ವಿಷಯದ ವಿವರಗಳಿಗೆ ದಾಟಿರಿ

Archive for

18
ನವೆಂ

ಸತ್ತ ನಂತರ ‘ಒಳ್ಳೆಯವರಾಗಿಬಿಡುವ’ ಪರಿಗೆ ಅಚ್ಚರಿಗೊಳ್ಳುತ್ತ….

ಡಾ ಅಶೋಕ್ ಕೆ ಆರ್

‘ಸತ್ತವರ ಬಗ್ಗೆ ಕೆಟ್ಟದ್ದಾಡಬಾರದಂತೆ’; ಅವರು ಬದುಕಿದ್ದಾಗ ಕೆಟ್ಟವರಾಗಿದ್ದಾಗಲೂ ಸಹ! ವ್ಯಕ್ತಿಯೇ ಸತ್ತು ಹೋದ ಮೇಲೆ ಆತನ ಹಳೆಯ ಪುರಾಣಗಳನ್ನು ಕೆದಕುವುದು ಬೇಡವೆಂಬ ಭಾವನೆಯನ್ನೇನೋ ಒಪ್ಪಬಹುದು ಆದರೆ ಇದ್ದ – ಇರದ – ಸೃಷ್ಟಿಸಲ್ಪಟ್ಟ ವಿಶೇಷಣಗಳನ್ನೆಲ್ಲ ಸತ್ತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಆರೋಪಿಸಿ ಸತ್ತವರಿಗೇ ಬೇಸರ ಬರಿಸುವಷ್ಟು ಹೊಗಳುವುದು ಎಷ್ಟರಮಟ್ಟಿಗೆ ಸರಿ?! ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯ ಮರಣದ ನಂತರ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಬಾಳ ಠಾಕ್ರೆಯ ಬಗ್ಗೆ ಬರುತ್ತಿರುವ ವರದಿಗಳನ್ನು ಓದಿದರೆ ನಮ್ಮ ಸಮಾಜದ ಅಧಃಪತನದ ಮನಸ್ಥಿತಿಯ ಪ್ರತಿಬಿಂಬದಂತೆಯೇ ಕಾಣಿಸುತ್ತಿದೆ.

‘ಮರಾಠಿ ಮಾನೂಸ್’ ಸೃಷ್ಟಿಸಿ ಅದರ ಬೆಂಕಿಯಲ್ಲೇ ರಾಜಕೀಯದಾಟವಾಡಿದ, ಹಿಂದೂ ಮುಸ್ಲಿಮರ ದ್ವೇಷ ಹೆಚ್ಚಳಕ್ಕೆ ತನ್ನ ಕೈಲಾದ ಸಹಾಯ ಮಾಡಿದ ವ್ಯಕ್ತಿಯೊಬ್ಬ ಇಂದು ರಾಷ್ಟ್ರನಾಯಕರಂತೆ, ದೇಶಭಕ್ತನಂತೆ ಚಿತ್ರಿಸಲ್ಪಡುತ್ತಿದ್ದಾರೆ. ಶಿವಸೇನೆಯ ಕಟ್ಟರ್ ಹಿಂದುತ್ವದ ಬೆಂಬಲಿಗರು ಠಾಕ್ರೆಯ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರನ್ನು ತೋರಿಸುತ್ತ ಆತ ಒಬ್ಬ ಮಹಾನ್ ನಾಯಕನೇ ಹೌದು ಎಂದ್ಹೇಳಬಹುದು. ಹಿಟ್ಲರನಿಗೂ ಅಪಾರ ಸಂಖ್ಯೆಯ ಬೆಂಬಲಿಗರಿದ್ದರು ಮತ್ತು ಬಾಳ ಠಾಕ್ರೆ ಸಂದರ್ಶನಗಳಲ್ಲಿ ಹಿಟ್ಲರನನ್ನು ಹಾಡಿ ಹೊಗಳಿದ್ದೂ ಇದೆ! ಮತ್ತಷ್ಟು ಓದು »