ವಿಷಯದ ವಿವರಗಳಿಗೆ ದಾಟಿರಿ

Archive for

30
ಜುಲೈ

ಮದಿರೆ ಬಿಟ್ಟು ಬದುಕ ಕಟ್ಟಿಕೊಂಡವರ ಕಥೆ

– ಪವನ್ ಯಂ.ಟಿ

ಕೊಟ್ಟಾರೆ ಕೊಡು ಶಿವನೆ ಕುಡುಕನಲ್ಲದ ಗಂಡನ …!

ಎಂದು ಎಷ್ಟೋ ಹೆಣ್ಣು ಮಕ್ಕಳು ದೇವರಲ್ಲಿ ಮೊರೆಯಿಡುತ್ತಿದ್ದ ಬಗ್ಗೆ  ಜನಪದ ಹಾಡನ್ನು ಕೇಳಿದ ನೆನಪಾಗುತ್ತಿದೆ. ಒಂದು ಹೆಣ್ನು ಮಗಳು ತನ್ನ ಗಂಡ ಕುಡುಕನಾಗುವುದನ್ನು ಕನಸಲ್ಲಿಯೂ ನೆನೆಯುದಿಲ್ಲ. ಅದೇ ರೀತಿ ತಮ್ಮ ಮಗ ಮಕ್ಕಳು ಕುಡುಕರಾಗಬೇಕೆಂದು ಯಾವ ತಂದೆ ತಾಯಿಯು ಇಷ್ಟ ಪಡುವುದಿಲ್ಲ. ಆದರೆ ಏನು ಮಾಡುವುದು ಕೆಲವು ಹೆಣ್ಣು ಮಕ್ಕಳ ಮತ್ತು ತಂದೆ ತಾಯಿಯಂದಿಯರ ಆಸೆ ಕೈಗೂಡಬೇಕಲ್ಲ. ನಮ್ಮಲ್ಲಿ ಹೆಚ್ಚು ಜನರು ಕುಡಿತದ ಬಲೆಗೆ ಬಿದ್ದಾಗಿದೆ. ನಮ್ಮ ದೇಶದಲ್ಲಿ ಶೇಕಡ ೭೦ ರಷ್ಟು ಜನರು ಈಗಾಗಲೇ ಕುಡಿತಕ್ಕೆ ಬಲಿ ಬಿದ್ದಿರ ಬಹುದು.

ಯಾವತ್ತೋ ಒಂದು ದಿನ ಜಾಲಿಗೆಂದು ಬಿಯರ್ ಕುಡಿದ ಒಬ್ಬ ವ್ಯಕ್ತಿ ನಂತರ ಕ್ವಾಟರ್, ಆಫ್, ಪುಲ್, ಬಾಟಲ್ ಕುಡಿಯುವವನಾಗಿ ಪರಿವರ್ತನೆಯಾಗುತ್ತಾನೆ, ನಂತರ ಅವನು ಸಂಪ್ರಾಯಿಕ ಕುಡುಕ. ನಮ್ಮಲ್ಲಿ ೫೦ ವರ್ಷಕ್ಕೆ ಮೇಲ್ ಪಟ್ಟ ಮಧ್ಯ ವಯಸ್ಕರು ಹೆಚ್ಚಾಗಿ ಕುಡಿತಕ್ಕೆ ಒಳಗಾಗಿರುವುದನ್ನು ಗಮನಿಸ ಬಹುದು. ಆದರೆ ಈಗಿನ ಸ್ಥಿತಿ ಯಾವ ರೀತಿಯಾಗಿದೆ ಯೆಂದರೆ ಹೆಚ್ಚಾಗಿ ಯುವಕರೇ ಜಾಲಿ, ಗಮ್ಮತಿನ ಹೆಸರಿನಲ್ಲಿ ಕುಡಿತಕ್ಕೆ ಬಲಿ ಬೀಳುತ್ತಿದ್ದಾರೆ. Read more »

