ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 21, 2018

1

ಸಮಾನತೆಯ ಪ್ರಶ್ನೆ, ಸಾಮರಸ್ಯದ ಸಂಕೇತ ಶಬರಿಮಲೆ

‍ನಿಲುಮೆ ಮೂಲಕ

– ಸ್ನೇಹಾ ಸಾಗರ

downloadಕೆಲ ದಿನಗಳ ಪ್ರಶ್ನೆಯಲ್ಲ, ಹಲವು ವರ್ಷಗಳ ಪ್ರಶ್ನೆ. ‘ಶಬರಿಮಲೆಗೆ ಹೆಣ್ಣಿಗೇಕೆ ಪ್ರವೇಶವಿಲ್ಲ’ ಎನ್ನುವುದು. ಹೆಣ್ಣೆೆಂದೆರೆ ಅಪವಿತ್ರತೆ ಎನ್ನುವುದೋ, ಪಂದಳದ ರಾಜ ಹೆಣ್ಣಿನ ವಿರೋಧಿ ಎನ್ನುವುದೋ ಅಥವಾ 48 ದಿನಗಳ ಕಠಿಣ ವೃತ ಮತ್ತು ದೊಡ್ಡ ಪಾದ, ಸಣ್ಣ ಪಾದಗಳನ್ನು ಹತ್ತಿ ದೇವರ ದರ್ಶನ ಪಡೆಯುವುದು ಹೆಣ್ಣಿನ ಶಕ್ತಿಗೆ ಆಗದ್ದು ಎನ್ನುವುದೋ. ಒಟ್ಟಿನಲ್ಲಿ ಶಬರಿಮಲೆ ಅಂದಿಗೂ – ಇಂದಿಗೂ ಪ್ರಶ್ನೆೆಯೇ, ವಿವಾದವೇ. ಆದರೆ ಅದು ಯಾರಿಗೆ ಎನ್ನುವುದು ದೊಡ್ಡ ಪ್ರಶ್ನೆೆ. ಭಾರತವೆಂದರೆ ಪರಂಪರೆ, ಭಾರತವೆಂದರೆ ಸಂಸ್ಕೃತಿ – ಸಂಪ್ರದಾಯ ಎನ್ನುವರಿಗೆ ಹಾಗೂ ದೇವರೊಡನೆ ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆೆ ನಂಬಿಕೆಗಳನ್ನು ಉಳಿಸಿಕೊಂಡು ಬಂದವರಿಗೆ ಖಂಡಿತ ಶಬರಿಮಲೆಯ ಈ ಕಟ್ಟುಪಾಡು ಸಮಸ್ಯೆೆಯೇ ಅಲ್ಲ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಮಹತ್ತರವಾದ ತೀರ್ಪಿನಿಂದ ಒಂದು ಸಮಾನತೆಯ ದೊಡ್ಡ ಅಲೆಯನ್ನೇ ಸೃಷ್ಟಿಸುತ್ತೇವೆಂದು ನಮ್ಮ ಮಹಿಳಾ ಮಣಿಗಳು ಹೊರಟಿದ್ದಾರೆ. ಆದರೆ ನನ್ನ ಪ್ರಕಾರ ಶಬರಿಮಲೆ ಸಮಾನತೆಯ ಕ್ಷೇತ್ರವಾಗುವುದಕ್ಕಿಂತ ಸಾಮರಸ್ಯದ ಕೇಂದ್ರ ಬಿಂದುವಾಗಿರುವುದೇ ಒಳಿತು. ಭಾರತದ ಯಾವುದೇ ದೇವರಿಗಿಲ್ಲದ ನೇಮ, ನಡತೆ ಈ ದೇವರಿಗಿದೆ. 48 ದಿನಗಳ ಕಠಿಣ ವೃತವನ್ನು ಕೈಗೊಂಡ ಮೇಲೆಯೇ ಈ ದೇವಸ್ಥಾನಕ್ಕೆೆ ಹೋಗಬೇಕೆಂಬ ಸಂಪ್ರದಾಯವಿದೆ. ನೀವು ಗಮನಿಸಿರಬಹುದು.. ಅಯ್ಯಪ್ಪ ಮಾಲಾಧಾರಿಗಳು ಮನೆಯಲ್ಲಿ ಇರದೇ ಊರಿನಲ್ಲಿ ಎಲ್ಲಾದರೂ ಒಂದು ಸಣ್ಣ ಗುಡಿಸಲಿನ ರೀತಿ ಮಾಡಿಕೊಂಡು ಜೀವಿಸುತ್ತಾರೆ. ಊರಿನಲ್ಲಿ ಮಾಲೆ ಹಾಕಿದ ಸ್ವಾಮಿಗಳೆಲ್ಲರೂ ಸೇರಿ ಒಂದೇ ಸೂರಿನಡಿ ಬದುಕುತ್ತಾರೆ. ಸೂರ್ಯೋದಯಕ್ಕೂ ಮೊದಲೇ ಎದ್ದು ತಣ್ಣೀರ ಸ್ನಾನ ಮಾಡಿ ದೇವರ ಭಜನೆಯಲ್ಲಿ ನಿರತರಾಗುತ್ತಾರೆ. ಸೂರ್ಯೊದಯದ ನಂತರ ತಮ್ಮ ದೈನಂದಿನ ಕೆಲಸಗಳಿಗೆ ಮರಳುವ ಅವರು ಮತ್ತೆೆ ಸೂರ್ಯ ಮುಳುಗಿದ ನಂತರ ಬಂದು ಸೇರುವುದು ಅದೇ ಗುಡಿಸಲಿಗೇ. ಅದೇ ಅವರ ಪಾಲಿಗೆ ಅಯ್ಯಪ್ಪನ ಸನ್ನಿಧಿ. ಮತ್ತೆೆ ರಾತ್ರಿ ಇನ್ನೊಮ್ಮೆ ತಣ್ಣೀರ ಸ್ನಾನ, ದೇವರ ಪೂಜೆ, ಜಪ. ಇಷ್ಟೆೆಲ್ಲಾ ನೇಮ ನಡತೆ ಮಾಡುವಾಗ ಅವರಲ್ಲಿ ಬಾರದಿರುವ ಸಣ್ಣ ಪ್ರಶ್ನೆೆ ಜಾತಿ. ಸಮಾಜದಲ್ಲಿ ಜಾತಿಗಾಗಿ ಹೊಡೆದಾಡುವ ಅವರು ಮಾಲಾಧಾರಣೆ ಮಾಡಿದ ನಂತರದ ಕ್ಷಣದಿಂದಲೇ ಪ್ರತಿಯೊಬ್ಬರಿಗೂ ಸ್ವಾಮಿ ಎಂದು ಕರೆಯುತ್ತಾರೆ, ಅವನು ತಮ್ಮ ಮನೆ ಆಳಾಗಿದ್ದರೂ ಕೂಡ ಅವನಿಗೆ ನೀನು-ತಾನು ಎನ್ನದೇ ಅವರೊಂದಿಗೆ ಸ್ವಾಮಿ ಎಂದು ಗೌರವಪೂರ್ವಕವಾಗಿ ಮಾತನಾಡುತ್ತಾರೆ. ಪ್ರತಿಯೊಬ್ಬರಲ್ಲೂ ಅಯ್ಯಪ್ಪನನ್ನು ಕಾಣುವ ರೀತಿಯದು. ಮಾಲಾಧಾರಿಗಳು ಪರಸ್ಪರ ತಮ್ಮ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಆಗಲೂ ಕೂಡ ಅಲ್ಲಿ ಜಾತಿಯ ಹೆಸರೂ ಎಂದೂ ಕೇಳಿ ಬರುವುದಿಲ್ಲ. ಬಡವ ಬಲ್ಲಿದನೆನ್ನುವ ಭೇದ ಭಾವ ಎದುರಾಗುವುದಿಲ್ಲ. ಬ್ರಾಹ್ಮಣ ಶೂದ್ರನ ಕಾಲಿಗೆ ನಮಸ್ಕರಿಸುತ್ತಾನೆ, ಶೂದ್ರ ಬ್ರಾಹ್ಮಣನ ಕಾಲಿಗೆ ನಮಸ್ಕರಿಸುತ್ತಾನೆ. ಇಂತಹ ಒಂದು ವಿಭಿನ್ನವಾದ ಆಚರಣೆ ಕೇವಲ ಆಯ್ಯಪ್ಪನ ಭಕ್ತರಲ್ಲಿ ಮಾತ್ರ ನೋಡಲು ಸಾಧ್ಯ. ಬಹುಶಃ ಕೆಲ ದಿನಗಳ ಅವಧಿಗಾದರೂ ಜಾತಿಯತೆಯನ್ನು ಮರೆಸುವ, ಸಾಮರಸ್ಯವನ್ನು ಎತ್ತಿ ಹಿಡಿಯುವ ದೇವರು ಭಾರತದಲ್ಲಿ ಇದ್ದರೆ ಅದು ಶ್ರೀ ಅಯ್ಯಪ್ಪ ಸ್ವಾಮಿ ಮಾತ್ರ.

ನಮ್ಮ ದೃಶ್ಯ ಮಾಧ್ಯಮಗಳು, ಶಬರಿಮಲೆಯ ಪ್ರಕರಣದ ಬಗೆಗೆ ತೋರಿಸುತ್ತಿರುವ ನಿಲುವು ನಿಜಕ್ಕೂ ಹೇಯನೀಯ. ‘ಸಂಪ್ರದಾಯ ಪರಂಪರೆಗೆ ಹೆಸರಾದ ಭಾರತದಲ್ಲಿ ಇತಿಹಾಸದಲ್ಲಿ ಬೃಹತ್ ಮೈಲಿಗಲ್ಲನ್ನು ಸೃಷ್ಟಿಸಿದ ಎರಡು ಹೆಣ್ಣು ಮಕ್ಕಳು!’ ಎಂದು ಶಬರಿಮಲೆಗೆ ಹೊರಟು ನಿಂತ ಹೆಣ್ಣು ಮಕ್ಕಳನ್ನು ಮಹಾನ್ ಸಾಧಕಿಯರನ್ನಾಗಿ ತೋರಿಸುತ್ತಿರುವುದು ನಾಚಿಕೆಗೇಡು ಎನಿಸುತ್ತದೆ. ಅಷ್ಟಕ್ಕೂ ಆ ಇಬ್ಬರೂ ಹೆಣ್ಣು ಮಕ್ಕಳೂ ಹಿಂದೂಗಳಲ್ಲ, ಆದರೂ ಹಿಂದೂ ದೇವಾಲಯದ ಒಳಗೆ ಅವರಿಗೆ ಪ್ರವೇಶ ಬೇಕಂತೆ. ಇಲ್ಲಿ ಆಕೆಯ ಧರ್ಮವೇನು ತೊಂದರೆಯಲ್ಲ. ಆದರೆ ಆಕೆಯ ಈ ನಿಲುವಿನ ಹಿಂದಿನ ಮರ್ಮವೇ ಒಂದು ದೊಡ್ಡ ಸಮಸ್ಯೆೆ. ಆಕೆ ನೇರ ದೃಷ್ಟಿಗರ ಕಣ್ಣಿಗಂತೂ ಹಿಂದುತ್ವದ ಪಾವಿತ್ರ್ಯತೆಯನ್ನು ಹಾಳು ಮಾಡಲಿಕ್ಕೆೆಂದೇ ಪಣ ತೊಟ್ಟು ನಿಂತಂತೆ ಕಾಣುವುದು ಸತ್ಯ. ಈಗ ಅಯ್ಯಪ್ಪನನ್ನು ನೋಡಿಯೇ ತೀರುತ್ತೇನೆಂದು ಹೊರಟಿರುವ ರೆಹಾನಾ ಫಾತೀಮ ಈ ಹಿಂದೆ ಕಿಸ್ ಆಫ್ ಲವ್ ಹೋರಾಟದಲ್ಲಿ ಕಾಣಿಸಿಕೊಂಡವಳು. ಕಿಸ್ ಆಫ್ ಲವ್ ಅಂದರೆ ಬೇರೇನಲ್ಲ ಎಲ್ಲೆೆಂದರಲ್ಲಿ (ಲಕ್ಷಾಂತರ ಜನರು ನೋಡುತ್ತಿರುವ ವೇದಿಕೆ ಮೇಲ್ನಿತ್ತಾದರೂ ಸರಿಯೇ) ನಿಮ್ಮಿಷ್ಟದಂತೆ ಕಿಸ್ ಮಾಡುವುದು! ಒಮ್ಮೆ ಅವಳ ಫೇಸ್‌ಬುಕ್ ಖಾತೆ ತೆರೆದು ನೋಡಿದರೆ ಎಂತವರಾದರೂ ‘ಥೂ! ಇವಳೂ ಒಬ್ಬ ಹೆಣ್ಣಾ ’ಎಂದು ಉದ್ಗರಿಸುವುದು ಗ್ಯಾರಂಟಿ. ಅಸಭ್ಯ ಫೋಟೋಗಳನ್ನೇ ತನ್ನನ್ನು ತಾನು ಫೇಮಸ್ ಮಾಡಿಕೊಳ್ಳಲು ಅಸ್ತ್ರವಾಗಿ ಬಳಸಿರುವ ಹೆಣ್ಣು ರೆಹಾನಾ ಎನ್ನುವುದು ನಮ್ಮ ದೇಶದ ಹೆಣ್ಣು ಮಕ್ಕಳಿಗೆ ತಲೆ ತಗ್ಗಿಸುವಂತಹ ವಿಚಾರ. ನಾಸ್ತಿಕಳಾದ ಇವಳಿಗೆ ಇದ್ದಕ್ಕಿದ್ದ ಹಾಗೆ ನಮ್ಮ ದೇವರಾದ ಸ್ವಾಮಿ ಅಯ್ಯಪ್ಪನ ಮೇಲೆ ಭಕ್ತಿ ಉಕ್ಕಿ ಹರಿದು, ದರ್ಶನಕ್ಕೆೆಂದು ಹೊರಟಿದ್ದಾಳೆ. ಇದುವರೆಗೂ ಒಮ್ಮೆಯೂ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸಬೇಕೆಂಬ ಮನಸ್ಸು ಬಾರದವಳಿಗೆ ಅಯ್ಯಪ್ಪನ ಮೇಲೆ ಅದೇಗೆ ಭಕ್ತಿ ಭಾವ ಹರಿಯಿತೆಂಬುದನ್ನು ಆಕೆಗೆ ಈ ರೀತಿ ಮಾಡಲು ಇಂಬು ನೀಡಿದ ಮತ್ತು ನೀಡುತ್ತಿರುವ ದೇಶದ್ರೋಹಿಗಳನ್ನೇ ಕೇಳಬೇಕು. ಸುಪ್ರೀಂ ಕೋರ್ಟ್ ಹೆಣ್ಣು ಮಕ್ಕಳಿಗೆ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆೆ ಅನುಮತಿ ಕೊಟ್ಟ ಮಾತ್ರಕ್ಕೆೆ ಇಡುಮುರಿಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಹೊತ್ತೊಯ್ಯುವ ಮಟ್ಟಿಗೆ ಆಕೆ ಚಿಂತಿಸುತ್ತಾಳೆ ಅಂದರೆ ಆಕೆಗಿರುವುದು ಭಕ್ತಿಯೋ, ಸಮಾನತೆ ಬೇಕೆನ್ನುವ ಹಂಬಲವೋ ಅಥವಾ ಹಿಂದೂ ಧರ್ಮದ ಪಾವಿತ್ರ್ಯತೆಯನ್ನು ಹಾಳು ಮಾಡಲೇಬೇಕೆನ್ನುವು ಕೆಟ್ಟ ಹಟವೋ ಎನ್ನುವುದನ್ನು ನಮ್ಮ ಬುದ್ಧಿಜೀವಿಗಳು ಯೋಚಿಸಬೇಕು. ಅವಳೊಟ್ಟಿಗೆ ದರ್ಶನಕ್ಕೆೆ ಹೊರಟ ಹೈದರಾಬಾದ್ ಮೂಲದ ಪತ್ರಕರ್ತೆ ಕವಿತಾ ಕೋಶಿಗೆ ಅದಾವ ರೀತಿಯಲ್ಲಿ ತಲೆ ತಿರುಗಿಸುವ ಕೆಲಸವನ್ನು ರೆಹಾನಾ ಮಾಡಿದ್ದಾಳೋ ಎನ್ನುವುದು ಕಾಡುವ ಪ್ರಶ್ನೆೆ.

ಇನ್ನೊಬ್ಬ ಕ್ರೈಸ್ತ ಮಹಿಳೆ ನಾನೂ ಅಯ್ಯಪ್ಪನ ದರ್ಶನ ಮಾಡುತ್ತೇನೆಂದು ಹಾರಾಡುತ್ತಿದ್ದಾಳೆ. ಹಿಂದೂ ಧರ್ಮದಲ್ಲಿ ಹೆಣ್ಣಿಗಿರುವ ಸಮಾನತೆಯ ಬಗ್ಗೆೆ ಪ್ರಶ್ನಿಸುತ್ತಿರುವ ಈಕೆಗೆ ತಮ್ಮ ಧರ್ಮದಲ್ಲಿ ಏನಕ್ಕೆೆ ಅದೇ ಸಮಾನತೆ ಇಲ್ಲ ಎನ್ನುವುದರ ಬಗ್ಗೆೆ ಉತ್ತರವಿಲ್ಲ. ಪ್ರತಿ ಚರ್ಚಿನಲ್ಲೂ ಗಂಡು ಮಕ್ಕಳೇ ಏಕೆ ಪಾದ್ರಿ ಆಗಬೇಕು?, ಹೆಣ್ಣೂ ಪಾದ್ರಿಯಾಗಿ ನಿಲ್ಲಬಹುದಲ್ಲ. ಅಷ್ಟೇ ಏಕೆ ಬೇರೆ ಧರ್ಮದ ದೇವರ ಬಗ್ಗೆೆಯೇ ಇಷ್ಟೊಂದು ನಂಬಿಕೆ, ಭಕ್ತಿಯನ್ನು ಹೊಂದಿರುವ ಆಕೆ ತಾನೇ ತನ್ನ ಧರ್ಮದ ಬಗ್ಗೆೆ, ತನ್ನ ಧರ್ಮದ ಏಕೈಕ ದೇವರ ಬಗ್ಗೆೆ ಅದೇ ಭಕ್ತಿಯನ್ನು ಬೆಳೆಸಿಕೊಂಡು ತಾನೇ ಪಾದ್ರಿಯಾಗಿ ನಿಲ್ಲಬಹುದಲ್ಲವೇ? ತನ್ನ ಧರ್ಮದ ಗುಟ್ಟನ್ನು ಬಿಟ್ಟುಕೊಡಲು ರೆಡಿ ಇರದ, ತಾನು ಕ್ರೈಸ್ತ ಮಹಿಳೆ ಎಂದು ಹೇಳಿಕೊಳ್ಳದೆ, ಒಂದೇ ಒಂದು ತೀರ್ಪು ಬಂದೊಡನೆ ತಾನೂ ಹಿಂದುವೆನ್ನುವಂತೆ ಬಿಂಬಿಸಿಕೊಳ್ಳುವ ಹುನ್ನಾಾರವಾದರೂ ಏತಕ್ಕೆೆ? ಇದನ್ನೆೆಲ್ಲ ಬುದ್ಧಿ ಜೀವಿಗಳು ಪ್ರಶ್ನಿಸದಿರುವುದು ಬುದ್ಧಿ ಜೀವಿಗಳ ಮೇಲೆಯೇ ಶಂಕಿಸುವಂತೆ ಮಾಡಿದೆ.

‘ಸೇವ್ ಶಬರಿಮಲೆ’ ಎಂದು ಒಂದಿಷ್ಟು ಜನ ಹೇಳಿದರೆ, ಹೆಣ್ಣೇನು ಅಪವಿತ್ರಳೇ ಎಂದು ಹಲವು ಜನ ಪ್ರಶ್ನಿಸುತ್ತಿದ್ದಾರೆ. ಇಲ್ಲಿ ಪಾವಿತ್ರ್ಯತೆ ಅಪಾವಿತ್ರ್ಯತೆಯ ಪ್ರಶ್ನೆೆಯೇ ಇಲ್ಲ. ಬದಲಾಗಿ ಇಲ್ಲಿ ಸಮಾನತೆಯ ಪ್ರಶ್ನೆೆಯೇ ಕಾಣುತ್ತಿರುವುದು. ಮತ್ತು ಆ ಸಮಾನತೆಯನ್ನು ಪ್ರಶ್ನಿಸುತ್ತಿರುವುದು ನಮ್ಮ ಧರ್ಮದ ಹೆಣ್ಣು ಮಕ್ಕಳಲ್ಲ, ಅನ್ಯ ಧರ್ಮೀಯರು, ಅವರ ಧರ್ಮದಲ್ಲಿ ಸಿಗದ ಸಮಾನತೆಯನ್ನು ನಮ್ಮ ಧರ್ಮದಲ್ಲಿ ಹುಡುಕಿ ಹೊರಟಿದ್ದಾರೆ ಅಷ್ಟೇ. ಇದು ಹಿಂದೂ ಧರ್ಮದ ಕೆಲವು ಅಂಕು-ಡೊಂಕುಗಳನ್ನು ಎತ್ತಿ ಹಿಡಿದು ಭಾರತದ ಮೂಲ ಧರ್ಮವನ್ನೇ ಒಡೆಯುವ ಒಂದೇ ಒಂದು ಮೂಲ ತಂತ್ರವೆನ್ನಬಹುದು.

ಭಾರತ ಯುಗ ಯುಗಗಳಿಂದಲೂ ನಂಬಿ ಬದುಕುತ್ತಿರುವುದು ದೇವರೆಂಬ ಅಪರಿಮಿತ ಶಕ್ತಿ, ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆ. ಕೇಂದ್ರ ಸರಕಾರ ಅನುಮತಿ ಕೊಟ್ಟ ಮಾತ್ರಕ್ಕೆೆ ನಮ್ಮ ದೇಶದ ಹೆಣ್ಣು ಮಕ್ಕಳೇನು ಅಯ್ಯಪ್ಪನನ್ನು ನೋಡುತ್ತೇವೆಂದು ಹೊರಟು ನಿಲ್ಲುವುದಿಲ್ಲ. ಕಾರಣ ಅದು ನಮ್ಮ ದೇಶದ, ನಮ್ಮ ಧರ್ಮದ ಹೆಣ್ಣು ಮಕ್ಕಳಿಗೆ ಒಲಿದು ಬಂದಿರುವ ಸಂಸ್ಕೃತಿ. ಈ ಧರ್ಮವನ್ನು ಒಡೆಯುವಂತೆ ಇಂಬು ನೀಡುವ, ಉತ್ತೇಜಿಸುವ ಕೆಲ ದೇಶದ್ರೋಹಿ ಮನಸ್ಸುಗಳಿಂದಲೇ ಕೆಲವು ಅಹಿತಕಾರಿ ಘಟನೆಗಳು ನಡೆದಿವೆ ಎನ್ನುವುದೂ ಸತ್ಯ. ಅಯ್ಯಪ್ಪ ಕೇವಲ ಶಬರಿಮಲೆಯಲ್ಲಿಯೇ ಇದ್ದಾನೆಂದದೇನಲ್ಲ. ದೇಶದ ಹಲವಾರು ಕಡೆಗಳಲ್ಲಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನಗಳಿವೆ, ಅವುಗಳಿಗೆ ಎಲ್ಲಾ ವಯೋಮಾನದ ಹೆಣ್ಣು ಮಕ್ಕಳಿಗೂ ಪ್ರವೇಶವಿದೆ. ಸುಮ್ಮನೆ ಶಬರಿಮಲೆಯಲ್ಲಿಯೇ ಅಯ್ಯಪ್ಪನ ದರ್ಶನ ಮಾಡುತ್ತೇನೆ ಎನ್ನುವುದು ಕೆಟ್ಟ ಹಟವಷ್ಟೇ. ಭಾರತದಲ್ಲಿ ಎಲ್ಲಾ ಧರ್ಮಗಳಿಗೂ ಅವರದ್ದೇ ಆದ ದೇವರುಗಳಿವೆ, ನಂಬಿಕೆ ಆಚಾರ-ವಿಚಾರಗಳಿವೆ. ಇತರ ಧರ್ಮದ ದೇವರ ಬಗ್ಗೆೆ ಪ್ರಶ್ನಿಸುವ ಮೊದಲು ನಮ್ಮ ನಮ್ಮ ದೇವರ ಬಗ್ಗೆೆ ನಮಗೆ ನಂಬಿಕೆ, ಭಕ್ತಿ ಇದ್ದರೆ ಅದೇ ದೊಡ್ಡದು.

1 ಟಿಪ್ಪಣಿ Post a comment
  1. Nagshetty Shetkar
    ಆಕ್ಟೋ 21 2018

    ಈ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಂವಿಧಾನ ಮುಖ್ಯವೋ ಮೂಢನಂಬಿಕೆ ಮುಖ್ಯವೋ? ಮುಟ್ಟು ನಿಲ್ಲದ ಮಹಿಳೆಯರನ್ನು ದೂರವಿಟ್ಟು ಸರ್ವಾಂಗೀಣ ಅಭಿವೃದ್ಧಿ ಸಾಧ್ಯವೇ? ಅಯ್ಯಪ್ಪ ದೇವರಿಗೆ ಮುಟ್ಟು ಎಂದರೆ ಭಯವೋ ಅಸಹ್ಯವೋ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments