ವಿಷಯದ ವಿವರಗಳಿಗೆ ದಾಟಿರಿ

Archive for

5
ನವೆಂ

ಗಡ್ಕರಿಯ ಅ”ವಿವೇಕ” ಮತ್ತು ಸಂಘದ “ಸ್ವಾಮಿ”ನಿಷ್ಠೆ…!

– ರಾಕೇಶ್ ಶೆಟ್ಟಿ

“ಇನ್ನೊಬ್ಬ ವಿವೇಕಾನಂದನಿದ್ದಿದ್ದರೆ ಅವನಿಗೆ ತಿಳಿಯುತಿತ್ತು – ಈ ವಿವೇಕಾನಂದ ಏನು ಮಾಡಿದ್ದಾನೆ ಎಂದು… ಇರಲಿ, ಕಾಲಾಂತರದಲ್ಲಿ ಮತ್ತೆಷ್ಟು ಮಂದಿ ವಿವೇಕಾನಂದರು ಉದಿಸಲಿರುವರೋ!” ಸ್ವಾಮೀಜಿ ದೇಹತ್ಯಾಗದ ದಿನ ತಮ್ಮಷ್ಟಕ್ಕೆ ತಾವೇ ಹೇಳಿಕೊಂಡ ಮಾತುಗಳಿವು. ನಿಜ ವಿವೇಕಾನಂದ ಮಾಡಿ ಹೋಗಿದ್ದೇನು? ಯಾರನ್ನಾದರು ಕೇಳಿ ನೋಡಿ, ತಟ್ಟನೆ “ಅವರು ಸರ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದರು” ಅಂತಲೇ ಹೇಳುತ್ತಾರೆ..ಮುಂದೇನು ಮಾಡಿದ್ದರು ಅಂತ ಕೇಳುವಷ್ಟರಲ್ಲಿ ಮಾತು ತಡವರಿಸುತ್ತದೆ… ಬಹುಷಃ ಇದೆಲ್ಲವನ್ನೂ ಅರಿತೇ ಸ್ವಾಮೀಜಿ ಬಹುಷಃ ಮೇಲಿನ ಮಾತನ್ನು ಹೇಳಿದ್ದರು ಅನ್ನಿಸುತ್ತದೆ.

ಆದರೆ,ಮುಂದೊಂದು ದಿನ ತಾನು ಪ್ರತಿಪಾದಿಸುತ್ತಿರುವ “ರಾಷ್ಟ್ರೀಯತೆ(?)” ಅನ್ನುವ ಪದವನ್ನು ಹಿಡಿದು ಪಕ್ಷವೊಂದು ಉದಯಿಸಬಹುದು ಮತ್ತು ಅದಕ್ಕೊಬ್ಬ ಮೇಧಾವಿ ಅಧ್ಯಕ್ಷ ಬಂದು ಅವನು “ಸ್ವಾಮಿ ವಿವೇಕಾನಂದರ ಬುದ್ದಿಮತ್ತೆಯನ್ನು ಮುಂಬೈನ ಕಪ್ಪು ಜಗತ್ತಿನ ಕಳ್ಳನಾಗಿದ್ದವನ ಬುದ್ದಿ ಮತ್ತೆಗೆ ಸರಿಸಮ” ಅಂತೇಳಬಹುದು ಅನ್ನುವುದನ್ನು ಮಾತ್ರ ಊಹಿಸಿರಲಿಕ್ಕಿಲ್ಲ…!

ಮತ್ತಷ್ಟು ಓದು »

5
ನವೆಂ

ಯಾವಾಗ ಪಂದ್ಯ ಮುಗಿಯುತ್ತದೆ ಅನ್ನುವುದನ್ನು ವಿಧಿಯೇ ನಿರ್ಧರಿಸಲಿ ಅನ್ನುವುದು ನನ್ನ ಆಸೆ, ನಿನ್ನದು?

– ರಾಕೇಶ್ ಎನ್ ಎಸ್

ಇಷ್ಟೇ ಬರೆದು ಪತ್ರ ವ್ಯವಹಾರ ಶುರು ಮಾಡುವುದು ಪತ್ರ ಸಂಪ್ರದಾಯದ ಉಲ್ಲಂಘನೆ ಅನ್ನುವುದೇನೋ ನಿಜ. ಆದರೆ ನಾನು ಏನುಮಾಡಲಿ? ಯಾವ ಪ್ರಿಫಿಕ್ಸ್,ಸಫಿಕ್ಸ್ ಬಳಸೋದು ಅಂತ ಗೊತ್ತೇ ಆಗುತ್ತಿಲ್ಲ ಮಾರಾಯ್ತಿ. ಕಲ್ಲನ್ನು ಕಲ್ಲು ಎಂದು ಕರೆಯುವುದನ್ನು ಬಿಟ್ಟುಅದಕ್ಕೆ ಯಾವುದೇ ಪ್ರಿಫಿಕ್ಸ್ ಆಥವಾ ಸಫಿಕ್ಸ್ ಸೇರಿಸಿದರೂ ಅದು ತನ್ನ ಗುಣ, ಗುಣಮಟ್ಟ, ಆಕಾರ, ಆಕೃತಿ, ದೃವ್ಯರಾಶಿಗಳಲ್ಲಿ ಕಿಂಚಿತ್ತುಬದಲಾವಣೆ ತಂದು ಕೊಳ್ಳಲಾರದು ಎಂಬುದು ಕಲ್ಲು ಹೃದಯದವಳಾದ (ನೀನೇ ಕರೆದುಕೊಂಡಂತೆ) ನಿನಗೆ ಚೆನ್ನಾಗಿಯೇ ಗೊತ್ತಿದೆ.ನಾನು ನಿನ್ನನ್ನು ಏಕೆ ಗೌರವಿಸುತ್ತಿದ್ದೆ ಎಂದು ಕಾರಣ ಕೊಟ್ಟು ಹೇಳಬಹುದಾದ ಕೆಲವೇ ಕೆಲವು ಕಾರಣಗಳಲ್ಲಿ ಒಂದು ನೀನು stone hearted ಆಗಿದ್ದರೂ ಅದಕ್ಕಿಂತ ಹೆಚ್ಚು strong hearted ಆಗಿದ್ದದ್ದು. ಈ ಕಲ್ಲು ಹೃದಯಕ್ಕು ಗಟ್ಟಿ ಹೃದಯಕ್ಕೂ ಅಂಗ್ಲ ಭಾಷೆಯಲ್ಲಿಎರಡೇ ಎರಡು ಸ್ಪೆಲ್ಲಿಂಗ್‌ನ ವ್ಯತ್ಯಾಸವಷ್ಟೇ ಇದ್ದರೂ ಕೂಡ ಆ ಎರಡು ಸ್ಪೆಲ್ಲಿಂಗ್‌ಗಳು ನಮ್ಮ ವ್ಯಕ್ತಿತ್ವ, ವ್ಯವಹಾರ, ನಡೆ ನುಡಿಗಳಲ್ಲಿತರುವ ವ್ಯತ್ಯಯ ಅಪಾರವಾದದ್ದು. ಈ ಸ್ಪೆಲ್ಲಿಂಗ್ ವಿಷಯ ಬಿಟ್ಟು ಬಿಡೋಣ. ಏಕೆಂದರೆ ಈ ಎರಡು ಭಾಷೆಗಳಲ್ಲೂ ’ಅಪಾರ ಪಾಂಡಿತ್ಯ’ಸಂಪಾದಿಸಿರುವ ನಿನಗೆ ನಾನಂತೂ ಏನೂ ಹೇಳಲಾಗದು. “ನನ್ನದು ಏನೇ ಇದ್ದರೂ ಹೇಳಿ ಕೇಳಿ ಮೊದಲೇ ಚೂರು… ಪಾಪಿ ನಾನು”…

ಆದರೂ ನನಗೆ ನನ್ನ ಭಾವ ಮತ್ತು ಜ್ಞಾನ ಪರಿಧಿಯಲ್ಲಿ ಹೊಳೆದ ಒಂದು ಅಂಶವನ್ನು ನಿನ್ನ ಮುಂದೆ ಇಡುತ್ತೇನೆ. ಒಪ್ಪಿಕೊ ಎಂದುಒತ್ತಾಯಿಸಲಾರೆ… ಒಪ್ಪದಿದ್ದರೂ ನಾನೇನು ಕಳೆದುಕೊಳ್ಳಲಾರೆ. ನನ್ನ ಪ್ರಕಾರ ಕಲ್ಲು ಹೃದಯ ಎಂದರೆ ಪಲಾಯನವಾದ. ಯಾವುದೇಸ್ಥಿತಿ, ಪರಿಸ್ಥಿತಿ ಎದುರಾದಗಲೂ ಅದಕ್ಕೆ ಬೆನ್ನು ಹಾಕಿ ಓಡುವುದು. ಉದಾಹರಣೆಗೆ ನಾನು ನಿನಗೆ ಬೈದದ್ದೆ ಆದರೆ ಆಮೇಲೆ ಫೋನ್ರಿಸೀವ್ ಮಾಡದಿರುವುದು, ಮೆಸೆಜ್‌ಗೆ ರಿಪ್ಲೈ ಮಾಡದಿರುವುದು ಇತ್ಯಾದಿ. ಅದೇ ಗಟ್ಟಿ ಹೃದಯ ಎಂದರೆ ನಾನು ನಿನ್ನಲ್ಲಿ ಅದೇಷ್ಟೆ ಪರಿಪರಿಯಾಗಿ ಪಪ್ಪಿ ಕೇಳಿದ್ದರೂ ಕೂಡ ಅದನ್ನು ಕೊಡದೆ ಆದರೆ ನನ್ನನ್ನು ಕಳೆದುಕೊಳ್ಳದೆ ವ್ಯವಹರಿಸುತ್ತಿದ್ದಿ ಅಲ್ವಾ ಅದು. ಇದರಿಂದ ನಿನ್ನಬಗ್ಗೆ ನನಗಿದ್ದ ಪ್ರೀತಿ ಹೆಚ್ಚೇನು ಆಗಿಲ್ಲ. ಅದು ಆಗಲೂ, ಈಗಲೂ, ಆ ಕ್ಷಣವೂ, ಈ ಕ್ಷಣವೂ ಹಾಗೇ ಇದೆ ಸಾಗರದಂತೆ. ಅದರಸಾಂದ್ರತೆ, ತೀವೃತೆಯಲ್ಲಿ ಹೆಚ್ಚು ಕಡಿಮೆಯಾಗಿಲ್ಲ. ಅದ್ದರಿಂದ ನಾನು ನಿನ್ನಿಂದ ಏನು ನಿರೀಕ್ಷಿಸುತ್ತಿದ್ದೇನೆ ಎಂಬುದನ್ನು ನೀನು ಅರ್ಥಮಾಡಿಕೊಳ್ಳುವಲ್ಲೆ ಸಂಪೂರ್ಣ ಎಡವಿದ್ದಿ ಎಂದು ನನಗನಿಸುತ್ತೆ. ಅದ್ದರಿಂದಲೇ ಈ ಎಲ್ಲ ಸಮಸ್ಯೆ.

ಮತ್ತಷ್ಟು ಓದು »