ಹಳ್ಳಕ್ಕೆ ಬಿದ್ದವರ ಮೇಲೆ ಕಲ್ಲು ಹಾಕುವುದು ಯಾವ ಸೀಮೆ ಕನ್ನಡತನ ಸ್ವಾಮಿ?
-ಸುನಿಲ್ ಜಿ.ಆರ್
ಈ ನಡುವೆ ಕನ್ನಡ ಹೋರಾಟದ ಪೇಟೆಂಟ್ ತೆಗೆದುಕೊಂಡ ಹೈ-ಟೆಕ್ ಕನ್ನಡ ಓರಾಟಗಾರರ ‘ನುಡಿ ಮುತ್ತು’ಗಳಿಗೆ ಕೊನೆಯೇ ಇಲ್ಲದ್ದಾಗಿದೆ. ತರಕಾರಿ ಹೆಚ್ಚೋದ್ರಿಂದ ಹಿಡಿದು, ISROದವರು Mars Mission ಮಾಡಬೇಕೋ ಬೇಡವೋ ಎನ್ನುವವರೆಗೂ ಇವರ ಅಪ್ಪಣೆ ತಗೋಬೇಕು.ತಾವೂ ಕೆಲಸ ಮಾಡಲ್ಲ, ಮಾಡೋವ್ರಿಗೂ ಬಿಡಲ್ಲ.
‘ಅಸ್ಸಾಂ ಉಳಿಸಿ ಹೋರಾಟ ಸಮಿತಿ’ ಮೊನ್ನೆ ಬೆಂಗಳೂರಿನಲ್ಲಿ ಮಾಡಿರುವ ಪ್ರತಿಭಟನೆಗೆ ಸ್ವಾಗತಾರ್ಹ. ಎಲ್ಲೋ ಇರುವ ಅಸ್ಸಾಂಗೂ ಕರ್ನಾಟಕಕ್ಕೂ ಏನು ಸಂಬಂಧವೆಂದು ಕೇಳುವ ಇವರಿಗೆ, ನೆನ್ನೆ ಕಾಶ್ಮೀರ ಪಂಡಿತರ ಸ್ಥಿತಿ, ಇವತ್ತು ಅಸ್ಸಾಮಿಗಳದ್ದು, ನಾಳೆ ಕನ್ನಡಿಗರಾದ್ದಾಗಬಹುದೆಂಬ ಸರಳ ಆಲೋಚನೆಯೂ ಇಲ್ಲ.ಕಾಶ್ಮೀರ ಉರಿಯುತ್ತಿದ್ದಾಗ, ಅಸ್ಸಾಮಿಗಳು ಸುಮ್ಮನಿದ್ದರು. ಇಂದು ಅಸ್ಸಾಂ ಉರಿಯುತ್ತಿದ್ದಾಗ, ಕನ್ನಡಿಗರು ಸುಮ್ಮನಿದ್ದರೆ ನಾಳೆ ನಮಗೂ ಅದೇ ಗತಿಯಾಗುತ್ತದೆ.
ಕರ್ನಾಟಕದಲ್ಲೇ ಹಲವು ಸಮಸ್ಯೆಗಳಿರುವಾಗ ದೂರದ ಅಸ್ಸಾಂ ಸಮಸ್ಯೆಗೆ ಆದ್ಯತೆ ಯಾಕೆ ಎಂದು ಕೇಳಿದ್ದಾರೆ. ಅಲ್ಲ ಸ್ವಾಮಿ, ಕರ್ನಾಟಕದಲ್ಲಿ ಹಲವು ಸಾವಿರ ದಾರಿಗಳಿಂದ ಇವರು ಅದ್ಭುತ ಸೇವೆಗಳನ್ನು ಮಾಡುತ್ತಿರುವುದು ನಿಮ್ಮ ಕಣ್ಣಿಗೆ ಕಾಣಲ್ವೆ (ವನವಾಸಿ, ಏಕಲ್ ವಿದ್ಯಾಲಯ, ನೆಲೆ… ಇತ್ಯಾದಿ)? ಎಲ್ಲರಿಗೂ ‘misplaced priorities’ ಅಂತ ಬುದ್ದಿವಾದ ಹೇಳೋ ಇವರದ್ದು ‘dangerously misplaced priorities’ ಅಲ್ಲವೆ? ಮೊದಲು ಶತ್ರುಗಳನ್ನ ಹಿಡಿದು, ನಂತರ ಕಳ್ಳರನ್ನ ಹಿಡಿಬೇಕು.
ಎಲ್ಲಿದೇ ನಮ್ಮಲ್ಲಿ ಭಾರತೀಯತೆ?
-ಮಧುಚಂದ್ರ ಭದ್ರಾವತಿ
ಆಗಸ್ಟ್ ೧೫ರ ಸಂಭ್ರಮ ನೋಡಿ ಏನಾದ್ರು ಬರೆಯಲೇ ಬೇಕೆನಿಸಿತು. ೧೪ನೆ ತಾರಿಖು ಮಧ್ಯರಾತ್ರಿ ೧೧.೫೯ ರಿಂದ ೧೨.೦೦ಗೆ ಸರಿಯಾಗಿ ಗಡಿಯಾರದ ಮುಳ್ಳು ತಿರುಗಿದಾಗ ಮನೆಯ ಹೊರಗೆ ಪಟಾಕಿ ಶಬ್ಧದ ಅಬ್ಬರ ಕೇಳಿಸಿತು. ಒಂದರ್ಥದಲ್ಲಿ ಭಾರತ ಯಾವುದಾದರು ಕ್ರೀಡೆಯಲ್ಲಿ(ಕೇವಲ ಕ್ರಿಕೆಟ್ ಮಾತ್ರ) ವಿಜಯಿ ಆದರೆ ಆಚರಿಸುವ ಪಟಾಕಿಯ ಸಂಭ್ರಮ ಅದು. ಭಾರತೀಯರಿಗೆ ಭಾರತೀಯತೆ ಅರಿವು ಮೂಡುವುದು ಎರಡು ಸಂದರ್ಭದಲ್ಲಿ ಮಾತ್ರ ಒಂದು ಸ್ವತಂತ್ರ ದಿವಸದಂದು ಮತ್ತೊಂದು ಕ್ರಿಕೆಟ್ನಲ್ಲಿ ಗೆದ್ದಾಗ ಬಿಟ್ಟರೆ, ಸತ್ – ಪ್ರಜೆಗಳು ಉಳಿದ ೩೬೩ ದಿನ ಬೇರೆಯವರ ಗುಲಾಮರಗಿರುತ್ತಾರೆ. ಒಂದೆಡೆ ಮಾಹಿತಿ ತಂತ್ರಜ್ಞಾನವೆಂಬ ಗುಲಾಮ ಗಿರಿಯಲ್ಲಿ ಜ್ಞಾನಿಗಳು ಮತ್ತೊಂದೆಡೆ ಗಣಿಗಾರಿಕೆ,ಬ್ರಷ್ಟಚಾರ,ಸ್ವಜನ ಪಕ್ಷಪಾತ ಹೆಸರಿನಲ್ಲಿ ಅಜ್ಞಾನಿಗಳು.ಇಂತಹವರನ್ನು ತನ್ನ ಮಡಿಲಲ್ಲಿಟ್ಟು ಸಲಹುತ್ತಿರುವ ಕರುಣಾ ಮಾಯಿ ಭಾರತ ಮಾತೆ ಎಷ್ಟು ದಿನ ಸಹಿಸಿಯಾಳು?ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?!
– ಡಾ. ಅಶೋಕ್ ಕೆ.ಆರ್
ಕೆಲವು ದಿನಗಳ ಹಿಂದೆ ವಿಜಯ್ ಮಲ್ಯರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂಭತ್ತು ಲಕ್ಷ ಬೆಲೆಬಾಳುವ ಚಿನ್ನದ ಬಾಗಿಲನ್ನು ದಾನವಾಗಿ ನೀಡಿದ್ದಾರೆ. ತಿಂಗಳುಗಳ ಹಿಂದೆ ಅವರು ಹೊತ್ತಿದ್ದ ಹರಕೆಯಂತೆ ಅದು. ಮತ್ತೊಂದು ಬಾಗಿಲನ್ನು ದಾನವಾಗಿ ನೀಡುತ್ತಾರಂತೆ. ಕಿಂಗ್ ಫಿಷರ್ ಏರ್ ಲೈನ್ಸಿನ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡದ ಮಲ್ಯ ಲಕ್ಷಾಂತರ ರುಪಾಯಿಗಳನ್ನು ಹೀಗೆ ‘ದಾನ’ದ ರೂಪದಲ್ಲಿ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಗಾಗಿಸಿದೆ. ಇದೇ ದುಡ್ಡನ್ನು ಸಮಾಜದ ಕೆಳಸ್ತರದಲ್ಲಿರುವವರಿಗೆ ನೀಡಬಹುದಿತ್ತಲ್ಲ? ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಬಿಡಿ, ಮೊದಲನೆಯದು ಅವರ ವ್ಯವಹಾರಕ್ಕೆ ಸಂಬಂಧಿಸಿದ್ದು, ಎರಡನೆಯದು ಅವರ ಭಕ್ತಿಗೆ ಸಂಬಂಧಿಸಿದ್ದು. ಹರಕೆ ತೀರಿಸುವುದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅವರ ಮರ್ಜಿ. ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!ಹೊಸಬರಿಗೆ ಉದ್ಯೋಗವಕಾಶ -ಬಿಇ, ಬಿಟೆಕ್, ಎಂಇ, ಎಂಟೆಕ್, ಎಂಸಿಎ. – ಕನ್ನಡಿಗರಿಗೆ ಆದ್ಯತೆ
-ಅರವಿಂದ್
ಮೊಬ್ಯೆಲ್ ಟೆಕ್ನಾಲಜಿ ಕ್ಷೇತ್ರದಲ್ಲಿ ವಿಶ್ವದಲ್ಲೇ ಎರಡನೇ ಅತ್ಯುತ್ತಮ ಕಂಪೆನಿಯಾದ ರಿನೆಸೆಸ್ ಮೊಬ್ಯೆಲಿನಲ್ಲಿ ಉದ್ಯೋಗವಕಾಶ.
ಅಭ್ಯರ್ಧಿಗಳು ತಮ್ಮ ಪರಿಚಯ ಪತ್ರವನ್ನು ೩೦ನೇ ಆಗಸ್ಟ್ ೨೦೧೨ರ ಗುರುವಾರದೊಳಗೆ ಕೆಳಗಿನ ಮಿಂಚೆಗ ಕಳುಹಿಸಬೇಕು, ನಂತರ ಬರುವ ಅರ್ಜಿಗಳು ಮಾನ್ಯವಿರುವುದಿಲ್ಲ.
ವಿದ್ಯಾರ್ಹತೆ : ೨೦೧೨ ರ ಸಾಲಿನಲ್ಲಿ ಶ್ಯೆಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ.
ಕಾನೂನಿನಂಗಳ ೭ : ಗಂಡ-ಹೆಂಡತಿ ಉತ್ತರ ದಕ್ಷಿಣ- ವಿಚ್ಛೇದನ
-ಉಷಾ ಐನಕೈ ಶಿರಸಿ
ವಿವಾಹ ಒಂದು ಪವಿತ್ರ ಧಾರ್ಮಿಕ ಸಂಸ್ಕಾರ. ಇದರ ಹಿಂದೆ ಮದುವೆಯಾದ ಗಂಡು -ಹೆಣ್ಣಿಗೆ ಅವರದೇ ಆದ ಸಾಮಾಜಿಕ ಹಾಗೂ ಭಾವನಾತ್ಮಕ ಬದ್ಧತೆ ಇರುತ್ತದೆ. ಕಷ್ಟವಿರಲಿ, ಸುಖವಿರಲಿ ಗಂಡ-ಹೆಂಡತಿ ಸಮನಾಗಿ ಹಂಚಿ ಕೊಂಡು ಸಹಬಾಳ್ವೆ ನಡೆಸಬೇಕೆಂಬುದೇ ವಿವಾಹ ಬಂಧನದ ಹಿಂದಿರುವ ತತ್ವ. ಅದಕ್ಕಾಗೇ ಪತ್ನಿಗೆ ‘ಅರ್ಧಾಂಗಿ’ ಎಂದು ಕರೆದಿರುವುದು. ಆದರೆ ಆಧುನಿಕ ಯುಗದಲ್ಲಿ ಇದು ಸಾಧ್ಯವೇ? ಬದಲಾದ ಕಾಲ, ಆಧುನಿಕ ಶಿಕ್ಷಣ, ವೈಚಾರಿಕ ಸ್ವಾತಂತ್ರ್ಯ, ಸಮಾನತೆಯ ಹೋರಾಟ ಮುಂತಾದ ಬೆಳವಣಿಗೆಯಲ್ಲಿ ಸಾಂಪ್ರದಾಯಿಕ ಮೌಲ್ಯಗಳು ಉಳಿದುಕೊಳ್ಳಲು ಸಾಧ್ಯವೇ? ಆಧುನಿಕ ಸಂಪರ್ಕ, ವೈವಿಧ್ಯಮಯ ಮಾಧ್ಯಮಗಳು ಹಾಗೂ ವ್ಯಕ್ತಿ ಸ್ವಾತಂತ್ರ್ಯದ ಹಂಬಲಗಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ, ಸಹನೆ, ಸಹಬಾಳ್ವೆ ಸ್ವಾಭಾವಿಕವಾಗೇ ಶಿಥಿಲವಾಗತೊಡಗಿವೆ. ವೈಯಕ್ತಿಕ ಪ್ರತಿಷ್ಠೆ ದಿನದಿಂದ ದಿನಕ್ಕೆ ಗಂಡು-ಹೆಣ್ಣು ಇಬ್ಬರಲ್ಲೂ ಹೆಚ್ಚಾಗತೊಡಗಿವೆ. ಗಂಡ-ಹೆಂಡತಿಯ ನಡುವೆ ಹೆಚ್ಚು ವಯಸ್ಸಿನ ಅಂತರವಿದ್ದರೂ ಕಲಹ, ಅಂತರವೇ ಇಲ್ಲದಿದ್ದರೂ ಕಲಹ. ಹೀಗೆ ಹಲವಾರು ಕಾರಣಗಳಿಂದ ವಿವಾಹ ವಿಚ್ಛೇದನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ದಾಂಪತ್ಯದ ನಡುವೆ ವಿರಸ ಹಿಂದೆಯೂ ಇತ್ತು. ಆದರೆ ಆಗ ನ್ಯಾಯಾಲಯದ ಮೆಟ್ಟಿ ಲೇರುವ ಅವಕಾಶ ಮತ್ತು ಧೈರ್ಯ ಎರಡೂ ಇಲ್ಲವಾಗಿತ್ತು. ಅದರಲ್ಲೂ ಹೆಣ್ಣು ದನಿ ಇಲ್ಲದೇ ಸಹಿಸಿಕೊಂಡೇ ಬಾಳಬೇಕಾಗಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಚಿಕ್ಕ ಚಿಕ್ಕ ಕಾರಣಗಳಿಗೂ ಕಾನೂನಿಗೆ ಮೊರೆಹೋಗುವುದು ಸ್ವಾಭಾವಿಕವಾಗಿದೆ. ಮಹಿಳಾ ಶೋಷಣೆಯನ್ನು ತಪ್ಪಿಸುವ ಸಲುವಾಗಿ ಹುಟ್ಟಿ ಕೊಂಡ ಕಾನೂನುಗಳು ಇದಕ್ಕೆ ಅವಕಾಶ ಮಾಡಿ ಕೊಡುತ್ತಿವೆ.
ಬರ-ಜೋಳಿಗೆ
– ಅಕುವ
ಬಾನು ನೋಡುತಿದ್ದ ಉಳುವಾತ
ಹನಿಯಾದರೂ ಉದುರಲೆಂದೆ
ಮತ್ತೆ ಬಿಡದ ಗರ
ನಾಡಿಗೆಲ್ಲಾ ಬರ !
ಹೊರಟು ನಿಂತಿಹರು ನಮ್ಮವರು
ವಿದೇಶ ಯಾತ್ರೆಗೆ
ಪ್ರಾಯಶ: ಸೊರಗಿದವರಿಗೆ ತರಲೆಂದು
ಹಸಿವಾಗದ ಮಾತ್ರೆ !
ಮತ್ತಷ್ಟು ಓದು 
ಹೈದರಾಬಾದ್ ನಲ್ಲಿರುವ ಕನ್ನಡಿಗರೂ, ಬೆಂಗಳೂರಿನಲ್ಲಿರುವ ತೆಲುಗರೂ….
– ಬಿಂದುಮಾಧವಿ ಪಿ
ಈಗ ನಾನು ಯಾವ ವಿಷಯದ ಬಗ್ಗೆ ಬರೆಯಲಿ? ಮೊದಲಿಗೆ ಕನ್ನಡ ಚಲನಚಿತ್ರಗಳು ಇತರ ರಾಜ್ಯಗಳಲ್ಲಿ ಭಿತ್ತರವಾಗದಿರುವ ಬಗ್ಗೆ ಬರೆಯಲೋ ಅಥವಾ, ಕೊನೆಗೂ ತೆಲುಗು ಚಿತ್ರಕ್ಕೇ ಶರಣಾಗಬೇಕಾದ ನನ್ನ ಸ್ಥಿತಿಯ ಬಗ್ಗೆ ಬರೆಯಲೋ?
ನೋಡಿ ನಮಗಂತೂ ನಮ್ಮ ದೇಶ ಭಾಷೇ ಎರಡರ ಮೇಲೂ ಅಪಾರ ಪ್ರೀತಿ. ಆದರೆ ಏನು ಮಾಡುವುದು? ಬೆಂಗಳೂರಿನಲ್ಲಿ ಎಲ್ಲ ಭಾಷೆಗಳೂ ಯಾರ ಹಂಗಿಲ್ಲದೆ, ರಾರಾಜಿಸುತ್ತಿರುತ್ತವೆ, ಆದರೆ, ಇತರ ರಾಜ್ಯಗಳಲ್ಲಿ, ಅದೂ ನೆರೆ ರಾಜ್ಯಗಳಲ್ಲೂ ನಮಗೆ ಕನ್ನಡದ ಇರುವಿಕೆ ಭೂತಗನ್ನಡಿ ಹಿಡಿದು ಹುಡುಕಿದರೂ ಸಿಗುವುದಿಲ್ಲ. ಏಕೆ ಹೀಗೆ?
ನಾವೂ ಹೈದರಾಬಾದಿಗೆ ಬಂದು ನಾಲ್ಕು ವರ್ಷಗಳಾಗುತ್ತಾ ಬಂತು. ಚಿತ್ರರಂಗದಲ್ಲಿ ಕನ್ನಡ ಚಿತ್ರ ನೋಡುವ ಆಸೆ ಬಿಡಿ, ಟಿವಿಯಲ್ಲಿ ಕನ್ನಡ ಚಾನಲ್ ಹುಡುಕೋಣವೆಂದರೆ, ಒಂದಾರೂ ಸಿಗಬೇಡವೆ? ಇಲ್ಲವೇ ಇಲ್ಲ. ಹಾಗಂತ ಇಲ್ಲಿ ಕನ್ನಡಿಗರು ಇಲ್ಲವೆಂದಿಲ್ಲ. ನನಗೆ ಎಲ್ಲಿ ಹೋದರೂ ಕನ್ನಡಿಗರು ಸಿಗುತ್ತಿರುತ್ತಾರೆ. ನಮ್ಮ ಮಗಳ ಶಾಲೆಯಲ್ಲಿ ಪ್ರಾಂಶುಪಾಲರು ಕನ್ನಡಿಗರು, ಅವಳ ತರಗತಿಯ ಉಪಾಧ್ಯಾಯಿನಿ ಕನ್ನಡಿಗರು, ಇಲ್ಲಿ ವಿಧ್ಯಾರ್ಥಿಗಳಲ್ಲಿ ಕನ್ನಡಿಗರು ಯಾರು ಎಂದು ಕೇಳಿ ಅವರ ಪರಿಚಯವನ್ನೂ ಮಾಡಿಕೊಂಡು ಆಯಿತು. ಆದರೆ ಕನ್ನಡ ನ್ಯೂಸ್ ಪೇಪರ್ ಆಗಲಿ, ಕನ್ನಡದ ಪುಸ್ತಕಗಳಾಗಲಿ, ಕನ್ನಡದ CD ಗಳಾಗಲಿ ಇಲ್ಲಿ ದೊರಕುವುದಿಲ್ಲ. ಅದೇ ಬೆಂಗಳೂರಿನಲ್ಲಿ, ಅಲ್ಲಿ ಕೂಡ ಅನೇಕ ಪ್ರದೇಶಗಳಲ್ಲಿ ಕನ್ನಡ ಪೇಪರ್, ಕನ್ನಡ ಚಿತ್ರದ CD ಗಳು ದೊರಕುವುದಿಲ್ಲ!! ಆದರೆ ಇತರ ಭಾಷೆಯ ಪತ್ರಿಕೆಗಳು, cd ಗಳು, ಜನರು ಎಲ್ಲಾ ಸಿಗುತ್ತಾರೆ.
ನನ್ನ ಪ್ರೀತಿಯ ಸ್ಯಾಮ್ ಅಲೆ… ಅವಳು ಬೀಸಿದಳು ಬಲೆ…
-ಸುಗುಣ ಮಹೇಶ್
ನೀನು ತೀರಾ ಗಾಂಧಿವಾದಿ ಏನು ಆಗೋಕ್ಕೆ ಹೋಗಬೇಡ್ವೇ, ಸರ್ಕಾರ ಉದ್ದಾರ ಮಾಡೋಕ್ಕೆ ಹೋಗೋದು ಸಾಕು ಸುಮ್ನೇ ಮನೆನಲ್ಲಿ ಕಾರಿದೆ ಯಾರಾದ್ರು ಡ್ರೈವರ್ ಸಿಕ್ತಾರ ನೋಡು ದಿನದ ಬಾಟಾ ಕೊಟ್ಟು ಹೋಗಿ ಬರೋದು ಕಲ್ತಕೋ..!!!ಟಾಯ್ಲೆಟ್ ವಾಸು ಅಂದ್ರೆ ಯಾರು ಗೊತ್ತಾ?
-ಚಕ್ರವರ್ತಿ ಸೂಲಿಬೆಲೆ
”ಪ್ರಚಾರದ ಹೆಸರಲ್ಲಿ ಹೊಸಹೊಸ ಮಾರ್ಗಗಳನ್ನು ಹುಡಕಲಾಯ್ತು. ನಾಟಕಗಳು, ಕಥೆಗಳು, ಎಲ್ಲವೂ ಶೌಚಾಲಯದ ಕುರಿತಂತೆಯೇ. ಕುಂತರೂ ನಿಂತರೂ ಶೌಚಾಲಯಗಳೇ. ಕೊನೆಗೆ ಕನಸಿನಲ್ಲೂ ವಾಸು ದೇಶ್‌ಪಾಂಡೆ ಶೌಚಾಲಯವನ್ನೆ ಕಂಡಿದ್ದರೆ ಅಚ್ಚರಿಯಿಲ್ಲ! ಈ ಕಾರಣದಿಂದಲೇ ಸ್ಥಳೀಯ ಆರು ಜಿಲ್ಲೆಗಳಲ್ಲಿ ವಾಸು ದೇಶ್‌ಪಾಂಡೆ `ಟಾಯ್ಲೆಟ್ ವಾಸು’ವಾಗಿಯೇ ಜನಪ್ರಿಯರಾದರು”
ವಾಸು ದೇಶ್‌ಪಾಂಡೆ ಅಲಿಯಾಸ್ ಟಾಯ್ಲೆಟ್ ವಾಸು! ಗುಲ್ಬರ್ಗಾದ ಸೇಡಮ್ಮಿನ ಹುಡುಗ. ಬಡತನದಲ್ಲಿ ಬೆಳೆದ, ಕಷ್ಟಪಟ್ಟು ಓದಿದ. ಕೊನೆಗೆ ಇಂಜಿನಿಯರ್ರೂ ಆದ. ಇನ್ಫೋಸಿಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡು ಚೆನ್ನಾಗಿ ದುಡಿದ. ಇಷ್ಟೇ ಆಗಿದ್ದರೆ ಇದೊಂದು ಕನ್ನಡ ಫಿಲಮ್ಮಿನ ಕಥೆಯಂತಾಗಿ ಮುಗಿದುಹೋಗುತ್ತಿತ್ತು. ಹಾಗಾಗಲಿಲ್ಲ. ಊರಿನ ಕೆಲಸ ವಾಸುವನ್ನು ಬಿಡಲಿಲ್ಲ. ಬೆಂಗಳೂರು ಎಲ್ಲರನ್ನು ಕಾಡಿದಂತೆ ಮೋಹವಾಗಿ ಕಾಡಲಿಲ್ಲ.
ಉತ್ತರ ಕರ್ನಾಟಕಕ್ಕೆ ನೆರೆ ಹಾವಳಿ ಅಪ್ಪಳಿಸಿದಾಗ ಇನ್ಫೋಸಿಸ್ ಗುಲ್ಬರ್ಗಾದ ನೆರೆ ಪೀಡಿತ ಪ್ರದೇಶಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡಿತು. ಮನೆ ಕಟ್ಟಿಕೊಡುವ ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಮುಂದೆ ಬಂತು. ಸ್ಥಳೀಯವಾಗಿ ಸಾಥ್ ಕೊಡಲು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಂತಹ ಪ್ರಾಮಾಣಿಕ ಸಂಸ್ಥೆಯೇನೋ ಸಿಕ್ಕಿತು. ಆದರೆ ಈ ಕೆಲಸವನ್ನು ತನ್ನದೆಂದುಕೊಂಡು ಸಮರ್ಥವಾಗಿ ಮಾಡುವವರು ಯಾರಾದರೊಬ್ಬರು ಬೇಕಲ್ಲ? ಆಗ ಇನ್ಫೋಸಿಸ್‌ಗೆ ಕಂಡ ಬೆರಗುಗಣ್ಣಿನ ಇಂಜಿನಿಯರ್ ವಾಸು ದೇಶ್‌ಪಾಂಡೆ. ಅಮೆರಿಕಾದಲ್ಲೆಲ್ಲ ಇದ್ದು ಬಂದ ಹುಡುಗ; ಮತ್ತೆ ಮರಳಿ ಹೊರಡಲು ಸಜ್ಜಾಗಿದ್ದ. ಆದರೆ ಈಗ ಹೊಸತೊಂದು ಆಸಕ್ತಿಕರ ಯೋಜನೆ ಕೈಬೀಸಿ ಕರೆಯಿತು. ಹುಟ್ಟೂರಿನ, ಜಿಲ್ಲೆಯ, ಕೊನೆಗೆ ಹಿಂದುಳಿದ ಎಂಬ ಹಣೆಪಟ್ಟಿ ಹೊತ್ತ ತನ್ನ ಭಾಗದ ಸೇವೆ ಮಾಡುವ ಅವಕಾಶ ಬಯಸಿಬಂದಾಗ ಆಗುವುದಿಲ್ಲ ಎನ್ನುವುದು ಹೇಗೆ?
ಬಹುಮಾನ ನೋ! ಅಪಮಾನ ನೋ !!
ಮಧುಚಂದ್ರ ಭದ್ರಾವತಿ
ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ ಕೆಲವು ಹಿರಿಯ ಕವಿಗಳನ್ನು ಮತ್ತು ಖ್ಯಾತ ವಿಮರ್ಶಕರನ್ನು ಪತ್ರಕರ್ತರು ಸಂದರ್ಶಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಲು ಕೇಳಿ ಕೊಂಡರು. ಕೆಲವರು ಕನ್ನಡಕ್ಕೆ ಸಂದ ಬಹು ದೊಡ್ಡ ಗೌರವ ಎಂದು ಹೇಳಿ ಅಭಿನಂದಿಸಿದರು. ಮತ್ತೆ ಕೆಲವರು ತಮಗೆ ಪುರಸ್ಕಾರ ಸಂದಿಲ್ಲ ಎಂದು ಅವರನ್ನು ಹಿಯಾಳಿಸಿ ” ಜ್ಞಾನಪೀಠ ಪುರಸ್ಕಾರಕ್ಕೆ ಬೆಲೆಯೇ ಇಲ್ಲ , ಯಾರು ಬೇಕಾದರೂ ಪಡೆಯ ಬಹುದು ” ತುಂಬಾ ಕೆಳ ಮಟ್ಟದಲ್ಲಿ ಮಾತನಾಡಿದರು . ಅ ಹಿರಿಯ ಕವಿಗಳ ಹೆಸರು ಬೇಡ. ಯಾಕೆಂದರೆ ಅವರ ಸಾಧನೆಯು ಕಡಿಮೆ ಏನಿಲ್ಲ.
ಇದು ಕೇವಲ ಕಂಬಾರರಿಗೆ ತಟ್ಟಿದ ಬಿಸಿಯಲ್ಲ , ಅಂದು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಅವರು ಅದರ ಬಿಸಿಗೆ ಹೊರತಲ್ಲ. ಮತ್ತೊಬ್ಬ ಖ್ಯಾತ ಕವಿ “ನೀವು ಕುವೆಂಪುರವರನ್ನು ಕವಿ ಎಂದು ಕರೆದರೆ , ನಾನು ಸಹ ಕವಿಯಲ್ಲ ” ಎಂದು ಘಂಟಘೋಷವಾಗಿ ಸಾರಿ ಹೇಳಿದರು. ಹಾಗೆ ಕೆಲವು ನವೋದಯ ಕಾಲದ ಒಂದು ವರ್ಗದ ಕವಿಗಳು ಇದನ್ನು ಬೆಂಬಲಿಸಿ , ಕುವೆಂಪು ಅವರ ಮೇಲೆ ಹರಿಹಾಯ್ದರು,(ಅ ವರ್ಗದ ಕವಿಯೋಬ್ಬರಿಗೆ ಕೊನೆಗೂ ಜ್ಞಾನಪೀಠ ಪ್ರಶಸ್ತಿ ಸಂದಿತು ಎನ್ನುವುದು ಇಲ್ಲಿ ಉಲ್ಲೇಖಾರ್ಹ ). ಕೊನೆಗೆ ಕುವೆಂಪು ಅವರಿಗಿದ್ದ ಅಭಿಮಾನಿಗಳ ಬೆಂಬಲ ನೋಡಿ,ಅವರೆಲ್ಲರೂ ಸುಮ್ಮನಾದರು. ಇದೆ ರೀತಿಯ ಅನುಭವ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಕೂಡ ಬಾಯಿ ಹದಗೆಡಿಸಿಕೊಂಡ ಕವಿ ವರ್ಗವು ಇತ್ತು.
ಕವಿಗಳನ್ನು ವಿಶಾಲ ಹೃದಯಿಗಳು ಎನ್ನುತ್ತಾರೆ ಯಾವ ಸಂಧರ್ಭದಲ್ಲಿ ಎನ್ನುವುದು ಇಲ್ಲಿ ಅಪವಾದವಾಗಿ ಬಿಟ್ಟಿದೆ.
ಇದಕ್ಕೆ ಟಾಂಗ್ ಕೊಡುವ ಸಂಧರ್ಭವೊಂದು ತುಂಬಾ ಹಿಂದೆ ಜರುಗಿತ್ತು. ಇಲ್ಲಿ ಉಲ್ಲೇಖಿಸುವುದು ಉಚಿತವೆನಿಸುತ್ತದೆ.
ಬೇಡರ ಕಣ್ಣಪ್ಪ ಚಿತ್ರದ ಹಾಡು ” ಶಿವಪ್ಪ ಕಾಯೋ ತಂದೆ , ಮೂರು ಲೋಕ ಸ್ವಾಮಿ ದೇವ ” ಎಲ್ಲರಿಗು ಚಿರಪರಿಚಿತವಾದುದು. ರಾಜಣ್ಣ ಅವರು ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟ ಚಿತ್ರ. ಅ ಚಿತ್ರದ ” ಶಿವಪ್ಪ ಕಾಯೋ ತಂದೆ , ಮೂರು ಲೋಕ ಸ್ವಾಮಿ ದೇವ ” ಹಾಡನ್ನು ಚಿತ್ರದ ನಿರ್ದೇಶಕ ಎಚ್ ಎಲ್ ನ್ ಸಿಂಹ ಅವರು ಆನೇಕಲ್ ಗ್ರಾಮದ ಕಡೆಗೆ ಹೋದಾಗ ಅಲ್ಲಿ ದನ ಕಾಯುತ್ತಿದ್ದ ನಂಜುಡಪ್ಪ ಎನ್ನುವವನು ಹಾಡುತಿದ್ದರು, ಹಾಡಿನ ಸಾಹಿತ್ಯ ತುಂಬಾ ಚೆನ್ನಾಗಿ ಇದ್ದುದರಿಂದ ನಿರ್ದೇಶಕರು ಪೂರ್ತಿ ಹಾಡನ್ನು ಬರೆಸಿಕೊಂಡು ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಳವಡಿಸಿಕೊಂಡರು. ಮುಂದೆ ಚಿತ್ರ ಬಿಡುಗಡೆಯಾಯಿತು, ಎಲ್ಲಡೆ ಅದ್ಧುತ ಪ್ರದರ್ಶನ ಕಂಡಿತು. ಉತ್ತಮ ನಟ , ನಿರ್ದೇಶಕ, ಸಂಗೀತಕ್ಕೆ ಪ್ರಶಸ್ತಿಗಳು ಸಂದವು. ಅಂದು ಸೂಪರ್ ಹಿಟ್ ಅದ ” ಶಿವಪ್ಪ ಕಾಯೋ ತಂದೆ , ಮೂರು ಲೋಕ ಸ್ವಾಮಿ ದೇವ ” ಸಾಹಿತ್ಯ ಬರೆದ ಕವಿ ನಂಜುಡಪ್ಪನವರಿಗೆ ಅದರ ಶ್ರೇಯ ಸಲ್ಲಲಿಲ್ಲ. ಇದನ್ನು ಅರಿತ ಪತ್ರಕರ್ತರು ನಂಜುಡಪ್ಪನವರನ್ನು ಸಂದರ್ಶಿಸಿ ಕೇಳಿಯೇ ಬಿಟ್ಟರು ” ಎಲ್ಲರಿಗೂ ಪ್ರಶಸ್ತಿ ಸಿಕ್ಕಿದೆ , ನಿಮ್ಮ ಹಾಡು ಜಗತ್ ಪ್ರಸಿದ್ದವಾಗಿದೆ , ನಿಮಗೆ ಪ್ರಶಸ್ತಿ ದಕ್ಕಿಲ್ಲವೆಂದು ಬೇಜಾರು ಆಯಿತೇ “. ಅದಕ್ಕೆ ಕವಿ ನಂಜುಂಡಪ್ಪನವರು ಕೊಟ್ಟ ಉತ್ತರಕ್ಕೆ ಪತ್ರಕರ್ತರು ತೆಲೆದೊಗಿದರು.




