ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 18, 2012

23

ಸತ್ತ ನಂತರ ‘ಒಳ್ಳೆಯವರಾಗಿಬಿಡುವ’ ಪರಿಗೆ ಅಚ್ಚರಿಗೊಳ್ಳುತ್ತ….

‍Dr Ashok K R ಮೂಲಕ

ಡಾ ಅಶೋಕ್ ಕೆ ಆರ್

‘ಸತ್ತವರ ಬಗ್ಗೆ ಕೆಟ್ಟದ್ದಾಡಬಾರದಂತೆ’; ಅವರು ಬದುಕಿದ್ದಾಗ ಕೆಟ್ಟವರಾಗಿದ್ದಾಗಲೂ ಸಹ! ವ್ಯಕ್ತಿಯೇ ಸತ್ತು ಹೋದ ಮೇಲೆ ಆತನ ಹಳೆಯ ಪುರಾಣಗಳನ್ನು ಕೆದಕುವುದು ಬೇಡವೆಂಬ ಭಾವನೆಯನ್ನೇನೋ ಒಪ್ಪಬಹುದು ಆದರೆ ಇದ್ದ – ಇರದ – ಸೃಷ್ಟಿಸಲ್ಪಟ್ಟ ವಿಶೇಷಣಗಳನ್ನೆಲ್ಲ ಸತ್ತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಆರೋಪಿಸಿ ಸತ್ತವರಿಗೇ ಬೇಸರ ಬರಿಸುವಷ್ಟು ಹೊಗಳುವುದು ಎಷ್ಟರಮಟ್ಟಿಗೆ ಸರಿ?! ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯ ಮರಣದ ನಂತರ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಬಾಳ ಠಾಕ್ರೆಯ ಬಗ್ಗೆ ಬರುತ್ತಿರುವ ವರದಿಗಳನ್ನು ಓದಿದರೆ ನಮ್ಮ ಸಮಾಜದ ಅಧಃಪತನದ ಮನಸ್ಥಿತಿಯ ಪ್ರತಿಬಿಂಬದಂತೆಯೇ ಕಾಣಿಸುತ್ತಿದೆ.

‘ಮರಾಠಿ ಮಾನೂಸ್’ ಸೃಷ್ಟಿಸಿ ಅದರ ಬೆಂಕಿಯಲ್ಲೇ ರಾಜಕೀಯದಾಟವಾಡಿದ, ಹಿಂದೂ ಮುಸ್ಲಿಮರ ದ್ವೇಷ ಹೆಚ್ಚಳಕ್ಕೆ ತನ್ನ ಕೈಲಾದ ಸಹಾಯ ಮಾಡಿದ ವ್ಯಕ್ತಿಯೊಬ್ಬ ಇಂದು ರಾಷ್ಟ್ರನಾಯಕರಂತೆ, ದೇಶಭಕ್ತನಂತೆ ಚಿತ್ರಿಸಲ್ಪಡುತ್ತಿದ್ದಾರೆ. ಶಿವಸೇನೆಯ ಕಟ್ಟರ್ ಹಿಂದುತ್ವದ ಬೆಂಬಲಿಗರು ಠಾಕ್ರೆಯ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರನ್ನು ತೋರಿಸುತ್ತ ಆತ ಒಬ್ಬ ಮಹಾನ್ ನಾಯಕನೇ ಹೌದು ಎಂದ್ಹೇಳಬಹುದು. ಹಿಟ್ಲರನಿಗೂ ಅಪಾರ ಸಂಖ್ಯೆಯ ಬೆಂಬಲಿಗರಿದ್ದರು ಮತ್ತು ಬಾಳ ಠಾಕ್ರೆ ಸಂದರ್ಶನಗಳಲ್ಲಿ ಹಿಟ್ಲರನನ್ನು ಹಾಡಿ ಹೊಗಳಿದ್ದೂ ಇದೆ!

ಇರಲಿ; ಕೊನೇ ಪಕ್ಷ ಬಾಳ ಠಾಕ್ರೆಯ ಶವಯಾತ್ರೆಯಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಕ್ಕೆ ಸಶಕ್ತ ಕಾರಣವಾದರೂ ಇದೆ. ಮರಾಠಿಗರಿಗೇ ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೆಲಸ ಸಿಗಬೇಕು ಎಂದು ಹೋರಾಟ ಮಾಡುವಲ್ಲಿ ಶಿವಸೇನೆಯ ಪಾತ್ರ ಹಿರಿದು[ತಮ್ಮ ಪಕ್ಷವೇ ಅಧಿಕಾರದಲ್ಲಿದ್ದಾಗ ‘ಮರಾಠಿಗರಿಗಷ್ಟೇ ಕೆಲಸ’ ಎಂಬ ತತ್ವವನ್ನು ಮರೆತ ಆರೋಪವೂ ಶಿವಸೇನೆಗಿದೆ]. ಅಂತರ್ಜಾಲದಲ್ಲಿ ಅನೇಕ ಕನ್ನಡಿಗರು ಠಾಕ್ರೆಯನ್ನು ಹಿಂದೂ ಧರ್ಮ ರಕ್ಷಕನೆಂದು ಹೊಗಳುತ್ತ, ‘ಅಯ್ಯೋ ಇಂಥ ವ್ಯಕ್ತಿ ಸತ್ತುಹೋದರಲ್ಲ’ ಎಂದು ವಿಷಾದಿಸುತ್ತಿದ್ದಾರೆ. ಇಂಥ ಒಬ್ಬ ನಾಯಕ ನಮ್ಮ ಕರ್ನಾಟಕದಲ್ಲಿ ಇಲ್ಲವಲ್ಲ ಎಂದು ಹಲಬುತ್ತಿರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಹೋಗಲಿ ಈ ನೆಟ್ಟಿಗರಿಗೆ ಠಾಕ್ರೆ ಕನ್ನಡಿಗರ – ಕರ್ನಾಟಕದ ವಿಚಾರವಾಗಿ ಯಾವ ಮನಸ್ಥಃತಿ ಹೊಂದಿದ್ದರು ಎಂಬುದು ತಿಳಿದಿಲ್ಲವೇನೋ ಎಂದುಕೊಳ್ಳಬಹುದು. ಆದರೆ ‘ಏಕ್ ಥಾ ಟೈಗರ್, ವಿಶ್ರಮಿಸಿದ ಹುಲಿ’ ಎಂದೆಲ್ಲ ಹೆಡ್ಡಿಂಗುಗಳನ್ನು ನೀಡುವ ಅನಿವಾರ್ಯತೆಯೇನಿತ್ತು ನಮ್ಮ ಕನ್ನಡ ಪತ್ರಿಕೆಗಳಿಗೆ? ಬಾಳ ಠಾಕ್ರೆಯ ಶಿವಸೇನೆ ಮೊದಮೊದಲು ಪ್ರವರ್ಧಮಾನಕ್ಕೆ ಬಂದಿದ್ದೇ ಗುಜರಾತಿ ವ್ಯಾಪಾರಿಗಳು ಮತ್ತು ಕನ್ನಡಿಗ ಕೆಲಸಗಾರರ ಮೇಲೆ ಹಲ್ಲೆ ನಡೆಸುವ ಮೂಲಕ. ಅದೆಲ್ಲ ಅರವತ್ತು ಎಪ್ಪತ್ತರ ದಶಕದ ಮಾತಾಯಿತು ಬಿಡಿ ಎಂದು ತಳ್ಳಿಹಾಕುವ ಹಾಗೂ ಇಲ್ಲ. ಬೆಳಗಾವಿ ವಿಷಯವಾಗಿ ಪದೇ ಪದೇ ವಿಷಕಾರುವುದರಲ್ಲಿ ಠಾಕ್ರೆಯದು ಎತ್ತಿದ ಕೈ. ಕನ್ನಡಿಗರನ್ನು ಹಾವುಗಳೆಂದು ಕರೆದು, ಮರಾಠಿಗರಿಗೆ ಕರ್ನಾಟಕದಲ್ಲಿ ಬದುಕುವ ಅವಕಾಶವೇ ಇಲ್ಲ ಎಂದು ಹುಯಿಲೆಬ್ಬಿಸುತ್ತ, ಕರ್ನಾಟಕ ಸರಕಾರವನ್ನು ವಜಾ ಮಾಡಬೇಕೆಂದು ರಾಷ್ಟ್ರಪತಿಯವರಿಗೆ ಮನವಿ ಮಾಡಿಕೊಳ್ಳುವವರೆಗೆ ಅವರಿಗೆ ಕರ್ನಾಟಕದ ಬಗ್ಗೆ ಅಸಹನೆಯಿತ್ತು. ಇಂಥ ವ್ಯಕ್ತಿಯನ್ನು ದೇವರನ್ನಾಗಿಸುತ್ತಿರುವ ಕನ್ನಡಿಗರ ಮನಸ್ಥಃತಿಗೆ ಅಚ್ಚರಿಪಡದಿರಲಾದೀತೆ?

ಮರಾಠಿಗರನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯದ ಜನರನ್ನು ದ್ವೇಷಿಸುತ್ತಿದ್ದ ಬಾಳ ಠಾಕ್ರೆಯವರನ್ನು ‘ದೇಶಭಕ್ತ’ನೆಂಬಂತೆ ಚಿತ್ರಿಸುವುದಾದರೂ ಯಾಕೆ? ಮುಂಬೈಗೆ ಇತರ ರಾಜ್ಯಗಳ ಜನರು ವೀಸಾ ಪಡೆದು ಬರುವಂತಾಗಬೇಕು ಎಂದು ಹೇಳಿದ, ಒಂದು ಕಾಲದಲ್ಲಿ ಪರರಾಜ್ಯದ ವರ್ತಕರಿಂದ ‘protection money’ ಹೆಸರಿನಲ್ಲಿ ಹಫ್ತಾ ವಸೂಲಿ ಮಾಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ರಾಷ್ಟ್ರನಾಯಕನೆಂದು ಕರೆಯಲಾದೀತೆ? ಸತ್ತವರು ಯಾರೇ ಇರಲಿ, ಅವರ ಮತ – ಪಂಥ – ತತ್ವ ಸಿದ್ದಾಂತಗಳನ್ನು ನೋಡದೆ ವಿಷಾದಿಸಬೇಕಿರುವುದು ಮನುಷ್ಯ ಧರ್ಮ. ಅಷ್ಟರಮಟ್ಟಿಗಿನ ವಿಷಾದ ಠಾಕ್ರೆಯ ಸಾವಿನೆಡೆಗೂ ಇರಲಿ. ಆದರೆ ಈ ಪರಿಯ ಹೊಗಳಿಕೆ?! ‘ಹುಲಿ’ ಕೂಡ ನಗುತ್ತಿರಬೇಕು.

23 ಟಿಪ್ಪಣಿಗಳು Post a comment
  1. rnbabu's avatar
    ನವೆಂ 18 2012

    nija, Belagavi vishayadhalli Thakare dhoraNe thumba vishadhaniya. Adhannu bari rajakiya vasthu madikondu Kannadigaru maththu marathigara madhya iilada manasthapa huttu hakiddare. Yellarigu thamma bhashe mele abhimana irabeku adhare durabhimana bere bhashikara mele asadde irabaradhu.

    ಉತ್ತರ
  2. Mohan V Kollegal's avatar
    Mohan V Kollegal
    ನವೆಂ 18 2012

    ಇದೊಂದು ದುರಂತ ಅಣ್ಣಯ್ಯ… ಆತ ಹಿಂದುಗಳ ಪರವಾಗಿಯೇ ನಿಲ್ಲುತ್ತಿದ್ದನೆಂದುಕೊಂಡರೂ ಅದೇ ಹಿಂದುಗಳಿರುವ ಕರ್ನಾಟಕದ ಜನರನ್ನು ಗಲ್ಲಿಗೇರಿಸುವ ಮಟ್ಟದವರಿಗೆ ಮಾತನಾಡುತ್ತಿರಲಿಲ್ಲ. ಕನ್ನಡ, ತಮಿಳು, ಮರಾಠಿ ಯಾರೇ ಇರಲಿ, ಸ್ಥಳೀಯ ಗಡಿರೇಖೆಗಳೊಂದಿಗೆ ನಾವು ಭಾರತೀಯರು ಎಂಬುದನ್ನು ಮರೆಯಬಾರದು. ಭಾರತವನ್ನೂ ದಾಟಿ ಶಾಂತಿಯ ನೆಲೆಗಟ್ಟಿನಲ್ಲಿ ವಿಶ್ವವನ್ನೇ ಪಸರಿಸುವ ಉದಾತ್ತ ಚಿಂತನೆ ಇರುವವನು ನಾಯಕ. ಠಾಕ್ರೆಯೇ ಆಗಲಿ, ಜಯಲಲಿತಾಳೇ ಆಗಲಿ ಅವರುಗಳು ತಮ್ಮದೇ ಚೌಕಟ್ಟಿನಿಂದ ಹೊರಬರಲಿಲ್ಲ. ಕರ್ನಾಟಕವನ್ನು ಮತ್ತೊಂದು ಪಾಕಿಸ್ತಾನದಂತೆ ಕಂಡರು. ಎಲ್ಲರ ಮೇಲೆ ಎಗರಿ ಎಗರಿ ತನ್ನ ಮರಿಗಳನ್ನು ಜೋಪಾನ ಮಾಡುವ ಹುಲಿಯೊಂದು ಸತ್ತಾಗ ‘ಹುಲಿ ಸತ್ತಿತು’ ಎಂಬುದು ಉತ್ಪ್ರೇಕ್ಷೆಯಲ್ಲ…

    ಉತ್ತರ
  3. Mohan V Kollegal's avatar
    Mohan V Kollegal
    ನವೆಂ 18 2012

    ಜೊತೆಗೆ ನೆಟ್ಟಿಗರು ಈ ವಿಚಾರದಲ್ಲಿ ಗೊಂದಲವೆಬ್ಬಿಸುತ್ತಿದ್ದಾರೆ. ಕಾರಣಗಳಿಷ್ಟೇ. ಅವರುಗಳು ಯಾವುದಾದರೂ ಸಂಘಟನೆಗೆ ಸೇರಿದವರು ಅಥವಾ ಬೆಂಬಲಿಸುವವರು. ಕೆಲವು ಸಂಘಟನೆಗಳ ಪರವಾಗಿ ಈ ವಿಚಾರ ಒಡಮೂಡಿಕೊಳ್ಳುತ್ತಿದ್ದರೆ, ಮತ್ತೆ ಕೆಲವರಿಗೆ ವಿರೋಧವಾಗಿ ಕಾಣುತ್ತಿತ್ತು. ಬೆಂಕಿ ಹೊತ್ತಿಕೊಂಡಿರುವ ಮನೆಗಳಿಗೆ ನೀರು ನೆಪದಲ್ಲಿ ಸೀಮೆಎಣ್ಣೆ ಎರಚುವ ಜನಗಳು. ತಮ್ಮ ತಮ್ಮ ಧರ್ಮ ವಿಚಾರಗಳನ್ನು ವಸ್ತುನಿಷ್ಠವಾಗಿ ಪ್ರತಿಪಾದಿಸದೇ ಇತರೆ ಧರ್ಮದ ಹುಳುಕುಗಳನ್ನು ಎತ್ತಿ ಹಿಡಿಯುವ ಹುಳುಗಳು. ಹೆಂಡತಿ ಮಕ್ಕಳಿಗೆ ಅನ್ನ ಹಾಕದೆ, ಹೆಣ್ಣು ಮಕ್ಕಳನ್ನು ಸಂಪ್ರದಾಯದ ಶೂಲದಲ್ಲಿ ಈಗ ಬಂಧಿಸಿ, ಯಾರೋ ಒಬ್ಬಾತ ರಾಮಾಯಣದ ರಾಮ ಸೀತೆಯನ್ನು ಕಾಡಿಗಟ್ಟಿದ್ದರ ಬಗ್ಗೆ ಮಾತನಾಡುತ್ತಿದ್ದನಂತೆ. ಹಾಗಾಯಿತು…

    ಉತ್ತರ
  4. ISMAIL K PERINJE's avatar
    ISMAIL K PERINJE
    ನವೆಂ 19 2012

    Same Thackeray opposed kannadigas nail and tooth through out his life.Even crowned Karnataka as……….Very unfortunate to know that he was portrayed as Savior of certain community and region.His policy of divide and rule,in fact praised by MODI/ADWANI and like minded right wing [politicians.

    ಉತ್ತರ
  5. ರಾಘವ's avatar
    ರಾಘವ
    ನವೆಂ 19 2012

    ಅರ್ ಸತ್ಯ ಯಾವತ್ತೂ ಅಪಾಯಕಾರಿಯೇ ಎಂಬುದನ್ನು ಈ ಲೇಖಕರು ಮತ್ತೊಮ್ಮೆ ಸಾರಿದ್ದಾರೆ. ಆತ ಮಾರಾಠಿ ಭಕ್ತನೇ ಹೊರತು ಅನ್ಯರ ದ್ವೇಶಿಯಲ್ಲ. ಶೇಕಡಾ ೮೦ ರಷ್ಟು ಸ್ಥಳೀಯರಿಗೆ ಕೆಲಸ ಸಿಗಬೇಕೆನ್ನುವ ಧೋರಣೇ ತಪ್ಪೆನ್ನುವುದಾದರೆ ಸರ್ಕಾರ ಮಹಿಷಿ ವರದಿಯನ್ನು ಒಪ್ಪಿಕೊಂಡಿದೆ ಹಾಗಿದ್ದರೆ ಕರ್ನಾಟಕ ಸರ್ಕಾರವೂ ತಪ್ಪೇ?
    ಠಾಕರೆ ತಪ್ಪಿಸ್ತನೆನ್ನುವುದಾದರೆ ಕನ್ನಡ ಹೋರಾಟಗಾರರೆಲ್ಲರೂ ತಪ್ಪೆ. ಅದನ್ನು ಒಪ್ಪಿಕೊಳ್ಳಲು ಸಿದ್ದರಿದ್ದೀರಾ? ಪೂರ್ವಗ್ರಹ ಪೀಡಿತ ಬಣ್ಣದ ಕನ್ನಡಕದಿಂದ ನೋಡುವುದನ್ನು ಮೊದಲು ಬಿಡಿ.

