ವಿಷಯದ ವಿವರಗಳಿಗೆ ದಾಟಿರಿ

Archive for

25
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ– 11
ಸೋದರಿ ನಿವೇದಿತಾ (ಮಾರ್ಗರೇಟ್ ಎಲಿಜಬೆತ್ ನೊಬೆಲ್)
– ರಾಮಚಂದ್ರ ಹೆಗಡೆ

220px-Sœur_Niveditaವಿದೇಶಿ ನೆಲದಲ್ಲಿ ಹುಟ್ಟಿ ಭಾರತದ ಸೇವೆಗೆ ತನ್ನ ಅರ್ಪಿಸಿಕೊಂಡ, ಭಾರತಕ್ಕಾಗಿಯೇ ತನ್ನ ಪೂರ್ತಿ ಜೀವನ ಅರ್ಪಿಸಿದ ಐರ್ಲೆಂಡ್ ದೇಶದ ಹೆಣ್ಣುಮಗಳು ಮಾರ್ಗರೇಟ್ ಎಲಿಜಬೆತ್ ನೊಬೆಲ್. ಸ್ವಾಮಿ ವಿವೇಕಾನಂದರ ಭಾಷಣ ಹಾಗೂ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಭಾರತದೆಡೆಗೆ ಆಕರ್ಷಿತರಾದ ಮಾರ್ಗರೇಟ್ ಸ್ವಾಮಿ ವಿವೇಕಾನಂದರಿಂದ ಬ್ರಹ್ಮಚರ್ಯ ಹಾಗೂ ಸೇವೆಯ ದೀಕ್ಷೆ ಪಡೆದು ‘ಸೋದರಿ ನಿವೇದಿತಾ’ ಆದರು. ಬಾಲ್ಯದಿಂದಲೇ ಆಧ್ಯಾತ್ಮದ ಸೆಳೆತ ಹೊಂದಿದ್ದ ಮಾರ್ಗರೇಟ್ ನೊಬೆಲ್ಲರಿಗೆ ಲಂಡನ್ನಿನಲ್ಲಿ ಸ್ವಾಮಿ ವಿವೇಕಾನಂದರ ದರ್ಶನವಾಯಿತು. ಭಾರತೀಯ ಧರ್ಮ, ಸಂಸ್ಕೃತಿ, ವೇದ ಉಪನಿಷತ್ತುಗಳ ಕುರಿತ ಅವರ ಚಿಂತನೆಗಳಿಂದ ಮಂತ್ರಮುಗ್ಧರಾದ ಆಕೆ ಅವರನ್ನೇ ತನ್ನ ‘ಗುರುದೇವ’ ರೆಂದು ಸ್ವೀಕರಿಸಿದರು. ಭಾರತೀಯ ಚಿಂತನೆಗಳ ಅಧ್ಯಯನದಲ್ಲಿ ತೊಡಗಿದ ಆಕೆಗೆ ಭಾರತವನ್ನು ಕಾಣುವ ಹೆಬ್ಬಯಕ್ಕೆ ಹುಟ್ಟಿತು. ಸ್ವಾಮೀಜಿ ಅವರೊಂದಿಗೆ ನಿರಂತರವಾಗಿ ಪತ್ರ ಸಂಪರ್ಕದಲ್ಲಿದ್ದ ಅವರಿಗೆ ಒಮ್ಮೆ ಸ್ವಾಮೀಜಿ ಹೀಗೆ ಬರೆದರು: “ನನ್ನ ದೇಶದ ಸ್ತ್ರೀಯರಿಗೆ ವಿದ್ಯಾಭ್ಯಾಸ ಕೊಡುವ ಅಗತ್ಯ ತುಂಬಾ ಇದೆ. ಅದಕ್ಕೆ ತಕ್ಕ ಯೋಜನೆಗಳನ್ನು ಹಾಕುತ್ತಿದ್ದೇನೆ. ನಿನ್ನಿಂದ ನನಗೆ ತುಂಬಾ ಸಹಾಯವಾದೀತು. ಇಲ್ಲಿ ನಿನಗಾಗಿ ಸಹಸ್ರಾರು ಮಹಿಳೆಯರು ಕಾಯುತ್ತಿದ್ದಾರೆ.” ಎಂದು ಬರೆದರು. ಈ ಕರೆಗೆ ಓಗೊಟ್ಟ ಮಾರ್ಗರೆಟ್ ಭಾರತಕ್ಕೆ ಬಂದು ಇಲ್ಲಿಯ ಸ್ತ್ರೀಯರ ಅನಕ್ಷರತೆ, ಅಜ್ಞಾನಗಳನ್ನು ತೊಡೆದು ಅವರ ಸರ್ವಾಂಗೀಣ ಉದ್ಧಾರಕ್ಕೆ ತೊಡಗಬೇಕೆಂಬ ನಿರ್ಧಾರವನ್ನು ಮನದಾಳದಿಂದ ಕೈಗೊಂಡರು. ಮತ್ತಷ್ಟು ಓದು »

24
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 10
ಹಲಗಲಿಯ ಬೇಡರು
– ರಾಮಚಂದ್ರ ಹೆಗಡೆ
bedaಬ್ರಿಟಿಷ್ ಸರ್ಕಾರದ ದೌರ್ಜನ್ಯ ದೇಶದಾದ್ಯಂತ ಆವರಿಸಿದ್ದ ಕಾಲ. ಅದಕ್ಕೆ ಉತ್ತರವಾಗಿ 1857 ರಲ್ಲಿ ದೇಶದ ವಿವಿದೆಡೆಗಳಲ್ಲಿ ಪ್ರಖರ ಹೋರಾಟ ಆರಂಭವಾಯಿತು. 1857 ರ ನವೆಂಬರ್ ನಲ್ಲಿ ಆಂಗ್ಲ ಸರ್ಕಾರ ‘ನಿಶ್ಶಸ್ತ್ರೀಕರಣ ಕಾನೂನನ್ನು’ ಜಾರಿಗೆ ತಂದು ದೇಶದ ಯಾರೂ ತಮ್ಮ ಬಳಿ ಯಾವುದೇ ಶಸ್ತ್ರಗಳನ್ನು ಹೊಂದುವಂತಿಲ್ಲ ಎಂಬ ಕರಾಳ ನಿಯಮವನ್ನು ಹೇರಿತು. ಅದರ ಪ್ರಕಾರ ಎಲ್ಲರೂ ತಮ್ಮಲ್ಲಿದ್ದ ಶಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕಾಯ್ತು. ಆದರೆ ಬೇಡರಿಗೆ ಆಯುಧಗಳೇ ಜೀವನೋಪಾಯದ ಆಧಾರಗಳು. ಹಾಗಾಗಿ ಆಯುಧಗಳನ್ನು ಹಿಂತಿರುಗಿಸುವುದಿಲ್ಲ ಎಂದು ಇದರ ವಿರುದ್ಧ ದಿಟ್ಟ ದನಿಯೆತ್ತಿ ಬ್ರಿಟಿಷ್ ಸರ್ಕಾರವನ್ನು ಬೆಚ್ಚಿ ಬೀಳಿಸಿ ಪ್ರಾಣಾರ್ಪಣೆಗೈದವರು ನಮ್ಮ ಕರ್ನಾಟಕದ ಹಲಗಲಿಯ ಬೇಡರು. ಮತ್ತಷ್ಟು ಓದು »

24
ಆಗಸ್ಟ್

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

– ತೇಜಸ್ವಿನಿ ಹೆಗಡೆ.

