ದಕ್ಷಿಣ ಭಾರತದ ಜೀವನದಿಯಲ್ಲಿ ಮಹಾಪುಷ್ಕರ.
-ಶ್ರೇಯಾಂಕ ಎಸ್ ರಾನಡೆ.
“177 ವರ್ಷಗಳ ನಂತರ ಮತ್ತೆ ಪುನರಾವರ್ತನೆಯಾಗುತ್ತಿರುವ ಐತಿಹಾಸಿಕ ಮಹಾಪುಷ್ಕರ ಮೇಳ. ಸೆಪ್ಟೆಂಬರ್ 12 ರಿಂದ 24ರ ವರೆಗೆ 12 ದಿನಗಳೂ ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾವೇರಿ ನದಿಪಾತ್ರದುದ್ದಕ್ಕೂ ಇರುವ ಪುಣ್ಯಕ್ಷೇತ್ರಗಳಲ್ಲಿ ಮಿಂದೇಳುವ ಸಂಭ್ರಮ. “ತಲಕಾವೇರಿಯಿಂದಮಾ ಬಂಗಾಳಕೊಲ್ಲಿಯ ವರಮಿರ್ಪ ನದಿಯೇ ಕಾವೇರಿ.” ಈ ಹೊತ್ತಿನಲ್ಲಿ ಮರೆಯಬಾರದ ಸಂಗತಿ, “ಪುಷ್ಕರಮೇಕೆಂಬೇಯೇನ್ ಉಳಿಸುವುದಕೆ ಮರ್ತು” ಮತ್ತು “ಗಂಗೇಚ ಯಮುನೆಚೈವ” ಎಂಬ ಜಾಗೃತ ಪ್ರಜ್ಞೆಯ ಅನಿವಾರ್ಯತೆ. ಮತ್ತಷ್ಟು ಓದು 
ನಾನು ಗೌರಿಯಾದರೆ ನೀನು ಯಾರು ಎಂದು ಅವರ ಕೇಳಬೇಕಿತ್ತು!
– ನರೇಂದ್ರ ಎಸ್ ಗಂಗೊಳ್ಳಿ
ಪತ್ರಕರ್ತೆಯಾಗಿ ಅದಕ್ಕಿಂತ ಹೆಚ್ಚಾಗಿ ತನ್ನ ಎಡಪಂಥೀಯ ಧೋರಣೆಗಳಿಂದ ಗುರುತಿಸಿಕೊಂಡಿದ್ದ ಗೌರಿ ಲಂಕೇಶ್ ಹತ್ಯೆ ನಿಜಕ್ಕೂ ವಿಷಾದಕರ. ವಾದ ವಿವಾದಗಳಿಗೆ ಹತ್ಯೆಯೇ ಉತ್ತರವಾಗಬಾರದು. ಹಾಗಾಗಿ ಹಂತಕರು ಅದ್ಯಾರೇ ಆಗಿದ್ದರೂ ಅವರ ಬಂಧನವಾಗಲಿ ಶಿಕ್ಷೆಯಾಗಲಿ ಎನ್ನುವುದನ್ನು ಮಾನವೀಯತೆಯ ನೆಲೆಯಲ್ಲಿ ಎಲ್ಲರೂ ಒಪ್ಪುವಂತಾದ್ದು. ಆದರೆ ಒಂದು ಹತ್ಯೆಯ ಬಳಿಕ ಈ ಬುದ್ಧಿಜೀವಿಗಳೆನ್ನಿಸಿಕೊಂಡವರು ವರ್ತಿಸುತ್ತಿರುವ ರೀತಿ ಇದೆಯಲ್ಲಾ ಅದನ್ನು ಮಾತ್ರ ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾಗದ್ದು.
ಮೊತ್ತ ಮೊದಲಿಗೆ ನಮ್ಮ ಮಾಧ್ಯಮಗಳು ಗೌರಿಯವರ ಹತ್ಯೆ ಬಳಿಕ ಅವರಿಗೆ ವಿಶೇಷ ಬಿರುದು ಬಾವಲಿಗಳನ್ನೇ ನೀಡುತ್ತಾ ಸುದ್ದಿಗಳನ್ನು ಬಿತ್ತರಿಸಲಾರಂಬಿಸಿದವು. ಹೋರಾಟಗಾರ್ತಿ, ಅಪೂರ್ವ ಚಿಂತಕಿ ಎಂದೆಲ್ಲಾ ಇವರು ಹೇಳುತ್ತಾರಲ್ಲಾ ಅದ್ಯಾವ ನೆಲೆಯಲ್ಲಿ ಅವರನ್ನು ಉತ್ತಮ ಚಿಂತಕಿ ಎನ್ನಲಾಗುತ್ತದೆ ಎನ್ನುವುದನ್ನು ಬಲ್ಲಿದರು ಹೇಳಬೇಕಿದೆ. ಆರಂಭದ ಹಂತದಲ್ಲಿ ನಕ್ಸಲರನ್ನು ಶರಣಾಗಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಅವರಿಗೊಂದು ಬದುಕು ಕಟ್ಟಿಕೊಡುವ ಒಂದಷ್ಟು ಪ್ರಯತ್ನಗಳನ್ನು ಅವರು ಮಾಡಿದ್ದು ನಿಜವಾದರೂ ಈ ಹೊತ್ತಿಗೂ ನಕ್ಸಲರಿಗೆ ಪರಿಹಾರ ಕೊಡಿಸುವ ಮತ್ತು ಅವರ ಮರುವಸತಿ ಯೋಜನೆಯಲ್ಲಿ ನಡೆದ ಅವ್ಯವಹಾರಗಳ ವಾಸನೆ ಆ ವಿಚಾರದ ಸುತ್ತಲೂ ಮೇಳೈಸಿಕೊಳ್ಳುತ್ತಿರುವುದನ್ನು ಅಲ್ಲಗಳೆಯಲಾದೀತಾ?
ಅವರ ಪತ್ರಿಕೆಯ ತಲೆಬರಹಗಳಾದಿಯಾಗಿ ಅವರ ಬರಹಗಳಲ್ಲಿನ ಬಾಷಾ ಪ್ರಯೋಗಗಳನ್ನು ಗಮನಿಸಿದಾಗ ಅವರೊಬ್ಬ ಅಪೂರ್ವ ಆದರ್ಶ ಚಿಂತನೆಗಳುಳ್ಳ ಉತ್ತಮ ಬರಹಗಾರರಾಗಿದ್ದರು ಎನ್ನುವುದನ್ನು ಸಜ್ಜನ ಮನಸ್ಸುಗಳಿಗೆ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.ಸತ್ತ ಮೇಲೆ ಪ್ರತಿಯೊಬ್ಬರನ್ನೂ ಗೌರವಿಸುವುದು ನಮ್ಮ ಸಂಸ್ಕೃತಿ ನಮಗೆ ಕಲಿಸಿದ ಉತ್ತಮ ವಿಚಾರಗಳಲ್ಲಿ ಒಂದು. ಹಾಗೆಂದು ಗೌರವ ಸಲ್ಲಿಸುವ ನೆಪದಲ್ಲಿ ತೀರಾ ಅತಿರಂಜಿತವಾಗಿ ಒಬ್ಬರನ್ನು ಹೊಗಳುವುದನ್ನು ಯಾವ ನೆಲೆಯಲ್ಲೂ ಒಪ್ಪಲಾಗದ್ದು.
ಕಳೆದ ಒಂದು ವಾರದಿಂದ ನಾನು ಕೇಳಲ್ಪಟ್ಟ ಐದು ಸುಳ್ಳುಗಳು
– ರಾಜೇಶ್ ನರಿಂಗಾನ.
೧) ಗೌರಿ ಲಂಕೇಶ್ ವಿಚಾರವಾದಿ
ಗೌರಿ ಲಂಕೇಶ್ ಯಾವ ರೀತಿಯ ವಿಚಾರವಾದಿ ಎಂದೇ ತಿಳಿಯುತ್ತಿಲ್ಲ. ತನ್ನ ಸಂಪಾದಕತ್ವದ ‘ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ ಭಿನ್ನ ವಿಚಾರಧಾರೆಯ ನಿಲುವನ್ನು ಹೊಂದಿರುವ ಆಕೆಗಿಂತ ವಯಸ್ಸಿನಲ್ಲಿ ಅದೆಷ್ಟೇ ಹಿರಿಯರಿದ್ದರೂ ಏಕವಚನದಲ್ಲಿ ಹೀನಮಾನವಾಗಿ ನಿಂದಿಸುತ್ತಿದ್ದರು. ರಂಜನೆ, ಪ್ರಲೋಭನೆಯ ಹೆಸರಿನಲ್ಲಿ ಭಿನ್ನ ವಿಚಾರಧಾರೆಯವರ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣಗೈಯುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಶಿಕ್ಷೆಯನ್ನೂ ವಿಧಿಸಿತ್ತು. ಆದ್ದರಿಂದ ಭಿನ್ನ ವಿಚಾರಧಾರೆಯಿರುವ ವ್ಯಕ್ತಿಗಳ ತೇಜೋವಧೆ ಮಾಡುವುದನ್ನೇ ‘ವಿಚಾರವಾದ’ ಎನ್ನುವುದಾದರೆ ಅಂಥ ವಿಚಾರವಾದಕ್ಕೆ ನನ್ನ ಧಿಕ್ಕಾರವಿದೆ. ಮತ್ತಷ್ಟು ಓದು 
ಶವದ ಮೇಲಿನ ರಣಹದ್ದುಗಳು
ದೇಶದಲ್ಲಿ ಎಲ್ಲೇ ಬುದ್ಧಿಜೀವಿಗಳ ಹತ್ಯೆ ನಡೆದರೂ ಮೊದಲು ಆರೋಪ ಹೊರಿಸುವುದು ಬಲಪಂಥೀಯ ವಿಚಾರಧಾರೆ ಹೊಂದಿರುವವರ ಮೇಲೆ, ಸಂಘಪರಿವಾರದವರ ಮೇಲೆ. ಎಲ್ಲಾ ಹತ್ಯೆಯ ಹಿಂದಿನ ಮರ್ಮ ಒಂದೇ, ದೇಶದಲ್ಲಿ ಕಮ್ಮಿ ನಿಷ್ಟರ ಹಾಗೂ ತಮ್ಮ ಎಡಪಂಥೀಯ ಚಿಂತನೆ ಗಳಿಗೆ ಸ್ಪಂದಿಸುವ ಮನೋಭಾವನೆ ಹೊಂದಿರುವಂತವರದ್ದೆ ಕೈ ಇರಬೇಕೆನ್ನುವ ಹಿಡನ್ ಅಜೆಂಡ ಇದ್ದಂತಿದೆ.
ಲಡಾಖ್ ಹಾಗು ಭಾರತೀಯ ಸೇನೆ
– ಪಲ್ಲವಿ ಭಟ್
ಬೆಂಗಳೂರು
ಇದೀಗಷ್ಟೇ ಸ್ವಾತಂತ್ರ್ಯ ದಿನ ಕಳೆದು ಹೋಗಿದೆ. ಪ್ರತಿ ವರುಷದಂತೆ ಈ ಬಾರಿಯೂ ಅದೇ ಸಂಭ್ರಮ ಸಡಗರದಿಂದ ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂಭ್ರಮಗಳೆಲ್ಲಾ ಮುಗಿಯುತ್ತಿದ್ದಂತೆ ಅದೊಂದು ವಾರ್ತೆ ನಮ್ಮ ವಾರ್ತಾಪತ್ರಿಕೆಗಳ ಮುಖಪುಟ ಸೇರಿಕೊಂಡಿತ್ತು. ಇನ್ನೂ ಮಾಸದ ನನ್ನ ಕೆಲ ಹೊಸ ನೆನಪುಗಳನ್ನು ಅದು ಕೆದಕತೊಡಗಿತು. “ಲಡಾಖ್’ನಲ್ಲಿ ಭಾರತ, ಚೀನಾ ಯೋಧರ ಸಂಘರ್ಷ: ಭಾರತದೊಳಗೆ ನುಗ್ಗಲು ಚೀನಾ ಸೈನಿಕರ ಯತ್ನ” ಎಂಬುದಾಗಿತ್ತು ಶೀರ್ಷಿಕೆ. ಲಡಾಖ್ ಪ್ರವಾಸ ಮುಗಿಸಿ ಇನ್ನೂ ೧೦ ದಿನಗಳಾಗಿಲ್ಲ. ಅಷ್ಟರಲ್ಲೇ ಇಂತಹ ವಾರ್ತೆಯನ್ನು ಓದಬೇಕಾಗಿ ಬಂತು. ಮತ್ತಷ್ಟು ಓದು 
ಮನದ ಮಾತು
– ಗೀತಾ ಹೆಗ್ಡೆ
ಹಲವು ಮಜಲುಗಳನ್ನೊಳಗೊಂಡ ಕೆಲವರ ಬರಹ ಓದುವಾಗ ನಮಗರಿವಿಲ್ಲದಂತೆ ಇದ್ದಕ್ಕಿದ್ದಂತೆ ನಾನೂ ಏನಾದರೂ ಬರೆಯಬೇಕು ಅನ್ನುವ ತುಡಿತ ಗರಿಗೆದರುವುದು. ಇದು ನನಗೊಬ್ಬಳಿಗೇ ಹೀಗೆ ಅನಿಸುತ್ತಾ? ಅಥವಾ ಎಲ್ಲರ ಕಥೆ ಹೀಗೆಯೇ ಇರಬಹುದಾ? ಅನ್ನುವ ಜಿಜ್ಞಾಸೆ ನನ್ನಲ್ಲಿ. ಸದಾ ಕಾಡುವ ಪ್ರಶ್ನೆ. ಆಗೆಲ್ಲ ನನಗೆ ಈ ಬಗ್ಗೆ ಬೇರೆಯವರನ್ನೂ ಕೇಳಬೇಕೆನ್ನುವ ಹಂಬಲ ಹುಟ್ಟಿಕೊಂಡರೂ, ಛೆ! ನನ್ನ ಮಾತು ಕೇಳಿ ನಕ್ಕಾರು. ಇವಳಿಗೇನು ಸ್ವಂತ ಬುದ್ಧಿ ಇಲ್ವಾ? ಏನಾದರೂ ಬರಿಬೇಕೆಂದರೆ ಇನ್ನೊಬ್ಬರ ಬರಹ ಓದಿನೇ ಹುಮ್ಮಸ್ಸು ಹುಟ್ಟಬೇಕಾ? ಬರಹ ಅನ್ನೋದು ಯಾರಿಂದಲೂ ಹೇಳಿಸಿಕೊಂಡು ಬರುವುದಲ್ಲಾ. ಸ್ವತಃ ಅವರಲ್ಲಿ ಹುಟ್ಟಬೇಕು. ಜನ್ಮಜಾತವಾಗಿ ದೇವರು ಕೊಟ್ಟ ವರ ಎಂದು ನಂಬಿರುವ ನನಗೆ ಇದೊಂದು ಬಿಡಿಸಲಾಗದ ಒಗಟು. ಮತ್ತಷ್ಟು ಓದು 
ಹವ್ಯಾಸಿ ರಂಗಭೂಮಿ – ಇತ್ತೀಚಿನ ಬೆಳವಣಿಗೆಗಳು
-ಎಸ್.ಎನ್. ಸೇತುರಾಮ್
ಹವ್ಯಾಸಿ ರಂಗಭೂಮಿ…
ಈ ಪದವೇ ಚೆಂದ, ರಂಗಭೂಮಿಯನ್ನು ವೃತ್ತಿ ಅಂತ ಹೇಳಿಕೊಂಡ್ರೆ ಅಪ್ರಯೋಜಕ ಅನ್ನೊರು. ನಾಟಕ ಮಾಡಿಕೊಂಡು ಬದುಕ್ತಾನೆ ಅನ್ನೋರು. ಏನು ಮಾಡ್ತಿದ್ದಿ ಅನ್ನೋ ಪ್ರಶ್ನೇಗೆ ರಂಗಭೂಮೀಲಿ ಸಕ್ರೀಯವಾಗಿದ್ದೀನಿ ಅಂದ್ರೆ, ಅದು ಬಿಟ್ಟು ಹೊಟ್ಟೆಪಾಡಿಗೆ ಏನು ಮಾಡ್ಕೊಂಡಿದ್ದೀ ಅಂತ ಕೇಳೋರು. ನನ್ನ ಬದುಕಿನ ಕಾಲಘಟ್ಟದಲ್ಲಿ ಕಾರಣಗಳು ಏನೇ ಇರಲಿ, ರಂಗಭೂಮಿ ವೃತ್ತಿ ಅಂತಾದರೆ ಒಂದು ತರಹದ ಕೀಳರಿಮೆ. ಎಲ್ಲ ಕಾಲಘಟ್ಟಗಳಲ್ಲೂ ಎಲ್ಲ ಕಲಾಪ್ರಕಾರಗಳ ಹಾಗೇನೇ ರಂಗಭೂಮಿ ಕೂಡಾ. ಹೆಸರಾಗಿ ದೊಡ್ಡೋರಾದ ಮೇಲೆ ಹಾರ ತುರಾಯಿ, ಪೇಟ, ಬಿರುದುಬಾವಲಿ, ಬಿನ್ನವತ್ತಳೆ ಎಲ್ಲಾ. ಹೆಸರಾಗೋವರೆಗೂ ಇದೊಂದು ರಕ್ತಮಾಂಸವಷ್ಟೇ ಅಲ್ಲದ, ಮನಸ್ಸು ಹೃದಯ ಇರುವ ಜೀವ ಅನ್ನೋದೇ ಯಾರ ಗಮನಕ್ಕೂ ಬರುತ್ತಿರಲಿಲ್ಲ. ಗೆದ್ದಾಗ ಮಾನ, ಗೆಲ್ಲದಿದ್ದಾಗ ಬರಿ ಅವಮಾನವೇ. ನಾಟಕದವರು ಅಯೋಗ್ಯರು, ಅಪ್ರಯೋಜಕರು, ಅವರಿಗೆ ಹೆಣ್ಣು ಕೊಡೋ ಹಾಗಿಲ್ಲ. ಮನೆಗೆ ಕರೆಯೋ ಅವಶ್ಯಕತೆ ಇಲ್ಲ. ಗೌರವಕ್ಕೆ ಅವರೆಂದೂ ಪಾತ್ರರಲ್ಲ. ಇದು ಭಾವ. ಮತ್ತಷ್ಟು ಓದು 
ಅಂಕಣರಂಗ – 3 : ಡಿ.ವಿ ಪ್ರಹ್ಲಾದ್ ಅವರ ‘ಅನುದಿನವಿದ್ದು…’ ಪುಸ್ತಕದ ಪರಿಚಯ
– ಮು.ಅ ಶ್ರೀರಂಗ ಬೆಂಗಳೂರು
‘ಅನುದಿನವಿದ್ದು… ‘ ಕಿರು ಪುಸ್ತಕದಲ್ಲಿ ಒಂಭತ್ತು ಜನ ಲೇಖಕರ ಸಾವಿಗೆ ಮಿಡಿದ ಬರಹಗಳು ಮತ್ತು ಇಬ್ಬರು ಲೇಖಕರು ಬದುಕಿದ್ದಾಗಲೇ ಬರೆದ ಲೇಖನಗಳಿವೆ. ಇದರಲ್ಲಿ ರಾಘವೇಂದ್ರ ಖಾಸನೀಸ, ರಾಮಚಂದ್ರ ಶರ್ಮ,ಎಂ. ವ್ಯಾಸ, ಚಿ.ಶ್ರೀನಿವಾಸರಾಜು,ಸು.ರಂ.ಎಕ್ಕುಂಡಿ, ಕುಸುಮಾಕರ ದೇವರಗೆಣ್ಣೂರು,ಬೆಳಗೆರೆ ಕೃಷ್ಣಶಾಸ್ತ್ರಿ,ದೇಶಕುಲಕರ್ಣಿ,ಸ್ವಾಮಿನಾಥ,ಕಿ.ರಂ. ನಾಗರಾಜ ಮತ್ತು ನೀಲತ್ತಹಳ್ಳಿ ಕಸ್ತೂರಿ ಅವರುಗಳನ್ನು ಕುರಿತ ಅಪರೂಪದ ಬರಹಗಳಿವೆ. ಇಲ್ಲಿನ ಬರಹಗಳು ‘ಸಂಚಯ’ ಮತ್ತು ರಾಜ್ಯವ್ಯಾಪಿ ಪ್ರಸಾರದ ಕನ್ನಡ ದಿನಪತ್ರಿಕೆಗಳಲ್ಲಿಈ ಹಿಂದೆ ಪ್ರಕಟವಾಗಿದ್ದಂತಹವು. ಆಯಾ ಲೇಖಕರನ್ನು ಕುರಿತಂತೆ ಡಿ ವಿ ಪ್ರಹ್ಲಾದರ ಅಪರೂಪದ ಒಳನೋಟ ಮತ್ತು ಅವರುಗಳ ಬಗ್ಗೆ ಹಾಗೂ ಅವರ ಕೃತಿಗಳ ಬಗ್ಗೆ ವಿವರಗಳನ್ನು ಒಳಗೊಂಡ ‘ಅನುಬಂಧ’ ಈ ಪುಸ್ತಕದ ಪ್ಲಸ್ ಪಾಯಿಂಟ್. ಏಕೆಂದರೆ ಎಷ್ಟೋ ಸಲ ನಾವುಗಳು ಕೆಲವು ಲೇಖಕರ ಹೆಸರು ಕೇಳಿರುತ್ತೇವೆ ಆದರೆ ಅವರ ಪುಸ್ತಕಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗೆಯೇ ನಾವು ಓದಬೇಕಾದಂತಹ ಲೇಖಕರು ಹಾಗೂ ಅವರ ಕೃತಿಗಳ ಬಗ್ಗೆ ಯಾವ ಮಾಹಿತಿಯೂ ನಮಗಿರುವುದಿಲ್ಲ. ಆ ಕೊರತೆಯನ್ನು ‘ಅನುದಿನವಿದ್ದು … ‘ ತುಂಬಿಕೊಟ್ಟಿದೆ. ಈ ಒಂದು ಪ್ರಸ್ತಾವನೆಯ ನಂತರ ಇಲ್ಲಿನ ಕೆಲವು ಲೇಖನಗಳ ಬಗ್ಗೆ ಪರಿಚಯ ಮಾಡಿಕೊಳ್ಳೋಣ.