    ಉತ್ತರ
    • ashok k r's avatar
      ನವೆಂ 19 2012

      ಕೊನೇ ಪಕ್ಷ ಬಾಳ ಠಾಕ್ರೆಯ ಶವಯಾತ್ರೆಯಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಕ್ಕೆ ಸಶಕ್ತ ಕಾರಣವಾದರೂ ಇದೆ. ಮರಾಠಿಗರಿಗೇ ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೆಲಸ ಸಿಗಬೇಕು ಎಂದು ಹೋರಾಟ ಮಾಡುವಲ್ಲಿ ಶಿವಸೇನೆಯ ಪಾತ್ರ ಹಿರಿದು
      ಮೇಲಿನ ಸಾಲುಗಳನ್ನೂ ಕೂಡ ನಾನೇ ಬರೆದಿರುವುದು ಅಲ್ಲವೇ ಸರ್! ಠಾಕ್ರೆಯವರು ಕೇವಲ ಮರಾಠಿ ಭಕ್ತರಾಗಿದ್ದರೆ ಈ ಲೇಖನ ಬರೆಯುವ ಅವಶ್ಯಕತೆಯೇ ಇರಲಿಲ್ಲ. ಅವರು ಎಷ್ಟರ ಮಟ್ಟಿಗೆ ಅನ್ಯ ಭಾಷೆಯ ಜನರನ್ನು ಅನ್ಯ ಕೋಮಿನ ಜನರನ್ನು ಸತಾಯಿಸಿದ್ದ ೆಂಬುದು ತಮಗೂ ತಿಳಿದಿರಬೇಕು. ಕನ್ನಡ ಪರವಾಗಿ ಹೋರಾಡುವುದಕ್ಕೂ ಅನ್ಯ ಭಾಷಿಕರನ್ನು ದ್ವೇಷಿಸುವುದಕ್ಕೂ ಇರುವ ವ್ಯಕತ್ಯಾಸವನ್ನು ಗುರುತಿಸುವಲ್ಲಿ ನಾವು ಎಡವಬಾರದಲ್ಲವೇ?

      ಉತ್ತರ
  6. ಸೋಮಶೇಖರ್'s avatar
    ಸೋಮಶೇಖರ್
    ನವೆಂ 19 2012

    ಬದುಕಿದ್ದಾಗ ಇಂತಹ ಲೇಖನಗಳನ್ನು ಬರೆಯಲು ಧೈರ್ಯವಿಲ್ಲದೆ ಸತ್ತ ನಂತರ ಬರೆಯುವವರನ್ನು ಸತ್ತ ಹಾವು ಹೊಡೆಯುವ ಮನೋಸ್ಥಿತಿಯವರೆನ್ನಬಹುದು.

    ಉತ್ತರ
    • ashok k r's avatar
      ನವೆಂ 19 2012

      ಸೋಮಶೇಖರ್ ರವರು ಗಮನಿಸಲಿಲ್ಲವೋ ಏನೋ! ಮೇಲಿನ ಲೇಖನ ಬರೆದದ್ದಕ್ಕೆ ಕಾರಣ ಠಾಕ್ರೆಯವರ ತತ್ವ ಸಿದ್ಧಾಂತಗಳ ಮೇಲಿನ ಕೋಪದಿಂದಲ್ಲ. ಕನ್ನಡಿಗರು ಅನವಶ್ಯಕವಾಗಿ ವಿಪರೀತವೆನಿಸುವಷ್ಟು ಹೊಗಳಿದ ಕಾರಣದಿಂದಷ್ಟೇ ಈ ಲೇಖನವನ್ನು ಬರೆಯಬೇಕಾಯಿತು. ಸತ್ತ ಹಾವು ಹೊಡೆಯುವ ಮನಸ್ಥಿತಿ ನನಗೂ ಇಲ್ಲ, ಸತ್ತ ಹಾವನ್ನು ಕೊರಳಿಗೇರಿಸಿಕೊಂಡು ಮೆರೆಯುವ ಮನಸ್ಥಿತಿಯೂ ಇಲ್ಲ.

      ಉತ್ತರ
    • ramadasa's avatar
      ನವೆಂ 23 2012

      lol…great comments mr somashekar…satta haavu hodeyodu alla, surya nige torch hididu thanuu surya na level ge hogbahudeno anno huchhu manasti evardu:P

      ಉತ್ತರ
  7. ಅಕ್ಷಯರಾಮ ಕಾವಿನಮೂಲೆ's avatar
    ಅಕ್ಷಯರಾಮ ಕಾವಿನಮೂಲೆ
    ನವೆಂ 19 2012

    ಮೋಹನ್ ದಾಸ್ ಕರಮ ಚಂದ ಗಾಂಧೀ, ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧೀ, ಇನ್ನೂ ತುಂಬಾ ಜನ ಇದ್ದಾರೆ ಸ್ವಾಮೀ ಹಿಂದೂ ಮುಸ್ಲಿಂ ಭಾಂದವ್ಯ “ಎತ್ತಿ” ಹಿಡಿದವರು 🙂 ಇವರೆಲ್ಲರ ಬಗ್ಗೆಯೂ ಒಂದು ಲೇಖನ ಬರೆಯಲು ‘ಕೈ’ ಎತ್ತಿ ನೋಡೋಣ 🙂 ಹೇಗಿದ್ದರೂ ಸತ್ತಿದ್ದಾರೆ 🙂

    ಉತ್ತರ
    • ashok k r's avatar
      ನವೆಂ 19 2012

      ತಮಗೂ ಅರಿವಿರಬೇಕು. ಈ ದೇಶದಲ್ಲಿ ಅತಿ ಹೆಚ್ಚು ಟೀಕೆಗೆ ಅತಿ ಹೆಚ್ಚು ಚರ್ಚೆಗೆ ಒಳಗಾಗಿದ್ದು ಮೋಹನ್ ದಾಸ್ ಕರಮ ಚಂದ ಗಾಂಧೀ! ಇನ್ನು ಉಳಿದವರ ಬಗ್ಗೆ ನನಗೂ ಅಂಥ ಒಳ್ಳೆಯ ಅಭಿಪ್ರಾಯವಿಲ್ಲ ಬಿಡಿ 🙂

      ಉತ್ತರ
  8. sunil rao's avatar
    sunil rao
    ನವೆಂ 19 2012

    baal thakarey yaavattigoo obba olle sanghatenaakara ashtu bittare aatana yaava politicall nadavalikegalige sahamata villa…..aata karnaatakadondige nadedukonda reeti eegalu besara untu maaduttade

    ಉತ್ತರ
  9. SSNK's avatar
    ನವೆಂ 19 2012

    ಬಾಳಾಸಾಹೇಬ್ ಠಾಕ್ರೆಯವರ ಕುರಿತಾಗಿ ಅರ್ಥ ಮಾಡಿಕೊಳ್ಳಲು ಈ ಕೊಂಡಿಯಲ್ಲಿರುವ ಚಿತ್ರವನ್ನೊಮ್ಮೆ ನೋಡಿ ಸಾಕು:
    1. https://www.facebook.com/photo.php?fbid=436664159716213&set=a.117484694967496.7878.100001178986338&type=1&relevant_count=1&ref=nf

    2. https://www.facebook.com/photo.php?fbid=410369085696850&set=a.150564495010645.36433.100001712857993&type=1&ref=nf

    ಉತ್ತರ
  10. M Naveen, mysore's avatar
    ನವೆಂ 19 2012

    ನಾನು ಓದಿದ ಬಹುತೇಕ ಕನ್ನಡ ಪತ್ರಿಕೆಗಳು ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಾಳಾ ಠಾಕ್ರೆ ಒಳ್ಳೆಯವರು ಎಂಬ ಸಾಲನ್ನು ನೋಡಲಿಲ್ಲ. ಆತ ಪ್ರಖರ ಹಿಂದುತ್ವವಾದಿ, ಮರಾಠಿ ಮನುಷ್ಯ ಪ್ರಾದೇಶಿಕ ನಾಯಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದನ್ನೇ ಪತ್ರಿಕೆಗಳು ಹುಲಿ, ಮರಾಠ ಸಾಮ್ರಾಟ ಎಂದು ಬರೆದಿರುವುದರಲ್ಲಿ ಮಹಾ ತಪ್ಪು ಕಾಣುತ್ತಿಲ್ಲ. ಲಕ್ಷಾಂತರ ಜನ ಆತನ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದರೆ, ಆತ ನಾಯಕ ಆಗಿರಲೇಬೇಕು. ಹೀಗಿದ್ದರೂ, ಬಾಳಾ ಠಾಕ್ರೆ ನೆಪದಲ್ಲಿ ಅಚ್ಚರಿಗೆ ಬೀಳುವ ಮನಸ್ಸುಗಳು ಕಂಡು ನನಗೆ ಅಚ್ಚರಿ ಆಗುತ್ತದೆ. ವಿಷಯವನ್ನು ಸರಿಯಾಗಿ ಗ್ರಹಿಸದೇ, ಅದರಲ್ಲೊಂದು ಹುಳುಕು ಹುಡುಕಿ, ತಾವು ದೊಡ್ಡವರಾಗುವ ಹಪಾಹಪಿತನ ಇಂಥಾ ಕೆಲಸ ಮಾಡುತ್ತದೆ. ಹಿಟ್ಲರ್ ಮಹಾದುಷ್ಟ ಎನ್ನುವುದು ಎಷ್ಟು ಸತ್ಯವೋ, ಆತ ಒಂದು ಸಮೂಹದ ಮಹಾನಾಯಕ ಆಗಿದ್ದ ಎಂಬುದು ಕೂಡ ಅಷ್ಟೇ ಸತ್ಯ. ಎಷ್ಟೊ ವಿಷಯಗಳ ನಡುವೆ ತೆಳುವಾದ ಗೆರೆಗಳು ಇರುತ್ತದೆ. ಅವುಗಳನ್ನು ಸರಿಯಾಗಿ ನೋಡಿ, ವಿಷಯವನ್ನು ಅಥೈಸಿಕೊಳ್ಳಬೇಕು.

    ಉತ್ತರ
    • ashok k r's avatar
      ನವೆಂ 19 2012

      ಒಂದು ಸಮೂಹದ ಮಹಾನಾಯಕನಾಗಿದ್ದ ಏಕೈಕ ಕಾರಣಕ್ಕೆ ಆತನ ಸಾವಿನ ನಂತರ ಅನವಶ್ಯಕ ಹೊಗಳಿಕೆಗಳು ಅವಶ್ಯಕವೇ? ನಿಮ್ಮ ಅನಿಸಿಕೆಯ ಪ್ರಕಾರವೇ ಹೋಗುವುದಾದರೆ ಬಿನ್ ಲಾಡೆನ್ ಗೆ ಕೂಡ ಲಕ್ಷಾಂತರ ಅನುಯಾಯಿಗಳಿದ್ದರು, ಯಾತ್ರೆಗಳಲ್ಲಿ ಭಾಗವಹಿಸುವುದಕ್ಕಷ್ಟೇ ಸೀಮಿತವಾಗದೆ ತಮ್ಮ ಸೊಂಟಕ್ಕೆ ಬಾಂಬು ಕಟ್ಟಿಕೊಂಡು ಪ್ರಾಣ ತ್ಯಾಗ ಮಾಡುತ್ತ ಅಮಾಯಕರ ಪ್ರಾಣ ಹರಣ ಮಾಡುವುದರಲ್ಲೂ ನಿಸ್ಸೀಮರಾದವರಿದ್ದರು. ಆ ಕಾರಣಕ್ಕೆ ಬಿನ್ ಲಾಡೆನ್ ನನ್ನು ಮಹಾನಾಯಕ ಎಂದು ಕರೆಯಲಾದೇತೆ?

      ಉತ್ತರ
      • m naveen, mysore's avatar
        ನವೆಂ 21 2012

        ನನ್ನ ತಿಳಿವಳಿಕೆ ಪ್ರಕಾರ ಬಿನ್ ಲಾಡೆನ್ಗೆ ಲಕ್ಷಾಂತರ ಅನುಯಾಯಿಗಳು ಇದ್ದರೆ ಹೊರತು, ಅವರ್ಯಾರು ಸಮೂಹವನ್ನು ಪ್ರತಿನಿಧಿಸುತ್ತಿರಲಿಲ್ಲ. ಆ ಎಲ್ಲರೂ ಸಿದ್ಧಾಂತದ ಪ್ರತಿಪಾದಕರು, ಕಾರ್ಯಕರ್ತರೇ ಆಗಿದ್ದರೆ. ಆದರೆ, ಠಾಕ್ರೆ ಹಾಗೂ ಹಿಟ್ಲರ್ನನ್ನು ಬೆಂಬಲಿಸಿದ್ದು ಕಾರ್ಯಕರ್ತರು ಹೌದು, ಸಮೂಹವೂ ಹೌದು. ನನ್ನ ತಾತ್ಪರ್ಯ ಇಬ್ಬರೂ ಒಳ್ಳೆಯವರು ಎಂದೇನಲ್ಲ. ಮಹಾ ನಾಯಕ, ಹುಲಿ ಎಂದಾಕ್ಷಣ, ಅವರು ಒಳ್ಳೆಯವರು ಎಂದು ಗ್ರಹಿಸಬೇಕಿಲ್ಲ. ವೈಯಕ್ತಿಕವಾಗಿ ಆ ಇಬ್ಬರೂ ಪ್ರತಿಪಾದಿಸುವ ಸಿದ್ಧಾಂತದ ಕಡು ವಿರೋಧಿ ನಾನು. ಆದರೆ, ಬಾಳ ಠಾಕ್ರೆಯ ನೆಪದಲ್ಲಿ, ಒಂದು ಜನ ಸಮೂಹವನ್ನು, ಮಾಧ್ಯಮವನ್ನು ದೂರುವ ನಿಷ್ಕ್ರಿಯ ಬುದ್ಧಿಜೀವಿಗಳ ಬಗ್ಗೆ ನನ್ನ ಆಕ್ಷೇಪವಿದೆ. ಸಾಮಾನ್ಯ ಜನ ದಡ್ಡರಲ್ಲ ಸ್ವಾಮಿ…

        ಉತ್ತರ
  11. anand prasad's avatar
    anand prasad
    ನವೆಂ 20 2012

    ಶಿವಸೈನಿಕರು ಫೇಸ್ಬುಕ್ಕಿನಲ್ಲಿ ಮುಂಬೈನ ಬಂದ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಯುವತಿಯ ಸಂಬಂಧಿಯ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದಾರೆ. ಈ ರೀತಿ ನಗರದಲ್ಲಿ ಭಯೋತ್ಪಾದನೆ ಉಂಟು ಮಾಡುವ ಸಂಘಟನೆಗಳನ್ನು ನಕ್ಸಲ್ ಸಂಘಟನೆಗಳನ್ನು ಸರ್ಕಾರಗಳು ಹತ್ತಿಕ್ಕುವ ರೀತಿಯಲ್ಲಿಯೇ ಅತ್ಯಂತ ಕಠಿಣವಾಗಿ ಹತ್ತಿಕ್ಕಬೇಕಾದ ಅಗತ್ಯ ಇದೆ. ನಕ್ಸಲರಿಗೆ ಒಂದು ನೀತಿ, ಶಿವಸೈನಿಕರಿಗೆ ಒಂದು ನೀತಿ ಅನುಸರಿಸುವುದು ಸಮಂಜಸವಲ್ಲ. ಎರಡೂ ಸಂಘಟನೆಗಳು ಸಂವಿಧಾನವನ್ನು ಉಲ್ಲಂಘಿಸಿ ಕಾರ್ಯಾಚರಿಸುವ ಕಾರಣ ಇಂಥ ಸಂಘಟನೆಗಳನ್ನು ಸಮಾನವಾಗಿ ಹತ್ತಿಕ್ಕಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗಬಹುದು. ದೇವರು, ಧರ್ಮದ ಹೆಸರಿನಲ್ಲಿ ಸೇನೆಗಳನ್ನು ಕಟ್ಟಿಕೊಂಡು ಪರ್ಯಾಯ ಆಡಳಿತ ನಡೆಸುವುದು ದೇಶದ ಸಮಗ್ರತೆಗೆ, ಶಾಂತಿಗೆ, ಸಂವಿಧಾನಕ್ಕೆ ಹಾಕಿದ ಸವಾಲು ಎಂದು ತಿಳಿದು ಸರ್ಕಾರಗಳು ಹಾಗೂ ನ್ಯಾಯಾಂಗ ಇಂಥ ಸಂಘಟನೆಗಳನ್ನು ಹತ್ತಿಕ್ಕಬೇಕಾದ ಅಗತ್ಯ ಇದೆ.

    ಉತ್ತರ
    • ಬಸವಯ್ಯ's avatar
      ಬಸವಯ್ಯ
      ನವೆಂ 20 2012

      ಸಂವಿಧಾನಬದ್ಧ ಮತ್ತು ಜಾತ್ಯತೀತ ರಾಜಕಾರಣಕ್ಕೆ ಹೆಸರಾದ ಸರಕಾರ ಆ ಹುಡುಗಿಯ ಬಂಧನ ಮಾಡಿದ್ದು ಮಾನ್ಯರ ಗಮನಕ್ಕೆ ಬಂದಂತಿಲ್ಲ!!. ಮುಂದೆ ಯಾವಾಗಲಾದರೂ ನೀವು ಬಸ್ಸಿನಲ್ಲೊ, ಕಾರಿನಲ್ಲೊ ಹೊರಟ ವೇಳೆಯಲ್ಲಿ, ಎಲ್ಲಿಯಾದರೂ ರಸ್ತೆ ತಡೆ ನಡೆಯುತ್ತಿದ್ದರೆ, ಇಳಿದು ಹೋಗಿ ಆ ಜನರನ್ನು ಝಾಡಿಸಿ. ಆಮೇಲೆ ವಾಕ್ ಸ್ವಾತಂತ್ರ್ಯದ ಜೊತೆಗೆ ಸಮಯಪ್ರಜ್ಞೆಯೂ ಇರಬೇಕು ಎಂಬ ತಿಳಿವಳಕೆ ನಿಮಗೆ ಅವಶ್ಯವಾಗಿ ಹುಟ್ಟುತ್ತದೆ.

      ಉತ್ತರ
      • sukhesh's avatar
        ನವೆಂ 21 2012

        ನಿಮ್ಮ ಸಮಯ ಪ್ರಜ್ಞೆಗೆ ಮೆಚ್ಚಿದೆ ಸರ್ 🙂 ಇದೇ ಸಮಯಪ್ರಜ್ಞೆ ಗಾಂಧೀಜಿ, ನೆಹರು, ಸುಭಾಶ್ ಚಂದ್ರ ಭೋಸ್, ಭಗತ್ ಸಿಂಗ್ ಇತ್ಯಾದಿ ಹೋರಾಟಗಾರರಿಗೂ, ಅಣ್ಣಾ ಹಜಾರೆಯವರಿಗೂ ಇರಬೇಕಾಗಿತ್ತು 🙂 ಸುಮ್ಮನೆ ಹೋರಾಟ ಮಾಡಿ ಸಮಯ ವ್ಯರ್ಥ ಮಾಡಿದ್ರು ಅವರೆಲ್ಲ ಪಾಪ 🙂

        ಉತ್ತರ
        • ಬಸವಯ್ಯ's avatar
          ಬಸವಯ್ಯ
          ನವೆಂ 21 2012

          ಗಾಂಧೀಜಿ, ನೆಹರು, ಸುಭಾಶ್ ಚಂದ್ರ ಭೋಸ್, ಭಗತ್ ಸಿಂಗ್ ,ಅಣ್ಣಾ ಹಜಾರೆಯವರ ಹೋರಾಟಕ್ಕೂ ನಾನು ಮೇಲೆ ಹೇಳಿದ ಸಮಯಪ್ರಜ್ಞೆಗೂ ಏನು ಸಂಬಂಧ ಎಂದು ತಿಳಿಯಲಿಲ್ಲ.
          ನಾನು ಹೇಳಿದ್ದು, ಸಮಯ,ಸಂದರ್ಭ ನೋಡಿ, ಎಲ್ಲಿ ಏನನ್ನು ಮುಚ್ಕೊಂಡು ಸುಮ್ಮನಿರಬೇಕೊ ಅದರ ಬಗ್ಗೆ ವಾಕ್ ಸ್ವಾತಂತ್ರ್ಯ ಎಲ್ಲಿ ಪ್ರಯೋಗಿಸಬೇಕು ಅನ್ನುವ ಪ್ರಜ್ಞೆಯೂ ನಮಗಿರಬೇಕು.ಇದು ನಾನು ಹೇಳಿದ ಸಮಯ-ಸಂದರ್ಭ ಪ್ರಜ್ಞೆ.

          ಸಮೂಹ ಸನ್ನಿಗೆ ಒಳಗಾದವರ ಮುಂದೆ, ಅದೂ ತಮ್ಮ ನಾಯಕ (ಅವನು ಒಳ್ಳೆಯವನೊ-ಕೆಟ್ಟವನೊ,ದೇಶಭಕ್ತನೊ-ವಿದೇಶಭಕ್ತನೊ ಎನ್ನುವದಿಲ್ಲ ಪರಿಗಣನೆಗೆ ಬರುವುದಿಲ್ಲ) ಎನಿಸಿದವನ ಸಾವಿಗೆ ಸಂತಾಪ ಪಡುವವರ ಮುಂದೆ ಸಂವಿಧಾನ, ಪ್ರಜಾಪ್ರಭುತ್ವ , ನೀವು ಮಾಡುವುದು ತಪ್ಪು ಎಂದೆಲ್ಲ ಭಾಷಣ ಹೊಡೆದು ಚಪ್ಪಾಳೆ ಹೊಡಿಸಿಕೊಳ್ಳಲು ಇದೇನೂ ಸಿನೇಮಾವಲ್ಲ ಸುಕೇಶವರೆ..

          ಉತ್ತರ
          • sukhesh's avatar
            ನವೆಂ 21 2012

            ಎಲ್ಲರಿಗೂ ಅವರದೇ ಆದ ನಂಬಿಕೆಗಳು, ಅಭಿಪ್ರಾಯಗಳು ಇರುತ್ತವೆ. ಠಾಕ್ರೆ ಅಭಿಮಾನಿಗಳು ಠಾಕ್ರೆ ದೇವರು ಅಂತ ನಂಬಿದ ಹಾಗೆಯೇ, ಮಹಾರಾಷ್ಟ್ರ ಮಹಾರಾಷ್ಟ್ರಿಗರಿಗೆ ಮಾತ್ರ ಅಂತ ನಂಬಿದ ಹಾಗೆಯೇ, ಬ್ರಿಟೀಷರು ಸಹ ಕರಿಯರನ್ನು ಆಳುವುದು ಬಿಳಿಯರ ಧರ್ಮ ಅಂತ ನಂಬಿದ್ದರು. ಸ್ವಾತಂತ್ರ್ಯ ಹೋರಾಟ ಅವರ ಈ ಹಕ್ಕಿಗೆ, ನಂಬಿಕೆಗೆ ವಿರುದ್ದವಾಗಿಯೇ ಇತ್ತು. ಸ್ವಾತಂತ್ರ್ಯ ಹೋರಾಟಕ್ಕೆ ಬ್ರಿಟೀಷರ ವಿರೋಧ ಶಿವಸೈನಿಕರ ಉಡಾಳತನಕ್ಕಿಂತ ಜೋರಾಗಿಯೇ ಇತ್ತು. ಆದರೂ ಅಷ್ಟೊಂದು ಜನ ಹೊರಾದಲಿಲ್ಲವೇ?
            ನಾನು ಇಲ್ಲಿ facebook ಕಮೆಂಟಿಗರನ್ನ ಸ್ವಾತಂತ್ರ್ಯ ಹೋರಾಟಗಾರರಿಗೆ ಸಮ ಅಂತ ಹೇಳ್ತಾ ಇಲ್ಲ. ನಾನು ಹೇಳ್ತಾ ಇರೋದು ತಪ್ಪು ನಡೀತಾ ಇರೋವಾಗ ಸುಮ್ಮನೆ ಇರೋದು ತಪ್ಪು ಅಂತ ಅಷ್ಟೇ. ಇತಿಹಾಸದಲ್ಲಿ ನಮ್ಮ ಮೌನ ಸಹ ದಾಖಲಾಗುತ್ತೆ ಅನ್ನೋದನ್ನ ಮರೀಬೇಡಿ.
            my worry is that there has been a rise of fascism all around us. fascism in the name of religion, caste, language, state etc. and i see it in the hearts of my friends, colleagues, relatives etc. in such a scenario, how can one keep quite?

            ಉತ್ತರ
            • ಬಸವಯ್ಯ's avatar
              ಬಸವಯ್ಯ
              ನವೆಂ 22 2012

              ನಿಮ್ಮ ಕಾಳಜಿ ಅರ್ಥ ಆಗುತ್ತೆ. ನಿಮ್ಮ ಕೊನೆಯ ಪ್ಯಾರಕ್ಕೆ ಸಹಮತ. ಆದರೂ ಇನ್ನೊಂದಿಷ್ಟು explaination ಊ 🙂

              ತಪ್ಪು ನಿರ್ಧಾರ ಮಾಡುವುದು ಹೇಗೆ? ಅಡ್ಡಿಯಿಲ್ಲ, ಶಿವಸೈನಿಕರದ್ದು ಗೂಂಡಾಗಿರಿ ಅನ್ನೊಣ. ಈಗ ಉದಾಹರಣೆಗೆ, ಅಣ್ಣಾ ಹಝಾರೆ ಉಪವಾಸ ಕುಳಿತಲ್ಲಿ, ಯಾರಾದರೂ ಹೋಗಿ ‘ಈ ಮನುಷ್ಯ ದೇಶದ ಸಂವಿಧಾನ ಹಾಳುಗೆಡ್ವತಾ ಇದಾನೆ, ಅತೀ ಆಯ್ತು ಇವಂದು; ಅಂದೆಲ್ಲ ಅಂದ್ರೆ ಶರ್ಟು-ಪ್ಯಾಂಟು ಹರಿಯೊ ಹಾಗೇ ಹೊಡೆಯಲ್ವ? ಅಣ್ಣ ಕುಳಿತಲ್ಲೆ ಅಹಿಂಸೆ ಅಹಿಂಸೆ ಅಂದ್ರು ಬಾರಿಸುವವರು ಬಾರಿಸ್ತಾನೆ ಇರ್ತಾರೆ. ಕಾವೇರಿ ಹೋರಾಟ ನಡೆದಾಗ, ಬಸ್ಸನಲ್ಲೆಲ್ಲೊ ನಾವೊ-ನೀವೊ ಸಿಕ್ಕೊಂಡು ಬಿದ್ದು, ಸಿಕ್ಕಾಪಟ್ಟೆ ಸಿಟ್ಟು ಉಕ್ಕಿ ಬಂದು, ಈಗ ಮೌನವಾಗಿರಬಾರದು, ನನ್ನ ಮಾತು ಇತಿಹಾಸದಲ್ಲಿ ದಾಖಲಾಗಬೇಕು ಎಂದುಕೊಂಡು ಹೋರಾಟಗಾರರನ್ನು ಉಗಿದರೆ ಪರಿಸ್ಥಿತಿ ಏನಾಗಬಹುದು?

              ಗಾಂಧೀಜಿ ಕೂಡ ದಕ್ಷಿಣ ಆಫ್ರಿಕಾದಲ್ಲಿ ಬೋಗಿಯಿಂದ ತಳ್ಳಿಸಿಕೊಂಡರೂ, ತೆಪ್ಪಗೆ ಎದ್ದು ಬಂದು , ಶಕ್ತಿ ಕ್ರೋಡಿಕರಿಸಿಕೊಂಡು , ದಾಖಲಾಗಬಹುದಂತಹ ಹೋರಾಟ ಮಾಡಿದ್ದು ಭಾರತದಲ್ಲೆ. . ದ.ಆ ದಲ್ಲೆ, ಆ ಕ್ಷಣದಲ್ಲೆ ಕುಸ್ತಿ ಆಡಲು ಹೋಗಿದ್ದರೆ ಆಗಲೇ ಇತಿಹಾಸವಾಗಿರುತ್ತಿದ್ದರು. ಇಲ್ಲಿ ರಾಜಘಾಟ್ ಇರುತ್ತಿರಲ್ಲಿಲ್ಲ!.

              ನಮ್ಮ ಕಾಲ ಕೆಳಗಿನ ನೆಲ ಗಟ್ಟಿಯಿದ್ದಾಗ ಮಾತ್ರ ನಾವು ಕುಣಿಯಬಹುದು, ಇನ್ನೊಬ್ಬರನ್ನು ಕುಣಿಸಬಹುದು.
              ಇಲ್ಲವಾದರೆ ಆ ಹುಡುಗಿಯ ಹಾಗೆ ತಲೆಗೆ ಬಂದದ್ದನ್ನು ಟ್ವೀಟಸಿ, ಫೇಸ್ ಬುಕ್ಕಿಸಿ ನಂತರೆ ಹದಿನೈದು ಸಾವಿರ ದಂಡ ತುಂಬಿ, ಕೈಮುಗಿದು ಶರಣು ಶರಣಯ್ಯ ಅನ್ನಬೇಕಾಗುತ್ತೆ.

              ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments