ವಿಷಯದ ವಿವರಗಳಿಗೆ ದಾಟಿರಿ

ಜುಲೈ 30, 2011

1

ಮದಿರೆ ಬಿಟ್ಟು ಬದುಕ ಕಟ್ಟಿಕೊಂಡವರ ಕಥೆ

‍Jagannath Shirlal ಮೂಲಕ

– ಪವನ್ ಯಂ.ಟಿ

ಕೊಟ್ಟಾರೆ ಕೊಡು ಶಿವನೆ ಕುಡುಕನಲ್ಲದ ಗಂಡನ …!

ಎಂದು ಎಷ್ಟೋ ಹೆಣ್ಣು ಮಕ್ಕಳು ದೇವರಲ್ಲಿ ಮೊರೆಯಿಡುತ್ತಿದ್ದ ಬಗ್ಗೆ  ಜನಪದ ಹಾಡನ್ನು ಕೇಳಿದ ನೆನಪಾಗುತ್ತಿದೆ. ಒಂದು ಹೆಣ್ನು ಮಗಳು ತನ್ನ ಗಂಡ ಕುಡುಕನಾಗುವುದನ್ನು ಕನಸಲ್ಲಿಯೂ ನೆನೆಯುದಿಲ್ಲ. ಅದೇ ರೀತಿ ತಮ್ಮ ಮಗ ಮಕ್ಕಳು ಕುಡುಕರಾಗಬೇಕೆಂದು ಯಾವ ತಂದೆ ತಾಯಿಯು ಇಷ್ಟ ಪಡುವುದಿಲ್ಲ. ಆದರೆ ಏನು ಮಾಡುವುದು ಕೆಲವು ಹೆಣ್ಣು ಮಕ್ಕಳ ಮತ್ತು ತಂದೆ ತಾಯಿಯಂದಿಯರ ಆಸೆ ಕೈಗೂಡಬೇಕಲ್ಲ. ನಮ್ಮಲ್ಲಿ ಹೆಚ್ಚು ಜನರು ಕುಡಿತದ ಬಲೆಗೆ ಬಿದ್ದಾಗಿದೆ. ನಮ್ಮ ದೇಶದಲ್ಲಿ ಶೇಕಡ ೭೦ ರಷ್ಟು ಜನರು ಈಗಾಗಲೇ ಕುಡಿತಕ್ಕೆ ಬಲಿ ಬಿದ್ದಿರ ಬಹುದು.

ಯಾವತ್ತೋ ಒಂದು ದಿನ ಜಾಲಿಗೆಂದು ಬಿಯರ್ ಕುಡಿದ ಒಬ್ಬ ವ್ಯಕ್ತಿ ನಂತರ ಕ್ವಾಟರ್, ಆಫ್, ಪುಲ್, ಬಾಟಲ್ ಕುಡಿಯುವವನಾಗಿ ಪರಿವರ್ತನೆಯಾಗುತ್ತಾನೆ, ನಂತರ ಅವನು ಸಂಪ್ರಾಯಿಕ ಕುಡುಕ. ನಮ್ಮಲ್ಲಿ ೫೦ ವರ್ಷಕ್ಕೆ ಮೇಲ್ ಪಟ್ಟ ಮಧ್ಯ ವಯಸ್ಕರು ಹೆಚ್ಚಾಗಿ ಕುಡಿತಕ್ಕೆ ಒಳಗಾಗಿರುವುದನ್ನು ಗಮನಿಸ ಬಹುದು. ಆದರೆ ಈಗಿನ ಸ್ಥಿತಿ ಯಾವ ರೀತಿಯಾಗಿದೆ ಯೆಂದರೆ ಹೆಚ್ಚಾಗಿ ಯುವಕರೇ ಜಾಲಿ, ಗಮ್ಮತಿನ ಹೆಸರಿನಲ್ಲಿ ಕುಡಿತಕ್ಕೆ ಬಲಿ ಬೀಳುತ್ತಿದ್ದಾರೆ.