india-pakistan-border5ಅದೊಂದು ಸುವಿಶಾಲ ಮನೆ. ಎಷ್ಟಂಕಣದ್ದು ಎಂದು ಹೇಳಲೂ ಆಗದಷ್ಟು ದೊಡ್ಡ ಮನೆ! ಆ ಮನೆಯೊಳಗೆ ಅಸಂಖ್ಯಾತ ಕೋಣೆಗಳು. ಗಾತ್ರದಲ್ಲಿ, ಆಕಾರಗಳಲ್ಲಿ, ಅಂದ ಚೆಂದಗಳಲ್ಲಿ ವಿವಿಧತೆಯನ್ನು, ವೈವಿಧ್ಯಗಳನ್ನು ಹೊಂದಿದ ಕೋಣೆಗಳು. ಅದೊಂದು ಬಹು ದೊಡ್ಡ ಒಟ್ಟು ಕುಟುಂಬ. ಕೆಲವು ಸದಸ್ಯರಿಗಂತೂ ಕೋಣೆಗಳೇ ಇಲ್ಲ. ಇದಕ್ಕಾಗಿ ಹೋರಾಟ ಮಾಡುತ್ತಿರುತ್ತಾರೆ. ಅವರ ಇದೇ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡು, ಅವರ ನೈಜ ಹೋರಾಟವನ್ನೇ ದಿಕ್ಕೆಡಿಸಿ, ತಮ್ಮ ಕುಟಿಲ ಸ್ವಾರ್ಥಕ್ಕಾಗಿಯೇ ಮನೆಯೊಡೆಯಲು ಕೆಲವೊಂದು ಸದಸ್ಯರು ಸಂಚು ಮಾಡುತ್ತಿರುತ್ತಾರೆ. ಕೆಲವು ನೆರಹೊರೆಯ ಕುಟುಂಬಗಳ ಕುಮ್ಮಕ್ಕೂ ಇದಕ್ಕೆ ಲಭಿಸುತ್ತಿರುತ್ತದೆ. ಹೀಗಾಗಿ ಕಚ್ಚಾಟ, ಜಗಳ, ಹೊಡೆದಾಟ ಪ್ರತಿದಿವಸವೂ ಅಲ್ಲಿ ನಡೆಯುತ್ತಿರುತ್ತದೆ ಮತ್ತು ಅದನ್ನು ಆ ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತ ಯಜಮಾನ ಹಾಗೂ ಇನ್ನಿತರ ಹಿರಿಯ ಸದಸ್ಯರು ಬಗೆಹರಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಕಾಲ ಸರಿದಂತೇ, ಸ್ವಾರ್ಥಿಗಳ ಸತತ ತಲೆತುಂಬುವಿಕೆಯ ಪರಿಣಾಮದಿಂದ ಮನೆಯ ಕೆಲವೊಂದಿಷ್ಟು ಜನಕ್ಕೆ ಆಗಾಗ ಅನ್ನಿಸತೊಡಗುತ್ತದೆ.. ಈ ಮನೆಯೊಳಗೆ ಮಾತ್ರ ಸರಿಯಾದ ವ್ಯವಸ್ಥೆಯಿಲ್ಲ.. ಯಾವುದೂ ಸರಿಯಿಲ್ಲ.. ಭದ್ರತೆಯಿಲ್ಲ.. ಎಂಬಿತ್ಯಾದಿ ಕೊರಗು, ಕೂಗು ಎದ್ದೇಳುತ್ತಿರುತ್ತದೆ. ಮನೆಯನ್ನು ಒಂದಿಷ್ಟು ಪಾಲು ಮಾಡಿ ಹಂಚಿದರೇ ಪರಿಹಾರ ಎಂದು ಹೊರಟವರೂ ಹಲವರಿರುತ್ತಾರೆ. ಆದರೆ ಆ ಮನೆಯ ಹೊರಗೆ ಬಿದ್ದರೆ, ಅದರ ಅಕ್ಕ ಪಕ್ಕದ ಅಷ್ಟೇ ಮನೆಗಳೊಳಗಿನ ಸ್ಥಿತಿ-ಗತಿಯೂ ಬಹುಪಾಲು ಅದೇ ರೀತಿ ಇರುವುದು ಆ ಜನರಿಗೆ ಅರಿವಾಗಿರುವುದೇ ಇಲ್ಲ ಅಥವಾ ಕೆಲವರಿಗೆ ತಿಳಿದಿದ್ದರೂ ತಿಳಿಯದಂತೇ ನಟಿಸುತ್ತಿರುತ್ತಾರೆ. ಕ್ರಮೇಣ ಮನೆಯೊಳಗಿನ ಪ್ರತಿಯೊಂದು ಸಂಭ್ರಮದಲ್ಲೂ ಒಂದಲ್ಲಾ ಒಂದು ಕೊರಗು, ಕೆಡುಕು ತೆಗೆದು ಕಟಕಿಯಾಡುವ, ಮನೆಯನ್ನು, ಮನೆ ಮಂದಿಯನ್ನು ಹಳಿಯುತ್ತಲೇ, ಜರೆಯುತ್ತಲೇ ಸವೆಯುವ ಪ್ರಕ್ರಿಯೆ ಶುರುವಾಗುತ್ತದೆ. ಮತ್ತಷ್ಟು ಓದು »

23
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ-9
ಪಂಡಿತ್ ಮದನ ಮೋಹನ ಮಾಳವೀಯ
– ರಾಮಚಂದ್ರ ಹೆಗಡೆ

