೆ. PAKISTAN ಎನ್ನುವುದು ಒಂದು ಪೂರ್ಣ ಹೆಸರಲ್ಲ, ಹಲವು ಸ್ಥಳಗಳ ಅಕ್ಷರಗಳನ್ನು ಸೇರಿಸಿದ ಸಂಕ್ಷಿಪ್ತ ರೂಪ. ಇದನ್ನು ಕೊಡಮಾಡಿದವನು ಲಂಡನ್ನಿನ ವಿದ್ಯಾರ್ಥಿಯಾಗಿದ್ದ  ಚೌದರಿ ರೆಹಮತ್ ಆಲಿ ಮತ್ತು ಪ್ರಕಟಿಸಿದ್ದು ೨೮ ಜನವರಿ ೧೯೩೩ರಂದು ನೌ ಆರ್ ನೆವರ್ ಎಂಬ ಪತ್ರಿಕೆಯಲ್ಲಿ, ಆತನ ಪ್ರಕಾರ ವಾಯುವ್ಯ ಭಾರತವು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಭಿನ್ನವಾಗಿದೆ ಮತ್ತು ಧಾರ್ಮಿಕವಾಗಿ ಮಧ್ಯ ಏಷಿಯಾಕ್ಕೆ ಮತ್ತು ಪಶ್ಚಿಮ ಏಷಿಯ ಹತ್ತಿರವಾಗಿದೆ, ಆದ ಕಾರಣ ಈ ಭಾಗವನ್ನು ಭಾರತದಿಂದ ಪ್ರತ್ಯೇಕಿಸಿ ಮಧ್ಯ ಏಷಿಯಾದೊಂದಿಗೆ ಸೇರಿಸಿ ಹೊಸತೊಂದು ರಾಷ್ಟ್ರವನ್ನು ಮಾಡಬೇಕು ಎಂಬುದು. ಆತ ಸೇರಿಸಿದ ಪ್ರಾಂತ್ಯಗಳು ಈ ಕೆಳಗಿನಂತಿವೆ. Read more »

Advertisements
31
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ– 15:
ವಾಸುದೇವ ಬಲವಂತ ಫಡಕೆ:
– ರಾಮಚಂದ್ರ ಹೆಗಡೆ

vasudev-balvant-phadke-stamp1೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ತಣ್ಣಗಾಗಿ ಹೋಗಿದೆ, ಭಾರತೀಯರು ತಮ್ಮ ಗುಲಾಮರಾಗಿದ್ದಾರೆ ಎಂದೇ ಭಾವಿಸಿದ್ದ ಬ್ರಿಟಿಷರಿಗೆ ಭಾರತೀಯರ ಕಿಚ್ಚು ಇನ್ನೂ ಆರಿಲ್ಲ ಎಂದು ತೋರಿಸಿದ ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ. ಆತನ ಮನೆಯಲ್ಲಿ ಎಲ್ಲವೂ ಇತ್ತು – ಹಣ , ಸುಖ, ಶಾಂತಿ, ನೆಮ್ಮದಿ. ಆದರೆ ದೇಶದಲ್ಲಿ ಇವ್ಯಾವುದೂ ಇಲ್ಲ ಎಂಬ ಕಾರಣಕ್ಕೆ ಆತ ಕ್ರಾಂತಿಗಿಳಿದ. ಚಿಕ್ಕಂದಿನಿಂದಲೇ ಅಜ್ಜ ಹಾಗೂ ತಂದೆಯಿಂದ ದೇಶಭಕ್ತಿಯ ಕಥೆಗಳನ್ನು ಕೇಳುತ್ತಾ ಬೆಳೆದ ವಾಸುದೇವನಿಗೆ ಹೇಗಾದರೂ ಮಾಡಿ ದೇಶವನ್ನು ದಾಸ್ಯಮುಕ್ತಗೊಳಿಸಬೇಕು ಎಂಬ ಹಂಬಲವಿತ್ತು. 1859 ರಲ್ಲಿ ತನ್ನ ಕಾಲೇಜು ಶಿಕ್ಷಣದ ನಂತರ ಆತ ಪುಣೆಯ ಮಿಲಿಟರಿ ಫೈನಾನ್ಸ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಬ್ರಿಟಿಷ್ ಸರ್ಕಾರದ ಕೆಲಸವಾದರೂ ಒಳಗೊಳಗೇ ಆತನ ಸ್ವಾತಂತ್ರ್ಯದ ಆಸೆ ಬಲಗೊಳ್ಳುತ್ತಲೇ ಇತ್ತು. ಅದೇ ಸಮಯಕ್ಕೆ ವಾಸುದೇವನ ತಾಯಿ ಅನಾರೋಗ್ಯ ಪೀಡಿತರಾದಾಗ ಆತ ಕೆಲಸಕ್ಕೆ ರಜೆ ಕೇಳಿದ, ಬ್ರಿಟೀಷ್ ಅಧಿಕಾರಿಗಳ ಕೃಪಾಕಟಾಕ್ಷದಿಂದ ರಜೆ ದೊರೆಯುವ ವೇಳೆಗೆ ವಾಸುದೇವನ ತಾಯಿ ತೀರಿಕೊಂಡಿದ್ದರು. ತನ್ನ ತಾಯಿಯ ಅಂತಿಮ ದರ್ಶನಕ್ಕೂ ಅವಕಾಶ ನೀಡದ ಬ್ರಿಟಿಷರ ವಿರುದ್ಧ ಸಿಡಿದೆದ್ದ ವಾಸುದೇವ ‘ಇವರು ನನ್ನ ತಾಯಷ್ಟೇ ಅಲ್ಲ, ಭಾರತಮಾತೆಯಿಂದಲೂ ನಮ್ಮನ್ನು ದೂರಮಾಡುತ್ತಿದ್ದಾರೆ’ ಎಂಬ ಭಾವದಿಂದ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದ. ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತೀಯರ ಎಲ್ಲ ಕಷ್ಟಗಳಿಗೆ, ಸಂಕಟಗಳಿಗೆ ಮೂಲ ಕಾರಣ ಗುಲಾಮಗಿರಿಯ ಜೊತೆಗೆ ಶಿಕ್ಷಣದ ಕೊರತೆ ಎಂಬುದನ್ನು ಗುರುತಿಸಿ “ಪೂಣಾ ನೇಟಿವ್ ಇನಿಸ್ಟಿಟ್ಯೂಷನ್ ” ಎಂಬ ವಿದ್ಯಾಕೇಂದ್ರವನ್ನು ಸ್ಥಾಪಿಸಿದ. ಇದೇ ಮುಂದೆ ‘ಮಹಾರಾಷ್ಟ್ರ ಎಜ್ಯುಕೇಷನ್ ಸೊಸೈಟಿ’ ಎಂಬ ಹೆಸರಿನಿಂದ ಭವ್ಯ ಸ್ವರೂಪ ತಾಳಿತು. Read more »