ಕಳೆದ ಒಂದು ವಾರದಿಂದ ನಾನು ಕೇಳಲ್ಪಟ್ಟ ಐದು ಸುಳ್ಳುಗಳು
– ರಾಜೇಶ್ ನರಿಂಗಾನ.
೧) ಗೌರಿ ಲಂಕೇಶ್ ವಿಚಾರವಾದಿ
ಗೌರಿ ಲಂಕೇಶ್ ಯಾವ ರೀತಿಯ ವಿಚಾರವಾದಿ ಎಂದೇ ತಿಳಿಯುತ್ತಿಲ್ಲ. ತನ್ನ ಸಂಪಾದಕತ್ವದ ‘ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ ಭಿನ್ನ ವಿಚಾರಧಾರೆಯ ನಿಲುವನ್ನು ಹೊಂದಿರುವ ಆಕೆಗಿಂತ ವಯಸ್ಸಿನಲ್ಲಿ ಅದೆಷ್ಟೇ ಹಿರಿಯರಿದ್ದರೂ ಏಕವಚನದಲ್ಲಿ ಹೀನಮಾನವಾಗಿ ನಿಂದಿಸುತ್ತಿದ್ದರು. ರಂಜನೆ, ಪ್ರಲೋಭನೆಯ ಹೆಸರಿನಲ್ಲಿ ಭಿನ್ನ ವಿಚಾರಧಾರೆಯವರ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣಗೈಯುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಶಿಕ್ಷೆಯನ್ನೂ ವಿಧಿಸಿತ್ತು. ಆದ್ದರಿಂದ ಭಿನ್ನ ವಿಚಾರಧಾರೆಯಿರುವ ವ್ಯಕ್ತಿಗಳ ತೇಜೋವಧೆ ಮಾಡುವುದನ್ನೇ ‘ವಿಚಾರವಾದ’ ಎನ್ನುವುದಾದರೆ ಅಂಥ ವಿಚಾರವಾದಕ್ಕೆ ನನ್ನ ಧಿಕ್ಕಾರವಿದೆ.
೨) ಗೌರಿ ಲಂಕೇಶ್ ಇನ್ನೊಬ್ಬರ ಭಾವನೆಗಳನ್ನು ಗೌರವಿಸುತ್ತಿದ್ದರು
ಕಳೆದ ಎರಡು ವರ್ಷಗಳ ಹಿಂದೆ ಇದೇ ಸಮಯದಲ್ಲಿ ಫೇಸ್ಬುಕ್ಕಿನಲ್ಲಿ ಗಣೇಶ ಉತ್ಸವಕ್ಕೆ ಚಂದಾ ಕೇಳಲು ಬಂದ ಹುಡುಗರಿಗೆ ಇದೇ ಗೌರಿ ಲಂಕೇಶ್ ಕೆಲವೊಂದು ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಅವರನ್ನು ಹಿಂದಕ್ಕೆ ಕಳುಹಿಸಿದ ವಿಚಾರದಲ್ಲಿ ಭಾರೀ ಚರ್ಚೆಯೇ ನಡೆದಿತ್ತು. ಗಣೇಶ ಬಹುಸಂಖ್ಯಾತ ಹಿಂದೂಗಳಿಗೆ ನಂಬಿಕೆಯ ಪ್ರತೀಕ. ಆತನ ಉತ್ಸವ ಮಾಡಲು ಚಂದಾ ಕೇಳಲು ಹೋಗಿರುವುದರಲ್ಲಿ ಯಾವ ತಪ್ಪೂ ಕಾಣುತ್ತಿಲ್ಲ. ತಾನು ನಂಬದಿದ್ದರೂ ಇನ್ನೊಬ್ಬರ ನಂಬಿಕೆಗಳನ್ನು ಗೌರವಿಸಬೇಕು. ಅದು ಬಿಟ್ಟು ಗಣೇಶ ಪಾರ್ವತಿಯ ಬೆವರಿನಿಂದ ಹುಟ್ಟಿದ್ದಾದರೆ ಪಾರ್ವತಿಯ ಮೈಯಲ್ಲಿ ಅದೆಷ್ಟು ಕೊಳೆ ಇದ್ದಿರಬೇಕು ಎಂದೆಲ್ಲಾ ಅವಮಾನಿಸಿ ಕಳುಹಿಸಿದ್ದು ಆಕೆ ಇನ್ನೊಬ್ಬರ ನಂಬಿಕೆಗಳನ್ನು ಗೌರವಿಸುತ್ತಿದ್ದರು ಎಂಬುವುದಕ್ಕೆ ಒಂದು ದೊಡ್ಡ ಅಪವಾದ.
೩) ಗೌರಿ ಲಂಕೇಶ್ ನಿಷ್ಪಕ್ಷಪಾತ ಪರ್ತಕರ್ತೆ
ತನ್ನ ಸಂಪಾದಕತ್ವದ ‘ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ ಆಕೆ ಯಾವತ್ತೂ ನಿಷ್ಪಕ್ಷಪಾತವಾಗಿ ವರದಿ ಪ್ರಕಟಿಸಿದ್ದನ್ನು ನಾನೆಂದೂ ನೋಡಿಲ್ಲ. ಉದಾಹರಣೆಗೆ ಡಿ.ಕೆ.ರವಿಯವರ ನಿಗೂಢ ಸಾವಿನ ಕುರಿತು ಇಡೀ ರಾಜ್ಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಮುಗಿಲು ಮುಟ್ಟಿತ್ತು. ಇಂಥ ಸಮಯದಲ್ಲಿ ಡಿ.ಕೆ.ರವಿಯವರಿಗೆ ಅಕ್ರಮ ಸಂಬಂಧವಿತ್ತು ಎಂಬ ಕಪೋಲಕಲ್ಪಿತ ವರದಿಯನ್ನು ಬಿತ್ತರಿಸಿ ಈಕೆ ರಾಜ್ಯ ಸರಕಾರದ ಪರವಾಗಿ ನಿಂತರು. ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣದಲ್ಲೂ ಈಕೆ ಗೃಹ ಸಚಿವ ಜಾರ್ಜನ ಪರ ನಿಂತಿದ್ದದ್ದಲ್ಲದೆ ಗಣಪತಿಯವರ ತೇಜೋವಧೆ ಮಾಡುವಂತ ವರದಿಯನ್ನು ತನ್ನ ಪತ್ರಿಕೆಯಲ್ಲಿ ಬಿತ್ತರಿಸಿದ್ದರು. ಬಿಜೆಪಿಯವರ ಮೈಯಲ್ಲಿ ಒಂದು ಉದ್ದದ ಕೂದಲು ಕಂಡರೂ ಅದನ್ನು ಪರಾಮರ್ಶಿಸದೆ ಬಿಜೆಪಿ ನಾಯಕನ ಕಾಮಕಾಂಡ ಅಂತೆಲ್ಲಾ ಹೆಡ್ಡಿಂಗ್ ಕೊಟ್ಟು ವರದಿ ಮಾಡುವ ಈಕೆ ಕಾಂಗ್ರೆಸಿನವರ ವಿಚಾರದಲ್ಲಿ ದ್ವಿಮುಖ ನೀತಿಯನ್ನು ಅನುಸರಿಸುತ್ತಿದ್ದರು. ಇಂಥವರನ್ನು ನಿಷ್ಪಕ್ಷಪಾತ ಪತ್ರಕರ್ತೆ ಎನ್ನುವುದು ಸುಳ್ಳಿನ ಪರಮಾವಧಿ.
೪) ಗೌರಿ ಲಂಕೇಶ್ ಎಲ್ಲರನ್ನೂ ಗೌರವಿಸುತ್ತಿದ್ದ ವ್ಯಕ್ತಿ
ಇದನ್ನು ಕೇಳುವಾಗಲೆಲ್ಲಾ ಬಿದ್ದು ಬಿದ್ದು ನಗಬೇಕೆನಿಸುತ್ತದೆ. ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಏಕವಚನದಲ್ಲೇ ಹಳಿಯುವ ಈಕೆ ಎಲ್ಲರನ್ನೂ ಗೌರವಿಸುವ ವ್ಯಕ್ತಿ ಎಂದರೆ ಎಲ್ಲಿಂದ ನಗಬೇಕು ಅಂತಾನೇ ಗೊತ್ತಾಗಲ್ಲ. ಈ ದೇಶದ ಘನತೆವೆತ್ತ ಪ್ರಧಾನಿಯವರನ್ನೇ ಸಲಿಂಗಕಾಮಿಗೆ ಹೋಲಿಸಿದಾಕೆ, ಸೈದ್ಧಾಂತಿಕ ವಿರೋಧಿಯೋರ್ವರು ಆಕೆಯನ್ನು ಪ್ರೀತಿಯಿಂದ ಅಕ್ಕಾ ಎಂದು ಕರೆದರೂ ಆಕೆ ಮಾತ್ರ ಆತನನ್ನು ಚಕ್ಕ ಎಂದು ಫೇಸ್ಬುಕ್ಕಿನಲ್ಲಿ ನಿಂದಿಸಿದ್ದನ್ನು ನಾನು ನೋಡಿದ್ದೆ. ಇಂಥ ಗೌರಿಲಂಕೇಶ್ ಎಲ್ಲರನ್ನು ಗೌರವಿಸುತ್ತಿದ್ದ ವ್ಯಕ್ತಿ ಎನ್ನುವುದಾದರೆ ಅದು ಆ ಪದಕ್ಕೆ ಮಾಡುವ ಅವಮಾನ.
೫) ಗೌರಿ ಲಂಕೇಶ್ ದೇಶಭಕ್ತೆ
ಇದನ್ನು ಮೊನ್ನೆ ಓರ್ವ ಪ್ರಗತಿಪರರ ಫೇಸ್ಬುಕ್ ಗೋಡೆಯಲ್ಲಿ ಓದಿದ್ದೆ. ಕಳೆದ ಹತ್ತು ವರ್ಷಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಒಂದು ಕಾಲೇಜಿನಲ್ಲಿ ನಡೆದ ವಿಚಾರಸಂಕಿರಣದಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುವ ನಕ್ಸಲರನ್ನು ಬಹಿರಂಗವಾಗಿ ಸಮರ್ಥಿಸಿ, ಅದನ್ನು ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಹೀನಾಯಮಾನವಾಗಿ ನಿಂದಿಸಿದ್ದ ಈಕೆ ಯಾವ ಸೀಮೆಯ ದೇಶಪ್ರೇಮಿ ಎಂದೇ ತಿಳಿಯುತ್ತಿಲ್ಲ. ಕಳೆದ ವರ್ಷ ಜೆ.ಎನ್.ಯು.ನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳನ್ನು(ಉಮರ್ ಖಾಲೀದ್, ಕನ್ನಯ್ಯ ಕುಮಾರ್) ತನ್ನ ಮಕ್ಕಳೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಭಯೋತ್ಪಾದಕ ಚಟುವಟಿಕೆಗಳನ್ನು ಈಕೆ ಬಹಿರಂಗವಾಗಿ ಸಮರ್ಥಿಸಿದ್ದನ್ನೂ ನಾನು ಫೇಸ್ಬುಕ್ ಮತ್ತು ಪತ್ರಿಕೆಯಲ್ಲಿ ಓದಿದ್ದೆ.. ಇಂಥವರನ್ನು ದೇಶಪ್ರೇಮಿ ಎನ್ನುವುದಾದರೆ ಸನ್ನಿ ಲಿಯೋನ್’ಳನ್ನು ಕನ್ಯೆ, ಗರತಿ ಎಂದೂ ಹೇಳಬಹುದು.
ಗೌರಿ ಲಂಕೇಶ್ ಅವರು ನನ್ನ ಫೇಸ್ಬುಕ್ ಫ್ರೆಂಡ್ ಆಗಿದ್ದರು ಹಾಗೂ ನಾನು ವಿ.ವಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆಕೆಯ ಪತ್ರಿಕೆಯ ಒಂದೂ ಸಂಚಿಕೆಯನ್ನು ಬಿಡದೆ ಓದುತ್ತಿದ್ದೆ. ಆಕೆಯ ಫೇಸ್ಬುಕ್ ಪೋಸ್ಟ್ ಗಳನ್ನು ಮತ್ತು ಪತ್ರಿಕೆಯ ವರದಿಗಳನ್ನು ಆಧರಿಸಿ ಈ ಐದು ಸುಳ್ಳುಗಳ ಪರದೆಯ ಅನಾವರಣ ಮಾಡಿದ್ದೇನೆ. ಈ ಐದು ವಿಚಾರಗಳಲ್ಲಿ ಯಾರು ಬೇಕಾದರೂ ಮುಕ್ತ ಚರ್ಚೆಗೆ ಬರಬಹುದು. ಇನ್ನು ಹತ್ಯಾ ರಾಜಕೀಯದಲ್ಲಿ ನಂಬಿಕೆಯಿಟ್ಟವ ನಾನಲ್ಲ. ಹಾಗಾಗಿ ಗೌರಿ ಲಂಕೇಶ್ ಹತ್ಯೆಯನ್ನು ಈ ಮೊದಲೇ ಖಂಡಿಸಿದ್ದೇನೆ. ಗೌರಿಯ ನೈಜ ಹಂತಕರನ್ನು ಎಸ್.ಐ.ಟಿ ಆದಷ್ಟು ಬೇಗ ಬಂಧಿಸಿ ಬಹಿರಂಗವಾಗಿಯೇ ನೇಣಿಗೆ ಹಾಕಲಿ.. ಇದು ನನ್ನ ಆಗ್ರಹ.
ಮಾತನಾಡೊದು ಹೇಗೆ: https://ganeshkaremani.blogspot.in/2017/09/blog-post_13.html