ವಿಷಯದ ವಿವರಗಳಿಗೆ ದಾಟಿರಿ

Archive for

28
ಜುಲೈ

ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?

-ರಾಕೇಶ್ ಎನ್ ಎಸ್
ಲೋಕಾಯುಕ್ತ ವರದಿ ಸೋರಿಕೆಯಾಗುತ್ತಲೆ ಯಡಿಯೂರಪ್ಪ, ರೆಡ್ಡಿ ಸೋದರರು, ಕುಮಾರಸ್ವಾಮಿ, ಅನಿಲ್ ಲಾಡ್ ಸೇರಿದಂತೆ ರಾಜ್ಯದ ಅನೇಕ ಅತಿರಥ ಮಹಾರಥಿಗಳು ಮತ್ತು ಸುಮಾರು ೫೦೦ಕ್ಕೂ ಮಿಕ್ಕ ಅಧಿಕಾರಿಗಳ ಮೇಲಿದ್ದ ಊಹಾಪೋಹ ಆಧಾರಿತ ಆರೋಪಗಳು ಇದೀಗ ತಾತ್ವಿಕ ಮತ್ತು ಸಾಂವಿಧಾನಿಕ ನೆಲಗಟ್ಟಿನ ಮೇಲೆ ನಿಂತ ಆರೋಪಗಳಾಗಿ ಪರಿವರ್ತನೆ ಗೊಂಡಿದೆ.ಯಡಿಯೂರಪ್ಪ ಸಕಲ ಭ್ರಷ್ಟಾಚಾರ ಕಲಾ ವಲ್ಲಭ ಎಂಬುದನ್ನು ಸಾಬೀತು ಮಾಡಲು ದೇಶದ ಜನರಿಗೆ ಯಾವುದೇ ವರದಿಯ ಅಗತ್ಯವಿರಲಿಲ್ಲ. ಆದರೆ ತಾನು ಭ್ರಷ್ಟಾಚಾರಿ ಎಂದು ಅವರನ್ನು ಅರ್ಥ ಮಾಡಿಕೊಳ್ಳಲು ಮತ್ತು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿಗೆ ಇದು ಗೊತ್ತಾಗಲು ಇಂತಹವೊಂದು ವರದಿ ಅಗತ್ಯವಾಗಿತ್ತು. ಆ ಕೆಲಸವನ್ನು ನ್ಯಾ. ಸಂತೋಷ್ ಹೆಗ್ಗಡೆ ಮಾಡಿ ಮುಗಿಸಿದ್ದಾರೆ.ಯಡಿಯೂರಪ್ಪ ಕರ್ನಾಟಕದ ಸಂಪತ್ತನ್ನು ಸುಮಾರು ೫ ವರ್ಷಗಳಿಂದ ಹುಲುಸಾಗಿ ಮೇಯುತ್ತಿದ್ದಾರೆ, ಕಳೆದ ಮೂರು ವರ್ಷಗಳಲ್ಲಿ ಅದು ಮಿತಿ ಮೀರಿದೆ. ಪ್ರತಿಯೊಂದಕ್ಕೂ ಕೊನೆ ಎಂಬುದು ಇದ್ದೆ ಇರುತ್ತದೆ. ಅದೇ ರೀತಿ ಯಡಿಯೂರಪ್ಪರ ಭ್ರಷ್ಟ ಆಡಳಿತಕ್ಕೆ ಕೊನೆಯ ಷರಾವನ್ನು ಲೋಕಾಯುಕ್ತದ ಈ ವರದಿ ಬರೆಯುತ್ತದೆಯೋ? ಇಲ್ಲ, ೨ ವರ್ಷಗಳ ಬಳಿಕ ಕರ್ನಾಟಕದ ಪ್ರಜ್ಙಾವಂತ ಜನರೇ ಬರೆಯಬೇಕಾಗುತ್ತದೆಯೇ? ಎಂಬುದು ಈಗಿರುವ ಪ್ರಶ್ನೆ… Read more »
28
ಜುಲೈ

ಯಡ್ಯೂರಪ್ಪಂಗೆ ನೊಬೇಲ್ ಅವಾರ್ಡು…!

– ವಿಜಯ್ ಹೆರಗು

ಎಂದಿನಂತೆ ನಮ್-ವಿಜಯ್ ಹೆರಗುಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ ‘ಅಡ್ಡಾ’ ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರ್ಲೇಬೇಕು.

ಸಿದ್ದ : ಲೇ ಕೆಂಚ ಇವತ್ತು ಪೇಪರ್ ನೋಡ್ದೆನ್ಲಾ ?

ಕೆಂಚ : ಹೂ ಕನ್ಲಾ ನೋಡ್ದೆ, ಪಾಪ ನಮ್ ಯಡ್ಯೂರಪ್ನೋರಿಗೆ ಶ್ಯಾನೆ ಕಾಟ ಕೊಡ್ತಾವ್ರೆ. ಈ ಸಂತೋಷ್ ಹೆಗ್ಡೆ ಲೋಕಾಯುಕ್ತ ಆದಾಗಿಂದ ನಮ್ ಸಿಎಂ ಸಾಹೇಬ್ರು ಮುಖ್ದಾಗೆ ಸಂತೋಷಾನೇ ಕಾಣಾಕಿಲ್ಲ………ಸದ್ಯ ಇನ್ನೊಂದು ವಾರಕ್ಕೆ ಆವಯ್ಯ ರಿಟೈರ್ ಆಯ್ತಾರೆ ಇನ್ನಾರಾ ನಮ್ ಸಿಎಮ್ಮು ಸುಖವಾಗಿ ಇರ್ಬೌದು ಅಂದ್ಕೊಂಡ್ರೆ ಅದೇನೋ “ಗಣಿ ಬಾಂಬ್” ಹಾಕ್ಬಿಟ್ರಲ್ಲ ಅವ್ರು.

ಸೀನ : ಅಲ್ಲಲೇ ಕೆಂಚ ನಮ್ ಸಿಎಂ ಸಾಹೇಬ್ರು ಮುಖ್ದಾಗೆ ಯಾವಾಗ್ಲಾ ಸಂತೋಷ ನೋಡಿದ್ದೇ ನೀನು!? ಆವಯ್ಯ ಯಾವಾಗಲೂ ಮುಖ ಗಂಟ್ ಹಾಕ್ಕಂಡೆ ಇರ್ತಾರೆ…….

ಸಿದ್ದ : ನಿಜ ಕಣ್ಲಾ ಸೀನ……ಆವಯ್ಯ ನಗೋದೇ ಕಷ್ಟ ಕಣ್ಲಾ ಅದ್ಕೆ ಅವ್ರು ಸದಾನಂದ ಗೌಡ್ರುನ್ನ ಪಕ್ಕಕ್ಕೆ ಇಟ್ಕಂಡಿದ್ರು…..ಸದಾನಂದ ಗೌಡ್ರು ಯಾವಾಗ್ಲೂ ನಗ್ತಾ ಇರ್ತಾರೆ, ಆದ್ರೆ ಈಶ್ವರಪ್ಪ ಬಂದು ಸದಾನಂದ ಗೌಡ್ರುನ್ನ ಎಬ್ಬಿಸಿ ಅವ್ರ ಸೀಟ್ನಾಗೆ ಇವ್ರು ಕುಂತ್ಕಂಬುಟ್ರು.

 

Read more »