ವಿಷಯದ ವಿವರಗಳಿಗೆ ದಾಟಿರಿ

Archive for

24
ಸೆಪ್ಟೆಂ

ಸಂಸ್ಕೃತಿ ಸಂಕಥನ – ೬

ರಮಾನಂದ ಐನಕೈ

ಸಂಶೋಧನೆ ಅಂದರೆ ಏನು? ಇತ್ತೀಚಿನ ದಿನಗಳಲ್ಲಿ ಯಾರಾದರೂ ಸಂಶೋಧನೆ ಮಾಡಿದ್ದಾರೆ ಅಥವಾ ಪಿ.ಎಚ್.ಡಿ. ಪದವಿ ಪಡೆದಿದ್ದಾರೆಂದರೆ ನಗು ಬರುತ್ತದೆ. ನೌಕರಿ ಪಡೆಯಲು ಅಥವಾ ನೌಕರಿಯಲ್ಲಿ ಬಡ್ತಿ ಪಡೆಯಲು ಈ ಪಿ.ಎಚ್.ಡಿ. ಅರ್ಹತೆಯಾಗುತ್ತದೆಯೆಂಬ ಕಾರಣಕ್ಕೆ ಮಾಡುತ್ತಾರೆಯೇ ವಿನಾ ಆಸಕ್ತಿಗಾಗಿ ಅಲ್ಲ. ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನಾ ವಿಭಾಗಗಳಿಗೆ ಈ ದುರ್ಗತಿ ಬಂದಿದೆ. ಹಣ ಕೊಟ್ಟರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೇ ಪ್ರಬಂಧ ಬರೆದು ಪದವಿ ಕೊಡುತ್ತಾರೆ. ಪಿ.ಎಚ್.ಡಿ. ಎಂಬುದು ವ್ಯಾಪಾರವಾಗಿದೆ. ಸಂಶೋಧನೆಗೆ ಆಯ್ದುಕೊಳ್ಳುವ ವಿಷಯವಾದರೂ ಎಂಥದ್ದು. ಯಾರಿಗೂ ಪ್ರಯೋಜನವಾಗದ ವಿಷಯ. ಸಂಶೋಧನಾ ಪ್ರಬಂಧವನ್ನು ನೆಟ್ಟಗೆ ಮೂರು ಜನರು ಓದಲಾರರು. ಈ ರೀತಿಯ ಸಂಶೋಧನೆಗಳಿಂದ ಅಥವಾ ಸಂಶೋಧಕರಿಂದ ದೇಶಕ್ಕೆ ಏನಾದರೂ ಪ್ರಯೋಜನ ಇದೆಯಾ?

ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಶಿರಸಿಯ ಗಣಪತಿ ದೇವಸ್ಥಾನದ ಹತ್ತಿರವಿರುವ ಶಂಕರಹೊಂಡದ ಸ್ವಚ್ಛತಾ ಕಾರ್ಯಕ್ರಮ ನಡೆಯತ್ತಿತ್ತು. ಆಗ ಒಂದು ಪುಟ್ಟ ವಿಗ್ರಹ ಸಿಕ್ಕಿತು. ಕ್ಷಣಾರ್ಧದಲ್ಲಿ ಇಡೀ ಶಿರಸಿ ನಗರ ವ್ಯಾಪಿಸಿತು ಈ ಸುದ್ದಿ. ಅಷ್ಟರಲ್ಲಿ ಇತಿಹಾಸ ಸಂಶೋಧಕನೊಬ್ಬ ಅಲ್ಲಿಗೆ ಬಂದ ಆತ ಆಗಷ್ಟೇ ಅರೆಕಾಲಿಕ ಇತಿಹಾಸ ಉಪನ್ಯಾಸಕನಾಗಿ ಸೇರಿದವ. ಆಗಲೇ ಹೆಸರಿನ ಹಿಂದೆ ಪ್ರೊಫೆಸರ್ ಎಂದು ಬಳಸುತ್ತಿದ್ದ. ಆತ ಈ ವಿಗ್ರಹವನ್ನು ಕೂಲಂಕಶವಾಗಿ ಪರಿಶೀಲಿಸಿ ಅದರ ಕುರಿತು ಪತ್ರಿಕಾ ಪ್ರಕಟಣೆ ನೀಡಿದ.

ಮತ್ತಷ್ಟು ಓದು »

24
ಸೆಪ್ಟೆಂ

ನಿನ್ನೆ ಈಕ್ವಿನಾಕ್ಸ್…!

– ಹಂಸಾನಂದಿ

ನೆನ್ನೆ ಗೆಳೆಯರೊಡನೆ ಮಾತಾಡ್ತಾ ಹೇಳ್ದೆ – “ಇವತ್ತು ಈಕ್ವಿನಾಕ್ಸ್” ಅಂತ.

“ಹಂಗಂದ್ರೇನು” ಅಂದರು ಅವರು.

ಮತ್ತೆ ಶುದ್ಧ ಸಂಸ್ಕೃತದಲ್ಲಿ “ಇವತ್ತು ಶರದ್ ವಿಷುವ” ಅಂತ ಹೇಳ್ಬಹುದಿತ್ತು – ಅದರ ಬದಲು ಕೇಳಿದರೆ, ತಾನಾಗೇ ಅರ್ಥ ಆಗೋ ಅಂತಹ ಪದ ಯಾಕೆ ಹೇಳ್ಬಾದ್ರು ಅನ್ನಿಸಿ “ಸಮಹಗಲಿರುಳು” ಅಂದೆ.

ಪದದಲ್ಲೇ ಅರ್ಥ ಬಂತಲ್ಲ? ಅಂದ್ರೆ ಇವತ್ತು ರಾತ್ರಿ ಮತ್ತೆ ಹಗಲು ಒಂದೇ ಸಮ ಇರುತ್ತವೆ. ಬೆಂಗಳೂರು (ಅಥವಾ ಕರ್ನಾಟಕದಲ್ಲಿ ಯಾವ ಜಾಗ ಆದರೂ) ಭೂಮಧ್ಯರೇಖೆಗೆ ಬಹಳ ದೂರ ಇಲ್ಲದೇ ಇರೋದ್ರಿಂದ ಚಳಿಗಾಲಕ್ಕೂ ಬೇಸಿಗೇಗೂ ದಿನ ರಾತ್ರಿಗಳ ಅವಧಿ ತುಂಬಾ ಬದಲಾಗೋದಿಲ್ಲ. ಆದ್ರೆ, ಭೂಮಧ್ಯ ರೇಖೆಯಿಂದ ಹೆಚ್ಚು ಹೆಚ್ಚು ಉತ್ತರಕ್ಕೆ (ಅಥವಾ ದಕ್ಷಿಣಕ್ಕೆ) ಹೋದಹಾಗೆ ಕಾಲ ಬದಲಾದ ಹಾಗೆ ಹಗಲು ಹೆಚ್ಚಾಗೋದೂ, ಅಥವಾ ರಾತ್ರಿ ಹೆಚ್ಚಾಗೋದೋ ಸುಲಭವಾಗಿ ಗೊತ್ತಾಗುತ್ತೆ.

ಮತ್ತಷ್ಟು ಓದು »

24
ಸೆಪ್ಟೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 3 – ನಜ್ಜು ಗುಜ್ಜಾಗುವ ಪ್ರಹ್ಲಾದ

ಮನೆಯಲ್ಲೊಂದು ದಿನ ಯಾವುದೋ ಶುಭಕಾರ್ಯ ನಿಮಿತ್ತ ನೆರೆಕರೆಯವರು ಸೇರಿದ್ದರು. ನಮ್ಮ ಊರಿನತ್ತ ಯಾವುದೇ ಕಾರ್ಯಕ್ಕಾಗಿ ಭೇಟಿ ಕೊಟ್ಟರೆ ‘ಉಂಡೊಡನೆ ಊರು ಬಿಡುವ’ ಕ್ರಮವಿರುವುದಿಲ್ಲ.

ಆ ದಿನ ಸಂಜೆಯ ಹೊತ್ತಿಗೆ ತೆರಳುವವರು ತೆರಳಿದ ತರುವಾಯವೂ, ಕೆಲವರು ಸಮೀಪದವರು ಉಳಿದಿದ್ದರು. ಬಂಧುಗಳೂ ಇದ್ದರು.

ಊರಿನ ಹಲವು ಸಮಸ್ಯೆಗಳ, ಜನರ ನಡೆನುಡಿಯ ವಿಚಾರಗಳ ಚರ್ಚೆ ಮಾತುಕತೆಗಳಲ್ಲಿ ಆಗುತ್ತಿತ್ತು. ಅಂತೆಯೇ ಮಾತು ಮುಂದುವರಿದು ತಾಳಮದ್ದಳೆಯ ಕಡೆಗೂ ತಿರುಗಿತು. ಬರಿಯ ಮಾತಿನಿಂದ ಪಾತ್ರ ಪೋಷಣೆಯಾಗುವುದಿಲ್ಲ, ಸಜೀವ ಚಿತ್ರಣವಾಗುವುದಿಲ್ಲ ಎಂದು ಒಬ್ಬರು ಹೇಳಿದರು.

”ಪಾತ್ರ ಚಿತ್ರಣ ಬೇಕಾದರೆ ಬಯಲಾಟವನ್ನೇ ನೋಡಬೇಕು” ಎಂದರು ಇನ್ನೊಬ್ಬರು.

ಮಳೆಗಾಲ ಕಳೆದಿದ್ದು, ಮೇಳಗಳು ಹೊರಡುವುದಕ್ಕೆ ಇನ್ನೂ ಸಮಯವಿದ್ದುದಾಗಿ ನನ್ನ ನೆನಪು.
ಮತ್ತಷ್ಟು ಓದು »

24
ಸೆಪ್ಟೆಂ

ಅವನಲ್ಲಿನ ಅವಳ ಕಥೆ

-ಕಾಲಂ ೯

ಅವನು ಅವನಲ್ಲ, ಅವನು ’ಅವಳು’!

ಅವಳು? ನಿಜಕ್ಕೂ ಅವಳೇನಾ?

ಈ ಅವನಲ್ಲಿನ ಅವಳ ಕಥೆಯೇ – ಬದುಕು ಬಯಲು – ಹಿಜ್ಡಾ ಒಬ್ಬಳ ಆತ್ಮಕಥೆ.

ನಾಲ್ಕು ವರ್ಷದ ಹಿಂದಿನ ಮಾತು. ಗಾಂಧಿಬಜಾರಿನ ’ಅಂಕಿತ’ದಲ್ಲಿ ಗೆಳೆಯನೊಬ್ಬನ ಬರುವಿಕೆಗೆ ಕಾಯ್ತಾ ಇದ್ದೆ ಪುಸ್ತಕಗಳನ್ನು ತಡವುತ್ತಾ. . . . ಸಂಜೆ ೪ ರ ಸಮಯ, ಕಂಬತ್ತಳ್ಳಿ – ಪ್ರಭಾ ಇಬ್ಬರೂ ಇರಲಿಲ್ಲ. ಗಲ್ಲಾದಲ್ಲಿ ಕೂತ ಸಹಾಯಕ ಹುಡುಗಿಯೊಬ್ಬಳು ಕಿವಿಗೆ ಫೋನ್ ಹಚ್ಚಿಕೊಂಡಿದ್ದಳು. ನಾನು ಪುಸ್ತಕ ತಡವುತ್ತಿದ್ದ ಜಾಗದಿಂದ ಮತ್ತೂ ಒಳಗೆ ಹಿರಿಯೊಬ್ಬರು ಧಾರ್ಮಿಕ ಪುಸ್ತಕಗಳಲ್ಲಿ ಕಳೆದುಹೋಗಿದ್ದರು. ಆ ಕ್ಷಣ ಇಬ್ಬರು ಹಿಜ್ಡಾಗಳು ಅಂಕಿತದೊಳಗೆ ನುಗ್ಗಿದರು. ಫೋನಿನಲ್ಲಿದ್ದ ಗಲ್ಲಾದ ಹುಡುಗಿ ಗಲಾಟೆ ಮಾಡದಂತೆ ಸನ್ನೆ ಮಾಡಿದಳು. ನಾನು ಮತ್ತೂ ಒಳಗೆ ಹೋದರೂ ದೃಷ್ಟಿ ಇತ್ತಲೇ ನೆಟ್ಟಿದ್ದೆ. ಗಲ್ಲಾದ ಹುಡುಗಿ ಕೊಟ್ಟ ಐದೋ ಎರಡೋ ರೂಪಾಯಿ ಹಿಜ್ಡಾಗಳಿಗೆ ಸಮಾಧಾನ ತರಲಿಲ್ಲ. ಅವರು ತಮ್ಮ ನಖ್ರಾ ತೋರಿಸುತ್ತಲೇ ಪುಸ್ತಕಗಳಿಗೆ ಕೈ ಹಾಕಿದರು. ಮತ್ತೆ ಗಲ್ಲಾದ ಹುಡುಗಿ ಅದನ್ನೆಲ್ಲ ಮುಟ್ಟಬಾರದೆಂದು ತಾಕೀತು ಮಾಡಿದಳು. ಆಗ ಈ ಹಿಜ್ಡಾಗಳು ತಮಗೊಂದು ಪೆನ್ನು ಕೊಡುವಂತೆ ಕೇಳಿದರು. ಗಲ್ಲಾದ ಹುಡುಗಿ ನಿರಾಕರಿಸಿದಳಾದರೂ ಕೊನೆಗೆ ಇಬ್ಬರಿಗೂ ಒಂದೊಂದು ಪೆನ್ನು ಕೊಟ್ಟು ಸಾಗು ಹಾಕಿದಳು. ಒಳಗಿನಿಂದ ಇದೆಲ್ಲವನ್ನೂ ನೋಡುತ್ತಿದ್ದ ನನಗೆ ಅವರೇನಾದರೂ ಪೆನ್ನನ್ನು ಬಳಸಿಯೇ ಬಿಟ್ಟರೇ? ತಮ್ಮ ಅನುಭವಗಳನ್ನೆಲ್ಲ ಕೆತ್ತಿಯೇ ಬಿಟ್ಟರೆ? ಅಲ್ಲೇ ಪುಸ್ತಕಗಳಾಗಿ ಬಿದ್ದಿದ್ದ ಮೊಗಳ್ಳಿ, ಜೋಗಿ, ವಸುಧೇಂದ್ರ ಎಲ್ಲ ಏನಾಗಬಹುದು? ಎಂದೆಲ್ಲ ಅನ್ನಿಸಿತ್ತು. ಮತ್ತಷ್ಟು ಓದು »