ವೈದ್ಯೋ ನಾರಾಯಣೋ ಹರಿ
ಮಧುಚಂದ್ರ ಭದ್ರಾವತಿ
ಪ್ರತಿ ಸೇವೆಗೆ ಸೇವಾ ಶುಲ್ಕವೆಂದು ಪ್ರತಿಯೊಂದು ಕಾರ್ಮಿಕ ವರ್ಗವು ಪಡೆಯುತ್ತದೆ . ಇಂದು ಸೇವಾ ಶುಲ್ಕದಲ್ಲಿ ಸೇವೆ ಎನ್ನುವ ಪದ ತಾನಾಗೆ ಬೇರ್ಪಟ್ಟಿದೆ. ಈಗ ಶುಲ್ಕದ ಮೇಲೆ ಮತ್ತೊಂದು ರೀತಿಯ ಶುಲ್ಕವನ್ನು ಹಾಕಿ ಹಲ್ಕಿರಿಯುತ್ತ ಗ್ರಾಹಕರನ್ನು ಶೋಷಣೆ ಮಾಡುವ ವ್ಯಾಮೋಹಕ್ಕೆ ತಮ್ಮ ಸಂಸ್ಕಾರವನ್ನು ಮರೆತು ಬಿಟ್ಟು ಹಗಲು ದರೋಡೆಯಲ್ಲಿ ಹಲವು ಕಾರ್ಮಿಕ ವರ್ಗಗಳು ನಿರತವಾಗಿವೆ. ಕೆಳ ಮಟ್ಟದ ಕಾರ್ಮಿಕ ವರ್ಗದಿಂದ ಹಿಡಿದು ಅತ್ಯುತ್ತಮ ಮಟ್ಟದ ಕಾರ್ಮಿಕ ವರ್ಗದವರೆಗೂ ಈ ಸಂಸ್ಕಾರ ಅಂಟಿಕೊಂಡಿದೆ(ಎಲ್ಲರು ಈ ವರ್ಗಕ್ಕೆ ಸೇರುವುದಿಲ್ಲ ,ಕೆಲವರು ಇದಕ್ಕೆ ಅಪವಾದ ).
ಅದಕ್ಕೆ ” ವೈದ್ಯ ” ಎಂಬ ಕಾರ್ಮಿಕ ವರ್ಗವು ಸಹ ತಡವಾಗಿ ಸೇರಿದರು ಎಲ್ಲ ವರ್ಗವನ್ನು ಮಿರಿ ಅತ್ಯಂತ ವೇಗವಾಗಿ ಮುನ್ನುಗುತ್ತಿದೆ. ಬಹುಶ ನಮ್ಮ ಸುತ್ತಮುತ್ತಲಿರುವ ವೈದ್ಯರನ್ನು ಮತ್ತು ಆಸ್ಪತ್ರೆಗಳನ್ನು ನೀವಾಗಿ ನಿಮ್ಮ ಮನದಲ್ಲಿ ಪ್ರಸ್ತಾಪಿಸಿದರೆ ಅದಕ್ಕೆ ತಕ್ಕ ಮಟ್ಟಿಗೆ ಉತ್ತರ ನಿಮಗೆ ದೊರೆಯುತ್ತದೆ . ಸೇವಾ ಮನೋಭಾವ ಎಂಬುದನ್ನು ಮರೆತು, ಕೇವಲ ಹಣಕ್ಕಾಗಿ ತಮ್ಮನ್ನು ಮಾರಿಕೊಂಡು ತಮ್ಮ ಮೂಲ ವೃತ್ತಿಗೆ ದ್ರೋಹ ಬಗೆಯುತ್ತ ಜೀವನವೆಂಬ ರಥವನ್ನು ಎಳೆಯುತ್ತಾ ರೋಗಿಗಳ ರಕ್ತವನ್ನು ಕುಡಿಯುತ್ತಿರುತ್ತಾರೆ. ವಾಸ್ತವ ಹೇಗಿದೆ ಎಂದರೆ ಇಂದು ವೈದ್ಯನೆಂದರೆ ಹಣ ಕೀಳುವ ಜಿಗಣೆ ಎಂಬಂತಾಗಿದೆ.
ಹದಿನಾಲ್ಕರ ಬಾಲೆಗೆ ಹೆದರಿದ ತಾಲಿಬಾನಿ ಹೇಡಿಗಳು!
– ಚಕ್ರವರ್ತಿ ಸೂಲಿಬೆಲೆ
‘ನನ್ನ ಪಾಕಿಸ್ತಾನದ ಕನಸು ಇಂತಹದುಲ್ಲ. ಅಲ್ಲಿ ಶಾಂತಿ ಇರಬೇಕು. ನೆರೆಯವರೊಂದಿಗೆ ಸೌಹಾರ್ದ ಗೆಳೆತನವಿರಬೇಕು. ನನ್ನ ಪಾಕಿಸ್ತಾನದಲ್ಲಿ ಹಗರಣಗಳಿರಬಾರದು. ಶತ್ರುಗಳಿಲ್ಲದ ರಾಷ್ಟ್ರವಾಗಿರಬೇಕು ಅದು.’ ಹಾಗಂತ ಪಟಪಟನೆ ಮಾತನಾಡುತ್ತ ಇಂತಹದೊಂದು ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯಬಿದ್ದಲ್ಲಿ ಓದು ಮುಗಿಸಿ ರಾಜಕಾರಣಕ್ಕೂ ಧುಮುಕುವೆನೆಂದು ಪತ್ರಕರ್ತರ ಮುಂದೆ ಹೇಳಿದ್ದು ಬೆನಜಿರ್ ಭುಟ್ಟೋ ಅಲ್ಲ. ಹದಿಮೂರರ ಬಾಲೆ ಮಲಾನಾ ಯೂಸುಫ್ ಜಾಯ್…!ಹೌದು. ಮೊನ್ನೆ ದುಷ್ಟ ತಾಲಿಬಾನಿಗಳು ಗುಂಡು ಹಾರಿಸಿ ಕೊಲ್ಲುವ ಯತ್ನ ನಡೆಸಿದ್ದು ಈ ಹುಡುಗಿಯ ಮೇಲೆಯೇ. ಈಗ ಅವಳಿಗೆ ಹದಿನಾಲ್ಕು ವರ್ಷ ಮಾತ್ರ. ತಾಲಿಬಾನ್ ಎನ್ನುವ ಪದ ಕ್ರೌರ್ಯಕ್ಕೆ ಪರ್ಯಾಯವಾಗಿ ನಿಂತಿರುವುದು ಇಂದೇನಲ್ಲ. ಆಪ್ಘಾನಿಸ್ತಾನದ ಪುಷ್ತೂನ್ ಬುಡಕಟ್ಟಿನ ಜನರ ಮಹತ್ವಾಕಾಂಕ್ಷೆಯ ಭಾಗವಾಗಿ ಹುಟ್ಟಿದ ದಿನದಿಂದ ಅದು ಹಾಗೆಯೇ. ಅಫ್ಘಾನಿಸ್ತಾನ ಗಾಂಧಾರ ದೇಶವಾಗಿದ್ದ ಕಾಲದಿಂದಲೂ ಭಿನ್ನಭಿನ್ನ ಬುಡಕಟ್ಟುಗಳ ಭೂಪ್ರದೇಶ. ಅದರಲ್ಲಿ ಸೂರ್ಯಚಂದ್ರರನ್ನು ಆರಾಧಿಸುವ ಪ್ರಕೃತಿ ಪೂಜಕರಿಂದ ಹಿಡಿದು ಸಗುಣ ಸಾಕಾರ ಮೂರ್ತಿಪೂಜಕರೂ ಇದ್ದರು. ನಡುವಲ್ಲಿ ಒಂದಷ್ಟು ಕಾಲ ಬುದ್ಧನ ಅನುಯಾಯಿಗಳ ಶಾಂತಿಯ ಪ್ರಭೆಯಿಂದಲೂ ಬೆಳಗಿತು ಆಫ್ಘಾನಿಸ್ತಾನ. ಆನಂತರದ ದಿನಗಳಲ್ಲಿ ದಾಳಿಗೆ ಒಳಗಾಗಿ ಕ್ರಮೇಣ ಇಸ್ಲಾಮ್ ವ್ಯಾಪ್ತಗೊಂಡಿತು. ಹಾಗಂತ ಇಸ್ಲಾಮ್ ಕೂಡ ಏಕಪ್ರಕಾರವಾಗಿರಲಿಲ್ಲ. ಆಯಾ ಬುಡಕಟ್ಟುಗಳು ತಮ್ಮದೇ ಆದ ಆಚರಣೆಗಳೊಂದಿಗೆ ಬದುಕಿದ್ದವು. ಸೂಫಿಸಂತರುಗಳು ಹೊಸ ಪರಂಪರೆಯನ್ನು ಹುಟ್ಟುಹಾಕಿದ್ದರು. ತಮ್ಮ ರೀತಿಯೇ ಸರಿ ಎನ್ನುವ ಕಾದಾಟಗಳು ಆಗೀಗ ನಡೆಯುತ್ತಲೇ ಇದ್ದವು. ಮೇಲುಗೈ ಸಾಧಿಸಿ ಇಡಿಯ ಪ್ರಾಂತವನ್ನು ಆಳಬೇಕೆಂಬ ತಹತಹವೂ ಸಹಜವಾಗೇ ಇತ್ತು. ಈ ಹಂತದಲ್ಲಿ ಪುಷ್ತೂನ್ ಬುಡಕಟ್ಟಿನ ಜನ ವಹಾಬಿಗಳ, ದಿಯೋಬಂದಿಗಳ ಸಿದ್ಧಾಂತದ ಆಧಾರದ ಮೇಲೆ ಕಟ್ಟಿದ ಕಟ್ಟರ್ ಇಸ್ಲಾಮೀಪಂಥ ’ತಾಲಿಬಾನ್’. ಮುಲ್ಲಾ ಮುಹಮ್ಮದ್ ಓಮರ್‌ನ ನೇತೃತ್ವ ಅದಕ್ಕೆ ದೊರೆಯಿತು. ಸೌದಿಯ ಹಣ, ಪಾಕಿಸ್ತಾನದ ಜನ ಎರಡೂ ವಿಪುಲವಾಗಿ ಹರಿಯಿತು. ೧೯೯೬ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನ್ ಚುಕ್ಕಾಣಿಯನ್ನೆ ಹಿಡಿದುಬಿಟ್ಟಿತು.
ಕಿವುಡರೂ ಮಾತನಾಡಬಲ್ಲರು,ನೀವು ಮಾತನಾಡಿಸುವ ಮನಸ್ಸು ಮಾಡಬೇಕಷ್ಟೆ
ಮಗುವೊಂದು ಭೂಮಿಗೆ ಬಂದಾಗ ತಂದೆ-ತಾಯಿಯರ ಪಾಲಿಗದು ಸ್ವರ್ಗವೇ ಧರೆಗಿಳಿವಂತ ದಿನ.ಆದರೆ,ವಿಶಿಷ್ಠ ಚೇತನ ಮಕ್ಕಳು ಹುಟ್ಟಿದಾಗ ತಂದೆತಾಯಿಗಳು,ಕುಟುಂಬ ವರ್ಗ ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಬಡವರು,ಶ್ರೀಮಂತರು,ಅಕ್ಷರಸ್ಥರು,ಅನಕ್ಷರಸ್ಥರು ಬಹುಷಃ ಆ ಸಮಯಕ್ಕೆ ಎಲ್ಲರ ಪ್ರತಿಕ್ರಿಯೆಯೂ ‘ದೇವರು ನಮಗೆ ಹೀಗೇಕೆ ಮಾಡಿದ?” ಎಂಬುದೇ ಆಗಿರುತ್ತದೆ.ವಿಶಿಷ್ಠ ಚೇತನ ಮಕ್ಕಳು ಬೆಳೆಯುತ್ತ ಬೆಳೆಯುತ್ತ ತಂದೆ-ತಾಯಿಯರಿಗೂ ತಮ್ಮದೇ ರೀತಿಯಲ್ಲಿ ಜೀವನ ದರ್ಶನ ಮಾಡಿಸುವ ಗುರುಗಳಾಗಿಬಿಡುತ್ತಾರೆ.
ಇನ್ನು ಸಮಾಜ ಇಂತ ಮಕ್ಕಳನ್ನು ನೋಡುವ ರೀತಿಯೂ ಬೇರೆಯೇ ಆಗಿರುತ್ತದೆ.ಇಂತ ವಿಶಿಷ್ಠ ಚೇತನರನ್ನ ಗೇಲಿ ಮಾಡುತ್ತಾರಲ್ಲ ಅವರೇ ನಿಜವಾಗಿ ವಿಕೃತರು. ಮನೆಗಳಲ್ಲೇ ಇದು ಶುರುವಾಗುತ್ತದೆ,ಮುಂದುವರಿದು ಶಾಲೆಯಲ್ಲೂ ‘ಗುರು’ಗಳು ಅನ್ನಿಸಿಕೊಂಡವರಿಂದ,ಕಡೆಗೆ ಸಮಾಜದಿಂದ .ಇಷ್ಟೆಲ್ಲಾ ಕುಹುಕ – ಕೀಳರಿಮೆಯಿಂದ ಬೆಳೆದವರು ತೋರಿಸುವ ಈ ಪರಿ ಉತ್ಸಾಹವಿದೆಯಲ್ಲ ಇದನ್ನ ಎಲ್ಲ ಸರಿಯಿರುವ ಜನರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಬಿಡಿ.ಇಂತ ವಿಶಿಷ್ಠ ಚೇತನ ಮಕ್ಕಳು ಇಂದು ಸಮಾಜದ ವಿವಿಧ ಸ್ಥರಗಳಲ್ಲಿ ತಮ್ಮ ಸಾಧನೆಯ ಹಾದಿಯನ್ನು ಸ್ಥಾಪಿಸುತ್ತ ಹೊರಟಿದ್ದಾರೆ.
