ವಿಷಯದ ವಿವರಗಳಿಗೆ ದಾಟಿರಿ

Archive for

12
ಜುಲೈ

ಅವರ ಹಿಂಸೆಗೆ ನನ್ನಲ್ಲಿ ಉತ್ತರವಿರಲಿಲ್ಲ

– ಚಿತ್ರಾ ಸಂತೋಷ್

ನ್ನ ಕಳೆದೆರಡು ಅಂಕಣದಲ್ಲಿ  ಅನ್ಯಾಯದ ಕುಲುಮೆಯಲ್ಲಿ ಬೆಂದ ಹೆಣ್ಣು ಮಕ್ಕಳಿಬ್ಬರ ಕಥೆ ಹೇಳಿದ್ದೆ. ಈಗ  ಮತ್ತೊಂದು ಕಥೆ ಹೇಳುತ್ತಿದ್ದೇನೆ. ಹೆಣ್ಣು ಮುಂದುವರಿದರೂ ಆಕೆಯ ಮೇಲಿನ ಅನ್ಯಾಯಗಳಿನ್ನೂ ಕೊನೆಯಾಗಲಿಲ್ಲ. ಈಕೆಯ ಹೆಸರು ಸುಲೇಖಾ ಮಹಿಪಾಲ್ . ಊರು ಡೆಹ್ರಾಡೂನ್. ಹುಟ್ಟಿದ್ದು ಜಾಡಮಾಲಿ ಕುಟುಂಬದಲ್ಲಿ. ಅಪ್ಪ ಅಮ್ಮನನ್ನು ವಿಷ ನೀಡಿ ಕೊಂದಾಗ ಸುಲೇಖಾಳಿಗೆ ಇನ್ನೂ ೧೩ ವರ್ಷ. ಅಪ್ಪನಿಂದ ದೂರಾದ ಸುಲೇಖಾಳ ಬದುಕು ಪ್ರತಿಕ್ಷಣವೂ ಶೋಷಣೆಗೊಳಗಾಯಿತು. ಭರವಸೆ ಕಳೆದುಕೊಂಡ ಅವಳ ಬದುಕಿನಲ್ಲಿ ಮತ್ತೆ ಭರವಸೆ ತುಂಬಿದ್ದು  ಸಮಾಧಾನ್ ಎಂಬ ಸರ್ಕಾರೇತರ ಸಂಸ್ಥೆ ಮತ್ತು ತನ್ನ  ಭಾ ಪತಿ. ಈಗ ಅನ್ಯಾಯದ ವಿರುದ್ಧ ಸುಲೇಖಾ ಹೋರಾಟಕ್ಕೆ ಭಾ ಪತಿಯೂ ಕೈ ಜೋಡಿಸಿದ್ದಾರೆ.

ಅಮ್ಮನನ್ನು ಉಳಿಸಿಕೊಳ್ಳಲು ಆಕೆಯಿಂದ ಸಾಧ್ಯವಾಗಲಿಲ್ಲ. ಅಪ್ಪನ ರೌದ್ರವತಾರೆದುರು ಮಗಳು ಅಸಹಾಯಕಳಾಗಿ ಮೌನವಾಗಿದ್ದಳು. ಆಕೆಗಿನ್ನೂ ೧೩ ವರ್ಷ. ಆ ಪುಟ್ಟ ಹೆಣ್ಣು ಮಗಳ ಎದುರು ಅಮ್ಮ ಹತಳಾದಳು.

 
ಮತ್ತಷ್ಟು ಓದು »

11
ಜುಲೈ

ಕಲಾವಿದರೊಳಗಿನ ವಿವಾದಗಳ ಬ್ರಾಂಡ್ ಅಂಬಾಸಿಡರ್

ಮಂಸೋರೆ ಬೆಂಗಳೂರು

ಈ ಲೇಖನವನ್ನು ನಾನೊಬ್ಬ ಕಲಾವಿದ ಎಂಬ ದೃಷ್ಟಿಕೋನದಿಂದಲೇ ಓದುತ್ತಾರೆ ಎಂಬ ಅರಿವಿನೊಂದಿಗೆ ಬರೆಯುತ್ತಿದ್ದೇನೆ.

