ವಿಷಯದ ವಿವರಗಳಿಗೆ ದಾಟಿರಿ

Archive for

19
ಫೆಬ್ರ

ಮರಾಠ ನಾಯಕನಿಗೊಂದು ನಮನ

– ಪಲ್ಲವಿ ಭಟ್, ಬೆಂಗಳೂರು

ಕಳೆದ ವರುಷ ಚಲನಚಿತ್ರವೊಂದು ಭಾರತದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿ ಬಿಟ್ಟಿತು. “ಬಾಹುಬಲಿ” ಎನ್ನುವ ಆ ಚಿತ್ರವನ್ನು ನೋಡದವರ ಸಂಖ್ಯೆಯೇ ವಿರಳವೆನ್ನಬಹುದು. ರಾಜಮೌಳಿಯವರ ಕಲ್ಪನಾ ಶಕ್ತಿ, ಕಲಾವಿದರ ನಟನಾ ಚಾತುರ್ಯ, ಹಾಗೂ ಗ್ರಾಫಿಕ್ಸ್ ನ ವಿಸ್ಮಯಗಳಿಂದಾಗಿ ಈ ಚಿತ್ರವು ಭಾರತದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿ ಮೂಡಿದೆ.

ನಾನು ಆ ಚಿತ್ರವನ್ನು ನೋಡಿದ್ದೆ. ನೋಡಿ ಒಂದಷ್ಟು ವಾರಗಳು ಕಳೆದ ಮೇಲೂ ಅದೇನೋ ನನ್ನನ್ನು ಕಾಡುವಂತಿತ್ತು. ಮರೆತು ಹೋಗಿರುವ ಏನನ್ನೋ ನೆನಪಿಸುವಂತಿತ್ತು. ರಾಜನ ಗಾಂಭೀರ್ಯ, ನ್ಯಾಯ ,ನಿಷ್ಠೆಗಳ ಬಗ್ಗೆ ಅದೆಲ್ಲೋ ಓದಿದ ನೆನಪು. ಮತ್ತೆ ಮತ್ತೆ ಕೆದಕಿ ನೋಡಿದರೆ ನೆನಪಿಗೆ ಬಂದದ್ದು  ಒಂದು ಪುಟ್ಟ ಪುಸ್ತಕ. ಭಾರತ-ಭಾರತಿಯವರ ಪ್ರಕಾಶನದಲ್ಲಿ ಹೊರ ಬಂದಿದ್ದ “ಶಿವಾಜಿ” ಎನ್ನುವ ಆ ಪುಸ್ತಕ ಅಪ್ಪನ ಶೆಲ್ಫ್ ನಲ್ಲಿ ಇನ್ನೂ ಇರಬಹುದು. ಓದುವ ಹವ್ಯಾಸವನ್ನು ಬೆಳೆಸಿಕೊ ಎಂದು ಯಾರು ಯಾವಾಗಲೇ ಗೊಣಗಲಿ, ನಾನು ಪಟ್ಟಂಥ ಇದೇ ಪುಸ್ತಕವನ್ನು ಕೈಗೆತ್ತಿಕೊಳ್ಳುತಿದ್ದೆ. ಸಣ್ಣ ಪುಸ್ತಕವಾಗಿದ್ದರಿಂದಲೋ, ಅಥವಾ ಶಿವಾಜಿ ಅನ್ನುವ ಮಹಾರಾಜರು ತುಂಬಾ ಇಷ್ಟವಾಗಿದ್ದರಿಂದಲೋ,ನನಗೆ ತಿಳಿದಿಲ್ಲ.

ಮತ್ತಷ್ಟು ಓದು »