ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 30, 2012

12

ಹಳ್ಳಕ್ಕೆ ಬಿದ್ದವರ ಮೇಲೆ ಕಲ್ಲು ಹಾಕುವುದು ಯಾವ ಸೀಮೆ ಕನ್ನಡತನ ಸ್ವಾಮಿ?

‍ನಿಲುಮೆ ಮೂಲಕ

-ಸುನಿಲ್ ಜಿ.ಆರ್

ಈ ನಡುವೆ ಕನ್ನಡ ಹೋರಾಟದ ಪೇಟೆಂಟ್ ತೆಗೆದುಕೊಂಡ ಹೈ-ಟೆಕ್ ಕನ್ನಡ ಓರಾಟಗಾರರ  ‘ನುಡಿ ಮುತ್ತು’ಗಳಿಗೆ ಕೊನೆಯೇ ಇಲ್ಲದ್ದಾಗಿದೆ. ತರಕಾರಿ ಹೆಚ್ಚೋದ್ರಿಂದ ಹಿಡಿದು, ISROದವರು Mars Mission ಮಾಡಬೇಕೋ ಬೇಡವೋ ಎನ್ನುವವರೆಗೂ ಇವರ ಅಪ್ಪಣೆ ತಗೋಬೇಕು.ತಾವೂ ಕೆಲಸ ಮಾಡಲ್ಲ, ಮಾಡೋವ್ರಿಗೂ ಬಿಡಲ್ಲ.

‘ಅಸ್ಸಾಂ ಉಳಿಸಿ ಹೋರಾಟ ಸಮಿತಿ’ ಮೊನ್ನೆ ಬೆಂಗಳೂರಿನಲ್ಲಿ ಮಾಡಿರುವ ಪ್ರತಿಭಟನೆಗೆ ಸ್ವಾಗತಾರ್ಹ. ಎಲ್ಲೋ ಇರುವ ಅಸ್ಸಾಂಗೂ ಕರ್ನಾಟಕಕ್ಕೂ ಏನು ಸಂಬಂಧವೆಂದು ಕೇಳುವ ಇವರಿಗೆ, ನೆನ್ನೆ ಕಾಶ್ಮೀರ ಪಂಡಿತರ ಸ್ಥಿತಿ, ಇವತ್ತು ಅಸ್ಸಾಮಿಗಳದ್ದು, ನಾಳೆ ಕನ್ನಡಿಗರಾದ್ದಾಗಬಹುದೆಂಬ ಸರಳ ಆಲೋಚನೆಯೂ ಇಲ್ಲ.ಕಾಶ್ಮೀರ ಉರಿಯುತ್ತಿದ್ದಾಗ, ಅಸ್ಸಾಮಿಗಳು ಸುಮ್ಮನಿದ್ದರು. ಇಂದು ಅಸ್ಸಾಂ ಉರಿಯುತ್ತಿದ್ದಾಗ, ಕನ್ನಡಿಗರು ಸುಮ್ಮನಿದ್ದರೆ ನಾಳೆ ನಮಗೂ ಅದೇ ಗತಿಯಾಗುತ್ತದೆ.

ಕರ್ನಾಟಕದಲ್ಲೇ ಹಲವು ಸಮಸ್ಯೆಗಳಿರುವಾಗ ದೂರದ ಅಸ್ಸಾಂ ಸಮಸ್ಯೆಗೆ ಆದ್ಯತೆ ಯಾಕೆ ಎಂದು ಕೇಳಿದ್ದಾರೆ. ಅಲ್ಲ ಸ್ವಾಮಿ, ಕರ್ನಾಟಕದಲ್ಲಿ ಹಲವು ಸಾವಿರ ದಾರಿಗಳಿಂದ ಇವರು ಅದ್ಭುತ ಸೇವೆಗಳನ್ನು ಮಾಡುತ್ತಿರುವುದು ನಿಮ್ಮ ಕಣ್ಣಿಗೆ ಕಾಣಲ್ವೆ (ವನವಾಸಿ, ಏಕಲ್ ವಿದ್ಯಾಲಯ, ನೆಲೆ… ಇತ್ಯಾದಿ)? ಎಲ್ಲರಿಗೂ ‘misplaced priorities’ ಅಂತ ಬುದ್ದಿವಾದ ಹೇಳೋ ಇವರದ್ದು ‘dangerously misplaced priorities’ ಅಲ್ಲವೆ? ಮೊದಲು ಶತ್ರುಗಳನ್ನ ಹಿಡಿದು, ನಂತರ ಕಳ್ಳರನ್ನ ಹಿಡಿಬೇಕು.

ಇನ್ನು ಪಕ್ಕಾ realistಗಳಂತೆ ಯಾವಾಗಲೂ ಕನ್ನಡ-ಕನ್ನಡಿಗರೆಂದು ಮಾತಾಡುವ ಇವರ ಕನ್ನಡ ನಿಲುವನ್ನು ನೋಡೋಣ.

೧) ಕರ್ನಾಟಕದಲ್ಲೂ ೩-೪ ಲಕ್ಷ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆಂದು ವರದಿಗಳಿವೆ. ಯಾವಾಗಲೂ ಕನ್ನಡ-ಕರ್ನಾಟಕ ಎಂದು ಬೊಬ್ಬೆ ಹೊಡೆಯುವ ಇವರು ಎಂದಾದರೂ ಈ ಅಕ್ರಮ ವಲಸಿಗರಿಂದ ಕರ್ನಾಟಕಕ್ಕೆ ಉಂಟಾಗುವ ಅಪಾಯದ ಬಗ್ಗೆ ಚರ್ಚೆ ಮಾಡಿದ್ದಾರ? ಇವರಿಗೆ ನಮ್ಮ ದೇಶದವರೇ ಆದ ಬೇರೆ ರಾಜ್ಯಗಳಿಂದ ವಲಸಿಗರು ಬರಬಾರದು, ಆದ್ರೆ ಪಕ್ಕದ ದೇಶದ ವಲಸಿಗರು (ಅದೂ ಅಕ್ರಮವಾಗಿ) ಬಂದರೆ ಪರವಾಗಿಲ್ಲ.

೨) ಇಲ್ಲೇ ಹುಟ್ಟಿ ಬೆಳೆದ ಹಲವು ಕನ್ನಡಿಗ ಮುಸ್ಲಿಮರಿಗೆ ಇಂದು ಕನ್ನಡ ಬರಲ್ಲ/ಕಲಿತಿಲ್ಲ. ಅವರ ಮಸೀದಿಗಳಲ್ಲಿ ಉರ್ದು/ಅರಾಬಿಕಿನಲ್ಲೇ ಮಂತ್ರಗಳು ಹೇಳುವುದು. ಬೇರೆ ರಾಜ್ಯಗಳಿಂದ ಬಂದವರು ಕನ್ನಡ ಕಲಿಯಬೇಕೆಂದು ಕಿವಿಮಾತೇಳುವ ಇವರು, ನಮ್ಮವರೇ ಆದ ಕನ್ನಡಿಗರಿಗೆ ಕನ್ನಡ ಕಲಿಯಿರಿಯೆಂದು ಏಕೆ ಹೇಳುವುದಿಲ್ಲ. ಸಂಸ್ಕೃತದಲ್ಲಿರುವ ಎಲ್ಲಾ ಮಂತ್ರಗಳನ್ನು ಕನ್ನಡಕ್ಕೆ ಅನುವಾದಿಸಿ ದೇವಸ್ಠಾನಗಳಲ್ಲಿ ಕನ್ನಡ ಮಂತ್ರಗಳಿಂದಲೇ ಪೂಜೆ ಮಾಡಬೇಕೆಂದು ಪ್ರತಿಪಾದಿಸುವ ಇವರು, ಮಸೀದಿಗಳಲ್ಲೂ ಕನ್ನಡದಲ್ಲೆ ಪ್ರಾರ್ಥನೆ ಮಾಡಲಿಯೆಂದು ಏಕೆ ಪ್ರತಿಪಾದಿಸುವುದಿಲ್ಲ? ಅಷ್ಟೇಕೆ ಇಂದು ಬೆಂಗಳೂರಿನ ಎಷ್ಟು ಚರ್ಚುಗಳಲ್ಲಿ ತಮಿಳು,ಮಲಯಾಳಂ ಬಳಸಲಾಗುತ್ತಿದೆ?

೩) ಕರ್ನಾಟಕದಲ್ಲಿ ಹಲವು ಕಡೆ ಕನ್ನಡಿಗರನ್ನ ಮತಾಂತರ ಮಾಡುತ್ತಿದ್ದಾರೆ. ಇದು ಹೀಗೆ ನಡೆದರೆ, ಇವರು ಹೇಳುವ ಕನ್ನಡ/ಜಾನಪದ ಸಂಸ್ಕೃತಿ ಉಳಿಯುವುದಿಲ್ಲ. ಒಂದು ಕಡೆ ಕನ್ನಡವನ್ನು ಉಳಿಸಬೇಕು ಎನ್ನುವ ಇವರು, ಮತಾಂತರದಲ್ಲಿ ತೊಡಗಿರುವವರನ್ನು ಆಕ್ಷೇಪಿಸಿವುದಿಲ್ಲ. ಇದರೆ ಮೇಲೆ ಮತಾಂತರವನ್ನು ತಡೆಯುವವರಿಗೆ ಬುದ್ದಿವಾದ. ಇವರಿಗೆ ಎಷ್ಟು ನಾಲಿಗೆಗಳೋ?

೪) ಹೋಗಲಿ ವಲಸಿಗರಿಗೆ ಕನ್ನಡ ಕಲಿಸುವವರ ಜೊತೆ ಕೈ ಜೋಡಿಸುತ್ತಾರ ಎಂದರೆ, ಬರೀ ಟೀಕೆ-ಟಿಪ್ಪಣಿಗಳಿಂದಲೇ ಕಾಲ ಕಳೆಯುತ್ತಾರೆ. ಇತ್ತೀಚೆಗೆ ಬೆಂಗಳೂರಿನ ೨೦೦ ಅಪಾರ್ಟಮೆಂಟಗಳಲ್ಲಿ ಕನ್ನಡ-ಕಲಿ ಕಾರ್ಯಕ್ರಮವನ್ನು RSS IT Milan ಅವ್ರು ಯಶಸ್ವಿಯಾಗಿ ಆಯೋಜಿಸಿದ್ದರು. ಈ ‘ಸರ್ವಜ್ಞ’ರನ್ನು ಕೈ ಜೋಡಿಸಿಯೆಂದು ಕೇಳಿದಾಗ, ಇವರ ಟೀಕೆಗಳೇ ಜೊತೆಯಾದವು. ಇನ್ನು ಈ ಕಾರ್ಯಕ್ರಮದ ಆಯೋಜನೆಗೆ ಶ್ರಮ ಪಟ್ಟವರಲ್ಲಿ ಶೇಕಡ ೫೦%ಕ್ಕಿಂತಾ ಹೆಚ್ಚು ಜನ, ಇವರು ಸದಾ ಟೀಕಿಸುವ ಆ ಬೇರೆ ರಾಜ್ಯದ ವಲಸಿಗರೇ!

ಜೀವ ಭಯದಿಂದ ಊರು ಬಿಟ್ಟು ಹೋಗುವವರಿಗೆ ಹೆಗಲು ಕೊಟ್ಟು ನಿಲ್ಲುವ ಕನ್ನಡತನ ನಮಗೆ ಬೇಕೇ ಹೊರತು, ಹಳ್ಳಕ್ಕೆ ಬಿದ್ದವರ ಮೇಲೆ ಆಳಿಗೊಂದು ಕಲ್ಲು ಹಾಕುವುದು ಕನ್ನಡತನವಲ್ಲ.ಅಂತಾದ್ದು ನಮಗೆ ಬೇಕೂ ಇಲ್ಲ. ಒಟ್ಟಿನಲ್ಲಿ ಈ ಹೈ-ಟೆಕ್ (ಬ್ಲಾಕಿಂಗ್) ಕನ್ನಡ ಓರಾಟಗಾರರು ಕನ್ನಡಕ್ಕಾಗಿ ಕೆಲಸ ಮಾಡುವವರಿಗೆ ಕೈ ಜೋಡಿಸದಿದ್ದರೂ ಪರವಾಗಿಲ್ಲ, ಕಾಲು ಎಳೆಯದಿದ್ದರೆ ಕನ್ನಡತನ ಉಳಿದೀತು.

* * * * * * * * * *

ಚಿತ್ರಕೃಪೆ : https://encrypted-tbn2.google.com

 

Read more from ಲೇಖನಗಳು
12 ಟಿಪ್ಪಣಿಗಳು Post a comment
  1. Shankar's avatar
    Shankar
    ಆಗಸ್ಟ್ 30 2012

    I PITY YOU…

    ಉತ್ತರ
  2. ಶಾಜಹನ್'s avatar
    ಶಾಜಹನ್
    ಆಗಸ್ಟ್ 31 2012

    ನಿಲುಮೆಯಲ್ಲೊಂದು ನನ್ನ ನಿಲುಮೆ.
    ವಿದೇಶದ ಗಾಳಿ ನೀರು ಸೇವಿಸಿ ನಾಲಗೆಗೆ ಹಿಡಿಸದ ಇಂಗ್ಲಿಶ್, ಅರಬಿ ಜಗಿಯುತ್ತಾ ಜೀವಿಸುವಾಗಳು ನಾನೊಬ್ಬ ಕನ್ನಡಿಗ ಎಂಬ ಸ್ವಾಬಿಮಾನವನ್ನು ಮನಸಲ್ಲಿ ಅಡಗಿಸಿ ಜೀವಿಸುವ ನನ್ನಂತ ಕನ್ನಡಿಗರಿಗೆ ಕನ್ನಡದ ಕಂಪನ್ನು ತಲುಪಿಸುತ್ತಿರುವ ನಿಲುಮೆಯ ನನ್ನ ಸ್ನೇಹಿತರಿಗೆ ಮತ್ತು ಪ್ರಿಯ ಓದುಗರಿಗೆ ನನ್ನ ಒಂಧನೆಗಳು .
    ಕನ್ನಡ ದ ಎಲ್ಲ ಮಾದ್ಯಮಗಳು ಕೋಮುವಾದಿಗಳ ಕಪಿ ಮುಷ್ಟಿಯಲ್ಲಿ ಉಸಿರಾದಲಾಗದೆ ಒದ್ದಾಡುತ್ತಿರುವಾಗ ಕನ್ನಡ ಲೇಖನ ಸಾಹಿತ್ಯ ಗಳೆಲ್ಲವೂ ಕೋಮುವಾದಿ ವರ್ಣರಂಜಿತವಾಗಿ ಮಾರ್ಪದುತ್ತಿರುವಾಗ
    ಅರ್.ಎಸ್.ಎಸ್. ಮತ್ತು ಕೆ.ಎಫ್.ಡಿ. ಎಂಬ ಎರಡು ವಿಷ ಶರ್ಪದ ಉಸಿರಾಟದ ವಿಷಾನಿಲದಂತೆ ಕನ್ನಡ ದ ಲೇಕಣಗಳಿಂದ ಉಸಿರುಗಟ್ಟಿದ ಕನ್ನಡಿಗನಿಗೆ, ಇವೆಲ್ಲವುಗಳಿಗಿಂತ ವಿಬಿನ್ನವಾಗಿ ಕನ್ನಡದ ನೈಜ ಸಾಹಿತ್ಯದ ತಂಗಾಳಿಯನ್ನು ಬೀಸುತ, ನಿಲುಮೆಯ ರಂಗ ಪ್ರವೇಶ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು.
    ಆದರೆ ಇತ್ತೀಚಿಗಿನ ಲೇಖನಗಳನ್ನು ಗಮನಿಸಿದಾಗ ನಿಳುಮೆಯು ಕೂಡ ಕೋಮುವಾದಿಗಳ ವಿಷಾನಿಲವನ್ನು ಸೂಸುವ ಮಾಧ್ಯಮವಾಗಿ ಮಾರ್ಪಡುತ್ತಿರುವುದು ಬೇಸರವನ್ನುಂಟು ಮಾಡಿದೆ.

    ಸಾಹಿತ್ಯ ಮತ್ತು ಮಾಧ್ಯಮ ಇಂದು ಕೋಮುವಾದಿಗಳ ಅಸ್ತ್ರಗಳಾಗಿವೆ. ತನ್ನ ಹಳಸಿದ ಕೊಳಕು ಚಿಂತನೆಗಳಿಗೆ ಹೊಸ ತೊಡುಗೆಯನ್ನು ತೊಡಿಸಿ ಸಮಾಜದ ಸಾಮರಸ್ಯವನ್ನು ಕೆಡಿಸಲು ನಿರಂತರ ಯತ್ನಿಸುತ್ತಿರುವ ಇಂತಹ ಚೀಪ್ ಆದ ಲೆಕಕರ ಲೇಕನಗಳನ್ನು ಪ್ರಕಟಿಸುವ ಮುಂಚೆ ಸಂಪಾದಕರು ಸ್ವಲ್ಪ ಯೋಚಿಸುವುದು ಒಳಿತು, ಈ ಲೇಖನ ಸಮಾಜಕ್ಕೆ ಒಳಿತನ್ನು ತರುವುದೇ ಅಲ್ಲ ಸಮಾಜದಲ್ಲಿ ಅಶಾಂತಿಯ ವಿಷ ಬೀಜವನ್ನು ಬಿತ್ತುವುದೇ ಎಂದು.

    ಒಂದು ಅಲ್ಪಸಂಖ್ಯಾತರ ರಕ್ಷಕರ ವೇಷ ಇನ್ನೊಂದು ಸನಾತನ ಸಂಸ್ಕೃತಿ ರಕ್ಷಕ ವೇಷ
    ಎರಡು ಒಂದೇ. ಧರ್ಮವೆನೆಂದರಿಯದ ಧರ್ಮದ ತಿರುಳು ಅರಿಯದ ಕಪಟ, ಧರ್ಮದ್ರೋಹಿಗಳು.
    ಎಂದಲ್ಲ ಧೇಶದ್ರೋಹಿಗಳು.

    ನಿಲುಮೆಯ ಸತ್ಯ ಸುಂದರ, ಶಾಂತಿಯನ್ನು ಪಸರಿಸುವ ನಿಲುವುಗಳಿಗಾಗಿ ಕಾಯುತ್ತಿರುವೆವು

    – ಶಾಜಹಾನ್

    ಉತ್ತರ
    • ನಿಲುಮೆ's avatar
      ಸೆಪ್ಟೆಂ 1 2012

      ನಿಲುಮೆ ಮತ್ತು ಮಾನವ ಪ್ರೇಮಿ ಸಮಾಜದೆಡಿಗಿನ ನಿಮ್ಮ ಕಾಳಜಿ,ಪ್ರೀತಿಗೆ ನಾವು ಆಭಾರಿಗಳಾಗಿದ್ದೇವೆ.

      ನಿಮಗೆ ಗೊತ್ತೇ ಇರುವಂತೆ ನಿಲುಮೆಗೆ ಎಡ,ಬಲ ಅನ್ನುವ ಯಾವುದೇ ಬೇಲಿಯಿಲ್ಲ.ಕೆಲವು ವೆಬ್ಸೈಟುಗಳು ಎಡಪಂಥೀಯ ಅಥವಾ ಬಲಪಂಥೀಯ ಅನ್ನುವ ಲೇಖನಗಳೇ ಬೇಕು ಅನ್ನಬಹುದು,ಆದರೆ ನಾವು ಪ್ರಜಾಪ್ರಭುತ್ವದಲ್ಲಿ ಮುಕ್ತ ಚರ್ಚೆಗೆ ಕಾರಣವಾಗಬಲ್ಲ ಯಾವ ಪಂಥದ ಲೇಖನಕ್ಕಾದರೂ ವೇದಿಕೆ ಕೊಡಬಯಸುತ್ತೇವೆ.ಹಾಗೇ ಹೇಳುತ್ತಲೇ, ಮಾನವ ವಿರೋಧಿ,ದ್ವೇಷಕಾರುವ ಲೇಖನಗಳಿಗೆ ಜಾಗ ನೀಡಲಾರೆವು ಅಂತ ಹೇಳಲೂ ಇಚ್ಚಿಸುತ್ತೇವೆ. ಬಯಲಿಗೆ ಬಂದಾಗಲೇ ತಾನೇ ಜನರ,ಚಿಂತನೆಗಳ ಬಣ್ಣ ಬಯಲಾಗುವುದು?

      ಪ್ರೀತಿಯಿಂದ,
      ನಿಲುಮೆ

      ಉತ್ತರ
  3. Kumar's avatar
    ಸೆಪ್ಟೆಂ 2 2012

    ಶಾಜಹನ್ ಅವರೆ,
    ಪ್ರಸ್ತುತ ಲೇಖನದಲ್ಲಿ, ಕೋಮುವಾದ ಎಲ್ಲಿದೆ ಎಂದು ತಿಳಿಯುತ್ತಿಲ್ಲ.
    ಅಥವಾ, ನೀವು ಬೇರಾವುದೋ ಲೇಖನಕ್ಕೆ ಇಲ್ಲಿ ಪ್ರತಿಕ್ರಿಯೆ ಕೊಟ್ಟುಬಿಟ್ಟಿರುವಿರೋ ಎಂದು ಅನುಮಾನವಾಗುತ್ತಿದೆ!
    ದಯವಿಟ್ಟು ತಿಳಿಸುವಿರಾ?

    ಉತ್ತರ
  4. bhadravathi's avatar
    bhadravathi
    ಸೆಪ್ಟೆಂ 2 2012

    ಶಾಜಹಾನ್, ನನ್ನ ನಿಲುಮೆ ಈ ವಿಷಯದಲ್ಲಿ ನಿಲುಮೆ ಪರ. ಏಕೆಂದರೆ ನಿಲುಮೆ ಎಲ್ಲ ರೀತಿಯ ಚರ್ಚೆಗಳಿಗೆ ಅನುವು ಮಾಡಿಕೊಡುವ ಒಂದು ತಾಣ. ಇದರಲ್ಲಿ ಹಿಂದೂ ಪರ, ಬಲ ಪಂಥೀಯ, ಎಡಪಂಥೀಯ, ಎಲ್ಲ ತೆರನಾದ ನಿಲುವುಗಳ ಲೇಖನಗಳಿಗೂ ಸ್ವಾಗತವಿದೆ. ಕೆಲವೊಮ್ಮೆ ಅನ್ನಿಸುವುದುಂಟು, ಸ್ವಲ್ಪ ಹಿಂದುತ್ವ ವಾದಿಗಳ ವಿಚಾರಗಳೇ ಮೆರೆಯುತ್ತಿವೆ ಎಂದು, ಇದಕ್ಕೆ ಕಾರಣ ಹಿಂದುತ್ವ ವಾದಿಗಳು ಅಂತರ್ಜಾಲದಲ್ಲಿ ಚೆನ್ನಾಗಿ ತೊಡಗಿಸಿಕೊಂಡಿದ್ದಾರೆ. IT MILAN ಮುಂತಾದ ಕಾರ್ಯಕ್ರಮಗಳ ಮೂಲಕ ತಮ್ಮ ವಿಚಾರಗ ಮಂಡನೆ ಮಾಡುತ್ತಾರೆ. ಇರಲಿ, ಅದರಿಂದ ಯಾವುದೇ ತೊಂದರೆಯಿಲ್ಲ. ಆದರೆ, ಅವರ ವಿಚಾರಗಳಿಗ ವ್ಯತಿರಿಕ್ತವಾದ ವಿಚಾರ ಮಂಡಿಸಿದಾಗ ಬರುವ ಮೂದಲಿಕೆ, ಕಟು ಟೀಕೆ, ಕೆಲವೊಮ್ಮೆ ಹೀಗಳಿಕೆ ವಿಚಾರದಲ್ಲಿ ಮಾತ್ರ ನನಗೆ ಅಸಮಾಧಾನವಿದೆ. ವಿಚಾರವಂತರು ದೊಡ್ಡ ಮನಸ್ಸಿನಿಂದ agree to disagree ನಿಲುಮೆ ಹೊಂದಿದಾಗ ಮಾತ್ರ ಚರ್ಚೆ ಅರ್ಥಪೂರ್ಣವಾಗುತ್ತದೆ.

    ಉತ್ತರ
    • Kumar's avatar
      Kumar
      ಸೆಪ್ಟೆಂ 3 2012

      @bhadravathi,
      ನಿಮ್ಮ ಮಾತು ಸರಿಯಾಗಿದೆ.
      ಮೂದಲಿಕೆ, ಕಟು ಟೀಕೆ, ಕೆಲವೊಮ್ಮೆ ಹೀಗಳಿಕೆಗಳನ್ನು ನಮ್ಮ ಬರಹಗಳಲ್ಲಿ ಕಡಿಮೆ ಮಾಡಬೇಕು.
      ನೀವು ಇಲ್ಲಿ ಬರುವ ಚರ್ಚೆಗಳನ್ನೆಲ್ಲಾ ಓದುತ್ತಿರುವಿರೆಂದು ಭಾವಿಸುವೆ. ಆ ಚರ್ಚೆಗಳಲ್ಲಿ “ಕೆಲವು” ವಿಚಾರಗಳನ್ನು, “ಕೆಲವರು” ಉದ್ದೇಶಪೂರ್ವಕವಾಗಿ ಮೂದಲಿಕೆಯ ರೀತಿಯಲ್ಲಿ ನಿಂದಿಸುತ್ತಾರೆ. ಅದು ಕೇವಲ ಟೀಕೆಯಾಗಿರುವುದಿಲ್ಲ. ಅಲ್ಲಿಂದ ಪ್ರಾರಂಭವಾಗುತ್ತದೆ ಮೂದಲಿಕೆ, ಹೀಗಳಿಕೆಗಳು.
      ಉದಾಹರಣೆಗೆ, ಡಾ. ಅಶೋಕ್ ಕೆ.ಆರ್ ಅವರು ಬರೆದಿರುವ “ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?!” ಲೇಖನವನ್ನೇ ನೋಡಿ (ಕೊಂಡಿ ಇಲ್ಲಿದೆ: https://nilume.net/2012/08/28/ಚಿನ್ನದ-ಬಾಗಿಲಿಗೆ-ದೋಷವಿಲ/).
      ನಾನೇನೂ ವಿಜಯ್ ಮಲ್ಯ ಅವರ ಸಮರ್ಥಕನಲ್ಲ. ಮದ್ಯಪಾನ ನಮ್ಮ ಸಮಾಜದಲ್ಲಿರುವ ಅನಿಷ್ಠಗಳಲ್ಲೊಂದು ಎಂದೇ ತಿಳಿದಿರುವವನು. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೆಂದು, ಮದ್ಯಪಾನ ಮಾಡುವವರನ್ನು ನಾನೇನೂ ಹೀಗಳೆಯುವುದಿಲ್ಲ ಅಥವಾ ದೂರ ಸರಿಸುವುದಿಲ್ಲ.
      ಆದರೆ, ಈ ಲೇಖನದ ಮೇಲೊಮ್ಮೆ ಕಣ್ಣಾಡಿಸಿ. ಪೇಜಾವರಶ್ರೀಗಳ ಕುರಿತಾಗಿ ಬಹಳ ಕೀಳು ಅಭಿರುಚಿಯಲ್ಲಿ ಬರೆದಿದ್ದಾರೆ. ಪೂಜ್ಯ ಪೇಜಾವರಶ್ರೀಗಳು ಇತರ ಮಠಾಧೀಶರಂತಲ್ಲ. ಕಳೆದ ೬೦ ವರ್ಷಗಳಿಂದ ಸಮಾಜದಲ್ಲಿರುವ ಅಸ್ಪೃಷ್ಯತೆ, ಕುರೂಡಿ ಮುಂತಾದವನ್ನೆಲ್ಲಾ ತೊಲಗಿಸಬೇಕೆಂದು ಹೋರಾಡುತ್ತಿರುವ ಮಹಾನುಭಾವರು. (ಆ ರೀತಿ ಹೋರಾಡುವ ಪ್ರತಿಯೊಬ್ಬರೂ ನನಗೆ ಪೂಜ್ಯರೇ. ಅವರೇನೂ ಮಠಾಧೀಶರಾಗಬೇಕಿಲ್ಲ). ಅವರು ಒಂದು ಮಠಕ್ಕೆ ಸೇರಿರುವುದರಿಂದ ಒಂದು ಚೌಕಟ್ಟಿನಲ್ಲೇ ಕೆಲಸ ಮಾಡಬೇಕಾಗಿರುತ್ತದೆ. ಹೀಗಾಗಿ, ಕ್ರಾಂತಿಕಾರಕ ಬದಲಾವಣೆ ತರಲಾಗಿಲ್ಲ ಎನ್ನುವುದು ನಿಜ. ಆದರೆ, ಅವರ ಉದ್ದೇಶ ಮತ್ತು ಪ್ರಯತ್ನದಲ್ಲಿ ಪ್ರಾಮಾಣಿಕತೆಯಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿಯುವ ವಿಷಯವೇ.
      ವಿಜಯ ಮಲ್ಯ ಚಿನ್ನದ ಬಾಗಿಲು ನೀಡಿದ್ದಕ್ಕೂ ಪೇಜಾವರಶ್ರೀಗಳಿಗೂ ಏನು ಸಂಬಂಧ? ಈ ಲೇಖನದ ಉದ್ದೇಶ ಚಿನ್ನದ ಬಾಗಿಲೋ ಅಥವಾ ಪೇಜಾವರಶ್ರೀಗಳ ಅಪಮಾನವೋ!?
      ಲೇಖಕರು ಮತ್ತೂ ಮುಂದುವರೆದು, ಕೋಟ್ಯಂತರ ಹಿಂದುಗಳು ಪವಿತ್ರವೆಂದು ನಂಬಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಿಷಯದಲ್ಲಿಯೂ ಕೆಟ್ಟದಾಗಿ ಬರೆದಿದ್ದಾರೆ!
      ಇಂತಹ ಕೀಳು ಅಭಿರುಚಿಯ ಲೇಖನಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುವಿರಿ?
      ಇದು ಇಲ್ಲಿಗೇ ನಿಲ್ಲುವುದಿಲ್ಲ. ಈ ಲೇಖಕರು ಮುಂದೆ ಬರೆಯುವ ಲೇಖನ, ಅಥವಾ ಪ್ರತಿಕ್ರಿಯೆಗಳಲ್ಲೂ ಅವರ ಹಿಂದಿನ ಬರಹಗಳ ಕೀಳು ಅಭಿರುಚಿ ಮನಸ್ಸಿನಲ್ಲಿ ನಾಟಿರುವುದರಿಂದ, ಅದೇ ರೀತಿಯ ಮೂದಲಿಕೆಯ ಪ್ರತಿಕ್ರಿಯೆಗಳೇ ಬರುತ್ತವೆ.
      ಇಲ್ಲಿ ವಿಷಯ ಗೌಣವಾಗಿ, ವ್ಯಕ್ತಿಯನ್ನು ಹಂಗಿಸುವುದೇ ಮುಖ್ಯವಾಗಿಬಿಡುತ್ತದೆ. ಅದಕ್ಕೆ ಕಾರಣ ಪ್ರತಿಕ್ರಿಯೆ ನೀಡುವವರಲ್ಲ, ಬದಲಾಗಿ ಮೊದಲಿಗೆ ಲೇಖನ ಬರೆದವರು.
      ನನ್ನ ಮಾತಿನ ಅರ್ಥ ನಿಮಗೆ ಆಯಿತು ಎಂದು ತಿಳಿಯುತ್ತೇನೆ.
      ಲೇಖಕರು ತಮ್ಮ ಬರಹಗಳಲ್ಲಿ ಸ್ವಲ್ಪ ಸಂಯಮ ತಾಳಿ, ಯಾರಿಗೂ ನೋವಾಗದಂತೆ ಬರೆದರೆ, ಪ್ರತಿಕ್ರಿಯೆಗಳೂ ಅದೇ ಧಾಟಿಯಲ್ಲಿ ಬರುತ್ತವೆ.

      ಇನ್ನು ಪ್ರಸ್ತುತ ಲೇಖನವನ್ನು “ಶಾಜಹಾನ್” ಅವರು ಚೀಪ್ ಎಂದು ಟೀಕಿಸಿದ್ದಾರೆ. ಸಮಾಜದ ಸಾಮರಸ್ಯವನ್ನು ಕೆಡಿಸುತ್ತದೆ ಎಂದಿದ್ದಾರೆ. ಆದರೆ, ತಮ್ಮ ಮಾತಿಗೆ ಯಾವುದೇ ಸಾಕ್ಷ್ಯವನ್ನೂ ನೀಡುವ ಪ್ರಯತ್ನ ಮಾಡಿಲ್ಲ. ಚರ್ಚೆ ಆರೋಗ್ಯಕರವಾಗಿ ನಡೆಯಬೇಕಾದರೆ, ಪ್ರತಿಕ್ರಿಯೆಗಳು ವಸ್ತುನಿಷ್ಠವಾಗಿರಬೇಕು. “ಶಾಜಹಾನ್” ಅವರ ಪ್ರತಿಕ್ರಿಯೆಯಲ್ಲಿ ವಸ್ತುನಿಷ್ಠತೆ ಕಾಣುತ್ತಿಲ್ಲ. ನೀವು ಅವರಿಗೆ ಸಮಾಧಾನ ಹೇಳುವ ಬದಲು, ಅವರ ಪ್ರತಿಕ್ರಿಯೆಯ ನ್ಯೂನತೆಯನ್ನು ಎತ್ತಿ ತೋರಿಸಿದ್ದರೆ ಹೆಚ್ಚು ಉಪಯೋಗವಾಗುತ್ತಿತ್ತು.

      ಉತ್ತರ
      • ashok's avatar
        ಸೆಪ್ಟೆಂ 3 2012

        ನನ್ನ ಅಭಿರುಚಿಯ ಬಗ್ಗೆ ಶ್ರೇಷ್ಟ ಪ್ರಶಸ್ತಿ ನೀಡಿದ್ದಕ್ಕೆ ಕುಮಾರರಿಗೆ ಧನ್ಯವಾದಗಳು! ‘ಯಾರಿಗೂ ನೋವಾಗದಂತೆ ಬರೆಯಬೇಕು’ ಎಂಬುದನ್ನು ಖಂಡಿತ ನಾನು ಒಪ್ಪುವುದಿಲ್ಲ ಸ್ವಾಮಿ. ಯಾರಿಗೂ ನೋವಾಗದಂತೆ ಬರೆಯುವುದಾದರೆ ನೀವು ಕಮೆಂಟುಗಳನ್ನು ಹಾಕುತ್ತಿರಲಿಲ್ಲ ಅಲ್ಲವೇ? ಅಸ್ಪ್ರಶ್ಯತೆ ವಿರುದ್ಧವಾಗಿ ಶ್ರೀಗಳು ನಡೆಸಿದ ಹೋರಾಟ, ವಿದ್ಯುತ್ ಸ್ಥಾವರದ ವಿರುದ್ಧವಾಗಿ ರೈತರ ಪರವಾಗಿ ನಡೆಸಿದ ಹೋರಾಟಗಳು ನಮಗೂ ತಿಳಿದಿದೆ, ಅದರ ಬಗ್ಗೆ [ಆ ಹೋರಾಟಗಳಲ್ಲಿ ಕೆಲವು ಅವರ ದ್ವಂದ್ವ ನೀತಿಯಿಂದ ಹಿನ್ನಡೆ ಅನುಭವಿಸಿರೂ ಕೂಡ] ನನಗೂ ಗೌರವವಿದೆ. ಗೌರವವಿದೆ ಎಂಬ ಕಾರಣಕ್ಕೆ ಅವರ ತಪ್ಪು ಮಾತುಗಳನ್ನೂ ತಪ್ಪು ನಡೆಗಳನ್ನೂ ಕಂಡು ಸುಮ್ಮನಿದ್ದು ಒಳ್ಳೆಯವನಾಗುವ ಕಲೆ ನನಗೆ ಗೊತ್ತಿಲ್ಲ ಸರ್.
        ವ್ಯಕ್ತಿಯನ್ನು ಹಂಗಿಸುವುದರ ಬಗ್ಗೆ, ಮಲ್ಯನಿಗೂ ಪೇಜಾವರರಿಗೂ ಏನು ಸಂಬಂಧ ಎಂಬ ಸಕಾಲಿಕ ಪ್ರಶ್ನೆ ಎತ್ತಿದ್ದೀರಿ. ನೀವು ಯಾವ ಭಾಗದವರೋ ಗೊತ್ತಿಲ್ಲ. ನಾನು ಕಳೆದ ಒಂದೂವರೆ ವರುಷದಿಂದ ಕರಾವಳಿ ಭಾಗದಲ್ಲಿದ್ದೇನೆ. ಇಲ್ಲಿರುವ ಅನಾರೋಗ್ಯಕರ ಮುಸ್ಲಿಂ ಮತ್ತು ಹಿಂದೂ ಮತಾಂಧತೆಗಳೆರಡನ್ನೂ ಹತ್ತಿರದಿಂದ ಕಂಡಿದ್ದೇನೆ. ಆ ಕಾರಣದಿಂದ ನನ್ನ ಲೇಖನದಲ್ಲಿ ಚಿನ್ನದ ಬಾಗಿಲಿನ ಜೊತೆಗೆ ಪೇಜಾವರರು, ಇಲ್ಲಿನ ಹಿಂದೂ ಸಂಘಟನೆಗಳ ವಿಷಯ ಪ್ರಸ್ತಾಪವಾಗಿದೆಯೇ ಹೊರತು ಯಾರನ್ನೂ ಅಪಮಾನಿಸುವ ಇಲ್ಲ ಮೂದಲಿಸುವ ಉದ್ದೇಶ ಕಂಡಿತ ನನಗಿರಲಿಲ್ಲ.
        ಇನ್ನು ನನ್ನ ‘ಕೀಳು’ ಅಭಿರುಚಿಯ ಬಗ್ಗೆ ವಿಧವಿಧವಾದ ಪದಪುಂಜಗಳಿಂದ ಹೊಗಳಿದ್ದೀರಿ! ನಿಮ್ಮ ಹೊಗಳಿಕೆಗೆ ನಿಮ್ಮ ಮನಸ್ಥಿತಿಗೆ ನೋವಾಗಬಾರದೆಂದು ಒಂದು ಘಂಟೆ ಯೋಚಿಸಿ ಮೂದಲಿಕೆಯ ರೂಪದಲ್ಲಿರಬಹುದೆಂದು ನನಗೆ ಅನ್ನಿಸಿದ ಕೆಲವು ಪ್ರಶ್ನೆಗಳು! –
        ಮಾಂಸಾಹಾರಕ್ಕೂ ಪೇಜಾವರರಿಗೂ ಏನು ಸಂಬಂಧ? ಅವರ್ಯಾಕೆ ಮಾಂಸಾಹಾರಿಗಳ ಬಗ್ಗೆ ವಿನಾಕಾರಣ ಹೇಳಿಕೆ ನೀಡಬೇಕಿತ್ತು?
        ಮಡೆಸ್ನಾನದ ಬಗ್ಗೆ ನಿಮಗೆ ತಿಳಿದಿರಬಹುದು. ಮಡೆಸ್ನಾನ ನಡೆಯುತ್ತಿದ್ದಿದ್ದು ಸುಬ್ರಹ್ಮಣ್ಯದಲ್ಲಿ. ಅದರ ಪರ ವಿರೋಧದ ಬಗ್ಗೆ ಪೇಜಾವರರೇಕೆ ಮೂಗು ತೂರಿಸಿದರು? [ಅವರು ಆ ಸಂಪ್ರದಾಯವನ್ನು ಅವಶ್ಯಕತೆಯಿಲ್ಲದ್ದು ಎಂದು ಹೇಳಿದ್ದರು]
        ಹೆಂಡ ಕುಡಿಯುತ್ತಾರೆಂದು ಚೆಚ್ಚುವ ಸಂಘಟನೆಗಳೂ ಕೂಡ ಹೆಂಡದ ದೊರೆ ನೀಡಿದ ಬಾಗಿಲ ಬಗ್ಗೆ ವಿರೋಧ ವ್ಯಕ್ತಪಡಿಸಬೇಕಿತ್ತಲ್ಲವೇ?

        ಉತ್ತರ
  5. ಗಿರೀಶ್'s avatar
    ಗಿರೀಶ್
    ಸೆಪ್ಟೆಂ 3 2012

    ಕನ್ನಡ ನಾಡಿನಲ್ಲಿ ಉರ್ದು ಮಾತನಾಡುವವರ ಸಂಖ್ಯೆ ಶೇ ೧೦.೬೬ ರಷ್ಟಿದೆ. ಮಿಕ್ಕೆಲ್ಲವೂ ಬಿಡಿ ಸ್ಥಾನದಲ್ಲಿರುವವುಗಳೆ. ಉಟ್ಟು ಕನ್ನಡ ಓರಾಟಗಾರರು. ಉರ್ದು ಶಾಲೆಗಳನ್ನು ಮುಚ್ಚಲು ತಾಕತ್ತಿದ್ದರೆ ಓ(ಹಾ)ರಾಡಲಿ ನೋಡೋಣ.

    ಉತ್ತರ
  6. Kumar's avatar
    ಸೆಪ್ಟೆಂ 3 2012

    ashok> ಶರ್ಟು ಬಿಚ್ಚಿ ಹೆಗಲ ಮೇಲೆ ಹಾಕಿಕೊಳ್ಳುವುದು ಯಾವ ಪುರುಷಾರ್ಥಕ್ಕೆ?
    ashok> ಮಾಂಸಾಹಾರಕ್ಕೂ ಪೇಜಾವರರಿಗೂ ಏನು ಸಂಬಂಧ? ಅವರ್ಯಾಕೆ ಮಾಂಸಾಹಾರಿಗಳ ಬಗ್ಗೆ ವಿನಾಕಾರಣ ಹೇಳಿಕೆ ನೀಡಬೇಕಿತ್ತು?
    ashok> ಮಡೆಸ್ನಾನದ ಬಗ್ಗೆ ನಿಮಗೆ ತಿಳಿದಿರಬಹುದು. ಮಡೆಸ್ನಾನ ನಡೆಯುತ್ತಿದ್ದಿದ್ದು ಸುಬ್ರಹ್ಮಣ್ಯದಲ್ಲಿ. ಅದರ ಪರ ವಿರೋಧದ ಬಗ್ಗೆ ಪೇಜಾವರರೇಕೆ ಮೂಗು ತೂರಿಸಿದರು?
    ನೋಡಿ, ನಿಮ್ಮ ವಾದವು ಹೇಗೆ ದಾರಿ ತಪ್ಪುತ್ತಿದೆ ಎಂದು? ನೀವು ಬರೆದಿರುವ ಲೇಖನ ವಿಜಯ ಮಲ್ಯ ಅವರು ದೇವಸ್ಥಾನಕ್ಕೆ ಚಿನ್ನದ ಬಾಗಿಲನ್ನು ನೀಡಿದ್ದಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳುವುದಕ್ಕೆ ಮೇಲಿನ ನಿಮ್ಮ ಧಾಟಿಗಿಂತ ಬೇರೆ ಬೇಕೆ?

    ashok> ವ್ಯಕ್ತಿಯನ್ನು ಹಂಗಿಸುವುದರ ಬಗ್ಗೆ, ಮಲ್ಯನಿಗೂ ಪೇಜಾವರರಿಗೂ ಏನು ಸಂಬಂಧ ಎಂಬ ಸಕಾಲಿಕ ಪ್ರಶ್ನೆ ಎತ್ತಿದ್ದೀರಿ. ನೀವು ಯಾವ ಭಾಗದವರೋ ಗೊತ್ತಿಲ್ಲ. ನಾನು
    ashok> ಕಳೆದ ಒಂದೂವರೆ ವರುಷದಿಂದ ಕರಾವಳಿ ಭಾಗದಲ್ಲಿದ್ದೇನೆ. ಇಲ್ಲಿರುವ ಅನಾರೋಗ್ಯಕರ ಮುಸ್ಲಿಂ ಮತ್ತು ಹಿಂದೂ ಮತಾಂಧತೆಗಳೆರಡನ್ನೂ ಹತ್ತಿರದಿಂದ ಕಂಡಿದ್ದೇನೆ. ಆ
    ashok> ಕಾರಣದಿಂದ ನನ್ನ ಲೇಖನದಲ್ಲಿ ಚಿನ್ನದ ಬಾಗಿಲಿನ ಜೊತೆಗೆ ಪೇಜಾವರರು, ಇಲ್ಲಿನ ಹಿಂದೂ ಸಂಘಟನೆಗಳ ವಿಷಯ ಪ್ರಸ್ತಾಪವಾಗಿದೆಯೇ ಹೊರತು
    ಕರಾವಳಿಯಲ್ಲಿರುವ ಮುಸ್ಲಿಂ ಮತಾಂಧತೆ-ಹಿಂದು ಮತಾಂಧತೆಯ ವಿಷಯಗಳು ವಿಜಯ ಮಲ್ಯ ಕುರಿತು ಮಾತನಾಡುವಾಗ ಹೇಗೆ ಬರಲು ಸಾಧ್ಯ ಎಂದೇ ನನಗೆ ಹೊಳೆಯುತ್ತಿಲ್ಲ! ಅಥವಾ ಲೇಖನದ ವಿಷಯಕ್ಕೆ ಸಂಬಂಧಿಸಿರದಿದ್ದರೂ ನೀವು “ಹತ್ತಿರದಿಂದ ಕಂಡಿರುವ” ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ “ವಿಶೇಷ” ಆಸಕ್ತಿಯೋ?
    ಆದರೆ, ಮುಸ್ಲಿಂ ಮತಾಂಧತೆ ಮತ್ತು ಹಿಂದು ಮತಾಂಧತೆಗೆ ಒಂದು ಮೂಲಭೂತ ವ್ಯತ್ಯಾಸವನ್ನು ತಿಳಿದಿದ್ದರೆ ನಿಮ್ಮ ವಿಶ್ಲೇಷಣೆಗೆ ಉಪಯೋಗವಾದೀತು – ಮುಸ್ಲಿಂ ಮತಾಂಧತೆ “ಜೆಹಾದ್”ನ ಪ್ರೇರಣೆಯಿಂದ ಹುಟ್ಟಿದ್ದು. ಜಗತ್ತಿನಲ್ಲಿ ಎಲ್ಲೇ ಮುಸ್ಲಿಮರಿಗೆ ಅಥವಾ ಇಸ್ಲಾಂಗೆ ತೊಂದರೆಯಾದರೂ ಏಟು ಬೀಳುವುದು ಭಾರತದ ಹಿಂದುಗಳಿಗೆ. ಉದಾಹರಣೆಗೆ, ಯಾವುದೋ ದೇಶದಲ್ಲಿ ಬರೆದ ವ್ಯಂಗ್ಯಚಿತ್ರಕ್ಕೆ ಪ್ರತಿಭಟನೆ ನಡೆಸುವ ನೆಪದಲ್ಲಿ ಭಾರತದಲ್ಲಿ ಹಿಂಸಾಚಾರ ನಡೆಸಿದ್ದರು. ಇದಕ್ಕೆ ಹಿಂದುಗಳು ಸುಮ್ಮನೆ ಕೂಡುತ್ತಿಲ್ಲ, ಅವರೂ ಪ್ರತಿಕ್ರಿಯಿಸುತ್ತಿದ್ದಾರೆ. ಆ ಪ್ರತಿಕ್ರಿಯೆ ಹಿಂದು-ಮತಾಂಧತೆಯ ರೂಪದಲ್ಲಿ ಕಾಣುತ್ತಿದೆ. ಹೀಗಾಗಿ ಹಿಂದು ಮತಾಂಧತೆಯನ್ನು ಇಲ್ಲವಾಗಿಸಬೇಕಾದರೆ, ಅದು ಯಾವ ಕಾರಣಕ್ಕಾಗಿ ಪ್ರಾರಂಭವಾಗಿದೆಯೋ ಅದನ್ನು ಮೊದಲು ಇಲ್ಲವಾಗಿಸಬೇಕು. ಕೇವಲ “ಜಾತ್ಯಾತೀತ” ಎಂದು ತೋರಿಸಿಕೊಂಡು “ಬುದ್ಧಿಜೀವಿ”ಯಾಗಿ ಮೆರೆಯಲು “ತ್ರಯಸ್ಥ”ನಂತೆ ಸೋಗು ಹಾಕಲು ಮುಸ್ಲಿಂ ಮತಾಂಧತೆಯನ್ನು ಮತ್ತು ಹಿಂದು ಮತಾಂಧತೆಯನ್ನು ಒಂದೇ ತಕ್ಕಡಿಯಲ್ಲಿ ತೂಗುವುದರಿಂದ ಯಾವ ಉಪಯೋಗವೂ ಇಲ್ಲ. “Action and Reaction are equal and opposite.” If you don’t want the reaction, then stop the action!

    ashok> ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!
    ನೋಡಿ ನೀವು ಎಷ್ಟು “ಗೌರವ”ದಿಂದ ಬರೆದಿದ್ದೀರಿ? ಇಷ್ಟೆಲ್ಲಾ ಬರೆದ ನಂತರ, ಪೇಜಾವರಶ್ರೀಗಳ ಬಗೆ ನನಗೂ ಬಹಳ ಗೌರವವಿದೆ ಎಂಬ ಸಮರ್ಥನೆ ಬೇರೆ! ಎರಡು ನಾಲಗೆಯ ರಾಜಕಾರಣಿಗಳ ನೆನಪಾಗುತ್ತದೆ ಅಷ್ಟೇ!

    ashok> ಆದರೆ ಮಾಂಸಹಾರಿಗಳ ಪಕ್ಕ ಸಸ್ಯಹಾರಿಗಳು ಕುಳಿತುಕೊಳ್ಳುವುದರಿಂದ ಸಸ್ಯಹಾರಿಗಳೂ ಮಾಂಸ ಸೇವಿಸುವ ‘ದುಷ್ಟ’ ಕೆಲಸ ಆರಂಭಿಸಿಬಿಡುತ್ತಾರೆಂಬ ಅವರ ‘ಭಯ’
    ಬನಿಯನ್ ತೆಗೆಯುವುದು ಜನಿವಾರ ನೋಡುವುದಕ್ಕೆಂದು ನೀವಂದುಕೊಂಡಿಲ್ಲವೇ? ಪೇಜಾವರಶ್ರೀಗಳ ಅಭಿಪ್ರಾಯ ತಪ್ಪೇ ಆಗಿರಬಹುದು. ಅದು ಅವರ ಅಭಿಪ್ರಾಯ ಮತ್ತು ಅವರಿಗೂ “ಸ್ವತಂತ್ರ” ಭಾರತದಲ್ಲಿ ಅಭಿಪ್ರಾಯ ಸ್ವಾತಂತ್ರ್ಯ ಇದೆ. ಆದರೆ, ಅದನ್ನೇ ನೆನಪು ಮಾಡಿಕೊಂಡು ಮೂದಲಿಕೆಯ ಧ್ವನಿಯಲ್ಲಿ ಮಾತನಾಡುವುದು ಎಷ್ಟರಮಟ್ಟಿಗೆ ಸರಿ?

    ashok> “ಹೆಂಡ ಮಾರುವವರಿಂದ ಯಕಶ್ಚಿತ್ ಕ್ಯಾಲೆಂಡರಿಗಾಗಿ ಅರೆಬೆತ್ತಲೆ ಹುಡುಗಿಯರ ಫೋಟೋಶೂಟ್ ಮಾಡುವವರಿಂದ ಚಿನ್ನದ ಬಾಗಿಲನ್ನು ದಾನವಾಗಿ
    ashok> ಪಡೆದುಕೊಳ್ಳಬೇಡಿ” ಎಂದು ಸುಬ್ರಹ್ಮಣ್ಯ ದೇವಾಲಯದವರಿಗೆ ‘ಬುದ್ಧಿ’ ಹೇಳಿದ ವರದಿಗಳಾಗಿಲ್ಲ.
    ಪ್ರತಿಯೊಂದು ವಿಷಯಕ್ಕೂ ಪೇಜಾವರಶ್ರೀಗಳು ಹೇಳಿಕೆ ನೀಡಬೇಕು, ಅದನ್ನು ಮಾಧ್ಯಮ ಒಂದು ವಿವಾದವನ್ನಾಗಿ ಮಾಡಬೇಕು. ಆಗ, ಅವರನ್ನು ತೆಗಳಿ ಒಂದು ಲೇಖನ ಬರೆಯುವ ಅವಕಾಶ. ಆದರೆ, ಅವರು ಹೇಳಿಕೆ ನೀಡದಿದ್ದರೂ ಅದನ್ನೊಂದು ವಿವಾದ ಮಾಡುವ ಅಸಾಧ್ಯ “ಬುದ್ಧಿ”ವಂತರು ಇದ್ದಾರೆ ಎನ್ನುವುದು ನಿಮ್ಮ ಈ ಲೇಖನದಿಂದ ಸಾಬೀತಾಯಿತು!

    ನಿಮ್ಮ ಲೇಖನದ ಶೀರ್ಷಿಕೆ ವಿಜಯ ಮಲ್ಯ ಹಾಗೂ ಚಿನ್ನದ ಬಾಗಿಲು ಆದರೂ, ಮುಖ್ಯವಸ್ತು ಅದಲ್ಲ ಎನ್ನುವುದು ಬಹಳ ಸ್ಪಷ್ಟ. ನಿಮ್ಮ ಮನಸ್ಸಿನಲ್ಲಿರುವ “ಕಹಿ” ಅನೇಕ ಸ್ಥಳಗಳಲ್ಲಿ ಆಗಾಗ ಇಣುಕಿ ಹಾಕಿದೆ. ನೀವೇ ನಿಮ್ಮ ಲೇಖನವನ್ನು ಒಮ್ಮೆ ಓದಿಕೊಂಡು ಸ್ವವಿಮರ್ಶೆ ಮಾಡಿಕೊಳ್ಳಿ.

    ಒಂದು ವಿಷಯ ನೆನಪಿಟ್ಟುಕೊಳ್ಳಿ. ನೀವು ಹಿಂದುಗಳನ್ನು ಟೀಕಿಸಬಹುದು. ಹಿಂದು ಸಮಾಜದ ಕುರೂಡಿಗಳನ್ನು ಕುರಿತಾಗಿ ಬರೆಯಬಹುದು. ಹಿಂದು ಸಮಾಜ ತನ್ನಲ್ಲಿರುವ ಕೆಟ್ಟದ್ದನ್ನೆಲ್ಲಾ ತೆಗೆದುಹಾಕಿಕೊಂಡು ಸ್ವಚ್ಛವಾಗಲು ಸಿದ್ಧವಾಗಿದೆ. ಆದರೆ, ಹಿಂದು ಸಮಾಜದ ಸುಧಾರಣೆಯನ್ನು ಪೇಜಾವರಶ್ರೀಗಳೋ ಅಥವಾ ಶಂಕರಾಚಾರ್ಯರೋ ಅಥವಾ ಇನ್ಯಾರೋ ಮಠಾಧೀಶರೋ ತೆಗೆದುಕೊಂಡಿಲ್ಲ. ಸಮಾಜದ ಒಳಗಿನಿಂದ ಸುಧಾರಣೆಯ ಕೂಗು ಹೊರಗೆ ಬರಬೇಕು. ಕುರೂಢಿಗಳ ಆಚರಣೆ ಚಾಲ್ತಿಗೆ ಬರಲು ಹಲವು ಶತಮಾನಗಳೇ ಸಂದಿರಬಹುದು. ಅವು ಹೋಗಲೂ ಅಷ್ಟೇ ಸಮಯ ತೆಗೆದುಕೊಳ್ಳುತ್ತದೆ. ಸುಧಾರಣೆಯ ಆಸಕ್ತಿಯುರುವವರು ಸುಧಾರಣೆ ಆಗುವತನಕ ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಕೇವಲ ವ್ಯಕ್ತಿಗಳನ್ನು, ಸಮಾಜವನ್ನು ಮೂದಲಿಸುವುದರಿಂದ ಏನೂ ಸಾಧಿಸಿದಂತಾಗುವುದಿಲ್ಲ. ಹಿಂದು ಸಮಾಜ ಸಹನಶೀಲ ಸಮಾಜ. ಹೀಗಾಗಿ, ನಿಮಗೆ ಅದನ್ನು ಟೀಕಿಸುವುದರಿಂದ ತೊಂದರೆಯೂ ಇಲ್ಲ. ಅದನ್ನೇ ಇತರ ಸಮಾಜಗಳೊಡನೆ ಪ್ರಯತ್ನಿಸಿ ನೋಡಿ. ಆಗ ತಿಳಿಯುತ್ತದೆ ನನ್ನ ಮಾತಿನ ಅರ್ಥ.

    ಉತ್ತರ
  7. shrivathsa's avatar
    ಸೆಪ್ಟೆಂ 9 2012

    nice article sunil.

    ಉತ್ತರ
  8. Bindu's avatar
    Bindu
    ಸೆಪ್ಟೆಂ 16 2012

    idu kannada para, deshada para lekhanave horatu, idaralli komuvaada elliyoo illa.

    ಉತ್ತರ
  9. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಸೆಪ್ಟೆಂ 18 2012

    “ಕೇವಲ ವ್ಯಕ್ತಿಗಳನ್ನು, ಸಮಾಜವನ್ನು ಮೂದಲಿಸುವುದರಿಂದ ಏನೂ ಸಾಧಿಸಿದಂತಾಗುವುದಿಲ್ಲ. ಹಿಂದು ಸಮಾಜ ಸಹನಶೀಲ ಸಮಾಜ. ಹೀಗಾಗಿ, ನಿಮಗೆ ಅದನ್ನು ಟೀಕಿಸುವುದರಿಂದ ತೊಂದರೆಯೂ ಇಲ್ಲ. ಅದನ್ನೇ ಇತರ ಸಮಾಜಗಳೊಡನೆ ಪ್ರಯತ್ನಿಸಿ ನೋಡಿ. ಆಗ ತಿಳಿಯುತ್ತದೆ ನನ್ನ ಮಾತಿನ ಅರ್ಥ.”>>>ಸರಿಯಾಗಿ ಹೇಳಿದ್ದೀರಿ ಕುಮಾರ್ . ಆದರೆ ಅವರಿಗೆ ಅದು ಅರ್ಥ ಆಗಬೇಕಲ್ಲ! ಅವರು ಮಾತ್ರವಲ್ಲ ಇನ್ನೂ ಅನೇಕರು ಇದ್ದಾರೆ ನೋಡಿ ಇಲ್ಲಿ!!! ಅಶೋಕ್ ಸರ್, ಕುಮಾರ್ ಹೇಳಿದ್ದು ಸರಿಯಾಗಿ ಅರ್ಥ ಆಗಬೇಕಿದ್ದರೆ ಒಮ್ಮೆ ಪ್ರಯೋಗಾರ್ಥವಾಗಿ ಆದರೂ ಬೇರೆ ಮತಗಳ ಬಗ್ಗೆ ” ನಿಮ್ಮ ಈ ತರಝಾದ ಸುಧಾರಣ ವಾದವನ್ನ ಬಿಚ್ಚಿಡಿ’ ಏಕೆಂದರೆ ಅಲ್ಲೂ ಇವೆ ಬಹಳಷ್ಟು ಕಂದಾಚಾರಗಳು!! “ಸಂವಿಧಾನ ವಿರೋಧಿ” ಆಚರಣೆ ಗಳು! ನೋಡೋಣ ನಿಮ್ಮ ಸಾಚಾತನವನ್ನು!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments