ವಿಷಯದ ವಿವರಗಳಿಗೆ ದಾಟಿರಿ

Archive for

29
ಸೆಪ್ಟೆಂ

ಸರ್ಜಿಕಲ್ ಆಪರೇಶನ್

– ವಿನಾಯಕ ಹಂಪಿಹೊಳಿ

article-2384428-0050b8c600000258-96_634x449ಸರ್ಜರಿ ಎಂದರೆ ಶಸ್ತ್ರಚಿಕಿತ್ಸೆ. ದೇಹದ ಒಂದು ಭಾಗಕ್ಕೆ ಚಿಕಿತ್ಸೆ ಅಗತ್ಯವಾದಲ್ಲಿ ಅಲ್ಲಷ್ಟೇ ದೇಹವನ್ನು ಕೊಯ್ಯುವಂತೆ, ಸೈನಿಕ ಕಾರ್ಯಾಚರಣೆಯಲ್ಲಿಯೂ ಒಂದಾನೊಂದು ಪ್ರದೇಶದಲ್ಲಷ್ಟೇ ನಡೆಸುವ ಸೀಮಿತ ಕಾರ್ಯಾಚರಣೆಯೇ ಸರ್ಜಿಕಲ್ ಆಪರೇಶನ್. ಅಮೇರಿಕದ ಸೈನ್ಯ ಒಸಾಮಾ ಬಿನ್ ಲಾಡೆನ್ ವಾಸವಾಗಿರುವ ಸ್ಥಳದ ಮಾಹಿತಿ ತಿಳಿದಾಗ ಹೀಗೆಯೇ ದಾಳಿ ಮಾಡಿತ್ತು. ಈ ಹಿಂದೆ ಇರಾಕಿನಲ್ಲಿ ನ್ಯೂಕ್ಲಿಯರ್ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಸಿಕ್ಕಾಗ ಇಸ್ರೇಲ್ ದೇಶವು ಒಪೆರಾ ಕಾರ್ಯಾಚರಣೆಯನ್ನು ರೂಪಿಸಿ, ತನ್ನ ವಾಯುಸೇನೆಯನ್ನು ಉಪಯೋಗಿಸಿಕೊಂಡು ಆ ನ್ಯೂಕ್ಲಿಯರ್ ರಿಯಾಕ್ಟರನ್ನು ಧ್ವಂಸ ಮಾಡಿ ಬಂದಿತ್ತು. ಇಸ್ರೇಲಿನ ವಿಮಾನವೊಂದನ್ನು ಅಪಹರಿಸಿ ದೂರದ ಎಂಟೆಬ್ಬೆಯಲ್ಲಿ ಇಳಿಸಿದಾಗ ಆಪರೇಶನ್ ಥಂಡರ್ಬೋಲ್ಟ್ ಯೋಜಿಸಿ ಏಕಾಏಕಿ ಅಲ್ಲಿನ ಭಯೋತ್ಪಾದಕರ ಮೇಲೆ ದಾಳಿ ಮಾಡಿ ಬಂಧಿತರನ್ನು ಬಿಡುಗಡೆಗೊಳಿಸಿತು. ಮತ್ತಷ್ಟು ಓದು »

29
ಸೆಪ್ಟೆಂ

ಪ್ರೇತದ ಆತ್ಮ ಚರಿತೆ! (ಭಾಗ ೫)

– ಶ್ರೀಕಾಂತ್ ಶೆಟ್ಟಿ

ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಪ್ರೇತದ ಆತ್ಮ ಚರಿತೆ! (ಭಾಗ ೪)

14225499_1081747878587487_1441481958757222525_nಛೇ ಏನಾಗಿ ಹೋಯಿತು. ದೇಶದ ಗಡಿಗಳನ್ನು ಕಾಯ ಬೇಕಿದ್ದ ಮರಾಠಾ ಖಡ್ಗಗಳು ತಮ್ಮತಮ್ಮೊಳಗೆ ಕಣಕಣಿಸತೊಡಗಿದವು. ಹೆಣ್ಣೊಬ್ಬಳ ದುಷ್ಟತನಕ್ಕೆ ಸಾಮ್ರಾಜ್ಯದ ಸ್ಥಂಭಗಳೇ ಬುಡ ಕಳಚಿಕೊಂಡವು. ತನ್ನ ನಿಷ್ಟಾವಂತ ಸೇನಾನಿಗಳನ್ನು ಕೂಡಿಕೊಂಡು ರಘುನಾಥ ರಾವ್ ಪೇಶ್ವಾ ಪಟ್ಟವನ್ನು ಅಲಂಕರಿಸಿಯೇ ಬಿಟ್ಟ.!! ನಾರಾಯಣ ರಾವ್ ರಕ್ತದಿಂದ ತೊಯ್ದು ಹೋಗಿದ್ದ ಪೇಶ್ವಾ ಕಿರೀಟ ರಘುನಾಥ ರಾವ್ ಪೇಶ್ವಾ ತಲೆಯಲ್ಲಿ ಘಟಸರ್ಪವೊಂದು ಮಡಿಕೆ ಹಾಕಿ ಕುಳಿತಂತೆ ಕಾಣುತ್ತಿತ್ತು. ಯಾವುದೇ ಕ್ಷಣದಲ್ಲಾದರೂ ಆ ಆತ್ಮ ಪ್ರತಿಕಾರಕ್ಕಿಳಿಯದೆ ಸುಮ್ಮನಿರುವುದಿಲ್ಲ. ಅಷ್ಟು ಭೀಕರವಾಗಿ ಆ ಬಾಲಕನನ್ನು ಕತ್ತರಿಸಿ ಕೊಲ್ಲಲಾಗಿತ್ತು. ನಾರಾಯಣನ ಕಣ್ಣೀರು ರಕ್ತ ಒಂದಾಗಿ ಬೆರೆತು ರಘುನಾಥನ ಪಾದ ತೊಯ್ದರೂ ಆತ ಆ ಮುಗ್ದ ಬಾಲಕನ ಮೇಲೆ ಕರುಣೆ ತೋರಿರಲಿಲ್ಲ. ಮತ್ತಷ್ಟು ಓದು »

28
ಸೆಪ್ಟೆಂ

ವೈಟ್ ಕಾಲರ್ಡ್ ಕಾರ್ಮಿಕರ ಸಂಕಟ ಕೇಳುವವರ್ಯಾರು?

– ರಾಕೇಶ್ ಶೆಟ್ಟಿ
196qih4eoemsejpgಸೆಪ್ಟಂಬರ್ ೨ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್’ಗೆ ಕರೆ ಕೊಟ್ಟಿದ್ದವು, ಕಾರ್ಮಿಕರು ತಮ್ಮ ತಮ್ಮ ಸಂಘಟನೆಗಳೊಂದಿಗೆ ಬೀದಿಗಿಳಿದಿದ್ದರೇ, ಬಹಳಷ್ಟು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಐಟಿಯಂತಹ ಇನ್ನಿತರ ‘ವೈಟ್ ಕಾಲರ್’ ಕಾರ್ಮಿಕರಿಗೆ ಅವತ್ತು ಕೆಲಸದ ದಿನವೇ ಆಗಿತ್ತು. ಅಂದು ಬೆಳಗ್ಗೆ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಮಿತ್ರರೊಬ್ಬರಿಗೆ ಕಾರ್ಯನಿಮಿತ್ತವಾಗಿ ಕರೆ ಮಾಡಿ, ಎಲ್ಲಿದ್ದೀರಿ? ಎಂದೆ. ಇಲ್ಲೇ ಮೆಜಿಸ್ಟಿಕ್ ಸುತ್ತ-ಮುತ್ತ ತಿರುಗಾಡ್ತ ಇದ್ದೀನಿ, ಭಾರತ್ ಬಂದ್ ಎಫೆಕ್ಟ್ ಜನ ಸಾಮಾನ್ಯರಿಗೆ ಹೇಗೆ ಆಗುತ್ತಿದೆ ಅಂತ ತೋರಿಸಬೇಕಲ್ಲ ಎಂದರು. ವಿಚಿತ್ರ ನೋಡಿ ಬ್ಲ್ಯೂ-ವೈಟ್ ಇತ್ಯಾದಿ ಎಲ್ಲಾ ಬಣ್ಣದ ಕಾರ್ಮಿಕರ ಬವಣೆಗಳ ಬಗ್ಗೆ ವರದಿ ಮಾಡುವ ಮಾಧ್ಯಮದ ಗೆಳೆಯರಿಗೆ ತಮ್ಮದೇ ಪತ್ರಿಕೋದ್ಯಮದ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು, ಪ್ರತಿಭಟಿಸಲೂ ಆಗುವುದಿಲ್ಲ. ಇಂತ ಸಮಸ್ಯೆಗಳ ಬಗ್ಗೆ ಏನಿದ್ದರೂ ಅವರು ಖಾಸಗಿಯಾಗಿ ಮಾತನಾಡಬಲ್ಲರೇ ಹೊರತು ಸಾರ್ವಜನಿಕವಾಗಿಯಲ್ಲ. ಯಾಕೆಂದರೆ ಮಾಧ್ಯಮಗಳಲ್ಲಿ ಕೆಲಸ ಮಾಡುವವರು Blue Collar Worker ಗಳಲ್ಲ ಅವರ ಕಾರ್ಮಿಕ ಹಕ್ಕುಗಳಿಗಾಗಿ ಒಂದು ಕಾರ್ಮಿಕ ಸಂಘಟನೆಯೂ ಇಲ್ಲ. ಇದು ಕೇವಲ ಮಾಧ್ಯಮದಲ್ಲಿರುವ White Collar Worker ಗಳಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಸಿಲಿಕಾನ್ ಸಿಟಿಯೆಂದು ಕರೆಯಲ್ಪಡುವ ಬೆಂಗಳೂರಿನ ಸಾಫ್ಟ್’ವೇರ್ ರಂಗದಂತಹ ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವವರ ಕತೆಯೂ ಇದೇ. ಮತ್ತಷ್ಟು ಓದು »

27
ಸೆಪ್ಟೆಂ

ವೇದನೆಯೂ ವ್ಯಸನವಾಗಿಬಿಟ್ಟರೇನು ಫಲ…?

– ಗುರುರಾಜ ಕೋಡ್ಕಣಿ. ಯಲ್ಲಾಪುರ

587666ಆಗಷ್ಟೇ ಮೊರೊಕ್ಕೊ ದೇಶದ ಮರಾಕ್ಕೇಶ್ ಪಟ್ಟಣಕ್ಕೆ ಬಂದಿಳಿದಿದ್ದ ಮತಪ್ರಚಾರಕನನ್ನು ತೀವ್ರವಾಗಿ ಆಕರ್ಷಿಸಿದ್ದು ಊರ ಹೊರಗಿನ ಮರುಭೂಮಿ. ತನ್ನನ್ನು ಸೂಜಿಗಲ್ಲಿನಂತೆ ಸೆಳೆದ ಮರಳುಗಾಡನ್ನು ಕಂಡ ಮರುಕ್ಷಣವೇ, ತನ್ನ ಪ್ರತಿನಿತ್ಯದ ಬೆಳಗಿನ ವಿಹಾರ ಆ ಮರಳುಗಾಡಿನಲ್ಲಿಯೇ ಎಂಬ ನಿರ್ಧಾರಕ್ಕೆ ಬಂದ ಪ್ರಚಾರಕ. ಹಾಗೊಂದು ನಿರ್ಧಾರದ ಮೊದಲ ದಿನವೇ ಮರುಭೂಮಿಯಲ್ಲಿ ಆತನಿಗೊಂದು ಅಚ್ಚರಿ ಕಾದಿತ್ತು. ಪ್ರಶಾಂತವಾದ ಮರಳುಗಾಡಿನ ನಡುವೆ ಮರಳಿನ ಮೇಲೆ ಅಡ್ಡವಾಗಿ ಮಲಗಿ ನೆಲಕ್ಕೆ ತನ್ನ ಕಿವಿಯಾನಿಸಿ, ಮರಳಿನ ಮೇಲೆ ಕೈಯಾಡಿಸುತ್ತ ಅಡ್ಡ ಮಲಗಿದ್ದ ವ್ಯಕ್ತಿಯೊಬ್ಬನ ವರ್ತನೆ ತನ್ನ ಪಾಡಿಗೆ ತಾನೆಂಬಂತೆ ನಡೆದು ಸಾಗುತ್ತಿದ್ದ ಪ್ರಚಾರಕನ ಗಮನ ಸೆಳೆದಿತ್ತು. ಮೊದಲ ದಿನ ಅದರೆಡೆಗೆ ತುಂಬ ಲಕ್ಷ್ಯ ಕೊಡದ ಪ್ರಚಾರಕ ‘ಹುಚ್ಚನಿರಬೇಕು ಪಾಪ..’ ಎಂದುಕೊಂಡು ಮುಂದೆ ಸಾಗಿದ. ಆದರೆ ಎರಡನೇ ದಿನವೂ ಘಟನೆಯ ಪುನರಾವರ್ತನೆ ಪ್ರಚಾರಕನ ಕುತೂಹಲವನ್ನು ಇನ್ನಷ್ಟು ಕೆರಳಿಸಿತ್ತು. ಅಷ್ಟಾಗಿಯೂ ಆ ವ್ಯಕ್ತಿಯನ್ನು ಮಾತನಾಡಿಸುವ ಗೋಜಿಗೆ ಹೋಗದ ಪ್ರಚಾರಕನ ಕುತೂಹಲ ಒಂದು ತಿಂಗಳ ನಂತರ ತನ್ನ ಸಹನೆಯ ಕಟ್ಟೆಯೊಡೆದಿತ್ತು. ಪ್ರತಿದಿನವೂ ನೆಲಕ್ಕೆ ಆತುಕೊಂಡು ವಿಚಿತ್ರವಾಗಿ ವರ್ತಿಸುವ ಆಗಂತುಕನ ಬಳಿ ತೆರಳಿದ ಪ್ರಚಾರಕ, ತನಗೆ ಬರುತ್ತಿದ್ದ ಅರೆಬರೆ ಅರೇಬಿಕ್ ಭಾಷೆಯಲ್ಲಿ, ‘ಗೆಳೆಯಾ, ನಾನು ಪ್ರತಿನಿತ್ಯವೂ ನೀನು ಹೀಗೆ ವರ್ತಿಸುವುದನ್ನು ಕಂಡಿದ್ದೇನೆ. ನೀನು ಹೀಗೆ ನೆಲಕ್ಕೆ ಆನಿಸಿಕೊಂಡು, ನೆಲವನ್ನು ಸವರುತ್ತ ಕುಳಿತುಕೊಳ್ಳಲು ಕಾರಣವೇನು ಎಂದು ತಿಳಿದುಕೊಳ್ಳಬಹುದೇ’? ಎಂದು ಪ್ರಶ್ನಿಸಿದ. ಮತ್ತಷ್ಟು ಓದು »

26
ಸೆಪ್ಟೆಂ

ರಾಜಕೀಯದಲ್ಲಿ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು, ಒಂದು ತಲೆಕೆಟ್ಟ ನಿರ್ಧಾರ ಸಾಕು||

– ರಾಘವೇಂದ್ರ ನಾವಡ
ki28lotus_jpg_g_ki_2599608fಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅಂತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು! ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತಃಕಲಹ, ಅಹಂಕಾರ ಮುಂತಾದವುಗಳಿಂದ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ ದೇವೇಗೌಡರು ತೆಗೆದುಕೊಂಡ ಒಂದು ಚಾಣಾಕ್ಷತನದ ನಿರ್ಧಾರದಿಂದ ಕುಂಭಕರ್ಣ ನಿದ್ರೆಯಿಂದ ದಢಾಲ್ಲನೆ ಎದ್ದರೆ, ಯಡಿಯೂರಪ್ಪನವರ ನಾಯಕತ್ವದಲ್ಲಿ ಸ್ವಲ್ಪ-ಸ್ವಲ್ಪವೇ ಮೇಲೇಳುತ್ತಿದ್ದ (ಇಲ್ಲಿಯೂ ಅಂತಃ ಕಲಹವಿದೆ. ಆದರೆ ನಾಯಕರು ಸ್ವಲ್ಪ ಚುರುಕಾಗಿದ್ದರು) ರಾಜ್ಯ ಭಾಜಪಾ, ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದರ ಮೂಲಕ ಮಕಾಡೆ ಮಲಗಿತು!! ಒಬ್ಬರು ಫೀನಿಕ್ಸ್ ನಂತೆ ಎದ್ದರೆ ಮತ್ತೊಬ್ಬರು ಶವದಂತೆ ಬಿದ್ದರು!! ಮತ್ತಷ್ಟು ಓದು »

26
ಸೆಪ್ಟೆಂ

ನಾನು – ನನ್ನದು

-ಗೀತಾ ಹೆಗ್ಡೆ

ego-as-baggageಪ್ರತಿಯೊಬ್ಬರ ಮನದಲ್ಲೂ ಅಡಗಿಕೊಂಡಿರುವ ಆತ್ಮಾಭಿಮಾನವೊ ಅಥವಾ ನನ್ನದು ಅನ್ನುವ ಅಹಂಕಾರವೊ ಗೊತ್ತಿಲ್ಲ. ಆದರೆ ಯಾವುದು ನನ್ನದು ಎಂಬ ಭ್ರಮೆ ಎಲ್ಲಿಯವರೆಗೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತೋ ಅಲ್ಲಿಯವರೆಗೆ ಅದರ ಹುಳುಕು ನಮಗೆ ಗೊತ್ತಾಗೋದೆ ಇಲ್ಲ. ಒಂದಾ ಶಾಂತವಾಗಿ ಕುಳಿತು ಯಾವ ತಾರತಮ್ಯವಿಲ್ಲದೆ ವಿಮರ್ಷಿಸುವ ಬುದ್ಧಿ ಹೊಂದಿರಬೇಕು. ಇಲ್ಲಾ ಬೇರೆಯವರು ಬೊಟ್ಟು ಮಾಡಿ ತೋರಿಸಿದಾಗ ಇದು ಸರಿಯಿಲ್ಲ ಅಥವಾ ನಿನ್ನಲ್ಲಿ ದೋಷವಿದೆ ಎಂದೆನ್ನುವ ಮಾತು ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳುವ ಒಳ್ಳೆಯ ಮನಸ್ಸಿರಬೇಕು. ನಮ್ಮನ್ನು ಉತ್ತುಂಗದತ್ತ ಏರಲು ಹಾಕಿ ಕೊಟ್ಟ ಮೆಟ್ಟಿಲು ಎಂದು ಭಾವಿಸಬೇಕು. ಇನ್ನೂ ಹೆಚ್ಚಿನ ಉತ್ಸಾಹದಲ್ಲಿ ಗುರಿ ಮುಟ್ಟುವತ್ತ ನಮ್ಮ ನಡೆ ಬದಲಾಯಿಸಿಕೊಳ್ಳಬೇಕು. ಇವ್ಯಾವುದೂ ಇಲ್ಲದ ಜನರು ” ನಾನು, ಇದು ನನ್ನದು, ಯಾವೋನಾದರೂ ಬೊಟ್ಟು ಮಾಡಿ ತೋರಿಸಲಿ ನೋಡ್ತೀನಿ” ಅನ್ನುವ ಮೂರ್ಖತನದ ಮಾತು ಹೇಳುತ್ತಿರುತ್ತಾರೆ. ಆದರೆ ಈ ನಡೆ ಒಳ್ಳೆಯ ನಡೆಯಲ್ಲ; ಇದು ಖಂಡಿತಾ ನಮ್ಮನ್ನು ಅದಃಪತನಕ್ಕೆ ಕರೆದೊಯ್ಯುತ್ತದೆ. ಕೊನೆಯಲ್ಲಿ ಪಶ್ಚಾತ್ತಾಪವೇ ಕಟ್ಟಿಟ್ಟ ಬುತ್ತಿ. ಮತ್ತಷ್ಟು ಓದು »

25
ಸೆಪ್ಟೆಂ

ಮದ್ದರೆಯದಿದ್ದರೆ ಈ ಮಾವೋವ್ಯಾಧಿ ನಿದ್ದೆಗೆಡಿಸಲಿದೆ ಎಚ್ಚರ!

– ರೋಹಿತ್ ಚಕ್ರತೀರ್ಥ

naxals-1457757541ಎರಡು ಸುದ್ದಿಗಳಿವೆ. ಒಂದು – ಉರಿ ಸೇನಾನೆಲೆಯ ಮೇಲೆ ನಾಲ್ಕು ಮಂದಿ ಮುಸ್ಲಿಂ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 17 ಸೈನಿಕರು ಹತರಾಗಿದ್ದಾರೆ. ಎರಡು – ಭಾರತದ ನಕ್ಸಲ್ ಉಗ್ರರು ಜಗತ್ತಿನ ಭಯೋತ್ಪಾದನೆಯ ಪಟ್ಟಿಯಲ್ಲಿ ಕಂಚಿನ ಪದಕವನ್ನು ಜಸ್ಟ್ ಮಿಸ್ ಮಾಡಿಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇವೆರಡರಲ್ಲಿ, ನಕ್ಸಲರ ಸಮಸ್ಯೆಯೇ ದೊಡ್ಡದು ಅನಿಸಿದ್ದರಿಂದ ಅದನ್ನು ಈ ವಾರದ ಅಂಕಣಕ್ಕೆ ಆಯ್ದುಕೊಂಡಿದ್ದೇನೆ. ಯಾಕೆಂದರೆ ಹೊರಗಿನ ಶತ್ರುಗಳನ್ನು ಪ್ರತಿದಾಳಿ ಮಾಡಿಯೋ ಯುದ್ಧ ಘೊಷಿಸಿಯೋ ತಹಬದಿಗೆ ತರಬಹುದೆನ್ನೋಣ; ಆದರೆ, ತಾಯ್ನಾಡಿನ ಒಳಗೇ ಇದ್ದುಕೊಂಡು ಒರಲೆಯಂತೆ ದೇಶವನ್ನು ಕೊರೆದು ಪುಡಿಗುಟ್ಟುವ ಆಂತರಿಕ ಶತ್ರುಗಳನ್ನು ಬಗ್ಗುಬಡಿಯುವುದು ಹೇಗೆ? 2015ರಲ್ಲಿ ಭಾರತದಲ್ಲಿ ನಡೆದ 791 ಭಯೋತ್ಪಾದನಾ ಕೃತ್ಯಗಳಲ್ಲಿ 43% ಅನ್ನು ನಕ್ಸಲೈಟ್ ಸಂಘಟನೆಗಳೇ ಮಾಡಿವೆ ಎಂದು ಅಂತಾರಾಷ್ಟ್ರೀಯ ವರದಿಯೊಂದು ಹೇಳುತ್ತಿದೆ. ಒಂದೇ ವರ್ಷದಲ್ಲಿ ಇವರು ನಡೆಸಿರುವ ದಾಳಿಗಳು 343; ಇವರ ಅಟ್ಟಹಾಸಕ್ಕೆ ಬಲಿಯಾಗಿ ಶವವಾಗಿ ಮಲಗಿದ ಅಮಾಯಕರ ಸಂಖ್ಯೆ 176. 2010ರಿಂದ 2015ರವರೆಗಿನ ಅವಧಿಯಲ್ಲಿ ದೇಶದೊಳಗೆ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ 2162 ನಾಗರಿಕರು, 802 ಭದ್ರತಾ ಸಿಬ್ಬಂದಿ ಹತರಾಗಿದ್ದಾರೆಂದು ಕೇಂದ್ರದ ಗೃಹಸಚಿವಾಲಯದ ವರದಿ ಹೇಳುತ್ತಿದೆ. ಜಗತ್ತಿನಲ್ಲಿ ತಾಲಿಬಾನ್, ಐಸಿಸ್ ಮತ್ತು ಬೊಕೋ ಹರಾಮ್ ಎಂಬ ಉಗ್ರಗಾಮಿ ಸಂಘಟನೆಗಳ ನಂತರದ ಸ್ಥಾನವನ್ನು ಭಾರತದ ನಕ್ಸಲ್ ಚಳವಳಿ ತನ್ನ ಮುಡಿಗೇರಿಸಿಕೊಂಡಿದೆ. ಭಾರತ ಪ್ರಪಂಚದೆದುರು ತಲೆ ತಗ್ಗಿಸುವಂಥ ವಿಚಾರವಿದು. ಕರ್ನಾಟಕದ ಸಂದರ್ಭದಲ್ಲಿ ನಕ್ಸಲೈಟ್ ಚಳವಳಿಯ ನೆಲೆ-ಬೆಲೆಗಳೇನು ಎಂಬುದನ್ನು ವಿಮರ್ಶಿಸುವುದೇ ಪ್ರಸ್ತುತ ಲೇಖನದ ಉದ್ದೇಶ. ಮತ್ತಷ್ಟು ಓದು »

23
ಸೆಪ್ಟೆಂ

ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)

ನಿಲುಮೆ ತಂಡವು, ಮಂಗಳೂರಿನಲ್ಲಿ ( 18.09.2016 ) ರಂದು ನಡೆಸಿದ ‘ಕಾಶ್ಮೀರದ ಕುರಿತು ವಿಚಾರ ಸಂಕಿರಣ’  ಕಾರ್ಯಕ್ರಮದಲ್ಲಿ  ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ರೂಪಲಕ್ಷ್ಮೀಯರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ..

ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಮುಖ್ಯಾಂಶಗಳು.

14088692_10154596775090649_5386569408904041755_nವರ್ಷಕೊಮ್ಮೆ ನಾನು ಜಮ್ಮು, ಕಾಶ್ಮೀರಕ್ಕೆ ಹೋಗೋದ್ರಿಂದ, ಅಲ್ಲಿ ನಾನು ನೋಡಿರುವ ಆಧಾರದ ಮೇಲೆ, ನನ್ನ ವಿಚಾರಗಳನ್ನು ಹೇಳ್ತೀನಿ. ಪ್ರೊಫೆಸರ್ ಪ್ರೇಮ್ ಶೇಖರ್ ಅವರು ಆಗಲೇ ಹೇಳಿದ ಪ್ರಕಾರ, ಕಾಶ್ಮೀರದಲ್ಲಿ ಮೂರು ತರಹದ ಜನಾಂಗಗಳಿವೆ. ೧. ಹಿಂದು, ೨. ಮುಸ್ಲಿಮ್ ಮತ್ತು ೩. ಬುದ್ದಿಸ್ಟ್ – ಲಡಾಕ್ ನಲ್ಲಿರುವಂತಹವರು. ಆದರೆ ಮುಸ್ಲಿಮರು ಹೇಳೋದು – ಕಾಶ್ಮೀರದಲ್ಲಿ ನಾಲ್ಕು ತರಹದ ಜನರಿದ್ದಾರೆ. ೧. ಹಿಂದೂ, ೨. ಮುಸ್ಲಿಮ್ – ಸುನ್ನಿ ಮತ್ತು ಶಿಯಾ ೩. ಲಡಾಕ್. ಪ್ರೇಮ್ ಶೇಖರ್ ಸರ್ ಹೇಳಿದ ಹಾಗೆಯೇ ಇನ್ನು ಮುಂದೆ ಕಾರ್ಗಿಲ್ ನ ಸುದ್ಧಿಗೆ ಪಾಕಿಸ್ತಾನ್ ಬರೋಲ್ಲ. ಯಾಕೆಂದರೆ ಕಾರ್ಗಿಲ್ ನಲ್ಲಿ ಹೆಚ್ಚಾಗಿರುವ ಮುಸ್ಲಿಮರು – ಶಿಯಾ ಪಂಗಡದವರು. ಪಾಕಿಸ್ತಾನದಲ್ಲಿರುವ ಮುಸ್ಲಿಮರು – ಸುನ್ನಿ ಪಂಗಡದವರು. ಕಾಶ್ಮೀರದ ಕಣಿವೆಯಲ್ಲಿರೋ ಮುಸ್ಲಿಮರು, ಪಾಕಿಸ್ತಾನದ ಮುಸ್ಲಿಮರನ್ನು ತಮ್ಮ ಮುಸಲ್ಮಾನರು ಅಂತಂದುಕೊಳ್ತಾರೆ. ಆದರೆ ಕಾರ್ಗಿಲ್ ನ ಶಿಯಾದವರಿಗೆ ಚೆನ್ನಾಗಿ ಗೊತ್ತು. ತಾವೇನಾದರೂ ಪಾಕಿಸ್ತಾನಕ್ಕೆ ಹೋದರೆ, ಇದುವರೆವಿಗೂ ಕಣಿವೆಯಲ್ಲಾದ ಅತ್ಯಾಚಾರಗಳು, ದೌರ್ಜನ್ಯಗಳನ್ನು, ಈ ಪಾಕಿಸ್ತಾನದ ಸುನ್ನಿಗಳು ತಮ್ಮ ಮೇಲೆಯೇ ನಡೆಸುತ್ತಾರೆ. ಆ ಭಯದಿಂದ ಕಾರ್ಗಿಲ್ ನ ಮುಸ್ಲಿಮರು, ಏನೇ ಆದರೂ ನಾವು ಭಾರತದಲ್ಲೇ ಇರ್ತೀವಿ. ಪಾಕಿಸ್ತಾನಕ್ಕೆ ಸೇರೋಲ್ಲ ಅಂತಾ ಹೇಳ್ತಾರೆ. ಮತ್ತಷ್ಟು ಓದು »

22
ಸೆಪ್ಟೆಂ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦

ಶ್ರೀಧರಭಾಮಿನಿಧಾರೆ ೧೧-೧೫

shreedhar_swami11)
ತಾಯ ದುಃಖವ ಮರೆಸಲಿಕೆ ತಾ
ಜೀಯ ಸಿರಿಧರ ಮರುಳು ಮಾಡುವ
ರಾಯರಳಿದಾ ದುಃಖಮರೆಸಲು ಆಡಿ ನಲಿಸುವನೂ||
ಆಯುಕಳೆಯೇ ಸಕಲರಿಂಗು ವಿ-
ಧಾಯ ಮರಣವು ಖಚಿತವಯ್ಯಾ
ಒಯ್ಯುವನು ಆ ನಿಯಮಪಾಲಕ ಯಮನು ಎಲ್ಲರನೂ||

ತಾತ್ಪರ್ಯ : ಶ್ರೀಧರರು ತಾಯಿಗೆ ಪತಿವಿಯೋಗದ ಸ್ಮರಣೆಯಿಂದ ಅಥವಾ ಇನ್ಯಾವುದೇ ಕಾರಣದಿಂದ ವಿಷಾದ ಭಾವ ಮೂಡಿದಾಗಲೆಲ್ಲ ತನ್ನ ನಾನಾ ವಿಧದ ಬಾಲಲೀಲೆಗಳಿಂದ ಸಮಾಧಾನಗೊಳಿಸುತ್ತಿದ್ದರು. ನಿಯಮಪಾಲಕ ಯಮಧರ್ಮರಾಜನ ಎದುರು ಮಾನವಮಾತ್ರರು ಏನು ತಾನೇ ಮಾಡಲು ಸಾಧ್ಯ. ಆಯಸ್ಸು ಕಳೆದಿರುವ ಎಲ್ಲ ಜೀವಜಂತುಗಳನ್ನೂ ಅವನು ಕರೆದೊಯ್ಯುತ್ತಾನೆ. ಮತ್ತಷ್ಟು ಓದು »

21
ಸೆಪ್ಟೆಂ

ಪ್ರೇತದ ಆತ್ಮ ಚರಿತೆ! (ಭಾಗ ೪)

– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)

14117697_1080861882009420_308061420913968049_nಆಗಷ್ಟ್ ೩೦ ೧೭೭೩ ಇಡಿ ಪುಣೆ ಗಣೇಶ ಉತ್ಸವದ ಸಂಭ್ರಮದಲ್ಲಿ ಮುಳುಗೇಳುತ್ತಿದೆ. ಕೇಸರಿ ಗುಲಾಬಿ ರಂಗಿನೋಕುಳಿಗೆ ನಗರ ನವಶೃಂಗಾರಗೊಂಡಿದೆ. ಶನಿವಾರವಾಡೆಯಲ್ಲೂ ಉತ್ಸವ ಕಳೆಗಟ್ಟಿತ್ತು. ಹಾಡು, ಕುಣಿತ, ಕೀರ್ತನೆ,ಆರತಿ, ಸಂತರ್ಪಣೆ ಭರ್ಜರಿಯಾಗಿ ನಡೆದಿತ್ತು. ಪೇಶ್ವಾಗಳ ಆರಾಧ್ಯಮೂರ್ತಿ ಚಿಂತಾಮಣಿ ಗಣಪತಿಯ ಪೂಜೆ ಆಗ‍ಷ್ಟೆ ಮುಗಿದು ಎಲ್ಲರೂ ವರ್ಷಕ್ಕಾಗುವಷ್ಟು ಸಂಭ್ರಮವನ್ನು ಮನದಲ್ಲಿ ತುಂಬಿಕೊಂಡು ಮರಳಿದರು. ವಾಡೆಯಲ್ಲಿ ಕಾವಲು ಭಟರು ಮತ್ತು ಪರಿಚಾರಕ ವರ್ಗವನ್ನು ಬಿಟ್ಟು ಉಳಿದವರೆಲ್ಲರೂ ತಮ್ಮ ತಮ್ಮ ಸ್ವಸ್ಥಾನ ಸೇರಿಕೊಂಡಿದ್ದರು. ಮಹಾ ದುರಂತವೊಂದು ನಡೆಯುವ ಮೊದಲು ಆವರಿಸುವ ಅಸಾದ್ಯ ನೀರವತೆ ವಾಡೆಯನ್ನು ಆವರಿಸಿಕೊಂಡಿತ್ತು. ರಂಗ ಮಹಲ್ ಕಡೆಯಿಂದ ಐದಾರು ದೀವಟಿಕೆಗಳು ಒಳಪ್ರವೇಶಿಸಿದವು. ಖಿಡ್ಕಿ ದರವಾಜಾ ಬಳಿ ಎರಡು ಬಟ್ಟೆ ಸುತ್ತಿದ ಮುಖಗಳು ಗೋಚರಿಸಿದವು. ಕ್ಷಣಮಾತ್ರದಲ್ಲೇ ಶನಿವಾರವಾಡೆಯ ಹಜಾರಗಳಲ್ಲಿ ಹತ್ತಾರು ಗುಂಪುಗಳ ಹೆಜ್ಜೆಯ ಸಪ್ಪಳ ಮೊಳಗಿತು. ವಾಡೆಯ ಮುಖ್ಯದ್ವಾರದ ಬಳಿ ಐವತ್ತು ಜನರಿದ್ದ ಸೇನಾ ತುಕುಡಿಯೊಂದು ಬಂದು ನಿಂತಿತು. ಗುಂಪಿನ ನಾಯಕ ಸುಮೇರು ಸಿಂಗ್ ಕಾವಲುಗಾರನ ಬಳಿ ಬಂದು ಕೂಡಲೆ ಪೇಶ್ವಾ ಅವರನ್ನು ಕಾಣಬೇಕು ತುರ್ತು ಕೆಲಸವಿದೆ ಎಂದ. ಈಗ ಪೇಶ್ವಾ ಅವರು ನಿದ್ದೆಯಲ್ಲಿದ್ದಾರೆ. ನಾಳೆ ಬಂದು ಭೇಟಿಯಾಗಿ ಎಂದ ಮುಖ್ಯದ್ವಾರದ ರಕ್ಷಣೆಯಲ್ಲಿದ್ದ ಮಹಾದಜಿ ಗೋರೆ… ಮಾತು ಪೂರ್ಣಗೊಳ್ಳುವ ಮೊದಲೇ ಸುಮೇರು ಸಿಂಗ್ ಓರೆಯಿಂದ ಕತ್ತಿ ಹೊರಬಂದು ಗೋರೆಯ ಹೊಟ್ಟೆ ಸೀಳಿ ಹಾಕಿತು. ತುಕುಡಿಯನ್ನು ಒಳನುಗ್ಗುವಂತೆ ಸುಮೇರ್ ಆದೇಶಿಸಿದ ಕೇವಲ ಹತ್ತು ನಿಮಿಷದಲ್ಲೇ ವಾಡೆ ಸುಮೇರು ಸಿಂಗ್ ಕೈವಶವಾಯಿತು. ಆ ವಾಡೆಯ ಕೆಳ ಅಂತಸ್ತಿನಲ್ಲೇ ರಘುನಾಥ ರಾವ್, ಆನಂದಿ ಬಾಯಿ ವಾಸವಾಗಿದ್ದರು. ಸುಮೇರು ಸಿಂಗ್ ಹಿಂಬಾಲಕರು ವಾಡೆಯ ಕಾವಲಿಗಿದ್ದವರನ್ನು ತರಿದು ಹಾಕಿದರು. ಘನಘೊರ ರಕ್ತಪಾತ ನಡೆಯಿತು. ಕೆಲವೇ ಗಂಟೆಗಳ ಮೊದಲು ಚೌತಿಯ ಸಡಗರದಲ್ಲಿ ಗಿಜಿಗುಟ್ಟುತ್ತಿದ್ದ ಶನಿವಾರವಾಡೆ ಈಗ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿತ್ತು. ವಾಡೆಯ ಮೊದಲ ಅಂತಸ್ತಿನ ತೇಗದ ಮುಚ್ಚಿಗೆಗಳಿಂದ ರಕ್ತ ಒಸರ ತೊಡಗಿತು. ಸುಮೇರು ಸಿಂಗ್ ನಾರಾಯಣ ಪೇಶ್ವಾ ಮಲಗಿದ್ದ ಕೋಣೆಗೆ ನುಗ್ಗಿದ. ವಾಡೆಯಲ್ಲಿ ಆಹಾಕಾರ ಚೀತ್ಕಾರಗಳು ಎದ್ದಿರುವುದನ್ನು ಕಂಡು ನಾರಾಯಣನಿಗೆ ಪರಿಸ್ಥಿತಿಯ ಅರಿವಾಯಿತು. ಮತ್ತಷ್ಟು ಓದು »