ವಿಷಯದ ವಿವರಗಳಿಗೆ ದಾಟಿರಿ

Archive for

9
ಆಗಸ್ಟ್

ಆತ್ಮಹತ್ಯೆಯಲ್ಲಿನ ಮನಸ್ತಿತಿ.

– ಗೀತಾ ಹೆಗ್ಡೆ

suicide_2439218fಆತ್ಮಹತ್ಯೆ ಮಹಾ ಪಾಪ.  ಆತ್ಮಹತ್ಯೆ ಮಾಡಿಕೊಂಡವರು, ದುರ್ಮರಣದಲ್ಲಿ ಸತ್ತವರು ಅಂತರ್ ಪಿಶಾಚಿಯಾಗಿ ಅಲೆಯುತ್ತಾರಂತೆ. ಅವರಿಗೆ ಇಹದಲ್ಲೂ ಪರದಲ್ಲೂ ಸ್ಥಾನವಿಲ್ಲವಂತೆ.. ದೆವ್ವವಾಗಿ ಅಲೆಯುತ್ತಾರಂತೆ,  ಹಾಗಂತೆ ಹೀಗಂತೆ ಅನ್ನುವ ಕಥೆಗಳು ಚಿಕ್ಕಂದಿನಿಂದ ನನ್ನ ತಲೆ ಹೊಕ್ಕಿ ಶಾಶ್ವತವಾಗಿ ನೆಲೆಯೂರಿದ್ದು ಬದುಕನ್ನು ಎದುರಿಸುವ ಛಲಕ್ಕೆ ನಾಂದಿಯಾಗಿರಬಹುದೇ ಅನ್ನುವ ಸಣ್ಣ ಗುಮಾನಿ ಕಾಡಿದ್ದು ಇತ್ತೀಚಿನ ಘಟನೆಗಳನ್ನು ನೋಡಿದಾಗ, ಬರಹಗಳನ್ನು ಓದಿದಾಗ ನೆನಪುಗಳು ಹೆಡೆಯೆತ್ತಿ ನನ್ನ ಸ್ವಂತ ಅನುಭವ ಬರೆಯಲು ಪ್ರೇರೇಪಿಸಿತು. ಆ ಒಂದು ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಈ ಲೇಖನದ ತಾತ್ಪರ್ಯ. ಮತ್ತಷ್ಟು ಓದು »

8
ಆಗಸ್ಟ್

ಸುಮ್ಮ ಸುಮ್ಮನೆ ಬರಲಿಲ್ಲ ಕನ್ನಡಕ್ಕೆ ಮಹಾವೀರ ಚಕ್ರ ; ಇವರು ಮಹಾವೀರತೆಯ ಜೀವಂತ ಸ್ಮಾರಕ

– ಸಂತೋಷ್ ತಮ್ಮಯ್ಯ

9ದೇಶದ ಎರಡನೆಯ ಅತಿದೊಡ್ಡ ಶೌರ್ಯ ಪದಕ ಮಹಾವೀರ ಚಕ್ರ ಪದಕದ ಗೌರವಕ್ಕೆ ಪಾತ್ರರಾದ ಇಬ್ಬರು ಮಹಾಯೋಧರಲ್ಲಿ ಲೆ.ಕರ್ನಲ್ ಪಿ.ಎಸ್. ಗಣಪತಿ ಎರಡನೆಯವರು. ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದಿಲ್ಲ, ಟಿ ವಿ ಅವರ ಸಂದರ್ಶನ ನಡೆಸಿಲ್ಲ. ಅವರು ಸಭೆ ಸಮಾರಂಭಗಳಿಗೆ ಹೋಗಿಲ್ಲ. ಅವರ ಬಗ್ಗೆ ನಾಡಿನ ಜನಕ್ಕೆ ಏನೆಂದರೆ ಏನೂ ತಿಳಿದಿಲ್ಲ. ಅವರ ಸಂಪರ್ಕ ಸಂಖ್ಯೆ: 9980009687

ನೋಡಲು ಅದೊಂದು ಲೋಹದ ಬಿಲ್ಲೆ. ಅದರಲ್ಲಿ ನಕ್ಷತ್ರದ ಚಿಹ್ನೆ. ಅದರ ಅಂಚಿನಲ್ಲಿ ಕಂಡೂ ಕಾಣದಂತೆ ಕೆತ್ತಿದ ಪಡೆದವರ ಹೆಸರು, ಪಡೆದ ದಿನಾಂಕ. ಕದನಕ್ಕೆ ತೆರಳಿದ ಪ್ರತೀ ಯೋಧನಿಗೂ ಅದನ್ನು ಪಡೆಯುವ ಅದಮ್ಯ ಹಂಬಲ. ಏಕೆಂದರೆ ಅದು ವೀರತೆಯ ಪ್ರತೀಕ. ಹೆಸರು ಮಹಾವೀರ ಚಕ್ರ. ಯುದ್ಧಕಾಲದಲ್ಲಿ ಮಹಾಪರಾಕ್ರಮಕ್ಕೆ ನೀಡುವ ಎರಡನೆಯ ಅತೀ ದೊಡ್ಡ ಶೌರ್ಯ ಪ್ರಶಸ್ತಿ. ಬ್ರಿಟಿಷ್ ಸೈನ್ಯದಲ್ಲಿ ‘ಡಿಶ್ಟಿಂಗ್ವಿಸ್ಡ್ ಸರ್ವೀಸ್ ಕ್ರಾಸ್’ ಹೇಗೋ ಹಾಗೆ ಭಾರತಕ್ಕೆ ಈ ಮಹಾವೀರ ಚಕ್ರ. ಮಹಾ ಸಮರಪಡೆಯನ್ನು ಹೊಂದಿರುವ ಭಾರತದಲ್ಲಿ ೧೯೪೭ರಿಂದ ಇದುವರೆಗೆ ಮಹಾವೀರ ಚಕ್ರದ ಗೌರವಕ್ಕೆ ಪಾತ್ರರಾದವರು ಕೇವಲ ೨೧೮ ಮಂದಿ ವೀರರು. ಅವರಲ್ಲಿ ೬ ಜನ ಯೋಧರು ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದ ವೀರರಲ್ಲಿ ವೀರರು (MahaVira chakra bar). ಹೀಗಿರುವಾಗ ಭಾರತೀಯ ಸೈನ್ಯಕ್ಕೆ ಮಹಾಮಹಾ ಯೋಧರನ್ನು ನೀಡಿದ ನಮ್ಮ ಕರ್ನಾಟಕದಲ್ಲಿ ಇದನ್ನು ಪಡೆದವರಾರು ಎಂದು ನೋಡಿದರೆ ಕಾಣುವವರು ಕನ್ನಡದ ಇಬ್ಬರು ಮಹಾರ ಚಕ್ರಧರರು. ಅವರಲ್ಲೊಬ್ಬರು ‘ಟೈಗರ್ ಆಫ್ ಸರ್ಗೋದಾ’ ಎಂದು ಖ್ಯಾತರಾದ ಸ್ಕ್ವಾ.ಲೀ.ಅಜ್ಜಾಮಾಡ ಬಿ.ದೇವಯ್ಯ. ಮತ್ತೊಬ್ಬರು ಮೇ.(ನಂತರ ಲೆ.ಕರ್ನಲ್)ಪಿ.ಎಸ್ ಗಣಪತಿ. ಒಬ್ಬರು ಅಮರಯೋಧ. ಮತ್ತೊಬ್ಬರು ಮಹಾವೀರತೆಯ ಜೀವಂತ ಸ್ಮಾರಕ. ಮತ್ತಷ್ಟು ಓದು »

7
ಆಗಸ್ಟ್

ಉಪನಿಷತ್ ವಾಙ್ಮಯ 1: ಮೃತ್ಯುಮುಖದಲ್ಲಿ ಜ್ಞಾನದಾಹಿ; ಕೇಳಿದ ಗುರುವನು “ದೇಹಿ! ದೇಹಿ!”

– ಸ್ವಾಮಿ ಶಾಂತಸ್ವರೂಪಾನಂದ

yama_nachiketaಉಪನಿಷತ್ ಎಂಬುದು ವೇದಕಾಲದ ಗದ್ಯಕಾವ್ಯ. ವಿದ್ಯೆ, ಜ್ಞಾನ, ಚಿಂತನೆಗಳು ಮುಪ್ಪುರಿಗೊಂಡ ಮನಸ್ಸುಗಳು ರಚಿಸಿದ ಅನನ್ಯ ಜೀವನಾಮೃತ ಸಾರ. ವೇದಗಳ ಒಟ್ಟರ್ಥವನ್ನು ಇವು ಸಂಗ್ರಹವಾಗಿ ತಿಳಿಸುತ್ತವೆ ಎನ್ನುವ ಕಾರಣಕ್ಕೆ ಇವನ್ನು ವೇದಾಂತ ಎಂದೂ ಕರೆಯುತ್ತಾರೆ. ಉಪನಿಷತ್ತುಗಳ ಸಾಲಿನಲ್ಲಿ ಅತಿವಿಶಿಷ್ಟವಾದದ್ದು ಕಠ. ಕೃಷ್ಣಯಜುರ್ವೇದದ ಕಠ ಪರಂಪರೆಯಲ್ಲಿ ಬರುವ ಈ ಉಪನಿಷತ್ತು ಗುರು-ಶಿಷ್ಯರ ಸಂವಾದದ ಒಂದು ಸಂಕ್ಷಿಪ್ತ ಚಿತ್ರಣ. ಗುರುಸ್ಥಾನದಲ್ಲಿ ಕೂತವನು ಸಾಕ್ಷಾತ್ ಯಮಧರ್ಮರಾಯ! ಮತ್ತು ಅವನೆದುರು ಶಿಷ್ಯನಾಗಿ ತಲೆಬಾಗಿ ವಿನೀತನಾಗಿ ಪವಡಿಸಿದವನು ಏಳೋ ಎಂಟೋ ವಯಸ್ಸಿನ ಮುದ್ದುಬಾಲಕ ನಚಿಕೇತ. ಪ್ರಪಂಚದ ಎರಡು ಧ್ರುವಗಳಂತಿರುವ ಈ ಇಬ್ಬರು ಜೊತೆಯಾದದ್ದು ಹೇಗೆ ಎಂಬುದೇ ಒಂದು ವಿಚಿತ್ರ ಕತೆ. ಕಠೋಪನಿಷತ್ತನ್ನು ಪ್ರವೇಶಿಸುವ ಮೊದಲು ನಮಗೆ ಆ ಹಿನ್ನೆಲೆ ತಿಳಿದಿದ್ದರೆ ಒಳ್ಳೆಯದು. ಮತ್ತಷ್ಟು ಓದು »

6
ಆಗಸ್ಟ್

ಎಲ್ಲಿಯ ಹವಾಲ್ದಾರ್ ಜಪ್ಪು? ಎಲ್ಲಿಯ ಸದ್ದಾಂ ಹುಸೇನ್?

– ಸಂತೋಷ್ ತಮ್ಮಯ್ಯ

jappuಮೂರು ವರ್ಷದ ಹಿಂದೆ ಇಂಥದ್ದೇ ಒಂದು ಮಳೆಗಾಲದಲ್ಲಿ ಹವಾಲ್ದಾರ್ ಜಪ್ಪು ಬೆಂಗಳೂರಿನಲ್ಲಿ ಸಿಕ್ಕಿದ್ದರು. ಅಂದು ಜಪ್ಪು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲು ತಮ್ಮ ಮೆಡಲುಗಳ ಸಮೇತ ಬೆಂಗಳೂರಿಗೆ ಬಂದುಬಿಟ್ಟಿದ್ದರು. ಅದಾದ ನಂತರ ಮತ್ತೆ ಮೊನ್ನೆ ಸಿಕ್ಕಿದ್ದರು. ಸಿಕ್ಕವರು ಈಗ ತಾನು ಊರಲ್ಲಿಲ್ಲವೆಂದೂ ದಕ್ಷಿಣ ಕೊಡಗಿನ ತಾವಳಗೇರಿ ಶೆಟ್ಟಿಗೇರಿ ಎಂಬ ಊರಲ್ಲಿರುವುದಾಗಿಯೂ ಬಾಡಿಗೆ ಮನೆಯೊಂದನ್ನು ಹಿಡಿದು ಮಗಳನ್ನು ಪ್ರೈಮರಿ ಓದಿಸುತ್ತಿದ್ದೇನೆಂದು ಹೇಳಿದ್ದರು. ಪುರುಸೋತ್ತಾದಾಗ ಒಮ್ಮೆ ಮನೆಗೆ ಬರಬೇಕೆಂದೂ ಹೇಳಿದ್ದರು. ಮೂರು ವರ್ಷಗಳ ಹಿಂದೆ ಇದ್ದ ಆ ದೊಡ್ಡ ಸ್ವರದ ರಭಸ ಕಿಂಚಿತ್ತೂ ಮಾಸಿರಲಿಲ್ಲ. ಗಡಸುತನ ಮಾಯವಾಗಿರಲಿಲ್ಲ. ಆದರೆ ಮಾತುಮಾತಿಗೆ ಆಕ್ರೋಶಗೊಳ್ಳುವ ಅವರ ಜಾಯಮಾನ ಮೂರು ವರ್ಷಗಳಲ್ಲಿ ಮೂರುಪಟ್ಟು ಹೆಚ್ಚಿದಂತೆ ಕಂಡುಬಂತು. ಮತ್ತಷ್ಟು ಓದು »

5
ಆಗಸ್ಟ್

ಅಪರಾಧಕ್ಕೆ ಜಾತಿ ಬಣ್ಣ ಬಳಿಯುವುದೇಕೆ?

– ರಾಕೇಶ್ ಶೆಟ್ಟಿ

victims_and_witnesses_of_crime_crimeಕಳೆದ ವಾರ ಎರಡು ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದವು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್ಪಿ ನಾಯಕಿ ಮಾಯಾವತಿಯವರ ಬಗ್ಗೆ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ದಯಾಶಂಕರ್ ಮಾಡಿದ ಕೆಟ್ಟ ಟೀಕೆಯ ಪ್ರಕರಣ ಮೊದಲನೆಯದು.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ದಯಾಶಂಕರ್ ಮೇಲೆ BJP ಪಕ್ಷ ಆರು ವರ್ಷಗಳ ಕಾಲ ಉಚ್ಚಾಟನೆಯಂತಹ ಕಠಿಣ ಕ್ರಮ ಕೈಗೊಂಡಿದೆ. ಅವರ ಮೇಲೆ FIR ಕೂಡ ದಾಖಲಾಗಿದೆ. ಆದರೆ, ದಯಾಶಂಕರ್ ಅವರ ಮಗಳನ್ನು, ಮಡದಿಯನ್ನು ನಮಗೊಪ್ಪಿಸಿ ಎಂದಿರುವ BSP ನಾಯಕ ನಸೀಮುದ್ದೀನ್ ವಿರುದ್ಧ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಎಷ್ಟು ಕೇಸುಗಳು ದಾಖಲಾಗಿವೆ ? ದಯಾಶಂಕರ್ ಅಕ್ರಮ ಸಂತಾನ ಎನ್ನುವ ಮೂಲಕ, ದಯಾಶಂಕರ್ ಅವರ ತಾಯಿಗೆ ಅವಮಾನ ಮಾಡಿದ BSP ಶಾಸಕಿ ಉಷಾ ಚೌಧರಿ ವಿರುದ್ಧ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಎಷ್ಟು ಕೇಸುಗಳು ದಾಖಲಾಗಿವೆ ? ದಯಾಶಂಕರ್ ನಾಲಗೆ ಕತ್ತರಿಸಿ ತಂದವರಿಗೆ ಐವತ್ತು ಲಕ್ಷ ಕೊಡುತ್ತೇನೆ ಎಂದ BSP ಪಕ್ಷದ ನಾಯಕಿ ಜನ್ನತ್ ಜಹಾನ್ ಮೇಲೆ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಕ್ರಮ ಕೈಗೊಳ್ಳುವುದು ಪಕ್ಕಕ್ಕಿರಲಿ. ಮಾಯವತಿಯವರು, ಅವರ ಕಾರ್ಯಕರ್ತರ ಘೋಷಣೆಗಳನ್ನು ಸಮರ್ಥಿಸಿಕೊಂಡಿದ್ದಾರೆ! ಮಾಯಾವತಿಯವರಿಗಾದರೆ ಮಾತ್ರ ನೋವು, ದಯಾಶಂಕರ್ ಅವರ ತಾಯಿ, ಮಗಳು, ಹೆಂಡತಿಗಾಗುವ ನೋವು ನೋವಲ್ಲವೇ? ಮತ್ತಷ್ಟು ಓದು »

3
ಆಗಸ್ಟ್

ಭಾವನೆಗಳ ತಿಕ್ಕಾಟ

– ಗೀತಾ ಹೆಗ್ಡೆ

imagesಮನಸ್ಸಿನ ಭಾವನೆಗಳನ್ನು ಒಮ್ಮೊಮ್ಮೆ ನಿಗ್ರಹಿಸುವುದು ಬಲು ಕಷ್ಟ.  ಇದು ವಯಸ್ಸಿನ ಅಸಹಾಯಕತೆಯೋ ಅಥವಾ ಇಷ್ಟು ದಿನದ ಬದುಕಿನಲ್ಲಿ  ತಾ ಬಯಸಿದ ಬದುಕು ತನ್ನದಾಗಿಲ್ಲವೆಂಬ ಹತಾಶೆಯ ಮಾನಸಿಕ ತೊಳಲಾಟವೋ.  ಒಟ್ಟಿನಲ್ಲಿ ಭಾವನೆಗಳ ತೀವ್ರತೆ ಮನಸ್ಸನ್ನು ಘಾಸಿಗೊಳಿಸುವುದಂತೂ ನಿಜ.  ಬದುಕನ್ನೇ ಹಿಂಡಿ ಹಿಪ್ಪೆ ಮಾಡುವ ಕೆಲವು ನೆನಪುಗಳನ್ನು, ಈಡೇರದ ಬಯಕೆಗಳನ್ನು ಮರೆಯುವ ಬಯಕೆ ಇರುವ ಪ್ರತಿಯೊಬ್ಬ ಮನುಷ್ಯ ಇನ್ನಿತರ ಕೆಲಸ ಕಾಯಕದಲ್ಲಿ ತೊಡಗಿಸಿಕೊಳ್ಳಲು ಶ್ರಮ ಪಡುತ್ತಾನೆ.  ಗುರಿ ತಲುಪುವವರೆಗೂ ಹೋರಾಟದ ಮನೋಭಾವ ಮುಂದುವರೆಯುತ್ತಲೇ ಇರುತ್ತದೆ. ಕುಳಿತಲ್ಲಿ ನಿಂತಲ್ಲಿ ಮನಸ್ಸನ್ನು ಕಾಡುವ ಮಹಾ ಗುದ್ದಾಟದ ಸಂದರ್ಭ ಎಂದರೂ ತಪ್ಪಾಗಲಾರದು.  ಬದುಕನ್ನು ಊಜಿ೯ತಗೊಳಿಸಿಕೊಳ್ಳಲು ತನ್ನನ್ನು ತಾನೇ ಉದ್ಧರಿಸಿಕೊಳ್ಳಲು ಇರುವುದೊಂದೇ ಮಾಗ೯.   ಇದು ಇಂದ್ರಿಯಗಳಿಗೆ ಉತ್ತೇಜನ ನೀಡಿ ಹೊಸ ಉತ್ಸಾಹದಲ್ಲಿ , ಹೊಸ ಯೋಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಸುಲಭ ಮಾರ್ಗ.  ಇದು ಯಾವ ಮನುಷ್ಯನಿಗೆ ಸಾಧ್ಯವಾಗಿಸಿಕೊಳ್ಳು ತಾಕತ್ತು ಉದ್ಭವಿಸುತ್ತೋ ಅಂದು ಅವನೊಬ್ಬ ಹೊಸ ಮನುಷ್ಯನಾಗುತ್ತಾನೆ.  ಆಗ ಬದುಕಿನಲ್ಲಿ ನಡೆದ ಘಟನೆಗಳೆಲ್ಲ ಈಡೇರದ ಬಯಕೆಗಳೆಲ್ಲ  ಕ್ಷುಲ್ಲಕವಾಗಿ ಕಾಣಲು ಶುರುವಾಗುತ್ತದೆ. ಮತ್ತಷ್ಟು ಓದು »

2
ಆಗಸ್ಟ್

ಕೀಳರಿಮೆಯನ್ನೂ ಕಥಾವಸ್ತುವಾಗಿ ಬಳಸಿಕೊಂಡ ಅಕ್ಷರ ಮಾಂತ್ರಿಕನೀತ……!!!

ಗುರುರಾಜ್ ಕೊಡ್ಕಣಿ, ಯಲ್ಲಾಪುರ

stock-photo-taganrog-russia-june-sculpture-illustrates-a-short-story-fat-and-thin-by-anton-347343851ಅದು ಇಬ್ಬರು ಸ್ನೇಹಿತರು ತುಂಬ ವರ್ಷಗಳ ನಂತರ ಸೇರಿದ ಕ್ಷಣ. ಸ್ಥೂಲದೇಹಿ ವ್ಯಕ್ತಿಯೊಬ್ಬ, ತನ್ನ ಕೃಶಕಾಯದ ಸ್ನೇಹಿತನನ್ನು ನಿಕೋಲಿವಸ್ಕಿ ಸ್ಟೇಷನ್ನಿನಲ್ಲಿ ಸಂಧಿಸಿದ ಸಂತಸಮಯ ಗಳಿಗೆಯದು. ಸ್ಥೂಲಕಾಯದ ವ್ಯಕ್ತಿಯ ತುಟಿಗಳು ಕೆಂಪಗೆ ಕಳಿತ ಚೆರ್ರಿಯ ಹಣ್ಣುಗಳಂತೆ ಹೊಳೆಯುತ್ತಿದ್ದರೆ, ಆತನ ಬಾಯಿಯಿಂದ ಹೊಮ್ಮುತ್ತಿದ್ದ ವೈನ್ ಮತ್ತು ಕಿತ್ತಳೆ ಹಣ್ಣಿನ ಗಂಧ ಆತ ಅದಾಗಲೇ ತನ್ನ ಊಟವನ್ನು ಮುಗಿಸಿದ್ದನ್ನೆನ್ನುವುದಕ್ಕೆ ಸಾಕ್ಷಿಯಾಗಿದ್ದವು. ನಿಧಾನವಾಗಿ ಹಳಿಗಳ ಮೇಲೆ ತೆವಳುತ್ತಿದ್ದ ರೈಲಿನಿಂದ ಪ್ಲಾಟಿಫಾರ್ಮಿನ ಮೇಲೆ ಕುಪ್ಪಳಿಸಿದ್ದ ಕೃಶದೇಹಿ ವ್ಯಕ್ತಿಯ ಎರಡೂ ಕೈಗಳಲ್ಲಿ ಬಟ್ಟೆ ತುಂಬಿದ ಸೂಟ್ ಕೇಸು ಮತ್ತೀತರ ಸರಂಜಾಮುಗಳಿದ್ದವು. ಅವನ ಅಂಗಿಯಿಂದ ಹೊಮ್ಮುತ್ತಿದ್ದ ತಿಳಿಯಾದ ಕಂಪು ಆತ ರೈಲಿನಲ್ಲಿಯೇ ಮಾಂಸದ ತುಂಡುಗಳ ಜೊತೆಗೆ ಕಾಫಿಯನ್ನು ಸೇವಿಸಿದ್ದನೆನ್ನುವುದರ ಪುರಾವೆಯಾಗಿದ್ದವು. ಅವನ ಜೊತೆಗಿದ್ದ ತೆಳ್ಳಗಿನ ಮೈಕಟ್ಟಿನ, ನೀಳ ಗದ್ದದ ಅವನ ಮಡದಿ ಮತ್ತು ಒಕ್ಕಣ್ಣನಂತೇ ಕಾಣುತ್ತಿದ್ದ ಬಾಲಕ ರೈಲಿನಿಂದಿಳಿದು ಕೃಶಕಾಯದ ವ್ಯಕ್ತಿಯನ್ನೇ ಹಿಂಬಾಲಿಸತೊಡಗಿದರು. ಮತ್ತಷ್ಟು ಓದು »