ನಮ್ಮ ಲೇಖಕಿ ‘ಶ್ರೀ ವಿದ್ಯಾ‘ ಅವರಿಗೂ ಕೂಡ ಶ್ರವಣ ದೋಷವಿದೆ.ಆದರೆ, ದೋಷವನ್ನು ಹಿಂದಕಿಕ್ಕಿ ನೊಂದವರ ಕಣ್ಣೀರು ಒರೆಸುವಂತ ಕೆಲಸಕ್ಕೆ ಕೈ ಹಾಕುವುದು ನನ್ನ ಜೀವನದ ಗುರಿ ಅಂತ ಹೊರಟಿದ್ದಾರೆ,ಅವರ ಎಲ್ಲ ಪ್ರಯತ್ನಗಳು ಸಫಲವಾಗಲಿ ಅನ್ನುವುದು ನಿಲುಮೆ ಬಳಗದ ಪ್ರೀತಿಯ ಹಾರೈಕೆ – ನಿಲುಮೆ
– ಶ್ರೀ ವಿದ್ಯಾ
ಈ ದೇಶದಲ್ಲಿ ಎಷ್ಟೋ ಜನರು ಅಂಗವಿಕಲರು.ಕೆಲವರಿಗೆ ಕಿವಿ ಕೇಳಿಸಲ್ಲ, ಮಾತು ಬರಲ್ಲ, ಕಣ್ಣು ಕಾಣಿಸಲ್ಲ, ಕೈ ಕಾಲು ಇಲ್ಲ, ಬುದ್ಧಿ ಕಡಿಮೆ, ಈ ತರಹ ತುಂಬಾ ತೊಂದರೆ ಇರುವವರಿದ್ದಾರೆ. ಆದರೆ ನಾನು ಹೇಳುತ್ತಿರುವುದು ಕಿವುಡರ ಬಗ್ಗೆ. ಇತರ ಅಂಗವಿಕಲರಿಗಿಂತ ಕಿವುಡರಿಗೆ ಸಮಸ್ಯೆ ಹೆಚ್ಚು. ಅವರಿಗೆ ಕಿವಿ ಕೇಳಿಸದಿರುವುದರಿಂದ ಪ್ರಪಂಚ ಏನು? ಹೇಗೆ? ಎಂಬುದೇ ಗೊತ್ತಿರುವುದಿಲ್ಲ. ಕಿವುಡರ ಮನೆಯಲ್ಲಿ ಅವರ ಅಪ್ಪ ಅಮ್ಮಂದಿರು ಸರಿಯಾಗಿ ಬೆಂಬಲ ನೀಡದೆ ನಿರ್ಲಕ್ಷ್ಯ ಮಾಡುತ್ತಿರಬಹುದು. ಏನೆಂದರೆ, ಕೆಲವರು ಯಾಕಪ್ಪಾ ನಮಗೆ ಈ ಮಕ್ಕಳು ಹುಟ್ಟಿದರು ಎಂದು ಬೇಸತ್ತು ಚಿಕ್ಕವಯಸ್ಸಿನಿಂದ ಅವರಿಗೆ ಮಾತು ಕಲಿಸಿಲ್ಲ ಹಾಗೂ ತರಬೇತಿ ಕೊಡಿಸಿಲ್ಲ. ಹಾಗೂ ಅವರನ್ನು ಸನ್ನೆಭಾಷೆ ಶಾಲೆಯಲ್ಲಿ ಹಾಕಿ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ. ಮತ್ತಷ್ಟು ಓದು 
ಮಲಾಳ ಯೂಸುಫ್ ಝಾಯಿಯ ಡೈರಿಯಿಂದ
– ಡಾ ಅಶೋಕ್ ಕೆ ಆರ್
ಮಾನವಿಯತೆಯ ಮತ್ತೊಂದು ಮುಖ
– ಮಧು ಚಂದ್ರ ಭದ್ರಾವತಿ

ಸುಮಾರು ಎರಡು ತಿಂಗಳ ಹಿಂದೆ ನಡೆದ ನೈಜ ಘಟನೆ ಇದು. ಮಳೆಗಾಲವಾದರೂ ಅಂದು ಮಧ್ಯಾನ್ಹ ಆಗಸದಲ್ಲಿ ರವಿ ತನ್ನ ಉಗ್ರ ಪ್ರತಾಪವನ್ನು ತೋರಿಸುತ್ತಿದ್ದ. ವಿಜಯ ನಗರದಿಂದ ನಾನು ಕಾರ್ಯ ನಿಮಿತ್ತ ಮೇಲೆ ಜಯನಗರಕ್ಕೆ ಹೋಗುತ್ತಿದ್ದೆ. ದಾರಿಯಲ್ಲಿ ಹೋಗುತ್ತಿರುವಾಗ ಅಲ್ಲೊಂದು ಶವದ ಮೆರವಣಿಗೆ ಇದಿರಾಯಿತು. ಶವದ ಮುಂದೆ ಪಟಾಕಿ ಸಿಡಿಸುತ್ತ ಅವರ ಸಂಬಂಧಿಕರು, ಹಿಂದೆ ಶವವನ್ನು ತಮ್ಮ ಭುಜದ ಮೇಲೆ ಹೊತ್ತು ಕೊಂಡು ಶವದ ಸಂಬಂಧಿಕರು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದರು. ಏನಾಯಿತು ಗೊತ್ತಿಲ್ಲ ಇದ್ದಕಿದ್ದ ಹಾಗೆ ಅವರೆಲ್ಲ ಶವವನ್ನು ರಸ್ತೆಯಲ್ಲಿ ಬಿಟ್ಟು ಜಗಳವಾಡ ತೊಡಗಿದರು. ಅವರ ಜಗಳದಲ್ಲಿ ಪಾಪ ಶವ ಅನಾಥವಾಯಿತು ಅ ದಾರುಣ ದೃಶ್ಯವನ್ನು ನೋಡಿದರೆ ಎಂತವರಿಗೂ ಅಯ್ಯೋ ಪಾಪ ಎಂದು ಕನಿಕರ ಉಕ್ಕಿ ಬರುತಿತ್ತು
ಎದ್ದೇಳು ಮಂಜುನಾಥ ಚಿತ್ರದ ಒಂದು ದೃಶ್ಯದಲ್ಲಿ ನಾಯಕ ನಟನ ಅಪ್ಪನ ಅಂತ್ಯಕ್ರಿಯೆ ಕಾರ್ಯಕ್ರಮ. ವರುಣ ಅನಿರೀಕ್ಷಿತವಾಗಿ ತನ್ನ ಪ್ರಭಾವನ್ನು ತೋರಿಸಲು ಆರಂಭಿಸಿದ. ಅಲ್ಲಿ ನೆರೆದಿದ್ದ ಮನೆಯವರು ಮತ್ತು ನೆಂಟರು ಶವವನ್ನು ಅಲ್ಲೇ ಬಿಟ್ಟು ಮಳೆಯಲ್ಲಿ ತಾವು ನೆನೆಯ ಬಾರದು ಎಂದು ಮರದ ಕೆಳಗೆ ಆಶ್ರಯ ಪಡೆದು ಕೊಳ್ಳುವರು. ಆಗ ನಾಯಕ ನಟ, ಶವವಾಗಿದ್ದ ತನ್ನ ತಂದೆಗೆ ಹೇಳುತ್ತಾನೆ ” ನೋಡಪ್ಪ ನೀನು ಬದುಕಿದ್ದಾಗ ಎಲ್ಲ ನಿನ್ನ ಹಿಂದೇನೆ ಇದ್ದರು, ಈಗ ನೋಡು ನಿನ್ನ ಮಳೆಯಲಿ ನೆನೆಯೋಕೆ ಬಿಟ್ಟು ಹೇಗೆ ಎಲ್ಲಾ ಮರದ ಕೆಳಗೆ ನಿಂತಿದ್ದಾರೆ ”
ಮೇಲಿನ ಎರಡು ಸನ್ನಿವೇಶಗಳನ್ನು ನೋಡಿದರೆ ಎಂತವರಿಗು ಒಮ್ಮೆ ಕರಳು ಚುರುಕ್ ಎನ್ನದೆ ಇರುವುದಿಲ್ಲ. ಈಗೊಂದು ಸನ್ನಿವೇಶವನ್ನು ಹೇಳುತ್ತೇನೆ ಮೇಲಿನ ಎರಡಕ್ಕೂ ಇದು ತದ್ವಿರುದ್ದ.