ನಾನೀಗ ಬರೆಯುತ್ತಿರುವ ವಿಷಯದ  ವ್ಯಕ್ತಿಯ ಕುರಿತಂತೆ ಸಾಕಷ್ಟು ಚರ್ಚೆಗಳಾಗಿವೆ. ಈ ಲೇಖನ ಆ ಚರ್ಚೆ, ಲೇಖನಗಳನ್ನು ವಿರೋದಿಸುವುದೂ ಅಲ್ಲ, ಸಮರ್ಥಿಸಿಕೊಳ್ಳುವುದು ಅಲ್ಲ. ಇದು ನನ್ನ ಸ್ವವಿಚಾರವಷ್ಟೇ.
ಹುಸೇನ್ ನನಗೆ ಈ ಕಲಾವ್ಯಾಸಂಗಕ್ಕೆ ಬರುವ ಮೊದಲಿಂದಲೂ ಗೊತ್ತು. ಈ ವ್ಯಕ್ತಿಯ ಜೊತೆ ಜೊತೆಗೆ ನನಗೆ ಗೊತ್ತಿದ್ದ ಇನ್ನಿತರ ಕಲಾವಿದರೆಂದರೆ ಕೆ.ಕೆ.ಹೆಬ್ಬಾರ್ ಮತ್ತು ರವಿವರ್ಮ ಬಿ.ಕೆ.ಎಸ್.ವರ್ಮ. ಈ ನಾಲ್ವರ ಪರಿಚಯ ನನಗೆ ನಾಲ್ಕು ವಿಭಿನ್ನ ಕಾರಣಗಳಿಂದಾಗಿ ಪರಿಚಿತರಾಗಿದ್ದರು, ಹುಸೇನ್ ಪತ್ರಿಕೆಗಳಲ್ಲಿ ಆಗಾಗ ಬರುತ್ತಿದ್ದ ಸುದ್ದಿಗಳಿಂದಾಗಿ, ಬಿ.ಕೆ.ಎಸ್ ವರ್ಮ ದೂರದರ್ಶನದಲ್ಲಿ ಚಿತ್ರ ಗೀತೆ(ಹಿನ್ನಲೆಯಲ್ಲಿ ಪರಿಸರ ಕುರಿತಾದ ಹಾಡು ಬರುತ್ತಿದ್ದರೆ ಅದಕ್ಕೆ ತಕ್ಕಂತೆ ಪ್ರಾತ್ಯಕ್ಷಿಕೆ ನೀಡುವಂತೆ ಚಿತ್ರ ರಚಿಸುತ್ತಿದ್ದರು), ಕೆ.ಕೆ ಹೆಬ್ಬಾರ್ ಕುರಿತಂತೆ ಪಠ್ಯವೊಂದಿದ್ದ ಕಾರಣದಿಂದಾಗಿ, ರವಿವರ್ಮ ಹಾಡಿನ ಮೂಲಕ(ರವಿವರ್ಮನ ಕುಂಚದ ಕಲೆ). ಇವಿಷ್ಟೇ , ಇವರಿಷ್ಟೇ ನನಗೆ ಗೊತ್ತಿದ್ದ ಕಲಾವಿದರು ಕಲಾಕೃತಿಗಳು.  ಮತ್ತಷ್ಟು ಓದು »

11
ಜುಲೈ

ದಕ್ಷಿಣ ಸುಡಾನ್ ಈಗ ಸ್ವತಂತ್ರ

ಗೋವಿಂದ ಭಟ್

ಸೈಕಲು ಪ್ರವಾಸದಲ್ಲಿ ನಾನು ಕೆನ್ಯಾ ರಾಜದಾನಿ ನೈರೋಬಿಗೆ ಹಾರುವುದು. ಅನಂತರ ಉಗಂಡಾ, ಸುಡಾನ್ ದಾರಿಯಾಗಿ ಈಜಿಪ್ಟ್ ತಲಪುವುದು ನನ್ನ ಗುರಿಯಾಗಿತ್ತು. ಬಹು ಪಾಲು ರಸ್ತೆ ಇಲ್ಲದ ಕಾರಣ ಜುಬಾ ಪಟ್ಟಣದಿಂದ ನೈಲ್ ನದಿಯ ದೋಣಿಯಲ್ಲಿ ಉತ್ತರಕ್ಕೆ ಸಾಗುವುದು ನನ್ನ ಆಲೋಚನೆಯಾಗಿತ್ತು. ನನ್ನ ಉದ್ದೇಶಿತ ಹಾದಿಯಲ್ಲಿ ಬಹು ಕಾಲದಿಂದ ಅಂದರೆ ಅಂದಿಗೆ ಮೂವತ್ತು ವರ್ಷದಿಂದ ಜನಾಂಗಿಯ ಕಲಹ ನಡೆಯುತ್ತಿದ್ದರೂ ಹಲವು ಪ್ರವಾಸಿಗರು ದೋಣಿಯಲ್ಲಿ ದಾಟುವುದರಲ್ಲಿ ಸಫಲರಾಗಿದ್ದರು. ಅಲ್ಲಿನ ಒಂದು ದೋಣಿಯ ಚಿತ್ರ ಇಲ್ಲಿದೆ. ನನ್ನ ಜರ್ಮನಿಯ ಸೈಕಲು ಗೆಳೆಯ ಫ್ರೆಡ್ ಪೋಲ್ ೧೯೬೪ ರಲ್ಲಿ ಇಲ್ಲೆ ದಾಟಿದ್ದರು. ಅದಕ್ಕೆ ನಾನು ಸಾಕಷ್ಟು ತಯಾರಿ ನಡೆಸಿದ್ದೆ.

ಆದರೆ ಕೆನ್ಯಾ ತಲಪುವಾಗ ಪರೀಸ್ಥಿತಿ ಕಠೀಣವಾಗಿರುವುದು ಅರಿವಾಯಿತು. ನನ್ನ ದಾರಿಯಲ್ಲಿದ್ದ ಉಗಂಡಾ ಹಾಗೂ ಸುಡಾನ್ ಅಂತರ್ಯುದ್ದ ಬರ್ಜರಿಯಾಗಿ ನಡೆಯುತ್ತಿದ್ದರೆ ಉತ್ತರದ ಇತಿಯೋಪಿಯ ಸಹಾ ದಾರಿ ಬಿಡುತ್ತಿರಲಿಲ್ಲ. ಹಾಗಾಗಿ ನನ್ನ ಯೋಜನೆಗಳೆಲ್ಲ ತಲೆಕೆಳಗಾಗಿ ಯುರೋಪಿನಿಂದ ಹಿಂತಿರುಗುವ ಬದಲು ಅಮೇರಿಕವನ್ನು ಹಾದು ಜಗತ್ತು ಪೂರ್ತಿ ಸುತ್ತು ಬರಲು ತೀರ್ಮಾನಿಸಿದೆ.

ಸುಡಾನ್ ದೇಶದಲ್ಲಿ ಉತ್ತರದಲ್ಲಿ ಅರಬ್ ಮುಸ್ಲಿಮರ ಪ್ರಾಬಲ್ಯ. ಅದಿಕಾರವೆಲ್ಲ ಅವರ ಕೈಯಲ್ಲಿ ಕೇಂದ್ರಿತ. ದಕ್ಷಿಣದಲ್ಲಿ ವಾಸ್ತವ್ಯ ಇರುವುದು ಕರಿಯ ಕ್ರೈಸ್ತ ಅನುಯಾಯಿಗಳು. ಬ್ರೀಟಿಶರು ಸ್ವಾತಂತ್ರ ಕೊಡುವಾಗ ಈಜಿಪ್ಟ್ ಜತೆ ಒಪ್ಪಂದ ಮಾಡಿ ಒಂದು ಕಿತಾಪತಿ ಮಾಡಿದ್ದರು. ಈ ಕರಿ ಜನರೇ ಜೀವಿಸುವ ದಕ್ಷಿಣ ಸುಡಾನ್ ಪ್ರಾಂತ್ಯವನ್ನು ಪಕ್ಕದ ಕರಿಯ ಜನರಿರುವ ಕೆನ್ಯಾ ಉಗಂಡಾದಿಂದ ಬೇರ್ಪಡಿಸಿ ಬಹುಕಾಲ ಈಜಿಪ್ಟ್ ವಶವಾಗಿದ್ದ ಉತ್ತರ ಸುಡಾನ್ ಜತೆ ಸೇರಿಸಿಬಿಟ್ಟರು. ಚಿತ್ರದಲ್ಲಿ ಕಾಣುವಂತೆ ಉತ್ತರಬಾಗ ಮರುಭೂಮಿಯಾದರೆ ದಕ್ಷಿಣಬಾಗದಲ್ಲಿ ಹುಲ್ಲುಗಾವಲು ಹಾಗೂ ಕುರುಚಲು ಕಾಡು. ಉತ್ತರದವರಿಂದ ಸತತವಾಗಿ ದಬ್ಬಾಳಿಕೆ, ಅನ್ಯಾಯ. ಶ್ರೀಲಂಕದಲ್ಲಿ ಇದ್ದಂತಹ ಪರಿಸ್ಥಿತಿ.

ಮತ್ತಷ್ಟು ಓದು »

10
ಜುಲೈ

ನಿರೀಕ್ಷೆ

– ರಂಜಿತ್ ಅಡಿಗ

ಅವಳನ್ನು ನೋಡಲು ತುಂಬಾ ಹುಡುಗರು ಬರುತ್ತಿರುತ್ತಾರೆ.ಆದರೆ ಯಾರೂ ಅವಳನ್ನು ಒಪ್ಪುತ್ತಿರಲಿಲ್ಲ.
ಅವಳಲ್ಲಿ ಹಣವಿಲ್ಲವೆಂದಲ್ಲ. ಅವಳ ಮೊಮ್ಮಗನೂ ತಿಂದು ತೇಗುವಷ್ಟು ಆಸ್ತಿಯಿದೆ. ಹಾಗಾದರೆ ಅವಳು ಸೌಂದರ್ಯವತಿಯಲ್ಲವೇ? ಕುರೂಪಿಯೇ?
ಉಹೂಂ.. ಪದ್ಮಿನಿ ಜಾತಿಯ ಹುಡುಗಿ; ಸ್ವಂತ ಕಣ್ಣು ಬೀಳಬೇಕು ಅಂಥ ಸ್ಪುರದ್ರೂಪಿ ಹೆಣ್ಣವಳು.
ಅದೂ ಅಲ್ಲವಾದರೆ, ಸಿನೆಮಾದಲ್ಲಿ ತೋರಿಸುವಂತೆ ” ಹಣವಂತರೆಲ್ಲಾ ಗುಣವಿರುವವರಲ್ಲ” ಎಂದುಕೊಂಡು ಕೆಟ್ಟವಳಿರಬೇಕು ಅಂತ ಊಹಿಸುವುದಾದರೆ ಅದೂ ನಿಜವಲ್ಲ. ಅವಳು ಒಳ್ಳೆಯವಳೇ.
ಅವಳಿಗಿರುವ ಒಂದೇ ಕೆಟ್ಟ(?) ಗುಣವೆಂದರೆ ನಿರೀಕ್ಷೆ! ಅದೇ ಅವಳನ್ನು ಎಲ್ಲರಿಂದ ದೂರ ಮಾಡುತ್ತಿರುವುದು!!

**********
ಅವತ್ತು ಮನೆಯಲ್ಲಿ ಸಡಗರ, ಸಂಭ್ರಮ. ಯಾಕೆಂದರೆ ಆ ದಿನ ಶ್ಯಾಮಲಾಳನ್ನು ನೋಡಲು ಹುಡುಗನೊಬ್ಬ ಬಂದಿದ್ದ. ಅದು ಶ್ಯಾಮಲಾಳ ತಂದೆ-ತಾಯಿಗೆ ಮಾತ್ರ ಸಡಗರ.
ಅವಳಿಗದು ಮಾಮೂಲಿಯಾಗಿಬಿಟ್ಟಿದೆ.
ಅವಳು ಮರೆಯಲ್ಲಿ ನಿಂತು ತಂದೆ-ತಾಯಿಯ ಮಾತನ್ನು ಆಲಿಸುತ್ತಿದ್ದಳು. ಹುಡುಗ ಡಾಕ್ಟರಂತೆ. ಒಳ್ಳೆಯ ಮನೆತನದವನಂತೆ.

ಶ್ಯಾಮಲಾಳೇ ಅವರೆಲ್ಲರಿಗೂ ಕಾಫಿಯನ್ನು ತಂದುಕೊಟ್ಟು ತಂದೆಯ ಪಕ್ಕದಲ್ಲೇ ನಿಂತುಕೊಂಡಳು.

ಮತ್ತಷ್ಟು ಓದು »

8
ಜುಲೈ

ಸಂಸ್ಕೃತಿ ಸಂಕಥನ – ೧

– ರಮಾನಂದ ಐನಕೈ

ಭಾರತೀಯ ಸಂಸ್ಕೃತಿಯ ವಿಷಯದಲ್ಲಿ ಇಂದಿಗೂ ಕೂಡಾ ಗೊಂದಲವಿದೆ. ನಮ್ಮ ಆಚರಣೆಗಳು ಅರ್ಥವಿಲ್ಲದ್ದು. ಮೌಢ್ಯದಿಂದ ಕೂಡಿದ್ದು…. ಇತ್ಯಾದಿ. ನಮ್ಮ ಸುಶೀಕ್ಷಿತ ಜನರೂ ಕೂಡ ಇದನ್ನೇ ಪುನರುಚ್ಚರಿಸುತ್ತಿದ್ದಾರೆ. ಆದರೆ ಇದು ನಿಜ ಅಲ್ಲ. ಇವು ಕೇವಲ ಪಾಶ್ಚಾತ್ಯರಿಗೆ ನಮ್ಮ ಸಂಸ್ಕೃತಿಯ ಕುರಿತಾದ ಅನುಭವಗಳು. ಅವರ ಅನುಭವಗಳೇ ನಮಗೆ ಆದರ್ಶವಾಗಿದೆ.ಬೆಲ್ಜಿಯಂನ ಗೆರಿಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಾಲಗಂಗಾಧರ ಅವರು ಈ ಕುರಿತು ದೀರ್ಘ ಸಂಶೋಧನೆ ಮಾಡಿದ್ದಾರೆ. ಇವರ ಸಂಶೋಧನೆ ಭಾರತೀಯ ಸಂಸ್ಕೃತಿಯ ಮೇಲೆ ಹೊಸ ಬೆಳಕು ಚೆಲ್ಲಲಿದೆ.

ಭಾರತೀಯ ಸಂಸ್ಕೃತಿಯ ಕುರಿತಾದ ನಮ್ಮ ತಪ್ಪು ತಿಳುವಳಿಕೆ ಹೇಗೆ ಜೀವನದ ಬೇರೆ ಬೇರೆ ರಂಗದ ಮೇಲೆ ಅಡ್ಡ ಪರಿಣಾಮ ಮಾಡಿದೆ ಎಂಬ ಬಾಲಗಂಗಾಧರರ ವಾದವನ್ನು ಸರಳವಾಗಿ ಅನುಭವಕ್ಕೆ ದಕ್ಕುವಂತೆ ನಿರೂಪಿಸಲಿದ್ದಾರೆ ರಮಾನಂದ ಐನಕೈ. ಹೊಸ ಅಂಕಣ ‘ಸಂಸ್ಕೃತಿ ಸಂಕಥನ’ ಆರಂಭವಾಗಲಿದೆ.

ಇದು ಹೇಳುವಷ್ಟು ಸುಲಭವಲ್ಲ. ಆದರೂ ಒಂದು ಕ್ಷಣ ವರ್ತಮಾನದ ನಮ್ಮ ಸಿದ್ಧ ನಂಬಿಕೆಗಳನ್ನು ಪೂರ್ವಾಗ್ರಹಗಳನ್ನು ಬದಿಗಿಟ್ಟು ಮುಂದುವರಿಯೋಣ.

ಕಳೆದ ೬೦ ವರ್ಷಗಳ ನಮ್ಮ ಸ್ವತಂತ್ರ ಭಾರತದಲ್ಲಿ ನೂರಾರು ರೀತಿಯ ಮನಸ್ಸುಗಳು ಬೆಳೆಯುತ್ತ ಬಂದಿವೆ. ಪ್ರತಿಯೊಂದು ಮನಸ್ಸೂ ತನ್ನದೇ ರೀತಿಯ ವೈಚಾರಿಕ ಹಾಗೂ ಮಾನಸಿಕ ಸಾಮ್ರಾಜ್ಯವನ್ನು ಕಟ್ಟಿಕೊಂಡಿದೆ ಹಾಗೂ ಅದೇ ಅಂತಿಮ ಸತ್ಯ ಎಂದು ಪ್ರತಿಪಾದಿಸುತ್ತಲಿದೆ.ಈ ಕಾರಣಕ್ಕಾಗೇ ದೇಶದಲ್ಲಿ ಅಸಂಖ್ಯಾತ ವೈವಿಧ್ಯಮಯ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಇವುಗಳನ್ನೆಲ್ಲ ಸೇರಿಸಿ ನಾವು ಮುಖ್ಯವಾಗಿ ಎರಡು ರೀತಿಯ ಮನಸ್ಸುಗಳನ್ನು ಗುರುತಿಸೋಣ.

ಮತ್ತಷ್ಟು ಓದು »

8
ಜುಲೈ

ಅಮಾಯಕರ ಜೀವಕ್ಕೆ ಬೆಲೆಯಿದೆಯೇ?

– ಮುರುಳಿಧರ್ ದೇವ್

ಭಯಾನಕ ಭಾನುವಾರ, ನಿನ್ನೆಯ ಭಾನುವಾರ ನಿಜಕ್ಕೂ ತುಂಬಾ ಭಯಾನಕವಾಗಿತ್ತು. ಮನೆ ಮನೆಗೆ ಕೇಬಲ್ ಹಾಕುವ , ಕೆಟ್ಟರೆ ಅದನ್ನು ದುರಸ್ತಿ ಮಾಡುವ, ತಿಂಗಳಿಗೆ ಕೇಬಲ್ ಹಣವನ್ನು ಮಾಲೀಕನಿಗೆ ಒಪ್ಪಿಸುವ ಅಮಾಯಕ ಹುಡುಗನೊಬ್ಬ ಹೈ ಟೆನ್ಶನ್ (ವೋಲ್ಟೇಜ್)  ವಾಯರ್ ಗೆ ತಗುಲಿ ಚಿಂತಾ ಜನಕ  ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾನೆ. ಆತ ಮಾಡಿದ ತಪ್ಪೆಂದರೇ  ಹೈ ಟೆನ್ಶನ್ ವಾಯರ್ ಕೆಳೆಗೆ ಕಟ್ಟಿಕೊಂಡ ಎರಡು ಅಂತಸ್ತಿನ  ಮನೆಯ ಕೇಬಲ್ ದುರಸ್ತಿ ಮಾಡಲು  ಪ್ರಯತ್ನಿಸಿದ್ದು. ಈ ಮುಂಚೆ ಅದೇ ಮನೆಗೆ ಪೈಂಟ್ ಮಾಡುವಾಗ, ಪೇಂಟರ್ ಹುಡುಗನೊಬ್ಬ ಕೂದಲೇಳೆ ಅಂತರದಲ್ಲಿ ಇಂತಹ ಅನಾಹುತದಿಂದ ತಪ್ಪಿಸಿಕೊಂಡಿದ್ದ. ಅಂದು ಪೇಂಟರ್ ಹುಡುಗನ ಜೊತೆಗಿದ್ದ ಅದೃಷ್ಟ ಈ ಕೇಬಲ್ ಹುಡುಗನ ಜೊತೆಗಿರಲಿಲ್ಲ. ಈತನ ದೇಹ ಸಂಪೂರ್ಣ ಸುಟ್ಟು ಹೋಗಿದ್ದು ಬದುಕಿದ್ದಾನೆ ಅಂತ ಗುರುತಿಸಲು ಇರುವ ಅಂಶ ಎಂದರೆ ಆತನ ಕಣ್ಣುಗಳು. ಆತನನ್ನು ಎತ್ತಿ ಆಟೋದಲ್ಲಿ ಮಲಗಿಸಬೇಕಾದರೆ ಆತನ ಚರ್ಮ ಕಿತ್ತು ಕೈಗೆ ಬರ್ತಾ ಇತ್ತು. ಇಂತಹ ಸಮಯದಲ್ಲಿ ೧೦೮ ಆಂಬ್ಯುಲೆನ್ಸ್ ಗೆ ಕರೆ ಮಾಡಿದರೆ ಅವರು ಬರುವಷ್ಟರಲ್ಲಿ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಶುರುವಾಗಿತ್ತು. ಇನ್ನೂ ಆಂಬ್ಯುಲೆನ್ಸ್ ಬರುವ ವರೆಗೂ ಕಾದರೆ ಆತನ ಪ್ರಾಣಾಪಾಕ್ಷಿ ಆತನಲ್ಲಿ ಇರುತ್ತಿರಲಿಲ್ಲ.

ಇಷ್ಟಕ್ಕೆಲ್ಲ ಕಾರಣ ಆತ ಎರಡಂಟಸ್ತಿನ ಮನೆಯ ಕೇಬಲ್ ದೂರಸ್ತಿ ಮಾಡಲು ಹೋದದ್ದು, ಆದರೆ ಅಂತಹ ಅಸುರಕ್ಷಿತ ಸ್ಥಳದ ಕೆಳಗೆ ಮನೆ ಕಟ್ಟಲು, ವಿದ್ಯುತ್ ಸಂಪರ್ಕ ಪಡೆಯಲು ಅನುಮತಿ ನೀಡಿದವರಾರು? 440 volts ವೋಲ್ಟೇಜ್ ಇರುವ ಟ್ರ್ಯಾನ್ಸ್‌ಫಾರ್ಮರ್ ಸುತ್ತ ಬೇಲಿ ಹಾಕಿ ಅಪಾಯ ಅಂತ ಬರೆಸುವ ಅಧಿಕಾರಿಗಳಿಗೆ, ಇಂತಹ ಅಪಾಯದ ಸ್ಥಳದಲ್ಲಿ ಮನೆ ಕಟ್ಟೋಕೆ ಅನುಮತಿ ಕೊಡಬಾರದು ಅನ್ನೋ ಸಣ್ಣ ಪ್ರಜ್ಞೆ ಇಲ್ಲದೇ ಹೋಯ್ತೆ? ಮನೆ ಕಟ್ಟೋದು ಹೋಗಲಿ ವಿದ್ಯುತ ಸಂಪರ್ಕ ಕೊಡಬೇಕಾದರೆ BESCOM ನವರಿಗಾದರೂ ಬುದ್ದಿ ಬೇಡವೇ?
7
ಜುಲೈ

ಮಾರಿಯಾ ಸುಸೈರಾಜ್ it’s not a controversy story

-ಮಂಸೋರೆ, ಬೆಂಗಳೂರು

 ಒಂದು ಬಾರಿ ತಪ್ಪು ಮಾಡಿದವರು ಜೀವನ ಪೂರ್ತಿ ಆ ತಪ್ಪಿನ ಶಿಕ್ಷೆಯನ್ನು ಅನುಭವಿಸಬೇಕಾ? ತಪ್ಪು ಮಾಡಿದವರಿಗೆ ತಿದ್ದುಕೊಳ್ಳುವ ಅವಕಾಶವನ್ನೇ ನೀಡಬಾರದೇ? ಅಂತಹ ಅವಕಾಶವನ್ನು ಕಲ್ಪಿಸುವವರು ಕೂಡ ತಪ್ಪಿತಸ್ಥರಾ?

ಮಾರಿಯಾ ಮೋನಿಕಾ ಸೂಸೈರಾಜ್ ಮತ್ತು ರಾಮ್ ಗೋಪಾಲ ವರ್ಮಾ ವಿಷಯದಲ್ಲಿ ಈಗಿನ ಮಾಧ್ಯಮದವರು ರಾಜಕೀಯ ನಾಯಕರು ನಡೆಸುತ್ತಿರುವ ಪ್ರಹಸನಗಳನ್ನು ಗಮನಿಸಿದಾಗ ಈ ಮೇಲಿನ ಪ್ರಶ್ನೆಗಳು ಉದ್ಬವಿಸುತ್ತಾವೆ.

ಈ ಎಲ್ಲ ಪ್ರಹಸನಗಳು ಪ್ರಾರಂಭಕ್ಕೆ ಮುನ್ನುಡಿ ರಾಮ್ ಗೋಪಾಲ್ ವರ್ಮಾ ನೀರಜ್ ಗ್ರೋವರ್ ಹತ್ಯೆಯನ್ನು ಕುರಿತಾದ ಸಿನಿಮಾದಲ್ಲಿ ಪ್ರಮುಖ ಆರೋಪಿಯಾದ ಮಾರಿಯಾಳನ್ನೇ ತನ್ನ ಸಿನಿಮಾದಲ್ಲಿನ ಪಾತ್ರಕ್ಕೆ ಆಯ್ಕೆ ಮಾಡಿರುವುದು.

ಇದರಲ್ಲಿ ಮಾಧ್ಯಮದವರಿಗೆ ಮತ್ತು ರಾಜಕೀಯ ಪಕ್ಷಗಳ ಕಾಮಾಲೆ ಕಣ್ಣಿಗೆ ಕಂಡ ಘೋರ ಅಪರಾದವೇನು ಎಂದೇ ಗೊತ್ತಾಗುತ್ತಿಲ್ಲ.

