ಟೆಕ್ಕಿಗಳಿಂದ ಕನ್ನಡ ಹಾಸ್ಯ ನಾಟಕೋತ್ಸವ
ಪವನ್ ಪಾರುಪತ್ತೇದಾರ
ಪ್ರತಿದಿನ C++, Java,.net ಸರ್ವರ್ರುಗಳ ಮಧ್ಯೆ ಇರುವ ಸಾಫ್ಟ್ವೇರ್ ಇಂಜಿನಿಯರುಗಳ ತಂಡವೇ ರಂಗತಂತ್ರ. 2008ರಲ್ಲಿ ಸ್ಥಾಪಿತವಾದ ಈ ತಂಡ, ಹವ್ಯಾಸಿ ನಾಟಕಕಾರರನ್ನು ಹೊಂದಿದ್ದು, ಇಲ್ಲಿಯವರೆಗೂ 8 ಪ್ರದರ್ಶನಗಳನ್ನು ನೀಡಿದೆ. ಈ ಹವ್ಯಾಸಿ ಟೆಕ್ಕಿ ಕಲಾವಿದರು ತಮ್ಮ ಕಚೇರಿಯ ಬಿಡುವಿಲ್ಲದ ಸಮಯದ ಮಧ್ಯೆ, ತಮ್ಮ ವೀಕೆಂಡುಗಳನ್ನೆಲ್ಲ ಬದಿಗಿಟ್ಟು, ಬಹಳಷ್ಟು ಕಷ್ಟ ಪಟ್ಟು ಅಭ್ಯಾಸ ಮಾಡಿ, ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಮುಂದೆ ಹಾಸ್ಯ ನಾಟಕೋತ್ಸವ ನಡೆಸಲು ಸಜ್ಜಾಗಿದ್ದಾರೆ.
ತಂಡದ ಮೇಷ್ಟ್ರು ಮಹದೇವ್ ಪ್ರಸಾದ್ ಯುವಪಡೆಯೊಂದನ್ನು ಸಜ್ಜು ಮಾಡಿಕೊಂಡಿದ್ದು, ನಾಟಕ ಪ್ರಿಯರಿಗೆ ನಗೆಯ ಹಬ್ಬದೂಟ ಬಡಿಸಲು ತಯಾರಿ ನಡೆಸುತಿದ್ದಾರೆ. ಲಾಕ್ ಔಟ್ ಅಲ್ಲ ನಾಕೌಟ್, ಶ್ರೀ ಕೃಷ್ಣ ಸಂಧಾನ ಮತ್ತು ಬಂಡ್ವಾಳವಿಲ್ಲದ ಬಡಾಯಿಯಂತಹ ಪ್ರಸಿದ್ಧ ಹಾಸ್ಯ ನಾಟಕಗಳನ್ನು ನಿಮ್ಮ ಮುಂದಿಡಲು ಕಾತುರದಿಂದ ಕಾಯುತಿದ್ದಾರೆ. ನಾಟಕ ಪ್ರಿಯರೆಲ್ಲ ಬಂದು ಸಾಫ್ಟ್ ವೇರ್ ಟೆಕ್ಕಿಗಳ ಪ್ರಯತ್ನವನ್ನು ಪ್ರೋತ್ಸಾಹಿಸಿ ಹರಸಬೇಕಾಗಿ ವಿನಂತಿ.
ನಾಟಕ ಪ್ರದರ್ಶನ ನಡೆಯುವ ದಿನಾಂಕಗಳು ಕೆಳಗಿನಂತಿವೆ.
ಅಕ್ಟೋಬರ್ 12 – ಶ್ರೀ ಕೃಷ್ಣ ಸಂಧಾನ
ಅಕ್ಟೋಬರ್ 13 – ಬಂಡ್ವಾಳವಿಲ್ಲದ ಬಡಾಯಿ
ಶ್ರೀ ಕೃಷ್ಣ ಸಂಧಾನ : ರಚನೆ : ವಿ ಎನ್ ಅಶ್ವಥ್
ವಿದ್ಯೆ ಇಲ್ಲದ ಹಳ್ಳಿ ಜನ ನಾಟಕ ಮಾಡಲು ಹೊರಟಾಗ ಎದುರಾಗುವ ಛಾಲೆಂಜುಗಳೇನು, ಅ ಹಳ್ಳಿ ಜನಕ್ಕೆ ನಾಟಕ ಹೇಳಿಕೊಡಲು ಬರುವ ಮೇಷ್ಟ್ರಿಗೆ ಅದರ ಅರಿವಿರೋದಿಲ್ಲ. ಬಂದು ಇವ್ರಿಗೆ ನಾಟಕ ಹೇಳಿಕೊಡಕ್ಕೆ ಶುರು ಮಾಡಿ ಗೆಜ್ಜೆಗ್ ಪೂಜೆ ಮಾಡ್ಸೋ ಅಷ್ಟ್ರಲ್ಲಿ ಮೇಷ್ಟ್ರು ಗೋಳು ಕೇಳಕ್ಕಾಗಲ್ಲ. ಅಂತಹ ಮೇಷ್ಟ್ರು ಮತ್ತೆ ಶಿಶ್ಯಂದಿರ ನಡುವೆ ನಡೆವ ನಗೆ ನಾಟಕ ಕೃಷ್ಣ ಸಂಧಾನ. ಈ ನಾಟಕ ಈಗಾಗ್ಲೆ ಕನ್ನಡದ ನಾಟಕ ಪ್ರಿಯರಿಗೆಲ್ಲ ಚಿರಪರಿಚಿತ. ಆದಕ್ಕೆ ಕಾರಣ ನಾಟಕದ ಪ್ರತಿಯೊಂದು ಸಾಲಿನಲ್ಲು ಇರುವ ನಗೆಮಿಠಾಯಿ ಅಂದ್ರೆ ತಪ್ಪಾಲ್ಲ ಬಿಡಿ. ನಾಟಕದ ಪ್ರತಿಯೊಂದು ಲೈನ್ ಸಹ ಪಂಚ್ ಲೈನ್. ನೀವೆಷ್ಟು ಬಾರಿ ನೋಡಿದರೂ ಬೇಜಾರಾಗದ ನಾಟಕ ಇದು. ಇಂತಹ ನಗೆಯ ರಸಾಯನ ಸಹ ರಂಗತಂತ್ರದ ಹಾಸ್ಯೋತ್ಸವದ ಕೊಡುಗೆ.
ಬಂಡ್ವಾಳವಿಲ್ಲದ ಬಡಾಯಿ : ರಚನೆ : ಟಿ.ಪಿ. ಕೈಲಾಸಂ
ನಾಟಕ ಬ್ರಹ್ಮ ‘ಟಿಪಿಕಲ್’ ಟಿ.ಪಿ.ಕೈಲಾಸಂ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಎಲ್ಲರಿಗೂ ಚಿರಪರಿಚಿತ ಹೆಸರು ಅದು. ಲಾಯರ್ ಒಬ್ಬನ ಬಡಾಯಿ ಕೊಚ್ಚಿಕೊಳ್ಳುವ ಸನ್ನಿವೇಶಗಳನ್ನೊಳಗೊಂಡ ಚಿತ್ರಣವೇ ಬಂಡ್ವಾಳವಿಲ್ಲದ ಬಡಾಯಿ. ಅದೇ ಬಡಾಯಿ ಉಪಯೋಗಿಸಿಕೊಂಡು ಆ ಲಾಯರ್ ಹೇಗೆ ಗೆಲ್ತಾನೇ ಅನ್ನೋದೆ ನಾಟಕ. ಮೇಲಿನ ಎಲ್ಲ ನಾಟಕಗಳನ್ನ ನೋಡ್ಬೇಕು ಅಂತ ಖಂಡಿತ ಅನ್ಸಿರುತ್ತೆ, ಅಲ್ವ ಗೆಳೆಯರೆ? ಕೆಳಗಿನ ವಿಳಾಸದಲ್ಲಿ ನಾಟಕಗಳು ಪ್ರದರ್ಶನವಾಗಲಿದೆ. ಮತ್ತು ಟಿಕೆಟ್ ಪಡೆಯಲು ಆನ್ಲೈನ್ ಲಿಂಕುಗಳಿವೆ.
ಈ ಕೂಡಲೆ ಟಿಕೆಟ್ ಪಡೆದು ನಾಟಕ ನೋಡಿ ರಂಗತಂತ್ರದ ಪ್ರಯತ್ನಕ್ಕೆ ನಿಮ್ಮ ಬೆಂಬಲ ನೀಡಿರಿ. ಟಿಕೆಟ್ ಬೆಲೆ : 70 ರು.
ನಾಟಕ ನಡೆಯುವ ಸ್ಥಳ 12 ಮತ್ತು 13ನೇ ಅಕ್ಟೋಬರ್ : ಎಡಿಎ ರಂಗಮಂದಿರ, ಜೆಸಿ ರಸ್ತೆ, ಬೆಂಗಳೂರು.
ಆನ್ಲೈನ್ ಟಿಕೆಟ್ ಪಡೆಯಲು ಕೆಳಗಿನ ಲಿಂಕ್ ಸಹಾಯ ಪಡೆಯಿರಿ :
ಬಂಡ್ವಾಳವಿಲ್ಲದ ಬಡಾಯಿ :
೧. http://www.indianstage.in/EventDetails.do?eventId=3402
೨. http://www.mybangalore.com/events/haasya-naatakotsava-2012-bandvalvillad-badayi.html
ಶ್ರೀ ಕೃಷ್ಣ ಸಂಧಾನ :
೧. http://www.indianstage.in/EventDetails.do?eventId=3376
೨. http://www.mybangalore.com/events/haasya-naatakotsava-2012-shri-krishna-sandhana.html
ಈ ಸಂಖ್ಯೆಗಳಿಗೆ ಕರೆ ಮಾಡಿ ಸಹ ಟಿಕೆಟ್ ಪಡೆಯಬಹುದು : 9449795282, 9845421929 ಮತ್ತು 9880585490
ನಿಮ್ಮ ಪ್ರೋತ್ಸಾಹಕ್ಕಾಗಿ ಎದುರು ನೋಡುತ್ತಿರುವ
ರಂಗತಂತ್ರ
ನಿಮ್ಮೊಳಗಿನ ನಾವು




