ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 29, 2012

ಎಲ್ಲಿದೇ ನಮ್ಮಲ್ಲಿ ಭಾರತೀಯತೆ?

‍ನಿಲುಮೆ ಮೂಲಕ

-ಮಧುಚಂದ್ರ ಭದ್ರಾವತಿ

 ಆಗಸ್ಟ್ ೧೫ರ ಸಂಭ್ರಮ ನೋಡಿ ಏನಾದ್ರು ಬರೆಯಲೇ ಬೇಕೆನಿಸಿತು. ೧೪ನೆ  ತಾರಿಖು ಮಧ್ಯರಾತ್ರಿ ೧೧.೫೯ ರಿಂದ ೧೨.೦೦ಗೆ ಸರಿಯಾಗಿ ಗಡಿಯಾರದ ಮುಳ್ಳು ತಿರುಗಿದಾಗ ಮನೆಯ ಹೊರಗೆ ಪಟಾಕಿ ಶಬ್ಧದ ಅಬ್ಬರ ಕೇಳಿಸಿತು. ಒಂದರ್ಥದಲ್ಲಿ ಭಾರತ ಯಾವುದಾದರು ಕ್ರೀಡೆಯಲ್ಲಿ(ಕೇವಲ ಕ್ರಿಕೆಟ್ ಮಾತ್ರ)  ವಿಜಯಿ ಆದರೆ ಆಚರಿಸುವ ಪಟಾಕಿಯ ಸಂಭ್ರಮ ಅದು. ಭಾರತೀಯರಿಗೆ ಭಾರತೀಯತೆ ಅರಿವು ಮೂಡುವುದು ಎರಡು ಸಂದರ್ಭದಲ್ಲಿ ಮಾತ್ರ ಒಂದು ಸ್ವತಂತ್ರ ದಿವಸದಂದು ಮತ್ತೊಂದು ಕ್ರಿಕೆಟ್ನಲ್ಲಿ ಗೆದ್ದಾಗ ಬಿಟ್ಟರೆ, ಸತ್ – ಪ್ರಜೆಗಳು ಉಳಿದ ೩೬೩ ದಿನ ಬೇರೆಯವರ ಗುಲಾಮರಗಿರುತ್ತಾರೆ. ಒಂದೆಡೆ ಮಾಹಿತಿ ತಂತ್ರಜ್ಞಾನವೆಂಬ ಗುಲಾಮ ಗಿರಿಯಲ್ಲಿ ಜ್ಞಾನಿಗಳು ಮತ್ತೊಂದೆಡೆ ಗಣಿಗಾರಿಕೆ,ಬ್ರಷ್ಟಚಾರ,ಸ್ವಜನ ಪಕ್ಷಪಾತ  ಹೆಸರಿನಲ್ಲಿ ಅಜ್ಞಾನಿಗಳು.ಇಂತಹವರನ್ನು ತನ್ನ ಮಡಿಲಲ್ಲಿಟ್ಟು ಸಲಹುತ್ತಿರುವ ಕರುಣಾ ಮಾಯಿ ಭಾರತ ಮಾತೆ ಎಷ್ಟು ದಿನ ಸಹಿಸಿಯಾಳು?
ಅಂದು ಒಂದೇ ಒಂದು ದಾಳಿಗೆ ಜಪಾನ್ , ಇರಾಕ್,  ಜರ್ಮನಿಗಳು ನುಚ್ಚು ನೋರಾದವು. ಆದರೆ ಅಂದು ಅಲೆಗ್ಸಾಂಡರ್, ಘೋರಿ, ಘಜನಿ, ಮೊಘಲರು, ಪೋರ್ಚುಗೀಸರು, ಡಚ್ಚರು, ಆಂಗ್ಲರು, ಫ್ರೆಂಚರು ಹೀಗೆ ಸಾಲು ಸಾಲು ಕೊಳ್ಳೆ ಹೊಡೆದು ಲೂಟಿ ಮಾಡಿ ಭಾರತ ಮಾತೆಯನ್ನು ಬೆತ್ತಲಾಗಿಸುವ ಪ್ರಯತ್ನ ಮಾಡಿದರೂ , ಭಾರತಾಂಬೆ ಕರುಣಾಮಯಿ ಅವರನೆಲ್ಲ ತನ್ನ ಮಕ್ಕಳೆಂದು ಕ್ಷಮಿಸಿ ಶಾಂತಿಯ ಮಂತ್ರ ಭೋದಿಸಿ, ತಾನು ವಿಶ್ವಕ್ಕೆಲ್ಲ ಮಾದರಿಯಾದಳು. ಅದರೂ ಲೂಟಿ ಅಲ್ಲಿಗೆ ನಿಲ್ಲದೆ ರಾಜಕಾರಣ ಎಂಬ ನೀಚ ಧರ್ಮದ ತಳಹದಿಯಲ್ಲಿ ಪ್ರಜಾತಂತ್ರ ವ್ಯವಸ್ಥೆ ಎಂಬ ನೆಪವೊಡ್ಡಿ ಇಂದಿಗೋ ಅದೇ ಭಾರತ ಮಾತೆಯನ್ನು ಬೆತ್ತಲಾಗಿಸುವ ಪ್ರಯತ್ನ ನಡೆಯುತ್ತಲೇ ಇದೆ. ನಮ್ಮ ಧರ್ಮವೇ ಶ್ರೇಷ್ಟ ನಾವು ಮೇಲು , ನಮ್ಮವರಿಗಿಂತ ಮೇಲೆ ಯಾರು ಇಲ್ಲ , ಎಲ್ಲರು ನಮ್ಮ ಧರ್ಮವನ್ನು ಒಪ್ಪಿರಿ ಎಂದು ಸಾರಿ ಧರ್ಮದ ಹೆಸರಲ್ಲಿ ಭಯೋತ್ಪಾದನೆ ಎಂಬ ಅಸ್ತ್ರದಿಂದ ದೇಶವನ್ನು ಅಸ್ಥಿರಗೊಳಿಸುವ ಯತ್ನಗಳು ಒಂದೆಡೆಯಾದರೆ, ಸ್ವಜನ ಪಕ್ಷಪಾತ, ಬ್ರಷ್ಟಚಾರ, ಮರ್ಯಾದೆ ಹತ್ಯೆಗಳು, ವೋಟು ರಾಜಕಾರಣಗಳು ಮತ್ತೊಂದಡೆ.
ನಿಮಗೆ ಎಲ್ಲರಿಗೂ ಗೊತ್ತಿರುವ ಒಂದು ವಿಚಾರ ವಿಶ್ವಕ್ಕೆ ವಿಶ್ವವೇ ಭಾರತವನ್ನು ಲೂಟಿ ಮಾಡಿದರೂ ಅ ದೇಶಗಳು ಅರ್ಥಿಕ ಹಿಂಜರಿತವನ್ನು ಅನುಭವಿಸುತಿದ್ದರೋ  ಅದರ ಪರಿಣಾಮ ಭಾರತೀಯರ ಮೇಲೆ ಕೇವಲ ಸಾಸಿವೆ ಕಾಳಿನಷ್ಟಿದೆ. ಕಾರಣ ಇಷ್ಟೇ  ಬುದ್ದ, ಬಸವ,ರಾಮ, ವಿವೇಕಾನಂದರು ಹಾಗು ಹಲವು ಶ್ರೇಷ್ಟರು ಲೀನವಾದ ಈ ಮಣ್ಣು ಮಣ್ಣಲ್ಲ ಅವರ  ಜೀವ ಕಣಗಳು ಇಂದಿಗೂ ನಮ್ಮನ್ನು ರಕ್ಷಿಸುತ್ತಿವೆ. ವಿಶ್ವದ ಬಹುಪಾಲು ಅವಿಷ್ಕಾರಗಳು ನಮ್ಮಲ್ಲಿಯೇ ಅದರೂ ನಮ್ಮವರು ವಿಶ್ವಕ್ಕೆ ನೀಡಿದ ಕೊಡುಗೆ ಎಲ್ಲರಿಗಿಂತ ಹೆಚ್ಚಿದ್ದರು ಪಟೆಂಟು ಎಂಬ ಪುಟಗಳಲ್ಲಿ ನಮ್ಮವರ ಹೆಸರು ಕಮ್ಮಿಯೇ. ಆದರೆ ಅವರಿಗೆಲ್ಲ ಮಾದರಿ ಭಾರತಿಯ ವೇದ, ಶಾಸ್ತ್ರ, ಪುರಾಣಗಳು.
ನಮ್ಮ ಮನೆ ಹತ್ತಿರ ಇರುವ ದ್ವಜ ಸ್ತಂಭ ವರ್ಷಕ್ಕೆ ಎರಡು ಬಾರಿ ಶುದ್ದಿಗೊಳ್ಳುತ್ತದೆ, ಒಂದು ಆಗಸ್ಟ್ ೧೫ ಮತ್ತೊಂದು ನವೆಂಬರ್ ಒಂದು ಉಳಿದ ೩೬೩ ದಿನ ಪೋಲಿ ಪುಂಡರ , ಬೀದಿ ನಾಯಿ , ದನಕರುಗಳ ಮತ್ತು ಮನೆಯಲ್ಲಿರುವ ತ್ಯಾಜ್ಯಗಳ ವಿಲೇವಾರಿ ಕೇಂದ್ರ. ಪ್ರತಿ ಬಾರಿಯೂ ಅನಿಸುತ್ತದೆ ಯಾಕೆ ವರ್ಷವೆಲ್ಲ ಎಲ್ಲಡೆ ಪ್ರತಿ ದಿನ ಸ್ವತಂತ್ರ ದಿನಾಚರಣೆಗಳು ಮತ್ತು ರಾಜ್ಯೋತ್ಸವಗಳು ಇರಬಾರದು .
ಎರಡು ವಾರದ ಹಿಂದೆ ನನ್ನ ಸ್ನೇಹಿತನ ಮನೆಗೆ ಹೋದಾಗ ಅಂದು ಒಲಂಪಿಕ್ನಲ್ಲಿ ಭಾರತ ಮತ್ತು  ನ್ಯೂಜಿಲೆಂಡು  ನಡುವಣ ಪಂದ್ಯ. ಪಂದ್ಯ ಆರಂಭಕ್ಕೆ ಮುನ್ನ ನಮ್ಮ ರಾಷ್ಟ್ರ ಗೀತೆಯನ್ನು ನುಡಿಸಿದಾಗ ಅಲ್ಲಿ ನೆರೆದಿದ್ದ ಇಬ್ಬರು ಸ್ನೇಹಿತರು ತಮ್ಮ ಕೆಲಸದಲ್ಲಿ ತೊಡಗಿದ್ದರು. ನಾನು ಒಮ್ಮೆ ಎದ್ದು ನಿಂತು ಗೌರವ ಸೂಚಿಸಲು ಆರಂಭಿಸಿದಾಗ ಒಲ್ಲದ ಮನಸ್ಸಿನಿಂದ ಗೌರವ ಸೂಚಿಸಿದರು. ದಯವಿಟ್ಟು ಈ ರೀತಿ ಮಾಡಬೇಡಿ ದೊರದರ್ಶನದಲ್ಲಿ ಹಾಗು ಬೇರೆಯೆಲ್ಲೋ  ರಾಷ್ಟ್ರ ಗೀತೆಯನ್ನು ನುಡಿಸುವಾಗ ರಾಷ್ಟ್ರ ಗೀತೆ ಮುಗಿಯುವವರೆಗೂ ಅಲ್ಲೇ ನಿಂತು ಗೌರವ ಸೂಚಿಸಿ ನಂತರ ಹೊರಡಿ.
ಏನೇ ಅನ್ನಿ  ಆಗಸ್ಟ್ ೧೫ ಮುಗಿಯಿತು ಮತ್ತೊಮ್ಮೆ ನಮ್ಮ ರಾಷ್ಟ್ರ ದ್ವಜ ಹಾರಾಡುವುದು ಮುಂದಿನ ಆಗಸ್ಟ್ ೧೫ಕ್ಕೆ ಎಂದು ಸಂಜೆ ಆರು ಗಂಟೆಗೆ ದ್ವಜ ಅವರೋಹಣ ಮಾಡಿದರೆ ಒಳ್ಳೆಯದು, ಇಲ್ಲದಿದ್ದರೆ ಭಾರತದ ಮಾನ ಹಾರಜಗುವುದು ಮುಂದಿನ ೩೬೩ ದಿನಕ್ಕೆ ನಿರಂತರ ಮುಂದುವರೆಯುತ್ತದೆ.
* * * * * * * * * *
ಚಿತ್ರಕೃಪೆ : graafix.blogspot.com

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments