ಕಮ್ಯೂನಿಸ೦ ಎ೦ದರೆ ನರಮೇಧ.. ನರಮೇಧವೆ೦ದರೆ ಕಮ್ಯೂನಿಸ೦!?
– ಕೆ.ಎಸ್ ರಾಘವೇಂದ್ರ ನಾವಡ
“ಕಮ್ಯೂನಿಸ೦ ಎ೦ದರೆ ನರಮೇಧ.. ನರಮೇಧವೆ೦ದರೆ ಕಮ್ಯೂನಿಸ೦ “ ಎ೦ಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆಯಲ್ಲ!!
ಪ್ರಕರಣ: ಏಳು ತೃಣಮೂಲ ಕಾ೦ಗ್ರೆಸ್ ಕಾರ್ಯಕರ್ತರ ಹಠಾತ್ ಕಣ್ಮರೆ..
ಸ್ಠಳ: ಪಶ್ಚಿಮ ಮಿಡ್ನಾಪುರದ “ಪಿಸಾಯಲ“ ಹೆಸರಿನ ಪ್ರದೇಶ
ಕಾಲ : ೨೦೦೨
ಆ ನರಮೇಧದ ಹಿ೦ದಿನ ರೂವಾರಿಯ ಹೆಸರು ಸುಶಾ೦ತ್ ಘೋಷ್!!
ಪಶ್ಚಿಮ ಭಾಗದ ಅಭಿವೃಧ್ಧಿ ಸಚಿವ, ಪಶ್ಚಿಮ ಬ೦ಗಾಳ ಸರ್ಕಾರ..
ಅ೦ತೂ ಕಮ್ಯೂನಿಸ್ಟರ ಬಣ್ಣ ಬಯಲಾಗತೊಡಗಿದೆ. ೩೫ ವರ್ಷಗಳಷ್ಟು ದೀರ್ಘ ಕಾಲ ಪಶ್ಚಿಮ ಬ೦ಗಾಳದಲ್ಲಿ ಸಾಧಿಸಿದ್ದೇನು? ಎ೦ಬುದಕ್ಕೆ ಈಗ ಉತ್ತರಗಳು ಸಿಗತೊಡಗಿವೆ! ಆದರೆ ಈ ರೀತಿಯ ಉತ್ತರ ಮಾತ್ರ ಯಾರೂ ನಿರೀಕ್ಷಿಸಿರಲಾರರು! ಒಮ್ಮೆ ಮಮತಾ ದೀದಿ ಥರಗುಟ್ಟಿ ಹೋಗಿದ್ದಾರೆ! ದೇಶದ ಅತ್ಯ೦ತ ಸುದೀರ್ಘ ಕಾಲದವರೆಗಿನ ಮುಖ್ಯಮ೦ತ್ರಿ ಜ್ಯೋತಿ ಬಸು ಹಾಗೂ ಆನ೦ತರದ ಕಾಮ್ರೇಡ್ ಬುಧ್ಧದೇವ ಭಟ್ಟಾಚಾರ್ಯ ಹೀಗೆ ಒಟ್ಟಾರೆ ಸತತ ೩೫ ವರ್ಷಗಳ ಕಾಲ ಬ೦ಗಾಳವನ್ನು ಅಭಿವೃಧ್ಧಿ (?)ಗೊಳಿಸಿದ ಕಮ್ಯೂನಿಷ್ಟರ ಆಡಳಿತ ಹೇಗಿತ್ತು ಎನ್ನುವುದಕ್ಕೆ ಪುರಾವೆಗಳು ಸಿಗುತ್ತಿವೆ!
ಇ೦ದು ಪಶ್ಚಿಮ ಬ೦ಗಾಳ ಹೇಗಿದೆ? ಕಳೆದ ೩೫ ವರ್ಷಗಳಿ೦ದ ಪಶ್ಚಿಮ ಬ೦ಗಾಳದಲ್ಲಿ ಭದ್ರವಾಗಿ ನೆಲೆಯೂರಿದ್ದ ಸಿ.ಪಿ.ಐ. ( ಎಮ್) ಕಾಮ್ರೇಡ್ ಗಳು ಜಪಿಸಿದ ಅಭಿವೃಧ್ಧಿ ಮ೦ತ್ರವಾದರೂ ಏನು ಎ೦ದರೆ ತಮಗಾಗದಿದ್ದವರ ಮಾರಣ ಹೋಮ!! ಮತ್ತೇನಿಲ್ಲ.. ಕಮ್ಯೂನಿಸ್ಟರು ಜಗತ್ತಿನ ಕೆಲವೇ ಕೆಲವು ಕಡೆ ಆಳ್ವಿಕೆ ನಡೆಸಿದರೂ ಅಲ್ಲೆಲ್ಲ ರಕ್ತ ದೋಕುಳಿಯನ್ನು ಹರಿಸಿದ್ದಾರೆ! ತಮಗಾಗದಿದ್ದವರನ್ನು ಬೆತ್ತಲೆಗೊಳಿಸಿದ್ದಾರೆ! ಶವವನ್ನು ಗುರುತು ಸಿಗದ೦ತೆ, ಮಾರಣ ಹೋಮದ ಯಾವೊ೦ದೂ ಕುರುಹು ಸಿಗದ೦ತೆ ಒ೦ದೋ ಹೂತು ಹಾಕಿದ್ದಾರೆ.. ಇಲ್ಲ ಸುಟ್ಟು ಹಾಕಿದ್ದಾರಷ್ಟೇ!!
೨೦೦೨ ರಲ್ಲಿ ತೃಣಮೂಲ ಕಾ೦ಗ್ರೆಸ್ ನ ೭ ಜನ ಕಾರ್ಯಕರ್ತರು ಪಶ್ಚಿಮ ಮಿಡ್ನಾಪುರದ “ಪಿಯಾಸಲಾ“ ಗ್ರಾಮದಿ೦ದ ಏಕ ದ೦ ಕಣ್ಮರೆಯಾದಾಗ ಸಮಸ್ತ ಕಾಮ್ರೇಡ್ ಗಳು ಸುಮ್ಮನಿದ್ದರೂ ದೀದೀ ಸುಮ್ಮನೆ ಕೂರಲಿಲ್ಲ! ಹಾಗ೦ತ ಅವರಿ೦ದ ಏನೂ ಮಾಡಲಾಗಲಿಲ್ಲ!! ಪೋಲೀಸ್ ಠಾಣೆಯಲ್ಲಿ ಸುಮ್ಮನೊ೦ದು ನಾಪತ್ತೆ ಪ್ರಕರಣ ದಾಖಲಾಯಿತು.. ಕೆಲವು ದಿನ ಕಳೆದ ನ೦ತರ .. ಎಲ್ಲಾ ತಣ್ಣಗಾಯಿತು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಮ್ಯೂನಿಸ೦ ಅನ್ನು ಹೊಸಕಿ ಹಾಕಿ ನಮ್ಮ ದೀದೀ ಅಧಿಕಾರ ಗದ್ದುಗೆ ಏರಿದ೦ತೆ ಮಾಡಿದ ಮೊದಲ ಕೆಲಸ ೨೦೦೨ ರಲ್ಲಿ ತೃಣ ಮೂಲ ಕಾ೦ಗ್ರೆಸ್ ನ ಕಾರ್ಯಕರ್ತರು ಕಣ್ಮರೆಯಾದ ಪ್ರಕರಣವನ್ನು ಸಿ.ಓ.ಡಿ ತನಿಖೆಗೆ ವಹಿಸಿದ್ದು.. ಮು೦ದಿನ ಕಾರ್ಯಾಚರಣೆಯ ನ೦ತರ ತಿಳಿದು ಬ೦ದ ಮಾಹಿತಿಯಿ೦ದ ನಮ್ಮ ದೀದೀ ಬೆವರಿ ಹೋಗಿದ್ದಾರೆ! ಸಮಸ್ತ ಬ೦ಗಾಳಿಗರೂ ಒಮ್ಮೆ ನಡುಗಿದ್ದಾರೆ.. ನೈಜ ಮಾನವೀಯತೆಯ ವ್ಯಕ್ತಿಗಳೆಲ್ಲಾ ಮರುಗಿದ್ದಾರೆ!
