ಪರಭಾಷೆಯ ಚಿತ್ರಗಳಿಗೆ ಮಾರುಕಟ್ಟೆ ನಿರ್ಮಿಸಿ ಕೊಡುತ್ತಿರುವವರ್ಯಾರು?
– ಅರುಣ್ ಜಾವಗಲ್
ಸುವರ್ಣ ಕನ್ನಡ ಪಿಲಂ ಅವಾರ್ಡ್ ಕಾರ್ಯಕ್ರಮ ಕಳೆದ ವಾರ ಟಿವಿಯಲ್ಲಿ ನೋಡಿದೆ. ನಿಜಕ್ಕು ಅದ್ಬುತವಾದ ಕಾರ್ಯಕ್ರಮ, ಪರಬಾಶೆಗಳಲ್ಲಿ ಮಾತ್ರ ನಡೆಯುತ್ತಿದ್ದ ಅದ್ದೂರಿ ಕಾರ್ಯಕ್ರಮಗಳು, ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲು ನಡೆಯಲು ಪ್ರಾರಂಬವಾಗಿರೋದು ನಿಜಕ್ಕೂ ಸಂತೋಶಕರ. ಈ ರೀತಿಯ ಕಾರ್ಯಕ್ರಮಗಳು, ಕನ್ನಡ ಚಿತ್ರರಂಗ, ತಾವೇನು ಯಾರಿಗೂ ಕಡಿಮೆಯಿಲ್ಲ ಅನ್ನೊದನ್ನ ಎತ್ತಿಹಿಡಿದಿದೆ….ದಿಲ್ಲಿಯ ’ಹುಳಿ ದ್ರಾಕ್ಷೆ’ ಹಿಡಿಯಲು ಹೋಗಿ
ದಿಲ್ಲಿ ಕನ್ನಡದ ಪತ್ರಕರ್ತರಿಗೆ ದೂರ. 3000 ಕಿ.ಮೀ. ಅಷ್ಟೇ ಅಲ್ಲ. ಅದರಾಚೆಗೂ ದೂರ. ಕನ್ನಡದ ಪತ್ರಕರ್ತರು ದಿಲ್ಲಿಯಲ್ಲಿ ಹೆಜ್ಜೆ ಗುರುತು ಮೂಡಿಸುವುದು ಸುಲಭದ ಮಾತಲ್ಲ. ಏರು ಬಿಸಿಲು ಅಥವಾ ತೀವ್ರ ಚಳಿಯಲ್ಲಿ ನಿರಂತರ ಆಲೂ ಪಲ್ಯವನ್ನೂ ಅರಗಿಸಿಕೊಳ್ಳುತ್ತಲೇ ಇರಬೇಕು.
ದಿಲ್ಲಿಯ ಆಡುಭಾಷೆ ಹಿಂದಿ – ಉರ್ದು ಮಾತ್ರ. ಇಂಗ್ಲೀಷು ಅಷ್ಟಕ್ಕಷ್ಟೆ. ಇನ್ನು ಕನ್ನಡದ ಕಥೆ? ಪತ್ರಿಕಾರಂಗವೇನು? ಸುಪ್ರೀಂ ಕೋರ್ಟು, ಪಾರ್ಲಿಮೆಂಟು, ಐಎ ಎಸ್ ಲಾಬಿಯಲ್ಲಿಯೂ ಕನ್ನಡದ ಧ್ವನಿ ಕ್ಷೀಣವೇ.
ಕನ್ನಡದ ಪತ್ರಿಕೋದ್ಯಮಕ್ಕೆ ‘ಕೊಂಬು-ಕಹಳೆ’ ಎಲ್ಲ ಆದವರೂ ದಿಲ್ಲಿಯಲ್ಲಿ ಏನೂ ಅಲ್ಲ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಅಂದರೆ ಅದು ಅಡ್ವಾಣಿಯದ್ದೋ – ಪ್ರಕಾಶ್ ಕಾರಟರದ್ದೋ – ಚಿದಂಬರರದ್ದೋ – ಯಾವುದೇ ರಾಷ್ಟ್ರೀಯ ನಾಯಕರದ್ದಾಗಲಿ. ಅಂದೊಂದು ಮದುವೆ ಮನೆಯ ಬಾಬತ್ತು. ಬರೋಬ್ಬರಿ 600 ಜನ. ಇಂಗ್ಲೀಷ್ ಚಾನೆಲ್ ಗಳು, ಹಿಂದಿ ಚಾನೆಲ್ ಗಳು, ರಾಷ್ಟ್ರೀಯ ಪತ್ರಿಕೆಗಳು, ಅವರವರ ಕ್ಯಾಮರಾಮೆನ್ ಗಳು, ಮೈಕ್‍ಮೆನ್ ಗಳು, ಅದರಾಚೆಗೆ ಎಲ್ಲೋ ಕಳೆದು ಹೋಗುವ ಕನ್ನಡದ ಪತ್ರಕರ್ತ. ಪ್ರಶ್ನೆ ಕೇಳುವುದು, ಉತ್ತರ ಬರೆಯುವುದು ದೂರದ ಮಾತು. ಎಷ್ಟು ದೂರವೆಂದರೆ ದೆಲ್ಲಿಯ ನಮ್ಮ ಧ್ವನಿಗಳು ಆ ಬಾಬತ್ತಿನ ತನಕ ಹೋಗುವುದೇ ಇಲ್ಲ. ದಿಲ್ಲಿಯ ತಮ್ಮ ಮನೆಯಲ್ಲಿಯೇ ಕೂತು NDTVಯದೋ ಆಜ್ ತಕ್ ನದೋ Direct Rellay ನೋಡ್ತಾ ನೋಡ್ತಾನೇ ಇವರು ಸುದ್ದಿ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಮತ್ತಷ್ಟು ಓದು 
ಜನರೆಂದರೆ ಯಾರ್ ಯಾರು ಕಾಗೇರಿಯವರೇ?
ಇವತ್ತಿನ (೦೩.೦೭.೨೦೧೧ರ) ಕನ್ನಡಪ್ರಭ ದಿನಪತ್ರಿಕೆಯ ಒಂಬತ್ತನೇ ಪುಟದಲ್ಲಿ ಮಾನ್ಯ ಶಿಕ್ಷಣಮಂತ್ರಿಗಳಾದ ಶ್ರೀ ವಿಶ್ವೇಶ್ವರಹೆಗ್ಡೆ ಕಾಗೇರಿಯವರ “ಬುಲೆಟ್ ಸಂದರ್ಶನ“ವೊಂದು ಪ್ರಕಟವಾಗಿದೆ. ಸರ್ಕಾರ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ಚರ್ಚೆ ಆರಂಭಿಸಿರುವ ಹಿನ್ನೆಲೆಯಲ್ಲಿ ಇದು ಕುತೂಹಲಕರವಾಗಿದ್ದು, ಒಂದು ಥರ ಸರ್ಕಾರದ ಮುಂದಿನ ನಡೆಯ ದಿಕ್ಸೂಚಿಯೂ ಆಗಿದೆ. ಇಡೀ ಸಂದರ್ಶನದ ಪ್ರಮುಖ ಮಾತುಗಳು ಇಂತಿವೆ.
ಸಾಹಿತಿಗಳಷ್ಟೇ… ಜನತೆಯಲ್ಲ!
ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ತಾವು ಸಿದ್ಧ ಎಂಬುದನ್ನು ಮಂತ್ರಿಗಳು ಸಾಬೀತು ಮಾಡುತ್ತಿರುವಂತೆ ಇವರ ಮಾತುಗಳಿವೆ. ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಸಾಹಿತಿಗಳು ಮಾತ್ರಾ ವಿರೋಧ ತೋರಿಸಿದ್ದಾರೆ, ಇವರಷ್ಟೇ ನಾಡಿನ ಜನತೆಯಲ್ಲ… ಹಳ್ಳಿಗಾಡಿನ ಜನರೂ ಕೂಡಾ ಅವರ ಅಭಿಪ್ರಾಯ ಹೇಳಲಿ… ಇತ್ಯಾದಿಯಾಗಿ ಮಂತ್ರಿಗಳು ಮಾತಾಡಿದ್ದಾರೆ. ಇದಲ್ಲದೆ ಮಾಧ್ಯಮಗಳಿಗೆ ಜನರ ಅಭಿಪ್ರಾಯ ನಿರೂಪಿಸುವ ಹೊಣೆಗಾರಿಕೆಯನ್ನೂ ವಹಿಸಿದ್ದಾರೆ. ಈ ಪ್ರಯತ್ನವು ಸಾಹಿತಿಗಳ ಬಾಯಿ ಮುಚ್ಚಿಸುವ “ನಿಮ್ಮ ಮಕ್ಕಳು ಇಂಗ್ಲೀಶ್ ಮಾಧ್ಯಮದಲ್ಲಿ ಓದಬಹುದು, ಬಡವರ ಮಕ್ಕಳು ಓದಬಾರದಾ?” ಎಂಬಂತಹ ಮತ್ತೊಂದು ಅಸ್ತ್ರವಾಗಿದೆ. ಇರಲಿ… ಕಾಗೇರಿಯವರು ಆಡಿರುವ ಮಾತುಗಳತ್ತ ನೋಡೋಣ.
ದೆವ್ವದ ಹರಕೆ!!
– ನಾಗರಾಜ್ ಮೌಳಿ
ನಿಮಗೆ ಗೊತ್ತಿದೆ ಎಷ್ಟೊಂದು ದೆವ್ವ ಭೂತ, ಪಿಚಾಚಿಗಳು, ಹಾಗೆ ಅದು ಇದು ಅಂತ ಮೂವೀಸ್ ಬಂದಿದಾವೆ, ಕಥೆಗಳು , ಕಾದಂಬರಿಗಳು, ಹಾಗೆ ಅಲ್ಲಿ ಇಲ್ಲಿ ಕೇಳಿದ್ದು ಎಲ್ಲ ನಮ್ಮ ಕಿವಿಗೂ ಬೀಳ್ತಾ ಇರ್ತವೆ. ಅದರಲ್ಲಿ ಕೆಲವೊಂದು ನಿಮಗಾಗಿ ಇಲ್ಲಿ ಬರೀತಿನಿ…..ಅದಕ್ಕೂ ಮುಂಚೆ ನಮ್ಮೂರಲ್ಲಿ ದೆವ್ವ, ದೈವ, ದಯ್ಯ ಹೀಗೆಲ್ಲಾ ಕರಿತಾರೆ ನಿಮಗೆ ಯಾವತರ ಅನ್ಸುತ್ತೋ ಹಾಗೆ ಓದಿ..
ಮೊನ್ನೆ ಟಿವಿ 9 ಲಿ ತೋರಿಸ್ತಾ ಇದ್ರು ಬೆಂಗಳೂರಲ್ಲಿ ಒಂದು 8 ಮಹಡಿ ಬಿಲ್ಡಿಂಗ್ ಇದ್ಯಂತೆ ಅಲ್ಲಿ ಯಾರು ಹೋಗೋಕೆ ಅಗಲ್ವಂತೆ, ಅದು ಏನು ಅಂತ ನೋಡೋಕೆ ಟಿವಿ 9 ತಂಡ ಹೋದಾಗ ಭಯಾನಕ ಅನುಭವ ಆಯಿತಂತೆ, ಅದನ್ನು ತೋರಿಸ್ತಿದ್ರು ಅದು ರಾತ್ರಿ ಕಣ್ರೀ ಸ್ವಲ್ಪ ಭಯನೆ ಆಯಿತು ನನಗೂ.. ಏನ್ ಕೇಳ್ತೀರಾ ಆಟೋಮೇಟಿಕ್ ಆಗಿ ಮಾಮೂಲಿ ಬಾಗಿಲು ತೆಗೆದುಕೊಳ್ಳುತ್ತೆ, ನಿಮ್ಮ ಹತ್ತಿರದಲ್ಲೇ ನೆರಳುಗಳು ಒಡಿಯಾಡ್ತವೆ, 1ನೇ ಮಹಡಿಗೆ ಹೋದ್ರೆ 4ನೇ ಮಹಡಿಲಿ, ಹಾಗೆ 4ನೇ ದಕ್ಕೆ ಹೋದರೆ 1ನೆದರಲ್ಲಿ ಯಾರೋ ಭಯಾನಕವಾಗಿ ಅಳುತ್ತಿರುವ ಶಭ್ದ, ಮೆಟ್ಟಿಲುಗಳಿಂದ ಯಾರೋ ಇಳಿದುಕೊಂಡು ಹೋಗ್ತಾ ಇರೋ ಸದ್ದು ಕೇಳಿಸುತ್ತೆ ಅಬ್ಬಾ ನೋಡಿ ಸ್ವಲ್ಪ ನೀರಾದೆ….
ಮತ್ತೆ ಒಂದು ಮನೆ ಇದೆ ನಮ್ಮ ಊರಲ್ಲಿ ಆ ಮನೆಯ ಯಜಮಾನ್ರು ನಮ್ಮ ಅಪ್ಪನ ಹತ್ರ ನಾವು ಚಿಕ್ಕವರಿದ್ದಾಗ ಬಂದು ಹೇಳ್ತಿದ್ರು, ಅವ್ರ ಮನೇಲಿ ಮರದ ತೊಲೆಗಳ ಮೇಲೆ ಯಾರೋ ಕಂಟಿನಿಯಸ್ ಆಗಿ ಗುದ್ದಿದ ಶಭ್ದ ಕೇಳುತ್ತಿತಂತೆ, ಹಾಗೆ ರಾತ್ರಿ ಒಬ್ಬ ಎತ್ತರದ ಮನುಷ್ಯ ದೀಪ ಹಿಡಿದುಕೊಂಡು ಹಾರಿ ಹೋಗ್ತಾ ಇದ್ದಹಾಗೆ, ಗೇಟಿನಬಳಿ ಯಾವುದೋ ಬಿಳಿ ಸೀರೆಯ ಹೆಂಗಸು ನಿಂತು ಅಳುತ್ತಿರುವ ಹಾಗೆ ಕಾಣಿಸ್ತಿತ್ತಂತೆ,
ಮನೇಲಿ ಮಲಗಿದ್ರೆ ಮೈತುಂಬಾ ಯಾವುದೋ ಒಂದು ಹಾವು ಹರಿದಾಡಿದ ಅನುಭವ ಆಗಿ ಶಾಂತಿ ಮಾಡಿಸಿದ್ದನ್ನ ನೋಡಿದೀನಿ, ಮನೇಲಿ ನೀರು ಅದಾಗಿ ಅದೇ 5 ನಿಮಿಷದಲ್ಲಿ ಕೆಂಪು ಬಣ್ಣಕ್ಕೆ ತಿರುಗೋದು, ಏನು ಅಡಿಗೆ ಮಾಡಿದ್ರೂ, ಉಪ್ಪು ಹಾಕದೇ ಇದ್ರು, ತಿಂದಾಗ ಅತಿಯಾಗಿ ಉಪ್ಪಾಗಿ ಊಟಾನೇ ಬಿಟ್ಟು ಏಳಬೇಕು ಹಾಗೆ ಆಗ್ತಿತ್ತು ಅಂತ ಹೇಳ್ತೀದ್ರು, ಅದನ್ನ ನೋಡೋಕೆ ನಮ್ಮ ಕೆಲವು ಗುರುತು ಪರಿಚಯ ಇರೋರು ಹೋಗಿದ್ರೂ ನಾವು ಬಿಡಿ ತುಂಬಾ ದೈರ್ಯವಂತರು ಹಾಗಾಗಿ ಅಂತ ಸಾಹಸ ಮಾಡಲಿಲ್ಲ. ಮತ್ತಷ್ಟು ಓದು 
ಕ್ಷಮಿಸಿ,ನಿಮ್ಮ ನೆಮ್ಮದಿಯನ್ನು ಕಲಕುವ ಉದ್ದೇಶ!
– ಚಿತ್ರ ಸಂತೋಷ್
ನನ್ನ ಕಣ್ಣಿನಲ್ಲಿ ಕಣ್ಣೀರು ಎಂದೋ ಬತ್ತಿಹೋಗಿತ್ತು. ಅನ್ಯಾಯದ ವಿರುದ್ಧದ ದನಿ ಕುಗ್ಗಿಹೋಗಿತ್ತು. ನನಗೆ ಈಗ ದನಿ ಇಲ್ಲ. ಒಂದು ವೇಳೆ ದನಿ ಇದ್ದರೂ ಕೇಳುವ ಕಿವಿಗಳು ನನ್ನ ಬಳಿ ಇಲ್ಲ. ಅಪ್ಪ-ಅಮ್ಮನ
ನೆನಪಾಗುತ್ತದೆ. ಲಂಡನ್‌ನ ನೆನಪುಗಳು ಆಗಾಗ ಸುಳಿಯುತ್ತವೆ. ಬದುಕು ಬೇಡ ಅನಿಸುತ್ತಿದೆ. ಆದರೂ, ನನ್ನ ಕೈಯಾರೆ ನಾನು ಕೊಲೆಯಾಗ ಬಯಸಲಾರೆ. ಎಲ್ಲವನ್ನೂ ಮರೆಯೋಕೆ ಕುಡಿತವನ್ನು ಬದುಕಾಗಿಸಿಕೊಂಡಿದ್ದೇನೆ.
ಆನೆ, ಹುಲಿ, ಸಿಂಹಗಳ ಅಂಗಾಂಗಳನ್ನು ಪ್ರದರ್ಶನಕ್ಕಿಟ್ಟರೆ ದುಡ್ಡು ಕೊಟ್ಟು ನೋಡಲು ಖುಷಿಪಡ್ತೀವಿ. ಆದರೆ, ಒಬ್ಬ ಹೆಣ್ಣಿನ ಅಂಗಾಂಗಳನ್ನು ಪ್ರದರ್ಶನಕ್ಕಿಟ್ಟರೆ…ನೋಡುವುದು ಬಿಡಿ, ಕೇಳಲು ಅಸಹ್ಯವಾಗುತ್ತದೆ. ಆದರೆ, ಇಂಥದ್ದೊಂದು ನೈಜ ಘಟನೆ ಎರಡು ದಶಕಗಳ ಹಿಂದೆ ನಡೆದಿತ್ತು. ಇಂದಿಗೂ ದಕ್ಷಿಣ ಆಫ್ರಿಕಾದ ನೂರಾರು ಹೆಣ್ಣು ಮಕ್ಕಳು ಈ ಕಥೆಯನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಾರೆ.
***** *****
ನನ್ನ ಹೆಸರು ಸಾರಾ. ಹುಟ್ಟಿದ್ದು ೧೭೮೯ರಲ್ಲಿ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ. ನಾನು ಎದ್ದು ನಡೆಯುವ ಹೊತ್ತಿಗೆ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದೆ. ಅವರು ಬಲಿಯಾಗಿದ್ದೂ ಬಡತನಕ್ಕೇ! ಇಂದು ನನ್ನೆದುರು ಅವರ ಮುಖವೂ ಅಸ್ಪಷ್ಟ. ಹಿಂದೆ-ಮುಂದೆ ಯಾರಿಲ್ಲ. ಒಬ್ಬಳೇ ಮಗಳು. ಒಂದಷ್ಟು ದಿನ ಸಂಬಂಧಿಕರ ಆಶ್ರಯದಲ್ಲಿ ಬೆಳೆದೆ. ಆದರೂ, ಅಲ್ಲಿ ನನ್ನ ಬದುಕಿರಲಿಲ್ಲ. ನಮ್ಮೂರಿನ ಪಕ್ಕದ ಡಚ್ ರೈತರ ಮನೆಯಲ್ಲಿ ಜೀತದಾಳಾಗಿ ಸೇರಿಕೊಂಡೆ. ಆಗಿನ್ನೂ ಹರೆಯಕ್ಕೆ ಬಂದ ವಯಸ್ಸು ಜಗತ್ತಿನ ಆಗುಹೋಗುಗಳನ್ನು ತಿಳಿಯಬಲ್ಲವಳಾಗಿದ್ದೆ. ಬಿಳಿಯರು ನಮ್ಮ ಜನಾಂಗದ ವಿರುದ್ಧ ನಡೆಸುತ್ತಿದ್ದ ಅನ್ಯಾಯಗಳ ಕುರಿತು ಕೇಳಿದ್ದೆ. ಎಲ್ಲವೂ ನನ್ನೊಡಲಲ್ಲಿ ಮೌನವಾಗಿದ್ದವು.
ಬೀದಿ-ಬೀದಿಯಲ್ಲಿ ಬೆತ್ತಲಾದೆ!
ಮತ್ತಷ್ಟು ಓದು 
ಪ್ರೀತಿ ಕುರುಡಾದರೂ ಪ್ರಿತಿಸುವವರು ಕುರುಡಾಗದಿರಲಿ
– ಪವನ್ ಪಾರುಪತ್ತೇದಾರ್
ಅಗ್ರಹಾರದ ಶಾಮಣ್ಣನವರಿಗೆ ತಮ್ಮ ಮಗಳನ್ನ ಬ್ಯಾಂಕ್ ಮ್ಯಾನೇಜರ್ ಮಾಡಬೇಕಂಬ ಅಸೆ ಇತ್ತು.ಮಗಳಿಗೆ SSLC ವರೆಗೂ ಹಳ್ಳಿಯಲ್ಲಿನ ಶಾಲೆಯಲ್ಲಿ ಓದಿಸಿದರು, ಪ್ರತಿದಿನ ಮಗಳನ್ನ ಶಾಲೆಗೆ ಕರೆದೊಯ್ಯುವುವುದು ಮತ್ತೆ ಕರೆತರುವುದು ಅವರದೇ ಕೆಲಸ. ಮನೆಗೆ ಕರೆ ತಂದೊಡನೆ ಮುದ್ದಾಗಿ ಮಾತನಾಡಿಸಿ ಶಾಲೆಯ ಬಗ್ಗೆ ವಿಚಾರಿಸುವುದು ಇವೆಲ್ಲ ನಡೆಯುತ್ತಿತ್ತು. ಆದರೆ ಹಳ್ಳಿಯಲ್ಲಿ ಕಾಲೇಜ್ ಇಲ್ಲದಿದ್ದರಿಂದ ಅನಿವಾರ್ಯವಾಗಿ ಪಕ್ಕದ ಪಟ್ಟಣಕ್ಕೆ ಸೇರಿಸಬೇಕಾಯ್ತು, ಪ್ರತಿ ದಿನ ಬಸ್ ಅಲ್ಲಿ ಪ್ರಯಾಣ ಮಗಳು ಮನೆಯಿಂದ ಹೊರ ಮತ್ತೆ ಸಂಜೆ ಬರುವ ವರೆಗೂ ಅವಳದ್ದೇ ಚಿಂತೆ ಶಾಮಣ್ಣ ಮತ್ತು ಅವರ ಹೆಂಡತಿಗೆ. ಆಗಾಗ ಕಾಲೇಜ್ ಬಳಿ ಹೋಗುತಿದ್ದರು, ಒಂದೆರಡು ಸಲಿ ಅವರು ಹೋದಾಗ ಮಗಳು ಕಾಲೇಜ್ ನಲ್ಲಿ ಇರಲಿಲ್ಲ.
ಮಗಳು ಮನೆಗೆ ಬಂದಮೇಲೆ ಕೇಳಿದಾಗ ಸ್ನೇಹಿತೆಯ ಮನೆಗೆ ಓದಲು ಹೋಗಿದ್ದೆ ಎಂದಳು. ಆದರು ಶಾಮಣ್ಣ ನವರಿಗೆ ಏನೋ ಒಂದು ರೀತಿ ಅನುಮಾನ ಮಗಳು ಎಲ್ಲಾದರೂ ತಪ್ಪು ದಾರಿ ತುಳಿಯುತಿರುವಳೋ ಅನ್ನೋ ಭಯ, ಕಾಲೇಜ್ ಹತ್ತಿರದಲ್ಲೇ ಇದ್ದಿದ್ದರೆ ಮೊದಲಿನ ಹಾಗೆ ತಾನೆ ಜೊತೆಯಲಿ ಹೋಗಿ ಬರಬಹುದಾಗಿತ್ತು ಅನ್ನೋ ಯೋಚನೆ ಇನ್ನು ಸ್ವಲ್ಪ ದಿನಗಳಾದ ಮೇಲೆ ಕಾಲೇಜ್ ಗೆ ಹೋದ ಶಾಮಣ್ಣ ನವರ ಮಗಳು ಮತ್ತೆ ಮನೆಗೆ ತಿರುಗಿ ಬಂದಿಲ್ಲ. ಆಮೇಲೆ ತಿಳಿದ ವಿಷಯ ಅಂದ್ರೆ ಅವಳು ಪಟ್ಟಣದಲ್ಲಿನ ಒಬ್ಬ ಆಟೋ ಡ್ರೈವರ್ ಜೊತೆ ಓದಿ ಹೋಗಿದ್ದಳು, ಹತ್ತಾರು ಎಕರೆ ಜಮೀನು ಅಸ್ತಿ ಪಾಸ್ತಿ ಎಲ್ಲ ಇದ್ದ ಶಾಮಣ್ಣನವರಿಗೆ ಮಗಳ ಮದುವೆ ಮಾಡುವುದು ಅಷ್ಟೇನೂ ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಮಗಳು ವಿದ್ಯಾವಂತೆ ಅಗಲಿ ಎಂದು ಅಸೆ ಪಟ್ಟಿದ್ದಕ್ಕೆ ಶಾಮಣ್ಣ ನವರಿಗೆ ಸಿಕ್ಕ ಪ್ರತಿಫಲ ಬಹಳ ವಿಷಾದನೀಯ. ಬಹಳ ಕಟ್ಟುನಿಟ್ಟಿನ ಬ್ರಾಹ್ಮಣ ಕುಟುಂಬ ಊರಿನ ಜನ ಮಾತ್ರವಲ್ಲದೆ ನೆಂಟರು ಇಷ್ಟರ ಮಧ್ಯೆ ಸಹ ಅವಮಾನ ಪಡುವಂತಾಯಿತು.






