ವಿಷಯದ ವಿವರಗಳಿಗೆ ದಾಟಿರಿ

Archive for

4
ಜುಲೈ

ದಿಲ್ಲಿಯ ’ಹುಳಿ ದ್ರಾಕ್ಷೆ’ ಹಿಡಿಯಲು ಹೋಗಿ

-ಕಾಲಂ ೯

ದಿಲ್ಲಿ ಕನ್ನಡದ ಪತ್ರಕರ್ತರಿಗೆ ದೂರ. 3000 ಕಿ.ಮೀ. ಅಷ್ಟೇ ಅಲ್ಲ. ಅದರಾಚೆಗೂ ದೂರ. ಕನ್ನಡದ ಪತ್ರಕರ್ತರು ದಿಲ್ಲಿಯಲ್ಲಿ ಹೆಜ್ಜೆ ಗುರುತು ಮೂಡಿಸುವುದು ಸುಲಭದ ಮಾತಲ್ಲ. ಏರು ಬಿಸಿಲು ಅಥವಾ ತೀವ್ರ ಚಳಿಯಲ್ಲಿ ನಿರಂತರ ಆಲೂ ಪಲ್ಯವನ್ನೂ ಅರಗಿಸಿಕೊಳ್ಳುತ್ತಲೇ ಇರಬೇಕು.

ದಿಲ್ಲಿಯ ಆಡುಭಾಷೆ ಹಿಂದಿ – ಉರ್ದು ಮಾತ್ರ. ಇಂಗ್ಲೀಷು ಅಷ್ಟಕ್ಕಷ್ಟೆ. ಇನ್ನು ಕನ್ನಡದ ಕಥೆ? ಪತ್ರಿಕಾರಂಗವೇನು? ಸುಪ್ರೀಂ ಕೋರ್ಟು, ಪಾರ್ಲಿಮೆಂಟು, ಐಎ ಎಸ್ ಲಾಬಿಯಲ್ಲಿಯೂ ಕನ್ನಡದ ಧ್ವನಿ ಕ್ಷೀಣವೇ.

ಕನ್ನಡದ ಪತ್ರಿಕೋದ್ಯಮಕ್ಕೆ ‘ಕೊಂಬು-ಕಹಳೆ’ ಎಲ್ಲ ಆದವರೂ ದಿಲ್ಲಿಯಲ್ಲಿ ಏನೂ ಅಲ್ಲ.

ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಅಂದರೆ ಅದು ಅಡ್ವಾಣಿಯದ್ದೋ – ಪ್ರಕಾಶ್ ಕಾರಟರದ್ದೋ – ಚಿದಂಬರರದ್ದೋ – ಯಾವುದೇ ರಾಷ್ಟ್ರೀಯ ನಾಯಕರದ್ದಾಗಲಿ. ಅಂದೊಂದು ಮದುವೆ ಮನೆಯ ಬಾಬತ್ತು. ಬರೋಬ್ಬರಿ 600 ಜನ. ಇಂಗ್ಲೀಷ್ ಚಾನೆಲ್ ಗಳು, ಹಿಂದಿ ಚಾನೆಲ್ ಗಳು, ರಾಷ್ಟ್ರೀಯ ಪತ್ರಿಕೆಗಳು, ಅವರವರ ಕ್ಯಾಮರಾಮೆನ್ ಗಳು, ಮೈಕ್‍ಮೆನ್ ಗಳು, ಅದರಾಚೆಗೆ ಎಲ್ಲೋ ಕಳೆದು ಹೋಗುವ ಕನ್ನಡದ ಪತ್ರಕರ್ತ. ಪ್ರಶ್ನೆ ಕೇಳುವುದು, ಉತ್ತರ ಬರೆಯುವುದು ದೂರದ ಮಾತು. ಎಷ್ಟು ದೂರವೆಂದರೆ ದೆಲ್ಲಿಯ ನಮ್ಮ ಧ್ವನಿಗಳು ಆ ಬಾಬತ್ತಿನ ತನಕ ಹೋಗುವುದೇ ಇಲ್ಲ. ದಿಲ್ಲಿಯ ತಮ್ಮ ಮನೆಯಲ್ಲಿಯೇ ಕೂತು NDTVಯದೋ ಆಜ್ ತಕ್ ನದೋ Direct Rellay ನೋಡ್ತಾ ನೋಡ್ತಾನೇ ಇವರು ಸುದ್ದಿ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಮತ್ತಷ್ಟು ಓದು »

4
ಜುಲೈ

ಜನರೆಂದರೆ ಯಾರ್ ಯಾರು ಕಾಗೇರಿಯವರೇ?

– ಬನವಾಸಿ ಬಳಗ

ಇವತ್ತಿನ (೦೩.೦೭.೨೦೧೧ರ) ಕನ್ನಡಪ್ರಭ ದಿನಪತ್ರಿಕೆಯ ಒಂಬತ್ತನೇ ಪುಟದಲ್ಲಿ ಮಾನ್ಯ ಶಿಕ್ಷಣಮಂತ್ರಿಗಳಾದ ಶ್ರೀ ವಿಶ್ವೇಶ್ವರಹೆಗ್ಡೆ ಕಾಗೇರಿಯವರ “ಬುಲೆಟ್ ಸಂದರ್ಶನ“ವೊಂದು ಪ್ರಕಟವಾಗಿದೆ. ಸರ್ಕಾರ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ಚರ್ಚೆ ಆರಂಭಿಸಿರುವ ಹಿನ್ನೆಲೆಯಲ್ಲಿ ಇದು ಕುತೂಹಲಕರವಾಗಿದ್ದು, ಒಂದು ಥರ ಸರ್ಕಾರದ ಮುಂದಿನ ನಡೆಯ ದಿಕ್ಸೂಚಿಯೂ ಆಗಿದೆ. ಇಡೀ ಸಂದರ್ಶನದ ಪ್ರಮುಖ ಮಾತುಗಳು ಇಂತಿವೆ.

ಸಾಹಿತಿಗಳಷ್ಟೇ… ಜನತೆಯಲ್ಲ!

ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ತಾವು ಸಿದ್ಧ ಎಂಬುದನ್ನು ಮಂತ್ರಿಗಳು ಸಾಬೀತು ಮಾಡುತ್ತಿರುವಂತೆ ಇವರ ಮಾತುಗಳಿವೆ. ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಸಾಹಿತಿಗಳು ಮಾತ್ರಾ ವಿರೋಧ ತೋರಿಸಿದ್ದಾರೆ, ಇವರಷ್ಟೇ ನಾಡಿನ ಜನತೆಯಲ್ಲ… ಹಳ್ಳಿಗಾಡಿನ ಜನರೂ ಕೂಡಾ ಅವರ ಅಭಿಪ್ರಾಯ ಹೇಳಲಿ… ಇತ್ಯಾದಿಯಾಗಿ ಮಂತ್ರಿಗಳು ಮಾತಾಡಿದ್ದಾರೆ. ಇದಲ್ಲದೆ ಮಾಧ್ಯಮಗಳಿಗೆ ಜನರ ಅಭಿಪ್ರಾಯ ನಿರೂಪಿಸುವ ಹೊಣೆಗಾರಿಕೆಯನ್ನೂ ವಹಿಸಿದ್ದಾರೆ. ಈ ಪ್ರಯತ್ನವು ಸಾಹಿತಿಗಳ ಬಾಯಿ ಮುಚ್ಚಿಸುವ “ನಿಮ್ಮ ಮಕ್ಕಳು ಇಂಗ್ಲೀಶ್ ಮಾಧ್ಯಮದಲ್ಲಿ ಓದಬಹುದು, ಬಡವರ ಮಕ್ಕಳು ಓದಬಾರದಾ?” ಎಂಬಂತಹ ಮತ್ತೊಂದು ಅಸ್ತ್ರವಾಗಿದೆ. ಇರಲಿ… ಕಾಗೇರಿಯವರು ಆಡಿರುವ ಮಾತುಗಳತ್ತ ನೋಡೋಣ.

ಮತ್ತಷ್ಟು ಓದು »