ಅಂದು ಸಹ ಸೂರ್ಯ ಉಗ್ರವಾಗಿ ಪ್ರಕಾಶಿಸುತ್ತಿದ್ದ. ಲಾರಿಯ ಮೇಲೆ ಶವದ ಮೆರವಣಿಗೆ ಸಾಗಿತ್ತು . ಎಲ್ಲೋ ದೂರದಿಂದ ತೆಳ್ಳನೆಯ ಬಿಳಿ ಪಂಚೆ, ಕತ್ತಲ್ಲಿ ಮಫ್ಲರ್ , ತೆಲೆಯ ಮೇಲೆ ಒಂದು ಟೋ
ಬಹುಶ ಮೇಲಿನ ಎರಡು ಸನ್ನಿವೇಶಗಳಿಗೆ ಕೆಳಗಿನದನ್ನು ಹೋಲಿಕೆ ಮಾಡಿದರೆ ಮಾನವರ ಕರಾಳ ಮುಖದ ಪರಿಚಯ ನಮಗಾಗುತ್ತದೆ. ಜೀವ ಇದ್ದಾಗ ಮಾತ್ರ ಬೆಲೆ, ಇಲ್ಲದಿದ್ದಾಗ ಏನು ಇಲ್ಲ.ಪಿ ಮತ್ತು ಹಣೆಯ ಮೇಲೆ ನಾಮ ಇಟ್ಟುಕೊಂಡ ವಯಸ್ಸಾದ ಹಣ್ಣು ಹಣ್ಣು ಹಿರಿಯ ಜೀವವೊಂದು ಓಡೋಡಿ ಬಂದು ಲಾರಿಯ ಮೇಲೇರಿ. ಶವದ ಪಕ್ಕಕ್ಕೆ ನಿಂತು ತಾವು ತಂದಿದ್ದ ಛತ್ರಿಯನ್ನು ಹಿಡಿದು ” ಅಯ್ಯೋ, ನನ್ನಪ್ಪ ಬಿಸಿಲಿನ ತಾಪಕ್ಕೆ ಬೆಂದು ಹೋಗ್ತಿದಿಯಲ್ಲಪ್ಪಾ” ಎನ್ನುತ್ತಾ ಶವದ ಮುಖಕ್ಕೆ ನೆರಳು ಮಾಡಿದರು. ಈ ಮಾತು ಹೃದಯದ ಅಳದಿಂದ ಬಂದಂತಹ ಮಾತು. ಅಂದು ನಡೆಯುತ್ತಿದದು ಮತ್ತಾರದು ಅಲ್ಲ ಅ ನ ಕೃಷ್ಣರಾಯರ ಅಂತಿಮ ಯಾತ್ರೆ ಮತ್ತು ಅ ಹಿರಿ ಜೀವ ಮತ್ತಾರು ಅಲ್ಲ ಕನ್ನಡದ ಅಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್.
ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ. ಇಂತಹ ಪರಿಸ್ಥಿತಿಯಲ್ಲಿ ಬದುಕಿದ್ದಾಗ ಹೇಗೆ ನಾವು ಬೇರೆಯವರನ್ನು ಇಷ್ಟ ಪಡುತ್ತೆವೋ ಹಾಗೆ ಅವರು ಇಲ್ಲವಾದಗಲು ಅಷ್ಟೇ ಪ್ರೀತಿಯಿಂದ ನೆನೆಯಬೇಕು.
ಚಿತ್ರಕೃಪೆ : ಗೂಗಲ್
*******************************
ಅಧಿಕಾರ ಸಿಗುವುದಾದರೆ ಇವರು ಕಸಬ್ ಗೂ ಸ್ಮಾರಕ ಕಟ್ಟಲಾರರೆ?
-ಎ ಕೆ ಕುಕ್ಕಿಲ
1984 ಜೂನ್ 5ರಂದು ಭಾರತೀಯ ಸೇನೆಯು ಆಪರೇಶನ್ ಬ್ಲೂಸ್ಟಾರ್ (Operation Blue Star) ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುತ್ತದೆ. ಪ್ರತ್ಯೇಕತಾವಾದಿಗಳ ಹಿಡಿತದಿಂದ ಸಿಕ್ಖರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರವನ್ನು ಬಿಡುಗಡೆಗೊಳಿಸುವುದು ಕಾರ್ಯಾಚರಣೆಯ ಉದ್ದೇಶವೆಂದು ಪ್ರಧಾನಿ ಇಂದಿರಾ ಗಾಂಧಿ ಘೋಷಿಸುತ್ತಾರೆ. ಜನರಲ್ ಎ.ಎಸ್. ವೈದ್ಯ ಮತ್ತು ಲೆಫ್ಟಿನೆಂಟ್ ಜನರಲ್ ಕುಲ್ ದೀಪ್ ಸಿಂಗ್ ಬ್ರಾರ್‍ರ ನೇತೃತ್ವದಲ್ಲಿ ನೂರಾರು ಯೋಧರು ಕಾರ್ಯಾಚರಣೆಗಿಳಿಯುತ್ತಾರೆ. ಜರ್ನೈಲ್ ಸಿಂಗ್ ಬಿಂದ್ರನ್‍ವಾಲೆ ಮತ್ತು ನಿವೃತ್ತ ಮೇಜರ್ ಜನರಲ್ ಶಾಹೆಬ್ ಸಿಂಗ್‍ರ ನೇತೃತ್ವದಲ್ಲಿ ಸ್ವರ್ಣ ಮಂದಿರದೊಳಗೆ ಅಡಗಿ ಕೂತಿದ್ದ ಪ್ರತ್ಯೇಕತಾವಾದಿಗಳು, ಸೇನೆಗೆ ತೀವ್ರ ಪ್ರತಿರೋಧ ಒಡ್ಡುತ್ತಾರೆ. ಟ್ಯಾಂಕ್, ಹೆಲಿಕಾಪ್ಟರ್, ಶಸ್ತ್ರಾಸ್ತ್ರ ವಾಹನಗಳು, ಆರ್ಟಿಲರಿಗಳನ್ನು ಕಾರ್ಯಾಚರಣೆಯ ವೇಳೆ ಸೇನೆ ಬಳಸಿಕೊಂಡರೆ, ಪ್ರತ್ಯೇಕತಾವಾದಿಗಳು ಮೆಶಿನ್ ಗನ್, ಕ್ಷಿಪಣಿಗಳು, ರಾಕೆಟ್ ಲಾಂಚರುಗಳನ್ನು ಬಳಸುತ್ತಾರೆ. ಒಂದು ರೀತಿಯಲ್ಲಿ ಸ್ವರ್ಣ ಮಂದಿರದೊಳಗೆ ಯುದ್ಧವೇ ನಡೆಯುತ್ತದೆ. ಜೂನ್ 3ರಿಂದ 36 ಗಂಟೆಗಳ ಕಾಲ ಇಡೀ ಪಂಜಾಬ್‍ನಲ್ಲೇ ಕಫ್ರ್ಯೂ ವಿಧಿಸಲಾಗಿದ್ದರೂ ಸಂಚಾರ, ವ್ಯಾಪಾರ-ವಹಿವಾಟುಗಳನ್ನು ನಿಷೇಧಿಸಲಾಗಿದ್ದರೂ ವಿದ್ಯುತ್ ಕಡಿತಗೊಳಿಸಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಸಿಕ್ಖರು ಚೌಕ್ ಮೆಹ್ತಾದಲ್ಲಿ, ಹರಿಕ್ ಪಟನ್‍ನಲ್ಲಿ ನೆರೆಯುತ್ತಾರೆ. ಈ ಮಧ್ಯೆ ಸ್ವರ್ಣ ಮಂದಿರದ ಆಸುಪಾಸಿನ ಹೊಟೆಲ್‍ಗಳಲ್ಲಿ ಉಳಕೊಂಡಿದ್ದ ಎಲ್ಲ ಪತ್ರಕರ್ತರನ್ನೂ ಜೂನ್ 5ರ ಬೆಳಿಗ್ಗೆ 5 ಗಂಟೆಗೆ ಮಿಲಿಟರಿ ವಾಹನದಲ್ಲಿ ಹರ್ಯಾಣಕ್ಕೆ ಸಾಗಿಸಿ ಅಲ್ಲಿ ಬಂಧಿಸಿಡಲಾಗುತ್ತದೆ. ಮಾಧ್ಯಮಗಳನ್ನು ಸಂಪೂರ್ಣ ಸೆನ್ಸಾರ್‍ಶಿಪ್‍ಗೆ ಒಳಪಡಿಸಲಾಗುತ್ತದೆ. ಹೀಗೆ ಹೊರ ಜಗತ್ತಿನಿಂದ ಪಂಜಾಬನ್ನು ಸಂಪೂರ್ಣ ಪ್ರತ್ಯೇಕಿಸಿ ನಡೆಸಲಾದ ಆ ಕಾರ್ಯಾಚರಣೆ ಜೂನ್ 7ರಂದು ಕೊನೆಗೊಳ್ಳುವಾಗ 700ರಷ್ಟು ಯೋಧರೇ ಸಾವಿಗೀಡಾಗಿರುತ್ತಾರೆ. ಬಿಂದ್ರನ್‍ವಾಲೆ, ಶಾಹೆಬ್ ಸಿಂಗ್ ಸಹಿತ 400ರಷ್ಟು ಉಗ್ರವಾದಿಗಳು ಹತ್ಯೆಗೊಳಗಾಗುತ್ತಾರೆ. ಇಷ್ಟಕ್ಕೂ ಸಾವಿಗೀಡಾದ ಸಿಕ್ಖರ ನಿಖರ ಸಂಖ್ಯೆ ಎಷ್ಟು, ಎಷ್ಟು ಮಂದಿ ಗಾಯ ಗೊಂಡರು, ಆ ಕಾರ್ಯಾಚರಣೆ ಹೇಗಿತ್ತು ಎಂಬುದನ್ನೆಲ್ಲಾ ಹೇಳುವುದಕ್ಕೆ ಅಲ್ಲಿ ಅಸೋಸಿಯೇಟೆಡ್ ಪ್ರೆಸ್‍ನ (AP) ವರದಿಗಾರ ಬ್ರಹ್ಮ ಚಲ್ಲಾನಿಯ ಹೊರತು ಇನ್ನಾರೂ ಇದ್ದರಲ್ಲವೇ? ಮಿಲಿಟರಿಯ ಕಣ್ತಪ್ಪಿಸಿ ಅವರು ಮಾಡಿದ ಅಷ್ಟಿಷ್ಟು ವರದಿಯನ್ನು ಮುಂದೆ ನ್ಯೂಯಾರ್ಕ್ ಟೈಮ್ಸ್, ದಿ ಟೈಮ್ಸ್ ಆಫ್ ಲಂಡನ್, ದಿ ಗಾರ್ಡಿಯನ್ ಪತ್ರಿಕೆಗಳೆಲ್ಲಾ ಮುಖಪುಟದಲ್ಲಿ ಪ್ರಕಟಿಸುತ್ತವೆ. ಶವಸಂಸ್ಕಾರ ಮಾಡಿದವರ ಪ್ರಕಾರ, ಒಟ್ಟು 3,300 ಮಂದಿ ಆ ಕಾರ್ಯಾಚರಣೆಯಲ್ಲಿ ಸಾವಿಗೀಡಾಗಿದ್ದಾರೆ. ಇಂದಿರಾ ಗಾಂಧಿಯವರ ಕುರಿತಂತೆ ಪುಸ್ತಕ ಬರೆದಿರುವ ಮಾರ್ಕ್ ಟುಲಿಯ ಪ್ರಕಾರ ಸತ್ತವರ ಸಂಖ್ಯೆ 2,093. ಆದರೂ,
ಅಭಿವೃದ್ಧಿಯ ಸೋಗಿನಲ್ಲಿ ನಶಿಸುತ್ತಿರುವ ನನ್ನೂರು !!
ಅಶೋಕ್ ಕುಮಾರ್ ವಳದೂರು (ಅಕುವ)
ಉಡುಪಿ ಜಿಲ್ಲೆಯ ಕಾಪು ವ್ಯಾಪ್ತಿಯಲ್ಲಿ ಬರುವ ಪಾದೂರು ಈಗ ಜನಜನಿತ. ಪಾದೂರು ಮಜೂರು ರಸ್ತೆಯಲ್ಲಿ ಇಂದು ಜನರಿಗಿಂತ ಟಿಪ್ಪರ್ ಗಳ ಓಡಾಟವೇ ಜಾಸ್ತಿಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಧೂಳೆಬ್ಬಿಸಿ, ಕೆಸರು ರಟ್ಟಿಸಿ ಓಡುವ ಟಿಪ್ಪರ್ ಗಳ ರೋಷದೆದುರು ನಾಗರಿಕರ ಜೀವನದ ಗತಿ ಕ್ಷಿಣಿಸಿದೆ.ಪಾದೂರು ಸುತ್ತಮುತ್ತಲ ಊರವರಿಗೆ ತಾವು ಎನೋ ಕಳೆದುಕೊಂಡ ಕಳವಳ.ಪಾದೂರಿನ ಗುಡ್ಡೆಯಲ್ಲಿ ಕುಪ್ಪಳಿಸಿದ ಆ ದಿನಗಳು ಇನ್ನು ಕೇವಲ ನೆನಪು ಮಾತ್ರ. ಆ ಅಡ್ಡ ಪಾದೆಯ ಜಾರು ಬಂಡಿಯು ಇನ್ನು ಇತಿಹಾಸ. “ಪೆಚ್ಚು ಗಟ್ಟಿಸುವ ಹುಲಿ ಗುಹೆ ” ಮಾಯವಾಗಿದೆ. ಆಶಾಡ (ಆಟಿ ತಿಂಗಳು)ದಲ್ಲಿ ಆ ಬಿರುಸು ಮಳೆಗೆ ಹಸಿರು ಸೊಪ್ಪಿಗಾಗಿ ಜಾತ್ರೆಯಂತೆ ಪಾದೂರಿನ ಗುಡ್ದೆಯಲ್ಲಿ ಸೇರುತ್ತಿದ್ದ ಜನಜಾತ್ರೆ ಯಾವತ್ತೊ ಮಾಯವಾಗಿದೆ.ದನ,ಕೋಣ,ಜಾನುವಾರುಗಳ ಮೇವು ಹುಲ್ಲಿನ ಆಗಾಧ ಪಾದೂರು ಗುಡ್ದೆ ಅಭಿವೃದ್ಧಿಯ ಕರಡಾತನದಲ್ಲಿ ಬರಡಾಗುತ್ತಿದೆ. ಚಿಕ್ಕಂದಿನಿಂದ ಗುಡ್ಡೆಯ ಸಂದು ಬಿಡದೆ ಓಡಾಡಿದ, ನಲಿದಾಡಿದ,ಕೇಕೆ ಹಾಕಿ ಕುಣಿದ ನಮಗೆ ನಮ್ಮ ಮೌಂಟ್ ಎವರೆಸ್ಟ್ ಆಗಿದ್ದ “ಉಕ್ಕುಡ” ಅತಿ ಎತ್ತರದ ಬಂಡೆಯಾಗಿತ್ತು.ಈ ಉಕ್ಕುಡ ಬಂಡೆಯ ನೆತ್ತಿ ಏರುವುದು ಸಾಹಸದ ಕೆಲಸವೇ ಆಗಿತ್ತು. ಅದರ ತುತ್ತ ತುದಿಯಿಂದ ಪಶ್ಚಿಮಕ್ಕೆ ಕಾಪು ದೀಪ ಸ್ಥಂಬ, ಉತ್ತರಕ್ಕೆ ಶ್ರೀಕ್ಷೇತ್ರ ಕುಂಜಾರು ಗಿರಿಯ ದರ್ಶನವಾಗುತಿತ್ತು.ಮಳೆಯ ನೀರು ರಭಸದಿಂದ ಹರಿದು ನರ್ಸಿಕೆರೆಯೇ ಮಹಾಸಾಗರವಾಗುತಿತ್ತು. ಈಗ ಎಲ್ಲಾ ಮಾಯವಾಗಿದೆ. ನರ್ಸಿಕೆರೆ ಮಣ್ಣು ತುಂಬಿ ಹೇಳಹೆಸರಿಲ್ಲದಂತಾಗಿದೆ. ಕೃಷಿಕಾರ್ಯದಲ್ಲಿ ಸದಾ ಮಗ್ನವಾಗುತ್ತಾ ನೆಮ್ಮದಿಯಿಂದ ಉತ್ತದ್ದನ್ನು ಸಂತೋಷವಾಗಿ ಸಂಭ್ರಮಿಸುತ್ತಿದ್ದ ನನ್ನ ಊರಿನ(ವಳದೂರಿನ) ಜನರಿಗೆ ಪ್ರಾಣಸಂಕಟವಾಗಿ ಮಾರಕವಾಗಿದೆ ಪಾದೂರಿನಲ್ಲಿ ಸ್ಥಾಪನೆಯಾಗುತ್ತಿರುವ ತೈಲ ಸಂಗ್ರಹಣ ಘಟಕ.
ಟೆಕ್ಕಿಗಳಿಂದ ಕನ್ನಡ ಹಾಸ್ಯ ನಾಟಕೋತ್ಸವ
ಪವನ್ ಪಾರುಪತ್ತೇದಾರ
ಪ್ರತಿದಿನ C++, Java,.net ಸರ್ವರ್ರುಗಳ ಮಧ್ಯೆ ಇರುವ ಸಾಫ್ಟ್ವೇರ್ ಇಂಜಿನಿಯರುಗಳ ತಂಡವೇ ರಂಗತಂತ್ರ. 2008ರಲ್ಲಿ ಸ್ಥಾಪಿತವಾದ ಈ ತಂಡ, ಹವ್ಯಾಸಿ ನಾಟಕಕಾರರನ್ನು ಹೊಂದಿದ್ದು, ಇಲ್ಲಿಯವರೆಗೂ 8 ಪ್ರದರ್ಶನಗಳನ್ನು ನೀಡಿದೆ. ಈ ಹವ್ಯಾಸಿ ಟೆಕ್ಕಿ ಕಲಾವಿದರು ತಮ್ಮ ಕಚೇರಿಯ ಬಿಡುವಿಲ್ಲದ ಸಮಯದ ಮಧ್ಯೆ, ತಮ್ಮ ವೀಕೆಂಡುಗಳನ್ನೆಲ್ಲ ಬದಿಗಿಟ್ಟು, ಬಹಳಷ್ಟು ಕಷ್ಟ ಪಟ್ಟು ಅಭ್ಯಾಸ ಮಾಡಿ, ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಮುಂದೆ ಹಾಸ್ಯ ನಾಟಕೋತ್ಸವ ನಡೆಸಲು ಸಜ್ಜಾಗಿದ್ದಾರೆ.
ತಂಡದ ಮೇಷ್ಟ್ರು ಮಹದೇವ್ ಪ್ರಸಾದ್ ಯುವಪಡೆಯೊಂದನ್ನು ಸಜ್ಜು ಮಾಡಿಕೊಂಡಿದ್ದು, ನಾಟಕ ಪ್ರಿಯರಿಗೆ ನಗೆಯ ಹಬ್ಬದೂಟ ಬಡಿಸಲು ತಯಾರಿ ನಡೆಸುತಿದ್ದಾರೆ. ಲಾಕ್ ಔಟ್ ಅಲ್ಲ ನಾಕೌಟ್, ಶ್ರೀ ಕೃಷ್ಣ ಸಂಧಾನ ಮತ್ತು ಬಂಡ್ವಾಳವಿಲ್ಲದ ಬಡಾಯಿಯಂತಹ ಪ್ರಸಿದ್ಧ ಹಾಸ್ಯ ನಾಟಕಗಳನ್ನು ನಿಮ್ಮ ಮುಂದಿಡಲು ಕಾತುರದಿಂದ ಕಾಯುತಿದ್ದಾರೆ. ನಾಟಕ ಪ್ರಿಯರೆಲ್ಲ ಬಂದು ಸಾಫ್ಟ್ ವೇರ್ ಟೆಕ್ಕಿಗಳ ಪ್ರಯತ್ನವನ್ನು ಪ್ರೋತ್ಸಾಹಿಸಿ ಹರಸಬೇಕಾಗಿ ವಿನಂತಿ.
ನಾಟಕ ಪ್ರದರ್ಶನ ನಡೆಯುವ ದಿನಾಂಕಗಳು ಕೆಳಗಿನಂತಿವೆ.
ಅಕ್ಟೋಬರ್ 12 – ಶ್ರೀ ಕೃಷ್ಣ ಸಂಧಾನ
ಅಕ್ಟೋಬರ್ 13 – ಬಂಡ್ವಾಳವಿಲ್ಲದ ಬಡಾಯಿ
ಶ್ರೀ ಕೃಷ್ಣ ಸಂಧಾನ : ರಚನೆ : ವಿ ಎನ್ ಅಶ್ವಥ್
ವಿದ್ಯೆ ಇಲ್ಲದ ಹಳ್ಳಿ ಜನ ನಾಟಕ ಮಾಡಲು ಹೊರಟಾಗ ಎದುರಾಗುವ ಛಾಲೆಂಜುಗಳೇನು, ಅ ಹಳ್ಳಿ ಜನಕ್ಕೆ ನಾಟಕ ಹೇಳಿಕೊಡಲು ಬರುವ ಮೇಷ್ಟ್ರಿಗೆ ಅದರ ಅರಿವಿರೋದಿಲ್ಲ. ಬಂದು ಇವ್ರಿಗೆ ನಾಟಕ ಹೇಳಿಕೊಡಕ್ಕೆ ಶುರು ಮಾಡಿ ಗೆಜ್ಜೆಗ್ ಪೂಜೆ ಮಾಡ್ಸೋ ಅಷ್ಟ್ರಲ್ಲಿ ಮೇಷ್ಟ್ರು ಗೋಳು ಕೇಳಕ್ಕಾಗಲ್ಲ. ಅಂತಹ ಮೇಷ್ಟ್ರು ಮತ್ತೆ ಶಿಶ್ಯಂದಿರ ನಡುವೆ ನಡೆವ ನಗೆ ನಾಟಕ ಕೃಷ್ಣ ಸಂಧಾನ. ಈ ನಾಟಕ ಈಗಾಗ್ಲೆ ಕನ್ನಡದ ನಾಟಕ ಪ್ರಿಯರಿಗೆಲ್ಲ ಚಿರಪರಿಚಿತ. ಆದಕ್ಕೆ ಕಾರಣ ನಾಟಕದ ಪ್ರತಿಯೊಂದು ಸಾಲಿನಲ್ಲು ಇರುವ ನಗೆಮಿಠಾಯಿ ಅಂದ್ರೆ ತಪ್ಪಾಲ್ಲ ಬಿಡಿ. ನಾಟಕದ ಪ್ರತಿಯೊಂದು ಲೈನ್ ಸಹ ಪಂಚ್ ಲೈನ್. ನೀವೆಷ್ಟು ಬಾರಿ ನೋಡಿದರೂ ಬೇಜಾರಾಗದ ನಾಟಕ ಇದು. ಇಂತಹ ನಗೆಯ ರಸಾಯನ ಸಹ ರಂಗತಂತ್ರದ ಹಾಸ್ಯೋತ್ಸವದ ಕೊಡುಗೆ.
ಕದ್ದ ಸಿನಿಮಾದ ಆಸ್ಕರ್ ಪಯಣ
ಡಾ ಅಶೋಕ್ ಕೆ ಆರ್
“ಬಿಡ್ರೀ ರೀ. ಆಸ್ಕರ್ ಪ್ರಶಸ್ತಿ ಕೊಡೋದು ಪರದೇಶದೋರು. ಅದು ಸಿಗದಿದ್ರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು” ಎಂದು ನಮಗೆ
ನಾವೇ ಸಮಾಧಾನ ಪಟ್ಟುಕೊಳ್ಳುತ್ತೇವಾದರೂ ‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರದ ಸಂಗೀತಕ್ಕೆ ಎ. ಆರ್. ರೆಹಮಾನ್ ಗೆ ಆಸ್ಕರ್ ಪ್ರಶಸ್ತಿ ಬಂದಾಗ ಖುಷಿಪಟ್ಟಿದ್ದು ಸುಳ್ಳಲ್ಲ. ಮುಂದೊಂದು ದಿನ ಭಾರತೀಯ ಭಾಷೆಯ ಚಿತ್ರವೊಂದಕ್ಕೆ ಆಸ್ಕರ್ ದೊರೆತರೆ ಅಭೂತಪೂರ್ವವಾಗಿ ಸಂಭ್ರಮಿಸುವುದೂ ಸತ್ಯ. ಇಲ್ಲಿಯವರೆಗೆ ಭಾರತ ನಲವತ್ತೈದು ಚಿತ್ರಗಳನ್ನು ಆಸ್ಕರ್ ಪ್ರಶಸ್ತಿಗೆಂದು ಕಳುಹಿಸಿದೆಯಾದರೂ ಯಾವೊಂದು ಚಿತ್ರವೂ ಪ್ರಶಸ್ತಿ ಪಡೆದಿಲ್ಲ. ಪ್ರಶಸ್ತಿಯ ಸನಿಹಕ್ಕೆ ಬಂದಿದ್ದು ಬೆರಳೆಣಿಕೆಯ ಚಿತ್ರಗಳಷ್ಟೇ. ಭಾರತೀಯ ಚಿತ್ರವೆಂದರೆ ಹಿಂದಿ ಚಿತ್ರಗಳು ಮಾತ್ರ ಎಂಬ ಪೂರ್ವಗ್ರಹವೂ ಇದಕ್ಕೆ ಕಾರಣ ಎಂದರೆ ತಪ್ಪಲ್ಲ. ನಲವತ್ತೈದು ಚಿತ್ರಗಳಲ್ಲಿ ಮೂವತ್ತು ಹಿಂದಿ ಭಾಷೆಯವು, 8 ತಮಿಳು, ಮಲಯಾಳಂ, ಮರಾಠಿ ಬಂಗಾಳಿಯ ಎರಡು ಮತ್ತು ಉರ್ದುವಿನ ಒಂದು ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಕಳುಹಿಸಲಾಗಿದೆ. ಈ ವರ್ಷ ಆಸ್ಕರ್ ಗೆ ಭಾರತದಿಂದ ಆಯ್ಕೆ ಮಾಡಿ ಕಳುಹಿಸಿದ ಚಿತ್ರ ಅನುರಾಗ್ ಬಸು ನಿರ್ದೇಶನದ ಹಿಂದಿ ಚಿತ್ರ ‘ಬರ್ಫಿ’. ನಿಜಕ್ಕೂ ಇದು ಆಸ್ಕರ್ ಮೆಟ್ಟಿಲೇರಲು ಸಮರ್ಥವಾದ ಚಿತ್ರವೇ?
ಕೈಲಾಗದ ರಾಜಕಾರಣಿಗಳ ಕೊಲವೆರಿ, ಕನ್ನಡಿಗರ ಜೀವನಾಡಿ ಕಾವೇರಿ
– ರಾಕೇಶ್ ಶೆಟ್ಟಿ
ಅವತ್ತು ಬೆಳ್ಳಂಬೆಳಗ್ಗೆ ತಮ್ಮ ಹಿಂಬಾಲಕರ ಹಿಂಡು,ಕ್ಯಾಮೆರಾ ದಂಡಿನೊಂದಿಗೆ ಮೀಡಿಯಾ ಡಾರ್ಲಿಂಗ್ ಕಾನೂನು ಸಚಿವ ಸುರೇಶ್ ಕುಮಾರ್, ಗೃಹ ಸಚಿವ ಅಶೋಕ್ ಬೆಂಗಳೂರಿನಿಂದ ಗುಳೆ ಹೊರಟಿದ್ದ ಅಸ್ಸಾಂ ಜನರನ್ನು ಸಂತೈಸಲು ರೈಲ್ವೇ ನಿಲ್ದಾಣಕ್ಕೆ ಹೋಗಿ ನಿಂತಿದ್ದರು.ಆದರೆ ಈಗ ನೋಡಿ ಕಳೆದ ಇಪ್ಪತ್ತು ದಿನದಿಂದ ಕಾವೇರಿಕೊಳ್ಳದ ರೈತರು ಕಣ್ಣೀರಿಡುತಿದ್ದಾರೆ.ಬಂದ್,ಹರತಾಳಗಳಿಂದ ರಾಜ್ಯದ ಕಾನೂನು ಹದಗೆಡುತ್ತಿದೆ ಆದರೆ ಮಾನ್ಯ ಕಾನೂನು ಸಚಿವರು ನಾಪತ್ತೆಯಾಗಿದ್ದಾರೆ…! ಈ ನಡುವೆ ಗೃಹ ಸಚಿವರು ಅಸ್ಸಾಂಗೆ ಹೋಗಿದ್ದಾರಾ? ತಮಿಳುನಾಡಿಗೆ ಹೋಗಿ ಜಯಲಲಿತಾಗೂ ವಸ್ತುಸ್ಥಿತಿ ತಿಳಿಸಬಹುದಿತ್ತಲ್ಲಾ,ಯಾಕೆ ಹೋಗಲಿಲ್ಲ?
ಸುದ್ದಿ ಮಾಡಲು ಇದೇನು “ಭಾರತ”ದ ವಿಷಯವೋ ಅಥವಾ ಅವರ ಸಂಘ ಪರಿವಾರದ “ದೇಶ ಭಕ್ತಿ”ಯ ವಿಷಯವೋ ಅಲ್ಲವಲ್ಲ.ಇದು ಬರಿ ಕಾವೇರಿಯ ವಿಷ್ಯ,ಇದು ಕರ್ನಾಟಕದ ಜನತೆಯ ಪ್ರಾದೇಶಿಕತೆಯ ಸಂಕುಚಿತತೆಯ ಹೋರಾಟ ಅನ್ನಿಸರಬೇಕು.ಒಂದೆಡೆ ಇಂತ ದೇಶಭಕ್ತ ಕಾನೂನು ಸಚಿವ.ಮತ್ತೊಂದೆಡೆ ಸುಪ್ರೀಂ ಕೋರ್ಟ್ ಮುಂದೆ ನಿಂತು ೧೦ ಟಿಎಂಸಿ ನೀರು ನಾವೇ ಕೊಡ್ತೀವಿ ಅಂತ ಮುಂಚಿತವಾಗಿ ಬರೆದು ಕೊಟ್ಟ ಜಲಸಂಪನ್ಮೂಲ ಸಚಿವ ಮತ್ತು ಇಂತ ಎಡವಟ್ಟು ಸಚಿವರಿಗೊಬ್ಬ ಕಳಸವಿಟ್ಟ ಮುಖ್ಯಮಂತ್ರಿ.
ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಪ್ರಧಾನಿ ತೀರ್ಪನ್ನು ವಿರೋಧಿಸಿ, ಕುರ್ಚಿ ಬೇಕಾದರೂ ಬಿಡುತ್ತೇನೆ, ಕಾವೇರಿ ಬಿಡಲಾರೆ ಅಂದ ಶೆಟ್ಟರ್ ಮುಖಾಂತರ ಒಬ್ಬ ಹೀರೊನನ್ನು ಹುಡುಕಲು ರಾಜ್ಯದ ರೈತರು ಕನಸು ಕಾಣುತಿದ್ದರು.ಆದರೆ ಅವರಿಗೆ ಕಾವೇರಿಗಿಂತ ಕುರ್ಚಿಯೇ ಹೆಚ್ಚಾಯಿತು ನೋಡಿ.ರಾತ್ರೋ ರಾತ್ರಿ ನೀರು ಹರಿಸಲು ಶುರು ಮಾಡಿದ್ದಾರೆ.ಹೀರೊ ಆಗೋದು ಬಿಡಿ ಕಡೆ ಪಕ್ಷ ಜೀರೊ ಆದರು ಅಂತೇಳಿದರೆ, ಅದು ನಾವು ಆ “ಜೀರೊ” ಅನ್ನೋ ಪದಕ್ಕೆ ಅವಮಾನ ಮಾಡಿದಂತೆ. ಇಡೀ ರಾಜ್ಯ ಬಂದ್ ಮಾಡಿ ಹೊತ್ತಿ ಉರಿಯುತಿದ್ದರೆ ಮಾನ್ಯ ಮುಖ್ಯಮಂತ್ರಿಗಳು ಪೋಲಿಸ್ ಸರ್ಪಗಾವಲಿನೊಂದಿಗೆ ಭದ್ರವಾಗಿ ಮನೆಯಲ್ಲಿ ಕುಳಿತಿದ್ದಾರೆ, ರೋಮ್ ಹತ್ತಿ ಉರಿಯುತಿದ್ದಾಗ ಪಿಟೀಲು ಕುಯ್ಯುತಿದ್ದ ನೀರೋನಂತೆ…!





