ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 18, 2012

23

ಏಕ್ ಥಾ ಟೈಗರ್…! ಅವನೊಬ್ಬನಿದ್ದ ನಮ್ಮ ಸಳ…!

‍ನಿಲುಮೆ ಮೂಲಕ

– ಚರಿತ್ರ ಕುಮಾರ್

ಮಲೆನಾಡಿನ ಒಂದು ಹಳ್ಳಿ. ಗುರುವೊಬ್ಬ ಶಿಷ್ಯರನ್ನು ಕೂರಿಸಿಕೊಂಡು ಬಯಲಲ್ಲಿ ಪಾಠ ಹೇಳಿಕೊಡುತ್ತಿದ್ದ. ತನ್ಮಯನಾಗಿದ್ದ ಗುರು. ಆಲಿಸುತ್ತಾ ಮನನಮಾಡಿಕೊಳ್ಳುತ್ತಿದ್ದ ಶಿಷ್ಯರು. ವಿದ್ಯೆಯನ್ನು ಪರಿಕಿಸಲೋ ಅಥವಾ ಶಿಷ್ಯರನ್ನು ಅಳೆಯಲೋ ಅಥವಾ ಗುರುವಿನ ಮಟ್ಟವನ್ನು ತಿಳಿಯಲೋ ಎಂಬಂತೆ ವ್ಯಾಘ್ರವೊಂದು ಘರ್ಜಿಸುತ್ತಾ ಬಂತು. ಎಂಥಾ ಗುರು-ಶಿಷ್ಯರೂ ಒಮ್ಮೆ ಅವಕ್ಕಾಗುವ ಸಮಯ. ಗುರುವಿನ ಬಾಯಿಂದ ಬಂದಿದ್ದು ಒಂದೇ ಒಂದು ಮಾತು “ಹೊಯ್-ಸಳ” . ಸಳ ಎಂಬವನು ಶಿಷ್ಯ. ಆತ ನೆಚ್ಚಿನ ಶಿಷ್ಯನೇ ಇರಬೇಕು. ಆತ ಕತ್ತಿ ಹಿರಿಯಲಿಲ್ಲ. ಬಾಣ ಹೂಡಲಿಲ್ಲ. ಬಯಲಲ್ಲಿ ಗುರುಸಮ್ಮುಖದಲ್ಲಿ ಪಾರಾಯಣ ಮಾಡುತ್ತಿದ್ದವನಿಗೆ ಗುರುವಾಕ್ಯವೇ ಆಯುಧಕ್ಕಿಂತ ವೊನಚಾಯಿತು. ಸಳ ಬರಿಗೈಯಲ್ಲೇ ಕಾದ. ಗುರುವಾಕ್ಯ ಪೂರೈಸಿತು. ಹುಲಿ ಅಸುನೀಗಿತು. ಹೊಯ್ ಸಳ ಎಂದಿದ್ದ ಗುರುವೇ ಈಗ “ಭಲೇ ಸಳ” ಎಂದ. ಮುಂದೆ ಗುರುವಾಕ್ಯಬಲದಿಂದಲೇ ಯುವಕ/ಬಾಲಕ ಸಳ ರಾಜ್ಯ ಕಟ್ಟಿದ, ಆಳಿದ. ವಿದ್ಯೆಯ ಬಲ, ಗುರುವಿನ ಬಲ ಮತ್ತು ಶಿಷ್ಯನ ಅಂತಶಕ್ತಿಗೆ ಇವೆಲ್ಲಾ ಘಟನೆಗಳು ಸಾಕ್ಷಿಗಳಾಗಿ ನಿಲ್ಲುತ್ತವೆ. ಇದು ಕನ್ನಡದ ಇತಿಹಾಸದಲ್ಲಿ ದಾಖಲಾಗುವ ಮಹತ್ತರ ಪ್ರಸಂಗ. ಸ್ವಶಕ್ತಿಯಿಂದ , ಸ್ವಚಿಂತನೆಯಿಂದ ಸಾಮ್ರಾಜ್ಯವೊಂದು ಮೈದಾಳಿದ ಕಥೆ. ಹೀಗೆ ಕರ್ನಾಟಕ ಮರೆಯಲಾಗದ, ಸುವರ್ಣಯುಗವನ್ನು ಕಂಡ ಹೊಯ್ಸಳ ಸಾಮ್ರಾಜ್ಯಮುಂದೆ ಹಲವು ವೈಭವಗಳನ್ನು ಕಂಡಿತು. ಕನ್ನಡದ ಹಲವು ಕುರುಹುಗಳನ್ನು ಬಿಟ್ಟುಹೋಯಿತು. ಕರ್ನಾಟಕ ಶಿಲ್ಪ ಕಲೆಗಳ ಬೀಡಾಯಿತು. ಭೂಲೋಕದ ಸ್ವರ್ಗ ಎಂದು ಕವಿಗಳು ವರ್ಣಿಸುವಂತಾಯಿತು. ಕರ್ನಾಟಕ ನಾಟ್ಯ ಕಲೆಗಳ ನಾಡಾಯಿತು. ಸರ್ವಧರ್ಮ ಸಮನ್ವಯದ ನೆಲೆಯಾಯಿತು. ದ್ವಾರಸಮುದ್ರದ ಹೊಯ್ಸಳರು ಗಡಿಯಾಚೆಗಿನ ರಾಜರೊಂದಿಗೂ ಕಾದಾಡಿ ಕನ್ನಡದ ಹಿರಿಮೆಯನ್ನು ಸಾರಿದರು. ಆಧುನಿಕ ಪರಿಭಾಷೆಯಲ್ಲಿ ಹೇಳಬೇಕೆಂದರೆ ಕನ್ನಡದ ಮನಸ್ಸನ್ನು ಪ್ರಬಲವಾಗಿ ರೂಪಿಸಿದವರೇ ಹೊಯ್ಸಳರು. ಕರ್ನಾಟಕದಲ್ಲಿ ಶಿವ ದೇವಾಲಯಗಳು ಪ್ರಸಿದ್ಧವಾಗಿದ್ದೇ ವೈಷ್ಣವರಾಗಿದ್ದ ಹೊಯ್ಸಳರ ಕಾಲದಲ್ಲಿ ಎಂಬುದು ಇಂದಿನ ಕಾಲಮಾನದಲ್ಲೂ ಸೋಜಿಗ ಹುಟ್ಟಿಸುವ ಸಂಗತಿ.

ಇಂಥ ಎಷ್ಟೋ ಸಂಗತಿಗಳನ್ನು ಇತಿಹಾಸದ ಪುಟಗಳು ವಿವರಿಸುತ್ತಾ ಹೋಗುತ್ತವೆ. ಆ ಸಂಗತಿಗಳೆಲ್ಲವೂ ಹುಲಿಕೊಂದ ಸಳನ ವಂಶದ ವೈಭವಗಳು-ಕೊಡುಗೆಗಳು. ಇಷ್ಟೊಂದು ವೈಭವಶಾಲಿ, ಪರಾಕ್ರಮಶಾಲಿ,ಪರಿಶ್ರಮಶಾಲಿ ಸಾಮ್ರಾಜ್ಯಕ್ಕೆ ಬೀಜ ಹಾಕಿದ ಸಳ ನಿಜವಾದ ಕರ್ನಾಟಕದ ಹುಲಿ. ಪರಾಕ್ರಮದಲ್ಲಿ, ಗುರುವಾಕ್ಯ ಪರಿಪಾಲನೆಯಲ್ಲಿ , ಹಿಡಿದ ಸಂಗತಿಯನ್ನು ಪಾಲಿಸುವುದರಲ್ಲಿ , ಧರ್ಮ ಕಾರ್ಯದಲ್ಲಿ ,ಪರೋಪಕಾರದಲ್ಲೂ ಆತ ಹುಲಿ. ಅವನೊಬ್ಬನಿದ್ದ ಹುಲಿ. ಏಕ್ ಥಾ ಟೈಗರ್. ಹುಲಿ ಎಂದು ಕರೆದರೆ ಇವನನ್ನೇ ಕರೆಯಬೇಕು ಎಂಬ ಗುಣಲಕ್ಷಣ, ವ್ಯಕ್ತಿತ್ವವನ್ನು ಹೊಂದಿದ್ದ ಸಳ ರಾಜ್ಯ ಕಟ್ಟದೆ ಇನ್ನಾರು ಕಟ್ಟಿಯಾರು? ಆತನನ್ನಲ್ಲದೆ ಇನ್ನಾರನ್ನು ತಾನೇ ಹುಲಿ ಎಂದು ಕರೆಯಲಾದೀತು?

ಆದರೆ ಸಳನಿಗೆ ಎಲ್ಲವೂ ಇದ್ದರೂ ಇತಿಹಾಸದಲ್ಲಿ ಹೇಳಿಕೊಳ್ಳುವಂಥ ಗೌರವದ ಸ್ಥಾನ ಸಿಗಲಿಲ್ಲ ಎಂಬು ನೋವಿನಿಂದಲೇ ಹೇಳಿಕೊಳ್ಳಬೇಕಾಗಿದೆ. ಆತ ಕರ್ನಾಟಕದ ಹುಲಿಯೂ ಆಗಲಿಲ್ಲ. ಸಳನಂಥವನನ್ನು ಕಣ್ಣ ಮುಂದಿಟ್ಟುಕೊಂಡು ಯಾರ್ಯಾರನ್ನೋ “ಹುಲಿ” ಎಂದು ಕರೆದರು. ಸಳ ಕರ್ನಾಟಕದ ಹುಲಿಯಾಗಬಾರದು ಎಂಬ ಒಂದೇ ಒಂದು ಕಾರಣಕ್ಕೆ ನಮ್ಮ “ಕನ್ನಡದ ಮನಸ್ಸು”ಗಳು, ಕರ್ನಾಟಕದ ಬುದ್ಧಿಜೀವಿಗಳು, ವಿಶ್ವವಿದ್ಯಾಲಯಗಳು ಹೊಯ್ಸಳ ಸಾಮ್ರಾಜ್ಯವನ್ನು ಹೆಚ್ಚು ಕೆದಕಲು ಹೋಗಲೇ ಇಲ್ಲ. ಏಕೆಂದರೆ ಅವರಿಗೆ “ಇನ್ನೊಬ್ಬನನ್ನು” , “ಪ್ಲಾಸ್ಟಿಕ್ ಹುಲಿ” ಯನ್ನು ಕರ್ನಾಟಕದ ಹುಲಿ ಮಾಡಬೇಕಿತ್ತು.

ಆ ಪ್ರಸಂಗ ತುಂಬಾ ತಮಾಶೆಯಾಗಿದೆ.
ಬಯಲು ಸೀಮೆಯ ಸಂಸ್ಥಾನವೊಂದರಲ್ಲಿ ರಾಜನ ಕುದುರೆ ಲಾಯದ ಕೆಲಸಕ್ಕೆ ಒಬ್ಬಾತ ಸೇರಿಕೊಂಡ. ಕುಟಿಲನೂ , ಧೂರ್ತನೂ ಆಗಿದ್ದ ಆತ ಕ್ರಮೇಣ ಸರದಾರನಾದ. ಸರದಾರನಾದವನೇ ತನ್ನ ಅಡ್ಡಿಗಳನ್ನೆಲ್ಲಾ ಮುಗಿಸುತ್ತಾ ಬಂದು ರಾಜನನ್ನೇ ಮೂಲೆಗುಂಪು ಮಾಡಿಬಿಟ್ಟ. ಬಯಲು ಸೀಮೆಯ ಕಾವೇರಿ ತೀರದಲ್ಲಿ ರಾಜಧಾನಿಯನ್ನೇ ನಿರ್ಮಿಸಿಕೊಂಡ. ಅನಂತರ ಆತನ ಮಗ ಅಪ್ಪನಿಗಿಂತಲೂ ಕ್ರೂರಿಯೂ, ಮತಾಂಧನೂ ಆಗಿ ಬೆಳೆದ. ಅದರಿದಲೇ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡ. ಅನ್ಯ ಭಾಷೆಯನ್ನು ಹೇರಿದ. ರಾಜನನ್ನು ಉಳಿಸಲೋ ಅಥವಾ ಶತ್ರುವನ್ನು ಮಣಿಸಲೋ ಎಂಬಂತೆ ಬ್ರಿಟಿಷರು ರಂಗ ಪ್ರವೇಶಿಸಿದರು. ಚಾಣಾಕ್ಷ ಪುಂಡರಸ ಬ್ರಿಟಿಷರಿಗೂ ಚಳ್ಳೆ ಹಣ್ಣು ತಿನ್ನಿಸಲಾರಂಭಿಸಿದ. ಕೊನೆಗೊಂದು ದಿನ ಆ ಪುಂಡರಸ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಸಾಧಾರಣ ಸೈನಿಕನಂತೆ ವೇಷ ಧರಿಸಿ ಹೇಡಿಯಂತೆ ಪರಾರಿಯಾಗುತ್ತಿದ್ದಾಗ ಬ್ರಿಟಿಷರ ಗುಂಡಿಗೆ ನಿರ್ಧಯವಾಗಿ ಸತ್ತ.

ಇಷ್ಟಕ್ಕೆ ಯಾರನ್ನು ತಾನೇ “ಹುಲಿ” ಆಗಬಲ್ಲರು? ಈ ಪುಂಡರಸನಿಗೆ ಸದಾ ಒಂದು ಖಯಾಲಿಯಿತ್ತು. ಅದು ಹುಲಿ. ಆತ ತನ್ನ ಬಾವುಟದಲ್ಲಿ ಹುಲಿಯನ್ನು ಚಿತ್ರಿಸಿದ್ದ. ಸೈನಿಕರ ಸಮವಸ್ತ್ರಗಳಲ್ಲಿ ಹುಲಿಯ ಚಿತ್ರವಿರುತ್ತಿತ್ತು. ತನ್ನ ಸಿಂಹಾಸನದಲ್ಲಿ ಹುಲಿಯನ್ನು ಕೆತ್ತಿಸಿದ್ದ. ಕತ್ತಿಯಲ್ಲೂ ಹುಲಿಯ ಚಿತ್ರವಿರುತ್ತಿತ್ತು. ಅಲ್ಲದೆ ಈತನ ಬಳಿ ಹುಲಿಯ ಒಂದು ಆಟಿಕೆಯೂ ಇತ್ತು. ಈತ ಸತ್ತ ನಂತರ ಬ್ರಿಟಿಷರು ಆತನ ಕೋಣೆಯನ್ನು ಹೊಕ್ಕಾಗ ಹೀಗೆ ಎಲ್ಲೆಡೆಯೂ ಹುಲಿಗಳ ಚಿತ್ರಗಳೇ ಕಂಡು “ನೈಸ್ ಕಲೆಕ್ಷನ್ಸ್” ಎಂದು ಉದ್ಗರಿಸಿದ್ದರಂತೆ. ಅಷ್ಟಕ್ಕೆ ಈ ಪುಂಡರಸ ಹುಲಿ ಹೇಗಾದಾನು?ಆತನ ಬಗ್ಗೆ ದಂತಕಥೆಗಳೇ ಹುಟ್ಟಿಕೊಂಡವು. ಒಮ್ಮೆ ದಾರಿಯಲ್ಲಿ ಸಾಗುತ್ತಿದ್ದಾಗ ಹುಲಿಯೊಂದು ಎದುರಾಯಿತೆಂದೂ ಅದನ್ನು ಆತ ಬರಿಗೈಯಲ್ಲಿ ಕೊಂದುಹಾಕಿದನೆಂದೂ ಹಾಗಾಗಿ ಆತ ಸಮಸ್ತ ಕರ್ನಾಟಕದ ಹುಲಿಯೆಂದೂ ಅತಿರಂಜಿತ ಕಥಾನಕಗಳನ್ನು ಸೃಷ್ಟಿಸಲಾಯಿತು. ಆದರೆ ಆತ ಹುಲಿಯನನ್ನು ಕೊಂದದ್ದನ್ನು ಕಂಡವರಿಲ್ಲ. ಸಾಕ್ಷಿ ಪುರಾವೆಗಳಿಲ್ಲ. ಆದರೆ ಸಳನ ಪ್ರಕರಣದಲ್ಲಿ ಎಲ್ಲವೂ ಇದೆ. ಪುಗಸಟ್ಟೆ ಬಿರುದಾವಳಿಗಳನ್ನು ಕೊಟ್ಟರೆ ಬೇಡವೆನ್ನುವವರು ಯಾರು? ಮುಂದೆ ಈ “ಹುಲಿ” ಓಲೈಕೆಯ ರಾಜಕಾರಣಕ್ಕೆ, ತುಷ್ಟೀಕರಣಕ್ಕೆ ದಾಳವಾಯಿತು. “ಪ್ಲಾಸ್ಟಿಕ್ ಹುಲಿ” ಕರ್ನಾಟಕದ ಹುಲಿಯಾಗಬೇಕೆಂದೇ ನಿಜದ ಹುಲಿಯನ್ನು ಮೂಲೆಗುಂಪು ಮಾಡಲಾಯಿತು.

ಬೇಸರದ ಸಂಗತಿ ಎಂದರೆ ಇಂದು ಕನ್ನಡದ ನಾಡು-ನುಡಿ-ನೆಲ-ಜಲದ ಬಗ್ಗೆ ಹೋರಾಡುವವರಿಗೂ ಆ ಪ್ಲಾಸ್ಟಿಕ್ ಹುಲಿಯೇ ಕರ್ನಾಟಕದ ಹುಲಿಯಂತೆ ಕಾಣುತ್ತಾನೆ. ನೆಲ-ಜಲ-ನುಡಿಗೆ ಸಂಬಂಧವೇ ಇಲ್ಲದ ಮತಾಂತರಿ, ಕ್ರೂರಿ, ವಿಗ್ರಹ ಭಂಜಕ ಪುಂಡರಸ ಆಳುವವರ ಬಾಯಲ್ಲೂ ಹುಲಿ ಎನಿಸಿಕೊಳ್ಳುವಾಗ ಕರುಳು ಚುರ್ ಎನಿಸುತ್ತದೆ.

ಪಠ್ಯ ಪುಸ್ತಕದಲ್ಲಿ ಮಿಥ್ಯೆಗಳನ್ನು ತೊಲಗಿಸಲು ಸಿದ್ಧ ವಾಗಿರುವ ಸರಕಾರ ಸಳನಿಗೆ ಇನ್ನಾದರೂ ನ್ಯಾಯ ಒದಗಿಸಬಾರದೇ? ಸಳನನ್ನು ಕರ್ನಾಟಕದ ಹುಲಿ ಎಂದು ಅಧಿಕೃತವಾಗಿ ಘೋಷಣೆ ಮಾಡಬೇಕು. ಕನಿಷ್ಠ ಬೆಂಗಳೂರಿನಿಂದ ಹೊರಡುವ ರೈಲುಗಳು, ಪ್ರಮುಖ ಸರಕಾರಿ ಸ್ಮಾರಕಗಳು, ಹೆದ್ದಾರಿಗಳಿಗಾದರೂ ಹೊಯ್ಸಳ ಹೆಸರನ್ನು ಇಡಬೇಕು. ಹೊಯ್ಸಳ ವಂಶವನ್ನು ಸದಾ ನೆನಪಿಸುವಂತಾ ಕಾರ್ಯವಾಗಬೇಕು. ಪೊಲೀಸರ ಶೌರ್ಯಕ್ಕೆ ಪ್ರತೀಕವಾಗಿ ಹೊಯ್ಸಳ ಪ್ರಶಸ್ತಿಯನ್ನು ಸ್ಥಾಪಿಸಬೇಕು. ಮೇಲಾಗಿ ಹುಲಿಯನ್ನು ಹುಲಿ ಎಂದೇ ಭಾವಿಸಬೇಕು.

23 ಟಿಪ್ಪಣಿಗಳು Post a comment
  1. Guru CM's avatar
    Guru CM
    ಆಕ್ಟೋ 18 2012

    ಸ್ವಯಂಘೋಷಿತ ಬುದ್ದಿಜೀವಿಗಳು,ಕಮ್ಮಿನಿಷ್ಟ ಇತಿಹಾಸಕಾರರು ಸೃಷ್ಟಿಸಿರುವ ನಕಲಿ ಹುಲಿ ಅದು.ಬೆಕ್ಕನ್ನೂ ಹುಲಿಯಾಗಿಸುವ ಪಾಂಡಿತ್ಯ ಇವರದ್ದು. ನಾವು ಈ ಪ್ಲಾಸ್ಟಿಕ್ ಹುಲಿ ಯನ್ನೆ ನಿಜವಾದ ಹುಲಿ ಎಂದು ನಂಬಿದ್ದೆವು ಆದರೆ ಕಾಲೇಜು ದಿನಗಳಲ್ಲಿ ಹುಲಿಯ ನಿಜ ಬಣ್ಣದ ಅರಿವಾಯಿತು.ನಾಡದ್ರೋಹಿ,ಭಾಷಾದ್ರೋಹಿ,ಮತಾಂಧನೊಬ್ಬ ಕರ್ನಾಟಕದ ಹುಲಿಯಾಗಲು ಹೇಗೆ ಸಾಧ್ಯ…? ಕರ್ನಾಟಕಕ್ಕೆ,ಮೈಸೂರಿಗೆ ಒಬ್ಬನೆ ಹುಲಿ ಅದು ಸಳ ಮಾತ್ರ ಈ ನಿಜವನ್ನು ಮಕ್ಕಳಿಗೂ ತಿಳಿಸುವ ಕೆಲಸವಾಗಬೇಕು..ಉತ್ತಮವಾದ ಲೇಖನ ಚರಿತ್ರ ಕುಮಾರ್….

    ಉತ್ತರ
  2. shashikanth's avatar
    shashikanth
    ಆಕ್ಟೋ 18 2012

    It is nice article……good one charithra ji…..

    ಉತ್ತರ
  3. nisha's avatar
    nisha
    ಆಕ್ಟೋ 18 2012

    ಹೊಯ್ಸಳ: ಕರ್ನಾಟಕದ ಅಸಲಿ ಹುಲಿ, ಇವನ್ಯಾರೋ ಕಾಂಜಿ ಪೀಂಜಿ ಅಲ್ಲ, ತನಗೆ ಆಶ್ರಯ ಕೊಟ್ಟ ರಾಜನಿಗೆ ಮೋಸ ಮಾಡಿ ಗದ್ದುಗೆ ಏರಿದೆ ಧೂರ್ತ ವಂಶಸ್ತನು ಅಲ್ಲ. ಇವನೇ ಮಣ್ಣಿನ ಮಗ. ಕನ್ನಡಿಗರ ಹೆಮ್ಮೆಯ ಮಗ. ಈ ನಾಡನ್ನು ಕಟ್ಟಿ ಬೆಳೆಸಿದ ಧೀರ.

    ಉತ್ತರ
  4. charitra kumar's avatar
    charitra kumar
    ಆಕ್ಟೋ 18 2012

    ಈ ದೇಶ ಹಾಗೂ ರಾಜ್ಯ ಕಂಡ ಅಪ್ರತಿಮ ನಾಯಕ ಹೊಯ್ಸಳ.. ಅವನ ಪಾದದ ಧೂಳಿಗೆ ಸಮಾನನಲ್ಲ ಮತಾಂದಿ ಟಿಪ್ಪು.. ..

    ಉತ್ತರ
  5. Rajashekhar Hosalli's avatar
    ಆಕ್ಟೋ 18 2012

    real writing :every one should know this :shame on fake historians ,useless fellow they ruined our country , miguiding common readers and people

    ಉತ್ತರ
  6. shekhar's avatar
    ಆಕ್ಟೋ 18 2012

    ಸುಮಾರು ನಾಲ್ವತ್ತು ವರ್ಷಗಳ ಹಿಂದೆ ಪ್ರಾಥಮಿಕ ಶಾಲೆಯ ನಾಲ್ಕನೇ ಅಥವಾ ಐದನೇ ಕ್ಲಾಸಿನಲ್ಲಿ ಹೊಯ್ಸಳನ ಬಗ್ಗೆ ಓದಿದ್ದು ಬಿಟ್ಟರೆ ಮತ್ತೆಲ್ಲಿಯೂ ಹೊಯ್ಸಳನ ಬಗ್ಗೆ ನಾನು ಕೇಳಿಲ್ಲ. ಎಲ್ಲರ ಬಗ್ಗೆ ಸಿನಿಮಾ ಮಾಡಿದ ನಮ್ಮ ಕನ್ನಡ ಚಿತ್ರರಂಗದಲ್ಲಿಯೂ ಇವನ ಬಗ್ಗೆ ಯಾರೂ ವಿಚಾರ ಮಾಡಿಲ್ಲ ಎನಿಸುತ್ತದೆ. ತಮ್ಮ ಅತ್ಯದ್ಭುತ ಅಭಿನಯದಿಂದ ಮಯೂರ , ಕೃಷ್ಣದೇವರಾಯ, ಕನಕದಾಸ ಮುಂತಾದವರನ್ನು ಪರಿಚಯಿಸಿದ್ದ ಡಾ.ರಾಜಕುಮಾರ ರಿಂದಲೇ ಹೊಯ್ಸಳ ನನ್ನು ಚಿತ್ರಿಸಬೇಕಾಗಿತ್ತು. ಒಂದು ಸಂತೋಷದ ವಿಷಯವೆಂದರೆ ನಮ್ಮ ಪೋಲಿಸ್ ಇಲಾಖೆಯ ಗಸ್ತು ತಿರುಗುವ ವಾಹನಗಳಿಗೆ ಹೊಯ್ಸಳ ನ ಹೆಸರು ಇಟ್ಟಿರುವದು.

    ಉತ್ತರ
  7. Deepak Kamath's avatar
    Deepak Kamath
    ಆಕ್ಟೋ 18 2012

    very nice article.

    ಉತ್ತರ
  8. keshavakoushik's avatar
    ಆಕ್ಟೋ 19 2012

    ಹುಲಿಯನ್ನು ಇಲಿ ಮಾಡುವುದು ಇಲಿ ಅಥವಾ ಮೀಸೆ ಇರುವ ಜಿರಲೆಯನ್ನು ಹುಲಿ ಎಂದು ವೈಭವೀಕರಿಸುವುದ್ ನಮ್ಮ ತಥಾಕತಿಥ ಬುದ್ಧಿಜೀವಿಗಳಿಗೆ .. ಸುಳ್ಲು ಇತಿಹಾಸಕರ್ತರಿಗೆ ನೀರುಕುಡಿದಷ್ಟೇ ಸುಲುಭ … ನಿಜ ಹೇಳುವವರು ನಿಷ್ಠುರರಾಗಬೇಕಗುತ್ತೆ….

    ಉತ್ತರ
  9. Sandeep's avatar
    Sandeep
    ಆಕ್ಟೋ 19 2012

    ಸತ್ಯಾಂಶವಿರುವಂತಹ ವಿಷಯ ಇದರ ಬಗ್ಗೆ ರಾಜ್ಯ ವ್ಯಾಪಿ ಚರ್ಚೆ ಆಗಬೇಕು….. ಹೊಯ್ಸಳನಿಗೆ ನ್ಯಾಯ ದೊರಕಬೇಕು. ಡೊಂಗಿ ಕಾಗದದ ಹುಲಿಯ ವಂಶವನ್ನು ದೇಶ ಬಿಟ್ಟು ಓಡಿಸಬೇಕು.

    ಉತ್ತರ
  10. Ajith S Shetty's avatar
    ಆಕ್ಟೋ 19 2012

    ನಾವು ಮೂರನೇ ತರಗತಿ ಓದುವಾಗಲೇ ಏನು ಅರಿಯದ ನಮಗೆ ಮತಾಂಧನೊಬ್ಬನನ್ನು ಇವನು ಹುಲಿ ಹುಲಿ ಅಂತ ಹೇಳಿಕೊಡುತ್ತ ಇದ್ರೂ. ನಾವು ಅವನನ್ನು “ಮೈಸೂರಿನ ಹುಲಿ” ಅಂತ ಬಾಯಿಪಾಠ ಮಾಡುತ್ತ ಇದ್ದೇವು. ಆಮೇಲೆ ಆಮೇಲೆ ನಮಗೆ ಸ್ವಲ್ಪ ಬುದ್ದಿ ಬಂದ ಮೇಲೆ ತಿಳಿದದ್ದು ಅದು ಹುಲಿ ಅಲ್ಲ “ಇಸ್ಲಾಂ ನಂಬದವರ” ರಕ್ತ ಹೀರುವ ಹೆಬ್ಬುಲಿ ಅಂತ. ಇವತ್ತು ಕೇಸರೀಕರಣ ಅಂತ ಬೊಬ್ಬಿಡುವ ದುರ್ಬುದ್ದಿ ಜೀವಿಗಳು ಮತ್ತು ಖಾನ್ ಗ್ರೆಸ್ಸ್ ತನ್ನ ಆಡಳಿತಾವಧಿಯಲ್ಲಿ ಮಾಡಿದ್ದೂ ಸಂಪೂರ್ಣ ಇತಿಹಾಸವನ್ನೇ ತಿರುಚಿದ್ದು. ಶ್ರೀರಂಗ ಪಟ್ಟಣದ ಸಮೀಪದ ಒಂದು ಕುಟುಂಬವನ್ನು ಇಸ್ಲಾಮಿಗೆ ಮತಾಂತರ ವಾಗಿಲ್ಲ ವೆಂದು ದೀಪಾವಳಿ ದಿನ ಮಾರಣ ಹೋಮ ಗೈದವನು ಮೈಸೂರಿನ ಹುಲಿ ಆಗ್ತಾನೆ. ಎಂಥ ವಿಪರ್ಯಾಸ ವಲ್ಲವೇ ? ಆ ಕುಟುಂಬ ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ .
    ಟಿಪ್ಪು ಖಡ್ಗ ವನ್ನು ತಂದು ಹೆಮ್ಮೆ ಯಿಂದ ಹೇಳಿಕೊಳ್ಳುವವರು ಆ ಖಡ್ಗ ದಲ್ಲಿ ಪರ್ಷಿಯನ್ ಭಾಷೆಯಲ್ಲಿ ಏನು ಬರೆದಿದ್ದರು ಅಂತ ವಿಮರ್ಶೆ ಮಾಡುವದಿಲ್ಲ . ಅಂತ ಕ್ರೂರ ರನ್ನು ಮೆರೆಸುತ್ತ ನಿಜವಾದ ಹುಲಿಯನ್ನು ಕಡೆಗಣಿಸುತ್ತಾ ಬಂದಿದ್ದಾರೆ.
    ಸಳನಿಗೆ ನಮ್ಮ ಇತಿಹಾಸದಲ್ಲಿ ಒಂದು ಹೇಳಿಕೊಳ್ಳುವಂತ ಗೌರವ ಕೊಡದೆ ಕಡೆಗಣಿಸುತಿದ್ದಾರೆ. ಅಲ್ಲದೆ ಮೈಸೂರು ರಾಜ್ಯದ ಆಡಳಿತ ಭಾಷೆ ಕನ್ನಡವನ್ನಾಗಿ ಮಾಡದೇ ಇರುವವನು “ಕರುನಾಡ ಹುಲಿ ” ಎಂಥ ತಮಾಷೆ ಅಲ್ವಾ ?
    ಕರು ನಾಡಿಗೆ ಒಬ್ಬನೇ ಒಬ್ಬ ಹುಲಿ ಅದು ಸಳ ಮಾತ್ರ.
    ಟಿಪ್ಪುವಿನ ಕ್ರೌರ್ಯದ ಬಗ್ಗೆ ತಿಳಿದುಕೊಳ್ಳ ಬೇಕಾದರೆ ಕೊಡವರನ್ನು ಮಲಬಾರ ರನ್ನು ಕೇಳಬೇಕು. ವಿರಾಜಪೇಟೆ ತಾಲೂಕಿನ ನಾಪೋಕ್ಲು -ಭಾಗಮಂಡಲ ಪ್ರದೇಶದ ಸಾವಿರಾರು ಕೊಡವ ರನ್ನು, ಇಸ್ಲಾಂ ಗೆ ಮತಾಂತರ ಹೊಂದಲು ನಿರಾಕರಿಸಿದರು ಎಂದು ಟಿಪ್ಪು ಕೊಂದು ಹಾಕಿದ ಎಂದು ಆ ಭಾಗದ ಹಿರಿಯ ಕೊಡವ ಕುಟುಂಬಗಳು ಇಂದಿಗೂ ತೀವ್ರ ಯಾತನೆ ಯಿಂದ ಹೇಳಿಕೊಳ್ಳುತ್ತಿವೆ. ಭಾರತೀಯ ಇತಿಹಾಸದಲ್ಲಿ ಇಸ್ಲಾಂ ನ ಘೋರ ಆಕ್ರಮಣಕ್ಕೆ ಒಳಗಾದ ಕಾಲದಲ್ಲಿ ಟಿಪ್ಪುವಿನ ಅವದಿ ಅತಿ ಮುಖ್ಯವಾಗಿ ಗೋಚರಿಸುತದೆ.
    ಆದರು ನಮ್ಮ ಜ್ಯಾತ್ಯಾತೀತ ಇತಿಹಾಸ ಗಾರರು ಟಿಪ್ಪುವನ್ನು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಅಂತ ಹಸಿ ಹಸಿ ಸುಳ್ಳು ಹೇಳಿ ಅದನ್ನು ದೇಶದ ಜನ ನಂಬುವಂತೆ ಮಾಡಿದ್ದಾರೆ. ಅಲ್ಲ ಸ್ವಾಮಿ ಟಿಪ್ಪು ಹೋರಾಡಿದ್ದು ಅವನ ರಾಜ್ಯ ರಕ್ಷಣೆಗೆ ವಿನ್ಹ ದೇಶ ರಕ್ಷಣೆಗೆ ಅಲ್ಲ. ಅವನಿಗೆ ಬ್ರಿಟಿಷರು ಒಂದೇ, ಪಕ್ಕದ ಭಾರತದ ಇನ್ನೊಂದು ಅಂದಿನ ರಾಜ್ಯವು ಒಂದೇ . ಇಬ್ಬರು ಶತ್ರುಗಳು . ಅವನ ಮನದಲ್ಲಿ ಅಂದಿನ ಕಾಲಘಟ್ಟದಲ್ಲಿ ಭಾರತ ಅನ್ನೋ ಕಲ್ಪನೆ ಇರಲಿಲ್ಲ . ಅಲ್ಲದೆ ಭಾರತಕ್ಕೆ ಫ್ರೆಂಚರು ಮತ್ತೆ ಬ್ರಿಟಿಷರು ಇಬ್ಬರು ಕೊಳ್ಳೆ ಹೊಡೆಯಲು ಬಂದವರೇ . ಟಿಪ್ಪುವಿಗೆ ಫ್ರೆಂಚರು ಗೆಳೆಯರು ಅಂದರೆ ಅವನು ಸ್ವಾತಂತ್ರ್ಯ ಹೋರಾಟಗಾರನೇ? ರಾಷ್ಟ್ರ ಪ್ರೇಮಿನೆ..
    ಮೈಸೂರು ಒಡೆಯರನ್ನು ಹೀನಾಯವಾಗಿ ನಡೆಸಿಕೊಂಡು ಇಮ್ಮಡಿ ಕೃಷ್ಣ ರಾಜ ಓದ್ಯರ ಪತ್ನಿ ಮಹಾರಾಣಿ ಲಕ್ಷ ಮ್ಮ ಣ್ಣಿ ೧೭೯೬
    ರಲ್ಲಿ ತಿರುಮಲ ರಾವ್ ಗೆ ಬರೆದ ಪತ್ರದಲ್ಲಿ ಟಿಪ್ಪು ವನ್ನಿ ಅಮಾನುಷ ರಾಕ್ಷಸ ಅಂತ ಹೇಳಿದ್ದಾರೆ ಅಂತ ರಾಕ್ಷಸ ಮೈಸೂರಿನ ಹುಲಿ. !!!
    ಇನ್ನು ಮುಂದಾದರು ಮುಂದಿನ ಪೀಳಿಗೆಗೆ ಯಾರು ನಿಜವಾದ ಹುಲಿ ಅಂತ ತಿಳಿಯುವಂತಾದರೆ ಅದು ಸಳ ಮಹಾರಾಜನಿಗೆ ನಾವು ಕೊಡುವ ಮರ್ಯಾದೆ. ಸತ್ಯ ಮೇವ ಜಯತೇ

