ವಿಷಯದ ವಿವರಗಳಿಗೆ ದಾಟಿರಿ

Archive for

14
ಜುಲೈ

ಅಯೊಡಿನ್ ಹೆಸರಿನ ಮಹಾದ್ರೋಹ.!!!

-ಶ್ರೀ ಹರ್ಷ ಸಾಲೀಮಠ

ಅಯೊಡಿನ್‍ಯುಕ್ತ ಉಪ್ಪಿನ ಬಗ್ಗೆ ಸಾಕಷ್ಟು ಪ್ರಚಾರ ನಡೆದಿದೆ. ಇದಕ್ಕೆ ಸರ್ಕಾರದ ಕುಮ್ಮಕ್ಕೂ ಸಾಕಷ್ಟಿದೆ. ಸರ್ಕಾರದ ಈ ಕುಮ್ಮಕ್ಕಿನ ಹಿಂದೆ ಅನೇಕ ದುಷ್ಟ ಕೈಗಳ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.ಅಯೊಡಿನ್ ನಮ್ಮ ದೇಹಕ್ಕೆ ಮೈಕ್ರೊ ಪ್ರಮಾಣದಲ್ಲಿ ಬೇಕಾದ ಅಂಶ. ಅಯೋಡಿನ್ ಅಂಶ ನಮ್ಮ ದೇಹದಲ್ಲಿ ಕಡಿಮೆಯಾದಾಗ ಥೈರಾಯಿಡ್ ಗ್ರಂಥಿ ಅಯೋಡಿನ್ ಅನ್ನು ಹೆಚ್ಚಾಗಿ ಹೀರಿಕೊಳ್ಳಲು ಊದಿಕೊಳ್ಳತೊಡಗುತ್ತದೆ. ಇದೇ ಗಾಯ್ಟರ್ ರೋಗ.
ಗಾಯ್ಟರ್ ಅಥವಾ ಗಳಗಂಡ ರೋಗ ನಮ್ಮ ದೇಶದಲ್ಲಿ ಕಂಡುಬರುವುದೇ ವಿರಳ. ಅಯೋಡಿನ್ ಕೊರತೆಯನ್ನು ದೊಡ್ಡ ಗಂಡಾಂತರವೆಂಬಂತೆ ಬಿಂಬಿಸಿ ಅಯೋಡೀಕರಿಸಿದ ಉಪ್ಪನ್ನು ಬಲವಂತವಾಗಿ ಎಲ್ಲರಿಗೂ ತಿನ್ನಿಸಲಾಗುತ್ತಿದೆ. ಗಳಗಂಡ ರೋಗ ನಮ್ಮ ದೇಶದಲ್ಲಿ ಕಂಡು ಬರುವುದು ಲಡಾಕ್, ಶಿಮ್ಲಾ ರೀತಿಯ ಅತಿ ಹೆಚ್ಚಿನ ಮಣ್ಣಿನ ಸವೆತ ಇರುವ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ. ಎಲ್ಲಾ ಸೇರಿದರೇ ಅಯೋಡಿನ್ ಕೊರತೆಯನ್ನು ಎದುರಿಸುತ್ತಿರುವುದು ಶೇ.೨ ರಷ್ಟು ಜನರು ಮಾತ್ರ. ಶೇ.೨ರ ಕೊರತೆಯನ್ನು ನೀಗಿಸುವುದಕ್ಕಾಗಿ ಉಳಿದ ಶೇ.೯೮ ರಷ್ಟು ಜನರಿಗೆ ಅಯೋಡಿನ್ ತಿನ್ನಿ ಎಂದು ಪ್ರಚಾರ ಮಾಡಲಾಗುತ್ತಿದೆ.

ಅನೇಕ ವ್ಯಕ್ತಿಗಳಲ್ಲಿ ಅಯೋಡಿನ್ ಅಲರ್ಜಿ ಇರುತ್ತದೆ. ಗಳಗಂಡ ಚಿಕಿತ್ಸೆಗಾಗಿ ಅಯೋಡಿನ್ ನೀಡಬೇಕಾದರೂ ಈ ಅಲರ್ಜಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಲರ್ಜಿ ಇರುವ ವ್ಯಕ್ತಿಗಳಲ್ಲಿ ಚಿಕ್ಕ ಪ್ರಮಾಣದ ಅಯೋಡಿನ್ ಸಹ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಲ್ಲುದು. ಇದಲ್ಲದೇ ದೇಹದಲ್ಲಿ ಅಯೋಡಿನ್‍ನ ಅನವಶ್ಯಕ ಹೆಚ್ಚಳದಿಂದಾಗಿ ಖಿನ್ನತೆ, ಉಸಿರಾಟದ ತೊಂದರೆಗಳು ನಪುಂಸಕತ್ವ, ಕೂದಲುದುರುವಿಕೆ,ಚರ್ಮದ ರೋಗಗಳು , ಗಳಗಂಡ ನಿಶ್ಯಕ್ತಿ ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕ ತೊಂದರೆಗಳು ಉಂಟಾಗುವ ಸಾಧ್ಯತೆಗಳಿವೆ. ಅಯೋಡಿನ್ ತಿನ್ನುವುದನ್ನು ಕಡಿಮೆ ಮಾಡುವುದರಿಂದ ಗಂಟಲಿನ ಕ್ಯಾನ್ಸರ್ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಜಪಾನ್‍ನಲ್ಲಿ ಸಂಶೋಧನೆಗಳು ತಿಳಿಸುತ್ತವೆ. ಅಯೋಡಿನ್ ಕೊರತೆ ಇರುವ ಜರ್ಮನಿ ದೇಶದಲ್ಲಿ ಗಂಟಲು ಕ್ಯಾನ್ಸರ್ ಕೂಡ ಕಡಿಮೆಯೆ. ಅಲ್ಲದೇ ಗರ್ಭಿಣಿ ಸ್ತ್ರೀಯರಿಗೂ ಅಯೋಡಿನ್ ಅಪಾಯ ಉಂಟುಮಾಡುತ್ತದೆ. Read more »

14
ಜುಲೈ

ನಾಯಿ ಸನ್ಯಾಸಿಗೆ ನೀಡಿದ ಶಿಕ್ಷೆ…!

– ಗೋವಿಂದ ರಾವ್ ವಿ ಅಡಮನೆ

ಇಂದಿನ ಮಠಾಧಿಪತಿಗಳೂ ಅಸಂಖ್ಯ ‘ಜಗದ್ಗುರು’ಗಳೂ ‘ಧರ್ಮ’ ಪ್ರಚಾರಕರೂ ಮುಂದಿನ ಜನ್ಮದಲ್ಲಿ ಏನಾಗುತ್ತಾರೆ? ಈ ಪ್ರಶ್ನೆಗೆ ಉತ್ತರ ಇತ್ತೀಚೆಗೆ ನಾನು ಓದಿದ ಕಥೆಯಲ್ಲಿ ಹುದುಗಿದೆ. ಅದು ಇಂತಿದೆ:

ನಾಯಿಯೊಂದು ಶ್ರೀರಾಮಚಂದ್ರನ ಹತ್ತಿರ ಸನ್ಯಾಸಿಯೊಬ್ಬ ತನಗೆ ಕಲ್ಲು ಹೊಡೆದು ಹಿಂಸಿಸಿದ್ದಾನೆ ಎಂದು ದೂರು ಕೊಟ್ಟಿತು. ಶ್ರೀರಾಮಚಂದ್ರನ ಆಜ್ಞೆಯಂತೆ ಆ ಸನ್ಯಾಸಿಯನ್ನು ರಾಜಭಟರು ಹಿಡಿದು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನಾಯಿಗೆ ಕಲ್ಲು ಹೊಡೆದದ್ದು ನಿಜವೆಂದು ಸನ್ಯಾಸಿ ಒಪ್ಪಿಕೊಂಡ. ನಾಯಿ ಅಗಲ ಕಿರಿದಾದ ಕಾಲುದಾರಿಯಲ್ಲಿ ದಾರಿಗೆ ಅಡ್ಡವಾಗಿ ಮಲಗಿತ್ತೆಂದೂ ಎಷ್ಟೇ ಗದರಿಸಿದರೂ ಎದ್ದು ತನಗೆ ದಾರಿ ಬಿಡದೇ ಇದ್ದದ್ದರಿಂದ ಕಲ್ಲುಹೊಡೆದು ಎಬ್ಬಿಸಬೇಕಾಯಿತೆಂದೂ ಆತ ಹೇಳಿದ.

ಅಹಿಂಸೆಯ ದೀಕ್ಷೆ ಪಡೆದಿರುವ ಸನ್ಯಾಸಿ ನಾಯಿಗೆ ಕಲ್ಲು ಹೊಡೆದದ್ದು ಅಕ್ಷಮ್ಯ ಅಪರಾಧವೆಂದು ತೀರ್ಪು ನೀಡಿದ ಶ್ರೀರಾಮಚಂದ್ರ ಸನ್ಯಾಸಿಗೆ ಏನು ಶಿಕ್ಷೆ ನೀಡಬೇಕು ಎಂದು ಸಭಾಸದರನ್ನು ಕೇಳಲಾಗಿ ಅವರೆಲ್ಲರೂ ಒಮ್ಮತದಿಂದ ಫಿರ್ಯಾದುದಾರ ನಾಯಿಯೇ ಶಿಕ್ಷೆ ಏನಿರಬೇಕು ಎಂಬುದನ್ನು ತಿಳಿಸಲಿ ಎಂದರು. “ಇಲ್ಲಿಂದ ಒಂದುನೂರು ಹರದಾರಿ ದೂರದಲ್ಲಿ ಸನ್ಯಾಸಿಗಳು ವಾಸವಿರುವ ಆಶ್ರಮ ಒಂದಿದೆ. ಅದರ ಮುಖ್ಯಸ್ತ ದೈವಾಧೀನನಾಗಿ ಎರಡು ವರ್ಷಗಳು ಕಳೆದರೂ ಬೇರೊಬ್ಬ ಮುಖ್ಯಸ್ಥ ನೇಮಕಗೊಂಡಿಲ್ಲ. ಈ ಸನ್ಯಾಸಿಯನ್ನು ಆ ಆಶ್ರಮದ ಮುಖ್ಯಸ್ಥನನ್ನಾಗಿ ನೇಮಿಸಿ” ಎಂದಿತು ನಾಯಿ. ಎಲ್ಲರೂ ಆಶ್ಚರ್ಯಚಕಿತರಾಗಿ ಇದೂ ಒಂದು ಶಿಕ್ಷೆಯೇ ಎಂದು ಕೇಳಲಾಗಿ ಅದು “ಎರಡು ವರ್ಷದ ಹಿಂದೆ ತೀರಿಕೊಂಡ ಮುಖ್ಯಸ್ಥ ನಾನೇ. ಮುಖ್ಯಸ್ಥನಾಗಿದ್ದಾಗ ಐಷಾರಾಮೀ ಭೋಗ ಜೀವನ ನಡೆಸಿದ್ದರಿಂದ ಈ ಜನ್ಮದಲ್ಲಿ ನಾಯಿಯಾಗಿದ್ದೇನೆ. ಈ ಸನ್ಯಾಸಿಗೂ ಇದೇ ಗತಿಯಾಗಲಿ ಎಂದೇ ಈ ಮನವಿ” ಎಂದು ಹೇಳಿತು.