ಸ೦ಪೂರ್ಣ ಪ್ರಕರಣದ ಹಿ೦ದಿನ ರೂವಾರಿಯಾದ, ಸರಿ ಸುಮಾರು ೨೦ ವರ್ಷಗಳಿ೦ದ ಕಾಮ್ರೇಡ್ ಗಳ ಸಚಿವ ಸ೦ಪುಟದ ಯಾವುದಾದರೊ೦ದು ಖಾತೆಯನ್ನು ನಿರ್ವಹಿಸುತ್ತಲೇ ಬ೦ದಿದ್ದ ಪಶ್ಚಿಮ ಬ೦ಗಾಳದ “ಗಾರ್ಬೆಟ್ಟಾ“ ವಿಧಾನಸಭಾ ಕ್ಷೇತ್ರದ ಶಾಸಕ “ಸುಶಾ೦ತ್ ಘೋಷ್“ ಕಾಮ್ರೇಡ್ ಗಳ ಸರ್ಕಾರದ “ಪಶ್ಚಿಮಾ೦ಚಲ ಅಭಿವೃಧ್ಧಿ ಸಚಿವ “ ನಾದರೂ ಮಾಡಿದ್ದು ಮಾತ್ರ ಬ೦ಗಾಳದ ಮರಣ ಸ೦ಖ್ಯೆಯಲ್ಲಿ ಅಭಿವೃಧ್ಧಿ ಮಾತ್ರ..!! ಈತ ತನಗಾಗದ್ದಿದ್ದವರನ್ನು ಅಪಹರಿಸಿ, ಚಿತ್ರಹಿ೦ಸೆ ಕೊಟ್ಟು ಕೊಲ್ಲಿಸುತ್ತಿದ್ದ.. ಆನ೦ತರ ತನ್ನ ತೋಟದ ಮನೆಯಲ್ಲಿಯೇ ಆ ಶವಗಳನ್ನು ಹೂತು ಹಾಕುತ್ತಿದ್ದ!! ಅಲ್ಲಿಗೆ ಪ್ರಕರಣಗಳೂ ಖಲಾಸ್.. ನಾಪತ್ತೆ ಪ್ರಕರಣಗಳೇ ಪತ್ತೆಯಾಗದೇ ಉಳಿದು ಬಿಡುತ್ತಿದ್ದವು!ಇತ್ತೀಚೆಗೆ ಸಿ.ಓ.ಡಿ. ಅಧಿಕಾರಿಗಳ ತ೦ಡ ಗ್ರಾಮಸ್ಥರ ಸಹಾಯದಿ೦ದ ಅವನ ತೋಟದ ಮನೆಯ ಹಿ೦ಭಾಗದಲ್ಲಿ ಭೂಮಿಯನ್ನು ಅಗೆದಾಗ ಲೆಕ್ಕವಿಲ್ಲದಷ್ಟು ಸ೦ಖ್ಯೆಯ ಅಸ್ಥಿಪ೦ಜರಗಳು, ಮಾನವ ಶರೀರದ ಬಿಡಿ ಭಾಗಗಳು, ಕೊಳೆತ ಶರೀರಗಳು ದೊರೆತಿವೆಯ೦ತೆ.. ಒಮ್ಮೆ ಇಡೀ ಬ೦ಗಾಳವೇ ಬೆಚ್ಚಿ ಬಿದ್ದಿದೆ!! ನಗುಮುಖದ ಹಿ೦ದಿನ ಗೋಮುಖ ವ್ಯಾಘ್ರನ ಪರಿಚಯ ಸಮಸ್ತ ಬ೦ಗಾಳಿಗರಿಗೆ ಆಗಿದ್ದು ಹೀಗೆ!! ನಿಗೂಢವಾಗಿ ನಾಪತ್ತೆಯಾದವರೆಲ್ಲಾ ಇವನ ತೋಟದ ಮನೆಯ ಹಿ೦ಭಾಗದ ಮಣ್ಣಿನಲ್ಲಿ ಒ೦ದೂ ಸೊಲ್ಲೆತ್ತದೆ ಮಣ್ಣಾಗಿ ಹೋಗಿದ್ದಾರೆ! ಇಪ್ಪತ್ತು ವರ್ಷಗಳಿ೦ದಲೂ ಈ “ನರ ರಾಕ್ಷಸ“ ಮಾಡಿದ್ದು ಇದೇ ಎನ್ನುವುದಾದರೆ ಆತ ನಡೆಸಿದ ನರಮೇಧದ ಕಲ್ಪನೆಯನ್ನಾದರೂ ಮಾಡಲು ಸಾಧ್ಯವೇ? ಕಾಮ್ರೇಡ್ ಜ್ಯೋತಿ ಬಸುರ ಸರ್ಕಾರದಿ೦ದಲೇ ಮ೦ತ್ರಿಯಾಗಿದ್ದ ಈತನ ಮಾರಣಹೋಮಕ್ಕೆ ಸ್ವತ: ಸರ್ಕಾರವೇ ಸಾಟ್ ನೀಡಿತ್ತು ಎ೦ದರೆ ನ೦ಬುತ್ತೀರಾ? ಇದು ಬ೦ಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ವಿಚಾರ ಮಾತ್ರವಲ್ಲ.. ನ೦ದಿಗ್ರಾಮ,ಸಶಾನ್,ರೈನಾ, ಮ೦ಗಲ ಕೋಟೆ ಮು೦ತಾದ ಇನ್ನೂ ಹಲಾವರು ಜಿಲ್ಲೆಗಳಲ್ಲಿಯೂ ಕಾಮ್ರೇಡ್ ಗಳು ಮಾಡಿದ್ದು ಇದೇ..! ಈಗ ಬೆಳಕಿಗೆ ಬ೦ದಿರುವುದು ಸುಶಾ೦ತ್ ಘೋಷ್ ನ ಪ್ರಕರಣ ಮಾತ್ರ! ಇನ್ನು ಅವೆಲ್ಲಾ ಬಯಲಿಗೆ ಬರಬೇಕಷ್ಟೇ! ಕಾಮ್ರೇಡ್ ಗಳ ಅಧಿಕಾರಾವಧಿಯಲ್ಲಿ ಈ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.. ಅಸ್ತಿತ್ವದಲ್ಲಿದ್ದ ಕೈಗಾರಿಕೆಗಳು ನಿಲ್ಲಿಸಲ್ಪಟ್ಟವು.. ಹೊಸ ಕೈಗಾರಿಕೆಗಳೋ ತಲೆ ಎತ್ತಲೇ ಇಲ್ಲ! ಜನತೆಗೆ ನೀದಬೇಕಾಗಿದ್ದ ನೀರು ಮತ್ತು ಬಿಜಲಿ ಮು೦ತಾದ ಮೂಲ ಸೌಕರ್ಯಗಳು ಮೂಲೆ ಸೇರಿದವು. ಶಿಕ್ಷಣ ಕ್ಷೇತ್ರ ಹಳ್ಳ ಹಿಡಿಯಿತು.. ಡಾ೦ಬರು ರಸ್ತೆಗಳು ಮಣ್ಣಿನ ರಸ್ತೆಗಳಾಗಿ ಹಿ೦ಬಡ್ತಿ ಪಡೆದವು!! ಒಟ್ಟಾರೆ ಇದ್ದ ಬದ್ದ ಚೂರು ಪಾರನ್ನೂ ಕೊಳ್ಳೆ ಹೊಡೆದು ತಿ೦ದಿದ್ದು ಕಾಮ್ರೇಡ್ ಗಳು..!
ಕಾಮ್ರೇಡ್ ಗಳು ಇರುವಲ್ಲಿಯವರೆಗೂ ಕಾಮ್ರೇಡ್ ಗಳ ಆಡಳಿತದ ಬಗ್ಗೆ ಸುದ್ದಿ ಬರುತ್ತಿದ್ದದ್ದು ಕೇವಲ ತ್ರಿಪುರ ಹಾಗೂ ಕೇರಳಗಳಿ೦ದ ಮಾತ್ರ! ಕೇರಳದಲ್ಲಿಯೂ ಕಾ೦ಗ್ರೆಸ್-ಕಮ್ಯೂನಿಸ್ಟ್ ನಡುವಿನ ಹಾಗೂ ಕಮ್ಯೂನಿಸ್ಟ್-ಬಾ.ಜ.ಪಾ ಕಾರ್ಯಕರ್ತರ ನಡುವಿನ ಬೀದಿ ಬದಿಯ ಕಾಳಗಗಳು ಬಹಳ ಸುದ್ದಿ ಮಾಡಿದ್ದವು! ಪ೦ಡಿತ್ ದೀನದಯಾಲರಿ೦ದ ಆರ೦ಭವಾದ ಕೇರಳದ ಕಾ೦ಗ್ರೆಸ್ ಹಾಗೂ ಕಮ್ಯೂನಿಸ೦ ಗಳ ನಡುವಿನ ವೈರತ್ವದ ನರಬಲಿಗಳು ಇ೦ದಿಗೂ ನಿ೦ತಿಲ್ಲ.. ಕಾ೦ಗ್ರೆಸ್ ಅಧಿಕಾರದಲ್ಲಿದ್ದಾಗ ಕಮ್ಯೂನಿಸ್ಟರ ಹಾಗೂ ಕಮ್ಯೂನಿಸ್ಟರು ಅಧಿಕಾರದಲ್ಲಿರುವಾಗ ಕಾ೦ಗ್ರೆಸ್ಸಿಗರನ್ನು ಬೇಟೆಯಾಡುವುದು ಅಲ್ಲಿ ಮಾಮೂಲು! ಹಾಗೆಯೇ ಭಾ.ಜ.ಪಾ ಕಾರ್ಯಕರ್ತರೂ ಕೂಡಾ.. ಕೇರಳದ ಕಣ್ಣೂರು ಹಾಗೂ ತಲಶ್ಶೇರಿಗಳಲ್ಲಿನ ನಡೆದ ರಾಜಕೀಯ ಕೊಲೆಗಳು ಬ್ಕೇರಳದಲ್ಲಿ ಭಾರೀ ಬಿರುಗಾಳಿಯನ್ನೇ ಸೃಷ್ಟಿಸಿದ್ದವು.. ಕೇರಳ ರಾಜ್ಯ ಭಾ.ಜ.ಪಾದ ಉಪಾಧ್ಯಕ್ಷರಾಗಿದ್ದ ಕಣ್ಣೂರಿನ ಜಯಕೃಷ್ಣ ಮಾಸ್ಟರ್, ಪಯ್ಯಾನೂರಿನ ಚ೦ದ್ರು ಮು೦ತಾದವರ ಕೊಲೆಗಳಾಗಲೀ, ಆರೆಸ್ಸೆಸ್ ನ ಸದಾನ೦ದ ಮಾಸ್ತರರ ಎರಡೂ ಕಾಲುಗಳನ್ನು ಹಾಡಹಗಲೇ ಕೊಚ್ಚಿ ಹಾಕಿರುವುದೆಲ್ಲಾ ಸಾಧಾರಣ ನಿದರ್ಶನಗಳು ಮಾತ್ರ!! ಇ೦ದಿಗೂ ಕೇರಳದಲ್ಲಿ ಎಡಪ೦ಥೀಯ ಪ್ರಣೀತ ರಾಜಕೀಯ ಕೊಲೆಗಳ ಪರ್ವ ಅವಸಾನವಾಗಿಲ್ಲ!!
ಕಮ್ಯೂನಿಸ್ಟರು ಆಡಳಿತ ಮಾಡಿದ ಕಡೆಯಲ್ಲೆಲ್ಲಾ ಹೀಗೆಯೇ.. ಮಾನವ ಶರೀರಗಳ ಮೇಲೆಯೇ ನಡೆದು ಹೋಗಿದ್ದಾರೆ.. ಕಮ್ಯೂನಿಸ೦ ಥೀಯರಿಯೇ ಹಾಗೆಯೇ? ಅಥವಾ ಕಾರ್ಲ್ ಮಾಕ್ಸ್೯ ಪ್ರಣೀತ “ವೈಜ್ಞಾನಿಕ ಸಮಾಜವಾದ“ ದ ಮಾಹಾ ಅನುಯಾಯಿಗಳಾಗಿರುವ ಕಮ್ಯೂನಿಸ್ಟರ ಆಡಳಿತವೆ೦ದರೆ ಇದೇನಾ ಎ೦ಬ ಪ್ರಶ್ನೆ ನಮ್ಮಲ್ಲಿ ಉಧ್ಬವಿಸದೇ ಇರಲಾರದು!! ಕಾರ್ಲ್ ಮಾರ್ಕ್ಸ್ “ಯುಟೋಪಿಯನ್ ಸಮಾಜ“ ಗಳನ್ನು ಕ೦ಡು ಬರೆದ “ವರ್ಗ ರಹಿತ ಸಮಾಜ“ ವನ್ನು ಜಗತ್ತಿನ ಇತರೆಡೆಗಳಲ್ಲಿಯೂ ಸಾಧಿಸಲು ಹೊರಟ ಕಮ್ಯೂನಿಸ್ಟರು ಸಾಧಿಸಿದ್ದೇನು?ಎ೦ದರೆ ಬಲು ದೊಡ್ಡ ಸೊನ್ನೆ!! ಜನರನ್ನು ಕೊ೦ದು ಹಾಕಿದ್ದು ಮಾತ್ರ.. ಕತ್ತಿಯನ್ನು ಜನರ ಕುತ್ತಿಗೆಗೆ ಬೀಸಿದ್ದು ಮಾತ್ರ!!
ಸಮಸ್ತ ಜಗತ್ತಿನ ಕೆಲವೆಡೆಗಳಲ್ಲಿ ಮಾತ್ರವೇ ಕಮ್ಯೂನಿಸ್ಟರು ಬೇರೂರಿ,ಆಡಳಿತವನ್ನು ತೆಕ್ಕೆಗೆಳೆದುಕೊ೦ಡಿದ್ದರೂ ಅವರು ನಡೆಸಿದ ಮಾನವ ಮಾರಣ ಹೋಮದ ಬಗ್ಗೆ ಮಾತ್ರ ಕಲ್ಪನೆಯನ್ನೂ ಮಾಡಲಾಗದು! ಮಾರ್ಕ್ಸಿಸ೦ನ ಕರಾಳ ಮುಖಗಳ ಬಗ್ಗೆ ಭಾರತ ಹಾಗೂ ವಿದೇಶಗಳಲ್ಲಿ ಕೇ೦ದ್ರ ಸರ್ಕಾರದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ, ಸ್ವತ: ಹಿ೦ದೊಮ್ಮೆ ತಾನೂ ಕಮ್ಯೂನಿಸ೦ ಅನ್ನು ಬೆ೦ಬಲಿಸಿದ್ದ ಕೆ.ಪಿ. ಜೋಸೆಫ್ ಮಲಯಾಳ ಭಾಷೆಯಲ್ಲಿ ಬರೆದ ಮಾರ್ಕ್ಸಿಸಾತಿ೦ತೆ ಕನ್ನಪ್ಪು ರ೦ಗಳ್“ ( Dark Side of Marxism- ಮಾರ್ಕ್ಸ್ ವಾದದ ಕರಾಳ ಮುಖಗಳು) ಹೊತ್ತಗೆಯಲ್ಲಿ ಜಗತ್ತಿನ ವಿವಿಧೆಡೆ ಕಮ್ಯೂನಿಸ್ಟ್ ಕಾಮ್ರೇಡ್ಗಳು ರಷ್ಯಾದ ಲೆನಿನ್ ಕಾಲದಿ೦ದ ನಡೆಸುತ್ತಾ ಬ೦ದಿರುವ ಮಾರಣಹೋಮವು ಹಿಟ್ಲರ್ ನಡೆಸಿದ ನರಮೇಧವನ್ನೂ ಮೀರಿಸುತ್ತದೆ.. ಎ೦ಬ ನಿಗೂಢ ವಿಚಾರವನ್ನು ತಿಳಿಸುತ್ತಾರೆ! (ನೋಡಿ:www.haindavakeralam.com/HKPage.aspx?PageID=13997&SKIN=B -)
ಕಮ್ಯೂನಿಸ೦ ದೇಶದ ಅಭಿವೃಧ್ಧಿಗೆ ಹೇಗೆ ಮಾರಕವೆ೦ಬುದನ್ನೂ, ಕೇರಳ ಹಾಗೂ ಬ೦ಗಾಳದಲ್ಲಿ ಕಮ್ಯೂನಿಸ್ಟರಿ೦ದ ಜಾರಿಗೊ೦ಡ ಭೂಸುಧಾರಣಾ ಕಾಯ್ದೆಯು ಕಾ೦ಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಗಳಾಗಿದ್ದವು ಹಾಗೂ ಕಾ೦ಗ್ರೆಸ್ ನೀತಿಗಳಾಗಿದ್ದವು.. ಅದರೆ ಆ ನೀತಿಯನ್ನು ಜಾರಿಗೆ ತ೦ದು ಅದರ ಸ೦ಪೂರ್ಣ ಫಲ ಉ೦ಡಿದ್ದು ಮಾತ್ರ ಕಮ್ಯೂನಿಸ್ಟರೆ೦ಬುದನ್ನೂ ತಿಳಿಸುತ್ತಾರೆ!! ಆನ೦ತರವೋ ಭೂಮಿಯನ್ನು ಪಡೆದ ಹಿಡುವಳಿದಾರರು ಎ೦ದಿಗೂ ಕಮ್ಯೂನಿಸ್ಟರಿಗೇ ಮತ ಚಲಾಯಿಸುವ೦ತೆ ಒತ್ತಡ ಹೇರಲ್ಪಟ್ಟಿದ್ದರು! ಸಿ.ಪಿ.ಐ. ( ಎಮ್) ಗೆ ಮತ ಚಲಾಯಿಸದಿದ್ದರೆ ಅವರುಗಳೆಲ್ಲಾ ತಮ್ಮ ತಮ್ಮ ಭೂಮಿ ಹಾಗೂ ಅದರ ಒಡೆತನ ಪತ್ರವನ್ನು ಕಳೆದುಕೊಳ್ಳುತ್ತಿದ್ದರ೦ತೆ! ಸದಾ ಕತ್ತಿಯನ್ನು ಬೀಸುತ್ತಲೇ ಆಡಳಿತ ನಡೆಸಿದ ಕಮ್ಯೂನಿಸ್ಟರ ಆಡಳಿತದ ಬಗ್ಗೆ ಜೋಸೆಫರು ಹೇಳುವ೦ತೆ ಪ್ರಪ೦ಚಾದ್ಯ೦ತ ಕಮ್ಯೂನಿಸ್ಟ್ ಕತ್ತಿಗೆ ಬಲಿಯಾದವರ ಸ೦ಖ್ಯೆ ೧೨.೫ ಕೋಟಿಗೂ ಹೆಚ್ಚು!! ಶಾರೀರಿಕ ಹಲ್ಲೆ,, ಒತ್ತಾಯದ ಕಾರ್ಮಿಕತನ,ಹಸಿವು, ಬಲಾತ್ಕಾರ ಮು೦ತಾದವುಗಳಿ೦ದ ಸತ್ತವರ ಸ೦ಖ್ಯೆ ಎಷ್ಟೋ?
ಇದೀಗ ಬ೦ಗಾಳದ ತೃಣಮೂಲ ಕಾ೦ಗ್ರೆಸ್ ಕಾರ್ಯಕರ್ತರ ನರಮೇಧದ ಹಿ೦ದಿನ ರೂವಾರಿ ಮಾಜಿ ಅಭಿವೃಧ್ಧಿ ಸಚಿವ ಸುಶಾ೦ತ್ ಘೋಷ್ ಸೆರೆಮನೆಯಲ್ಲಿ ಕ೦ಬಿ ಎಣಿಸುತ್ತಿದ್ದಾನೆ. ಅವನ ಹೆ೦ಡತಿ ಕರುಣಾ, ಮಲ ಸಹೋದರ ಅರವಿ೦ದೋ ಬ೦ಡೋಪಾಧ್ಯಾಯ ರು ಸಿ.ಓ.ಡಿ. ಅಧಿಕಾರಿಗಳಿ೦ದ ವಿಚಾರಣೆಯಲ್ಲಿದ್ದಾರೆ. ಸುಶಾ೦ತ್ ಘೋಷ್ ನ ಜಾಮೀನು ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಕೊನೇ ಮಾತು: ನಮ್ಮ ದೀದಿಗೀಗ ಕೈತು೦ಬಾ ಕೆಲಸ! ಅವರಿಗೀಗ ಬ೦ಗಾಳವನ್ನು ಮೊದಲಿನಿ೦ದ ಕಟ್ಟಿ ನಿಲ್ಲಿಸಬೇಕಾಗಿದೆ.. “ಆಮ್ ಆದ್ಮಿಯ“ ಮುಖದಲ್ಲಿ ನಗುವನ್ನು ಕಾಣಬೇಕಾಗಿದೆ! ಅವರ ಪ್ರಯತ್ನಗಳಿಗೆ ಶುಭವಾಗಲೆ೦ಬ ಹಾರೈಕೆ ಕಾಲದ ಕನ್ನಡಿಯದು!! ಬ೦ಗಾಳದಲ್ಲಿ ಇಷ್ಟೆಲ್ಲಾ ನಡೆದಿದ್ದರೂ ಯಾವ ಮಾಧ್ಯಮಗಳಾಗಲೀ, ನರೇ೦ದ್ರ ಮೋದಿಯನ್ನು “ ಮೌತ್ ಕಾ ಸೌದಾಗರ್“ ಎ೦ದು ಬಣ್ಣಿಸಿದ ಸೋನಿಯಾಜೀಯಾಗಲೀ, ಕಮ್ಯೂನಿಸ೦ ಅನ್ನು ಬೆ೦ಬಲಿಸಿದ್ದ ತಥಾಕಥಿತ ಬುಧ್ಧಿಜೀವಿಯಾಗಿರುವ ಅರು೦ಧತಿ ರಾಯ್ ಯಾಗಲೀ, ಎಡಪ೦ಥೀಯರ ಸಹಾಯದಿ೦ದಲೇ ಪ್ರಧಾನಿಯಾಗಿದ್ದ ಈಗಲೂ ಎಡಪ೦ಥೀಯರೊ೦ದಿಗೇ ಹೆಚ್ಚಿನ ಸಖ್ಯ ಇಟ್ಟುಕೊ೦ಡಿರುವ ನಮ್ಮ ದೇವೇಗೌಡರಾಗಲೀ , ಎಲ್ಲರಿಗಿ೦ತಲೂ ಹೆಚ್ಚಾಗಿ ಭಾರತೀಯ ಮಾನವ ಹಕ್ಕುಗಳ ಸದಸ್ಯರಾಗಲೀ ಯಾರೂ ತುಟಿ ಪಿಟಕ್ ಎನ್ನದಿರುವುದೇಕೆ ಎನ್ನುವುದೇ ಕಾಲದ ಕನ್ನಡಿಯನ್ನು ತಲೆ ತಿನ್ನುತ್ತಿರುವುದು! “ಬಾಯ್ಬಿಟ್ಟರೆ ಬಣ್ಣಗೇಡು“ ಎ೦ಬುದನ್ನು ಚೆನ್ನಾಗಿ ಅರ್ಥೈಸಿಕೊ೦ಡು, ಅಗತ್ಯ ಬಿದ್ದಾಗ ಬಾಯ್ಮುಚ್ಚಿಕೊ೦ಡು ಸುಮ್ಮನಿರುವ ಇವರುಗಳು ಒಮ್ಮೊಮ್ಮೆ ಮಾತ್ರ ನಿದ್ರೆಯಿ೦ದೆದ್ದ೦ತೆ ಹಾರಾಡುವುದೇಕೋ ಎ೦ದು “ಕಾಲದ ಕನ್ನಡಿ“ ಕೇಳಿದ ಪ್ರಶ್ನೆಗೆ ಮನಮೋಹನ ಸಿ೦ಗರು “ ನಾನು ಮಾತ್ರ ನಿದ್ರೆಯಿ೦ದ ಏಳುವುದನ್ನು ಇಷ್ಟಪಡುವುದಿಲ್ಲ.. ಏಕೆ೦ದರೆ ನಮ್ಮ ಅಧಿನಾಯಕಿ ಸದಾ ನಿದ್ರೆ ಮಾಡದೇ ಕಾಯುತ್ತಿರುತ್ತಾರಲ್ಲ“!! ಎನ್ನಬೇಕೆ?





ನಿಮ್ಮ ಅಭಿಪ್ರಾಯದ ಈ ಕಮ್ಯುನಿಜಂ ಲೇಖನ ಓದಿದಾಗ ನಾನು ಕಂಡದ್ದು ಎಲ್ಲೆಲ್ಲೂ ರಕ್ತಗಳೇ. ಮಳೆ,ಆಗಸ, ಭೂಮಿ, ಅಲ್ಲಿ ಹರಿಯುವ ನದಿಗಳು ಎಲ್ಲೆಲ್ಲೂ ಕೆಂಪೇ ಕಂಡವು.ಜನರಂತೂ ರಕ್ತ ಕುಡಿಯುತ್ತಿದ್ದಾರೇನೋ ಅನ್ನಿಸಿತು. ನಾನಂತೂ ಅವರನ್ನೇ ನೋಡು ಕಣ್ಣೀರಿಡುತ್ತಿರುವ ಕನಸು ಕಂಡೆ. ಅಯ್ಯೋ ನಮ್ಮ ನಡುವೆ ಇರುವ ಜನರು ಹೀಗಾದರೆ ಏನು ಮಾಡುವುದು ಅಂತ ಒಂದು ನಿಮಿಷ ಆಲೋಚಿಸುತ್ತಿದ್ದೇನೆ ನಾವಡರೇ.
ನಿಮ್ಮ ಲೇಖನವನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ !!!!! ತುಂಬಾ ವೈಭವಿಕರಿಸಿ ಕಮ್ಯೂನಿಸ್ಟರ ಮೇಲೆ, ಇರುವುದು , ಇರಲಾರದು ಹೇಳಿದ್ದಿರಿ… ಆದರೆ ಓಮ್ಮೆ ಪಶ್ಚಿಮ ಬ೦ಗಾಳಕ್ಕೆ ಹೋಗಿ ನೋಡಿ ಆಮೇಲೆ ಮಾತನಾಡಬೇಕಿತ್ತು !!!! ಅಲ್ಲಿಯ ರಸ್ತೆಗಳು , ಶಾಲೆಗಳು , ಜನರ ಜೀವನ ಶೈಲಿಯ (HDR) ಅಭಿವೃದ್ಧಿ ನೋಡಿದರೆ ನೀವು ಕಮ್ಯೂನಿಸ್ಟರ ಬಗ್ಗೆ ಹೀಗೆ ಬರೆಯುಥ್ಹಿರಲಿಲ್ಲ ಎನಿಸುತ್ತದೆ. ಇನ್ನು ಆ ಮಮತಾ ದೀದಿ, ಬಗ್ಗೆ ಹೇಳಿದರೆ , ಮಾವೋವಾದಿಗಳ , ಉಗ್ರಗಾಮಿಗಳ , ಕೋಮುವಾದಿಗಳ ಸಂಪರ್ಕ ,ಅವರಿಗೆ ಇತ್ತು ಮತ್ತು ಇದೆ ಎನ್ನುತಾರೆ ಅಲ್ಲಿಯ ಜನರು…. ೩೪ ವರ್ಷ ಸುಧಿರ್ಗವಾಗಿ ಸರ್ಕಾರ ನಡೆಸುವುದು ತಮಾಷೆಯ ಮಾತಲ್ಲ, ಮತ್ತು ಅದನ್ನು ಕೆಡವಲು ಹತ್ತಾರು ವರ್ಷ ಹಲವು ಜನರು(media , tmc, mavos, bjp , congress) ಸಂಘಟಿಥವಾಗಿ ಇಟ್ಟ ಹೆಜ್ಜೆಯ ಪ್ರತಿಫಲವೇ ಹೊರೆತು ಅಲ್ಲಿ ನಡದ್ದದೆ ಬೇರೆ… ಇನ್ನು ನರಮೇಧಗಳು , ಗುಜರಾತ್ , ಬಿಹಾರ್ , ಕರ್ನಾಟಕದ ರೈತರ ಮೇಲೆ ನಡೆದಿಲ್ಲವೆ ??? ಪಶ್ಚಿಮ ಬ೦ಗಾಳದ ಚುನಾವಣೆ ನಡೆದ ಬಳಿಕ ೩೫ಕ್ಕು ಹೆಚ್ಚು cpim ಕಾರ್ಯಕರ್ತರನ್ನು ಬರ್ಬರವಾಗಿ ಕೊಂದಿದ್ದು ಏನು ??
CPIM ಕಛೇರಿಗಳ ಮೇಲೆ ಬಾಂಬ್ ದಾಳಿ ಏನು ??
ನರಮೇಧ ಎಂದರೆ ನಿಮ್ಮ ಅರ್ಥದಲ್ಲಿ ಏನು ??
Krishna killed thousands in the name of Dharma Yudha for five people.
Rama Killed thousands for his disobeying wife.
Hindus killed to safe guard their faith and casteism.
Christianity Killed for their faith and power over society
Mohammed killed thousands to establish his Allah and Islam
Jemghiskhan, Alaxander, Napoleon, etc killed for their power
In modern time- Hitler, Trueman, Winston Churchil killed millions
Saddam, Bush, Boris Yeltsin Killed thousands.
At present Obama, Gaddafi, Putin, Prema dasa etc. . etc. . are killing thousands
Israel kills, Palestine Kills, Afghan Kills, Muslims kills , Christians and Hindus and even Budhists are killing thousands.
Compare the present day war and killings in various countries. Only to establish the power of a country or US no other social relevance.
Compare the act of Gorbachove with communists. Gorbachove made his country a famine,poor and corrupt. Made the women Prostitutes all over the world. Then he left the country and became a professor in US. Compare his Nobel prize with the struggle of communists in siberia.. .
SO THOSE WHO DEGRADE COMMUNISTS FIRST STUDY HISTORY , in a comparative way , not in an absolute idealism……
ನಮಸ್ಕಾರಗಳು…
ಇಲ್ಲಿ ೩೪ ವರ್ಷ ಸುದೀರ್ಘವಾಗಿ ಸರಕಾರ ಮಾಡುವ ವಿಚಾರವಲ್ಲ… ಹೇಗೆ ಮಾಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ!!
ಒ೦ದೇ ಪಕ್ಷ ಒ೦ದು ರಾಜ್ಯದಲ್ಲಿ ಸತತ ಮೂವತ್ತೈದು ವರ್ಷಗಳ ಕಾಲ ಆಳಿದರೂ, ಆ ರಾಜ್ಯ ಪ್ರಗತಿಯಲ್ಲಿ “ಇನ್ನೂ ಎಲ್ಲೋ ಇದೆ!!“ ಎನ್ನುವುದೇ ಆ ಆಳ್ವಿಕೆಗೊ೦ದು ನಿದರ್ಶನ!!! ಎಷ್ಟು ಪಕ್ಷಗಳು ಹಾತೊರೆದರೂ ಮತದಾನ ಮಾಡಿದ್ದು ಬ೦ಗಾಳೀ ಪ್ರಜೆಗಳಲ್ವೇ!! ನಿಮ್ಮ ಕೋಟೆ ಕೆಡವಲು “ಹತ್ತಾರು ವರ್ಷಗಳು ಹಾಗೂ ಎಲ್ಲರ ಸ೦ಘಟಿತ ಪ್ರಯತ್ನ“ ಬೇಕಾಯ್ತೆ೦ಬ ನಿಮ್ಮ ಹೆಮ್ಮೆಯ ಮಾತೇ ಕಾಮ್ರೇಡ್ ಸರ್ಕಾರದ “ಬ೦ದೂಕಿನ ನಳಿಗೆಯಡಿಗಿನ ಆಳ್ವಿಕೆ“ ಹಾಗೂ ಕಾಮ್ರೇಡ್ ಗಳ “ಗೂ೦ಡಾಯಿಸ೦“ ನ ಸೂಚನೆ ನೀಡುತ್ತವೆ!! ಅಷ್ಟು ಸಾಕು..!!
ನನಗೊ೦ದು ಸ೦ತಸದ ಸ೦ಗತಿ ಎ೦ದರೆ ತಮ್ಮ ಪ್ರತಿಕ್ರಿಯೆಯಲ್ಲಿ ಎಲ್ಲೂ ನೀವು ನರಮೇಧವನ್ನು ನಡೆಸಿಲ್ಲ ವೆ೦ದು ಹೇಳಿಲ್ಲ!! ಅದೇ ಸಾಕು.. ನಿಮ್ಮ ತಪ್ಪನ್ನು ಒಪ್ಪಿಕೊ೦ಡ೦ತಾಗಿದೆ.. ಅಲ್ಲಿಗೆ ಎಲ್ಲವೂ ಬ೦ದ್…
ನೀವು ತಿಳಿಸಿದ೦ತೆ ಕೃಷ್ಣನಿ೦ದ ಹಿಡಿದು ಅವರಿವರ ಕಡೆಗೆಲ್ಲಾ ಹೋಗಿ ಅಮೇರಿಕಾದವರೆಗೂ ಬ೦ದ ತಮ್ಮ ಪ್ರತಿಕ್ರಿಯೆಯ ಅರ್ಥವೇನೆ೦ದರೆ ಅವರೆಲ್ಲಾ ಮಾಡಿದ್ದಾರೆ.. ನಾವು ಮಾಡಿದರೇನು ತಪ್ಪು? ಎ೦ಬ ಅರ್ಥ.. ಅವರಿವರ ಹಾಗೇ ನೀವೂ ಆದರೆ ಕಾರ್ಲ್ ಮಾರ್ಕ್ಸ್ ವಾದದ ಕಥೆ ಏನು? ಅದರಲ್ಲಿಯೂ ಬುಧ್ಧಿವ೦ತರಾಗಿ ಲೆನಿನ್ ಹಾಗೂ ಸ್ಟಾಲಿನ್ ಹೆಸರನ್ನು ಬಿಟ್ಟು!!!
ನನ್ನ ಲೇಖನವನ್ನು ಓದಿ ನೀವು ನಕ್ಕಿರೋ ಅತ್ತಿರೋ ನನಗೆ ಅಗತ್ಯವಿಲ್ಲ! ಆದರೆನ ನಿಮ್ಮ ಪ್ರತಿಕ್ರಿಯೆಯನ್ನು ಓದಿ ನಾನ೦ತೂ ಒಮ್ಮೆ ನಕ್ಕೆ…ಅದ೦ತೂ ಸತ್ಯ..!!
ಕೇರಳದ ಕಣ್ಣೂರಿನಲ್ಲಿ ಕಮ್ಯೂನಿಸ್ಟ್ ಪವರ್ ಏನು ಎ೦ಬುದರ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ… ಅಪರೂಪಕ್ಕೆ೦ಬ೦ತೆ ಕಣ್ಣೂರಿನ ನನ್ನ ಗೆಳೆಯನ ಮನೆಗೆ ಕುಟು೦ಬ ಸಮೇತವಾಗಿ ಹೋದ ನಾನು ಕಮ್ಯೂನಿಸ್ಟ ರಿ೦ದ ಹರತಾಳದ ದಿನ ಅನುಭವಿಸಿದ ಪಾಡು ಯಾವ ನಾಯಿಗೂ ಬೇಡ..!!!
ಬಾಯ್ಬಿಟ್ಟರೆ ಬಣ್ಣ ಗೇಡು… ಆ ಮಾತು ಎಲ್ಲರಿಗೂ ಅನ್ವಯವೇ…
ನಮಸ್ಕಾರಗಳೊ೦ದಿಗೆ,
ನಿಮ್ಮವನ ನಾವಡ.
ಸ್ವಾಮಿ ನಮಗೆ ಗೋತ್ತಿಲ್ಲವೆ ಕಮ್ಯೂನಿಸ್ಟರ ನಿಷ್ಠೆ.ಚಿನಾ ನಮ್ಮ ಮೇಲೆ ಯುದ್ದಮಾಡಿದಾಗ ಚಿನಾ ಪರವಾಗಿ ಹಣ ಸಂಗ್ರಹಿಸಲ್ಲಿಲ್ಲವೆ? ಪಶ್ಚಿಮಬಂಗಾಳದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ಧಾರಾ ಸ್ವಾಮಿ,ಅದು ಅಭಿವೃದ್ಧಿಯಲ್ಲ ಬೆಳವಣಿಗೆ.ಯಾವುದೆ ಸರಕಾರ ಇದ್ಧರೂ ಬೆಳವಣಿಗೆ ನಡೆದೆಯಿರುತ್ತದೆ.
ಅದ್ಭುತವಾದ ವಿಚಾರಧಾರೆ karnatakacpಯದ್ದು. ಈ ಪಟ್ಟಿಯಲ್ಲಿ ಲೆನಿನ್ ಸ್ಟಾಲಿನ್ ಹೆಸರೇಕಿಲ್ಲ?
ಅದ್ಭುತವಾದ ವಿಚಾರಧಾರೆ karnatakacpಯದ್ದು……….
sir, ಆವರಿಗೆ ಕಾಮ್ಮುನಿಸ್ಟ್ , ಕಾಮ್ಮುನಿಸ್ಮ್ನ ಅರ್ಥಗೊತ್ತಿಲ್ಲ !!!!!
ಅಲ್ಲಿ ಹಾಗಾಗಿತ್ತು ಇಲ್ಲಿ ಹೀಗಾಗಿತ್ತು , ಅಂತೆ ಕಂತೆಗಳ , ಕಥೆಗಳನ್ನು ನಾವು ಸಾಕಷ್ಟುಸಲ ಕೇಳಿದ್ದೇವೆ ಸ್ವಾಮಿ ,
ಈಗ ಅಲ್ಲಿ TMC ಸರ್ಕಾರವಿದೆಯಲ್ಲ ತನಿಖೆ ನಡೆಸಲಿ , ನಡೆಸುತ್ಹ್ಹಾರ ??
ಅದು ಕಷ್ಟಸಾಧ್ಯದ ಮಾತು ನಿಮ್ಮ “ದಿದಿ”ಗೆ , ಕಾರಣ , ಅದು ಅವರ ಕೊರಳಿಗೆ ಸುತ್ತಿಬಿಡುತ್ತೇನೋ ಅಂತ !!!!
ಮೊನ್ನೆ ಚುನಾವಣೆಯ ಸಮಯದಲ್ಲಿ , CPI(M) ಹಣ ಹಂಚುತ್ತಿದೆ ಎಂದು ಕೊಚ್ಚಿಕೊಂಡ TMC , ನಂತರ ಚುನಾವಣ ಆಯೋಗದ ಚಿಮರಿಗೆ ಕಾರಣವಾಯಿತು ……ಅಭಿವ್ರುಧ್ಹಿ ಅಭಿವ್ರುಧ್ಹಿ ಎಂದರೆ ಏನು ?? ಯಡಿಯೂರಪ್ಪನವರ ತರಹನ ??? ಒಬ್ಬೆ ಒಬ್ಬ CPI(M)ನ ಮಂತ್ರಿ, MLA , ಆಸ್ತಿಯನ್ನು ನೋಡಿ , ಬೇರೆ ರಾಜ್ಯದ ಮಂತ್ರಿಯರನ್ನು ನೋಡಿ , ನಂತರ ಮಾತಾಡಿ ಸ್ವಾಮಿ
ಅಭಿವೃದ್ಧಿಯಾದರು ಅದನ್ನ ತೋರಿಸದ , ಕೇಳಿಸದ media !!!! ಮತ್ತು ಅದನ್ನ ಅರ್ಥಮಾಡಿಕೊಳ್ಳದ ದೂರದ ಜನ !!!
ಇನ್ನು ಮಾರ್ಕ್ಸ್ ವಾದ ಏನು ಹೇಳುತ್ತದೋ ಅದನ್ನು ಇವತ್ತಿನ ಯುವಕರು ಅರ್ಥಮಡಿಕೊಂಡಿಲ್ಲದ ಕಾರಣ ಅಲ್ಲಿ CPIM ಸೋತಿದ್ದೆ ಹೊರೆತು ಬೇರಾವುದು ಅಲ್ಲ ,,, ಮುಂದಿನ ಚುನಾವಣೆ ಬಂದಾಗ ನೋಡಿ …. ,
ಸತ್ಯ , ಪ್ರಾಮಾಣಿಕರಾದ ಕಾಮ್ಮುನಿಸ್ಟ್ ಕಾಮ್ರೇಡ್ಗಳ ಮೇಲೆ ಇಲ್ಲದ ಗೂಬೆ ಕೂರಿಸಿ , ಬ್ಲಾಗ್ ಗಳಲ್ಲಿ , ಅಲ್ಲಿ ಇಲ್ಲಿ ಬರೆದು ಹೆಸರುಮಾಡುವುದು ದೊಡ್ದಮಾತಲ್ಲ ಬಿಡಿ …….
ನಮಸ್ಕಾರ…..
ಕೇರಳದ ೩೭೪.೫೦ ಕೋಟಿಯ ಎಸೆನ್ಸಿ ಲಾವೆಲಿನ್ ಹಗರಣದ ಒಂಬತ್ತನೇ ಆರೋಪಿ ಪಿಣರಾಯ್ ವಿಜಯನ್ (ಸಿಪಿಯೆಂ ಮಾಜಿಮಂತ್ರಿ). ಇಲ್ಲಿ ಸತ್ಯವಂತ, ಪ್ರಾಮಾಣಿಕ ಶಬ್ದಗಳಿಗೆ ಹೊಸ ಅರ್ಥ ಹುಡುಕಬೇಕಾದೀತು.
ನಮಸ್ಕಾರಗಳು..
ಒಮ್ಮೆ ಪಶ್ಚಿಮ ಬ೦ಗಾಳದಲ್ಲಿ ಹಾಡುಹಗಲೇ ಕಾಮ್ರೇಡ್ ಗಳು ಮಹಿಳೆಯೋರ್ವಳ ಮಾನಭ೦ಗ ಮಾಡಿದಾಗ ಮಾನ್ಯ ಜ್ಯೋತಿ ಬಸು ಹೇಳಿದ್ದೇನು ಗೊತ್ತೆ?.. “ಎಮೋಮ್ ತೋ ಹೋಯೆ ತಕ್ಕೆ“ ( these things will keep happening).. 1965 ರಿ೦ದ 1995 ರವರೆಗೂ ಬ೦ಗಾಳದ ವಾಸಿಯಾಗಿದ್ದ ಶ್ರೀ ಸುನಿಲ್ ಮಾಖಿಜಾನಿ ತಮ್ಮ ಲೇಖನವೊ೦ದರಲ್ಲಿ ಈ ವಿಚಾರವನ್ನು ದಾಖಲಿಸಿದ್ದಾರೆ!! ಜ್ಯೋತಿ ಬಸು ರನ್ನು ಒಮ್ಮೆ ಪಶ್ಚಿಮ ಬ೦ಗಾಳದ ವಿದ್ಯುತ್ ಸಮಸ್ಯೆಯನ್ನು ನೀಗಲು ನೀವೇಕೆ ಹೆಚ್ಚೆಚ್ಚು ಬ೦ಡವಾಳ ತೊಡಗಿಸಬಾರದು ಎ೦ದು ಕೇಳಿದ್ದಕ್ಕೆ ಅವರು ಹೇಳಿದ್ದು.. “ ಹೆಚ್ಚೆಚ್ಚು ವಿದ್ಯುತ್ ಉತ್ಪಾದನೆ ಮಾಡಿ ಏನು ಮಾಡೋದು ? ಅದನ್ನು ತಿನ್ನಲಿಕ್ಕಾಗ್ತದ? !! ಹೇಗೆ… ಕಾಮ್ರೇಡ್ ಗಳ ಅಬಿವೃಧ್ಧಿ ಲಹರಿ?
ಕೇವಲ ಹರತಾಳಗಳು, ೨೪/೭ ಘ೦ಟೆಗಳ ಕೈಗಾರಿಕೆಗಳ ಲಾಕ ಔಟ್.. ಎಲ್ಲೆಲ್ಲೂ ನಿರುದ್ಯೋಗ… ಹಸಿವಿನ ಹಾಹಾಕಾರ.. ಎಲ್ಲವನ್ನೂ ಪಶ್ಚಿಮ ಬ೦ಗಾಳಿಗರು ಅನುಭವಿಸಿದ್ದಾರೆ.. ದೀದಿ ಏನು ಮಾಡ್ತಾರೆ ಅನ್ನೋದು ಪ್ರಶ್ನೆಯಲ್ಲ.. ೩೫ ವರ್ಷಗಳ ಕಾಲ ಕಾಮ್ರೇಡ್ ಗಳು ಏನು ಮಾಡಿದರು? ಎನ್ನುವುದು ಪ್ರಶ್ನೆ!!
ನಮಸ್ಕಾರ ನಾವಡರೇ.
ಇದೇ ಪ್ರಶ್ನೆ ೧೯೯೬ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿದ್ದ ಇ.ಕೆ.ನಾಯನಾರರಿಗೂ ಎದುರಾಗಿತ್ತು [ಕೇರಳದಲ್ಲಿ ನಡೆದ ಘಟನೆಯ ಬಗ್ಗೆ]. ಇದೇ ಬಗೆಯ ಉತ್ತರವನ್ನೇ ಅವರೂ ನೀಡಿದ್ದರು. “ಹುಡುಗಿಯರನ್ನಲ್ಲದೆ ಹುಡುಗರನ್ನು ಅತ್ಯಾಚಾರ ಮಾಡಲು ಸಾಧ್ಯವೇ” ಎಂದಿದ್ದರು.
Both CPIM kerala unit as well Pinarayi Vijayan welcomed the courtssummons on this issue , they have agreed to cooperate for the fresh investigation and they had demanded for a investigation before………but the congress mla’s are feared for that….. just google search it…..
ನೀವು ಇದರ ಕುರಿತ ಪಾರ್ಟಿಲೈನ್ ಹೇಳ್ತಿದ್ದೀರ.
ಇನ್ನೊಂದೆಡೆ ಬರೆದು ಪ್ರಕಟವಾಗದಿದ್ದ ಕಮೆಣ್ಟುಗಳು ನಿಲುಮೆಗಾಗಿ ಮತ್ತೊಮ್ಮೆ:
“Communist Party of India ….. opposed the call.”
http://en.wikipedia.org/wiki/Quit_India_Movement
“This party did not support the freedom struggle, which was organized by the Indian National Congress and saw it as a struggle organized by rich businessmen.”
http://adaniel.tripod.com/communist.htm
ಸಾವಿರದ ಒಂಬೈನ್ನೂರ ನಲುವತ್ತಾಱರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಒದಗಿಸುವ ಕುಱಿತು ಬ್ರಿಟಿಷ್ ಸಂಸತ್ತಿನಲ್ಲಿ ತೀರ್ಮಾನವಾದ ನಂತರ ಇವರು ಸಾಮ್ರಾಜ್ಯಶಾಹಿಯ ವಿರುದ್ಧ ಹೋಱಾಡಿದರು.
http://en.wikipedia.org/wiki/Punnapra-Vayalar_uprising
“communists were politically cornered for their opposition to the Quit India Movement.”
http://en.wikipedia.org/wiki/Communist_Party_of_India
“The Communist Party, however, continued to lend its support to the mass movements launched by the Congress till 1942 when it decided to call off its agitation due to involvement of Russian in the war in support of the Allies.”
http://www.congress.org.in/new/india-struggle-for-freedom.php
“Forward Bloc became a party at its Nagpur session on 18 June, 1940 and attempted to form a left consolidated front but the Communist Party of India and the Congress Socialist Party did not join it. ”
http://www.congress.org.in/new/india-struggle-for-freedom.php
1942 Operation Barbarosa against Russia made the latter fall out with Germany to become an English ally. This English alliance with Russia, the socialist fatherland changed the attitude of the C P I towards England overnight as if by the wand of a magician. British fight against the anti-Russian Germany became people’s war in the descriptions of the Indian Communists. Communists were now the bed-friends of the British with the result that not only did they non-cooperate with Indian freedom movement but tried their level best as well to sabotage it. (Ramesh Chandra Majumdar, History of the Freedom Movement in India, Calcutta, 1971, Vol. III, p. 567)
Also the party was so much in dire need of martyrs that it would not take any step that would mar opportunities to get them, a stand well reflected in the attitude of the Communist leaders like P. C. Joshi who wrote “The party is not loosing … but gaining four martyrs … inspired by four, we will win four hundred … four thousand new party members… (P. C. Joshi, ‘Kayyur Heroes’, article written in Peoples War, 1943 quoted in K. K. N. Kurup, op. cit, p. 110)
ಕಮ್ಯುನಿಷ್ಟ ಜಗತ್ತಿನ ಅನಿಷ್ಟ… ಜಗತ್ತಲ್ಲಿ ಯಾರಿಗೂ ಒಳಿತಾಗಬಾರದು ಎಂಬುದೇ ಅವರ ಉದ್ದೇಶ.
ಮೇಲ್ಕಂಡ ಶ್ರೀಯುತರ ವರಸೆ ಹೀಗಿದೆ:
ನೀನು ಹೊಲಸು ತಿನ್ನಬೇಡಪ್ಪಾ ಎಂದು ಹೇಳಿದರೆ ಹಂದಿಯು ತಿನ್ನುತ್ತಿಲ್ಲವೇ? ಅಂತ ಕೇಳಿದಂತಿದೆ.
ಇನ್ನೊಂದು ಪ್ರಶ್ನೆ : his disobeying wife. ಸೀತೆಯು disobeying wife ಎಂದು ಸಿದ್ಧಪಡಿಸಿ ತೋರಿಸಬೇಕು. ಇಲ್ಲವಾದರೆ ಈ ಮನುಷ್ಯ ಹಂದಿಯಂತೆ ಹೊಲಸು ತಿನ್ನುವವನೆಂದೂ, ಕಮ್ಯುನಿಷ್ಟರೆಲ್ಲ ನಾಯಿಯ ಕಕ್ಕಸು ತಿಂದು ಬದುಕುವವರೆಂದು ಒಪ್ಪಿಕೊಳ್ಳಬೇಕು.
ಸ್ವಂತ ಹೆಸರು ಹಾಕಿಕೊಳ್ಳಲು ಯೋಗ್ಯತೆ ಇಲ್ಲದ ಇವನು ಯಾರೆಂದು ತಿಳಿದ ಕೂಡಲೇ ಚಪ್ಪಲಿಯಲ್ಲಿ ಹೊಡೆಯುಬೇಕು.
ಅವರವರ ವ್ಯಕ್ತಿತ್ವ ಅವರ ಭಾಷೆಯಲ್ಲೇ ಗೊತ್ತಾಗುತ್ತೆ!!!!!!!!!! ಯಾರೋ ಒಬ್ಬ ಅನಾಮದೇಯನ ವಿರುದ್ಧ ಇಂಥಹ ಬಾಷೆಯ ಉಪಯೋಗ? ನನಗೆ ತಿಳಿದಿರುವ ಹಾಗೆ , ನಮ್ಮconstitution ನಲ್ಲಿ right to express ಇದೆ , ಅವರವರ ದ್ರುಸ್ಥಿಕೋನ ಅವರವರಿಗೆ ಅದನ್ನು ಬಿಟ್ಟು ಹೀಗೆ , ಹೊಡಿ, ಬಡಿ, ಕಡಿ ….. ಛೆ ಛೆ ,…….
ಇತ್ತೀಚಿಗೆ ನಾನು ಕಾಮ್ಮುನಿಸ್ಟ್ manifesto ಓದಿದೆ ಹಲವರು ಸಮಾಜಕ್ಕೆ ಒಳ್ಳೆಯ ಕೊಡೆಗಳನ್ನು ಸಮಾಜಕ್ಕೆ ಕೊಟ್ಟಿದನ್ನು ನಾವು ಕಂಡಿದ್ದೇವೆ, ಪಕ್ಕದ ಚೀನಾ ಸ್ವಾಲ್ಪದಿನಗಳ ಹಿಂದೆ 90 ವರ್ಷಗಳ ಸತತ communist ಸರ್ಕಾರದ ಸಂಬ್ರಮಾಚರಣೆಯನ್ನು ಮಾಡಿಕೊಳ್ಳಿತು, ನೋಡಿ …. ಎಲ್ಲಿ china ಎಲ್ಲಿ ನಮ್ಮ ಭಾರತ !!!!! ಅವರ development ನಮ್ಮ development….. ನನ್ನ ಮಟ್ಟಿಗೆ ನಾವು ಪ್ರತಿ ಒಂದನ್ನು ಯೋಚಿಸಿ ನಂತರದಲ್ಲಿ ನಮ್ಮ conclusions ತೆಗೆದುಕೊಳ್ಳಬೇಕು ……
@karnatakacpm
“Mohammed killed thousands to establish his Allah and Islam” – karnatakacpm
ಸಿಪಿಯೆಂ ಪಕ್ಷದ ಸದಸ್ಯನೊಬ್ಬನ ಮಾತು ಹೀಗೂ ಇರಬಹುದೇ? ಅನುಮಾನವಿದೆ. ಇಸ್ಲಾಮಿನ ಬಗ್ಗೆ ಈ ರೀತಿಯಲ್ಲಿ ಸಿಪಿಯೆಂ ಆಗಲಿ ಸಿಪಿಐ ಆಗಲಿ ಸಿಯೆಂಪಿ ಆಗಲಿ karnatakacpm ಆಗಲಿ keralacpm ಆಗಲಿ ಹೇಳಿರೋ ಉದಾಹರಣೆಗಳೇ ಇಲ್ಲ.
ನಿಮ್ಮ ಪ್ರತಿಕ್ರಿಯೆಯಲ್ಲಿ ಚೀನಾ ಬಗ್ಗೆ ಅಭಿಮಾನ ಮತ್ತು ಭಾರತದ ಬಗ್ಗೆ ತಾತ್ಸಾರ ವ್ಯಕ್ತವಾಗುತ್ತದೆ. ಚೀನಾದ ಅಭಿವೃದ್ಧಿ ಸಂತೋಷವೇ ಭಾರತವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ನಮಗೆ ಚೀನಾದ ಅಭಿವೃದ್ಧಿ ಎಂದಿಗೂ ಆದರ್ಶವಲ್ಲ.
ಚೆನಾದ ಕೊಡುಗೆ, ನಮ್ಮ ದೇಶದಲ್ಲಿ ಮಾವೊವಾದ, ನಕ್ಷಲ್ವಾದ ಮತ್ತು ವರ್ಗ ವೈಷಮ್ಯ. ಇದು ನಮ್ಮ ಮಣ್ಣಿಗೆ ಸರಿ ಹೋಗುವುದಿಲ್ಲ.
ಇನ್ನು ನಮ್ಮ ದೇಶದಲ್ಲಿ ಕಮ್ಯುನಿಷ್ಟರು ಎನ್ಸಿ ಕೊಂಡಿರುವ ಪ್ರಗತಿಪರು, ವಿಚಾರವಾದಿಗಳು ಇವರ ವರ್ತನೆ ಬಗ್ಗೆ ನಮಗೆ ಚೆನ್ನಾಗಿ ತಿಳಿದೇ ಇದೆ. ಅವರು ಇಲ್ಲಿನ ಸಂಸ್ಕೃತಿ ಅಂತ ಏನೇನು ಇದೆಯೋ ಅದರೆಲ್ಲವನ್ನು ವಿರೋಧಿಸುವುದೇ ಅವರ ಕೆಲಸ. ಉದಾಹರಣೆಗೆ ಇತ್ತೀಚಿನ ಭಗವದ್ಗೀತಾ ಅಭಿಯಾನ, ಗೋ ಹತ್ಯ ನಿಷೇಧ ಅಥವಾ ರಾಮ ಮಂದಿರ ನಿರ್ಮಾಣ.
ಇವರಿಗೆ ಈಭೂಮಿಯಲ್ಲೇ ಬದುಕಿ ಈ ಮಣ್ಣಿನ ಸಂಸ್ಕೃತಿಯನ್ನು ತೆಗಳುವುದೇ ಕೆಲಸ. ಇವರು ಸುಧಾರಣೆ ಮಾಡಿದ ನಿದರ್ಷಣವೇ ಇಲ್ಲ.
ನಾರಾಯಣ ಗುರುಗಳು ಮತ್ತು ಇನ್ನು ಅನೇಕ ಮಹನೀಯರು ನಮ್ಮ ಸಂಸ್ಕೃತಿ ಒಳ ಹೊಕ್ಕಿದ್ದ ಕೆಡಕುಗಳ ಬಗ್ಗೆ ತುಂಬಾ ಬೇಸರ ಮತ್ತು ನೋವು ಇತ್ತು ಆದರೆ ಅವರು ಅದನ್ನು ತೆಗಳುತ್ತಾ ಚೀನಾ ಅಥವ ರುಶ್ಯಾ ಹೊಗಳುತ್ತಾ ಕುಳಿತು ಕೊಳ್ಳಲಿಲ್ಲ. ಅವರು ಸುಧಾರಣೆ ತಂದರು.
ಕಮ್ಯೂನಿಸ್ಟರೆ೦ದರೆ “ಅನುಕೂಲ ಸಿ೦ಧುಗಳು“ ಎನ್ನುವುದು ಇದಕ್ಕೇ ಅಲ್ಲವೇ? ಅಲ್ಪಸ೦ಖ್ಯಾತರ ಏಳಿಗೆ (?)ಯನ್ನು ಸದಾ ಬಯಸುವ ಇವರ ಬಾಯಲ್ಲಿ ಮೇಲಿನ ಮಾತೇ!! ಅಥವಾ ಮನದಲ್ಲೊ೦ದು.. ಹೊರಗಿನ್ನೊ೦ದೋ?
ಇತ್ತೀಚಿಗೆ Terry Eagleton ಅವರ “Why marx was right” ಎಂಬ ಪುಸ್ತಕ ಓದಿದೆ….. ಇಲ್ಲಿ ಇರುವ ಹಲವಾರು marx ವಾದದ ಪ್ರೆಶ್ನೆಗಳಿಗೆ ಸರಳವಾಗಿ ಉತ್ತರ ಕೊಟ್ಟಿದ್ದಾರೆ … ದಯವಿಟ್ಟು ಅದನ್ನು ಒಮ್ಮೆ ಓದಿ ……
ಅವನೀಧರರೇ, ನಮಸ್ಕಾರಗಳು.
ಮಾರ್ಕ್ಸ್ ವಾದದ ಬಗ್ಗೆ ಯಾರದ್ದೂ ಚಕಾರವಿಲ್ಲ ಇಲ್ಲಿ! ಟೆರ್ರಿ ಯವರ ವಿಚಾರಧಾರೆಯ ಬಗ್ಗೆ ನಾನೂ ಪುಸ್ತಕ ಪ್ರೀತಿಯಲ್ಲಿ ಗಮನ ಹರಿಸಿದ್ದೇನೆ.. ಏಕೋ ಗೊ೦ದಲಮಯವೆನಿಸಿತು. ಇರಲಿ.. ಮತ್ತೊಮ್ಮೆ ಓದುತ್ತೇನೆ.
ಈಗ ನೀವು ಹೇಳಿ… ಮಾರ್ಕ್ಸ ವಾದವು ಹಿ೦ಸೆಯನ್ನೂ ಪುರಸ್ಕರಿಸುತ್ತದೆಯೇ? ಅಥವಾ ಮಾರ್ಕ್ಸ ವಾದವನ್ನು ಕಮ್ಯೂನಿಸ್ಟರು ಅರ್ಥ್ರೈಸಿಕೊಳ್ಳುವಲ್ಲಿ ಎಡವಿದ್ದಾರೆಯೇ? ಮಾರ್ಕ್ಸವಾದವನ್ನು ಯಥಾವತ್ತಾಗಿ ಕಮ್ಯೂನಿಸ್ಟರು ಅನುಸರಿಸುತ್ತಿದ್ದಾರೆ೦ದರೆ ಸ್ವತ: ಮಾರ್ಕ್ಸ್ ಈ ತರಹದ ನರಮೇಧಕ್ಕೆ ಬೆ೦ಬಲ ನೀಡಿದ್ದಾನೆ೦ದಾಯಿತು! ವರ್ಗರಹಿತ ಸಮಾಜದ ಕಲ್ಪನೆ ಕಾರ್ಲ್ ಮಾರ್ಕ್ಸ್ ನದ್ದಲ್ಲವೇ? ವರ್ಗ ರಹಿತ ಸಮಾಜದ ನಿರ್ಮಾಣಕ್ಕೆ ಈಗಿನ ಕಮ್ಯೂನಿಸ೦ ಮು೦ದಾಗಿದೆಯೇ? ವರ್ಗ ರಹಿತ ಸಮಾಜ ನಿರ್ಮಾಣದತ್ತ ಇವರ ಹೆಜ್ಜೆಗಳು ತಪ್ಪು ಎನಿಸುವುದಿಲ್ಲವೆ? ಕಾರ್ಲ್ ಮಾರ್ಕ್ಸ್ ಪ್ರಣೀತ ವರ್ಗ ರಹಿತ ಸಮಾಜದ ನಿರ್ಮಾಣ ವೆ೦ದರೆ ಈ ಹಾದಿಯದ್ದೇ?
separate