ನಮ್ಮಲ್ಲಿ ಜಾಗತೀಕರಣದ ಪ್ರಭಾವದಿಂದ ಎಲ್ಲರಿಗೂ ಕೆಲಸಮಾಡಿದರೆ ಉತ್ತಮ ಸಂಭಳ ಸಿಗುತ್ತಿದೆ. ಅದರೊಂದಿಗೆ ಬಿಡುವಿಲ್ಲದ ಕೆಲಸವು ಸಹ ಇಂದಿನ ಯುವಜನತೆಗಿದೆ. ಇಂತಹ ಸಮಯದಲ್ಲಿ ಯುವಜನತೆ ರಿಲಾಕ್ಸಗೆಂದು, ಪಿಕ್‌ನಿಕ್,ಟೂರ್ ಮೊದಲಾದವುಗಳಿಗೆ ಹೋಗುವುದು ರೂಡಿ. ಆದರೆ ಇಲ್ಲಿ ಮದ್ಯದ ಬಾಟಲಿಯನ್ನು ಜೊತೆಯಲ್ಲಿ ಸಂಗಾತಿಯನ್ನಾಗಿ ತೆಗೆದುಕೊಂಡು ಹೋಗುವ ಪದ್ಧತಿ ಇತ್ತಿಚೆಗೆ ನಮ್ಮಲ್ಲಿ ಬಂದು ಬಿಟ್ಟಿದೆ. ಇಂದು ಯಾವುದೇ ಪಾರ್ಟಿ ಅಥವ ಇತರೆ ಯಾವುದೇ ಕಾರ್ಯಕ್ರಮ ಇದ್ದರೆ ಅಲ್ಲಿ ಮದ್ಯವಿದ್ದರೆ ಮಾತ್ರ ಗೌರವ. ಇಂದು ದೊಡ್ಡ ದೊಡ್ಡ ಕಂಪೆನಿಗಳು ನಡೆಸುವ ಕಾನ್ಪರೆನ್ಸ್‌ನಲ್ಲಿಯೂ ಶಾರಾಯಿ ವಿತರಣೆ ಸುಗಮವಾಗಿ ನಡೆಯುತ್ತದೆ. ಚುನಾವಣೆಯ ಸಂದರ್ಭವನ್ನು ಹೇಳುವುದೇ ಬೇಡಬಿಡಿ.

ನಮ್ಮ ಇಂದಿನ ಯುವಕರ ಕುಡಿತದ ಚಾಳಿ ಹೇಗಿದೆ ಎಂದರೆ ಸಂಡೇ ಬೆಳಿಗ್ಗೆ ಎದ್ದುಬಾರ್‌ಗೆ ತೆರಳಿದರೆ ರಾತ್ರಿಯವರೆಗೂ ಅಲ್ಲಿಯೇ. ತಮ್ಮ ಗೆಳೆಯರೊಂದಿಗೆ ಸೇರಿಕೊಂಡು ಕುಡಿದು ಹಣಖಾಲಿ ಮಾಡಿ ಮಜಾಮಾಡಿ ಮನೆಗೆ ಬರುವ ಆತ ತನಗೆ ಗೊತ್ತಿಲ್ಲದೆಯೇ ದೊಡ್ಡ ಕುಡುಕನಾಗಿರುತ್ತಾನೆ. ಇನ್ನು ಬಡ ವರ್ಗದ ಮತ್ತು ಮಧ್ಯಮ ವರ್ಗದವರ ಕಥೆ ಬೇರೆಯೇ ದಿವವಿಡಿ ಕೆಲಸಮಾಡುವ ಅವರು ಸಂಜೆ ವೇಳೆಗೆ ೨ ಕ್ವಾಟರ್ ಮೈಗಿಳಿಸಿ ಮನೆಗೆ ತೆರಳಿ ಹೆಂಡತಿ ಮಕ್ಕಳಿಗೆ ಹಿಂಸೆ ನೀಡಿ ನೆಮ್ಮದಿ ಕಳೆದುಕೊಂಡು ಬಿಡುತ್ತಾರೆ. ಅಲ್ಲದೆ ಕೆಲವು ಹೆಂಗಸರು ಸಹ ಕುಡಿತದಿಂದ  ಹೊರತಾಗಿಲ್ಲ ಎನ್ನುವುದು ಸತ್ಯ.  ಕುಡುಕರ ಕಥೆ ಬಿಡಿ ಅದುನಡೆದು ಹೋದ ಘಟನೆ ಆದರೆ ಈ ಕುಡಿತಕೊಂದು ಪರಿಹಾರ ಕಂಡು ಹಿಡಿಯ ಬೇಕಲ್ಲ ಅದಕ್ಕಾಗಿ ಧರ್ಮಸ್ಥಳದ ಜನಜಾಗೃತಿ ವೇದಿಕೆಯು ಅವಿರತವಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಶ್ರಮಿಸುತ್ತಿದೆ.

ಕುಡಿತದ ಸಹವಾಸದಿಂದ ಬೇಸೆತ್ತ ಎಷ್ಟೋ ಮಂದಿ ನೊಂದ ಮಹಿಳೆಯರು, ಮನೆಯವರು ತಮ್ಮ ಗಂಡನ, ಅಣ್ಣನ, ತಮ್ಮನ, ಮಗನ, (ಮಹಿಳೆಯರ) ಕುಡಿತವನ್ನು ಬಿಡಿಸ ಬೇಕೆಂದಿದ್ದರೆ ಮತ್ತು ಕುಡುಕರಿಗೆ ಕುಡಿತ ಬಿಡಬೇಕೆನ್ನುವ ಬಯಕೆಯಿದ್ದರೆ ಅವರು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿರುವ ಜನಜಗೃತಿ ವೇದಿಕೇಗೆ ಒಮ್ಮೆ ಭೇಟಿನೀಡಿ. ಕುಡಿತ ಬಿಡಲೇ ಬೇಕೆಂದು ಇಲ್ಲಿಗೆ ಬಂದವರು ಇಲ್ಲಿಗೆ ಬಂದ ನಂತರ ಕಂಡಿತವಾಗಿಯೂ ಕುಡಿತ ಬಿಟ್ಟೇ ಬಿಡುತ್ತಾರೆ. ಆದರೆ ಕಾಟಾಚಾರಕ್ಕೆ ಬರುವವ  ಇಲ್ಲಿಗೆ ಬರುವುದಕ್ಕೆ ಅನರ್ಹ.

ಮಾನ್ಯರೇ ಸುಮಾರು ೧೮ ವರ್ಷದಿಂದ ಈಚೆಗೆ ನಮ್ಮಲ್ಲಿ ಮದ್ಯಪಾನದ ವಿರುದ್ದ ಹೋರಾಟ ಮಾಡುತ್ತಿರುವ ಏಕೈಕ ಸಂಸ್ಥೆ ಜನಜಾಗೃತಿ ವೇದಿಕೆ. ಈ ಸಂಸ್ಥೆಯು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಆರ್ಶಿವಾದದೊಂದಿಗೆ ಬಿಡುವಿಲ್ಲದ ಕಾರ್ಯಕ್ರಮಗಳನ್ನು ರಾಜ್ಯದ ಮತ್ತು ಜಿಲ್ಲೆಯ ಅನೇಕ ಕಡೆಗಳಲ್ಲಿ ಹಾಕಿಕೊಂಡು ಮದ್ಯಪಾನದಿಂದ ಆಗುತಿರುವ ತೊದರೆಯ ಬಗ್ಗೆ ತಿಳುವಳಿಕೆಯನ್ನು ನೀಡಿ ಜನರ ಮನಪರಿವರ್ತನೆಯನ್ನು ಮಾಡುವ ಕೆಲಸವನ್ನು ಮಾಡುತ್ತಿದೆ. ಮತ್ತು ಅದಕ್ಕೆ ತಕ್ಕಂತೆ ಶೃದ್ಧೆಯಿಂದ ದುಡಿಯುವ ಕಾರ್ಯಕಾರಿ ಮಂಡಳಿಯವರೂ ಇಲ್ಲಿದ್ದಾರೆ.

ಕೆಲವು ವರ್ಷಗಳ ಹಿಂದೆ ಬೆಳ್ತಂಗಡಿ ತಾಲ್ಲೂಕಿನಲ್ಲಿ ಮದ್ಯ ನಿಷೇದ ಎನ್ನುವ  ಕಾಯಿದೆ ಜಾರಿಗೆ ಬಂದಿತ್ತು. ಮದ್ಯ ನಿಷೇದ ಮಾಡಿದ ಏಕೈಕ ತಾಲ್ಲೂಕು ಅದಾಗಿತ್ತು. ಆದರೆ ಆ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ದುಷ್ಟ ಶಕ್ತಿಗಳು ಬಿಡಲಿಲ್ಲ.

ನಂತರ ಮದ್ಯ ನಿಷೇದ ಪದ್ದತಿಯನ್ನು ಅಲ್ಲಿಯೇ ಕೈ ಬಿಟ್ಟ ಜನಜಾಗೃತಿಯು ನಂತರ ತನ್ನ ಹೋರಾಟವನ್ನು ಬೇರೆಯದೇ ಆದ ರೀತಿಯಲ್ಲಿ ಮುಂದುವರೆಸಿತು. ತಮ್ಮಲ್ಲಿ ಸಮಿತಿಯನ್ನು ಮಾಡಿಕೊಂಡು ತಲ್ಲೂಕಿನ ಪ್ರತಿಮನೆ ಮನೆಗಳಿಗೂ ತೆರಳಿ ಕುಡಿಯುವವರ ಸಮೀಕ್ಷೆ ನಡೆಸಿತು. ನಂತರ ಅನೇಕ ಜಗೃತಿ ಕಾರ್ಯಕ್ರಮವನ್ನು ನಡೆಸಿದ ಜನಜಾಗೃತಿಯೂ ಮದ್ಯವರ್ಜನ ಶಿಬಿರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಮೂಲಕ ಅನೇಕ ಮದ್ಯವರ್ಜನ ಶಿಬಿರವನ್ನು ನಡೆಸುತ್ತಿದೆ. ಶಿಬಿರವನ್ನು ಸ್ಥಳೀಯ ಜನರ ಸಹಕಾರದಿಂದಲೇ ನಡೆಸುತಿದ್ದಾರೆ ಈ ಕಾರ್ಯಕ್ರಮಕ್ಕೆ ಎಲ್ಲರ ಬೆಂಬಲ ಸಿಗುತಿದ್ದು ಜಾತಿ ಭೇದವಿಲ್ಲದೆ ಎಲ್ಲರೂ ಸೇರುತ್ತಾರೆ.ಈಗ ಜನಜಾಗೃತಿ ವೇದಿಕೆಯ ೪೪೪ ನೇ ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಮುಂದಾಗಿದೆ.

ಈ ಶಿಬಿರ ಸುಮಾರು ೮ ದಿನಗಳ ಕಾಲ ನಡೆಯುತ್ತದೆ. ಈ ಶಿಬಿರದಲ್ಲಿ ಒಂದು ಸಲಕ್ಕೆ ೫೦ಕ್ಕಿಂತ ಹೆಚ್ಚು ಜನರು ಭಾಗವಹಿಸುತ್ತಾರೆ ಅವರಿಗೆ ಇಲ್ಲಿ ವಿವಿಧ ರೀತಿಯ ತರಭೇತಿ, ವೈಧ್ಯಕೀಯ ಪರೀಕ್ಷೆ, ಉಪನ್ಯಾಸ, ಪೌಷ್ಟಿಕ ಆಹಾರ, ತಿಳುವಳಿಕೆ ಮೊದಲದವನ್ನು ನೀಡುತ್ತಾರೆ. ಒಟ್ಟಾಗಿ ಇಲ್ಲಿ ಮದ್ಯವ್ಯಸನಿಯು ಮದ್ಯಪಾನವನ್ನು ಬಿಡಲು ಬೇಕಾದ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಾರೆ. ಅದಲ್ಲದೆ ಈ ಮೊದಲು ಶಿಬಿರಕ್ಕೆ ಬಂದು ಮದ್ಯಬಿಟ್ಟವರನ್ನು ನಂತರ ನಡೆಯುವ ಶಿಬಿರಕ್ಕೆ ಕರೆದು ಹೊಸದಾಗಿ ಶಿಬಿರಕ್ಕೆ ಬಂದ ಶಿಬಿರಾರ್ಥಿಗಳ ಮುಂದೆ ಅಭಿಪ್ರಾಯ ಹೇಳಲು ಬಿಡುತ್ತಾರೆ.  ಈ ಶಿಬಿರಕ್ಕೆ ಒಂದುಸಲಕ್ಕೆ ೫೦ ಜನ ಬಂದರೆ ಎಲ್ಲರೂ ಶಾರಾಯಿ ಬಿಡಿತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಇಲ್ಲಿಗೆ ಬಂದವರಲ್ಲಿ ಒಬ್ಬರು ಕುಡಿಯುದನ್ನು ಬಿಟ್ಟರೂ ನಮ್ಮ ಪ್ರಯತ್ನಕ್ಕೆ ಫಲಸಿಗುತ್ತದೆ ಎಂದು ಇಲ್ಲಿಯ ಯೋಜನಾಧಿಕಾರಿ ವಿವೇಕ್ ರವರು ಹೇಳುತ್ತಾರೆ. ಅದಲ್ಲದೆ ಇಲ್ಲಿ ಅಧಿಕಾರಿಗಳಿಗೆ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರಿಗೆ ಪ್ರತ್ಯೆಕವಾದ ಶಿಬಿರವನ್ನು ನಡೆಸಲಾಗುತ್ತದೆ. ಈ ಶಿಬಿರಕ್ಕೆ ಬಂದು ಪಾನಮುಕ್ತರಾದವರ ಮನೆಗಳಿಗೆ ನವು ತೆರಳಿದಾಗ ನಮ್ಮ ಕಣ್ಣುಗಳನ್ನು ನಾವೇ ನಂಬದಂತೆ ಅವರು ಎಲ್ಲಾರೀತಿಯಿಂದಲೂ ಉತ್ತಮವಾಗಿ ಬದುಕುತಿದ್ದಾರೆ. ಮತ್ತು ಪಾನಮುಕ್ತರಾದವರು ಅವರವರ ಊರಿನಲ್ಲಿ ತಮ್ಮದೇ ಆದ ಸಂಘವನ್ನು ಕಟ್ಟಿಕೊಂಡು ಸಮಾಜಸೇವೆಯನ್ನು ಮಾಡಿಕೊಂಡು ಎಲ್ಲರಿಗೂ ಬೇಕಾದವರಾಗಿ ಬದುಕುತಿದ್ದಾರೆ. ಇಂತಹ ಉತ್ತಮವಾದ ಕೆಲಸವನ್ನು ಮಾಡುತ್ತಿರುವ ಜನಜಾಗೃತಿ ವೇದಿಕೆಯ ಕೆಲಸವನ್ನು ನಾವೆಲ್ಲ ಬೆಂಬಲಿಸುತ್ತ ಕುಡಿತಕ್ಕೆ ಒಳಗಾಗಿ ಬದುಕು ಕತ್ತಲೆ ಮಾಡಿಕೊಂಡವರ ಬಾಳಿಗೆ ಬೆಳಕಾಗೋಣ.

 *******************

hallosushant.blogspot.com

1 ಟಿಪ್ಪಣಿ Post a comment
  1. krishnaveni g.s's avatar
    krishnaveni g.s
    ಆಗಸ್ಟ್ 2 2011

    ಕುಡುಕ ಗಂಡನ ಪಡೆದ ಅದೆಷ್ಟೋ ಹೆಣ್ಣು ಮಕ್ಕಳ ಪಾಲಿಗೆ ವರವಾಗಿ ಬಂದಂತಿದೆ ಈ ಸಂಸ್ಥೆ.ಇಂಥ ಸಂಸ್ಟೆಯ ಬಗೆಗೆ ಜನರಿಗೆ ತಿಳಿಯುವಂತಾಗಬೇಕು.ಕುಡುಕುತನಕ್ಕೆ ಪರಿಹಾರವಿಲ್ಲ ಎಂದು ಪೇಚಾಡುವ ಹೆಣ್ಮಕ್ಕಳಿಗೆ ಇದು ನಿಜವಾಗಲು ಖುಷಿಯ ವಿಷಯವಾಗಿರುತ್ತದೆ.ತಂದೆ ತಾಯಿಯ ಕುಡುಕುತನದಿಂದ ಮಕ್ಕಳು ಸಮಾಜದ ಮೇಲಿನ ಸ್ತರಕ್ಕೆ ಬರಲು ಕಷ್ಟ ಪಡುತ್ತಿದ್ದಾರೆ. ಈ ರೀತಿಯ ಲೇಖನಗಳು ನಿಮ್ಮಿಂದ ಇನ್ನಷ್ಟು ಬರಲಿ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments