ವಿಷಯದ ವಿವರಗಳಿಗೆ ದಾಟಿರಿ

Archive for

13
ಜುಲೈ

ಫೀವರ್ ಗೆ ಹಿಂದಿ ಜ್ವರ – ಎಚ್ಚೆತ್ತುಕೊಳ್ಳಲು ಸಕಾಲ !

-ವಸಂತ್ ಶೆಟ್ಟಿ

ಎಂದಿನಂತೆ ಕಚೇರಿಗೆ ಹೋಗ್ತಾ ಎಫ್.ಎಮ್ ಹಾಕಿದ್ರೆ ಅವಕ್ಕಾದೆ. 104% ಬೊಂಬಾಟ್ ಕನ್ನಡ ಹಾಡುಗಳು ಅಂತೆಲ್ಲ ನಮ್ಮ ಮೆಚ್ಚುಗೆ ಗಳಿಸಿದ್ದ ಫೀವರ್ ಎಫ್.ಎಮ್ ಕನ್ನಡ ಹಾಡಿಗೆ ಸೋಡಾ ಚೀಟಿ ಕೊಟ್ಟು ಕೇವಲ ಹಿಂದಿ ಹಾಡುಗಳನ್ನು ಹಾಕೋಕೆ ಶುರು ಮಾಡಿದ್ರು. ಒಂದ್ ಸಲಿ ಹಾಕಿರೋ ಸ್ಟೇಶನ್ ಸರಿಗಿದೆಯಾ ಅಂತ ನೋಡ್ಕೊಂಡೆ. ಸರಿಯಾಗೇ ಇದೆ, ಆದರೆ ಬೊಂಬಾಟ್ ಕನ್ನಡ ವಾಹಿನಿಯಲ್ಲಿ ಹಿಂದಿ ದೇವತೆಯನ್ನು ಪ್ರತಿಷ್ಟಾಪಿಸಿಯಾಗಿತ್ತು. ಸರಿ ಯಾವುದಕ್ಕೂ ಒಂದ್ ಸಲಿ ಫೀವರ್ ಎಫ್.ಎಮ್ ಅನ್ನೇ ಸಂಪರ್ಕಿಸಿ ಯಾಕ್ರಪ್ಪ ಹೀಗೆ ಅಂತ ಕೇಳೊಣ ಅಂತ ಅವರ ಫೇಸ್ ಬುಕ್ ಪುಟದಲ್ಲಿ ಒಬ್ಬ ಕೇಳುಗನಾಗಿ ವಿಚಾರಿಸಿದ್ರೆ ಸಿಕ್ಕ ಉತ್ತರ: “We have changed the sound of the station”, “Music has no language” “Hindi is our national language” ಅನ್ನೋ ಹಸಿ ಸುಳ್ಳಿನ ಕಾಗಕ್ಕ-ಗುಬ್ಬಕ್ಕನ ಕತೆಗಳು. ಇದನ್ನು ಪ್ರತಿಭಟಿಸಿ ಗ್ರಾಹಕರಾಗಿ ನಮ್ಮ ಆಯ್ಕೆ ಕನ್ನಡ, ಅದನ್ನು ಕೊಡದ ವಾಹಿನಿಗೆ ಬೆಂಗಳೂರಿನ ಮಾರುಕಟ್ಟೆಯೇ ಬುದ್ದಿ ಕಲಿಸುತ್ತೆ ಅಂತ ಹೇಳಿದೆ. ಅದಿರಲಿ, ಫೀವರ್ ಎಫ್.ಎಮ್ ನದ್ದು ಒಂದು ಉದಾಹರಣೆಯಷ್ಟೇ. ಇವತ್ತು ನಮ್ಮ ನಾಡಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಈ ನೆಲದ ನುಡಿಯನ್ನು ಬದಿಗೊತ್ತಿ ಪ್ರತಿ ಹಂತದಲ್ಲೂ ವಲಸೆ ಬಂದ ಯಾರೋ ನಾಲ್ಕು ಜನರಿಗಾಗಿ ವ್ಯವಸ್ಥೆಯೆಲ್ಲ ಕಟ್ಟಬೇಕು, ವ್ಯವಸ್ಥಯೆಲ್ಲ ಇರಬೇಕು ಅನ್ನುವಂತೆ ವರ್ತಿಸುವ ವಲಸಿಗರಿಗೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಈ ವ್ಯವಸ್ಥೆಗೆ ಏನೆನ್ನಬೇಕು. ಯಾಕೆ ಹಾಗ್ ಹೇಳಿದೆ ಅನ್ನೋದನ್ನ ಒಂದ್ ನಾಲ್ಕು ಉದಾಹರಣೆ ಜೊತೆ ಹೇಳ್ತಿನಿ.

  • ಬೆಂಗಳೂರಿನ ಟ್ರಾಫಿಕ್ ಪೋಲಿಸರಿಗೆ (ಬಿಟಿಪಿ) ಹಿಂದಿ/ಇಂಗ್ಲಿಷ್ ಬರಲ್ಲ. ಅದರಿಂದ ಎಷ್ಟು ತೊಂದರೆಯಾಯ್ತು ಗೊತ್ತಾ ಅಂತ ಒಂದಿಷ್ಟು ಜನ ಬಿಟಿಪಿಯ ಫೇಸ್ ಬುಕ್ ತಾಣದಲ್ಲಿ ಹೋಗಿ ಗೋಳು ತೋಡಿಕೊಳ್ಳುತ್ತಾರೆ. ಯಾರಪ್ಪ ಈ ನಾಲ್ಕು ಜನರು ಅಂದ್ರೆ ಅದೇ ಅನ್ನ ಅರಸಿ ಬೆಂಗಳೂರಿಗೆ ವಲಸೆ ಬಂದ ಮಹನೀಯರು. ವಲಸೆ ಬಂದ ನಾಡಿನ ವ್ಯವಸ್ಥೆ ತನಗೆ ಅನುಕೂಲವಾಗುವಂತಿರಬೇಕು, ತನಗೆ ಚೂರೇ ಚೂರು ಕಷ್ಟವಾದರೂ ಅದನ್ನು ಸಹಿಸಲು ಆಗದು ಅನ್ನುವ ಈ ಜನರ ಮನಸ್ಥಿತಿ ಎಂತದ್ದು? ವಲಸಿಗರಿಗಾಗಿಯೇ ನಾಡಿನ ಎಲ್ಲ ವ್ಯವಸ್ಥೆಗಳನ್ನು ಜಗತ್ತಿನಲ್ಲಿ ಎಲ್ಲಿಯಾದರೂ ಕಟ್ಟಿದ್ದಾರಾ?

ಮತ್ತಷ್ಟು ಓದು »

13
ಜುಲೈ

ಕಂದಮ್ಮನಿಗೆ ಎಲ್ಲವೂ ಅರ್ಥವಾಗುತ್ತೆ!

– ವಿಷ್ಣುಪ್ರಿಯ

ಮಕ್ಕಳು ಮೂರೇ ತಿಂಗಳು ಪ್ರಾಯವಾಗಿದ್ದಾಗಲೇ ಅಮ್ಮನ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಹೊಂದಿರುತ್ತವಂತೆ. ಒಂದು ಜೀವ ತಾಯಗರ್ಭದಲ್ಲಿ ಮೊಳಕೆಯೊಡೆಯಬೇಕು ಎಂದಾದರೆ ಅಲ್ಲಿ ತಂದೆಯ ರೇತಸ್ಸು (ವೀರ್ಯ) ಮತ್ತು ತಾಯಿ ಆತ್ಮಭೂಯದ (ಅಂಡಾಣು ಎನ್ನಬಹುದು) ಮಿಲನವಾಗಬೇಕು. ಗರ್ಭದಲ್ಲಿರುವ ಮಗುವಿನ ನಾಭಿಯಿಂದ ಹೊರಟಂಥ ಕರುಳಬಳ್ಳಿ ತಾಯಿಯ ಜೊತೆಗೆ ನಂಟು ಬೆಳೆಸುತ್ತದೆ. ತಾಯಿಯ ಆತ್ಮಭೂಯ ಮತ್ತು ತಂದೆಯ ರೇತಸ್ಸಿನಲ್ಲಿ ಹಲವು ತಲೆಮಾರುಗಳ ವಂಶವಾಹಿಗಳು ಹರಿಯುವುದರಿಂದ ಸಂಬಂಧ ಬಹಳ ದೂರದವರೆಗೆ ವಿಸ್ತರಿಸುತ್ತದೆ. 

ಮಕ್ಕಳ ಗ್ರಹಣಶಕ್ತಿ ಎಷ್ಟಿರುತ್ತದೆ? ಯಾವಾಗಿನಿಂದ ಮಕ್ಕಳಿಗೆ ಈ ಶಕ್ತಿ ಲಭ್ಯವಾಗುತ್ತದೆ? ಎಂಬೆಲ್ಲ ವಿಚಾರಗಳ ಬಗ್ಗೆ ಹಲವು ವರ್ಷಗಳಿಂದ ಜಿಜ್ಞಾಸೆ ಇದೆ. ಮಕ್ಕಳಿಗೆ ಬುದ್ಧಿ ಬರುವಾಗ ಮೂರ್ನಾಲ್ಕು ವರ್ಷ ಆಗುತ್ತೆ. ಅಲ್ಲಿಯವರೆಗೆ ಆವರಿಗೆ ಏನೂ ಅರ್ಥ ಆಗಲ್ಲ ಅಂತ ಒಂದು ವಾದ ಹೇಳಿದರೆ, ನಮ್ಮ ಪುರಾಣಗಳು ಮಗು ಅಮ್ಮನ ಗರ್ಭದಲ್ಲಿರುವಾಗಲೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತದೆ ಎಂದು ಹೇಳುತ್ತವೆ. ಹೀಗಿರುವಾಗ ಯಾವುದು ಸರಿ ಎಂಬ ಗೊಂದಲವೂ ಕಾಡುವುದು ಸಹಜ. ಪುರಾಣಗಳನ್ನು, ವೇದ, ಉಪನಿಷತ್ತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದವರು, ಸಾಧ್ಯವಿದ್ದರೂ ಅವುಗಳತ್ತ ಕಣ್ಣೆತ್ತಿಯೂ ನೋಡದವರು, ವೇದ, ಉಪನಿಷತ್ತುಗಳು, ಪುರಾಣಗಳೆಂದರೆ ಕಟ್ಟುಕಥೆಗಳೆಂದು ಭಾವಿಸುವವರು ಮೊದಲಿನ ವಾದವನ್ನೇ ಒಪ್ಪಬಹುದು. ವೇದ, ಉಪನಿಷತ್ತುಗಳು ಮತ್ತು ಪುರಾಣಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವವರು ಖಂಡಿತಕ್ಕೂ ಮೊದಲ ವಾದನನ್ನು ಸಾರಾಸಗಟು ತಳ್ಳಿಹಾಕುತ್ತಾರೆ.