Pandit-Madan-Mohan-Malaviya-Laywerಭಾರತೀಯ ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ಭವ್ಯ ಭಾರತದ ಭವಿಷ್ಯದ ನಿರ್ಮಾಣದಲ್ಲಿ ಪಂಡಿತ ಮದನ ಮೋಹನ ಮಾಳವೀಯರ ಪಾತ್ರ ಬಹುದೊಡ್ಡದು. ಗಾಂಧೀಜಿಯವರು ರಾಷ್ಟ್ರಪಿತನಾದರೆ ಪಂಡಿತ ಮದನ ಮೋಹನ ಮಾಳವೀಯರು “ರಾಷ್ಟ್ರಗುರು” ಎನ್ನಬೇಕು. ಭಾರತೀಯ ಸಂಸ್ಕೃತಿ ಪರಂಪರೆಯ ಉಳಿವಿಗಾಗಿ, ಭಾರತೀಯ ಚಿಂತನೆಯ ಶಿಕ್ಷಣದ ಪ್ರಸಾರಕ್ಕಾಗಿ ದೇಶಾದ್ಯಂತ ಭಿಕ್ಷೆ ಎತ್ತಿ ‘ಬನಾರಸ್ ಹಿಂದೂ ವಿಶ್ವವಿದ್ಯಾಲಯ’ ವನ್ನು ಸ್ಥಾಪಿಸಿದ ಮಹನೀಯ ಮಾಳವೀಯರು. ಸ್ವಾತಂತ್ರ್ಯ ಹೋರಾಟಗಾರ, ಕವಿ-ಸಾಹಿತಿ, ಪತ್ರಿಕೆಗಳನ್ನು ಕಟ್ಟಿಬೆಳೆಸಿದ ಧೀಮಂತ, ವಿದ್ಯಾಧಾತ ಮತ್ತು ಭಾರತೀಯ ಮೌಲ್ಯಗಳ ಹಿತಚಿಂತಕ, ಮೌಡ್ಯ, ಜಾತೀವಾದಗಳನ್ನು ಪೋಷಿಸದ ಮನೋಭಾವನೆ ಹೊಂದಿದ್ದ ಮಾಳವೀಯರು ‘ಪಂಡಿತ’ರೆಂದೇ ಹೆಸರುವಾಸಿ. ಮತ್ತಷ್ಟು ಓದು »

23
ಆಗಸ್ಟ್

“ಭಾರತ್ ಕಿ ಬರ್ಬಾದಿ” ಕೂಗಿನ ಹಿಂದಿರುವ ಕೈಗಳು ಯಾರದ್ದು?

– ರಾಕೇಶ್ ಶೆಟ್ಟಿ

downloadಉಗ್ರ ಬರ್ಹನ್ ವಾನಿಯ ಹತ್ಯೆಯಾಗಿ ಒಂದು ತಿಂಗಳು ಕಳೆದು ಕಾಶ್ಮೀರ ಕಣಿವೆಯ ಒಂದೆರಡು ಜಿಲ್ಲೆಗಳನ್ನು ಬಿಟ್ಟು ಉಳಿದೆಲ್ಲವೂ ತಣ್ಣಗಾಗಿದ್ದರೂ ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿರುವ ದೇಶದ್ರೋಹಿಗಳ ಕೂಗು ಇನ್ನು ತಣ್ಣಗಾಗಿಲ್ಲ. ಇಷ್ಟು ದಿನ ಶ್ರೀನಗರದಲ್ಲೋ, ದೆಹಲಿಯ JNUವಿನಲ್ಲೋ, ಉತ್ತರ ಭಾರತದಲ್ಲೆಲ್ಲೋ ಕಾಣಿಸಿಕೊಳ್ಳುತ್ತಿದ್ದ ಈ Urban Naxalರು ಈಗ ನಮ್ಮ ಬೆಂಗಳೂರಿಗೂ ಕಾಲಿಟ್ಟಿದ್ದಾರೆ. ಕಾಶ್ಮೀರದಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಗಲಭೆ ಶುರುವಾಗಿ ಒಂದು ವಾರ ಕಳೆಯುವಷ್ಟರಲ್ಲೇ (ಜುಲೈ15,16) We Stand with Kashmir ಎನ್ನುವ ಹೆಸರಿನೊಂದಿಗೆ ಬೆಂಗಳೂರಿನ ಟೌನ್ ಹಾಲ್ ಮುಂದೆ ನಿಂತು “ಕಾಶ್ಮೀರದ ಆಜಾದಿ” ಕೇಳಲು ಹೊರಟಿದ್ದ ಈ ಅರ್ಬನ್ ನಕ್ಸಲರ ಆಸೆಗೆ ನಾವೊಂದಿಷ್ಟು ಜನರು ಸೇರಿ ತಣ್ಣಿರೇರಚಿದ್ದೆವು. ಅದಾದ ನಂತರ, ‘ತಾತ್ಕಾಲಿಕವಾಗಿ’ ನಾವು ಅವರನ್ನು ತಡೆದಿದ್ದೇವೆ ಅಂತಲೇ ನಾನು ಬರೆದಿದ್ದೆ. ಆ ಆತಂಕ ನಿಜವೆಂಬಂತೆ ಮೊನ್ನೆ ಆಗಸ್ಟ್ 13ರಂದು ಅಮ್ನೆಸ್ಟಿ ಇಂಡಿಯಾ ಎಂಬ NGO ಹೆಸರಿನಡಿಯಲ್ಲಿ, ಕಳ್ಳರೆಲ್ಲಾ ಸಂತೆಯಲ್ಲಿ ಒಂದಾಗುವಂತೆ ಬಂದು ಸೇರಿಕೊಂಡಿದ್ದಾರೆ. ಮತ್ತಷ್ಟು ಓದು »

18
ಆಗಸ್ಟ್

ನೀನ್ಯಾರಿಗಾದೆಯೋ ಎಲೆ ಮಾನವ!

– ಪ್ರೊ.ರಾಜಾರಾಮ್ ಹೆಗಡೆ

gaumataಇತ್ತೀಚೆಗೆ ಗುಜರಾತ್ ಹಾಗೂ ಮಧ್ಯಪ್ರದೇಶಗಳಲ್ಲಿ ಗೋರಕ್ಷಕರಿಂದ ದಲಿತರು ಹಾಗೂ ಮುಸ್ಲಿಂ ಸ್ತ್ರೀಯರ ಮೇಲೆ ಹಲ್ಲೆಗಳು ನಡೆದ ಪ್ರಕರಣಗಳು ವರದಿಯಾಗಿ ಸುದ್ದಿಯಾದವು. ನಂತರ ಇದಕ್ಕೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿಯವರಿಂದ ಖಂಡನೆಯ ಮಾತುಗಳು ಕೂಡ ಬಂದವು. ನರೇಂದ್ರ ಮೋದಿಯವರ ಖಂಡನೆಗೆ ಹಿಂದುತ್ವದವರಿಂದ ಹಾಗೂ ಪ್ರಗತಿಪರರಿಂದ ಪ್ರತಿಕ್ರಿಯೆಗಳೂ ಬಂದಿವೆ. ನರೇಂದ್ರ ಮೋದಿಯವರ ಹೇಳಿಕೆ ಯಾವುದೇ ಕಾರಣಕ್ಕೆ ಬಂದಿರಲಿ, ಈ ಗೋರಕ್ಷಣೆಯ ರಾಜಕೀಯವು ಸೃಷ್ಟಿಸುತ್ತಿರುವ ಸಮಸ್ಯೆಗಳ ಕುರಿತು ಹಿಂದುತ್ವದ ಮುಂದಾಳುವೇ ಈ ರೀತಿ ಹೇಳಿಕೆ ನೀಡುವ ಅಗತ್ಯವಂತೂ ಖಂಡಿತಾ ಇತ್ತು. ಇಂದು ಹಿಂದುತ್ವ ರಾಜಕೀಯ ಧುರೀಣರನ್ನು ಹಾಗೂ ಹೋರಾಟಗಾರರನ್ನು ನೋಡಿದರೆ ಒಂದೋ ಹಿಂದೂಸಂಸ್ಕೃತಿ, ಗೋವು, ಪೂಜಾಸ್ಥಳಗಳು, ದೇವತೆಗಳು, ಧಾರ್ಮಿಕ ಆಚರಣೆ ಇವೆಲ್ಲ ಇವರಿಗೆ ಸಾಂಸ್ಕೃತಿಕ ಕಾಳಜಿಗಿಂತ ರಾಜಕೀಯದ ಸರಕುಗಳಾಗಿಬಿಟ್ಟಿವೆ, ಇಲ್ಲಾ, ಭಾರತೀಯ ಸಂಸ್ಕೃತಿಯ ಕುರಿತು ಇವರಿಗೆ ತಪ್ಪು ತಿಳಿವಳಿಕೆಗಳಿವೆ. ಹಾಗಾಗಿ ಈ ರಾಜಕೀಯವು ನಮ್ಮ ಜನರಿಗೆ ಹಾಗೂ ದೇಶಕ್ಕೆ ಏಕೆ ಬೇಕು ಎಂಬ ಪರಾಮರ್ಶೆ ಕೂಡ ಜೊತೆಜೊತೆಯಲ್ಲೇ ನಡೆಯಬೇಕಾದ ಅಗತ್ಯವಿದೆ. ಇಲ್ಲದಿದ್ದಲ್ಲಿ ಈ ರಾಜಕೀಯವು ಜನರಿಂದ ದೂರವಾಗಿ, ಜನಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಮತ್ತಷ್ಟು ಓದು »

17
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 8
ಮೇಡ೦ ಭಿಕಾಜಿ ಕಾಮಾ:
– ರಾಮಚಂದ್ರ ಹೆಗಡೆ

download (2)ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿ ಮೆರೆದ ಮಹಿಳೆಯರಲ್ಲಿ ಒಬ್ಬರು ಮು೦ಬೈನ ಮೇಡ೦ ಭಿಕಾಜಿ ಕಾಮಾ. ಮೇಡಂ ಕಾಮಾ ಚಿಕ್ಕಂದಿನಿಂದಲೂ ಆಪಾರ ದೇಶಾಭಿಮಾನಿ. ತೀವ್ರ ಪ್ಲೇಗ್ ರೋಗಕ್ಕೆ ತುತ್ತಾಗಿ ಆಕೆ ಬಂಧುಗಳ ಒತ್ತಾಯದ ಮೇರೆಗೆ ದೇಶ ತ್ಯಜಿಸಿ ಲಂಡನ್ ಗೆ ಹೋಗಬೇಕಾಯಿತು. ಅಲ್ಲಿ ಗುಣಮುಖಳಾದ ಕಾಮಾ ಅಲ್ಲೇ ತನ್ನ ರಾಷ್ಟ್ರ ಜಾಗೃತಿಯ ಕಾರ್ಯಗಳನ್ನು ಆರಂಭಿಸಿದಳು. ಪರದೇಶದಲ್ಲೇ ಇತರ ದೇಶಭಕ್ತರೊಡಗೂಡಿ ಭಾರತದ ಧ್ವಜವನ್ನು ರೂಪಿಸಿದ ಮೇಡಂ ಕಾಮಾ ಜರ್ಮನಿಯ ಸ್ಪಟ್‌ಗಾರ್ಟ್‌‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ಅಲ್ಲಿ ಭಾರತೀಯರ ಕಷ್ಟ ಕಾರ್ಪಣ್ಯ ಹಾಗೂ ಬ್ರಿಟಿಷರ ದೌರ್ಜನ್ಯಗಳ ಕುರಿತು ದಿಟ್ಟವಾಗಿ ವಾದ ಮಂಡಿಸಿದಳು. ಅಲ್ಲೇ ಭಾರತ ಧ್ವಜವನ್ನು ಹಾರಿಸಿ ನೆರೆದಿದ್ದ ಎಲ್ಲರೂ ಅದಕ್ಕೆ ಗೌರವ ಸಲ್ಲಿಸುವಂತೆ ಮಾಡಿದಳು. ಮತ್ತಷ್ಟು ಓದು »

17
ಆಗಸ್ಟ್

ಎನ್‍ಜಿಓ: ಪರದೆ ಹಿಂದಿನ ಕತೆ

– ರೋಹಿತ್ ಚಕ್ರತೀರ್ಥ

harvesting_souls_of_indiaನರೇಂದ್ರ ಮೋದಿಯ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ಮೊದಲ ಕೆಲಸವೇನೆಂದರೆ ಅದುವರೆಗೆ ಭಾರತದಲ್ಲಿ ಬೇರುಬಿಟ್ಟು ಹೆಮ್ಮರಗಳೂ ಹೆಮ್ಮಾರಿಗಳೂ ಆಗಿ ವಿಜೃಂಭಿಸುತ್ತಿದ್ದ ಎನ್‍ಜಿಓಗಳಿಂದ ಅವುಗಳ ಹಣಕಾಸು ವ್ಯವಹಾರಗಳ ಲೆಕ್ಕ ಕೇಳಿದ್ದು ಮತ್ತು ಹಾಗೆ ಲೆಕ್ಕ ಕೊಡದೆ ಅಂಗಡಿ ತೆರೆದಿರುವ ಎಲ್ಲ ಎನ್‍ಜಿಓಗಳಿಗೂ ಬಾಗಿಲು ಹಾಕಿಸಿ ಬೀಗ ಜಡಿಯುತ್ತೇನೆಂದು ಖಡಕ್ ಸೂಚನೆ ಇತ್ತಿದ್ದು. ಯಾವ್ಯಾವುದೋ ಬೇನಾಮಿ ಹೆಸರು ಮತ್ತು ಖಾತೆಗಳಿಂದ ಧನಸಹಾಯ ಪಡೆಯುತ್ತ ಆರಾಮಾಗಿದ್ದ ಎನ್‍ಜಿಓಗಳಿಗೆ ಕೇಂದ್ರ ಸರಕಾರ ಹೀಗೆ ಚಾಟಿ ಬೀಸತೊಡಗಿದ್ದೇ ಕಣ್ಣುಕತ್ತಲೆ ಬಂದಂತಾಯಿತು. ಕೇಂದ್ರದ ಗೃಹಖಾತೆ 2015ರ ಎಪ್ರೀಲ್‍ನಲ್ಲಿ ಗ್ರೀನ್‍ಪೀಸ್ ಎಂಬ ಅಂತಾರಾಷ್ಟ್ರೀಯ ಎನ್‍ಜಿಓದ ಮಾನ್ಯತೆ ರದ್ದುಮಾಡಿದ್ದೇ ತಡ, ಇನ್ನು ಕೆಲವೇ ದಿನಗಳಲ್ಲಿ ತಮ್ಮ ಬುಡಕ್ಕೂ ಕೊಡಲಿಯೇಟು ಬೀಳುವುದು ಖಚಿತವೆಂದು ತಿಳಿದ ಉಳಿದ ಎನ್‍ಜಿಓಗಳು ಚಿರೋಬರೋ ಅಳತೊಡಗಿದವು. ಬಿಲಕ್ಕೆ ಹೊಗೆ ಹಾಕಿದಾಗ ದಂಶಕಗಳು ದಿಕ್ಕಾಪಾಲಾಗಿ ಹೊರಗೋಡಿಬರುವುದು ಸಾಮಾನ್ಯವೇ ತಾನೇ? ಗ್ರೀನ್‍ಪೀಸ್ ಸಂಸ್ಥೆಗೆ ಬರೆ ಎಳೆದೊಡನೆ ಫೋರ್ಡ್ ಫೌಂಡೇಶನ್, ಆಮ್ನೆಸ್ಟಿ ಇಂಟರ್‍ನ್ಯಾಷನಲ್, ವಿಶ್ವಸಂಸ್ಥೆ ಎಲ್ಲವೂ ಕೋರಸ್‍ನಲ್ಲಿ ಕೂಗು ಹಾಕಿದವು. ಗ್ರೀನ್‍ಪೀಸ್ ಮತ್ತು ಉಳಿದ ದೇಶದ್ರೋಹಿಗಳ ನೆಟ್‍ವರ್ಕ್ ಹೇಗಿದೆ ಎಂಬುದನ್ನು ಯಾವ ತನಿಖೆಯೂ ಇಲ್ಲದೆ ಸರಕಾರಕ್ಕೆ ನೋಡಲು ಅವಕಾಶವಾಯಿತು. ನಂಬಿದರೆ ನಂಬಿ, ಆ ಕಾಲಕ್ಕೆ ಭಾರತದಲ್ಲಿ ಯಾರ ನಿಯಂತ್ರಣ ಇಲ್ಲದೆ ಸಿಕ್ಕಸಿಕ್ಕ ಮೂಲಗಳಿಂದ ಧನಸಹಾಯ ಪಡೆದುಕೊಂಡು ಆಯಾ ವ್ಯಕ್ತಿ/ಸಂಸ್ಥೆಗಳಿಗೆ ಬೇಕಾದಂತೆ ಕೆಲಸ ಮಾಡಿಕೊಡುತ್ತಿದ್ದ ಎನ್‍ಜಿಓಗಳ ಸಂಖ್ಯೆ ಒಟ್ಟು 42,273! ಮತ್ತಷ್ಟು ಓದು »

17
ಆಗಸ್ಟ್

ಅಂದು ಜೆ ಎನ್ ಯು, ಇಂದು ಬೆಂಗಳೂರು

– ತನ್ಮಯೀ ಪ್ರೇಮ್ ಕುಮಾರ್

downloadಜೆಎನ್‌ಯುನಲ್ಲಿ ನಡೆದ ದೇಶದ್ರೋಹದ ಕೆಲಸಗಳು, ಘೋಷಣೆಗಳು, ಬೌದ್ಧಿಕ ದಾರಿದ್ರ್ಯತನವನ್ನು, ವೈಚಾರಿಕ ಗುಲಾಮಿತನದ ಪರಿಸ್ಥಿತಿ ಕಂಡು ಮರುಗಿದ್ದೆ. ಎಷ್ಟೋ ಅಸಹನೆಯ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಭಟನೆ, ವಿಚಾರ ಸಂಕಿರಣ, ಆಂದೋಲನದ ಭಾಗವಾಗಿದ್ದೆ ಕೂಡ. ಆದರೆ ಶಾಂತಿಪ್ರಿಯ ಬೆಂಗಳೂರಿನಲ್ಲಿ ಇಂಥದೇ ಘಟನೆ ನಡೆಯಬಹುದೆಂಬ ಕಲ್ಪನೆ ಕನಸಿನಲ್ಲೂ ಬಂದಿರಲಿಲ್ಲ. ಮೊನ್ನೆ ಜೆಎನ್‌ಯು ವಿವಿಯ ಸ್ನೇಹಿತೆಯೊಬ್ಬಳು ಸಿಕ್ಕಾಗಲೂ ಕರ್ನಾಟಕ ಇಂಥ ಘಟನೆಗಳಿಂದ ಮುಕ್ತವಾಗಿದೆ ಎಂಬ ಗರ್ವದಿಂದ ಮಾತನಾಡಿದ್ದೆ. ಮೊನ್ನೆಯವರೆಗೆ ಎಲ್ಲರ ನಂಬಿಕೆಯೂ ಅದೇ ಆಗಿತ್ತು. ಆದರೆ ಆಗಸ್ಟ್ 13ರ ಸಂಜೆ ಭಾರತ 70ನೇ ಸ್ವಾತಂತ್ರ್ಯ ಸಂಭ್ರಮದ ಹೊಸ್ತಿಲಲ್ಲಿ ನಿಂತ ಸಂದರ್ಭದಲ್ಲಿ ನಮ್ಮ ವಿಶ್ವಾಸಕ್ಕೆ, ನೆಮ್ಮದಿಯ ಬಾಳಿಗೆ ಕೊಡಲಿ ಪೆಟ್ಟು ಬೀಳುವಂತ ಘಟನೆ ನಡೆದಿದೆ. ಮತ್ತಷ್ಟು ಓದು »

16
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 7:
ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್

– ರಾಮಚಂದ್ರ ಹೆಗಡೆ

collage_305_121915014504ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್ ರದ್ದು ಒಂದು ವಿಶೇಷ ಅಧ್ಯಾಯ. ಹಿಂದೂ ಮುಸ್ಲಿಂ ಭ್ರಾತೃತ್ವದ ಒಂದು ಅಪರೂಪದ ಉದಾಹರಣೆ ಈ ಇಬ್ಬರದು. ಇವರಿಬ್ಬರ ಮಧ್ಯೆ ಮತೀಯ ಸಂಘರ್ಷ ತಂದಿಡುವ ಬ್ರಿಟಿಷರ ಹುನ್ನಾರಕ್ಕೆ ದಿಟ್ಟ ಉತ್ತರವಾಗಿ ನೇಣಿಗೇರುವವರೆಗೂ ಒಂದಾಗಿ ರಾಷ್ಟ್ರೀಯ ಚಿಂತನೆಗೆ ತಮ್ಮನ್ನು ಅರ್ಪಿಸಿಕೊಂಡ ಮಹಾನ್ ದೇಶಭಕ್ತರು. ತಮ್ಮ ತಮ್ಮ ಧರ್ಮಗಳಿಗೆ ಬದ್ಧರಾಗಿಯೂ ಈ ದೇಶಕ್ಕೆ ನಿಷ್ಠರಾಗಲು ಸಾಧ್ಯ ಎಂಬುದನ್ನು ಈ ದೇಶಭಕ್ತ ಜೋಡಿ ತೋರಿಸಿಕೊಟ್ಟಿದೆ ಹಾಗೂ ಇಂದಿನ ಪ್ರತ್ಯೇಕತಾವಾದಿಗಳಿಗೆ ಇವರ ಬದುಕು ಒಂದು ಪಾಠ. ಮತ್ತಷ್ಟು ಓದು »