ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 5 : ಮೈಲಾರ ಮಹದೇವ
– ರಾಮಚಂದ್ರ ಹೆಗಡೆ
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲಿನಿಂದಲೇ ಆರಂಭಿಸಿ, ಕ್ವಿಟ್ ಇಂಡಿಯಾ ಚಳುವಳಿ, ನಂತರ ಬ್ರಿಟಿಷರು ಭಾರತ ಬಿಟ್ಟು ತೊಲಗುವವರೆಗೆ ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ವಿವಿಧ ರೀತಿಯ ಹೋರಾಟಗಳು ನಡೆದವು. ಹೋರಾಟದ ಕಿಚ್ಚು, ಕ್ರಾಂತಿಯ ಕಿಡಿ ವಿವಿಧ ರೂಪದಲ್ಲಿ ಪ್ರಕಟಗೊಂಡು ಸಾವಿರಾರು ಮಂದಿ ಭಾರತ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದರು. ಹಾಗೆ ಬ್ರಿಟಿಷರ ಗುಂಡಿಗೆ ಎದೆಕೊಟ್ಟು ವೀರಸ್ವರ್ಗವೇರಿದ ಅಪ್ರತಿಮ ಬಲಿದಾನಿಗಳಲ್ಲಿ ಹಾವೇರಿ ಜಿಲ್ಲೆ ಮೋಟೆಬೆನ್ನೂರಿನ ಮೈಲಾರ ಮಹದೇವ ಅವರ ಪಾತ್ರ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ. ಸ್ವಾತಂತ್ರ್ಯಾಂದೋಲನದಲ್ಲಿ ಮಹದೇವರ ತಾಯಿ ಬಸಮ್ಮ ಕೂಡಾ ಸೆರೆಮನೆವಾಸ ಅನುಭವಿಸಿದವರು. ಮತ್ತಷ್ಟು ಓದು
ವೇದಾಂತದ ಕಥೆಗಳ ಆಧಾರದಲ್ಲಿ ಇತಿಹಾಸ ಶಬ್ದದತ್ತ ಕಿರುನೋಟ
– ವಿನಾಯಕ ಹಂಪಿಹೊಳಿ
ಹಿಸ್ಟರಿ ಎನ್ನುವ ಶಬ್ದದ ಸ್ವರೂಪವು ಬೈಬಲ್ಲಿನ ಥಿಯಾಲಜಿಯಲ್ಲಿ ನಮಗೆ ಕಾಣಸಿಗುತ್ತದೆ. ಪ್ರತಿಯೊಂದು ಸಮಾಜಕ್ಕೂ ಗಾಡ್ ತನ್ನ ಸಂದೇಶಗಳನ್ನು ಪ್ರವಾದಿಗಳ ಮೂಲಕ ತಲುಪಿಸಿರುತ್ತಾನೆ. ಇದು ಒಂದಾನೊಂದು ಕಾಲದಲ್ಲಿ ಆ ಸಮಾಜದಲ್ಲಿ ನಡೆದಿರುವ ಘಟನೆಯಾಗಿರುತ್ತದೆ. ಆ ಸಮಾಜದ ಜನರನ್ನು ಅರಿತುಕೊಳ್ಳಲು ಹಾಗೂ ಅಲ್ಲಿನ ಜನರು ಆಚರಿಸುವ ಪದ್ಧತಿಗಳಲ್ಲಿ ರಿಲಿಜಿಯಸ್ ಯಾವುದು ಎಂದು ಗುರುತಿಸಿಕೊಳ್ಳಲು ಈ ಸಂದೇಶಗಳು ಅಗತ್ಯ. ಹೀಗಾಗಿ ಸಮುದಾಯವೊಂದನ್ನು ಅಧ್ಯಯನ ಮಾಡುವಾಗ ಆ ಸಮುದಾಯದಲ್ಲಿ ಗಾಡ್ ಯಾವಾಗ ಮಧ್ಯಪ್ರವೇಶಿಸಿ ತನ್ನ ಸಂದೇಶಗಳನ್ನು ನೀಡಿದ್ದ ಎನ್ನುವುದನ್ನು ಕಂಡುಕೊಳ್ಳುವದು ಅಗತ್ಯ. ಹಿಸ್ಟರಿ ಎನ್ನುವ ಅಧ್ಯಯನ ಕ್ರಮವು ಈ ಪ್ರಕ್ರಿಯೆಯಿಂದಲೇ ಹುಟ್ಟಿರುತ್ತದೆ. ಲಭ್ಯವಿರುವ ಶಾಸನಗಳ ಆಧಾರದಲ್ಲಿ ಸಮಂಜಸವಾದ ವಿವರಣೆಯೊಂದನ್ನು ಕಟ್ಟಿಕೊಡುವುದೇ ಹಿಸ್ಟರಿಯ ಧ್ಯೇಯ. ಹಿಸ್ಟರಿ ಶಬ್ದಕ್ಕೆ ಪರ್ಯಾಯವಾಗಿ ನಾವು ಇತಿಹಾಸ ಎಂಬ ಶಬ್ದವನ್ನು ಬಳಸುತ್ತ ಬಂದಿದ್ದೇವೆ. ಆದರೆ ವಸಾಹತು ಪ್ರಜ್ಞೆಗೂ ಪೂರ್ವದಲ್ಲಿ ಇತಿಹಾಸ ಎಂಬ ಶಬ್ದವು ಏನನ್ನು ಪ್ರತಿನಿಧಿಸುತ್ತಿತ್ತು? ಸದ್ಯಕ್ಕೆ ಉಪನಿಷತ್ತುಗಳ ಕಥೆ ಮತ್ತು ಅದಕ್ಕೆ ಶಂಕರಾಚಾರ್ಯರು ಬರೆದ ಭಾಷ್ಯಗಳನ್ನು ಆಧಾರವಾಗಿಟ್ಟುಕೊಂಡು ಚರ್ಚಿಸೋಣ. ಮತ್ತಷ್ಟು ಓದು