ಇಷ್ಟಕ್ಕೂ ಈ ಹತ್ಯೆಯ ಹಿಂದಿನ ನಿಜವಾದ ಕಾರಣವೇನು ಎಂದು ತಿಳಿದುಕೊಳ್ಳುವ ಕೋರಿಕೆ ಯಾರಿಗು ಇಲ್ಲ. ಮಾರಿಯಾ ಅದರಲ್ಲಿ ತಪ್ಪಿತಸ್ಥೆ ಅದೊಂದೇ ನೆಪ ಸಾಕಾಗಿದೆ ಅವರವರ ಟಿ.ಆರ್.ಪಿ ಜಾಸ್ತಿ ಮಾಡಿಕೊಳ್ಳೋದಿಕ್ಕೆ ಮತ್ತು ರಾಜಕೀಯ ಪಕ್ಷಗಳಿಗೆ ತಮ್ಮ ಇಮೇಜ್ ಬೆಳೆಸಿಕೊಳ್ಳುವುದರ ಜೊತೆಗೆ ಸದಾ ಸುದ್ದಿಯಲ್ಲಿರಲು. ಮತ್ತಷ್ಟು ಓದು »

7
ಜುಲೈ

“ತಾವು ಕುಳಿತ ಮರದ ಕೊಂಬೆಯನ್ನು ತಾವೇ ಕಡಿದು ಕೊಳ್ಳುವ ನಮ್ಮ ಸ್ಯಾಂಡಲ್ ವುಡ್ ಮಂದಿ”

-ರತೀಶ

ನಮ್ಮ ಕನ್ನಡ ಚಿತ್ರರಂಗಕ್ಕೆ ನೇರ ಅಥವಾ ದೂರ ಸಂಪರ್ಕ ಹೊಂದಿರುವ  ಯಾರದರನ್ನು ಒಬ್ಬರನ್ನು ‘ನಮ್ಮ ಸ್ಯಾಂಡಲ್ ವುಡ್ ಸಮಸ್ಯೆ ಏನು?’ ಎಂದು ಕೇಳಿ, ‘ಪರಭಾಷೆ ಚಿತ್ರಗಳ ಧಾಳಿ, ಕನ್ನಡಿಗರು ಚಿತ್ರಮಂದಿರಕ್ಕೆ ಬರವುದಿಲ್ಲ, ಕನ್ನಡ ಚಿತ್ರಗಳನ್ನು ನೋಡುವುದಿಲ್ಲ….’ ಎಂದೆಲ್ಲ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಅವರು ಹೇಳುವ ಮಾತು ಸರಿಯಾಗಿಯೇ ಇರಬಹುದು ಹಾಗೆಯೇ ಅದಕ್ಕೆ ಕಾರಣಗಳು ಹಲವಿರಬಹುದು ಆದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನಗೆ ತೋಚುವುದು ಏನೆಂದರೆ ಈ ಎಲ್ಲ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಚಿತ್ರರಂಗದವರೇ ಹೊಣೆ! ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು.

ನಿನ್ನೆ ನಾನು ಸುವರ್ಣ ಟಿವಿಯಲ್ಲಿ, ಸುವರ್ಣ ಫಿಲಂ ಅವಾರ್ಡ್ಸ್ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ, ಬಹಳ ಅಪರೂಪಕ್ಕೆ ಅನ್ನುವಂತೆ ಕನ್ನಡಿಗರಿಗೆ ಇಂಥಹ ಕಾರ್ಯಕ್ರಮಗಳನ್ನು ನೋಡಲು ಅವಕಾಶ ಸಿಗುವುದು. ಜೊತೆಗೆ ಕನ್ನಡ ಚಿತ್ರರಂಗದವರಿಗೆ ಇದು ಅತಿ ಮುಖ್ಯ ಹಾಗು ಅತಿ ವಿರಳವಾಗಿ ದೊರಕುವಂತಹ ಅವಕಾಶ, ಇಲ್ಲಿ ಕನ್ನಡ ಚಿತ್ರರಂಗದ ವಿಶೇಷಗಳನ್ನು, ಸಾಧನೆಗಳನ್ನು, ಮುಂದಿನ ಗುರಿಗಳನ್ನು ಹಾಗು ಚಿತ್ರರಂಗದ ಹಿರಿಮೆಯನ್ನು ಜನರಿಗೆ ಹತ್ತಿರವಾಗುವಂತೆ ತಿಳಿಸುವ ಬಹುದಾದಂಥಹ ಬಹು ದೊಡ್ಡ  ವೇದಿಕೆ ನಿರ್ಮಾಣವಾಗಿತ್ತು, ಆದರೆ ನಮ್ಮವರು ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದು ಬೇಸರದ ಸಂಗತಿ. ಮತ್ತಷ್ಟು ಓದು »

5
ಜುಲೈ

ಚಿನ್ನದ ಹುಡುಗಿಯ ಜೊತೆ ನಿಲ್ಲೋಣ…

5
ಜುಲೈ

ಅಷ್ಟಕ್ಕೂ,ಈ ಪ್ರಜಾಪ್ರಭುತ್ವ ಅಂದರೇನು!?

– ರಾಕೇಶ್ ಶೆಟ್ಟಿ

ಮನಮೋಹನರಿಗಿಂತ ಅಡಾಲ್ಫ್ ಹಿಟ್ಲರ್ ಮೇಲು…!

ದೇಶಕ್ಕಾದ ಅವಮಾನಕ್ಕೆ ಪ್ರತಿಯಾಗಿ ನಂಜು ಕಾರುತಿದ್ದ ಅಡಾಲ್ಫ್ ಹಿಟ್ಲರ್ ಅನ್ನುವ ರಕ್ತ ಪಿಪಾಸು ಸರ್ವಾಧಿಕಾರಿಯನ್ನ, ದೇಶ ಭ್ರಷ್ಟಚಾರದಲ್ಲಿ ಮುಳುಗೇಳುತಿದ್ದರೂ ಸಂಬಂಧವೇ ಇಲ್ಲದಂತಿರುವ,ಕಣ್ಣೆದುರೇ ಅನಾಚಾರ ನಡೆಯುತಿದ್ದರು ಕಣ್ಮುಚ್ಚಿ ಕುಳಿತಿರುವ ಪ್ರಾಮಾಣಿಕ ಪ್ರಧಾನಿ ಮನಮೋಹನರಿಗೆ ಹೋಲಿಸಿದ್ದು ಅತಿಯಾಯ್ತು ಅನ್ನಿಸುತ್ತೆ ಅಲ್ವಾ?

ಹಾಗಿದ್ರೆ, ಅಣ್ಣಾ ಸತ್ಯಾಗ್ರಹ ಮಾಡಿ ಮೊಂಡ ಸರ್ಕಾರವನ್ನ ಮಂಡಿಯೂರಿಸಿದಾಗ ’ಓ! ಸರ್ಕಾರ ಈ ತರ ಬಗ್ಗಿದರೆ, ಎಲ್ಲರೂ ಸತ್ಯಾಗ್ರಹ ಮಾಡಿ ಸರ್ಕಾರವನ್ನ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ!’ ಅಂತ ಆತಂಕ ಪಡುವವರನ್ನ ಕಂಡಾಗ; ’ಪ್ರಜಾಪ್ರಭುತ್ವವಲ್ಲದ ಭ್ರಷ್ಟಚಾರ ಮುಕ್ತ ಸರ್ಕಾರಕ್ಕಿಂತ, ಭ್ರಷ್ಟಚಾರವಿರುವ ಪ್ರಜಾಪ್ರಭುತ್ವ ಸರ್ಕಾರವೇ ಮೇಲು’ ಅನ್ನುವಂತ ಲೇಖನವನ್ನ ಓದಿದಾಗ; ಪ್ರಬಲ ಜನಲೋಕಪಾಲ ಮಸೂದೆಗಾಗಿ ನಡೆಯುತ್ತಿರುವ ಹೋರಾಟ ’ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿದೆ’ ಅಂತ ಕೆಲ ಮಂದಿ ಗುಲ್ಲೆಬ್ಬಿಸುತ್ತಿರುವುದನ್ನ ನೋಡಿದಾಗ ಇದೂ ಅತಿಯಾಯ್ತು ಅನ್ನಿಸುವುದಿಲ್ವಾ?

ಅಷ್ಟಕ್ಕೂ,ಜನರಿಂದ ಆರಿಸಿ ಬಂದ ಸರ್ಕಾರ ತನ್ನ ಪಾಲಿನ ಕೆಲಸವನ್ನ ತಾನು ಸರಿಯಾಗಿ ಮಾಡುತಿದ್ದರೆ ಅಣ್ಣಾ ಹಜ಼ಾರೆ ಯಾಕೆ ಬರಬೇಕಿತ್ತು? ಕಫ್ಫು ಹಣದ ಕಳ್ಳರ ಹೆಸರನ್ನ ಬಾಯ್ಬಿಡಿ ಅಂದಾಗ ’ಅವೆಲ್ಲ ಆಗಲಿಕ್ಕಿಲ್ಲ’ ಅಂತ ವಿತ್ತ ಸಚಿವ ಅಂದ ಮೇಲೆ ತಾನೇ ಜನರ ಪಿತ್ತ ನೆತ್ತಿಗೇರಿದ್ದು? ಸುಪ್ರೀಂ ಕೋರ್ಟ್ ತಪರಾಕಿ ಹಾಕಿದ ಮೇಲೆಯೆ ತೆರಿಗೆ ಕಳ್ಳ ಹಸನ್ ಅಲಿಯನ್ನ ಬಂಧಿಸಿದ್ದೇಕೆ? ಕಳೆದ ಚುನಾವಣೆಗಿಂತಲೂ ಮೊದಲೇ 2G ಹಗರಣ ಬಾಯ್ತೆರೆದು ನಂತರವೂ ಅದೇ ರಾಜನನ್ನ ಮತ್ತೆ ಕರೆದು ಮತ್ತದೇ ಖಾತೆಯನ್ನ ವಹಿಸಿದ ಸರ್ಕಾರಕ್ಕೆ ನೈತಿಕತೆಯಿದಯೇ? ಈಗ ಆತಂಕ ಪಡುತ್ತಿರುವ ಪ್ರಜಾಪ್ರಭುತ್ವದ ಕಾವಲು ಭಟರೆಲ್ಲ ಆಗ ಏನು ಮಾಡುತಿದ್ದರು?ಎಲ್ಲಿದ್ದರು?

ಮತ್ತಷ್ಟು ಓದು »