30
ಜುಲೈ

ಸಂಸ್ಕೃತಿ ಸಂಕಥನ – ೩

– ರಮಾನಂದ ಐನಕೈ

ವಿದ್ಯಾವಂತರೆನಿಸಿಕೊಂಡ ನಮಗೆಲ್ಲ ಒಂದು ತೊಂದರೆ ಇದೆ. ಅದೇನೆಂದರೆ ನಮ್ಮ ಜೀವನಶೈಲಿಯೊಂದಿಗೆ ಅನಿವಾರ್ಯವಾಗಿ ಪಾಲಿಸಲೇಬೇಕಾದ ಸಂಪ್ರದಾಯಗಳು. ಇದನ್ನು ಪಾಲಿಸದಿದ್ದರೆ ನಾವು ಸಮುದಾಯದಿಂದ ಹೊರಗುಳಿಯತ್ತೇವೆ. ಕೆಲವೊಮ್ಮೆ ಮಾನಸಿಕವಾಗಿ ನಮ್ಮೊಳಗೇ ಅಭದ್ರತೆಗೊಳಗಾಗುತ್ತೇವೆ. ಹಾಗಂತ ಸಂಪ್ರದಾಯವನ್ನು ಪಾಲಿಸಲು ನಮ್ಮ ವೈಚಾರಿಕತೆ ಅನುವು ಮಾಡಿಕೊಡುವುದಿಲ್ಲ. ನಾವು ಭೌತಿಕವಾಗಿ ಬದುಕುತ್ತಿರುವುದು ಸಂಪ್ರದಾಯದ ಸಮಾಜದಲ್ಲಿ. ಮಾನಸಿಕವಾಗಿ ಬದುಕುತ್ತಿರುಉವದು ವೈಚಾರಿಕತೆಯೆಂಬ ಭ್ರಮೆಯಲ್ಲಿ. ಯಾಕೆ ಹೀಗಾಗುತ್ತಿದೆ? ನಮ್ಮ ಸಂಪ್ರದಾಯಗಳಲ್ಲಿ ನಮಗೇಕೆ ಅರ್ಥ ಕಾಣುತ್ತಿಲ್ಲ? ಅಥವಾ ಅರ್ಥ ಹುಡುಕುವ ಹಠವಾದರೂ ಏಕೆ? ಇವುಗಳಿಗೆಲ್ಲ ಅರ್ಥ ಇರಲೇಬೇಕೆಂದಿದೆಯೇ? ಸ್ವತಂತ್ರ ಭಾರತದ 60 ವರ್ಷ ಕಳೆದರೂ ಇಂಥ ಗೊಂದಲಗಳಿಂದ ಮುಕ್ತರಾಗದೇ ಇದ್ದದ್ದು ನಿಜಕ್ಕೂ ಗಂಭೀರವಾಸ್ತವ.

ಸಂಪ್ರದಾಯ ಅಂದರೆ ತಲೆತಲಾಂತರದಿಂದ ನಡೆಸಿಕೊಂಡು ಬಂದ ಆಚರಣೆಗಳು. ನಮ್ಮ ಹಿರಿಯರು ಅವರ ಹಿರಿಯರನ್ನು ಅನುಕರಿಸಿದರು. ಅವರ ಹಿರಿಯರು ಅವರ ಹಿರಿಯರನ್ನು… ಹೀಗೆ ಯಾಕೆ ಆಚರಿಸಬೇಕೆಂದು ಯಾರೂ ಯಾರನ್ನೂ ಪ್ರಸ್ನಿಸಲಿಲ್ಲ. ಪ್ರಶ್ನಿಸುವ ಜಿಜ್ಞಾಸ ಹುಟ್ಟಲೇ ಇಲ್ಲ. ಏಕೆಂದರೆ ಎಲ್ಲರೂ ಅದು ತಮ್ಮದು ಎಂದು ನಂಬಿದ್ದರು. ಪ್ರೀತಿಸುತ್ತಿದ್ದರು. ಸ್ವಾತಂತ್ರ್ಯಾನಂತರ ನಮಗೆ ಸಂಪ್ರದಾಯಗಳ ಕುರಿತು ಹೆಚ್ಚು ಪ್ರಶ್ನೆಗಳು ಏಳಲು ಶುರುವಾಗಿವೆ. ಅದಕ್ಕೆ ಕಾರಣ ನಾವು ಪ್ರಭಾವಿಸಿಕೊಂಡ ಎರವಲು ವೈಚಾರಿಕತೆ ಅಥವಾ ವಿಚಾರವಾದ. ಅದು ನಮ್ಮ ಶಿಕ್ಷಣ ಹಾಗೂ ಓದುತ್ತಿರುವ ಸಮಾಜವಿಜ್ಞಾನಗಳಿಂದ ಸೃಷ್ಟಿಯಾದದ್ದು. ಪರೋಕ್ಷವಾಗಿ ಹೇಳಬಹುದಾದರೆ ಪಾಶ್ಚಾತ್ಯರು ಹೇಳಿಕೊಟ್ಟ ಕಂಠಪಾಠ. ಅವರ ಪ್ರಕಾರ ವೈಚಾರಿಕತೆಯತ್ತ ಸಾಗುವುದೇ ಪ್ರಗತಿ ಅಥವಾ ನಾಗರಿಕತೆಯ ಲಕ್ಷಣ. ಭಾರತೀಯ ಸಂಪ್ರದಾಯಗಳು (ಹಿಂದೂ ರಿಲಿಜನ್) ಅವೈಚಾರಿಕವಾದ್ದರಿಂದ ಭಾರತ ಹಿಂದುಳಿದ ದೇಶ. ಇಲ್ಲಿಯ ಜನ ಮೂಢರು ಮತ್ತು ದಡ್ಡರು. ಅರ್ಥವಿಲ್ಲದ ಆಚರಣೆಗಳನ್ನು ಮಾಡುವವರು ಎಂಬಿತ್ಯಾದಿ. ಇದೇ ನಿಜ ಎಂದು ನಾವೆಲ್ಲ ನಂಬಿಕೊಂಡಿದ್ದರಿಂದ ನಮ್ಮ ಸಂಪ್ರದಾಯಗಳು ನಮಗೆ ಅರ್ಥಹೀನ ಅನಿಸುತ್ತದೆ.

Read more »