    ಉತ್ತರ
    • charles bricklayer's avatar
      charles bricklayer
      ಆಕ್ಟೋ 31 2012

      ಪ್ರಿಯ ಸ್ನೇಹಿತ, ತಾವು ಹಾಗು ಈ ಲೇಖನದ ಕತೃಗಳು ಇತಿಹಾಸದ ವಿಷಯದಲ್ಲಿ ಬಹಳ ತಿಳುವಳಿಕೆಯುಳ್ಳವರಂತೆ ಕಂಡುಬರುತ್ತೀರಿ, ಹಾಗಾಗಿ ನನ್ನ ಒಂದು ಸಂದೇಹವನ್ನು ನೀವು ಪರಿಹರಿಸುತ್ತೀರಿ ಎಂದು ಭಾವಿಸುತ್ತೇನೆ. ನನಗೆ ಇತಿಹಾಸದ ಒದಿನಿಂದ ತಿಳಿದ ಮಟ್ಟಿಗೆ ಹೊಯ್ಸಳ ವಂಶವು ಗಂಗರ ಕಾಲದಲ್ಲಿಯೇ ಇತ್ತು. ಆ ವಂಶದ ಅರೆಕಲ್ಲ ಎಂಬುವವನು ಸುಮಾರು ಕ್ರಿ.ಶ.೯೫೦ರಲ್ಲಿಯೇ ಮಲೆನಾಡು ಭಾಗದ ಗಂಗರ ಕೆಳಗಿನ ಒಬ್ಬ ಸಣ್ಣ ಮುಖಂಡ.ಆ ಸುಮಾರಿನಂದಲೂ ಈ ವಂಶದ ಬಗ್ಗೆ ಚಾರಿತ್ರಿಕ ದಾಖಲೆಗಳು ಲಭ್ಯವಿದೆ, ಈ ದಾಖಲೆಗಳಲ್ಲಿ ಅವರು ತಮ್ಮನ್ನು ಕ್ರಿ ಶ.೮೫೦ರಿಂದಲೇ ಇದ್ದ ಯಾದವ ರಾಜ ಮನೆತನದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆಯೇ ವಿನಹ ತಮ್ಮ ವಂಶದ ಮೂಲ ಎಂದು ಎಲ್ಲಿಯೂ ಸಳನ ಅಥವಾ ಹೊಯ್ಸಳನ ಕಥೆಯನ್ನು ಉಲ್ಲೇಖಿಸಿಲ್ಲ್ಲ.ಸಳನ ಅಥವಾ ಹೊಯ್ಸಳನ ಕಥೆಯ ಉಲ್ಲೇಖ ಮೊಟ್ಟಮೊದಲ ಬಾರಿಗೆ ಬರುವುದು ವಿಷ್ಣುವರ್ಧನನ ಕ್ರಿ.ಶ.೧೧೧೭ರ ಬೇಲೂರು ಶಿಲಾಶಾಸನದಲ್ಲಿಯೇ ,ಆ ಉಲ್ಲೇಖದಲ್ಲಿಯೇ ಇರುವ ಹಾಗು ನಂತರ ಲಭ್ಯವಿರುವ ಮಾಹಿತಿಗಳಲ್ಲಿ ಎಷ್ಟು inconsistencies ಇವೆಯೆಂದರೆ ಇದುವರೆಗೂ ಯಾವ ಇತಿಹಾಸ ತಙ್ಞರೂ ಅದನ್ನು ಒಪ್ಪಿಲ್ಲ ಬದಲಾಗಿ ಅದೊಂದು ದಂತಕಥೆ ಎಂದೇ ಪರಿಗಣಿಸಿದ್ದಾರೆ.ತಾವಾಗಲಿ,ಈ ಲೇಖನದ ಕತೃವಾಗಲಿ ಸಳನ ಐತಿಹಾಸಿಕತ್ವವನ್ನು ಅನುಮಾನಕ್ಕೆಯೆಡೆಯಿಲ್ಲದಂತೆ ಐತಿಹಾಸಿಕ ಆಧಾರಗಳ ಮೇಲೆ ಪುಶ್ಟೀಕರಿಸಿಬಿಟ್ಟರೆ ಕರ್ಣಾಟದ ಇತಿಹಾಸಕ್ಕೆ ಬಹಳ ದೊಡ್ಡ ಉಪಕಾರವಾಗುತ್ತದೆ. ಆ ನಂತರ ಈ ಚರ್ಚೆಯನ್ನು ಮುಂದುವರಿಸಬಹುದು ಅಲ್ಲವೇ.

      ಉತ್ತರ
      • charitra kumar's avatar
        charitra kumar
        ನವೆಂ 3 2012

        ಹೊಯ್ಸಳ ಮತ್ತು ಗಂಗರ ಕಾಲದ ಬಗ್ಗೆ ನಿಮ್ಮ ಸಂಶಯ ವ್ಯರ್ಥವಾದುದು. ಏಕೆಂದರೆ ಗಂಗರು ಕಿ.ಶ. ೩೫೦ ರಲ್ಲಿ ಪ್ರವರ್ಧಮಾನಕ್ಕೆ ಬಂದವರು. ಅನಂತರ ಚಾಲುಕ್ಯರು, ರಾಷ್ಟ್ರಕೂಟರು, ಹಲವು ಪಾಳೇಗಾರರು ನಾಡಿನಲ್ಲಿ ಆಳಿ ಅಳಿದುಹೋಗಿದ್ದಾರೆ. ಅವರೆಲ್ಲರ ಅನಂತರ ಬಂದವರು ಹೊಯ್ಸಳರು. ವಿದ್ವಾಂಸರಲ್ಲಿ ಇವರ ಕಾಲದ ಬಗ್ಗೆಯೂ ಕೆಲವು ದ್ವಂದ್ವಗಳಿವೆ. ಕೆಲವರು ಹೊಯ್ಸಳರು ಕಿಶ. ೧೦೭೭ ರಿಂದ ೧೩೧೩ ರವರೆಗೆ ಆಡಳಿತ ನಡೆಸಿದವರೆಂದು ಹೇಳಿದರೆ. ಬುಕಾನನ್ ಎಂಬ ವಿದ್ವಾಂಸ ಕಿ.ಶ. ೧೦೭೩..ನೀವೆಂದಂತೆ ಕೆಲವರ ಪ್ರಕಾರ ೮೫೦ ಎಂದೂ ಕೆಲವರು ಹೇಳಿರಬಹುದು. ಆದರೆ ಗಂಗರೂ ಹೊಯ್ಸಳರೂ ಸಮಕಾಲೀನರಾಗಲು ಸಾಧ್ಯವೇ ಇಲ್ಲ. ಇನ್ನು ಹೊಯ್ಸಳರು ತಾವು ಯದುಕುಲದವರೆಂದು ಹೇಳಿಕೊಂಡಿದ್ದಾರೆ. ಸಳನ ಆರಂಭದ ಸಂಗತಿಯ ಬಗ್ಗೆ ಇತಿಹಾಸದಲ್ಲಿ ಹೆಚ್ಚು ಉಲ್ಲೇಖವಿಲ್ಲ. ಆತ ಹುಲಿಯನ್ನು ಕೊಂದ ಸಂಗತಿ ಇತಿಹಾಸದಲ್ಲಿ ಉಲ್ಲೇಖವಿಲ್ಲ ಎಂದು ಹೇಳಿರುವಿರಿ. ಹೊಯ್ಸಳ ಕಾಲದ ದೇವಾಲಯದಲ್ಲಿರುವ ಹುಲಿ ಕೊಲ್ಲುತ್ತಿರುವ ಚಿತ್ರ ಐತಿಹಾಸಿಕ ಸಾಕ್ಷಿಯಲ್ಲವೇ? ಅಲ್ಲದೆ ನೀವು ಶಾಸನಗಳ ಬಗ್ಗೆ ಅದರ ಉಲ್ಲೇಖವೇ ಇಲ್ಲ ಎಂದು ಹೇಳಿರುವಿರಿ. ನಿಜ ಯಾವ ಮೇಷ್ಟ್ರೂ ಕೂಡಾ ಅದನ್ನು ಹೇಳಲಾರ. ಅಚ್ಯುತರಾಯ ಶಾಸನದಲ್ಲಿ ಸಳ ಹುಲಿ ಕೊಂದ ಉಲ್ಲೇಖವಿದೆ. ಪಾಶ್ಚಾತ್ಯ ವಿದ್ವಾಂಸ ಮ್ಯಾಕೆಂಜಿ ಎಂಬವನು ಕೂಡಾ ಸಳ ಹುಲಿಕೊಂದ ಪ್ರಕರಣವನ್ನು ಉಲ್ಲೇಖಿಸುತ್ತಾ” ನರಭಕ್ಷಕ ಹುಲಿಯನ್ನು ಸಳನೆಂಬ ಯುವಕ ತನ್ನ ಗುರುವಿನ ಅಣತಿಯ ಮೇರೆಗೆ ಕೋಲಿನಿಂದ ಹೊಡೆದು ಕೊಂದ” ಎಂದು ಹೇಳಿದ್ದಾರೆ. ಇನ್ನು ಸಳನ ಆರಂಭದ ವಂಸಸ್ಥರು ಜೈನರಾಗಿದ್ದರು ಮುಂತಾದ ವಿವರಗಳು ಇಲ್ಲಿ ಅಪ್ರಸ್ಥುತ. ಇಲ್ಲಿ ಕನ್ನಡಿಗನೊಬ್ಬ ಹುಲಿ ಕೊಂದ ಶೂರ ಎಂಬುದಷ್ಟೇ ಮುಖ್ಯ. ನನನೂ ನಿಮ್ಮಲ್ಲಿ ಒಂದು ಪ್ರಶ್ನೆಯಿದೆ. “ಹಿಂದೂ ಇತಿಹಾಸದ ಬಗ್ಗೆಯೇ ಏಕೆ ನಿಮಗೆ ಪ್ರತ್ಯಕ್ಷ ಸಾಕ್ಷಿಗಳ ಅಗತ್ಯ ಬೀಳುತ್ತದೆ?” ಹೌದು ಸಳ ಹುಲಿ ಕೊಂದ ವೀಡಿಯೋ ರೆಕಾರ್ಡುಗಳು ಸಿಗುವುದಿಲ್ಲ. ಯಾವುದೋ ಪರ್ಷಿಯಾ ಮೂಲದ ಮತಾಂಧ ನನ್ನು ಕರ್ನಾಟಕದ ಹುಲಿಯೆಂದು ನಿಜವಾದ ಕನ್ನಡಿಗ ಒಪ್ಪಿಕೊಳ್ಳಲಾರ.

        ಉತ್ತರ
        • charles bricklayer's avatar
          charles bricklayer
          ನವೆಂ 10 2012

          ಪ್ರಿಯ ಬಂಧು, ಸಸ್ನೇಹಪೂರ್ವಕ ಸಾದರ ಪ್ರಣಾಮಗಳು.ತಮ್ಮ ಪ್ರತಿಕ್ರಿಯೆ ಓದಿದ ಮೇಲೆ ನನ್ನ ಸಂದೇಹ ನಿವಾರಣೆಯಾಗುವ ಬದಲಾಗಿ ಮತ್ತಷ್ಟು ಹೆಚ್ಚಾಗಿದೆ. ತಾವು ಖಂಡಿತವಾಗಿಯೂ ಅವುಗಳನ್ನು ಪರಿಹರಿಸಬಲ್ಲಿರಿ. ನನ್ನಂತಹ ಅಜ್ಞಾನಿಯ ತಿಳುವಳಿಕೆಗಾಗಿ ಕೆಲವೊಂದು ಸ್ಪಷ್ಟೀಕರಣ ನೀಡಿದರೆ ಬಹಳ ಉಪಕಾರವಾಗುತ್ತದೆ.ನನ್ನ ಸಂದೇಹಗಳು ಇಷ್ಟೇ,…..೧.ಗಂಗರ ಕಾಲಾವಧಿ ಯಾವುದು? ಅವರು ಎಲ್ಲಿಂದ ಎಲ್ಲಿಯವರೆಗೆ ರಾಜ್ಯವಾಳಿದರು? ೨.ತಾವು ಉಲ್ಲೇಖಿಸಿರುವ ಅಚ್ಯುತರಾಯ ಯಾರು ಹಾಗು ಅವನ ಯಾವ ಕಾಲದ ಎಲ್ಲಿಯ ಶಾಸನದ ಉಲ್ಲೇಖ ತಾವು ಮಾಡುತ್ತಿರುವಿರಿ?೩. ಬುಕನ್ನನ್ ಹಾಗು ಮ್ಯಕೆಂಜಿ ಎಂಬ ವಿದ್ವಾಂಸರುಗಳು ಯಾರು ಹಾಗು ಅವರ ಯಾವ ಕಾಲದಲ್ಲಿ ಪ್ರಕಟಿತ ಯಾವ ಕೃತಿಗಳನ್ನು ತಾವು ಉಲ್ಲೇಖಿಸುತ್ತಿದ್ದೀರಿ? ಬಹಳ ಬಹಳ ಬಹಳ ಮುಖ್ಯವಾಗಿ ೪. ಇತಿಹಾಸ ಎಂದರೆ ಏನು? ಮತ್ತು ೫.ಉತ್ತಮ ಕನ್ನಡಿಗನ ಗುಣಲಕ್ಷಣಗಳು ಯಾವುವು? ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವ ಪರ್ಷಿಯಾ ಮೂಲದ ಮತಾಂಧ ಬಯಲುಸೀಮೆಯ ಪುಂಡರಸ ಯಾರು ಏಂದು ತಾವು ಸ್ಪಷ್ಟೀಕರಿಸಿಬಿಟ್ಟರೆ ಆ ನಿಟ್ಟಿನಲ್ಲಿಯೂ ಚರ್ಚೆಯನ್ನು ಮುಂದುವರಿಸೋಣ.ಧನ್ಯವಾದಗಳೊಂದಿಗೆ,

          ಉತ್ತರ
          • Ajith S Shetty's avatar
            ನವೆಂ 17 2012

            ಮಾನ್ಯರೇ ಇಲ್ಲಿ ವಿಷಯವೆನಿದೆ ಅದರ ಬಗ್ಗೆ ಚರ್ಚಿಸಿ ಅದು ಬಿಟ್ಟು ಸಂಪೂರ್ಣ ಇತಿಹಾಸವನ್ನು ಕೆದಕುತ್ತ ಚರ್ಚೆಯ ದಿಕ್ಕು ತಪ್ಪಿಸಬೇಡಿ. ಮತಾಂಧ ಪುಂಡ ರಸ ಯಾರು ಎಂದು ಬಿಡಿಸಿ ಹೇಳಬೇಕಾಗಿಲ್ಲ . ಕರ್ನಾಟಕದ ಇತಿಹಾಸ ಬಲ್ಲ ಯಾವುದೇ ವ್ಯಕ್ತಿ ಈ ಬಗ್ಗೆ ನಿದ್ದೆ ಕಣ್ಣಿನಲ್ಲೂ ಹೇಳಬಲ್ಲ. ಅಲ್ಲದೇ ನಿಮಗೆ ಆ ಮತಾಂಧ ನ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ಶ್ರೀರಂಗ ಪಟ್ಟಣದ ದ ಹಿರಿಯರು , ಕೊಡಗಿನ ಜನರನ್ನು ಕೇಳಿ ಅವರು ನಮಗಿಂತ ವಿವರವಾಗಿ, ಸ್ಪಷ್ಟ ನಿದರ್ಶನ ದ ಉದಾಹರಣೆ ಸಹಿತ ಹೇಳಬಲ್ಲರು . ಗಂಗರ ಅವದಿ ನಾನು ಓದಿದ ಇತಿಹಾಸ ದ ಪ್ರಕಾರ 350 to 1000 AD. ಎಂದು ತಿಳಿಸುತದೆ . ನಮ್ಮಲ್ಲಿ ಒಬ್ಬೊಬ್ಬರು ಒಂದು-ಒಂದು ಅವರಿಗೆ ಬೇಕಾದ ಹಾಗೇ ಬರೆದಿದ್ದಾರೆ. ಹೇಗೆ ಪ್ಲಾಸ್ಟಿಕ್ ಹುಲಿಯನ್ನು ಮೈಸೂರು ಹುಲಿ ಎಂದರೋ ಹಾಗೆ . ನಿದ್ದೆಯಲ್ಲಿ ಇದ್ದವರನ್ನು ಎಬ್ಬಿಸ ಬಹುದು ಆದರೆ ನಿದ್ದೆ ಮಾಡುವವರಂತೆ ನಟಿಸುವವರನೂ ಎಬ್ಬಿಸುವದು ತೀರಾ ಕಷ್ಟದ ಕೆಲಸ ಹೇಗೆಂದರೆ ಇತಿಹಾಸ ತಿಳಿದು ಅದು ಹಾಗಲ್ಲ ಹೀಗೆ ಎಂದು ವಾದಿಸುವವರ ಹಾಗೆ .

            ಉತ್ತರ
  11. Mahesh's avatar
    ಆಕ್ಟೋ 20 2012

    ಟಿಪ್ಪು ಕೈಗೊಂಡ ಹಲವಾರು ಮತಾಂಧ ಕ್ರಮಗಳ ಬಗ್ಗೆ ನಿಷ್ಠುರವಾಗಿ ಚರ್ಚೆ ಆಗಲೇಬೇಕು. ಉತ್ತಮವಾದ ಲೇಖನ.

    ಉತ್ತರ
  12. yousuf's avatar
    yousuf
    ಆಕ್ಟೋ 23 2012

    ಇತಿಹಾಸದ ಎಲ್ಲಾ ಮಗ್ಗುಲುಗಳಿಗೆ ಕೇಸರಿ ಬಣ್ಣ ಹಚ್ಚಿದ ನೀವು ಕರ್ಣಾಟಕದ ಹುಲಿ ಯಾರು ? ಎಂಬ ಶೋಧನೆಯಲ್ಲಿ ತೊಡಗಿದ್ದು ನಿಜಕ್ಕೂ ವಿಪರ್ಯಾಸಕರ, ಅದೇನೇ ಹಾಗಲಿ ಸಳ ಕೂಡಾ ಹುಲಿ ಯಾಗುವುದರಲ್ಲಿ ಯಾರದೂ ಅಭ್ಯಂತರವಿಲ್ಲ ತಾನೇ?
    ಆದರೆ ನೀವು ಈಗ ಎಷ್ತೆ ಕೇಸರಿ ಪೈಂಟ್ ಕೊಟ್ತರೂ ಮಹಾನ್ ಸಳ ನನ್ನು ಚೆಡ್ಡಿ ಮಾಡಲು ಸಾಧ್ಯವಿಲ್ಲ.

    ಮಹಾನ್ ವಿವೇಕಾನಂದರಿಗೆ ಕೇಸರಿ ಡ್ರೆಸ್ಸ್ ಹಾಕಿಸಿ ಎಲ್ಲಾ ಕಡೆ ನೀವು ನಮ್ಮ ನೇತಾರ ಬಿಂಬಿಸಲು ಪ್ರಯತ್ನಿಸಿ ವಿಪಲರಾಗಿದ್ದೀರಿ, ಅವರ ಚಿಂತನೆ ಗಲ ಎಲ್ಲೆಷ್ತೂ ನೀವು ಜೀವನದಲ್ಲಿ ಅಲವಡಿಸದೇ ಅವರ ಅನುಯಾಯಿಗಳೆಂದು ಸ್ವಯಃ ಘೋಷಿಸಿದಂತೆ
    ಮಹಾನ್ ಸಳನನ್ನು ಕೂಡಾ ಈಗ ನಿಮ್ಮ ನಾಯಕನಂತೆ ಬಿಂಬಿಸುವ ಪ್ರಯತ್ನ ಮುಂದಿನ ಶತಮಾನದಲ್ಲಿಯಾದರೂ ಕನಸಾಗಲಿ ಎಂದು ಕನಸು ಕಾಣಿರಿ

    ಉತ್ತರ
  13. sandeepcr's avatar
    sandeepcr
    ಆಕ್ಟೋ 25 2012

    ಹೊಯ್ಸಳನಿಗೆ ಯಾರು ಕೇಸರಿ ಬಣ್ಣವನ್ನ ಹಚ್ಚಿಲ್ಲ ನಿಜವಾದ ರೂಪವನ್ನೇ ಲೇಖಕರು ಹೇಳಿದ್ದಾರೆ. ಪರ್ಷಿಯ ಮೂಲದವನನ್ನ ಕರ್ನಾಟಕದ ಹುಲಿಯೆಂದು ಬಿಂಬಿಸುವು ಸರಿಯಲ್ಲ.

    ಉತ್ತರ
  14. Chethan Mng's avatar
    Chethan Mng
    ಆಕ್ಟೋ 26 2012

    @ಯೂಸುಫ್,
    ಬಣ್ಣದ ಅವಶ್ಯಕತೆ ಬೇಕಾಗಿರುವುದು ನಿಮಗೆ, ಯಾಕಂದ್ರೆ ನೀವು ಪರ ವಹಿಸುತ್ತಿರುವುದು ಒಬ್ಬ ಮತಾಂಧ, ನಿಷ್ಟುರಿ ಪರ್ಷಿಯದ ನಾಯಿಯನ್ನು. ಮೈಸೂರ್ ಇತಿಹಾಸಕ್ಕೆ ರಕ್ತ ದ ಚರಿತ್ರೆಯನ್ನು ಲೇಪಿಸಿದ ದುಷ್ಟನಿಗೆ ಬಣ್ಣದ ಅವಶ್ಯಕತೆ ಬೇಕಾಗಿರುವುದು. ತನ್ನ ಕೈ ಗೆ ಅಂಟಿರುವ ರಕ್ತ ದ ಕಲೆ ಯನ್ನು ಹೋಗಲಾಡಿಸಲು ಬೇಕಾಗಿರುವುದು. ಅವನನ್ನು ಈ ನಾಡಿನ ರಕ್ಷಕ ಎಂಬಂತೆ ಬಿಂಬಿಸುತ್ತಿರುವ ಲದ್ದಿ ಜೀವಿಗಳಿಗೆ ಬಣ್ಣದ ಅವಶ್ಯಕತೆ ಇರುವುದು. ಯಾಕಂದ್ರೆ ನಿಮಗೆಲ್ಲ ಸುಳ್ಳಿನ ಪೊರೆ ಯಾ ಅವಶ್ಯಕತೆ ಇದೆ. ಜನಮಾನಸದಲ್ಲಿ ಸುಳ್ಳನ್ನು ಸತ್ಯದಂತೆ ಬಿಂಬಿಸುವ ಅವಶ್ಯಕತೆ ನಿಮಗಿರುವುದು.

    ಸಳ ನಿಗೆ ಆರ್ಎಸ್ಎಸ್ ನ ಪಟ್ಟ ಕೊಡಲು ಯಾರು ಹೋಗುತ್ತಿಲ್ಲ. ಬದಲಾಗಿ, ಸಳನಂತ ಸಾವಿರಾರು ವೀರ ಯೋಧರೆ ಆರ್ಎಸ್ಎಸ್ ನ ಹುಟ್ಟಿಗೆ ಕಾರಣ. ಸುಳ್ಳು ಇತಿಹಾಸವನ್ನು ಓದಿ ನಮಗೂ ಸಾಕಾಗಿದೆ. ಸತ್ಯ ದ ಅನ್ವೇಷಣೆ ಮಾಡೋ ಕಾಲ ಇದು, ಮತ್ತು ಅದನ್ನು ಜಗತ್ತಿಗೆ ತಿಳಿಯ ಪಡಿಸುವ ಕಾಲ. ಯಾಕಂದ್ರೆ ಸತ್ಯವನ್ನು ಅದುಮಿ ಸಾಯಿಸೋದಕ್ಕೆ ಸಾದ್ಯವಿಲ್ಲ ಅದು ಹೊರ ಬಂದೆ ಬರುತ್ತೆ.
    ಇವತ್ತು ನಮಗೆ ಕರ್ನಾಟಕದ ಅಸಲಿ ಹುಲಿಯ ಪರಿಚಯ ವಾಗಿದೆ, ನಾಳೆ ಮೈಸೂರಿನ ಇಲಿಯ ಸತ್ಯ ದರ್ಶನ ವಾಗಲಿದೆ. ಮತ್ತು ಜಗತ್ತು ಅದನ್ನು ಒಪ್ಪಿಕೊಳ್ಳುತ್ತೆ.

    ಉತ್ತರ
  15. Ajith S Shetty's avatar
    ಆಕ್ಟೋ 26 2012

    @ಯೂಸುಫ್,
    ಇತಿಹಾಸವನ್ನು ತಿರುಚಿದ್ದು .. ಅವರಿಗೆ ಬೇರೆ ಬೇರೆ ಬಣ್ಣ ಕೊಡಲು ಪ್ರಾರಂಭಿಸಿದ್ದು ನಾವಲ್ಲ. ಅದು ಯಾರು ಅಂತ ಇಡೀ ದೇಶಕ್ಕೆ ಗೊತ್ತು. ಸಳನಿಗೆ ಚಡ್ಡಿ ತೊಡಿಸ ಬೇಕಾಗಿಲ್ಲ. ಚಡ್ಡಿ ತೋಟ್ಟು ಸಳ ನನ್ನೇ ಆದರ್ಶ ವಾಗಿಟ್ಟು ಅದೆಷ್ಟೋ ಜನ ಸಂಘದಲ್ಲಿ ಇದ್ದಾರೆ. ಅವರನ್ನು ನೋಡಿ ನಿಮ್ಮಂತವರಿಗೆ ಭಯವಾಗಿತಿದೆ ಅಷ್ಟೇ 🙂 ದಯವಿಟ್ಟು ಹೆದರಬೇಡಿ . ಅವರು ದೀನ ರನ್ನು .. ಸಜ್ಜನರನ್ನು, ಮಹಿಳೆಯರನ್ನು ಬಾಂಬ್ ಇಟ್ಟು ಬೆದರಿಸೋಲ್ಲ. ಲೇಖಕರು ನಿಜ ವಿಷಯ ಅರುಹಿದ್ದಾರೆ. ಅದನ್ನು ಜಿರ್ಣಿಸಿಕೊಳ್ಳಲು ನಿಮಗೆ ಕಷ್ಟ ವಾಗುತ್ತಿದೆ. ತಾವು ವಿವೇಕಾನಂದರ ಹಳೆ ಫೋಟೋ ನೋಡಿಲ್ಲ ಅಂತ ಅನ್ನಿಸೊತ್ತೆ.

    ಉತ್ತರ
  16. bhimasen.Purohit's avatar
    ಆಕ್ಟೋ 26 2012

    ಕನ್ನಡನಾಡಿನ ರನ್ನದ ರತುನ, ಕೇಳೋ ಕಥೆಯನ್ನ..
    ಹೆಮ್ಮೆಯ ಪಡೆದ ‘ಹೊಯ್ಸಳ’ ವಂಶ ಹುಟ್ಟಿದ ಕಥೆಯನ್ನ,
    ನಾಡನು ಕಟ್ಟಿದ ಕಥೆಯನ್ನ..!!!!

    ಶರವೇಗದ ಸರದಾರ ಚಿತ್ರದ ಈ ಹಾಡಿಗೆ, ಪ್ರಾಥಮಿಕ ಶಾಲೆಯಲ್ಲಿದ್ದಾಗ ನೃತ್ಯ ಮಾಡಿದ ನೆನಪಿದೆ.[ನಾನೇ ಸಳನ ಪಾತ್ರಧಾರಿಯೂ ಆಗಿದ್ದು ಭಾಗ್ಯವೇ.]
    ಆನಂತರ ಎಲ್ಲಿಯೂ ಅವನ ಇತಿಹಾಸವೇ ಇಲ್ಲ.. ಮರೆಯಾಗಿಹೋದ ಇತಿಹಾಸವನ್ನು ಮತ್ತೆ ತಿಳಿಸಿದ್ದಕ್ಕೆ ಧನ್ಯವಾದಗಳು.
    ಮೇಲಾಗಿ, ಯಾರ್ಯಾರನ್ನೋ “ಹುಲಿ”ಅನ್ನಬೇಕಾಯಿತಲ್ಲ ಎಂಬ ನೋವೂ ಕೂಡ..
    ಅತ್ಯುತ್ತಮ ಲೇಖನ..!!!!

    ಉತ್ತರ
  17. charitra kumar's avatar
    charitra kumar
    ಆಕ್ಟೋ 27 2012

    ಹೊಯ್ಸಳ: ಕರ್ನಾಟಕದ ಅಸಲಿ ಹುಲಿ, ಇವನ್ಯಾರೋ ಕಾಂಜಿ ಪೀಂಜಿ ಅಲ್ಲ, ತನಗೆ ಆಶ್ರಯ ಕೊಟ್ಟ ರಾಜನಿಗೆ ಮೋಸ ಮಾಡಿ ಗದ್ದುಗೆ ಏರಿದೆ ಧೂರ್ತ ವಂಶಸ್ತನು ಅಲ್ಲ. ಇವನೇ ಮಣ್ಣಿನ ಮಗ. ಕನ್ನಡಿಗರ ಹೆಮ್ಮೆಯ ಮಗ. ಈ ನಾಡನ್ನು ಕಟ್ಟಿ ಬೆಳೆಸಿದ ಧೀರ.

    ಉತ್ತರ
  18. surya's avatar
    surya
    ಆಕ್ಟೋ 27 2012

    very good article. enjalu unnuva dur buddijeevi galu omme edannu odbeku.

    ಉತ್ತರ
  19. Deepak uchil's avatar
    Deepak uchil
    ಆಕ್ಟೋ 28 2012

    ಶೂನ್ಯದಿ೦ದ ವಿಶಾಲ ಹೊಯ್ಸಳ ಸಾಮ್ರಾಜ್ಯವನ್ನು ಕಟ್ಟಿ ಸುಮಾರು ೩೫೦ ವರ್ಷಗಳ ಆಳ್ವಿಕೆಯಲ್ಲಿ೨೫೦ಕ್ಕೂ ಹೆಚ್ಚು ಮಹಾ ದೇವಾಲಯಗಳನ್ನು ಕಟ್ಟಿಸಿ ಹಿ೦ದೂಧರ್ಮ,ಸ೦ಸ್ಕ್ರತಿಯನ್ನು ಜಗತ್ತಿಗೆ ಸಾರಿದ ಬಲಿಷ್ಟ ರಾಜವ೦ಶದ ಸ್ಥಾಪಕನಿಗೆ ಯಾವುದೇ ‘ಬಣ್ಣ’ದ ಅಗತ್ಯವಿಲ್ಲ. ಯಾವ ರೀತಿ ಗೌರವಿಸಿದರೂ ಕಡಿಮೆಯೇ.. ಅದೇ ರೀತಿ ತನ್ನ ಸ್ವಾರ್ಥಕ್ಕೋಸ್ಕರ ೪೦೦೦೦೦ ಮುಗ್ಧ ಪ್ರಜೆಗಳನ್ನು ಬಲವ೦ತವಾಗಿ ಮತಾ೦ತರ ಮಾಡಿಸಿದ ಮತ್ತು ಹಿ೦ದೂ ಅರ್ಚಕರಿಗೆ,ದೇವಸ್ಥಾನಗಳಿಗೆ ದತ್ತಿ ನೀಡುವ ಆಮಿಷ ಒಡ್ಡಿ ಹಿ೦ದೂ ಯುವಕರನ್ನು ತನ್ನ sainya kke ಸೇರಿಸಿಕೊ೦ಡು ಅವರ ಪರಾಕ್ರಮದಿ೦ದ ಅಧಿಕಾರವನ್ನು ಅನುಭವಿಸಿ ಕೊನೆಗೊಮ್ಮೆ ಬ್ರಿಟಿಷರಿ೦ದ ಹತನಾದ ಓರ್ವ ನವಾಬನನ್ನು ವೀರ’ಕೇಸರಿ’ ಹೊಯ್ಸಳನಿಗೆ ಸರಿಸಮ ಎ೦ಬ೦ತೆ ಬಿ೦ಬಿಸುವುದು ಸೂರ್ಯನೆದುರು ಚಿಮಿಣಿ ದೀಪ ಉರಿಸಿದ೦ತೆ..

    ಉತ್ತರ

Leave a reply to Deepak uchil ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments