ವಿಷಯದ ವಿವರಗಳಿಗೆ ದಾಟಿರಿ

Archive for

16
ಫೆಬ್ರ

ಬಿಡುಗಡೆಯಾಗಿದ್ದು ಬಹಮನಿ ಟೀಸರ್, ಪಿಕ್ಚರ್ ಅಭೀ ಬಾಕೀ ಹೈ!

– ಸಂತೋಷ್ ತಮ್ಮಯ್ಯ
ಕರ್ನಾಟಕ ಟೂರಿಸಂ ವೆಬ್‌ಸೈಟಿನಲ್ಲಿನ್ನು ಕಲ್ಲಿನ ರಥದ ಚಿತ್ರ ಇರುವುದಿಲ್ಲವೇ? ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೆಸರನ್ನು ಸರ್ಕಾರ ಅದಿಲ್ ಶಾಹಿ ವಿಶ್ವವಿದ್ಯಾಲಯ ಎಂದು ಬದಲಾಯಿಸುವುದೇ? ಹಂಪಿ ಉತ್ಸವ ನಿಂತುಹೋಗುತ್ತಾ? ಬರೀದ್ ಶಾಹಿಗಳ ಬೆರಕೆ ಭಾಷೆ ಉರ್ದು ರಾಜ್ಯದ ಅಕೃತ ಆಡಳಿತ ಭಾಷೆಯಾಗಿಹೋಗುತ್ತಾ? ವಾರ್ತಾ ಇಲಾಖೆ ಸ್ವತಃ ತಾನೇ ನಿಂತು ಇಮಾದ್ ಶಾಹಿ ಪುಂಡರ ಸಿನೆಮಾವನ್ನು ನಿರ್ಮಿಸುತ್ತದಾ? ಅಂಜನಾದ್ರಿ, ಮಾತಂಗ, ಮಾಲ್ಯವಂತ ಬೆಟ್ಟಗಳಲ್ಲಿನ್ನು ಬಹಮನಿ ಸುಲ್ತಾನರ ಕ್ರೌರ್ಯಗಳ ನೆರಳು ಬೆಳಕಿನ ಪ್ರದರ್ಶನಾಟ ನಡೆಯುತ್ತದಾ? ಟಿಬಿ ಡ್ಯಾಮಿಗೆ ಮರುನಾಮಕರಣ ಮಾಡುವ ಉದ್ದೇಶವೂ ಇರಬಹುದೇ?
ಹೀಗೆ ಹಲವು ಸಂದೇಹಗಳು ಮೂಡುತ್ತಿದೆ. ಮೊದಲಾಗಿದ್ದರೆ ಇವೆಲ್ಲಾ ಹುಚ್ಚು ಕಲ್ಪನೆ ಎಂದುಕೊಳ್ಳಬಹುದಿತ್ತು. ಆದರೆ ಈಗ ಹಾಗನಿಸುತ್ತಿಲ್ಲ. ಏಕೆಂದರೆ ಇನ್ನೈದು ವರ್ಷ ರಾಜ್ಯವನ್ನು ಕಾಂಗ್ರೆಸ್ ಆಳಿದರೆ ಇವೆಲ್ಲವೂ ಸಂಭವಿಸಬಹುದು. ಅಲ್ಲದೆ ಈಗ ನಾವಂತೂ ಪೋಲೆಂಡಿನಲ್ಲಿ ಹಿಟ್ಲರ್ ಜಯಂತಿ ನಡೆದರೂ, ಅಮೆರಿಕಾದಲ್ಲಿ ತಾಲೀಬಾನ್ ಫೆಸ್ಟ್ ನಡೆದರೂ ಅಚ್ಚರಿ ಹುಟ್ಟದಷ್ಟು ಸಂವೇದನಾರಹಿತರಾಗಿಬಿಟ್ಟಿದ್ದೇವೆ. ಹೀಗಿರುವಾಗ ಬಹಮನಿ ಉತ್ಸವ ನಡೆದರೆ ಅಚ್ಚರಿಯೇನೂ ಇಲ್ಲ.
ಹಾಗೆ ನೋಡಿದರೆ ಕಾಂಗ್ರೆಸಿಗೆ ಇಂಥದ್ದೊಂದು ಯೋಚನೆ ಸ್ವಲ್ಪತಡವಾಗಿಯೇ ಬಂದಿದೆ. ನಿಜವಾಗಿಯೂ ಕಾಂಗ್ರೆಸಿಗರಿಗೆ ಟಿಪ್ಪುಗಿಂತ ಮೊದಲು ಬಹಮನಿಗಳೇ ನೆನಪಿಗೆ ಬರಬೇಕಿತ್ತು. ಅದಕ್ಕೊಂದು ಕಾರಣವಿದೆ. ಬಹಳ ವರ್ಷಗಳ ಕಾಲ ಕಾಂಗ್ರೆಸಿಗರಿಗೆ ಮತ್ತು ಅವರ ಕೂಲಿಗೆ ದುಡಿಯುವ ಬುದ್ಧಿಜೀವಿಗಳಿಗೆ ಬಹಮನಿಗಳ ಚರಿತ್ರೆಯನ್ನು ಒಂದು ವೈಚಾರಿಕ ಚೌಕಟ್ಟಿಗೆ ತರಲು ಕಷ್ಟವಾಗಿತ್ತು. ಏಕೆಂದರೆ ಇವರಿಗೆಲ್ಲಾ ಬಹಮನಿಗಳನ್ನು ನಿಜಾಂ ಶಾಹಿ, ಅದಿಲ್ ಶಾಹಿ ಇಮಾದ್ ಶಾಹಿ, ಬರೀದ್ ಶಾಹಿ ಮತ್ತು ಕುತುಬ್ ಶಾಹಿ ಎಂದು ವಿಂಗಡಿಸಬೇಕೋ ಅಥವಾ ಬಹಮನಿ ಎಂದು ಒಗ್ಗೂಡಿಸಿ ಅವರಲ್ಲಿ ಎಂದೂ ಇಲ್ಲದ ಒಗ್ಗಟ್ಟನ್ನು ಮೂಡಿಸಬೇಕೋ ಎಂಬ ಬಗ್ಗೆ ಭಯಂಕರ ಗೊಂದಲವಿತ್ತು. ಕೆಲವರು ಈ ಐದು ಸಂಸ್ಥಾನಗಳನ್ನು ಪ್ರತ್ಯೇಕ ಎಂದು ವಿಂಗಡಿಸಲು ಪ್ರಯತ್ನಿಸಿದಷ್ಟೂ ಶಾಹಿಗಳ ಜನ್ಮತಃ ಗುಣಗಳಾದ ಅನೈತಿಕ ಸಂಬಂಭ, ರಕ್ತಸಂಬಂಗಳ ಕೊಲೆ, ದರೋಡೆ, ಕ್ರೌರ್ಯಗಳೇ ತಲೆಹಾಳುಮಾಡುತ್ತಿದ್ದವು. ಅಲ್ಲದೆ ವಿದೇಶಿ ಪ್ರವಾಸಿಗಳಿಂದ ವರ್ಣೀಸಲ್ಪಟ್ಟ ವಿಜಯನಗರ ವೈಭವವನ್ನು ಸಾರಾಸಗಟಾಗಿ ನಿರಾಕರಿಸುವ ಸ್ಥಿತಿಯಲ್ಲೂ ಎಡಪಂಥೀಯರಿರಲಿಲ್ಲ.  ಮುಸ್ಲಿಂ ಅರಸರನ್ನು ನೇರಾನೇರಾ ವಿವರಿಸಲು ಕೈ ಬಾರದ ಕಾರಣ ಇವರಿಗೆಲ್ಲಾ ಬಹಮನಿ ಸುಲ್ತಾನರು ಸಾಂಸ್ಕೃತಿಕ, ಸಾಮಾಜಿಕ ಸುಧಾರಕರಂತೆಯೂ, ವಿಜಯನಗರದಲ್ಲಿ ಶೈವ-ವೈಷ್ಣವ ಜಗಳಗಳಿದ್ದಂತೆಯೂ ಇತಿಹಾಸ ರಚನೆಯಾಯಿತು. ಪ್ರಾಜ್ಞರು ಆಗಲೇ ಬಹಮನಿಗಳ ವೈಭವಕ್ಕೆ ವೇದಿಕೆ ಸಿದ್ಧವಾಗುತ್ತಿದೆ ಎಂದು ಎಚ್ಚರಿಸಿದ್ದರು. ಆ ವೇದಿಕೆಯನ್ನು ಬಳಸುವ ಕಾಲ ಪಕ್ವವಾಗಿರುವುದರಿಂದ ಬಹಮನಿ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ! ಅದಕ್ಕೆ ಸಿದ್ಧರಾಮಯ್ಯ ಕಾಲಕ್ಕಿಂತ ಯೋಗ್ಯ ಕಾಲ ಬೇರಾವುದಿದೆ? ಹಾಗಾಗಿ ಬಹಮನಿ ಉತ್ಸವ ನಡೆದರೂ ನಡೆಯಬಹುದು. ಅದರಲ್ಲಿ ಅಚ್ಚರಿಯೇನೂ ಇಲ್ಲ.

ಮತ್ತಷ್ಟು ಓದು »