30 ಇಯರ್ಸ್ ಆಫ್ 1987.
– ಸುಜಿತ್ ಕುಮಾರ್
ಕಾಲದ ಗಾಲಿ ಎಂದಿಗಾದರೂ ನಿಲ್ಲಬಹುದೇ? ಎಂಬ ಮೂರ್ಖ ಪ್ರಶ್ನೆಯನ್ನು ಮಾನವ ಅದೆಷ್ಟು ಬಾರಿ ತನ್ನನ್ನೇ ತಾನು ಕೇಳಿದ್ದಾನೆಯೋ. ಅದೆಷ್ಟು ಬಾರಿ ಅದು ನಿಂತಿದೆ ಎಂದೇ ಭಾವಿಸಿ ಮೋಹಪರವಶನಾಗಿ, ಅಸೂಹಿಯಾಗಿ, ಸಕಲವೂ ನನ್ನದೇ ನಾನೇ ಒಡೆಯ ಎಂಬಂತೆ ಅದೆಷ್ಟು ಬಾರಿ ವರ್ತಿಸಿ ಕುಣಿದು ಮತ್ತೆ ಯಥಾ ಪ್ರಕಾರ ಅದೇ ಕಾಲದ ಗಾಲಿಯೊಳಗೆಯೇ ಮರೆಯಾಗಿದ್ದಾನೆಯೋ? ಅಂದಿನಿಂದ ಇಂದಿನವರೆಗೂ ಮಾನವ ಮೂರ್ಖನೇ. ಗಳಿಕೊಂಡಿರುವ ಒಂದೆರೆಡು ದಿನಗಳನ್ನು ಹಾಯಾಗಿ ಬದುಕಿ ನಕ್ಕು ನಲಿದು ಮರೆಯಾಗುವ ಬದಲು ಇಲ್ಲ ಸಲ್ಲದ ತಾಪತ್ರಯವನ್ನೆಲ್ಲ ತನ್ನ ಮೇಲೆರೆದುಕೊಂಡು ಸುಖಾಸುಮ್ಮನೆ ಗೋಳಾಡಿ ಗೊಣಗಾಡಿ ಅತ್ತು ಒದ್ದಾಡಿ ಮರೆಯಾಗುತ್ತಾ ಬಂದಿದ್ದಾನೆ. ಅಷ್ಟೆಲ್ಲ ಸರ್ಕಸ್ ಗಳನ್ನೂ ಮಾಡಿಯೂ ಆತ ಕಾಲದ ಗಾಲಿಯನ್ನು ತಡೆದು ನಿಲ್ಲಿಸಿದನೇ? ನಿಲ್ಲಿಸಬಲ್ಲನೆ? ಮತ್ತಷ್ಟು ಓದು