ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ “ಸರ್ಕಾರ್ “
-ಅಜಿತ್ ಎಸ್ ಶೆಟ್ಟಿ
ಕೇಸರಿ ಅಂಗಿ, ಕೇಸರಿ ಶಾಲು, ಕೇಸರಿ ಟೋಪಿ , ಕೇಸರಿ ಶೂಗಳು , ಕೇಸರಿ ಬಣ್ಣದ ಸೈಕಲ್ , ಅದಕ್ಕೆ ಕೇಸರಿ ಬಣ್ಣದ ಚಕ್ರಗಳು ,ಕೇಸರಿ ಪೆನ್ ಯಿಂದ ಹಿಡಿದು ಕೇಸರಿ ಬಣ್ಣದ ಮೊಬೈಲ್ ತನಕ ಎಲ್ಲವೂ ಕೆಸರಿನೇ. ಹಿಂದುತ್ವವಾದಿ ಯಾದರೂ ಮನೆಯಲ್ಲಿ ಯಾವದೇ ದೇವರ ಫೋಟೋ ಇಲ್ಲ. ಇರುವದು ಎರಡೇ ಎರಡು ಫೋಟೋಗಳು ಅವರುಗಳೇ ಇವನ ಪಾಲಿಗೆ ದೇವರು. ಆ ಫೋಟೋ ಗಳು ಬೇರೆ ಯಾರದ್ದು ಅಲ್ಲಾ ಮರಾಠ ಸೇನಾಧಿಪತಿ , ಹಿಂದೂ ಹೃದಯ ಸಾಮ್ರಾಟ್ , ಹುಲಿ, ಬಾಳಾ ಸಾಹೇಬ್ ಠಾಕ್ರೆ ಮತ್ತು ಅವರ ಪತ್ನಿ ಮೀನಾ ಅವರದ್ದು . ಅವರನ್ನು ಅರಾಧಿಸುತಿರುವವರು 52 ರ ಹರೆಯದ ಪೂನಾ ಜಿಲ್ಲೆಯ ನಂಗೋನ್ ಎಂಬಲ್ಲಿನ ಮಹಾದೇವ್ ಯಾದವ್. ನಾವು ಇಂಥ ಸಾವಿರಾರು ಠಾಕ್ರೆ ಅಭಿಮಾನಿಗಳನ್ನು ಮಹಾರಾಷ್ಟ್ರದಲ್ಲಿ ನೋಡಬಹುದು .
ಇಂದು ಬಾಳಾ ಸಾಹೇಬ್ ಯನ್ನು “ತಮಿಳು ವಿರೋಧಿ” “ಕನ್ನಡಿಗರ ಪಾಲಿನ ಶತ್ರು ” ಉತ್ತರ ಭಾರತೀಯರು ಮತ್ತು ಗುಜರಾತಿಗಳ ಪಾಲಿಗೆ ಕಂಟಕರಾಗಿದ್ದವರೆಂದು ಬೆರಳೆಣಿಕೆ ಎಷ್ಟು ಇರುವ ಅವರ ವಿರೋಧಿಗಳು ಕರೆಯಬಹುದು . ಆದರೆ ಅದು ಬಾಳಾ ಸಾಹೇಬ್ ಠಾಕ್ರೆ ಯವರ ವ್ಯಕ್ತಿತ್ವದ ಮುಂದೆ ಗೌಣವಾಗುತದೆ . ಠಾಕ್ರೆ ವ್ಯಕ್ತಿತ್ವ ಅಂತಹುದು ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳುತಿದ್ದ . ಎಲ್ಲಿಯೂ ಎಡಬಿಡಂಗಿ ತರ ವರ್ತಿಸುತಿರಲಿಲ್ಲ. ಉದಾಹರಣೆ ಸಮೇತ ಸಮರ್ಥಿಸಿಕೊಳ್ಳುತಿದ್ದರು. ಅದು ಇಂದಿರೆ ಹೇರಿದ ತುರ್ತು ಪರಿಸ್ಥಿತಿಯಿಂದ ಹಿಡಿದು ಹಿಟ್ಲರ್ ಬಗೆಗಿನ ಠಾಕ್ರೆ ಅಭಿಮಾನದವರೆಗೆ. ದೇಶಕ್ಕೆ ಕಳಂಕದಂತಿದ್ದ , ಗುಲಾಮತೆಯ ಪ್ರತೀಕದಂತೆ ಭಾಸವಾಗುತಿದ್ದ ಬಾಬ್ರಿ ಮಸೀದಿ ದ್ವಂಸದಿಂದ, ಭಾರತ-ಪಾಕ್ ಕ್ರಿಕೆಟ್ ಪಂದ್ಯದ ತನಕ. ಎಲ್ಲಿಯೂ ರಾಜಿ ಇರಲಿಲ್ಲ. ಬಾಳಾ ಸಾಹೇಬ್ ಠಾಕ್ರೆ ಒಬ್ಬ ಭಾಷಾಪ್ರೇಮಿಯಾಗಿದ್ದರು ಅಪ್ರತಿಮ ದೇಶಭಕ್ತ, ಒಬ್ಬ ಹುಟ್ಟು ಹೋರಾಟಗಾರ, ಅಂಜದೇ ಅಳುಕದೇ ಯಾರಿಗೂ ತಲೆಬಾಗದೆ ತಾನು ನಂಬಿಕೊಂಡು ಬಂದಿರುವ ತತ್ವ ಸಿದ್ದಾಂತವನ್ನು ಪ್ರತಿಪಾದಿಸುವವ. ತಮ್ಮವರ ಹಕ್ಕಿಗಾಗಿ ಹೋರಾಡಿದ ಧೀಮಂತ ನಾಯಕ. ತನ್ನ ಶಕ್ತಿಯ ಮೇಲೆ, ತನ್ನ ಜನರ ನಂಬಿಕೆ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದ ಅದ್ಬುತ ಮಾತುಗಾರ. ತನ್ನ ನಂಬಿರುವ ತನ್ನ ಜನರ ಭರವಸೆ ಎಂದು ಹುಸಿಗೊಳಿಸದ, ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಸಿಕೊಟ್ಟ “ಸರ್ಕಾರ್” . ಉಳಿದವರಿಗೆ ಸ್ಪೂರ್ತಿಯ ಚಿಲುಮೆ . ಒಬ್ಬ ವ್ಯಂಗ್ಯ ಚಿತ್ರಗಾರ ನಾಗಿ ಬದುಕು ಪ್ರಾರಂಭಿಸಿದ ಬಾಳಾ ಸಾಹೇಬ್ ಠಾಕ್ರೆ ಬೆಳೆದು ಬಂದ ಅವನ ವಿರೋಧಿಗಳು ಮೆಚ್ಚುವಂಥಹುದು . ಅದಕ್ಕೊಂದು ಸಲಾಂ ಹೇಳಲೇ ಬೇಕು. ವಿವಾದಾತ್ಮಕ ವಾಗಿದ್ದರೂ ವರ್ಣರಂಜಿತ ಬದುಕು.
ಮತ್ತಷ್ಟು ಓದು