ಜ್ಞಾನಿಗಳಿಗೆ ಸಾವಿಲ್ಲ. ಆದರೆ ಗಡ್ಕರಿ, ದಾವೂದ್ ನಂತಹ ಬುದ್ದಿವಂತರಿಗೆ ಸಾವಿದೆ!
– ಮಹೇಂದ್ರ ಕುಮಾರ್
ಸ್ವಾಮಿ ವಿವೇಕಾನಂದರು ಮತ್ತು ದಾವೂದ್ ಇಬ್ರಾಹಿಂ, ಇಬ್ಬರೂ ಸಮಾನ ಬುದ್ದಿವಂತರು. ಸ್ವಾಮಿ ವಿವೇಕಾನಂದರು ತಮ್ಮ ಬುದ್ದಿವಂತಿಕೆಯನ್ನು ಸದುಪಯೋಗ ಪಡಿಸಿಕೊಂಡರು. ಆದರೆ ದಾವೂದ್ ಇಬ್ರಾಹಿಂ ದುರುಪಯೋಗ ಪಡಿಸಿಕೊಂಡ. ಈ ಹೇಳಿಕೆಯನ್ನು ದೇಶದ ಮಹಾನ್ ರಾಷ್ಟ್ರಭಕ್ತಿಯ ಪ್ರತೀಕ ಎಂದು ಹೇಳಿಕೊಳ್ಳುವ ಭಾರತೀಯ ಜನತಾಪಕ್ಷದ, ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿ ಏಕಾಏಕಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬಾಯಿಂದ ಉದುರಿರುವ ಅಣಿಮುತ್ತುಗಳು..
ಹೇಳಿಕೇಳಿ ಈತ ದೇಶಭಕ್ತರನ್ನು ಹುಟ್ಟು ಹಾಕುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳು. ಪ್ರತೀ ವರ್ಷ ವಿವೇಕಾನಂದ ಜಯಂತಿಯನ್ನು ಆಚರಿಸುವ ಪಕ್ಷದ ರಾಷ್ಟ್ರನಾಯಕ. ಇಷ್ಟೇ ಅಲ್ಲದೇ ರಾಷ್ಟ್ರೀಯ ಕಾರ್ಯಕಾರಣಿಗಳಿಂದ ಹಿಡಿದು ಸಣ್ಣ ಸಣ್ಣ ಕಾರ್ಯಕ್ರಮಗಳವರೆಗೂ ವಿವೇಕಾನಂದರ ಭಾವಚಿತ್ರಗಳನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷದ ಮುಂದಾಳು.
ಈ ಹೇಳಿಕೆಯನ್ನು ಕೊಡುವಾಗ ಒಂದೋ ತಲೆ ಕೆಟ್ಟಿರಬೇಕು, ಇಲ್ಲವಾದಲ್ಲಿ ವಿವೇಕಾನಂದರ ಬಗ್ಗೆ ಮತ್ತು ಅವರ ಆದರ್ಶ ಚಿಂತನೆಗಳ ಬಗ್ಗೆ ಯಾವುದೇ ಅರಿವಿಲ್ಲದೇ ಒಬ್ಬ ಸಾದಾರಣ ಇವರ ನಾಯಕರೆಂದು ಭಾವಿಸಿರಬೇಕು.. ವಿವೇಕಾನಂದರ ಬಗ್ಗೆ ಸಣ್ಣ ಅರಿವೂ ನಿತಿನ್ ಗಡ್ಕರಿಗೆ ಇದ್ದಿದ್ದೇ ಆದಲ್ಲಿ ಆತನ ಬಾಯಿಂದ ಈ ಮಾತುಗಳು ಹೊರಬರುತ್ತಿರಲಿಲ್ಲ. ಇವರುಗಳಿಗೆ ಆದರ್ಶ ವ್ಯಕ್ತಿಗಳು ಬಳಕೆಗೆ ಮಾತ್ರಾ…