ವಿಷಯದ ವಿವರಗಳಿಗೆ ದಾಟಿರಿ

Archive for

1
ಜುಲೈ

ಕ್ಷಮಿಸಿ,ನಿಮ್ಮ ನೆಮ್ಮದಿಯನ್ನು ಕಲಕುವ ಉದ್ದೇಶ!

– ಚಿತ್ರ ಸಂತೋಷ್

ನನ್ನ ಕಣ್ಣಿನಲ್ಲಿ ಕಣ್ಣೀರು ಎಂದೋ ಬತ್ತಿಹೋಗಿತ್ತು. ಅನ್ಯಾಯದ ವಿರುದ್ಧದ ದನಿ ಕುಗ್ಗಿಹೋಗಿತ್ತು. ನನಗೆ ಈಗ ದನಿ ಇಲ್ಲ. ಒಂದು ವೇಳೆ ದನಿ ಇದ್ದರೂ ಕೇಳುವ ಕಿವಿಗಳು ನನ್ನ ಬಳಿ ಇಲ್ಲ. ಅಪ್ಪ-ಅಮ್ಮನ ನೆನಪಾಗುತ್ತದೆ. ಲಂಡನ್‌ನ ನೆನಪುಗಳು ಆಗಾಗ ಸುಳಿಯುತ್ತವೆ. ಬದುಕು ಬೇಡ ಅನಿಸುತ್ತಿದೆ. ಆದರೂ, ನನ್ನ ಕೈಯಾರೆ ನಾನು ಕೊಲೆಯಾಗ ಬಯಸಲಾರೆ. ಎಲ್ಲವನ್ನೂ ಮರೆಯೋಕೆ ಕುಡಿತವನ್ನು ಬದುಕಾಗಿಸಿಕೊಂಡಿದ್ದೇನೆ.

ಆನೆ, ಹುಲಿ, ಸಿಂಹಗಳ ಅಂಗಾಂಗಳನ್ನು  ಪ್ರದರ್ಶನಕ್ಕಿಟ್ಟರೆ ದುಡ್ಡು ಕೊಟ್ಟು ನೋಡಲು ಖುಷಿಪಡ್ತೀವಿ. ಆದರೆ, ಒಬ್ಬ ಹೆಣ್ಣಿನ ಅಂಗಾಂಗಳನ್ನು ಪ್ರದರ್ಶನಕ್ಕಿಟ್ಟರೆ…ನೋಡುವುದು ಬಿಡಿ, ಕೇಳಲು ಅಸಹ್ಯವಾಗುತ್ತದೆ. ಆದರೆ, ಇಂಥದ್ದೊಂದು ನೈಜ ಘಟನೆ ಎರಡು ದಶಕಗಳ ಹಿಂದೆ ನಡೆದಿತ್ತು. ಇಂದಿಗೂ ದಕ್ಷಿಣ ಆಫ್ರಿಕಾದ ನೂರಾರು ಹೆಣ್ಣು ಮಕ್ಕಳು ಈ ಕಥೆಯನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಾರೆ.

*****                                            *****
ನನ್ನ ಹೆಸರು ಸಾರಾ. ಹುಟ್ಟಿದ್ದು ೧೭೮೯ರಲ್ಲಿ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ. ನಾನು ಎದ್ದು ನಡೆಯುವ ಹೊತ್ತಿಗೆ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದೆ. ಅವರು ಬಲಿಯಾಗಿದ್ದೂ ಬಡತನಕ್ಕೇ! ಇಂದು ನನ್ನೆದುರು ಅವರ ಮುಖವೂ ಅಸ್ಪಷ್ಟ. ಹಿಂದೆ-ಮುಂದೆ ಯಾರಿಲ್ಲ. ಒಬ್ಬಳೇ ಮಗಳು. ಒಂದಷ್ಟು ದಿನ ಸಂಬಂಧಿಕರ ಆಶ್ರಯದಲ್ಲಿ ಬೆಳೆದೆ. ಆದರೂ, ಅಲ್ಲಿ ನನ್ನ ಬದುಕಿರಲಿಲ್ಲ. ನಮ್ಮೂರಿನ ಪಕ್ಕದ ಡಚ್ ರೈತರ ಮನೆಯಲ್ಲಿ ಜೀತದಾಳಾಗಿ ಸೇರಿಕೊಂಡೆ. ಆಗಿನ್ನೂ ಹರೆಯಕ್ಕೆ ಬಂದ ವಯಸ್ಸು ಜಗತ್ತಿನ ಆಗುಹೋಗುಗಳನ್ನು ತಿಳಿಯಬಲ್ಲವಳಾಗಿದ್ದೆ. ಬಿಳಿಯರು ನಮ್ಮ ಜನಾಂಗದ ವಿರುದ್ಧ ನಡೆಸುತ್ತಿದ್ದ ಅನ್ಯಾಯಗಳ ಕುರಿತು ಕೇಳಿದ್ದೆ. ಎಲ್ಲವೂ ನನ್ನೊಡಲಲ್ಲಿ ಮೌನವಾಗಿದ್ದವು.

ಬೀದಿ-ಬೀದಿಯಲ್ಲಿ ಬೆತ್ತಲಾದೆ!
Read more »

1
ಜುಲೈ

ಪ್ರೀತಿ ಕುರುಡಾದರೂ ಪ್ರಿತಿಸುವವರು ಕುರುಡಾಗದಿರಲಿ

– ಪವನ್ ಪಾರುಪತ್ತೇದಾರ್

ಅಗ್ರಹಾರದ ಶಾಮಣ್ಣನವರಿಗೆ ತಮ್ಮ ಮಗಳನ್ನ ಬ್ಯಾಂಕ್ ಮ್ಯಾನೇಜರ್ ಮಾಡಬೇಕಂಬ ಅಸೆ ಇತ್ತು.ಮಗಳಿಗೆ SSLC ವರೆಗೂ ಹಳ್ಳಿಯಲ್ಲಿನ ಶಾಲೆಯಲ್ಲಿ ಓದಿಸಿದರು, ಪ್ರತಿದಿನ ಮಗಳನ್ನ ಶಾಲೆಗೆ ಕರೆದೊಯ್ಯುವುವುದು ಮತ್ತೆ ಕರೆತರುವುದು ಅವರದೇ ಕೆಲಸ. ಮನೆಗೆ ಕರೆ ತಂದೊಡನೆ ಮುದ್ದಾಗಿ ಮಾತನಾಡಿಸಿ ಶಾಲೆಯ ಬಗ್ಗೆ ವಿಚಾರಿಸುವುದು ಇವೆಲ್ಲ ನಡೆಯುತ್ತಿತ್ತು. ಆದರೆ ಹಳ್ಳಿಯಲ್ಲಿ ಕಾಲೇಜ್ ಇಲ್ಲದಿದ್ದರಿಂದ ಅನಿವಾರ್ಯವಾಗಿ ಪಕ್ಕದ ಪಟ್ಟಣಕ್ಕೆ ಸೇರಿಸಬೇಕಾಯ್ತು, ಪ್ರತಿ ದಿನ ಬಸ್ ಅಲ್ಲಿ ಪ್ರಯಾಣ ಮಗಳು ಮನೆಯಿಂದ ಹೊರ ಮತ್ತೆ ಸಂಜೆ ಬರುವ ವರೆಗೂ ಅವಳದ್ದೇ ಚಿಂತೆ ಶಾಮಣ್ಣ ಮತ್ತು ಅವರ ಹೆಂಡತಿಗೆ. ಆಗಾಗ ಕಾಲೇಜ್ ಬಳಿ ಹೋಗುತಿದ್ದರು, ಒಂದೆರಡು ಸಲಿ ಅವರು ಹೋದಾಗ ಮಗಳು ಕಾಲೇಜ್ ನಲ್ಲಿ ಇರಲಿಲ್ಲ.

ಮಗಳು ಮನೆಗೆ ಬಂದಮೇಲೆ ಕೇಳಿದಾಗ ಸ್ನೇಹಿತೆಯ ಮನೆಗೆ ಓದಲು ಹೋಗಿದ್ದೆ ಎಂದಳು. ಆದರು ಶಾಮಣ್ಣ ನವರಿಗೆ ಏನೋ ಒಂದು ರೀತಿ ಅನುಮಾನ ಮಗಳು ಎಲ್ಲಾದರೂ ತಪ್ಪು ದಾರಿ ತುಳಿಯುತಿರುವಳೋ ಅನ್ನೋ ಭಯ, ಕಾಲೇಜ್ ಹತ್ತಿರದಲ್ಲೇ ಇದ್ದಿದ್ದರೆ ಮೊದಲಿನ ಹಾಗೆ ತಾನೆ ಜೊತೆಯಲಿ ಹೋಗಿ ಬರಬಹುದಾಗಿತ್ತು ಅನ್ನೋ ಯೋಚನೆ ಇನ್ನು ಸ್ವಲ್ಪ ದಿನಗಳಾದ ಮೇಲೆ ಕಾಲೇಜ್ ಗೆ ಹೋದ ಶಾಮಣ್ಣ ನವರ ಮಗಳು ಮತ್ತೆ ಮನೆಗೆ ತಿರುಗಿ ಬಂದಿಲ್ಲ. ಆಮೇಲೆ ತಿಳಿದ ವಿಷಯ ಅಂದ್ರೆ ಅವಳು ಪಟ್ಟಣದಲ್ಲಿನ ಒಬ್ಬ ಆಟೋ ಡ್ರೈವರ್ ಜೊತೆ ಓದಿ ಹೋಗಿದ್ದಳು, ಹತ್ತಾರು ಎಕರೆ ಜಮೀನು ಅಸ್ತಿ ಪಾಸ್ತಿ ಎಲ್ಲ ಇದ್ದ ಶಾಮಣ್ಣನವರಿಗೆ ಮಗಳ ಮದುವೆ ಮಾಡುವುದು ಅಷ್ಟೇನೂ ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಮಗಳು ವಿದ್ಯಾವಂತೆ ಅಗಲಿ ಎಂದು ಅಸೆ ಪಟ್ಟಿದ್ದಕ್ಕೆ ಶಾಮಣ್ಣ ನವರಿಗೆ ಸಿಕ್ಕ ಪ್ರತಿಫಲ ಬಹಳ ವಿಷಾದನೀಯ. ಬಹಳ ಕಟ್ಟುನಿಟ್ಟಿನ ಬ್ರಾಹ್ಮಣ ಕುಟುಂಬ ಊರಿನ ಜನ ಮಾತ್ರವಲ್ಲದೆ ನೆಂಟರು ಇಷ್ಟರ ಮಧ್ಯೆ ಸಹ ಅವಮಾನ ಪಡುವಂತಾಯಿತು.

Read more »